Karkala News: ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು - Vistara News

ಕರ್ನಾಟಕ

Karkala News: ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು

Karkala News: ಕಾರ್ಕಳದಿಂದ ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ವಿದ್ಯಾರ್ಥಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

VISTARANEWS.COM


on

Karkala News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಡುಪಿ: ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ. ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಮೃತ. ಕಾರ್ಕಳದಿಂದ (Karkala News) ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ವಿದ್ಯಾರ್ಥಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಮೃತ ಜನಿತ್ ಶೆಟ್ಟಿ ನಿಟ್ಟೆ ವಿದ್ಯಾಸಂಸ್ಥೆಯ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದು, ಕಾರ್ಕಳದಿಂದ ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂಬದಿಯ ಚಕ್ರ ಹರಿದು ಗಂಭೀರ ಗಾಯಗೊಂಡಿದ್ದ. ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಜನಿತ್ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.

ಹೀಲಿಯಂ ಗ್ಯಾಸ್‌ ಬಳಸಿ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು: ರಾಜಧಾನಿಯಲ್ಲಿ (Bangalore news) 22 ವರ್ಷದ ಟೆಕ್ಕಿಯೊಬ್ಬ (techie) ಹೀಲಿಯಂ ಗ್ಯಾಸ್‌ (Helium Gas) ಬಳಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿರುವ ಈತ, ಬಲೂನ್‌ಗೆ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಮೂಲಕ ಜೀವ ತೆಗೆದುಕೊಂಡಿದ್ದಾನೆ.

ಹಾಸನ ಜಿಲ್ಲೆ ಸಕಲೇಶಪುರ ಮೂಲದ 22 ವರ್ಷದ ಯಾಜ್ಙಿಕ್ ಮೃತಪಟ್ಟ ಟೆಕ್ಕಿ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಘಟನೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ವರ್ಕ್ ಫ್ರಂ ಹೋಂನಲ್ಲಿದ್ದ ಟೆಕ್ಕಿ ಯಾಜ್ಙಿಕ್, ಎಂಟೆಕ್ ಎಕ್ಸಾಂ ಬರೆಯುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಹೋಟೆಲ್‌ನಲ್ಲಿ ಆಗಸ್ಟ್ 16ರಂದು ರೂಂ ಬುಕ್ ಮಾಡಿದ್ದ. ನಿನ್ನೆ ದೊಡ್ಡ ಬ್ಯಾಗ್ ತೆಗೆದುಕೊಂಡು ಪೀಣ್ಯ ಕಡೆ ತೆರಳಿದ್ದಾನೆ.

ಇದನ್ನೂ ಓದಿ | Students Death: ಇಬ್ಬರು ಮಕ್ಕಳ ಜೀವ ಕಸಿದ ಮೊಬೈಲ್;‌ ತಂದೆ- ತಾಯಿ ಫೋನ್ ಕೊಡದಿದ್ದುದಕ್ಕೆ ಆತ್ಮಹತ್ಯೆ

ಪೀಣ್ಯದಲ್ಲಿ ಹೀಲಿಯಂ ಗ್ಯಾಸ್ ಖರೀದಿ ಮಾಡಿ ಲಾಡ್ಜ್‌ಗೆ ತಂದಿದ್ದಾನೆ. ಕಳೆದ ರಾತ್ರಿ ಲಾಡ್ಜ್‌ನ ಕೋಣೆಯಲ್ಲಿ ಪ್ಲಾಸ್ಟಿಕ್ ಕವರ್‌ಗೆ ಹೀಲಿಯಂ ಗ್ಯಾಸ್ ತುಂಬಿಸಿದ್ದಾನೆ. ಕವರ್ ಮೂಲಕ ಹೀಲಿಯಂ ಗ್ಯಾಸ್ ಇನ್‌ಹೇಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಯಾಜ್ಙಿಕ್ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Almatti Dam: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

Almatti Dam: ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆಯು ಪೂರ್ಣ ಮಟ್ಟಕ್ಕೆ ಆರ್.ಎಲ್. 519.60 ಮೀ.ವರೆಗೆ (123 ಟಿ.ಎಂ.ಸಿ.) ತಲುಪಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಗಂಗಾಪೂಜೆ ನೇರವೇರಿಸಿ ಬಾಗಿನ ಅರ್ಪಿಸಿದರು.

