Veer Savarkar | ವೀರ ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದೇಕೆ? - Vistara News

ಕರ್ನಾಟಕ

Veer Savarkar | ವೀರ ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದೇಕೆ?

ಸ್ವಾತಂತ್ರ್ಯ ವೀರ ಸಾವರ್ಕರ್‌ ಕುರಿತು ಅನೇಕ ಚರ್ಚೆ, ವಿವರಣೆಗಳ ನಂತರವೂ ವಿವಾದಗಳು ಮುಂದುವರಿದಿವೆ. ಈ ಕುರಿತು ಸ್ಪಷ್ಟತೆ ನೀಡುವ ಮತ್ತೊಂದು ಪ್ರಯತ್ನವನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾಡಿದ್ದಾರೆ. ಅವರು ಬರೆದಿರುವ ʼವೀರ ಸಾವರ್ಕರ್‌: ಸಾಹಸ, ಯಾತನೆ, ಅವಮಾನʼ ಕೃತಿಯ ಪೂರ್ಣಪಠ್ಯ ಇಲ್ಲಿದೆ.

VISTARANEWS.COM


on

savarkar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್ಯದಲ್ಲೀಗ ವೀರ ಸಾವರ್ಕರ್‌ ಹೆಸರು ಭಾರಿ ಸುದ್ದಿಯಲ್ಲಿದೆ. ಸಾವರ್ಕರ್‌ ಸ್ವಾತಂತ್ರ್ಯ ವೀರ ಎಂದು ಬಿಜೆಪಿಯವರು ಅಭಿಯಾನ ನಡೆಸುತ್ತಿದ್ದರೆ, ಕಾಂಗ್ರೆಸ್‌ ಮುಖಂಡರು ಸಾವರ್ಕರ್‌ ಹೇಡಿ ಎಂದು ಟೀಕಿಸುತ್ತಿದ್ದಾರೆ. ಈ ನಡುವೆ ಚಕ್ರವರ್ತಿ ಸೂಲಿಬೆಲೆ ಅವರು ಸಾವರ್ಕರ್‌ ಕುರಿತ ಕಿರು ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿನ ಸಂಗತಿಗಳ ಬಗ್ಗೆ ಭಾರಿ ಕುತೂಹಲ ಮೂಡಿದೆ. ಇಷ್ಟಕ್ಕೂ ಈ ಪುಸ್ತಕದಲ್ಲಿ ಏನಿದೆ?

ಕರಿನೀರ ಶಿಕ್ಷೆ: ನರಕವನ್ನೂ ಸ್ವರ್ಗವಾಗಿಸಿದ ಸಾಹಸಗಾಥೆ!

1960ಕ್ಕೆ ನನ್ನ ಬಿಡುಗಡೆಯಾಗುತ್ತದೆ ಎಂಬುದನ್ನು ಕೇಳಿ ಯಮುನಾ ದಂಗುಬಡಿದು ಹೋಗಿದ್ದಳು. ಆಗಿನ್ನೂ 1910ರ ಮಧ್ಯಭಾಗ ಅಷ್ಟೆ. ಇನ್ನೂ ಪೂರ್ಣ ಐವತ್ತು ವರ್ಷಗಳ ಕಾಲ ತಾನು ಕೈಹಿಡಿದ ಗಂಡನನ್ನು ಸರಳುಗಳ ಹಿಂದೆಯೇ ಕಾಣಬೇಕಲ್ಲ ಎಂಬುದು ಅವಳ ಆತಂಕ. ಆಗಿನ್ನೂ ಅಂಡಮಾನ್‌ಗೆ ನನ್ನನ್ನು ಕಳಿಸಿರಲಿಲ್ಲ. ಥಾಣೆಯ ಜೈಲಿನಲ್ಲೇ ಇದ್ದೆ. ನನಗೆ ಕೈದಿಯ ಬಟ್ಟೆ ಕೊಡಲಾಗಿತ್ತು. ಕಳೆದ ವರ್ಷ ಇದೇ ವೇಳೆ ನಾನು ಲಂಡನ್ನಿನಲ್ಲಿ ಸೂಟು, ಕೋಟು ತೊಟ್ಟು ಮಿರಮಿರ ಮಿಂಚುತ್ತಿದ್ದೆ. ಇಂದು ಸರಳುಗಳ ಹಿಂದೆ ಒಬ್ಬಂಟಿ. ಅಚಾನಕ್ಕಾಗಿ ಯಮುನಾಳನ್ನು ಕಂಡೊಡನೆ ಎದೆ ಝಲ್ಲೆಂದಿತು. ಆಕೆಯ ದುಃಖದ ಕಟ್ಟೆ ಒಡೆದು ಕಣ್ಣೀರಾಗಿ ಹರಿದು ಹೋಗುತ್ತಲೇ ಇತ್ತು.

ನಾನೇ ಸಮಾಧಾನ ಮಾಡಿದೆ. ನಾನು “ಅದೇ ಹಳೆಯ ವ್ಯಕ್ತಿ, ಬಟ್ಟೆ ಬದಲಾಗಿದೆ ಅಷ್ಟೆ. ಇಲ್ಲಿನ ಚಳಿಯನ್ನು ತಡೆದುಕೊಳ್ಳಲು ಈ ಬಟ್ಟೆ ಸೂಕ್ತ ಎಂದು ಕೊಟ್ಟಿದ್ದಾರೆ ಅಷ್ಟೆ’ ಎಂದು ಸಾಂತ್ವನ ಹೇಳುವ ಪ್ರಯತ್ನ ಮಾಡಿದೆ. ಆಕೆ ಮತ್ತಷ್ಟು ಅತ್ತಳು. ಅತ್ತ ಆಕೆ ಹೊರಡುತ್ತಿದ್ದಂತೆ ಇತ್ತ ಸೆಲ್‌ನಲ್ಲಿ ಗೂಡುಕಟ್ಟಿದ್ದ ಪಾರಿವಾಳಗಳು ಅರಚಾಡುತ್ತಿದ್ದವು. ಆಹಾರ ತರಲೆಂದು ಹೊರಟ ತಾಯಿ ಪಾರಿವಾಳ ಆಗಂತುಕನ ಗುಂಡಿಗೆ ಬಲಿಯಾಗಿತ್ತು. ಆಸರೆಯಿಲ್ಲದೆ, ಭರವಸೆಯೂ ಇಲ್ಲದೇ ನರಳುತ್ತಿರುವ ಪಾರಿವಾಳಗಳನ್ನು ಕಂಡು ನನಗೆ ನನ್ನ ಮನೆ ನೆನಪಾಯ್ತು. ಹೆಂಡತಿ, ಅತ್ತಿಗೆ ಎಷ್ಟು ಕಣ್ಣೀರಿಡುತ್ತಿರಬಹುದು ಎಂಬುದು ಮನಸ್ಸಿಗೆ ಬರುತ್ತಿದ್ದಂತೆ ದುಃಖದ ಕಟ್ಟೆ ಒಡೆಯಿತು. ಮನಸಾರೆ ಅತ್ತುಬಿಟ್ಟೆ.

1911 ಜೂನ್ 25. ಎಸ್ ಎಸ್ ಮಹಾರಾಜ ಎಂಬ ಹಡಗು ಈ ಮಹಾರಾಜನನ್ನು ಹೊತ್ತೊಯ್ಯಲು ಸಿದ್ಧವಾಗಿ ನಿಂತಿತ್ತು. ಕೆಲವರ ಕಂಗಳಲ್ಲಿ ಐವತ್ತು ವರ್ಷಗಳ ಜೀವಾವಧಿ ಶಿಕ್ಷೆ ಪಡೆದ ನಾನು ಮಹಾರಾಜ ಎನಿಸಿಕೊಂಡಿದ್ದೆ. ಬಹುತೇಕರು ನನ್ನ ಈ ನನ್ನ ಈ ಅಂಡಮಾನ್ ಯಾತ್ರೆಯನ್ನು ಅಂತಿಮಯಾತ್ರೆ ಎಂಬಂತೆ ಕಾಣುತ್ತಿದ್ದರು. ಅಂಡಮಾನಿನ ಜೈಲು ಹಾಗೆಯೇ, ಅನ್ವರ್ಥವಾಗುವಂತೆ ಕಾಲಾಪಾನಿ ಎಂಬ ಹೆಸರು ಬೇರೆ. ಅಲ್ಲಿ ನೀರು ಕಪ್ಪು, ಜೊತೆಗೆ ಅಲ್ಲಿಗೆ ಹೋದ ಕೈದಿಗಳ ಬದುಕೂ ಕಾರ್ಗತ್ತಲು. ಇಷ್ಟು ಸುದೀರ್ಘವಾದ ಶಿಕ್ಷೆಯನ್ನು ಪಡೆದು ಹೊರಟಿದ್ದ ರಾಜಕೀಯ ಕೈದಿ ನಾನೊಬ್ಬನೇ ಆಗಿದ್ದೆ. ಸರ್ಕಾರವನ್ನು ಎರಡೆರಡು ಜೀವಾವಧಿ ಶಿಕ್ಷೆಗಳು ಏಕಕಾಲಕ್ಕೆ ನಡೆಯುವಂತೆ ಅವಕಾಶ ಮಾಡಿಕೊಡಬಲ್ಲಿರಾ?’ ಎಂದು ಕೇಳಿಕೊಂಡಿದ್ದೆ.

ಐವತ್ತು ವರ್ಷಗಳ ಶಿಕ್ಷೆಯನ್ನು 25 ವರ್ಷಗಳಲ್ಲಿ ಮುಗಿಸುವ ಧಾವಂತ ಅದು. ನ್ಯಾಯಾಲಯ ತಿರಸ್ಕರಿಸಿತು. ಸುದ್ದಿ ಮುಟ್ಟಿಸಿದ ಜೈಲರ್ ವಿಕೃತವಾದ ನಗೆ ನಕ್ಕಿದ್ದ. ನಾನೇನು ಕಡಿಮೆ ಆಸಾಮಿಯಲ್ಲ. ಪುನರ್ಜನ್ಮ ನಂಬದ ಕ್ರಿಶ್ಚಿಯನ್ ದೊರೆಗಳು ನನಗಾಗಿ ಎರಡು ಜೀವಾವಧಿ ಶಿಕ್ಷೆ ಕೊಟ್ಟಿದ್ದಾರೆಂದರೆ ಹಿಂದೂಧರ್ಮವನ್ನು ಮಾನ್ಯ ಮಾಡಿದಂತೆ ಅಲ್ಲವೇನು? ಸಾರ್ಥಕವಾಯ್ತು ನನ್ನ ಬದುಕು ಎಂದು ಮುಗುಳಕ್ಕೆ ಆತನ ಮುಖಭಾವದಲ್ಲೇ ನನ್ನ ಧಿಮಾಕು ಇನ್ನೂ ಇಳಿದಿಲ್ಲ ಎಂಬುದು ಅವನಿಗೆ ಅರ್ಥವಾದಂತಿತ್ತು.

ಐವತ್ತು ಜನರು ಆರಾಮವಾಗಿ ಕುಳಿತುಕೊಳ್ಳಲಾಗದ ಜಾಗದಲ್ಲಿ ನೂರಾರು ಮಂದಿಯನ್ನು ತುರುಕಿ ಹಡಗಿನಲ್ಲಿ ಒಯ್ಯಲಾಗುತ್ತಿತ್ತು. ನನ್ನನ್ನಂತೂ ಮಲ ವಿಸರ್ಜಿಸುವ ಸ್ಥಳದಲ್ಲೇ ಮಲಗಿಸುತ್ತಿದ್ದರು. ದಿನ ಕಳೆದಂತೆ ಕೆಟ್ಟ ವಾಸನೆಯಿಂದ ಗಾಳಿ-ಬೆಳಕು ಇಲ್ಲದ ಆ ಜಾಗ ಅಸಹ್ಯವಾದ ವಾತಾವರಣವನ್ನು ರೂಪಿಸಿಬಿಟ್ಟಿತ್ತು. ಖುಷಿಯೇನು ಗೊತ್ತೇ? ಯಾತ್ರಿಕರಾಗಿ ಬಂದಿದ್ದ ಕೆಲವು ಬಿಳಿಯರು ಸ್ವಾತಂತ್ರ್ಯಕ್ಕಾಗಿ ನಾನು ಮಾಡಿದ ಹೋರಾಟದ ಅಭಿಮಾನಿಗಳಾಗಿದ್ದರು. ನನ್ನೊಂದಿಗಿದ್ದ ಎಲ್ಲ ಕೈದಿಗಳಿಗೂ ಒಂದು ಹೊತ್ತಿನ ಊಟವನ್ನು ಕೊಟ್ಟು ತಮ್ಮ ಅಭಿಮಾನವನ್ನು ತೋರ್ಪಡಿಸಿದ್ದರು. ಆಗಲೇ ಕೈದಿಗಳಿಗೆ ನನ್ನ ಮೇಲೆ ವಿಶೇಷವಾದ ಗೌರವ ಬಂದಿದ್ದು, ಯಾವ ಗೌರವ ಪಡೆದುಕೊಂಡಾದರೂ ಮಾಡುವುದೇನಿದೆ? ಇನ್ನು ಐವತ್ತು ವರ್ಷಗಳ ಕಾಲ ನನ್ನ ಬದುಕು

ಯಮಯಾತನೆಯದ್ದು ಅಷ್ಟೆ!

ಎಂಟು ದಿನಗಳ ಪ್ರಯಾಣ. ಅಂಡಮಾನಿನ ತೀರದಲ್ಲಿ ಇಳಿದು ಸೆಲ್ಯುಲರ್ ಜೈಲಿನ ಒಳಹೊಕ್ಕೆ, ನಾನೇ ಕೊನೆಯವ. ನಾನು ಒಳ ಹೋಗುತ್ತಿದ್ದಂತೆ ಬಾಗಿಲನ್ನು ಮುಚ್ಚಿಬಿಟ್ಟರು. ಇನ್ನು ನಾನು ಬದುಕಿದ್ದಾಗಲೇ ಅದು ನನಗಾಗಿ ತೆರೆಯುವುದು ಅನುಮಾನ ಎಂಬುದು ನನಗೆ ಗೊತ್ತಾಗಿಬಿಟ್ಟಿತ್ತು ಮತ್ತು ಬ್ರಿಟೀಷರು ನನ್ನನ್ನು ಸುಲಭಕ್ಕೆ ಬಿಡಲಾರರು ಎಂಬುದಕ್ಕೆ ಅವರು ನನ್ನ ಕುತ್ತಿಗೆಗೆ ಇಳಿಬಿಟ್ಟಿದ್ದ ಬಿಲ್ಲೆಯ ಮೇಲೆ ಬರೆಸಿದ್ದ ಡಿ ಎಂಬ ಅಕ್ಷರವೇ ಸಾಕ್ಷಿಯಾಗಿತ್ತು. ಡಿ ಎನ್ನುವುದರ ಅರ್ಥ ಡೇಂಜರ್ ಎಂಬುದು ಅರಿವಾಗಲು ನನಗೆ ಬಹಳ ಸಮಯ ಹಿಡಿಯಲಿಲ್ಲ.

ಸೆಲ್ಯುಲಾರ್ ಜೈಲಿನ ಕ್ರೂರಿ ಅಧಿಕಾರಿ ಬ್ಯಾರಿ, ನನ್ನ ಎದೆಯ ಬಿಲ್ಲೆಯ ಮೇಲೆ 1910 ಮತ್ತು 1960 ಎಂಬ ಎರಡು ಸಂಖ್ಯೆಗಳಿದ್ದವು. “1960ರಲ್ಲಿ ಪರಮದಯಾಳು ಬ್ರಿಟೀಷ್ ಸರ್ಕಾರ ನಿನ್ನನ್ನು ಖಂಡಿತ ಬಿಡುವುದು. ಯೋಚನೆ ಮಾಡಬೇಡ’ ಎಂದು ಬಾಗಿಲಿನಲ್ಲೇ ಬ್ಯಾರಿ ಕಿಚಾಯಿಸಿದ. ಇವತ್ತು ವರ್ಷಗಳ ಕಾಲ ಆತನಧೀನವಾಗಿಯೇ ಬದುಕಿರಬೇಕೆಂಬುದನ್ನು ಆತ ನೆನಪಿಸಿದ ಪರಿ ಅದು. ನಾನೇನು ಕಡಿಮೆ ನೀರು ಕುಡಿದವನಲ್ಲ. ಅಲ್ಲಿಯವರೆಗೂ ಬ್ರಿಟೀಷ್ ಸರ್ಕಾರ ಇರುವುದೆಂಬ ಖಾತ್ರಿ ಇದೆಯೇನು?’ ಎಂದು ಖಡಕ್ಕಾಗಿಯೇ ಪ್ರಶ್ನಿಸಿದೆ. ಬ್ಯಾರಿ ತಣ್ಣೀರು ಮೈಮೇಲೆ ಬಿದ್ದವನಂತಾದ.

ಕಾಲಾಪಾನಿಯ ಒಂದಷ್ಟು ಪರಿಚಯ ನಿಮಗೆ ಮಾಡಿಸಬೇಕು. ಇಲ್ಲಿ ಒಟ್ಟು 698 ಸೆಲ್ಲುಗಳಿವೆ. ಇತರೆ ಜೈಲುಗಳಂತೆ ಬ್ಯಾರಾಕುಗಳಿಲ್ಲ. ಹೀಗಾಗಿ ಇದನ್ನು ಸೆಲ್ಯುಲಾರ್ ಜೈಲ್ ಎಂದು ಕರೆಯಲಾಗುತ್ತದೆ. ಪ್ರತಿ ಸೆಲ್ ಕೂಡ 13.6 ಅಡಿ ಉದ್ದ ಮತ್ತು 7.6 ಅಡಿ ಅಗಲವಿದೆ. ಒಳಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಒಂದು ಕೋಣೆಯಲ್ಲಿರುವ ಕೈದಿಯೊಬ್ಬ ಮತ್ತೊಂದು ಕೋಣೆಯಲ್ಲಿರುವ ಕೈದಿಯೊಂದಿಗೆ ಮಾತನಾಡುವುದು ಹೆಚ್ಚು ಕಡಿಮೆ ಅಸಾಧ್ಯವೆಂಬಂತೆ ಈ ಜೈಲುಗಳನ್ನು ರೂಪಿಸಲಾಗಿದೆ. ನನಗೆ ಏಳನೇ ನಂಬರಿನ ಸೆಲ್ ಅನ್ನು ವ್ಯವಸ್ಥೆ ಮಾಡಿಕೊಡಲಾಯ್ತು. ಇದು ನೇಣಿಗೆ ಹೋಗುವ ಮಂದಿಗೆ ಅತ್ಯಂತ ಹತ್ತಿರವಿರುವ ಸೆಲ್ಲು. ಆ ಮೂಲಕ ಸಾಯುವ ಮಂದಿಯನ್ನು ನೋಡಿ ಮಾನಸಿಕವಾಗಿ ನಾನು ಜರ್ಝರಿತಗೊಳ್ಳಲಿ ಎಂಬುದು ಅಧಿಕಾರಿಗಳ ಬಯಕೆ! ಇಲ್ಲಿನ ವ್ಯವಸ್ಥೆಗಳೂ ಬಲು ವಿಚಿತ್ರ ಸ್ನಾನಕ್ಕೆ ಬಿಸಿನೀರು ಬಿಡಿ, ಶುದ್ಧ ಸಿಹಿನೀರೂ ಇಲ್ಲ. ಸುತ್ತಲೂ ಭೋರ್ಗರೆವ ಸಮುದ್ರವಿತ್ತಲ್ಲ. ಅಲ್ಲಿಂದಲೇ ಸ್ನಾನಕ್ಕೂ ನೀರು ಬರುತ್ತಿತ್ತು.

ಉಪ್ಪುನೀರನ್ನು ಮೈಮೇಲೆ ಹಾಕಿಕೊಂಡು ಜಮಾದಾರ ಹೇಳಿದಂತೆ ಸ್ನಾನ ಮಾಡುವುದು ಬಲುಕಠಿಣ. ಸ್ನಾನ ಮಾಡುವಾಗ ಬೇರೆ ಬಟ್ಟೆಗಳು ಸಿಗುತ್ತಿರಲಿಲ್ಲವಾದ್ದರಿಂದ ಹೆಚ್ಚುಕಡಿಮೆ ನಗ್ನವಾಗಿಯೇ ಸ್ನಾನ ಮಾಡಬೇಕಾಗುತ್ತಿತ್ತು. ಸ್ನಾನದ ವೇಳೆಗೆ ಆತ ಕೊಡುತ್ತಿದ್ದ ಅಂಗೈ ಅಗಲದ ಬಟ್ಟೆ ಯಾವ ಮೂಲೆಯಿಂದಲೂ ಮಾನ ಮುಚ್ಚಿಕೊಳ್ಳಲು ಸಾಕಾಗುತ್ತಿರಲಿಲ್ಲ. ಒಳಗೆ ಬಂದೊಡನೆ ಜನಿವಾರವನ್ನು ತೆಗಿಸಿಬಿಡುತ್ತಿದ್ದರು. ಆದರೆ ಮುಸಲ್ಮಾನರಿಗೆ ಮಾತ್ರ ಎಲ್ಲ ಆಚರಣೆಗಳಿಗೂ ಮುಕ್ತ ಅವಕಾಶವಿತ್ತು. ಸೆಲ್ಲಿನೊಳಗೆ ಶೌಚಾಲಯವಿಲ್ಲದಿದ್ದುದರಿಂದ ಜಮಾದಾರ ಬೆಳಿಗ್ಗೆ ಹೊರಬಿಟ್ಟಾಗಲೇ ಶೌಚಾದಿ ಕ್ರಿಯೆಗಳನ್ನೆಲ್ಲ ಮುಗಿಸಿಕೊಳ್ಳಬೇಕಾಗುತ್ತಿತ್ತು. ಅಪ್ಪಿ ತಪ್ಪಿ ಮತ್ತೊಮ್ಮೆ ಶೌಚಕ್ಕೆ ಹೋಗಬೇಕೆನಿಸಿದರೆ ಅಸಾಧ್ಯವೇ ಆಗಿತ್ತು.

ರಾತ್ರಿ ಸೆಲ್ಲಿನೊಳಗೆ ಹೋದನಂತರ ಹೊಟ್ಟೆಕೆಟ್ಟು ಶೌಚಕ್ಕೆ ಹೋಗಬೇಕೆಂದರೆ ಬದಿಯಲ್ಲಿಟ್ಟಿದ್ದ ಪುಟ್ಟ ಮಡಕೆಯಲ್ಲೇ ಅದನ್ನು ತುಂಬಿಸಬೇಕಾಗುತ್ತಿತ್ತು. ಮಡಕೆ ಎಷ್ಟು ಪುಟ್ಟದ್ದೆಂದರೆ ಒಮ್ಮೆ ಶೌಚಕ್ಕೆ ಹೋದರೆ ಅದು ತುಂಬಿ ಹೋಗುತ್ತಿತ್ತು. ಆನಂತರ ಇಡಿಯ ಸೆಲ್ಲು ಕೊಳಕು. ಜಮಾದಾರ ಅದನ್ನು ನೋಡಿದರೆ ಮರುದಿನ ರಾತ್ರಿಯಿಡೀ ಗೋಡೆಗೆ ತೂಗುಹಾಕಿದ ಬೇಡಿಗಳಿಗೆ ಕೈಗಳನ್ನು ಹಾಕಿ ಕಟ್ಟಿಬಿಡುತ್ತಿದ್ದ. ಅಲ್ಲಿಗೆ ಇಡೀ ರಾತ್ರಿ ನಿಂತಲ್ಲೇ ನಿದ್ದೆ-ಶೌಚ ಎಲ್ಲವೂ!
ಕೈದಿಗಳಿಗೆ ಶಿಕ್ಷೆ ಎಂದರೆ ತೆಂಗಿನ ನಾರನ್ನು ತೆಗೆದು ಅದನ್ನು ಹಗ್ಗವಾಗಿ ಹೊಸೆಯುವುದು. ಈ ಬಗೆಯ ಕಾರ್ಯಗಳ ಅನುಭವವೇ ಇಲ್ಲದಿದ್ದ ನನಗೆ ಆರಂಭದಲ್ಲಿಯೇ ಕೈಗಳು ಬಾತುಕೊಂಡು ರಕ್ತ ಒಸರಲಾರಂಭಿಸಿತು.

