ಕಲೆ/ಸಾಹಿತ್ಯ
Ramesh Aravind | ಪ್ರೀತಿಯಿಂದ ರಮೇಶ್ ಬರೆದ ʼಯಶಸ್ಸಿನ ಸರಳ ಸೂತ್ರʼಗಳ ಬಿಡುಗಡೆ
ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಬರೆದಿರುವ “ಪ್ರೀತಿಯಿಂದ ರಮೇಶ್- ಯಶಸ್ಸಿನ ಸರಳ ಸೂತ್ರಗಳುʼʼ ಪುಸ್ತಕ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿದೆ.
ಬೆಂಗಳೂರು: ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಬರೆದಿರುವ “ಪ್ರೀತಿಯಿಂದ ರಮೇಶ್- ಯಶಸ್ಸಿನ ಸರಳ ಸೂತ್ರಗಳುʼ ಪುಸ್ತಕ ಭಾನುವಾರ ಬೆಂಗಳೂರಿನ ಬಿ. ಪಿ ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಹಿರಿಯ ನಟ ಅನಂತ್ ನಾಗ್, ಜಿ- ಕನ್ನಡ ಚಾನೆಲ್‌ನ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರ್, ಲೇಖಕ-ಪತ್ರಕರ್ತ ಜೋಗಿ ಹಾಗೂ ಕಿಕ್ಕಿರಿದು ತುಂಬಿದ್ದ ಸಭಿಕರ ನಡುವೆ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಅನಂತ್‌ನಾಗ್, ಸಾತ್ವಿಕತೆಗೆ ಇನ್ನೊಂದು ಹೆಸರು ಎಂದರೆ ರಮೇಶ್ ಅರವಿಂದ್. ನಟನಾಗಿ, ನಿರ್ದೇಶಕನಾಗಿ, ಪರ್ಸನಾಲ್ಟಿ ಡೆವಲಪರ್, ಲೇಖಕರಾಗಿ ರಮೇಶ್ ಅರವಿಂದ್ ಯಶಸ್ಸು ಸಾಧಿಸಿದ್ದು, ಅವರೊಬ್ಬರು ಆಲ್‌ರೌಂಡರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪುಸ್ತಕಕ್ಕೆ ಓದುಗರನ್ನು ಹಿಡಿದುಕೊಳ್ಳುವ ಗುಣವಿದೆ. ಈ ಪುಸ್ತಕದಲ್ಲಿ ಯಶಸ್ಸಿ ಸರಳ ಸೂತ್ರ ಮಾತ್ರವಲ್ಲ, ಜೀವನದಲ್ಲಿ ಹೇಗಿರಬೇಕೆಂಬುದನ್ನು ರಮೇಶ್ ತಿಳಿಸಿದ್ದಾರೆ. ಈ ಮೂಲಕ ಸಮಾಜದಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಈ ಪುಸ್ತಕವನ್ನು ಓದಲೇಬೇಕು ಎಂದು ಅನಂತ್ ನಾಗ್ ಹೇಳಿದರು.
ಓದಿದ್ದು, ಕೇಳಿದ್ದನ್ನು ಪುಸ್ತಕವಾಗಿಸಿದ್ದೇನೆ
ತಮ್ಮ ಪುಸ್ತಕದ ಕುರಿತು ಮಾತನಾಡಿದ ನಟ ರಮೇಶ್ ಅರವಿಂದ್ ನಾನು ಓದಿದ್ದು, ಗ್ರಹಿಸಿದ್ದು ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಈ ಪುಸ್ತಕ ಬರೆದಿದ್ದೇನೆ. ಒಬ್ಬ ಮನುಷ್ಯನಿಗೆ ಜೀವನದ ವಿವಿಧ ಹಂತಗಳಲ್ಲಿ ಬೇರೆ ಬೇರೆ ರೀತಿಯ ಯೋಚನೆಗಳು ಬರುತ್ತವೆ. ಒಂದು ಯೋಚನೆಯಿಂದ ಮತ್ತೊಂದು ಯೋಚನೆಗಳಿಗೆ ದಾಟಿಕೊಳ್ಳುತ್ತಾ ವಿಕಾಸವಾಗುವ ದಾರಿ ಹೇಗೆ ಎಂಬುದು ಈ ಪುಸ್ತಕದಲ್ಲಿದೆ ಎಂದು ಅವರು ತಮ್ಮ ಈ ಹೊಸ ಪುಸ್ತಕದ ಪರಿಚಯ ಮಾಡಿಕೊಟ್ಟರು.
ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಜಾಗ ಎಂದರೆ ಲೈಬ್ರರಿ. ಒಬ್ಬ ಲೇಖನ ಎಲ್ಲ ವಿಚಾರಗಳು ಅವರ ಪುಸ್ತಕಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ದಾಖಲಾಗಿರುತ್ತದೆ. ನಾನು ಓದಿರುವುದು, ಕೇಳಿರುವುದು, ಯಾರೋ ಹೇಳಿರುವುದನ್ನು ಈ ಪುಸಕ್ತದಲ್ಲಿ ದಾಖಲಿಸಿದ್ದೇನೆ. ನಾನು ಶಾಲಾ-ಕಾಲೇಜುಗಳಲ್ಲಿ ಮಾಡಿದ ಭಾಷಣಗಳನ್ನು ದಾಖಲಿಸಬೇಕೆಂಬ ಉದ್ದೇಶದಿಂದ ಈ ಪುಸ್ತಕ ಬರೆಯಲು ಮುಂದಾದೆ ಎಂದು ರಮೇಶ್ ಹೇಳಿದರು.
