Teachers Day | ಗ್ರಾಮೀಣ ಮಕ್ಕಳನ್ನು ಆಟದಲ್ಲಿ ಗೆಲ್ಲಿಸಿದ ಸಕ್ಕರೆನಾಡಿನ ಸಾಧಕ ಬಾಲಸುಬ್ರಮಣ್ಯ - Vistara News

ಶಿಕ್ಷಕರ ದಿನ

Teachers Day | ಗ್ರಾಮೀಣ ಮಕ್ಕಳನ್ನು ಆಟದಲ್ಲಿ ಗೆಲ್ಲಿಸಿದ ಸಕ್ಕರೆನಾಡಿನ ಸಾಧಕ ಬಾಲಸುಬ್ರಮಣ್ಯ

ಪ್ರವಾಸಿ ತಾಣ ಕೊಕ್ಕರೆ ಬೆಳ್ಳೂರಿನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಸ್.ಟಿ.ಬಾಲಸುಬ್ರಮಣ್ಯ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರ ಸಾಧನೆಯ ಪರಿಚಯ ಇಲ್ಲಿದೆ. ಇದು ಶಿಕ್ಷಕರ ದಿನಾಚರಣೆಯ (Teacher’s Day 2022)ವಿಶೇಷ.

VISTARANEWS.COM


on

Teacher's Day 2022
ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರೊಂದಿಗೆ ಎಸ್.ಟಿ.ಬಾಲಸುಬ್ರಮಣ್ಯ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮತ್ತಿಕೆರೆ ಜಯರಾಮ್
ಮಂಡ್ಯ: ಸಕ್ಕರೆನಾಡು ಮಂಡ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಕೊಕ್ಕರೆ ಬೆಳ್ಳೂರು ಒಂದು. ದೇಶ, ವಿದೇಶದ ನೂರಾರು ಜಾತಿಯ ಪಕ್ಷಿ ಸಂಕುಲ ಇಲ್ಲಿನ ಶಿಂಷಾ ನದಿ ಪಾತ್ರದಲ್ಲಿರುವ ಪಕ್ಷಿಧಾಮಕ್ಕೆ ಪ್ರತಿ ವರ್ಷ ಬಂದು ಸಂತಾನೋತ್ಪತ್ತಿ ನಡೆಸುತ್ತವೆ. ಇಂತಹ ಪ್ರವಾಸಿ ತಾಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಸ್.ಟಿ.ಬಾಲಸುಬ್ರಮಣ್ಯ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ವೈಯಕ್ತಿಕವಾಗಿ ಮಾತ್ರವಲ್ಲದೆ, ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ಮತ್ತು ಗ್ರಾಮಕ್ಕೂ ಕೀರ್ತಿ ತಂದಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ಪುಟ್ಟಮ್ಮ ಮತ್ತು ತಿಬ್ಬೇಗೌಡ ದಂಪತಿಯ ಪುತ್ರ ಬಾಲಸುಬ್ರಮಣ್ಯ 42 ವಯಸ್ಸಿಗೇ ಸಾಧನೆಯ ಅನೇಕ ಮೆಟ್ಟಿಲುಗಳನ್ನೇರಿದ ಅಪರೂಪದ ಶಿಕ್ಷಕ. ಪದವಿ ನಂತರ ದೈಹಿಕ ಶಿಕ್ಷಣ ತರಬೇತಿ ಕೋರ್ಸ್‌ ಮುಗಿಸಿದ ಅವರು ಪ್ರಾರಂಭದ 5 ವರ್ಷ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿರುವ ರೈತ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿ ಪ್ರಾರಂಭಿಸಿದರು.

Teacher's Day 2022
ದೈಹಿಕ ಶಿಕ್ಷಕ ಎಸ್.ಟಿ.ಬಾಲಸುಬ್ರಮಣ್ಯ ಅವರಿಗೆ ಸಂದಿರುವ ಪ್ರಶಸ್ತಿಗಳು

ಅದಾದ ಬಳಿಕ ಸರ್ಕಾರಿ ನೇಮಕಾತಿಯಲ್ಲಿ ಆಯ್ಕೆಗೊಂಡು, 14 ವರ್ಷಗಳಿಂದ ನಿರಂತರವಾಗಿ ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ದೈಹಿಕ ಶಿಕ್ಷಕರಾಗಿ ಗ್ರಾಮೀಣ ಮಕ್ಕಳಿಗೆ ಇವರು ನೀಡಿರುವ ತರಬೇತಿ, ಇವರ ಶಿಷ್ಯ ವೃಂದ ಪಡೆದಿರುವ ಬಹುಮಾನ ಮತ್ತು ಪ್ರಶಸ್ತಿ, ಕ್ರೀಡಾ ಶಿಷ್ಯವೇತನ ಇವೆಲ್ಲವನ್ನೂ ಗಮನಿಸಿದರೆ, ಬಾಲಸುಬ್ರಮಣ್ಯ ಅವರ ವೃತ್ತಿ ಕೌಶಲ್ಯ, ಪರಿಶ್ರಮ ಹೇಗಿದೆ ಎನ್ನುವುದು ಸಾಬೀತಾಗುತ್ತದೆ.

ಬಾಲಸುಬ್ರಮಣ್ಯ ಅವರು ಸ್ವತಃ ತರಬೇತುದಾರ, ಮೆನೇಜರ್‌ ಆಗಿ ರಾಜ್ಯ ತಂಡದ ಜವಬ್ದಾರಿ ನಿರ್ವಹಿಸಿದ ಅನೇಕ ನಿದರ್ಶನಗಳಿವೆ. ಇವರಿಂದ ತರಬೇತಿಯಲ್ಲಿ ಪಳಗಿದ ಶಿಷ್ಯರು ವಿವಿಧ ಕ್ರೀಡೆಗಳಲ್ಲಿ ರಾಜ್ಯ, ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ. ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನೂರಕ್ಕೆ ನೂರರಷ್ಟು ಗ್ರಾಮೀಣ ಮಕ್ಕಳೇ ಇದ್ದಾರೆ. ಇಂತಹ ಮಕ್ಕಳನ್ನು ಅಣಿಗೊಳಿಸಿ, ಎತ್ತರಕ್ಕೆ ಬೆಳೆಸಿದ ಕೀರ್ತಿ ನಿಜಕ್ಕೂ ಗುರುವಾದ ಬಾಲಸುಬ್ರಮಣ್ಯ ಅವರಿಗೆ ಸಲ್ಲುತ್ತದೆ.

ಬಾಲ್ಯದಿಂದಲೂ ಕ್ರೀಡೆಯಲ್ಲಿ ಸಾಕಷ್ಟು ಆಸ್ತಿ ತೋರುತ್ತಿದ್ದ ಬಾಲಸುಬ್ರಮಣ್ಯ ಸ್ವತಃ ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಪಟುವಾಗಿದ್ದರು. ಅವರು ಮುಂದೆ ದೈಹಿಕ ಶಿಕ್ಷಕ ಆಗಲೇಬೇಕು ಎನ್ನುವ ಹಠದೊಂದಿಗೆ ಪದವಿ ಮುಗಿಸಿ, ಬಿಪಿಇಡಿ ಕೋರ್ಸ್‌ ಮಾಡಿದರು. ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಬಹುಮಾನಗಳನ್ನು ಪಡೆದವರು. ತಮ್ಮಂತೆಯೇ ಶಿಷ್ಯರೂ ಅತ್ಯುತ್ತಮ ಕ್ರೀಡಾಪಟುಗಳಾಬೇಕು ಎನ್ನುವ ಹಂಬಲ ಹೊತ್ತುಕೊಂಡು ತರಬೇತಿ ನೀಡುವುದರಲ್ಲಿ ನಿರತರಾಗಿದ್ದಾರೆ. ಮಕ್ಕಳ ಸಾಧನೆಯಲ್ಲಿ ಆತ್ಮತೃಪ್ತಿ ಕಾಣುತ್ತಿದ್ದಾರೆ.

