Cognizant: ವಾರ್ಷಿಕ ಕೇವಲ 2.5 ಲಕ್ಷ ರೂ . ಸಂಬಳ ಪ್ಯಾಕೇಜ್ ಘೋಷಿಸಿ ಟೀಕೆಗೆ ಗುರಿಯಾದ ಕಾಗ್ನಿಜೆಂಟ್! - Vistara News

ದೇಶ

Cognizant: ವಾರ್ಷಿಕ ಕೇವಲ 2.5 ಲಕ್ಷ ರೂ . ಸಂಬಳ ಪ್ಯಾಕೇಜ್ ಘೋಷಿಸಿ ಟೀಕೆಗೆ ಗುರಿಯಾದ ಕಾಗ್ನಿಜೆಂಟ್!

ಕಾಗ್ನಿಜೆಂಟ್ (Cognizant) ಇತ್ತೀಚೆಗೆ ಹೊಸ ನೇಮಕಾತಿಗಳ ಬಗ್ಗೆ ಸೂಚನೆ ಹೊರಡಿಸಿತ್ತು. ಫ್ರೆಶರ್ ಗಳಿಗೆ ವಾರ್ಷಿಕ ಕೇವಲ 2.5 ಲಕ್ಷ ರೂ. ಗಳನ್ನು ನೀಡುವ ಖಾಲಿ ಹುದ್ದೆಯನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿ ಬಳಿಕ ಭಾರೀ ಟೀಕೆಗೆ ಗುರಿಯಾಯಿತು. ಈ ಬಗ್ಗೆ ಕಂಪನಿ ನೀಡಿರುವ ಪ್ರತಿಕ್ರಿಯೆ ಏನು? ಈ ಕುರಿತ ವಿವರಣೆ ಇಲ್ಲಿದೆ.

VISTARANEWS.COM


on

Cognizant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಂಪನಿಗೆ ಹೊಸದಾಗಿ ಸೇರಬಯಸುವವರಿಗೆ ವಾರ್ಷಿಕವಾಗಿ 2.5 ಲಕ್ಷ ರೂ. ವೇತನ ನೀಡುವ ಖಾಲಿ ಹುದ್ದೆಗಳ (vacancy offer) ಬಗ್ಗೆ ಘೋಷಣೆ ಮಾಡಿ ಭಾರೀ ಟೀಕೆಗೆ ಗುರಿಯಾದ ಸಾಫ್ಟ್ ವೇರ್ ಕಂಪನಿ ಕಾಗ್ನಿಜೆಂಟ್ (Cognizant) ಈಗ ಪ್ರತಿಕ್ರಿಯೆಯನ್ನು ನೀಡಿದೆ, ನೇಮಕಾತಿ ಕುರಿತ ಪ್ರಕಟಣೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದೆ.

ಕಾಗ್ನಿಜೆಂಟ್ ಇತ್ತೀಚೆಗೆ ಹೊಸ ನೇಮಕಾತಿಗಳ (New recruitment) ಬಗ್ಗೆ ಸೂಚನೆ ಹೊರಡಿಸಿತ್ತು. ಫ್ರೆಶರ್ ಗಳಿಗೆ ವಾರ್ಷಿಕ 2.5 ಲಕ್ಷ ರೂ.ಗಳನ್ನು ನೀಡುವ ಖಾಲಿ ಹುದ್ದೆಯನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿ ಬಳಿಕ ಭಾರೀ ಟೀಕೆಗೆ ಗುರಿಯಾಯಿತು.

ಮೆಟ್ರೋ ನಗರದಲ್ಲಿ ಇಂತಹ ಸಂಬಳದಲ್ಲಿ ಹೇಗೆ ಬದುಕಲು ಸಾಧ್ಯ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಕಂಪೆನಿಯ ಸಿಇಒ 186 ಕೋಟಿ ರೂ. ಗಳನ್ನು ಗಳಿಸಿದ್ದಾರೆ. ಹೀಗಿರುವಾಗ 20 ವರ್ಷಗಳಿಂದ ಪ್ರವೇಶ ಹಂತದವರಿಗೆ ವೇತನಗಳು ಏಕೆ ಇನ್ನೂ ಕೆಳ ಮಟ್ಟದಲ್ಲಿಯೇ ಇದೆ ಎಂದು ಅನೇಕ ಪ್ರಶ್ನಿಸಿದ್ದರು. ಇದೀಗ ಕಾಗ್ನಿಜೆಂಟ್ ಅಂತಿಮವಾಗಿ ತನ್ನ ಮೌನವನ್ನು ಮುರಿದಿದೆ.

ಕಾಗ್ನಿಜೆಂಟ್ ತನ್ನ ವಾರ್ಷಿಕ 2.5 ಲಕ್ಷ ರೂ. ಸಂಬಳದ ಕೊಡುಗೆಯ ಕುರಿತಾದ ವಿವಾದದಕ್ಕೆ ಪ್ರತಿಕ್ರಿಯಿಸಿದ್ದು, ಮಾಹಿತಿಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಹೇಳಿದೆ.

