National Nutrition Week 2023: ಸಿರಿಧಾನ್ಯ ಬೆಳೆದ ರೈತ ಸಿರಿವಂತನಾಗುವುದು ಖಚಿತ - Vistara News

ಆಹಾರ/ಅಡುಗೆ

National Nutrition Week 2023: ಸಿರಿಧಾನ್ಯ ಬೆಳೆದ ರೈತ ಸಿರಿವಂತನಾಗುವುದು ಖಚಿತ

ದೇಶದಲ್ಲಿ ಸಿರಿಧಾನ್ಯಗಳ ಬೆಳೆಯಿಂದ (National Nutrition Week 2023) ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಹೆಚ್ಚಲಿದೆ. ಹಾಗಾಗಿ ಅದರ ಉತ್ತೇಜನದತ್ತ ಎಲ್ಲರೂ ಕೈ ಜೋಡಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

VISTARANEWS.COM


on

Millets Farming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದರಿಂದ (National Nutrition Week 2023) ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಹೆಚ್ಚಳವಾಗಲಿದೆ ಎಂದು ಸರ್ಕಾರ ಹೇಳಿದೆ. ಮರೆತು ಹೋಗಿರುವ ಸಿರಿಧಾನ್ಯಗಳ ಬೆಳೆಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಅಂತರರಾಷ್ಟ್ರೀಯ ಸಂಸ್ಥೆಗಳು, ಅಕಾಡೆಮಿಗಳು ಹಾಗೂ ಹೋಟೆಲ್‌ ಉದ್ಯಮಕ್ಕೆ ಸರ್ಕಾರ ಒತ್ತಾಯಿಸಿದೆ.

Millets

ಭಾರತವು ಸಿರಿಧಾನ್ಯಗಳ ಜಾಗತಿಕ ಕೇಂದ್ರವನ್ನಾಗಿ ಗುರುತಿಸಿಕೊಳ್ಳಲು ಬಯಸುತ್ತಿದೆ. ಅದೇ ನಿಟ್ಟಿನಲ್ಲಿ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಗುರುತಿಸಲು ವಿಶ್ವ ಸಂಸ್ಥೆ ಮುಂದೆ ಪ್ರಸ್ತಾಪ ಇಟ್ಟಿದ್ದು, ಅದಕ್ಕೆ ಒಪ್ಪಿಗೆ ಕೂಡ ಸಿಕ್ಕಿದೆ. ವಿಶ್ವಸಂಸ್ಥೆಯು 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.

ಈ ಬಗ್ಗೆ ಭಾರತೀಯ ಪಾಕಶಾಲೆಯ ಸಂಘಗಳ ಒಕ್ಕೂಟ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಬಾಣಸಿಗರ ಸಮ್ಮೇಳನದಲ್ಲಿ ಭಾಗವಹಿಸಿದ ಕೇಂದ್ರ ಸಹಾಯಕ ಕೃಷಿ ಸಚಿವ ಕೈಲಾಶ್‌ ಚೌಧರಿ ಅವರು, “ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಅರ್ಧ ಶತಕೋಟಿಗೂ ಹೆಚ್ಚು ಜನರಿಗೆ ಸಿರಿಧಾನ್ಯ ಸಾಂಪ್ರದಾಯಿಕ ಆಹಾರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಸಿರಿಧಾನ್ಯಗಳು ಪ್ರಾಥಮಿಕವಾಗಿ ಹಿಂಗಾರು ಬೆಳೆಯಾಗಿದೆ. ಇದಕ್ಕೆ ಪ್ರಧಾನ ಆಹಾರಗಳಿಗಿಂತ ಕಡಿಮೆ ನೀರು ಸಾಕಾಗುತ್ತದೆ. ಜೀವನೋಪಾಯವನ್ನು ಸೃಷ್ಟಿಸಲು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಪಂಚದಾದ್ಯಂತ ಆಹಾರ ಮತ್ತು ಪೌಷ್ಟಿಕಾಂಶತೆಯನ್ನು ಹೆಚ್ಚಿಸುವುದಕ್ಕೆ ಸಾಮರ್ಥ್ಯವಿರುವ ಕಾರಣದಿಂದ ಸಿರಿಧಾನ್ಯ ಪ್ರಮುಖ ಬೆಳೆಯಾಗಿದೆ” ಎಂದು ತಿಳಿಸಿದ್ದಾರೆ.

Importance of Cereals

ಅಂತಾರಾಷ್ಟ್ರೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು, ಮಾಧ್ಯಮಗಳು, ಭಾರತೀಯ ವಲಸಿಗರು, ಸ್ಟಾರ್ಟ್‌ಅಪ್ ಸಮುದಾಯಗಳು, ನಾಗರಿಕ ಸಮಾಜಗಳು ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ಪ್ರಚಾರ ಮಾಡುವುದಕ್ಕೆ ಕೈ ಜೋಡಿಸಬೇಕು ಎಂದು ಅವರು ಕೇಳಿಕೊಂಡರು.

ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ ಮಾತನಾಡಿ, ‘ದೇಶದಲ್ಲಿ ಸಿರಿಧಾನ್ಯ ಜನಪ್ರಿಯವಾಗುವುದರೊಂದಿಗೆ ಅದರ ಬೆಳೆಯಿಂದಾಗಿ ಸಣ್ಣ ಮತ್ತು ಅತಿಸಣ್ಣ ರೈತರ ಆದಾಯದಲ್ಲಿ ಹೆಚ್ಚಳವಾಗಲಿದೆ’ ಎಂದರು. ಹಾಗೆಯೇ, “ಕಳೆದ ಕೆಲವು ವರ್ಷಗಳಿಂದ ಕೃಷಿ ಬೆಳವಣಿಗೆಯು ಒಟ್ಟಾರೆ ಜಿಡಿಪಿಯಲ್ಲಿ ಉತ್ತಮ ಕೊಡುಗೆ ನೀಡಿದೆ. ಅದಕ್ಕಾಗಿ ಹಲವಾರು ತಂತ್ರಜ್ಞಾನಗಳನ್ನು ಈ ಕ್ಷೇತ್ರಕ್ಕೆ ಅಳವಡಿಕೆ ಮಾಡಿ ಕೃಷಿಯನ್ನು ಆಧುನಿಕಗೊಳಿಸಲು ಸರ್ಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನ ಓದಿ: National Nutrition Week 2023: ಸಸ್ಯಾಹಾರದಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Pasta Cooking Tips: ನೀವು ಪಾಸ್ತಾ ಪ್ರಿಯರೇ? ಆರೋಗ್ಯಕರವಾಗಿ ಪಾಸ್ತಾ ಹೀಗೆ ತಯಾರಿಸಿ

ನಿಮ್ಮ ಮಕ್ಕಳಿಗೆ ಪಾಸ್ತಾ ಎಂದರೆ ಸ್ವರ್ಗವೇ? ಅವರಿಗೂ ಪಾಸ್ತಾ ತಿನ್ನಬಾರದೆಂದು ತಾಕೀತು ಮಾಡಿದ್ದೀರಾ? ಹಾಗಾದರೆ ನೀವು ಇಷ್ಟೆಲ್ಲ ತಲೆಬಿಸಿ ಮಾಡುವ ಅಗತ್ಯವಿಲ್ಲ. (pasta cooking tips) ಈ ಲೇಖನ ಓದಿ.

