ಕಲೆ/ಸಾಹಿತ್ಯ
Book translation | ದಿನಕ್ಕೊಂದು ಪುಸ್ತಕ ಅನುವಾದಕ್ಕೆ ಮುಂದಾದ ತಮಿಳುನಾಡು ಸರ್ಕಾರ
ದಿನಕ್ಕೊಂದರಂತೆ 365 ಅತ್ಯುತ್ತಮ ಕೃತಿಗಳ ಅನುವಾದ ಮಾಡಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ.
ಚೆನ್ನೈ: ದಿನಕ್ಕೊಂದರಂತೆ 365 ಅತ್ಯುತ್ತಮ ಕೃತಿಗಳ ಅನುವಾದ ಮಾಡಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಈ ನಿಟ್ಟನಲ್ಲಿ ಹಲವು ದೇಶಗಳ ಪ್ರಕಾಶಕರೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
365ರಲ್ಲಿ ತಮಿಳಿನ 90 ಅತ್ಯುತ್ತಮ ಕೃತಿಗಳ ವಿದೇಶಿ ಭಾಷಾ ಅನುವಾದ, 60 ತಮಿಳು ಕೃತಿಗಳ ಇತರ ಭಾರತೀಯ ಭಾಷಾ ಅನುವಾದ, 170 ಇತರ ಭಾಷಾ ಕೃತಿಗಳ ತಮಿಳು ಅನುವಾದ, 45 ಕೃತಿಗಳ ಅನ್ಯಾನ್ಯ ಭಾಷಾ ಅನುವಾದಗಳು ಬರಲಿವೆ ಎಂದು ಅವರು ತಿಳಿಸಿದ್ದಾರೆ.
ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 3 ಕೋಟಿ ರೂ. ಅನುವಾದದ ಹಕ್ಕುಗಳಿಗಾಗಿ ತೆಗೆದಿರಿಸಿದೆ. 6 ಕೋಟಿ ರೂ.ಗಳನ್ನು ಪುಸ್ತಕ ಮೇಳಕ್ಕೆ ಮೀಸಲಾಗಿಟ್ಟಿದೆ. ಔದ್ಯಮಿಕ ಬೆಳವಣಿಗೆ, ಚೆಸ್ ಒಲಿಂಪಿಯಾಡ್, ಎಟಿಪಿ ಟೆನ್ನಿಸ್ ಟೂರ್ನಮೆಂಟ್‌ಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ತಮಿಳುನಾಡು ಈಗ ಪುಸ್ತಕಗಳ ಮೂಲಕವೂ ಸೆಳೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ | ಸಂಡೇ ರೀಡ್ | ಕ್ಯಾಪ್ಟನ್ ಗೋಪಿನಾಥ್ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ
ಪೆರಿಯಾರ್ ಅವರು ಪ್ರಕಾಶನ ಉದ್ಯಮ ಇನ್ನೂ ಬೆಳೆಯುವ ಮುನ್ನವೇ ಕಮ್ಯುನಿಸ್ಟ್ ಪುಸ್ತಕಗಳನ್ನು, ಲೆನಿನ್ ಕೃತಿಗಳನ್ನು ಭಾಷಾಂತರಿಸಿದ್ದರು. ಜಗತ್ತನ್ನು ತಮಿಳಿಗೆ ತರುವುದು ಹಾಗೂ ತಮಿಳನ್ನು ಜಗತ್ತಿಗೆ ಕೊಂಡೊಯ್ಯುವುದು ಈ ಎರಡೂ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ನಾಯಕರ ಕನಸನ್ನು ನನಸು ಮಾಡಲು ನಾವು ಯತ್ನಿಸುತ್ತಿದ್ದೇವೆ ಎಂದರು. ಕಳೆದ ಒಂದು ವರ್ಷದಲ್ಲಿ ಸರ್ಕಾರ 173 ಕೃತಿಗಳನ್ನು ಪ್ರಕಟಿಸಿದೆ. ಶ್ರೇಷ್ಠ ಕೃತಿಗಳು ಅನುವಾದಗೊಂಡಾಗ, ಭಾಷೆ ಸಹಾ ಬೆಳೆಯುತ್ತದೆ ಎಂದರು.
ಇದನ್ನೂ ಓದಿ | ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು
ಕರ್ನಾಟಕ
Book Release: ಮಾ.25ರಂದು ಕಲಬುರಗಿಯಲ್ಲಿ ಏಕಕಾಲಕ್ಕೆ 115 ಪುಸ್ತಕಗಳ ಲೋಕಾರ್ಪಣೆ
Book Release: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ 46ನೇ ವಾರ್ಷಿಕೋತ್ಸವದಲ್ಲಿ 115 ಪುಸ್ತಕಗನ್ನು ಬಿಡುಗಡೆ ಮಾಡಲಾಗುತ್ತದೆ.
