Gowri Habba | ಬಂದಾಳೆ ಗೌರಿ ಮಾತೆ ನಮ್ಮೆಲ್ಲರ ಮನೆಗೆ: ಸೌಭಾಗ್ಯ ತರುವ ದೇವಿಗೆ ತವರಿನಲ್ಲಿಂದು ಪ್ರೀತಿಯ ಪೂಜೆ - Vistara News

ಗಣೇಶ ಚತುರ್ಥಿ

Gowri Habba | ಬಂದಾಳೆ ಗೌರಿ ಮಾತೆ ನಮ್ಮೆಲ್ಲರ ಮನೆಗೆ: ಸೌಭಾಗ್ಯ ತರುವ ದೇವಿಗೆ ತವರಿನಲ್ಲಿಂದು ಪ್ರೀತಿಯ ಪೂಜೆ

ವರ್ಷಕ್ಕೊಮ್ಮೆ ಭೂಮಿಗೆ, ತವರು ಮನೆಗೆ ಬರುವ ಗೌರಿ ಮಾತೆ ತನ್ನ ಪುತ್ರ ಗಣಪನಷ್ಟು ಕಜ್ಜಾಯಪ್ರಿಯೆ ಅಲ್ಲ. ಹೆಂಗಳೆಯರಿಗೆಲ್ಲ ಗೆಳತಿಯಂತಿರುವ ದೇವಿ ಇವಳು..

VISTARANEWS.COM


on

Gowri Festival
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಲಕ್ಷ್ಮೀ ಹೆಗಡೆ

ದೇವಿ ಗೌರಿ ತನ್ನ ತವರು ಮನೆ(ಭೂಲೋಕ)ಗೆ ಮುಂಜಾನೆಯೇ ಬಂದು ನಿಂತಿದ್ದಾಳೆ. ಆ ತಾಯಿಯನ್ನು ನನ್ನಮ್ಮನೂ ಸೇರಿದಂತೆ, ನಾಡಿನ ಎಲ್ಲ ಮನೆಗಳ ಹೆಂಗಳೆಯರು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.. -ಪ್ರತಿವರ್ಷ ಭಾದ್ರಪದ ಶುಕ್ಲಪಕ್ಷದ ತದಿಗೆಯ ದಿನ ಗೌರಿ ಮಾತೆ ಭೂಮಿಗೆ ಅಂದರೆ ಅವಳ ತವರು ಮನೆಗೆ ಬರುತ್ತಾಳೆ, ಬೆಳಗ್ಗೆಯೇ ಬರುವ ಅವಳಿಗೆ ಸ್ನಾನದ ವ್ಯವಸ್ಥೆಯಾಗಬೇಕು. ಪೂಜೆಯಾಗಬೇಕು..ನೈವೇದ್ಯ ಅರ್ಪಿಸಬೇಕು..ಬಾಗಿನ ಕೊಡಬೇಕು ಮತ್ತು ನನ್ನನ್ನು ಹರಸು ತಾಯೀ..ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು-ಇದು ಹಿಂದೂಗಳ ನಂಬಿಕೆ ಹಾಗೂ ಈ ನಂಬಿಕೆಯ ಆಧಾರದ ಮೇಲೆ ಗೌರಿ ಹಬ್ಬದ ಆಚರಣೆಯ ವಿಧಾನವೂ ಇರುತ್ತದೆ. ಹಾಗಾಗಿ, ಭಾದ್ರಪದ ಮಾಸದ ಶುಕ್ಲಪಕ್ಷದ ತದಿಗೆಯ ದಿನ ಪ್ರತಿಮನೆಯೂ ತಾಯಿ ಗೌರಿ ಸ್ವಾಗತಕ್ಕೆ ಸಜ್ಜಾಗಿರುತ್ತದೆ.

ಒಂದೊಂದು ಪ್ರದೇಶದಲ್ಲಿ ಗೌರಿ ಹಬ್ಬದ ಆಚರಣೆ ವಿಧಾನ ಬೇರೆಬೇರೆಯಾಗೇ ಇರುತ್ತದೆ. ವ್ರತ, ಪೂಜೆ, ಕಜ್ಜಾಯಗಳ ತಯಾರಿಕೆಗಳಲ್ಲಿ ವಿಭಿನ್ನತೆ ಇದ್ದರೂ, ಸಂಭ್ರಮ ಒಂದೇ. ಅದರಲ್ಲೂ ಮುತ್ತೈದೆಯರಂತೂ ಸಿರಿ-ಸೌಭಾಗ್ಯ ತರುವ ಗೌರಿಯನ್ನು ಉತ್ಕೃಷ್ಟ ಭಕ್ತಿ-ಪ್ರೀತಿಯಿಂದ ಪೂಜಿಸಿ, ಭಜಿಸುತ್ತಾರೆ.

