Video | ಈತ 3 ಕೆಜಿ ಸಮೋಸಾವನ್ನು ಎಷ್ಟು ನಿಮಿಷದಲ್ಲಿ ತಿಂದಿರಬಹುದು? 11 ಸಾವಿರ ರೂ ಬಹುಮಾನವೂ ಸಿಕ್ತು - Vistara News

ವೈರಲ್ ನ್ಯೂಸ್

Video | ಈತ 3 ಕೆಜಿ ಸಮೋಸಾವನ್ನು ಎಷ್ಟು ನಿಮಿಷದಲ್ಲಿ ತಿಂದಿರಬಹುದು? 11 ಸಾವಿರ ರೂ ಬಹುಮಾನವೂ ಸಿಕ್ತು

ತುಂಬ ಕಡಿಮೆ ಸಮಯದಲ್ಲಿ ಮೂರು ಕೆಜಿ ಸಮೋಸಾ ತಿಂದು ಸುದ್ದಿಮಾಡಿದ್ದು ರಜನೀಶ್ ಜ್ಞಾನಿ ಎಂಬ ಬ್ಲಾಗರ್​. ಈ ವಿಡಿಯೋಕ್ಕೆ ಈಗಾಗಲೇ 1 ಮಿಲಿಯನ್ಸ್ ವೀವ್ಸ್ ಬಂದಿದೆ.

VISTARANEWS.COM


on

Man Eats 3 Kg Samosa In 5 Minutes In Delhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಡ್ಲಿ ತಿನ್ನುವ, ರಾಗಿ ಮುದ್ದೆ ಮತ್ತಿತರ ತಿಂಡಿಗಳನ್ನು ತಿನ್ನುವ ಸ್ಪರ್ಧೆಗಳೆಲ್ಲ ನಡೆಯುತ್ತಿರುತ್ತವೆ. ಹೋಟೆಲ್​, ಉಪಾಹಾರ ಗೃಹಗಳಲ್ಲಿ ಹಣ ಕೊಟ್ಟು ತಿಂಡಿ ತಿನ್ನಬೇಕು, ಆದರೆ ಇಂಥ ಸ್ಪರ್ಧೆಗಳಲ್ಲಿ ತಿಂಡಿಯನ್ನೂ ಹೊಟ್ಟೆ ತುಂಬಿ, ಹೆಚ್ಚಾಗುವಷ್ಟು ತಿನ್ನುವುದಲ್ಲದೇ, ಬಹುಮಾನದ ರೂಪದಲ್ಲಿ ರೂಪಾಯಿಯನ್ನೂ ಪಡೆಯಬಹುದು. ಕೆಲವು ಕಡೆಗಳಲ್ಲಂತೂ ಇನ್ನೂ ಆಕರ್ಷಕ ಬಹುಮಾನಗಳನ್ನೂ ನೀಡಲಾಗುತ್ತದೆ. ಹೀಗಾಗಿ ತುಸು ರಿಸ್ಕ್​ ಎನ್ನಿಸಿದರೂ, ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವರು ಮುಂದೆ ಬರುತ್ತಾರೆ.

ಹೀಗೆ ಸಮೋಸಾ ತಿನ್ನುವ ಸ್ಪರ್ಧೆಯಲ್ಲಿ ರಜನೀಶ್ ಜ್ಞಾನಿ ಎಂಬ ಬ್ಲಾಗರ್​ ಗೆದ್ದಿದ್ದಾರೆ ಮತ್ತು ಆ ವಿಡಿಯೋವನ್ನು ತಮ್ಮದೇ ಫೇಸ್​ಬುಕ್ ಪೇಜ್​ ಮತ್ತು ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಇವರು ಸದಾ ಸ್ಟ್ರೀಟ್​ ಫುಡ್​ಗಳ ಬಗ್ಗೆಯೇ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಈಗ ಅವರು ದೆಹಲಿಯ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಐದೇ ನಿಮಿಷದಲ್ಲಿ ಮೂರು ಕೆಜಿ ತೂಕದ ಸಮೋಸಾ ತಿಂದಿದ್ದಾರೆ. ಅಷ್ಟೇ ಅಲ್ಲ, ಆ ರೆಸ್ಟೋರೆಂಟ್​ ಮಾಲೀಕನಿಂದ 11 ಸಾವಿರ ರೂಪಾಯಿ ಬಹುಮಾನವನ್ನೂ ಪಡೆದಿದ್ದಾರೆ. ಇವರ ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, 1 ಮಿಲಿಯನ್​ಗಳಷ್ಟು ವೀಕ್ಷಣೆ ಕೂಡ ಪಡೆದಿದೆ.

