PM Narendra Modi: ಪ್ರಧಾನಿ ನರೇಂದ್ರ ಮೋದಿ ಬರೆದ ಮತ್ತೊಂದು ಗರ್ಬಾ ಸಾಂಗ್ ‘ಮಾಡಿ’ ಸಖತ್ ಹಿಟ್! Vistara News

ಕಲೆ/ಸಾಹಿತ್ಯ

PM Narendra Modi: ಪ್ರಧಾನಿ ನರೇಂದ್ರ ಮೋದಿ ಬರೆದ ಮತ್ತೊಂದು ಗರ್ಬಾ ಸಾಂಗ್ ‘ಮಾಡಿ’ ಸಖತ್ ಹಿಟ್!

PM Narendra Modi: ನವರಾತ್ರಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಗರ್ಬಾ ಹಾಡು ಬರೆದಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ.

VISTARANEWS.COM


on

PM Narendra modi penned new garba song and Video out
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಹಬ್ಬದ (Festive Season) ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮತ್ತೊಂದು ನವರಾತ್ರಿ ಹಾಡು (Navaratri Song) ಬರೆದಿದ್ದಾರೆ. ಭಾನುವಾರ ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ‘ಮಾಡಿ’ (Maadi Song) ಎಂಬ ಶೀರ್ಷಿಕೆಯ ಸಾಂಗ್ ಪೋಸ್ಟ್ ಮಾಡಿದ್ದಾರೆ. ಈ ಹಾಡಿಗೆ ಮೋದಿ ಅವರು ಸಾಹಿತ್ಯ ರಚಿಸಿದ್ದಾರೆ(Modi lyricist).

ಮಾಡಿ ಹಾಡು ನವರಾತ್ರಿಯ ಸೌಂದರ್ಯವನ್ನು ವರ್ಣಿಸುತ್ತದೆ. ಗುಜರಾತ್‌ನ ಶ್ರೀಮಂತ ಸಂಸ್ಕೃತಿ ಮತ್ತು ವರ್ಣರಂಜಿತ ಬದುಕನ್ನು ತೆರೆದಿಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಹಾಡಿಗೆ ದಿವ್ಯಾ ಕುಮಾರ್ ಅವರು ಧ್ವನಿ ನೀಡಿದ್ದಾರೆ. ಮನ್ಮೀತ್ ಸಿಂಗ್ ಮತ್ತು ಹರ್ಮೀತ್ ಸಿಂಗ್ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ.

ವಿಡಿಯೋವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ನಮಗೆ ಶುಭಕರವಾದ ನವರಾತ್ರಿಯು ಉದಯಿಸುತ್ತಿದ್ದಂತೆ, ಕಳೆದ ವಾರದಲ್ಲಿ ನಾನು ಬರೆದ ಗರ್ಬಾವನ್ನು ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ. ಹಬ್ಬದ ಲಯಗಳು ಎಲ್ಲರನ್ನೂ ಅಪ್ಪಿಕೊಳ್ಳಲಿ! ಈ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ ಮೀಟ್‌ ಬ್ರದರ್ಸ್ ಮತ್ತು ದಿವ್ಯಾ ಕುಮಾರ್ ಅವರಿಗೆ ನಾನು ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi: ಮೋದಿ ಈಗ ಗೀತ ರಚನೆಕಾರ; ಪ್ರಧಾನಿ ವಿರಚಿತ ಗರ್ಬಾ ಹಾಡನ್ನು ನೀವೂ ಕೇಳಿ!

ಯುಟ್ಯೂಬ್‌ ಕಾಮೆಂಟ್ ವಿಭಾಗದಲ್ಲಿ ಬಳಕೆದಾರರೊಬ್ಬರು, “ಈ ವಿಡಿಯೋ ನಾನು ನೋಡಿದ ಅತ್ಯಂತ ಸಾಂಸ್ಕೃತಿಕ/ಉತ್ಸಾಹದಾಯಕ ಕಿರುಚಿತ್ರಗಳಲ್ಲಿ ಒಂದಾಗಿದೆ. ಭಾರತದ ಜನರು ತುಂಬಾ ಸಂತೋಷವಾಗಿ ಕಾಣುತ್ತಿದ್ದಾರೆ! ಪ್ರಧಾನಿ ಮೋದಿಯವರಿಗೆ ಶುಭಾಶಯಗಳು ಎಂದು ಬರೆದಿದ್ದಾರೆ.

ಬಹುಪ್ರತಿಭಾವಂತ ಪ್ರಧಾನಮಂತ್ರಿ ಮೋದಿ ಅವರು, ಗೀತರಚನೆಕಾರ, ದಿಟ್ಟ ನಾಯಕ, ದಿಟ್ಟ ನಿರ್ಧಾರ ತೆಗೆದುಕೊಳ್ಳುವವರು, ಉತ್ತಮ ಸಂವಹನಕಾರ, ಶ್ರೇಷ್ಠ ವಾಗ್ಮಿ ಇತ್ಯಾದಿ ಎಂದು ಮತ್ತೊಬ್ಬ ಬಳಕೆದಾರರು ಹೊಗಳಿದ್ದಾರೆ. ಇನ್ನೊಬ್ಬರು, ಪ್ರಧಾನಿ ಮೋದಿಯವರಿಂದ ಸಂಪೂರ್ಣ ಸಂಗೀತದ ಆನಂದ! ಹಾಡು ನಿಜವಾಗಿಯೂ ನಮ್ಮ ರಾಷ್ಟ್ರದ ಚೈತನ್ಯವನ್ನು ಆವರಿಸುತ್ತದೆ. ಒಟ್ಟಿಗೆ ಆಚರಿಸೋಣ ಎಂದು ಹೇಳಿಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಲೆ/ಸಾಹಿತ್ಯ

ಗುಜರಾತ್‌ನ ಗರ್ಬಾ ನೃತ್ಯ ಈಗ ಅಮೂರ್ತ ಸಾಂಸ್ಕೃತಿಕ ಪರಂಪರೆ; ಯುನೆಸ್ಕೋ ಘೋಷಣೆ

Garba Dance: ಗುಜರಾತ್‌ನ ಸಾಂಪ್ರದಾಯಿಕ ವಿಶಿಷ್ಟ ಪ್ರಕಾರ ನೃತ್ಯ ಗರ್ಬಾಗೆ ಈಗ ವಿಶ್ವ ಮಾನ್ಯತೆ ದೊರೆತಿದೆ.

VISTARANEWS.COM


on

Garba Dance entered Intangible Cultural Heritage UNESCO declares
Koo

ನವದೆಹಲಿ: ಗುಜರಾತ್‌ನ (Gujarat) ಸಾಂಪ್ರದಾಯಿಕ ಗರ್ಬಾ ನೃತ್ಯವನ್ನು (Garba Dance) ವಿಶ್ವ ಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಮೂರ್ತ ಪರಂಪರೆ ಎಂದು ಘೋಷಣೆ ಮಾಡಿದೆ(Intangible Cultural Heritage). ಯುನೆಸ್ಕೋ (UNESCO) ಈ ಘೋಷಣೆಯ ಪೋಸ್ಟ್ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡು, ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಹೊಸ ಸೇರ್ಪಡಣೆ; ಭಾರತದ ಗುಜರಾತ್ ನೃತ್ಯ ಗರ್ಬಾ. ಅಭಿನಂದನೆಗಳು ಎಂದು ಹೇಳಿದೆ.