VISTARANEWS.COM


on

Koo

ವಿಜಯಪುರ: ಉತ್ತರ ಕರ್ನಾಟಕದ ಪ್ರತಿಷ್ಠಿತ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆಯು ಪೂರ್ಣ ಮಟ್ಟಕ್ಕೆ ಆರ್.ಎಲ್. 519.60 ಮೀ.ವರೆಗೆ (123 ಟಿ.ಎಂ.ಸಿ.) ತಲುಪಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣೆಯ ಜಲಧಿಗೆ ಬುಧವಾರ ಗಂಗಾಪೂಜೆ ನೇರವೇರಿಸಿ ಬಾಗಿನ (Almatti Dam) ಅರ್ಪಣೆ ಮಾಡಿದರು.

ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನನ್ವಯ ಯು.ಕೆ.ಪಿ.-1 ಮತ್ತು 2 ರಲ್ಲಿ 173 ಟಿಎಂಸಿ. ನೀರಿನ ಹಂಚಿಕೆಯಡಿ ಒಟ್ಟು 6.67 ಲಕ್ಷ ಹೆಕ್ಟೇರ್ (16.47 ಲಕ್ಷ ಎಕರೆ) ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಯು.ಕೆ.ಪಿ ಹಂತ-3 ಕ್ಕೆ ಹಂಚಿಕೆಯಾದ 130 ಟಿ.ಎಂ.ಸಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ 519.60 ಮೀ ನಿಂದ 524.256 ಮೀ ವರೆಗೆ (15 ಅಡಿ) ಎತ್ತರಿಸುವುದು ಒಳಗೊಂಡಿದೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಡಿ ಒಟ್ಟಾರೆ 5.94 ಲಕ್ಷ ಹೆಕ್ಟೇರ್ (14.68 ಲಕ್ಷ ಎಕರೆ) ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಸಂಗ್ರಹಣೆಯನ್ನು 524.256 ಮೀ. ಗೆ ಹೆಚ್ಚಿಸಿದಲ್ಲಿ ಹಿನ್ನೀರಿನಲ್ಲಿ 188 ಗ್ರಾಮಗಳಡಿಯ ಸುಮಾರು 75,000 ಎಕರೆ ಜಮೀನು ಮುಳುಗಡೆ ಹೊಂದಲಿದೆ. ಅಲ್ಲದೇ, ಮುಳುಗಡೆ ಹೊಂದುವ 20 ಗ್ರಾಮಗಳಡಿ ಬಾಗಲಕೋಟ ಪಟ್ಟಣ ಒಳಗೊಂಡು ಬೃಹತ್ ಪ್ರಮಾಣದ ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಕ್ರಮಗಳನ್ನು ಹೊಸ ಭೂಸ್ವಾಧೀನ-2013 ರ ಕಾಯ್ದೆಯನ್ವಯ ಜರುಗಿಸುವುದಾಗಿರುತ್ತದೆ. ಒಟ್ಟಾರೆ 1.34 ಲಕ್ಷ ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಇಲ್ಲಿಯವರೆಗೆ 28,878 ಎಕರೆ ಕ್ಷೇತ್ರವನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ | PR Sreejesh: ಹಾಕಿ ದಿಗ್ಗಜ ಶ್ರೀಜೇಶ್​ಗೆ 2 ಕೋಟಿ ಬಹುಮಾನ ಘೋಷಣೆ ಮಾಡಿದ ಕೇರಳ ಸರ್ಕಾರ

Almatti Dam
Almatti Dam

ಈ ಯೋಜನೆಯ ಅನುಷ್ಠಾನಕ್ಕೆ ರೂ.51,148.94 ಕೋಟಿ (2014-15ರ ದರಪಟ್ಟಿ) ಪರಿಷ್ಕೃತ ಅಂದಾಜು ಮೊತ್ತಕ್ಕೆ ಸರ್ಕಾರವು 2017ರ ಅ.9ರಂದು ಅನುಮೋದನೆ ನೀಡಿದೆ. ಈ ಪೈಕಿ ಭೂಸ್ವಾಧೀನ ಮತ್ತು ಆರ್ & ಆರ್ ಗಾಗಿ 30,143.00 ಕೋಟಿ ರೂ. ಪ್ರಾವಿಧಾನ ಮಾಡಲಾಗಿದೆ. ಇಲ್ಲಿಯವರೆಗೆ (ಜುಲೈ-2024 ಅಂತ್ಯಕ್ಕೆ) ಖರ್ಚಾದ ವಿವರಗಳು ಈ ಕೆಳಗಿನಂತಿವೆ:

  • ಕಾಮಗಾರಿಗಳಿಗಾಗಿ ​- ರೂ. 11,099.00 ಕೋಟಿ
  • ಆರ್ & ಆರ್ ಗಾಗಿ ​- ರೂ.3,456.00 ಕೋಟಿ
  • ಭೂಸ್ವಾಧೀನಕ್ಕಾಗಿ ​- ರೂ.3,288.00 ಕೋಟಿ
  • ಸಿಬ್ಬಂದಿ & ಇತರೆ ವೆಚ್ಚ​- ರೂ.527.00 ಕೋಟಿ
  • ಒಟ್ಟಾರೆ ವೆಚ್ಚ​- ರೂ.18,370.00 ಕೋಟಿ.

ಮುಂದುವರಿದು, ಯು.ಕೆ.ಪಿ.-3 ರ ಅನುಷ್ಠಾನಕ್ಕಾಗಿ ಇತ್ತೀಚಿನ ದರಪಟ್ಟಿ ಮತ್ತು ಒಪಂದದ ಐತೀರ್ಪಿನ ಭೂಸ್ವಾಧೀನ ದರಗಳನ್ನು ಪರಿಗಣಿಸಿ ಸುಮಾರು ರೂ.83,700.00 ಕೋಟಿ ರಷ್ಟು ಅಂದಾಜಿಸಲಾಗಿದೆ. ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪು ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸುವುದು ಬಾಕಿ ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

Continue Reading

ಕರ್ನಾಟಕ

Physical Abuse: ಆಸ್ಪತ್ರೆಯಲ್ಲೇ 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

Physical Abuse: ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೊಗಿದ್ದ ವೃದ್ಧೆ ಮೇಲೆ ಮುಸ್ಲಿಂ ಯುವಕ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಆಸ್ಪತ್ರೆ ಆಡಳಿತಾಧಿಕಾರಿ, ಪೊಲೀಸರಿಗೆ ದೂರು ನೀಡಿದ್ದಾರೆ.

VISTARANEWS.COM


on

Physical Abuse
Koo

ಚಿಕ್ಕಬಳ್ಳಾಪುರ: ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ (Physical Abuse) ಬೆನ್ನಲ್ಲೇ ಅಂತಹುದೇ ಹೀನ ಕೃತ್ಯವೊಂದು ಜಿಲ್ಲೆಯಲ್ಲಿ ನಡೆದಿದೆ. ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲೇ 65 ವರ್ಷದ ವೃದ್ಧೆ ರೋಗಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.

ಇರ್ಫಾನ್ (24) ಅತ್ಯಾಚಾರ ಎಸಗಿದ ಆರೋಪಿ. ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಬಳಿ ವೃದ್ಧೆ ಇದ್ದಾಗ, ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿಯನ್ನು ಚಿಂತಾಮಣಿಯ ಹೈದರಾಲಿ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಅಸ್ವಸ್ಥ ವೃದ್ಧೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂತೋಷ ಕುಮಾರ್ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ | Kolkata Doctor Murder Case: ಕೋಲ್ಕತ್ತಾ ವೈದ್ಯೆ ಅತ್ಯಾಚಾರ; ಮತ್ತೆ ನೆನಪಿಗೆ ಬಂದಳು ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್