ಇದು ಸ್ಟ್ರೀಟ್ ಫುಡ್​ ಚಾಲೆಂಜ್​ ಆಗಿದ್ದು, ದೆಹಲಿಯ ರಸ್ತೆ ಬದಿಯೊಂದರ ಉಪಾಹಾರ ಗೃಹದಲ್ಲಿ ಸ್ಪರ್ಧೆ ನಡೆದಿತ್ತು. ಪ್ರಾರಂಭದಲ್ಲಿ ಆ ಹೋಟೆಲ್​ ಮಾಲೀಕ ಮತ್ತು ಬ್ಲಾಗರ್​ ಸೇರಿ ಸ್ಪರ್ಧೆಯ ನಿಯಮಗಳನ್ನು ವಿವರಿಸುತ್ತಾರೆ. ನಂತರ ಮೂರು ಕೆಜಿ ಸಮೋಸಾ ತಯಾರಿಸುವುದನ್ನೂ ವಿಡಿಯೋದಲ್ಲಿ ತೋರಿಸಲಾಗುತ್ತದೆ. ಬಳಿಕ ಬ್ಲಾಗರ್​ ರಜನೀಶ್ ಜ್ಞಾನಿ, ದೊಡ್ಡ ಗಾತ್ರದ ಸಮೋಸಾವನ್ನು ತಿನ್ನುತ್ತಾರೆ. ಆತ ಬಾಯಿಗೆ ತುಂಬಿಕೊಳ್ಳುವುದನ್ನು ನೋಡಿದರೆ ನಮಗೂ ಒಂದು ಕ್ಷಣ ದಿಗಿಲಾಗುತ್ತದೆ. ಆದರೆ ಅವರು ಅದೆಷ್ಟು ವೇಗವಾಗಿ ತಿಂದಿದ್ದಾರೆ ಎಂದರೆ, ಐದೇ ನಿಮಿಷದಲ್ಲಿ ಪೂರ್ತಿ ಸಮೋಸಾ ಖಾಲಿ ಮಾಡಿದ್ದಾರೆ. ಹಾಗೇ, ಬಹುಮಾನವಾಗಿ ಕೈತುಂಬ ಹಣವನ್ನೂ ಗಳಿಸಿದ್ದಾರೆ.

ಇದನ್ನೂ ಓದಿ: Viral Video | ಸುದ್ದಿ ಓದುತ್ತಿದ್ದ ನಿರೂಪಕಿಗೆ ಪೀಕಲಾಟ; ಗಂಟಲು ಕಟ್ಟಿತು, ಮುಖದ ಭಾವವೇ ಬದಲಾಯಿತು !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

Bribery Case: ಪಿಡಿಓ ಅಧಿಕಾರಿಯ ಲಂಚಾವತಾರಕ್ಕೆ ಜನರು ಸುಸ್ತಾಗಿದ್ದಾರೆ. ಸರ್ಕಾರಿ ಕೆಲಸ ಆಗಬೇಕೆಂದರೆ ಆ ಸರ್ಕಾರಿ ಅಧಿಕಾರಿಗೆ ಹಣದೊಂದಿಗೆ, ದುಬಾರಿ ಮದ್ಯದ ಬಾಟೆಲ್‌ ಕೊಡಿಸಲೇಬೇಕು.

VISTARANEWS.COM


on

By

Bribery Case in Bengaluru news
Koo

ಬೆಂಗಳೂರು: ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತು ಕೇವಲ ಗೋಡೆಗಳ ಮೇಲಿನ ಬರಹಕ್ಕೆ ಅಷ್ಟೇ ಸೀಮಿತವಾಗಿದೆ. ಕೆಲಸ ಮಾಡುವ ಜಾಗ ದೇವಾಲಯ ಎನ್ನುವ ಕಾಲ ಮಾಯವಾಗಿ ಬಹಳ ದಿನಗಳೇ ಕಳೆದಿವೆ. ಸದ್ಯ ಇಲ್ಲೊಬ್ಬ ಅಧಿಕಾರಿ ದೇವಾಲಯವನ್ನೇ ಅಪವಿತ್ರ (Bribery Case) ಮಾಡಿದ್ದಾನೆ. ಕೆಲಸ ಆಗ್ಬೇಕು ಸರ್ ಎಂದು ಆತನ ಬಳಿ ಹೋದರೆ ಹಣದ ಜತೆಗೆ ಎಣ್ಣೆಗೆ ಡಿಮ್ಯಾಂಡ್ ಮಾಡುತ್ತಾನೆ. ದುಡ್ಡು‌, ಡ್ರಿಂಕ್ಸ್ ಮುಂದಿಟ್ಟರೆ ಸಾಕು ರೂಲ್ಸ್ ಬ್ರೇಕ್ ಮಾಡಿ ನಿಮಗೆ ಬೇಕಾದ ರೆಕಾರ್ಡ್ಸ್ ರೆಡಿಯಾಗುತ್ತಂತೆ.

ಅಂದಹಾಗೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಪಿಡಿಓ ಲಂಚಾವತಾರದ ಕಥೆ ಇದು. ಕಣ್ಣೂರು ಗ್ರಾಮ ಪಂಚಾಯಿತಿ ಪಿಡಿಓ ಮುನಿಚಿಕ್ಕಯ್ಯ ಎಂಬಾತನ ಲಂಚಾವತಾರಕ್ಕೆ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಲ್ಯಾಂಡ್ ಕನ್ವರ್ಷನ್ ಆಗದಿದ್ದರೂ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ರೆವಿನ್ಯೂ ಸೈಟ್‌ಗಳ ಖಾತೆ ಮಾಡಿಕೊಳ್ಳಲು ಒಂದು ಲಕ್ಷ ರೂ. ಫಿಕ್ಸ್ ಮಾಡಿದ್ದರಂತೆ.

ಅರ್ಜಿದಾರನೊಬ್ಬ ಅಕ್ರಮವಾಗಿ ನಿರ್ಮಾಣವಾಗಿದ್ದ ಲೇಔಟ್‌ನ ಕಾಮಗಾರಿ ತಡೆಯೋದಕ್ಕೆ ಅರ್ಜಿ ನೀಡಿದ್ದರು. ನಿಮ್ಮ ಕೆಲಸ ಮುಗಿತು ಅಂದುಕೊಳ್ಳಿ‌.. ಆದರೆ ನನಗೆ ದುಬಾರಿ ಮದ್ಯದ ಬಾಟೆಲ್‌ ಕೊಡಿ ಎನ್ನುತ್ತಾನಂತೆ. ಈ ರೀತಿ ನೂರಾರು ಖಾತೆಯನ್ನು ಅಕ್ರಮ ಎಸಗಿದ್ದಾರೆ. ಅಕ್ರಮದ ಬಗ್ಗೆ ದೂರು ನೀಡಿದರೂ ಹಿರಿಯ ಅಧಿಕಾರಿಗಳಿಂದ ಯಾವುದೇ ಕ್ರಮ ಇಲ್ಲ ಅರ್ಜಿದಾರರು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ:Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