ಕಲಬುರಗಿ: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಶ್ರೀ ಬಸವ ಪ್ರಕಾಶನದ 46ನೇ ವಾರ್ಷಿಕೋತ್ಸವ ಹಾಗೂ 115 ಪುಸ್ತಕಗಳ ಲೋಕಾರ್ಪಣೆ ಸಂಭ್ರಮವನ್ನು (Book Release) ಮಾರ್ಚ್ 25ರಂದು ಬೆಳಗ್ಗೆ 10.30ಕ್ಕೆ ನಗರದ ಸೂಪರ್ ಮಾರ್ಕೆಟ್‌ನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಡಬಾಳ ತೇರಿನಮಠದ ಶ್ರೀ ಷ.ಬ್ರ.ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದು, ಕಡಗಂಚಿ-ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಧಾರವಾಡದ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ 115 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ | Vice Chancellor: ರಾಜ್ಯದ 7 ನೂತನ ವಿವಿಗಳಿಗೆ ಕುಲಪತಿಗಳ ನೇಮಕ: ಸಚಿವ ಅಶ್ವತ್ಥನಾರಾಯಣ ಮಾಹಿತಿ
ಕಲಬುರಗಿ ದಕ್ಷಿಣ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕಲಸಚಿವ ಬಿ. ಶರಣಪ್ಪ ಭಾಗವಹಿಸಲಿದ್ದಾರೆ. ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥಾಪಕ ಬಸವರಾಜ ಜಿ.ಕೊನೇಕ ಉಪಸ್ಥಿತರಿರಲಿದ್ದಾರೆ.
ಉತ್ತರ ಕನ್ನಡ
Sirsi News: ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಪ್ರದಾನ
Sirsi News: ಸಿದ್ದಾಪುರದ ಮಗೇಗಾರಿನ ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆ ಅವರಿಗೆ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವದ ಅಂಗವಾಗಿ ನೀಡುವ ಸಾಹಿತ್ಯ ಸಿಂಚನ ಶ್ರೀ (Sahitya Sinchana Sri ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಶಿರಸಿ: ಇಲ್ಲಿನ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವದ ಅಂಗವಾಗಿ ನೀಡುವ ಸಾಹಿತ್ಯ ಸಿಂಚನ ಶ್ರೀ (Sahitya Sinchana Sri) ಪ್ರಶಸ್ತಿಯನ್ನು ಸಿದ್ದಾಪುರದ ಮಗೇಗಾರಿನ ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆ ಅವರಿಗೆ ನೀಡಿ ಅಭಿನಂದಿಸಲಾಯಿತು.
ನಗರದ ನೆಮ್ಮದಿ ಕುಠೀರದಲ್ಲಿ ಭಾನುವಾರ (ಮಾ.19) ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಗ್ರಾಮೀಣ ಭಾಗದಲ್ಲಿ ಇರುವ ನನ್ನ ಸಣ್ಣ ಸಾಹಿತ್ಯ ಸೇವೆಯನ್ನು ಗಮನಿಸಿ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ. ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ಇದೇ ಮೊದಲ” ಎಂದರು.
ಇದನ್ನೂ ಓದಿ: Auto Strike: ರ‍್ಯಾಪಿಡೋ ಬೈಕ್ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್
ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಉದ್ಘಾಟಿಸಿ, “ಕಾವ್ಯ ಸಂಕಲನದ ಗುಣಮಟ್ಟದ ಕುರಿತು ಪರಿಶೀಲನೆ ಮಾಡಬೇಕಾದ ಕಾಲದಲ್ಲಿ ಇದ್ದೇವೆ. ಸಾಹಿತ್ಯ ಸಂಘಟನೆಯಲ್ಲಿ ಜೀವನೋತ್ಸಾಹ ಉಳಿಸಿ ಬೆಳೆಸಬೇಕಿದೆ.
ಶೈಲಜಾ ಹೆಗಡೆ ಅವರು ಬರೆಯುವ ಮೂಲಕ ಸಾಹಿತ್ಯ ಆಸಕ್ತಿ ಉಳಿಸಿಕೊಂಡಿದ್ದಾರೆ” ಎಂದರು.
ಕೈಗಾದ ಸಾಹಿತಿ ಎಸ್.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಾಹಿತ್ಯವೆಂಬುದು ಖುಷಿಯನ್ನು ನೀಡುವುದರ ಜತೆಗೆ ಜೀವನದ ಪಾಠವಾಗುತ್ತದೆ. ಅತಿ ಹೆಚ್ಚು ಸಾಹಿತಿಗಳನ್ನು ಲೇಖಕರನ್ನು ಶಿರಸಿ ನೀಡುತ್ತಿದೆ. ಸಾಹಿತ್ಯ ವಾತಾವರಣವನ್ನು ಶಿರಸಿಯಲ್ಲಿ ನಿರ್ಮಾಣ ಮಾಡಲು ಹಲವರು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಸಿಂಚನ ಬಳಗ ಹಾಗೂ ಶಿರಸಿಯ ಸಾಹಿತ್ಯ ಕ್ಷೇತ್ರ ಇನ್ನಷ್ಟು ಬೆಳೆಯಲಿ” ಎಂದರು.