Teacher's Day 2022

ಶಿಕ್ಷಕರು ಅದರಲ್ಲೂ ದೈಹಿಕ ಶಿಕ್ಷಕರೆಂದರೆ ಕುತ್ತಿಗೆಯಲ್ಲಿ ವಿಷಲ್‌, ಕೈಯಲ್ಲಿ ಬೆತ್ತ ಇದ್ದೇ ಇರುತ್ತದೆ. ಆದರೆ, ಬಾಲಸುಬ್ರಮಣ್ಯ ಅವರೆಂದೂ ಬೆತ್ತ ಹಿಡಿದು, ಶಿಷ್ಯರಿಗೆ ಬಲವಂತದ ಪಾಠ ಮತ್ತು ತರಬೇತಿ ಹೇಳಿಕೊಟ್ಟವರಲ್ಲ. ವಿಷಲ್‌ ಮಾತ್ರವನ್ನೇ ಬಳಸಿಕೊಂಡು ಉತ್ತಮ ತರಬೇತಿ ನೀಡಿದ ವಿಭಿನ್ನ ಶಿಕ್ಷಕರು ಇವರು. ಯಾವತ್ತಿಗೂ ಯಾವೊಬ್ಬ ಶಿಷ್ಯನನ್ನು ಥಳಿಸಲಿಲ್ಲ. ನಿಂದಿಸಲೂ ಇಲ್ಲ. ಪ್ರೀತಿ ಮತ್ತು ವಿಶ್ವಾಸದಿಂದಲೇ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ, ಸಾಧನೆಗಳ ಮೆಟ್ಟಿಲೇರಲು ನೆರವಾಗಿದ್ದಾರೆ. ಇಂತಹ ಶಿಕ್ಷಕರನ್ನು ಗುರುತಿಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದಕ್ಕೆ ಕೊಕ್ಕರೆ ಬೆಳ್ಳೂರು ಮಾತ್ರವಲ್ಲದೆ ಮದ್ದೂರು ತಾಲೂಕು, ಮಂಡ್ಯ ಜಿಲ್ಲೆಯಲ್ಲೇ ಪ್ರಶಂಸೆಯ ಸುರಿಮಳೆಯಾಗಿದೆ.

ಎಣೆಯಿಲ್ಲದ ಸಾಧನೆ

ದೈಹಿಕ ಶಿಕ್ಷಕ ಬಾಲಸುಬ್ರಮಣ್ಯ ಅವರು ವೈಯಕ್ತಿಕವಾಗಿ ಮತ್ತು ಶಿಷ್ಯ ವೃಂದದ ಮೂಲಕ ಮಾಡಿದ ಸಾಧನೆ ಅಗಾಧ. ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಡೆದ ಪ್ರಶಸ್ತಿ ಮತ್ತು ಬಹುಮಾನಗಳು ನೂರಾರು. ೨೦೧೫-೧೬ನೇ ಸಾಲಿನಲ್ಲಿ ತುಮಕೂರಿನಲ್ಲಿ ನಡೆದ 61ನೇ ಎಸ್.ಜಿ.ಎಫ್.ಐ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕೊಕ್ಕರೆ ಬೆಳ್ಳೂರು ಪ್ರೌಢಶಾಲೆ ತಂಡ ಚಿನ್ನದ ಪದಕ ಪಡೆದಿತ್ತು. ಇದಕ್ಕೆ ಬಾಲಸುಬ್ರಮಣ್ಯರೇ ಕಾರಣ ಎಂದು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ.  

2018-19ನೇ ಸಾಲಿನಲ್ಲಿ ರಾಜಸ್ಥಾನದಲ್ಲಿ ನಡೆದ 64ನೇ ಎಸ್.ಜಿ.ಎಫ್.ಐ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಇವರು ತರಬೇತುದಾರರಾಗಿದ್ದ ಶಾಲಾ ಬಾಲಕಿಯರ ತಂಡ ೬ನೇ ಸ್ಥಾನ ಪಡೆದಿತ್ತು. ಪೂನಾದಲ್ಲಿ ನಡೆದ 2018-19ನೇ ಸಾಲಿನ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಕೊಕ್ಕರೆ ಬೆಳ್ಳೂರು ತಂಡಕ್ಕೆ ೫ನೇ ಸ್ಥಾನ ಲಭಿಸಿತ್ತು.  

ಗುಜರಾತ್‌ನಲ್ಲಿ 2018-19ನೇ ಸಾಲಿನಲ್ಲಿ ನಡೆದ 64ನೇ ಎಸ್.ಜಿ.ಎಫ್.ಐ ರಾಷ್ಟ್ರ ಮಟ್ಟದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಇವರು ರಾಜ್ಯ ತಂಡದ ವ್ಯವಸ್ಥಾಪಕರಾಗಿದ್ದರು. ಮೂರು ಬಾರಿ ತರಬೇತುದಾರರಾಗಿ ಕರ್ನಾಟಕ ರಾಜ್ಯ ಸೀನಿಯರ್ ವಿಭಾಗದ ಖೋ ಖೋ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಎರಡು ಬಾರಿ ಬೆಳ್ಳಿ, ಒಮ್ಮೆ ಕಂಚಿನ ಪದಕ ರಾಜ್ಯ ತಂಡಕ್ಕೆ ದಕ್ಕಿದೆ.  

Teacher's Day 2022

4 ಬಾರಿ ಕರ್ನಾಟಕ ರಾಜ್ಯ ಜೂನಿಯರ್ ವಿಭಾಗದ ಖೋ ಖೋ ತಂಡ ಮುನ್ನಡೆಸಿದ್ದು, ಒಮ್ಮೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಒಂದು ಬಾರಿ ಸಬ್ ಜೂನಿಯರ್‌ ಕರ್ನಾಟಕ ರಾಜ್ಯ ಖೋ ಖೋ ತಂಡದ ತರಬೇತುದಾರರಾಗಿ ಬೆಳ್ಳಿ ಪದಕ ತರುವಲ್ಲಿ ಶ್ರಮವಹಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಆ ಕರ್ತವ್ಯವನ್ನೂ ನಿರ್ವಹಣೆ ಮಾಡಿದ ಹಿರಿಮೆ ಬಾಲಸುಬ್ರಮಣ್ಯ ಅವರಿಗಿದೆ.

ರಾಜ್ಯ ಮಟ್ಟದ ಥೋ ಬಾಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 4 ಬಾರಿ ಮೈಸೂರು ವಿವಿ ಹ್ಯಾಂಡ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಒಂದು ಬಾರಿ ಮೈಸೂರು ವಿವಿಯ ಖೋ ಖೋ ತಂಡ ಪ್ರತಿನಿಧಿಸಿದ್ದಾರೆ. ಹೀಗೆ ಸ್ವತಃ ಕ್ರೀಡಾಪಟು, ತರಬೇತುದಾರ, ವ್ಯವಸ್ಥಾಪಕ ಆಗಿ ಖೋ ಖೋ ಮಾತ್ರವಲ್ಲದೆ ಥ್ರೋ ಬಾಲ್‌, ಕ್ರಿಕೆಟ್‌ ಪಂದ್ಯಾವಳಿಗಳಲ್ಲೂ ಇವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಮಕ್ಕಳ ಸಾಧನೆಗೆ ಮೆಟ್ಟಿಲಾದ ಶಿಕ್ಷಕ

ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆ ಮಕ್ಕಳು ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ಮಾಡುವುದಕ್ಕೆ ಸ್ವತಃ ಬಾಲಸುಬ್ರಮಣ್ಯ ಅವರು ಮೆಟ್ಟಿಲಾಗಿದ್ದಾರೆ. ಮಕ್ಕಳಲ್ಲಿರುವ ಸಾಮರ್ಥ್ಯ ಕ್ರೀಡಾಭಿರುಚಿಯನ್ನು ಗುರ್ತಿಸಿ, ಅವರಿಗೆ ಸೂಕ್ತವೆನಿಸಿದ ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಇವರು ಪ್ರೇರಣೆಯಾಗಿ ನಿಂತವರು. ಇವರ ತರಬೇತಿ ಪಡೆದವರು ಕ್ರೀಡಾಲೋಕದಲ್ಲಿ ಯಶಸ್ಸು ಕಂಡಿರುವ ನಿದರ್ಶನಗಳು ಒಂದು, ಎರಡಲ್ಲ. ಬರೋಬ್ಬರಿ 55 ನಿದರ್ಶನಗಳಿವೆ.