VISTARANEWS.COM


on

Pasta Cooking Tips
Koo

ನೀವು ಪಾಸ್ತಾ ಪ್ರಿಯರೇ? ಆದರೆ, ಪಾಸ್ತಾ ತಿನ್ನುವುದು ಅನಾರೋಗ್ಯಕರ ಎಂಬ ಕಾರಣಕ್ಕೆ ನೀವು ಪಾಸ್ತಾ ತಿನ್ನುವುದನ್ನು ಬಿಟ್ಟಿದ್ದೀರಾ? ಅಥವಾ ನಿಮ್ಮ ಮಕ್ಕಳಿಗೆ ಪಾಸ್ತಾ ಎಂದರೆ ಸ್ವರ್ಗವೇ? ಅವರಿಗೂ ಪಾಸ್ತಾ ತಿನ್ನಬಾರದೆಂದು ತಾಕೀತು ಮಾಡಿದ್ದೀರಾ? ಹಾಗಾದರೆ ನೀವು ಇಷ್ಟೆಲ್ಲ ತಲೆಬಿಸಿ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಕಾರ್ಬೋಹೈಡ್ರೇಟ್‌ ಇರುವುದರಿಂದ ಇದನ್ನು ಖಾಲಿ ಕ್ಯಾಲರಿಗಳು ಎಂದೇ ಪರಿಗಣಿಸಲಾಗುತ್ತದೆ. ನಮ್ಮ ದೇಹಕ್ಕೆ ಶಕ್ತಿ ನೀಡಲು ಬೇಕಾಗುವ ಪೋಷಕಾಂಶಗಳ ಪೈಕಿ ಕಾರ್ಬೋಹೈಡ್ರೇಟ್‌ ಕೂಡಾ ಒಂದಾಗಿದ್ದರೂ, ಇತರ ಪೋಷಕಾಂಶಗಳ ಸೇವನೆಯೂ ಬಹಳ ಮುಖ್ಯ. ಜೊತೆಗೆ ಪಾಸ್ತಾದ ಹೆಸರಿನಲ್ಲಿ ರೆಡಿ ಟು ಕುಕ್‌ ಪಾಸ್ತಾ ಪ್ಯಾಕೆಟ್‌ಗಳು, ರಾಶಿ ರಾಶಿ ಚೀಸ್‌, ಬೆಣ್ಣೆ ಮೆಯೋನೀಸ್‌, ಕ್ರೀಂ, ಕೆಚಪ್‌ ಸುರಿದು ಮಾಡಲಾಗುವ ಪಾಸ್ತಾಗಳ ಮೂಲಕ ನಿಮ್ಮ ಮಕ್ಕಳಿಗಾಗಲೀ, ನಿಮಗಾಗಲೀ ಯಾವ ಪೋಷಕಾಂಶವೂ ಸರಿಯಾಗಿ ಸಿಗಲಾರದು. ಬದಲಾಗಿ ಅನಾರೋಗ್ಯಕರ ಆಹಾರವಾಗಿಯೇ ಪಾಸ್ತಾ ಬದಲಾಗುತ್ತದೆ. ಹಾಗಾದರೆ ಪಾಸ್ತಾವನ್ನು ಆರೋಗ್ಯಕರವನ್ನಾಗಿ ಮಾಡುವುದು ಹೇಗೆ ಅಂತೀರಾ? ಇಲ್ಲಿವೆ (pasta cooking tips) ಸರಳ ತಂತ್ರಗಳು.

People at cooking workshop making fresh pasta

ಪಾಸ್ತಾದ ಮೂಲ ತಿಳಿಯಿರಿ

ಪಾಸ್ತಾವನ್ನು ಕೊಳ್ಳುವಾಗ ಅದು ಯಾವುದರಿಂದ ಮಾಡಿದ ಪಾಸ್ತಾ ಎಂಬುದನ್ನು ಓದಿ. ಉದಾಹರಣೆಗೆ ಮೈದಾದಿಂದ ಮಾಡಿದ ಪಾಸ್ತಾ ಖರೀದಿಸಬೇಡಿ. ಗೋಧಿಯಿಂದ ಅಥವಾ ಇತರ ಧಾನ್ಯಗಳಿಂದ ಮಾಡಿದ ಪಾಸ್ತಾಕ್ಕೆ ಮಹತ್ವ ನೀಡಿ. ಹೋಲ್‌ ಗ್ರೈನ್‌ ಪಾಸ್ತಾ ಸಿಕ್ಕರೆ ಒಳ್ಳೆಯದು. ಈಗ ಬಗೆಬಗೆಯ ಮಾದರಿಯ ಪ್ರೊಟೀನ್‌ನಿಂದ ಶ್ರೀಮಂತವಾಗಿರುವ ಪಾಸ್ತಾಗಳು ಸಿಗುತ್ತವೆ.

Pasta Salad with Tuna

ತರಕಾರಿ ಹೆಚ್ಚು ಬಳಸಿ

ಪಾಸ್ತಾ ಮಾಡುವಾಗ ಸಾಕಷ್ಟು ತರಕಾರಿಗಳನ್ನು ಹಾಕಿ. ಅಣಬೆ, ಪನೀರ್‌, ಬೀನ್ಸ್‌, ಜೋಳ, ಬಟಾಣಿ, ಕ್ಯಾರೆಟ್‌, ಕ್ಯಾಪ್ಸಿಕಂ ಇತ್ಯಾದಿ ಇತ್ಯಾದಿ ತರಕಾರಿಗಳು ಪಾಸ್ತಾಕ್ಕೆ ಹೊಂದಿಕೊಳ್ಳುತ್ತವೆ. ಹೀಗಾಗಿ ಹೊಂದಿಕೊಳ್ಳುವ ತರಕಾರಿಗಳನ್ನು ಬಳಸಿ. ತರಕಾರಿಯೂ ಸೇರಿದಾಗ ಪಾಸ್ತಾದ ಆರೋಗ್ಯಕರ ಅಂಶ ಇನ್ನೂ ಹೆಚ್ಚಾಗುತ್ತದೆ.

Pasta with tomato sauce

ಸಾಸ್ ಮನೆಯಲ್ಲೇ ತಯಾರಿಸಿ

ಪಾಸ್ತಾಕ್ಕೆ ಬಳಸುವ ಸಾಸ್‌ ಅಥವಾ ಮಯನೀಸ್‌ ಅನ್ನು ಮನೆಯಲ್ಲೇ ತಯಾರಿಸಿ. ಕ್ರೀಂ ಕೆಚಪ್‌ಗಳಿಗೆ ಮೊರೆ ಹೋಗಬೇಡಿ. ಟೊಮೇಟೋ, ಈರುಳ್ಳಿ ಇತ್ಯಾದಿಗಳನ್ನು ಬಳಸಿ ಮನೆಯಲ್ಲಿಯೇ ಚಟ್ನಿ ಮಾಡಿ. ರೆಡ್‌ ಪಾಸ್ತಾ ಮಾಡಬಹುದು. ರೆಸ್ಟೋರೆಂಟ್‌ಗಳಿಗೂ ಸೆಡ್ಡು ಹೊಡೆಯಬಲ್ಲ ಪಾಸ್ತಾವನ್ನು ಕ್ಷಣ ಮಾತ್ರದಲ್ಲಿ ನೀವು ಕೆಚಪ್‌ ಬಳಸದೆಯೇ ಮಾಡಬಹುದು. ಇಂತಹ ಅಡುಗೆಯನ್ನು ಕಲಿಯಿರಿ.

