Physical Abuse : ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ - Vistara News

ದೇಶ

Physical Abuse : ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ

physical abuse :

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಆರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ತಿಂಗಳುಗಳ ಕಾಲ ಸತತವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ (Physical Abuse ) ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಮತ್ತೊಂದು ಇದೇ ಮಾದರಿಯ ಘಟನೆ ವರದಿಯಾಗಿದೆ.

ಶಿಕ್ಷಕನನ್ನು 47 ವರ್ಷದ ಪ್ರಮೋದ್ ಸರ್ದಾರ್ ಎಂದು ಗುರುತಿಸಲಾಗಿದೆ/ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. 8 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಒಬ್ಬಾಕೆ ಮಕ್ಕಳ ಕಲ್ಯಾಣ ಕೇಂದ್ರದ ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಿ ಘಟನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಅಧಿಕಾರಿಗಳು ಶಾಲೆಗೆ ಹೋಗಿ ತನಿಖೆಯನ್ನು ನಡೆಸಿ ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಪ್ರಕರಣದ ವಿವರಗಳ ಪ್ರಕಾರ, ಶಿಕ್ಷಕ ಕಳೆದ ನಾಲ್ಕು ತಿಂಗಳಿನಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ. ವಿಡಿಯೊ ತೋರಿಸುತ್ತಾ ಅನುಚಿತವಾಗಿ ಸ್ಪರ್ಶಿಸುತ್ತಿದ್ದ. ಆರು ವಿದ್ಯಾರ್ಥಿನಿಯರು ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮಂಗಳವಾರ ಬೆಳಿಗ್ಗೆ ಶಾಲೆಗೆ ಭೇಟಿ ನೀಡಿ ಕೆಲವು ಬಾಲಕಿಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಆಶಾ ಮಿರ್ಗೆ ಒತ್ತಾಯಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Lashkar-e-Taiba : ಎಲ್ಇಟಿ- ಹಮಾಸ್ ಒಂದಾಗುತ್ತಿದೆಯೇ? ಜಾಗತಿಕ ಆತಂಕ ತಂದಿಟ್ಟ ಉಗ್ರಗಾಮಿ ಸಂಘಟನೆಗಳ ಮುಖ್ಯಸ್ಥರ ಭೇಟಿ

ಮುಂಬೈ ಬಳಿಯ ಬದ್ಲಾಪುರ ಪಟ್ಟಣದ ಶಾಲೆಯೊಂದರಲ್ಲಿ ಮೂರು ಮತ್ತು ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಸ್ವಚ್ಛತಾ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ದೊಡ್ಡ ಮಟ್ಟದ ಗಲಾಟೆಗೆ ಕಾರಣವಾಗಿದೆ. ಈ ನಡುವೆ ಅದೇ ಮಾದರಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಷ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಯುನೈಟೆಡ್ ಕಿಂಗ್‌ಡಮ್‌ನಿಂದ ತನ್ನ 100 ಟನ್ ಚಿನ್ನದ ನಿಕ್ಷೇಪಗಳನ್ನು ಮರಳಿ ಪಡೆಯುವ ಪ್ರಕ್ರಿಯೆ ಚಲನೆಗೊಂಡಿದೆ. ವಿಶ್ವದಲ್ಲಿ ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ(Gold In Country) ಯುನೈಟೆಡ್ ಸ್ಟೇಟ್ಸ್ ಮೊದಲ ಸ್ಥಾನದಲ್ಲಿದೆ, ಟಾಪ್ ಹತ್ತರಲ್ಲಿ ಇರುವ ಇತರ ದೇಶಗಳು ಯಾವುದು ಗೊತ್ತೇ?