ಶಾಲೆಯ 31 ವಿದ್ಯಾರ್ಥಿಗಳು ಖೋ ಖೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಹಾಗೂ 10 ಮಂದಿ ವಿದ್ಯಾರ್ಥಿಗಳು ಥ್ರೋ ಬಾಲ್‌ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ಗಳಿಸಿದ್ದಾರೆ. ಹಾಗೆಯೇ 2018-19ನೇ ಸಾಲಿನಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಖೋ ಖೋ ಕ್ರೀಡೆಯಲ್ಲಿ ಏಷ್ಯನ್ ಸ್ಕೂಲ್ ಗೇಮ್ಸ್ ಅಂತರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿದ್ದರು.

ಇವರ ಗರಡಿಯಲ್ಲಿ ಪಳಗಿದ 41 ವಿದ್ಯಾರ್ಥಿಗಳು ಸರಿ ಸುಮಾರು 145 ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿರುವುದು ನಿಜಕ್ಕೂ ದಾಖಲೆಯೇ ಸರಿ.  ಬಾಲಸುಬ್ರಮಣ್ಯ ಅವರು ವೈಯಕ್ತಿಕವಾಗಿ 13 ಬಾರೀ ಕರ್ನಾಟಕ ರಾಜ್ಯ ತಂಡವನ್ನು ಖೋ ಖೋ ಮತ್ತು ಕ್ರಿಕೆಟ್ ಕ್ರೀಡೆಯಲ್ಲಿ ತರಬೇತುದಾರರಾಗಿ, ವ್ಯವಸ್ಥಾಪಕರಾಗಿ ಅನೇಕ ಪದಕಗಳನ್ನು ಸಂಪಾದಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿರುತ್ತಾರೆ. ೩೦ಕ್ಕೂ ಹೆಚ್ಚು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಇವರ ಶಿಷ್ಯರು ಪದಕ ವಿಜೇತರು.

ರಾಷ್ಟ್ರ ಮಟ್ಟದ ಖೋ ಖೋ 5 ತರಬೇತಿ ಶಿಬಿರಗಳನ್ನು ಮತ್ತು 2 ಥ್ರೋ ಬಾಲ್ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ. ಖೋ ಖೋ, ಥ್ರೋ ಬಾಲ್‌ ಕ್ರೀಡೆಯ ರಾಜ್ಯ, ವಿಭಾಗೀಯ ೧೨ಕ್ಕೂ ಹೆಚ್ಚು ಪಂದ್ಯಾವಳಿಗಳ ಆಯೋಜನೆಯಲ್ಲಿ ಹೆಗಲು ನೀಡಿದ್ದಾರೆ. 2015-16ನೇ ಸಾಲಿನಲ್ಲಿ ಎಸ್.ಜಿ.ಎಫ್.ಐ 61ನೇ ಖೋ ಖೋ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಮ್ಮ ಶಾಲಾ ತಂಡ ಚಿನ್ನದ ಪದಕ ಗಳಿಸಿರುವುದು ಬಾಲಸುಬ್ರಮಣ್ಯ ಅವರ ಪಾಲಿನ ಅವಿಸ್ಮರಣೀಯ ಸಾಧನೆಯೇ ಸರಿ.  

ನಾನು ಪ್ರಶಸ್ತಿಗಾಗಿ ಪರಿಶ್ರಮ ಹಾಕಲಿಲ್ಲ. ಸ್ವತಃ ಕ್ರೀಡಾಪಟುವಾಗಿ ಶಿಷ್ಯರ ಸಾಧನೆ ಕಣ್ತುಂಬಿಕೊಳ್ಳುವ ಉದ್ದೇಶದಿಂದ ಇಷ್ಟೆಲ್ಲಾ ಪರಿಶ್ರಮ ಹಾಕಿದ್ದೇನೆ. ಮಕ್ಕಳ ಸಾಧನೆಯಲ್ಲಿ ನಾನು ಸಂತೃಪ್ತಿ ಕಾಣುತ್ತಿದ್ದೇನೆ. ನನ್ನನ್ನು ಗುರ್ತಿಸಿದ ಸರ್ಕಾರ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಶಿಕ್ಷಣ ಇಲಾಖೆ, ಶಿಕ್ಷಕ ಸಂಘಟನೆಗಳು, ಸೇವೆ ಸಲ್ಲಿಸುತ್ತಿರುವ ಸ್ಥಳವಾದ ಕೊಕ್ಕರೆ ಬೆಳ್ಳೂರು ಗ್ರಾಮಸ್ಥರಿಗೆ ನಾನು ಆಭಾರಿಯಾಗಿದ್ದೇನೆ. ಅವರೆಲ್ಲರ ಸಹಕಾರ ಮರೆಯುವಂತಿಲ್ಲ.
– ಎಸ್.ಟಿ.ಬಾಲಸುಬ್ರಮಣ್ಯ | ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೊಕ್ಕರೆ ಬೆಳ್ಳೂರು, ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ.

ಬಾಲಸುಬ್ರಮಣ್ಯ ಅವರಿಂದ ತರಬೇತಿ ಪಡೆದ ಕೊಕ್ಕರೆ ಬೆಳ್ಳೂರು ಶಾಲೆಯ 40 ಮಂದಿ ಮಕ್ಕಳು ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿರುತ್ತಾರೆ. 3 ವಿದ್ಯಾರ್ಥಿನಿಯರು ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ 2015 ಬೆಳ್ಳಿ ಪದಕ ಸಾಧನೆಗಾಗಿ ತಲಾ 2 ಲಕ್ಷ ರೂ. ನಗದು ಬಹುಮಾನ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ. ಇನ್ನುಳಿದಂತೆ ಶಾಲೆಯ ಕ್ರೀಡಾಪಟುಗಳು ಕಬಡ್ಡಿ, ಥ್ರೋ ಬಾಲ್‌ನಲ್ಲಿ ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಬಾಚಿಕೊಂಡ ಪದಕಗಳು ನೂರಾರು. ಕ್ರೀಡಾ ಸಾಧನೆಯಿಂದ 50ಕ್ಕೂ ಹೆಚ್ಚು ಮಂದಿಗೆ ಕ್ರೀಡಾ ಶಿಷ್ಯ ವೇತನವೂ ದೊರೆತಿದ್ದು, ಮುಂದಿನ ವ್ಯಾಸಂಗಕ್ಕೆ ನೆರವಾಗಿದೆ.

ಇಷ್ಟೆಲ್ಲಾ ಸಾಧನೆ ಮೆರೆದಿರುವುದನ್ನು ನೋಡಿದರೆ, ದೈಹಿಕ ಶಿಕ್ಷಕ ಬಾಲಸುಬ್ರಮಣ್ಯ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕೊಂಚ ವಿಳಂಬವಾಗಿಯೇ ಬಂದಿದೆ ಎನ್ನಬಹುದು. ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳಲ್ಲಿ ಲಾಬಿಯೇ ಹೆಚ್ಚಿರುವ ಇಂತಹ ದಿನಗಳಲ್ಲಿ ಬಾಲಸುಬ್ರಮಣ್ಯ ಅವರನ್ನು ಸಾಧನೆ ಮೂಲಕವೇ ಗುರ್ತಿಸಿ, ಸನ್ಮಾನಿಸುತ್ತಿರುವುದು ಅವರ ಶಿಷ್ಯ ವೃಂದ, ಸ್ಥಳೀಯ ಶಾಲಾಭಿವೃದ್ಧಿ ಸಮಿತಿ, ಕೊಕ್ಕರೆ ಬೆಳ್ಳೂರು ಗ್ರಾಮಸ್ಥರಿಗೆ ಹರ್ಷ ಮೂಡಿಸಿದೆ.