ʼಗಟ್ಟಿಮೇಳ ನಿಲ್ಸಿʼ ಗಂಡನನ್ನು ತರಾಟೆಗೆ ತೆಗೆದುಕೊಂಡ ಮೊದಲ ಹೆಂಡತಿ, ಮದುವೆ ಮನೆಯಲ್ಲಿ ಗಲಾಟೆ

fraud Case chikkaballapura
fraud Case chikkaballapura

ಚಿಕ್ಕಬಳ್ಳಾಪುರ: ಗಂಡ (Husband) ಇನ್ನೊಂದು ಮದುವೆ (Marriage) ಆಗುತ್ತಿರುವ ಸಂದರ್ಭದಲ್ಲಿ ಮೊದಲನೇ ಹೆಂಡತಿ (First Wife) ಹಾಗೂ ಆಕೆಯ ಅಕ್ಕ ಮದುವೆ ಮನೆಗೆ ನುಗ್ಗಿ ಗಲಾಟೆ ಎಬ್ಬಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದಿದೆ. ವರ ಮೋಸ (fraud Case) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನೋಹನ್‌ ಕಾಂತ್‌ ಎಂಬಾತ ಮದುವೆಯಾಗುತ್ತಿರುವ ಸಂದರ್ಭದಲ್ಲಿ, ಆತನ ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬವರು ಮದುವೆ ಮನೆಗೆ ಆಗಮಿಸಿ ಗಲಾಟೆ ಎಬ್ಬಿಸಿದ್ದಾರೆ. ನೋಹನ್‌ ಕಾಂತ್‌ ತನ್ನಿಂದ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ರಶ್ಮಿ ಆರೋಪಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

ಚಿಕ್ಕಬಳ್ಳಾಪುರ ನಗರದ ನಿವಾಸಿ ನೋಹನ್ ಕಾಂತ್ ಹಾಗೂ ಬೆಂಗಳೂರು ಮೂಲದ ನಿವಾಸಿ ರಶ್ಮಿ 2018ರಲ್ಲಿ ವಿವಾಹವಾಗಿದ್ದರು. ವಿಚ್ಛೇದದ ಪಡೆದೇ ಎರಡನೇ ಮದುವೆಯಾಗುತ್ತಿರುವುದಾಗಿ ಗಂಡ ನೋಹನ್ ಕಾಂತ್ ಸ್ಪಷ್ಟನೆ ನೀಡಿದ್ದಾನೆ. ಈ ಹಂತದಲ್ಲಿ ಮದುವೆ ಮನೆಯಲ್ಲಿ ಪರಸ್ಪರರ ನಡುವೆ ಜೋರು ವಾಗ್ವಾದ ನಡೆದಿದ್ದು, ಸಂಬಂಧಿಕರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಎರಡೂ ಕಡೆಯವರ ಮನವೊಲಿಸುವ ಕಾರ್ಯ ನಡೆಸಿದ್ದಾರೆ.

Continue Reading

ಕರ್ನಾಟಕ

Assault Case: ಫುಡ್ ಡೆಲಿವರಿ ಬಾಯ್‌ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ; ಸಿಸಿಟಿವಿಯಲ್ಲಿ ಸೆರೆ

Assault Case: ಬೆಂಗಳೂರಿನ ವಿನಾಯಕ ನಗರ ಲೇಔಟ್‌ನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್‌ ಮೇಲೆ ಹಲ್ಲೆ ನಡೆದಿದೆ. ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಿ, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

VISTARANEWS.COM


on

Assault Case
Koo

ಬೆಂಗಳೂರು: ಫುಡ್ ಡೆಲಿವರಿ ಮಾಡಲು ಬಂದಿದ್ದ ವೇಳೆ ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ (Assault Case) ನಗರದ ವಿನಾಯಕ ನಗರ ಲೇಔಟ್‌ನಲ್ಲಿ ನಡೆದಿದೆ. ಮಂಗಳವಾರ ಮಧ್ಯೆ ರಾತ್ರಿ 1 ಗಂಟೆ ವೇಳೆ ಡೆಲಿವರಿ ಬಾಯ್‌ ಮೇಲೆ ನಡೆದಿರುವ ಹಲ್ಲೆಯ ವಿಡಿಯೊ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿನಾಯಕ ನಗರ ಲೇಔಟ್‌ನಲ್ಲಿ ಮನೆಯೊಂದರಿಂದ ಹೊರಬರುತ್ತಿದ್ದಾಗ ಡಿಯೋ ಸ್ಕೂಟರ್‌ನಲ್ಲಿ ಹೋದ ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಯುವಕರು ಮಾರಕಾಸ್ತ್ರ ತೆಗೆಯುತ್ತಿದ್ದಂತೆ ಡೆಲಿವರಿ ಬಾಯ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಅಟ್ಟಾಡಿಸಿಕೊಂಡು ಹೋಗಿರುವ ಯುವಕರು, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಡೆಲಿವರಿ ಬಾಯ್‌ ಮೇಲೆ ನಡೆದ ದಾಳಿ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Viral Video: ರೀಲ್ ಶೋಕಿಗಾಗಿ ನಡುರಸ್ತೆಯಲ್ಲಿ ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದ ಮಹಿಳೆ!

ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿ ಸಾವು

ಉಡುಪಿ: ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ. ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಮೃತ. ಕಾರ್ಕಳದಿಂದ (Karkala News) ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ವಿದ್ಯಾರ್ಥಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಮೃತ ಜನಿತ್ ಶೆಟ್ಟಿ ನಿಟ್ಟೆ ವಿದ್ಯಾಸಂಸ್ಥೆಯ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದು, ಕಾರ್ಕಳದಿಂದ ಬಸ್‌ನಲ್ಲಿ ಕಾಲೇಜಿಗೆ ಪ್ರಾಯಾಣಿಸುತ್ತಿದ್ದಾಗ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂಬದಿಯ ಚಕ್ರ ಹರಿದು ಗಂಭೀರ ಗಾಯಗೊಂಡಿದ್ದ. ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಜನಿತ್ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.

ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದು 1.4 ಲಕ್ಷ ಕಳೆದುಕೊಂಡ ಪುರೋಹಿತ!

ಮಂಡ್ಯ: ಫೇಸ್‌ಬುಕ್ ಸುಂದರಿ ಹಿಂದೆ ಬಿದ್ದ ಪುರೋಹಿತನಿಗೆ ಪಂಗನಾಮ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸುಂದರಿ ಮಾತಿಗೆ ಮರುಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡ (Fraud Case) ಅರ್ಚಕ, ಇದೀಗ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡವರು. ಕುಟುಂಬದಿಂದ ದೂರವಾಗಿ ಅರ್ಚಕ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ. ಹೀಗಾಗಿ ಆಕೆ ಜತೆ ಪ್ರತಿ ದಿನ ವಿಜಯ್ ಕುಮಾರ್ ಚಾಟಿಂಗ್ ಮಾಡುತ್ತಿದ್ದರು.

ವಿಜಯ್ ಕುಮಾರ್ ಬಗ್ಗೆ ತಿಳಿದುಕೊಂಡ ಯುವತಿ, ವಸತಿ, ಆರೋಗ್ಯ ಸಮಸ್ಯೆ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಈ ರೀತಿ ಸುಮಾರು 1 ಲಕ್ಷದ 40 ಸಾವಿರದಷ್ಟು ಹಣವನ್ನು ಸುಂದರಿ ಪಡೆದಿದ್ದಾಳೆ. ಬಣ್ಣ ಬಣ್ಣದ ಮಾತುಗಳಿಂದ ವಿಜಯ್ ಕುಮಾರ್‌ಗೆ ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ ವಿಜಯ್ ಹಣ‌ ಕಳುಹಿಸಿದ್ದರು. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಾಯ ಮಾಡಿದ್ದಾರೆ. ಆದರೆ, ಇಂದು, ನಾಳೆ ಎಂದು ಫೇಸ್‌ಬುಕ್‌ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.

ಸುಂದರಿ ಮಾಯವಾದ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ವಿಜಯ್ ಕುಮಾರ್‌ಗೆ ಮನವರಿಕೆಯಾಗಿದ್ದು, ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

ಅರ್ಚಕನಿಗೆ ಮೋಸ ಮಾಡಿರುವ ಯುವತಿಯ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ತೆಲಂಗಾಣದ ಸೋಶಿಯಲ್‌ ಮೀಡಿಯಾ ಸ್ಟಾರ್‌ ಬರ‍್ರೆಲಕ್ಕ ಕರ್ನೆ ಶಿರೀಷಾ ಅವರ ಫೋಟೊ ಇದೆ. ಅಲ್ಲದೇ ಆ ಖಾತೆಯಲ್ಲಿ ಇನ್ನೂ ಅನೇಕ ಯುವತಿಯರ ಫೋಟೊಗಳೂ ಇವೆ. ಹೀಗಾಗಿ ಫೇಕ್‌ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಅರ್ಚಕನಿಗೆ ಮೋಸ ಮಾಡಿದವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

Thawar Chand Gehlot: ರಾಜ್ಯಪಾಲರಿಗೆ ಬಂತು ಬುಲೆಟ್‌ಪ್ರೂಫ್‌ ಕಾರು! ಥಟ್‌ ಅಂತ ಯಾಕೀ ಬದಲಾವಣೆ?

Thawar Chand Gehlot: ಮಂಗಳೂರಿನ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜಾ, ಬಾಂಗ್ಲಾದೇಶದ ಪ್ರಧಾನಿಗೆ ಆದ ಸ್ಥಿತಿಯೇ ರಾಜ್ಯಪಾಲರಿಗೂ ಆಗಲಿದೆ ಎಂದು ಹೇಳಿದ್ದರು. ರಾಜಭವನಕ್ಕೆ ನುಗ್ಗಲೂ ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದರು.

