PM Modi Ukraine Visit: ಉಕ್ರೇನ್‌ಗೆ ಭೀಷ್ಮ್‌ ಕ್ಯೂಬ್‌ ಉಡುಗೊರೆ ನೀಡಿದ ಪ್ರಧಾನಿ ಮೋದಿ...ಏನಿದರ ವಿಶೇಷತೆ? - Vistara News

ವಿದೇಶ

PM Modi Ukraine Visit: ಉಕ್ರೇನ್‌ಗೆ ಭೀಷ್ಮ್‌ ಕ್ಯೂಬ್‌ ಉಡುಗೊರೆ ನೀಡಿದ ಪ್ರಧಾನಿ ಮೋದಿ…ಏನಿದರ ವಿಶೇಷತೆ?

PM Modi Ukraine Visit: ಮೋದಿ ಉಕ್ರೇನ್‌ಗೆ ವಿಪತ್ತು ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಪ್ರತಿಕ್ರಿಯೆಗಾಗಿ ರೂಪಿಸಲಾದ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ ‘ಭೀಷ್ಮ ಕ್ಯೂಬ್’ನ್ನು ಘೋಷಿಸಿದ್ದಾರೆ. ಭೀಷ್ಮ ಕ್ಯೂಬ್’ ಸಹಯೋಗ, ಹಿತ ಮತ್ತು ಮೈತ್ರಿಗಾಗಿ ಭಾರತ ಆರೋಗ್ಯ ಉಪಕ್ರಮ ‘ಪ್ರಾಜೆಕ್ಟ್ ಭೀಷ್ಮ್’ ಅಡಿ ಅಭಿವೃದ್ಧಿಗೊಳಿಸಲಾದ ಆಧುನಿಕ ಸಂಚಾರಿ ಆಸ್ಪತ್ರೆ ಘಟಕವಾಗಿದೆ. ಫೆ.2022ರಲ್ಲಿ ಪ್ರಕಟಿಸಲಾದ ಈ ಯೋಜನೆಯು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಕ್ಷಿಪ್ರ ವೈದ್ಯಕೀಯ ನೆರವು ಒದಗಿಸುವಲ್ಲಿ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

VISTARANEWS.COM


on

pm modi Ukraine Visit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಉಕ್ರೇನ್‌ ಪ್ರವಾಸದಲ್ಲಿರುವ(PM Modi Ukraine Visit) ಪ್ರಧಾನಿ ನರೇಂದ್ರ ಮೋದಿ(PM Narendra Modi) ಉಕ್ರೇನ್‌ಗೆ ವಿಪತ್ತು ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಪ್ರತಿಕ್ರಿಯೆಗಾಗಿ ರೂಪಿಸಲಾದ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ ‘ಭೀಷ್ಮ ಕ್ಯೂಬ್’(BHISHM Cubes) ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಎರಡು ದಿನಗಳ ಪೋಲಂಡ್ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಕ್ರೇನ್ ತಲುಪಿದ್ದು, ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ವ್ಯಾಪಕ ಮಾತುಕತೆಗಳನ್ನು ನಡೆಸಲಿದ್ದಾರೆ.

ತಮ್ಮ ಭೇಟಿ ಸಂದರ್ಭದಲ್ಲಿ ಮೋದಿ ಉಕ್ರೇನ್‌ಗೆ ವಿಪತ್ತು ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಪ್ರತಿಕ್ರಿಯೆಗಾಗಿ ರೂಪಿಸಲಾದ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ ‘ಭೀಷ್ಮ ಕ್ಯೂಬ್’ನ್ನು ಘೋಷಿಸಿದ್ದಾರೆ. ಭೀಷ್ಮ ಕ್ಯೂಬ್’ ಸಹಯೋಗ, ಹಿತ ಮತ್ತು ಮೈತ್ರಿಗಾಗಿ ಭಾರತ ಆರೋಗ್ಯ ಉಪಕ್ರಮ ‘ಪ್ರಾಜೆಕ್ಟ್ ಭೀಷ್ಮ್’ ಅಡಿ ಅಭಿವೃದ್ಧಿಗೊಳಿಸಲಾದ ಆಧುನಿಕ ಸಂಚಾರಿ ಆಸ್ಪತ್ರೆ ಘಟಕವಾಗಿದೆ. ಫೆ.2022ರಲ್ಲಿ ಪ್ರಕಟಿಸಲಾದ ಈ ಯೋಜನೆಯು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಕ್ಷಿಪ್ರ ವೈದ್ಯಕೀಯ ನೆರವು ಒದಗಿಸುವಲ್ಲಿ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಭೀಷ್ಮ ಕ್ಯೂಬ್ ಆಧುನಿಕ ವೈದ್ಯಕೀಯ ಇಂಜಿನಿಯರಿಂಗ್‌ನ ಅದ್ಭುತವಾಗಿದ್ದು, ಕ್ಷಿಪ್ರ ಪ್ರತಿಕ್ರಿಯೆ ಮತ್ತು ಸಮಗ್ರ ಆರೈಕೆಯನ್ನು ಕೇಂದ್ರೀಕರಿಸಿ 200 ಗಾಯಾಳುಗಳನ್ನು ನಿರ್ವಹಿಸಲು ಗಾಯಾಳುಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅದನ್ನು ರೂಪಿಸಲಾಗಿದೆ. 720 ಕೆ.ಜಿ.ಗಳಷ್ಟು ತೂಗುವ ಘಟಕವು ಸುಲಭವಾಗಿ ಸಾಗಿಸಬಹುದಾದ 72 ಬಿಡಿಭಾಗಗಳನ್ನು ಹೊಂದಿದೆ. ಈ ಬಿಡಿಭಾಗಗಳನ್ನು ಕೈಯಲ್ಲಿ, ಸೈಕಲ್ ಅಥವಾ ಡ್ರೋನ್ ಮೂಲಕ ಸಾಗಿಸಬಹುದಾಗಿದ್ದು, ಎಲ್ಲಿ ಬೇಕಾದರೂ ಸುಲಭವಾಗಿ ಘಟಕವನ್ನು ನಿಯೋಜಿಸಬಹುದು. ಕ್ಯೂಬ್‌ನ ನವೀನ ವಿನ್ಯಾಸದಿಂದಾಗಿ ಅದನ್ನು ನಿಯೋಜಿಸಿದ ಕೇವಲ 12 ನಿಮಿಷಗಳಲ್ಲಿ ಕಾರ್ಯಾರಂಭವನ್ನು ಮಾಡುತ್ತದೆ ಮತ್ತು ಇದು ಪ್ರತಿಯೊಂದು ಸೆಕೆಂಡ್ ಕೂಡ ಮುಖ್ಯವಾಗಿರುವ ತುರ್ತು ಸಂದರ್ಭ ಸಂದರ್ಭಗಳಲ್ಲಿ ನಿರ್ಣಾಯಕ ವೈಶಿಷ್ಟ್ಯವಾಗಿದೆ.

