Narendra Modi: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ; ರಷ್ಯಾ ಜತೆಗಿನ ಸಂಘರ್ಷದ ಚರ್ಚೆ ಸಾಧ್ಯತೆ - Vistara News

ವಿದೇಶ

Narendra Modi: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ; ರಷ್ಯಾ ಜತೆಗಿನ ಸಂಘರ್ಷದ ಚರ್ಚೆ ಸಾಧ್ಯತೆ

Narendra Modi: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಆಗಸ್ಟ್‌ 23) ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡಿದರು. ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಮೋದಿ ಉಕ್ರೇನ್‌ಗೆ ತೆರಳಿದರು. ದ್ವಿಪಕ್ಷೀಯ ಸಹಕಾರ ಸಂಬಂಧವನ್ನು ಬಲಪಡಿಸುವ ಬಗ್ಗೆ ಮತ್ತು ರಷ್ಯಾ-ಉಕ್ರೇನ್‌ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಬಗ್ಗೆ ಮೋದಿ ಮತ್ತು ವೊಲೊಡಿಮಿರ್​ ಝೆಲೆನ್ಸ್ಕಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೀವ್‌: ವಿದೇಶ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ (ಆಗಸ್ಟ್‌ 23) ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡಿದರು. ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ (Volodymyr Zelensky) ಅವರ ಆಹ್ವಾನದ ಮೇರೆಗೆ ಮೋದಿ ಉಕ್ರೇನ್‌ಗೆ ತೆರಳಿದರು. ದ್ವಿಪಕ್ಷೀಯ ಸಹಕಾರ ಸಂಬಂಧವನ್ನು ಬಲಪಡಿಸುವ ಬಗ್ಗೆ ಮತ್ತು ರಷ್ಯಾ-ಉಕ್ರೇನ್‌ ಸಂಘರ್ಷ (Russia-Ukraine War)ಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಬಗ್ಗೆ ಮೋದಿ ಮತ್ತು ವೊಲೊಡಿಮಿರ್​ ಝೆಲೆನ್ಸ್ಕಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ರಷ್ಯಾದ ಮಾಸ್ಕೋಗೆ ಉನ್ನತ ಮಟ್ಟದ ಪ್ರವಾಸ ಕೈಗೊಂಡ ಸುಮಾರು ಆರು ವಾರಗಳ ನಂತರ ಪ್ರಧಾನಿ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದರು. ಮೋದಿ ಅವರ ಮಾಸ್ಕೋ ಪ್ರವಾಸ ಅಮೆರಿಕ ಮತ್ತು ಅದರ ಕೆಲವು ಮಿತ್ರರಾಷ್ಟ್ರಗಳ ಟೀಕೆಗೆ ಕಾರಣವಾಗಿತ್ತು. 1991ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದು ಎನ್ನುವುದು ಕೂಡ ವಿಶೇಷ.

“ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ವೊಲೊಡಿಮಿರ್​ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಮತ್ತು ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗಾಣಿಸಲು ಅಗತ್ಯವಾದ ಶಾಂತಿಯುತ ಪರಿಹಾರದ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಮೋದಿ ದಿಲ್ಲಿಯಿಂದ ಹೊರಡುವ ಮೊದಲು ತಿಳಿಸಿದ್ದರು.

ಉಕ್ರೇನ್‌ ಮೇಲಿನ ರಷ್ಯಾದ ದಾಳಿಯನ್ನು ಭಾರತ ಇದುವರೆಗೆ ಖಂಡಿಸಿಲ್ಲ. ಅದಾಗ್ಯೂ ಮಾತುಕತೆ ಮತ್ತು ರಾಜತಾಂತ್ರಿಕಯ ಮೂಲಕ ಯುದ್ಧವನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಲೇ ಬಂದಿದೆ. ಹೀಗಾಗಿ ಮೋದಿ ಅವರ ಭೇಟಿ ವಿಶ್ವದ ಗಮನ ಸೆಳೆದಿದೆ.

ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಯೂ ಬಗೆಹರಿಯಲ್ಲ: ಮೋದಿ

ಇದಕ್ಕೂ ಮುನ್ನ ಪೋಲೆಂಡ್‌ ಪ್ರವಾಸ ಕೈಗೊಂಡ ಮೋದಿ ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ್ದು, ಯುದ್ಧ ಭೂಮಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ. ಇದೇ ವೇಳೆ ಅವರು 2022ರಲ್ಲಿ ಉಕ್ರೇನ್‌-ರಷ್ಯಾ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಹಾಯ ಮಾಡಿದ ಪೋಲೆಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಘರ್ಷಣೆಗಳ ಕುರಿತು, ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದು, ನಿಜಕ್ಕೂ ಆತಂಕಕಾರಿ ವಿಚಾರ ಎಂದು ಹೇಳಿದ್ದಾರೆ. ʼʼಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತ ದೃಢವಾಗಿ ನಂಬುತ್ತದೆ. ಯಾವುದೇ ಬಿಕ್ಕಟ್ಟಿನಲ್ಲಿ ಅಮಾಯಕರ ಜೀವಗಳನ್ನು ಕಳೆದುಕೊಳ್ಳುವುದು ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಮರುಸ್ಥಾಪನೆಗಾಗಿ ನಾವು ಸಂಭಾಷಣೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ. ಬುಧವಾರ ಪೋಲೆಂಡ್‌ಗೆ ಬಂದಿಳಿದಿರುವ ಪ್ರಧಾನಿ ಮೋದಿ ಇಂದು ಉಕ್ರೇನ್‌ನ ಕೈವ್‌ಗೆ ಬಂದಿಳಿದರು. ಕಳೆದ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡಿದ ಮೊದಲ ಪ್ರವಾಸ ಇದು.

ಇದನ್ನೂ ಓದಿ: PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Railway Line: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಇನ್ನೂ ಬ್ರಿಟಿಷರ ಅಧೀನದಲ್ಲಿದೆ ಈ ರೈಲು ಮಾರ್ಗ!

ಮಹಾರಾಷ್ಟ್ರದ ರೈಲು ಮಾರ್ಗವನ್ನು (Railway Line) ಬ್ರಿಟಿಷ್ ಕಂಪನಿಯೊಂದು ನಿರ್ವಹಿಸುತ್ತಿದೆ. ಭಾರತೀಯ ರೈಲ್ವೇ ಈ ರೈಲು ಮಾರ್ಗವನ್ನು ಖರೀದಿಸಲು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅವು ವಿಫಲವಾಯಿತು. ಹೀಗಾಗಿ ಇನ್ನೂ ಆ ರೈಲು ಮಾರ್ಗವನ್ನು ನಿರ್ವಹಿಸುತ್ತಿರುವ ಬ್ರಿಟಿಷ್ ಕಂಪನಿಗೆ ಇತ್ತೀಚಿನ ವರ್ಷಗಳವರೆಗೂ ರಾಯಧನವನ್ನು ಪಾವತಿಸಲಾಗುತ್ತಿತ್ತು! ಈಗಲೂ ಈ ರೈಲ್ವೆ ಮಾರ್ಗ ಬ್ರಿಟಿಷ್‌ ಕಂಪನಿಯ ಸುಪರ್ದಿಯಲ್ಲೇ ಇದೆ.

VISTARANEWS.COM


on

By

Railway Line
Koo

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಭಾರತದ ಈ ಒಂದು ರೈಲು ಮಾರ್ಗ (Railway Line) ಮಾತ್ರ ಇನ್ನೂ ಬ್ರಿಟಿಷರ (British owned railway line) ನಿಯಂತ್ರಣದಲ್ಲಿದೆ! ಭಾರತೀಯ ರೈಲ್ವೇಸ್ (Indian Railways) ಅದನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಈಗಲೂ ಅದಕ್ಕೆ ಬ್ರಿಟಿಷರಿಗೆ ರಾಯಧನವನ್ನು (royalty) ಪಾವತಿಸುತ್ತಿದೆ!

ಮಹಾರಾಷ್ಟ್ರದ ರೈಲು ಮಾರ್ಗವನ್ನು (maharastra railway line) ಬ್ರಿಟಿಷ್ ಕಂಪನಿಯೊಂದು ನಿರ್ವಹಿಸುತ್ತಿದೆ. ಭಾರತೀಯ ರೈಲ್ವೇ ಈ ರೈಲು ಮಾರ್ಗವನ್ನು ಖರೀದಿಸಲು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅವು ವಿಫಲವಾಯಿತು. ಹೀಗಾಗಿ ಇನ್ನೂ ಆ ರೈಲು ಮಾರ್ಗವನ್ನು ಬ್ರಿಟಿಷ್ ಕಂಪನಿ, ‘ಕಿಲ್ಲಿಕ್ ನಿಕ್ಸನ್ ಆಂಡ್ ಕೋʼ ಈಗಲೂ ಸೆಂಟ್ರಲ್ ಪ್ರಾವಿನ್ಸ್ ರೈಲ್ವೆ ಕಂಪನಿಯನ್ನು ನಿರ್ವಹಿಸುತ್ತದೆ.