Pasta

ಅಡುಗೆ ಮನೆಯಲ್ಲಿ ಜಾದೂ ಮಾಡಿ

ವೈಟ್‌ ಪಾಸ್ತಾ ಮಾಡಲು ಬಳಸುವ ಮೆಯೋನೀಸ್‌ ಅನ್ನು ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಿ. ಒಂದಿಷ್ಟು ಬೆಳ್ಳುಳ್ಳಿ, ಹಂಗ್‌ ಕರ್ಡ್‌ ಹಾಗೂ ಗೋಡಂಬಿಯನ್ನು ನೆನೆಹಾಕಿ ಪೇಸ್ಟ್‌ ಮಾಡಿದರೆ ಮಾರುಕಟ್ಟೆಯ ಮಯೋನೀಸನ್ನು ಕೂಡಾ ನಿವಾಳಿಸಿ ಎಸೆಯಬಹುದು. ಇಂತಹ ಅಡುಗೆ ತಂತ್ರಗಳನ್ನು ಕಲಿತುಕೊಂಡು, ಅಡುಗೆಮನೆಯಲ್ಲಿಯೇ ಜಾದೂ ಮಾಡಿ!

ಇದನ್ನೂ ಓದಿ: Cooking Tips: ನೀವೂ ಹೀಗೇನಾ? ಹಾಗಿದ್ದರೆ ಅಡುಗೆ ನಿಮಗೆ ಕಬ್ಬಿಣದ ಕಡಲೆ!

Continue Reading

ಆಹಾರ/ಅಡುಗೆ

Cooking Tips: ನೀವೂ ಹೀಗೇನಾ? ಹಾಗಿದ್ದರೆ ಅಡುಗೆ ನಿಮಗೆ ಕಬ್ಬಿಣದ ಕಡಲೆ!

ಅಡುಗೆ ಎಂಬುದು ಕಲೆ. ಅಡುಗೆ ಮಾಡುವುದೂ ಒಂದು ಕಲೆ. ರುಚಿಯಾಗಿ, ಆರೋಗ್ಯಕರವಾಗಿ ಮಾಡುವುದು ಕೂಡಾ ಕಲೆಯೇ. ಮಾಡಿದ ಅಡುಗೆಯನ್ನು ಅದ್ಭುತವಾಗಿ ಕಾಣುವಂತೆ (cooking tips) ಮಾಡುವುದೂ ಒಂದು ಕಲೆ. ಆದರೆ….

VISTARANEWS.COM


on

Cooking
Koo

ಪ್ರತಿಯೊಬ್ಬರೂ ಎಲ್ಲ ಕೆಲಸಗಳಲ್ಲಿ ಪಳಗಿರಬೇಕಾಗೇನೂ ಇಲ್ಲ. ಎಲ್ಲರಿಗೂ ಎಲ್ಲ ವಿದ್ಯೆಗಳು ಗೊತ್ತಿರುವುದಿಲ್ಲ. ಹುಟ್ಟುತ್ತಲೇ ನಾವು ಎಲ್ಲವನ್ನೂ ಕಲಿತು ಬರುವುದಿಲ್ಲ. ದೊಡ್ಡವರಾಗುತ್ತಾ ಆಗುತ್ತಾ ಒಂದೊಂದೇ ಬದುಕಿನ ಕೌಶಲ್ಯಗಳನ್ನು ಕಲಿಯುತ್ತೇವೆ. ಹಾಗಂತ, ಎಲ್ಲರಿಗೂ ಬದುಕಿನ ಕೌಶಲ್ಯಗಳು ಕರಗತವಾಗಬೇಕೆಂದೇನೂ ಇಲ್ಲ. ಮೀನಿಗೆ ಈಜು ಕಲಿಸಬೇಕೇ ಹೇಳಿ ಎನ್ನುತ್ತಾ, ಮಹಿಳೆಯರೆಲ್ಲರಿಗೂ ಅಡುಗೆ ಬರಲೇಬೇಕು ಎನ್ನುವ ವಾದದಲ್ಲಿ ಹುರುಳಿಲ್ಲ ಬಿಡಿ. ಈಜು ಬಾರದ ಮೀನುಗಳೂ ಇರುತ್ತವೆ ಅಂದುಕೊಂಡರಾಯಿತು! ಅಡುಗೆ ಎಂಬುದು ಕಲೆ. ಹೌದು. ಅಡುಗೆ ಮಾಡುವುದೂ ಒಂದು ಕಲೆ. ರುಚಿಯಾಗಿ, ಆರೋಗ್ಯಕರವಾಗಿ ಮಾಡುವುದು ಕೂಡಾ ಕಲೆಯೇ. ಮಾಡಿದ ಅಡುಗೆಯನ್ನು ಅದ್ಭುತವಾಗಿ ಕಾಣುವಂತೆ ಮಾಡುವುದೂ ಒಂದು ಕಲೆ. ಆದರೆ, ಅಡುಗೆಯೇನು ಬ್ರಹ್ಮವಿದ್ಯೆಯೇ? ಅದನ್ನು ಕಲಿಯುವ ಅಗತ್ಯ ಎಲ್ಲಿದೆ, ಸಂದರ್ಭ ಬಂದಾಗ ಕಲಿಯುತ್ತೇವೆ ಎಂಬ ಸಬೂಬನ್ನು ಹೇಳಿಕೊಂಡು ಓಡಾಡುತ್ತಿರುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಅಡುಗೆ ಬಾರದು. ಅವರಿಗೆ ಅಡುಗೆ ಬ್ರಹ್ಮವಿದ್ಯೆಯೇ! ಹಾಗಾದರೆ ಬನ್ನಿ (cooking tips), ಅಡುಗೆ ನಿಮಗೆ ಬ್ರಹ್ಮವಿದ್ಯೆಯೇ ನೋಡಿ!

Happy woman with rolling pin cooking at home

ಇದು ತಮಾಷೆಯೆನಿಸಬಹುದು, ಆದರೆ, ತಮಾಷೆಯಾದರೂ ಸತ್ಯವೇ. ನೀವು ನಿಮ್ಮ ಗಣಿತದಲ್ಲಿ ಚಂದದ ವೃತ್ತಾಕಾರದ ಲೆಕ್ಕಾಚಾರಗಳನ್ನೆಲ್ಲ ಮಾಡಿ ೧೦೦ಕ್ಕೆ ನೂರು ಅಂಕ ತೆಗೆದಿರಬಹುದು. ಆದರೆ, ಎಷ್ಟೇ ಪ್ರಯತ್ನಿಸಿದರೂ ಉರುಟಾದ, ಗುಂಡಗಿನ ಚಪಾತಿ ಮಾಡುವುದು ಮಾತ್ರ ಸಾಧ್ಯವಾಗುತ್ತಿಲ್ಲವೇ? ಎಷ್ಟೇ ಪ್ರಯತ್ನಿಸಿದರೂ, ಸರಳವಾಗಿ ವೃತಾಕಾರವಾಗಿ ದೋಸೆ ಹುಯ್ಯುವುದು ಕಷ್ಟ ಅನಿಸುತ್ತಿದೆಯೇ? ನೀವು ಮಾಡುವ ಚಪಾತಿ ಏಷ್ಯಾ ಖಂಡ, ಆಫ್ರಿಕಾದ ಹಾಗೆ ಆಕಾರದಲ್ಲಿರುತ್ತದೆಯೋ? ಕಾರು, ಬೈಕ್‌ ಓಡಿಸುವುದೇ ಸುಲಭವಪ್ಪಾ, ಬೆಟ್ಟವಾದರೂ ಹತ್ತಿಯೇನು, ನನ್ನ ಕೈಯಿಂದ ಉರುಟು ಚಪಾತಿ ಮಾಡುವುದು ಮಾತ್ರ ಸಾಧ್ಯವಾಗುತ್ತಿಲ್ಲ ಅನಿಸುತ್ತಿದೆಯೇ? ಹಾಗಿದ್ದರೆ ಖಂಡಿತ ಅಡುಗೆ ನಿಮ್ಮ ಕ್ಷೇತ್ರವಲ್ಲ.