ಅವರು ಶುಕ್ರವಾರ ಕೈವ್‌ಗೆ ತಮ್ಮ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಉಕ್ರೇನ್ ಸರ್ಕಾರಕ್ಕೆ ನಾಲ್ಕು BHISHM (ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ Sahyog Hita & Maitri) ಕ್ಯೂಬ್‌ಗಳನ್ನು ನೀಡಿದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು BHISHM ಕ್ಯೂಬ್‌ಗಳಿಗಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು, ಇದು ರಷ್ಯಾದೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

ಆರೋಗ್ಯದ ಕಾಳಜಿಯಿಂದ, ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು (Non Vegetarian Population) ಹೊಂದಿದೆ.

VISTARANEWS.COM


on

By

Non Vegetarian Population
Koo

ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾಂಸಾಹಾರವನ್ನು (Non Vegetarian Population) ತ್ಯಜಿಸಿ ಸಸ್ಯಾಹಾರವನ್ನು (vegetarian) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದಾಗಿ ಸಸ್ಯಾಹಾರವನ್ನೇ ಆಹಾರದಲ್ಲಿ (food) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಜನರು ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು ಹೊಂದಿದೆ.


ಭಾರತ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವ ಜನರನ್ನು ಹೊಂದಿರುವ ದೇಶವಾಗಿದೆ. ʼವರ್ಲ್ಡ್‌ ಅಟ್ಲಾಸ್ʼ ಪ್ರಕಾರ ಪ್ರತಿ ವರ್ಷಕ್ಕೆ ತಲಾ ಒಬ್ಬರು ಕೇವಲ 3 ಕೆಜಿ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತದೆ. ಇದರಲ್ಲಿ ಧರ್ಮವು ಅತ್ಯಂತ ಪ್ರಮುಖವಾದದ್ದು.


ಮೆಕ್ಸಿಕೋ

ಮೆಕ್ಸಿಕೋದಲ್ಲಿ ಸುಮಾರು ಶೇ. 19ರಷ್ಟು ಜನರು ಸಸ್ಯಾಹಾರಿಗಳು. ಅಲ್ಲಿನ ಜನರು ಆರೋಗ್ಯ ಕಾಳಜಿ, ಪ್ರಾಣಿ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳಿಂದಾಗಿ ಸಸ್ಯ ಆಧಾರಿತ ಆಹಾರಕ್ಕೆ ಬದಲಾಗುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್‌ಗಳೇ ಇವೆ.

ಇಸ್ರೇಲ್

ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಜುದಾಯಿಸಂನಿಂದಾಗಿ ಇಸ್ರೇಲ್ ಕಡಿಮೆ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದೆ. ದೇಶವು ವೇಗವಾಗಿ ಸಸ್ಯಾಹಾರಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ನೂರಾರು ರೆಸ್ಟೋರೆಂಟ್‌ಗಳು ಇಲ್ಲಿ ಸಸ್ಯಾಹಾರಿ ಊಟವನ್ನೇ ನೀಡುತ್ತಿವೆ. 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಾಹಾರಿ ಉತ್ಸವವನ್ನು ಟೆಲ್ ಅವಿವ್‌ನಲ್ಲಿ ಆಯೋಜಿಸಲಾಯಿತು.

ಇಥಿಯೋಪಿಯಾ

ಆಫ್ರಿಕನ್ ದೇಶವು ಮಾಂಸ ಸೇವನೆಯ ಪ್ರಮಾಣವನ್ನು ಬಹಳ ಕಡಿಮೆ ಹೊಂದಿದೆ. ಬಡತನದ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜನರಿಗೆ ಮಾಂಸಾಹಾರ ಇಲ್ಲಿ ದೊರೆಯುತ್ತಿಲ್ಲ. ಸರಾಸರಿಯಾಗಿ ದೇಶದ ಜನರು ತಲಾ 2.58 ಕೆ.ಜಿ. ಗೋಮಾಂಸ ಮತ್ತು ಕರುವಿನ ಮಾಂಸವನ್ನು ಸೇವಿಸುತ್ತಾರೆ. ಕೇವಲ 0.45 ಕೆ.ಜಿ. ಕೋಳಿ ಮಾಂಸಗಳನ್ನು ಸೇವಿಸುತ್ತಾರೆ.

ತೈವಾನ್

ಬೌದ್ಧಧರ್ಮದ ಕಾರಣದಿಂದಾಗಿ ತೈವಾನ್ ಗಣನೀಯ ಪ್ರಮಾಣದ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಯಾಕೆಂದರೆ ಧರ್ಮವು ಮಾಂಸ ಮುಕ್ತ ಆಹಾರಕ್ಕಾಗಿ ಪ್ರತಿಪಾದಿಸುತ್ತದೆ. ಅಲ್ಲದೇ ದೇಶದಲ್ಲಿ ಹಲವಾರು ಬಾಯಲ್ಲಿ ನೀರೂರಿಸುವಂತ ಸಸ್ಯಾಹಾರಿ ಪಾಕಪದ್ಧತಿಗಳಿವೆ. ಸರ್ಕಾರವು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಸ್ಯಾಹಾರಿ ಆಯ್ಕೆಗಳನ್ನೇ ಒದಗಿಸುತ್ತದೆ.