ಅನಂತ್ ನಾಗ್ ಬೋಧಿವೃಕ್ಷ
ಹಿರಿಯ ನಟ ಅನಂತ್ ನಾಗ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಲಘುಹಾಸ್ಯದ ಶೈಲಿಯಲ್ಲಿ ವಿವರಿಸುತ್ತಾ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದ ರಮೇಶ್ ಅರವಿಂದ್, ಅನಂತ್ ನಾಗ್ ಮನೆಗೆ ಹೋದರೆ ಬರಲು ಇಷ್ಟವೇ ಆಗುವುದಿಲ್ಲ. ಇದಕ್ಕೆ ಎರಡು ಕಾರಣ. ಒಂದು ಅನಂತ್‌ನಾಗ್ ತಮ್ಮ ಅನುಭವ ಮತ್ತು ವಿದ್ವತ್ತಿನಿಂದ ತಿಳಿಸುವ ವಿಚಾರಗಳು. ಅವರೊಂದು ಬೋಧಿವೃಕ್ಷ. ಅವರ ಬಳಿ ಮಾತನಾಡುತ್ತಾ ಕುಳಿತರೆ ತಿಳಿಯಲು ಬಹಳಷ್ಟು ವಿಷಯಗಳಿರುತ್ತವೆ. ಹಾಗೆಯೇ ಅನಂತ್‌ನಾಗ್ ಅವರ ಪತ್ನಿ ನಟಿ ಗಾಯತ್ರೀ ಅವರು ಮಾಡಿಕೊಡುವ ಬಿಸಿಬಿಸಿ ಬೆಣ್ಣೆ ದೋಸೆ ನಮ್ಮನ್ನು ಹಿಡಿದಿಡುತ್ತದೆ ಎಂದು ವಿವರಿಸಿದರು.
ಜಿ- ಕನ್ನಡ ಚಾನೆಲ್‌ನ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರ್ ಮಾತನಾಡಿ, ರಮೇಶ್ ಅರವಿಂದ್ ತಮ್ಮನ್ನು ಎಂದೂ ಹೊಗಳಿಕೊಂಡಿದ್ದು ನೋಡಿಲ್ಲ. ಹಾಗೆಯೇ ಅವರು ಬೇರೆಯವರನ್ನು ತೆಗಳುವುದೂ ಇಲ್ಲ. ಅವರು ಹೇಗೆ ಖುಷಿ ಖುಷಿಯಾಗಿರುತ್ತಾರೋ ಹಾಗೆಯೇ ಈ ಪುಸ್ತಕವೂ ಇದೆ. ಅವರು ಸದಾ ಖುಷಿಯಿಂದ ನಗುತ್ತಾ ಬದುಕಿಗೊಂದು ಪೋಸ್ ಕೊಡುತ್ತಿರುತ್ತಾರೆ. ರಮೇಶ್ ಎಂದರೆ ಪಾಸಿಟಿವ್ ಎನರ್ಜಿ ಎಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರಲ್ಲದೆ, ಪುಸ್ತಕ ಬರೆಯುವ ಹಿರೋ ನಮ್ಮಲ್ಲಿದ್ದಾರೆ ಎಂಬುದೇ ಪುಣ್ಯದ ವಿಷಯ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದ ಲೇಖಕ ಹಾಗೂ ಪತ್ರಕರ್ತ ಜೋಗಿ, ನಾವು ಪತ್ರಕರ್ತರಾಗಿ ರಮೇಶ್ ಅವರ ಬಾಯಿಂದ ಕೆಟ್ಟ ಮಾತು ಬರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಆದರೆ ಕಳೆದ 24 ವರ್ಷಗಳಿಂದ ಸಾಧ್ಯವಾಗಿಲ್ಲ. ಅವರ ಬಳಿ ಯಾರ ಬಗ್ಗೆಯಾದ್ರೂ ನೆಗೆಟಿವ್ ಮಾತಾಡಿದ್ರೆ ಅದನ್ನವರು ಪಾಸಿಟಿವ್ ಆಗಿ ತಿರುಗಿಸಿ, ಮಾತುಕತೆ ಮುಂದುವರಿಸುತ್ತಾರೆ ಎಂದರು.
ಬಿಡುಗಡೆಯ ದಿನವೇ ಪುಸ್ತಕ ಸೋಲ್ಡ್ ಔಟ್
ಪುಸ್ತಕ ಬಿಡುಗಡೆಯಾದ ದಿನವೇ ಒಂದು ಎಡಿಷನ್‌ನ ಪ್ರತಿಗಳು ಸಂಪೂರ್ಣ ಮಾರಾಟವಾಗಿ ದಾಖಲೆ ಬರೆಯಲಾಗಿದೆ. ಈ ವಿಷಯವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಕಟಿಸುತ್ತಿದ್ದಂತೆಯೇ ಸಭಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಈ ಪುಸ್ತಕ ಇಂಗ್ಲಿಷ್‌ನಲ್ಲಿಯೂ ಬರಲಿದೆ ಎಂದು ಸಾವಣ್ಣ ಪ್ರಕಾಶನದ ಜಮೀಲ್ ಪ್ರಕಟಿಸಿದರು. ನಟ, ನಿರ್ದೇಶಕ ಟಿ ಎನ್ ಸೀತಾರಾಮ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ| Sunday Read | ಹೋಗಲೇಬೇಕಾದ ಬುಕ್ ಕೆಫೆಗಳಿವು: ಇಲ್ಲಿ ಕಾಫಿ ಹೀರಿ, ಪುಸ್ತಕ ಓದಿ, ಕೊಳ್ಳಿ!
ಕರ್ನಾಟಕ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ ಚಂದ್ರಶೇಖರ್
ಮುದ್ರಣ ಹಾಗೂ ಡಿಜಿಟಲ್- ಟಿವಿ ಇವೆರಡರ ಹಿತವಾದ ಸಮ್ಮಿಶ್ರಣ ಮಾಡಿ ಓದುಗ- ನೋಡುಗರಿಗೆ ನೀಡಬೇಕು ಎಂಬ ಆಶಯದಿಂದ ನಾವು ಕಥಾಸ್ಪರ್ಧೆಯನ್ನು ನಡೆಸಿದ್ದೇವೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದ್ದಾರೆ.