ನೀವು ಮಾಡಿದ ರೈಸ್‌ಬಾತ್‌, ಬಿರಿಯಾನಿ, ಇಡ್ಲಿ ಅಥವಾ ಯಾವುದೇ ಹೊಸ ರುಚಿ ಬಾಯಲ್ಲಿ ಇಡಲು ಸಾಧ್ಯವಾಗದಿದ್ದರೂ ನಿಮ್ಮ ಮನೆಯವರು ಬಾಯಿ ಮುಚ್ಚಿಕೊಂಡು ತಿನ್ನುತ್ತಿದ್ದಾರೆಯೇ? ಹಾಗಾದರೆ ನೀವು ಖಂಡಿತ ಅದೃಷ್ಟವಂತರು. ನೀವೆಷ್ಟು ಕೆಟ್ಟ ಅಡುಗೆ ಮಾಡಿದ್ದರೂ, ಅಡುಗೆ ನಿಮ್ಮ ಕ್ಷೇತ್ರವಲ್ಲವೆಂದು ಅವರು ಅರಿತುಕೊಂಡು ನಿಮ್ಮನ್ನು ಬೇಸರ ಮಾಡಿಸದೆ, ಬಾಯುಮುಚ್ಚಿ ತಿನ್ನುತ್ತಿದ್ದಾರೆ! ಪ್ರತಿ ಬಾರಿಯೂ ಅಡುಗೆಗೆ ರುಚಿಗೆ ತಕ್ಕಷ್ಟೇ ಉಪ್ಪು ಹಾಕುವುದು ಹೇಗೆ ಎಂಬುದು ಮಾತ್ರ ಜಗತ್ತಿನ ಅತ್ಯಂತ ಜಟಿಲ ಸಮಸ್ಯೆ ಎನಿಸುತ್ತಿದೆಯೇ? ಹಾಗಿದ್ದರೆ ಖಂಡಿತ ನಿಮ್ಮ ಹಣೆಯಲ್ಲಿ ಅಡುಗೆ ಬರೆದಿಲ್ಲ.

A Chef Cooking in the Kitchen

ಪ್ರತಿ ಬಾರಿಯೂ ಎದ್ದಾಗ, ಅಯ್ಯೋ ಯಾಕಪ್ಪಾ ನಾನು ಅಡುಗೆ ಕೆಲಸ ಮಾಡುತ್ತಿದ್ದೇನೆ ಅನಿಸುತ್ತಿದೆಯೇ? ಈ ಅಡುಗೆ ಕೆಲಸ ಎಷ್ಟೊಂದು ಕಷ್ಟವಪ್ಪಾ ಎಂಬ ಯೋಚನೆ ನಿತ್ಯವೂ ಬರುತತಿದೆಯೇ? ಹಾಗಿದ್ದರೆ ಖಂಡಿತಾ ಅಡುಗೆ ನಿಮ್ಮ ಕ್ಷೇತ್ರವಲ್ಲ. ಅನಿವಾರ್ಯವಾಗಿ ಸುಲಭದಡುಗೆ ಮಾಡಿಕೊಂಡು, ನಿಮ್ಮ ನಿಜವಾದ ಪ್ರೀತಿಪಾತ್ರವಾದ ಕ್ಷೇತ್ರವನ್ನು ಆರಿಸಿಕೊಳ್ಳಿ.

ಅಡುಗೆ ಮಾಡುವಾಗ ಭಯವಾಗುತ್ತದೆಯೋ? ಅಂದರೆ, ಸ್ಟವ್‌ ಬಳಿ ಮಾರುದೂರ ನಿಂತು ಅಡುಗೆ ಮಾಡುತ್ತೀರೋ? ಎಣ್ಣೆಯಲ್ಲಿ ಕರಿಯಲು ಎತ್ತರದಿಂದ ಹಾಕುತ್ತೀರೋ? ಅಥವಾ ಇನ್ನೇನೋ ಅಡುಗೆ ಕೆಲಸ ನಿಮಗೆ ಭಯ ತರಿಸುತ್ತಿದೆಯೋ? ಹಾಗಿದ್ದರೆ ಖಂಡಿತಾ ನೀವು ಒಳ್ಳೆಯ ಅಡುಗೆ ಮಾಡುವವರಲ್ಲ.

Morning Breakfast Cooking

ಎಲ್ಲರ ಜೊತೆಗೆ ಸೇರುವಾಗ, ಮನೆಯಲ್ಲೇ ಅಡುಗೆ ಮಾಡಿ ಜೊತೆಯಾಗಿ ಒಂದಿಷ್ಟು ಮಂದಿ ಉಣ್ಣುವ ಯೋಜನೆ ರೂಪಿಸಿದಾಗ, ನೀವು ಅಡುಗೆಯನ್ನು ಒಪ್ಪಿಕೊಳ್ಳುವ ಬದಲು, ಸುಲಭವಾದ ಇತರ ಕೆಲಸಗಳನ್ನು ಒಪ್ಪಿಕೊಳ್ಳುತ್ತೀರೆಂದಾದಲ್ಲಿ ಖಂಡಿತ ನೀವು ಅಡುಗೆ ವಿಷಯದಲ್ಲಿ ಹಿಂದೆ ಎಂದೇ ಅರ್ಥ.

ಇದನ್ನೂ ಓದಿ: Weight Loss: ತೂಕ ಇಳಿಕೆಯ ಶತ್ರು ಈ ಮಧ್ಯರಾತ್ರಿಯ ಬಾಯಿ ಚಪಲ! ಇದಕ್ಕೇನು ಪರಿಹಾರ?

ಇಷ್ಟಕ್ಕೇ, ನೀವು ಬೇಸರ ಪಡಬೇಕೆಂದೇನಿಲ್ಲ. ಎಲ್ಲರ ಮುಂದೆ ನಗೆಪಾಟಲಿಗೀಡಾಗುತ್ತೇನೆ ಎಂಬ ಕಳವಳ ಬೇಡ. ಅಡುಗೆ ಒಂದು ಕಲೆ ನಿಜ. ಆದರೆ, ಕಲಿಯಲೇ ಆಗದ ವಿದ್ಯೆಯೇನಲ್ಲ. ಸುಲಭವಾದ ಕೆಲವನ್ನು ಕರಗತ ಮಾಡಿಕೊಂಡರಾಯಿತು. ಬೊಗಳಿ ಬೊಗಳಿ ರಾಗ ಅನ್ನುವ ಗಾದೆಯೇ ಇದೆಯಲ್ಲ! ಹಾಗೆಯೇ ಹೋಗ್ತಾ ಹೋಗ್ತಾ ನಿಮಗೆ ಅಡುಗೆ ಒಲಿಯುತ್ತದೆ. ಅಷ್ಟಕ್ಕೂ ಅಡುಗೆ ಬಾರದಿದ್ದರೆ ದೊಡ್ಡ ತಲೆಬಿಸಿ ಮಾಡಬೇಕೆಂದೇನಿಲ್ಲ ಬಿಡಿ. ಕೂಲ್‌, ತೊಂದರೆಯೇನಿಲ್ಲ. ಅಡುಗೆ ಬಾರದಿದ್ದರೇನೂ ಲೋಕ ಮುಳುಗದು. ಬದುಕನ್ನು ಸರಳವಾಗಿಸುವ ಸ್ಮಾರ್ಟ್‌ ಪ್ರಯತ್ನಗಳ ಕಡೆ ಗಮನ ಹರಿಸಿ ಸಾಕು. ಯಾವುದು ಆರೋಗ್ಯಕರ ಎಂಬ ಸತ್ಯ ಗೊತ್ತಿದ್ದರೆ ಸಾಕು.