ಜರ್ಮನಿ

ಜರ್ಮನಿಯಲ್ಲಿ ಹೆಚ್ಚು ಜನರು ಮಾಂಸಾಹಾರಿ ಜೀವನಶೈಲಿಯನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಲವಾದ ಪ್ರಾಣಿ ಹಕ್ಕುಗಳ ಆಂದೋಲನವನ್ನು ಹೊಂದಿದೆ. ಇದು ಮಾಂಸಾಹಾರಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಬರ್ಲಿನ್‌ನಂತಹ ಪ್ರಮುಖ ನಗರಗಳು ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು ಅವು ಸೌರ್‌ಕ್ರಾಟ್ ಮತ್ತು ಪ್ರಿಟ್ಜೆಲ್‌ಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ: Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

ಮೊಜಾಂಬಿಕ್

ಪೂರ್ವ ಆಫ್ರಿಕಾದ ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಸರಾಸರಿ ಮಾಂಸ ಸೇವನೆಯು ಅಲ್ಲಿ ಕಡಿಮೆಯಾಗಿದೆ. ಮೊಜಾಂಬಿಕ್‌ನಲ್ಲಿರುವ ಜನರು ಹೆಚ್ಚಾಗಿ ಆಮದು ಮಾಡಿಕೊಂಡ ಮಾಂಸವನ್ನು ಸೇವಿಸುತ್ತಾರೆ.

Continue Reading

ವಾಣಿಜ್ಯ

Cheapest Currency: ವಿಶ್ವದಲ್ಲೇ ಅಗ್ಗದ ಕರೆನ್ಸಿ ಹೊಂದಿರುವ ದೇಶಗಳಲ್ಲಿ ಭಾರತದ 1 ರೂ.ನ ಮೌಲ್ಯ ಎಷ್ಟಾಗುತ್ತೆ ನೋಡಿ!

ವಿಶ್ವದ ಬಹುತೇಕ ಕರೆನ್ಸಿಗಳ ಬಗ್ಗೆ ನಾವು ಪರಿಚಿತರಾಗಿದ್ದೇವೆ. ಕೆಲವೊಂದು ದೇಶಗಳ ಕರೆನ್ಸಿಗಳು ಹೆಚ್ಚು ಮೌಲ್ಯ, ಇನ್ನು ಕೆಲವು ದೇಶದ ಕರೆನ್ಸಿಗಳು ಕಡಿಮೆ ಮೌಲ್ಯವನ್ನು (Cheapest Currency) ಹೊಂದಿದೆ. ಅದರಲ್ಲೂ ಕೆಲವು ದೇಶಗಳ ಕರೆನ್ಸಿಗಳು ಅತ್ಯಂತ ಕಡಿಮೆ ಮೌಲ್ಯವನ್ನು ಹೊಂದಿದೆ. ಅಂತಹ ಕರೆನ್ಸಿಗಳು ಯಾವುದು, ಯಾವ ದೇಶದ್ದು ಎಂಬುದು ಗೊತ್ತಿದೆಯೇ? ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Cheapest Currency
Koo

ವಿಶ್ವದಲ್ಲೇ ಅತ್ಯಂತ ಪ್ರಬಲ ಮತ್ತು ಪ್ರಭಾವಶಾಲಿ ಕರೆನ್ಸಿಗಳ (currency) ಬಗ್ಗೆ ನಮಗೆ ತಿಳಿದಿದೆ. ಆದರೆ ಅತ್ಯಂತ ಕಡಿಮೆ ಮೌಲ್ಯವಿರುವ ಕರೆನ್ಸಿ (Cheapest Currency) ಬಗ್ಗೆ ಎಷ್ಟು ಮಂದಿಗೆ ಗೊತ್ತು? ಕೆಲವು ದೇಶಗಳ ಕರೆನ್ಸಿಗಳು ತೀರಾ ಕಡಿಮೆ ಮೌಲ್ಯವನ್ನು ಹೊಂದಿದೆ. ಒಂದಲ್ಲ ಒಂದು ರೀತಿಯ ವ್ಯವಹಾರ ನಡೆಸುವ ನಾವು ಈ ಅಗ್ಗದ ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಬೇಕಿದೆ.

ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ (British Pound Sterling), ಸ್ವಿಸ್ ಫ್ರಾಂಕ್ (Swiss Franc) ಮತ್ತು ಯುಎಸ್ ಡಾಲರ್‌ (US Dollar) ವಿಶ್ವದಲ್ಲೇ ಎಲ್ಲರಿಗೂ ಪರಿಚಿತ ದುಬಾರಿ ಮೌಲ್ಯ ಹೊಂದಿರುವ ಕರೆನ್ಸಿಗಳಾಗಿವೆ. ಆದರೆ ವಿಶ್ವದ ಅತ್ಯಂತ ಕಡಿಮೆ ಬೆಲೆಬಾಳುವ ಕರೆನ್ಸಿಗಳ ಪಟ್ಟಿ ಮಾಡುವುದು ತುಸು ಕಷ್ಟ. ಯಾಕೆಂದರೆ ಆರ್ಥಿಕ ಪರಿಸ್ಥಿಗಳು ಅತ್ಯಂತ ವೇಗವಾಗಿ ಬದಲಾಗುತ್ತದೆ. ಇದು ಒಂದು ರೀತಿಯಲ್ಲಿ ಎಲ್ಲರಿಗೂ ಸವಾಲಾಗಿರುತ್ತದೆ.

ಇತ್ತೀಚೆಗೆ ಗಮನಾರ್ಹವಾದ ಅಪಮೌಲ್ಯೀಕರಣವನ್ನು ಅನುಭವಿಸಿದ ನಿರ್ದಿಷ್ಟ ರಾಷ್ಟ್ರೀಯ ಕರೆನ್ಸಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಯುಎಸ್ ಡಾಲರ್ ಮತ್ತು ಭಾರತೀಯ ರೂಪಾಯಿಗೆ ಹೋಲಿಸಿದರೆ ವಿಶ್ವದ ಹತ್ತು ದೇಶಗಳ ಕರೆನ್ಸಿಗಳು ಅತ್ಯಂತ ಕಡಿಮೆ ಮೌಲ್ಯ ಹೊಂದಿದೆ. ಇದರಲ್ಲಿ ಇರಾನಿನ ರಿಯಾಲ್, ವಿಯೆಟ್ನಾಮೀಸ್ ಡಾಂಗ್, ಸಿಯೆರಾ ಲಿಯೋನಿಯನ್ ಲಿಯೋನ್, ಲಾವೊ/ಲಾವೋಟಿಯನ್ ಕಿಪ್, ಇಂಡೋನೇಷಿಯನ್ ರುಪಿಯಾ, ಉಜ್ಬೇಕಿಸ್ತಾನಿ ಸೋಮ್, ಗಿನಿಯನ್ ಫ್ರಾಂಕ್, ಪರಾಗ್ವೆಯ ಗೌರಾನಿ, ಕಾಂಬೋಡಿಯನ್ ರಿಯಲ್, ಉಗಾಂಡಾದ ಶಿಲ್ಲಿಂಗ್ ಸೇರಿದೆ.

