Teachers Day | ವಿಜ್ಞಾನ ಪ್ರಯೋಗಾಲಯ ರೂಪಿಸಿ ರಾಜ್ಯಕ್ಕೇ ಮಾದರಿಯಾದ ಕೊಡಗಿನ ಇಬ್ರಾಹಿಂ - Vistara News

ಶಿಕ್ಷಕರ ದಿನ

Teachers Day | ವಿಜ್ಞಾನ ಪ್ರಯೋಗಾಲಯ ರೂಪಿಸಿ ರಾಜ್ಯಕ್ಕೇ ಮಾದರಿಯಾದ ಕೊಡಗಿನ ಇಬ್ರಾಹಿಂ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿರುವ ವಿಜ್ಞಾನ ಶಿಕ್ಷಕ ಇಬ್ರಾಹಿಂಗೆ ರಾಜ್ಯ ಮಟ್ಟದ ಪ್ರಶಸ್ತಿ ಬಂದಿದೆ. ಅವರ ಸಾಧನೆಯ ಪರಿಚಯ ಇಲ್ಲಿದೆ. ಇದು ಶಿಕ್ಷಕರ ದಿನಾಚರಣೆಯ (Teacher’s Day) ವಿಶೇಷ.

VISTARANEWS.COM


on

Teachers Day
ಪ್ರಯೋಗ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಇಬ್ರಾಹಿಂ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Teacher's Day

ಲೋಹಿತ್‌
ಮಡಿಕೇರಿ: ರಾಜ್ಯಕ್ಕೆ ಮಾದರಿಯಾದ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿದ ಶಿಕ್ಷಕ ಇಬ್ರಾಹಿಂ ಈ ಬಾರಿಯ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇವರು ವಿಜ್ಞಾನ ಶಿಕ್ಷಕರಾಗಿದ್ದಾರೆ. ಕಳೆದ 22 ವರ್ಷದಿಂದ ಶಿಕ್ಷಕ ವೃತ್ತಿಯಲ್ಲಿರುವ ಅವರು ಹೊಸ ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾಗಿದ್ದಾರೆ.

ಇವರೊಬ್ಬ ಕ್ರಿಯಾಶೀಲ ಶಿಕ್ಷಕರಾಗಿದ್ದು, ನೇರುಗಳಲೆ ಶಾಲೆಯನ್ನು ಜಿಲ್ಲೆಯ ಉತ್ತಮ ಶಾಲೆಗಳ ಪಟ್ಟಿಯಲ್ಲಿ ಗುರುತಿಸುವಂತೆ ಕೆಲಸ ಮಾಡಿದ್ದಾರೆ. ಇವರ ಪ್ರಯತ್ನದಿಂದ ಶಾಲೆಯಲ್ಲಿ ರಾಜ್ಯಕ್ಕೆ ಮಾದರಿಯಾದ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸ್ಥಾಪನೆಯಾಗಿದೆ. ಕಳೆದ 10 ವರ್ಷಗಳಿಂದ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ 2019-20ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೋಧನೆಯಲ್ಲಿ ನೈಪುಣ್ಯತೆ
ವಿಜ್ಞಾನ ಶಿಕ್ಷಕರಾಗಿರುವ ಇಬ್ರಾಹಿಂ ಕೇವಲ ವಿಜ್ಞಾನ ವಿಭಾಗ ಮಾತ್ರವಲ್ಲದೆ, ಇತರ ಬೋಧನಾ ವಿಷಯಗಳಲ್ಲೂ ತಮ್ಮ ನೈಪುಣ್ಯತೆ ಪ್ರದರ್ಶಿಸಿದ್ದಾರೆ. ಇವರ ಸಹಕಾರದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆಯಲ್ಲಿ ಅತ್ಯಾಕರ್ಷಕ ಸಮಾಜ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ಮಾತ್ರವಲ್ಲದೆ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಘಟಕ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

Teachers Day
ಇಬ್ರಾಹಿಂ ರೂಪಿಸಿದ ಪ್ರಯೋಗಾಲಯ

ಕೇವಲ ಶಿಕ್ಷಕ ವೃತ್ತಿಗೆ ಮಾತ್ರ ಸೀಮಿತವಾಗಿರದೆ ಇನ್ನೂ ಹತ್ತು ಕಲವಾರು ಸಮಾಜಿಕ ಕಾರ್ಯಗಳಲ್ಲಿ ಇಬ್ರಾಹಿಂ ತೊಡಗಿಸಿಕೊಂಡಿದ್ದಾರೆ. ಪರಿಸರ ಪ್ರೇಮಿಯಾಗಿರುವ ಇಬ್ರಾಹಿಂ ತನ್ನೂರು ಕೆಯ್ಯೂರಿನಲ್ಲಿ ಪೊರ್ಲುದ ಕೆಯ್ಯೂರು ವಿಷನ್ 2025 ಎನ್ನುವ ಸಂಘಟನೆಯಡಿಯಲ್ಲಿ ಊರ ಪರಿಸರ ಪ್ರೇಮಿಗಳೊಂದಿಗೆ ಸೇರಿಕೊಂಡು ಪ್ಲಾಸ್ಟಿಕ್ ಮುಕ್ತ ಮತ್ತು ಕಸಮುಕ್ತ ಗ್ರಾಮವಾಗಿಸಲು ಮತ್ತು ಹಸಿರು ಗ್ರಾಮವನ್ನಾಗಿಸಲು ಜಾಗೃತಿ ಮೂಡಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾವಂತ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನವರಾದ ಎಸ್.ಎಂ. ಇಬ್ರಾಹಿಂ ಕಳೆದ ೧೪ ವರ್ಷಗಳಿಂದ ನೇರುಗಳಲೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವರ್ತಕ ಮಹಮ್ಮದ್ ಶೇಖಮಲೆ ಹಾಗೂ ಸಾರಮ್ಮ ದಂಪತಿಗಳ 2ನೇ ಪುತ್ರರಾಗಿರುವ ಇಬ್ರಾಹಿಂ ಪುತ್ತೂರು ಅರಿಯಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪೆರ್ನಾಜೆಯ ಸೀತಾರಾಘವ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದಾರೆ.

Teachers Day

ನಾನು ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲ. ಹಾಗೆ ನಾನು ಇಷ್ಟು ದೊಡ್ಡ ಗೌರವರ ಸ್ವೀಕರಿಸಲು ನಮ್ಮ ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಕೂಡ ಸಾಕಷ್ಟು ಸಹಕಾರ ನೀಡಿದ್ದಾರೆ.
– ಎಸ್.ಎಂ. ಇಬ್ರಾಹಿಂ | ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ, ಕೊಡಗು

ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿರುವ ಇಬ್ರಾಹಿಂ, ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳಗಂಗೋತ್ರಿಯಲ್ಲಿ ಕೆಮೆಸ್ಟ್ರಿಯಲ್ಲಿ ಎಂಎಸ್‌ಸಿ ಪೂರ್ಣಗೊಳಿಸಿದ್ದಾರೆ. ಚಿಕ್ಕಮಗಳೂರಿನ ಎಂಎಲ್‌ಎಂಎನ್ ಕಾಲೇಜಿನಲ್ಲಿ ಬಿಎಡ್ ಶಿಕ್ಷಣವನ್ನು ಪಡೆದಿದ್ದಾರೆ.

ಕೇರಳದ ಖಾಸಗಿ ಶಾಲೆಯಲ್ಲಿ 8 ವರ್ಷ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಇಬ್ರಾಹಿಂ, ಅಲ್ಲಿ ಮಾದರಿ ಪ್ರಯೋಗಾಲಯವೊಂದನ್ನು ಸ್ಥಾಪಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಂತರದಲ್ಲಿ ಸರ್ಕಾರಿ ಶಿಕ್ಷಕರಾಗಿ 2008 ಸೆಪ್ಟಂಬರ್‌ನಿಂದ ಕೊಡಗಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ರಾಹಿಂ ಸದ್ಯ ಪುತ್ತೂರು ಸಮೀಪದ ಕೆಯ್ಯೂರು ಗ್ರಾಮದಲ್ಲಿ ನೆಲೆಸಿದ್ದು, ವಾರಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದಾರೆ.

ವಿಭಿನ್ನ ಕಲಿಕಾ ಶೈಲಿಯಿಂದ ಹೆಸರುವಾಸಿಯಾಗಿರುವ ಇಬ್ರಾಹಿಂ, ಸರಳ ಸಜ್ಜನಿಕೆಯ ವ್ಯಕ್ತಿಯೂ ಹೌದು. ಪ್ರಶಸ್ತಿ ಬಂದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Award | ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾವ ಜಿಲ್ಲೆಯ ಯಾರಿಗೆ ಗರಿ, ಶಿಕ್ಷಕರ ವೈಶಿಷ್ಟ್ಯವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರಮುಖ ಸುದ್ದಿ

NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

NEET-UG : ಅಭ್ಯರ್ಥಿಗಳು ಇತ್ತೀಚಿನ ಸುದ್ದಿ ಮತ್ತು ವಿವರಣೆ ಮತ್ತು ಸೂಚನೆಗಳಿಗಾಗಿ ಎಂಸಿಸಿ ವೆಬ್​ಸೈಟ್​ಗೆ ಭೇಟಿ ನೀಡಲು ಸೂಚಿಸಲಾಗಿದೆ. ದೇಶಾದ್ಯಂತ ಸುಮಾರು 710 ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 1.10 ಲಕ್ಷ ಎಂಬಿಬಿಎಸ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಯಲಿದೆ. ಅಲ್ಲದೆ, ಆಯುಷ್ ಮತ್ತು ನರ್ಸಿಂಗ್ ಸೀಟುಗಳಲ್ಲದೆ 21,000 ಬಿಡಿಎಸ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಶ್ರೀನಿವಾಸ್ ಹೇಳಿದರು.

VISTARANEWS.COM


on

NEET-UG
Koo

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಯುಜಿ (NEET-UG) 2024ರ ಕೌನ್ಸೆಲಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗಲಿದೆ ಎಂದು ಎಂಸಿಸಿ ಸೋಮವಾರ ಹೊರಡಿಸಿದ ನೋಟಿಸ್​ನಲ್ಲಿ ತಿಳಿಸಿದೆ. ಆದಾಗ್ಯೂ ಕೌನ್ಸೆಲಿಂಗ್ ಪ್ರಕ್ರಿಯೆಗೆ ನೋಂದಣಿ ಆಗಸ್ಟ್ ಮೊದಲ ವಾರದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್ ತಿಳಿಸಿದ್ದಾರೆ.

ಅಭ್ಯರ್ಥಿಗಳು ಇತ್ತೀಚಿನ ಸುದ್ದಿ ಮತ್ತು ವಿವರಣೆ ಮತ್ತು ಸೂಚನೆಗಳಿಗಾಗಿ ಎಂಸಿಸಿ ವೆಬ್​ಸೈಟ್​ಗೆ ಭೇಟಿ ನೀಡಲು ಸೂಚಿಸಲಾಗಿದೆ. ದೇಶಾದ್ಯಂತ ಸುಮಾರು 710 ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 1.10 ಲಕ್ಷ ಎಂಬಿಬಿಎಸ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಯಲಿದೆ. ಅಲ್ಲದೆ, ಆಯುಷ್ ಮತ್ತು ನರ್ಸಿಂಗ್ ಸೀಟುಗಳಲ್ಲದೆ 21,000 ಬಿಡಿಎಸ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಶ್ರೀನಿವಾಸ್ ಹೇಳಿದರು.

ಅಖಿಲ ಭಾರತ ಕೋಟಾದ ಶೇ. 15ರಷ್ಟು ಸೀಟುಗಳು ಮತ್ತು ಎಲ್ಲ ಏಮ್ಸ್, ಜಿಪ್ಮರ್ ಪುದುಚೆರಿ, ಎಲ್ಲ ಕೇಂದ್ರೀಯ ವಿವಿ ಸೀಟುಗಳು ಮತ್ತು ಶೇ. 100ರಷ್ಟು ಡೀಮ್ಡ್ ವಿವಿ ಸೀಟುಗಳಿಗೆ ಎಂಸಿಸಿ ಕೌನ್ಸೆಲಿಂಗ್ ನಡೆಸಲಿದೆ.

ಪರೀಕ್ಷೆಯ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳು ಸೇರಿದಂತೆ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಶುಕ್ರವಾರ ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿತ್ತು

Continue Reading

ಅಂಕಣ

Raja Marga Column : ಕುರುಡಿ, ಕಿವುಡಿ ಶಿಷ್ಯೆ ಮತ್ತು ಕುರುಡಿ ಟೀಚರ್! ; ಇದು ಜಗತ್ತಿನ ಬೆಸ್ಟ್‌ ಶಿಕ್ಷಕಿಯ ಕತೆ

Raja Marga Column : ನೀವು ನಂಬಲೇಬೇಕು. ಆಕೆಗೆ ಕಣ್ಣೇ ಕಾಣಿಸುತ್ತಿರಲಿಲ್ಲ. ಆದರೆ ಆಕೆ ಕಣ್ಣೇ ಕಾಣದ, ಕಿವಿಯೂ ಕೇಳದ ಒಬ್ಬ ಹುಡುಗಿಯನ್ನು ನೆರಳಿನಂತೆ ಕಾಪಾಡಿ ಜಗತ್ತಿನ ಶ್ರೇಷ್ಠ ಲೇಖಕಿಯಾಗಿ ರೂಪಿಸುತ್ತಾರೆ. ಇದು ಪ್ರತಿಯೊಬ್ಬ ಶಿಕ್ಷಕ ಹೆಮ್ಮೆ ಪಡಬಹುದಾದ ಕಥೆ. ಜಗತ್ತಿನ ಬೆಸ್ಟ್‌ ಟೀಚರ್‌ ಕಥೆ.

VISTARANEWS.COM


on

Anne Sullivan and Helen keller
ಆನ್ನಿ ಸುಲೈವಾನ್‌ ಮತ್ತು ಹೆಲೆನ್‌ ಕೆಲ್ಲರ್‌ ಕತೆ- ಚಿತ್ರ ಪ್ರಾತಿನಿಧಿಕ
Koo
RAJAMARGA

ಇಂದು ನಾನು ನಿಮಗೆ ಜಗತ್ತಿನ ಅತಿ ಅದ್ಭುತವಾದ ಒಂದು ಗುರು ಹಾಗೂ ಶಿಷ್ಯೆಯರ ಸಂಬಂಧದ ಕಥೆ ಹೇಳಬೇಕು (Raja Marga Column). ಆಕೆ ಆನ್ನಿ ಸುಲೈವಾನ್ (Anne Sullivan, American teacher). ಹುಟ್ಟಿದ್ದು ಅಮೆರಿಕಾದ ಬೋಸ್ಟನ್ ನಗರದಲ್ಲಿ. ಬಡತನದ ಕುಟುಂಬ ಆಕೆಯದ್ದು. ತಂದೆಗೆ ಸಂಸಾರದ ಜವಾಬ್ದಾರಿ ಕಡಿಮೆ ಇತ್ತು. ತಾಯಿಗೆ ನಿರಂತರ ಕಾಯಿಲೆ. ಐದು ಮಕ್ಕಳು ಹುಟ್ಟಿದರೂ ಉಳಿದದ್ದು ಎರಡೇ ಎರಡು! ಅದರಲ್ಲಿ ಒಬ್ಬಳು ಆನ್ನಿ.

ಎಂತಹ ದುರದೃಷ್ಟ ಆಕೆಯದ್ದು ನೋಡಿ. ಆಕೆಗೆ ಐದನೇ ವರ್ಷಕ್ಕೆ ಟ್ರಕೋಮಾ (Trachoma) ಎಂಬ ಕಣ್ಣಿನ ಕಾಯಿಲೆ ಬಂದು ದೃಷ್ಟಿ ಮಂದ ಆಯಿತು. ಕ್ರಮೇಣ ದೃಷ್ಟಿಯು ಹತ್ತು ಶೇಕಡಾ ಮಾತ್ರ ಉಳಿಯಿತು! ಎಂಟನೆಯ ವರ್ಷಕ್ಕೆ ಅಮ್ಮ ತೀರಿಹೋದರು.

ಎರಡು ಮಕ್ಕಳನ್ನು ನೋಡಿಕೊಳ್ಳುವುದು ಅಸಾಧ್ಯ ಎಂದು ಭಾವಿಸಿದ ಅಪ್ಪ ಅವರನ್ನು ಅನಾಥಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಂಡ! ಹಾಗೆ ಆನ್ನಿ ಮತ್ತು ಆಕೆಯ ಸೋದರ ಜಿಮ್ಮಿ ಇಬ್ಬರೂ ಅನಾಥ ಮಕ್ಕಳ ಜೊತೆಗೆ ತಮ್ಮ ಬಾಲ್ಯ ಕಳೆಯಬೇಕಾಯಿತು.

ಆ ಆಶ್ರಮದಲ್ಲಿ ತೀವ್ರ ಅನಾರೋಗ್ಯಕರವಾದ ವಾತಾವರಣ ಇತ್ತು. ಮಿತಿಗಿಂತ ಹೆಚ್ಚು ಮಕ್ಕಳನ್ನು ತುಂಬಿದ್ದರು. ಹಳಸಿದ ಅಂಬಲಿ ಕುಡಿದು ಬದುಕುವ ಅನಿವಾರ್ಯತೆ ಇತ್ತು. ಕೆಲವೇ ತಿಂಗಳಲ್ಲಿ ಸೋದರ ಜಿಮ್ಮಿ ತೀರಿ ಹೋದಾಗ ಆನ್ನಿ ಮತ್ತೆ ಒಬ್ಬಂಟಿ ಆದಳು.

Anne Sullivan and Helen keller
Anne sullivan

ಹೇಗಾದರೂ ಶಿಕ್ಷಣವನ್ನು ಪಡೆದು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ತುಡಿತ ಹೆಚ್ಚಾದಾಗ ಆಕೆ ಕುರುಡು ಮಕ್ಕಳ ಪರ್ಕಿನ್ ಎಂಬ ಶಾಲೆಗೆ ಸೇರಿದರು. ಅಲ್ಲಿಯು ಕೂಡ ಬೇರೆ ಮಕ್ಕಳಿಂದ ಹಿಂಸೆ, ಅಪಮಾನ ಆಕೆ ಎದುರಿಸಬೇಕಾಯಿತು.

ಶಾಲೆಯ ಫೀಸ್ ಕಟ್ಟಲು ಕಷ್ಟ ಆದ ಕಾರಣ ಅಲ್ಲಿ ತಾರತಮ್ಯ ನೀತಿ ತೊಂದರೆ ಕೊಟ್ಟಿತು. ಆದರೆ ಕಲಿಯುವ ಗಟ್ಟಿ ಸಂಕಲ್ಪ ಇದೆಯಲ್ಲ ಅದು ನಿಜಕ್ಕೂ ಶ್ಲಾಘನೀಯವೇ ಆಗಿತ್ತು! ಕಣ್ಣಿನ ದೃಷ್ಟಿಯು ಪೂರ್ತಿ ಹೊರಟುಹೋದ ಕಾರಣ ಆಕೆ ಬ್ರೈಲ್ ಲಿಪಿಯಲ್ಲಿ ಅಕ್ಷರಗಳನ್ನು ಓದಲು ಮತ್ತು ಬರೆಯಲು ಕಲಿಯಬೇಕಾಯಿತು.

ಆಕೆ 20 ವರ್ಷ ಪ್ರಾಯಕ್ಕೆ ಬಂದಾಗ ಆಕೆಯ ಬದುಕಿನಲ್ಲಿ ಒಂದು ಅತ್ಯಂತ ಮಹತ್ವದ ತಿರುವು ಬಂದೇ ಬಿಟ್ಟಿತು. ಅದೇ ನಗರದಲ್ಲಿ ವಾಸಿಸುತ್ತಿದ್ದ ಕೆಲ್ಲರ್ ಕುಟುಂಬವು ಆಕೆಯನ್ನು ಸಂಪರ್ಕ ಮಾಡಿ ಒಂದು ವಿನಂತಿ ಮಾಡಿತು.

Anne Sullivan and Helen keller
Anne sullivan

ಕೆಲ್ಲರ್ ಕುಟುಂಬದ ಅತ್ಯಂತ ಪ್ರೀತಿಯ ಕುಡಿಯಾದ ಹೆಲೆನ್ ಕೆಲ್ಲರ್ ಅವಳನ್ನು ಓದಿಸಿ, ಬರೆಸುವ ಜವಾಬ್ದಾರಿ ಹೊರಲು ಸಾಧ್ಯವೇ ಎಂದು ಕೇಳಿದಾಗ ಆಕೆ ಖುಷಿಯಿಂದ ಒಪ್ಪಿದಳು. ನಮಗೆಲ್ಲರಿಗೂ ಗೊತ್ತಿರುವಂತೆ ಹೆಲೆನ್ ಕೆಲ್ಲರ್ ಸಂಪೂರ್ಣ ಕುರುಡಿ ಮತ್ತು ಕಿವುಡಿ! ಮಾತು ಕೂಡ ತೊದಲು ಆಗಿತ್ತು. ಹೆಲೆನ್ ಕೆಲ್ಲರ್ ಅತ್ಯಂತ ಸುಂದರಿಯಾದ ಗೊಂಬೆಯೇ ಆಗಿದ್ದಳು.

ಆಗ ಆನ್ನಿಗೆ 20ರ ಹರೆಯ. ಆದರೆ ಆಕೆಗೆ ತನ್ನ ಪ್ರಾಯಕ್ಕೆ ಮೀರಿದ ಪ್ರಬುದ್ಧತೆ, ಜಾಣ್ಮೆ ಹಾಗೂ ತಾಳ್ಮೆ ಇತ್ತು. ಹೆಲೆನ್ ಕೆಲ್ಲರ್ ಕೂಡ ತುಂಬಾ ಬುದ್ಧಿವಂತೆ. ಆದರೆ ಕುರುಡುತನ ಹಾಗೂ ಕಿವುಡುತನ ಅಡ್ಡಿ ಆಗಿದ್ದವು. ಆದರೆ ಆನ್ನಿ ಒಳ್ಳೆಯ ಗುರುವಾಗಿ, ಗೆಳತಿ ಆಗಿ, ತಾಯಿ ಆಗಿ ತನ್ನ ಶಿಷ್ಯೆಯನ್ನು ತಿದ್ದಿ ತೀಡಿದಳು.

ಆನ್ನಿಯು ತನ್ನ ಶಿಷ್ಯೆಯಾದ ಹೆಲೆನ್ ಕೆಲ್ಲರ್‌ ಒಂದೊಂದೇ ಅಕ್ಷರಗಳನ್ನು ಬ್ರೈಲ್ ಲಿಪಿಯ ಮೂಲಕ ಬರೆಯುವುದನ್ನು ಮತ್ತು ಓದುವುದನ್ನು ಕಲಿಸಿದರು. ವಸ್ತುಗಳ ಸ್ಪರ್ಶದಿಂದ ಅನುಭವವನ್ನು ಮತ್ತು ಲೋಕ ಜ್ಞಾನವನ್ನು ಕೊಟ್ಟರು. ಗಣಿತದ ಸಂಖ್ಯೆಗಳನ್ನು ಕೂಡಿಸು, ಕಳೆ, ಗುಣಿಸು, ಭಾಗಿಸು ಮಾಡುವುದನ್ನು ಕಲಿಸಿದರು.

Anne sullivan- Helen keller
Anne sullivan

ಜಗತ್ತಿನ ಅತೀ ಉತ್ತಮವಾದ ಪುಸ್ತಕಗಳನ್ನು ಓದಿಸಿದರು. ಆತ್ಮವಿಶ್ವಾಸವನ್ನು ತುಂಬಿದರು. ಶ್ರೇಷ್ಠ ಮೌಲ್ಯಗಳನ್ನು ತುಂಬಿದರು. ಸಂವಹನ ಕಲೆಯನ್ನು ಕಲಿಸಿದರು. ಬಹಳ ವೇದಿಕೆಯಲ್ಲಿ ಭಾಷಣಗಳನ್ನು ಮಾಡಲು ಕಲಿಸಿದರು. ನೂರಾರು ನಗರಗಳಿಗೆ ಆಕೆಯನ್ನು ಸ್ವತಃ ಕರೆದುಕೊಂಡು ಹೋಗಿ ಭಾಷಣಗಳನ್ನು ಮಾಡಿಸಿದರು. ಆಕೆಯಿಂದ ಹಲವು ಪುಸ್ತಕಗಳನ್ನು ಬರೆಸಿದರು.

ಪರಿಣಾಮವಾಗಿ ಹೆಲೆನ್ ಕೆಲ್ಲರ್ ರೆಡ್ ಕ್ಲಿಫ್ ಕಾಲೇಜಿನ ಮೊದಲ ಕುರುಡಿ ಮತ್ತು ಕಿವುಡಿ ಹುಡುಗಿಯಾಗಿ ಪದವಿ ಪಡೆದು ಹೊರಬಂದರು! ಆಕೆಯ ವ್ಯಕ್ತಿತ್ವವನ್ನು ವಿಶ್ವ ಮಟ್ಟಕ್ಕೆ ತಲುಪಿಸಿದ ಕೀರ್ತಿಯು ಖಂಡಿತವಾಗಿ ಆನ್ನಿಗೆ ದೊರೆಯಬೇಕು.

ಆನ್ನಿ ಮುಂದೆ ಹೆಲೆನ್‌ಗೆ ಆ ಕಾಲದ ಖ್ಯಾತ ವಿಜ್ಞಾನಿಗಳಾದ ಥಾಮಸ್ ಆಲ್ವಾ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಪ್ರಸಿದ್ಧ ತತ್ವಜ್ಞಾನಿ ಮಾರ್ಕ್ ಟ್ವೈನ್ ಮೊದಲಾದವರನ್ನು ಭೇಟಿ ಮಾಡಿಸುತ್ತಾರೆ. ಹಲವು ತಾತ್ವಿಕ ನಾಟಕಗಳನ್ನು ಬರೆಯುತ್ತಾರೆ. ಮುಂದೆ ಹೆಲೆನ್ ಕೆಲ್ಲರ್ ತನ್ನ ಆತ್ಮಚರಿತ್ರೆ ಬರೆಯಲು ಸಹಾಯ ಮಾಡುತ್ತಾರೆ.

Anne sullivan

ಒಂದು ಅರ್ಧ ಕ್ಷಣ ಕೂಡ ತನ್ನ ಶಿಷ್ಯೆಯನ್ನು ಬಿಟ್ಟು ಇರದೆ ಆಕೆಯ ಬೆಂಬಲಕ್ಕೆ ನಿಲ್ಲುತ್ತಾರೆ. ತನ್ನ ಶಿಷ್ಯೆಯ ಭವಿಷ್ಯಕ್ಕಾಗಿ ತನ್ನ ಖಾಸಗಿ ಜೀವನದ ಮಧುರವಾದ ಕ್ಷಣಗಳನ್ನು ಕೂಡ ಮರೆಯುತ್ತಾರೆ! ಪರಿಣಾಮವಾಗಿ ಆಕೆ ಮದುವೆ ಆದ ಜಾನ್ ಮಾಕಿ ಅವರು ಆನ್ನಿಯನ್ನು ಬಿಟ್ಟು ಹೋಗುತ್ತಾರೆ.

ಇದನ್ನೂ ಓದಿ : Raja Marga Column : ಗೋ ಗೋ ಗೋವಾ!; ಒಂದು ಕಾಲದ ಕುಡುಕರ ರಾಜ್ಯ ಈಗ ಸಾಂಸ್ಕೃತಿಕ ರಾಜಧಾನಿ ಆಗಿದ್ದು ಹೇಗೆ?

ಆದರೆ ಗುರು ಶಿಷ್ಯೆಯರ ಪ್ರೀತಿಯ ಮಧುರ ಸಂಬಂಧವು ಕೊನೆಯವರೆಗೂ ಹಾಗೆಯೇ ಉಳಿಯುತ್ತದೆ. ಮುಂದೆ ಹೆಲೆನ್ ಕೆಲ್ಲರ್ ವಿಶ್ವಮಟ್ಟದ ಐಕಾನ್ ಆಗುತ್ತಾರೆ. ಜಗತ್ತಿನಾದ್ಯಂತ ಪ್ರವಾಸ ಹೋಗುತ್ತಾರೆ. ಆಕೆ ಹೋದಲ್ಲೆಲ್ಲ ಆನ್ನಿ ತನ್ನ ಶಿಷ್ಯೆಯ ನೆರಳಾಗಿ ಹೋಗುತ್ತಾಳೆ. ಆಕೆಯಿಂದ ಸ್ಫೂರ್ತಿ ಪಡೆದು ಹೆಲೆನ್ ಕೆಲ್ಲರ್ ಅಂಧರ ಸ್ಫೂರ್ತಿ ದೇವತೆ ಆಗುತ್ತಾರೆ. ಜಾಗತಿಕ ಲಯನ್ಸ್ ಸಂಸ್ಥೆ ಅವರನ್ನು ತನ್ನ ಐಕಾನ್ ಆಗಿ ಸ್ವೀಕಾರ ಮಾಡಿತು.
ಹೆಲೆನ್ ಕೆಲ್ಲರ್ ಅವರ ಸಾಧನೆಯ ಯಾವ ಪುಟವನ್ನು ಓದಿದರೂ ಅವರ ಗುರುವಾದ ಆನ್ನಿ ಸುಲೈವಾನ್ ಉಲ್ಲೇಖ ಮಾಡದೆ ಅದು ಪೂರ್ತಿ ಆಗುವುದಿಲ್ಲ!

Continue Reading

ಉತ್ತರ ಕನ್ನಡ

Teachers Day: ಶಿಕ್ಷಕ ನಾರಾಯಣ ಭಾಗ್ವತ್‌ಗೆ ರಾಷ್ಟ್ರಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ

Teachers Da : ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ‌ ಶಿಕ್ಷಕ, ರಂಗಭೂಮಿ ಕಲಾವಿದ ನಾರಾಯಣ ಭಾಗ್ವತ್ ಅವರಿಗೆ ನವ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಮಂಗಳವಾರ ರಾಷ್ಟ್ರಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ‌ ಪ್ರದಾನ ಮಾಡಿದರು.

VISTARANEWS.COM


on

Sirsi Kannada Teacher Narayan Bhagwat was awarded the national level best teacher award
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ‌ ಶಿಕ್ಷಕ ನಾರಾಯಣ ಭಾಗ್ವತ್ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಮಂಗಳವಾರ ರಾಷ್ಟ್ರಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ‌ ಪ್ರದಾನ ಮಾಡಿದರು.
Koo

ಶಿರಸಿ: ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ‌ ಶಿಕ್ಷಕ (Kannada Teacher), ರಂಗಭೂಮಿ ಕಲಾವಿದ (Theater Artist) ನಾರಾಯಣ ಭಾಗ್ವತ್ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಮಂಗಳವಾರ ರಾಷ್ಟ್ರಮಟ್ಟದ (Teachers Day 2023) ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ‌ (Best Teacher Award) ಪ್ರದಾನ ಮಾಡಿದರು.‌

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣದ ನಾರಾಯಣ ಭಾಗ್ವತ್ ಅವರು ಕತೆ-ಕವನ-ನಾಟಕ ರಚನೆ , ಚಿತ್ರಕಲೆ , ಸಂಗೀತ , ನಾಟಕ ನಿರ್ದೇಶನ ಮತ್ತು ಅಭಿನಯ , ಉಪನ್ಯಾಸ , ರಜಾ ಶಿಬಿರಗಳ ಸಂಘಟನೆ , ಪೇಪರ್ ಕ್ರಾಫ್ಟ್ , ಹಾರ್ಮೋನಿಯಂ ವಾದನ , ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ , ಯಕ್ಷಗಾನ , ಕರಕುಶಲ ಕಲೆ , ವಾಸ್ತು ಜ್ಞಾನ ಹೀಗೆ ಬಹುಮುಖಿ ಪ್ರತಿಭೆ ಉಳ್ಳವರು.

ಇದನ್ನೂ ಓದಿ: National Nutrition Week 2023: ಸಿರಿಧಾನ್ಯ ಸೇವನೆಯಿಂದ ಎಷ್ಟೊಂದು ಪ್ರಯೋಜನ! ಸೈಡ್‌ ಎಫೆಕ್ಟ್‌ ಇದೆಯಾ?

ಈಗಾಗಲೆ ರಾಷ್ಟ್ರಪತಿಗಳ ಬೆಳ್ಳಿ ಪದಕ , ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ , ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ , ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ , ಅತ್ಯುತ್ತಮ ನಟ ,ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಜ್ಞಾನ ಸಿಂಧು ಪ್ರಶಸ್ತಿ , ನೇಶನ್ ಬ್ಯುಲ್ಡರ್ ಪ್ರಶಸ್ತಿ , ಕ.ಸಾ.ಪ. ತಾಲೂಕು ಪ್ರಶಸ್ತಿ , ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ , ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಪ್ರಶಸ್ತಿ – ಪುರಸ್ಕಾರಗಳನ್ನು ನೀಡಿ ಈಗಾಗಲೇ ಗೌರವಿಸಲಾಗಿದೆ‌. ಕನ್ನಡ ಭಾಷಾ ಶಿಕ್ಷಕರಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಪಡೆದಿರುವುದೂ ವಿಶೇಷವಾಗಿದೆ.