ಇದನ್ನೂ ಓದಿ | Award | ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾವ ಜಿಲ್ಲೆಯ ಯಾರಿಗೆ ಗರಿ, ಶಿಕ್ಷಕರ ವೈಶಿಷ್ಟ್ಯವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : ಕುರುಡಿ, ಕಿವುಡಿ ಶಿಷ್ಯೆ ಮತ್ತು ಕುರುಡಿ ಟೀಚರ್! ; ಇದು ಜಗತ್ತಿನ ಬೆಸ್ಟ್‌ ಶಿಕ್ಷಕಿಯ ಕತೆ

Raja Marga Column : ನೀವು ನಂಬಲೇಬೇಕು. ಆಕೆಗೆ ಕಣ್ಣೇ ಕಾಣಿಸುತ್ತಿರಲಿಲ್ಲ. ಆದರೆ ಆಕೆ ಕಣ್ಣೇ ಕಾಣದ, ಕಿವಿಯೂ ಕೇಳದ ಒಬ್ಬ ಹುಡುಗಿಯನ್ನು ನೆರಳಿನಂತೆ ಕಾಪಾಡಿ ಜಗತ್ತಿನ ಶ್ರೇಷ್ಠ ಲೇಖಕಿಯಾಗಿ ರೂಪಿಸುತ್ತಾರೆ. ಇದು ಪ್ರತಿಯೊಬ್ಬ ಶಿಕ್ಷಕ ಹೆಮ್ಮೆ ಪಡಬಹುದಾದ ಕಥೆ. ಜಗತ್ತಿನ ಬೆಸ್ಟ್‌ ಟೀಚರ್‌ ಕಥೆ.

VISTARANEWS.COM


on

Anne Sullivan and Helen keller
ಆನ್ನಿ ಸುಲೈವಾನ್‌ ಮತ್ತು ಹೆಲೆನ್‌ ಕೆಲ್ಲರ್‌ ಕತೆ- ಚಿತ್ರ ಪ್ರಾತಿನಿಧಿಕ
Koo
RAJAMARGA

ಇಂದು ನಾನು ನಿಮಗೆ ಜಗತ್ತಿನ ಅತಿ ಅದ್ಭುತವಾದ ಒಂದು ಗುರು ಹಾಗೂ ಶಿಷ್ಯೆಯರ ಸಂಬಂಧದ ಕಥೆ ಹೇಳಬೇಕು (Raja Marga Column). ಆಕೆ ಆನ್ನಿ ಸುಲೈವಾನ್ (Anne Sullivan, American teacher). ಹುಟ್ಟಿದ್ದು ಅಮೆರಿಕಾದ ಬೋಸ್ಟನ್ ನಗರದಲ್ಲಿ. ಬಡತನದ ಕುಟುಂಬ ಆಕೆಯದ್ದು. ತಂದೆಗೆ ಸಂಸಾರದ ಜವಾಬ್ದಾರಿ ಕಡಿಮೆ ಇತ್ತು. ತಾಯಿಗೆ ನಿರಂತರ ಕಾಯಿಲೆ. ಐದು ಮಕ್ಕಳು ಹುಟ್ಟಿದರೂ ಉಳಿದದ್ದು ಎರಡೇ ಎರಡು! ಅದರಲ್ಲಿ ಒಬ್ಬಳು ಆನ್ನಿ.

ಎಂತಹ ದುರದೃಷ್ಟ ಆಕೆಯದ್ದು ನೋಡಿ. ಆಕೆಗೆ ಐದನೇ ವರ್ಷಕ್ಕೆ ಟ್ರಕೋಮಾ (Trachoma) ಎಂಬ ಕಣ್ಣಿನ ಕಾಯಿಲೆ ಬಂದು ದೃಷ್ಟಿ ಮಂದ ಆಯಿತು. ಕ್ರಮೇಣ ದೃಷ್ಟಿಯು ಹತ್ತು ಶೇಕಡಾ ಮಾತ್ರ ಉಳಿಯಿತು! ಎಂಟನೆಯ ವರ್ಷಕ್ಕೆ ಅಮ್ಮ ತೀರಿಹೋದರು.

ಎರಡು ಮಕ್ಕಳನ್ನು ನೋಡಿಕೊಳ್ಳುವುದು ಅಸಾಧ್ಯ ಎಂದು ಭಾವಿಸಿದ ಅಪ್ಪ ಅವರನ್ನು ಅನಾಥಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಂಡ! ಹಾಗೆ ಆನ್ನಿ ಮತ್ತು ಆಕೆಯ ಸೋದರ ಜಿಮ್ಮಿ ಇಬ್ಬರೂ ಅನಾಥ ಮಕ್ಕಳ ಜೊತೆಗೆ ತಮ್ಮ ಬಾಲ್ಯ ಕಳೆಯಬೇಕಾಯಿತು.

ಆ ಆಶ್ರಮದಲ್ಲಿ ತೀವ್ರ ಅನಾರೋಗ್ಯಕರವಾದ ವಾತಾವರಣ ಇತ್ತು. ಮಿತಿಗಿಂತ ಹೆಚ್ಚು ಮಕ್ಕಳನ್ನು ತುಂಬಿದ್ದರು. ಹಳಸಿದ ಅಂಬಲಿ ಕುಡಿದು ಬದುಕುವ ಅನಿವಾರ್ಯತೆ ಇತ್ತು. ಕೆಲವೇ ತಿಂಗಳಲ್ಲಿ ಸೋದರ ಜಿಮ್ಮಿ ತೀರಿ ಹೋದಾಗ ಆನ್ನಿ ಮತ್ತೆ ಒಬ್ಬಂಟಿ ಆದಳು.

Anne Sullivan and Helen keller

ಹೇಗಾದರೂ ಶಿಕ್ಷಣವನ್ನು ಪಡೆದು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ತುಡಿತ ಹೆಚ್ಚಾದಾಗ ಆಕೆ ಕುರುಡು ಮಕ್ಕಳ ಪರ್ಕಿನ್ ಎಂಬ ಶಾಲೆಗೆ ಸೇರಿದರು. ಅಲ್ಲಿಯು ಕೂಡ ಬೇರೆ ಮಕ್ಕಳಿಂದ ಹಿಂಸೆ, ಅಪಮಾನ ಆಕೆ ಎದುರಿಸಬೇಕಾಯಿತು.

ಶಾಲೆಯ ಫೀಸ್ ಕಟ್ಟಲು ಕಷ್ಟ ಆದ ಕಾರಣ ಅಲ್ಲಿ ತಾರತಮ್ಯ ನೀತಿ ತೊಂದರೆ ಕೊಟ್ಟಿತು. ಆದರೆ ಕಲಿಯುವ ಗಟ್ಟಿ ಸಂಕಲ್ಪ ಇದೆಯಲ್ಲ ಅದು ನಿಜಕ್ಕೂ ಶ್ಲಾಘನೀಯವೇ ಆಗಿತ್ತು! ಕಣ್ಣಿನ ದೃಷ್ಟಿಯು ಪೂರ್ತಿ ಹೊರಟುಹೋದ ಕಾರಣ ಆಕೆ ಬ್ರೈಲ್ ಲಿಪಿಯಲ್ಲಿ ಅಕ್ಷರಗಳನ್ನು ಓದಲು ಮತ್ತು ಬರೆಯಲು ಕಲಿಯಬೇಕಾಯಿತು.