ಕಜಕೀಸ್ತಾನ: ರೆಸ್ಟೋರೆಂಟ್‌ವೊಂದರಲ್ಲಿ ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು, ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ಘಟನೆ ಕಜಕೀಸ್ತಾನ(Kajakistan)ದಲ್ಲಿ ನಡೆದಿದೆ. ಘಟನೆಯ ಶಾಕಿಂಗ್‌ ವಿಡಿಯೋ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಬೆಚ್ಚಿಬೀಳುವಂತಿದೆ. ಕಜಕೀಸ್ತಾನದ ಮಾಜಿ ಆರ್ಥಿಕ ಸಚಿವನಾಗಿದ್ದ ಕುವಾಂಡಿಕ್ ಬಿಶಿಂಬಾಯೆವ್ ತನ್ನ 31 ವರ್ಷದ ಸಲ್ತಾನೇಟ್‌ ನ್ಯೂಕೆನೋವಾ ಮೇಲೆ ಈ ಡೆಡ್ಲಿ ಅಟ್ಯಾಕ್‌(Deadly Attack) ಮಾಡಿದ್ದಾನೆ. ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಪತ್ನಿ ಕೂದಲು ಹಿಡಿದು ಎಳೆದು ತಂದ ಬಿಶಿಂಬಾಯೆವ್, ಆಕೆಯ ಮುಖಾಮೂತಿ ನೋಡದೇ ಚಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾವಾಗಿ ಗಾಯಗೊಂಡಿದ್ದ ಸಲ್ತಾನೇಟ್‌ ನ್ಯೂಕೆನೋವಾ ಎಂಡು ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ವಿಚಾರಣೆ ವೇಳೆ ಸಿಸಿಟಿವಿ ವಿಡಿಯೋವನ್ನು ಪ್ರದರ್ಶಿಸಲಾಯಿತು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಸುದ್ದಿಯಾಗಿದೆ. ಇನ್ನು ಈ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮಧ್ಯ ಏಷ್ಯಾದ ರಾಷ್ಟಗಳ ಹತ್ತು ಸಾವಿರಕ್ಕೂ ಅಧಿಕ ಜನರು ಸಹಿ ಹಾಕಿರುವ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

ಇದನ್ನೂ ಓದಿ: Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

ಬಿಶಿಂಬಾಯೆವ್ (44) ಮಾಜಿ ಪ್ರಧಾನಿ ನರ್ಸುಲ್ತಾನ್ ನಜರ್ಬಯೇವ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ಹಿಸುತ್ತಿದ್ದ. 2018ರಲ್ಲಿ ಲಂಚ ಪ್ರಕರಣದಲ್ಲಿ ಆತ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಆತನ ಪತ್ನಿ ಸಂಬಂಧಿಕರ ರೆಸ್ಟೋರೆಂಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಒಂದು ವಾರದವರೆಗೆ ಬಿಶಿಂಬಾಯೆವ್ ತನಗೇನು ಗೊತ್ತಿಲ್ಲ, ತಾನೊಬ್ಬ ಅಮಾಯಕ ಎಂಬಂತೆ ಪೊಲೀಸರ ಎದುರು ನಟಿಸಿದ್ದ. ಆತನ ವಿರುದ್ಧ ಸಾಕ್ಷ್ಯಾಧಾರ ಸಿಗದಂತೆ ರೆಸ್ಟೋರೆಂಟ್‌ ಮಾಲೀಕ, ಸಿಬ್ಬಂದಿಗಳೂ ಸಹಕರಿಸಿದ್ದರು. ಆದರೆ ಕೋರ್ಟ್‌ನಲ್ಲಿ ತಾನೇ ಆಕೆಯಲ್ಲಿ ಹೊಡೆದು ಸಾಯಿಸಿರೋದಾಗಿ ಒಪ್ಪಿಕೊಂಡಿದ್ದಾನೆ.

ವೈದ್ಯರ ಮಾಹಿತಿ ಪ್ರಕಾರ ಸಲ್ತಾನೇಟ್‌ ನ್ಯೂಕೆನೋವಾ ತಲೆಗೆ ಗಂಭೀರವಾಗಿ ಏಟು ಬಿದ್ದ ಕಾರಣ ಆಕೆ ಮೃತಪಟ್ಟಿದ್ದಳು. ಇನ್ನು ಆಕೆಯ ಸಹೋದರ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದು, ತನ್ನ ಸಹೋದರಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿದ್ದಾನೆ. ಈಗಾಗಲೇ ಮೃತಳಿಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ರಷ್ಯಾದಂತೆ ಕಜಕೀಸ್ತಾದಲ್ಲೂ ಪುರುಷ ಪ್ರಧಾನ ಸಂಸ್ಕೃತಿ ಚಾಲ್ತಿಯಲ್ಲಿದ್ದು, ಹೀಗಾಗಿ ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಮೊದಲಾದ ಅಪರಾಧಗಳು ಹೆಚ್ಚಾಗಿವೆ.2018ರಲ್ಲಿ ವಿಶ್ವಸಂಸ್ಥೆ ನೀಡಿರುವ ವರದಿ ಪ್ರಕಾರ ಪ್ರತಿ ವರ್ಷ 400 ಕ್ಕೂ ಅಧಿಕ ಮಹಿಳೆಯರು ಕೌಟುಂಬಿಕ ಕಲಹಕ್ಕೆ ಬಲಿಯಾಗುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