VISTARANEWS.COM


on

By

Gold In Country
Koo

ವಿಶ್ವದಲ್ಲೇ ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ (Gold In Country) ಯುನೈಟೆಡ್ ಸ್ಟೇಟ್ಸ್ (United States ) ಮೊದಲ ಸ್ಥಾನದಲ್ಲಿದ್ದು, ಜರ್ಮನಿ (germany), ಇಟಲಿ (Italy) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ (world gold council) 2024ರಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಚಿನ್ನ ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಪ್ ಹತ್ತರೊಳಗೆ ಇರುವ ದೇಶಗಳಲ್ಲಿ ಯಾವೆಲ್ಲ ದೇಶದಲ್ಲಿ ಎಷ್ಟು ಚಿನ್ನವಿದೆ ಎನ್ನುವ ಕುರಿತು ಮಾಹಿತಿ ನೀಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯುನೈಟೆಡ್ ಕಿಂಗ್‌ಡಮ್ ನಿಂದ ತನ್ನ 100 ಟನ್ ಚಿನ್ನದ ನಿಕ್ಷೇಪಗಳ ಮರಳಿ ಪಡೆಯಲು ಪ್ರಾರಂಭ ಮಾಡಿದೆ. 1991ರಿಂದ ಸಾಗರೋತ್ತರ ಚಿನ್ನದ ನಿಕ್ಷೇಪದ ಒಂದು ಭಾಗವನ್ನು ಮರಳಿ ಸ್ವದೇಶಕ್ಕೆ ಹಿಂದಿರುಗಿಸುವ ಕಾರ್ಯ ನಡೆಯುತ್ತಿದೆ.

ಸುಮಾರು 500 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಹೊಂದಿರುವ ಭಾರತ 300 ಟನ್‌ಗಳಷ್ಟು ದೇಶದಲ್ಲಿ ಹೊಂದಿದೆ. ವಿದೇಶದಿಂದ 100 ಟನ್‌ಗಳು ವಾಪಾಸ್ ಆಗಲಿರುವುದರಿಂದ ಶೇ. 50ರಷ್ಟು ಜಯವನ್ನು ಸಾಧಿಸಿದಂತಾಗಿದೆ ಎಂದು ಆರ್ ಬಿಐ ಹೇಳಿದೆ. ಆದರೆ ಚಿನ್ನವನ್ನು ಮರಳಿ ತರುವ ಹಿಂದಿನ ತಾರ್ಕಿಕತೆಯ ಬಗ್ಗೆ ತಜ್ಞರು ಗೊಂದಲವನ್ನು ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ 2024ರ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಹೆಚ್ಚು ಚಿನ್ನವನ್ನು ಹೊಂದಿರುವ ಟಾಪ್ 10 ದೇಶಗಳ ಭಾರತ ಯಾವ ಸ್ಥಾನದಲ್ಲಿದೆ ನೋಡೋಣ.


ಅಮೆರಿಕ

ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ಯುನೈಟೆಡ್ ಸ್ಟೇಟ್ಸ್ ನಲ್ಲಿ 8,133.46 ಟನ್‌ ಚಿನ್ನದ ನಿಕ್ಷೇಪಗಳು, ಸಂಗ್ರಹದಲ್ಲಿರುವ ಚಿನ್ನ ಮೌಲ್ಯ 4,84,96,863.22 ರೂ.

Gold In Country
Gold In Country


ಜರ್ಮನಿ

ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವಿರುವ ದೇಶಗಳಲ್ಲಿ ಜರ್ಮನಿ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ 3,352.65 ಟನ್‌ ಚಿನ್ನದ ನಿಕ್ಷೇಪಗಳು, 2,00,19,628.10 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಇಟಲಿ

ಮೂರನೇ ಸ್ಥಾನದಲ್ಲಿರುವ ಇಟಲಿಯಲ್ಲಿ 2,451.84 ಟನ್‌ ಚಿನ್ನದ ನಿಕ್ಷೇಪಗಳು, 1,46,41,791.72 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಫ್ರಾನ್ಸ್

2,436.88 ಟನ್‌ ಚಿನ್ನದ ನಿಕ್ಷೇಪಗಳು, 14,552,231.79 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ರಷ್ಯನ್ ಒಕ್ಕೂಟ

2,332.74 ಟನ್‌ ಚಿನ್ನದ ನಿಕ್ಷೇಪಗಳು, 13,930,123.38 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಚೀನಾ

ಭಾರತದ ನೆರೆಯ ರಾಷ್ಟ್ರವಾದ ಚೀನಾದಲ್ಲಿ 2,262.45 ಟನ್‌ ಚಿನ್ನದ ನಿಕ್ಷೇಪಗಳು, 13,510,099.89 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಸ್ವಿಟ್ಜರ್ಲೆಂಡ್

1,040 ಟನ್‌ ಚಿನ್ನದ ನಿಕ್ಷೇಪಗಳು, 58,29,140.18 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.


ಜಪಾನ್

845.97 ಟನ್‌ಗಳಲ್ಲಿ ಚಿನ್ನದ ನಿಕ್ಷೇಪಗಳು, 50,51,790.75 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.