Cheapest Currency
Cheapest Currency


ಇರಾನಿನ ರಿಯಾಲ್ (IRR)

ಪ್ರಸ್ತುತ 1 ಭಾರತೀಯ ರೂಪಾಯಿಯು 501.73 ಐಆರ್‌ಆರ್‌ಗೆ ಸಮನಾಗಿದೆ. ಇರಾನಿನ ರಿಯಾಲ್ ಅನ್ನು ವಿಶ್ವದ ಅತ್ಯಂತ ಕಡಿಮೆ ಮೌಲ್ಯಯುತ ಕರೆನ್ಸಿ ಎಂದು ಗುರುತಿಸಲಾಗಿದೆ. ಇದಕ್ಕೆ ದೇಶದಲ್ಲಿ ನಡೆಯುವ ರಾಜಕೀಯ ಅಶಾಂತಿ, ಇರಾನ್-ಇರಾಕ್ ಯುದ್ಧ ಮತ್ತು ಪರಮಾಣು ಕಾರ್ಯಕ್ರಮದಂತಹ ಅಂಶಗಳು ಕಾರಣ ಎನ್ನಲಾಗುತ್ತದೆ.


ವಿಯೆಟ್ನಾಮೀಸ್ ಡಾಂಗ್ (VND)

ವಿಯೆಟ್ನಾಂ ಐತಿಹಾಸಿಕವಾಗಿ ಕೇಂದ್ರೀಕೃತ ಆರ್ಥಿಕತೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರುಕಟ್ಟೆ ಆರ್ಥಿಕತೆಯನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗಿದ್ದರೂ ಇನ್ನೂ ಬಹಳ ದೂರ ಹೋಗಬೇಕಾಗಿದೆ. ಪ್ರಸ್ತುತ, ವಿಯೆಟ್ನಾಮೀಸ್ ಡಾಂಗ್ ಗಣನೀಯ ಅಪಮೌಲ್ಯವನ್ನು ಅನುಭವಿಸುತ್ತಿದೆ. ಇಲ್ಲಿ 1 ಭಾರತೀಯ ರೂಪಾಯಿಯು 297.72ವಿಎನ್ ಡಿಗೆ ಸಮನಾಗಿದೆ.


ಲಾವೋ/ಲಾವೋಟಿಯನ್ ಕಿಪ್ (LAK)

1952ರಲ್ಲಿ ಸ್ಥಾಪನೆಯಾದಾಗಿನಿಂದ ಲಾವೊ ಕರೆನ್ಸಿಯ ಮೌಲ್ಯವು ತುಲನಾತ್ಮಕವಾಗಿ ಕಡಿಮೆಯಾಗಿದೆ. ಇಲ್ಲಿ ಪ್ರಸ್ತುತ 1 ಭಾರತೀಯ ರೂಪಾಯಿಯು 263.00 ಎಲ್‌ಎಕೆಗೆ ಸಮವಾಗಿದೆ.


ಸಿಯೆರಾ ಲಿಯೋನಿಯನ್ ಲಿಯೋನ್ (SLL)

ಆಫ್ರಿಕನ್ ರಾಷ್ಟ್ರವಾದ ಸಿಯೆರಾ ಲಿಯೋನ್ ತೀವ್ರ ಬಡತನವನ್ನು ಎದುರಿಸುತ್ತಿದೆ. ವಿನಾಶಕಾರಿ ಅಂತರ್ಯುದ್ಧ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಹಗರಣಗಳು, ಭ್ರಷ್ಟಾಚಾರ ಮತ್ತು ಯುದ್ಧಗಳ ಇತಿಹಾಸವನ್ನು ದೇಶ ಹೊಂದಿದೆ. ಇದರಿಂದಾಗಿ ಕರೆನ್ಸಿ ಮೌಲ್ಯ ಮತ್ತು ದೇಶದ ಆರ್ಥಿಕತೆ ಎರಡೂ ಕುಸಿದಿದೆ. ಇಲ್ಲಿ ಭಾರತೀಯ 1 ರೂಪಾಯಿಯು 267.39 ಎಸ್ ಎಲ್ ಎಲ್‌ಗೆ ಸಮವಾಗಿದೆ.


ಇಂಡೋನೇಷಿಯನ್ ರುಪಿಯಾ (IDR)

ಕಳೆದ ಏಳು ವರ್ಷಗಳಿಂದ ಇಂಡೋನೇಷ್ಯಾದ ರೂಪಾಯಿ ಯಾವುದೇ ಸುಧಾರಣೆಯನ್ನು ತೋರಿಸಿಲ್ಲ. ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುವುದು, ಕರೆನ್ಸಿಯನ್ನು ರಕ್ಷಿಸುವಲ್ಲಿ ಕೇಂದ್ರೀಯ ಬ್ಯಾಂಕ್ ವಿಫಲತೆ ಮತ್ತು ಸರಕು ರಫ್ತಿನ ಮೇಲೆ ದೇಶದ ಭಾರೀ ಅವಲಂಬನೆ ಸೇರಿದಂತೆ ವಿವಿಧ ಅಂಶಗಳು ಇದಕ್ಕೆ ಕಾರಣ. ಇದಲ್ಲದೆ, ಸರಕುಗಳ ಬೆಲೆಗಳಲ್ಲಿನ ಕುಸಿತವು ಕರೆನ್ಸಿಯ ಮೌಲ್ಯದಲ್ಲಿನ ಇಳಿಕೆಗೆ ಮತ್ತಷ್ಟು ಕೊಡುಗೆ ನೀಡಿದೆ. ರೂಪಾಯಿಯ ಸಾರ್ವಭೌಮ ಬಾಂಡ್‌ಗಳ ಗಮನಾರ್ಹ ಭಾಗವನ್ನು ಹೊಂದಿರುವ ವಿದೇಶಿ ಹೂಡಿಕೆದಾರರ ಉಪಸ್ಥಿತಿಯು ಬಂಡವಾಳದ ಹರಿವಿಗೆ ಅಪಾಯವನ್ನುಂಟು ಮಾಡುತ್ತದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 185.66 ಐಡಿಆರ್‌ಗೆ ಸಮವಾಗಿದೆ.