ಆಕೆ 20 ವರ್ಷ ಪ್ರಾಯಕ್ಕೆ ಬಂದಾಗ ಆಕೆಯ ಬದುಕಿನಲ್ಲಿ ಒಂದು ಅತ್ಯಂತ ಮಹತ್ವದ ತಿರುವು ಬಂದೇ ಬಿಟ್ಟಿತು. ಅದೇ ನಗರದಲ್ಲಿ ವಾಸಿಸುತ್ತಿದ್ದ ಕೆಲ್ಲರ್ ಕುಟುಂಬವು ಆಕೆಯನ್ನು ಸಂಪರ್ಕ ಮಾಡಿ ಒಂದು ವಿನಂತಿ ಮಾಡಿತು.

Anne Sullivan and Helen keller

ಕೆಲ್ಲರ್ ಕುಟುಂಬದ ಅತ್ಯಂತ ಪ್ರೀತಿಯ ಕುಡಿಯಾದ ಹೆಲೆನ್ ಕೆಲ್ಲರ್ ಅವಳನ್ನು ಓದಿಸಿ, ಬರೆಸುವ ಜವಾಬ್ದಾರಿ ಹೊರಲು ಸಾಧ್ಯವೇ ಎಂದು ಕೇಳಿದಾಗ ಆಕೆ ಖುಷಿಯಿಂದ ಒಪ್ಪಿದಳು. ನಮಗೆಲ್ಲರಿಗೂ ಗೊತ್ತಿರುವಂತೆ ಹೆಲೆನ್ ಕೆಲ್ಲರ್ ಸಂಪೂರ್ಣ ಕುರುಡಿ ಮತ್ತು ಕಿವುಡಿ! ಮಾತು ಕೂಡ ತೊದಲು ಆಗಿತ್ತು. ಹೆಲೆನ್ ಕೆಲ್ಲರ್ ಅತ್ಯಂತ ಸುಂದರಿಯಾದ ಗೊಂಬೆಯೇ ಆಗಿದ್ದಳು.

ಆಗ ಆನ್ನಿಗೆ 20ರ ಹರೆಯ. ಆದರೆ ಆಕೆಗೆ ತನ್ನ ಪ್ರಾಯಕ್ಕೆ ಮೀರಿದ ಪ್ರಬುದ್ಧತೆ, ಜಾಣ್ಮೆ ಹಾಗೂ ತಾಳ್ಮೆ ಇತ್ತು. ಹೆಲೆನ್ ಕೆಲ್ಲರ್ ಕೂಡ ತುಂಬಾ ಬುದ್ಧಿವಂತೆ. ಆದರೆ ಕುರುಡುತನ ಹಾಗೂ ಕಿವುಡುತನ ಅಡ್ಡಿ ಆಗಿದ್ದವು. ಆದರೆ ಆನ್ನಿ ಒಳ್ಳೆಯ ಗುರುವಾಗಿ, ಗೆಳತಿ ಆಗಿ, ತಾಯಿ ಆಗಿ ತನ್ನ ಶಿಷ್ಯೆಯನ್ನು ತಿದ್ದಿ ತೀಡಿದಳು.

ಆನ್ನಿಯು ತನ್ನ ಶಿಷ್ಯೆಯಾದ ಹೆಲೆನ್ ಕೆಲ್ಲರ್‌ ಒಂದೊಂದೇ ಅಕ್ಷರಗಳನ್ನು ಬ್ರೈಲ್ ಲಿಪಿಯ ಮೂಲಕ ಬರೆಯುವುದನ್ನು ಮತ್ತು ಓದುವುದನ್ನು ಕಲಿಸಿದರು. ವಸ್ತುಗಳ ಸ್ಪರ್ಶದಿಂದ ಅನುಭವವನ್ನು ಮತ್ತು ಲೋಕ ಜ್ಞಾನವನ್ನು ಕೊಟ್ಟರು. ಗಣಿತದ ಸಂಖ್ಯೆಗಳನ್ನು ಕೂಡಿಸು, ಕಳೆ, ಗುಣಿಸು, ಭಾಗಿಸು ಮಾಡುವುದನ್ನು ಕಲಿಸಿದರು.

Anne sullivan- Helen keller

ಜಗತ್ತಿನ ಅತೀ ಉತ್ತಮವಾದ ಪುಸ್ತಕಗಳನ್ನು ಓದಿಸಿದರು. ಆತ್ಮವಿಶ್ವಾಸವನ್ನು ತುಂಬಿದರು. ಶ್ರೇಷ್ಠ ಮೌಲ್ಯಗಳನ್ನು ತುಂಬಿದರು. ಸಂವಹನ ಕಲೆಯನ್ನು ಕಲಿಸಿದರು. ಬಹಳ ವೇದಿಕೆಯಲ್ಲಿ ಭಾಷಣಗಳನ್ನು ಮಾಡಲು ಕಲಿಸಿದರು. ನೂರಾರು ನಗರಗಳಿಗೆ ಆಕೆಯನ್ನು ಸ್ವತಃ ಕರೆದುಕೊಂಡು ಹೋಗಿ ಭಾಷಣಗಳನ್ನು ಮಾಡಿಸಿದರು. ಆಕೆಯಿಂದ ಹಲವು ಪುಸ್ತಕಗಳನ್ನು ಬರೆಸಿದರು.

ಪರಿಣಾಮವಾಗಿ ಹೆಲೆನ್ ಕೆಲ್ಲರ್ ರೆಡ್ ಕ್ಲಿಫ್ ಕಾಲೇಜಿನ ಮೊದಲ ಕುರುಡಿ ಮತ್ತು ಕಿವುಡಿ ಹುಡುಗಿಯಾಗಿ ಪದವಿ ಪಡೆದು ಹೊರಬಂದರು! ಆಕೆಯ ವ್ಯಕ್ತಿತ್ವವನ್ನು ವಿಶ್ವ ಮಟ್ಟಕ್ಕೆ ತಲುಪಿಸಿದ ಕೀರ್ತಿಯು ಖಂಡಿತವಾಗಿ ಆನ್ನಿಗೆ ದೊರೆಯಬೇಕು.

ಆನ್ನಿ ಮುಂದೆ ಹೆಲೆನ್‌ಗೆ ಆ ಕಾಲದ ಖ್ಯಾತ ವಿಜ್ಞಾನಿಗಳಾದ ಥಾಮಸ್ ಆಲ್ವಾ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಪ್ರಸಿದ್ಧ ತತ್ವಜ್ಞಾನಿ ಮಾರ್ಕ್ ಟ್ವೈನ್ ಮೊದಲಾದವರನ್ನು ಭೇಟಿ ಮಾಡಿಸುತ್ತಾರೆ. ಹಲವು ತಾತ್ವಿಕ ನಾಟಕಗಳನ್ನು ಬರೆಯುತ್ತಾರೆ. ಮುಂದೆ ಹೆಲೆನ್ ಕೆಲ್ಲರ್ ತನ್ನ ಆತ್ಮಚರಿತ್ರೆ ಬರೆಯಲು ಸಹಾಯ ಮಾಡುತ್ತಾರೆ.

Anne sullivan

ಒಂದು ಅರ್ಧ ಕ್ಷಣ ಕೂಡ ತನ್ನ ಶಿಷ್ಯೆಯನ್ನು ಬಿಟ್ಟು ಇರದೆ ಆಕೆಯ ಬೆಂಬಲಕ್ಕೆ ನಿಲ್ಲುತ್ತಾರೆ. ತನ್ನ ಶಿಷ್ಯೆಯ ಭವಿಷ್ಯಕ್ಕಾಗಿ ತನ್ನ ಖಾಸಗಿ ಜೀವನದ ಮಧುರವಾದ ಕ್ಷಣಗಳನ್ನು ಕೂಡ ಮರೆಯುತ್ತಾರೆ! ಪರಿಣಾಮವಾಗಿ ಆಕೆ ಮದುವೆ ಆದ ಜಾನ್ ಮಾಕಿ ಅವರು ಆನ್ನಿಯನ್ನು ಬಿಟ್ಟು ಹೋಗುತ್ತಾರೆ.