ಇತ್ತೀಚಿನವರೆಗೂ ರಾಯಧನ ಪಾವತಿ

ಈ ಕಂಪನಿಯು ಅಮರಾವತಿಯಿಂದ ಮಹಾರಾಷ್ಟ್ರದ ಮುರ್ತಜಾಪುರಕ್ಕೆ 190 ಕಿ.ಮೀ ರೈಲು ಮಾರ್ಗದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್ ಅನ್ನು ಓಡಿಸುತ್ತಿತ್ತು. ಸ್ವಾತಂತ್ರ್ಯದ ಅನಂತರ ಬ್ರಿಟಿಷರು ಭಾರತವನ್ನು ತೊರೆದರು. ಆದರೆ ಬ್ರಿಟಿಷ್ ಖಾಸಗಿ ಕಂಪನಿಯು ಈ ಮಾರ್ಗದ ಮೇಲೆ ಅಧಿಕಾರವನ್ನು ಮುಂದುವರಿಸಿದೆ. ಭಾರತೀಯ ರೈಲ್ವೇಯು ಆ ಕಂಪನಿಗೆ ಇತ್ತೀಚಿನ ವರ್ಷಗಳವರೆಗೂ ಬರೋಬ್ಬರಿ 1.20 ಕೋಟಿ ರೂ. ರಾಯಧನವನ್ನು ಪಾವತಿಸುತ್ತಿತ್ತು.


ಶಕುಂತಲಾ ರೈಲ್ವೇ ಲೈನ್

ಅಮರಾವತಿಯಿಂದ ಮುರ್ತಜಾಪುರದವರೆಗಿನ 190 ಕಿ.ಮೀ ರೈಲು ಮಾರ್ಗವನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರೈಲ್ವೇ ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ಅವರು ಯಶಸ್ವಿಯಾಗಲಿಲ್ಲ. ಶಕುಂತಲಾ ಪ್ಯಾಸೆಂಜರ್ ಎಂಬ ಒಂದು ಪ್ಯಾಸೆಂಜರ್ ರೈಲು ಮಾತ್ರ ಈ ರೈಲು ಮಾರ್ಗದಲ್ಲಿ ಓಡುತ್ತಿತ್ತು. ಅಂದಹಾಗೆ, ಶಕುಂತಲಾ ರೈಲ್ವೇ ಲೈನ್ ಈ ಮಾರ್ಗದ ಹೆಸರು. ಶಕುಂತಲಾ ಎಕ್ಸ್‌ಪ್ರೆಸ್ ಅಚಲಪುರ ಮತ್ತು ಯವತ್ಮಾಲ್ ನಡುವಿನ 17 ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಈ ರೈಲು ಸುಮಾರು 70 ವರ್ಷಗಳ ಕಾಲ ಸ್ಟೀಮ್ ಎಂಜಿನ್‌ನಲ್ಲಿ ಓಡಿದೆ.

ಡೀಸೆಲ್ ಎಂಜಿನ್

1994ರಲ್ಲಿ ಶಕುಂತಲಾ ಪ್ಯಾಸೆಂಜರ್ ರೈಲಿಗೆ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಅನಂತರ ಅನಿರೀಕ್ಷಿತ ಕಾರಣಗಳಿಂದ ರೈಲನ್ನು ನಿಲ್ಲಿಸಲಾಗಿತ್ತು. ಇದನ್ನು ಪುನರಾರಂಭಿಸಬೇಕು ಎಂಬುದು ಸ್ಥಳೀಯರ ಆಗ್ರಹ. 5 ಬೋಗಿಗಳಿರುವ ಈ ರೈಲು ಪ್ರತಿದಿನ 800 ರಿಂದ 1,000 ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಸಾಗಿಸುತ್ತಿತ್ತು. ಭಾರತೀಯ ರೈಲ್ವೆಯನ್ನು 1951ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈ ರೈಲು ಮಾರ್ಗವು ಭಾರತ ಸರ್ಕಾರದ ವ್ಯಾಪ್ತಿಗೆ ಬರಲಿಲ್ಲ.

1.20 ಕೋಟಿ ರೂ. ರಾಯಧನ

ಅಮರಾವತಿ- ಮುರ್ತಜಾಪುರ ರೈಲು ಮಾರ್ಗವನ್ನು ಬಳಸುವುದಕ್ಕಾಗಿ ಭಾರತೀಯ ರೈಲ್ವೇಯು ಇಂಗ್ಲೆಂಡ್ ಕಂಪನಿಗೆ 1.20 ಕೋಟಿ ರೂ.ಗಳ ರಾಯಧನವನ್ನು ಪಾವತಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹಲವಾರು ವರದಿಗಳು ಹೇಳುತ್ತವೆ. ಈಗ ರಾಯಲ್ಟಿ ನೀಡಲಾಗುತ್ತಿಲ್ಲ ಎನ್ನಲಾಗಿದೆ.

