Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌! - Vistara News

ಆರೋಗ್ಯ

Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌!

ಒಳ್ಳೆಯ ಆರೋಗ್ಯಕ್ಕೆ ಉತ್ತಮ ನಿದ್ರೆ ಅಗತ್ಯ. ಚೆನ್ನಾಗಿ ನಿದ್ರೆ ಬರಬೇಕಿದ್ದರೆ ಕೆಲವೊಂದು ಉತ್ತಮ ಜೀವನಶೈಲಿಗಳನ್ನು ನೀವು ರೂಢಿಸಿಕೊಳ್ಳಲೇಬೇಕು.

VISTARANEWS.COM


on

sleep better
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻನಿದ್ದೆಯನ್ನು ಗೆದ್ದವನು ಲೋಕದಲ್ಲಿ ಇದ್ದಾನೋʼ ಎಂಬುದು ನಿದ್ದೆಯನ್ನು ಗೆಲ್ಲುವುದು ಅಸಾಧ್ಯ ಎಂಬ ಧೋರಣೆಯ ಮಾತು. ಆದಾಗ್ಯೂ ದ್ವಾಪರದಲ್ಲಿ ಅರ್ಜುನನಿಗೆ ನಿದ್ದೆಯನ್ನು ಗೆದ್ದವನೆಂಬ ಹಿರಿಮೆಯಿತ್ತು. ಈಗಿನ ದಿನಗಳಲ್ಲಿ ನಿದ್ದೆಯನ್ನು ಗೆದ್ದವರಿಲ್ಲದಿದ್ದರೂ, ನಿದ್ದೆ ಬಾರದೆ ರಾತ್ರಿ ಕಳೆಯುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿದೆ. ಇದರ ಬೆನ್ನಿಗೇ, ನಿದ್ರಾಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೂ ಏರಿವೆ. ಉದ್ಯೋಗ, ದಿನದ ಕೆಲಸ, ಸಾಮಾಜಿಕ ಮಾಧ್ಯಮಗಳು, ಮನರಂಜನೆ ಇತ್ಯಾದಿಗಳೆಲ್ಲಾ ಮುಗಿದೂ ಸಮಯ ಉಳಿದರೆ ನಿದ್ದೆ ಎಂಬಂಥ ಇತ್ತೀಚಿನ ಮನಸ್ಥಿತಿಯ ಫಲವಿದು.

ನಿದ್ದೆ ಯಾಕೆ ಬೇಕು ಎಂದರೆ ಮೇಲ್ನೋಟಕ್ಕೆ ಕಾಣುವ ಕಾರಣಗಳು ಹೀಗಿವೆ- ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ, ಶಕ್ತಿ ಸಂಚಯನಕ್ಕೆ, ಅಂಗಾಂಶಗಳಲ್ಲಿ ತೊಂದರೆಯಿದ್ದರೆ ಸರಿಪಡಿಸಿಕೊಳ್ಳುವುದಕ್ಕೆ, ಮೆದುಳಿನ ಕಾರ್ಯ ಕ್ಷಮತೆಗೆ. ನಿದ್ದೆ ಇಲ್ಲದಿದ್ದರೆ ಆಗುವುದೇನು ಎಂಬ ಮಾಹಿತಿಯನ್ನೂ ಚುಟುಕಾಗಿ ಹೇಳುವುದಾದರೆ- ಸ್ಪಷ್ಟ ಯೋಚಿಸುವ ಸಾಮರ್ಥ್ಯ ಕಡಿತ, ಗಮನ ಕೇಂದ್ರೀಕರಿಸಲು ಕಷ್ಟ, ಪ್ರತಿಕ್ರಿಯೆ ಕುಂಠಿತ ಮತ್ತು ಭಾವನೆಗಳನ್ನು ಹಿಡಿತದಲ್ಲಿಡಲು ತೊಡಕಾಗುತ್ತದೆ. ಇವಲ್ಲದೆ, ಮಧುಮೇಹ, ಹೃದ್ರೋಗ, ತೂಕ ಹೆಚ್ಚಳ, ರೋಗನಿರೋಧಕ ಶಕ್ತಿ ಕುಂಠಿತ, ಲೈಂಗಿಕ ನಿರಾಸಕ್ತಿ, ಖಿನ್ನತೆಯಂಥ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆ ಕಾರಣವಾಗುತ್ತದೆ.

ಎಷ್ಟೊತ್ತು ನಿದ್ರಿಸಬೇಕು? ಈ ಪ್ರಶ್ನೆಗೆ ತಜ್ಞರಲ್ಲಿ ಸ್ಪಷ್ಟ ಉತ್ತರವಿದೆ. ಈ ಕೆಳಗಿನ ಕೋಷ್ಟಕವನ್ನು ಗಮನಿಸಿ.

ವರ್ಷ
ಅಗತ್ಯ ಪ್ರಮಾಣದ ನಿದ್ದೆ
65 ವರ್ಷ ಮತ್ತು ಮೇಲ್ಪಟ್ಟವರು
7ರಿಂದ 8 ತಾಸು
18ರಿಂದ 64ರ ಪ್ರಾಯ
7ರಿಂದ 9 ತಾಸು
14ರಿಂದ 17ರ ಪ್ರಾಯ
8ರಿಂದ 10 ತಾಸು
6ರಿಂದ 13ರ ಪ್ರಾಯ
9ರಿಂದ 11 ತಾಸು
3ರಿಂದ 5ರ ಪ್ರಾಯ
10ರಿಂದ 13 ತಾಸು
1ರಿಂದ 2 ವರ್ಷ
11ರಿಂದ 14 ತಾಸು
4ರಿಂದ 11 ತಿಂಗಳು
12ರಿಂದ 15 ತಾಸು
ಹುಟ್ಟಿದ ಮೊದಲ ಮೂರು ತಿಂಗಳು
14ರಿಂದ 17 ತಾಸು

ಕೆಲವೊಮ್ಮೆ ನಿದ್ದೆಯ ಪ್ರಮಾಣ, ರೀತಿಗಳಲ್ಲಿ ತಾತ್ಕಾಲಿಕ ವ್ಯತ್ಯಾಸವಾಗಬಹುದು. ಅದನ್ನು ಆದಷ್ಟೂ ಶೀಘ್ರ ಸಾಮಾನ್ಯ ಸ್ಥಿತಿಗೆ ತಂದುಕೊಳ್ಳುವುದು ಮುಖ್ಯ. ‍ಕಣ್ತುಂಬಾ ನಿದ್ದೆ ಬರಬೇಕಾದರೆ ಏನು ಮಾಡಬೇಕು ಎಂಬುದು ಬಹಳಷ್ಟು ಜನರ ಪ್ರಶ್ನೆ. ಇಂಥ ಕೆಲವು ವಿಷಯಗಳು ಸುಖನಿದ್ರೆಗೆ ನೆರವಾಗಬಹುದು-

ನಿದ್ದೆಗೊಂದು ನಿಯಮವಿರಲಿ: ದಿನಾ ರಾತ್ರಿ ಮಲಗುವ ಮತ್ತು ಬೆಳಗ್ಗೆ ಏಳುವ ವೇಳೆಯನ್ನು ಖಾಯಂ ಮಾಡಿಕೊಳ್ಳಿ. ರಜೆ, ಹಬ್ಬ-ಹರಿದಿನ, ಪಾರ್ಟಿ… ಏನೇ ಆದರೂ ಈ ವೇಳಾಪಟ್ಟಿಯನ್ನು ಆದಷ್ಟೂ ಬದಲಿಸದಿರುವುದು ಸೂಕ್ತ.