ಇದನ್ನೂ ಓದಿ : Raja Marga Column : ಗೋ ಗೋ ಗೋವಾ!; ಒಂದು ಕಾಲದ ಕುಡುಕರ ರಾಜ್ಯ ಈಗ ಸಾಂಸ್ಕೃತಿಕ ರಾಜಧಾನಿ ಆಗಿದ್ದು ಹೇಗೆ?

ಆದರೆ ಗುರು ಶಿಷ್ಯೆಯರ ಪ್ರೀತಿಯ ಮಧುರ ಸಂಬಂಧವು ಕೊನೆಯವರೆಗೂ ಹಾಗೆಯೇ ಉಳಿಯುತ್ತದೆ. ಮುಂದೆ ಹೆಲೆನ್ ಕೆಲ್ಲರ್ ವಿಶ್ವಮಟ್ಟದ ಐಕಾನ್ ಆಗುತ್ತಾರೆ. ಜಗತ್ತಿನಾದ್ಯಂತ ಪ್ರವಾಸ ಹೋಗುತ್ತಾರೆ. ಆಕೆ ಹೋದಲ್ಲೆಲ್ಲ ಆನ್ನಿ ತನ್ನ ಶಿಷ್ಯೆಯ ನೆರಳಾಗಿ ಹೋಗುತ್ತಾಳೆ. ಆಕೆಯಿಂದ ಸ್ಫೂರ್ತಿ ಪಡೆದು ಹೆಲೆನ್ ಕೆಲ್ಲರ್ ಅಂಧರ ಸ್ಫೂರ್ತಿ ದೇವತೆ ಆಗುತ್ತಾರೆ. ಜಾಗತಿಕ ಲಯನ್ಸ್ ಸಂಸ್ಥೆ ಅವರನ್ನು ತನ್ನ ಐಕಾನ್ ಆಗಿ ಸ್ವೀಕಾರ ಮಾಡಿತು.
ಹೆಲೆನ್ ಕೆಲ್ಲರ್ ಅವರ ಸಾಧನೆಯ ಯಾವ ಪುಟವನ್ನು ಓದಿದರೂ ಅವರ ಗುರುವಾದ ಆನ್ನಿ ಸುಲೈವಾನ್ ಉಲ್ಲೇಖ ಮಾಡದೆ ಅದು ಪೂರ್ತಿ ಆಗುವುದಿಲ್ಲ!

Continue Reading

ಉತ್ತರ ಕನ್ನಡ

Teachers Day: ಶಿಕ್ಷಕ ನಾರಾಯಣ ಭಾಗ್ವತ್‌ಗೆ ರಾಷ್ಟ್ರಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ

Teachers Da : ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ‌ ಶಿಕ್ಷಕ, ರಂಗಭೂಮಿ ಕಲಾವಿದ ನಾರಾಯಣ ಭಾಗ್ವತ್ ಅವರಿಗೆ ನವ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಮಂಗಳವಾರ ರಾಷ್ಟ್ರಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ‌ ಪ್ರದಾನ ಮಾಡಿದರು.

VISTARANEWS.COM


on

Sirsi Kannada Teacher Narayan Bhagwat was awarded the national level best teacher award
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ‌ ಶಿಕ್ಷಕ ನಾರಾಯಣ ಭಾಗ್ವತ್ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಮಂಗಳವಾರ ರಾಷ್ಟ್ರಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ‌ ಪ್ರದಾನ ಮಾಡಿದರು.
Koo

ಶಿರಸಿ: ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ‌ ಶಿಕ್ಷಕ (Kannada Teacher), ರಂಗಭೂಮಿ ಕಲಾವಿದ (Theater Artist) ನಾರಾಯಣ ಭಾಗ್ವತ್ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಮಂಗಳವಾರ ರಾಷ್ಟ್ರಮಟ್ಟದ (Teachers Day 2023) ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ‌ (Best Teacher Award) ಪ್ರದಾನ ಮಾಡಿದರು.‌

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣದ ನಾರಾಯಣ ಭಾಗ್ವತ್ ಅವರು ಕತೆ-ಕವನ-ನಾಟಕ ರಚನೆ , ಚಿತ್ರಕಲೆ , ಸಂಗೀತ , ನಾಟಕ ನಿರ್ದೇಶನ ಮತ್ತು ಅಭಿನಯ , ಉಪನ್ಯಾಸ , ರಜಾ ಶಿಬಿರಗಳ ಸಂಘಟನೆ , ಪೇಪರ್ ಕ್ರಾಫ್ಟ್ , ಹಾರ್ಮೋನಿಯಂ ವಾದನ , ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ , ಯಕ್ಷಗಾನ , ಕರಕುಶಲ ಕಲೆ , ವಾಸ್ತು ಜ್ಞಾನ ಹೀಗೆ ಬಹುಮುಖಿ ಪ್ರತಿಭೆ ಉಳ್ಳವರು.

ಇದನ್ನೂ ಓದಿ: National Nutrition Week 2023: ಸಿರಿಧಾನ್ಯ ಸೇವನೆಯಿಂದ ಎಷ್ಟೊಂದು ಪ್ರಯೋಜನ! ಸೈಡ್‌ ಎಫೆಕ್ಟ್‌ ಇದೆಯಾ?

ಈಗಾಗಲೆ ರಾಷ್ಟ್ರಪತಿಗಳ ಬೆಳ್ಳಿ ಪದಕ , ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ , ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ , ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ , ಅತ್ಯುತ್ತಮ ನಟ ,ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಜ್ಞಾನ ಸಿಂಧು ಪ್ರಶಸ್ತಿ , ನೇಶನ್ ಬ್ಯುಲ್ಡರ್ ಪ್ರಶಸ್ತಿ , ಕ.ಸಾ.ಪ. ತಾಲೂಕು ಪ್ರಶಸ್ತಿ , ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ , ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಪ್ರಶಸ್ತಿ – ಪುರಸ್ಕಾರಗಳನ್ನು ನೀಡಿ ಈಗಾಗಲೇ ಗೌರವಿಸಲಾಗಿದೆ‌. ಕನ್ನಡ ಭಾಷಾ ಶಿಕ್ಷಕರಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಪಡೆದಿರುವುದೂ ವಿಶೇಷವಾಗಿದೆ.

Continue Reading

ಚಿತ್ರದುರ್ಗ

ಮಲ್ಲಾಡಿಹಳ್ಳಿ ಕಾಲೇಜು ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ: 35 ವರ್ಷದ ಹಿಂದಿನ ಶಿಕ್ಷಣಾರ್ಥಿಗಳ ಸಮ್ಮಿಲನ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಸೇವಾ ಚಟುವಟಿಕೆಗಳು ಸಾಗುತ್ತಿವೆ.

VISTARANEWS.COM


on

Koo

ಬೆಂಗಳೂರು: ಶಿಕ್ಷಣ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು ಎನ್ನುವುದನ್ನು ಪಾಲಿಸುತ್ತಿರುವ ಮೂವತ್ತೈದು ವರ್ಷದ ಹಿಂದಿನ ವಿದ್ಯಾರ್ಥಿಗಳ ಗುಂಪು, ಅಂದಿನ ಗುರುಗಳ ಬಳಿಗೆ ಸಾಗಿ ವಂದನೆ ಸಲ್ಲಿಸಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಸೇವಾ ಚಟುವಟಿಕೆಗಳು ಸಾಗುತ್ತಿವೆ. ಅನಾಥ ಸೇವಾಶ್ರಮದ ಅದೀನದಲ್ಲಿನ ʼಸರ್ವ ಸೇವಾ ಬೋಧಕ ಶಿಕ್ಷಣಾಲಯ (ಎಸ್‌ಎಸ್‌ಬಿಎಸ್‌) TCH Collegeನಿಂದ ಅನೇಕ ಉತ್ತಮ ಶಿಕ್ಷಕರನ್ನು ರೂಪಿಸಲಾಗಿದೆ.