Continue Reading

ಆರೋಗ್ಯ

Health benefits Of Red Foods: ಕೆಂಪು ಬಣ್ಣದ ಆಹಾರಗಳ ಮೇಲೂ ಇರಲಿ ಪ್ರೇಮ!

ಪ್ರೇಮಿಗಳ ದಿನದ ಕಂಪಿನಲ್ಲಿ ಒಂದಿಷ್ಟು ಕೆಂಪು ಬಣ್ಣದ ಆಹಾರಗಳನ್ನು ಸೇವಿಸಿದರೆ ಹೇಗೆ? ಕೃತಕವಾಗಿ ಕೆಂಬಣ್ಣ ಹಾಕಿದಂಥವಲ್ಲ, ನಿಸರ್ಗವೇ ನೀಡಿದಂಥ ಕೆಂಪಿನವು. ಯಾವುದೆಲ್ಲ ಹಣ್ಣ-ತರಕಾರಿಗಳು ಈ ಪಟ್ಟಿಯಲ್ಲಿವೆ ಮತ್ತು ಏನುಪಯೋಗ (benefits of red foods) ಎಂಬುದನ್ನು ನೋಡೋಣ.

VISTARANEWS.COM


on

Health benefits Of Red Foods
Koo

ಈಗ ಎಲ್ಲೆಡೆ ಕೆಂಪು ಬಣ್ಣದ ಕಂಪು. ಕೆಂಪು ಗುಲಾಬಿ, ಕೆಂಪು ಬಟ್ಟೆ, ಕೆಂಪು ಟೆಡ್ಡಿಬೇರ್‌, ಕೆಂಪು ಅದು, ಕೆಂಪು ಇದು…! ಉಳಿದೆಲ್ಲ ಕೆಂಪು ಬಣ್ಣಗಳ ಜೊತೆಗೆ ಕೆಂಬಣ್ಣದ ಆಹಾರಗಳಿಗೂ ಆದ್ಯತೆ ನೀಡಬಹುದು. ಅಂದರೆ ಕೆಂಪು ಬಣ್ಣದ ವೆಲ್ವೆಟ್‌ ಕೇಕ್‌, ಬಾಯಲ್ಲಿ ನೀರೂರಿಸುವ ಕೆಂಪು ಕ್ಯಾಂಡಿಗಳು… ಇಂಥವಲ್ಲ. ಹಣ್ಣು-ತರಕಾರಿಗಳಲ್ಲಿ ಕೆಂಪು ಬಣ್ಣದ ಯಾವುದನ್ನೆಲ್ಲ ತಿಂದರೆ ಏನೆಲ್ಲ ಲಾಭಗಳು (benefits of red foods) ಎಂಬುದನ್ನು ನೋಡಿದರೆ… ಪ್ರೇಮಿಗಳ ದಿನ ಮುಗಿದ ಮೇಲೂ ಈ ಕೆಂಪಿನ ಕಂಪು ತಾಜಾ ಇರಬಹುದು. ಕೆಂಪು ಬಣ್ಣದ ಆಹಾರಗಳಲ್ಲಿ ಇರಬಹುದಾದ ಸತ್ವಗಳು ಯಾವುವು? ಬಣ್ಣಕ್ಕೇಕೆ ಅಷ್ಟು ಪ್ರಾಮುಖ್ಯತೆ ನೀಡಬೇಕು? ಎಲ್ಲ ತರಕಾರಿ-ಹಣ್ಣುಗಳೂ ಒಂದಿಲ್ಲೊಂದು ಬಣ್ಣದಲ್ಲಿ ಇರಲೇಬೇಕಲ್ಲವೇ? ನಿಜ, ಯಾವುದಾದರೊಂದು ಬಣ್ಣ ಇವುಗಳಿಗೆ ಇರಲೇಬೇಕೆಂಬುದು ಹೌದಾದರೂ, ಕೆಂಬಣ್ಣದ ಹಣ್ಣು-ತರಕಾರಿಗಳಲ್ಲಿ ಇರುವ ಲೈಕೋಪೇನ್‌, ಆಂಥೋ ಸಯನಿನ್ಗಳು ಮತ್ತು ಬೆಟಲೈನ್‌ಗಳು ನಮ್ಮ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಯಾವ ಆಹಾರಗಳವು ಎಂಬುದನ್ನು ನೋಡೋಣ.

Red Foods

ಯಾವುದೆಲ್ಲ ಬೇಕು?

ಟೊಮೇಟೊ, ಸ್ಟ್ರಾಬೆರಿ, ಚೆರ್ರಿ, ಕೆಂಪು ಕ್ಯಾಪ್ಸಿಕಂ, ಕಲ್ಲಂಗಡಿ, ಕೋಕಂ, ದಾಳಿಂಬೆ, ಕೆಂಪು ಸೇಬುಗಳು, ಕ್ರೇನ್‌ಬೆರಿ… ಇಂಥ ಯಾವುದೇ ಕೆಂಬಣ್ಣದ ಹಣ್ಣು, ತರಕಾರಿಗಳು ಬಳಕೆಗೆ ಒಳ್ಳೆಯವು. ಇವುಗಳನ್ನು ತರಹೇವಾರಿ ಅಡುಗೆಗಳಲ್ಲಿ, ಬೇಸಿಗೆಯ ಸಲಾಡ್‌ಗಳಿಗೆ, ಸೂಪ್‌, ಸ್ಮೂದಿ, ಹಣ್ಣಿನ ಚಾಟ್‌ಗಳು, ಜ್ಯೂಸ್‌ಗಳು, ಟ್ರೇಲ್‌ ಮಿಕ್ಸ್‌ಗಳು, ಹಾಗೆಯೇ ಬಾಯಾಡಲು… ಹೀಗೆ ಯಾವುದೇ ರೀತಿಯಲ್ಲಿ ಸೇವಿಸಬಹುದು.

ಏನುಪಯೋಗ?

ಟೊಮೇಟೊದಂಥ ಕೆಂಪು ತರಕಾರಿಗಳಲ್ಲಿರುವ ಲೈಕೋಪೇನ್‌ ಅಂಶಗಳು ಹೃದಯದ ಆರೋಗ್ಯಕ್ಕೆ ಅತ್ಯಂತ ಉಪಕಾರಿಯಾದವು. ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯಕ್ಕೆ ಬೀಳಬಹುದಾದ ಬರೆಯನ್ನು ತಪ್ಪಿಸುವಲ್ಲಿ ಇವು ಅಗತ್ಯ. ಕಲ್ಲಂಗಡಿಯಲ್ಲಿರುವ ಪೊಟಾಶಿಯಂ ಅಂಶವೂ ರಕ್ತದೊತ್ತಡ ನಿಯಂತ್ರಣದಲ್ಲಿ ಗಮನಾರ್ಹ ಕೆಲಸವನ್ನು ಮಾಡುತ್ತದೆ.