ಸಾಕು ಪ್ರಾಣಿಗಳನ್ನು ದೂರವಿಡಿ: ಬೆಕ್ಕು, ನಾಯಿಯಂಥ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಹಾಸಿಗೆಯಲ್ಲೇ ಮಲಗಿಸಿಕೊಳ್ಳುವುದು ಅನೇಕರಿಗೆ ಪ್ರಿಯವಾಗಿರಬಹುದು. ಆದರೆ ಸಂಶೋಧನೆಯ ಪ್ರಕಾರ, ನಿದ್ದೆಗೇಡುತನಕ್ಕೆ ಇದೂ ಕಾರಣವಾಗಬಹುದು. ಹಾಗಾಗಿ ಮಲಗುವಾಗ ಅವುಗಳನ್ನು ದೂರ ಇಡಿ.

ಕೆಫೇನ್‌ ಸಾಕು!: ಹೆಚ್ಚಿನ ಕೆಫೇನ್‌ ದೇಹಕ್ಕೆ ಸೇರಿದರೆ ನಿದ್ದೆಗೇಡು ಗ್ಯಾರಂಟಿ. ಹಾಗಾಗಿ ಸಂಜೆಯ ನಂತರ ಕಾಫಿ, ಚಹಾ, ಪೆಪ್ಸಿ ಥರದ ಪಾನೀಯಗಳು, ಚಾಕಲೇಟ್‌ಗಳಿಗೆಲ್ಲಾ ಕಡಿವಾಣ ಹಾಕುವುದು ಸೂಕ್ತ.

ಇದನ್ನೂ ಓದಿ: ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

ಫೋನ್‌ ತೆಗೆದಿಡಿ: ಮಲಗುವ ಕನಿಷ್ಠ ಒಂದು ತಾಸು ಮುಂಚೆ ಎಲ್ಲಾ ರೀತಿಯ ಸ್ಕ್ರೀನ್‌ಗಳಿಂದ ಕಣ್ಣುಗಳನ್ನು ಮುಕ್ತಗೊಳಿಸಿ. ಅದರಲ್ಲೂ ಫೋನ್‌ ಪರದೆಯ ನೀಲಿ ಬೆಳಕು ಮೆದುಳನ್ನು ಪ್ರಚೋದಿಸುತ್ತಲೇ ಇರುತ್ತದಂತೆ.

ರಾತ್ರಿಗೆ…ನೋ ಚಿಯರ್ಸ್‌!: ರಾತ್ರಿಯ ಹೊತ್ತು ಒಂದೆರಡು ಪೆಗ್‌ ಒಳಗಿಳಿದರೆ ನಿದ್ದೆ ಖಾತ್ರಿ ಎನ್ನುವವರಿಗೆ ಈ ಕಿವಿಮಾತು. ಇದರಿಂದ ನಿದ್ದೆ ಬರಬಹುದು, ಆದರೆ ಬೆಳಗ್ಗೆ ಎದ್ದಾಗ ಸುಖನಿದ್ರೆ ಮಾಡಿದಂತಿರುವುದಿಲ್ಲ ದೇಹ ಮತ್ತು ಮನಸ್ಸು. ಈ ಹ್ಯಾಂಗೋವರ್‌ ಸ್ಥಿತಿಯೂ ನಿದ್ದೆಗೇಡುತನದ ಒಂದು ಭಾಗವೇ.

ವ್ಯಾಯಾಮ ಬೇಡ: ಅಂದರೆ ಹಾಗಲ್ಲ! ಮಲಗುವ ಮುನ್ನ ಮೆದುಳನ್ನು ಚೋದಿಸುವಂತೆ ಬೆವರು ಹರಿಸಿ ವ್ಯಾಯಾಮ ಮಾಡುವುದು ಖಂಡಿತಾ ಸಲ್ಲದು. ಬೆಳಗ್ಗೆ ಬೇಗೆದ್ದು ಎಷ್ಟಾದರೂ ಬೆವರು ಹರಿಸಿ, ತೊಂದರೆಯಿಲ್ಲ.

ತೈಲಗಳ ಬಳಕೆ: ಸ್ವಲ್ಪ ಪ್ರಮಾಣದಲ್ಲಿ ತಲೆಗೆ ತೈಲ ಲೇಪಿಸುವುದರಿಂದ ನಿದ್ದೆ ಉತ್ತಮವಾಗುವ ಸಾಧ್ಯತೆಯಿದೆ. ಅದರಲ್ಲೂ ಲ್ಯಾವೆಂಡರ್‌ ಆಯಿಲ್‌ನಂಥ ಸುಗಂಥ ತೈಲಗಳು, ಮಾನಸಿಕ ಒತ್ತಡ ಕಡಿಮೆ ಮಾಡಿ ನಿದ್ದೆಯನ್ನು ಉದ್ದೀಪಿಸುವ ಗುಣ ಹೊಂದಿವೆ.

ಧ್ಯಾನ: ಬೇಡದ ಆಲೋಚನೆಗಳನ್ನು ತಲೆಯಿಂದ ಹೊರಗಟ್ಟಿ, ನಿದ್ದೆಯ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯ ಧ್ಯಾನಕ್ಕಿದೆ. ಒಮ್ಮೆ ನಿದ್ದೆ ಮಾಡಿದ ಮೇಲೆ, ಪದೇಪದೆ ಎಚ್ಚರವಾಗದೆ, ಎಷ್ಟು ಹೊತ್ತು ಗಾಢವಾಗಿ ನಿದ್ರಿಸುತ್ತೀರಿ ಎಂಬುದರಿಂದ ನಿದ್ದೆಯ ಗುಣಮಟ್ಟ ನಿರ್ಧಾರವಾಗುತ್ತದೆ.