Continue Reading

ಚಿತ್ರದುರ್ಗ

ಮಲ್ಲಾಡಿಹಳ್ಳಿ ಕಾಲೇಜು ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ: 35 ವರ್ಷದ ಹಿಂದಿನ ಶಿಕ್ಷಣಾರ್ಥಿಗಳ ಸಮ್ಮಿಲನ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಸೇವಾ ಚಟುವಟಿಕೆಗಳು ಸಾಗುತ್ತಿವೆ.

VISTARANEWS.COM


on

Koo

ಬೆಂಗಳೂರು: ಶಿಕ್ಷಣ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು ಎನ್ನುವುದನ್ನು ಪಾಲಿಸುತ್ತಿರುವ ಮೂವತ್ತೈದು ವರ್ಷದ ಹಿಂದಿನ ವಿದ್ಯಾರ್ಥಿಗಳ ಗುಂಪು, ಅಂದಿನ ಗುರುಗಳ ಬಳಿಗೆ ಸಾಗಿ ವಂದನೆ ಸಲ್ಲಿಸಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಸೇವಾ ಚಟುವಟಿಕೆಗಳು ಸಾಗುತ್ತಿವೆ. ಅನಾಥ ಸೇವಾಶ್ರಮದ ಅದೀನದಲ್ಲಿನ ʼಸರ್ವ ಸೇವಾ ಬೋಧಕ ಶಿಕ್ಷಣಾಲಯ (ಎಸ್‌ಎಸ್‌ಬಿಎಸ್‌) TCH Collegeನಿಂದ ಅನೇಕ ಉತ್ತಮ ಶಿಕ್ಷಕರನ್ನು ರೂಪಿಸಲಾಗಿದೆ.

ಉತ್ತಮ ಶಿಕ್ಷಣ ಸೇವೆ ಹಾಗೂ ಸಂಸ್ಕಾರ ಕಲಿಸುವ ಕೇಂದ್ರವಾಗಿದ್ದ ವಿದ್ಯಾಲಯದಲ್ಲಿ ಅಧೀಕ್ಷಕರಾಗಿದ್ದವರು ಬಿ.ಎಸ್‌. ವತ್ಸನ್‌ ಅವರು. ಈಗ 90 ವರ್ಷದವರಾದ ವತ್ಸನ್‌ ಅವರು ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದಾರೆ. ವತ್ಸನ್‌ ಅವರಿಂದ ಶಿಕ್ಷಣ ಕಲಿತ ಶಿಕ್ಷಣಾರ್ಥಿಗಳು ಇತ್ತೀಚೆಗೆ ಒಟ್ಟಾಗಿ ಸೇರಿ ಗುರುವಂದನೆ ಸಲ್ಲಿಸಿದರು.

1983-87ನೇ ಬ್ಯಾಚ್ ಪ್ರಶಿಕ್ಷಣಾರ್ಥಿಗಳು ವತ್ಸನ್ ಅವರಿಗೆ ಗುರುವಂದನೆ ಸಲ್ಲಿಸಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ತಮ್ಮ ಜೀವನ ವೃತ್ತಾಂತವನ್ನು ವತ್ಸನ್‌ ಅವರು ನೆನೆದರು. ಗೋಕರ್ಣದಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು, ನಂತರ ಅಲ್ಲಿ ಸಮಾಧಾನವಾಗದೆ ಮೈಸೂರಿಗೆ ವಾಪಸಾದದ್ದು, ಹಾಸನದಲ್ಲಿ ತಿಪ್ಪೇಸ್ವಾಮಿ ಎಂಬ ಡಿಸಿಯವರ ಸಲಹೆ ಮೇರೆಗೆ ಮತ್ತೊಂದು ಕೆಲಸಕ್ಕೆ ಸೇರಿದ್ದು, ಅದನ್ನೂ ತ್ಯಜಿಸಿದ್ದ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳ ಭೇಟಿಯಾಗಿ ಮಲ್ಲಾಡಿಹಳ್ಳಿಗೆ ಆಗಮಿಸಿದ್ದನ್ನು ಸ್ಮರಿಸಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ |ಮೌಲ್ಯಗಳನ್ನು ಬೋಧನೆ ಮಾಡದೆ ಅವುಗಳನ್ನೇ ಬದುಕಿದ ಮಹಾ ಗುರು ಪ್ರೊ. ಎಚ್.‌ ನರಸಿಂಹಯ್ಯ

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