ಇದನ್ನೂ ಓದಿ: Swara Bhasker: ಪಾಕಿಸ್ತಾನದ ಪ್ರಸಿದ್ಧ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಮಿಂಚಿದ ನಟಿ ಸ್ವರಾ ಭಾಸ್ಕರ್
ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ರಾಜೀವ ಅಜ್ಜಿಬಳ ಅವರ ಸಮುದ್ಧರಣ ಮತ್ತು ದ್ವೀಪಾಂತರ ಹಾಗೂ ಲತಾ ಹೆಗಡೆ ಬಾಳೆಗದ್ದೆ ಅವರ ನುಡಿ ಸಿಂಚನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಶಿವ ಪ್ರಸಾದ ಹೆಗಡೆ ಹಿರೇಕೈ ಪ್ರಾಸ್ತಾವಿಕ ಮಾತನಾಡಿದರು. ಯಶಸ್ವಿನಿ ಕಾನಸೂರು ಸ್ವಾಗತಿಸಿದರು. ಭವ್ಯ ಹಳೆಯೂರು ನಿರ್ವಹಣೆ ಮಾಡಿದರು. ನಾಗವೇಣಿ ಹೆಗಡೆ ಪರಿಚಯಿಸಿದರು. ಸುಜಾತಾ ದಂಟಕಲ್ ವಂದಿಸಿದರು. ಹದಿನೈದಕ್ಕೂ ಅಧಿಕ ಕವಿಗಳು ಕಾವ್ಯ ವಾಚನ ಮಾಡಿದರು.
ಕರ್ನಾಟಕ
ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್ ಕೋಣೆಮನೆ
ಸಾಹಿತಿ ಮಂಜುನಾಥ ಅಜ್ಜಂಪುರ (Manjunatha Ajjampura) ವಿರಚಿತ “ನಿಜ ಇತಿಹಾಸದೊಂದಿಗೆ ಮುಖಾಮುಖಿ” ಅಂಕಣ ಸಂಕಲನ ಬಿಡುಗಡೆ ಸಮಾರಂಭವು ಬೆಂಗಳೂರಿನಲ್ಲಿ ಭಾನುವಾರ ನಡೆಯಿತು. ಈ ವೇಳೆ ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅರ್ಥಪೂರ್ಣವಾಗಿ ಮಾತನಾಡಿದರು.
ಬೆಂಗಳೂರು: ಇತಿಹಾಸ ವಸ್ತುನಿಷ್ಠವಾಗಿರಬೇಕೇ ಹೊರತು ಕಪೋಲಕಲ್ಪಿತವಾಗಿರಬಾರದು ಎಂದು ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಹೇಳಿದರು.
ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆಯ ವಾಡಿಯಾ ಸಭಾಂಗಣದಲ್ಲಿ ಭಾನುವಾರ (ಮಾ. 19) ಏರ್ಪಡಿಸಲಾಗಿದ್ದ “ನಿಜ ಇತಿಹಾಸದೊಂದಿಗೆ ಮುಖಾಮುಖಿ” ಅಂಕಣ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈಲ್ವೆ ಅಭಿವೃದ್ಧಿ ಆಗಲು ಬ್ರಿಟಿಷ್ ಸಂಸ್ಥಾನ ಕಾರಣ ಎಂಬುದು ನಿಜ. ಆದರೆ, ಅವರು ಅರಣ್ಯದ ಸಂಪತ್ತನ್ನು ದೋಚಲು ಇದನ್ನು ಬಳಕೆ ಮಾಡಿಕೊಂಡಿದ್ದರು ಎಂಬ ಸತ್ಯವನ್ನು ಬಹಳಷ್ಟು ಮಂದಿ ಬರೆಯವುದಿಲ್ಲ. ಟಿಪ್ಪು ರೇಷ್ಮೆ ಬೆಳೆಯನ್ನು ತಂದ, ಬಾಬಾ ಬುಡನ್ ಕಾಫಿ ಬೀಜವನ್ನು ತಂದ ಎಂಬ ಸುಳ್ಳು ಇತಿಹಾಸವನ್ನು ಬರೆಯಲಾಗಿದೆ. ಆದರೆ, ಟಿಪ್ಪು ಹಿಂದುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿದ್ದ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆದ್ದರಿಂದ ಸತ್ಯ ಎಲ್ಲರಿಗೂ ತಿಳಿಯಬೇಕು. ಈ ಕೆಲಸವು ಬರಹಗಾರರಿಂದ ಆಗಬೇಕು ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಕೆಟ್ಟ ಸಂಪ್ರದಾಯದ ಬಗ್ಗೆ ಇರಲಿ ಎಚ್ಚರ