Railway Line
Railway Line


ಹತ್ತಿ ಸಾಗಿಸಲು ನಿರ್ಮಾಣ

ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ಅಮರಾವತಿಯಿಂದ ಮಂಬಯಿ ಬಂದರಿಗೆ ಹತ್ತಿಯನ್ನು ಸಾಗಿಸಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಿಸಿದರು. ಈ ರೈಲು ಮಾರ್ಗವನ್ನು ನಿರ್ಮಿಸಲು ಸೆಂಟ್ರಲ್ ಪ್ರಾವಿನ್ಸ್ ರೈಲ್ವೇ ಕಂಪೆನಿ (CPRC) ಬ್ರಿಟನ್‌ನ ಕಿಲಿಕ್ ನಿಕ್ಸನ್ ಆಂಡ್ ಕಂ ಅನ್ನು ಸ್ಥಾಪಿಸಿತು.

ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

ನಿರ್ಮಾಣ ಕಾರ್ಯ

ಈ ರೈಲು ಮಾರ್ಗದ ನಿರ್ಮಾಣವು 1903ರಲ್ಲಿ ಪ್ರಾರಂಭವಾಯಿತು ಮತ್ತು 1916ರಲ್ಲಿ ಪೂರ್ಣಗೊಂಡಿತು. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದಾಗ, ಭಾರತೀಯ ರೈಲ್ವೇ ಈ ಕಂಪನಿಯೊಂದಿಗೆ ಸುದೀರ್ಘ ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಹಾಗಾಗಿ ಈ ಮಾರ್ಗವನ್ನು ಬಳಸುವುದಕ್ಕಾಗಿ ಪ್ರತಿ ವರ್ಷ ಬ್ರಿಟಿಷ್‌ ಕಂಪನಿಗೆ ರಾಯಲ್ಟಿ ಪಾವತಿಸಬೇಕಾಗಿತ್ತು.

Continue Reading

ವಿದೇಶ

PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

PM Modi Ukraine Visit: ಶುಕ್ರವಾರ ಕೈವ್‌ನಲ್ಲಿ ಭೇಟಿಯಾದ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. 30 ವರ್ಷಗಳ ಹಿಂದೆ ಭಾರತ ಮತ್ತು ಉಕ್ರೇನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ದೇಶಕ್ಕೆ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರ ಉಕ್ರೇನ್ ಭೇಟಿ ಐತಿಹಾಸಿಕವಾಗಿದೆ.

VISTARANEWS.COM


on

PM Modi Ukraine Visit
Koo

ನವದೆಹಲಿ: ಪೋಲೆಂಡ್‌ ಪ್ರವಾಸ(PM Modi Poland Visit)ದ ಬಳಿಕ ಇದೀಗ ಉಕ್ರೇನ್‌ನ ಕೈವ್‌ಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಅಧ್ಯಕ್ಷ ವ್ಲಾಡಮಿರ್‌ ಝೆಲೆನ್ಸ್ಕಿ(Volodymyr Zelensky) ಅವರನ್ನು ಭೇಟಿ(PM Modi Ukraine Visit)ಯಾದರು. ಕೈವ್‌ನಲ್ಲಿ ಭೇಟಿಯಾದ ಉಭಯ ನಾಯಕರು ಪರಸ್ಪರ ಕೈಕುಲುಕಿ ಅಪ್ಪಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಶುಕ್ರವಾರ ಕೈವ್‌ನಲ್ಲಿ ಭೇಟಿಯಾದ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. 30 ವರ್ಷಗಳ ಹಿಂದೆ ಭಾರತ ಮತ್ತು ಉಕ್ರೇನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ದೇಶಕ್ಕೆ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರ ಉಕ್ರೇನ್ ಭೇಟಿ ಐತಿಹಾಸಿಕವಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ನಡೆಯುತ್ತಿರುವ ಸಂಘರ್ಷದ ನಡುವೆ ಪ್ರಧಾನಿ ಮೋದಿ ಮತ್ತು ಝೆಲೆನ್ಸ್ಕಿ ಭೇಟಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಈ ವೇಳೆ ರಾಜತಾಂತ್ರಿಕ ಪರಿಹಾರಕ್ಕಾಗಿ ಮೋದಿ ಸಲಹೆ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಪೋಲೆಂಡ್‌ ಪ್ರವಾಸ(PM Modi Poland Visit)ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್‌(Russia-Ukraine War) ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ್ದು, ಯುದ್ಧ ಭೂಮಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ. ಇದೇ ವೇಳೆ ಅವರು 2022ರಲ್ಲಿ ಉಕ್ರೇನ್‌-ರಷ್ಯಾ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಹಾಯ ಮಾಡಿದ ಪೋಲೆಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