ಬೋಟ್ಸ್‌ವಾನಾದ ಕಸಾನೆಯಲ್ಲಿರುವ ಕ್ರೆಸ್ಟಾ ಮೊವಾನಾ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಇಂಟರ್‌ಗವರ್ನಮೆಂಟಲ್ ಕಮಿಟಿಯ 18 ನೇ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಅಧಿವೇಶನವು ಡಿಸೆಂಬರ್ 4ರಂದು ಆರಂಭವಾಗಿದ್ದು, ಡಿಸೆಂಬರ್ 9ರವರೆಗೂ ನಡೆಯಲಿದೆ ಎಂದು ಯುನೆಸ್ಕೋ ಹೇಳಿದೆ. ಗರ್ಬಾ, ಹಿಂದೂ ಹಬ್ಬವಾದ ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ಧಾರ್ಮಿಕ ಮತ್ತು ಭಕ್ತಿಯ ನೃತ್ಯವಾಗಿದೆ.

ಗರ್ಬಾ ನೃತ್ಯವು ಪದ್ಧತಿಯಾಗಿ, ಪ್ರದರ್ಶನ, ಅನುಕರಣೀಯ ಮತ್ತು ವೀಕ್ಷಣೆಯ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪೀಳಿಗೆಳಿಗೆ ಪ್ರಸರಣವಾಗುತ್ತಿದೆ ಎಂದು ಯುನೆಸ್ಕೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗರ್ಬಾ ಮಾತ್ರವಲ್ಲದೇ, ಬಾಂಗ್ಲಾದೇಶದ ಚಿತ್ತಾರ ಹೊಂದಿರುವ ರಿಕ್ಷಾ, ಇಂಡೋನೇಷ್ಯಾದ ಜಾಮು ವೆಲೆನೆಸ್ ಕಲ್ಚರ್, ಥಾಯ್ಲೆಂಡ್‌ನ ಸಾಂಗಕ್ರನ್, ಸಾಂಪ್ರದಾಯಿಕ ಥಾಯಲ್ ಹೊಸ ವರ್ಷದಾಚರಣೆ ಕೂಡ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಜಾಗ ಪಡೆದಿವೆ.

ಭಾರತದ ಹಲವು ಆಚರಣೆಗಳು ಈ ಪಟ್ಟಿಯಲ್ಲಿವೆ. ಗರ್ಬಾ ನೃತ್ಯವು 14ನೇ ಎಂಟ್ರಿಯಾಗಿದೆ. ಪಂಜಾಬ್‌ನ ಜಂಡಿಯಾಲ ಗುರುವಿನ ಥಥೇರರ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಕರಕುಶಲ ಪಾತ್ರೆಗಳು, ನೌರೋಜ್ ಹಬ್ಬ, ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ರಾಮಲೀಲಾ ಮತ್ತು ವೇದ ಪಠಣಗಳು ಈ ಪಟ್ಟಿಯಲ್ಲಿ ಈಗಾಗಲೇ ಜಾಗ ಪಡೆದಿವೆ.

ಈ ಸುದ್ದಿಯನ್ನೂ ಓದಿ: Garba Fever: ನವರಾತ್ರಿ ಹಿನ್ನೆಲೆ ಕಾವೇರಿದ ಗರ್ಬಾ ಜ್ವರ; ಮುಂಬೈ ರೈಲಿನಲ್ಲಿ ಹೆಜ್ಜೆ ಹಾಕಿದ ಅಂಕಲ್‌ಗಳು!

Continue Reading

ಅಂಕಣ

ದಶಮುಖ ಅಂಕಣ: ಬೆಳಗೆಂಬ ಬೆರಗು!

ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ಮಾತಿನಂತೆ, ಮುಂಜಾನೆಯ ಮೆಲುಗಾಳಿಯಲ್ಲಿ, ಎಳೆಕಿರಣದ ಬಿಸುಪಿನಲ್ಲಿ, ಇಬ್ಬನಿಯ ತಬ್ಬುಗೆಯಲ್ಲೇ ಅನಂತನನ್ನು ಅರಸಿದವರು ನಮ್ಮ ಕವಿಗಳು.

VISTARANEWS.COM


on

winter morning
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ಈ ಮಾಗಿಯ ಬೆಳಗುಗಳು (winter mornings) ಎಂದಿಗೂ ಮಾಗುವುದೇ ಇಲ್ಲ! ಕಾರಣ, ಪ್ರತಿ ಬೆಳಗ್ಗೆಯೂ ನಿದ್ದೆ ಮಾಗುವ ಮುನ್ನವೇ ಏಳಬೇಕು. ಇದರರ್ಥ ನಾವೇನು ನಸುಕಿನ ನಾಲ್ಕಕ್ಕೆ ಏಳುತ್ತೇವೆಂದಲ್ಲ, ಬೆಳಗ್ಗೆ ಏಳಕ್ಕೆ ಎದ್ದರೂ ನಿದ್ದೆ ಹರಿಯುವುದಿಲ್ಲ. ಬಲಿತು ಹಣ್ಣಾಗದ, ಅಪಕ್ವ ನಿದ್ದೆಯನ್ನು ಒದ್ದು ಏಳುವ ಸಾಹಸ ಸಣ್ಣದಲ್ಲ. ಬೆಚ್ಚನೆಯ ಹೊದಿಕೆಯನ್ನು ನಾವೇ ಅಪ್ಪಿ ಹಿಡಿದಿರುತ್ತೇವೋ, ಅದೇ ನಮ್ಮನ್ನು ಬಿಡುವುದಿಲ್ಲವೋ ಎಂಬ ಗೊಂದಲದ ನಡುವೆ ಏಳುವುದೆಂದರೆ, ನಮ್ಮ ಇಚ್ಛಾಶಕ್ತಿಯ ಪರೀಕ್ಷೆಯ ಕಾಲವೇ ತಾನೆ? ಕಿರುಚುವ ಅಲರಾಂನ ಬಾಯಿಗೆ ಬಡಿಯುವಾಗ ಮುಂಬೆಳಗೂ ಗೋಚರಿಸದಿದ್ದರೆ, ಗಂಟೆಯನ್ನು ಮತ್ಮತ್ತೆ ಪರಾಂಬರಿಸಬೇಕಾಗುತ್ತದೆ. ʻಈಗಿನ್ನೂ ನಡುರಾತ್ರಿ!ʼ ಎಂಬ ಹುಸಿ ಭಾವವನ್ನು ಕೊಡವಿಕೊಂಡು ಒಮ್ಮೆ ಕಿಟಕಿಯಾಚೆಗೆ ಹಣುಕಿದರೆ ಕಾಣುವುದು- ʻ…ಬರಿ ಬೆಳಗಲ್ಲೋ ಅಣ್ಣಾʼ!