ಉತ್ತಮ ಶಿಕ್ಷಣ ಸೇವೆ ಹಾಗೂ ಸಂಸ್ಕಾರ ಕಲಿಸುವ ಕೇಂದ್ರವಾಗಿದ್ದ ವಿದ್ಯಾಲಯದಲ್ಲಿ ಅಧೀಕ್ಷಕರಾಗಿದ್ದವರು ಬಿ.ಎಸ್‌. ವತ್ಸನ್‌ ಅವರು. ಈಗ 90 ವರ್ಷದವರಾದ ವತ್ಸನ್‌ ಅವರು ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದಾರೆ. ವತ್ಸನ್‌ ಅವರಿಂದ ಶಿಕ್ಷಣ ಕಲಿತ ಶಿಕ್ಷಣಾರ್ಥಿಗಳು ಇತ್ತೀಚೆಗೆ ಒಟ್ಟಾಗಿ ಸೇರಿ ಗುರುವಂದನೆ ಸಲ್ಲಿಸಿದರು.

1983-87ನೇ ಬ್ಯಾಚ್ ಪ್ರಶಿಕ್ಷಣಾರ್ಥಿಗಳು ವತ್ಸನ್ ಅವರಿಗೆ ಗುರುವಂದನೆ ಸಲ್ಲಿಸಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ತಮ್ಮ ಜೀವನ ವೃತ್ತಾಂತವನ್ನು ವತ್ಸನ್‌ ಅವರು ನೆನೆದರು. ಗೋಕರ್ಣದಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು, ನಂತರ ಅಲ್ಲಿ ಸಮಾಧಾನವಾಗದೆ ಮೈಸೂರಿಗೆ ವಾಪಸಾದದ್ದು, ಹಾಸನದಲ್ಲಿ ತಿಪ್ಪೇಸ್ವಾಮಿ ಎಂಬ ಡಿಸಿಯವರ ಸಲಹೆ ಮೇರೆಗೆ ಮತ್ತೊಂದು ಕೆಲಸಕ್ಕೆ ಸೇರಿದ್ದು, ಅದನ್ನೂ ತ್ಯಜಿಸಿದ್ದ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳ ಭೇಟಿಯಾಗಿ ಮಲ್ಲಾಡಿಹಳ್ಳಿಗೆ ಆಗಮಿಸಿದ್ದನ್ನು ಸ್ಮರಿಸಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ |ಮೌಲ್ಯಗಳನ್ನು ಬೋಧನೆ ಮಾಡದೆ ಅವುಗಳನ್ನೇ ಬದುಕಿದ ಮಹಾ ಗುರು ಪ್ರೊ. ಎಚ್.‌ ನರಸಿಂಹಯ್ಯ

Continue Reading

ಕರ್ನಾಟಕ

Teachers Day | ಗುರುಗಳಿಂದ ಚಾರಿತ್ರ್ಯ ನಿರ್ಮಾಣ ಕಾರ್ಯ: ಸಿಎಂ ಬಸವರಾಜ ಬೊಮ್ಮಾಯಿ

ವಿಧಾನಸೌಧದಲ್ಲಿ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

VISTARANEWS.COM


on

Teachers Day
Koo

ಬೆಂಗಳೂರು: ಶಿಕ್ಷಕರ ಕೆಲಸ ಅತ್ಯಂತ ಕಠಿಣವಾದ ಕೆಲಸ. ಈ ವೃತ್ತಿಗೆ ಗೌರವ ಬರಬೇಕು, ಸಮಾಜದಲ್ಲಿ ತನ್ನದೇ ಆದ ಸ್ಥಾನ ಬರಬೇಕು. ದೇಶಕ್ಕೆ ದೊಡ್ಡ ಚರಿತ್ರೆ ಇದೆ. ನಾವು ಏನಾದರೂ ತಪ್ಪು ಮಾಡಿದರೆ ಮೊದಲು ತಾಯಿ ತಿದ್ದುತ್ತಾಳೆ, ನಂತರ ಗುರುಗಳು ತಿದ್ದುತ್ತಾರೆ. ಚಾರಿತ್ರ್ಯ ನಿರ್ಮಾಣ ಮಾಡುವ ಕೆಲಸವನ್ನು ಗುರುಗಳು (Teachers Day) ಮಾಡುತ್ತಾರೆ. ಪ್ರತಿಯೊಬ್ಬ ಗುರುವೂ ವಿದ್ಯಾರ್ಥಿಗಳನ್ನು ಸುಚಾರಿತ್ರ್ಯವಂತರನ್ನಾಗಿ ನಿರ್ಮಾಣ ಮಾಡಬೇಕು. ಬೆಳೆಯುವ ಸಸಿಯಲ್ಲಿಯೇ ಆಚರಣೆಯನ್ನು ರೂಢಿ ಮಾಡಿದರೆ ಆ ಮಗು ಸಮಾಜಕ್ಕೆ ಕೊಡುಗೆ ನೀಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಇದನ್ನೂ ಓದಿ | Teachers Day | ವಿಜ್ಞಾನ ಪ್ರಯೋಗಾಲಯ ರೂಪಿಸಿ ರಾಜ್ಯಕ್ಕೇ ಮಾದರಿಯಾದ ಕೊಡಗಿನ ಇಬ್ರಾಹಿಂ

ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ-ವಿರೋಧ ಅಭಿಪ್ರಾಯ ಇರುತ್ತದೆ. ಆದರೆ, ಚಾರಿತ್ರ್ಯ ಬೆಳೆಸುವುದು, ನಿರ್ಮಾಣ ಮಾಡುವುದು ಬಹಳ ಮುಖ್ಯ. ಹೀಗಾಗಿ ಇದರಲ್ಲಿ ಯಾವುದೇ ರಾಜೀ ಇಲ್ಲ. ನಾನು ನಿಮ್ಮ ಜತೆ ಶಿಕ್ಷಕರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ದಿನ ನಿತ್ಯ ಕಲಿತಿದ್ದೇನೆ, ಕಲಿಸುತ್ತಿದ್ದೇನೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡಲು ನಾನು ನನ್ನ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

ಮನುಷ್ಯನ ಬುದ್ಧಿಯಿಂದ ಜ್ಞಾನ, ಜ್ಞಾನದಿಂದ ಭಾಷೆ, ಭಾಷೆಯಿಂದ ಅಕ್ಷರ ಸೃಷ್ಟಿಯಾಗುತ್ತದೆ. ಭಾಷೆಯಿಂದ ಜ್ಞಾನವೃದ್ಧಿ, ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ ಬೆಳವಣಿಗೆಯಾಗಿದೆ. ಶಿಕ್ಷಣದ ಜೀವಾಳ ಶಿಕ್ಷಕರು. ಶಿಕ್ಷಕರಿಲ್ಲದ ಶಿಕ್ಷಣವನ್ನು ಊಹಿಸಲಾಗದು. ಅನಾದಿಕಾಲದಿಂದಲೂ ಗುರುಗಳಿದ್ದಾರೆ. ಬದುಕಿನಲ್ಲಿ ಎಲ್ಲ ಹಂತದಲ್ಲೂ ನಾವು ಕಲಿಯಲು ಸಾಧ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಿಕ್ಷಣ ತಜ್ಞ ದೊರೆಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಶಾಂತಾರಾಂ ಸಿದ್ದಿ, ಅರುಣ್ ಕುಮಾರ್ ಭಾಗಿಯಾಗಿದ್ದರು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕರ್ನಾಟಕ ಶಿಕ್ಷಣ ಇಲಾಖೆಯಿಂದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 20 ಪ್ರಾಥಮಿಕ ಮತ್ತು 11 ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕಿಯರಿಗೆ ಅಕ್ಷರ ಮಾತೆ “ಸಾವಿತ್ರಿಬಾಯಿ ಫುಲೆ” ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿ ಶಿಕ್ಷಕರಿಗೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗಿದೆ.