Viral Video: ಬಿಶಿಂಬಾಯೆವ್ (44) ಮಾಜಿ ಪ್ರಧಾನಿ ನರ್ಸುಲ್ತಾನ್ ನಜರ್ಬಯೇವ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ಹಿಸುತ್ತಿದ್ದ. 2018ರಲ್ಲಿ ಲಂಚ ಪ್ರಕರಣದಲ್ಲಿ ಆತ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಆತನ ಪತ್ನಿ ಸಂಬಂಧಿಕರ ರೆಸ್ಟೋರೆಂಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಒಂದು ವಾರದವರೆಗೆ ಬಿಶಿಂಬಾಯೆವ್ ತನಗೇನು ಗೊತ್ತಿಲ್ಲ, ತಾನೊಬ್ಬ ಅಮಾಯಕ ಎಂಬಂತೆ ಪೊಲೀಸರ ಎದುರು ನಟಿಸಿದ್ದ. ಆತನ ವಿರುದ್ಧ ಸಾಕ್ಷ್ಯಾಧಾರ ಸಿಗದಂತೆ ರೆಸ್ಟೋರೆಂಟ್‌ ಮಾಲೀಕ, ಸಿಬ್ಬಂದಿಗಳೂ ಸಹಕರಿಸಿದ್ದರು. ಆದರೆ ಕೋರ್ಟ್‌ನಲ್ಲಿ ತಾನೇ ಆಕೆಯಲ್ಲಿ ಹೊಡೆದು ಸಾಯಿಸಿರೋದಾಗಿ ಒಪ್ಪಿಕೊಂಡಿದ್ದಾನೆ.

VISTARANEWS.COM


on

Viral Video
Koo

ಕಜಕೀಸ್ತಾನ: ರೆಸ್ಟೋರೆಂಟ್‌ವೊಂದರಲ್ಲಿ ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು, ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ಘಟನೆ ಕಜಕೀಸ್ತಾನ(Kajakistan)ದಲ್ಲಿ ನಡೆದಿದೆ. ಘಟನೆಯ ಶಾಕಿಂಗ್‌ ವಿಡಿಯೋ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಬೆಚ್ಚಿಬೀಳುವಂತಿದೆ. ಕಜಕೀಸ್ತಾನದ ಮಾಜಿ ಆರ್ಥಿಕ ಸಚಿವನಾಗಿದ್ದ ಕುವಾಂಡಿಕ್ ಬಿಶಿಂಬಾಯೆವ್ ತನ್ನ 31 ವರ್ಷದ ಸಲ್ತಾನೇಟ್‌ ನ್ಯೂಕೆನೋವಾ ಮೇಲೆ ಈ ಡೆಡ್ಲಿ ಅಟ್ಯಾಕ್‌(Deadly Attack) ಮಾಡಿದ್ದಾನೆ. ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಪತ್ನಿ ಕೂದಲು ಹಿಡಿದು ಎಳೆದು ತಂದ ಬಿಶಿಂಬಾಯೆವ್, ಆಕೆಯ ಮುಖಾಮೂತಿ ನೋಡದೇ ಚಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾವಾಗಿ ಗಾಯಗೊಂಡಿದ್ದ ಸಲ್ತಾನೇಟ್‌ ನ್ಯೂಕೆನೋವಾ ಎಂಡು ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ವಿಚಾರಣೆ ವೇಳೆ ಸಿಸಿಟಿವಿ ವಿಡಿಯೋವನ್ನು ಪ್ರದರ್ಶಿಸಲಾಯಿತು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಸುದ್ದಿಯಾಗಿದೆ. ಇನ್ನು ಈ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮಧ್ಯ ಏಷ್ಯಾದ ರಾಷ್ಟಗಳ ಹತ್ತು ಸಾವಿರಕ್ಕೂ ಅಧಿಕ ಜನರು ಸಹಿ ಹಾಕಿರುವ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

ಬಿಶಿಂಬಾಯೆವ್ (44) ಮಾಜಿ ಪ್ರಧಾನಿ ನರ್ಸುಲ್ತಾನ್ ನಜರ್ಬಯೇವ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ಹಿಸುತ್ತಿದ್ದ. 2018ರಲ್ಲಿ ಲಂಚ ಪ್ರಕರಣದಲ್ಲಿ ಆತ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಆತನ ಪತ್ನಿ ಸಂಬಂಧಿಕರ ರೆಸ್ಟೋರೆಂಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಒಂದು ವಾರದವರೆಗೆ ಬಿಶಿಂಬಾಯೆವ್ ತನಗೇನು ಗೊತ್ತಿಲ್ಲ, ತಾನೊಬ್ಬ ಅಮಾಯಕ ಎಂಬಂತೆ ಪೊಲೀಸರ ಎದುರು ನಟಿಸಿದ್ದ. ಆತನ ವಿರುದ್ಧ ಸಾಕ್ಷ್ಯಾಧಾರ ಸಿಗದಂತೆ ರೆಸ್ಟೋರೆಂಟ್‌ ಮಾಲೀಕ, ಸಿಬ್ಬಂದಿಗಳೂ ಸಹಕರಿಸಿದ್ದರು. ಆದರೆ ಕೋರ್ಟ್‌ನಲ್ಲಿ ತಾನೇ ಆಕೆಯಲ್ಲಿ ಹೊಡೆದು ಸಾಯಿಸಿರೋದಾಗಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