ಉಜ್ಬೇಕಿಸ್ತಾನಿ ಸೋಮ್ (UZS)

ಉಜ್ಬೇಕಿಸ್ತಾನ್‌ನ ಆರ್ಥಿಕತೆಯು ದುರ್ಬಲವಾಗಿದೆ. ಇದು ದುರ್ಬಲ ಕರೆನ್ಸಿಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗವು ರಾಷ್ಟ್ರದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದ್ದರೂ, 2022ರ ಮೂರನೇ ತ್ರೈಮಾಸಿಕದಲ್ಲಿ ಆಂತರಿಕ ಕಾರ್ಯಾಚರಣೆಗಳು ಪುನರಾರಂಭಗೊಂಡಿದೆ. ಆದರೂ ಕೈಗಾರಿಕಾ ಉತ್ಪಾದನೆಯಲ್ಲಿನ ಕುಸಿತವು ಕರೆನ್ಸಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 150.24 ಯುಝೆಡ್‌ಎಸ್‌ಗೆ ಸಮವಾಗಿದೆ.


ಗಿನಿಯನ್ ಫ್ರಾಂಕ್ (GNF)

ಗಿನಿಯನ್ ಫ್ರಾಂಕ್ ಗಿನಿಯಾದ ಅಧಿಕೃತ ಕರೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರವು ವ್ಯಾಪಕ ಭ್ರಷ್ಟಾಚಾರ ಮತ್ತು ರಾಜಕೀಯ ಅಶಾಂತಿಯಿಂದ ಬಳಲುತ್ತಿದೆ. ಇದು ಅದರ ಕರೆನ್ಸಿಯನ್ನು ದುರ್ಬಲಗೊಳಿಸಿದೆ. ವರ್ಷದಿಂದ ವರ್ಷಕ್ಕೆ, ರಾಷ್ಟ್ರದ ಕರೆನ್ಸಿಯ ಮೌಲ್ಯವು ಕಡಿಮೆಯಾಗುತ್ತಲೇ ಇದೆ.ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 102.41 ಜಿಎನ್ ಎಫ್ ಗೆ ಸಮವಾಗಿದೆ.


ಪರಗ್ವೆಯ ಗೌರಾನಿ (PYG)

ಹೆಚ್ಚಿನ ಹಣದುಬ್ಬರ, ಭ್ರಷ್ಟಾಚಾರ, ಹೆಚ್ಚಿನ ನಿರುದ್ಯೋಗ ಮತ್ತು ಹೆಚ್ಚಿದ ಬಡತನದ ಪರಿಣಾಮವಾಗಿ ದೇಶವು ವಿನಾಶಕಾರಿ ಆರ್ಥಿಕ ಕುಸಿತವನ್ನು ಅನುಭವಿಸಿತು. ಈ ಪ್ರತಿಯೊಂದು ಅಂಶಗಳು ಕರೆನ್ಸಿಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಿವೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 89.88 ಪಿವೈಜಿಗೆ ಸಮವಾಗಿದೆ.


ಕಾಂಬೋಡಿಯನ್ ರಿಯಲ್ (KHR)

ದುರ್ಬಲವಾದ ಕಾಂಬೋಡಿಯನ್ ರಿಯಲ್ ಹಿಂದಿನ ಪ್ರಮುಖ ಕಾರಣವೆಂದರೆ ದೇಶದ ಹೆಚ್ಚಿನ ಡಾಲರೀಕರಣ. 80ರ ದಶಕದ ಉತ್ತರಾರ್ಧ ಮತ್ತು 90ರ ದಶಕದ ಆರಂಭದಲ್ಲಿ ರಾಜಕೀಯ ಅಸಾಮರ್ಥ್ಯಗಳಿಂದಾಗಿ ದೇಶದ ರಿಯಲ್‌ನಲ್ಲಿ ವಿದೇಶಿ ಹೂಡಿಕೆಯನ್ನು ನಡೆಸಿ ಸಾರ್ವಜನಿಕ ವಿಶ್ವಾಸವನ್ನು ಗಳಿಸಲಾಯಿತು. 90 ರ ದಶಕದಲ್ಲಿ ಯುಎಸ್ ಡಾಲರ್ ಜನರಿಗೆ ಅನುಕೂಲಕರವಾಯಿತು. ಅತ್ಯಧಿಕ ಮಟ್ಟದಲ್ಲಿ ಯುಎಸ್ ಡಾಲರ್ ದೇಶದಲ್ಲಿ ಚಲಾವಣೆಯಾಯಿತು. ಹೀಗಾಗಿ ಶೇ. 90 ರಷ್ಟು ರಿಯಲ್ ಡಾಲರ್ ರೂಪದಲ್ಲಿದೆ. ಕಳೆದ ಎರಡು ದಶಕಗಳಲ್ಲಿ ನ್ಯಾಷನಲ್ ಬ್ಯಾಂಕ್ ಆಫ್ ಕಾಂಬೋಡಿಯಾ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದು ರಿಯಲ್ ಚಲಾವಣೆಯಲ್ಲಿ ಶೇ. 80ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಆದರೂ ಇದು ಇನ್ನೂ ಹೆಚ್ಚು ಯುಎಸ್ ಡಾಲರ್ ಅನ್ನು ಅವಲಂಬಿಸಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 48.62 ರಿಯಲ್ ಗೆ ಸಮವಾಗಿದೆ.

ಇದನ್ನೂ ಓದಿ: Richest Village: ಗುಜರಾತ್‌ನಲ್ಲಿದೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ! ಇಲ್ಲಿಯ ಜನ ಇಟ್ಟಿರುವ ಫಿಕ್ಸೆಡ್‌ ಡಿಪಾಸಿಟ್‌ ಮೌಲ್ಯ 7,000 ಕೋಟಿ ರೂ!