Cancer Prevention Green Tea Benefits Some research suggests that the antioxidants in green tea may have protective effects against certain types of cancer. Regular consumption has been linked to a decreased risk of breast, prostate, and colorectal cancers.

ಕ್ಯಾನ್ಸರ್‌ ತಡೆ

ಇದರಲ್ಲಿರುವ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್‌ನಂಥ ಮಾರಕ ರೋಗಗಳ ತಡೆಗೆ ನೆರವು ನೀಡುತ್ತವೆ. ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ರೋಗವನ್ನು ಹತೋಟಿಗೆ ತರುವಲ್ಲಿಯೂ ಅಗತ್ಯ ನೆರವನ್ನು ನೀಡುತ್ತವೆ. ಸ್ತನ ಮತ್ತು ಪ್ರೊಸ್ಟೇಟ್‌ ಕ್ಯಾನ್ಸರ್‌ಗಳ ಭೀತಿಯನ್ನು ಕಡಿಮೆ ಮಾಡುವಲ್ಲಿ ಈ ಉತ್ಕರ್ಷಣ ನಿರೋಧಕಗಳು ಗಣನೀಯ ಕೆಲಸ ಮಾಡುತ್ತವೆ

Eye Health Guava Benefits

ಚರ್ಮ, ದೃಷ್ಟಿಗೆ ಲಾಭ

ಇವುಗಳಲ್ಲಿರುವ ವಿಟಮಿನ್‌ ಸಿ ಅಂಶಗಳಿಂದ ಚರ್ಮದ ಕೊಲಾಜಿನ್‌ ಉತ್ಪಾದನೆಗೆ ಸಹಾಯ ದೊರೆಯುತ್ತದೆ. ಇದರಿಂದ ಸುಕ್ಕಿಲ್ಲದಂಥ, ನಯವಾದ ಚರ್ಮವನ್ನು ಹೊಂದಲು ಸಾಧ್ಯ. ಈ ಉತ್ಕರ್ಷಣ ನಿರೋಧಕಗಳಿಂದ ದೃಷ್ಟಿಯ ರಕ್ಷಣೆಗೆ ಪೂರಕವಾದ ಅಂಶಗಳು ದೊರೆಯುತ್ತವೆ. ಅದರಲ್ಲೂ ವಯಸ್ಸಾದಂತೆ ದೃಷ್ಟಿ ಮಂದವಾಗುವುದನ್ನು ಮುಂದೂಡುವಲ್ಲಿ ಇವೆಲ್ಲ ಮಹತ್ವದ ಪೋಷಕಾಂಶಗಳು.

Immunity Against Diseases Lemon Water Benefits

ರೋಗ ನಿರೋಧಕ ಶಕ್ತಿ

ವಿಟಮಿನ್‌ ಸಿ ಹೆಚ್ಚಿರುವ ಆಹಾರಗಳಿಂದ ದೇಹದ ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದರಿಂದ ಋತುಮಾನ ಬದಲಾಗುವ ದಿನಗಳಲ್ಲಿ, ವಾತಾವರಣದ ಏರುಪೇರಿನ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಾಡುವ ಸೋಂಕುಗಳ ಬಾಧೆಯನ್ನು ಹತ್ತಿಕ್ಕಲು ಸುಲಭ ಸಾಧ್ಯವಾಗುತ್ತದೆ.

Anti inflammatory properties Daruharidra Benefits

ಉರಿಯೂತ ಶಮನ

ಉತ್ಕರ್ಷಣ ನಿರೋಧಕಗಳು ಆಹಾರದಲ್ಲಿ ಹೆಚ್ಚೆಚ್ಚು ಇದ್ದಷ್ಟೂ, ದೇಹದಲ್ಲಿ ಉರಿಯೂತಗಳನ್ನು ಶಮನ ಮಾಡುವಲ್ಲಿ ಸಹಕಾರಿಯಾಗುತ್ತದೆ. ಆರ್ಥರೈಟಿಸ್‌ನಂಥ ಉರಿಯೂತ ಸಂಬಂಧಿ ತೊಂದರೆಗಳಿದ್ದಲ್ಲಿ, ಯಾವುದೇ ಉತ್ಕರ್ಷಣ ನಿರೋಧಕಗಳು ಪ್ರಯೋಜನಕಾರಿ. ಹಣ್ಣು-ತರಕಾರಿಗಳ ಬಣ್ಣ ಗಾಢವಾದಷ್ಟೂ ಈ ಸತ್ವಗಳ ಸಾಂದ್ರತೆ ಹೆಚ್ಚು.

Improved Digestion Tea Benefits

ಜೀರ್ಣಕಾರಿ

ಚೆರ್ರಿ, ರಾಸ್ಪ್‌ಬೆರಿಯಂಥ ಕೆಂಪು ಹಣ್ಣುಗಳಲ್ಲಿ ನಾರು ಹೇರಳವಾಗಿದೆ. ಇದು ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವಂಥದ್ದು. ನಾರು ಸಾಕಷ್ಟಿದ್ದರೆ, ಕರುಳಿನ ಬ್ಯಾಕ್ಟೀರಿಯಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟವಲ್ಲ. ಜೊತೆಗೆ, ಮಲಬದ್ಧತೆಯೂ ದೂರವಾಗಿ ಹೊಟ್ಟೆ ಸ್ವಚ್ಛವಾಗುತ್ತದೆ.

ಇದನ್ನೂ ಓದಿ: Not Having Children: ಮಕ್ಕಳಾಗುತ್ತಿಲ್ಲವೇ?; ಹಾಗಾದರೆ, ಇವಿಷ್ಟು ಸಾಮಾನ್ಯ ಅಂಶಗಳು ಗೊತ್ತಿರಲಿ!

Continue Reading

ಆರೋಗ್ಯ

Weight Loss Tips: ಬಾಯಲ್ಲಿ ನೀರೂರಿಸುವ ಚಟ್ನಿಗಳ ಮೂಲಕ ತೂಕ ಇಳಿಸಿ!

ತೂಕ ಇಳಿಸುವ ಪಾಕಗಳೆಂದರೆ ರುಚಿ ಇಲ್ಲದವೇ ಆಗಿರಬೇಕೆಂಬ ಎಂಬ ನಿಯಮವೇನಿಲ್ಲ. ರುಚಿಯಾದ ಅಡುಗೆಗಳ ಮೂಲಕವೂ ತೂಕ ಇಳಿಸುವ (Weight Loss Tips) ಕೆಲಸಕ್ಕೆ ಮುಂದಾಗಬಹುದು. ಅಂಥ ಕೆಲವು ಆಯ್ಕೆಗಳು ಇಲ್ಲಿವೆ.