ಸುಖನಿದ್ರೆಯ ಪ್ರಯೋಜನಗಳು ಬೇಕಾದಷ್ಟಿವೆ. ನಿದ್ದೆಯಿಂದ ತೂಕ ಇಳಿಕೆಗೂ ಸಹಾಯಕ. ನಿದ್ರಾಹೀನತೆಯಿಂದ ನಮ್ಮ ಅರಿವಿಲ್ಲದೆಯೇ ತಿನ್ನುವ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ತೂಕವೂ ಹೆಚ್ಚೀತು. ನಿದ್ದೆ ಸರಿಯಾಯಿತೋ, ಇದೆಲ್ಲದಕ್ಕೂ ಕಡಿವಾಣ. ಖಿನ್ನತೆಯಂಥ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಶೇ. ೯೦ರಷ್ಟು ಮಂದಿಗೆ ನಿದ್ರಾಹೀನತೆಯ ಸಮಸ್ಯೆ ಕಂಡುಬಂದಿದೆ. ನಿದ್ದೆಯ ಗುಣಮಟ್ಟ ಸುಧಾರಣೆಗೆ ಪೂರಕವಾದಂಥ ಜೀವನಶೈಲಿ ಬದಲಾವಣೆಗಳಿಂದ ಜೀವನದ ಗುಣಮಟ್ಟವನ್ನೂ ವೃದ್ಧಿಸಿಕೊಳ್ಳಬಹುದು.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Tobacco Use: ಭಾರತವು ಶೇ. 27ರಷ್ಟು ವಯಸ್ಕ ತಂಬಾಕು ಸೇವನೆ ಮಾಡುವವರನ್ನು ಹೊಂದಿದೆಯಂತೆ. 2019ರ ಅಂಕಿ ಅಂಶದ ಪ್ರಕಾರ ವಿಶ್ವದಲ್ಲೇ 70 ಲಕ್ಷಕ್ಕೂ ಹೆಚ್ಚು ಮಂದಿ ತಂಬಾಕು ಸೇವಿಸಿ ಸಾವನ್ನಪ್ಪಿದ್ದು, ಭಾರತದಲ್ಲಿ 13.5 ಲಕ್ಷ ಮಂದಿ ಮೃತಪಟ್ಟಿದ್ದಾರೆ

VISTARANEWS.COM


on

By

Tobacco use
Koo

ತಂಬಾಕು ಬಳಸುವವರಲ್ಲಿ (Tobacco Use) ವಿಶ್ವದಲ್ಲೇ ಭಾರತ (india) ಎರಡನೇ ಸ್ಥಾನದಲ್ಲಿದ್ದು, ಶೇ. 27ರಷ್ಟು ವಯಸ್ಕ ಭಾರತೀಯರು ತಂಬಾಕು ಸೇವನೆ (Tobacco consumption) ಮಾಡುತ್ತಾರೆ ಎಂದು ಕೆಪಿಎಂಜಿ (KPMG) ಅಶ್ಯೂರೆನ್ಸ್ ಮತ್ತು ಕನ್ಸಲ್ಟಿಂಗ್ ಸರ್ವಿಸಸ್ ಎಲ್ಎಪಿಯ ವರದಿ ಹೇಳಿದೆ. 2019ರಲ್ಲಿ ವಿಶ್ವದಲ್ಲೇ 7 ಮಿಲಿಯನ್‌ಗೂ ಹೆಚ್ಚು ಮಂದಿ ತಂಬಾಕು ಸೇವಿಸಿ ಸಾವನ್ನಪ್ಪಿದ್ದು , ಭಾರತದಲ್ಲಿ 1.35 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಟಿ ಎಡ್ಜ್ ಸಹಯೋಗದೊಂದಿಗೆ ನಡೆದ ಸಮೀಕ್ಷೆಯಲ್ಲಿ ಭಾರತವು ಶೇ. 27ರಷ್ಟು ವಯಸ್ಕ ತಂಬಾಕು ಸೇವನೆ ಮಾಡುವವರನ್ನು ಹೊಂದಿದ್ದು, ವಿಶ್ವದ ಎರಡನೇ ಅತೀ ದೊಡ್ಡ ತಂಬಾಕು ಬಳಸುವ ಜನಸಂಖ್ಯೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ.

ಈ ಅಂಕಿ ಅಂಶವು ತಂಬಾಕು ಪ್ರೇರಿತ ಹಾನಿಯನ್ನು ಕಡಿಮೆ ಮಾಡಲು ತಂಬಾಕು ನಿಯಂತ್ರಣದ ಕಡೆಗೆ ಸಮಗ್ರ ಮಾರ್ಗಸೂಚಿಯನ್ನು ಹೊಂದಲು ಕಡ್ಡಾಯ ಮತ್ತು ನಿರ್ಣಾಯಕವಾಗಿದೆ. 2060ರ ವೇಳೆಗೆ ತಂಬಾಕು ಸಂಬಂಧಿತ ರೋಗಗಳಿಂದ ಜಾಗತಿಕವಾಗಿ ವಾರ್ಷಿಕ ಮರಣಗಳ ಅಂದಾಜು ಶೇ. 50ರಷ್ಟು ಕಡಿಮೆ ಮಾಡುವ ಉದ್ದೇಶವಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Covishield Vaccine: ಭಾರತದಲ್ಲಿ ಕೋವಿಶೀಲ್ಡ್‌ ಅಡ್ಡ ಪರಿಣಾಮದ ಅಪಾಯವಿಲ್ಲ: ಯಾಕೆ ಗೊತ್ತೆ?

ಭಾರತದ ತಂಬಾಕು ಬಳಕೆ

2019ರಲ್ಲಿ ಜಾಗತಿಕವಾಗಿ 7 ಮಿಲಿಯನ್ ತಂಬಾಕು ಸಂಬಂಧಿತ ಸಾವುಗಳಲ್ಲಿ ಭಾರತದಲ್ಲಿ 1.35 ಮಿಲಿಯನ್ ಸಾವು ಸಂಭವಿಸಿವೆ. ಶೇ. 66ರಷ್ಟು ಭಾರತೀಯರು 20- 25 ವರ್ಷ ವಯಸ್ಸಿನ ನಡುವೆ ತಂಬಾಕು ಸೇವಿಸಲು ಪ್ರಾರಂಭಿಸಿದರು. ಪರ್ಯಾಯ ಮಾರ್ಗಗಳ ಕೊರತೆಯಿಂದ ಶೇ.45ರಷ್ಟು ಮಂದಿಗೆ ಧೂಮಪಾನ ಅಥವಾ ತಂಬಾಕು ಜಗಿಯುವುದನ್ನು ಬಿಡಲು ಸಾಧ್ಯವಾಗಲಿಲ್ಲ.

ಜನರು ಬಳಸುವ ತಂಬಾಕಿನಲ್ಲಿ ಶೇ. 8ರಷ್ಟು ಮಾತ್ರ ಕಾನೂನುಬದ್ಧವಾಗಿ ಉತ್ಪಾದಿಸಲಾಗಿದೆ. ಆದರೆ ಉಳಿದ ಶೇ. 92 ರಷ್ಟು ಬಳಕೆ ಬೀಡಿಗಳು, ಜಗಿಯುವ ತಂಬಾಕು, ಖೈನಿ ಮುಂತಾದ ಅಗ್ಗದ ತಂಬಾಕು ಉತ್ಪನ್ನಗಳಾಗಿದೆ. ತಂಬಾಕು ಸೇವನೆಗೆ ಮುಖ್ಯ ಕಾರಣ ಒತ್ತಡ, ಆತಂಕ ಮತ್ತು ಭಾವನಾತ್ಮಕ ಯಾತನೆ ಎಂಬುದನ್ನು ಸಮೀಕ್ಷೆಯು ಬಹಿರಂಗಪಡಿಸಿದೆ.

ಭಾರತದಲ್ಲಿ ತಂಬಾಕು ಸೇವನೆಗೆ ನಿಯಂತ್ರಣ ಹೇರುವುದು ಅತೀ ಅವಶ್ಯಕವಾಗಿದೆ. ಜಾಗತಿಕವಾಗಿ ಸೂಚಿಸಲಾದ ತಂಬಾಕು ನಿಯಂತ್ರಣ ಕ್ರಮಗಳನ್ನು ಭಾರತದಲ್ಲಿ ಜಾರಿಗೊಳಿಸಲು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವುದು ಸವಾಲಾಗಿ ಪರಿಣಮಿಸುತ್ತಿದೆ.


ತಂಬಾಕು ಸೇವನೆ ಮಾಡುವ ಶೇ. 50ರಷ್ಟು ಪುರುಷರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಶೇ. 29 ರಷ್ಟು ಗಂಭೀರ ಪ್ರಕರಣಗಳಾಗಿವೆ. ಅರಿವಿನ ಕೊರತೆ ಮತ್ತು ಪರ್ಯಾಯಗಳ ಅಲಭ್ಯತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿರುವ ನಗರಗಳಲ್ಲಿ ಶೇ. 81ರಷ್ಟು ಮಂದಿ ಪುರುಷರು ತಂಬಾಕನ್ನು ತ್ಯಜಿಸಲು ಮುಂದಾಗುತ್ತಿಲ್ಲ.
2030ರ ವೇಳೆಗೆ ತಂಬಾಕು ಸಂಬಂಧಿತ ಸಾವುಗಳಲ್ಲಿ ಶೇ.80ಕ್ಕಿಂತ ಹೆಚ್ಚು ಸಾವುಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸಬಹುದು ಎಂದು ವರದಿ ಹೇಳಿದೆ.

ಜಿಡಿಪಿ ಮೇಲೆ ಪರಿಣಾಮ

ತಂಬಾಕು ಸೇವನೆಯಿಂದ ಉಂಟಾಗುವ ರೋಗಗಳು ಮತ್ತು ಸಾವುಗಳಿಂದಾಗಿ ಭಾರತವು ಪ್ರತಿ ವರ್ಷ ತನ್ನ ಜಿಡಿಪಿಯ ಶೇ.1ರಷ್ಟನ್ನು ಕಳೆದುಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಯನ್ನು ಅಳವಡಿಸಿಕೊಳ್ಳಲು ಭಾರತ ಮುಂದಾಗಬೇಕಿದೆ.

ತಂಬಾಕು ನಿಯಂತ್ರಣಕ್ಕೆ ಕ್ರಮ

ಭಾರತವು ಈಗಾಗಲೇ ತಂಬಾಕು ಸೇವನೆಯನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಗುರಿಯನ್ನು ಹೊಂದಿರುವ ಕಠಿಣ ನಿಯಮಗಳನ್ನು ಸಕ್ರಿಯವಾಗಿ ಜಾರಿಗೊಳಿಸುತ್ತಿದೆ. ತಂಬಾಕು ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಡಬ್ಲ್ಯೂ ಎಚ್‌ಒ ಸೂಚಿಸಿದ ಕಾನೂನುಗಳ ನಿಬಂಧನೆಗಳಿಗೆ ಹೊಂದಿಕೆಯಾಗಲು ದೇಶವು ತಂಬಾಕು ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದಿದೆ. ಧೂಮಪಾನಿಗಳಲ್ಲದವರನ್ನು ಧೂಮಪಾನದಿಂದ ದೂರವಿಡಲು ಇದು ಸಹಾಯ ಮಾಡುತ್ತದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ (NLEM) ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯನ್ನು (NRT) ಪರಿಚಯಿಸಿದೆ. ಉದಾಹರಣೆಗೆ ಚೂಯಿಂಗ್ ನಿಕೋಟಿನ್ ಗಮ್ ಅಥವಾ ಇನ್ಹೇಲರ್‌ಗಳನ್ನು ಬಳಸುವುದು ಧೂಮಪಾನ ಅಭ್ಯಾಸವನ್ನು ಮುರಿಯಲು ಮತ್ತು ಸಿಗರೇಟಿನ ಮೇಲೆ ಮಾನಸಿಕ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಜಾಗತಿಕ ನೀತಿಗಳು

ತಂಬಾಕು ಬಳಕೆಯನ್ನು ನಿಯಂತ್ರಿಸಲು ಅನೇಕ ದೇಶಗಳು ಡಬ್ಲ್ಯೂ ಎಚ್ ಒ ಫ್ರೇಮ್‌ವರ್ಕ್ ಕನ್ವೆನ್ಶನ್ ಆನ್ ತಂಬಾಕು ನಿಯಂತ್ರಣವನ್ನು (FCTC) ಅನುಸರಿಸಿದರೆ, ಕೆಲವು ಸೂಕ್ತವಾದ ವಿಧಾನವನ್ನು ಅಳವಡಿಸಿಕೊಂಡಿವೆ.

ಭಾರತ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಕ್ಕೆ ಹೋಲಿಸಿದರೆ ಜಪಾನ್, ಯುಕೆ, ನ್ಯೂಜಿಲೆಂಡ್ ಮತ್ತು ಸ್ವೀಡನ್‌ನಂತಹ ದೇಶಗಳಲ್ಲಿ ಧೂಮಪಾನದ ಪ್ರಮಾಣವು ಹೆಚ್ಚು ಎಂದು ವರದಿ ಬಹಿರಂಗಪಡಿಸಿದೆ.

ಏನು ಮಾಡಬಹುದು?

ಧೂಮಪಾನವನ್ನು ತೊರೆಯಲು ಇಷ್ಟಪಡದ ವ್ಯಕ್ತಿಗಳು ಕಡಿಮೆ ಅಪಾಯಕಾರಿ ತಂಬಾಕುಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ (ಎನ್‌ಆರ್‌ಟಿ) ಅನ್ನು ಕೈಗೆಟುಕುವ ಮತ್ತು ಸುಲಭವಾಗಿ ಸಿಗುವಂತೆ ಮಾಡಬೇಕು. ತಂಬಾಕು ಉತ್ಪನ್ನಗಳ ಪಟ್ಟಿ ಮಾಡಲಾದ ಮತ್ತು ಪಟ್ಟಿ ಮಾಡದ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಸಮಗ್ರ ಡೇಟಾಬೇಸ್ ಅನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಧೂಮಪಾನಿಗಳಿಗೆ ಶಿಕ್ಷಣ ನೀಡಲು, ತಂಬಾಕು ಬಳಕೆಯ ಬಗ್ಗೆ ಇರುವ ಮಿಥ್ಯೆಗಳನ್ನು ಹೋಗಲಾಡಿಸಲು ರಾಷ್ಟ್ರವ್ಯಾಪಿ ಸಮೂಹ ಮಾಧ್ಯಮ ಪ್ರಚಾರಕ್ಕಾಗಿ ಹೂಡಿಕೆಯನ್ನು ಹೆಚ್ಚಳ ಮಾಡಬೇಕು.

ಆರೋಗ್ಯಕರ ಭವಿಷ್ಯಕ್ಕಾಗಿ ವಾಸ್ತವಿಕ ಮತ್ತು ವೈಜ್ಞಾನಿಕ ತಂಬಾಕು ನಿಯಂತ್ರಣ ನೀತಿಗಳನ್ನು ಸುಗಮಗೊಳಿಸಲು ಗ್ರಾಹಕರು, ಉದ್ಯಮಿಗಳು ಮತ್ತು ಸರ್ಕಾರ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Continue Reading

ದೇಶ

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

CoWIN Certificates: ಕೊರೋನಾ ಲಸಿಕೆ ಪ್ರಮಾಣಪತ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕಿದೆ. ಈ ಹಿಂದೆ ಈ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರದ ಜೊತೆಗೆ ಭಾರತ ಒಟ್ಟಾಗಿ ಕೋವಿಡ್‌-19ನನ್ನು ಸೋಲಿಸಲಿದೆ ಎಂಬ ಘೋಷವಾಕ್ಯ ಕಾಣಬಹುದಾಗಿತ್ತು. ಇದೀಗ ಅವರ ಭಾವಚಿತ್ರವನ್ನು ತೆಗೆದು ಹಾಕುವ ಮೂಲಕ ಆರೋಗ್ಯ ಇಲಾಖೆ ಮಹತ್ವದ ಬದಲಾವಣೆ ಮಾಡಿತ್ತು.

VISTARANEWS.COM


on

CoWin Certificates
Koo

ನವದೆಹಲಿ: ಕೋವಿಡ್‌-19(Covid-19) ಲಸಿಕೆಗೆ ನೀಡಲಾಗಿದ್ದ ಕೋವಿನ್‌ ಪ್ರಮಾಣಪತ್ರ(CoWIN Certificates)ಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ(Union Health Ministry) ಮಹತ್ವದ ಬದಲಾವಣೆಯೊಂದನ್ನು ಮಾಡಿದ್ದು, ಪ್ರಮಾಣಪತ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಭಾವಚಿತ್ರವನ್ನು ತೆಗೆದುಹಾಕಿದೆ. ಈ ಹಿಂದೆ ಈ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರದ ಜೊತೆಗೆ ಭಾರತ ಒಟ್ಟಾಗಿ ಕೋವಿಡ್‌-19ನನ್ನು ಸೋಲಿಸಲಿದೆ ಎಂಬ ಘೋಷವಾಕ್ಯ ಕಾಣಬಹುದಾಗಿತ್ತು. ಇದೀಗ ಅವರ ಭಾವಚಿತ್ರವನ್ನು ತೆಗೆದು ಹಾಕುವ ಮೂಲಕ ಆರೋಗ್ಯ ಇಲಾಖೆ ಮಹತ್ವದ ಬದಲಾವಣೆ ಮಾಡಿತ್ತು.

ಈ ಮಹತ್ವದ ಬದಲಾವಣೆ ಬಗ್ಗೆ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆ ಆಗುತ್ತಿದ್ದು, ಕೋವಿನ್‌ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ಮೋದಿಯ ಭಾವಚಿತ್ರ ಮಾಯವಾಗಿದೆ. ಬೇಕಿದ್ದರೆ ಡೌನ್‌ಲೋಡ್‌ ಮಾಡಿ ಚೆಕ್‌ ಮಾಡಿ ಎಂದು ಎಕ್ಸ್‌ ಬಳಕೆದಾರ ಸಂದೀಪ್‌ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾದ ಇರ್ಫಾನ್‌ ಅಲಿ ಟ್ವೀಟ್‌ ಮಾಡಿದ್ದು, ಹೌದು ಪ್ರಧಾನಿ ಮೋದಿ ಫೋಟೋ ಪ್ರಮಾಣ ಪತ್ರದಲ್ಲಿ ಇಲ್ಲ. ಅದರ ಬದಲು ಅಲ್ಲಿ ಕ್ಯೂ ಆರ್‌ ಕೋಡನ್ನು ಕಾಣಬಹುದಾಗಿದೆ. ಇನ್ನು ಈ ಹಿಂದೆಯೇ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ ಮತ್ತು ಗೋವಾದಲ್ಲಿ ಪ್ರಧಾನಿ ಮೋದಿಯ ಭಾವಚಿತ್ರವನ್ನು ಪ್ರಮಾಣಪತ್ರದಿಂದ ತೆಗೆದುಹಾಕಲಾಗಿತ್ತು. ಇನ್ನು ಈ ಬಗ್ಗೆ ಸ್ವತಃ ಆರೋಗ್ಯ ಇಲಾಖೆ ಪ್ರತಿಕ್ರಿಯಿಸಿದ್ದು, ಕೋವಿನ್‌ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ತೆಗೆದು ಹಾಕಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅವರ ಫೋಟೋ ತೆಗೆದುಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಇನ್ನು ಮತ್ತೊಂದೆಡೆ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಳ್ಳುವ ಮೂಲಕ ಜನರನ್ನು ಆತಂಕಕ್ಕೆ ತಳ್ಳಿತ್ತು. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದರು.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಇದನ್ನೂ ಓದಿ:Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

ಇನ್ನು ಜನರನ್ನು ಆತಂಕಕ್ಕೀಡು ಮಾಡಿರುವ ಈ ವಿಚಾರದ ಬಗ್ಗೆ ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ಕೊರೊನಾ ವೈರಸ್‌ಎದುರಿಸಲು ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಿದ್ದಾರೆ. ಮೊದಲ ಡೋಸ್ ಅನ್ನು ಪಡೆದಾಗ ಅಡ್ಡ ಪರಿಣಾಮದ ರಿಸ್ಕ್‌ ಅತ್ಯಧಿಕವಾಗಿರುತ್ತದೆ. ಆದರೆ ಎರಡನೇ ಡೋಸ್‌ನೊಂದಿಗೆ ಕಡಿಮೆಯಾಗುತ್ತದೆ; ಮೂರನೆಯದರೊಂದಿಗೆ ಮತ್ತೂ ಕಡಿಮೆಯಾಗುತ್ತದೆ. ಅಡ್ಡ ಪರಿಣಾಮ ಸಂಭವಿಸುವುದಾದಲ್ಲಿ, ಲಸಿಕೆ ಪಡೆದ ಎರಡು ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ” ಎಂದು ಗಂಗಾಖೇಡ್ಕರ್ ತಿಳಿಸಿದ್ದಾರೆ


Continue Reading

ಆರೋಗ್ಯ

Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

ಲೋಳೆಸರಕ್ಕೆ (Aloe Vera Benefits) ಚರ್ಮವನ್ನು ತಂಪಾಗಿಸುವ ಮತ್ತು ತೇವ ಹೆಚ್ಚಿಸುವ ಗುಣಗಳಿವೆ. ಹಾಗಾಗಿಯೇ ಹಲವಾರು ಸ್ಕಿನ್‌ಕೇರ್‌ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಬಿಸಿಲಿಗೆ ಸುಟ್ಟಂತಾದರೆ, ಮೊಡವೆಯ ತೊಂದರೆಗೆಲ್ಲ ಇದನ್ನು ಔಷಧಿಯಾಗಿ ಬಳಸಬಹುದು. ಈ ಬೇಸಿಗೆಯಲ್ಲಿ ಅಲೋವೇರ ಹೇಗೆ ಬಳಸಬಹುದು? ಈ ಬಗ್ಗೆ ಇಲ್ಲಿದೆ (Aloe Vera Benefits) ಮಾಹಿತಿ.