2022 ರಲ್ಲಿ ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ನೀವು ನೀಡಿದ ಸಹಾಯವನ್ನು ಭಾರತದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದಕ್ಕಾಗಿ ನಾನು ಸರ್ಕಾರ ಮತ್ತು ಪೋಲೆಂಡ್ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಇದೇ ವೇಳೆ ಪೋಲೆಂಡ್‌ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರಿಗೆ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಸುಂದರವಾದ ನಗರವಾದ ವಾರ್ಸಾದಲ್ಲಿ ನನಗೆ ಆತ್ಮೀಯ ಸ್ವಾಗತ ನೀಡಿದ ಪಿಎಂ ಟಸ್ಕ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ದೀರ್ಘಕಾಲದವರೆಗೆ ಭಾರತದ ಸ್ನೇಹಿತರಾಗಿದ್ದೀರಿ ಮತ್ತು ಭಾರತ ಮತ್ತು ಪೋಲೆಂಡ್ ನಡುವಿನ ಸಂಬಂಧವನ್ನು ಹೆಚ್ಚಿಸಲು ನೀವು ದೊಡ್ಡ ಕೊಡುಗೆ ನೀಡಿದ್ದೀರಿ ಎಂದು ಅವರು ಹೇಳಿದರು.

ಇದನ್ನೂ ಓದಿ: PM Modi Ukraine Visit: ಜಗತ್ತಿಗೆ ಶಾಂತಿ ಸಂದೇಶ ಸಾರಲು ಭಾರತ ಬದ್ಧ; ಉಕ್ರೇನ್‌ ಭೇಟಿ ಮೂಲಕ ನಿಲುವು ಸ್ಪಷ್ಟಪಡಿಸಿದ ಮೋದಿ

Continue Reading

ವಿದೇಶ

PM Modi Ukraine Visit: ಜಗತ್ತಿಗೆ ಶಾಂತಿ ಸಂದೇಶ ಸಾರಲು ಭಾರತ ಬದ್ಧ; ಉಕ್ರೇನ್‌ ಭೇಟಿ ಮೂಲಕ ನಿಲುವು ಸ್ಪಷ್ಟಪಡಿಸಿದ ಮೋದಿ

PM Modi Ukraine Visit: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಯುದ್ಧ ಪೀಡಿತ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ಈ ಮೂಲಕ ಭಾರತ ಯಾವುದೇ ಒಂದು ದೇಶ ಪರವಾಗಿಲ್ಲ, ಬದಲಾಗಿ ಸಂಘರ್ಷ ನಿಲ್ಲಿಸಿ ಶಾಂತಿ ಕಾಪಾಡಲು ಎಂದಿಗೂ ಬದ್ಧವಾಗಿದೆ ಎನ್ನುವ ಸಂದೇಶ ರವಾನಿಸಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ ವೇಳೆ ಎರಡೂ ದೇಶಗಳಿಗೆ ಭೇಟಿ ನೀಡಿದ ಕೆಲವೇ ಕೆಲವು ಜಾಗತಿಕ ನಾಯಕರ ಸಾಲಿಗೆ ಇದೀಗ ಮೋದಿ ಅವರೂ ಸೇರಿದ್ದಾರೆ.

VISTARANEWS.COM


on

PM Modi Ukraine Visit
Koo

ಕೀವ್‌: ರಷ್ಯಾಕ್ಕೆ ಭೇಟಿ ನೀಡಿದ ಸುಮಾರು 6 ವಾರಗಳ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುದ್ಧ ಪೀಡಿತ ಉಕ್ರೇನ್‌ಗೆ ಶುಕ್ರವಾರ (ಆಗಸ್ಟ್‌ 23) ತೆರಳಿದ್ದು, ಈ ಮೂಲಕ ಭಾರತ ಯಾವುದೇ ಒಂದು ದೇಶ ಪರವಾಗಿಲ್ಲ, ಬದಲಾಗಿ ಸಂಘರ್ಷ ನಿಲ್ಲಿಸಿ ಶಾಂತಿ ಕಾಪಾಡಲು ಎಂದಿಗೂ ಬದ್ಧವಾಗಿದೆ ಎನ್ನುವ ಸಂದೇಶ ಸಾರಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ (Russia-Ukraine War) ವೇಳೆ ಎರಡೂ ದೇಶಗಳಿಗೆ ಭೇಟಿ ನೀಡಿದ ಕೆಲವೇ ಕೆಲವು ಜಾಗತಿಕ ನಾಯಕರ ಸಾಲಿಗೆ ಇದೀಗ ಮೋದಿ ಅವರೂ ಸೇರಿದ್ದಾರೆ (PM Modi Ukraine Visit).