ವೈದ್ಯರ ಮಾಹಿತಿ ಪ್ರಕಾರ ಸಲ್ತಾನೇಟ್‌ ನ್ಯೂಕೆನೋವಾ ತಲೆಗೆ ಗಂಭೀರವಾಗಿ ಏಟು ಬಿದ್ದ ಕಾರಣ ಆಕೆ ಮೃತಪಟ್ಟಿದ್ದಳು. ಇನ್ನು ಆಕೆಯ ಸಹೋದರ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದು, ತನ್ನ ಸಹೋದರಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿದ್ದಾನೆ. ಈಗಾಗಲೇ ಮೃತಳಿಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ರಷ್ಯಾದಂತೆ ಕಜಕೀಸ್ತಾದಲ್ಲೂ ಪುರುಷ ಪ್ರಧಾನ ಸಂಸ್ಕೃತಿ ಚಾಲ್ತಿಯಲ್ಲಿದ್ದು, ಹೀಗಾಗಿ ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಮೊದಲಾದ ಅಪರಾಧಗಳು ಹೆಚ್ಚಾಗಿವೆ.2018ರಲ್ಲಿ ವಿಶ್ವಸಂಸ್ಥೆ ನೀಡಿರುವ ವರದಿ ಪ್ರಕಾರ ಪ್ರತಿ ವರ್ಷ 400 ಕ್ಕೂ ಅಧಿಕ ಮಹಿಳೆಯರು ಕೌಟುಂಬಿಕ ಕಲಹಕ್ಕೆ ಬಲಿಯಾಗುತ್ತಿದ್ದಾರೆ.

Continue Reading

ವೈರಲ್ ನ್ಯೂಸ್

Rahul Gandhi: ರಾಹುಲ್‌ ಗಾಂಧಿಗೆ “ಮೊದಲು ರಾಯ್‌ಬರೇಲಿಯಿಂದ ಗೆಲ್ಲಿ…” ಎಂದ ಚೆಸ್‌ ದಂತಕಥೆ ಗ್ಯಾರಿ ಕಾಸ್ಪರೋವ್!

Rahul Gandhi: ಇತ್ತೀಚೆಗಷ್ಟೇ, ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ ತಮ್ಮ ಮೊಬೈಲ್ ಫೋನ್‌ನಲ್ಲಿ ಚೆಸ್ ಆಡುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಪೋಸ್ಟ್ ಮಾಡಿತ್ತು. ಈ ವಿಡಿಯೋವನ್ನು ಬಳಕೆದಾರರೊಬ್ಬರು ಕಾಸ್ಪರೋವ್‌ಗೆ ಟ್ಯಾಗ್‌ ಮಾಡಿದ್ದರು. ವೀಡಿಯೊದಲ್ಲಿ ರಾಹುಲ್‌, ಕಾಸ್ಪರೋವ್ ಅವರನ್ನು ತಮ್ಮ ನೆಚ್ಚಿನ ಚೆಸ್ ಆಟಗಾರ ಎಂದು ಹೇಳಿದ್ದರು. ಚೆಸ್‌ ಆಟ ಮತ್ತು ರಾಜಕೀಯದ ನಡುವಿರುವ ಸಾಮ್ಯತೆಗಳ ಬಗ್ಗೆ ಮಾತಾಡಿದ್ದರು.

VISTARANEWS.COM


on

rahul gandhi gary Kasparov
Koo

ಹೊಸದಿಲ್ಲಿ: ಖ್ಯಾತ ಚೆಸ್ ಆಟಗಾರ (Chess legend) ಗ್ಯಾರಿ ಕಾಸ್ಪರೋವ್ (Gary Kasparov) ಅವರು “ಚೆಸ್‌ನಲ್ಲಿ ಅಗ್ರಸ್ಥಾನಕ್ಕೆ ಸವಾಲು ಹಾಕುವ ಮೊದಲು ರಾಯ್ ಬರೇಲಿಯನ್ನು *Rae Bareli) ಮೊದಲು ಗೆಲ್ಲಿರಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ (Social Media X) ಬಳಕೆದಾರರ ಜೊತೆ ನಡೆದ ಒಂದು ಚಾಟ್‌ ವೇಳೆ ಅವರ ಈ ಮಾತು ಬಂತು.

2005ರಲ್ಲಿ ಸ್ಪರ್ಧಾತ್ಮಕ ಚೆಸ್‌ನಿಂದ ನಿವೃತ್ತರಾದ ರಷ್ಯಾದ ಚೆಸ್‌ ದಂತಕಥೆ ಎನಿಸಿದ ಕಾಸ್ಪರೋವ್‌, ಶುಕ್ರವಾರ ಎಕ್ಸ್‌ನಲ್ಲಿ ಬಳಕೆದಾರರ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿದ್ದರು. ಕಾಸ್ಪರೋವ್‌ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಟು ವಿಮರ್ಶಕರಾಗಿದ್ದು, ಇದಕ್ಕಾಗಿ ಆಡಳಿತದ ಆಕ್ರೋಶ ಎದುರಿಸಿ ದೇಶದಿಂದ ಪಲಾಯನ ಮಾಡಿ ಕ್ರೊಯೇಷಿಯಾದಲ್ಲಿ ನೆಲೆಸಿದ್ದಾರೆ.