ಉಗಾಂಡಾ ಶಿಲ್ಲಿಂಗ್ (UGX)

1966ರಲ್ಲಿ ಉಗಾಂಡಾದ ಶಿಲ್ಲಿಂಗ್ ಪೂರ್ವ ಆಫ್ರಿಕಾದ ಶಿಲ್ಲಿಂಗ್ ಅನ್ನು ಬದಲಿಸಿತು. ಪ್ರಸ್ತುತ ಉಗಾಂಡಾದ ಶಿಲ್ಲಿಂಗ್ ಅತ್ಯಂತ ಕಡಿಮೆ ಬೆಲೆಬಾಳುವ ಕರೆನ್ಸಿಗಳಲ್ಲಿ ಒಂದಾಗಿದೆ. ಇದಿ ಅಮೀನ್ ಆಳ್ವಿಕೆಯ ಅಡಿಯಲ್ಲಿ ಉಗಾಂಡಾವು ರಾಷ್ಟ್ರದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಲಸೆ ಕಾನೂನುಗಳಂತಹ ಕ್ರಮಗಳಿಂದ ಗಮನಾರ್ಹ ಹಿನ್ನಡೆ ಅನುಭವಿಸಿತು. ಅಧ್ಯಕ್ಷರ ಆರ್ಥಿಕ ಕುಸಿತದ ಪರಿಣಾಮಗಳು ದೇಶದ ಪ್ರಗತಿಗೆ ಅಡ್ಡಿಯಾಗುತ್ತಲೇ ಇವೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಕರೆನ್ಸಿಯ ಮೌಲ್ಯವು ಹೆಚ್ಚಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 44.22 ಯುಜಿಎಕ್ಸ್ ಆಗಿದೆ.

ಈ ಹತ್ತು ಅಗ್ಗದ ದೇಶಗಳ ಕರೆನ್ಸಿಯೊಂದಿಗೆ ಭಾರತೀಯ ರೂಪಾಯಿ ಮೌಲ್ಯದ ಹೋಲಿಕೆಯು 2024ರ ಆಗಸ್ಟ್ 19ರ ಅಂಕಿ ಅಂಶಗಳನ್ನು ಆಧರಿಸಿ ನೀಡಲಾಗಿದೆ. ಇದು ಕೆಲವೊಮ್ಮೆ ಕೊಂಚ ಏರಿಳಿತ ಕಾಣಬಹುದು.

Continue Reading

ವಾಣಿಜ್ಯ

Railway Line: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಇನ್ನೂ ಬ್ರಿಟಿಷರ ಅಧೀನದಲ್ಲಿದೆ ಈ ರೈಲು ಮಾರ್ಗ!

ಮಹಾರಾಷ್ಟ್ರದ ರೈಲು ಮಾರ್ಗವನ್ನು (Railway Line) ಬ್ರಿಟಿಷ್ ಕಂಪನಿಯೊಂದು ನಿರ್ವಹಿಸುತ್ತಿದೆ. ಭಾರತೀಯ ರೈಲ್ವೇ ಈ ರೈಲು ಮಾರ್ಗವನ್ನು ಖರೀದಿಸಲು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅವು ವಿಫಲವಾಯಿತು. ಹೀಗಾಗಿ ಇನ್ನೂ ಆ ರೈಲು ಮಾರ್ಗವನ್ನು ನಿರ್ವಹಿಸುತ್ತಿರುವ ಬ್ರಿಟಿಷ್ ಕಂಪನಿಗೆ ಇತ್ತೀಚಿನ ವರ್ಷಗಳವರೆಗೂ ರಾಯಧನವನ್ನು ಪಾವತಿಸಲಾಗುತ್ತಿತ್ತು! ಈಗಲೂ ಈ ರೈಲ್ವೆ ಮಾರ್ಗ ಬ್ರಿಟಿಷ್‌ ಕಂಪನಿಯ ಸುಪರ್ದಿಯಲ್ಲೇ ಇದೆ.

VISTARANEWS.COM


on

By

Railway Line
Koo

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಭಾರತದ ಈ ಒಂದು ರೈಲು ಮಾರ್ಗ (Railway Line) ಮಾತ್ರ ಇನ್ನೂ ಬ್ರಿಟಿಷರ (British owned railway line) ನಿಯಂತ್ರಣದಲ್ಲಿದೆ! ಭಾರತೀಯ ರೈಲ್ವೇಸ್ (Indian Railways) ಅದನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಈಗಲೂ ಅದಕ್ಕೆ ಬ್ರಿಟಿಷರಿಗೆ ರಾಯಧನವನ್ನು (royalty) ಪಾವತಿಸುತ್ತಿದೆ!

ಮಹಾರಾಷ್ಟ್ರದ ರೈಲು ಮಾರ್ಗವನ್ನು (maharastra railway line) ಬ್ರಿಟಿಷ್ ಕಂಪನಿಯೊಂದು ನಿರ್ವಹಿಸುತ್ತಿದೆ. ಭಾರತೀಯ ರೈಲ್ವೇ ಈ ರೈಲು ಮಾರ್ಗವನ್ನು ಖರೀದಿಸಲು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅವು ವಿಫಲವಾಯಿತು. ಹೀಗಾಗಿ ಇನ್ನೂ ಆ ರೈಲು ಮಾರ್ಗವನ್ನು ಬ್ರಿಟಿಷ್ ಕಂಪನಿ, ‘ಕಿಲ್ಲಿಕ್ ನಿಕ್ಸನ್ ಆಂಡ್ ಕೋʼ ಈಗಲೂ ಸೆಂಟ್ರಲ್ ಪ್ರಾವಿನ್ಸ್ ರೈಲ್ವೆ ಕಂಪನಿಯನ್ನು ನಿರ್ವಹಿಸುತ್ತದೆ.

ಇತ್ತೀಚಿನವರೆಗೂ ರಾಯಧನ ಪಾವತಿ

ಈ ಕಂಪನಿಯು ಅಮರಾವತಿಯಿಂದ ಮಹಾರಾಷ್ಟ್ರದ ಮುರ್ತಜಾಪುರಕ್ಕೆ 190 ಕಿ.ಮೀ ರೈಲು ಮಾರ್ಗದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್ ಅನ್ನು ಓಡಿಸುತ್ತಿತ್ತು. ಸ್ವಾತಂತ್ರ್ಯದ ಅನಂತರ ಬ್ರಿಟಿಷರು ಭಾರತವನ್ನು ತೊರೆದರು. ಆದರೆ ಬ್ರಿಟಿಷ್ ಖಾಸಗಿ ಕಂಪನಿಯು ಈ ಮಾರ್ಗದ ಮೇಲೆ ಅಧಿಕಾರವನ್ನು ಮುಂದುವರಿಸಿದೆ. ಭಾರತೀಯ ರೈಲ್ವೇಯು ಆ ಕಂಪನಿಗೆ ಇತ್ತೀಚಿನ ವರ್ಷಗಳವರೆಗೂ ಬರೋಬ್ಬರಿ 1.20 ಕೋಟಿ ರೂ. ರಾಯಧನವನ್ನು ಪಾವತಿಸುತ್ತಿತ್ತು.