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ (Volodymyr Zelensky) ಅವರೊಂದಿಗೆ, ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗಾಣಿಸಲು ಅಗತ್ಯವಾದ ಶಾಂತಿಯುತ ಪರಿಹಾರದ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ದಿಲ್ಲಿಯಿಂದ ಹೊರಡುವಾg ಮೋದಿ ತಿಳಿಸಿದ್ದರು. ಅಲ್ಲದೆ ಪೋಲೆಂಡ್‌ನಲ್ಲಿ ಅವರು ಬುಧವಾರ, ʼʼಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತ ದೃಢವಾಗಿ ನಂಬುತ್ತದೆ. ಯಾವುದೇ ಬಿಕ್ಕಟ್ಟಿನಲ್ಲಿ ಅಮಾಯಕರ ಜೀವಗಳನ್ನು ಕಳೆದುಕೊಳ್ಳುವುದು ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಮರುಸ್ಥಾಪನೆಗಾಗಿ ನಾವು ಸಂಭಾಷಣೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆʼʼ ಎಂದು ಪುನರುಚ್ಚರಿಸಿದ್ದರು.

ಇದೇ ಮೊದಲಲ್ಲ

ಯುದ್ಧ ಬಿಟ್ಟು ಶಾಂತಿಯುತ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಬೇಕು ಎನ್ನುವ ನಿಲುವನ್ನು ಭಾರತ ಈ ಹಿಂದಿನಿಂದಲೇ ಪ್ರತಿಪಾದಿಸುತ್ತ ಬಂದಿದೆ. 2022ರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ, 2023ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮತ್ತು 6 ವಾರಗಳ ಹಿಂದೆ ರಷ್ಯಾದಲ್ಲಿ ಮೋದಿ ಅವರು ಇದನ್ನೇ ಹೇಳಿದ್ದರು. ಆ ಮೂಲಕ ಯುದ್ಧದ ಬಗ್ಗೆ ಭಾರತದ ನಿಲುವನ್ನು ವಿಶ್ವ ನಾಯಕರಿಗೆ ಸ್ಪಷ್ಟಪಡಿಸಿದ್ದರು.

ಕಳೆದ ತಿಂಗಳು ವೊಲೊಡಿಮಿರ್​ ಝೆಲೆನ್ಸ್ಕಿ ಮೋದಿ ಅವರ ರಷ್ಯಾ ಭೇಟಿಯನ್ನು ತೀವ್ರವಾಗಿ ಟೀಕಿಸಿದ್ದರು ಮತ್ತು “ಮಾಸ್ಕೋದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿ” (ಪುಟಿನ್‌)ಯನ್ನು ತಬ್ಬಿಕೊಂಡ ನಂತರ ಮೋದಿ ಅವರ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. “ಯುದ್ಧಭೂಮಿಯಿಂದ ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ” ಎಂದು ಮೋದಿ ಈ ಜುಲೈನಲ್ಲಿ ಪುಟಿನ್‌ಗೆ ನೀಡಿದ ಅದೇ ಸಂದೇಶವನ್ನು ಝೆಲೆನ್ಸ್ಕಿ ಬಳಿಯೂ ಮೋದಿ ಪುನರುಚ್ಚರಿಸುವ ನಿರೀಕ್ಷೆಯಿದೆ. ಮುಂದಿನ ತಿಂಗಳು ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುವ ಮುನ್ನ ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ್ದು ಮಹತ್ವದ ಬೆಳವಣಿಗೆ ಎನಿಸಿಕೊಂಡಿದೆ.