ಇದನ್ನೂ ಓದಿ: Indian Economy : 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಐಎಂಎಫ್​ನ ಗೀತಾ ಗೋಪಿನಾಥ್


ಭಾರತ

822.09 ಟನ್‌ ಚಿನ್ನದ ನಿಕ್ಷೇಪಗಳು, 49,09,156.21 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.


ನೆದರ್ಲ್ಯಾಂಡ್ಸ್

612.45 ಟನ್‌ ಚಿನ್ನದ ನಿಕ್ಷೇಪಗಳು, 3,657,367.67 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.

Continue Reading

ಪ್ರಮುಖ ಸುದ್ದಿ

Mimi Chakraborty : ಕೋಲ್ಕೊತಾ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿದ ನಟಿ ಮಿಮಿ ಚಕ್ರವರ್ತಿಗೆ ಅತ್ಯಾಚಾರ ಬೆದರಿಕೆ!

Mimi Chakraborty : ನಾವು ಮಹಿಳೆಯರಿಗೆ ನ್ಯಾಯವನ್ನು ಒದಗಿಸುವ ಬಗ್ಗೆ ಮಾತನಾಡುತ್ತೆವೆ. ಆದರೆ ಪರಿಸ್ಥಿತಿ ವಿಭಿನ್ನವಾಗಿದೆ. ಕೆಲವು ವಿಷಕಾರಿ ಪುರುಷರು ಮಹಿಳೆಯರ ಪರವಾಗಿ ಜನರ ಮಧ್ಯೆ ಹೇಳುತ್ತಾರೆ. ಆದರೆ ಮುಖವಾಡ ಧರಿಸಿಕೊಂಡರು ಅತ್ಯಾಚಾರದ ಬೆದರಿಕೆಗಳನ್ನು ಹಾಕುತ್ತಾರೆ. ಅವರಿಗೆ ಶಿಕ್ಷಣದ ಕೊರತೆ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

VISTARANEWS.COM


on

Mimi Chakraborty
Koo

ಕೋಲ್ಕತಾ : ಕೋಲ್ಕತಾದ ಆರ್‌ಜಿ ಕಾರ್‌‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾ ಪೋಸ್ಟ್‌ಗಳನ್ನು ಮಾಡಿದ್ದ ಅಲ್ಲಿನ ನಟಿ ಮಿಮಿ ಚಕ್ರವರ್ತಿಗೆ (Mimi Chakraborty) ಅತ್ಯಾಚಾರ ಬೆದರಿಕೆಗಳು ಬಂದಿವೆ. ಪೋಸ್ಟ್ ಪ್ರಕಟಿಸಿದ ನಂತರ ತಮಗೆ ಅತ್ಯಾಚಾರ ಬೆದರಿಕೆಗಳು ಮತ್ತು ಅಶ್ಲೀಲ ಸ್ವರೂಪದ ಸಂದೇಶಗಳು ಬರುತ್ತಿವೆ ಎಂದು ತೃಣಮೂಲ ಕಾಂಗ್ರೆಸ್‌ನ ಮಾಜಿ ಸದಸ್ಯೆಯೂ ಆಗಿರುವ ಮಿಮಿ ಚಕ್ರವರ್ತಿ ಮಂಗಳವಾರ ಮಾಹಿತಿ ಹಂಚಿಕೊಂಡಿದ್ದಾರೆ. ಮಿಮಿ ಈ ಬಗ್ಗೆ ಕೋಲ್ಕತಾ ಪೊಲೀಸರ ಸೈಬರ್ ಸೆಲ್ ವಿಭಾಗಕ್ಕೆ ಆ ಮಾಹಿತಿಯನ್ನು ಕೊಟ್ಟಿದ್ದಾರೆ.

ನಾವು ಮಹಿಳೆಯರಿಗೆ ನ್ಯಾಯವನ್ನು ಒದಗಿಸುವ ಬಗ್ಗೆ ಮಾತನಾಡುತ್ತೆವೆ. ಆದರೆ ಪರಿಸ್ಥಿತಿ ವಿಭಿನ್ನವಾಗಿದೆ. ಕೆಲವು ವಿಷಕಾರಿ ಪುರುಷರು ಮಹಿಳೆಯರ ಪರವಾಗಿ ಜನರ ಮಧ್ಯೆ ಹೇಳುತ್ತಾರೆ. ಆದರೆ ಮುಖವಾಡ ಧರಿಸಿಕೊಂಡರು ಅತ್ಯಾಚಾರದ ಬೆದರಿಕೆಗಳನ್ನು ಹಾಕುತ್ತಾರೆ. ಅವರಿಗೆ ಶಿಕ್ಷಣದ ಕೊರತೆ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಕೋಲ್ಕತ್ತಾದಲ್ಲಿ ಈ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಟಿ ವೈಯಕ್ತಿಕವಾಗಿ ಭಾಗವಹಿಸಿದ್ದರು. ಮಿಮಿ ಅವರಲ್ಲದೆ, ನಟರಾದ ರಿದ್ಧಿ ಸೇನ್, ಅರಿಂದಮ್ ಸಿಲ್ ಮತ್ತು ಮಧುಮಿತಾ ಸರ್ಕಾರ್ ಕೂಡ ಆಗಸ್ಟ್ 14 ರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಿಮಿ ಚಕ್ರವರ್ತಿ ಜಾದವ್ಪುರ ಲೋಕಸಭಾ ಕ್ಷೇತ್ರದಿಂದ (2019-2024) ಸಂಸತ್ ಸದಸ್ಯರಾಗಿದ್ದರು.

ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ

ಮುಂಬೈ: ಆರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ತಿಂಗಳುಗಳ ಕಾಲ ಸತತವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ (Physical Abuse ) ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಮತ್ತೊಂದು ಇದೇ ಮಾದರಿಯ ಘಟನೆ ವರದಿಯಾಗಿದೆ.

ಇದನ್ನೂ ಓದಿ: Lashkar-e-Taiba : ಎಲ್ಇಟಿ- ಹಮಾಸ್ ಒಂದಾಗುತ್ತಿದೆಯೇ? ಜಾಗತಿಕ ಆತಂಕ ತಂದಿಟ್ಟ ಉಗ್ರಗಾಮಿ ಸಂಘಟನೆಗಳ ಮುಖ್ಯಸ್ಥರ ಭೇಟಿ

ಶಿಕ್ಷಕನನ್ನು 47 ವರ್ಷದ ಪ್ರಮೋದ್ ಸರ್ದಾರ್ ಎಂದು ಗುರುತಿಸಲಾಗಿದೆ/ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. 8 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಒಬ್ಬಾಕೆ ಮಕ್ಕಳ ಕಲ್ಯಾಣ ಕೇಂದ್ರದ ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಿ ಘಟನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಅಧಿಕಾರಿಗಳು ಶಾಲೆಗೆ ಹೋಗಿ ತನಿಖೆಯನ್ನು ನಡೆಸಿ ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಪ್ರಕರಣದ ವಿವರಗಳ ಪ್ರಕಾರ, ಶಿಕ್ಷಕ ಕಳೆದ ನಾಲ್ಕು ತಿಂಗಳಿನಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ. ವಿಡಿಯೊ ತೋರಿಸುತ್ತಾ ಅನುಚಿತವಾಗಿ ಸ್ಪರ್ಶಿಸುತ್ತಿದ್ದ. ಆರು ವಿದ್ಯಾರ್ಥಿನಿಯರು ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮಂಗಳವಾರ ಬೆಳಿಗ್ಗೆ ಶಾಲೆಗೆ ಭೇಟಿ ನೀಡಿ ಕೆಲವು ಬಾಲಕಿಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಆಶಾ ಮಿರ್ಗೆ ಒತ್ತಾಯಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Bharat Bandh today : ಇಂದು ಭಾರತ್ ಬಂದ್‌; ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್‌

harat Bandh today;

VISTARANEWS.COM


on

Bharat Bandh today;
Koo

ನವದೆಹಲಿ: ದೇಶಾದ್ಯಂತ ಬುಧವಾರ(ಆಗಸ್ಟ್ 21)ರಂದು ಭಾರತ್‌ ಬಂದ್‌(Bharat Bandh Today)ಗೆ ಕರೆ ನೀಡಲಾಗಿದೆ. ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST)ಗಳಿಗೆ ನೀಡಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡುವ (Supreme Court SC ST Quota, SC ST Sub- Classifications) ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ (Supreme Court) ನೀಡಿತ್ತು. ಇದನ್ನು ವಿರೋಧಿಸಿ ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ಈ ಭಾರತ್ ಬಂದ್‌ಗೆ ಕರೆ ನೀಡಿದೆ. ಆ ಮೂಲಕ ಕೋರ್ಟ್ ಆದೇಶ ಹಿಂಪಡೆದು, ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಲಿದ್ದಾರೆ.