ಯಾವುದೇ ವಿಷಯವನ್ನು ಕ್ಷಣಿಕ ಕಾರಣಕ್ಕಾಗಿ ಯಾರಾದರೂ ಪ್ರಸ್ತಾಪ ಮಾಡುತ್ತಾರೆಂದರೆ ಭವಿಷ್ಯದಲ್ಲಿ ನಾವು ಬಹಳ ದೊಡ್ಡ ಅಪಚಾರ ಮಾಡಿದಂತಾಗುತ್ತದೆ. ಅನೇಕರು ವ್ಯಾಪಾರಕ್ಕೋಸ್ಕರ, ಸ್ವಂತಕ್ಕೋಸ್ಕರ, ಪ್ರಚಾರಕ್ಕೋಸ್ಕರ ಹೆಸರುಗಳನ್ನು, ಇತಿಹಾಸಗಳನ್ನು ಬಳಸುವ ಅಪಾಯವಿದೆ. ಇಂಥ ಒಂದು ಕೆಟ್ಟ ಸಂಪ್ರದಾಯವನ್ನು ನಾವು ಹಾಕಿಕೊಟ್ಟಂತೆ ಆಗುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಟಿಪ್ಪು, ಉರಿಗೌಡ, ನಂಜೇಗೌಡರ ಬಗ್ಗೆ ಇಂದು ಕೇವಲ ರಾಜಕೀಯ ಚರ್ಚೆಗಳಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸತ್ಯ ಹೇಳುವವರನ್ನು ಗೌರವಿಸೋಣ
ಕಾ.ವೆಂ. ನಾಗರಾಜ್ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಸೇನಾನಿ ದೋಂಡಿಯಾ ವಾಘ್ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಿದ್ದಾರೆ. ದೋಂಡಿಯಾ ವಾಘ್ ಬಗ್ಗೆ ಎಷ್ಟು ಜನಕ್ಕೆ ಇಂದು ಗೊತ್ತಿದೆ? ಏಕೆ ಸ್ಮರಿಸಿಕೊಳ್ಳಬೇಕು ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ. ಇಂಥ ಕೆಲಸವನ್ನು ಇವರು ಇಂದು ಮಾಡುತ್ತಿದ್ದಾರೆ. ನಾವು ಇಂಥವರನ್ನು ಗೌರವಿಸುವ ಕೆಲಸ ಆಗಬೇಕು. ಸ್ವಾರ್ಥದ ಲವಲೇಶವೂ ಇಲ್ಲದೆ ಕೆಲಸ ಮಾಡುವವರ ಮೇಲೆ ನಾವು ಹೃದಯದಲ್ಲಿ ಗೌರವವನ್ನು ಇಟ್ಟುಕೊಳ್ಳಬೇಕು. ಸಾಹಿತಿ ಚಿದಾನಂದ ಮೂರ್ತಿಯವರು ಸತ್ಯ ಹೇಳಿದರು ಎನ್ನುವ ಕಾರಣಕ್ಕೆ ಅವರನ್ನು ಎಂದೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಸ್ವಾರ್ಥ, ಹಿತಾಸಕ್ತಿ ಇಲ್ಲದೆ ಕೆಲಸ ಮಾಡುವವರ ಕುರಿತು ಗೌರವವನ್ನು ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇತಿಹಾಸ, ಸಂಸ್ಕೃತಿ, ಗುಲಾಮಗಿರಿ ಬಗ್ಗೆ ಸಾಕಷ್ಟು ಬರಹಗಾರರು ಸತ್ಯ ಬರೆಯಲು ಹಿಂಜರಿಯುತ್ತಾರೆ. ಆದರೆ, ಸಾಹಿತಿ ಮಂಜುನಾಥ್ ಅಜ್ಜಂಪುರ ಅವರು ಅಕ್ಷರದ ಮೂಲಕ ಈ ಬಗ್ಗೆ ಸತ್ಯವನ್ನು ಬಿಚ್ಚಿಡುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಲೇಖನಗಳು ಶಾಶ್ವತವಾಗಿ ಉಳಿಯುತ್ತವೆ. ಮಂಜುನಾಥ್ ಅಜ್ಜಂಪುರ ಅವರು ವಾಯ್ಸ್ ಆಫ್ ಇಂಡಿಯಾದಲ್ಲಿ ಪರಿಚಯವಾಗಿದ್ದರು. ಅವರಲ್ಲಿ ಲೇಖನಗಳನ್ನು ಬರೆಸಲಾರಂಭಿಸಿದೆ. ಇದಕ್ಕೆ ನಾಡಿನ ಓದುಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಮಂಜುನಾಥ್ ಅವರ ಎದೆಗಾರಿಕೆಯ ಲೇಖನಗಳಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದವು. ಆದರೆ, ಅದನ್ನೆಲ್ಲ ಎದುರಿಸಿದ ಅವರು ಬರವಣಿಗೆಯನ್ನು ನಿಲ್ಲಿಸಲಿಲ್ಲ. ಈಗ ಈ ಪುಸ್ತಕವನ್ನು ಇಂದು ಹೊರತರಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಸ್ತಾರ Money Guide | PAN-Aadhaar link: ಆಧಾರ್ ಜತೆ ಮಾ. 31ರೊಳಗೆ ಲಿಂಕ್ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯ
ತಪ್ಪುಗಳನ್ನು ಸರಿಪಡಿಸೋಣ
ಲೇಖಕ ಮಂಜುನಾಥ್ ಅಜ್ಜಂಪುರ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ನನ್ನ ಮೊದಲ ಅಂಕಣ ಸಂಕಲನವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಸಾಕಷ್ಟು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸಾಧ್ಯವಾಗಿದೆ. ಪ್ರಮುಖ ವಿಚಾರವೆಂದರೆ ಗಂಭೀರ ವಿಚಾರಗಳನ್ನು ತಲುಪಿಸುವ ಕೆಲಸವು ಅತ್ಯಂತ ಕಷ್ಟಕರವಾಗಿದೆ. ಶಾಲಾ ಪುಸ್ತಕಗಳಲ್ಲಿ ಸಾಕಷ್ಟು ತಪ್ಪಾದ ಮಾಹಿತಿಗಳಿವೆ. ಸಂಸದೀಯ ವ್ಯವಸ್ಥೆ, ಕೈಗಾರಿಕಾ ಕ್ರಾಂತಿಯಂತಹ ಎಷ್ಟೋ ವಿಷಯಗಲೂ ನಮಗೆ ಪಾಶ್ಚಾತ್ಯರಿಂದ ಬಂದಿದೆ ಎಂಬ ಮಾಹಿತಿಗಳನ್ನು ಬಿತ್ತರಿಸಲಾಗಿದೆ. ಆದರೆ, ಇದು ತಪ್ಪು ಕಲ್ಪನೆಯಾಗಿದೆ. ಈ ರೀತಿಯ ತಪ್ಪುಗಳನ್ನು ಸರಿಪಡಿಸಬೇಕಾಗಿದೆ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೊಂದು ಮಹತ್ವದ ಪುಸ್ತಕವಾಗಿದೆ. ರಾಷ್ಟ್ರೋತ್ಥಾನದ ಮುದ್ರಣವು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಸುಳ್ಳಿನ ಮೇಲೆ ಸಾಕಷ್ಟು ನಡೆದಿದ್ದೇವೆ. ಸುಳ್ಳನ್ನು ಸತ್ಯ ಎಂದು ನಂಬಿದ್ದೇವೆ. ಸಾಹಿತ್ಯ ಪಠ್ಯ ಪುಸ್ತಕಗಳಲ್ಲಿ ಸಾಕಷ್ಟು ತಪ್ಪುಗಳಿವೆ. ದಾರಿ ತಪ್ಪಿಸುವಂತಿವೆ. ನಾವೆಲ್ಲ ತಲೆಯಲ್ಲಿ ಬ್ರಿಟಿಷ್ ಶಿಕ್ಷಣವನ್ನು ತುಂಬಿಕೊಂಡಿದ್ದೇವೆ. ಈ ಸುಳ್ಳುಗಳನ್ನು ಈ ಪುಸ್ತಕದಲ್ಲಿ ತೊಡೆದು ಹಾಕಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: WTC 2023 Final: ಓವಲ್ ಕದನಕ್ಕೆ ಕಾಯುತ್ತಿದ್ದೇವೆ; ಫೈನಲ್ಗೂ ಮುನ್ನವೇ ರೋಹಿತ್ ಪಡೆಗೆ ಎಚ್ಚರಿಕೆ ನೀಡಿದ ಸ್ಮಿತ್