ಇತ್ತೀಚೆಗಷ್ಟೇ, ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ ತಮ್ಮ ಮೊಬೈಲ್ ಫೋನ್‌ನಲ್ಲಿ ಚೆಸ್ ಆಡುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಪೋಸ್ಟ್ ಮಾಡಿತ್ತು. ಈ ವಿಡಿಯೋವನ್ನು ಬಳಕೆದಾರರೊಬ್ಬರು ಕಾಸ್ಪರೋವ್‌ಗೆ ಟ್ಯಾಗ್‌ ಮಾಡಿದ್ದರು. ವೀಡಿಯೊದಲ್ಲಿ ರಾಹುಲ್‌, ಕಾಸ್ಪರೋವ್ ಅವರನ್ನು ತಮ್ಮ ನೆಚ್ಚಿನ ಚೆಸ್ ಆಟಗಾರ ಎಂದು ಹೇಳಿದ್ದರು. ಚೆಸ್‌ ಆಟ ಮತ್ತು ರಾಜಕೀಯದ ನಡುವಿರುವ ಸಾಮ್ಯತೆಗಳ ಬಗ್ಗೆ ಮಾತಾಡಿದ್ದರು.

“…ಒಮ್ಮೆ ನೀವು ಆಟದಲ್ಲಿ ಸ್ವಲ್ಪ ಉತ್ತಮಗೊಂಡರೆ, ಎದುರಾಳಿಯ ಕಾಯಿಗಳು ವಾಸ್ತವವಾಗಿ ನಿಮ್ಮ ಇಚ್ಛೆಯಂತೆಯೇ ಕಾರ್ಯನಿರ್ವಹಿಸುತ್ತವೆ” ಎಂದು ರಾಹುಲ್‌ ಗಾಂಧಿ ಚದುರಂಗ ಮತ್ತು ರಾಜಕೀಯವನ್ನು ಹೋಲಿಸಿದ್ದರು.

ಈ ವಿಡಿಯೋಗೆ ಉತ್ತರಿಸಿದ ಕಾಸ್ಪರೋವ್, “ನೀವು ಅಗ್ರಸ್ಥಾನಕ್ಕಾಗಿ ಸವಾಲು ಹಾಕುವ ಮೊದಲು ಮೊದಲು ರಾಯ್‌ಬರೇಲಿಯಿಂದ ಗೆಲ್ಲಬೇಕು ಎಂದು ಸಾಂಪ್ರದಾಯಿಕವಾಗಿ ಅಪೇಕ್ಷಿಸಲಾಗುತ್ತದೆ” ಎಂದಿದ್ದರು. ನಂತರ ಮತ್ತೊಂದು ಪೋಸ್ಟ್‌ ಹಾಕಿ, ತಮ್ಮ ಸಣ್ಣ ಜೋಕ್‌ ರಾಜಕೀಯ ಪರಿಣತಿಯದ್ದಲ್ಲ ಎಂದಿದ್ದಾರೆ.

“ನನ್ನ ಈ ಚಿಕ್ಕ ಜೋಕ್‌, ಭಾರತೀಯ ರಾಜಕೀಯದಲ್ಲಿ ಪರಿಣತಿಯಿಂದ ಬಂದಿದ್ದಲ್ಲ. ಆದರೆ ಹಿಂದೊಮ್ಮೆ ನನ್ನನ್ನು “ಸಾವಿರ ಕಣ್ಣುಗಳ ದೈತ್ಯ” ಎಂದು ಹೆಸರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ, ರಾಜಕಾರಣಿಯೊಬ್ಬರು ನನ್ನ ಪ್ರೀತಿಯ ಆಟದಲ್ಲಿ ತೊಡಗುವುದನ್ನು ನೋಡಲು ನನಗೆ ಸಂತೋಷವಾಗುತ್ತದೆ” ಎಂದಿದ್ದಾರೆ ಅವರು.

“@Kasparov63 ಮತ್ತು @vishy64theking ಅವರು ಬೇಗನೆ ನಿವೃತ್ತರಾದರು ಮತ್ತು ನಮ್ಮ ಕಾಲದ ಶ್ರೇಷ್ಠ ಚೆಸ್ ಪ್ರತಿಭೆಯನ್ನು ಎದುರಿಸಬೇಕಾಗಿಲ್ಲ” ಎಂದು X ಬಳಕೆದಾರರು ಋಾಹುಲ್‌ ಗಾಂಧಿಯವರ ಪೋಸ್ಟ್‌ಗೆ ಕಾಮೆಂಟ್‌ನಲ್ಲಿ ಹೇಳಿದ್ದರು.

ರಾಹುಲ್‌ ಗಾಂಧಿ ಶುಕ್ರವಾರ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದರು. ಅವರು ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿದ್ದಾರೆ. ಮಾಜಿ ವಿಶ್ವ ನಂಬರ್ ಒನ್ ಮತ್ತು ವಿಶ್ವ ಚಾಂಪಿಯನ್ ಚೆಸ್‌ ಆಟಗಾರ ಕಾಸ್ಪರೋವ್ 1985ರಲ್ಲಿ 22ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆದರು. ಈಗ ರಾಜಕೀಯ ಕಾರ್ಯಕರ್ತರಾಗಿದ್ದಾರೆ.

ಅಪ್ರತಿಮ ಆಟಗಾರ, ಭಾರತೀಯ ಶ್ರೇಷ್ಠ ವಿಶ್ವನಾಥನ್ ಆನಂದ್ ಅವರ ಸಮಕಾಲೀನರು. ಇತ್ತೀಚೆಗೆ, 17 ವರ್ಷದ ಡಿ. ಗುಕೇಶ್ ಅವರು ವಿಶ್ವ ಪ್ರಶಸ್ತಿಗೆ ಅತಿ ಕಿರಿಯ ಚಾಲೆಂಜರ್ ಎಂಬ ಕಾಸ್ಪರೋವ್ ಅವರ ದಾಖಲೆಯನ್ನು ಮೀರಿಸಿದರು. ಆಗ ಕಾಸ್ಪರೋವ್‌ ಅವರು Xನಲ್ಲಿ ಗುಕೇಶ್‌ಗೆ ಅಭಿನಂದನಾ ಪೋಸ್ಟ್ ಹಾಕಿದ್ದರು. ಅವರು ಗುಕೇಶನನ್ನು “ಭಾರತೀಯ ಭೂಕಂಪ” ಎಂದು ಬಣ್ಣಿಸಿದ್ದರು.