ಬಂದ್‌ಗೆ ಕಾರಣ ಏನು?

ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST)ಗಳಿಗೆ ನೀಡಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡುವ ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಅವಶ್ಯಕತೆ ಇದ್ದರವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಮೀಸಲಾತಿ ನೀಡಬೇಕೆಂದು ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ವಾದವಾಗಿದೆ.

ಇಂದು ಶಾಲೆಗಳು ಇವೆಯೇ?

ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಶಾಲೆಗಳು, ಕಾಲೇಜುಗಳು ಮತ್ತು ಪೆಟ್ರೋಲ್ ಬಂಕ್‌‌ಗಳು ಬಂದ್‌ಗೆ ಕರೆ ನೀಡಿದ ಹೊರತಾಗಿಯೂ ತೆರೆದಿರುತ್ತವೆ.

ಯಾವೆಲ್ಲಾ ಸೇವೆ ಲಭ್ಯ?

ಇನ್ನು ಬಂದ್‌ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳಂತಹ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದಾಗ್ಯೂ, ಸಾರ್ವಜನಿಕ ಸಾರಿಗೆಯನ್ನು, ಖಾಸಗಿ ಕಚೇರಿಗಳು, ಅಂಗಡಿ ಮುಗ್ಗಟ್ಟು ಬಂದ್‌ ಆಗಲಿವೆ. ಇನ್ನು ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಇದನ್ನೂ ಓದಿ: Lateral Entry : ಪ್ರಧಾನಿ ಮೋದಿ ಮಧ್ಯಪ್ರವೇಶ; ಲ್ಯಾಟರಲ್ ಎಂಟ್ರಿ ಮೂಲಕ ನೇಮಕಕ್ಕೆ ತಡೆ

ಬಂದ್‌ಗೆ ಕರೆ ನೀಡಿದ ಬೆನ್ನಲ್ಲೇ ಎಲ್ಲಾ ರಾಜ್ಯದ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಖಡಕ್ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಕೆಲ ಸ್ಥಳಗಳನ್ನು ಗುರುತಿಸಿ ಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ. ಪ್ರಮುಖವಾಗಿ ಉತ್ತರ ಪ್ರದೇಶ ಸೇರಿದಂತೆ ಕೆಲ ಉತ್ತರ ರಾಜ್ಯಗಳಲ್ಲಿ ಈ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ತೀವ್ರ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ಕೋರ್ಟ್‌ ಹೇಳಿದ್ದೇನು?

ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ, ರಾಜ್ಯವು ಉಪ-ವರ್ಗಕ್ಕೆ 100% ಮೀಸಲಾತಿಯನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದಿದೆ. SC/ST ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ಅಲ್ಲಗಳೆಯುವಂತಿಲ್ಲ. SC/ST ಗಳಲ್ಲಿ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ಇನ್ನೂ ಹಿಂದುಳಿದ ವರ್ಗಗಳಿವೆ ಎಂದು ಕೋರ್ಟ್‌ ಹೇಳಿದೆ

Continue Reading

ಕ್ರೈಂ

Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

Kolkata Doctor Murder Case: ಆರೋಪಿ ಸಂಜಯ್ ರಾಯ್ ಆಗಸ್ಟ್ 8ರ ರಾತ್ರಿ ಕೋಲ್ಕತಾದ ಸೋನಾಗಚಿ ರೆಡ್ ಲೈಟ್ ಏರಿಯಾದಲ್ಲಿದ್ದ. ಅಲ್ಲಿ ಆತ ಮದ್ಯ ಸೇವಿಸಿ ಎರಡು ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

sanjoy roy Kolkata Doctor Murder Case
Koo

ಕೋಲ್ಕತಾ: ನಗರದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ (RG Kar Hospital) ನಡೆದ ವೈದ್ಯೆಯ ಬರ್ಬರ ಅತ್ಯಾಚಾರ ಹಾಗೂ ಕೊಲೆ (Kolkata Doctor Murder Case) ಪ್ರಕರಣದಲ್ಲಿ ಇನ್ನಷ್ಟು ಬೀಭತ್ಸ (Kolkata horror) ವಿವರಗಳು ಹೊರಬೀಳುತ್ತಿವೆ. 31 ವರ್ಷದ ಕಿರಿಯ ವೈದ್ಯೆಯ (Junior Doctor) ಮೇಲೆ ಅತ್ಯಾಚಾರ (Physical Abuse) ಎಸಗಿ ಕೊಲೆಗೈದ ಕಾಮುಕ ಹಿಂದಿನ ದಿನ ರಾತ್ರಿ ನಗರದ ಎರಡು ವೇಶ್ಯಾಗೃಹಗಳಿಗೆ (brothels) ಭೇಟಿ ನೀಡಿದ್ದ ಎಂದು ಬಯಲಾಗಿದೆ.