ನಮ್ಮನೆಯಲ್ಲೂ ಸಂಭ್ರಮ
ಮಲೆನಾಡಿನ ಭಾಗದ ನನ್ನ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಒಂದು ವಾರ ಇರುವಾಗಲೇ ಸಂಭ್ರಮ ಶುರುವಾಗಿದೆ. ತಾಯಿ-ಮಗನ ಸ್ವಾಗತಕ್ಕೆಂದು, ನನ್ನ ಅಮ್ಮ-ಅತ್ತಿಗೆಯರೆಲ್ಲ ಸೇರಿ ಮನೆ ಸ್ವಚ್ಛ ಮಾಡಿಟ್ಟುಕೊಂಡಿದ್ದಾರೆ. ದೇವರ ಮನೆಯಲ್ಲಿ ಆರತಿ ತಟ್ಟೆ, ಗಂಟೆ-ಜಾಗಟೆ-ಶಂಖಗಳೆಲ್ಲ ಪಳಪಳ ಹೊಳೆಯುತ್ತ ಸಜ್ಜಾಗಿವೆ. ಇಂದು ಗೌರಿಯೂ ಬಂದು ಪ್ರತಿಷ್ಠಾಪಿತಳಾಗಿದ್ದಾಳೆ. ಅವಳನ್ನು ಪೂಜಿಸಲು ಬೇಕಾದ ಸಾಮಗ್ರಿಗಳು, ಬಾಗಿನದ ವಸ್ತುಗಳನ್ನೆಲ್ಲ ನನ್ನಮ್ಮ ಜೋಡಿಸಿಟ್ಟುಕೊಂಡಿದ್ದಾರೆ.

ಹಣ್ಣು-ತರಕಾರಿಗಳ ‘ಫಲಾವಳಿ’ !
ನಮ್ಮ ಮಲೆನಾಡಿನ ಭಾಗದಲ್ಲಿ ಗೌರಿ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಅಪರೂಪ. ದೇಶದ-ನಾಡಿನ ಬೇರೆಬೇರೆ ಭಾಗದಲ್ಲಿ ಗೌರಿಯ ವಿಗ್ರಹ ಕೂರಿಸಿ ಅಲಂಕಾರ ಮಾಡಿ ಪೂಜಿಸುತ್ತಾರೆ. ಇನ್ನೂ ಹಲವರು ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಆದರೆ ನಮ್ಮಲ್ಲಿ ತುಸು ವಿಭಿನ್ನ. ನಾವು ಪ್ರಕೃತಿಯನ್ನೇ ಗೌರಿಯೆಂದು ಸ್ವಾಗತಿಸುತ್ತೇವೆ. ನಮಗಿಲ್ಲಿ ‘ಗೌರಿ ಹೂವಿನ ಗಿಡ’ ವೇ ಗೌರಿ ಮಾತೆ.

ಮಲೆನಾಡಿನಲ್ಲಿ ಗೌರಿ ಮಾತೆಯೆಂದು ಪೂಜಿಸಲ್ಪಡುವ ‘ಗೌರಿ ಹೂವು’