VISTARANEWS.COM


on

thawar chand gehlot car
Koo

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಅವರ ವಾಹನದಲ್ಲಿ ಗುಪ್ತಚರ ಇಲಾಖೆಯ ಸಲಹೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಇದುವರೆಗೆ ಸಾಮಾನ್ಯ ಕಾರು ಬಳಸುತ್ತಿದ್ದ ರಾಜ್ಯಪಾಲರು (Karnataka Governor) ಇನ್ನು ಮುಂದೆ ಬುಲೆಟ್‌ ಪ್ರೂಫ್‌ ಕಾರು (Bullet proof Car) ಬಳಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ (prosecution) ಅನುಮತಿ ನೀಡಿದ ಬಳಿಕ ರಾಜ್ಯದ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ರಾಜಭವನಕ್ಕೆ ನುಗ್ಗಲೂ ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು, ರಾಜ್ಯದ ಹಲವೆಡೆ ಗವರ್ನರ್‌ಗೆ ʼಗೋ ಬ್ಯಾಕ್‌ʼ ಪ್ರತಿಭಟನೆ ನಡೆಸಲಾಗಿತ್ತು. ಜೊತೆಗೆ, ರಾಜ್ಯಪಾಲರ ಫೋಟೋಗೆ ಚಪ್ಪಲಿ ಹಾರ ಹಾಕಲಾಗಿತ್ತು. ಕೆಲವು ಕಾಂಗ್ರೆಸ್ ನಾಯಕರಂತೂ ಎಲ್ಲೆ ಮೀರಿದ ಹೇಳಿಕೆಗಳನ್ನು ನೀಡಿದ್ದರು.

ಮಂಗಳೂರಿನ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜಾ, ಬಾಂಗ್ಲಾದೇಶದ ಪ್ರಧಾನಿಗೆ ಆದ ಸ್ಥಿತಿಯೇ ರಾಜ್ಯಪಾಲರಿಗೂ ಆಗಲಿದೆ ಎಂದು ಹೇಳಿದ್ದರು. ಈ ಕುರಿತು ಅವರ ಮೇಲೆ ಕೇಸು ದಾಖಲಿಸಲಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ, ಎಚ್ಚರಿಕೆ ವಗಹಿಸುವಂತೆ ಗುಪ್ತಚರ ಇಲಾಖೆಯು ರಾಜ್ಯಪಾಲರಿಗೆ ಸೂಚನೆ ನೀಡಿದೆ. ಹೀಗಾಗಿ, ಪ್ರವಾಸದಿಂದ ಬೆಂಗಳೂರಿಗೆ (Bengaluru) ವಾಪಸ್ ಆಗಿರುವ ಗೆಹ್ಲೋಟ್​ ಅವರು ಎಚ್ಚರಿಕೆ ಹೆಜ್ಜೆಯನ್ನಿಟ್ಟಿದ್ದಾರೆ. ನಿನ್ನೆ ಇಂದೋರ್‌ನಿಂ ವಾಪಸ್ ಆಗಿರುವ ರಾಜ್ಯಪಾಲರಿಗೆ ರಾಜ್ಯದ ಗುಪ್ತಚರ ಇಲಾಖೆಯಿಂದ ಬಿಪಿ ಕಾರು ನೀಡಲಾಗಿದೆ.

ರಾಜ್ಯಪಾಲರಾಗಿ ಗೆಹ್ಲೋಟ್ ಅವರು ರಾಜ್ಯಕ್ಕೆ ಆಗಮಿಸಿದ ಬಳಿಕ ಅವರು ಬುಲೆಟ್ ಪ್ರೂಫ್ ಇರುವ ಕಾರನ್ನು ಪಡೆದುಕೊಳ್ಳದೆ ಸಾಮಾನ್ಯ ಇನ್ನೋವಾ ಕಾರನ್ನೇ ಬಳಕೆ ಮಾಡಿದ್ದರು. ಕಳೆದ ಬಾರಿ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ಬಳಸುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ಬುಲೆಟ್ ಪ್ರೂಫ್ ಕಾರು ಪಡೆದಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಜೊತೆಗೆ, ಆಗಸ್ಟ್ 29ನೇ ತಾರೀಖಿನವರೆಗೆ ರಾಜ್ಯದಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ರಾಜ್ಯಪಾಲರು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ರಾಜ್ಯಪಾಲರು ಹೈಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ನೃಪತುಂಗ ವಿವಿ ಮೊದಲ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮಕ್ಕೆ ಕೂಡ ಗೈರಾಗಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಂದ ರಾಜ್ಯಪಾಲರು ದೂರ ಉಳಿದಿದ್ದಾರೆ. ಜೊತೆಗೆ ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಲು ಕರೆ ಕೊಟ್ಟಿವೆ.