VISTARANEWS.COM


on

weight loss
Koo

ತೂಕ ಇಳಿಸುವ ಸನ್ನಾಹದಲ್ಲಿ (Weight Loss Tips) ಇರುವವರಿಗೆ ಯಾರಾದರೂ ʻವೆಯ್ಟ್‌ಲಾಸ್‌ ರೆಸಿಪಿʼ ಎಂದರೆ ಮುಖ ಕಿವುಚಬಹುದು. ಕಾರಣ, ಅಂಥ ತಿನಿಸುಗಳು ಹೆಚ್ಚಿನ ಸಾರಿ ಅವರಿಷ್ಟದ ರುಚಿಯಲ್ಲಿ ಇಲ್ಲದಿರಬಹುದು. ಬಾಯಲ್ಲಿಟ್ಟರೆ ಕರಗಬೇಕಾದ ತಿನಿಸುಗಳು ಅಗಿದೂಅಗಿದು ನುಂಗುವಂತಾದರೆ, ತುಪ್ಪದ ಘಮವಿಲ್ಲದೆ ಬೋಳಾದರೆ, ಸಕ್ಕರೆಯ ಸಿಹಿಯಿಲ್ಲವೆ ಸಪ್ಪೆಯಾದರೆ… ಯಾರಿಗೆ ಬೇಕು ಈ ತೂಕ ಇಳಿಕೆಯ ಪಾಕಗಳು ಎಂದು ಬಿಟ್ಹಾಕುವವರೇ ಹೆಚ್ಚು. ಆದರೆ ತೂಕ ಇಳಿಸಿಕೊಳ್ಳಲು ರುಚಿಕರ ಅಡುಗೆಗಳನ್ನು ಚಪ್ಪರಿಸುವಂತಾದರೆ…? ಹೌದು. ಭಾರತೀಯ ಅಡುಗೆಗಳಲ್ಲಿ ತರಹೇವಾರಿ ಚಟ್ನಿಗಳಿಗೆ ಪ್ರಾಶಸ್ತ್ಯವಿದೆ. ಊಟದ ತಟ್ಟೆಯಲ್ಲಿ ಒಂದೆರಡು ಬಗೆಯ ಚಟ್ನಿಗಳಿದ್ದರೆ, ಮತ್ತೆ ಸದ್ದಿಲ್ಲದೆ ಊಟ ಮುಗಿಯುತ್ತದೆ. ಊಟ ರುಚಿಸುವುದಕ್ಕೆ ವ್ಯಂಜನಗಳು ಬೇಡವೇ? ಈ ಚಟ್ನಿಗಳನ್ನು ರುಚಿಕಟ್ಟಾಗಿಯೂ, ಸತ್ವಯುತವಾಗಿಯೂ, ಕಡಿಮೆ ಕ್ಯಾಲರಿಗಳಲ್ಲೂ ಮಾಡಬಹುದು. ಹಾಗೆಂದು ಜೊತೆಗಿನ ಅನ್ನವೋ ದೋಸೆಯೋ ಚಪಾತಿಯೊ ದಿನಕ್ಕಿಂತ ಹೆಚ್ಚು ಹೊಟ್ಟೆಗಿಳಿಯದಂತೆ ಜಾಗ್ರತೆ ಮಾಡಬೇಕಷ್ಟೆ!

Mint coriander chutney

ಪುದೀನಾ-ಕೊತ್ತಂಬರಿ ಚಟ್ನಿ

ಈ ಎರಡೂ ಸೊಪ್ಪುಗಳು ತಾಜಾ ಇದ್ದಷ್ಟೂ ರುಚಿ, ಘಮ ಹೆಚ್ಚು. ಜೊತೆಗೆ ಶುಂಠಿ ಮತ್ತು ಹಸಿಮೆಣಸಿನ ಘಾಟೂ ಸೇರಿದರೆ, ತಿಂದ ತೃಪ್ತಿ ತಾನೇತಾನಾಗಿ ನಾಲಿಗೆಯಲ್ಲಿ ಮೂಡಬೇಕು. ಪುದೀನಾ ಸೊಪ್ಪಿಗಿರುವ ಪಚನಕಾರಿ ಗುಣಗಳು ಜೀರ್ಣಾಂಗಗಳನ್ನು ಚುರುಕು ಮಾಡುತ್ತವೆ. ಹೊಟ್ಟೆಯುಬ್ಬರ, ಅಜೀರ್ಣವನ್ನು ಹೋಗಲಾಡಿಸುತ್ತವೆ. ಕೊತ್ತಂಬರಿಯ ಗುಣಗಳೇ ಅನನ್ಯ. ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಮರ್ಥ್ಯದಿಂದ ಹಿಡಿದು, ಸೋಂಕುಗಳೊಂದಿಗೆ ಹೋರಾಡುವ ಗುಣಗಳು ಇದಕ್ಕಿವೆ. ಶುಂಠಿಗೆ ದೇಹದ ಚಯಾಪಚಯವನ್ನು ಹೆಚ್ಚಿಸುವ ತಾಕತ್ತಿದೆ. ಇವೆಲ್ಲವೂ ಒಟ್ಟಾಗಿ, ತಿಂದ ಆಹಾರವನ್ನು ಸಂಪೂರ್ಣ ಪಚನ ಮಾಡಿ, ಚಯಾಪಚಯವನ್ನು ಹೆಚ್ಚಿಸಿ, ಕ್ಯಾಲರಿ ಕರಗಿಸಿ, ದೇಹ ಸ್ವಾಸ್ಥ್ಯವನ್ನು ವೃದ್ಧಿಸುತ್ತವೆ.

Tomato Chutney

ಟೊಮೆಟೊ ಚಟ್ನಿ

ಕೊಂಚ ಹುಳಿ-ಸಿಹಿಯಾದ, ರಸನೆಯನ್ನು ಉತ್ತೇಜಿಸುವ ಈ ಚಟ್ನಿಯ ಗುಣಗಳೂ ಅಷ್ಟೇ ವಿಶಿಷ್ಟ. ಟೊಮೆಟೊ ಜೊತೆಗೆ ಹಾಕಲಾಗುವ ಬೆಳ್ಳುಳ್ಳಿ, ಒಣ ಮೆಣಸು ಮತ್ತು ಕೊತ್ತಂಬರಿ ಬೀಜಗಳಿಗೆ ಪಾಚಕ ಶಕ್ತಿಯನ್ನು ಉತ್ತೇಜಿಸುವ ಸಾಮರ್ಥ್ಯವೂ ಇದೆ. ಟೊಮೆಟೊದಲ್ಲಿ ವಿಫುಲವಾಗಿರುವ ನಾರಿನಂಶವು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೆಚ್ಚಿನ ಸಮಯದವರೆಗೆ ಹಸಿವಾಗದಂತೆ ಕಾಪಾಡುತ್ತದೆ. ಟೊಮೆಟೊದ ಕ್ಯಾಲರಿ ಕಡಿಮೆಯಾದರೂ ಉತ್ಕರ್ಷಣ ನಿರೋಧಕಗಳು ಸಾಕಷ್ಟಿವೆ. ಇದರಿಂದ ದೇಹದ ಚಯಾಪಚಯವನ್ನು ಹೆಚ್ಚಿಸಬಹುದು. ಈ ಎಲ್ಲ ಕಾರಣಗಳಿಂದ ತೂಕ ಇಳಿಸುವ ಉದ್ದೇಶ ಹೊಂದಿದವರು ಸವಿಯಬಹುದಾದ ವ್ಯಂಜನವಿದು.