ಇದನ್ನೂ ಓದಿ: PM Modi Poland Visit: ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಯೂ ಬಗೆಹರಿಯಲ್ಲ; ರಷ್ಯಾ-ಉಕ್ರೇನ್‌ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿ ರಿಯಾಕ್ಟ್‌

ಭಾರತದ ಪ್ರಧಾನಿಯೊಬ್ಬರು ಸುಮಾರು 3 ದಶಕಗಳ ಬಳಿಕ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ ಎನ್ನುವುದು ಕೂಡ ವಿಶೇಷ. ಅದಾಗ್ಯೂ ಮೋದಿ ಮತ್ತು ಝೆಲೆನ್ಸ್ಕಿ ಮೂರು ವರ್ಷಗಳಲ್ಲಿ ಮೂರು ಬಾರಿ ಭೇಟಿಯಾಗಿದ್ದಾರೆ. ಈ ವರ್ಷ ಮತ್ತು ಕಳೆದ ವರ್ಷ ನಡೆದ ಜಿ7 ಶೃಂಗಸಭೆಯಲ್ಲಿ ಭೇಟಿಯಾಗಿದ್ದರು ಮತ್ತು 2021ರಲ್ಲಿ ಈ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದರು. ಅಲ್ಲದೆ 2020ರಲ್ಲಿ ಇವರು ಫೋನ್‌ ಮೂಲಕ ಚರ್ಚೆ ನಡೆಸಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಭಾರತಕ್ಕೆ ಆಗಮಿಸಿದ್ದರು. ಹೀಗೆ ಭಾರತ-ಉಕ್ರೇನ್‌ ನಿರಂತರ ಸಂಪರ್ಕದಲ್ಲಿದೆ.

Continue Reading

ವಿದೇಶ

ನೇಪಾಳ: ನದಿಗೆ ಉರುಳಿದ ಭಾರತೀಯರು ಸೇರಿ 40 ಮಂದಿ ಪ್ರಯಾಣಿಸುತ್ತಿದ್ದ ಬಸ್‌; 14 ಮಂದಿ ಸಾವು?

Road Accident: ಭಾರತೀಯರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದ ಬಸ್‌ ನೇಪಾಳದಲ್ಲಿ ನದಿಗೆ ಉರುಳಿ ಬಿದ್ದಿದೆ. ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಶುಕ್ರವಾರ ಬಸ್‌ ಉರುಳಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಸ್ ನದಿಯ ದಡದಲ್ಲಿ ಕಂಡುಬಂದಿದೆ ಎಂದು ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್‌ಪಿ ದೀಪ್‌ ಕುಮಾರ್‌ ತಿಳಿಸಿದ್ದಾರೆ.

VISTARANEWS.COM


on

Road Accident
Koo

ಕಠ್ಮಂಡು: ಭಾರತೀಯರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದ, ಭಾರತ ಮೂಲದ ಬಸ್‌ ನೇಪಾಳ(Nepal)ದಲ್ಲಿ ನದಿಗೆ ಉರುಳಿ ಬಿದ್ದಿದೆ. ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಶುಕ್ರವಾರ ಬಸ್‌ ಉರುಳಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಯ ಬಗ್ಗೆ ಇನ್ನಷ್ಟು ವಿವರ ಇನ್ನಷ್ಟೇ ಹೊರ ಬೀಳಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ (Road Accident).

ಬಸ್ ನದಿಯ ದಡದಲ್ಲಿ ಕಂಡುಬಂದಿದೆ ಎಂದು ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್‌ಪಿ ದೀಪ್‌ ಕುಮಾರ್‌ ತಿಳಿಸಿದ್ದಾರೆ. “ಯುಪಿ ಎಫ್‌ಟಿ 7623 (UP FT 7623) ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಉರುಳಿ ಬಿದ್ದಿದ್ದು ಸದ್ಯ ದಡದಲ್ಲಿ ಕಂಡು ಬಂದಿದೆ. ಘಟನೆ ಬಗ್ಗೆ ಮಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ. ಬಸ್ ನೇಪಾಳದ ಪೋಖಾರಾದಿಂದ ಕಠ್ಮಂಡುವಿಗೆ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ರಾಜ್ಯದ ಯಾರಾದರೂ ಗಾಯಗೊಂಡಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎನ್ನುವ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳ ದಂಡು ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ

ನೇಪಾಳದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಏರ್ ಡೈನಾಸ್ಟಿ ಹೆಲಿಕಾಪ್ಟರ್ ಪತನ (Helicopter crashed)ಗೊಂಡಿತ್ತು. ಈ ಘಟನೆಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಚಲಾಯಿಸಿದ್ದು, ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಹೆಲಿಕಾಪ್ಟರ್‌ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿತ್ತು.