ವಿಶ್ವವಿದ್ಯಾಲಯಗಳ ವಾರ್ಷಿಕ ಘಟಿಕೋತ್ಸವಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವ ಆಯೋಜನೆ ಮಾಡಲಾಗಿದ್ದು, 2020-21 ರಿಂದ 2022-2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 792 ವಿದ್ಯಾರ್ಥಿಗಳಿಗೆ ಪದವಿ, 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಬೇಕಿತ್ತು. ಆದರೆ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನೃಪತುಂಗ ವಿವಿಯ ಮೊದಲ ಘಟಿಕೋತ್ಸವ ನಡೆದಿದೆ. ಈಗಾಗಲೇ ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಲು ಕರೆ ಕೊಟ್ಟಿವೆ.

ನೃಪತುಂಗ ವಿವಿಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿವಿ ಕುಲಪತಿ ಪ್ರೊ. ಶ್ರೀನಿವಾಸ್ ಎಸ್.ಬಳ್ಳಿ , ಸಿಂಡಿಕೇಟ್ ಸದಸ್ಯರು ಭಾಗಿಯಾಗಿದ್ದರು. ಇಸ್ರೋ ವಿಜ್ಞಾನಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಡಾ.ರಾಮಸ್ವಾಮಿ ಬಾಲ ಸುಬ್ರಮಣಿಯನ್, ಇನ್ಫೋಸಿಸ್‌ನ ದಿನೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: HD Kumaraswamy: ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದ ಎಚ್‌ಡಿಕೆ

Continue Reading
Advertisement
Starbucks CEO
ವಿದೇಶ18 mins ago

Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ

Viral News
ಕ್ರಿಕೆಟ್42 mins ago

Viral News: ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ ರೋಹಿತ್​ ಶರ್ಮ, ಜಯ್​ ಶಾ

ಕರ್ನಾಟಕ1 hour ago

Almatti Dam: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

Danish Kaneria
ಕ್ರಿಕೆಟ್1 hour ago

Danish Kaneria: ರಕ್ಷಾ ಬಂಧನ ಆಚರಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Areca nut
ಪರಿಸರ2 hours ago

Areca Nut Price: ವಿದೇಶಿ ಅಕ್ರಮ ಅಡಿಕೆ ಸಾಗಾಣಿಕೆಯಿಂದ ದೇಶಿಯ ಅಡಿಕೆ ದರ ಕುಸಿತ; ರೈತರಲ್ಲಿ ಆತಂಕ

PM Modi Poland Visit
ವಿದೇಶ2 hours ago

PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ

PR Sreejesh
ಕ್ರೀಡೆ2 hours ago

PR Sreejesh: ಹಾಕಿ ದಿಗ್ಗಜ ಶ್ರೀಜೇಶ್​ಗೆ 2 ಕೋಟಿ ಬಹುಮಾನ ಘೋಷಣೆ ಮಾಡಿದ ಕೇರಳ ಸರ್ಕಾರ

Physical Abuse
ಕರ್ನಾಟಕ2 hours ago

Physical Abuse: ಆಸ್ಪತ್ರೆಯಲ್ಲೇ 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

Kids Denim Fashion
ಫ್ಯಾಷನ್2 hours ago

Kids Denim Fashion: ಮಾನ್ಸೂನ್ ಸೀಸನ್ ನಲ್ಲಿ ಟ್ರೆಂಡಿಯಾದ ಮಕ್ಕಳ ಡೆನಿಮ್ ಫ್ಯಾಷನ್

Shraddha Kapoor
ದೇಶ2 hours ago

Shraddha Kapoor: ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ ನಟಿ ಶ್ರದ್ಧಾ;‌ ಸ್ತ್ರೀ-2 ಸಕ್ಸೆಸ್‌ ಬೆನ್ನಲ್ಲೇ ಹೊಸ ದಾಖಲೆ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