ನಾನು ಕೂಡ ಬ್ಯಾಕ್‌ ಬೆಂಚ್‌ ಸ್ಟುಡೆಂಟ್‌

ಮನುಷ್ಯನಿಗೆ ಎರಡು ವಿಚಾರದಲ್ಲಿ ಬಹಳ ಸವಾಲು ಇರುತ್ತದೆ. ನಾವು ಹುಟ್ಟಿದಾಗಿನಿಂದ ಇಲ್ಲಿವರಗೆ ಹೋಲಿಕೆ ಮಾಡಿದರೆ ನಾವು ಮುಗ್ಧತೆ ಕಳೆದುಕೊಂಡಿರುತ್ತೇವೆ. ಮಕ್ಕಳಲ್ಲಿ ಮಾತ್ರ ಆ ಮುಗ್ಧತೆ ಇರುತ್ತದೆ, ಆ ಮುಗ್ಧತೆಯನ್ನು ಜೀವಾಂತವಾಗಿ ಇಡುವವರು ಶಿಕ್ಷಕರು, ನಾನು ಕೂಡ ವಿದ್ಯಾರ್ಥಿಯಾಗಿದ್ದವ, ಬ್ಯಾಂಕ್ ಬೆಂಚ್‌ನಲ್ಲಿ ನಾನು ಕೂತಿದ್ದೇನೆ ಎಂದು ಹೇಳಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯಾವುದಾದರೂ ವಿಚಾರದಲ್ಲಿ ಪ್ರಶ್ನೆ ಹಾಕಿ ಅದಕ್ಕೆ ಉತ್ತರಿಸದಿದ್ದಾಗ ಮಕ್ಕಳ ತಲೆಗೆ ಹೊಡೆಯಬೇಡಿ. ಪ್ರಶ್ನೆ ಕೇಳುವ ಹಕ್ಕು ಆ ಮಕ್ಕಳಿಗೆ ಇರುತ್ತದೆ ಎಂದು ಹೇಳಿದರು.

ತಮ್ಮ ಕಾಲೇಜು ಜೀವನದ ಪ್ರಿನ್ಸಿಪಲ್ ಚಂದ್ರೇಶೇಖರ್ ಬೆಲ್ಲದ್ ಅವರನ್ನು ಸ್ಮರಿಸಿದ ಸಿಎಂ, ಪ್ರಾಂಶುಪಾಲರು ತುಂಬಾ ಬುದ್ಧಿವಂತರಾಗಿದ್ದರು. ಗಣಿತ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಹಾಸ್ಯಭರಿತ ಮಾತುಗಳಿಂದ ವಿದ್ಯಾರ್ಥಿಗಳ ಗಮನವನ್ನು ಪಾಠದತ್ತ ಸೆಳೆಯುತ್ತಿದ್ದರು ಎಂದರು.

ಶಿಕ್ಷಕರ ಜತೆಗೆ ಬುದ್ಧಿವಂತಿಕೆಯಲ್ಲಿ ನಾನು ಪೈಪೋಟಿ ಮಾಡಲ್ಲ. ಆದರೆ, ಹೃದಯದಿಂದ ಮಾತನಾಡುತ್ತೇನೆ. ನಿಮ್ಮನ್ನೆಲ್ಲ ನೋಡಿದರೆ ನನಗೆ ಕಾಲೇಜು ದಿನಗಳು ನೆನಪಾಗುತ್ತವೆ. ನೀವು ಕಾಲೇಜು ಕ್ಯಾಂಪಸ್‌ನಲ್ಲಿದ್ದರೆ, ನಾವು ಬದುಕಿನ ಕ್ಯಾಂಪಸ್‌ನಲ್ಲಿ ಇದ್ದೇವೆ. ಯಾವುದೇ ವ್ಯಕ್ತಿಗೆ ಒಂದು ಸ್ಥಾನಮಾನ ಸಿಕ್ಕಿದೆ ಎಂದರೆ‌ ಅದು‌ ಜಗತ್ತಿನಲ್ಲಿ ಇರುವ ಗುರುಗಳಿಂದ ಮಾತ್ರ ಎಂದರು.

ಸಮಾರಂಭದಲ್ಲಿ ಸಚಿವರಾದ ಅಶ್ವತ್ಥನಾರಾಯಣ್, ಬೈರತಿ ಬಸವರಾಜ್ ಸೇರಿದಂತೆ ಆರು ಜಿಲ್ಲೆಗಳ ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ | Death News | ಶಿಕ್ಷಕರ ದಿನದಂದೇ ನಿವೃತ್ತ ಶಿಕ್ಷಕ, ಮಾಜಿ ಸಚಿವ ಪ್ರಭಾಕರ ರಾಣೆ ನಿಧನ

Continue Reading
Advertisement
Dengue awareness rally in Hosapete
ವಿಜಯನಗರ15 mins ago

Vijayanagara News: ಹೊಸಪೇಟೆಯಲ್ಲಿ ಡೆಂಗ್ಯು ಜಾಗೃತಿ ಜಾಥಾ

Modi v/s Rahul
ರಾಜಕೀಯ22 mins ago

Modi v/s Rahul: ರಾಹುಲ್‌ ಗಾಂಧಿ ಆಸ್ತಿ ಪ್ರಧಾನಿ ಮೋದಿಗಿಂತ ಎಷ್ಟು ಪಟ್ಟು ಹೆಚ್ಚು ಗೊತ್ತೆ?

gold rate today adah
ಚಿನ್ನದ ದರ32 mins ago

Gold Rate Today: ಇಳಿಯಿತು ಚಿನ್ನದ ಬೆಲೆ; ಬಂಗಾರದ ಗ್ರಾಹಕರಿಗೆ ತುಸು ನಿಟ್ಟುಸಿರು; ದರ ಹೀಗಿದೆ

MDH, Everest Spices
ವಿದೇಶ38 mins ago

MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

Virat Kohli
ಕ್ರೀಡೆ42 mins ago

Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

dhruva sarja support C Cinema Kanda Kanda Video Song Release
ಸ್ಯಾಂಡಲ್ ವುಡ್50 mins ago

Dhruva Sarja: ‘ಸಿ’ ಅಂತಿದ್ದಾರೆ ಧ್ರುವ ಸರ್ಜಾ; ಇದು ಅಪ್ಪ-ಮಗಳ ಕಥೆ!

Pushpa 2 Allu Arjun anasuya bharadwaj poster look out
ಟಾಲಿವುಡ್53 mins ago

Pushpa 2: ʻಪುಷ್ಪ 2ʼ ಅನಸೂಯಾ ಭಾರದ್ವಾಜ್ ಪಾತ್ರದ ಫಸ್ಟ್ ಲುಕ್ ಔಟ್!

Viral News
ವೈರಲ್ ನ್ಯೂಸ್55 mins ago

Viral News: ತ್ರಿವಳಿ ತಲಾಖ್‌ನಿಂದ ಬೇಸತ್ತಿದ್ದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ; ದೇವಸ್ಥಾನದಲ್ಲಿ ಮರು ಮದುವೆ

Murder case In Bengaluru
ಬೆಂಗಳೂರು1 hour ago

Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

IPL Ticket Scam
ಕ್ರೀಡೆ1 hour ago

IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ6 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ20 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ23 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