Nut chutney

ಕಾಯಿ ಚಟ್ನಿ

ಸುಮ್ಮನೆ ತೆಂಗಿನಕಾಯಿ ರುಬ್ಬಿ ಚಟ್ನಿ ಮಾಡಿದ್ದನ್ನು ತಿಂದರೆ ತೂಕ ಇಳಿಸುವುದು ಹೇಗೆ ಎಂಬುದು ಸಹಜ ಪ್ರಶ್ನೆ. ಈ ಚಟ್ನಿಗೆ ಕಾಯಿಯ ಜೊತೆಗೆ ಧಾರಾಳವಾಗಿ ಕರಿಬೇವಿನ ಸೊಪ್ಪನ್ನು ಸೇರಿಸುವುದು ಮುಖ್ಯ. ಅದರಲ್ಲೂ ಬೆಳಗಿನ ತಿಂಡಿಯ ಸಮಯಕ್ಕೆ ಈ ಚಟ್ನಿ ಸೂಕ್ತ. ಕಾರಣ, ಹಸಿದ ಹೊಟ್ಟೆಗೆ ಆರೋಗ್ಯಕರ ಕೊಬ್ಬನ್ನು ನೀಡುವುದರಿಂದ, ದೇಹದಲ್ಲಿನ ಕೊಬ್ಬು ಕರಗುತ್ತದೆ ಎನ್ನುತ್ತಾರೆ ಆಹಾರ ತಜ್ಞರು. ಜೊತೆಗಿರುವ ಕರಿಬೇವಿನ ಎಲೆಗಳು ಶರೀರದ ಚಯಾಪಚಯವನ್ನು ಚುರುಕು ಮಾಡುತ್ತವೆ. ಆದರೆ ಚಟ್ನಿ ರುಚಿಯಾದ ಕಾರಣ ನೀಡಿ ಇನ್ನೊಂದಿಡ್ಲಿ ಹೆಚ್ಚಾಗಿ ಹೊಟ್ಟೆಗಿಳಿಯಬಾರದಷ್ಟೆ.

Apple and Flake Chutney

ಸೇಬು ಮತ್ತು ಚಕ್ಕೆಯ ಚಟ್ನಿ

ಸಿಹಿ ಮತ್ತು ಘಾಟು ಘಮದ ರುಚಿಕರ ಚಟ್ನಿಯಿದು. ಸೇಬಿನ ರುಚಿ ಬಾಯಲ್ಲಿನ ಲಾಲಾ ರಸವನ್ನು ಹೆಚ್ಚಿಸಿದರೆ, ಚಕ್ಕೆಯ ಉಷ್ಣತೆ ಸಂತೃಪ್ತಿಯನ್ನು ಹೆಚ್ಚಿಸುತ್ತದೆ. ಸೇಬಿನ ನೀರು ಮತ್ತು ನಾರಿನ ಅಂಶಗಳು ಹೊಟ್ಟೆಯನ್ನು ಭರ್ತಿ ಮಾಡಿದರೆ, ಚಯಾಪಚಯವನ್ನು ಹೆಚ್ಚಿಸುವುದಕ್ಕೆ ಚಕ್ಕೆ ಇದ್ದೇಇದೆ. ಜೊತೆಗೆ, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಭಾಯಿಸಲು ದಾಲ್ಚಿನ್ನಿಯ ಅಂಶಗಳು ನೆರವಾಗುತ್ತವೆ. ಕೃತಕ ಸಿಹಿಯನ್ನು ಸೇರಿಸದೆಯೇ, ಸಿಹಿ ಚಟ್ನಿಯ ಮೂಲಕ ಬಾಯಿ ಸಿಹಿ ಮಾಡಿಕೊಳ್ಳುವ ಉತ್ತಮ ಉಪಾಯವಿದು.

Ginger Jaggery Chutney

ಶುಂಠಿ-ಗಜ್ಜರಿ ಚಟ್ನಿ

ಕ್ಯಾರೆಟ್‌ ಎಂದರೆ ಹಲ್ವಾ ಮಾಡಿಯೇ ತಿನ್ನಬೇಕೆಂದಿಲ್ಲ. ಶುಂಠಿ ಜೊತೆಗಿನ ಜುಂಜುಂ ಎನ್ನುವ ಚಟ್ನಿಯೂ ಬಾಯಲ್ಲಿ ನೀರು ತರಿಸುವಂಥದ್ದು. ಕ್ಯಾರೆಟ್‌ನಲ್ಲಿ ಕ್ಯಾಲರಿ ಕಡಿಮೆ, ಸತ್ವಗಳು ಹೆಚ್ಚು. ನಾರೂ ಸಾಕಷ್ಟಿದೆ. ಹಾಗಾಗಿ ತಿಂದ ಮೇಲೂ ಹಸಿವನ್ನು ಮುಂದೂಡಬಲ್ಲದು. ಶುಂಠಿ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ, ಚಯಾಪಚಯಕ್ಕೂ ಬಿಸಿ ತಾಗಿಸುತ್ತದೆ. ಇದರಿಂದ ಹೆಚ್ಚಿನ ಕ್ಯಾಲರಿ ಕರಗಿಸಲು ಅನುಕೂಲವಾಗುತ್ತದೆ. ಇಂಥ ರುಚಿಕರ ವ್ಯಂಜನಗಳ ಮೂಲಕ ತೂಕ ಇಳಿಸುವ ಆಯ್ಕೆಯನ್ನು ಮುಂದಿಟ್ಟರೆ… ಬೇಡ ಎನ್ನೋರು ಉಂಟೇ!

ಇದನ್ನೂ ಓದಿ: World Pulses Day 2024: ವಿಶ್ವ ಬೇಳೆ-ಕಾಳುಗಳ ದಿನ; ಏನಿದರ ಮಹತ್ವ?

Continue Reading
Advertisement
Tax on temples and money used for other community Fictitious accusation Says CM Siddaramaiah
ದೇಶ7 mins ago

ದೇಗುಲಗಳಿಗೆ ತೆರಿಗೆ, ಅನ್ಯಧರ್ಮೀಯರಿಗೆ ಹಣ ಬಳಕೆ ಕಪೋಲಕಲ್ಪಿತ ಆರೋಪ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು!

Nitin Gadkari highways
ಬೆಂಗಳೂರು32 mins ago

Nitin Gadkari : ಪೆಟ್ರೋಲ್‌ ಬೆಲೆ ಶೀಘ್ರವೇ 50 ರೂ.ಗೆ ಇಳಿಯಲಿದೆ ಎಂದ ನಿತಿನ್‌ ಗಡ್ಕರಿ

BJP hits out at Rahul Gandhi for insulting Actor aishwarya rai bachchan
ದೇಶ43 mins ago

Rahul Gandhi: ಐಶ್ವರ್ಯಾ ರೈರನ್ನು ಅವಮಾನಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ತರಾಟೆ

INDIA Alliance partners Congress and AAP Seal seat deal for Goa, Haryana, Gujarat
ದೇಶ1 hour ago

INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

Aryaman Ashok Shankar
ಚಾಮರಾಜನಗರ1 hour ago

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

ರಾಜಕೀಯ1 hour ago

Karnataka Budget Session 2024: ಈ ಸರ್ಕಾರದಿಂದ ಹಿಂದೂಗಳಿಗೆ ದ್ರೋಹ: ಆರ್‌. ಅಶೋಕ್‌

Mudda Hanumegowda joins Congress
ತುಮಕೂರು1 hour ago

Mudda hanumegowda : ಕೆಲವರ ಅತೃಪ್ತಿ ನಡುವೆ ಮತ್ತೆ ಕೈ ಸೇರಿದ ಮುದ್ದಹನುಮೇಗೌಡ

D. hiremath foundation
ಉತ್ತರ ಕನ್ನಡ2 hours ago

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

For Registration Movie Telugu Dubbing Rights sold for huge amount
ಸಿನಿಮಾ2 hours ago

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

Uttara Kannada ZP CEO eshwar Kandu visited Dayanilaya specially abled School in Kumta
ಉತ್ತರ ಕನ್ನಡ2 hours ago

Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Catton Candy contain cancer Will there be a ban in Karnataka
ಬೆಂಗಳೂರು4 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ7 hours ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ5 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ6 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ6 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಟ್ರೆಂಡಿಂಗ್‌