VISTARANEWS.COM


on

Aloe Vera face mask
Koo

ಬೇಸಿಗೆಯಲ್ಲಿ ಸೆಕೆಗೆ ಮುಖವೆಲ್ಲ ಕೆಂಪಾಗಿ, ಬೆವರುಸಾಲೆಯಾಗಿ ಒದ್ದಾಡುವವರೇ ಹೆಚ್ಚು. ದುಬಾರಿ ಬೆಲೆಯ ಕ್ರೀಮುಗಳನ್ನು ಹಣ ತೆತ್ತು ತಂದು ಉಪಯೋಗಿಸಿದರೂ, ಪ್ರಯೋಜನ ಕಾಣದಿದ್ದಾಗ… ಹೊಸದನ್ನು ಹುಡುಕುತ್ತೇವೆ. ಇವೆಲ್ಲ ಸರ್ಕಸ್‌ ಮಾಡುವ ಬದಲು, ಸರಳವಾಗಿ ಅಲೋವೇರಾ ಅಥವಾ ಲೋಳೆಸರ ಉಪಯೋಗಿಸಿ ನೋಡಬಹುದು. ಸಾವಿರಾರು ವರ್ಷಗಳಿಂದ ಸೌಂದರ್ಯವರ್ಧಕವಾಗಿ ಇದು ಬಳಕೆಯಲ್ಲಿದೆ. ಹಲವು ರೀತಿಯ ವಿಟಮಿನ್‌ಗಳು, ಅಮೈನೊ ಆಮ್ಲಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಲೋಳೆಸರವನ್ನು ಉಪಯೋಗಿಸಿಕೊಂಡು ಹಲವು ರೀತಿಯ ಫೇಸ್‌ ಮಾಸ್ಕ್‌ಗಳನ್ನು ಮಾಡಬಹುದು. ಬಿಸಿಲಿನಲ್ಲಿ ಸುಟ್ಟ ಬದನೆಕಾಯಿಯಂತಾಗುವ ಚರ್ಮಕ್ಕೆ ಹೊಸ ಕಾಂತಿಯನ್ನು ತುಂಬಬಹುದು. ಇಲ್ಲಿವೆ (Aloe Vera Benefits) ವಿವರಗಳು.

Aloe Vera Benefits

ಲೋಳೆಸರವೇ ಏಕೆ?

ಇದಕ್ಕೆ ಚರ್ಮವನ್ನು ತಂಪಾಗಿಸುವ ಮತ್ತು ತೇವ ಹೆಚ್ಚಿಸುವ ಗುಣಗಳಿವೆ. ಹಾಗಾಗಿಯೇ ಹಲವಾರು ಸ್ಕಿನ್‌ಕೇರ್‌ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಬಿಸಿಲಿಗೆ ಸುಟ್ಟಂತಾದರೆ, ಮೊಡವೆಯ ತೊಂದರೆಗೆ, ಸೋರಿಯಾಸಿಸ್‌ ಮತ್ತು ಎಕ್ಸಿಮಾದಂಥ ಚರ್ಮರೋಗಗಳಲ್ಲಿ ಇದು ಔಷಧಿಯಾಗಿ ಬಳಕೆಯಾಗುತ್ತಿದೆ. ಇದರೊಳಗಿರುವ ನೈಸರ್ಗಿಕ ಜೆಲ್‌ನಂಥ ವಸ್ತುವನ್ನು ಬಹಳಷ್ಟು ಔಷಧಿಗಳಲ್ಲಿ ಬಳಸಲಾಗುತ್ತದೆ. ಈ ಜೆಲ್‌ ಉಪಯೋಗಿಸಿಕೊಂಡು ಹಲವು ಫೇಸ್‌ಮಾಸ್ಕ್‌ಗಳನ್ನು ನಾವೇ ಮಾಡಿಕೊಳ್ಳಬಹುದು.

aloe vera cucumber

ಲೋಳೆಸರ-ಸೌತೇಕಾಯಿ ಮಾಸ್ಕ್‌

ಎರಡು ಚಮಚದಷ್ಟು ಲೋಳೆಸರ್‌ ಜೆಲ್‌ಗೆ ಒಂದು ಚಮಚದಷ್ಟು ಸೌತೇಕಾಯಿ ರಸ ಸೇರಿಸಿ. ಅರ್ಧ ಚಮಚ ಜೇನುತುಪ್ಪವನ್ನೂ ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್‌ನಂತೆ ಲೇಪಿಸಿ. ೨೦ ನಿಮಿಷಗಳ ನಂತರ ತಣ್ಣೀರಲ್ಲಿ ತೊಳೆಯಿರಿ. ಚರ್ಮ ಬಿಸಿಲಿಗೆ ಸುಟ್ಟು ಕೆಂಪಾಗಿದ್ದರೆ, ಇದು ತ್ವರಿತವಾಗಿ ಆರಾಮ ನೀಡುತ್ತದೆ.

ಲೋಳೆಸರ-ನಿಂಬೆ ಮಾಸ್ಕ್‌

ಎರಡು ಚಮಚ ಅಲೋವೇರ ಜೆಲ್‌, ಆರೆಂಟು ಹನಿಗಳಷ್ಟು ನಿಂಬೆ ರಸ, ಚಿಟಿಕೆ ಅರಿಶಿನ, ಒಂದು ಚಮಚದಷ್ಟು ಹಾಲಿನ ಕೆನೆ. ಇದನ್ನು ಚೆನ್ನಾಗಿ ಕಲೆಸಿ, ಮುಖಕ್ಕೆ ಲೇಪಿಸಿ. 20 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಿರಿ. ಬೆವರಿನಿಂದ ಕಳೆಗುಂದಿದ್ದಂಥ ಚರ್ಮಕ್ಕೆ ಈ ಮಾಸ್ಕ್‌ ಹೊಸ ಕಳೆಯನ್ನು ನೀಡುತ್ತದೆ.

ಮೊಸರು-ಅಲೋವೇರ ಮಾಸ್ಕ್‌

2 ಚಮಚ ಅಲೋವೇರ ಜೆಲ್‌ನೊಂದಿಗೆ ಒಂದು ಚಮಚ ಮೊಸರು, ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ, ಮುಖಕ್ಕೆ ಲೇಪಿಸಿ. ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಬಿಸಿಲು ಅತಿಯಾಗಿ ಸೋಕಿದಾಗ ಚರ್ಮ ಸುಕ್ಕಾದಂತಿದ್ದರೆ, ಈ ಮಾಸ್ಕ್‌ ಸುಕ್ಕು ನಿವಾರಣೆಗೆ ನೆರವಾಗುತ್ತದೆ.