ಇದನ್ನೂ ಓದಿ: Plane Crash: ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ; ವಿಡಿಯೋ ಇದೆ

ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು ಐದು ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು. ಈ ವೇಳೆ ಕಠ್ಮಂಡುವಿನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿತ್ತು. ಸೂರ್ಯ ಚೌರ್ ತಲುಪಿದ ನಂತರ 1:57ರ ಸುಮಾರಿಗೆ ಹೆಲಿಕಾಪ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು.

ಅದಕ್ಕೂ ಎರಡು ವಾರಗಳ ಹಿಂದೆಯೂ ಇದೇ ರೀತಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. 19 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿತ್ತು. ರಾಷ್ಟ್ರ ರಾಜಧಾನಿ ಕಾಠ್ಮಂಡುವಿನಲ್ಲಿರುವ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಶೌರ್ಯ ವಿಮಾನಯಾನ ಸಂಸ್ಥೆ ವಿಮಾನ ಪತನ(Plane Crash)ಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು ಎಂದು ಮೂಲಗಳು ವರದಿ ಮಾಡಿದ್ದವು.

Continue Reading
Advertisement
Bomb threat to Wonderla Amusement Park in Urdu
ರಾಮನಗರ2 mins ago

Bomb Threat : ಉರ್ದು ಭಾಷೆಯಲ್ಲಿ ವಂಡರ್‌ ಲಾ ಅಮ್ಯುಸ್ಮೆಂಟ್ ಪಾರ್ಕ್‌ಗೆ ಬಾಂಬ್‌ ಬೆದರಿಕೆ

Railway Line
ವಾಣಿಜ್ಯ3 mins ago

Railway Line: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಇನ್ನೂ ಬ್ರಿಟಿಷರ ಅಧೀನದಲ್ಲಿದೆ ಈ ರೈಲು ಮಾರ್ಗ!

Kannada New Movie
ಬೆಂಗಳೂರು12 mins ago

Kannada New Movie: ಪ್ರಜ್ವಲ್ ದೇವರಾಜ್-ಅದಿತಿ‌ ಪ್ರಭುದೇವ ಅಭಿನಯದ ʼಮಾಫಿಯಾʼ ಚಿತ್ರ ಸದ್ಯದಲ್ಲೇ ತೆರೆಗೆ

Viral Video
Latest15 mins ago

Viral Video: ಬಾಲ್ಕನಿಯಿಂದ ಬಿದ್ದು 3 ವರ್ಷದ ಬಾಲಕಿ ದಾರುಣ ಸಾವು; ಆಘಾತಕಾರಿ ವಿಡಿಯೊ

Viral News
ವೈರಲ್ ನ್ಯೂಸ್20 mins ago

Viral News: ಹೆಂಡ್ತಿ ತವರಿಗೆ ಹೋಗ್ತಿದ್ದಂತೆ ಪ್ರೇಯಸಿ ಜೊತೆ ಲವ್ವಿಡವ್ವಿ- ಸ್ಕೂಲ್‌ ಮೇಸ್ಟ್ರನ್ನು ರೆಡ್‌ಹ್ಯಾಂಡಾಗಿ ಹಿಡಿದು ಅಲ್ಲೇ ಮದ್ವೆ

Kannada New Movie
ಬೆಂಗಳೂರು27 mins ago

Kannada New Movie: ಐವರು ನಿರ್ದೇಶಕರ 5 ಕಥೆಗಳ ʼಬಿಟಿಎಸ್ʼ ಚಿತ್ರದ ಟ್ರೇಲರ್ ರಿಲೀಸ್‌; ಹೊಸ ಪ್ರಯತ್ನಕ್ಕೆ ರಾಜ್ ಬಿ ಶೆಟ್ಟಿ ಸಾಥ್‌

Prajwal Revanna Case
ಕರ್ನಾಟಕ27 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿರುದ್ಧ 2144 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Here are 4 ideas for krishna janmashtami photoshoot
ಶ್ರೀ ಕೃಷ್ಣ ಜನ್ಮಾಷ್ಟಮಿ29 mins ago

Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ

Air India
ದೇಶ38 mins ago

Air India: ನಿಯಮ ಉಲ್ಲಂಘನೆ: ಏರ್‌ ಇಂಡಿಯಾಕ್ಕೆ ಬಿತ್ತು ಬರೋಬ್ಬರಿ 90 ಲಕ್ಷ ರೂ. ದಂಡ

Viral Video
Latest38 mins ago

Viral Video: ಬೇಟೆಯಾಡಲು ಗೋಡೆ ಹತ್ತಿದ ದೈತ್ಯ ಹೆಬ್ಬಾವು; ಗಾಬರಿಗೊಳಿಸುವ ವಿಡಿಯೊ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