ನಿಗದಿತ ಪ್ರಮಾಣದ ಹಗ್ಗ ಹೊಸೆಯದಿದ್ದರೆ ಜಮಾದಾರರ ಕೆಟ್ಟ ಬೈಗುಳಗಳನ್ನು ಕೇಳಬೇಕಾಗುತ್ತಿತ್ತು. ಮತ್ತೆ ರಾತ್ರಿಯಿಡೀ ಸೆಲ್ಲಿನೊಳಗೆ ನಿಂತೇ ಇರುವ ಶಿಕ್ಷೆ. ಹೀಗಾಗಿ ನಾರು ಚರ್ಮವನ್ನು ಸೀಳಿ ರಕ್ತ ಹರಿಯುತ್ತಿದ್ದರೂ ಕೆಲಸ ಮಾಡುವುದನ್ನು ನಿಲ್ಲಿಸುತ್ತಿರಲಿಲ್ಲ. ಬಂದ ಒಂದು ತಿಂಗಳಲ್ಲೇ ನನಗೆ ಗಾಣ ಸುತ್ತುವ ಕೆಲಸ ಕೊಡಲಾಯ್ತು. ಒಣಗಿದ ತೆಂಗಿನ ಕಾಯಿಯನ್ನು ಗಾಣಕ್ಕೆ ಹಾಕಿ ಎತ್ತಿನ ಬದಲು ನಮ್ಮನ್ನು ಹೂಡಲಾಗುತ್ತಿತ್ತು. ಒಂದರೆಕ್ಷಣ ಪುರಸೊತ್ತಿಲ್ಲದೇ ಗಾಣವನ್ನು ಸುತ್ತಿ 30 ಪೌಂಡುಗಳಷ್ಟು ಎಣ್ಣೆ ತೆಗೆಯಬೇಕಾಗುತ್ತಿತ್ತು.

ಹೀಗೆ ಎಣ್ಣೆಯ ಪ್ರಮಾಣ ಕಮ್ಮಿಯಾದರೆ ಮತ್ತೆ ಶಿಕ್ಷೆ ಕಾಯುತ್ತಲೇ ಇರುತ್ತಿತ್ತು. ಅದಕ್ಕೆ ನನ್ನಂತಹ ಅನೇಕರು ಊಟದ ಅವಧಿಯಲ್ಲಿ ದೊರೆಯುತ್ತಿದ್ದ ಒಂದೆರಡು ಗಂಟೆಗಳ ಬಿಡುವನ್ನೂ ಪಕ್ಕಕ್ಕಿಟ್ಟು ಗಾಣ ಸುತ್ತುತ್ತಿದ್ದೆವು. ನನ್ನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಕೆಲವು ರಾಜಕೀಯ ಖೈದಿಗಳು ಮೇಲ್ವಿಚಾರಕರು ಇಲ್ಲದಿರುವ ಸಮಯವನ್ನು ನೋಡಿಕೊಂಡು ನನ್ನ ಬಳಿ ಬಂದು ಗಾಣವನ್ನು ಸುತ್ತಲು ಸಹಾಯ ಮಾಡುತ್ತಿದ್ದರು. ನನ್ನ ಮೇಲಿನ ಗೌರವದಿಂದ ಬಟ್ಟೆಗಳನ್ನು, ಪಾತ್ರೆಗಳನ್ನು ಒಗೆದುಕೊಡಲು ಧಾವಿಸುತ್ತಿದ್ದರು. ನನಗಾದರೋ ಸಹಿಸಲಾಗದಷ್ಟು ಮುಜುಗರ, ನಾನು ಕದ್ದುಮುಚ್ಚಿ ಅವರ ತಟ್ಟೆಯನ್ನೂ ತೊಳೆದಿಟ್ಟು ಮುಜುಗರದಿಂದ ಪಾರಾಗಿಬಿಡುತ್ತಿದ್ದೆ.

ಕಾಲಾಪಾನಿಯ ಊಟದ ಕಥೆ ಕೇಳಲೇಬೇಡಿ. ಪ್ರತಿಯೊಬ್ಬ ಕೈದಿಗೂ ಎರಡೆರಡು ರೊಟ್ಟಿಯನ್ನು ಕೊಡಲಾಗುತ್ತಿತ್ತು. ಅದನ್ನೂ ಕೆಲವು ಸಮಯಸಾಧಕ ಜಮಾದಾರರು ವಂಚಿಸಿ ತಿಂದುಬಿಡುತ್ತಿದ್ದರು. ಊಟಕ್ಕೆಂದು ಬಡಿಸುತ್ತಿದ್ದ ಸಾರಿನ ಕಥೆಯೂ ಅಷ್ಟೇ ಭಯಾನಕವಾದ್ದು. ಬೆಳಗಿನ ಜಾವ ಇನ್ನೂ ಕತ್ತಲೆ ಇರುವಾಗಲೇ ಜೈಲಿನ ಹೊರಗೆ ಸೊಪ್ಪು ತರಲೆಂದು ಹೋಗುತ್ತಿದ್ದ ಕೈದಿಗಳು ಕತ್ತಲಿನಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲ ಕತ್ತರಿಸಿಕೊಂಡು ಬರುತ್ತಿದ್ದರು. ಅನೇಕ ಬಾರಿ ಹಾವು, ಹಲ್ಲಿ, ಹುಳ-ಹುಪ್ಪಟೆಗಳು ಅದರಲ್ಲಿರುತ್ತಿದ್ದವು. ಊಟ ಮಾಡುವಾಗ ಇವುಗಳು ಸಿಕ್ಕರೆ ಅದನ್ನು ಪಕ್ಕಕ್ಕಿಟ್ಟು ತಿನ್ನುತ್ತಿದ್ದೆವು; ಬದುಕಬೇಕಲ್ಲ! ಹಾಗಂತ ಸಾಯಬೇಕು ಎಂದೆನಿಸಲಿಲ್ಲವೆಂದೇನಲ್ಲ.

ಅಲ್ಲಿ ಸುಮಾರು 11 ವರ್ಷಗಳನ್ನು ಕಳೆದೆನಲ್ಲ, ಎರಡು ಬಾರಿ ಸಾಯುವ ಮನಸ್ಥಿತಿ ನನ್ನದಾಗಿಬಿಟ್ಟಿತ್ತು. ಮೊದಲನೆಯ ಬಾರಿಗೆ ಇಂದು ಭೂಷಣರಾಯ್ ನೇಣು ಬಿಗಿದುಕೊಂಡು ತೀರಿಹೋದ ಕೆಲವೇ ದಿನಗಳಲ್ಲಿ ನನಗೆ ದೇಹತ್ಯಾಗವೇ ಈ ಎಲ್ಲ ನೋವುಗಳಿಗೆ ಪರಿಹಾರ ಎನಿಸಿಬಿಟ್ಟಿತ್ತು. ಆಗಿಂದಾಗ್ಗೆ ಅಂತರಂಗ ಕೂಗಿ ಹೇಳಿತು ʼಕೊಲ್ಲುತ್ತಾ ಕೊಲ್ಲುತ್ತಾ ಸಾಯಬೇಕು. ಹೀಗೇ ಸಾಯುವುದರಲ್ಲಿ ಪುರಷಾರ್ಥವೇನಿದೆ?’ ಅಂತ. ನನ್ನ ಆಲೋಚನೆಯನ್ನು ಬದಲಾಯಿಸಿಕೊಂಡೆ. ಮತ್ತೊಮ್ಮೆ ಗಾಣ ಸುತ್ತುವಾಗ ಸಹಿಸಲಸಾಧ್ಯವಾದ ಹೊಟ್ಟೆನೋವು ಬಂದು ದೇಹ ಕುಸಿದುಬಿತ್ತು.

ಕೆಲಸಕ್ಕೆ ಬಾರದ ಈ ದೇಹವನ್ನು ಕಾಪಾಡಿಟ್ಟುಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಸಾಧ್ಯವಾಗದೇ ಹೋದರೆ ಬದುಕಿದ್ದು ಪ್ರಯೋಜನವಾದರೂ ಏನು ಎಂದೆನಿಸಿದರೂ ತಕ್ಷಣ ನನ್ನ ನಾನು ಪ್ರಯೋಗಕ್ಕೊಡ್ಡಿಕೊಂಡೆ. ಮುಂದಿನ 60 ದಿನಗಳಲ್ಲಿ ಎಷ್ಟು ದಿನಗಳ ಅವಧಿಯಲ್ಲಿ ದೇಹ ಬಲಿಷ್ಠವಾಗಿದೆ ಎಂಬುದನ್ನು ಗುರುತು ಹಾಕಿಕೊಂಡೆ. 15 ದಿನಗಳ ಕಾಲ ಅನಾರೋಗ್ಯವಿಲ್ಲದೇ ಸದೃಢನಾಗಿ ಬದುಕಿದ್ದು ಗಮನಕ್ಕೆ ಬಂದಾಗ ರಾಷ್ಟ್ರಕ್ಕೆ ನಾನು ಮಾಡುವುದು ಸಾಕಷ್ಟಿದೆ ಎಂದೆನಿಸಿ ಮತ್ತೆ ಸಾಯುವ ಆಲೋಚನೆ ಕೈಬಿಟ್ಟಿದ್ದೆ.

ನಾನು ಅಂಡಮಾನಿಗೆ ಹೋದ ಹನ್ನೊಂದನೇ ದಿನಕ್ಕೆ ನನ್ನನ್ನು ಏಕಾಂತವಾಸಕ್ಕೆ ದೂಡಿಬಿಟ್ಟರು. ಮುಂದಿನ ಆರು ತಿಂಗಳಕಾಲ ನಾನು ಪೂರ್ಣವಾಗಿ ಒಂಟಿ, ಅಕ್ಕಪಕ್ಕದಲ್ಲಿ ಯಾರಿದ್ದಾರೆ? ಏನು ಮಾಡುತ್ತಿದ್ದಾರೆಜಗತ್ತು ಹೇಗಿದೆ? ಯಾವುದೂ ನನಗೆ ಗೊತ್ತಾಗುತ್ತಿರಲಿಲ್ಲ. ಬೆಳಿಗ್ಗೆ ಬಲುಬೇಗನೇ ಜಮಾದಾರ ಬಂದು ನನ್ನನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದಇತರರೊಡನೆ ಮಾತನಾಡುವುದಿರಲಿ ಅಕ್ಕಪಕ್ಕ ಕಣ್ಣು ಹಾಯಿಸುವಂತೆಯೂ . ತೆಂಗಿನ ನಾರನ್ನು ತಂದು ನಾನಿದ್ದ ಜಾಗಕ್ಕೆ ಸುರಿಯಲಾಗುತ್ತಿತ್ತು. ಗೋಣು ಹಗ್ಗ ಹೊಸೆಯಬೇಕಿತ್ತಷ್ಟೆ. ಆಯಾ ಸಮಯಕ್ಕೆ ಸರಿಯಾಗಿ ಊಟವನ್ನು ತಂದು ಕೊಡಲಾಗುತ್ತಿತ್ತು. ಈ ಏಕಾಂತ ವಾಸದಿಂದ ಹೊರಬರುವ ಘಟಾನುಘಟಿಗಳೂ ಸೋತುಬಿಡುತ್ತಾರೆ, ಮಾನಸಿಕವಾಗಿ ಜರ್ಝರಿತರಾಗಿಬಿಡುತ್ತಾರೆ.

ಹಾಗೆಂದೇ ಸುದೀರ್ಘವಾದ ಆರು ತಿಂಗಳಕಾಲ ನನ್ನನ್ನು ಮಣಿಸುವ ಪ್ರಯತ್ನಕ್ಕೆ ಜೈಲು ಕೈ ಹಾಕಿತ್ತು. ನಾನು ಸೋಲಲಿಲ್ಲ, ಬ್ರಿಟೀಷ್ ಸರ್ಕಾರ ಗೆಲ್ಲಲಿಲ್ಲ. ಅಲ್ಲಿಂದ ಹೊರಬರುತ್ತಿದ್ದಂತೆ ನಿಧಾನವಾಗಿ ಮಿತ್ರರನ್ನು ಸಂಪಾದಿಸತೊಡಗಿದೆ. ಕುಗ್ಗಿ ಹೋಗುತ್ತಿದ್ದ ಆತ್ಮವಿಶ್ವಾಸವನ್ನು ಮರುಸ್ಥಾಪಿಸುವ ಮಾಡಿದೆ. ಅದು ಸುಲಭವಾಗಿರಲಿಲ್ಲ. ಅರವಿಂದರ ಸಂಪರ್ಕದಲ್ಲಿದ್ದು ಭವಾನಿ ಮಂದಿರದ ಕಲ್ಪನೆಯನ್ನು ಕಟ್ಟಿಕೊಂಡು, ಮಾಣಿಕ್‌ಲಾ ಬಾಂಬ್ ಕೇಸಿನಲ್ಲಿ ಸಿಕ್ಕು ಹಾಕಿಕೊಂಡು ಒಳಬಂದಿದ್ದ ಇಂದುಭೂಷಣ್ ರಾಮ್ ಈ ಶಿಕ್ಷೆಯನ್ನು ತಾಳಲಾಗದೇ ಕುಸಿದುಹೋಗಿಬಿಟ್ಟಿದ್ದ. ಅವನ ಮುಖಭಾವವನ್ನು ನೋಡುವಾಗಲೇ ಅವಘಡ ಸಂಭವಿಸಲಿದೆ ಎಂದು ನನಗೆ ಅಂದಾಜಾಗುತ್ತಿತ್ತು. ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಆತ ಕೇಳಲೇ ಇಲ್ಲ. ಕೊನೆಗೂ ನೇಣಿಗೆ ಶರಣಾಗಿಯೇಬಿಟ್ಟ. ಇದಕ್ಕೆ ವಿರುದ್ಧವಾದ ಚಿಂತನೆ ಸ್ವರಾಜ್ ಪತ್ರಿಕೆಯ ಸಂಪಾದಕನಾಗಿದ್ದ ನಾನಿಗೋಪಾಲನದ್ದು. ಆತ ಜೈಲಿನ ಯಾವ ನಿಯಮಗಳನ್ನೂ ತಲೆಗೆ ಹಾಕಿಕೊಂಡವನೇ ಅಲ್ಲ. ಕೊಟ್ಟ ಕೆಲಸವನ್ನು ತನ್ನಿಚ್ಛೆಗೆ ತಕ್ಕಂತೆ ಮಾಡುತ್ತಿದ್ದನೇ ಹೊರತು ನಿಯಮಕ್ಕನುಗುಣವಾಗಿ ಅಲ್ಲ. ಕೊನೆಗೆ ಉಪವಾಸ ಸತ್ಯಾಗ್ರಹಕ್ಕೆ ಮುಂದುಮಾಡಿ ಸಾಯುವವರೆಗೆ ಅನ್ನ ಸ್ವೀಕರಿಸಲಾರೆ ಎಂದು ಪ್ರತಿಜ್ಞೆಯನ್ನೂ ಮಾಡಿಬಿಟ್ಟ. ಇಂದುಭೂಷಣ್ ರಾಮ್ ನೇಣಿಗೆ ಶರಣಾದನಲ್ಲ, ನಾನಿಗೋಪಾಲನದ್ದು ಮತ್ತೊಂದು ಬಗೆಯ ಆತ್ಮಹತ್ಯೆ ಅಷ್ಟೇ, ದಿನಗಳುರುಳುತ್ತಾ ಹೋದಂತೆ ಆತ ಮೂಳೆ ಚಕ್ಕಳವಾದ. ಸಾಯುವುದು ಖಾತ್ರಿಯಾಯ್ತು.

ಬ್ಯಾರಿ ನಾನಿಗೋಪಾಲನ ಮನವೊಲಿಸುವಂತೆ ನನ್ನನ್ನೇ ಕೇಳಿಕೊಂಡ. ನಾನು ಆತ್ಮಹತ್ಯೆಯ ವಿರೋಧಿ. ಅದರಲ್ಲೂ ಕ್ರೂರಿಗಳೆದುರಿಗೆ ಆತ್ಮಹತ್ಯೆಗೆ ಶರಣಾಗುವುದು ಹೇಡಿತನ ಎಂದೇ ನನ್ನ ಭಾವನೆ. ಹೀಗಾಗಿ ನಾನಿಗೋಪಾಲ ನಿತ್ರಾಣನಾಗಿ ಮಲಗಿದ್ದ ಕಡೆಗೆ ಹೋದೆ. ಮೈದಡವಿದೆ, “ಸಾಯುವುದಿದ್ದರೆ ಕೊಲ್ಲುತ್ತಾ ಸಾಯಬೇಕೇ ಹೊರತು ಹೀಗೆ ವ್ಯರ್ಥವಾಗಿ ಅಲ್ಲ’ ಎಂದು ಕಿವಿಯಲ್ಲಿ ಹೇಳಿದೆ. ನಾನಿಗೋಪಾಲ ಬುದ್ಧಿವಂತ, ನಿಧಾನವಾಗಿ ಕರೆದ. ನಾನು ಎಲ್ಲರಿಗೂ ಕೇಳುವಂತೆಯೇ ಹೇಳಿದೆ, ‘ಮನಸ್ಸಿಗೆ ಬಂದಷ್ಟು ತಿನ್ನಿ. ಪೊಗದಸ್ತಾಗಿ ಬೆಳೆಯಿರಿ. ಆದರೆ ಇವರು ಕೊಟ್ಟ ಕೆಲಸವನ್ನು ಮಾತ್ರ ಮಾಡಬೇಡಿ’ ಎಂದೆ. ಇಡೀ ಅಂಡಮಾನು ಪ್ರತಿಭಟನೆಗೆ ಸಜ್ಜಾಗಿಬಿಡ್ತು. ಆನಂತರ ಬ್ಯಾರಿಯ ನಿದ್ದೆ ಹಾಳಾಗಿಹೋಯ್ತು. ದಿನಬೆಳಗಾದರೆ ಪ್ರತಿಭಟನೆ, ಹೋರಾಟಗಳು. ಇಷ್ಟೇ ಅಲ್ಲ, ಜೈಲಿನಿಂದ ಬಿಡುಗಡೆಯಾಗಿ ಹೊರಹೋಗುತ್ತಿದ್ದ ಕ್ರಾಂತಿಕಾರಿಗಳು ಇಲ್ಲಿನ ಹೃದಯ ವಿದ್ರಾವಕ ಪರಿಸ್ಥಿತಿಯನ್ನು ಅಲ್ಲಿ ಪತ್ರಿಕೆಗಳ ಮೂಲಕ ಎಲ್ಲರಿಗೂ ತಿಳಿಯುವಂತೆ ಬಣ್ಣಿಸುತ್ತಿದ್ದರು. ನಮ್ಮ ಜೊತೆಯಲ್ಲೇ ಇದ್ದ ಹೋತಿಲಾಲ್ ವರ್ಮಾನಂತೂ ವಿಸ್ತಾರವಾಗಿ ಎಲ್ಲವನ್ನೂ ಬರೆದು ಕದ್ದುಮುಚ್ಚಿ ಸುರೇಂದ್ರನಾಥ ಬ್ಯಾನರ್ಜಿಯವರಿಗೇ ಕಳಿಸಿಬಿಟ್ಟ. ಅದು ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟಗೊಂಡು ಎಲ್ಲೆಡೆ ಗಲಾಟೆಗಳು ಆರಂಭವಾಗಿ ಬ್ರಿಟೀಷ್ ಸರ್ಕಾರ ಕೈಕೈ ಹಿಸುಕಿಕೊಳ್ಳುವಂತಾಯ್ತು. ಹೀಗಾಗಿಯೇ ನಮ್ಮ ಪ್ರತಿಭಟನೆಗಳ ನಂತರ ಅನಿವಾರ್ಯವಾಗಿ ಊಟದ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಯ್ತು. ಶಿಕ್ಷೆಗಳ ಸ್ವರೂಪವನ್ನು ಬದಲಾಯಿಸಬೇಕಾಯ್ತು. ಕೊನೆಗೆ ಗ್ರಂಥಾಲಯವೊಂದರ ವ್ಯವಸ್ಥೆಯನ್ನೂ ಮಾಡಬೇಕಾಯ್ತು. ನಾನು ಆರಂಭದಲ್ಲಿ ಇಲ್ಲಿಗೆ ಬಂದಾಗ ಬರೆಯುವುದಕ್ಕೆ ಒಂದು ಹಾಳೆಯನ್ನೂ ಕೊಡುತ್ತಿರಲಿಲ್ಲ. ನಾನು ಹೊರಗೆ ಕೆಲಸಕ್ಕೆ ಹೋದಾಗ ಮೊಳೆಯೊಂದನ್ನು ಸಂಪಾದಿಸಿಕೊಂಡು ಬಂದು ಅದನ್ನು ಬಳಸಿಯೇ ಆ ಜೈಲಿನ ಗೋಡೆಯ ಮೇಲೆ ಕಾವ್ಯದ ಸಾಲುಗಳನ್ನು ಕೆತ್ತುತ್ತಿದ್ದೆ. ಬಹುಶಃ ಇಂತಹ ಸಾಹಸವನ್ನು ಜಗತ್ತಿನ ಮತ್ಯಾವ ಖೈದಿಯೂ ಮಾಡಿರಲಾರ!

ಆಮೇಲಿನ ದಿನಗಳಲ್ಲಿ ಭಾರತದ ಜೈಲಿನ ವ್ಯವಸ್ಥೆಯೂ ಸಾಕಷ್ಟು ಸುಧಾರಿಸಿತೆನ್ನಿ, ಜೈಲಿಗೆ ಹೋದ ಗಾಂಧಿ, ನೆಹರೂ, ಪಟೇಲರು ಹೂದೋಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆಡುತ್ತಿದ್ದರಂತೆ ಮತ್ತು ತಮ್ಮ ಆತ್ಮಕಥೆಗಳನ್ನೂ ನಮಗೆ ಅದ್ಯಾವುದರ ಭಾಗ್ಯವೂ ವಾಲಿಬಾಲ್ ಬರೆಯುತ್ತಿದ್ದರಂತೆ! ಇರಲಿಲ್ಲ. ಆದರೆ ಆನಂತರದ ದಿನಗಳಲ್ಲಿ ನಾವು ಅಲ್ಲಿ ನಿರ್ಮಿಸಿದ ಗ್ರಂಥಾಲಯ ಒಟ್ಟಾರೆ ಭಾರತದ ಜೈಲುಗಳಲ್ಲಿಯೇ ಶ್ರೇಷ್ಠ ಗ್ರಂಥಾಲಯವೆನಿಸಿತು. ನನ್ನೊಳಗಿನ ಸ್ವಾತಂತ್ರ್ಯದ ಕಿಚ್ಚು ಬ್ರಿಟೀಷರ ಯಾವ ಪ್ರಯತ್ನಕ್ಕೂ ತಣ್ಣಗಾಗಲಿಲ್ಲ. ಹೊರ ಜಗತ್ತಿನಲ್ಲಿ ಹೋರಾಡಲು ಸಾಧ್ಯವಾಗಲಿಲ್ಲವೆಂದ ಮಾತ್ರಕ್ಕೆ ನಾನು ಸುಮ್ಮನೆ ಕೂತೆನೆಂದಲ್ಲ. ಜೈಲಿನ ಒಳಗೆ ರಾಜಕೀಯ ಖೈದಿಗಳ ವ್ಯವಸ್ಥೆ ಸುಧಾರಣೆಗೆ ಸಾಧ್ಯವಾದಷ್ಟೂ ಜೀವತೈದೆ.

ಅಭಿನವ ಭಾರತದ ಶ್ರದ್ಧೆಯ ಯೋಧ!

ಆದರೂ ಕೆಲವೊಮ್ಮೆ ಒಬ್ಬನೇ ಕುಳಿತಾಗ ಹಳೆಯ ದಿನಗಳು ನೆನಪಾಗುತ್ತಿದ್ದವು. ಅಮ್ಮನ ಮುಖ ನೋಡಿದ್ದು ಎಷ್ಟು ಪ್ರಯತ್ನಪಟ್ಟರೂ ನೆನಪಾಗುತ್ತಿರಲಿಲ್ಲ. ಅಪ್ಪ ಮಾತ್ರ ಪ್ರಯತ್ನಪಟ್ಟರೂ ಸ್ಮತಿಪಟಲದಿಂದ ಮರೆಯಾಗುತ್ತಿರಲಿಲ್ಲ. ನಾನು ಬಾಲ್ಯದಲ್ಲಿರುವಾಗಲೇ ಅಮ್ಮನನ್ನು ಕಳಕೊಂಡಿದ್ದೆ. ಮೂರು ಅಣ್ಣ-ತಮ್ಮಂದಿರು, ಮತ್ತೊಬ್ಬ ತಂಗಿ. ಇಷ್ಟು ಮಂದಿಯನ್ನು ನೋಡಿಕೊಳ್ಳಲು ಮತ್ತೊಂದು ಮದುವೆಯಾಗೆಂದರೂ ಅಪ್ಪಯ್ಯ ಒಪ್ಪಲಿಲ್ಲ. ನನ್ನೂರಿಗೆ ಪ್ಲೇಗ್ ಅಮರಿಕೊಂಡಾಗ ಇತರೆಲ್ಲರ ಸೇವೆಗಾಗಿ ಹಗಲು-ರಾತ್ರಿ ದುಡಿಯುತ್ತಿದ್ದವ ಆತ.

ಈ ಮಾರಿ ಆತನನ್ನೇ ಹಿಡಿದುಕೊಂಡಾಗ ಸದ್ದಿಲ್ಲದೇ ಮನೆಯ ಮೇಲಿನ ಕೋಣೆ ಸೇರಿಕೊಂಡ. ನೀರು ಬೇಕೆಂದು ಆತ ಚೀರಾಡುವಾಗ ವೈದ್ಯರ ಸಲಹೆಯ ಮೇರೆಗೆ ನಾವು ನೀರು ಕೊಡಲಿಲ್ಲ. ಆತ ನೋವಿನಲ್ಲಿಯೇ ನರಳಿ ಸತ್ತ. ಆತನ ಸಾವು ನನ್ನನ್ನು ಆವರಿಸಿಕೊಂಡುಬಿಟ್ಟಿತು. ಮನುಷ್ಯ ಸಾಯಲೇಬೇಕೆಂದಿದ್ದರೆ ಒಂದು ಸಾಧಾರಣ ಇಲಿಯೂ ಕಾರಣವಾಗಿಬಿಡುತ್ತದೆ. ಆದರೆ ಆತ ಆದರ್ಶಕ್ಕಾಗಿ ಬದುಕಲೇಬೇಕೆಂದಿದ್ದರೆ ಸಾವೂ ಕೂಡ ಆತನನ್ನು ಅಲುಗಾಡಿಸಲಾರದು ಎಂಬುದು ಪಾಠವಾಗಿ ನನಗೊದಗಿತು.

ಶಿವಾಜಿಯ ಕಥೆಗಳು ಬಾಲ್ಯದಿಂದಲೂ ನನ್ನ ಗೆಳೆಯರಂತೆ. ಒಂದೆಡೆ ರಿಚರ್ಡ್ ಟೆಂಪಲ್‌ನ ಬದುಕನ್ನೇ ದುರ್ಭರಗೊಳಿಸಿದ್ದ ಫಡೆ, ಮತ್ತೊಂದೆಡೆ ದುಷ್ಟ ಬ್ಯಾಂಡ್‌ನ ಹತ್ಯೆ ಮಾಡಿದ ಚಾಫೇಕರ್ ಸಹೋದರರು ನನ್ನ ಪಾಲಿನ ಶಾಶ್ವತ ಆದರ್ಶಗಳು. ಕಾಳಾ ಪತ್ರಿಕೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಮಾರ್ಗದರ್ಶನ ನನಗೆ ಮಾಡಿದರೆ, ಕೇಸರಿ ಪತ್ರಿಕೆಯ ಮೂಲಕ ನಾನು ತಿಲಕರ ಏಕಲವ್ಯನೇ ಆಗಿದ್ದೆ. ಮೊದಲ ಬಾರಿಗೆ ತಿಲಕರನ್ನು ಮಾತನಾಡಿಸುವ ಅವಕಾಶ ಸಿಕ್ಕಾಗ ನನಗಾದ ಆನಂದವನ್ನು ಅಂಡಮಾನಿನ ಜೈಲಿನೊಳಗೆ ನೆನಪಿಸಿಕೊಂಡಾಗಲೂ ಆಹಾ ಎನಿಸುತ್ತಿತ್ತು. ನಾವೇ ಕಟ್ಟಿದ್ದ ಅಭಿನವ ಭಾರತದ ಕಾರ್ಯಕ್ರಮಕ್ಕೆ ತಿಲಕರು ಬಂದು ನಮ್ಮನ್ನು ಹುರಿದುಂಬಿಸಿ ಹೋಗಿದ್ದರು. ಅಭಿನವ ಭಾರತ ಇಟಲಿಯ ಮ್ಯಾಜಿನಿ ಕಟ್ಟಿದ ಕ್ರಾಂತಿಕಾರಿಗಳ ಪಡೆಯಂತೆ. ಇರಬೇಕು ಎಂಬುದು ನಮ್ಮ ಕನಸಾಗಿತ್ತು. ಹೀಗಾಗಿ ಮಿತ್ರಮೇಳವೆಂಬ ಸಾಮಾಜಿಕ ಸಂಘಟನೆಯೊಂದನ್ನು ಕಟ್ಟಿಕೊಂಡು ಸಮಾಜದ ಕೆಲಸಗಳನ್ನು ಮಾಡುತ್ತಾ ಅಲ್ಲಿಂದ ಬಂದ ಸಮರ್ಥ ತರುಣರನ್ನು ಅಭಿನವ ಭಾರತದ ಮೂಲಕ ವಿಶೇಷ ಕ್ರಾಂತಿಕಾರಿಗಳಾಗಿ ರೂಪಿಸುತ್ತಿದ್ದೆವು.

ನನಗೆ 20 ವರ್ಷವಾಗುವ ವೇಳೆಗಾಗಲೇ ರಾಷ್ಟ್ರದ ಎಲ್ಲ ಕ್ರಾಂತಿಕಾರಿಗಳನ್ನೂ ಒಂದೇ ಛತ್ರದಡಿ ಬೆಸೆಯುವ ಮತ್ತು ಮದ್ದು-ಗುಂಡುಗಳನ್ನು ಸದ್ದಿಲ್ಲದೇ ತರಿಸಿಕೊಂಡು ಬ್ರಿಟೀಷರ ವಿರುದ್ಧ ವ್ಯವಸ್ಥಿತ ಕ್ರಾಂತಿಯನ್ನು ಹುಟ್ಟುಹಾಕುವ ಯೋಜನೆ ರೂಪಿಸಿಬಿಟ್ಟಿದ್ದೆವು. ತಿಲಕರು ಗಣೇಶೋತ್ಸವವನ್ನು ಆರಂಭಿಸಿದರಲ್ಲ, ನನಗೂ ನಮ್ಮ ಕಾರ್ಯಕರ್ತರಿಗೂ ಅದು ನಿಜವಾದ ಹಬ್ಬ, ನೆಪ ಗಣೇಶನದ್ದು, ನೀಡುತ್ತಿದ್ದ ಸಂದೇಶ ಮಾತ್ರ ರಾಷ್ಟ್ರದ್ದು. ತಿಲಕರಿಗೆ ಇದು ಸಾಲದೆನಿಸಿ ಮಹಾರಾಷ್ಟ್ರದ ಜನತೆಯನ್ನು ವಿಶೇಷವಾಗಿ ಒಗ್ಗೂಡಿಸಲು ಶಿವಾಜಿ ಜಯಂತಿಯನ್ನು ಆರಂಭಿಸಿಬಿಟ್ಟರು.

ಆಮೇಲೇನು? ನಾವು ಶಿವಾಜಿಯ ಕಥೆಯನ್ನು ಹೇಳುತ್ತಾ ಹೇಳುತ್ತಲೇ ತರುಣರ ಹೃದಯಗಳಲ್ಲಿ ಕ್ರಾಂತಿಯ ಬೀಜವನ್ನು ಬಿತ್ತಿಬಿಡುತ್ತಿದ್ದೆವು. ನಮ್ಮ ಈ ಆಲೋಚನೆಗೆ ಮೊದಲು ಮನಸೋತವನೇ ನನ್ನಣ್ಣ. ವಿವೇಕಾನಂದರ ಹಿಂದೆ ಆಲೋರಾಕ್ಕೆ ಹೋಗಿ ರಾಜಯೋಗದಲ್ಲಿ ತಲ್ಲೀನನಾಗಿ ಆಧ್ಯಾತ್ಮ ಸಾಧನೆ ಮಾಡಬೇಕೆಂದಿದ್ದವ ಕ್ರಾಂತಿಕಾರ್ಯಕ್ಕೆ ತನ್ನನ್ನು ತೆರೆದುಕೊಂಡು ನನಗಿಂತ ಮುಂಚೆಯೇ ಅಂಡಮಾನಿನ ಜೈಲು ಸೇರಿಬಿಟ್ಟ. ಜೈಲಿನ ನಾಲ್ಕು ಗೋಡೆಗಳೇ ಅವನಿಗೀಗ ರಾಜಯೋಗದ ತಾಣ!

1905ರಲ್ಲಿ ಬಂಗಾಳದ ವಿಭಜನೆಯಾದಾಗ ನಮಗೆಲ್ಲರಿಗೂ ರಾಷ್ಟ್ರೀಯತೆಯ ಉದ್ದೀಪನಕ್ಕೆ ಬಲುದೊಡ್ಡ ಅವಕಾಶ ಸಿಕ್ಕಂತಾಯ್ತು. ತಿಲಕರ ಬಳಿಗೆ ಹೋಗಿ ವಿದೇಶೀ ವಸ್ತಗಳ ದಹನದ ನನ್ನ ಆಲೋಚನೆಯನ್ನು ವಿವರಿಸಿದೆ. ಅವರ ಮುಖ ಅರಳಿತು. ‘ಈ ಹೋಳಿ ಸಣ್ಣಪುಟ್ಟ ಹೋಳಿಯಾಗಬಾರದು. ಬಲುದೊಡ್ಡ ಹಬ್ಬವಾಗಬೇಕು’ ಎಂಬ ಸಂದೇಶ ಕೊಟ್ಟರು ಅಷ್ಟೇ. ನಮ್ಮದ್ದೊಂದು ತರುಣರ ಪಡೆ ಇದ್ದೇ ಇತ್ತಲ್ಲ, ಮನೆ-ಮನೆಗೂ ಹೋಗಿ ಬ್ರಿಟೀಷರ ವಿರುದ್ಧದ ಸಂದೇಶವನ್ನು ಸೂಕ್ಷ್ಮವಾಗಿ ಕೊಟ್ಟು, ವಿದೇಶೀ ಬಟ್ಟೆಗಳನ್ನು ಸಂಗ್ರಹಿಸಿ ತಂದೆವು.

ಒಂದು ಎತ್ತಿನಗಾಡಿ ತುಂಬುವಷ್ಟು ಈ ಬಟ್ಟೆಯ ರಾಶಿಯನ್ನು ಒಂದೆಡೆ ಸುರುವಿ ಅದಕ್ಕೆ ಗುಲಾಲು ಸುರಿದು ಬೆಂಕಿಕಡ್ಡಿ ಗೀರಿದೆವು ನೋಡಿ, ಅತ್ತ ಬೆಂಕಿಯ ಕೆನ್ನಾಲಗೆಗಳು ಆಗಸಕ್ಕೆ ಚಾಚುತ್ತಿದ್ದಂತೆ ಇತ್ತ ಜನರ ಹೃದಯದಲ್ಲಿ ಬ್ರಿಟೀಷರ ವಿರುದ್ಧದ ಆಕ್ರೋಶ ಭುಗಿಲೇಳುತ್ತಿತ್ತು. ಈ ರೀತಿ ವಿದೇಶೀ ವಸ್ತ್ರಗಳ ದಹನಕ್ರಿಯೆ ದೇಶದಲ್ಲೇ ಮೊದಲ ಬಾರಿಗೆ ಆಗಿದ್ದಂತೆ. ಆನಂತರ ಅನೇಕ ಕಾಂಗ್ರೆಸ್ಸಿಗರು. ಇಂತಹ ಚಟುವಟಿಕೆಗಳನ್ನು ಮಾಡಿದರಾದರೂ ಅದರ ಮೊದಲ ಗೌರವ ಅಭಿನವ ಭಾರತಕ್ಕೇ.

ಶತ್ರುವಿನ ಗುಹೆಗೆ ಹೊಕ್ಕಿತ್ತು ಸಿಂಹ!

ಆಗಲೇ ಕಾಳಾ ಪತ್ರಿಕೆಯಲ್ಲಿ ಲಂಡನ್ನಿನಲ್ಲಿ ಅಧ್ಯಯನಕ್ಕೆ ವಿದ್ಯಾರ್ಥಿವೇತನ ನೀಡುವ ಕುರಿತಂತಹ ಜಾಹಿರಾತು ಪ್ರಕಟವಾದದ್ದು. ನಾನು ಅರ್ಜಿ ಗುಜರಾಯಿಸಿದೆ. ಜಾಹಿರಾತು ಕೊಟ್ಟ ಆಸಾಮಿ ಸಾಮಾನ್ಯದವನಾಗಿರಲಿಲ್ಲ. ಲಂಡನ್ನಿನಲ್ಲಿ ಅಧ್ಯಯನ ಮುಗಿಸಿ ಬ್ರಿಟೀಷ್ ನೌಕರಿಗೆ ಸೇರುವುದಿಲ್ಲ ಎಂಬ ಮುಚ್ಚಳಿಕೆ ಮೊದಲೇ ಬರೆದುಕೊಡಬೇಕಿತ್ತು. ನನಗದೇನೂ ದೊಡ್ಡ ವಿಷಯವಾಗಿರಲಿಲ್ಲ. ತಿಲಕರ ಬಳಿಹೋಗಿ ಪ್ರಭಾವಪತ್ರವೊಂದನ್ನು ತಂದೆ. ‘ಈ ಹುಡುಗ ರಾಷ್ಟ್ರ ಕೈಂಕರ್ಯಕ್ಕೆ ಉಪಯೋಗಿಯಾಗುತ್ತಾನೆ’ ಎಂದು ಅವರು ಬರೆದಿದ್ದ ಸಾಲುಗಳು ನನಗೆ ಈಗಲೂ ಹೆಮ್ಮೆ ತರಿಸುತ್ತವೆ. ಇಲ್ಲವಾದರೆ ಅಂಡಮಾನಿನ ಈ ಯಾತನಾಮಯ ಜೈಲಿನಲ್ಲಿ ಕಾಲ ಕಳೆಯುವುದು ಸಾಧ್ಯವಾಗುತ್ತಿತ್ತೇನು? ಸಹಜವಾಗಿಯೇ ವಿದ್ಯಾರ್ಥಿ ವೇತನ ನನಗೇ ದಕ್ಕಿತು. ಲಂಡನ್ನಿನ ಭಾರತ ಭವನಕ್ಕೆ ನಾನೀಗ ವಿದ್ಯಾರ್ಥಿಯಾಗಿ ಸೇರಿಕೊಂಡೆ.

ಎಲ್ಲರಂತೆ ಆರಂಭದ ದಿನಗಳಲ್ಲಿ ಸುಲಭವಾಗಿ ಎಲ್ಲರೊಂದಿಗೂ ಬೆರೆಯುವುದಕ್ಕೆ ನನಗೂ ಕಷ್ಟವಾಗುತ್ತಿತ್ತು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿತ್ತು, ಅಲ್ಲಿನವರಂತೆ ಬದುಕುವ ಪ್ರಯತ್ನ ಮಾಡಬೇಕಿತ್ತು ಮತ್ತು ತರಗತಿಗಳು ಆರಾಮವಾಗಿಯೇ ನಡೆಯುತ್ತಿದ್ದುದರಿಂದ ಅಧ್ಯಯನದ ಹೊರೆಯೂ ಕಡಿಮೆಯಿತ್ತು. ಹೀಗಾಗಿ ನಾನು ಭಾರತ ಭವನದ ಗ್ರಂಥಾಲಯ ಹೊಕ್ಕು ಇಟಲಿಯ ಕ್ರಾಂತಿಕಾರಿ ಮ್ಯಾಜಿನಿಯ ಜೀವನವನ್ನು ಅಧ್ಯಯನ ಮಾಡತೊಡಗಿದೆ. ಒಟ್ಟು ಆರು ಸಂಪುಟಗಳ ವಿಸ್ತಾರ ಕೃತಿ ಅದು. ಆತನ ಹೋರಾಟದ ಹಾದಿಯನ್ನು ಎಳೆಎಳೆಯಾಗಿ ವಿವರಿಸಲಾಗಿತ್ತು. ನಾನು ಮೈಮರೆತು ಕೃತಿಯೊಳಗೆ ಹೊಕ್ಕಿಬಿಟ್ಟೆ. ಒಂದೊಂದು ಸಂಪುಟವನ್ನೂ ಒಂದೆರಡು ದಿನದಲ್ಲಿಯೇ ಓದಿ ಮುಗಿಸಿಬಿಡುತ್ತಿದ್ದೆ. ನನ್ನ ತುಡಿತ ಹೇಗಿತ್ತೆಂದರೆ ಅಷ್ಟೂ ಕೃತಿಯನ್ನು ಬರವಣಿಗೆಗಿಳಿಸಬೇಕು ಎನ್ನುವಷ್ಟು, ತಡಮಾಡಲಿಲ್ಲ. ಮ್ಯಾಜಿನಿಯ ಜೀವನ, ಸಾಧನೆ ಓತಪ್ರೋತವಾಗಿ ಹರಿಯಲಾರಂಭಿಸಿತು.

ಕೃತಿ ಮುಗಿಸಿ ಅದಕ್ಕೆ ಮುನ್ನುಡಿಯನ್ನು ಬರೆದು ಅಣ್ಣ ಬಾಬಾನಿಗೆ ಕಳಿಸಿಕೊಟ್ಟೆ. ಆಗಿನ್ನೂ ನನ್ನ ಮೇಲೆ ಬ್ರಿಟೀಷರ ಪಹರೆ ಜೋರಾಗಿರಲಿಲ್ಲ. ಭಾರತದಿಂದ ನಾನು ಲಂಡನ್ನಿಗೆ ಹೊರಟು ಬಂದಾಗ ನನಗಿಂತ ಮುಂಚೆ ಭಾರತೀಯ ಪೊಲೀಸರು ಸ್ಕಾಟ್‌ಲ್ಯಾಂಡ್ ಯಾರ್ಡಿನ ಪೊಲೀಸರಿಗೆ ಬರೆದ ಪತ್ರ ಬಂದು ತಲುಪಿತ್ತು. ಈ ವ್ಯಕ್ತಿ ಅಪಾಯಕಾರಿಯಾಗಬಲ್ಲ. ಆದರೆ ತೀರಾ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದಿತ್ತು. ಹೀಗಾಗಿ ನನ್ನ ಸುತ್ತ ಪಹರೆಯವರೇನೂ ಇರುತ್ತಿರಲಿಲ್ಲ. ಆದರೂ ಎಚ್ಚರಿಕೆಯಿಂದಲೇ ಪುಸ್ತಕ ಅಣ್ಣನ ಕೈಗೆ ತಲುಪುವಂತೆ ನೋಡಿಕೊಂಡಿದ್ದೆ. ಆತ ಅದನ್ನು ತಿಲಕರಿಗೆ ಒಯ್ದು ತೋರಿಸಿದ. ಆರಂಭದಲ್ಲಿ ಅವರು ಗಾಬರಿಯಾದರಂತೆ. ಎಚ್ಚರಿಕೆಯಿಂದ ಮುದ್ರಣ ಮಾಡಿ ಎಂಬ ಕಿವಿಮಾತೂ ಹೇಳಿದರಂತೆ. ಮುದ್ರಕರಾರೂ ಒಪ್ಪಲಿಲ್ಲ. ನನ್ನಣ್ಣನೂ ಬಿಡಲಿಲ್ಲ. ತನ್ನ ಪ್ರಭಾವವನ್ನು ಬಳಸಿ ಎರಡು ಸಾವಿರ ಪ್ರತಿಗಳನ್ನು ಮುದ್ರಿಸಿಯೇಬಿಟ್ಟ. ಕಾಳಾ ಪತ್ರಿಕೆ ಈ ಕುರಿತಂತೆ ಬಲು ಸುಂದರವಾಗಿ ಬರೆದಿತ್ತು. ‘ಸಾವರ್ಕರ್ ವಿದೇಶಕ್ಕೆ ಹೋದರೂ ಭಾರತವನ್ನು ಮರೆಯಲಿಲ್ಲ.

ಅಲ್ಲಿನ ಕಟ್ಟಡಗಳು, ಕಾರ್ಖಾನೆಗಳು, ಅಪಾರ ಸಂಪತ್ತೂ ಅವರನ್ನು ಸೆಳೆಯುವಲ್ಲಿ ಸೋತಿದೆ. ಅಲ್ಲಿಂದಲೂ ಅವರು ರಾಷ್ಟ್ರ ಕಾಯಕವನ್ನೇ ಮಾಡುತ್ತಿದ್ದಾರೆ’ ಎಂದು. ಮ್ಯಾಜಿನಿಯ ಕುರಿತು ನಾನು ಬರೆದ ಪುಸ್ತಕವನ್ನು ಅವರು ರಾಷ್ಟ್ರಕಾರ್ಯವೆಂದು ಗುರುತಿಸಿ ಗೌರವಿಸಿದ್ದರು. ಎರಡೂ ಸಾವಿರ ಪ್ರತಿಗಳು ಬಿಸಿ ದೋಸೆಯಂತೆ ಖರ್ಚಾದವು. ತರುಣರು ಅಭಿನವ ಭಾರತದ ಕಾರ್ಯಕ್ರಮಗಳಲ್ಲಿ ಅದನ್ನು ಪಾರಾಯಣ ಮಾಡುತ್ತಿದ್ದರಂತೆ. ಸಾರ್ವಜನಿಕರು ಅದನ್ನು ಓದುವಾಗ ಹೆಮ್ಮೆ ತಾಳುತ್ತಿದ್ದರಂತೆ. ಬ್ರಿಟೀಷರಿಗೆ ಪೀಕಲಾಟವಿಟ್ಟುಕೊಂಡಿತ್ತು. ಅಧಿಕಾರಿಯೊಬ್ಬ “ಓದಿದವರಿಗೆ ಇದು ಪ್ರಭುತ್ವ ವಿರೋಧಿ ಎಂದು ಗೊತ್ತಾಗುತ್ತದೆ. ಆದರೆ ಅದನ್ನು ನ್ಯಾಯಾಲಯಗಳಲ್ಲಿ ಸಾಬೀತುಪಡಿಸುವ ಒಂದೇ ಒಂದು ವಾಕ್ಯವನ್ನೂ ನಾವು ಹುಡುಕಿ ತೋರಿಸಲಾಗುವುದಿಲ್ಲ. ಇತಿಹಾಸ ಬೋಧನೆಯ ನೆಪದಲ್ಲಿ ಜನರನ್ನು ನಮ್ಮ ವಿರುದ್ಧ ಭಡಕಾಯಿಸುವ ಪ್ರಯತ್ನ ಈ ಕೃತಿ’ ಎಂದಿದ್ದನಂತೆ. ಅದೂ ನಿಜವೇ. ಕೃತಿ ರಚನೆಯ ಹೊತ್ತಲ್ಲಿ ನಾನೆಷ್ಟು ಎಚ್ಚರಿಕೆ ವಹಿಸಿದ್ದೆನೆಂದರೆ ಯಾವ ಕಾರಣಕ್ಕೂ ಈ ಕೃತಿಯನ್ನು ನಿಷೇಧ ಮಾಡುವುದಾಗಲೀ ನನ್ನನ್ನು ಬಂಧಿಸುವುದಾಗಲೀ ಸಾಧ್ಯವಾಗದಂತೆ ಬ್ರಿಟೀಷರಿಗೂ ನ್ಯಾಯಕ್ಕೂ ಸಂಬಂಧವೇ ನೋಡಿಕೊಂಡಿದ್ದೆ. ಇಲ್ಲ. ಇಲ್ಲ. ಆದರೇನು? ಪುಸ್ತಕದ ಪುಸ್ತಕದ ಎರಡನೇ ಮುದ್ರಣವನ್ನು ಅವರು ತಡೆದೇಬಿಟ್ಟರು. ಮನೆ-ಮನೆಗಳಲ್ಲಿದ್ದ ಈ ಕೃತಿಯನ್ನು ಝಡತಿ ಮಾಡಿದರು. ಅನೇಕರು ಇಟ್ಟಿಗೆಗಳಂತೆ ಈ ಪುಸ್ತಕವನ್ನು ಜೋಡಿಸಿ ಸಿಮೆಂಟಿನಿಂದ ಮುಚ್ಚಿ ಕಾಪಾಡಿಕೊಂಡಿದ್ದರಂತೆ. ಅಚ್ಚರಿಯೇನು ಗೊತ್ತೇ? ಇದರ ಎರಡನೇ ಆವೃತ್ತಿ ಪ್ರಕಟಗೊಂಡಿದ್ದು 1946ರಲ್ಲಿ. ಆಗ ಬಿಡುಗಡೆ ಕಾರ್ಯಕ್ರಮಕ್ಕೆ ನಾನೇ ಅಧ್ಯಕ್ಷನಾಗಿದ್ದೆ. ಒಂದು ಪುಸ್ತಕ ಮುಗಿಯಿತೆನ್ನುವಷ್ಟರಲ್ಲಿ ನನ್ನ ತಲೆ ನೂರು ದಿಕ್ಕಿನಲ್ಲಿ ಓಡುತ್ತಿತ್ತು.

ನಾನು ಲಂಡನ್ನಿಗೆ ಬಂದದ್ದು ಐಷಾರಾಮಿ ಬದುಕು ಸಾಗಿಸಲು ಅಲ್ಲವೇ ಅಲ್ಲ. ನನ್ನ ದೇಶಕ್ಕೆ ಬಂದು ಈ ಬಿಳಿಯ ಮಂದಿ ನಮ್ಮನ್ನೇ ಶೋಷಣೆ ಮಾಡಬಹುದಾದರೆ ಅವರ ದೇಶಕ್ಕೆ ನುಗ್ಗಿ ಅವರ ಎದೆಗೊಂದು ಗುದ್ದು ಕೊಡುವುದು ನನಗೆ ಸಾಧ್ಯವಿಲ್ಲವೇನು? ಹಾಗೆಂದೇ 1857ರ ಸಂಗ್ರಾಮದ ಕಡತಗಳನ್ನು ಹುಡುಕಿಕೊಂಡು ಹೊರಟೆ. ಬ್ರಿಟೀಷರ ಅಧೀನದಲ್ಲಿದ್ದ ಈ ಗ್ರಂಥಾಲಯಕ್ಕೆ ಹೋಗಲು ಪಾಸು ಪಡೆಯುವಷ್ಟರಲ್ಲಿ ಸಾಕುಸಾಕಾಗಿತ್ತು. ಬೆಳಿಗ್ಗೆ ಗ್ರಂಥಾಲಯದ ಬಾಗಿಲು ತೆರೆಯುವ ಮುನ್ನ ಹೋಗಿ ಕುಳಿತರೆ ಗ್ರಂಥಾಲಯದ ಬಾಗಿಲು ಮುಚ್ಚುವವರೆಗೂ ಅಧ್ಯಯನವೋ ಅಧ್ಯಯನ, ನನ್ನ ಅಧ್ಯಯನದ ತುಡಿತ ಮತ್ತು ನಾನು ಆಗಾಗ ಭಾರತೀಯರನ್ನು ತುಚ್ಛವಾಗಿ ಬೈಯ್ಯುವ ರೀತಿಯನ್ನು ಕಂಡು ಗ್ರಂಥಪಾಲಕ ಸಂತುಷ್ಟನಾಗಿ ಒಳಗಿನ ಕೋಣೆಯಲ್ಲಿ ಹುದುಗಿದ್ದ ದಾಖಲೆಗಳನ್ನೂ ನನ್ನೆದುರಿಗೆ ತಂದಿರಿಸಿದ. ನಾನೂ ಬಿಡಲಿಲ್ಲ. ವಿಸ್ತಾರವಾದ ಕೃತಿ ರಚಿಸಿದೆ.

ಆಗಲೇ ನನಗೆ ಗೊತ್ತಾಗಿದ್ದು ಬ್ರಿಟೀಷರು ಹೇಳುವಂತೆ ಈ ಹೋರಾಟ ಸಿಪಾಯಿಗಳು ನಡೆಸಿದ ದಂಗೆಯಷ್ಟೇ ಆಗಿರಲಿಲ್ಲ; ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಆಗಿತ್ತು. ಬ್ರಿಟೀಷರನ್ನು ಭಾರತದಿಂದ ಓಡಿಸಬೇಕೆಂಬ ನಮ್ಮೆಲ್ಲರ ಒಕ್ಕೊರಲಿನ ದನಿಯಾಗಿತ್ತು. ಈ ವೇಳೆಗಾಗಲೇ ನನ್ನ ವಿರುದ್ಧ ಕತ್ತಿ ಮಸಿಯುತ್ತಿದ್ದ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಭಾರತ ಭವನದೊಳಗೇ ತಮ್ಮ ಗೂಢಚಾರರನ್ನು ಇರಿಸಿಬಿಟ್ಟಿದ್ದರು. ಇವರ ಮೂಲಕವೇ ಅವರ ಕೈ ಸೇರಿದ್ದು ನನ್ನ ಈ ಕೃತಿಯ ಮೊದಲೆರಡು ಅಧ್ಯಾಯ. ಅದನ್ನು ಓದಿ ಹೌಹಾರಿದ ಬ್ರಿಟೀಷರು ಪುಸ್ತಕ ಪ್ರಕಟವಾಗುವ ಮುನ್ನವೇ ಅದನ್ನು ನಿಷೇಧಿಸಿಬಿಟ್ಟರು. ನನಗೆ ಗ್ರಂಥಾಲಯಕ್ಕೆ ಹೋಗುವ ಅವಕಾಶ ನಿರಾಕರಿಸಲ್ಪಟ್ಟಿತು. ಈ ವೇಳೆಗಾಗಲೇ ಪುಸ್ತಕ ರಚನೆಯ ಕಾರ್ಯ ಮುಗಿದಿದ್ದರಿಂದ ನಾನೂ ತುಂಬಾ ತಲೆಕೆಡಿಸಿಕೊಳ್ಳಲಿಲ್ಲ. ಪ್ರಕಟಗೊಳ್ಳುವ ಮುನ್ನವೇ ಹೆದರಿಕೆಯಿಂದ ಪುಸ್ತಕ ನಿಷೇಧ ಮಾಡಿದ ತಮ್ಮ ಬಳಿ ಪುಸ್ತಕದ ಪ್ರತಿ ಇದ್ದರೆ ತೋರಿಸಿ ಎಂದು ಸವಾಲೆಸೆದೆ. ಅವರೇ ರಚಿಸಿದ್ದ ಕಾನೂನುಗಳನ್ನು ಬಳಸಿ ಅವರಿಗೆ ನಾನು ತಿವಿಯುತ್ತಿದ್ದ ಪರಿ ನಮ್ಮೆಲ್ಲರಿಗೂ ಮೋಜಿನಾಟವಾಗಿದ್ದರೆ, ಅವರಿಗೆ ಪ್ರಾಣ ಸಂಕಟವೇ ಆಗಿತ್ತು.

ಎಂದಿನಂತೆ ಪುಸ್ತಕವನ್ನು ಕದ್ದುಮುಚ್ಚಿ ಅಣ್ಣನಿಗೆ ಕಳಿಸಿಕೊಟ್ಟೆ. ಈ ಬಾರಿ ಇದು ಸಲೀಸಾದ ಕಾರ್ಯವಾಗಿರಲಿಲ್ಲ. ಏಕೆಂದರೆ ಬ್ರಿಟೀಷರ ಗೂಢಚಾರ ಪಡೆ ನನ್ನನ್ನು ನನ್ನ ನೆರಳಿಗಿಂತ ಜೋರಾಗಿ ಹಿಂಬಾಲಿಸುತ್ತಿತ್ತು. ನನ್ನಣ್ಣ ಕೃತಿಯನ್ನು ನೋಡಿದ, ಅನೇಕ ಮುದ್ರಕರೆದುರು ಅದನ್ನು ಹಿಡಿದ. ಬ್ರಿಟೀಷರ ಹೆದರಿಕೆಯಿಂದ ಯಾರೊಬ್ಬರೂ ಪ್ರಕಟ ಮಾಡಲು ಮುಂದೆ ಬರಲಿಲ್ಲ. ಬಾಬಾ ಕೈಚೆಲ್ಲಿ ಅದನ್ನು ಮರಳಿ ಭಾರತ ಭವನಕ್ಕೆ ಕಳಿಸಿಬಿಟ್ಟ. ಮರಾಠಿಯ ಈ ಕೃತಿಯನ್ನು ಜರ್ಮನಿಯಲ್ಲಿ ಮುದ್ರಿಸುವ ಪ್ರಯತ್ನ ಮಾಡಿದೆವು, ಸೋತೆವು. ಆಗಲೇ ಇಂಗ್ಲೀಷಿಗೆ ಅನುವಾದ ಮಾಡುವುದೊಳಿತು ಎಂಬುವ ಆಲೋಚನೆ ಬಂದಿದ್ದು, ಇಂಗ್ಲೀಷಿನ ಕೃತಿಕಾರ್ಯ ಮುಗಿದ ನಂತರ ಇಂಗ್ಲೆಂಡಿನಲ್ಲಿ ಮುದ್ರಿಸೋಣವೆಂದರೆ ಪೊಲೀಸರ ಪಹರೆ, ಫ್ರಾನ್ಸ್‌ನಲ್ಲೂ ನಮಗಿದು ಸಾಧ್ಯವಾಗಲಿಲ್ಲ. ಜರ್ಮನಿಯಲ್ಲೂ ಯಾರೊಬ್ಬರೂ ಒಪ್ಪಲಿಲ್ಲ. ಕೊನೆಗೆ ಫ್ರಾನ್ಸ್‌ನಲ್ಲಿ ಮುದ್ರಿಸುತ್ತಿದ್ದೇವೆ ಎಂದು ಬ್ರಿಟೀಷ್ ಪೋಲಿಸರಿಗೆ ಸುಳ್ಳು ಸುದ್ದಿ ನೀಡಿ ಹಾಲೆಂಡಿನಲ್ಲಿ ಪುಸ್ತಕವನ್ನು ಮುದ್ರಿಸಿ ಅದಕ್ಕೆ ಭಿನ್ನಭಿನ್ನ ಕಾದಂಬರಿಗಳ ಮುಖಪುಟವನ್ನು ಹೊದಿಸಿ ಭಾರತಕ್ಕೆ ಕಳಿಸಿಕೊಡಲಾಯ್ತು. ಫ್ರಾನ್ಸ್, ಜರ್ಮನಿ, ಇಂಗ್ಲೆಂಡು ಇಲ್ಲೆಲ್ಲವೂ ಅಪಾರ ಸಂಖ್ಯೆಯ ಭಾರತೀಯರು ಈ ಪುಸ್ತಕವನ್ನು ಕೊಂಡುಕೊಂಡರು.

ಭಾರತದಲ್ಲಂತೂ ಇದರ ಅಧ್ಯಯನ ರಾಷ್ಟ್ರೀಯತೆಯ ಉದ್ದೀಪನಕ್ಕೆ ಕಾರಣವಾಗುವ ಸಂಗತಿ ಎಂದೇ ಎಲ್ಲರೂ ಭಾವಿಸುತ್ತಿದ್ದರು. ಬ್ರಿಟೀಷರು ಸದಾ ಗೆಲ್ಲುವ ಕುದುರೆಗಳೇ ಅಲ್ಲ. ಭಾರತೀಯರು ಅವರನ್ನು ಸೋಲಿಸಿದ್ದರು ಎನ್ನುವ ಸಂಗತಿ ಇಲ್ಲಿನ ತರುಣರಿಗೆ ಅರಿವಾಗುತ್ತಿದ್ದಂತೆ ಅವರ ಆತ್ಮವಿಶ್ವಾಸ ನೂರ್ಮಡಿಯಾಯ್ತು. ಬ್ರಿಟೀಷರನ್ನು ಮುಂದಿನ ದಿನಗಳಲ್ಲಿ ನೇರವಾಗಿ ಎದುರಿಸಲು ಈ ಕೃತಿ ಸಾಕಷ್ಟು ಪ್ರೇರಣೆ ನೀಡಿತು. ಅಚ್ಚರಿಯೇನು ಗೊತ್ತೇ? ಈ ಕೃತಿಯ ಮೂರನೇ ಮುದ್ರಣ ಪ್ರಕಾಶನಗೊಂಡಿದ್ದು ಗದರ್ ಕ್ರಾಂತಿಕಾರಿಗಳ ಮೂಲಕ. ನಾಲ್ಕನೇ ಮುದ್ರಣ ಭಗತ್‌ಸಿಂಗ್ ಮತ್ತವನ ಮಿತ್ರರು ಸೇರಿ ಮುದ್ರಣ ಮಾಡಿಸಿ, ಮಾರಿ ತಮ್ಮ ಕ್ರಾಂತಿಕಾರ್ಯಕ್ಕೆ ನಿಧಿ ಸಂಗ್ರಹಿಸಿಕೊಂಡರು. ಮುಂದೆ 1940ರ ದಶಕದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸರು ಐದನೇ ಮುದ್ರಣಕ್ಕೆ ಕಾರಣವಾದರು. ಅವರಂತೂ ಅಪಾರ ಸಂಖ್ಯೆಯಲ್ಲಿರುವ ತಮಿಳು ಸೈನಿಕರಿಗೆ ಪ್ರೇರಣೆ ಸಿಗಲೆಂದು ಇಡಿಯ ಕೃತಿಯನ್ನು ತಮಿಳು ಭಾಷೆಗೂ ಅನುವಾದಿಸಿದರು. ನಾನು ಈ ಪುಸ್ತಕವನ್ನು ಬರೆದಿದ್ದು 1908ರಲ್ಲಿ. ಇದು ಐದನೇ ಮುದ್ರಣ ಕಂಡಿದ್ದು ಸುಮಾರು 1942ರಲ್ಲಿ. ಹೆಚ್ಚು ಕಡಿಮೆ ಮೂರೂವರೆ ದಶಕಗಳ ಕಾಲ ಈ ಕೃತಿ ಭಾರತದಲ್ಲಿನ ಕ್ರಾಂತಿ ಕಾರ್ಯಕ್ಕೆ ಭೂಮಿಕೆ ಒದಗಿಸಿತು. ಒಬ್ಬ ಬರಹಗಾರನಿಗೆ ಇದಕ್ಕಿಂತಲೂ ಹೆಚ್ಚಿನ ಆನಂದ ಮತ್ತೇನು ಹೇಳಿ? ಹಾಗೆ ನೋಡಿದರೆ ಬ್ರಿಟೀಷರು ಹೆದರುತ್ತಿದ್ದುದು ನನ್ನ ಬರಹಗಳಿಗೇ.

ನಾನು ಬರೆಯುವ ಪ್ರತೀ ಸಾಲೂ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಭಿನ್ನವಾದ ಅರ್ಥ ಹೊಮ್ಮಿಸುತ್ತದೆ ಎಂಬುದು ನಮ್ಮವರಿಗಿಂತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ನಾನು ಎಷ್ಟು ಬಾರಿ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡರೂ ಅವರು ಒಪ್ಪಿಕೊಳ್ಳಲೇ ಇಲ್ಲ. ನನ್ನ ಕ್ಷಮಾಪಣೆಯ ಪತ್ರವನ್ನು, ಅದರಲ್ಲಿ ನಾನು ಬರೆದ “ನಿಮಗೆ ನಿಷ್ಠನಾಗಿರುತ್ತೇನೆ’ ಎಂಬ ಸಾಲನ್ನು ಅವರೆಂದಿಗೂ ನಂಬಲೇ ಇಲ್ಲ. ಅವರಿಗೆ ನನ್ನ ಬರಹದ ಪ್ರತೀ ಸಾಲಿನ ಹಿಂದೆಯೂ ಇರಬಹುದಾದ ತನ್ನ ದೇಶಭಕ್ತಿಯ ತುಡಿತ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಕೈಗೆ ಗನ್ನು ಸಿಕ್ಕರೆ ನಾನೇನು ಮಾಡುತ್ತೇನೋ ಬಿಡುತ್ತೇನೋ ಗೊತ್ತಿಲ್ಲ, ಆದರೆ ಪೆನ್ನು ಸಿಕ್ಕರೆ ಸಾಕು ಕ್ರಾಂತಿಯನ್ನೇ ಮಾಡಿಬಿಡಬಲ್ಲೆ ಎಂಬುದು ಅವರಿಗೆ ಸ್ಪಷ್ಟವಾಗಿತ್ತು.

ಹೀಗಾಗಿಯೇ ನನ್ನನ್ನು ಕ್ರಾಂತಿಯ ಮುಖ್ಯಭೂಮಿಕೆಯಿಂದ ಹೊರಗಿಡಲೆಂದೇ ಕಾಲಾಪಾನಿಗೆ ಕಳಿಸಿದ್ದು. ಇಲ್ಲವಾದಲ್ಲಿ ನನ್ನ ಮೇಲಿದ್ದ ಆರೋಪಗಳು ಐವತ್ತು ವರ್ಷಗಳ ಜೀವಾವಧಿ ಶಿಕ್ಷೆಗೆ ಕಾರಣವಾಗುವಂಥದ್ದೇ ಅಲ್ಲ! ನಾನು ಲಂಡನ್ನಿಗೆ ಹೋಗುವ ಮುನ್ನ 1906ರಲ್ಲಿ ಮಾಡಿದ ಭಾಷಣಗಳು ದೇಶದ್ರೋಹದಿಂದ ಕೂಡಿದಂಥವು ಎಂಬುದು ಅವರ ಆಪಾದನೆ. ಹಾಗಿದ್ದರೆ ನನ್ನನ್ನು ಆಗಲೇ ಬಂಧಿಸಲಿಲ್ಲವೇಕೆ? ಹೋಗಲಿ, ವಿದೇಶಕ್ಕೆ ಹೋಗುವುದಕ್ಕೆ ತಡೆಯನ್ನಾದರೂ ಕೊಡಬೇಕಿತ್ತಲ್ಲ. ನಾನು ವಿದೇಶಕ್ಕೆ ಹೋಗುವಾಗಲೂ ಲಂಡನ್ನಿನ ಪೊಲೀಸರಿಗೆ ಇವರು ಹೇಳಿದ್ದ ಕಿವಿಮಾತು “ತಲೆಕೆಡಿಸಿಕೊಳ್ಳಬೇಡಿ’ ಎಂದೇ ಅಲ್ಲವೇನು? ಈ ಭಾಷಣದ ಸಾಲುಗಳಿಗೆ 25 ವರ್ಷ ಜೀವಾವಧಿ ಶಿಕ್ಷೆಯೇ? ಮತ್ತೊಂದು ಆರೋಪ ಏನು ಗೊತ್ತೇ? ನಾಸಿಕ್‌ನ ಕಲೆಕ್ಟರ್ ಜಾಕ್ಸನ್ ಹತ್ಯೆ ಮಾಡಿದ ಹದಿನೆಂಟರ ಹೋರ ಅನಂತ ಲಕ್ಷ್ಮಣ ಕಾವೇರೆಗೆ ನಾನೇ ಬಂದೂಕು ಕಳಿಸಿಕೊಟ್ಟಿದ್ದು ಎಂಬುದು. ಇದಕ್ಕೂ ಅವರು ಪ್ರಸ್ತುತಪಡಿಸಿದ ಸಾಕ್ಷಿಗಳು ಎಂಥವಿದ್ದವೆಂದರೆ ಒಬ್ಬ ಸಾಮಾನ್ಯ ವಕೀಲ ತನ್ನ ಪಾಟೀಸವಾಲಿನಲ್ಲಿ ಅದನ್ನು ಸುಳ್ಳೆಂದು ಸಾಬೀತುಪಡಿಸುವಷ್ಟು ಆದರೆ ಬ್ರಿಟೀಷ್ ಕಾನೂನಿಗೆ ಇವ್ಯಾವುದೂ ಬೇಕಿರಲಿಲ್ಲ. ಅವರಿಗೆ ನನ್ನನ್ನು ಮುಖ್ಯವಾಹಿನಿಯಿಂದ ದೂರವಿಡುವುದಷ್ಟೇ ಬೇಕಾಗಿದ್ದುದು. ಹಾಗೆಯೇ ಮಾಡಿದರು.

ಈ ಜೈಲಿಗೆ ಬಂದಾಗ ನನಗೆ ಯಾವ ಒಂಟಿತನವೂ ಕಾಡಲಿಲ್ಲ. ಕಗ್ಗತ್ತಲ ಕೂಪದಲ್ಲೂ ಹಾಯಾಗಿ ಇದ್ದು ಬಿಟ್ಟೆ. ಸಂಕಟವಾಗುತ್ತಿದ್ದುದು ಯಾವಾಗ ಗೊತ್ತೇ? ಓದಲು ಪುಸ್ತಕ ಕೊಡದಿದ್ದಾಗ, ಬರೆಯಲು ಲೇಖನಿ ಮತ್ತು ಹಾಳೆಯನ್ನು ನಿರಾಕರಿಸಿದಾಗ, ಲಂಡನ್ನಿನಲ್ಲಿದ್ದಾಗ ನನ್ನ ಖದರು ಬೇರೆಯೇ ಇತ್ತು. ಬ್ರಿಟೀಷರನ್ನು ನಡುಗಿಸಿಯೇಬಿಟ್ಟಿದ್ದೆ. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸಹಾನುಭೂತಿ ತೋರುತ್ತಿದ್ದ ಅನೇಕ ಬ್ರಿಟೀಷರನ್ನು ನನ್ನ ಗೆಳೆಯರನ್ನಾಗಿಸಿಕೊಂಡು ಅವರ ಮೂಲಕ ಇಂಗ್ಲೀಷ್ ಪತ್ರಿಕೆಗಳಲ್ಲೇ ನಮ್ಮ ಪರವಾದ ವರದಿಗಳು ಬರುವಂತೆ ನೋಡಿಕೊಳ್ಳುತ್ತಿದ್ದೆ. ಇಷ್ಟಕ್ಕೇ ನಿಲ್ಲದೇ ಅಧ್ಯಯನಕ್ಕೆಂದು ಬರುತ್ತಿದ್ದ ಸಿರಿವಂತರ ಮಕ್ಕಳನ್ನು ಮಾತನಾಡಿಸಿ ಪ್ರಭಾವ ಬೀರಿ ಅವರೊಳಗೆ ದೇಶಭಕ್ತಿಯ ಬೀಜವನ್ನು ಬಿತ್ತುತ್ತಿದ್ದೆ. ನಾಸಿಕ್‌ನಲ್ಲಿ ಮೈದಳೆದಿದ್ದ ಅಭಿನವ ಭಾರತ ಈಗ ಇಲ್ಲೂ ಹಬ್ಬಿತ್ತು. ಅನೇಕರಿಗೆ ಸಂಘಟನೆಯ ದೀಕ್ಷೆಯನ್ನು ಕೊಟ್ಟಿದ್ದೆ. ಮುಂದೆ ಗದರ್ ಎಂಬ ಕ್ರಾಂತಿಕಾರಿ ಸಂಸ್ಥೆಯನ್ನು ಕಟ್ಟಿ ವಿದೇಶೀ ಭಾರತದ ನೆಲದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಭದ್ರವಾದ ಬುನಾದಿ ಹಾಕಿದನಲ್ಲ ಲಾಲಾ ಆತ ಸಿಕ್ಕಿದ್ದು ಹರದಯಾಳ್, ಇಲ್ಲಿಯೇ. ಕರ್ಜನ್‌ವೈಲಿಯ ಹತ್ಯೆಗೈದ ಮದನ್‌ಲಾಲ್ ಧಿಂಗ್ರಾ ಬಿಳಿ ಹುಡುಗಿಯರ ಹಿಂದೆ ಸುತ್ತಾಡಿಕೊಂಡು ಹಾಯಾಗಿದ್ದ.

ಭಾರತ ಭವನದ ಸಂಪರ್ಕಕ್ಕೆ ಬಂದಮೇಲೆ ಪೂರ್ಣವಾಗಿ ಬದಲಾದ. ಆತನಿಗೆ ನನ್ನ ಭಾಷಣಗಳನ್ನು ಕೇಳುವುದಾಗುತ್ತಿರಲಿಲ್ಲ. ಏನಾದರೂ ಕೆಲಸ ಮಾಡಬೇಕು ಎನ್ನುವ ತುಡಿತ ಅವನದ್ದು.
ಬ್ರಿಟೀಷ್ ಅಧಿಕಾರಿಗಳನ್ನು ಹತ್ಯೆಗೈಯ್ಯುವ ನನ್ನ ಮನದಿಂಗಿತವನ್ನು ಹಂಚಿಕೊಂಡೆ. ಸಿದ್ಧನಾಗಿಯೇಬಿಟ್ಟ. ಕರ್ಜನ್‌ವೈಲಿಗೆ ಧಿಂಗ್ರಾನ ಕುಟುಂಬ ಬಲು ಆಪ್ತವಾಗಿತ್ತು. ಆದರೆ ಅದೇ ಕರ್ಜನ್‌ವೈಲಿ ಭಾರತೀಯ ಕ್ರಾಂತಿಕಾರಿಗಳನ್ನು ಮಟ್ಟಹಾಕುವ ಯೋಜನೆ ರೂಪಿಸುತ್ತಿದ್ದ. ನಮ್ಮ ಗುರಿ, ಅವನತ್ತಲೇ ತಿರುಗಿತು. ಮದನ್ ಸೂಕ್ತ ಸಂದರ್ಭ ನೋಡಿಕೊಂಡು ಲಂಡನ್ನಿನ ತುಂಬಿದ ಸಭೆಯೊಂದರಲ್ಲಿ ಕರ್ಜನ್‌ವೈಲಿಯನ್ನು ಗುಂಡಿಟ್ಟು ಸಂಹಾರ ಮಾಡಿಯೇಬಿಟ್ಟ! ಮದನ್, ಬಂಧಿತನಾದನೇನೋ ನಿಜ. ಆದರೆ ಪತರಗುಟ್ಟಿದ್ದು ಇಡಿಯ ಇಂಗ್ಲೆಂಡು, 1857ರ ಸಂಗ್ರಾಮದಂತೆ ಮತ್ತೊಮ್ಮೆ ಹೋರಾಟ ಜಾಗತಿಕ ಮಟ್ಟದಲ್ಲಿ ಹಬ್ಬಿದರೆ ಕಥೆಯೇನು ಎಂಬ ಭಯ ಅವರಿಗಿದ್ದೇ ಇತ್ತು. ನಾವೂ ಅದಾಗಲೇ ಇಂತಹ ಪ್ರಯತ್ನವನ್ನು ಮಾಡಿದ್ದೆವು.

ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಕಾರ್ಮಿಕರ ಸಮಾವೇಶದಲ್ಲಿ ಭಾರತದ ಧ್ವಜವನ್ನು ಜಗತ್ತಿಗೆ ಪರಿಚಯ ಮಾಡಿಕೊಡುವಂತೆ ಮೇಡಂ ಕಾಮಾರನ್ನು ಕೇಳಿಕೊಂಡಿದ್ದೆ. ಭಾರತದಲ್ಲಿ ಕ್ರಾಂತಿಕಾರಿಗಳ ಜಾಲ ಬೆಸೆದಂತೆ ಇಟಲಿ, ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಂತೆ ಸಹಾನುಭೂತಿ ಹುಟ್ಟಿಕೊಳ್ಳುವಂತೆ ನೋಡಿಕೊಂಡಿದ್ದೆ. ಬ್ರಿಟೀಷರಿಗೆ ಅಂದಾಜಿತ್ತು. ಇವೆಲ್ಲಕ್ಕೂ ಕೇಂದ್ರ ಸ್ವರೂಪಿಯಾಗಿದ್ದ ಭಾರತ ಭವನವನ್ನೇ ಮುಚ್ಚಿಬಿಟ್ಟರೆ ಇವರ ಹೋರಾಟದ ಕಥೆಯೇ ಮುಗಿಯುವುದೆಂಬುದು ಅವರ ನಿರ್ಣಯ, ನಾನೀಗ ಅಲೆಮಾರಿಯಾಗಿದ್ದೇನೆ, ಅನಾಥನೂ ಹೌದು.

ಎಲ್ಲಿಗೆ ಹೋದರೂ ನನಗೆ ನೆಲೆಯಿಲ್ಲ. ಕೊನೆಗೆ ಸಮುದ್ರ ತೀರದ ನಗರವೊಂದರಲ್ಲಿ ಮಿತ್ರರೊಂದಿಗೆ ಒಂದೆರಡು ದಿನ ಕಳೆದೆ. ಈ ವೇಳೆಗೆ ನನ್ನ ಮಗ ತೀರಿಕೊಂಡ ಸುದ್ದಿ ಬಂತು. ಲಂಡನ್ನಿಗೆ ಹೊರಡುವ ಮುನ್ನ ಆತನಿಗೆ ಸಿಡುಬಿನ ವಿರುದ್ಧ ಲಸಿಕೆ ಕೊಡಿಸುವಂತೆ ಕೇಳಿಕೊಂಡಿದ್ದೆ. ಮನೆಯವರೆಲ್ಲ ಮೈಮರೆತರೆಂದು ಕಾಣುತ್ತದೆ. ನಾಲ್ಕು ವರ್ಷದ ಆ ಮಗು ಕಣ್ಮುಚ್ಚಿಯೇಬಿಟ್ಟಿತು. ನನಗೋ ಚಡಪಡಿಕೆ. ಅವನ ಮುಖವನ್ನು ಕೊನೆಯಬಾರಿಗೆ ನೋಡಲೂ ಸಾಧ್ಯವಾಗದ ಹತಭಾಗ್ಯ ತಂದೆಯಾಗಿಬಿಟ್ಟೆ! ಕೆಲವೇ ತಿಂಗಳುಗಳ ಮುನ್ನ ಎಲ್ಲ ಕಾರ್ಯಗಳೂ ನಾನೆಣಿಸಿದಂತೆ ನಡೆಯುತ್ತಿದ್ದವು. ಈಗೇಕೋ ಭಾಗ್ಯವೇ ಬದಲಾಯ್ತು. ನನ್ನ ಬಲಗೈಯಂತಿದ್ದ ಧಿಂಗ್ರಾ ತೀರಿಕೊಂಡ. ಭಾರತ ಭವನದ ನೆಲೆ ಇಲ್ಲವಾಯ್ತು. ನಾವೆಲ್ಲ ಮಿತ್ರರೂ ಚೆಲ್ಲಾಪಿಲ್ಲಿಯಾದೆವು. ನನ್ನ ವಿರುದ್ಧ ಪೊಲೀಸರು ಕೈತೊಳೆದುಕೊಂಡು ಬಿದ್ದಿದ್ದರು. ಎಲ್ಲರ ಅಪೇಕ್ಷೆಯಂತೆ ಯಾರಿಗೂ ಅರಿವಾಗದಂತೆ ಫ್ರಾನ್ಸ್ ಸೇರಿಕೊಂಡೆ. ಎಲ್ಲ ದೃಷ್ಟಿಯಿಂದಲೂ ಅಲ್ಲಿ ಆರಾಮವಾಗಿಯೇ ಇದ್ದೆ. ನನ್ನ ಮನಕಲುಕುವ ಘಟನೆಯೊಂದು ಪತ್ರಿಕೆಯಲ್ಲಿ ವರದಿಯಾಯ್ತು. ಕಲೆಕ್ಟರ್ ಜಾಕ್ಸನ್‌ನ ಹತ್ಯೆ ಮಾಡಿದ್ದ ಅನಂತ ಲಕ್ಷ್ಮಣ ಕಾಯ್ದೆರೆಗೆ ಬ್ರಿಟೀಷ್ ಸರ್ಕಾರ ನೇಣು ಶಿಕ್ಷೆ ವಿಧಿಸಿತ್ತು.

ನನ್ನ ಮಾತು, ಬರಹಗಳಿಂದ ಪ್ರೇರಣೆ ಪಡೆದವರೆಲ್ಲ ಬಲಿವೇದಿಗೆ ಸಮರ್ಪಿಸಿಕೊಳ್ಳುತ್ತಿರುವಾಗ ನಾನೊಬ್ಬ ಹಿಂದೆ ನಿಂತಿರುವುದು ತರವೇನು? ಹಾಗೆಂಬ ಭಾವನೆ ಮನದಲ್ಲಿ ಮೂಡಿದೊಡನೆ ಮತ್ತೆ ಇಂಗ್ಲೆಂಡಿಗೆ ಹೊರಡಲು ಸಜ್ಜಾದೆ. ಪಾಪ ಮೇಡಂ ಕಾಮಾ ಪ್ರತಿಭಟಿಸಿದರು. ಶ್ಯಾಮ್‌ಜೀ ಕೃಷ್ಣವರ್ಮರು ನನ್ನ ನಿರ್ಣಯವನ್ನು ವಿರೋಧಿಸಿದರು. ನಾನು ನಿಶ್ಚಯ ಮಾಡಿಯಾಗಿತ್ತು. ಪ್ಯಾರಿಸಿನಿಂದ ಲಂಡನ್ನಿಗೆ ರೈಲಿನಲ್ಲಿ ಬಂದಿಳಿಯಬೇಕಷ್ಟೇ, ಲಂಡನ್ನಿನ ಪೊಲೀಸರು ಸುತ್ತುವರೆದರು, ಬಂಧಿಸಿದರು.

ತುರ್ತು ವಿಚಾರಣೆ ನಡೆಸಿ ಭಾರತಕ್ಕಟ್ಟುವ ನಿರ್ಣಯವನ್ನೂ ಕೊಟ್ಟುಬಿಟ್ಟರು. ಲಂಡನ್ನಿನ ಜೈಲುಗಳಿಂದ ತಪ್ಪಿಸಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿದ್ದೆವು. ದೈವದ ಬೆಂಬಲ ದಕ್ಕಲಿಲ್ಲ. ಆದರೇನು? ಹೋರಾಟದ ಕೆಚ್ಚು ಆರಬೇಕಲ್ಲ. ಹೀಗಾಗಿ ಪುರುಷ ಪ್ರಯತ್ನಕ್ಕೆ ಸಜ್ಜಾದೆ. ನನ್ನನ್ನು ಭಾರತಕ್ಕೆ ಕರೆದೊಯ್ಯುತ್ತಿದ್ದ ಹಡಗು ಫ್ರಾನ್ಸಿನ ತೀರದಲ್ಲಿ ನಿಂತಿದ್ದಾಗ ತಪ್ಪಿಸಿಕೊಳ್ಳಲೇಬೇಕೆಂದು ನಿಶ್ಚಯಿಸಿ ಹಡಗಿನ ಶೌಚಾಲಯಕ್ಕೆ ಹೋಗಿ ಅಲ್ಲಿರುವ ಕಿಂಡಿಯ ಮೂಲಕ ನನ್ನ ದೇಹವನ್ನು ನುಗ್ಗಿಸಿ ಸಮುದ್ರಕ್ಕೆ ಹಾರಿಬಿಟ್ಟೆ. ಹೀಗೆ ದೇಹವನ್ನು ನುಗ್ಗಿಸುವಾಗ ಮೈಮೇಲೆ ತರಚು ಗಾಯಗಳಾಗಿದ್ದವಲ್ಲ, ಉಪ್ಪುನೀರು ತಾಕಿದೊಡನೆ ಅವೆಲ್ಲವೂ ಚುರುಗುಟ್ಟಲಾರಂಭಿಸಿತ್ತು.

ನನಗೆ ಅದ್ಯಾವುದರ ಪರಿವೆಯೂ ಇರಲಿಲ್ಲ. ಈಜುತ್ತಾ ಮುನ್ನುಗ್ಗಿದೆ. ಅಟ್ಟಿಸಿಕೊಂಡು ಬಂದ ಪೇದೆಗಳಿಗಿಂತ ಮುಂಚಿತವಾಗಿ ದಡವನ್ನು ಸೇರಿದೆ. ನಾನೀಗ ಸಂಪೂರ್ಣ ಸ್ವತಂತ್ರವಾಗಿದೆ. ಏಕೆಂದರೆ ನಾನಿದ್ದುದು ಫ್ರಾನ್ಸಿನ ವ್ಯಾಪ್ತಿಯಲ್ಲಿ, ಅಲ್ಲಿನ ಪೇದೆಗೆ ಕೈಮುಗಿದು ನನಗೆ ಗೊತ್ತಿರುವಷ್ಟು ಫ್ರೆಂಚ್ ಭಾಷೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯುವಂತೆ ಕೇಳಿಕೊಂಡೆ. ಅಷ್ಟರವೇಳೆಗೆ ಹಿಂದಿನಿಂದ ಧಾವಿಸಿದ ಬ್ರಿಟೀಷ್ ಪೊಲೀಸರು ಫ್ರಾನ್ಸ್ ಪೊಲೀಸನ ಕೈಗೆ ಒಂದಿಷ್ಟು ಕಾಸನ್ನಿತ್ತು ನನ್ನನ್ನು ಮತ್ತೆ ಎಳೆದೊಯ್ದುಬಿಟ್ಟರು.

ಪುರುಷ ಪ್ರಯತ್ನಕ್ಕೆ ಕೊರತೆಯಿರಲಿಲ್ಲ, ದೈವ ಮತ್ತೊಮ್ಮೆ ಕೈಕೊಟ್ಟಿತು! ಬಹುಶಃ ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಇದು. ನನಗೆ ಎರಡು ಜೀವಾವಧಿ ಶಿಕ್ಷೆ ಸಿಗುವಲ್ಲಿ ಬ್ರಿಟೀಷರ ಮೇಲೆ ಈ ಘಟನೆಯ ಪ್ರೇರಣೆಯೂ ಖಂಡಿತವಾಗಿಯೂ ಇದ್ದೇ ಇತ್ತು. ಈ ಘಟನೆಯ ಕಾರಣಕ್ಕಾಗಿಯೇ ನನ್ನನ್ನು ಡೇಂಜರ್ ಎಂದು ವಿಶೇಷವಾಗಿ ಪರಿಗಣಿಸಲಾಯ್ತು. ಕಾಲಾಪಾನಿ ಜೈಲಿನಲ್ಲೂ ಕೆಲ ವರ್ಷಗಳ ನಂತರ ಖೈದಿಗಳನ್ನು ಜೈಲಿನ ಹೊರಗಿನ ಕೆಲಸಗಳಿಗೆ ಕಳಿಸಲಾಗುತ್ತಿತ್ತು. ನಾನು ಸಮುದ್ರಕ್ಕೂ ಹಾರಿ ತಪ್ಪಿಸಿಕೊಳ್ಳುತ್ತೇನೆ ಎಂಬ ಇತಿಹಾಸವುಳ್ಳವನಾದ್ದರಿಂದ ನನಗೆ ಜೈಲಿನ ಹೊರಗೆ ಕಾಲಿಡುವ ಅವಕಾಶವನ್ನು ಎಂದಿಗೂ ಕೊಡಲಿಲ್ಲ. ಅಷ್ಟೇ ಅಲ್ಲ, ನಮ್ಮನ್ನು ಬಿಡುಗಡೆ ಮಾಡಿರೆಂದು ಬ್ರಿಟೀಷರನ್ನು ಕೇಳಿಕೊಂಡ ಅನೇಕ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ನನ್ನನ್ನು ಮಾತ್ರ ಎಂದಿಗೂ ಬಿಡುಗಡೆ ಮಾಡಲು ಒಪ್ಪಲೇ ಇಲ್ಲ.

ನಾನೂ ಕ್ಷಮಾಪಣಾ ಪತ್ರ ಬರೆದಿದ್ದೆ; ಏಕೆ ಗೊತ್ತಾ?

ಹೌದು, ನಾನು ಎಂಟತ್ತು ಬಾರಿ ನನ್ನನ್ನು ಬಿಡುಗಡೆ ಮಾಡಿರಿ ಎಂದು ಕೇಳಿಕೊಂಡಿದ್ದೆ. ಒಮ್ಮೆಯಂತೂ 1911ರಲ್ಲಿ ದೆಹಲಿ ದರ್ಬಾರು ನಡೆದಾಗ ಕ್ಷಮಾಪಣೆ ಪತ್ರ ಬರೆದವರನ್ನೆಲ್ಲ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ನಾನು ಬಹಳಷ್ಟು ಯೋಚಿಸಿದೆ. ಈ ರೀತಿಯ ಪತ್ರ ಬರೆಯುವುದು ಸರಿಯೇ? ಬ್ರಿಟೀಷರಿಂದ ನಾವು ಯಾಚಿಸಬೇಕೆ? ಕ್ಷಮೆ ಎಂದು ಮತ್ತೆ ಮತ್ತೆ ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಈ ನರಕದಲ್ಲೇ ಇದ್ದು ಏನೂ ಮಾಡಲಾಗದಂತೆ ಅಸಹಾಯಕರಾಗಿ ಇರುವ ಬದಲು ನನ್ನಣ್ಣನನ್ನು ಸೇರಿದಂತೆ ರಾಜಕೀಯ ಇಲ್ಲಿಂದ ಕೈದಿಗಳನ್ನು ಬಿಡಿಸಿಕೊಂಡು ಹೊರಟರೆ ಶಾಂತವಾಗಿ ಕ್ರಾಂತಿಯ ಕಾರ್ಯ ನಡೆಸಬಹುದು ಎಂದುಕೊಂಡು ಕ್ಷಮಾಪಣಾ ಅರ್ಜಿಯನ್ನು ಬರೆದೆ ಮತ್ತು ಹೀಗೆ ಕ್ಷಮಾಪಣಾ ಅರ್ಜಿಯನ್ನು ಬರೆಯುವುದು ಅಲ್ಲಿನ ನಿಯಮಗಳಲ್ಲೊಂದಾಗಿತ್ತು.

ರಾಜಕೀಯ ಕೈದಿಗಳಿಗೆ ತಮ್ಮ ನಡತೆಯನ್ನು ಸರಿಯಾಗಿಸಿಕೊಳ್ಳುವ ಭರವಸೆ ಕೊಟ್ಟು ಅಂಡಮಾನಿನಿಂದ ಭಾರತದ ಜೈಲುಗಳಿಗೆ ಮರಳುವ ಅವಕಾಶವನ್ನು ಸರ್ಕಾರ ಕಲ್ಪಿಸುತ್ತಿತ್ತು. ಅರ್ಜಿ ಗುಜರಾಯಿಸುವಾಗಲೇ ಇದು ತಿರಸ್ಕರಿಸಲ್ಪಡುತ್ತದೆ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಹಾಗೆಯೇ ಆಯ್ತು ಕೂಡ. ಆದರೆ ನನಗೆ ಆಗಲೂ ಖುಷಿಯಾಗಿದ್ದು ಏಕೆ ಗೊತ್ತೇ? 1905ರಲ್ಲಿ ನಾವು ವಿದೇಶೀ ವಸ್ತ್ರಗಳ ಹೋಳಿಯನ್ನು ಆಚರಿಸಿ ಸ್ವದೇಶಿ ಕಿಚ್ಚನ್ನು ಹೊತ್ತಿಸಿದ್ದೆವಲ್ಲ, ಅದಕ್ಕೆ ಕಾರಣವಾದ ಬಂಗಾಳದ ವಿಭಜನೆ ರದ್ದಾಗಿತ್ತು. ಇದು ನಮ್ಮ ಗೆಲುವಿನ ಆರಂಭ ಮತ್ತು ಬ್ರಿಟೀಷರ ಸೋಲಿನ ಮುನ್ನುಡಿ ಎಂಬುದು ನನಗೆ ಅರಿವಾಯ್ತು! ಮುಂದೆ ಮತ್ತೆ ಕೆಲವು ಬಾರಿ ಕ್ಷಮಾಪಣಾ ಪತ್ರ ಬರೆಯುವ ಅವಕಾಶ ಬಂತು.

ಆರಂಭದಲ್ಲಿ ಸ್ವಲ್ಪ ಆಸ್ಥೆಯಿಂದ ಈ ಕೆಲಸ ಮಾಡುತ್ತಿದ್ದ ನಾನು ಆನಂತರ ಅದರಲ್ಲಿ ಭರವಸೆಯನ್ನೇ ಕಳೆದುಕೊಂಡೆ. ಒಮ್ಮೆಯಂತೂ ನಾನು, ಬಾರೀಂದ್ರರಾದಿಯಾಗಿ ರಾಜಕೀಯ ಕೈದಿಗಳೆಲ್ಲ ಕಳಿಸಿಕೊಟ್ಟ ಕ್ಷಮಾಪಣಾ ಪತ್ರದ ಕಥೆ ಏನಾಯ್ತು ಗೊತ್ತೇ? ನಾನು ಕಳಿಸಿದ ಪತ್ರ ನಾಲ್ವೇ ದಿನಗಳಲ್ಲಿ ತಿರಸ್ಕರಿಸಲ್ಪಟ್ಟಿದೆ ಎಂದು ಉತ್ತರ ಪಡೆಯಿತು. ಉಳಿದವರದ್ದಕ್ಕೆ ಪುರಸ್ಕಾರವೂ ಇಲ್ಲ, ತಿರಸ್ಕಾರವೂ ಇಲ್ಲ. ಬ್ರಿಟೀಷರಿಗೆ ನನ್ನ ಕುರಿತಂತೆ ಇದ್ದ ಆತಂಕ ಎಂಥದ್ದು ಎಂದು ನನಗೆ ನಗು ತಡೆದುಕೊಳ್ಳಲಾಗಲಿಲ್ಲ.

ಗದರ್‌ನ ಕ್ರಾಂತಿಕಾರಿಗಳು ಬ್ರಿಟೀಷರ ನಿದ್ದೆ ಕೆಡಿಸಿಬಿಟ್ಟಿದ್ದರು. ತಮ್ಮ ಪತ್ರಿಕೆಗಳಲ್ಲಿ ನಾನು ಗಾಣಸುತ್ತುವ, ಛಡಿಯೇಟಿಗೆ ಬೆನ್ನು ಕೊಟ್ಟಿರುವ ಚಿತ್ರಗಳನ್ನು ಪ್ರಕಟಿಸಿ ದೇಶ-ವಿದೇಶಗಳಲ್ಲಿ ಬೆಂಕಿಯನ್ನೇ ಹಚ್ಚಿಬಿಟ್ಟಿದ್ದರು. ಆ ವೇಳೆಗೆ ಇಲ್ಲಿ ಬ್ರಿಟೀಷರು ನಡೆದುಕೊಳ್ಳುತ್ತಿರುವ ರೀತಿ, ರಾಜಕೀಯ ಖೈದಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವ ವ್ಯವಸ್ಥೆಯ ಕುರಿತಂತೆ ಸಾಕಷ್ಟು ಸುದ್ದಿಯಾಗಿ ಸರ್ ರೆಜಿನಾಲ್ಡ್ ಕ್ರೆಡಾಕ್ ಇಲ್ಲಿಗೆ ಬಂದಿದ್ದ. ಅವನು ಭಾರತ ಸರ್ಕಾರದ ಗೃಹ ಕಾರ್ಯದರ್ಶಿ, ನನ್ನ ಕ್ಷಮಾಪಣಾ ಪತ್ರಗಳನ್ನು ನೋಡಿ ನಾನೆಷ್ಟು ಬದಲಾಗಿದ್ದೇನೆ ಎಂದು ತಿಳಿದುಕೊಳ್ಳುವುದು ಅವನ ಉದ್ದೇಶವಾಗಿತ್ತು. ಮಾತಿಗೆ ನಾನೇ ಆರಂಭಿಸಿದೆ, “ಸರ್ಕಾರ ಸುಧಾರಣೆಯ ಆಲೋಚನೆಯಲ್ಲಿದೆ.

ಹೀಗಾಗಿ ಕ್ರಾಂತಿಕಾರ್ಯದಲ್ಲಿದ್ದವರೆಲ್ಲ ಈಗ ಶಾಂತಿಯುತವಾದ ಹೋರಾಟಕ್ಕೆ ಮರಳುತ್ತಾರೆ? ಎಂದೆ. ಕ್ರೆಡಾಕ್, ‘ಹೊರಗಂತೂ ನಿನ್ನ ಹೆಸರನ್ನು ಹೇಳಿಯೇ ಕ್ರಾಂತಿಕಾರ್ಯ ನಡೆಯುತ್ತಿದೆ’ ಎಂದು ನೇರ ಆರೋಪ ಮಾಡಿದ. ನಿನ್ನೆಲ್ಲ ಮಿತ್ರರಿಗೂ ಕ್ರಾಂತಿಕಾರ್ಯ ನಿಲ್ಲಿಸುವಂತೆ ಪತ್ರ ಬರೆಯುವೆಯಾ ಎಂದೂ ಸವಾಲೆಸೆದ. ನಾನು ಇಲ್ಲವೆನ್ನಲಿಲ್ಲ. ಆದರೆ ನಿಮ್ಮ ಮೂಲಕ ಪತ್ರ ಬರೆಯಲಾರೆ, ನೇರವಾಗಿ ನನ್ನ ಮಿತ್ರರೊಂದಿಗೆ ನಾನೇ `ಮಾತನಾಡುವೆ ಎಂದೆ. ಇದರ ಪರಿಣಾಮಗಳೇನಾಗಬಹುದು ಎಂದು ಕೆಡಾಕಿಗೆ ಗೊತ್ತಿರಲಿಲ್ಲವೆಂದೇನಲ್ಲ. ಕುಪಿತನಾಗಿಯೇ ಆತ “ನಮ್ಮ ರಷ್ಯಾ ಇದ್ದಿದ್ದರೆ ಸ್ಥಾನದಲ್ಲಿ ರಷ್ಯಾ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿತ್ತು ಗೊತ್ತಾ?’ ಎಂದ. “ಹೇಗೆ ಸೈಬೀರಿಯನ್ನರಿಗೆ ಇಂದು ಸಮಾನವಾದ ಸ್ಥಾನಮಾನವನ್ನು ತಮ್ಮ ಕೊಡುತ್ತಿದ್ದಾರೋ ಹಾಗೆ ನಮಗೂ ಕೊಟ್ಟಿರುತ್ತಿದ್ದರು’ ಎಂದೆ. ಕ್ರೆಡಾಕ್‌ನ ಮುಖ ಇಂಗುತಿಂದ ಮಂಗನಂತಾಗಿತ್ತು.

ನಾನೇ ಸ್ವಲ್ಪ ದನಿ ಎತ್ತರಿಸಿ ಅವರೇನಾದರೂ ನೀವು ಮಾಡಿದಂತೆಯೇ ನಮ್ಮ ಮೇಲೆ ಏರಿಬಂದಿದ್ದರೆ ಹೇಗೆ ಮೊಘಲರಿಂದ ದೇಶವನ್ನು ಕಿತ್ತುಕೊಂಡೆವೋ ಹಾಗೆ ಅವರಿಂದಲೂ ಕಸಿಯುತ್ತಿದ್ದೆವು ಎಂದೆ. ಬ್ರಿಟೀಷರ ವಿರುದ್ಧ ನನ್ನ ಹೋರಾಟದ ಕಿಚ್ಚು ಆರಿಲ್ಲವೆಂಬುದಕ್ಕೆ ಆತನಿಗೆ ಇದೊಂದೇ ಉದಾಹರಣೆ ಸಾಕಿತ್ತು. ಆತ ಮರಳಿ ಹೋಗುವಾಗ ದಾರಿಯಲ್ಲಿಯೇ ವರದಿ ಬರೆದ. ತನ್ನ ಕೃತ್ಯಕ್ಕೆ ಒಂದಿನಿತೂ ದುಃಖ, ಪಶ್ಚಾತ್ತಾಪ ಸಾವರ್ಕ‌್ರನಿಗಿಲ್ಲ. ಈತನನ್ನು ಭಾರತದ ಯಾವ ಜೈಲಿಗೆ ಕಳಿಸಿಕೊಟ್ಟರೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಅಂಡಮಾನ್ ಜೈಲಿನ ಹೊರಗೆ ಕಳಿಸಿದರೂ ವಿದೇಶಿ ಕ್ರಾಂತಿಕಾರಿಗಳು ವ್ಯವಸ್ಥಿತವಾಗಿ ಇವನನ್ನು ಹಾರಿಸಿಕೊಂಡು ಹೋಗುತ್ತಾರೆ. ಆತ ಬ್ರಿಟೀಷ್ ಸರ್ಕಾರಕ್ಕೆ ಎಷ್ಟು ಅಪಾಯಕಾರಿ ಎಂಬುದು ಬ್ರಿಟೀಷ್ ಸರ್ಕಾರ ಭಾರತೀಯರೊಂದಿಗೆ ನಡೆದುಕೊಳ್ಳುವ ರೀತಿಯ ಮೇಲೆ ಅವಲಂಬಿಸಿದೆ ಎಂದು ಹೇಳುವ ಆತನ ಮಾತುಗಳು ಆತನಲ್ಲಿ ಒಂದಿನಿತೂ ಬದಲಾವಣೆಯನ್ನು ಸೂಚಿಸುವುದಿಲ್ಲ. ಹೀಗಾಗಿ ಆತನನ್ನು ಬಿಡಲೇಬಾರದು’ ಎಂದಿದ್ದ.

ಇದನ್ನು ನನ್ನ ಕ್ಷಮಾಪಣೆಯ ಪತ್ರ ಎಂದು ಮೂದಲಿಸುವ ಜನರಿಗೆ ಗೊತ್ತಿರಬೇಕಾದ ಒಂದೇ ಸಂಗತಿ ಏನು ಗೊತ್ತೆ? ಡಾಕ್ ಬಂದುಹೋದ ಮರುದಿನದಿಂದಲೇ ನನ್ನನ್ನು ಮತ್ತೆ ಒಂದು ತಿಂಗಳ ಏಕಾಂತವಾಸಕ್ಕೆ ತಳ್ಳಲಾಗಿತ್ತು. ನಾನು ಮಾನಸಿಕವಾಗಿ ಒಂದಿನಿತೂ ಜರ್ಝರಿತವಾಗಿಲ್ಲ ಎಂಬುದು ಈ ಶಿಕ್ಷೆಗೆ ಕಾರಣ. ನಾನು ಮಾನಸಿಕವಾಗಿ ಸೋತಿದ್ದೇನೆ ಎಂದು ಅರಿವಾಗಲೆಂದೇ ಮತ್ತೆ ಕ್ಷಮಾಪಣಾ ಪತ್ರಗಳನ್ನು ಬರೆದೆ. ಸರ್ಕಾರ ಕರುಣೆ ತೋರಿ ನನ್ನನ್ನು ಬಿಡುಗಡೆ ಮಾಡಲಿ. ನಾನು ಕಾನೂನಿಗೆ ಬದ್ಧನಾಗಿ ನಡೆಯುವುದನ್ನು ಕಂಡು ಅನೇಕ ತರುಣರು ಸರಿದಾರಿಗೆ ಬರುತ್ತಾರೆ. “ನಾನು ಸರ್ಕಾರಕ್ಕೆ ಈ ನಿಟ್ಟನಲ್ಲಿ ಯಾವ ರೀತಿಯಲ್ಲಿ ಬೇಕಿದ್ದರೂ ಸಹಕರಿಸಬಲ್ಲೆ. ನನ್ನನ್ನು ಜೈಲಿನಲ್ಲಿಟ್ಟು ನೀವೇನು ಸಾಧಿಸಬಲ್ಲಿರೋ ನಾನು ಹೊರಗೆ ಬಂದರೆ ನಿಮಗೆ ಅದಕ್ಕಿಂತಲೂ ಹೆಚ್ಚಿನ ಲಾಭವಾಗಬಲ್ಲದು’ ಎಂದೆಲ್ಲ ಬರೆದೆ. ಊಹೂಂ! ಆದರೂ ಅವರ ಮನಸ್ಸು ಕರಗಲಿಲ್ಲ. ಕೊನೆಗೊಮ್ಮೆ ಮನದಾಳದ ಬಯಕೆಯನ್ನೂ ಪತ್ರದಲ್ಲಿ ಹೇಳಿಕೊಂಡೆ, “ನನಗಾಗಿ ಈ ಪತ್ರ ಬರೆಯುತ್ತಿದ್ದೇನೆ ಎಂದು ಭಾವಿಸಿದರೆ ಅಥವಾ ಈ ಬಿಡುಗಡೆಗೆ ನಾನೇ ಅಡ್ಡಗಾಲು ಎಂದು ನಿಮಗನಿಸಿದರೆ ಸರ್ಕರ ನನ್ನ ಹೆಸರು ಕೈಬಿಟ್ಟರೂ ಚಿಂತಿಲ್ಲ.

ಇತರ ರಾಜಕೀಯ ಹೋರಾಟಗಾರರು ಬಿಡುಗಡೆಯಾದರೆ ನಾನೇ ಬಿಡುಗಡೆಯಾದಷ್ಟು ಸಂತಸ ನನಗೆ’ ಎಂತಲೂ ಹೇಳಿದೆ. ಇದರಲ್ಲೂ ನನ್ನದೊಂದು ಗುಪ್ತನೀತಿ ಇದೆ ಎಂದು ಭಾವಿಸಿದ ಸರ್ಕಾರ ನನ್ನ ಅಥವಾ ನನ್ನ ಜೊತೆಗಾರರ ಬಿಡುಗಡೆಗೆ ಒಪ್ಪಲೇ ಇಲ್ಲ. ನಾನೂ ಸುಮ್ಮನಿರಲಿಲ್ಲ. ಇರುವ ವ್ಯಾಪ್ತಿಯಲ್ಲಿಯೇ ಬದಲಾವಣೆಗಳನ್ನು ತರಲಾರಂಭಿಸಿದೆ.
ಈ ವೇಳೆಯಲ್ಲಿಯೇ ಶ್ರದ್ಧೆಯಿಂದ ಬೈಬಲ್ ಮತ್ತು ಕುರಾನ್‌ಗಳನ್ನು ಓದಿ ಮುಗಿಸಿದೆ. ಅಲ್ಲಿದ್ದ ಮುಸಲ್ಮಾನರ ಮಾತುಗಳಿಂದ ಅವರು ಹೇಗೆ ಹಿಂದೂಧರ್ಮದ ನಾಶಕ್ಕೆ ಸಿದ್ದವಾಗುತ್ತಿದ್ದಾರೆ ಎಂಬುದನ್ನು ಅರಿತುಕೊಂಡೆ. ಕೊನೆಗೆ ಹಿಂದೂಗಳನ್ನು ಮುಸಲ್ಮಾನರನ್ನಾಗಿ ಮತಾಂತರಿಸುತ್ತಿದ್ದ ಆ ಅಯೋಗ್ಯರಿಗೆ ಸವಾಲೆಸೆದು ಜೈಲಿನಲ್ಲಿಯೇ ಮುಸಲ್ಮಾನನೊಬ್ಬನನ್ನು ಹಿಂದೂಧರ್ಮಕ್ಕೆ ಮರಳಿ ಕರೆತಂದು ಎಲ್ಲರ ಹುಬ್ಬೇರುವಂತೆ ಮಾಡಿಬಿಟ್ಟೆ ಅಂಡಮಾನಿನ ತುಂಬ ಉರ್ದು ತುಂಬಿಕೊಂಡಿತ್ತು. ಹಿಂದಿಗೆ ಅಡಿಪಾಯ ಹಾಕಿಸಿದೆ. ಹಿಂದೂಗಳಲ್ಲಿ ಕಳೆದುಹೋಗಿದ್ದ ಆತ್ಮವಿಶ್ವಾಸವನ್ನು ಮರಳಿ ತುಂಬಿ ಮುಸಲ್ಮಾನ ಗೂಂಡಾಗಳನ್ನು ಎದುರಿಸುವ ತಾಕತ್ತು ತುಂಬಿದೆ. ರಾಜಕೀಯ ಕೈದಿಗಳಿಗೆ ಇತಿಹಾಸದ ಪಾಠ ಮಾಡುತ್ತಿದ್ದೆ. ಕೊನೆ ದಿನಗಳಲ್ಲಂತೂ ಬ್ಯಾರಿ ನನ್ನ ವಿರೋಧಕ್ಕೆ ಹೆದರುತ್ತಿದ್ದ.

ಒಮ್ಮೆ ನಮ್ಮೆಲ್ಲ ಸೆಲ್‌ಗಳ ಮೇಲೂ ಆತ ತನ್ನ ತಂಡದ ಮೂಲಕ ದಾಳಿ ಮಾಡಿಸಿದ್ದ. ಆಮೇಲೆ ಗೊತ್ತಾಯ್ತು ಅಂಡಮಾನ್ ಜೈಲುಗಳ ಹೊರಗೆ ಬಾಂಬ್ ತಯಾರಿಕೆ ನಡೆಯುತ್ತಿದೆ ಎಂಬ ಸುದ್ದಿ ಅವರ ಕಿವಿಗೆ ಬಿದ್ದಿತ್ತು ಮತ್ತು ಅದರ ಸೂತ್ರಧಾರಿ ನಾನೇ ಎಂಬುದು ಅವರ ನಂಬಿಕೆಯಾಗಿತ್ತು. ಒಟ್ಟಿನಲ್ಲಿ ಅಂಡಮಾನಿನ ಹೊರಗೆ ಕಾಲಿರಿಸದೆಯೂ ನಾನು ಆತಂಕಕ್ಕೆ ಕಾರಣವಾಗಿದ್ದೆ. ಬ್ಯಾರಿ ನಿವೃತ್ತನಾಗಿ ಹೋಗುವಾಗ ನನ್ನ ಬಳಿ ಬಂದು ಗೋಗರೆದಿದ್ದ. ನನ್ನ ಹಡಗು ಭಾರತದ ಮೂಲಕ ಹಾದುಹೋಗುವಾಗ ನಿನ್ನ ಕ್ರಾಂತಿಕಾರಿ ಮಿತ್ರರು ನನ್ನನ್ನು ಕೊಲ್ಲುವುದು ಖಚಿತ. ದಯಮಾಡಿ ನನ್ನ ಜೀವ ಕಾಪಾಡು’ ಎಂದಿದ್ದ. ನಾನು ನಕ್ಕು ಸುಮ್ಮನಾಗಿದ್ದೆ. ಪುಣ್ಯಾತ್ಮ ಭಾರತದ ಹತ್ತಿರವೂ ಹೋಗದಂತೆ ತನ್ನ ಯಾತ್ರೆಯನ್ನು ರೂಪಿಸಿಕೊಂಡ. ಅವನ ನಂತರ ಬರಬೇಕಿದ್ದ ಮತ್ತೊಬ್ಬ ಮುಸಲ್ಮಾನ ಜೈಲರ್ ನನ್ನನ್ನು ಕಂಡರೆ ಎಷ್ಟು ಹೆದರುತ್ತಿದ್ದನೆಂದರೆ ನಾನು ಅವನ ಕೊಲೆಗೆ ಹೊಂಚು ಹಾಕಿ ಬ್ಲಾಕ್‌ಮ್ಯಾಜಿಕ್ ಮಾಡಿಸಿದ್ದೇನೆ ಎನ್ನುತ್ತಿದ್ದ. ಒಟ್ಟಿನಲ್ಲಿ ನಾನು ಕುಂತರೂ ನಿಂತರೂ ಹೆದರಿಕೆ.

ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ ವರ್ತನೆ ಹೇಗಿತ್ತು?

ಸ್ವಾತಂತ್ರ್ಯಾನಂತರ ಕಾಂಗ್ರೆಸ್ ನನ್ನೊಂದಿಗೆ ಹೀಗೆಯೇ ವರ್ತಿಸಿತ್ತಲ್ಲ! ಪಾಕಿಸ್ತಾನವನ್ನು ರಚಿಸಿಕೊಂಡ ಲಿಯಾಖತ್ ಅಲಿಖಾನ್ ಭಾರತಕ್ಕೆ ಬರುತ್ತಾನೆಂದರೆ ಪ್ರಧಾನಿ ನೆಹರೂ ನನ್ನನ್ನು ಬಂಧಿಸಿ ಜೈಲಿಗೆ ತಳ್ಳುತ್ತಿದ್ದರು. ಮಹಾತ್ಮ ಗಾಂಧೀಜಿಯವರ ಹತ್ಯೆಗೆ ನನ್ನನ್ನೂ ಕಾರಣವಾಗಿಸಲಾಯ್ತು. ಗಾಂಧೀಜಿಯವರೊಂದಿಗೆ ನನಗೆ ಸೈದ್ಧಾಂತಿಕವಾದ ಭಿನ್ನತೆ ಇದ್ದಿರಬಹುದು ಆದರೆ ಕೊಲೆ ಮಾಡುವಂಥದ್ದಲ್ಲ. ನಮ್ಮ ಜನರನ್ನೇ ಕೊಲೆ ಮಾಡುವಷ್ಟು ನೀಚ ಮಟ್ಟಕ್ಕೆ ಹೋಗುವುದನ್ನು ನಾನು ಸಹಿಸುವುದೂ ಇಲ್ಲ. ಹಿಂದೂಧರ್ಮ ಈ ಬಗೆಯ ಕೊಲೆಯನ್ನು ಹೇಳಿಕೊಡುವೂದೂ ಇಲ್ಲ. ಸೈದ್ಧಾಂತಿಕ ವಿಚಾರವನ್ನು ವೈಚಾರಿಕ ನೆಲೆಕಟ್ಟಿನಲ್ಲಿ ವಿರೋಧಿಸುತ್ತೇವೆಯೇ ಹೊರತು ವ್ಯಕ್ತಿಯನ್ನೇ ಇಲ್ಲವಾಗಿಸುವಷ್ಟು ಹೇಡಿಗಳಲ್ಲ ನಾವು. ಬೇಕಂತಲೇ ನನ್ನನ್ನೂ ಆರೋಪಿಯನ್ನಾಗಿಸಲಾಯ್ತು.

ಪಕ್ಷದ ಕಾರ್ಯಕರ್ತರು ನನ್ನ ಮನೆಯ ಮೇಲೆ ಕಲ್ಲೆಸೆದರು. ಬಾಳ ನನ್ನ ತಮ್ಮನಾಗಿದ್ದ ಎಂಬ ಒಂದೇ ಕಾರಣಕ್ಕೆ ಕಲ್ಲಿನಿಂದಲೇ ಆತನ ತಲೆ ಒಡೆದರು. ಒಂದಷ್ಟು ಮಂದಿ ನನ್ನ ಜಾತಿಯವರಾಗಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ಗೂಬೆ ಕೂರಿಸಲಾಯ್ತು. ಅವರು ಭಯಭೀತರಾಗಿ ಮುಕ್ತವಾಗಿ ಓಡಾಡದಿರುವಂತೆ ಮಾಡಲಾಯ್ತು. ನನ್ನನ್ನು ಬಂಧಿಸಲು ಬಂದ ಪೊಲೀಸ್‌ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದರೆ ‘ಬಾಗಿಲು ಹಾಕಿಕೊಳ್ಳಬೇಡ. ನೀನು ಎಲ್ಲಿಂದ ಬೇಕಿದ್ದರೂ ತಪ್ಪಿಸಿಕೊಳ್ಳಬಹುದಾದಷ್ಟು ಅಪಾಯಕಾರಿ ವ್ಯಕ್ತಿ’ ಎಂದಾಗ ನಾನು ನಿಸ್ಸಹಾಯಕವಾಗಿ ನಕ್ಕಿದ್ದೆ. ಠಾಣೆಯಲ್ಲಿ ನನಗೆ ಹೃದಯಕ್ಕೆ ಇರಿಯುವಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ನಾನು ತಲೆತಗ್ಗಿಸಿ ನೊಂದು ಕುಳಿತಿದ್ದೆ. ಸ್ಕಾಟ್‌ಲ್ಯಾಂಡ್ ಯಾರ್ಡಿನ ಪೊಲೀಸರಿಗೆ ಮುಖಕ್ಕೆ ಹೊಡೆದಂತೆ ಉತ್ತರ ಕೊಡುತ್ತಿದ್ದ ನಾನು ನನ್ನದೇ ಮಂದಿ ಕೇಳುವ ಪ್ರಶ್ನೆಗಳಿಗೆ ನಿರುತ್ತರಿಯಾಗಿದ್ದೆ! ಕೋರ್ಟಿನ ಕಟಕಟೆಯಲ್ಲಿ ಕುಳಿತು ಸ್ವತಂತ್ರ ಭಾರತದಲ್ಲಿ ಹತ್ಯೆಯ ಆರೋಪವನ್ನು ಎದುರಿಸಬೇಕಾದಾಗ ನನಗಾದ ಸಂಕಟ ಯಾರೊಂದಿಗೆ ಹಂಚಿಕೊಳ್ಳಲಿ! ಸ್ವತಃ ನ್ಯಾಯಾಧೀಶರು ವಿಚಾರಣೆಗಳನ್ನು ಆಲಿಸಿ ನನ್ನ ಪರವಾಗಿ ನಿಂತು ಗೌರವದಿಂದ ಬೀಳ್ಕೊಟ್ಟರು. ಆದರೆ ಗಾಂಧಿ ಹತ್ಯೆಯ ಆರೋಪ ನನ್ನ ತಲೆಯ ಮೇಲಿಂದ ಹೋಗಲು ಕಾಂಗ್ರೆಸ್ಸಿಗರು ಬಿಡಲೇ ಇಲ್ಲ.

1960ರಲ್ಲಿ ಕಾಲಾಪಾನಿಯಿಂದ ನಾನು ಬಿಡುಗಡೆಯಾಗಬೇಕಿತ್ತು. ಆ ದಿನವನ್ನು ನನ್ನೆಲ್ಲ ಪ್ರೀತಿಯ ಮಿತ್ರರೂ ಮೃತ್ಯುಂ ಜಯ ದಿವಸವನ್ನಾಗಿ ಆಚರಿಸಿದರು. ಇದರ ವರದಿ ರೆಡಿಯೊದಲ್ಲಿ ಒಂದಿನಿತೂ ಬರದಂತೆ ನೋಡಿಕೊಂಡಿದ್ದು ಅಂದಿನ ಪ್ರಧಾನಿ. ಬ್ರಿಟೀಷರಿಗೆ ನಾನು ಕ್ಷಮಾಪಣಾ ಪತ್ರ ಬರೆದಿದ್ದೆ ಎಂದು ಮೂದಲಿಸುವ ಮಾತುಗಳನ್ನು ನಿರಂತರವಾಗಿ ಆಡಿಸಿದರು. ನಾನು ಈ ಪತ್ರಗಳನ್ನು ಏಕೆ ಬರೆದಿದ್ದೆ ಎಂಬುದುನ್ನು ವಿವರಿಸಬೇಕಿತ್ತೇನು? ರಜಪೂತ ರಾಜರಿಗೆ ಶಿವಾಜಿ ಮಹಾರಾಜರು ಪತ್ರ ಬರೆದಿರಲಿಲ್ಲವೇ? ರಾಜ ಜಯಸಿಂಹನಿಗೆ ಪತ್ರ ಬರೆದು “ಔರಂಗಜೇಬನ ಬದಲು ನೀನೇ ರಾಜನಾಗು. ನಾನು ನಿನ್ನ ಸೇವೆ ಮಾಡಿಕೊಂಡಿರುತ್ತೇನೆ” ಎಂದಿರಲಿಲ್ಲವೇ? ಸ್ವತಃ ಔರಂಗಜೇಬನ ಬಂಧನದಲ್ಲಿದ್ದಾಗ ಹತ್ತಾರು ಪತ್ರಗಳನ್ನು ಬರೆದು ಬಾದಶಹನ ಸೇವೆಗೆ ಸಿದ್ಧ ಎಂದು ಹೇಳಿರಲಿಲ್ಲವೇ? ಇವೆಲ್ಲವೂ ರಾಜತಾಂತ್ರಿಕ ನಡೆಗಳೇ ವಿನಃ ಹತಾಶ ಮನೋಭಾವವಲ್ಲ. ಈ ರೀತಿಯ ಪತ್ರಗಳನ್ನು ಬರೆದವ ನಾನೊಬ್ಬನೇ ಅಲ್ಲ. ಬಹುತೇಕ ಎಲ್ಲ ರಾಜಕೀಯ ಕೈದಿಗಳು ಕಾಲಾಪಾನಿಯಿಂದ ಹೊರಬಿದ್ದರೆ ಸಾಕು ಎಂಬ ಭಾವನೆಯೊಂದಿಗೆ ಇರುತ್ತಿದ್ದರು. ಆ ಜೈಲು ಅಷ್ಟು ಕ್ರೂರಿ.

ನೆಹರೂ ನಭಾ ಜೈಲಿನಲ್ಲಿ ಕಳೆದ 12 ದಿನಗಳ ವಿಚಾರ ನಿಮಗೆ ಗೊತ್ತಲ್ಲ? ಹಾಗೆ ನೋಡಿದರೆ ನೆಹರೂ ನಿಜವಾದ ಜೈಲಿನಲ್ಲಿದ್ದದ್ದು ಅದೊಮ್ಮೆ ಮಾತ್ರ ಅವರ ತಂದೆ ಮೋತಿಲಾಲ್ ನೆಹರೂ ಹನ್ನೆರಡೇ ದಿನದಲ್ಲಿ ಕ್ಷಮಾಪಣಾ ಪತ್ರವನ್ನು ಬರೆದು ಬಿಡುಗಡೆಗೆ ಕೋರಿಕೊಂಡಿದ್ದರು. ನಭಾಕ್ಕೆ ಕಾಲಿಡುವುದಿಲ್ಲ ಎಂಬ ಮಾತನ್ನು ನೆಹರೂ ಎಷ್ಟು ಚೆನ್ನಾಗಿ ಪಾಲಿಸಿದ್ದರೆಂದರೆ ಗಾಂಧಿಯವರಂತೂ ನೆಹರೂ ವಿಚಾರದಲ್ಲಿ ಇನ್ನೊಮ್ಮೆ ಇಂತಹ ಆತಂಕವನ್ನೆದುರಿಸಲು ಸಿದ್ಧವಿಲ್ಲ ಎಂದೇ ಹೇಳಿಬಿಟ್ಟಿದ್ದರು. ಒಂದು ಜೈಲಿನಲ್ಲಿ ಕಠಿಣ ಶಿಕ್ಷೆಯನ್ನು ಕೆಲವು ದಿನಗಳ ಕಾಲ ಎದುರಿಸಲಾಗದೇ ಮಂಡಿಯೂರಿದ್ದ ಈ ಮಂದಿ ಹತ್ತಾರು ವರ್ಷಗಳ ಕಾಲ ಕಾಲಾಪಾನಿಯಂತಹ ಯಮಲೋಕದಲ್ಲಿ ಬದುಕು ಕಳೆದವರನ್ನು 27 ಹಂಗಿಸುತ್ತಾರಲ್ಲ! ಏನು ಹೇಳೋದು.

ಇಷ್ಟಕ್ಕೂ ಹನ್ನೊಂದು ವರ್ಷಗಳ ನಂತರ ನನ್ನನ್ನು, ಅಣ್ಣನನ್ನು ಬ್ರಿಟೀಷ್ ಸರ್ಕಾರ ಕಾಲಾಪಾನಿಯಿಂದ ಬಿಡುಗಡೆ ಮಾಡಿತ್ತಲ್ಲ, ಅದು ನಾವು ಕಳಿಸಿದ ಕ್ಷಮಾಪಣಾ ಪತ್ರಕ್ಕಲ್ಲ, ಬದಲಿಗೆ ನಮ್ಮೆಲ್ಲರ ಅವ್ಯಕ್ತವಾದ ಹೋರಾಟಗಳ ಪರಿಣಾಮವಾಗಿ ಆ ಜೈಲನ್ನೇ ಮುಚ್ಚಿಬಿಡಬೇಕೆಂದು ಅವರು ನಿರ್ಧರಿಸಿದ್ದರಿಂದ.

ಒಂದಂತೂ ಹೆಮ್ಮೆ ನನಗಿದೆ. ನಾನು ಕಾಲಾಪಾನಿಗೆ ಹೋದದ್ದರಿಂದ ಸ್ವಾತಂತ್ರ್ಯ ಹೋರಾಟದ ತೀವ್ರತೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದಿರಬಹುದು. ಆದರೆ ನನ್ನ ಆಗಮನದ ನಂತರ ಕಾಲಾಪಾನಿಯ ಮೇಲೆ ಎಲ್ಲರ ಗಮನವೂ ಕೇಂದ್ರೀಕೃತಗೊಂಡು ಆ ಜೈಲು ಮುಚ್ಚುವಂತಾಯ್ತಲ್ಲ, ನೂರಾರು ಮಂದಿ ಕ್ರಾಂತಿಕಾರಿ ತರುಣರ ಬದುಕು ನಷ್ಟವಾಗುವುದು ನಿಂತಿತು ಅಷ್ಟೆ. ನಿಜಕ್ಕೂ ಬಿಟ್ಟುಹೋಗುವ ಸಮಯ ಈಗ ಬಂತು! ನಿಂದನೆಯ ಕೂರಂಬುಗಳು ನನ್ನನ್ನು ಇರಿಯುತ್ತಲೇ ಇದ್ದವು. ನಾನು ಬೇಸತ್ತು ಹೋಗಿದ್ದೆ. ಬದುಕು ಸಾಕೆನಿಸಿತ್ತು. ಒಮ್ಮೆಯಂತೂ ಸಮುದ್ರಕ್ಕೆ ನನ್ನನ್ನು ಸಮರ್ಪಿಸಿಕೊಳ್ಳಬೇಕೆಂದು ನಿಶ್ಚಯಿಸಿ ಹೊರಟುಬಿಟ್ಟೆ. ಜೊತೆಯಲ್ಲಿದ್ದವರು ಬಿಡಲಿಲ್ಲ. ಅಂಡಮಾನಿನ ಯಮಯಾತನೆಯನ್ನು ಸಹಿಸಿ ಬದುಕಬೇಕೆಂದು ನಿಶ್ಚಯಿಸಿದ್ದ ನಾನು ಸ್ವತಂತ್ರ ಭಾರತದಲ್ಲಿ ನಮ್ಮವರ ಇರಿತವನ್ನು ತಾಳಲಾಗದೇ ಸಾಯಬೇಕೆಂಬ ಸಂಕಲ್ಪ ಮಾಡಿದ್ದೆ. ಜೊತೆಗಿದ್ದವರು ಬಿಡಲಿಲ್ಲ.

ನನಗೆ ಸಾಕೆನಿಸಿಬಿಟ್ಟಿತ್ತು. 82 ವರ್ಷಗಳ ನನ್ನ ತುಂಬು ಬದುಕಿನಲ್ಲಿ ನಾನು ಬಿಎ ಪದವಿ ಕಳೆದುಕೊಂಡೆ, ವಿದೇಶದಲ್ಲಿ ಹೋಗಿ ಸಂಪಾದಿಸಿದ ಬ್ಯಾರಿಸ್ಟರ್ ಪದವಿ ಕಳೆದುಕೊಂಡೆ, ಅಣ್ಣನನ್ನು, ಅತ್ತಿಗೆಯನ್ನು, ನನ್ನ ಮುದ್ದಿನ ಪ್ರಭಾಕರನನ್ನು, ನನ್ನ ಆಸ್ತಿ-ಪಾಸ್ತಿ ಎಲ್ಲವನ್ನೂ, ಕೊನೆಗೆ ಯೌವ್ವನದ ಅತ್ಯಮೂಲ್ಯ ವರ್ಷಗಳನ್ನು ರಾಷ್ಟ್ರಯಜ್ಞಕ್ಕೆ ಹವಿಸ್ಸಾಗಿ ಅರ್ಪಿಸಿದೆ. ಇನ್ನು ನನ್ನ ಬಳಿ ಅರ್ಪಿಸಲು ಹತಾಶೆ ಬಿಟ್ಟರೆ ಮತ್ತೇನೂ ಇರಲಿಲ್ಲ. ಸ್ವತಂತ್ರ ಭಾರತದಲ್ಲಿ ಜಾತಿ-ಮತ-ಪಂಥಗಳ ತಾಕಲಾಟವನ್ನು ತೊಡೆಯಲು ನಾನು ತುಳಿತಕ್ಕೊಳಗಾದವರೊಂದಿಗೆ ಸೇರಿ ಮಾಡಿದ ಹೋರಾಟ ನನಗೀಗ ಆನಂದವನ್ನು ಕೊಡುತ್ತಿತ್ತು.

ಐಷಾರಾಮಿ ಜೈಲುಗಳಲ್ಲಿ ಮೆರೆದವರೆಲ್ಲ ಅಧಿಕಾರದ ಗದ್ದುಗೆಯ ಮೇಲೆ ಕುಳಿತು ಸ್ವಾತಂತ್ರ್ಯಕ್ಕಾಗಿ ರಕ್ತ ಚೆಲ್ಲಿದವರನ್ನು ಅವಮಾನಿಸುತ್ತಿದ್ದರು. ಇನ್ನು ನೋಡಲಾಗುವುದಿಲ್ಲವೆಂದು ಅನ್ನ, ನೀರು ತ್ಯಜಿಸಿಬಿಟ್ಟೆ. ಬಹಳ ದಿನಗಳೇನೂ ಇಲ್ಲ. ಸುಮಾರು ಇಪ್ಪತ್ತೋ ಇಪ್ಪತ್ತೊಂದು ದಿನಗಳೋ ಆಗಿರಬಹುದು. ನನ್ನ ಪ್ರಾಣಪಕ್ಷಿ ಹಾರಿಹೋಯ್ತು. ಸ್ವರ್ಗಕ್ಕೇ ಹೋಗಬಹುದಿತ್ತೇನೋ. ಭಾರತಕ್ಕಿಂತಲೂ ಮಿಗಿಲಾದ ಸ್ವರ್ಗ ಯಾವುದಿದೆ ಎಂದು ಇಲ್ಲಿಯೇ ತಿರುಗಾಡುತ್ತಾ ಉಳಿದೆ!
ಆದರೆ ಸತ್ತ ನಂತರವೂ ನನ್ನ ಮೇಲಿನ ನಿಂದನೆಗಳು ನಿಲ್ಲಲೇ ಇಲ್ಲವೆಂದಾಗ ಸಂಕಟವೆನಿಸಿತು. ಸಂಸತ್ ಭವನದಲ್ಲಿ ನನ್ನದೊಂದು ಚಿತ್ರ ಅನಾವರಣ ಮಾಡುತ್ತಾರೆಂದಾಗ ಅರಳಿದ ನಗು ಬಹಳ ಕಾಲ ಉಳಿಯಲಿಲ್ಲ. ಕಾಂಗ್ರೆಸ್ಸಿನ ನಾಯಕಿ ಇಟಲಿಯ ಸೋನಿಯಾ ಆ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ದೇಶದ್ರೋಹಿಯ ಚಿತ್ರ ಅನಾವರಣಕ್ಕೆ ನಾನು ಬರುವುದಿಲ್ಲ ಎಂದುಬಿಟ್ಟಳಂತೆ.

ಒಂದು ಕಾಲದಲ್ಲಿ ಆಕೆಯ ದೇಶದ ಮ್ಯಾಜಿನಿಯನ್ನು ದೇಶಭಕ್ತನೆಂದು ಕರೆದು ನಾನು ಬರೆದಿದ್ದ ಪುಸ್ತಕ ನೆನಪಾಯಿತು. ನಾವೆಲ್ಲ ಜೀವತೇಯ್ದ ಅಂಡಮಾನಿನ ಜೈಲಿನ ಹೊರಗೆ ನನ್ನ ಹೇಳಿಕೆಯ ಫಲಕವೊಂದನ್ನು ಹಾಕಿದ್ದರೆ ಕಾಂಗ್ರೆಸ್ ಮಂತ್ರಿ ಮಣಿಶಂಕರ್ ಅಯ್ಯರ್ ಅದನ್ನು ಕಿತ್ತೆಸೆದ. ದೇಶದ್ರೋಹಿಯ ಹೇಳಿಕೆ ಇಲ್ಲೇಕೆ ಎಂದ. ನನ್ನ ದೇಹವಿರಲಿಲ್ಲ. ಆದರೆ ಇವರ ಬೈಗುಳಕ್ಕೆ ಕೊನೆಯೂ ಇರಲಿಲ್ಲ. ಈಗ ಸಿದ್ದರಾಮಯ್ಯ ನನ್ನನ್ನು ದೇಶದ್ರೋಹಿ ಎನ್ನುತ್ತಿದ್ದಾನೆ. ಮುಸಲ್ಮಾನರಿರುವ ಜಾಗದಲ್ಲಿ ನನ್ನ ಫೋಟೊ ಕೂಡ ಹಾಕಬಾರದಂತೆ.

ಭಾರತವನ್ನೇ ಬಿಟ್ಟುಹೋಗಬೇಕಾದ ಸಂದರ್ಭ ಕೊನೆಗೂ ಬಂತೇನು?! ನನ್ನೆಲ್ಲ ದೇಶಭಕ್ತ ಮಕ್ಕಳನ್ನು ಆಶೀರ್ವದಿಸಿ ನಾನಿನ್ನು ಹೊರಟುಬಿಡಲೇ? ಈ ದೇಶದ ಕುರಿತಂತೆ ನಾವುಗಳು ಕಟ್ಟಿದ ಕನಸುಗಳು ನನಸಾಗುವುದನ್ನು ನಾನು ಕಾಣಲು ಸಾಧ್ಯವೇ ಇಲ್ಲವೇ? ನನ್ನ ಹೃದಯ ಭಾರವಾಗಿಬಿಟ್ಟಿದೆ. ನಿಮ್ಮ ಹೃದಯದಲ್ಲಾದರೂ ನಿಂದನೆಗಳಿಲ್ಲದೇ ನನಗೊಂದು ಸ್ಥಳ ಸಿಕ್ಕರೆ ಅದೇ ನನ್ನ ಭಾಗ್ಯ. ನೀವೆಲ್ಲರೂ ಸುಖವಾಗಿ ಸಮೃದ್ಧವಾಗಿದ್ದು ನನ್ನ ಭಾರತ ಶ್ರೇಷ್ಠ ಭಾರತವಾದರೆ ನನಗಷ್ಟೇ ಸಾಕು. ಸ್ವಾತಂತ್ರ್ಯಕ್ಕಾಗಿ ಜೀವತೇಯ್ದ ನಾನು ರಾಷ್ಟ್ರ ವಿಶ್ವಗುರುತ್ವದ ಪದವಿಯನ್ನೇರಲಿಕ್ಕಾಗಿ ಎಷ್ಟೇ ಬೈಗುಳಗಳನ್ನು ತಿನ್ನಲೂ ಸಿದ್ಧ. ಅದೊಂದು ಹೇಳಬೇಕಿತ್ತು, ಅದಕ್ಕಾಗಿ ಬಂದಿದ್ದೇನೆ ಅಷ್ಟೇ!

ಇದನ್ನೂ ಓದಿ | ವೀರ ಸಾವರ್ಕರ್‌ ಕುರಿತ ಸತ್ಯವನ್ನು ಎಲ್ಲರಿಗೂ ತಿಳಿಸಲು ಪುಸ್ತಕ ಪ್ರಕಟಿಸಿದ್ದೇವೆ ಎಂದ ಚಕ್ರವರ್ತಿ ಸೂಲಿಬೆಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಹುಬ್ಬಳ್ಳಿ

Murder case : ಸರ್ಕಾರಿ ಶಾಲೆಯಲ್ಲಿ ಹರಿದ ನೆತ್ತರು; ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

Murder case : ಹುಬ್ಬಳ್ಳಿಯಲ್ಲಿ‌ ವ್ಯಕ್ತಿಯೊಬ್ಬನ ಬರ್ಬರ ಹತ್ಯೆಯಾಗಿದೆ. ಸರ್ಕಾರಿ ಶಾಲೆಯೊಂದರ ಕೊಠಡಿಯೊಳಗೆ ವ್ಯಕ್ತಿ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

VISTARANEWS.COM


on

By

Murder Case in hubballi
Koo

ಹುಬ್ಬಳ್ಳಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಕೊಲೆಯಾಗಿ (Murder case) ಹೋಗಿದ್ದಾನೆ. ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಹುಬ್ಬಳ್ಳಿ (Hubballi News) ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಘಟನೆ ನಡೆದಿದೆ.

ಶರೀಫ್‌ಸಾಬ್ ಕಮಡೊಳ್ಳಿ ಎಂಬಾತ ಹತ್ಯೆಯಾದವನು. ಹಳ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕೊಠಡಿಯಲ್ಲೆ ಶರೀಪ್‌ಸಾಬ್‌ನ ಕೊಲೆಯಾಗಿದೆ. ಶಶಿಧರ ಚೆನ್ನೋಜಿ ಎಂಬಾತ ಕೊಲೆ ಆರೋಪಿ ಎಂದು ಶಂಕಿಸಲಾಗಿದೆ.

ಸದ್ಯ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ರಕ್ತಸಿಕ್ತವಾಗಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ (Shimogga Gang War) ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ (Triple Murder Case) ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ (Rowdy Sheeter) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Shoot out) ಬಂಧಿಸಿದ್ದಾರೆ.

ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್‌ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದರು.

ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್‌ ವಾರ್‌ ನಡೆದಿತ್ತು. ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್ ಸೇಬು‌, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮೊದಲಿಗೆ ಮೃತ ಯುವಕರ ಕಡೆಯ ಗುಂಪು ರೌಡಿ ಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ದಾಳಿ ಮಾಡಿದೆ. ಹೀಗಾಗಿ ಯಾಸೀನ್ ಕುರೇಶಿ ಗ್ಯಾಂಗ್ ಪ್ರತಿದಾಳಿ ನಡೆಸಿ, ಹಲ್ಲೆ ಮಾಡಲು ಬಂದಿದ್ದ ಶೋಹೆ‌ಬ್, ಗೌಸ್‌ನನ್ನು ಕೊಲೆ ಮಾಡಿದ್ದಾರೆ. ಬ್ಯಾಟ್, ಲಾಂಗುಗಳಿಂದ ಹೊಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Hit and Run: ಆಟೋಗೆ ಗುದ್ದಿ ವಿದ್ಯಾರ್ಥಿನಿಯನ್ನು ಕೊಂದು ಪರಾರಿಯಾದ ಕ್ಯಾಂಟರ್ ಚಾಲಕ

Hit and Run: ಶಿವಮೊಗ್ಗ ತಾಲೂಕಿನ ತಾವರೆ ಚಟ್ನಳ್ಳಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಕ್ಯಾಂಟರ್ ಚಾಲಕ ಅಪಘಾತಕ್ಕೆ ಕಾರಣನಾಗಿದ್ದಾನೆ. ಆಟೋಗೆ ಗುದ್ದಿ ಅದು ಪಲ್ಟಿಯಾದರೂ ನಿಲ್ಲಿಸದೆ ಕ್ಯಾಂಟರ್‌ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಆಟೋದಲ್ಲಿದ್ದ ವಿದ್ಯಾರ್ಥಿನಿ ಗಾನವಿ (17) ಸಾವಿಗೀಡಾಗಿದ್ದಾಳೆ.

VISTARANEWS.COM


on

shivamogga road accident hit and run
Koo

ಶಿವಮೊಗ್ಗ: ರಸ್ತೆ ಅಪಘಾತವೊಂದರಲ್ಲಿ (Road Accident) ಆಟೋ ರಿಕ್ಷಾಗೆ ಗುದ್ದಿ (Auto hit by Canter) ವಿದ್ಯಾರ್ಥಿನಿ ಸ್ಥಳದಲ್ಲೇ ಸಾವಿಗೀಡಾಗಲು (Student death) ಕಾರಣನಾಗಿ ನಿಲ್ಲಿಸದೆ ಪರಾರಿಯಾದ (Hit and Run) ಕ್ಯಾಂಟರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಡೆಡ್ಲಿ ಆಕ್ಸಿಡೆಂಟ್ (Shivamogga accident) ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶಿವಮೊಗ್ಗ ತಾಲೂಕಿನ ತಾವರೆ ಚಟ್ನಳ್ಳಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಕ್ಯಾಂಟರ್ ಚಾಲಕ ಅಪಘಾತಕ್ಕೆ ಕಾರಣನಾಗಿದ್ದಾನೆ. ಆಟೋಗೆ ಗುದ್ದಿ ಅದು ಪಲ್ಟಿಯಾದರೂ ನಿಲ್ಲಿಸದೆ ಕ್ಯಾಂಟರ್‌ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಆಟೋದಲ್ಲಿದ್ದ ವಿದ್ಯಾರ್ಥಿನಿ ಗಾನವಿ (17) ಸಾವಿಗೀಡಾಗಿದ್ದಾಳೆ.

ಇನ್ನು ಆಟೋದಲ್ಲಿದ್ದ ಗಾನವಿಯ ತಾಯಿ ಹಾಗೂ ಅಜ್ಜಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಟೋ ಚಾಲಕನಿಗೂ ಗಾಯಗಳಾಗಿವೆ. ಗಾನವಿ ತಾವರೆ ಚಟ್ನಳ್ಳಿಯ ಪೇಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ನಿವಾಸಿಯಾಗಿರುವ ಈಕೆ ರಜೆ ಊರಿಗೆ ತೆರಳಿದ್ದು, ಕಾರ್ಯಕ್ರಮ ಮುಗಿಸಿ ಕಾಲೇಜಿಗೆ ವಾಪಸ್ ಆಗುವಾಗ ಅಪಘಾತ ಸಂಭವಿಸಿದೆ.