ಆರೋಪಿ ಸಂಜಯ್ ರಾಯ್ ಆಗಸ್ಟ್ 8ರ ರಾತ್ರಿ ಕೋಲ್ಕತಾದ ಸೋನಾಗಚಿ ರೆಡ್ ಲೈಟ್ ಏರಿಯಾದಲ್ಲಿದ್ದ. ಅಲ್ಲಿ ಆತ ಮದ್ಯ ಸೇವಿಸಿ ಎರಡು ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜೂನಿಯರ್ ಡಾಕ್ಟರ್ ಮಲಗಿದ್ದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಆತ ಪ್ರವೇಶಿಸುತ್ತಿರುವುದು ಮತ್ತು ಹೊರಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಆತನ ಬಂಧನಕ್ಕೆ ನೆರವಾಗಿವೆ.

ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ದೇಶದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಮತ್ತೊಂದು ಅತ್ಯಾಚಾರ ಪ್ರಕರಣಕ್ಕಾಗಿ ದೇಶ ಕಾಯಲು ಸಾಧ್ಯವಿಲ್ಲ” ಎಂದು ಕಟುವಾಗಿ ಹೇಳಿದ್ದರು. ಅಸ್ತಿತ್ವದಲ್ಲಿರುವ ಕಾಯ್ದೆಗಳು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸಾಂಸ್ಥಿಕ ಸುರಕ್ಷತಾ ಮಾನದಂಡಗಳನ್ನು ಖಾತರಿಪಡಿಸುವುದಿಲ್ಲ. ಪುರುಷಪ್ರಭುತ್ವದಿಂದಾಗಿ ಮಹಿಳಾ ವೈದ್ಯರೇ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ಸಿಜೆಐ ಚಂದ್ರಚೂಡ್ ಗಮನಿಸಿದ್ದರು.

ಪ್ರತಿಭಟಿಸುವ ವೈದ್ಯರ ಮೇಲೆ ನಿಮ್ಮ ಅಧಿಕಾರವನ್ನು ಪ್ರದರ್ಶಿಸಬೇಡಿ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದೆ. ಕೋರ್ಟ್‌ ವೈದ್ಯರಿಗೆ ಕೆಲಸವನ್ನು ಪುನರಾರಂಭಿಸಲು ಕೇಳಿದೆ. ವೈದ್ಯರ ಕಳವಳವನ್ನು ಅತ್ಯಂತ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಕಾರ್ಯಪಡೆಯು ತನ್ನ ಮಧ್ಯಂತರ ವರದಿಯನ್ನು ಮೂರು ವಾರಗಳಲ್ಲಿ ಮತ್ತು ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಲಿದೆ ಎಂದು ಹೇಳಿದೆ.

ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಸೇರಿದಂತೆ ಶಂಕಿತರನ್ನು ಸಿಬಿಐ ತನಿಖೆಗೊಳಪಡಿಸಿದೆ. ನಿನ್ನೆ ಮುಂಜಾನೆ ಪ್ರಕರಣದ ಹಲವಾರು ಶಂಕಿತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಿಂದ ಸರಣಿ ತನಿಖೆಗೆ ಒಳಗಾದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಆಗಸ್ಟ್ 22ರೊಳಗೆ ತನಿಖೆಯ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಏಜೆನ್ಸಿಯನ್ನು ಕೇಳಿದೆ.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲನಾದ ಡಾ. ಸಂದೀಪ್ ಘೋಷ್, ಕೋಲ್ಕತ್ತಾ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅನುಪ್ ದತ್ತಾ, ಸಂಜಯ್ ರಾಯ್ ಜೊತೆಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಕೆಲವೇ ದಿನಗಳಲ್ಲಿ ಸಂದೀಪ್ ಘೋಷ್ ರಾಜೀನಾಮೆ ನೀಡಿದ್ದಾನೆ. ಈತ ಘಟನೆಯ ನಂತರ ಸೆಮಿನಾರ್ ಹಾಲ್ ಬಳಿಯ ಕೊಠಡಿಗಳನ್ನು ಕ್ಲೀನ್‌ ಮಾಡಲು ಆದೇಶಿಸಿದ್ದ. ಅಪರಾಧದ ಹಿಂದೆ ಪಿತೂರಿ ಇದೆಯೇ ಎಂದು ಕಂಡುಹಿಡಿಯಲು ಸಿಬಿಐ ಈತನನ್ನು ಪ್ರಶ್ನಿಸುತ್ತಿದೆ. ಅಂದು ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಇಂಟರ್ನ್‌ಗಳೊಂದಿಗೆ ಸಂದೀಪ್ ಘೋಷ್ ಅವರ ಉತ್ತರಗಳನ್ನು ಸಿಬಿಐ ಪರಿಶೀಲಿಸುತ್ತಿದೆ.

ಇದನ್ನೂ ಓದಿ: Kolkata Doctor murder case: ಅಂತ್ಯಕ್ರಿಯೆ ನಡೆದ 3 ಗಂಟೆ ನಂತ್ರ FIR ದಾಖಲು..ಆಸ್ಪತ್ರೆ ವೈದ್ಯರು, ಪೊಲೀಸರು ಏನ್‌ ಮಾಡ್ತಿದ್ರು?- ಸುಪ್ರೀಂ ತರಾಟೆ

Continue Reading
Advertisement
GITAM University
ಬೆಂಗಳೂರು1 hour ago

GITAM University: ಗೀತಂ ವಿವಿಯಲ್ಲಿ ವಿದ್ಯಾರ್ಥಿಗಳ ಗಲಾಟೆ; ಮಹಿಳಾ ಸೆಕ್ಯೂರಿಟಿ ಗಾರ್ಡ್‌ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ!

Gold In Country
ವಾಣಿಜ್ಯ2 hours ago

Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

Viral Video
Latest2 hours ago

Viral Video: ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಿದ 5 ವರ್ಷದ ಬಾಲಕ; ಅಸಲಿ ಕಾರಣವೇನು ಗೊತ್ತಾ?

Viral Video
Latest2 hours ago

Viral Video: ಆ್ಯಪಲ್ ಹೀಗೂ ತಿನ್ನಬಹುದು; ನೀವೂ ಟ್ರೈ ಮಾಡಿ ನೋಡಿ!

Couple death
ಕ್ರೈಂ5 hours ago

Couple Death: ಪತ್ನಿಯ ಅನುಮಾನಾಸ್ಪದ ಸಾವು; ಜನರ ಆಕ್ರೋಶಕ್ಕೆ ಹೆದರಿ ಗಂಡ ಕೂಡ ಆತ್ಮಹತ್ಯೆ

Mimi Chakraborty
ಪ್ರಮುಖ ಸುದ್ದಿ5 hours ago

Mimi Chakraborty : ಕೋಲ್ಕೊತಾ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿದ ನಟಿ ಮಿಮಿ ಚಕ್ರವರ್ತಿಗೆ ಅತ್ಯಾಚಾರ ಬೆದರಿಕೆ!

ದೇಶ5 hours ago

Physical Abuse : ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ

Rishab Shetty
ಪ್ರಮುಖ ಸುದ್ದಿ5 hours ago

Rishab Shetty : ಭಾರತವನ್ನು ಕೆಟ್ಟದಾಗಿ ತೋರಿಸುವ ಸಿನಿಮಾಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ರಿಷಭ್‌ ಶೆಟ್ಟಿ

food poisoning tumkur
ತುಮಕೂರು6 hours ago

Food Poisoning: ಬೀಗರೂಟ ಸೇವಿಸಿ ಮನೆಗೆ ಬಂದವರು ಅಸ್ವಸ್ಥ; 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಪಾಲು

PM Modi to visits US
ಪ್ರಮುಖ ಸುದ್ದಿ6 hours ago

PM Modi US Visit : ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಮಾಡಲಿದ್ದಾರೆ ಮೋದಿ; ಅಮೆರಿಕ ಚುನಾವಣೆ ನಡುವೆ ಕುತೂಹಲ ಮೂಡಿಸಿದೆ ಅವರ ಭೇಟಿ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