ಶಕುಂತಲಾ ರೈಲ್ವೇ ಲೈನ್

ಅಮರಾವತಿಯಿಂದ ಮುರ್ತಜಾಪುರದವರೆಗಿನ 190 ಕಿ.ಮೀ ರೈಲು ಮಾರ್ಗವನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರೈಲ್ವೇ ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ಅವರು ಯಶಸ್ವಿಯಾಗಲಿಲ್ಲ. ಶಕುಂತಲಾ ಪ್ಯಾಸೆಂಜರ್ ಎಂಬ ಒಂದು ಪ್ಯಾಸೆಂಜರ್ ರೈಲು ಮಾತ್ರ ಈ ರೈಲು ಮಾರ್ಗದಲ್ಲಿ ಓಡುತ್ತಿತ್ತು. ಅಂದಹಾಗೆ, ಶಕುಂತಲಾ ರೈಲ್ವೇ ಲೈನ್ ಈ ಮಾರ್ಗದ ಹೆಸರು. ಶಕುಂತಲಾ ಎಕ್ಸ್‌ಪ್ರೆಸ್ ಅಚಲಪುರ ಮತ್ತು ಯವತ್ಮಾಲ್ ನಡುವಿನ 17 ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಈ ರೈಲು ಸುಮಾರು 70 ವರ್ಷಗಳ ಕಾಲ ಸ್ಟೀಮ್ ಎಂಜಿನ್‌ನಲ್ಲಿ ಓಡಿದೆ.

ಡೀಸೆಲ್ ಎಂಜಿನ್

1994ರಲ್ಲಿ ಶಕುಂತಲಾ ಪ್ಯಾಸೆಂಜರ್ ರೈಲಿಗೆ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಅನಂತರ ಅನಿರೀಕ್ಷಿತ ಕಾರಣಗಳಿಂದ ರೈಲನ್ನು ನಿಲ್ಲಿಸಲಾಗಿತ್ತು. ಇದನ್ನು ಪುನರಾರಂಭಿಸಬೇಕು ಎಂಬುದು ಸ್ಥಳೀಯರ ಆಗ್ರಹ. 5 ಬೋಗಿಗಳಿರುವ ಈ ರೈಲು ಪ್ರತಿದಿನ 800 ರಿಂದ 1,000 ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಸಾಗಿಸುತ್ತಿತ್ತು. ಭಾರತೀಯ ರೈಲ್ವೆಯನ್ನು 1951ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈ ರೈಲು ಮಾರ್ಗವು ಭಾರತ ಸರ್ಕಾರದ ವ್ಯಾಪ್ತಿಗೆ ಬರಲಿಲ್ಲ.

1.20 ಕೋಟಿ ರೂ. ರಾಯಧನ

ಅಮರಾವತಿ- ಮುರ್ತಜಾಪುರ ರೈಲು ಮಾರ್ಗವನ್ನು ಬಳಸುವುದಕ್ಕಾಗಿ ಭಾರತೀಯ ರೈಲ್ವೇಯು ಇಂಗ್ಲೆಂಡ್ ಕಂಪನಿಗೆ 1.20 ಕೋಟಿ ರೂ.ಗಳ ರಾಯಧನವನ್ನು ಪಾವತಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹಲವಾರು ವರದಿಗಳು ಹೇಳುತ್ತವೆ. ಈಗ ರಾಯಲ್ಟಿ ನೀಡಲಾಗುತ್ತಿಲ್ಲ ಎನ್ನಲಾಗಿದೆ.

Railway Line
Railway Line


ಹತ್ತಿ ಸಾಗಿಸಲು ನಿರ್ಮಾಣ

ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ಅಮರಾವತಿಯಿಂದ ಮಂಬಯಿ ಬಂದರಿಗೆ ಹತ್ತಿಯನ್ನು ಸಾಗಿಸಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಿಸಿದರು. ಈ ರೈಲು ಮಾರ್ಗವನ್ನು ನಿರ್ಮಿಸಲು ಸೆಂಟ್ರಲ್ ಪ್ರಾವಿನ್ಸ್ ರೈಲ್ವೇ ಕಂಪೆನಿ (CPRC) ಬ್ರಿಟನ್‌ನ ಕಿಲಿಕ್ ನಿಕ್ಸನ್ ಆಂಡ್ ಕಂ ಅನ್ನು ಸ್ಥಾಪಿಸಿತು.

ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

ನಿರ್ಮಾಣ ಕಾರ್ಯ

ಈ ರೈಲು ಮಾರ್ಗದ ನಿರ್ಮಾಣವು 1903ರಲ್ಲಿ ಪ್ರಾರಂಭವಾಯಿತು ಮತ್ತು 1916ರಲ್ಲಿ ಪೂರ್ಣಗೊಂಡಿತು. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದಾಗ, ಭಾರತೀಯ ರೈಲ್ವೇ ಈ ಕಂಪನಿಯೊಂದಿಗೆ ಸುದೀರ್ಘ ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಹಾಗಾಗಿ ಈ ಮಾರ್ಗವನ್ನು ಬಳಸುವುದಕ್ಕಾಗಿ ಪ್ರತಿ ವರ್ಷ ಬ್ರಿಟಿಷ್‌ ಕಂಪನಿಗೆ ರಾಯಲ್ಟಿ ಪಾವತಿಸಬೇಕಾಗಿತ್ತು.

Continue Reading

ವಿದೇಶ

PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

PM Modi Ukraine Visit: ಶುಕ್ರವಾರ ಕೈವ್‌ನಲ್ಲಿ ಭೇಟಿಯಾದ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. 30 ವರ್ಷಗಳ ಹಿಂದೆ ಭಾರತ ಮತ್ತು ಉಕ್ರೇನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ದೇಶಕ್ಕೆ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರ ಉಕ್ರೇನ್ ಭೇಟಿ ಐತಿಹಾಸಿಕವಾಗಿದೆ.