Multani Mitti and aloe vera

ಮುಲ್ತಾನಿ ಮಿಟ್ಟಿ ಜೊತೆಗೆ

2 ಚಮಚ ಅಲೇವೇರದ ಜೊತೆಗೆ ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿ, ಕೆಲವು ಹನಿಗಳಷ್ಟು ಟೀಟ್ರೀ ತೈಲವನ್ನು ಬೆರೆಸಿ ಮುಖಕ್ಕೆ ಲೇಪಿಸಿ. 20 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ. ಇದು ಮುಖದಲ್ಲಿ ಬೆವರಿನಿಂದ ಜಮೆಯಾದ ಕೊಳೆಯನ್ನು ತೆಗೆದು, ಚರ್ಮ ಉಸಿರಾಡುವಂತೆ ಮಾಡುತ್ತದೆ.

pudina and aloe vera

ಅಲೋವೇರ-ಪುದೀನಾ ಮಾಸ್ಕ್‌

ಅರ್ಧ ಚಮಚ ಪುದೀನಾ ಪೇಸ್ಟ್‌ಗೆ 2 ಚಮಚ ಅಲೋವೇರ ಜೆಲ್‌ ಸೇರಿಸಿ. ಇದಕ್ಕೆ ಒಂದು ಚಮಚ ಗುಲಾಬಿ ಜನ ಬೆರೆಸಿ, ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ತಣ್ಣೀರಲ್ಲಿ ತೊಳೆಯಿರಿ. ಮುಖವನ್ನು ತಾಜಾ ಆಗಿಸಿ, ತ್ವಚೆಗೆ ಹೊಸ ಕಾಂತಿಯನ್ನಿದು ನೀಡುತ್ತದೆ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

Continue Reading

ಆರೋಗ್ಯ

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ಬೇಸಿಗೆಯ ದಾಹ ಇಂಗಿಸಿ, ಬಿಸಿಲಿನ ತಾಪದಲ್ಲೂ ದೇಹವನ್ನು ತಂಪಾಗಿಸಿ, ಬಳಲಿದವರಿಗೆ ಚೈತನ್ಯ ನೀಡುವ ಈ ಎಳನೀರು ಬೇಸಿಗೆಯ ಜೀವಜಲ. ಬಿಸಿಲಿಗೆ ಬಸವಳಿದಾಗ ತಂಪಾದ ಎಳನೀರೊಂದು ಸಿಕ್ಕಿಬಿಟ್ಟರೆ? ಮರಳುಗಾಡಿನಲ್ಲಿ ಜೀವಜಲ ಸಿಕ್ಕಂತಾಗುತ್ತದೆ. ಇಂತಹ ಎಳನೀರಿನಲ್ಲಿ ಇರುವ ಸತ್ವಗಳೇನು? ಏನೆಲ್ಲ ಲಾಭಗಳಿವೆ ಅದನ್ನು ಹೀರುವುದರಿಂದ? ಈ ಕುರಿತ ಮಾಹಿತಿ (Benefits of Tender Coconut) ಇಲ್ಲಿದೆ.

VISTARANEWS.COM


on

Benefits of Tender Coconut
Koo

ಬಿಸಿಲು ಜೋರಾಗುತ್ತಿದ್ದಂತೆ ಎಲ್ಲೆಡೆ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಬೆಳಗ್ಗೆ ರಾಶಿ ಹಾಕಿದಂತೆ ಕಾಣುವ ಎಳನೀರು ಮಧ್ಯಾಹ್ನ ಎನ್ನುವಷ್ಟರಲ್ಲಿ ಬರಿದಾಗಿರುತ್ತದೆ. ಸಂಜೆಯ ಹೊತ್ತಿಗೆ ಬೇಕೆಂದರೂ ಸಿಗುವುದು ಕಷ್ಟ ಎನ್ನುವಂತಾಗುತ್ತದೆ. ಬೇಸಿಗೆಯ ದಾಹ ಇಂಗಿಸಿ, ಬಿಸಿಲಿನ ತಾಪದಲ್ಲೂ ದೇಹವನ್ನು ತಂಪಾಗಿಸಿ, ಬಳಲಿದವರಿಗೆ ಚೈತನ್ಯ ನೀಡುವ ಈ ಎಳನೀರು ಬೇಸಿಗೆಯ ಜೀವಜಲ ಎಂದರೆ ಹೆಚ್ಚಲ್ಲ. ಕುಡಿಯುತ್ತಿದ್ದಂತೆ ಆರಾಮ ನೀಡುವ ಈ ಎಳನೀರಿನಲ್ಲಿ ಏನುಂಟು? ಇದನ್ನು ಕುಡಿಯುವುದರಿಂದ ದೇಹಕ್ಕಾಗುವ (Benefits of Tender Coconut) ಲಾಭಗಳೇನು?

Tender Coconut Water Weight Loss Drink

ಸತ್ವಗಳೇನು?

ಸುಮಾರು ಕಾಲು ಲೀ. ಎಳನೀರಿನಲ್ಲಿ 60 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೊತೆಗೆ, 15 ಗ್ರಾಂ ಪಿಷ್ಟ, 8 ಗ್ರಾಂ ಸಕ್ಕರೆ, ನಿತ್ಯ ದೇಹಕ್ಕೆ ಬೇಕಾದ ಶೇ. 15ರಷ್ಟು ಪೊಟಾಶಿಯಂ, ಅದೇ ಪ್ರಮಾಣದಲ್ಲಿ ಶೇ. 4ರಷ್ಟು ಕ್ಯಾಲ್ಶಿಯಂ, ಶೇ. 4ರಷ್ಟು ಮೆಗ್ನೀಶಿಯಂ, ಶೇ. 2ರಷ್ಟು ಫಾಸ್ಫರಸ್‌ ಮುಖ್ಯವಾಗಿ ದೊರೆಯುತ್ತದೆ.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರ ಮಾಡುತ್ತವೆ. ಉರಿಯೂತ ಶಮನ ಮಾಡುವುದೇ ಅಲ್ಲದೆ, ಕೊಲೆಸ್ಟ್ರಾಲ್‌ ಮಟ್ಟವನ್ನು ತಗ್ಗಿಸುವ ಸಾಮರ್ಥ್ಯ ಇದಕ್ಕಿದೆ ಎನ್ನುತ್ತವೆ ಕೆಲವು ಅಧ್ಯಯನಗಳು. ದೇಹದಲ್ಲಿನ ಮುಕ್ತ ಕಣಗಳನ್ನು ನಿರ್ಬಂಧಿಸುವದರ ಜೊತೆಗೆ, ಇನ್‌ಸುಲಿನ ಚೋದಕದ ಪ್ರತಿರೋಧವನ್ನು ತಗ್ಗಿಸುವ ಸಾಧ್ಯತೆ ಇದಕ್ಕಿದೆ.

heart attack and Diabetes control

ಮಧುಮೇಹ

ಪ್ರಾಣಿಗಳ ಮೇಲೆ ನಡೆಸಲಾದ ಕೆಲವು ಅಧ್ಯಯನಗಳಲ್ಲಿ, ಮಧುಮೇಹ ನಿಯಂತ್ರಣಕ್ಕೆ ಎಳನೀರು ಪೂರಕ ಎಂಬ ಅಂಶ ಕಂಡುಬಂದಿದೆ. ಇನ್‌ಸುಲಿನ್‌ ಪ್ರತಿರೋಧವನ್ನು ತಗ್ಗಿಸಿದ್ದು ಮಾತ್ರವಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಳನೀರು ಎನ್ನುತ್ತವೆ ಈ ಅಧ್ಯಯನಗಳು. ಆದರೆ ಮಾನವರ ಮೇಲಿನ ಇಂಥ ಪ್ರಯೋಗಗಳ ಮೂಲಕ ಇದನ್ನು ದೃಢಪಡಿಸಿಕೊಳ್ಳಬೇಕಿದೆ.