ಏಕಾಏಕಿ ಬಂದ ಕ್ಯಾಂಟರ್ ಆಟೋಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದೆ. ಹಿಂಡ್ ಆಂಡ್ ರನ್ ಮಾಡಿದ ಕ್ಯಾಂಟರ್‌ ಚಾಲಕನನ್ನು ಪೊಲೀಸರು ಚೀಲೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ (Shimogga Gang War) ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ (Triple Murder Case) ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ (Rowdy Sheeter) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Shoot out) ಬಂಧಿಸಿದ್ದಾರೆ.

ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್‌ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದರು.

ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್‌ ವಾರ್‌ ನಡೆದಿತ್ತು. ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್ ಸೇಬು‌, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮೊದಲಿಗೆ ಮೃತ ಯುವಕರ ಕಡೆಯ ಗುಂಪು ರೌಡಿ ಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ದಾಳಿ ಮಾಡಿದೆ. ಹೀಗಾಗಿ ಯಾಸೀನ್ ಕುರೇಶಿ ಗ್ಯಾಂಗ್ ಪ್ರತಿದಾಳಿ ನಡೆಸಿ, ಹಲ್ಲೆ ಮಾಡಲು ಬಂದಿದ್ದ ಶೋಹೆ‌ಬ್, ಗೌಸ್‌ನನ್ನು ಕೊಲೆ ಮಾಡಿದ್ದಾರೆ. ಬ್ಯಾಟ್, ಲಾಂಗುಗಳಿಂದ ಹೊಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ (Chetan Chandra) ನಗರದ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ನಡೆದಿದೆ. ಪಿಯುಸಿ, ರಾಜಧಾನಿ, ಜರಾಸಂಧ, ಪ್ರಭುತ್ವ ಚಿತ್ರಗಳ ಮೂಲಕ ಖ್ಯಾತವಾಗಿರುವ ನಟನ ಮೇಲೆ ಭಾನುವಾರ ಹಲ್ಲೆ ನಡೆದಿದೆ.

ಕಾರಿನಲ್ಲಿದ್ದ ನಟ ಚೇತನ್ ಚಂದ್ರ ಅವರನ್ನು ರಕ್ತ ಬರುವಂತೆ ಥಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ನಟನ ಮೇಲೆ 20ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ಚೇತನ್‌ ಚಂದ್ರ ಅವರಿಗೆ ಕಗ್ಗಲಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ | Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

ಭಾನುವಾರ ಅಮ್ಮಂದಿರ ದಿನವಾಗಿದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಕೆಲ ಕಿಡಿಗೇಡಿಗಳು ಕಾರಿಗೆ ಅಡ್ಡ ಹಾಕಿ, ದುಡ್ಡು ಕೀಳಲು ಮುಂದಾಗಿದ್ದಾರೆ. ಹಣ ಕೊಡೋದಿಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿ, ನಟ ಚೇತನ್ ಚಂದ್ರ ಅವರ ಮುಖಕ್ಕೆ ರಕ್ತ ಬರುವ ಹಾಗೆ ಕಿಡಿಗೇಡಿಗಳು ಹೊಡೆದಿದ್ದಾರೆ.

ಇದನ್ನೂ ಓದಿ: Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Continue Reading

ಮಳೆ

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

Karnataka Rain: ಯಾದಗಿರಿ ಹಾಗೂ ವಿಜಯನಗರದಲ್ಲಿ ಸಿಡಿಲ ಹೊಡೆತಕ್ಕೆ ಇಬ್ಬರು ಕುರಿಗಾಹಿ ಮೃತಪಟ್ಟರೆ, ಜತೆಗಿದ್ದ ಹತ್ತಾರು ಕುರಿಗಳು ದಾರುಣವಾಗಿ ಪ್ರಾಣ ಕಳೆದುಕೊಂಡಿವೆ. ತಡರಾತ್ರಿ ಸುರಿದ ಭಾರಿ ಮಳೆಯು (Heavy Rain) ಅವಾಂತರವನ್ನೇ ಸೃಷ್ಟಿಸಿದೆ. ಮಳೆಯಿಲ್ಲದೆ ಕಂಗಲಾಗಿದ್ದ ಜನತೆಗೆ ಮಳೆಯಿಂದಲೇ ಭೀತಿ ಪಡುವಂತಾಗಿದೆ.

VISTARANEWS.COM


on

By

Karnataka Rain
Koo

ಯಾದಗಿರಿ: ಗುಡುಗು ಸಹಿತ ಬಿರುಗಾಳಿ ಮಳೆಗೆ (Heavy Rain) ಸಾವು-ನೋವು ಸಂಭವಿಸಿದೆ. ಯಾದಗಿರಿಯಲ್ಲಿ ಸುರಿದ ಭಾರಿ ಮಳೆಗೆ (Karnataka Rain) ಜನರು ಬೆಚ್ಚಿ ಬಿದ್ದಿದ್ದಾರೆ. ಯಾದಗಿರಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಸಿಡಿಲಿಗೆ ಕುರಿಗಾಹಿ ಸೇರಿ 20ಕ್ಕೂ ಹೆಚ್ಚು ಕುರಿಗಳು ಪ್ರಾಣ ಕಳೆದುಕೊಂಡಿವೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮ ಹೊರಭಾಗದಲ್ಲಿ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಭಾನುವಾರ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿತ್ತು. ಈ ವೇಳೆ ಸಿಡಿಲು ಬಡಿದು ಕುರಿಗಾಹಿ ಬುಯೆಪ್ಪ (22) ಎಂಬುವವರು ಮೃತಪಟ್ಟಿದ್ದಾರೆ. ಕುರಿಗಾಹಿ ಜತೆಗೆ ಸ್ಥಳದಲ್ಲೇ 7 ಕುರಿಗಳು ಮೃತಪಟ್ಟಿವೆ. ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಐಕೂರು ಗ್ರಾಮದಲ್ಲೂ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ. ಸಿಡಿಲು ಬಡಿದು ಐಕೂರು ಗ್ರಾಮದಲ್ಲಿ 10 ಕುರಿಗಳು ಸಾವನ್ನಪ್ಪಿವೆ. ಐಕೂರು ಗ್ರಾಮದ ರಾಯಪ್ಪ ಎಂಬ ಕುರಿಗಾಹಿಗೆ ಸೇರಿದ ಕುರಿಗಳನ್ನು ಜಮೀನಿನಲ್ಲಿರುವ ಕುರಿ ಹಟ್ಟಿಯಲ್ಲಿ ಬಿಡಲಾಗಿತ್ತು. ನಿನ್ನೆ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ವೇಳೆ ಸಿಡಿಲು ಬಡಿದಿದೆ. ಪರಿಣಾಮ ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

ವಿಜಯನಗರದಲ್ಲೂ ಸಿಡಿಲಿಗೆ ರೈತ ಸಾವು

ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಚೌಡಪ್ಪ( 33) ಮೃತ ದುರ್ದೈವಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಡವಿ ಮಲ್ಲಾಪುರದಲ್ಲಿ ಘಟನೆ ನಡೆದಿದೆ. ಮೇವಿನ ಬಣವೆಗೆ ಹೋದಿಗೆ ಹಾಕುತ್ತಿದ್ದಾಗ ಸಿಡಿಲು ಬಡಿದು ಚೌಡಪ್ಪ ಮೃತಪಟ್ಟಿದ್ದಾರೆ. ಹರಪನಹಳ್ಳಿ ತಾಲೂಕಾಡಳಿತ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿಯಲ್ಲಿ ಪಿಡಬ್ಲೂಡಿ ಕಚೇರಿಗೆ ನುಗ್ಗಿದ ನೀರು

ಯಾದಗಿರಿ ಜಿಲ್ಲೆಯಲ್ಲಿ ನಸುಕಿನ ಜಾವ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಪಿಡಬ್ಲೂಡಿ ಕಚೇರಿ ಆವರಣ ಹಾಗೂ ಮನೆಗೆ ಮಳೆ ನೀರು ನುಗ್ಗಿದೆ. ಯಾದಗಿರಿ ನಗರದ ಸುಭಾಷ್ ವೃತ್ತದ ಸಮೀಪದಲ್ಲಿರುವ ಪಿಡಬ್ಲೂಡಿ ಕಚೇರಿ ಹಾಗೂ ಮನೆಯೊಳಗೆ ನೀರು ನುಗ್ಗಿದ ಕಾರಣಕ್ಕೆ ಪರದಾಡಬೇಕಾಯಿತು. ಸೋಮವಾರ ಬೆಳಗಿನಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಬಿಸಿಲಿಗೆ ತತ್ತರಿಸಿದ ಜನರಿಗೆ ವರುಣ ತಂಪೆರೆದಿದ್ದಾನೆ.

ರಾಯಚೂರಿನಲ್ಲಿ ರಾತ್ರಿ ಇಡೀ ಮಳೆ ಅಬ್ಬರ

ರಾಯಚೂರಿನಲ್ಲಿ ರಾತ್ರಿ ಇಡೀ ಗುಡುಗು ಸಹಿತ ಭಾರೀ ಮಳೆಯಾಗಿದೆ. ನಗರದಲ್ಲಿ ಈ ಬೇಸಿಗೆಯಲ್ಲೇ ಮೊದಲ ಬಾರಿಗೆ ವರುಣ ದರ್ಶನ ಕೊಟ್ಟಿದ್ದಾನೆ. ಬಿಸಿಲಿನ ಸೆಕೆಯಿಂದ ಕಂಗೆಟ್ಟ ಜನರಿಗೆ ಸುಮಾರು 5 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಇಡೀ ರಾಯಚೂರು ನಗರದಾದ್ಯಂತ ವಿದ್ಯುತ್ ವ್ಯತ್ಯಯವಾಗಿತ್ತು.

ಚಿಕ್ಕಮಗಳೂರಲ್ಲಿ ಮಳೆಯಲ್ಲಿ ರಸ್ತೆ ಕಾಣದೆ ಅಪಘಾತ

ಮಳೆಯಲ್ಲಿ ರಸ್ತೆ ಕಾಣದೆ ಟಿಟಿ ವಾಹನವೊಂದು ವಿದ್ಯುತ್ ಕಂಬಕ್ಕೆ ಗುದ್ದಿದೆ. ಟಿಟಿ ವಾಹನ ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿತ್ತು. ಭಾರಿ ಮಳೆ ಹಿನ್ನೆಲೆಯಲ್ಲಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿತ್ತು. ಇದರಿಂದಾಗಿ ಅದೃಷ್ಟವಶಾತ್ ವಾಹನದಲ್ಲಿದ್ದ 9ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದರು. ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಕುಂಚೆ ಬೈಲು ಗ್ರಾಮದ ಬಳಿ ಘಟನೆ ನಡೆದಿದೆ. ಪ್ರಯಾಣಿಕರು ಟಿಟಿ ವಾಹನದಲ್ಲಿ ಹಾಸನದಿಂದ ಶೃಂಗೇರಿ ಕಡೆಗೆ ತೆರಳುತ್ತಿದ್ದರು.

ವಿಜಯನಗರದಲ್ಲಿ ಮಳೆಗೆ ಕ್ಷಣಾರ್ಧದಲ್ಲೇ ಕೊಚ್ಚಿ ಹೋಯ್ತು ಫಸಲು

ಬಿರುಗಾಳಿ ಸಹಿತ ಭಾರಿ ಮಳೆಗೆ ನೂರಾರು ಎಕರೆ ಬಾಳೆ ಬೆಳೆ ಧರೆಗೆ ಉರುಳಿವೆ. ವಿಜಯನಗರದ ಹೊಸೂರು, ಇಪ್ಪಿತೇರಿ, ನರಸಾಪುರ, ಮಾಗಾಣಿಗಳು, ಕಮಲಾಪುರ ಗ್ರಾಮ ಸೇರಿ ಹತ್ತಾರು ಗ್ರಾಮದ ರೈತ ಬದುಕು ಅಯೋಮಯವಾಗಿದೆ. ಮಕ್ಕಳಂತೆ ಜೋಪಾನ ಮಾಡಿದ್ದ ಬಾಳೆ ಬೆಳೆ ಮೇಲೆ ಪ್ರಕೃತಿಯ ಮುನಿಸಿಗೆ ಸಂಪೂರ್ಣ ನಾಶವಾಗಿದೆ.

ಕಳೆದ ಒಂದು ವಾರದಲ್ಲಿ ಎರಡು ಬಾರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಳೆ ಬೆಳೆ ನೆಲಕಚ್ಚಿದೆ. ಎಕರೆ ಹೊಲದಲ್ಲಿ ಬಾಳೆ ಬೆಳೆಯೋದಕ್ಕೆ ರೈತರು ಲಕ್ಷದವರೆಗೆ ಖರ್ಚು ಮಾಡಿದ್ದರು. ಇನ್ನೇನು ಒಂದು ತಿಂಗಳಲ್ಲಿ ಬಾಳೆ ಮಾರಾಟಕ್ಕೆ ರೆಡಿ ಮಾಡಿಕೊಂಡಿದ್ದ ರೈತರಿಗೆ ಮಳೆಯು ಆಘಾತವನ್ನುಂಟು ಮಾಡಿದೆ. ಮಳೆಯು ನಮ್ಮ ಬದುಕನ್ನು ಕಸಿದುಕೊಂಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಅಂತ ಬಾಳೆ ಬೆಳೆಗಾರರು ಅಳಲು ತೊಡಿಕೊಂಡಿದ್ದಾರೆ.

ಈ ಬಾರಿ ಮಳೆಯಿಲ್ಲದೇ ತುಂಗಭದ್ರಾ ಜಲಾನಯದ ಪ್ರದೇಶದ ರೈತರು ಕಂಗಾಲಾಗಿದ್ದಾರೆ. ವಿಜಯನಗರ ಕಾಲದ ಕಾಲುವೆಗಳನ್ನು ನಂಬಿ ತಿಂಗಳಿಗೊಮ್ಮೆ ಬಂದ ನೀರಲ್ಲೇ ಬದುಕು, ಬವಣೆ ನಡೆಯುತ್ತಿದ್ದೇವೆ. 2 ಟಿಎಂಸಿ ನೀರಲ್ಲಿ ಆಗೊಮ್ಮೆ, ಈಗೊಮ್ಮೆ ಬಂದ ನೀರಲ್ಲೇ ಬಾಳೆ ಬೆಳೆದಿದ್ದರು. ಇನ್ನೂ 15 ದಿನ ಮುಗಿದಿದ್ದರೆ ಬಾಳೆ ಗೊಣೆಗಳು ಕೈಗೆ ಬರುತ್ತಿದ್ದವು. ಕೈಗೆ ಬಂದ ಬಾಳೆ ಈಗ ನೆಲಕ್ಕೆ ಬಿದ್ದಿದೆ. ಮಳೆರಾಯ ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ್ದಾನೆ ಎಂದು ಕಿಡಿಕಾರಿದರು.

ಕೊಡಗು, ಕೊಪ್ಪಳದಲ್ಲೂ ಮಳೆಯ ಸಿಂಚನ

ಕಳೆದ ಮೂರು ತಿಂಗಳಿಂದ‌ ಬಿಸಿಲಿನ ತಾಪಕ್ಕೆ ಕೊಪ್ಪಳದ ಜನತೆ ಹೈರಾಣಾಗಿದ್ದರು. ಭಾನುವಾರ ರಾತ್ರಿ ಸುರಿದ ಗುಡುಗು ಸಹಿತ ಮಳೆಗೆ ವಾತಾವರಣ ತಂಪಾಗಿದೆ. ಕಳೆದ ಎರಡು ದಿನಗಳಿಂದ‌ ಸುರಿಯುತ್ತಿರುವ ಮಳೆಗೆ ಜನರು ಸಂತಸಗೊಂಡಿದ್ದಾರೆ. ಇತ್ತ ಕೊಡಗು‌ ಜಿಲ್ಲೆಯ ವಿವಿಧೆಡೆ ಮಳೆಯ ಸಿಂಚನವಾಗಿದೆ. ಹಲವು‌ ದಿನಗಳಿಂದ ಮಳೆಗಾಗಿ‌ ಕಾದಿದ್ದ ಜನರಿಗೆ ಸೋಮವಾರ ಮುಂಜಾನೆಯಿಂದಲೆ ತುಂತುರು ಮಳೆಯಾಗಿದೆ. ಮಳೆಯಿಂದ ಕೊಡಗಿನ‌ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಯಚೂರಲ್ಲಿ ಭತ್ತದ ರಾಶಿಗೆ ನುಗ್ಗಿದ ನೀರು

ಇನ್ನೂ ರಾಯಚೂರಿನಲ್ಲಿ ವರುಣನ ಆರ್ಭಟಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದರು. ಎರಡು ಗಂಟೆಗಳ ಕಾಲ ಸುರಿದ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆಗೆ ನಗರದ ರಸ್ತೆಗಳು ಹಳ್ಳದಂತಾದರೆ, ನಗರದ ಎಪಿಎಂಸಿಗೆ ನೀರು ನುಗ್ಗಿತ್ತು. ತೆಲಂಗಾಣದ ಮಕ್ತಲ್‌ನಿಂದ ಸಾಕಷ್ಟು ರೈತರು ಭತ್ತ ತಂದು ರಾಶಿ ಮಾಡಿದರು.ಆದರೆ ಮಳೆ ಸುರಿದ ಕಾರಣ ಭತ್ತದ ರಾಶಿ ನೀರುಪಾಲಾಗಿತ್ತು. ಎಪಿಎಂಸಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದ್ದರು.

ಇತ್ತ ರಾಯಚೂರು ನಗರದ ವಾರ್ಡ್‌ನ 34ರಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳು ಮತ್ತು ದೇವಸ್ಥಾನವು ಜಲಾವೃತಗೊಂಡಿತ್ತು. ಚಿಕ್ಕ ಕಾಲುವೆ ಬ್ಲಾಕ್ ಆಗಿದ್ದರಿಂದ ಈ ಆವಾಂತರಗಳು ಸೃಷ್ಟಿಯಾಗಿತ್ತು. ಮಳೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜನರು ಜಾಗರಣೆ ಮಾಡುವಂತಾಯಿತು. ಬೆಳಗ್ಗೆಯಿಂದ ಮಳೆ ನೀರು ಹೊರ ಹಾಕಲು ಜನರು ಹರಸಾಹಸ ಪಟ್ಟರು. ನಗರಸಭೆ ಮತ್ತು ಜನ ಪ್ರತಿನಿಧಿಗಳ ವಿರುದ್ಧ ವಾರ್ಡ್‌ನ ಜನರು ಆಕ್ರೋಶ ಹೊರಹಾಕಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

Murder Case: ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್‌ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ.

VISTARANEWS.COM


on

shivamogga triple murder case
Koo

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ (Shimogga Gang War) ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ (Triple Murder Case) ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ (Rowdy Sheeter) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Shoot out) ಬಂಧಿಸಿದ್ದಾರೆ.

ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್‌ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದರು.

ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್‌ ವಾರ್‌ ನಡೆದಿತ್ತು. ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್ ಸೇಬು‌, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮೊದಲಿಗೆ ಮೃತ ಯುವಕರ ಕಡೆಯ ಗುಂಪು ರೌಡಿ ಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ದಾಳಿ ಮಾಡಿದೆ. ಹೀಗಾಗಿ ಯಾಸೀನ್ ಕುರೇಶಿ ಗ್ಯಾಂಗ್ ಪ್ರತಿದಾಳಿ ನಡೆಸಿ, ಹಲ್ಲೆ ಮಾಡಲು ಬಂದಿದ್ದ ಶೋಹೆ‌ಬ್, ಗೌಸ್‌ನನ್ನು ಕೊಲೆ ಮಾಡಿದ್ದಾರೆ. ಬ್ಯಾಟ್, ಲಾಂಗುಗಳಿಂದ ಹೊಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ (Chetan Chandra) ನಗರದ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ನಡೆದಿದೆ. ಪಿಯುಸಿ, ರಾಜಧಾನಿ, ಜರಾಸಂಧ, ಪ್ರಭುತ್ವ ಚಿತ್ರಗಳ ಮೂಲಕ ಖ್ಯಾತವಾಗಿರುವ ನಟನ ಮೇಲೆ ಭಾನುವಾರ ಹಲ್ಲೆ ನಡೆದಿದೆ.

ಕಾರಿನಲ್ಲಿದ್ದ ನಟ ಚೇತನ್ ಚಂದ್ರ ಅವರನ್ನು ರಕ್ತ ಬರುವಂತೆ ಥಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ನಟನ ಮೇಲೆ 20ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ಚೇತನ್‌ ಚಂದ್ರ ಅವರಿಗೆ ಕಗ್ಗಲಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ | Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

ಭಾನುವಾರ ಅಮ್ಮಂದಿರ ದಿನವಾಗಿದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಕೆಲ ಕಿಡಿಗೇಡಿಗಳು ಕಾರಿಗೆ ಅಡ್ಡ ಹಾಕಿ, ದುಡ್ಡು ಕೀಳಲು ಮುಂದಾಗಿದ್ದಾರೆ. ಹಣ ಕೊಡೋದಿಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿ, ನಟ ಚೇತನ್ ಚಂದ್ರ ಅವರ ಮುಖಕ್ಕೆ ರಕ್ತ ಬರುವ ಹಾಗೆ ಕಿಡಿಗೇಡಿಗಳು ಹೊಡೆದಿದ್ದಾರೆ.

ಇದನ್ನೂ ಓದಿ: Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Continue Reading
Advertisement
Murder Case in hubballi
ಹುಬ್ಬಳ್ಳಿ6 mins ago

Murder case : ಸರ್ಕಾರಿ ಶಾಲೆಯಲ್ಲಿ ಹರಿದ ನೆತ್ತರು; ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

Kareena Kapoor Saif Ali Khan share a kiss in front of paparazzi
ಬಾಲಿವುಡ್6 mins ago

Kareena Kapoor: ರೊಮ್ಯಾಂಟಿಕ್‌ ಮೂಡ್‌ನಲ್ಲಿ ಸೈಫ್-ಕರೀನಾ: ಫೋಟೊಗ್ರಾಫರ್‌ಗಳ ಮುಂದೆಯೇ ಕಿಸ್ಸಿಂಗ್‌!

shivamogga road accident hit and run
ಕ್ರೈಂ27 mins ago

Hit and Run: ಆಟೋಗೆ ಗುದ್ದಿ ವಿದ್ಯಾರ್ಥಿನಿಯನ್ನು ಕೊಂದು ಪರಾರಿಯಾದ ಕ್ಯಾಂಟರ್ ಚಾಲಕ

Karnataka Rain
ಮಳೆ35 mins ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

Lok Sabha Election 2024
ದೇಶ55 mins ago

Lok Sabha election 2024: 4ನೇ ಹಂತದ ಮತದಾನ..ಮೈತ್ರಿಕೂಟದಲ್ಲಿ ಬಿಕ್ಕಟ್ಟು ನೂರು.. ಗೆಲುವಿನ ಲೆಕ್ಕಾಚಾರದಲ್ಲಿ ಎನ್‌ಡಿಎ ಮತ್ತು ಇಂಡಿಯಾ

Lok Sabha Elections 2024 Jr NTR, Allu Arjun, Chiranjeevi cast votes
ಟಾಲಿವುಡ್1 hour ago

Lok Sabha Elections 2024: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಟಾಲಿವುಡ್ ಸ್ಟಾರ್ಸ್‌​!

shivamogga triple murder case
ಕ್ರೈಂ2 hours ago

Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

Turbo Trailer Out mammoottys raj b shetty looks menacing
ಮಾಲಿವುಡ್2 hours ago

Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

prajwal revanna case
ಪ್ರಮುಖ ಸುದ್ದಿ2 hours ago

Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

Health Tips Kannada Stay away from these foods to get rid of acne
ಆಹಾರ/ಅಡುಗೆ2 hours ago

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ35 mins ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ5 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ7 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ17 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ18 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ18 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ22 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ23 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