ಈ ಪುಸ್ತಕದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹೊರತರಲಾಗಿದೆ. ಪಂಚಭೂತಗಳ ಆರಾಧನೆಯನ್ನು ಹೇಳಲಾಗಿದೆ. ಬಲಿಷ್ಠ ರಾಷ್ಟ್ರ ಕಟ್ಟುವ ಲೇಖನಗಳನ್ನು ಬರೆಯಲಾಗಿದೆ. ಬ್ರಿಟಿಷ್ ಗುಲಾಮಗಿರಿಯಿಂದ ಇನ್ನೂ ನಾವು ಹೊರ ಬಂದಿಲ್ಲ. ಬೌದ್ಧಿಕ ದಾಸ್ಯ ನಮ್ಮಲ್ಲಿ ಉಳಿದು ಹೋಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಪೋಷಕರು ಸಹ ಮಕ್ಕಳಿಗೆ ತಿಳಿ ಹೇಳುತ್ತಿಲ್ಲ, ಇದು ದೌರ್ಭಾಗ್ಯದ ಪರಿಸ್ಥಿತಿ. ಮನೆಯಲ್ಲಿ ಮೊದಲು ಉತ್ತಮ ವಾತಾವರಣ ನಿರ್ಮಾಣವಾಗಬೇಕು. ಶಾಲೆಯಿಂದಲೇ ಸಂಸ್ಕೃತಿ ಬಿತ್ತುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಟಿಪ್ಪುವಿನ ಬಗ್ಗೆ ಹರಿಪ್ರಕೋಶ್ ಕೋಣೆಮನೆ ಹೇಳಿದ ಮಾತು…
ಚಿಂತಕ, ಇತಿಹಾಸಕಾರ ಜಿ.ಬಿ. ಹರೀಶ್ ಮಾತನಾಡಿ, ಹಿಂದುತ್ವ ಇರಲು ಬಂದಿರುವ ಧರ್ಮವೇ ಹೊರತು ಹೋಗಲು ಬಂದಿರುವ ಧರ್ಮವಲ್ಲ ಎಂಬ ಬಗ್ಗೆ ಈ ಪುಸ್ತಕದಲ್ಲಿ ಹೇಳಲಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಸಾಕಷ್ಟು ಗುಲಾಮಗಿರಿಯನ್ನು ಅನುಭವಿಸಿದೆವು. ಬ್ರಿಟಿಷರು ನಮ್ಮನ್ನು ಆಳಿದ್ದು ಕೇವಲ 90 ವರ್ಷ. ಚಂದ್ರಶೇಖರ ಆಜಾದ್, ಸುಖದೇವ್ ತರಹದ ಅನೇಕ ಮಹನೀಯರು ಬ್ರಿಟಿಷರ ಆಳ್ವಿಕೆಯಲ್ಲಿ ಸಾಕಷ್ಟು ಕಾಡಿದರು. ಈ ಬಗ್ಗೆ ಇತಿಹಾಸದಲ್ಲೇ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನೂ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದರು.
ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ತಂದವರು ಎನ್ನುವುದು ಸತ್ಯ. ಅದಕ್ಕೆ ಅಡಿಪಾಯ ಹಾಕಿದವರು ನೆಹರು ಎನ್ನುವುದೂ ಸತ್ಯ. ಇನ್ನು ಎಡ್ವಿನಾ ಬ್ರಿಟಿಷರ ಗೂಢಚಾರಿಯಾಗಿ ನೆಹರುವನ್ನು ತನ್ನ ತೆಕ್ಕೆಗೆ ಹೇಗೆ ಹಾಕಿಕೊಂಡಳು ಎನ್ನುವ ನಿಜವನ್ನು ಎಲ್ಲಿಯೂ ಹೇಳಲಾಗಿಲ್ಲ. ವಿಯೆಟ್ನಾಂ ನಿಜವಾದ ಸ್ವಾತಂತ್ರ್ಯ ಪಡೆದ ರೀತಿ ನಾವು ಸಹ ಎಂದೋ ಪಡೆಯುತ್ತಿದ್ದೆವು. ಆದರೆ, ನಮ್ಮಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಕೈಗೂಡಲು ಬಿಡಲಿಲ್ಲ ಎನ್ನುವುದು ದುರಂತ ಎಂದು ಹರೀಶ್ ಹೇಳಿದರು.