ಇದನ್ನೂ ಓದಿ: Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Continue Reading

ವೈರಲ್ ನ್ಯೂಸ್

Viral News: ಹೆರಿಗೆಯಾದ ಮೂರು ಗಂಟೆಗಳಲ್ಲೇ ಅಪಾರ್ಟ್‌ಮೆಂಟ್‌ ಮೇಲಿಂದ ಮಗುವನ್ನೇ ಎಸೆದ್ಳಾ?

Viral News: ಹೆತ್ತ ತಾಯಿಯೊಬ್ಬಳು ಹಸುಗೂಸನ್ನು ಅಪಾರ್ಟ್‌ಮೆಂಟ್‌ನಿಂದ ಕೆಳಗೆಸೆದಿರುವಂತಹ ಆಘಾತಕಾರಿ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಪಣಂಪುಲ್ಲಿನಗರದಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ವೊಂದರ ಪಕ್ಕದ ರಸ್ತೆಯಲ್ಲಿ ಬಟ್ಟೆ ಮತ್ತು ಕೊರಿಯರ್‌ ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದ ಮಗುವಿನ ಮೃತದೇಹ ಪತ್ತೆಯಾಗಿತ್ತು.

VISTARANEWS.COM


on

Viral News
Koo

ಕೊಚ್ಚಿ: ಹೆತ್ತ ತಾಯಿಯೊಬ್ಬಳು ಹಸುಗೂಸನ್ನು (Newly born Child) ಅಪಾರ್ಟ್‌ಮೆಂಟ್‌(Apartment)ನಿಂದ ಕೆಳಗೆಸೆದಿರುವಂತಹ ಆಘಾತಕಾರಿ ಘಟನೆ(Viral News) ಕೇರಳದ(Kerala) ಕೊಚ್ಚಿಯಲ್ಲಿ ನಡೆದಿದೆ. ಪಣಂಪುಲ್ಲಿನಗರದಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ವೊಂದರ ಪಕ್ಕದ ರಸ್ತೆಯಲ್ಲಿ ಬಟ್ಟೆ ಮತ್ತು ಕೊರಿಯರ್‌ ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದ ಮಗುವಿನ ಮೃತದೇಹ ಪತ್ತೆಯಾಗಿತ್ತು. ಇದನ್ನು ನೋಡಿದ ಜನ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದಾಗ ತಾಯಿಯೇ ಮಗುವನ್ನು ಎಸೆದಿರುವ ಆಘಾತಕಾರಿ ವಿಚಾರ ಬಯಲಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಅಪಾರ್ಟ್‌ಮೆಂಟ್‌ನಿಂದ ಮಗುವನ್ನು ಎಸೆದಿರುವುದು ಸ್ಪಷ್ಟವಾಗಿದೆ. ಮೇಲಿನಿಂದ ಕೆಳಗೆ ಬಿದ್ದ ಮಗು ಸ್ಥಳದಲ್ಲೇ ಅಸುನೀಗಿದೆ. ತಕ್ಷಣ ಅಪಾರ್ಟ್‌ಮೆಂಟ್‌ ಒಳಗೆ ಹೋದ ಪೊಲೀಸರು 23ವರ್ಷದ ಮಹಿಳೆಯಯನ್ನು ಅರೆಸ್ಟ್‌ ಮಾಡಿದ್ದು, ಆಕೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಮುಂದಿನ ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಇನ್ನು ಮಹಿಳೆ ಹೆರಿಗೆಯಾದ ಮೂರು ಗಂಟೆಗಳ ನಂತರ ಗಾಬರಿಯಲ್ಲಿ ಮಗುವನ್ನು ಬಟ್ಟೆಯಲ್ಲಿ, ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಮಹಿಳೆ ಅಪಾರ್ಟ್‌ಮೆಂಟ್‌ನಿಂದ ಎಸೆದಿದ್ದಾಳೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಮಹಿಳೆ ಅತ್ಯಾಚಾರ ಸಂತ್ರಸ್ತೆ ಎಂಬ ಶಂಕೆ