ಮೂರು ವರ್ಷಗಳ ಪದವಿಪೂರ್ವ, ಪದವಿ ಹೊಂದಿರುವ ಎಂಜಿನಿಯರಿಂಗ್ ಅಲ್ಲದ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಈ ಕಡಿಮೆ ವೇತನ ಪ್ಯಾಕೇಜ್ ಅನ್ನು ನೀಡಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಾಗ್ನಿಜೆಂಟ್ ಈ ಬಗ್ಗೆ ತಿಳಿಸಿದ್ದು, 3 ವರ್ಷಗಳ ಪದವಿಪೂರ್ವ, ಪದವಿಯೊಂದಿಗೆ ಎಂಜಿನಿಯರಿಂಗ್ ಅಲ್ಲದ ಹಿನ್ನೆಲೆಯ ಪ್ರತಿಭೆಗಳಿಗೆ ನಮ್ಮ ಇತ್ತೀಚಿನ ಉದ್ಯೋಗ ಪೋಸ್ಟ್ ಅನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ವಾರ್ಷಿಕ 2.52 ಲಕ್ಷ ರೂ. ವೇತನ ನೀಡುವ ಈ ಉದ್ಯೋಗ ಜಾಹೀರಾತು 3 ವರ್ಷಗಳ ಎಂಜಿನಿಯರಿಂಗ್ ಪದವಿ ಮಾಡದ ಅಭ್ಯರ್ಥಿಗಳಿಗಾಗಿ ಎಂದು ತಿಳಿಸಿದೆ.


ಎಂಜಿನಿಯರಿಂಗ್ ಪದವೀಧರರಿಗೆ ವೇತನವು ಐಟಿ ಉದ್ಯಮದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿದೆ: ಎಂಜಿನಿಯರಿಂಗ್ ಪದವೀಧರರಿಗೆ ನಾವು ನೀಡುವ ವೇತನವು ಐಟಿ ಸೇವೆಗಳ ಇತರ ಗುಂಪಿನೊಳಗೆ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎಂದು ಇವಿಪಿ ಮತ್ತು ಕಾಗ್ನಿಜೆಂಟ್ ಅಮೆರಿಕದ ಅಧ್ಯಕ್ಷ ಸೂರ್ಯ ಗುಮ್ಮಡಿ ತಿಳಿಸಿದ್ದಾರೆ.

ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ತನ್ನ ಕೆಲವು ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳವನ್ನು ಶೇ. 1 ರಷ್ಟು ಕಡಿಮೆಗೊಳಿಸಿದೆ ಮತ್ತು ಅತ್ಯಧಿಕ ಹೆಚ್ಚಳವು ಕೇವಲ ಶೇ. 5 ಆಗಿದೆ ಎಂಬ ವರದಿಗಳು ವಿವಾದವನ್ನು ಹೆಚ್ಚಿಸಿವೆ.
ಕಂಪೆನಿಯು ಈ ಇನ್‌ಕ್ರಿಮೆಂಟ್‌ಗಳನ್ನು ಅಂತಿಮವಾಗಿ ಹೊರತರುವ ಮೊದಲು ನಾಲ್ಕು ತಿಂಗಳವರೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಈ ಸುದ್ದಿ ಬಂದಿದೆ.

ಇದನ್ನೂ ಓದಿ: Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; 391 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಕಳಪೆ ಸಂಬಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಗುಮ್ಮಡಿ, ವೇತನ ಹೆಚ್ಚಳವು ವೈಯಕ್ತಿಕ ಕಾರ್ಯಕ್ಷಮತೆ ಮತ್ತು ಮ್ಯಾಕ್ರೋ ಉದ್ಯಮದ ಡೈನಾಮಿಕ್ಸ್ ಎರಡಕ್ಕೂ ಸಂಬಂಧ ಹೊಂದಿದೆ. ಈ ವರ್ಷ, ಉದ್ಯೋಗಿಗಳಿಗೆ ಇನ್ಕ್ರಿಮೆಂಟ್ ಮತ್ತು ಬೋನಸ್ ಗಳನ್ನು ವಿತರಿಸಿದ ಕೆಲವು ಐಟಿ ಕಂಪೆನಿಗಳಲ್ಲಿ ನಾವು ಒಂದಾಗಿದ್ದೇವೆ. ಕಳೆದ 3 ವರ್ಷಗಳಲ್ಲಿ ಹೆಚ್ಚಿನ ಕಾಗ್ನಿಜೆಂಟ್‌ನ ಉದ್ಯೋಗಿಗಳು 4ನೇ ಬಾರಿಯಾಗಿ ಈ ಬಾರಿಯೂ ವೇತನ ಹೆಚ್ಚಳದ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ

PM Modi Poland Visit: ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ಬಂದಿಳಿದೆ. ಇಲ್ಲಿನ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಪೋಲೆಂಡ್ ಸ್ನೇಹವನ್ನು ಬಲಪಡಿಸುತ್ತದೆ ಮತ್ತು ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಬರೆದಿದ್ದಾರೆ.