Urology and Treatment of Kidney Diseases Closeup

ಕಿಡ್ನಿ ಕಲ್ಲು

ಮೂತ್ರಕೋಶದಲ್ಲಿ ಹರಳುಗಳಾದರೆ ಅತೀವ ನೋವು ತರುತ್ತದೆ. ದೇಹಕ್ಕೆ ಸಾಕಷ್ಟು ನೀರುಣಿಸುವುದು, ಆ ಮೂಲಕ ಬೇಡದ್ದನ್ನು ಹೊರಹಾಕಲು ಮೂತ್ರಕೋಶಗಳಿಗೆ ನೆರವಾಗುವುದು ಮುಖ್ಯವಾದ ಸಂಗತಿ. ನಿಯಮಿತವಾಗಿ ಎಳನೀರು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಪ್ರಮಾಣವನ್ನು ತಗ್ಗಿಸಬಹುದು. ಅಂದರೆ ದೇಹದಲ್ಲಿ ಪೊಟಾಶಿಯಂ, ಕ್ಲೋರೈಡ್‌ ಮತ್ತು ಸಿಟ್ರೇಟ್‌ಗಳು ಅಧಿಕ ಪ್ರಮಾಣದಲ್ಲಿ ಜಮೆಯಾಗದಂತೆ ಸ್ವಚ್ಛ ಮಾಡುತ್ತದೆ.

Heart Health Fish Benefits

ಹೃದಯಕ್ಕೆ ಪೂರಕ

ರಕ್ತದ ಒತ್ತಡ ಹೆಚ್ಚದಂತೆ ತಡೆಯುವ ಸಾಧ್ಯತೆ ಎಳನೀರಿಗಿದೆ. ಇದರಲ್ಲಿ ಹೇರಳವಾಗಿರುವ ಪೊಟಾಶಿಯಂ ಅಂಶವೇ ಇದಕ್ಕೆ ಕಾರಣ. ಮಾತ್ರವಲ್ಲ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಅಂಶವನ್ನು ತಗ್ಗಿಸುವ ಸಾಮರ್ಥ್ಯ ಎಳನೀರಿಗಿದೆ ಎನ್ನುತ್ತವೆ ಕೆಲವು ಅಧ್ಯಯನಗಳು. ಆದರೆ ಅಧ್ಯಯನದಲ್ಲಿ ಇದಕ್ಕಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಸೇವಿಸುವಂತೆ ಮಾಡಲಾಗಿತ್ತು. ಅದನ್ನು ಸಾಮಾನ್ಯ ಸಂದರ್ಭಗಳಲ್ಲಿ ಸಮೀಕರಿಸುವುದು ಕಷ್ಟವಾದರೂ, ಹೃದಯದ ಆರೋಗ್ಯಕ್ಕೆ ಪೂರಕವಂತೂ ಹೌದು.

Coconut water Foods For Fight Against Dengue Fever

ರುಚಿಕರ ಪಾನೀಯ

ಬೇಸಿಗೆಯೆಂಬ ನೆವಕ್ಕೆ ದಿನವಿಡೀ ನೀರನ್ನೇ ಕುಡಿಯುತ್ತಿರಲು ಸಾಧ್ಯವಿಲ್ಲ. ಪೌಷ್ಟಿಕವಾದ ಇನ್ನೇನಾದರೂ ಬೇಕಾಗುತ್ತದೆ. ಅದು ರುಚಿಕಟ್ಟಾಗಿಯೂ ಇದ್ದರೆ, ಶರೀರಕ್ಕೆ ನೀರುಣಿಸುವುದು ಕಷ್ಟವಾಗುವುದಿಲ್ಲ. ಸೆಕೆ ತೀವ್ರವಾದಾಗ, ಬಿಸಿಲಲ್ಲಿ ದಣಿದಾಗ, ವ್ಯಾಯಾಮ ಮಾಡಿ ಸುಸ್ತಾದಾಗ… ಹೀಗೆ ಹಲವು ಸಂದರ್ಭಗಳಲ್ಲಿ ದೇಹಕ್ಕೆ ಬೇಕಾದ ಎಲೆಕ್ಟ್ರೋಲೈಟ್‌ಗಳನ್ನು ಎಳನೀರು ಒದಗಿಸಿ, ಪೋಷಿಸುತ್ತದೆ.

ಇದನ್ನೂ ಓದಿ: Leg Swelling: ಪ್ರಯಾಣಿಸುವಾಗ ನಮ್ಮ ಕಾಲುಗಳು ಊದಿಕೊಳ್ಳುವುದೇಕೆ?

ನೈಸರ್ಗಿಕ

ದೇಹಕ್ಕೆ ಎಲೆಕ್ಟ್ರೊಲೈಟ್‌ಗಳನ್ನು ಒದಗಿಸಿ ಕೊಡುವ ಅತ್ಯಂತ ನೈಸರ್ಗಿಕ ವಿಧಾನವಿದು. ಕೃತಕ ಹೆಲ್ತ್‌ಡ್ರಿಂಕ್‌ಗಳಲ್ಲಿನ ಹೆಚ್ಚುವರಿ ಸಕ್ಕರೆಯ ಗೋಜು ಇದರಲ್ಲಿಲ್ಲ. ಸೇರಿಸಿದ ಬಣ್ಣ, ರುಚಿಯ ಗೊಡವೆಯೂ ಇಲ್ಲ. ಎಕ್ಸ್‌ಪೈರಿ ಯಾವತ್ತು ಎಂದು ನೋಡುವ ರಗಳೆಯಿಲ್ಲ. ತಾಜಾ ಎಳನೀರನ್ನು ತೆಗೆಸಿದರಾಯ್ತು, ಕಡಿದರಾಯ್ತು. ಸಂತೋಷಗೊಂಡ ದೇಹ ನಮಗೊಂದು ಥ್ಯಾಂಕ್ಸ್‌ ಹೇಳುತ್ತದೆ.

Continue Reading
Advertisement
Google Layoff
ವಿದೇಶ13 seconds ago

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Tobacco use
ಆರೋಗ್ಯ1 min ago

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Jammu Tour
ಪ್ರವಾಸ9 mins ago

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Uma Ramanan dies in Chennai
ಕಾಲಿವುಡ್18 mins ago

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

CoWin Certificates
ದೇಶ33 mins ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

PBKS vs CSK
ಕ್ರೀಡೆ36 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್45 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ52 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ56 mins ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Best Courses After SSLC
ಶಿಕ್ಷಣ60 mins ago

Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಎಸ್ ಎಸ್ ಎಲ್ ಸಿ ನಂತರ ಯಾವುದು ಉತ್ತಮ ಆಯ್ಕೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