VISTARANEWS.COM


on

PM Modi Ukraine Visit
Koo

ನವದೆಹಲಿ: ಪೋಲೆಂಡ್‌ ಪ್ರವಾಸ(PM Modi Poland Visit)ದ ಬಳಿಕ ಇದೀಗ ಉಕ್ರೇನ್‌ನ ಕೈವ್‌ಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಅಧ್ಯಕ್ಷ ವ್ಲಾಡಮಿರ್‌ ಝೆಲೆನ್ಸ್ಕಿ(Volodymyr Zelensky) ಅವರನ್ನು ಭೇಟಿ(PM Modi Ukraine Visit)ಯಾದರು. ಕೈವ್‌ನಲ್ಲಿ ಭೇಟಿಯಾದ ಉಭಯ ನಾಯಕರು ಪರಸ್ಪರ ಕೈಕುಲುಕಿ ಅಪ್ಪಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಶುಕ್ರವಾರ ಕೈವ್‌ನಲ್ಲಿ ಭೇಟಿಯಾದ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. 30 ವರ್ಷಗಳ ಹಿಂದೆ ಭಾರತ ಮತ್ತು ಉಕ್ರೇನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ದೇಶಕ್ಕೆ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ಮೋದಿ ಅವರ ಉಕ್ರೇನ್ ಭೇಟಿ ಐತಿಹಾಸಿಕವಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ನಡೆಯುತ್ತಿರುವ ಸಂಘರ್ಷದ ನಡುವೆ ಪ್ರಧಾನಿ ಮೋದಿ ಮತ್ತು ಝೆಲೆನ್ಸ್ಕಿ ಭೇಟಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಈ ವೇಳೆ ರಾಜತಾಂತ್ರಿಕ ಪರಿಹಾರಕ್ಕಾಗಿ ಮೋದಿ ಸಲಹೆ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಪೋಲೆಂಡ್‌ ಪ್ರವಾಸ(PM Modi Poland Visit)ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್‌(Russia-Ukraine War) ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ್ದು, ಯುದ್ಧ ಭೂಮಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ. ಇದೇ ವೇಳೆ ಅವರು 2022ರಲ್ಲಿ ಉಕ್ರೇನ್‌-ರಷ್ಯಾ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಹಾಯ ಮಾಡಿದ ಪೋಲೆಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

2022 ರಲ್ಲಿ ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ನೀವು ನೀಡಿದ ಸಹಾಯವನ್ನು ಭಾರತದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದಕ್ಕಾಗಿ ನಾನು ಸರ್ಕಾರ ಮತ್ತು ಪೋಲೆಂಡ್ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಇದೇ ವೇಳೆ ಪೋಲೆಂಡ್‌ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರಿಗೆ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಸುಂದರವಾದ ನಗರವಾದ ವಾರ್ಸಾದಲ್ಲಿ ನನಗೆ ಆತ್ಮೀಯ ಸ್ವಾಗತ ನೀಡಿದ ಪಿಎಂ ಟಸ್ಕ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ದೀರ್ಘಕಾಲದವರೆಗೆ ಭಾರತದ ಸ್ನೇಹಿತರಾಗಿದ್ದೀರಿ ಮತ್ತು ಭಾರತ ಮತ್ತು ಪೋಲೆಂಡ್ ನಡುವಿನ ಸಂಬಂಧವನ್ನು ಹೆಚ್ಚಿಸಲು ನೀವು ದೊಡ್ಡ ಕೊಡುಗೆ ನೀಡಿದ್ದೀರಿ ಎಂದು ಅವರು ಹೇಳಿದರು.

ಇದನ್ನೂ ಓದಿ: PM Modi Ukraine Visit: ಜಗತ್ತಿಗೆ ಶಾಂತಿ ಸಂದೇಶ ಸಾರಲು ಭಾರತ ಬದ್ಧ; ಉಕ್ರೇನ್‌ ಭೇಟಿ ಮೂಲಕ ನಿಲುವು ಸ್ಪಷ್ಟಪಡಿಸಿದ ಮೋದಿ

Continue Reading
Advertisement
Love jihad
ಕರ್ನಾಟಕ4 hours ago

Love Jihad: ಹಿಂದೂ ಯುವತಿಯ ಕರೆದೊಯ್ದ ಮುಸ್ಲಿಂ ಯುವಕ; ಕಾರ್ಕಳ ಪ್ರಕ್ಷುಬ್ಧ

assault case
ಕರ್ನಾಟಕ4 hours ago

Assault Case: ಮಾರ್ಕ್ಸ್‌ ಕಡಿಮೆ ಬಂತೆಂದು 4ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕ

pm modi Ukraine Visit
ವಿದೇಶ4 hours ago

PM Modi Ukraine Visit: ಉಕ್ರೇನ್‌ಗೆ ಭೀಷ್ಮ್‌ ಕ್ಯೂಬ್‌ ಉಡುಗೊರೆ ನೀಡಿದ ಪ್ರಧಾನಿ ಮೋದಿ…ಏನಿದರ ವಿಶೇಷತೆ?

Yadgiri News
ಧಾರ್ಮಿಕ5 hours ago

Yadgiri News: ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

viral video
ವೈರಲ್ ನ್ಯೂಸ್6 hours ago

Viral Video: ಮೈಮೇಲೆ ಒಂದಲ್ಲ..ಎರಡಲ್ಲ ಬರೋಬ್ಬರಿ 25ಕೆ.ಜಿ ಚಿನ್ನ; ತಿಮ್ಮಪ್ಪನ ಸನ್ನಿಧಿಗೆ ಬಂದ ವಿಶೇಷ ಭಕ್ತರು ಇವರೇ ನೋಡಿ

Lorry Accident
ಕರ್ನಾಟಕ6 hours ago

Lorry Accident: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ; 16 ಕಾರ್ಮಿಕರಿಗೆ ಗಂಭೀರ ಗಾಯ

ಕರ್ನಾಟಕ6 hours ago

Muda Scam: ದೆಹಲಿಯಲ್ಲಿ ರಾಹುಲ್‌ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ; ಕಾನೂನು ಹೋರಾಟದ ಬಗ್ಗೆ ಚರ್ಚೆ

Uttara Kannada News
ಉತ್ತರ ಕನ್ನಡ6 hours ago

Uttara Kannada News: ಹೊಸ ಆಧಾರ್ ನೋಂದಣಿ, ತಿದ್ದುಪಡಿಗೆ ಅವಕಾಶ

Invest Karnataka
ಬೆಂಗಳೂರು6 hours ago

Invest Karnataka: ಇಂಧನ ತಂತ್ರಜ್ಞಾನ; ರಾಜ್ಯದಲ್ಲಿ 8,300 ಕೋಟಿ ರೂ. ಹೂಡಿಕೆ ಮಾಡಲಿರುವ ಷೆರ್ವನ್‌ ಇಂಡಿಯಾ

UPSC Exam calendar
ದೇಶ7 hours ago

UPSC Exam calendar: UPSC ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್‌ ರಿಲೀಸ್‌; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