VISTARANEWS.COM


on

PM Modi Poland Visit
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇಂದು ಸಂಜೆ ಪೋಲೆಂಡ್‌(Poland)ಗೆ ಭೇಟಿ ನೀಡಿದ್ದಾರೆ(PM Modi Poland Visit). 45 ವರ್ಷಗಳ ನಂತರ ಮಧ್ಯ ಯುರೋಪಿಯನ್ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಭಾರತ ಮತ್ತು ಪೋಲೆಂಡ್ ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ ಪ್ರಧಾನಿ ಪೋಲೆಂಡ್​ನ ವಾರ್ಸಾಗೆ ಭೇಟಿ ಕೊಟ್ಟಿದ್ದಾರೆ.

ಇನ್ನು ಪೋಲೆಂಡ್‌ಗೆ ಬಂದಿಳಿಯುತ್ತಿದ್ದಂತೆ ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ಬಂದಿಳಿದೆ. ಇಲ್ಲಿನ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಪೋಲೆಂಡ್ ಸ್ನೇಹವನ್ನು ಬಲಪಡಿಸುತ್ತದೆ ಮತ್ತು ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಬರೆದಿದ್ದಾರೆ.

ಗುಜರಾತಿ ನೃತ್ಯದ ಮೂಲಕ ಮೋದಿಗೆ ಸ್ವಾಗತ

ಪೋಲೆಂಡ್​ನ ವಾರ್ಸಾದಲ್ಲಿರುವ ಹೋಟೆಲ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಟೆಲ್‌ನಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರು ಸ್ವಾಗತಿಸಿದ್ದಾರೆ. ಈ ವೇಳೆ ಭಾರತೀಯ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುವ ಮೂಲಕ ಪೋಲೆಂಡ್​ನ ನೃತ್ಯ ಕಲಾವಿದರು ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ದೂರದ ಪೋಲೆಂಡ್​ನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣವನ್ನು ಕಂಡು ಖುಷಿಯಿಂದ ಮೋದಿ ಚಪ್ಪಾಳೆ ತಟ್ಟಿ, ಕಲಾವಿದರಿಗೆ ಶಹಬ್ಬಾಸ್ ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

Continue Reading

ದೇಶ

Shraddha Kapoor: ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ ನಟಿ ಶ್ರದ್ಧಾ;‌ ಸ್ತ್ರೀ-2 ಸಕ್ಸೆಸ್‌ ಬೆನ್ನಲ್ಲೇ ಹೊಸ ದಾಖಲೆ

Shraddha Kapoor: ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 91.4 ಮಿಲಿಯನ್‌ಗೆ ಎರಿಕೆಯಾಗಿದೆ. ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಮೋದಿ 101.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಮೂಲಕ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಶ್ರದ್ಧಾ ಮೂರನೇ ಸ್ಥಾನದಲ್ಲಿದ್ದಾರೆ.

VISTARANEWS.COM


on

Shraddha Kapoor
Koo

ಹೈದರಾಬಾದ್: ಇತ್ತೀಚೆಗಷ್ಟೇ ತೆರೆ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಸ್ತ್ರೀ 2 ಸಿನಿಮಾದ ಸಕ್ಸೆಸ್‌ ಸಂಭ್ರಮದಲ್ಲಿರುವ ಬಾಲಿವುಡ್‌ ಸ್ಟಾರ್‌ ನಟಿ ಶ್ರದ್ಧಾ ಕಪೂರ್‌(Shraddha Kapoor) ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಸಂಖ್ಯೆಯೂ ಭಾರೀ ಏರಿಕೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನೇ ಹಿಂದಿಕ್ಕಿದ್ದಾರೆ.

ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 91.4 ಮಿಲಿಯನ್‌ಗೆ ಎರಿಕೆಯಾಗಿದೆ. ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಮೋದಿ 101.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಮೂಲಕ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಶ್ರದ್ಧಾ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಬರೋಬ್ಬರಿ 271 ಮಿಲಿಯನ್ ಇನ್‌ಸ್ಟಾ ಫಾಲೋವರ್ಸ್ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ 91.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಮೂರನೇ ಸ್ಥಾನವವನ್ನು ಇದೀಗ ಶ್ರದ್ಧ ಕಪೂರ್ ಆಕ್ರಮಿಸಿಕೊಂಡರೆ, ನರೇಂದ್ರ ಮೋದಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಬಾಲಿವುಡ್ ನಟಿ ಅಲಿಯಾ ಭಟ್ 85.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ದೀಪಿಕಾ ಪಡುಕೋಣೆ 79.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕತ್ರಿನಾ ಕೈಪ್ 80.4 ಮಿಲಿಯನ್, ಗಾಯಕಿ ನೇಹಾ ಕಕ್ಕರ್ 78.7 ಮಿಲಿಯನ್, ಊರ್ವಶಿ ರೌಟೇಲಾ 73 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಭಾರತದ ಗರಿಷ್ಠ ಇನ್‌ಸ್ಟಾಗ್ರಾಂ ಫಾಲೋವರ್ಸ್ ಪಟ್ಟಿಯಲ್ಲಿ ನರೇಂದ್ರ ಮೋದಿ 4ನೇ ಸ್ಥಾನದಲ್ಲಿದ್ದಾರೆ. ಆದರೆ ವಿಶ್ವದ ಜನಪ್ರಿಯ ನಾಯಕರ ಪೈಕಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಟ್ವಿಟರ್‌ನಲ್ಲೂ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಸೂಪರ್ ಹಿಟ್ ಸಿನಿಮಾಗಳ ಮೂಲಕ ಚೆಲುವೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. 14 ವರ್ಷಗಳ ಹಿಂದೆ ‘ತೀನ್ ಪತ್ತಿ’ ಸಿನಿಮಾ ಮೂಲಕ ಆಕೆ ಬಾಲಿವುಡ್ ಪ್ರವೇಶಿಸಿದ್ದರು. ತಂದೆ ಶಕ್ತಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಪೋಷಕ ನಟನಾಗಿ, ಖಳನಟನಾಗಿ ಅಬ್ಬರಿಸಿದ್ದರು. ಹಾಗಾಗಿ ಶ್ರದ್ಧಾ ಕಪೂರ್ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಬಂದ ಬಳಿಕ ತಮ್ಮದೇ ವಿಭಿನ್ನ ಅಭಿನಯದಿಂದ ಮೋಡಿ ಮಾಡುತ್ತಾ ಬಂದರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡರು. ಚಿತ್ರದಿಂದ ಚಿತ್ರಕ್ಕೆ ಜನಪ್ರಿಯತೆ ಹೆಚ್ಚಿಸಿಕೊಂಡರು.

ಇದನ್ನೂ ಓದಿ: Stree 2 Box Office Day 5: ಕಲ್ಕಿ, ಫೈಟರ್ ದಾಖಲೆ ಮುರಿದ ಶ್ರದ್ಧಾ ಕಪೂರ್‌ ಅಭಿನಯದ ಸ್ತ್ರೀ 2

Continue Reading

ದೇಶ

Kolkata Doctor Murder Case: ಕೋಲ್ಕತ್ತಾ ವೈದ್ಯೆ ಅತ್ಯಾಚಾರ; ಮತ್ತೆ ನೆನಪಿಗೆ ಬಂದಳು ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್

ಕೋಲ್ಕತ್ತಾ ವೈದ್ಯರ ಅತ್ಯಾಚಾರ- ಕೊಲೆ ಪ್ರಕರಣದ (Kolkata Doctor Murder Case) ವಿಚಾರಣೆ ವೇಳೆ ಮಾತನಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ , ಬೇರೂರಿರುವ ಪಿತೃಪ್ರಭುತ್ವದ ಪಕ್ಷಪಾತದಿಂದಾಗಿ ಹೆಚ್ಚಿನ ಮಹಿಳೆಯರು ತೊಂದರೆ ಅನುಭವಿಸಿದ್ದಾರೆ. ರಾಷ್ಟ್ರವು ಮತ್ತೊಂದು ಅತ್ಯಾಚಾರಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಮುಂಬಯಿಯ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ನರಕಯಾತನೆ ಅನುಭವಿಸಿದ್ದ ಕರ್ನಾಟಕ ಮೂಲದ ಅರುಣಾ ಶಾನಬಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ.

VISTARANEWS.COM


on

By

Kolkata Doctor Murder Case
Koo

ನವದೆಹಲಿ: ಕೋಲ್ಕತ್ತಾ ವೈದ್ಯರ ಅತ್ಯಾಚಾರ- ಕೊಲೆ ಪ್ರಕರಣದ (Kolkata Doctor Murder Case) ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿ.ವೈ. ಚಂದ್ರಚೂಡ್ (D.Y. Chandrachud ) ಅವರು 1973ರಲ್ಲಿ ನಡೆದ ನರ್ಸ್ ಅರುಣಾ ಶಾನ್‌ಬಾಗ್ (Aruna Shanbaug) ಅತ್ಯಾಚಾರದ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಮಹಿಳಾ ವೈದ್ಯರ ಮೇಲಿನ ಕ್ರೂರ ದಾಳಿಯ ಬಗ್ಗೆ ಮಾತನಾಡಿರುವ ಅವರು, ಬೇರೂರಿರುವ ಪಿತೃಪ್ರಭುತ್ವದ ಪಕ್ಷಪಾತದಿಂದಾಗಿ ಹೆಚ್ಚಿನ ಮಹಿಳೆಯರು ತೊಂದರೆ ಅನುಭವಿಸಿದ್ದಾರೆ. ರಾಷ್ಟ್ರವು ಮತ್ತೊಂದು ಅತ್ಯಾಚಾರಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಅರುಣಾ ಶಾನ್‌ಬಾಗ್ ಪ್ರಕರಣವು ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿಪರರ ಮೇಲಿನ ಅತ್ಯಂತ ಭಯಾನಕ ದಾಳಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

ಏನಿದು ಅರುಣಾ ಶಾನ್‌ಬಾಗ್ ಪ್ರಕರಣ?

ಮುಂಬಯಿಯ ವೈದ್ಯಕೀಯ ಸಂಸ್ಥೆಯಾದ ಕೆಇಎಂ ಆಸ್ಪತ್ರೆಯಲ್ಲಿ 1967 ರಲ್ಲಿ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಸೇರಿಕೊಂಡಿದ್ದ 25 ವರ್ಷ ವಯಸ್ಸಿನ ನರ್ಸ್ ಅರುಣಾ ಅವರು ಅದೇ ಆಸ್ಪತ್ರೆಯ ವೈದ್ಯ ಡಾ. ಸಂದೀಪ್ ಸರ್ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 1974ರ ಆರಂಭದಲ್ಲಿ ವಿವಾಹವಾಗಬೇಕಿತ್ತು. ಆದರೆ 1973ರ ನವೆಂಬರ್ 27ರಂದು ರಾತ್ರಿ, ವಾರ್ಡ್ ಅಟೆಂಡೆಂಟ್ ಸೋಹನ್‌ಲಾಲ್ ಭರ್ತಾ ವಾಲ್ಮೀಕಿ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ.

ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅನಂತರ ನಾಯಿ ಸರಪಳಿಯಿಂದ ಕತ್ತು ಹಿಸುಕಿದ್ದ. ಈ ದಾಳಿಯಿಂದ ಅರುಣಾ ಅವರ ಮೆದುಳಿಗೆ ತೀವ್ರವಾದ ಹಾನಿಯಾಗಿತ್ತು. ಇದಾಗಿ 42 ವರ್ಷಗಳ ಕಾಲ ಕೋಮಾದಲ್ಲಿದ್ದ ಅವರು 2015ರಲ್ಲಿ ಸಾವನ್ನಪ್ಪಿದರು. ಇವರು ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹಳದೀಪುರದವರು.

ಅರುಣಾ ಅವರ ಮೆದುಳಿಗೆ ಆದ ಹಾನಿಯಿಂದ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಮೂಲಭೂತ ಅಗತ್ಯಗಳಿಗಾಗಿ ಇತರರ ಮೇಲೆ ಅವಲಂಬಿತರಾಗಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕೆಇಎಂ ಆಸ್ಪತ್ರೆಯಲ್ಲಿ ಅವರನ್ನು ಆರೈಕೆ ಮಾಡಲಾಯಿತು. ಪತ್ರಕರ್ತೆ ಪಿಂಕಿ ವಿರಾನಿ 2011ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅವರ ದಯಾಮರಣಕ್ಕೆ ಅರ್ಜಿ ಸಲ್ಲಿಸಿದಾಗ ಅವರ ಬಗ್ಗೆ ರಾಷ್ಟ್ರ ವ್ಯಾಪಿಯಲ್ಲಿ ಚರ್ಚೆ ಪ್ರಾರಂಭವಾಯಿತು.

ಪಿಂಕಿ ವಿರಾನಿ ಅವರು ಅರುಣಾ ಅವರ ಬಗ್ಗೆ ಬರೆದ ಪುಸ್ತಕದ ಪ್ರಕಾರ, ‘ಅರುಣಾ ಅವರ ಕಥೆ’, ಆರೋಪಿ ವಾಲ್ಮೀಕಿಯು ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಯೋಗಗಳಲ್ಲಿ ಬಳಸುವ ನಾಯಿಗಳಿಗೆ ಮೀಸಲಾದ ಆಹಾರವನ್ನು ಕಡಿಯುತ್ತಿರುವುದಾಗಿ ಆರೋಪಿಸಿದ ಬಳಿಕ ಅರುಣಾ ವಿರುದ್ಧ ದ್ವೇಷ ಸಾಧಿಸಲು ಪ್ರಾರಂಭಿಸಿದ್ದನು. ಆತನ ವಿರುದ್ಧ ಅರುಣಾ ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡುವಂತೆ ಬೆದರಿಕೆ ಹಾಕಿದ್ದರು.


ಕಾನೂನು ಹೋರಾಟ

ಅರುಣಾ ಅವರು ಜೀವನವನ್ನು ಯಾವುದೇ ಅರ್ಥಪೂರ್ಣ ರೀತಿಯಲ್ಲಿ ಅನುಭವಿಸಲು ಅಸಮರ್ಥರಾಗಿರುವ ಸ್ಥಿತಿಯಲ್ಲಿದ್ದ ಕಾರಣ ಘನತೆಯಿಂದ ಸಾಯಲು ಅವಕಾಶ ನೀಡಬೇಕು ಎಂದು ಎಂ.ಎಸ್. ವಿರಾಣಿ ಅವರ ಅರ್ಜಿಯಲ್ಲಿ ವಾದಿಸಲಾಗಿದೆ.

2011ರ ಮಾರ್ಚ್ 7ರಂದು ನೀಡಿದ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಅರುಣಾ ಮೆದುಳು ಸತ್ತಿಲ್ಲ ಮತ್ತು ಆಸ್ಪತ್ರೆಯ ಸಿಬ್ಬಂದಿ ಗಮನಿಸಿದಂತೆ ಕೆಲವು ಪ್ರಚೋದನೆಗಳಿಗೆ ಪ್ರತಿಕ್ರಿಯಿಸಿದರು ಎಂದು ಉಲ್ಲೇಖಿಸಿ, ಸಕ್ರಿಯ ದಯಾಮರಣ ಅರ್ಜಿಯನ್ನು ತಿರಸ್ಕರಿಸಿತು. ಆದರೂ ನ್ಯಾಯಾಲಯವು “ನಿಷ್ಕ್ರಿಯ ದಯಾಮರಣ” ದ ಸಾಧ್ಯತೆಯನ್ನು ಅನುಮತಿಸಿತು. ಅಂದರೆ ರೋಗಿಗೆ ಕೃತಕ ಜೀವ ಬೆಂಬಲವನ್ನು ತಡೆಹಿಡಿಯುವ ಅಥವಾ ಹಿಂತೆಗೆದುಕೊಳ್ಳಬಹುದು ಎಂದು ಹೇಳಿತು. ಆದರೆ ಇದಕ್ಕೆ ಆಪ್ತ ಕುಟುಂಬ ಸದಸ್ಯರು ಅಥವಾ ಆರೈಕೆದಾರರ ವಿನಂತಿ ಬಂದರೆ ಮತ್ತು ನ್ಯಾಯಾಲಯದಿಂದ ಅನುಮತಿ ಪಡೆದರೆ ಮಾತ್ರ ಜೀವ ಬೆಂಬಲವನ್ನು ಕಾನೂನುಬದ್ಧವಾಗಿ ಹಿಂಪಡೆಯಬಹುದು ಎಂದು ತೀರ್ಪು ಹೇಳಿತು.

ಇದನ್ನೂ ಓದಿ: Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

ನ್ಯುಮೋನಿಯಾದಿಂದ ಬಳಲುತ್ತಿದ್ದ ಅರುಣಾ ಅವರು 2015ರ ಮೇ 18ರಂದು ನಿಧನರಾದರು.
ಆಕೆಯ ಮೇಲೆ ದಾಳಿ ಮಾಡಿದ್ದ ಸೋಹನ್‌ಲಾಲ್ ಭರ್ತಾ ವಾಲ್ಮೀಕಿಯನ್ನು ದರೋಡೆ ಮತ್ತು ಕೊಲೆಯ ಯತ್ನಕ್ಕಾಗಿ ಶಿಕ್ಷೆಗೆ ಒಳಪಡಿಸಲಾಯಿತು. ಕೇವಲ ಏಳು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ಆತ 1980ರಲ್ಲಿ ಬಿಡುಗಡೆಯಾಗಿದ್ದಾನೆ. ಎಂಥ ವಿಪರ್ಯಾಸ!

Continue Reading

ದೇಶ

Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳನ್ನು ರಕ್ಷಿಸಿ- ನಾಲ್ವರು ಶಂಕರಾಚಾರ್ಯರಿಂದ ಕೇಂದ್ರ ಸರ್ಕಾರಕ್ಕೆ ಮನವಿ

Bangladesh Unrest: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಸಿಕ್ಕಿ ಅಲ್ಲಿನ ಹಿಂದೂಗಳು ನಲುಗಿ ಹೋಗಿರುವ ಬಗ್ಗೆ ಭಾರತದಲ್ಲಿ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದೀಗ ಹಿಂದೂಗಳ ಮೇಲಿನ ಹಿಂಸಾಚಾರವನ್ನು ನಾಲ್ವರು ಶಂಕರಾಚಾರ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

bangaldesh Unrest
Koo

ನವದೆಹಲಿ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ(Bangladesh Unrest) ಸಿಕ್ಕಿ ಅಲ್ಲಿನ ಹಿಂದೂಗಳು ನಲುಗಿ ಹೋಗಿರುವ ಬಗ್ಗೆ ಭಾರತದಲ್ಲಿ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದೀಗ ಹಿಂದೂಗಳ ಮೇಲಿನ ಹಿಂಸಾಚಾರವನ್ನು ನಾಲ್ವರು ಶಂಕರಾಚಾರ್ಯರು(Shankaracharyas) ಖಂಡನೆ ವ್ಯಕ್ತಪಡಿಸಿದ್ದಾರೆ. ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಶಾಂತಿ ಸ್ಥಾಪನೆಯಿಂದ ಎಲ್ಲವನ್ನೂ ಇತ್ಯರ್ಥಗೊಳಿಸಬಹುದು. ಹಿಂದೂಗಳು ಶಾಂತಿಪ್ರಿಯ ಜನರು ಮತ್ತು ಹಿಂದೂಗಳು ಸುರಕ್ಷಿತವಾಗಿದ್ದಾಗ ದೇಶವು ಸುರಕ್ಷಿತವಾಗಿರುತ್ತದೆ. ಬಾಂಗ್ಲಾದೇಶದಲ್ಲಿ ಇಂತಹ ಹಿಂಸಾಚಾರ ಚೀನಾದ ಪಿತೂರಿಯಾಗಿದೆ. ಚೀನಾದಲ್ಲಿ ಮಸೀದಿಗಳನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ಮುಸ್ಲಿಮರನ್ನು ದೇಶದಿಂದ ಹೊರಹಾಕಲಾಗುತ್ತಿದೆ. ಈಗ ಭಾರತವನ್ನು ಅಸ್ಥಿರಗೊಳಿಸಲು ಚೀನಾ ಬಾಂಗ್ಲಾದೇಶವನ್ನು ಬಳಸಿಕೊಳ್ಳುತ್ತಿದೆ. ಬಾಂಗ್ಲಾದೇಶವು ಇದನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ, ಮುಂದಿನ ದಿನಗಳಲ್ಲಿ ಅದರ ಅಸ್ತಿತ್ವವು ಕುಸಿಯುತ್ತದೆ, ”ಎಂದು ನಿಶ್ಚಲಾನಂದ ಸರಸ್ವತಿ ಹೇಳಿದರು.

ಏತನ್ಮಧ್ಯೆ, ದ್ವಾರಕಾ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಾತನಾಡಿ, ಭಾರತ ಮತ್ತು ಬಾಂಗ್ಲಾದೇಶ ಸರ್ಕಾರಗಳು ಭೇಟಿಯಾಗಿ ಹಿಂದೂಗಳ ಸಂಕಷ್ಟದ ಬಗ್ಗೆ ಚರ್ಚಿಸಬೇಕು. “ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಚೆನ್ನಾಗಿಲ್ಲ, ಕಳೆದ 50 ವರ್ಷಗಳಿಂದ ನಡೆಯುತ್ತಿರುವುದು ಸರಿಯಿಲ್ಲ [ಹಿಂದೂಗಳ ಶೋಷಣೆ]. ಅವರ ತಪ್ಪೇನು? ಅವರನ್ನು ಏಕೆ ಆರಿಸಿ ಕೊಲ್ಲಲಾಗುತ್ತಿದೆ? ಅವರ ದೇವಾಲಯಗಳನ್ನು ಏಕೆ ನಾಶಪಡಿಸಲಾಗುತ್ತಿದೆ? ಈ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು, ಇಲ್ಲವಾದರೆ ಜಗತ್ತಿನಾದ್ಯಂತ ಹಿಂದೂಗಳು ಎಲ್ಲೆಲ್ಲಿ ನೆಲೆಸಿದ್ದರೂ ಅವರಿಗೆ ಸಹಾಯ ಮಾಡುವವರು ಯಾರೂ ಇರುವುದಿಲ್ಲ,’’ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ಇನ್ನೂ ಸುಮಾರು 1.25 ಕೋಟಿ ಜನರಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ ಅವರು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗ ಅದನ್ನು ಪರಿಗಣಿಸಬೇಕು ಮತ್ತು ಭಾರತದಲ್ಲಿನ ಮುಸ್ಲಿಮರು ಅಲ್ಲಿ ಹತ್ಯೆಯನ್ನು ಯಾರು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸಬೇಕು” ಎಂದು ದ್ವಾರಕಾ ಶಂಕರಾಚಾರ್ಯ ಹೇಳಿದರು. ಮತ್ತೊಂದೆಡೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ನಂತರ, ಕಂಚಿ ಶಂಕರಾಚಾರ್ಯ ಶಂಕರ ವಿಜಯೇಂದ್ರ ಸರಸ್ವತಿ ಅವರು ಅಶಾಂತಿ ಪೀಡಿತ ದೇಶದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಯ ಮರುಸ್ಥಾಪನೆಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಬಾಂಗ್ಲಾದೇಶದಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಗೆ ಕರೆ ನೀಡಿದರು, ಗಮನಾರ್ಹವಾದ ಹಿಂದೂಗಳ ಜನಸಂಖ್ಯೆ ಮತ್ತು ಶಕ್ತಿ-ಪೀಠವಾದ ಢಾಕೇಶ್ವರಿ ಮಂದಿರ ಸೇರಿದಂತೆ ವಿವಿಧ ಐತಿಹಾಸಿಕ ಹಿಂದೂ ದೇವಾಲಯಗಳ ಅಸ್ತಿತ್ವ ಉಳಿಸಿಕೊಳ್ಳಲು ಒತ್ತು ನೀಡಿದರು.

ಏತನ್ಮಧ್ಯೆ, ಜ್ಯೋತಿರ್ಮಠ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಬಾಂಗ್ಲಾದೇಶದಲ್ಲಿ ಇಸ್ಲಾಮಿಸ್ಟ್‌ಗಳ ದಾಳಿಗೆ ಒಳಗಾಗಿರುವ ಹಿಂದೂಗಳನ್ನು ರಕ್ಷಿಸಲು ಭಾರತ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸಬೇಕು. ಭಾರತದಲ್ಲಿ ಸಾವಿರಾರು ಬಾಂಗ್ಲಾದೇಶಿಗಳು ವಾಸಿಸುತ್ತಿದ್ದಾರೆ ಎಂಬುದನ್ನು ಬಾಂಗ್ಲಾದೇಶ ಸರ್ಕಾರ ಮರೆಯಬಾರದು. ಅವರಿಗೆ ಭೂಮಿ ಮತ್ತು ಭದ್ರತೆಯನ್ನು ಒದಗಿಸುವಂತೆ ನಾವು ಸರ್ಕಾರವನ್ನು ಕೋರುತ್ತೇವೆ ಮತ್ತು ಅವರ ಆಹಾರ ಮತ್ತು ಇತರ ಅವಶ್ಯಕತೆಗಳನ್ನು ನಾವು ನೋಡಿಕೊಳ್ಳುತ್ತೇವೆ ಮತ್ತು ಬಿಡುವುದಿಲ್ಲ. ಸರಕಾರಕ್ಕೆ ಹೊರೆಯಾಗುತ್ತಿದೆ ಎಂದರು.

ಇದನ್ನೂ ಓದಿ: Bangladesh Unrest: ಪ್ರಧಾನಿ ಮೋದಿಗೆ ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ ಕರೆ; ಹಿಂದೂಗಳ ರಕ್ಷಣೆ ಬಗ್ಗೆ ಭರವಸೆ

Continue Reading
Advertisement
ಕರ್ನಾಟಕ4 mins ago

Almatti Dam: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

Danish Kaneria
ಕ್ರಿಕೆಟ್26 mins ago

Danish Kaneria: ರಕ್ಷಾ ಬಂಧನ ಆಚರಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Areca nut
ಪರಿಸರ54 mins ago

Areca Nut Price: ವಿದೇಶಿ ಅಕ್ರಮ ಅಡಿಕೆ ಸಾಗಾಣಿಕೆಯಿಂದ ದೇಶಿಯ ಅಡಿಕೆ ದರ ಕುಸಿತ; ರೈತರಲ್ಲಿ ಆತಂಕ

PM Modi Poland Visit
ವಿದೇಶ1 hour ago

PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ

PR Sreejesh
ಕ್ರೀಡೆ1 hour ago

PR Sreejesh: ಹಾಕಿ ದಿಗ್ಗಜ ಶ್ರೀಜೇಶ್​ಗೆ 2 ಕೋಟಿ ಬಹುಮಾನ ಘೋಷಣೆ ಮಾಡಿದ ಕೇರಳ ಸರ್ಕಾರ

Physical Abuse
ಕರ್ನಾಟಕ1 hour ago

Physical Abuse: ಆಸ್ಪತ್ರೆಯಲ್ಲೇ 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

Kids Denim Fashion
ಫ್ಯಾಷನ್2 hours ago

Kids Denim Fashion: ಮಾನ್ಸೂನ್ ಸೀಸನ್ ನಲ್ಲಿ ಟ್ರೆಂಡಿಯಾದ ಮಕ್ಕಳ ಡೆನಿಮ್ ಫ್ಯಾಷನ್

Shraddha Kapoor
ದೇಶ2 hours ago

Shraddha Kapoor: ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ ನಟಿ ಶ್ರದ್ಧಾ;‌ ಸ್ತ್ರೀ-2 ಸಕ್ಸೆಸ್‌ ಬೆನ್ನಲ್ಲೇ ಹೊಸ ದಾಖಲೆ

Kolkata Doctor Murder Case
ದೇಶ2 hours ago

Kolkata Doctor Murder Case: ಕೋಲ್ಕತ್ತಾ ವೈದ್ಯೆ ಅತ್ಯಾಚಾರ; ಮತ್ತೆ ನೆನಪಿಗೆ ಬಂದಳು ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್

bangaldesh Unrest
ದೇಶ2 hours ago

Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳನ್ನು ರಕ್ಷಿಸಿ- ನಾಲ್ವರು ಶಂಕರಾಚಾರ್ಯರಿಂದ ಕೇಂದ್ರ ಸರ್ಕಾರಕ್ಕೆ ಮನವಿ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