ವಿಚಾರಣೆ ಆರಂಭಿಸಿರುವ ಪೊಲೀಸರು ಮಹಿಳೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ವಿಚಾರಣೆ ವೇಳೆ ಮಹಿಳೆ ಈ ಕೃತ್ಯ ತಾನೇ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಮಗುವಿನ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಕೃತ್ಯದ ಹಿಂದಿರುವ ನಿಜವಾದ ಉದ್ದೇಶ ಬಯಲಾಗಲಿದೆ. ಒಂದು ವೇಳೆ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದರೆ ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಇನ್ನು ಆರೋಪಿ ಮಹಿಳೆ ಗರ್ಭಿಣಿಯಾಗಿರುವ ವಿಚಾರ ಆಕೆಯ ಮನೆಯವರಿಗೆ ತಿಳಿದಿರಲಿಲ್ಲ. ಅವರಿಗೂ ಈ ಕೊಲೆಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಇಂತಹದ್ದೇ ಒಂದು ಘಟನೆ ಎರಡು ತಿಂಗಳ ಹಿಂದೆ ಮಡಿಕೇರಿಯ ಸುಂಠಿಕೊಪ್ಪದಲ್ಲಿ ನಡೆದಿತ್ತು. ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ನವಜಾತ ಶಿಶುವಿನ ಮೃತದೇಹ ಮಣ್ಣಿನೊಳಗೆ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಹೆತ್ತ ತಾಯಿಯೇ ಮಗುವನ್ನು ಕತ್ತು ಹಿಸುಕಿ ಕೊಂದು ನಂತರ ಮಣ್ಣಿನಲ್ಲಿ ಹೂತಿರುವುದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿ ಸುಂಟಿಕೊಪ್ಪ ಪೊಲೀಸರು ಆರೋಪಿಗಳಿಬ್ಬರನ್ನು ಪತ್ತೆಹಚ್ಚಿ ಬಂಧಿಸಿದ್ದು, ಬಂಧಿತರನ್ನು ಗದ್ದೆಹಳ್ಳ ಗಿರಿಯಪ್ಪ ಮನೆ ಗದ್ದೆಯಲ್ಲಿ ವಾಸವಾಗಿರುವ ಕುಮಾರ ಮತ್ತು ಆತನ ತಾಯಿ ಯಮುನಾ ಎಂದು ಗುರುತಿಸಲಾಗಿದೆ. ಇವರು ಆಗಷ್ಟೇ ಹುಟ್ಟಿದ ಮಗುವಿನ ಕತ್ತು ಹಿಸುಕಿ ಸಾಯಿಸಿ ನಂತರ ಹೂತು ಹಾಕಿರುವುದನ್ನು ಪೋಲೀಸರ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದರು.

ಇದನ್ನೂ ಓದಿ:Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

ವಿವಾಹಿತನಾಗಿರುವ ಕುಮಾರನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈತ ಚೆಟ್ಟಳ್ಳಿ ಸಮೀಪದ ಗ್ರಾಮವೊಂದರ ಮಹಿಳೆ ಒಬ್ಬಳ ಜತೆ ಅಕ್ರಮ ಸಂಬಂಧ ಇರಿಸಿದ್ದು ಇದರ ಫಲವಾಗಿ ಆಕೆ ತುಂಬು ಗರ್ಭಿಣಿಯಾಗಿದ್ದಳು. ರಾತ್ರಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ ಕುಮಾರ ಮತ್ತು ಅವನ ತಾಯಿ ನವಜಾತ ಶಿಶುವಿನ ಕತ್ತುಹಿಸುಕಿ ಅದರ ಜೀವ ಕಿತ್ತುಕೊಂಡಿದ್ದರು. ಮರುದಿನ ಮುಂಜಾನೆ ಕುಮಾರ ಮತ್ತು ಯಮುನಾ ರಸ್ತೆ ಬದಿಯ ಗದ್ದೆಯಲ್ಲಿ ಗುಂಡಿ ತೋಡಿ ನವಜಾತ ಶಿಶುವನ್ನು ಹೂತಿದ್ದರು.

Continue Reading
Advertisement
Amith Shah
ದೇಶ5 mins ago

Amit Shah: ಕಾಂಗ್ರೆಸ್ ಹಿಂದುಳಿದ, ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿದೆ; ನಾವು ತೆಗೆದುಹಾಕುತ್ತೇವೆ: ಅಮಿತ್ ಶಾ

Bribery Case in Bengaluru news
ಬೆಂಗಳೂರು7 mins ago

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

HD Deve gowda prajwal revanna case
ಬೆಂಗಳೂರು11 mins ago

Prajwal Revanna Case: ಮೊಮ್ಮಗನ ದೆಸೆಯಿಂದ ದೇವೇಗೌಡರ ಆರೋಗ್ಯ ಏರುಪೇರು, ಕುಟುಂಬದಿಂದ ತೀವ್ರ ನಿಗಾ

MP High Court
ದೇಶ19 mins ago

MP High Court: ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಮಹತ್ವದ ತೀರ್ಪು ಪ್ರಕಟಿಸಿದ ಕೋರ್ಟ್‌

Aishwarya Rajinikanth new house priceless reaction Rajinikanth
ಕಾಲಿವುಡ್24 mins ago

Aishwarya Rajinikanth: ಮಗಳ ಹೊಸ ಮನೆ ಕಂಡು ಹುಬ್ಬೇರಿಸಿದ ರಜನಿಕಾಂತ್!

Josh Baker
ಕ್ರೀಡೆ27 mins ago

Josh Baker: 6 ವಿಕೆಟ್‌ ಪಡೆದು ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾದ ಇಂಗ್ಲೆಂಡ್ ಕ್ರಿಕೆಟಿಗ

International Firefighters Day 2024
ಪ್ರಮುಖ ಸುದ್ದಿ43 mins ago

International Firefighters Day 2024: ಇಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ; ಜೀವ ರಕ್ಷಕರಿಗೊಂದು ಸಲಾಂ

Nijjar Killling
ವಿದೇಶ45 mins ago

Nijjar Killing: ನಿಜ್ಜರ್‌ ಹಂತಕರ ಫೊಟೋ ರಿಲೀಸ್‌; ಭಾರತದತ್ತ ಮತ್ತೆ ಬೊಟ್ಟು ಮಾಡಿದ ಕೆನಡಾ

Vettaiyan Movie Rajinikanth And Amitabh Bachchan Poses Together
ಸಿನಿಮಾ47 mins ago

Vettaiyan Movie: ಸೂಟು ಬೂಟು ಹಾಕಿಕೊಂಡು ಸ್ಟೈಲಿಶ್‌ ಆಗಿ ಪೋಸ್‌ ಕೊಟ್ಟ ರಜನಿ!

Accident news
ಮಳೆ51 mins ago

Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ20 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