ಓದುವ ಧೈರ್ಯವಿದ್ದವರಿಗೆ ಮಾತ್ರ ಈ ಪುಸ್ತಕ
ಈ ಪುಸ್ತಕ ಓದುವ ಧೈರ್ಯವಿದ್ದವರಿಗೆ ಮಾತ್ರ. ಇದರಲ್ಲಿ ಪೂರ್ತಿ ಸತ್ಯವನ್ನು ಹೇಳಲಾಗಿದೆ. ಗಾಂಧೀಜಿಯವರ ಬಗ್ಗೆ ಪೂರ್ತಿಯಾಗಿ ಸತ್ಯ ಹೇಳಲಾಗಿದೆ. ಇಷ್ಟು ದಿನ ಕೇವಲ ಅರ್ಧ ಸತ್ಯ ಹೇಳಲಾಗಿತ್ತು. ನಮ್ಮ ಇತಿಹಾಸದಲ್ಲಿ ನಳಂದದ ಬಗ್ಗೆ ಸಾಕಷ್ಟು ಸುಳ್ಳು ಇದೆ. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂದಾಗ ರಾಜೇಂದ್ರ ಪ್ರಸಾದ್ ತಡೆದಿದ್ದರು. ಪೊಲೀಸ್, ಮಿಲಿಟರಿಯನ್ನು ಹೆಚ್ಚಿಸದಿರಲು ಪಟೇಲ್ ಕಾರಣವಾಗಿದ್ದರು. ನಾನು ಎನ್ನುವ ಪರಿಧಿಯನ್ನು ಕುಟುಂಬಕ್ಕೆ ಸೀಮಿತ ಮಾಡಿಕೊಂಡಿರುವುದು ಇಷ್ಟು ದಿನದ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಬ್ರಿಟಿಷರು ಇತಿಹಾಸವನ್ನು ಮೊಘಲರಿಂದ ತೆಗೆದುಕೊಂಡರು. ವಕ್ಫ್ ಮಂಡಳಿ ಯವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಹಲವರಿಗೆ ತಿಳಿದಿಲ್ಲ. ಇದು ದೊಡ್ಡ ದುರಂತವಾಗಿದೆ ಎಂದು ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಿಜ ಇತಿಹಾಸದೊಂದಿಗೆ ಮುಖಾಮುಖಿ ಕೃತಿ ಬಿಡುಗಡೆ ಸಮಾರಂಭದ ವಿಡಿಯೊ ಇಲ್ಲಿದೆ
ಇದನ್ನೂ ಓದಿ: World’s Greatest Places: ಟೈಮ್ಸ್ನ ವಿಶ್ವ ಶ್ರೇಷ್ಠ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 2 ಪ್ರದೇಶಗಳು; ಯಾವವು? ಯಾಕೆ?
ಪಂಪ ಪ್ರಶಸ್ತಿ ಪುರಸ್ಕೃತ ಡಾ ಎಸ್. ಆರ್. ರಾಮಸ್ವಾಮಿ ಮಾತನಾಡಿ, ಇಂದು ಲೋಕಾರ್ಪಣೆಯಾದ ಪುಸ್ತಕ ಒಂದು ಒಳ್ಳೆಯ ಕೃತಿಯಾಗಿದೆ. ವಿಷಯ ಶ್ರೀಮಂತಿಕೆಯಿಂದ ಕೂಡಿದ ಪುಸ್ತಕ ಇದಾಗಿದೆ. ಇದು ಕೇವಲ ಅಂಕಣ ಬರಹದ ಪುಸ್ತಕ ಅಲ್ಲವೇ ಇಲ್ಲ. ಗಂಭೀರವಾದ, ಚಿರಕಾಲದ ಬರಹಕ್ಕೆ 40 ವರ್ಷದ ತಪಸ್ಸು ಇದೆ. ವಿಷಯದ ಹದ, ನೇರವಾದ ಮಾತನ್ನು ಇದರಲ್ಲಿ ಕಾಣಬಹುದು ಎಂದು ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಎಸ್. ಆರ್. ಲೀಲಾ ಮತ್ತಿತರ ಗಣ್ಯರು ಹಾಜರಿದ್ದರು.
ಕರ್ನಾಟಕ
Book Release: ಮೈಸೂರಿನಲ್ಲಿ ʼನಾನು ಕೃತಾರ್ಥಳು ನಾನು ಕೃತಜ್ಞಳುʼ ಪುಸ್ತಕ ಬಿಡುಗಡೆ
Book Release: ರಾಷ್ಟ್ರ ಸೇವಿಕಾ ಸಮಿತಿಯ ದ್ವಿತೀಯ ಸಂಚಾಲಿಕಾ ವಂದನೀಯ ಸರಸ್ವತೀ ತಾಯಿ ಆಪ್ಟೆ (ತಾಯೀಜಿ) ಅವರ ಕುರಿತ ಕನ್ನಡ ಅನುವಾದದ ‘ನಾನು ಕೃತಾರ್ಥಳು ನಾನು ಕೃತಜ್ಞಳು’ ಪುಸ್ತಕ ಬಿಡುಗಡೆ ಮಾಡಲಾಗಿದೆ.