ಬೆಂಗಳೂರು: ಕನ್ನಡ ಸಾರಸ್ವತ ಲೋಕವನ್ನು ಒಳಗೊಳ್ಳುವ ಯತ್ನ, ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ ವಿಸ್ತಾರ ನ್ಯೂಸ್ ಟಿವಿ ಮಾಧ್ಯಮದಿಂದ ಆಗುತ್ತಿರುವುದು ಸ್ತುತ್ಯರ್ಹ ಎಂದು ಖ್ಯಾತ ಕತೆಗಾರ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ದಾಖಲೆ ಮೊತ್ತದ ʼವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ-2023’ರ ಬಹುಮಾನ ವಿಜೇತರನ್ನು ಘೋಷಿಸಿದ ಬಳಿಕ ಅವರು ಮಾತನಾಡಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಹೋಟೆಲ್ ಮ್ಯಾಸ್ಟಿಫ್‌ನಲ್ಲಿ ಸಮಾರಂಭ ನೆರವೇರಿತು. ಮೊದಲ ಬಹುಮಾನವನ್ನು ಚಂದ್ರಶೇಖರ ಡಿ.ಆರ್., ಎರಡನೇ ಬಹುಮಾನವನ್ನು ದಾದಾಪೀರ್ ಜೈಮನ್, ಮೂರನೇ ಬಹುಮಾನವನ್ನು ಪೂರ್ಣಿಮಾ ಮಾಳಗಿಮನಿ ತಮ್ಮದಾಗಿಸಿಕೊಂಡರು.
ಕಥೆಗಳಿಗೆ ದೃಶ್ಯ ಮಾಧ್ಯಮ ಸದಾ ಉಪಕೃತವಾಗಿರುತ್ತದೆ. ಕಥೆಗಳೇ ಮನರಂಜನೆಯ ಜೀವಾಳ. ಕಥೆ ಹಾಗೂ ಟಿವಿ ಮಾಧ್ಯಮ ಎರಡರ ವ್ಯಾಕರಣವೂ ಭಿನ್ನ. ದೃಶ್ಯ ಮಾಧ್ಯಮ ಅಬ್ಬರದಿಂದ ಹೇಳುವುದನ್ನು ಕಥೆ ಸೌಮ್ಯವಾಗಿ, ಪಿಸುಮಾತಿನಲ್ಲಿ, ದೃಶ್ಯ ಮಾಧ್ಯಮದ ತೋರಿಕೆಯ ನಡುವೆ ಕಥೆ ಸಂಕೋಚ ಹಾಗೂ ಧ್ಯಾನದಲ್ಲಿ ಹೇಳುತ್ತದೆ. ದೃಶ್ಯ ಮಾಧ್ಯಮ ಪ್ರಕಟಿಸಿದರೆ ಸಾಹಿತ್ಯ ಏಕಾಂತದಲ್ಲಿ ಅರಳುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರೇಕ್ಷಕನನ್ನು ಓದುಗನನ್ನಾಗಿಸಿ, ಓದುಗನನ್ನು ಪ್ರೇಕ್ಷಕನನ್ನಾಗಿಸುವ ಕಠಿಣ ಕಾಯಕದ ಸುವರ್ಣ ಸೇತುವೆಯಾಗಿ ವಿಸ್ತಾರ ನ್ಯೂಸ್ ಕೆಲಸ ಮಾಡುತ್ತಿದೆ. ಸಾರಸ್ವತ ಲೋಕವನ್ನು ಟಿವಿ ಮಾಧ್ಯಮದಲ್ಲಿ ಒಳಗೊಳ್ಳುವ ಈ ಯತ್ನ ಸಫಲವಾಗಲಿ ಎಂದು ನಾಗತಿಹಳ್ಳಿ ಹಾರೈಸಿದರು.
ವಿಸ್ತಾರ ನ್ಯೂಸ್ ಟಿವಿ ವಾಹಿನಿಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಕಥಾಸ್ಪರ್ಧೆಯ ಆಶಯವನ್ನು ವಿವರಿಸಿದರು. ಸಾಹಿತ್ಯ, ಸಂಸ್ಕೃತಿ ಇವುಗಳಿಗೆ ಆಧುನಿಕ ಮಾಧ್ಯಮದಲ್ಲಿ ಮನ್ನಣೆ ದೊರೆಯುತ್ತಿಲ್ಲ ಎಂದು ಕೂಗು ಕೇಳಿಬರುತ್ತಿರುವುದರ ನಡುವೆಯೇ ನಾವು ಅವುಗಳಿಗೆ ಪ್ರಾಧಾನ್ಯ ನೀಡುವ, ಹಲವು ಅಭಿಪ್ರಾಯಗಳಿಗೆ ಧ್ವನಿಯಾಗುವ ಕಾಯಕವನ್ನು ಮಾಡುತ್ತಿದ್ದೇವೆ. ಮುದ್ರಣ ಹಾಗೂ ಡಿಜಿಟಲ್- ಟಿವಿ ಇವೆರಡರ ಹಿತವಾದ ಸಮ್ಮಿಶ್ರಣ ಮಾಡಿ ಓದುಗ- ನೋಡುಗರಿಗೆ ನೀಡಬೇಕು ಎಂಬ ಆಶಯದಿಂದ ನಾವು ಕಥಾಸ್ಪರ್ಧೆಯನ್ನು ನಡೆಸಿದ್ದೇವೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾದ ಕಥಾಸ್ಪರ್ಧೆಯ ಫಲಿತಾಂಶವು ಹಲವು ತಿಂಗಳ ಪರಿಶ್ರಮದ ಫಲವಾಗಿದೆ ಎಂದು ಅವರು ವಿವರಿಸಿದರು.
ಕಥೆ ಬರೆಯುವುದಕ್ಕಿಂತಲೂ ದೊಡ್ಡ ಸಮುದಾಯಕ್ಕೆ ಕತೆ ಹೇಳುವುದನ್ನು ಹೆಚ್ಚು ಇಷ್ಟಪಡುತ್ತೇನೆ. ಕಥೆಗಾರನಾಗುವುದರ ಜತೆಗೆ ಉತ್ತಮ ಮನುಷ್ಯನಾಗಿರಲೂ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಥಮ ಬಹುಮಾನಿತ ಕಥೆಗಾರ ಚಂದ್ರಶೇಖರ ಡಿ.ಆರ್ ನುಡಿದರು. ಕಥೆಗಳನ್ನು ಹಂಚಿಕೊಳ್ಳುವ ಮೂಲಕ ನಾವು ಇನ್ನಷ್ಟು ಕ್ರಿಯಾಶೀಲವಾಗುತ್ತೇವೆ. ಈ ಕ್ರಿಯಾಶೀಲತೆಗೆ ವಿಸ್ತಾರ ಸ್ಪರ್ಧೆ ಮತ್ತಷ್ಟು ಹುರುಪು ತುಂಬಿದೆ ಎಂದು ದ್ವಿತೀಯ ಬಹುಮಾನಿತ ದಾದಾಪೀರ್ ಜೈಮನ್ ನುಡಿದರು. ವಿಸ್ತಾರ ಸ್ಪರ್ಧೆಗೆ ಬಂದ ಸಾವಿರ ಕಥೆಗಳು ಸಾವಿರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅಷ್ಟು ವೈವಿಧ್ಯಮಯವಾದ ಕಥಾಲೋಕ ಕನ್ನಡದಲ್ಲಿದೆ ಎಂದು ತೃತೀಯ ಬಹುಮಾನಿತ ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ನುಡಿದರು.
ಹೊಸ ಕತೆಗಾರರನ್ನು ಗುರುತಿಸುವಲ್ಲಿ ಕನ್ನಡ ಸಾಹಿತ್ಯಲೋಕ ಹಿಂದೆ ಬಿದ್ದಿಲ್ಲ. ಉತ್ತಮ ಸಾಹಿತ್ಯ ಪ್ರಕಟಿಸುವಾಗ ನಾವು ಹಣ ಖರ್ಚಾಗುತ್ತದೆಂದು ಹಿಂದುಳಿದಿಲ್ಲ. ಯುವ ಸಾಹಿತಿಗಳು ಬೆಳೆಯಬೇಕು ಎಂಬುದು ನಮ್ಮ ಆಶಯ ಎಂದು ಬಹುಮಾನ ಆಯೋಜಕರಲ್ಲಿ ಒಬ್ಬರಾದ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಮಾಲಿಕ ಬಸವರಾಜ ಕೊನೇಕ ಹೇಳಿದರು. ಬಹುಮಾನ ಪ್ರಾಯೋಜಕರುಗಳಾದ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಆರ್ ವೆಂಕಟೇಶ್, ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ. ಎಂ.ಡಿ ಡಾ.ಪಿ.ಎಲ್ ವೆಂಕಟರಾಮ ರೆಡ್ಡಿ ಸ್ಪರ್ಧೆಯ ಯಶಸ್ಸಿಗೆ ಶುಭ ಹಾರೈಸಿದರು.
ಮೊದಲ ಬಹುಮಾನದ ಮೊತ್ತ ರೂ. 55,000, ಎರಡನೇ ಬಹುಮಾನ ರೂ. 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಗಳನ್ನು 5 ಮಂದಿಗೆ ವಿತರಿಸಲಾಯಿತು. ಕವಿ, ವಿಮರ್ಶಕಿ ಲಲಿತಾ ಸಿದ್ದಬಸವಯ್ಯ, ಕಾದಂಬರಿಕಾರ ಹಾಗೂ ವಿಮರ್ಶಕ ಬಿ. ಜನಾರ್ದನ ಭಟ್ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು. ಟಾಪ್ 25 ಪಟ್ಟಿಗೆ ಆಯ್ಕೆಯಾದ ಕತೆಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್ ಎಚ್.ವಿ. ಧರ್ಮೇಶ್, ವಿಸ್ತಾರ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್, ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಸಿಒಒ ಪರಶುರಾಮ್, ವಿಸ್ತಾರ ನ್ಯೂಸ್ ಡಿಜಿಟಲ್ ವಿಭಾಗದ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ, ವಿಸ್ತಾರ ಮನರಂಜನಾ ವಾಹಿನಿ ಕಂಟೆಂಟ್ ಹೆಡ್ ಕುಸುಮಾ ಆಯರಹಳ್ಳಿ ಉಪಸ್ಥಿತರಿದ್ದರು. ಎ.ಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಕಥಾಸ್ಪರ್ಧೆ ಬಹುಮಾನಿತರು:
ಪ್ರಥಮ: ಸೋಮನ ಕುಣಿತ- ಚಂದ್ರಶೇಖರ ಡಿ.ಆರ್
ದ್ವಿತೀಯ: ಅಂತಃಕಾರಣದ ಟಿಪ್ಪಣಿಗಳು- ದಾದಾಪೀರ್ ಜೈಮನ್
ತೃತೀಯ: ಅದು ಅವರ ಪ್ರಾಬ್ಲಮ್- ಪೂರ್ಣಿಮಾ ಮಾಳಗಿಮನಿ
ಮೆಚ್ಚುಗೆ: ಹುಣಿಸೆ ಹೂವು- ದೀಪದ ಮಲ್ಲಿ
ಮೆಚ್ಚುಗೆ: ಪಿಂಕ್ ಟ್ರಂಪೆಟ್- ಚೈತ್ರಿಕಾ ಹೆಗಡೆ
ಮೆಚ್ಚುಗೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗ- ಬಿ.ಎಂ ಹನೀಫ್
ಮೆಚ್ಚುಗೆ: ಕಿತ್ತಳೆ ಚಿಟ್ಟೆ- ಮಂಜುನಾಯಕ್ ಚೆಳ್ಳೂರು
ಮೆಚ್ಚುಗೆ: ನೆಲೆ- ದೀಪಾ ಹಿರೇಗುತ್ತಿ
ಕರ್ನಾಟಕ
Bahuroopi Prakashana: ಸರ್ಕಾರ ಪುಸ್ತಕೋದ್ಯಮ ಬೆಂಬಲಿಸಲಿ: ಪೊನ್ ವಾಸುದೇವನ್
Bahuroopi Prakashana: ಬೆಂಗಳೂರಿನಲ್ಲಿ ‘ಬಹುರೂಪಿ’ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕ ಪೊನ್ ವಾಸುದೇವನ್ ಭಾಗವಹಿಸಿದ್ದರು.
ಬೆಂಗಳೂರು: ಪುಸ್ತಕೋದ್ಯಮಕ್ಕೆ ತಮಿಳುನಾಡು ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯಾಗಿದ್ದು, ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕ ಪೊನ್ ವಾಸುದೇವನ್ ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನದಿಂದ (Bahuroopi Prakashana) ನಗರದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕೋದ್ಯಮ ಇಂದು ಆತಂಕವನ್ನು ಎದುರಿಸುತ್ತಿದೆ. ನಾಳಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಉಳಿಸಬೇಕಾದರೆ ಸರ್ಕಾರ ಪ್ರಕಾಶನ ರಂಗಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.
ಡಿಎಂಕೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪುಸ್ತಕ ಮೇಳಗಳು ಹಾಗೂ ಕೈಗೆತ್ತಿಕೊಂಡಿರುವ ಹಲವು ರೀತಿಯ ಸಗಟು ಖರೀದಿ ಯೋಜನೆಗಳು ಪುಸ್ತಕೋದ್ಯಮ ಉಸಿರಾಡುವಂತೆ ಮಾಡಿದೆ. ಓದುವ ಸಂಸ್ಕೃತಿಯನ್ನು ಯಾವೆಲ್ಲ ರಾಜ್ಯಗಳು ರಕ್ಷಿಸಿವೆಯೋ ಅಲ್ಲೆಲ್ಲ ಪುಸ್ತಕ ಉದ್ಯಮ ಸಂಪನ್ನವಾಗಿದೆ. ಹಾಗಾಗಿ ಓದುವ ಸಂಸ್ಕೃತಿಯನ್ನು ರಕ್ಷಿಸುವ ಕಡೆಗೆ ಗಮನ ಕೊಡಬೇಕಾದ ಹೊಣೆ ಎಲ್ಲರದ್ದು ಎಂದು ತಿಳಿಸಿದರು.
ಇದನ್ನೂ ಓದಿ | ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
ಕಾರ್ಯಕ್ರಮದಲ್ಲಿ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೆ.ನಲ್ಲತಂಬಿ ಅವರನ್ನು ‘ಬಹುರೂಪಿ’ ಸನ್ಮಾನಿಸಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪುಸ್ತಕ ಎನ್ನುವುದು ಅರಿವಿನ ಭಾಗ. ನಮ್ಮ ಜ್ಞಾನ ವೃದ್ಧಿಗೆ ಪುಸ್ತಕ ಓದುವ ಹವ್ಯಾಸ ಎಲ್ಲೆಡೆಯೂ ಪಸರಿಸಬೇಕಿದೆ. ಸಾಹಿತ್ಯದ ಸಹವಾಸ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಸಿದರು.
ಸಂವಾದದಲ್ಲಿ ಬಹುರೂಪಿಯ ಸಂಸ್ಥಾಪಕ ಜಿ.ಎನ್. ಮೋಹನ್, ಶ್ರೀಜಾ ವಿ.ಎನ್, ಕಲಾವಿದರಾದ ಗುಜ್ಜಾರ್, ಆರ್. ಸೂರಿ, ಸಾಹಿತಿ ರಂಜನಿ ಪ್ರಭು, ಸಂಸ್ಕೃತಿ ಚಿಂತಕ ಜಿ.ಎನ್. ನಾಗರಾಜ್ ಭಾಗಿಯಾಗಿದ್ದರು.
ಕರ್ನಾಟಕ
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಹೋಟೆಲ್ ಮ್ಯಾಸ್ಟಿಫ್‌ನಲ್ಲಿ ನಡೆದ ಸಮಾರಂಭದಲ್ಲಿ, ಬಹುಮಾನ ವಿಜೇತರನ್ನು ಕತೆಗಾರ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಘೋಷಿಸಿದರು.
ಬೆಂಗಳೂರು: ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ದಾಖಲೆ ಬಹುಮಾನ ಮೊತ್ತ ಹೊಂದಿದ ʼವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ- 2023ʼರ ಬಹುಮಾನಿತರ ಘೋಷಣೆ ಮತ್ತು ಪ್ರದಾನ ಕಾರ್ಯಕ್ರಮ ಇಂದು (ಮೇ 27) ನಡೆಯಿತು. ಮೊದಲ ಬಹುಮಾನವನ್ನು ಚಂದ್ರಶೇಖರ ಡಿ.ಆರ್., ಎರಡನೇ ಬಹುಮಾನವನ್ನು ದಾದಾಪೀರ್ ಜೈಮನ್, ಮೂರನೇ ಬಹುಮಾನವನ್ನು ಪೂರ್ಣಿಮಾ ಮಾಳಗಿಮನಿ ತಮ್ಮದಾಗಿಸಿಕೊಂಡರು.
ಕ್ವೀನ್ಸ್ ರಸ್ತೆಯ ಹೋಟೆಲ್ ಮ್ಯಾಸ್ಟಿಫ್‌ನಲ್ಲಿ ನಡೆದ ಸಮಾರಂಭದಲ್ಲಿ, ಬಹುಮಾನ ವಿಜೇತರನ್ನು ಖ್ಯಾತ ಕತೆಗಾರ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಘೋಷಿಸಿದರು. ಮೊದಲ ಬಹುಮಾನದ ಮೊತ್ತ ರೂ. 55,000, ಎರಡನೇ ಬಹುಮಾನ ರೂ. 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಗಳನ್ನು 5 ಮಂದಿಗೆ ವಿತರಿಸಲಾಯಿತು. ಕವಿ, ವಿಮರ್ಶಕಿ ಲಲಿತಾ ಸಿದ್ದಬಸವಯ್ಯ, ಕಾದಂಬರಿಕಾರ, ವಿಮರ್ಶಕ ಬಿ. ಜನಾರ್ದನ ಭಟ್ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು.
ವಿಸ್ತಾರ ನ್ಯೂಸ್ ಟಿವಿ ವಾಹಿನಿಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಕಥಾಸ್ಪರ್ಧೆಯ ಆಶಯವನ್ನು ವಿವರಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್ ಎಚ್.ವಿ. ಧರ್ಮೇಶ್, ಬಹುಮಾನ ಆಯೋಜಕರಾದ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಮಾಲೀಕ ಬಸವರಾಜ ಕೊನೇಕ, ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಆರ್ ವೆಂಕಟೇಶ್, ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ. ಎಂ.ಡಿ ಡಾ.ಪಿ.ಎಲ್ ವೆಂಕಟರಾಮ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಹುಮಾನಿತ ಹಾಗೂ ಟಾಪ್ 25 ಕತೆಗಳು ವಿಸ್ತಾರ ನ್ಯೂಸ್ ಜಾಲತಾಣದಲ್ಲಿ ಪ್ರಕಟವಾಗಲಿವೆ. ಈ ಕತೆಗಳು ಪುಸ್ತಕವಾಗಿಯೂ ಪ್ರಕಟಗೊಳ್ಳಲಿವೆ.
ಬಹುಮಾನಿತರ ವಿವರಗಳು ಈ ಕೆಳಗಿನಂತಿವೆ:
ಬಹುಮಾನ- ಕಥೆ- ಕಥೆಗಾರರು
ಪ್ರಥಮ: ಸೋಮನ ಕುಣಿತ- ಚಂದ್ರಶೇಖರ ಡಿ.ಆರ್
ದ್ವಿತೀಯ: ಅಂತಃಕಾರಣದ ಟಿಪ್ಪಣಿಗಳು- ದಾದಾಪೀರ್ ಜೈಮನ್
ತೃತೀಯ: ಅದು ಅವರ ಪ್ರಾಬ್ಲಮ್- ಪೂರ್ಣಿಮಾ ಮಾಳಗಿಮನಿ
ಮೆಚ್ಚುಗೆ: ಹುಣಿಸೆ ಹೂವು- ದೀಪದ ಮಲ್ಲಿ
ಮೆಚ್ಚುಗೆ: ಪಿಂಕ್ ಟ್ರಂಪೆಟ್- ಚೈತ್ರಿಕಾ ಹೆಗಡೆ
ಮೆಚ್ಚುಗೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗ- ಬಿ.ಎಂ ಹನೀಫ್
ಮೆಚ್ಚುಗೆ: ಕಿತ್ತಳೆ ಚಿಟ್ಟೆ- ಮಂಜು ನಾಯಕ್ ಚೆಳ್ಳೂರು
ಮೆಚ್ಚುಗೆ: ನೆಲೆ- ದೀಪಾ ಹಿರೇಗುತ್ತಿ
ಟಾಪ್ 25 ಪಟ್ಟಿ ಸೇರಿರುವ ಇತರ ಕತೆಗಳು
ಮಾಚಣ್ಣನ ಮಗ- ಸಂದೀಪ ನಾಯಕ
ಆತ್ಮದ ಗಿಡುಗ- ಮಂಜುನಾಥ್ ಲತಾ
ಪ್ರೀತಿ ಇಲ್ಲದ ಮೇಲೆ- ಶರತ್ ಭಟ್ ಸೇರಾಜೆ
ಸೀಕ್ರೆಟ್ ಸಂಟಾ- ಪೂರ್ಣಿಮಾ ಭಟ್ಟ ಸಣ್ಣಕೇರಿ
ಚೆಕ್‌ಔಟ್- ಸದಾಶಿವ ಸೊರಟೂರು
ಹುರಿಮೀಸೆ- ಚೀಮನಹಳ್ಳಿ ರಮೇಶ್ ಬಾಬು
ಪರಸೆ- ಭಾಗ್ಯರೇಖಾ ದೇಶಪಾಂಡೆ
ಮುಕ್ಕೋಡ್ಲು ಅಂಚೆ ಮತ್ತು ಪೋಸ್ಟ್- ಮೇ. ಕುಶ್ವಂತ್ ಕೋಳಿಬೈಲು
ಶ್ರೀಗಳ ಅರಣ್ಯಕಾಂಡ- ಮೌನೇಶ್ ಬಡಿಗೇರ್
ಶ್ರಾವಣಾ- ಬಸವಣ್ಣೆಪ್ಪ ಕಂಬಾರ
ಕಸೂತಿ- ಸೌಮ್ಯ ಪ್ರಭು ಕಲ್ಯಾಣಕರ್
ಗುಡ್‌ಮಾರ್ನಿಂಗ್ ಮೆಸೇಜ್- ಅಂಜನಾ ಹೆಗಡೆ
ಮೈ ಲೈಫ್ ಮೈ ಪ್ರಾಬ್ಲೆಮ್- ಸುಷ್ಮಾ ಸಿಂಧು
ಉರಿವ ರಾತ್ರಿ ಸುರಿದ ಮಳೆ- ಭವ್ಯಾ ನವೀನ್
ಕಿಂಡಿ- ಸಂಪತ್ ಸಿರಿಮನೆ
ಹೇರ್‌ಪಿನ್ ತಿರುವು- ಪ್ರಸಾದ್ ಶೆಣೈ ಆರ್.ಕೆ
ಏಳುಮಲ್ಲಿಗೆ ತೂಕದವಳು- ಶರಣಬಸವ ಗುಡದಿನ್ನಿ
ತೀರ್ಪುಗಾರರ ಪರಿಚಯ
ಲಲಿತಾ ಸಿದ್ದಬಸವಯ್ಯ
ಕವಯಿತ್ರಿ ಲಲಿತಾ ಸಿದ್ದಬಸವಯ್ಯ ಅವರು ಬಿ.ಎಸ್ಸಿ. ಪದವೀಧರೆ. 27-02-1955ರಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. 28 ವರ್ಷ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೊದಲ ಸಿರಿ, ಇಹದ ಸ್ವರ, ಕೆಬ್ಬೆ ನೆಲ, ದಾರಿನೆಂಟ ಮತ್ತು ಬಿಡಿ ಹರಳು ಎಂಬ ಕವಿತಾ ಸಂಕಲನಗಳನ್ನೂ, ಆನೆಘಟ್ಟ ಎಂಬ ಕಥಾಸಂಕಲನವನ್ನೂ, ಇನ್ನೊಂದು ಸಭಾಪರ್ವ ಎಂಬ ನಾಟಕವನ್ನೂ, ಮಿ.ಛತ್ರಪತಿ ಎಂಬ ನಗೆಬರಹವನ್ನು ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಬಿಎಂಶ್ರೀ ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ.
ಡಾ. ಬಿ.ಜನಾರ್ದನ ಭಟ್
ಡಾ. ಬಿ. ಜನಾರ್ದನ ಭಟ್ ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ, ನಂತರ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಅವರು ಬೆಳ್ಮಣ್ ಸ.ಪ.ಪೂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. ಅವರ ಗ್ರಂಥಗಳಲ್ಲಿ ದಕ್ಷಿಣ ಕನ್ನಡದ ಶತಮಾನದ ಕಾವ್ಯ, ದಕ್ಷಿಣ ಕನ್ನಡದ ಶತಮಾನದ ಕತೆಗಳು, ಉಡುಪಿ ಜಿಲ್ಲೆಯ ಶತಮಾನದ ಕತೆಗಳು ಮುಖ್ಯವಾದವು. ಉತ್ತರಾಧಿಕಾರ, ಹಸ್ತಾಂತರ, ಮೂರು ಹೆಜ್ಜೆ ಭೂಮಿ, ಕಲ್ಲುಕಂಬವೇರಿದ ಹುಂಬ, ಅನಿಕೇತನ ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ.
ಮೊದಲ ಮೂರು ಬಹುಮಾನಿತ ಕಥೆಗಾರರ ವಿವರ
ಚಂದ್ರಶೇಖರ ಡಿ.ಆರ್
ಮೂಲತಃ ತುಮಕೂರು. ಹುಟ್ಟಿದ್ದು ಓದಿದ್ದು ಎಲ್ಲಾ ತುಮಕೂರಿನಲ್ಲಿ. ಪ್ರಸ್ತುತ ಎಸ್‌ಬಿಐನಲ್ಲಿ 10 ವರ್ಷದಿಂದ ಮ್ಯಾನೇಜರ್. ಇವರು ಬರೆದ ಕತೆ ಸಮಾಜಮುಖಿ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದೆ. ಸ್ಟೇಟ್ ಬ್ಯಾಂಕ್‌ನ ಸಣ್ಣ ಕಥಾ ವಿಭಾಗದಲ್ಲಿ ಕೂಡ ಬಹುಮಾನ ಬಂದಿತ್ತು.
ದಾದಾಪೀರ್ ಜೈಮನ್
ವೃತ್ತಿಯಿಂದ ಶಿಕ್ಷಕ ಆಗಿರುವ ಇವರಿಗೆ ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ದಿಮಿತ್ರಿ ಗಾರಿಶ್ ಅವರ ʼಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಕಥಾ ಸಂಕಲನ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪಡೆದಿದ್ದಾರೆ.
ಪೂರ್ಣಿಮಾ ಮಾಳಗಿಮನಿ
ʼAnyone but the Spouse’ ಎನ್ನುವ ಇಂಗ್ಲೀಷ್ ಕಥಾ ಸಂಕಲನ, ಇಜಯಾ, ಪ್ರೀತಿ ಪ್ರೇಮ -ಪುಸ್ತಕದಾಚೆಯ ಬದನೇಕಾಯಿ, ಅಗಮ್ಯ ಇವರ ಕಾದಂಬರಿಗಳು. ‘ಡೂಡಲ್ ಕಥೆಗಳು’ ಕಥಾ ಸಂಕಲನ. 2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ರೋತ್ಸವ ಕಥಾ ಬಹುಮಾನ ವಿಜೇತರು. ಇಜಯಾ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸಂದಿದೆ. ಶಿವಮೊಗ್ಗ ಜಿಲ್ಲೆಯ ಹನುಮಂತಾಪುರ ಗ್ರಾಮದಲ್ಲಿ ಜನಿಸಿದವರು. ಭಾರತೀಯ ವಾಯುಸೇನೆಯಲ್ಲಿ ಏರೋ ನಾಟಿಕಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಈಗ ಕೇಂದ್ರ ಸರಕಾರದ ಸಂಸ್ಥೆಯಲ್ಲಿ ಜಾಯಿಂಟ್ ಡೆಪ್ಯೂಟಿ ಡೈರೆಕ್ಟರ್ ಆಗಿದ್ದಾರೆ.
ಮೆಚ್ಚುಗೆ ಬಹುಮಾನಿತ ಕಥೆಗಾರರ ವಿವರ
ದೀಪಾ ಗಿರೀಶ್
‘ದೀಪದ ಮಲ್ಲಿ’ ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ದೀಪಾ, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯ. ಪ್ರಸ್ತುತ ಇವರು ಸುದ್ದಿಸಂಸ್ಥೆಯೊಂದರಲ್ಲಿ ನಿರೂಪಕರು. ಇವರ ʼಅಸ್ಮಿತಾʼ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚೊಚ್ಚಲ ಪುಸ್ತಕ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ʼಶ್ರೀಲೇಖಾ ದತ್ತಿ ಪ್ರಶಸ್ತಿʼ ದೊರಕಿದೆ.