ದಿನವೂ ಅದೇ ಬೆಳಗು, ಅದೇ ಬೈಗು… ಒಮ್ಮೆಯಾದರೂ ಸಾಕೆನಿಸಿದ್ದು ಉಂಟೇ? ನವನವೋನ್ಮೇಷಶಾಲಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಪ್ರತಿ ಋತುವಿಗೆ, ಪ್ರತಿ ದಿನಕ್ಕೆ, ಪ್ರತಿ ಸ್ಥಳಕ್ಕೆ, ಪ್ರತಿ ಜೀವಕ್ಕೆ, ಭಾವಕ್ಕೆ, ಭಕುತಿಗೆ ಪ್ರತಿಯೊಂದು ಸೂರ್ಯೋದಯವೂ (Sunrise) ಭಿನ್ನ, ಅನನ್ಯ. ಸೂರ್ಯನ ಹುಟ್ಟಿನ ಹೊರತಾಗಿ ಜಗತ್ತಿನ ಇನ್ಯಾವ ಹುಟ್ಟೂ ಈ ಪರಿಯಲ್ಲಿ ಶುದ್ಧ ಆನಂದದ ಅನುಭೂತಿಯನ್ನು ನೀಡಲಿಕ್ಕಿಲ್ಲ. ಇಷ್ಟೊಂದು ನಿತ್ಯನೂತನ ಎನಿಸಿದ ಸೃಷ್ಟಿಕ್ರಿಯೆಯೊಂದು ಕವಿಗಳ ಕಣ್ಣಿಗೆ ಗೋಚರಿಸಿದ್ದು ಹೇಗೆ (sunrise in poetry) ಎಂಬ ಸಹಜ ಕುತೂಹಲವಿದು. ಇದೇ ಹಿನ್ನೆಲೆಯಲ್ಲಿ, ಕವಿ ಕಣ್ಣಿನಲ್ಲಿ ರವಿ ಮೂಡಿದ ಬಿಂಬಗಳನ್ನು ಅರಸುತ್ತಾ ಹೊರಟಿದ್ದಾಗಿದೆ.

ಬೇಂದ್ರೆ ಕಾವ್ಯದ ಅನುಸಂಧಾನದಲ್ಲಿ ಶಬ್ದಕ್ಕೆ ಅರ್ಥಗಳನ್ನು ಹುಡುಕುವುದು ರಸಾವಿಷ್ಕಾರದ ಮಿತಿ. ವಾಚ್ಯದಿಂದ ಚಿತ್ತವೃತ್ತಿಯತ್ತ ಸಾಗಿದಾಗಲೇ ಕಾವ್ಯ ದಕ್ಕುವುದು. ಆದಾಗ್ಯೂ ಶಬ್ದಗಳಲ್ಲಿ ಹಿಡಿಯುವುದಕ್ಕೆ ಇದೊಂದು ಪ್ರಯತ್ನ. ಬೆಳಗು ಎನ್ನುವುದು ಬೇಂದ್ರೆಯವರನ್ನು ಭಾವಸಮಾಧಿಗೆ ದೂಡಿದ್ದು ಎಷ್ಟು ಬಾರಿಯೊ! ಈ ಸಮಯವು ಅವರಿಗೆ ಒಮ್ಮೆ ಮುತ್ತಿನ ನೀರಿನ ಎರಕದಂತೆ ಕಂಡರೆ, ಇನ್ನೊಮ್ಮೆ ಬೆಳಕೆಂಬ ಬೇಟೆಗಾರನಂತೆ ಕಾಣುತ್ತದೆ. ಈ ನಿತ್ಯ ನಾಟಕರಂಗಕ್ಕಾಗಿ ಅವರೊಮ್ಮೆ ʻಉಷಾಸೂಕ್ತʼವನ್ನು ಹಾಡಿದರೆ ಇನ್ನೊಮ್ಮೆ ʻಸೂರ್ಯನ ಹೊಳಿʼಯನ್ನೇ ಹರಿಸುತ್ತಾರೆ. ಅವರ ʻವಸಂತ ಮುಖʼ ಎನ್ನುವ ಕವನದಲ್ಲಿ, “ಉದಿತ ದಿನ! ಮುದಿತ ವನ/ ವಿಧವಿಧ ವಿಹಗಸ್ವನ/ ಇದುವೆ ಜೀವ, ಇದು ಜೀವನ/ ಪವನದಂತೆ ಪಾವನ” ಎಂದು ಬಣ್ಣಿಸುತ್ತಾರೆ. ಇದೀಗ ಬೆಳಕು ಒಡೆದ ಕ್ಷಣದಲ್ಲಿ ಸುತ್ತಲಿನ ವನ, ವನವಾಸಿಗಳೆಲ್ಲ ಸಚೇತನರಾಗುತ್ತಾ, ಜೀವ-ಜೀವನದ ನಡುವಿನ ಸಾಮರಸ್ಯವೆಂಬುದು ಉಷಾಕಾಲದ ಗಾಳಿಯಷ್ಟೇ ಶುದ್ಧವಾಗಿ ಭಾಸವಾಗುತ್ತಿದೆ ಅವರಿಗೆ.

ಇನ್ನೊಂದು ಕವನದಲ್ಲಿ ಬೆಳಗು- ರಾತ್ರಿಗಳ ನಡುವಿನ ಅನನ್ಯ ನಂಟು ಅವರನ್ನು ಸೆಳೆಯುತ್ತದೆ. “ಬೆಳಗು ಗಾಳಿ ತಾಕಿ ಚಳಿತು/ ಇರುಳ ಮರವು ಒಡೆದು ತಳಿತು/ ಅರುಣ ಗಂಧ ಹರಹಿ ಒಳಿತು/ ನಸುಕು ಬಂತು” ಎಂದು ಸಂಭ್ರಮಿಸುತ್ತಾರೆ. ಉದಯಕಾಲದ ವರ್ಣನೆಯನ್ನು ಹೊತ್ತ ಮತ್ತೊಂದು ಕವನದಲ್ಲಿ, “ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್‌ ಎಂದು ಬಿಟ್ಟ ಮಾರ/ ಗುಡಿಗೋಪುರಕ್ಕು ಬಲೆ ಬೀಸಿ ಬಂದ, ಅಗೊ ಬೆಳಕು ಬೇಟೆಗಾರ” ಎನ್ನುವ ಕುಶಲ ಉಪಮೆಯನ್ನು ಚಿತ್ರಿಸುತ್ತಾರೆ. “ಸೂರ್ಯನ ಹೊಳಿ” ಎನ್ನುವ ಕವನದಲ್ಲಿ ಒಡನಾಟಕ್ಕಾಗಿ ಹಂಬಲಿಸುತ್ತದೆ ಕವಿಮನ. “ಬಂದದ ಸೂರ್ಯನ ಹೊಳಿ/ ನಡೀ ಮೈತೊಳಿ, ನೀರಿನ್ಯಾಗಿಳಿ/ ಬಾ ಗೆಣೆಯಾ, ಯಾಕ ಮೈಛಳೀ” ಎಂದು ಬಿಸಿಲಲ್ಲೇ ತೋಯಿಸಿಬಿಡುತ್ತಾರೆ. ಅವರ ಪಾಲಿಗೆ ಬೆಳಗೆಂದರೆ ಕೇವಲ ದೃಶ್ಯವೈಭವವಲ್ಲ, ಇಡೀ ಲೋಕವನ್ನು ಸಚೇತನಗೊಳಿಸುವ ಕ್ರಿಯೆ. ಹಾಗಾಗಿಯೇ ಬೆಳಗೆನ್ನುತ್ತಿದ್ದಂತೆ ಅಷ್ಟೊಂದು ವೈವಿಧ್ಯಮಯ ಭಾವಗಳ ಸಂಚಾರ ಅವರ ಕವನಗಳಲ್ಲಿ. “ಅರಿಯದು ಆಳವು ತಿಳಿಯದು ಮನವು/ ಕಾಣದೋ ಬಣ್ಣಾ/ ಕಣ್ಣಿಗೆ ಕಾಣದೋ ಬಣ್ಣಾ” ಎಂದು ಬೆಳಗಿನ ಬಣ್ಣವನ್ನು ಕಾಣಲೆಂದು ಭಾವತೀವ್ರತೆಯಿಂದ ಕಣ್ಮುಚ್ಚುತ್ತಾರೆ.

ಕುವೆಂಪು ಅವರ ಕಾವ್ಯಗಳಲ್ಲಿ ರವಿದರ್ಶನ ಹೇಗಿದೆ ಎಂಬ ಬಗ್ಗೆ ಪಿಎಚ್‌ಡಿಗಳನ್ನು ಮಾಡಿದ್ದರೆ ಅಚ್ಚರಿಯಿಲ್ಲ. ʻಉದಯರವಿʼ ಎನ್ನುವ ಅವರ ಮನೆಯ ಹೆಸರೇ ಸೂರ್ಯೋದಯದ ಬಗೆಗೆ ಅವರಿಗಿದ್ದ ಅಸೀಮ ಪ್ರೀತಿಯನ್ನು ಸೂಚಿಸುತ್ತದೆ. ಪ್ರತಿಯೊಂದು ಮಾಸ, ಋತುಗಳಲ್ಲಿ ʻಶಿಶುರವಿʼಯ ಬೆಳವಣಿಗೆ ಚೋದ್ಯಗಳನ್ನು ಹೃದ್ಯವಾಗಿ ಚಿತ್ರಿಸುತ್ತಾರವರು. ಅವರ ʻಶರತ್ಕಾಲದ ಸೂರ್ಯೋದಯʼ ಎಂಬ ಕವನದಲ್ಲಿ, “ಹಚ್ಚನೆ ಪಚ್ಚನೆ ವೇದಿಕೆಯಲ್ಲಿ/ ಸಾಸಿರಗಟ್ಟಲೆ ಮುತ್ತನು ಚೆಲ್ಲಿ/ ರನ್ನದ ಕಿರುಹಣತೆಗಳಲ್ಲಿ/ ಶ್ಯಾಮಲ ತೈಲದಿ ಹೊನ್ನಿನ ಬತ್ತಿ/ ಕಾಮನಬಿಲ್ಲಿನ ಬೆಂಕಿಯು ಹೊತ್ತಿ/ ಸೊಡರುರಿಯುತ್ತಿದೆ ಅಲ್ಲಲ್ಲಿ!” ಎಂದು ಹುಲ್ಲಿನ ತಲೆಯ ಇಬ್ಬನಿಯ ಮೇಲೆ ಶಿಶುರವಿಯ ಕಿರಣಗಳು ಮೂಡಿಸಿದ ಕಾಮನಬಿಲ್ಲಿನ ಸೊಡರುಗಳ ಅನೂಹ್ಯ ವರ್ಣನೆಯನ್ನು ಕಟ್ಟಿಕೊಡುತ್ತಾರೆ.

ಅವರ ಕಾವ್ಯ ಪ್ರಪಂಚದಲ್ಲಿ ಸುಮ್ಮನೊಂದು ಸುತ್ತು ಹೊಡೆದರೆ ಹೆಜ್ಜೆಹೆಜ್ಜೆಗೆ ಬಾಲರವಿ ಎದುರಾಗುತ್ತಾನೆ. ʻಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ ಈ ಜಗಹೃದಯ, ನೋಡು ತಳಿತ ತಳಿರ ನಡುವೆ ಅರುಣ ಕಿರಣ ಸರಿಯ ಸುರಿಸಿ, ಈ ಸುಂದರ ಪ್ರಾತಃಕಾಲದಿ, ಏನಿದೀ ದಿವ್ಯ ದೃಶ್ಯʼ ಎಂದು ಜಗದ ಸುತ್ತುಗಟ್ಟಿ ಪ್ರಾತಃಕಾಲವನ್ನು ಬಣ್ಣಿಸುತ್ತಾರವರು. ʻಉಷೆಯು ನಿಶೆಯ ಚುಂಬಿಸುವʼ ಆ ಘಳಿಗೆಯಲ್ಲಿ, “ಉದಯಿಸಿ ಬರೆ ಬಾಲರವಿ, ಉದಯಗಿರಿ ಲಲಾಟದಿ/ ಧ್ಯಾನಲೀನನಾಗೆ ಕವಿ ಶೈಲ ಶಿಲಾ ಪೀಠದಿ” ಎಂದು ಕವಿಮನ ಧ್ಯಾನಕ್ಕೆ ಜಾರುತ್ತದೆ. ʻಪ್ರಾತಃಕಾಲʼ ಎಂಬ ಕವಿತೆಯಲ್ಲಿ, “ಆಹ! ನಾಕವೆ ನಮ್ಮ ಲೋಕಕೆ ಕಳಚಿ ಬಿದ್ದಿದೆ ಬನ್ನಿರಿ! ತುಂಬಿಕೊಳ್ಳಲು ನಿಮ್ಮ ಹೃದಯದ ಹೊನ್ನ ಬಟ್ಟಲ ತನ್ನಿರಿ” ಎಂದು ಸಂಭ್ರಮಿಸುತ್ತಾರೆ.

ಭಾದ್ರಪದದ ಸುಪ್ರಭಾತ, ಫಾಲ್ಗುಣ ಮಾಸದ ಸೂರ್ಯೋದಯ, ಶರತ್ಕಾಲದ ಸೂರ್ಯೋದಯ, ಆಷಾಢ ಸುಪ್ರಭಾತ, ವೈಶಾಖದ ಸೂರ್ಯೋದಯ- ಹೀಗೆ ಕಾಲಕಾಲಕ್ಕೆ ಉದಯರವಿಯ ಸೌಂದರ್ಯವನ್ನವರು ವರ್ಣಿಸಿದ್ದಾರೆ. ಎಲ್ಲಿಯವರೆಗೆಂದರೆ ರವಿಯನ್ನು ತನ್ನ ಕೆಳೆಯನಂತೆ ಕಂಡು ಕಾಲೆಳೆಯುವ ಸಾಲುಗಳೂ ಇವೆ. “ಬರಿ ಬಣಗು ಬ್ರಹ್ಮಚಾರಿಯೊ ನೀನು ಹಾಗಿದ್ದರೆ/ ಬುದ್ಧಿ ಹೇಳುವೆ ಕೇಳು, ಬೇಗನೆ ಮದುವೆಯಾಗು/ ಉಷೆಯ ಊರೊಳು ಇನಿತು ತಳುವಿ/ ಬರಬಹುದಂತೆ” ಎಂದು ಸೂರ್ಯನನ್ನು ಛೇಡಿಸುತ್ತಾರೆ.

Morning Vastu Tips

ಜಿ.ಎಸ್.‌ ಶಿವರುದ್ರಪ್ಪನವರ ಕವಿತೆಯಲ್ಲಿ ರವಿ ಮತ್ತು ಕವಿಯ ನಡುವಿಗೊಂದು ಸುಂದರ ಆಟ ನಡೆಯುತ್ತಿದೆ. “ಯಾರವರು ಯಾರವರು ಯಾರು?/ ಬಾಗಿಲಲಿ ಬಂದವರು ನಿಂದವರು ಯಾರು? ಒಳಗೆಲ್ಲಾ ಬೆಳಕನ್ನು ಚೆಲ್ಲಿದವರಾರು? ತುಂಬಿದ್ದ ಕತ್ತಲನು ಕಳೆದವರು ಯಾರು?” ಎಂದು ಬಾಗಿಲಾಚೆಗೆ ಇರುವವನ ಬಗ್ಗೆ ಗೊತ್ತಿದ್ದೂ ಸೋಜಿಗ ತೋರುತ್ತಾರೆ. ಅವರ ಇನ್ನೊಂದು ಕವನದಲ್ಲಿ, “ಬಾಂದಳ ಚುಂಬಿತ ಶುಭ್ರ ಹಿಮಾವೃತ/ ತುಂಗ ಶೃಂಗದಲಿ ಗೃಹವಾಸಿ/ ದೀನ ಅನಾಥರ ದುಃಖಿ ದರಿದ್ರರ/ ಮುರುಕು ಗುಡಿಸಲಲಿ ಉಪವಾಸಿ!” ಎನ್ನುತ್ತ ಸೂರ್ಯನಿಗೆ ಉಪ್ಪರಿಗೆ ಮನೆ, ಮುರುಕು ಗುಡಿಸಲು- ಎಲ್ಲ ಒಂದೇ ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ. ಇನ್ನು, ಮಾಸ್ತಿ ವೆಂಕಟೇಶ ಅಯ್ಯಂಗಾರರ ನೇಸರನೂ ನಾಡನ್ನು ಬೆಳಗಿಸಲೆಂದೇ ಬಂದವ. “ಮೂಡಣ ಬೈಲಿಂದ ಮೇಲಕ್ಕೆ ಹಾರಿ/ ದೂರದ ಮಲೆಯ ತಲೆಯನೆ ಏರಿ” ಇರುಳನ್ನು ಹೊರಳಿಸುವವ.

ಇದನ್ನೂ ಓದಿ: ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

ನಮ್ಮ ಇಳೆವೆಣ್ಣಿನೊಂದಿಗೆ ನೇಸರನ ಪ್ರೇಮದಾಟ ಹೊಸದೇನಲ್ಲ. ಯಾವುದೇ ಬಂಧನಗಳಿಗೆ ಸಿಲುಕದೆಯೂ ಅವಿಚ್ಛಿನ್ನವಾಗಿ ಸಾಗಿಬಂದ ಅನಂತ ಪ್ರಣಯಿಗಳಿವರು. ಹಸಿರು ಸೀರೆಗೊಪ್ಪುವ ಹೂ ಕುಬಸವನ್ನು ತೊಟ್ಟು ಇಬ್ಬನಿಯ ಮಾಲೆ ಧರಿಸಿ ಕಾದವಳ ನಿರೀಕ್ಷೆ ಬಿ.ಆರ್.‌ ಲಕ್ಷ್ಮಣರಾಯರ ಕವನದಲ್ಲಿ ಹುಸಿ ಹೋಗಲಿಲ್ಲ. “ಕಂಡೊಡನೆ ನೇಸರನ ಕೆಂಪಾದವು ಕೆನ್ನೆ/ ಪುಲಕಿಸಿ ನಸು ಬಿಸಿಯೇರಿತು ಒಡಲು/ ಅವನು ಸೋಕಿದೊಡನೆ/ ನಾಚಿಕೆಯ ಮಂಜುತೆರೆ ಸರಿಸುತ್ತ ಪ್ರಿಯತಮನು/ ಇಳೆಯ ಚುಂಬಿಸಿದನು!” ಎಂಬಂತೆ ಕಾಣುತ್ತದೆ ಕವಿ ಕಣ್ಣಿಗೆ.

ಸೂರ್ಯೋದಯದ ರಂಗಿನಷ್ಟೇ ವೈವಿಧ್ಯಮಯ ಅದರ ವರ್ಣನೆಗಳು. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ʻಬಾ ಬಾ ಓ ಬೆಳಕೇ, ಕರುಣಿಸಿ ಈ ನೆಲಕೆʼ ಕವನದಲ್ಲಿ ಸೂರ್ಯನೆಂಬಾತ ಗೆಳೆಯ, ಪ್ರೇಮಿಯೆಲ್ಲಾ ಅಲ್ಲ. “ವಿಶ್ವದೆದೆಯ ಪದಕವೆ/ ಬಾಂದಳದ ತಿಲಕವೆ/ ನಿನ್ನೊಳಗಿರುವ ಸತ್ಯ ತೋರು/ ಬಂಗಾರದ ಫಲಕವೇ” ಎಂದು ವಿಶ್ವಕ್ಕೆಲ್ಲಾ ಸತ್ಯದರ್ಶನ ಮಾಡಿಸುವವನಂತೆ ಗೋಚರಿಸುತ್ತಾನೆ. ʻಚೆಲುವೆ ಯಾರೊ ನನ್ನ ತಾಯಿಯಂತೆʼ ಎಂಬ ಇನ್ನೊಂದು ಕವನದಲ್ಲಿ, ಉದಯರವಿಯು ಕೆಂಪಗೆ, ದುಂಡಗೆ ಭೂತಾಯಿಯ ಹಣೆಗಿಟ್ಟ ಬೊಟ್ಟಿನಂತೆ ಕಾಣುತ್ತಾನೆ ಕವಿಗೆ.

ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ಮಾತಿನಂತೆ, ಮುಂಜಾನೆಯ ಮೆಲುಗಾಳಿಯಲ್ಲಿ, ಎಳೆಕಿರಣದ ಬಿಸುಪಿನಲ್ಲಿ, ಇಬ್ಬನಿಯ ತಬ್ಬುಗೆಯಲ್ಲೇ ಅನಂತನನ್ನು ಅರಸಿದವರು ನಮ್ಮ ಕವಿಗಳು. ಮುಂಬೆಳಗಿನ ಹೊಂಬಣ್ಣದ ಎಳೆಯೊಂದೇ ಸಾಕು, ಅವರ ಮಾನಸ ಸರಸಿಯಲ್ಲಿ ತಿರೆ ಸಗ್ಗವಾಗುವುದಕ್ಕೆ; ಲೋಕ ಮೀರಿದ ಮೋಹದಲ್ಲಿ ಆ ನಾಕವನ್ನೂ ಮರೆಯುವುದಕ್ಕೆ! ಹಾಗಾಗಿ ಮಾಗಿಯ ಚಳಿ ಇದ್ದರಿರಲಿ, ಏಳಿ ಬೇಗ, ಕಾಣಿ ಬೆಳಗೆಂಬ ಬೆರಗ!

ಇದನ್ನೂ ಓದಿ: ದಶಮುಖ ಅಂಕಣ: ಶುಭಾಶಯ ಪತ್ರಗಳೆಂಬ ಚಿತ್ರ-ಕಾವ್ಯಗಳು

Continue Reading

ಕರ್ನಾಟಕ

Shirshendu Mukhopadhyay: ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಶೀರ್ಷೇಂಧು ಮುಖ್ಯೋಪಾಧ್ಯಾಯ ಆಯ್ಕೆ

Shirshendu Mukhopadhyay: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ನೀಡುವ 2023ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಬಂಗಾಳಿಯ ಸುಪ್ರಸಿದ್ಧ ಬರಹಗಾರ ಶೀರ್ಷೇಂಧು ಮುಖ್ಯೋಪಾಧ್ಯಾಯ ಆಯ್ಕೆಯಾಗಿದ್ದಾರೆ.

VISTARANEWS.COM


on

Shirshendu Mukhopadhyay
Koo

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ನೀಡುವ ʼಕುವೆಂಪು ರಾಷ್ಟ್ರೀಯ ಪುರಸ್ಕಾರ-2023ʼ ಕ್ಕೆ ಬಂಗಾಳಿ ಭಾಷೆಯ ಸುಪ್ರಸಿದ್ಧ ಬರಹಗಾರರಾದ ಶೀರ್ಷೇಂಧು ಮುಖ್ಯೋಪಾಧ್ಯಾಯ (Shirshendu Mukhopadhyay) ಆಯ್ಕೆ ಆಗಿದ್ದಾರೆ. ನವೆಂಬರ್ 17ರಂದು ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿ ಸಭೆಯಲ್ಲಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸಂಚಾಲಕರಾಗಿದ್ದ ಆಯ್ಕೆ ಸಮಿತಿಯಲ್ಲಿ ನಿರ್ಮಲ್ ಕಾಂತಿ ಭಟ್ಟಾಚಾರ್ಯ, ಗೀತಾ ವಿಜಯಕುಮಾರ್ ಹಾಗೂ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ತೀರ್ಪುಗಾರರಾಗಿದ್ದರು.

ಬಂಗಾಳಿ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ, ವರ್ತಮಾನದ ಬಹು ಮಹತ್ವದ ಮತ್ತು ಜನಪ್ರಿಯ ಲೇಖಕರಾದ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರನ್ನು 2023ರ “ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ | Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

ಜನಪ್ರಿಯ ಬರಹಗಾರರಾಗಿರುವ ಶೀರ್ಷೇಂಧು ಅವರು ತಮ್ಮ ಹೊಸತನದ ಬರವಣಿಗೆಗಳಿಂದ ಬಂಗಾಳಿ ಭಾಷಾ ಸಾಹಿತ್ಯವನ್ನೂ, ತನ್ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕಾದಂಬರಿ, ಪ್ರವಾಸಕಥನ. ಮಕ್ಕಳ ಪುಸ್ತಕಗಳು ಸೇರಿ ಸುಮಾರು 90 ಕೃತಿಗಳು ಇದುವರೆಗೆ ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವೂ ಸೇರಿದಂತೆ ಹಲವಾರು ಪುರಸ್ಕಾರಗಳು ಶೀರ್ಷೇಂಧು ಅವರಿಗೆ ದೊರೆತಿವೆ.

ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನವಾದ ಡಿಸೆಂಬರ್‌ 29ರಂದು ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ’ವನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಐದು ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ.

ಶೀರ್ಷೇಂಧು ಮುಖ್ಯೋಪಾಧ್ಯಾಯ ಪರಿಚಯ

ಬಂಗಾಳಿ ಭಾಷೆಯ ಮಹತ್ವದ ಕಥೆಗಾರರಾದ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರು, ಬ್ರಿಟಿಷ್ ಇಂಡಿಯಾದ (ಪ್ರಸ್ತುತ ಬಾಂಗ್ಲಾದೇಶದ) ಮೈಮೆನ್ಸಿಂಗ್ ಎಂಬಲ್ಲಿ 1935ರ ನವೆಂಬರ್ 9ರಂದು ಜನಿಸಿದರು. ಭಾರತ ವಿಭಜನೆಯ ಸಂದರ್ಭದಲ್ಲಿ ಅವರ ಕುಟುಂಬ ಕೋಲ್ಕತ್ತಾಗೆ ವಲಸೆ ಬಂದಿತ್ತು. ಆಗ ಶೀರ್ಷೇಂಧು 2 ವರ್ಷದ ಬಾಲಕ. ಅವರ ತಂದೆ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರಿಂದ, ಶೀರ್ಷೇಂಧು ಅವರ ಬಾಲ್ಯ ಮತ್ತು ಪ್ರಾರಂಭದ ಶಿಕ್ಷಣ ಅವಿಭಜಿತ ಬಂಗಾಳ, ಅಸ್ಸಾಂ ಮತ್ತು ಬಿಹಾರದಲ್ಲಿ ಕಳೆಯಿತು. ಕೂಚ್‌ಬಿಹಾರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಇಂಟರ್‌ಮಿಡಿಯೇಟ್ ಪಾಸಾದ ಅವರು, ಕೋಲ್ಕೊತಾ ವಿಶ್ವವಿದ್ಯಾಲಯದಿಂದ ಬಂಗಾಳಿ ಭಾಷೆಯಲ್ಲಿ ಸ್ನಾತಕ ಪದವಿ ಪಡೆದರು.

ಶಾಲಾಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಶೀರ್ಷೇಂಧು ಅವರು, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ‘ದೇಶ್’ ಎಂಬ ಬಂಗಾಳಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಈಗಲೂ ಆನಂದ ಬಜಾರ್ ಪತ್ರಿಕೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. 1959ರಲ್ಲಿ ಶೀರ್ಷೇಂಧು ಅವರ ಮೊದಲ ಕಥೆ ‘ದೇಶ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರ ಮೊದಲ ಕಾದಂಬರಿ ಘುನ್ಫೋಕ (Ghunpoka) 1967ರಲ್ಲಿ ದೇಶ್ ಪತ್ರಿಕೆಯ ‘ಪೂಜಾ’ ವಾರ್ಷಿಕ ಸಂಪುಟದಲ್ಲಿ ಪ್ರಕಟವಾಗಿತ್ತು. ಮೊದಲ ಮಕ್ಕಳ ಪುಸ್ತಕ ಮನೋಜ್‌ದೇರ್ ಅದ್ಭುತ್ ಬಾರಿ (Manojader Adbhut Bari) 1978ರಲ್ಲಿ ಪ್ರಕಟವಾಯಿತು. ಬರಹಗಾರರಾಗಿ ಜನಪ್ರಿಯರಾಗಿರುವ ಶೀರ್ಷೇಂಧು ಅವರು, ಇಲ್ಲಿಯವರೆಗೆ 90ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 50 ಕೃತಿಗಳು ಮಕ್ಕಳಿಗಾಗಿ ಬರೆದ ಪುಸ್ತಕಗಳೇ ಆಗಿರುವುದು ವಿಶೇಷ.

ಇವರ ಹಲವಾರು ಕತೆಗಳು, ಮಕ್ಕಳಿಗಾಗಿ ಕಾಮಿಕ್ ರೂಪದಲ್ಲಿ ಪ್ರಕಟವಾಗಿವೆ. ಜೊತೆಗೆ, ಹೊಸತಲೆಮಾರಿನ ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಇವರ ಹಲವಾರು ಕತೆ ಕಾದಂಬರಿಗಳು ಈ ಪುಸ್ತಕಗಳಾಗಿಯೂ ಆನ್‌ಲೈನ್‌ನಲ್ಲಿ ಲಭ್ಯವಿವೆ. ಆದ್ದರಿಂದ ಬಂಗಾಳಿಯಲ್ಲಿ ಶೀರ್ಷೇಂದು ಅವರು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಚಿರಪರಿಚಿತರಾಗಿರುವ ಅತ್ಯಂತ ಜನಪ್ರಿಯ ಲೇಖಕ ಎನ್ನಬಹುದು.

ಪಾರ್ತಿಬೊ (Parthibo), ನಯನ್‌ ಶ್ಯಾಮ್ (Nayan Shyama), ಪರಪರ್ (Parapar), ದುರ್ಬೀನ್ (Durbin), ಏಕಾದಶಿ ಓ ಭೂತ್ (Ekadashi O Bhoot) ಮೊದಲಾದ ಕೃತಿಗಳು ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಭ್ರಮಣ್ ಸಮಗ್ರ (BHRAMAN SAMAGRA) ಅವರ ಪ್ರವಾಸ ಕಥನ, ಬಂಗಾಳಿಯಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕೃತಿಯೂ ಹೌದು.

ಇವರ ಕತೆಗಳ ಗಟ್ಟಿತನದಿಂದಾಗಿ, ಸಿನಿಮಾ ಕ್ಷೇತ್ರದ ಸಂಪರ್ಕವೂ ಅನಾಯಾಸವಾಗಿ ದೊರೆತಿರುತ್ತದೆ. 1992ರಲ್ಲಿ ರಿತುಪರ್ಣೋ ಅವರ ನಿರ್ದೇಶನದಲ್ಲಿ ತಯಾರಾಗಿ ಬಿಡುಗಡೆಯಾದ, ಶೀರ್ಷೇಂಧು ಅವರ ಹೈರೇರ್ ಅಂಗ್ತಿ (Hirer Angti ) ಕಥೆಯಾಧಾರಿತ, ಅದೇ ಹೆಸರಿನ ಸಿನಿಮಾದಿಂದ ಪ್ರಾರಂಭಿಸಿ, ಇದುವರೆಗೆ 17 ಸಿನಿಮಾಗಳು ಇವರ ಕಥೆ-ಕಾದಂಬರಿಯನ್ನು ಆಧರಿಸಿ ಬಂದಿವೆ. ಬಹುತೇಕ ಬಂಗಾಳಿಯ ಎಲ್ಲ ಪ್ರಮುಖ ಸಿನಿಮಾ ನಿರ್ದೇಶಕರೂ ಇವರ ಕಥೆ ಕಾದಂಬರಿಗಳನ್ನು ಆಧರಿಸಿ ಸಿನಿಮಾ ಮಾಡಿರುವುದು ವಿಶೇಷ.

ಇದನ್ನೂ ಓದಿ | Mallepuram G Venkatesh: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಆತ್ಮಕಥನ ʼದಿಟದ ದೀವಟಿಗೆʼ ಲೋಕಾರ್ಪಣೆ

ಜನಪ್ರಿಯ ಕತೆಗಾರರಾಗಿರುವ ಶೀರ್ಷೇಂಧು ಅವರನ್ನು ಸಹಜವಾಗಿ ಹಲವಾರು ಸಾಹಿತ್ಯ ಪುರಸ್ಕಾರಗಳೂ ಹುಡುಕಿಕೊಂಡು ಬಂದಿವೆ. ಮುಖ್ಯವಾಗಿ, ಮಕ್ಕಳ ಸಾಹಿತ್ಯಕ್ಕಾಗಿ ವಿದ್ಯಾಸಾಗರ ಪುರಸ್ಕಾರ (1985), ಎರಡು ಬಾರಿ ಆನಂದ ಪುರಸ್ಕಾರ (1973 ಮತ್ತು 1990), ಮನಬ್ಜಮಿನ್ (Manahjamin) ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಬಹುಮಾನ (19689), ಬಂಗಬಿಭೂಷಣ್ ಪ್ರಶಸ್ತಿ (2012), ಎ.ಬಿ.ಪಿ. ಆನಂದ ಸೆರ ಬಂಗಾಳಿ ಪ್ರಶಸ್ತಿ ಮೊದಲಾದವು ಸೇರಿವೆ. ಇದಲ್ಲದೆ. 2021ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಕೂಡಾ ದೊರೆತಿರುತ್ತದೆ. ಅಶೋಕ್ ವಿಶ್ವನಾಥನ್‌ ಎಂಬುವವರು, ಸಾಹಿತ್ಯ ಅಕಾಡೆಮಿಗಾಗಿ ಶೀರ್ಷೇಂದು ಮುಖ್ಯೋಪಾಧ್ಯಾಯ್ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ.

Continue Reading

ಕಲೆ/ಸಾಹಿತ್ಯ

Mallepuram G Venkatesh: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಆತ್ಮಕಥನ ʼದಿಟದ ದೀವಟಿಗೆʼ ಲೋಕಾರ್ಪಣೆ

Mallepuram G Venkatesh: ಬೆಂಗಳೂರಿನ ಗಾಂಧಿಭವನದ ಸಭಾಂಗಣದಲ್ಲಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆತ್ಮಕಥನ ʼದಿಟದ ದೀವಟಿಗೆʼ ಕೃತಿಯನ್ನು ಬಿಡುಗಡೆ ಮಾಡಲಾಯಿತು.

VISTARANEWS.COM


on

Mallepuram g venkateshs autobiography
Koo

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ (Mallepuram G Venkatesh) ಅವರ ಆತ್ಮಕಥನ ʼದಿಟದ ದೀವಟಿಗೆʼ ಗ್ರಂಥ ಭಾನುವಾರ ಲೋಕಾರ್ಪಣೆಗೊಂಡಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಅಂಕಿತ ಪುಸ್ತಕ ಸಹಯೋಗದಲ್ಲಿ ಗಾಂಧಿಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ʼದಿಟದ ದೀವಟಿಗೆʼ ಕೃತಿಯನ್ನು ಬಿಡುಗಡೆ ಮಾಡಿದರು.

ಈ ವೇಳೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ಮಾತನಾಡಿ, ಆತ್ಮಕಥೆ ಎನ್ನುವುದು ಇತಿಹಾಸ, ಪ್ರವಾಸಕಥನವಾದರೆ ಅಲ್ಲಿ ವ್ಯಕ್ತಿ ಮರೆಯಾಗುತ್ತಾನೆ. ಸಾಹಿತ್ಯದ ಗದ್ಯ ಕೃತಿಯಾದರೆ ಅದು ಕಲ್ಪನಾ ಲೋಕದ ಗದ್ಯ ಕೃತಿಯಾಗಲಿದೆ. ಆದ್ದರಿಂದ ಆತ್ಮಕಥೆಗಳು ನೈಜತೆಯಿಂದ ಕೂಡಿರಬೇಕು. ಬಹಳಷ್ಟು ಜನ ಆತ್ಮಕಥೆಯ ಹೆಸರಿನಲ್ಲಿ ಸ್ವಗತವನ್ನು ಬರೆಯುತ್ತಾರೆ. ಆತ್ಮಕಥೆಯಲ್ಲಿ ಸ್ವ ಮತ್ತು ಅಹಂ ಇದ್ದರೆ ಅದು ಅಹಂಕಥನವಾಗುತ್ತದೆ. ಆತ್ಮಕಥೆ ಬರೆಯಬೇಕಾದರೆ ಮೊದಲು ಆ ವ್ಯಕ್ತಿಯೇ ಅದಕ್ಕೆ ಸಾಕ್ಷಿಯಾಗಬೇಕು. ಏಕೆಂದರೆ ತಾನು ಲೇಖಕನಾಗಿ ತನ್ನನ್ನು ತಾನು ಕಾಣದೇ ಒಬ್ಬ ಸಾಕ್ಷಿಯಾಗಿ ತನ್ನ ಜೀವನವನ್ನು ನೋಡಬೇಕಾಗುತ್ತದೆ. ಇಂತಹ ವಿಚಾರವನ್ನು ನಾನು ಮಲ್ಲೇಪುರಂ ಅವರ ಆತ್ಮಕಥೆಯಲ್ಲಿ ಕಂಡಿದ್ದೇನೆ ಎಂದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ವಿಶ್ರಾಂತ ಕುಲಪತಿ, ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರು ಮಾತನಾಡಿ, ʼದಿಟದ ದೀವಟಿಗೆ’ ಆತ್ಮಕಥೆಯಲ್ಲಿ ಎಲ್ಲೂ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆದಿಲ್ಲ. ನನ್ನ ಜೀವನದಲ್ಲಿ ಮೂರ್ನಾಲ್ಕು ಮಂದಿ ಬಹಳಷ್ಟು, ನೋವು, ಸಂಕಷ್ಟಗಳನ್ನು ಕೊಟ್ಟಿದ್ದರು. ಹೀಗಾಗಿ ಈ ಜೀವನವೇ ಬೇಡ ಅನಿಸಿದ್ದೂ ಇದೆ. ಆದರೆ ಅದ್ಯಾವುದನ್ನು ಕೂಡ ಆತ್ಮಕಥೆಯಲ್ಲಿ ಬರೆದುಕೊಂಡಿಲ್ಲ. ಗುರುಬಲ ಮತ್ತು ಮಿತ್ರ ಬಲದಿಂದ ಎಲ್ಲ ಸಂಕಷ್ಟಗಳನ್ನು ಗೆದ್ದಿದ್ದೇನೆ’ ಎಂದರು.

ನನ್ನ ಎಲ್ಲಾ ಸಾಹಿತ್ಯ ಸೇವೆಯಲ್ಲಿಯೂ ಹಲವಾರು ಸಾಹಿತ್ಯಕ ಗೆಳೆಯರ ಬೆಂಬಲವಿದೆ. ‘ದಿಟದ ದೀವಟಿಗೆ’ ಆತ್ಮಕಥನವನ್ನು ಹೊರತರಲು ಬಹಳಷ್ಟು ಮಂದಿ ಪ್ರೋತ್ಸಾಹವನ್ನು ನೀಡಿದ್ದಾರೆ. ಅನಾದಿಕಾಲದ ಗುರುಗಳಿಂದ ಹಿಡಿದು ಇತ್ತೀಚಿನ ಬರಹಗಾರರು ನನಗೆ ಪ್ರೀತಿಯನ್ನು ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರಿಗೂ ನಾನು ಕೃತಜ್ಞತೆ ತಿಳಿಸುತ್ತೇನೆ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಅವರು, ಮಾತನಾಡಿ. ತಮ್ಮ ಜತೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಮನಸ್ಥಿತಿ ಮಲ್ಲೇಪುರಂ ಅವರದ್ದು. ತಾನು ಬೆಳೆಯುದರ ಜತೆಗೆ ಇತರರನ್ನು ಬೆಳೆಸುವ ಪ್ರವೃತ್ತಿಯನ್ನು ಅವರು ಹೊಂದಿದ್ದಾರೆ. ಇಂದಿನ ಈ ಕಾರ್ಯಕ್ರಮವು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಮ್ಮುತ್ತಿದ್ದು, ಬಹಳಷ್ಟು ಖುಷಿ ತಂದಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ವಿದ್ವಾಂಸ ಎ.ವಿ. ಪ್ರಸನ್ನ, ಕಾದಂಬರಿಕಾರ ಕು. ವೀರಭದ್ರಪ್ಪ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮುಂತಾದವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ಅಖಿಲ ಕರ್ನಾಟಕ ಕೊರಮ ಸಂಘದ ಅಧ್ಯಕ್ಷ ಜಿ. ಮಾದೇಶ, ವಿಸ್ತಾರ ನ್ಯೂಸ್‌ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿರಣ್‌ಕುಮಾರ್ ಡಿ.ಕೆ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement
dengue flue
ಆರೋಗ್ಯ19 mins ago

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

Vistara Editorial, Government should conduct exam without any lapse
ಕರ್ನಾಟಕ40 mins ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ53 mins ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ1 hour ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ2 hours ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ2 hours ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್2 hours ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ9 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್9 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ14 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ14 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ20 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