ನೀವೆಲ್ಲ ಕೇಳಿರಬಹುದು ಈ ಗೌರಿ ಹೂವಿನ ಬಗ್ಗೆ. ಮಲೆನಾಡಿನ ಭಾಗದಲ್ಲಿ ಇದೇ ಭಾದ್ರಪದ ಮಾಸದಲ್ಲಿ ಅರಳಿ ನಿಲ್ಲುವ ಹೂವಿದು. ಹೂವಿನ ಎಸಳುಗಳ ಮೇಲ್ಭಾಗ ಕೆಂಪು/ಕಿತ್ತಳೆ ಬಣ್ಣದಲ್ಲಿದ್ದರೆ, ಕೆಳಭಾಗ ಹಳದಿಯಾಗಿರುತ್ತದೆ. ಕೆಲವು ಹೂವುಗಳು ಪೂರ್ತಿ ಕೆಂಪಾಗಿರುತ್ತವೆ. ವೈಜ್ಞಾನಿಕ ಭಾಷೆಯಲ್ಲಿ ಈ ಹೂವಿಗೆ ಗ್ಲೋರಿಯೋಸಾ ಸುಪರ್ಬ ಎಂದು ಕರೆದರೂ, ನಾಟಿ ಪದ್ಧತಿಯಲ್ಲಿ ಇದೊಂದು ಔಷಧೀಯ ಸಸ್ಯ ಎನ್ನಿಸಿಕೊಂಡಿದ್ದರೂ, ನಮ್ಮ ಮಲೆನಾಡಿಗರ ಪಾಲಿಗೆ ಇದು ದೇವಿ ಗೌರಿ.. ಹಬ್ಬದ ಮುನ್ನಾದಿನವೇ, ಈ ಗೌರಿ ಗಿಡದ ಹೂವನ್ನು ಹುಡುಕಿ ತರಲಾಗುತ್ತದೆ. ಹಬ್ಬದ ದಿನ ಸ್ನಾನ ಮಾಡಿ, ಮಡಿಯಲ್ಲಿ ಈ ಹೂವಿನ ಗಿಡವನ್ನೇ ಗೌರಿಯೆಂದು ಪ್ರತಿಷ್ಠಾಪಿಸಿ, ಅದಕ್ಕೆ ಇನ್ನೂ ಹಲವು ಬಗೆಯ ಹೂವುಗಳು, ಅರಿಶಿಣ-ಕುಂಕುಮ, ಅಕ್ಷತೆಯನ್ನೆಲ್ಲ ಹಾಕಿ ಪೂಜಿಸಲಾಗುತ್ತದೆ.

ಮಲೆನಾಡಿನಲ್ಲಿ ಗೌರಿಯೆಂದರೆ ವನದುರ್ಗೆ. ಅವಳಿಗಾಗಿ ದೇವರಕೋಣೆಯಲ್ಲೆಲ್ಲ ವಿವಿಧ ತರಕಾರಿ, ಹಣ್ಣುಗಳನ್ನು ಇಡಲಾಗುತ್ತದೆ. ಇದನ್ನು ಫಲಾವಳಿ ಎನ್ನುವರು. ಬೆಂಡೆಕಾಯಿ, ಸೋರೆಕಾಯಿ, ಕ್ಯಾರೆಟ್​, ಮಾವಿನ ಹಣ್ಣು, ಸೇಬು ಹಣ್ಣು, ಕಿತ್ತಳೆ, ಬಾಳೆ ಹಣ್ಣು-ಹೀಗೆ ವಿವಿಧ ಬಗೆಯ ಹಣ್ಣು-ತರಕಾರಿಗಳನ್ನು ದೇವರ ಮನೆಯ ಛಾವಣಿಗೆ ಕಟ್ಟುವ ಒಂದು ವಿಶೇಷ ಸಂಪ್ರದಾಯ ಇದು. ಹಾಗಂತ ಇದು ನೈವೇದ್ಯವಲ್ಲ. ಫಲಗಳ ಆವಳಿ ಎಂದೇ ಕರೆಯಲಾಗುತ್ತದೆ. ‘ಪ್ರಕೃತಿ ಸ್ವರೂಪಿಣಿಯಾದ ಗೌರಿ ಮನೆಗೆ ಬರುವಾಗ, ಅವಳದ್ದೇ ಅಂಶಗಳಾದ ಫಲ-ಪುಷ್ಪಗಳ ಮೂಲಕ ಸ್ವಾಗತಿಸುವ ಸಲುವಾಗಿ ಈ ಆಚರಣೆ ಮಾಡಲಾಗುತ್ತದೆ’. ನಮ್ಮನೆಯಲ್ಲೂ ಅಪ್ಪ, ಗೌರಿ ಮಾತೆ ಸಂತುಷ್ಟಳಾಗಲೆಂದು ತುಂಬ ಮುತುವರ್ಜಿಯಿಂದ ಫಲಾವಳಿ ಕಟ್ಟಿದ್ದಾರೆ. ಗೌರಿ-ಗಣೇಶ ಹಬ್ಬ ಮುಗಿಯುವವರೆಗೂ ಅದನ್ನು ತೆಗೆಯುವ ಮಾತೇ ಇಲ್ಲ.

ಗೌರಿ ಎಂದರೆ ಮತ್ಯಾರಲ್ಲ, ಶಿವನ ಪತ್ನಿ ಪಾರ್ವತಿ. ಭಗವಂತ ಗಣಪನ ತಾಯಿ. ಪ್ರತಿವರ್ಷಕ್ಕೊಮ್ಮೆ ಪುತ್ರನ ಜತೆಗೆ ಭುವಿಗೆ ಬರುವ ಗೌರಿ, ತನ್ನ ಮಗನಷ್ಟು ಕಜ್ಜಾಯಪ್ರಿಯೆ ಅಲ್ಲ. ಅಂದರೆ ಗೌರಿ ಹಬ್ಬದ ನೈವೇದ್ಯಕ್ಕೆ ಒಂದೋ-ಎರಡೋ ಸಿಹಿ ಮಾಡಿದರೆ ಸಾಕಾಗುತ್ತದೆ. ನಮ್ಮಲ್ಲೂ ಅಷ್ಟೇ, ಗೌರಿಗಾಗಿ ಒಂದೇ ಸಿಹಿ ತಿಂಡಿ ಮಾಡುತ್ತಾರೆ. ಮರುದಿನ ಗಣಪತಿ ಪೂಜೆಯ ದಿನ ಹಲವು ಬಗೆಯ ಕಜ್ಜಾಯಗಳ ಜತೆ, ಗೌರಿ ದೇವಿಗಾಗಿ ಕರಕಲಿ ಎಂಬ ವಿಶೇಷ ಪದಾರ್ಥ ಸಿದ್ಧವಾಗುತ್ತದೆ. ಅದು ಕೆಸುವಿನ ಎಲೆಯಿಂದ ಮಾಡುವ ಒಂದು ಪದಾರ್ಥ. ಸಾಮಾನ್ಯವಾಗಿ ಬೇರೆ ದಿನಗಳಲ್ಲಿ ಇದಕ್ಕೆ ಉಪ್ಪು, ಖಾರ, ಬೆಳ್ಳುಳ್ಳಿ ಒಗ್ಗರಣೆ ಸರಿಯಾಗಿಯೇ ಬೀಳುತ್ತದೆಯಾದರೂ, ಗೌರಿಮಾತೆಗಾಗಿ, ಹಬ್ಬದ ದಿನ ಮಾಡಲಾಗುವ ಕರಕಲಿಯಲ್ಲಿ ಇದೆಲ್ಲ ಇರುವುದಿಲ್ಲ. ಸಪ್ಪೆಯೆನಿಸಿದರೂ ರುಚಿ ಕಡಿಮೆ ಇರುವುದಿಲ್ಲ. ಹೀಗಾಗಿ ಪ್ರತಿವರ್ಷ ಹಬ್ಬ ಮುಗಿಸಿ, ಊಟಕ್ಕೆ ಕುಳಿತಾಗಲೂ ಮನೆಯ ಹಿರಿಯರು ಒಬ್ಬರಲ್ಲ, ಒಬ್ಬರು ‘ವರ್ಷದಲ್ಲಿ ಎಷ್ಟೇ ಸಲ ಈ ಕರಕಲಿ ಮಾಡಿದರೂ, ಗೌರಿ ಹಬ್ಬದಂದು ಮಾಡುವ ಉಪ್ಪು-ಹುಳಿ-ಖಾರ-ಒಗ್ಗರಣೆಯಿಲ್ಲದ ಕರಕಲಿಯಷ್ಟು ರುಚಿ ಬರುವುದೇ ಇಲ್ಲ ನೋಡಿ’ ಎಂಬ ಮಾತನ್ನು ಆಡುತ್ತಾರೆ. ಅದೂ ಗೌರಿ ದೇವಿಯ ಕೃಪೆ ಎಂಬ ಭಾವ ಮಾತಿನಲ್ಲಿ ಎದ್ದು ಕಾಣುತ್ತಿರುತ್ತದೆ !

ಆಗಲೇ ಹೇಳಿದಂತೆ ಗೌರಿಯನ್ನು ನಾವು ಮಲೆನಾಡಿಗರು ಪ್ರಕೃತಿ ಮಾತೆಯೆಂದೇ ಭಾವಿಸುವುದರಿಂದ ಸುತ್ತಲಿನ ನಿಸರ್ಗ ನಮಗೇನು ಕೊಡುತ್ತದೆಯೋ ಅದರಿಂದಲೇ ದೇವಿಯನ್ನು ಪೂಜಿಸುತ್ತೇವೆ..ನೈವೇದ್ಯ ತಯಾರಿಸುತ್ತೇವೆ. ಕನ್ನೇಕುಡಿ ಕಟ್ನೆ, ಕೆಸುವಿನ ಸೊಪ್ಪಿನ ಕರಕಲಿಗಳೆಲ್ಲ ಮಲೆನಾಡಿನ ವಿಶೇಷ ಅಡುಗೆಯಾಗಿದ್ದರಿಂದ, ಮನೆ ಮಗಳು ಗೌರಿ ಬಂದಾಗ ಇಂಥ ವಿಶೇಷ ಪದಾರ್ಥಗಳನ್ನು ಮಾಡಿ ಅರ್ಪಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಕೆಸುವಿನ ಪತ್ರೊಡೆಯನ್ನೂ ತಯಾರಿಸಲಾಗುತ್ತದೆ.

ಬರುವಾಗ ಒಂದು ದಿನ ಮುಂಚಿತವಾಗಿಯೇ ಬರುವ ಗೌರಿ, ವಾಪಸ್ ಹೋಗುವುದು ತನ್ನ ಪುತ್ರ ಗಣಪನೊಂದಿಗೇ. ಚೌತಿ ಪೂಜೆಯ ಬಳಿಕ ಗಣಪತಿ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವಾಗಲೇ, ಗೌರಿಯನ್ನೂ ಅಂದರೆ ಗೌರಿ ಗಿಡವನ್ನೂ ನೀರಿನಲ್ಲಿ ಬಿಟ್ಟು, ಅರಿಶಿಣ-ಕುಂಕುಮ ಹಾಕಿ, ಕೊನೆಯದಾಗಿ ಒಂದು ಆರತಿಯನ್ನು ಎತ್ತಿ ಕಳಿಸುವುದು ನಮ್ಮಲ್ಲಿನ ಪದ್ಧತಿ. ಅದೇನೇ ಇರಲಿ ಇವತ್ತು ಈಗಷ್ಟೇ ಗೌರಿ ನಮ್ಮ-ನಿಮ್ಮೆಲ್ಲರ ಮನೆಗೆ ಕಾಲಿಟ್ಟಿದ್ದಾಳೆ. ಮನೆ ಮಗಳಾದ ಅವಳನ್ನು ಆದರಿಸಿ, ಪೂಜಿಸಿ-ಪ್ರೀತಿ ಕೊಟ್ಟು, ಆಶೀರ್ವಾದ ಪಡೆಯೋಣ ! ಅವಳಿರುವ ಎರಡು ದಿನ ಭಜನೆ, ಮಂತ್ರಗಳಿಂದ ಸಂತುಷ್ಟಗೊಳಿಸಿ ಕಳಿಸೋಣ. ಮತ್ತೆ ಬಾ..ಸದಾ ನಿನ್ನಾಶೀರ್ವಾದ ನನ್ನ ಮೇಲಿರಲಿ ಎಂದು ಕೇಳಿಕೊಳ್ಳೋಣ ..

ಇದನ್ನೂ ಓದಿ: Festive Fashion: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ರೇಷ್ಮೆಯ ಲಂಗ-ದಾವಣಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಗಣಪತಿ ವಿಸರ್ಜನೆ ಮಾಡುವಾಗ ನೀರಲ್ಲಿ ಮುಳುಗಿ ಬಾಲಕ ಸಾವು

Drowned in River : ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆ (Ganesha chaturthi) ಮಾಡುವಾಗ ಬಾಲಕನೊರ್ವ ಹಳ್ಳದಲ್ಲಿ ನೀರಿನ ಆಳ ಅರಿಯದೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

VISTARANEWS.COM


on

By

nishal tej
ಮೃತ ಬಾಲಕ ನಿಶಾಲ್‌ ತೇಜ್
Koo

ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.

ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್‌ ತೇಜ್‌ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು

ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.

ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್‌ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Food Poisoning : ಗಣೇಶ ವಿಸರ್ಜನೆಯಲ್ಲಿ ಪ್ರಸಾದ ಸೇವಿಸಿದ 28ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Tumkur News : ತುಮಕೂರಲ್ಲಿ ಗಣೇಶ ವಿಸರ್ಜನೆ (Ganesh Chaturthi) ವೇಳೆ ಪ್ರಸಾದ ಸೇವಿಸಿದ 20ಕ್ಕೂ ಹೆಚ್ಚು ಜನರು (Food Poisoning) ಅಸ್ವಸ್ಥಗೊಂಡಿದ್ದಾರೆ. ಹಲವರು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

By

Food Poisoning
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು
Koo

ತುಮಕೂರು: ಇಲ್ಲಿನ ಶೆಟ್ಟಪ್ಪನಹಳ್ಳಿಯಲ್ಲಿ ಆಹಾರ ಸೇವಿಸಿದ 28ಕ್ಕೂ ಹೆಚ್ಚು ಮಂದಿ (Food Poisoning) ಅಸ್ವಸ್ಥಗೊಂಡಿದ್ದಾರೆ. ಭಾನುವಾರ (ಸೆ.24) ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿದ್ದರೂ ಜತೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

6 ಮಂದಿ ಆರೋಗ್ಯವು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಲಕ್ಷ್ಮಿ (35), ಬೋರಮ್ಮ (68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗೂಳೂರು ಪ್ರಾಥಮಿಕ ವೈದ್ಯರಿಂದ ಗ್ರಾಮದಲ್ಲೇ ಚಿಕಿತ್ಸೆ ಮುಂದುವರಿದಿದೆ.

ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು 54 ಮನೆಗಳಿದ್ದು, ಕಳೆದ ಭಾನುವಾರ ಗ್ರಾಮದ ಓರ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ (ಸೆ.25) 10 ಗಂಟೆ ಸುಮಾರಿಗೆ 6 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥರು ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ವೇಳೆ ಎಚ್ಚತ್ತ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡ ಸಮೇತ ಶೆಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದುವರೆಗೆ ಸುಮಾರು 28ಮಂದಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಸ್ವಸ್ಥಗೊಂಡಿರುವವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 28 ಜನರಲ್ಲಿ 24 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಅಣಬೆ ಸೇವಿಸಿದ್ದ ಬಗ್ಗೆಯೂ ಶಂಕೆ ಇದೆ. ಮೇಲ್ನೋಟಕ್ಕೆ ಕುಡಿಯುವ ನೀರು ಕಲುಷಿತಗೊಂಡಿರಬಹುದು, ಆಹಾರದಲ್ಲಿ ವ್ಯತ್ಯಾಸಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಬಳಿಕ ಪ್ರಕರಣದ ಸತ್ಯಸಂಗತಿ ಹೊರಬರಲಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಆತಂಕವು ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಗಣೇಶ ಚತುರ್ಥಿ

Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್‌!

Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.

VISTARANEWS.COM


on

By

Ganesh Chaturthi Vehicular traffic on this route to be restricted tomorrow
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ.

ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ

ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ

1) ಸುಲ್ತಾನ್‌ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್‌ ಮನೆ ಜಂಕ್ಷನ್‌, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

  1. ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್‌ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  2. ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್‌ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  3. ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್‌ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.

ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್

‌ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್‌ ಆಗಲಿದೆ.
-ಕೆನ್ಸಿಂಗ್‌ಟನ್‌ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Ganesh Chaturthi: ನಾಳೆ ಗಣೇಶ ಮೂರ್ತಿಗಳ ವಿಸರ್ಜನೆ; ‌ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ

Ganesh Chaturthi: ಬೆಂಗಳೂರಿನ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸೆ.21ರಂದು ಸಂಜೆ 6 ಗಂಟೆಯಿಂದ ಸೆ.22 ಬೆಳಗ್ಗೆ 7 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

VISTARANEWS.COM


on

Ganesh visarjan
Koo

ಬೆಂಗಳೂರು: ನಗರದಲ್ಲಿ ಸೆ.21ರಂದು ಗಣೇಶ ಮೂರ್ತಿಗಳ ವಿಸರ್ಜನೆ (Ganesh Chaturthi) ‌ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸುಗಮ ಸಂಚಾರಕ್ಕಾಗಿ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಸೆ.21ರಂದು ಗುರುವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅದ್ದರಿಂದ ವಾಹನ ಸವಾರರು ಬದಲಿ‌ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ | Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದ್ದು, ಇದಕ್ಕಾಗಿ ಸಂಚಾರ ಪೋಲಿಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿಗಳ ನಿಯೋಜನೆ ಮತ್ತು ಬಂದೋಬಸ್ತ್ ಮಾಡಲಾಗಿದೆ.

ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ರಸ್ತೆಗಳ ವಿವರ

  1. ದಿಣ್ಣೂರು ಮುಖ್ಯರಸ್ತೆ
  2. ಆರ್.ಟಿ ನಗರ ಮುಖ್ಯರಸ್ತೆ.
  3. ಸಿಬಿಐ ಮುಖ್ಯರಸ್ತೆ.

ಮಾರ್ಗ ಬದಲಾವಣೆ ವಿವರಗಳು

1.ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್‌ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್‌-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು- ಟಿ.ವಿ ಟವರ್ – ಎಡ ತಿರುವು-ಜಯಮಹಲ್ ಮುಖ್ಯರಸ್ತೆ- ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

2.ಸುಲ್ತಾನ್ ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ -ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ -ಬಲ ತಿರುವು- ಮಠದಹಳ್ಳಿ ಮುಖ್ಯರಸ್ತೆ- ಗುಂಡೂರಾವ್ ಸರ್ಕಲ್ – ಎಡ ತಿರುವು – ತರಳಬಾಳು ರಸ್ತೆ – ಎಡತಿರುವು- ಬೆಂಗಳೂರು ಬಳ್ಳಾರಿ ರಸ್ತೆ ಮೇಕ್ರಿ ಸರ್ಕಲ್ – ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದಾಗಿದೆ.

    3.ಕಂಟೋನ್ಸೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು. – ಸುಲ್ತಾನ್ ಪಾಳ್ಯ – ಕಾವಲ್‌ ಭೈರಸಂದ್ರ ಕಡೆಗೆ:

    ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ – ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು) – ವಾಟರ್ ಟ್ಯಾಂಕ್ ಜಂಕ್ಷನ್ – ಬಲ ತಿರುವು – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೆಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ ತಿರುವು -ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      4.ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

      ಮೇಕ್ರಿ ಸರ್ಕಲ್‌- ಜಯಮಹಲ್ ಮುಖ್ಯರಸ್ತೆ – ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್‌ ಟ್ಯಾಂಕ್ ಜಂಕ್ಷನ್ – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೇಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ- ತಿರುವು ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      5.ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:

      ಮೇಕಿ ಸರ್ಕಲ್- ಬಲ ತಿರುವು – ಜಯಮಹಲ್‌ ಮುಖ್ಯರಸ್ತೆ ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್‌ – ಎಡ ತಿರುವು ಮಠದಹಳ್ಳಿ ಮುಖ್ಯ ರಸ್ತೆ – ಸರ್ಕಲ್ – ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಸಂಚರಿಸಬಹುದು.

      6.ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು – ಸಂಚರಿಸಬೇಕಾದ ಮಾರ್ಗಗಳು:

      ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ – ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್‌ – ಸಂಜಯನಗರ ಕ್ರಾಸ್- ತರಳಬಾಳು ರಸ್ತೆ ಎಡತಿರುವು- ದೇಸ್ವರಾಜ್ ರಸ್ತೆ -ಗುಂಡೂರಾವ್ ಸರ್ಕಲ್ ಬಲತಿರುವು- 1 – ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್‌ ಎಡ ತಿರುವು -ಪಿ.ಆರ್.ಟಿ.ಸಿ ಜಂಕ್ಷನ್ – ದೇವೆಗೌಡ ರಸ್ತೆ – ದಿಣ್ಣೂರು ಸಂಚರಿಸಬಹುದು. – ಎಡ ತಿರುವು ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ.

        Continue Reading
        Advertisement
        Solar Power
        ದೇಶ33 seconds ago

        Solar Power: ಜಾಗತಿಕವಾಗಿ ಮತ್ತೊಮ್ಮೆ ಬೆಳಗಿದ ಭಾರತ; ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಜಪಾನ್‌ನನ್ನೂ ಮೀರಿದ ಸಾಧನೆ

        sslc result 2024 vaishnavi self harming
        ಕ್ರೈಂ41 mins ago

        SSLC Result 2024: ಎಸ್‌ಎಸ್‌ಎಲ್‌ಸಿ ಫೇಲ್‌, ಸರಣಿ ಸಾವಿಗೆ ಮತ್ತೊಂದು ಸೇರ್ಪಡೆ

        Job News
        ಉದ್ಯೋಗ51 mins ago

        Job News: ಗುಡ್‌ನ್ಯೂಸ್‌; ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಶೀಘ್ರ 12,000 ಉದ್ಯೋಗಿಗಳ ನೇಮಕ

        Char Dham Yatra
        ದೇಶ60 mins ago

        Char Dham Yatra: ಇಂದಿನಿಂದ ಪವಿತ್ರ ಚಾರ್‌ಧಾಮ್‌ ಯಾತ್ರೆ ಆರಂಭ

        hd revanna jailed 2
        ಕ್ರೈಂ1 hour ago

        HD Revanna Jailed: ಇನ್ನು ಮೂರು ದಿನ ಎಚ್‌ಡಿ ರೇವಣ್ಣ ಭೇಟಿ ಯಾರಿಗೂ ಇಲ್ಲ

        Aravind Kejriwal
        ದೇಶ2 hours ago

        Arvind Kejriwal: ಕೇಜ್ರಿವಾಲ್‌ ಜಾಮೀನು ಅರ್ಜಿ ಇಂದು ವಿಚಾರಣೆ; ದಿಲ್ಲಿ ಸಿಎಂಗೆ ಜೈಲಾ…? ಬೇಲಾ?

        drowned in tank jindal bellary
        ಕ್ರೈಂ2 hours ago

        Drowned in Tank: ಜಿಂದಾಲ್‌ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳ ಸಾವು

        IPL 2024
        ಐಪಿಎಲ್ 20242 hours ago

        IPL 2024: ಆರ್‌ಸಿಬಿಯ ಪ್ಲೇ ಆಫ್ ಕನಸು ಜೀವಂತ; ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದ ಪಂಜಾಬ್‌: ಹೀಗಿದೆ ಹೊಸ ಅಂಕಪಟ್ಟಿ

        Virat Kohli
        ಐಪಿಎಲ್ 20242 hours ago

        Virat Kohli: ಮೈದಾನದಲ್ಲೇ ರುಸ್ಸೊ AK 47ಗೆ ಕಲಾಶ್‌ನಿಕಾವೋ ಗನ್ ತೆಗೆದ ಕೊಹ್ಲಿ; ವಿಡಿಯೊ ನೋಡಿ

        Akshaya Tritiya 2024
        ಪ್ರಮುಖ ಸುದ್ದಿ2 hours ago

        Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

        Sharmitha Gowda in bikini
        ಕಿರುತೆರೆ7 months ago

        Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

        Kannada Serials
        ಕಿರುತೆರೆ7 months ago

        Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

        Bigg Boss- Saregamapa 20 average TRP
        ಕಿರುತೆರೆ7 months ago

        Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

        galipata neetu
        ಕಿರುತೆರೆ5 months ago

        Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

        Kannada Serials
        ಕಿರುತೆರೆ7 months ago

        Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

        Kannada Serials
        ಕಿರುತೆರೆ7 months ago

        Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

        Bigg Boss' dominates TRP; Sita Rama fell to the sixth position
        ಕಿರುತೆರೆ7 months ago

        Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

        geetha serial Dhanush gowda engagement
        ಕಿರುತೆರೆ5 months ago

        Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

        varun
        ಕಿರುತೆರೆ6 months ago

        Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

        Kannada Serials
        ಕಿರುತೆರೆ8 months ago

        Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

        Dina Bhavishya
        ಭವಿಷ್ಯ5 hours ago

        Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

        Prajwal Revanna case Revanna bail plea to be heard on Monday Advocate Nagesh argument was as follows
        ಕ್ರೈಂ12 hours ago

        Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

        Prajwal Revanna Case Hasanambe is going to destroy this government HD Kumaraswamy curse
        ರಾಜಕೀಯ14 hours ago

        Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

        Prajwal Revanna Case DK Shivakumar alleged mastermind in 25000 pen drive allotment
        ಹಾಸನ14 hours ago

        Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

        SSLC Result 2024 what is the reason for most of the students fail in SSLC
        ಕರ್ನಾಟಕ21 hours ago

        SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

        Sslc exam Result 2024
        ಶಿಕ್ಷಣ21 hours ago

        SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

        SSLC Result 2024 secret behind 20 percent grace marks
        ಕರ್ನಾಟಕ22 hours ago

        SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

        SSLC Result 2024 78 schools get zero results in SSLC exams
        ಬೆಂಗಳೂರು22 hours ago

        SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

        SSLC Result 2024 SSLC students get 20 percent grace marks but result is very poor
        ಶಿಕ್ಷಣ22 hours ago

        SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

        SSLC Exam Result 2024 Announce
        ಬೆಂಗಳೂರು24 hours ago

        SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

        ಟ್ರೆಂಡಿಂಗ್‌