ದೀಪಾ ಹಿರೇಗುತ್ತಿ
ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಜನಿಸಿದ ದೀಪಾ, ಚಿಕ್ಕಮಗಳೂರಿನ ಕೊಪ್ಪದಲ್ಲಿ ಇಂಗ್ಲಿಷ್ ಉಪನ್ಯಾಸಕಿ. ಹಲವು ಕಥಾ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುತ್ತಲೇ ಇರುವ ಇವರ ಪ್ರಕಟಿತ ಕೃತಿಗಳು ಪರಿಮಳವಿಲ್ಲದ ಹೂಗಳ ಮಧ್ಯ ಕವನ ಸಂಕಲನ, ನಾನು ನೀವು ಮತ್ತು, ಫೀನಿಕ್ಸ್ ಅಂಕಣ ಬರಹಗಳ ಸಂಗ್ರಹ. ಕಸಾಪ ನೀಡುವ ಮಯೂರ ವರ್ಮ ಪ್ರಶಸ್ತಿಗೆ ಇವರು ಪಾತ್ರರಾಗಿದ್ದಾರೆ.
ಮಂಜು ಚಳ್ಳೂರು
ಇವರ ಹುಟ್ಟೂರು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು. ಚಳ್ಳೂರು, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಪ್ರಸ್ತುತ ವೈಕಾಮ್18 ಮೀಡಿಯಾ ಸಂಸ್ಥೆಯಲ್ಲಿ ಬರಹಗಾರನಾಗಿ ಉದ್ಯೋಗ. ಫೂ ಮತ್ತು ಇತರ ಕತೆಗಳು ಎಂಬ ಕಥಾ ಸಂಕಲನ ಪ್ರಕಟವಾಗಿದೆ. ಟೋಟೋ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ, ಕಾಜಾಣ ಯುವ ಪುರಸ್ಕಾರ ಲಭಿಸಿವೆ. ಸಿನಿಮಾ ಮತ್ತು ಫೋಟೋಗ್ರಫಿ ಆಸಕ್ತಿಯ ಕ್ಷೇತ್ರಗಳು.
ಬಿ.ಎಂ ಹನೀಫ್
ಮೂಲತಃ ಪತ್ರಕರ್ತರಾದ ಬಿ.ಎಂ ಹನೀಫ್ ಕಥೆಗಾರ ಮತ್ತು ಕವಿಯಾಗಿಯೂ ಪರಿಚಿತರು. ಪ್ರಜಾವಾಣಿ ಸಮೂಹದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೆಳ್ಳಾಯರು. ಮಾಂಜಿ ರವಾ ಫ್ರೈ ಕಥಾ ಸಂಕಲನ, ಕನಸು ಕನ್ನಡಿ ಅಂಕಣ ಬರಹಗಳ ಸಂಕಲನ, ಕತ್ತಲೆಗೆ ಯಾವ ಬಣ್ಣ ಕವನ ಸಂಕಲನ ಮತ್ತಿತರ ಪುಸ್ತಕಗಳ ಜತೆಗೆ ಹಲವು ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.
ಚೈತ್ರಿಕಾ ಶ್ರೀಧರ್ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲೂಕಿನ, ಕಂಚೀಮನೆ ಎಂಬ ಪುಟ್ಟ ಊರಿನಲ್ಲಿ ಜನಿಸಿದ ಚೈತ್ರಿಕಾ, ಬಿಕಾಂ ಓದಿ ಸದ್ಯ ಕನ್ನಡ ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಕವಿತೆಗಳ ಹಸ್ತಪ್ರತಿಗೆ ಕೊಡಮಾಡುವ 2016ರ ‘ಸಾಹಿತ್ಯ ಅಕಾಡೆಮಿ ದತ್ತಿ ಬಹುಮಾನ’ವು ‘ಎರಡು ನಂಬರಿನ ಟಿಕಲಿ’ ಎಂಬ ಹಸ್ತಪ್ರತಿಗೆ ದೊರೆತಿದೆ. 2021ರಲ್ಲಿ ಇವರ ಮೊದಲ ಕಥಾ ಸಂಕಲನ “ನೀಲಿ ಬಣ್ಣದ ಸ್ಕಾರ್ಫು” ಬಿಡುಗಡೆ ಆಗಿದೆ.
ಇದನ್ನೂ ಓದಿ: ವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ: ಇತಿಹಾಸ ಬರೆದ ಕಥಾಪ್ರವಾಹ; ಟಾಪ್ 25 ಕಥೆಗಾರರ ಪಟ್ಟಿ ಇಲ್ಲಿದೆ!
ಕರ್ನಾಟಕ
Dr Padmini Nagaraju: ಡಾ. ಪದ್ಮಿನಿ ನಾಗರಾಜುಗೆ ಆರ್ಯಭಟ ಪ್ರಶಸ್ತಿ
Dr Padmini Nagaraju: ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಹಿರಿಯ ಲೇಖಕಿ ಡಾ. ಪದ್ಮಿನಿ ನಾಗರಾಜು ಅವರಿಗೆ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರು: ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ 48ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸಿದ ಹಿರಿಯ ಲೇಖಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರಿಗೆ (Dr Padmini Nagaraj) ಈ ಸಾಲಿನ ʻಆರ್ಯಭಟʼ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ | International Booker Prize: ಬಲ್ಗೇರಿಯಾದ ಜಾರ್ಜಿ ಗೊಸ್ಪೊಡಿನೊವ್ ಕೃತಿ ʼಟೈಮ್ ಶೆಲ್ಟರ್ʼಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಕನ್ನಡಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರು ಹಾಗೂ ಚಲನಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ ಹಾಗೂ ಆರ್ಯಭಟ ಸಾಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ಎನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
-
ಕರ್ನಾಟಕ17 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ20 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ17 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ15 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ11 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ18 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕರ್ನಾಟಕ8 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
ಕ್ರಿಕೆಟ್7 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