ಮೈಸೂರು: ಮೈಸೂರಿನಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿ ದ್ವಿತೀಯ ಅರ್ಧ ವಾರ್ಷಿಕ ಬೈಠಕ್‌ನಲ್ಲಿ ‘ನಾನು ಕೃತಾರ್ಥಳು ನಾನು ಕೃತಜ್ಞಳು’ ಪುಸ್ತಕವನ್ನು (Book Release) ಬಿಡುಗಡೆ ಮಾಡಲಾಯಿತು. ಇದು ರಾಷ್ಟ್ರ ಸೇವಿಕಾ ಸಮಿತಿಯ ದ್ವಿತೀಯ ಸಂಚಾಲಿಕಾ ವಂದನೀಯ ಸರಸ್ವತೀ ತಾಯಿ ಆಪ್ಟೆ (ತಾಯೀಜಿ) ಅವರ ಬದುಕು ಹಾಗೂ ಉನ್ನತ ವ್ಯಕ್ತಿತ್ವ ಕುರಿತು ಲೇಖಕಿ ಮೃಣಾಲಿನಿ ಜೋಷಿ ಅವರು ಬರೆದಿರುವ ‘ಕೃತಾರ್ಥಮೀ ಕೃತಜ್ಞಮೀ’ ಮೂಲ ಮರಾಠಿ ಪುಸ್ತಕದ ಕನ್ನಡ ಅನುವಾದವಾಗಿದೆ. ರಾಷ್ಟ್ರ ಸೇವಿಕಾ ಸಮಿತಿಯ ಸುಕೃಪಾ ಟಸ್ಟ್ ವತಿಯಿಂದ ಈ ಕೃತಿಯನ್ನು ಹೊರತರಲಾಗಿದೆ.
ಮುಖ್ಯ ಅತಿಥಿ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಿ.ವಿ. ಸುಧಾಮಣಿ ಮಾತನಾಡಿ, ಈ ಪುಸ್ತಕ ವಂದನೀಯ ತಾಯೀಜಿ ಅವರ ಜೀವನದ ಆದರ್ಶಗಳನ್ನು ಸಾರಿದೆ, ಮೂಲ ಪುಸ್ತಕದ ಆಶಯ ಹಾಗೂ ಭಾವನೆಗಳನ್ನು ಕನ್ನಡ ಅನುವಾದಿತ ಪುಸ್ತಕದಲ್ಲಿ ಕಾಣಬಹುದಾಗಿದೆ. ಇದನ್ನು ಎಲ್ಲ ಮಹಿಳೆಯರೂ ಓದಲೇಬೇಕು ಎಂದು ತಿಳಿಸಿದರು.
ಪುಸ್ತಕದ ಲೇಖಕಿ ಎಸ್. ಉಮಾದೇವಿ ಅವರು ಮಾತನಾಡಿ, ಮೂಲ ಪುಸ್ತಕವನ್ನು ಓದಿದ ನಂತರ ಕನ್ನಡ ಅನುವಾದ ಮಾಡುವ ಹಂತದಲ್ಲಿ ವಂದನೀಯ ಸರಸ್ವತಿ ತಾಯಿ ಅವರ ಜೀವನಗಾಥೆಯು ತಮ್ಮ ಮೇಲೆ ಅಪಾರ ಪ್ರಭಾವವನ್ನು ಬೀರಿತು ಎಂದು ಹೇಳಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್; ಅವನು ಯುದ್ಧವನ್ನೇ ನಿಲ್ಲಿಸಿದ ಶಸ್ತ್ರರಹಿತ ಸೇನಾನಿ!
ಹೊಯ್ಸಳ ಪ್ರಾಂತ ಕಾರ್ಯವಾಹಿಕಾ ಮಾ. ವಸಂತಾ ಸ್ವಾಮಿ ಅವರು ಪುಸ್ತಕ ಪರಿಚಯ ಮಾಡಿ, ವಂದನೀಯ ಸರಸ್ವತಿ ತಾಯೀಜಿ ಅವರ ಪ್ರೇರಣಾದಾಯಿ ವ್ಯಕ್ತಿತ್ವ ಮತ್ತು ಸಮಾಜಮುಖಿ ಚಿಂತನೆ ಹಾಗೂ ಸೇವಾಕಾರ್ಯ ಕುರಿತು ಮಾತನಾಡಿ, ಈ ಪುಸ್ತಕದ ಅಧ್ಯಯನದಿಂದ ಎಲ್ಲ ಕಾರ್ಯಕರ್ತೆಯರೂ ಸ್ಫೂರ್ತಿ ಪಡೆದು
ರಾಷ್ಟ್ರ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹಿಕಾ ಮಾ. ಸಾವಿತ್ರಿ ಸೋಮಯಾಜಿ, ದಕ್ಷಿಣ ಮಧ್ಯ ಕ್ಷೇತ್ರ ಸಹ ಕಾರ್ಯವಾಹಿಕಾ ಮಾ. ಅಂಬಿಕಾ ನಾಗಭೂಷಣ್ ಉಪಸ್ಥಿತರಿದ್ದರು.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ11 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ11 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು