S P Balasubrahmanyam | ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಸ್ಮರಿಸೋಣ - Vistara News

ಎಸ್​ಪಿಬಿ ಸ್ಮರಣೆ

S P Balasubrahmanyam | ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಸ್ಮರಿಸೋಣ

VISTARANEWS.COM


on

S.P._Balasubramaniam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Legend Singer SPB | ತಮ್ಮ ಕಂಠಸಿರಿಯಿಂದಲೇ ಚಿತ್ರರಂಗದ ಸಿರಿ ಹೆಚ್ಚಿಸಿದ ಎಸ್‌ಪಿಬಿ

ದಂತಕತೆ ಗಾಯಕ ಎಸ್‌ಪಿಬಿ(SPB) ನಮ್ಮನ್ನು ಅಗಲಿ ಇಂದಿಗೆ(ಸೆ.25) ಎರಡು ವರ್ಷ. ಆದರೆ, ಅವರು ಹಾಡಿ ಬಿಟ್ಟು ಹೋದ ಹಾಡುಗಳಿಗೆ ಸಾವಿಲ್ಲ. ಯುಗ ಯುಗ ಕಳೆದರೂ ಅವರ ಹಾಡುಗಳು ನಮ್ಮನ್ನು ರಂಜಿಸುತ್ತಲೇ ಇರುತ್ತವೆ.

VISTARANEWS.COM


on

Koo

ಎಸ್‌ಪಿಬಿ ಎಂದೇ ಖ್ಯಾತರಾಗಿದ್ದ ಎಸ್‌ ಪಿ ಬಾಲುಸುಬ್ರಹ್ಮಣ್ಯಂ (SPB) ಅವರು ತಮ್ಮ ಕಂಠಸಿರಿಯಿಂದಲೇ ಭಾರತೀಯ ಚಿತ್ರರಂಗದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗವನ್ನು ಎಸ್‌ಪಿಬಿ ಅವರನ್ನು ಹೊರಗಿಟ್ಟು ನೋಡಲು ಸಾಧ್ಯವೇ ಇಲ್ಲ. ಸುಮಾರು ಐದು ದಶಕಗಳ ಕಾಲ ಅವರು ಕೇಳುಗರನ್ನು ರಂಜಿಸಿದರು. ಸಮ್ಮೋಹನಗೊಳಿಸಿದರು.

ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ, ತುಳು, ಪಂಜಾಬಿ, ಮರಾಠಿ ಹೀಗೆ ದೇಶದ ಎಲ್ಲ ಭಾಷೆಗಳಲ್ಲೂ ಎಸ್‌ಪಿಬಿ ಹಾಡಿದ್ದಾರೆ. ಐದು ದಶಕಗಳ ಅವಧಿಯಲ್ಲಿ 45 ಸಾವಿರ ಹಾಡುಗಳನ್ನು ಹಾಡುವುದೆಂದರೆ ಹುಡುಗಾಟವೇನಲ್ಲ. ಅದೇ ಕಾಲಕ್ಕೆ ಎಲ್ಲ ದಿಗ್ಗಜ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಇಳಯರಾಜಾ-ಎಸ್‌ಪಿಬಿ-ರಜಿನಿಕಾಂತ್ ಜೋಡಿ ಎಲ್ಲಡೆ ಮೋಡಿ ಮಾಡಿತ್ತು. ಕನ್ನಡದಲ್ಲೂ ಹಂಸಲೇಖ-ಎಸ್‌ಪಿಬಿ- ರವಿಚಂದ್ರನ್ ಜೋಡಿಗೆ ಇಂಥದ್ದೇ ಫ್ಯಾನ್ ಕ್ರೇಜ್ ಇತ್ತು. ಎಲ್ಲ ಭಾಷೆ ಚಿತ್ರರಂಗದ ಉತ್ಕೃಷ್ಟ ಸಂಗೀತ ನಿರ್ದೇಶಕರ ಜತೆ ಎಸ್‌ಪಿಬಿ ಕೆಲಸ ಮಾಡಿದ್ದಾರೆ. ಹಳೆಯ ಮ್ಯೂಸಿಕ್ ಡೈರೆಕ್ಟರ್‌ಗಳಿಂದ ಹಿಡಿದು ಹೊಸ ಕಾಲದ ಮ್ಯೂಸಿಕ್‌ ಡೈರೆಕ್ಟರ್‌ಗಳವರೆಗೂ ಎಸ್‌ಪಿಬಿ ಅವರ ಗೋಲ್ಡ್ ವಾಯ್ಸ್ ಸೆರೆ ಹಿಡಿದಿದೆ.

ಎಸ್

ಹುಟ್ಟಿದ್ದು ಕೋನೆಟಂಪೇಟೆಯಲ್ಲಿ…
ಎಸ್‌ಪಿಬಿ ಅವರು 1946ರ ಜೂನ್ 4ರಂದು ಇಂದಿನ ತಮಿಳುನಾಡಿನ ಕೋನೆಟಂಪೇಟೆಯಲ್ಲಿ ಜನಿಸಿದರು. ತಂದೆ ಎಸ್ ಬಿ ಸಾಂಬಮೂರ್ತಿ. ಅವರು ಉತ್ತಮ ಸಂಗೀತಗಾರರಾಗಿದ್ದರು ಮತ್ತು “ಹರಿಕಥಾ” ವಿದ್ವಾಂಸರಾಗಿದ್ದರು. ಸಹಜವಾಗಿಯೂ ಇದು ಬಾಲಕ ಎಸ್‌ಪಿಬಿ ಮೇಲೂ ಪ್ರಭಾವ ಬೀರಿತು. ಆದರೆ, ಬಾಲ್ಯದಲ್ಲಿ ಅವರೇನೂ ಶಾಸ್ತ್ರೀಯ ಸಂಗೀತವನ್ನು ಕಲಿತಿರಲಿಲ್ಲ. ಎಂಜಿನಿಯರಿಂಗ್ ಡಿಪ್ಲೋಮಾ ಮುಗಿಯುತ್ತಿದ್ದಂತೆ ಸಾರ್ವಜನಿಕವಾಗಿ ಸ್ಪರ್ಧೆಗಳಲ್ಲಿ ಅವರು ಹಾಡುತ್ತಿದ್ದರು.

ಚೆನ್ನೈನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಎಸ್‌ಪಿಬಿ ಭಾಗವಹಿಸಿಿದ್ದರು. ಸ್ಪರ್ಧೆಯಲ್ಲಿ ಗೆದ್ದ ಬಾಲು ಅವರಿಗೆ ಮ್ಯೂಸಿಕ್ ಡೈರೆಕ್ಟರ್ ಎಸ್ ಪಿ ಕೋದಂಡಪಾಣಿ ಅವರು ಬಹುಮಾನ ವಿತರಿಸಿದರು. ಆ ಬಳಿಕ 1966ರಲ್ಲಿ ತೆರೆ ಕಂಡ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರದಲ್ಲಿ ಹಾಡಲು ಎಸ್‌ಪಿಬಿ ಅವರಿಗೆ ಕೋದಂಡಪಾಣಿ ಅವರು ಅವಕಾಶ ನೀಡಿದರು. ಅಲ್ಲಿಂದ ಎಸ್‌ಪಿಬಿ ಹಿಂದೆ ತಿರುಗಿ ನೋಡಲಿಲ್ಲ. 1967ರಲ್ಲಿ ಅವರು ಕನ್ನಡದಲ್ಲಿ ಮೊದಲ ಹಾಡು ಹಾಡಿದರು. ನಕ್ಕರೆ ಅದೇ ಸ್ವರ್ಗದ ಚಿತ್ರದ ಮೂಲಕ ಕನ್ನಡಕ್ಕೂ ಪರಿಚಯಗೊಂಡರು. ಆ ಬಳಿಕ ಕನ್ನಡದ ಮನೆ ಮಗನಾಗಿಯೇ ಬೆಳೆದರು. ಎಸ್‌ಪಿಬಿ ಅವರು, ಒಂದೇ ದಿನದಲ್ಲಿ ತೆಲುಗು ಮತ್ತು ತಮಿಳಿನಲ್ಲಿ 19 ಸಾಂಗ್ಸ್ ರೆಕಾರ್ಡ್ ಮಾಡಿದ್ದಾರೆ. ಆನಂದ್ ಮತ್ತು ಮಿಲಿಂದ್ ಅವರ ಸಂಗೀತ ನಿರ್ದೇಶನದಲ್ಲಿ ಹಿಂದಿಯಲ್ಲಿ ಒಂದೇ ದಿನದಲ್ಲಿ 16 ಹಾಡುಗಳನ್ನು ರೆಕಾರ್ಡ್ ಮಾಡಿರುವುದು ಈವರೆಗೂ ದಾಖಲೆಯಾಗಿಯೇ ಉಳಿದಿದೆ!

ಕನ್ನಡದ ಎಲ್ಲ ನಟರಿಗೂ ಹಾಡು
ಡಾ. ವಿಷ್ಣುವರ್ಧನ್ ಅವರಿಂದ ಹಿಡಿದು ಪುನೀತ್ ರಾಜಕುಮಾರ್ ಅವರವರೆಗೂ ಎಲ್ಲ ನಾಯಕ ನಟರಿಗಾಗಿ ಹಾಡಿದ್ದಾರೆ. ಪುನೀತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ ಚಿತ್ರದಲ್ಲಿ ಎಸ್‌ಪಿಬಿ ಅವರು ಲೋಕ ಮಾಯಾ ಬಜಾರು ಎಂಬ ಗೀತೆಯನ್ನು ಹಾಡಿದ್ದರು ಮತ್ತು ಇದರಲ್ಲಿ ಪುನೀತ್ ಅವರು ಅಭಿನಯಿಸಿದ್ದರು. ಕನ್ನಡದ ಮಟ್ಟಿಗೆ ಇದೇ ಕೊನೆಯ ಹಾಡು ಅವರದ್ದು. ಈ ಚಿತ್ರವು 2016ರಲ್ಲಿ ತೆರೆಗೆ ಬಂದಿತ್ತು. ಆ ಬಳಿಕ ಅವರು ಕೊರೊನಾ ಜಾಗೃತಿಗಾಗಿ ಕನ್ನಡದಲ್ಲಿ ಹಾಡು ಹಾಡಿದರು.

ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಎಸ್‌ಪಿಬಿ ಹಾಡುವುದು ಪಕ್ಕಾ. ಒಂದು ರೀತಿಯಲ್ಲಿ ವಿಷ್ಣು ಶರೀರವಾದರೆ, ಎಸ್‌ಪಿಬಿ ಅವರು ಶಾರೀರವಾಗಿದ್ದರು. ರೆಬೆಲ್ ಸ್ಟಾರ್ ಅಂಬರೀಷ್, ಶಶಿಕುಮಾರ್, ರವಿಚಂದ್ರನ್, ಶಂಕರ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್, ಉಪೇಂದ್ರ, ಶ್ರೀನಾಥ ಹೀಗೆ… ಪಟ್ಟಿ ಬೆಳೆಯುತ್ತದೆ. ಅದೇ ರೀತಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಎಲ್ಲ ಸ್ಟಾರ್ ನಟರು, ಘಟಾನುಘಟಿ ಕಲಾವಿದರಿಗೆ ಹಾಡಿದ್ದಾರೆ ಎಸ್‌ಪಿಬಿ.

ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರೊಂದಿಗೆ ಎಸ್‌ಪಿಬಿ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆವರೆಗೆ, ಅವರ ನಿರ್ದೇಶನದಲ್ಲಿ ಒಟ್ಟು 17 ಹಾಡುಗಳನ್ನು ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಇದೊಂದ ವಿಶಿಷ್ಟ ದಾಖಲೆಯಾಗಿ ಉಳಿದಿದೆ. ಗಾಯನದೊಂದಿಗೆ ಎಸ್‌ಪಿಬಿ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸುಮಾರು 45 ಸಿನಿಮಾಗಳಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ಇಷ್ಟೇ ಸಂಖ್ಯೆಯ ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ.

ಎಸ್‌ಪಿಗಾಗಿ ಡಾ.ರಾಜ್ ಹಾಡಿದ್ದರು
ಇದೊಂದು ಅಪರೂಪದ ಘಟನೆ. ಕನ್ನಡದಲ್ಲಿ ಮುದ್ದಿನಮಾವ ಸಿನಿಮಾದಲ್ಲಿ ಶಶಿಕುಮಾರ್ ಜತೆ ಎಸ್‌ ಪಿ ಬಾಲಸುಬ್ರಹ್ಮಣ್ಯ ಅವರು ನಟಿಸಿದ್ದರು. ಈ ಚಿತ್ರದಲ್ಲಿ ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಎಂಬ ಹಾಡು ಇದೆ. ಈ ಹಾಡಿನಲ್ಲಿ ಶಶಿಕುಮಾರ್ ಅವರಿಗೆ ಎಸ್‌ಪಿಬಿ ಹಾಡಿದ್ದಾರೆ. ಎಸ್‌ಪಿಬಿಗೆ ಯಾರು ಹಾಡಬೇಕೆಂದು ಯೋಚನೆ ಮಾಡಿದಾಗ ಹೊಳೆದಿದ್ದು ಗಾನಗಂಧರ್ವ ಡಾ. ರಾಜ್. ರಾಘವೇಂದ್ರ ರಾಜಕುಮಾರ್ ಅವರ ಮೂಲಕ ಈ ವಿಷಯವನ್ನು ಡಾ.ರಾಜ್ ಅವರ ಕಿವಿಗೆ ಹಾಕಿದರಂತೆ. ಆಗ ರಾಜಕುಮಾರ್ ಅವರು ಅಯ್ಯೋ ಅದು ನನ್ನ ಪುಣ್ಯ ಎಂದು ಬಂದು ಎಸ್‌ಪಿಗೆ ಹಾಡಿದರಂತೆ. ಈ ವಿಷಯವನ್ನು ಸ್ವತಃ ಎಸ್‌ಪಿಬಿ ಅವರು ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಿನ್ನೆಲೆ ಗಾಯನದಲ್ಲಿ ಎಸ್‌ಪಿಬಿ ಮತ್ತು ಡಾ.ರಾಜ್ ಇಬ್ಬರೂ ಮಹಾ ಪರ್ವತ. ಅಂಥವರು ಇನ್ನೊಬ್ಬರಿಗೆ ಸ್ವರವಾಗುವುದೆಂದರೆ ಅದು ಮಹಾ ಸಂಗಮವೇ ಸರಿ. ಬಹುಶಃ ಇದೊಂದು ಅಪರೂಪದ ಘಟನೆಯಾಗಿ ಇತಿಹಾಸ ಸೇರಿದೆ.

ಕನ್ನಡಿಗರಿಂದ ವಿಶೇಷ ಪ್ರೀತಿ
ಬಹುಶಃ ಎಸ್ಪಿಬಿ ಈ ವಿಷಯವನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅವರಿಗೆ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರು ಎಂದರೆ ಅಚ್ಚುಮೆಚ್ಚು. ಆಂಧ್ರದವರಾದರೂ ಕನ್ನಡಿಗರು ಅವರನ್ನು ತಮ್ಮವರೆಂದೇ ಪ್ರೀತಿಸಿದರು. ಅದಕ್ಕಾಗಿ ಅವರು ಆಗಾಗ, ಕನ್ನಡಿಗರಿಂದ ನನಗೇ ವಿಶೇಷವಾದ ಪ್ರೀತಿ ಸಿಕ್ಕಿದೆ. ಈ ಪ್ರೀತಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು.

ಎದೆ ತುಂಬಿ ಹಾಡಿದರು
ಎಸ್‌ಪಿಬಿ ಹಾಡಲು ನಿಂತರೆ ಸಂಗೀತದ ರಸದೌತಣ. ಅಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಅವರು ಹಾಡಿದ ಅಷ್ಟೂ ಭಾಷೆಗಳ ಅಷ್ಟೂ ಸಾಂಗುಗಳೇ ಇದಕ್ಕೆ ನಿದರ್ಶನ. ಗಾಯನದಲ್ಲಿ ಮೇರು ಪರ್ವತವೇ ಆದ ಎಸ್‌ಪಿಬಿ, ಕನ್ನಡದಲ್ಲಿ ಎದೆ ತುಂಬಿ ಹಾಡಿದೆನು ಎಂಬ ವಿಶಿಷ್ಟ ಸಂಗೀತ ರಿಯಾಲ್ಟಿ ಶೋವನ್ನು ದೂರದರ್ಶನಕ್ಕಾಗಿ ನಡೆಸಿಕೊಂಡು ಬರುತ್ತಿದ್ದರು. ಈ ಶೋ ಮೂಲಕ ಅನೇಕ ಪ್ರತಿಭಾವಂತ ಗಾಯಕ, ಗಾಯಕಿಯರನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ್ದಾರೆ. ಬೇರೆ ಭಾಷೆಗಳಲ್ಲೂ ಇದೇ ರೀತಿಯ ಪ್ರೋಗ್ರಾಮ್ ನಡೆಸಿ ಕೊಡುತ್ತಿದ್ದರು.

ಅರಸಿ ಬಂದ ಬಿರುದು, ಸನ್ಮಾನ
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಅಧಿಕ ಹಾಡುಗಳು ಎಸ್‌ಪಿಬಿ ಅವರ ಕಂಠಸಿರಿಯಲ್ಲಿ ಅರಳಿವೆ. ಶಂಕರಾಭರಣಂ, ಪಂಚಾಕ್ಷರಿ ಗವಾಯಿ(ಕನ್ನಡ), ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರದ ಹಾಡುಗಳಿಗೆ 6 ಬಾರಿ ಅತ್ಯುತ್ತಮ ಗಾಯಕ ಎಂಬ ನ್ಯಾಷನಲ್ ಅವಾರ್ಡ್ ಬಂದಿದೆ. ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿಯನ್ನು 25 ಬಾರಿ ಪಡೆದುಕೊಂಡಿದ್ದಾರೆ. ಇದೊಂದು ದಾಖಲೆಯೇ ಸರಿ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯ ಸರ್ಕಾರಗಳು ನೀಡುವ ಪ್ರಶಸ್ತಿಯೂ ಎಸ್ಪಿಬಿ ಅವರನ್ನು ಹುಡುಕಿಕೊಂಡು ಬಂದಿವೆ.

ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಎನಿಸಿಕೊಂಡಿರುವ ಪದ್ಮಶ್ರೀ ಮತ್ತು ಪದ್ಮಭೂಷಣಗಳೂ ಅವರಿಗೆ ಸಂದಿವೆ. ಈ ಬಿರುದು ಸನ್ಮಾನಗಳಿಗಿಂತಲೂ ಇಡೀ ಭಾರತದ ಸಂಗೀತ ಪ್ರಿಯರ ಹೃದಯದಲ್ಲಿ ಅವರಿಗೆ ಬೇರೆಯದ್ದೇ ಸ್ಥಾನವಿದೆ. ನಾಲ್ಕು ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಗಾಯಕ ಇವರು. ಈ ಸಾಧನೆ ಗಾಯಕರಷ್ಟೇ ಅಲ್ಲ ಬೇರಾರೂ ಮಾಡಿಲ್ಲ ಕೂಡ. ಇಷ್ಟು ಮಾತ್ರವಲ್ಲದೇ, ತಮಿಳುನಾಡು ಸರ್ಕಾರವು ಕಲೈಂಮಣಿ ಪುರಸ್ಕಾರ ನೀಡಿದರೆ, ಪೊಟ್ಟಿ ಶ್ರೀರಾಮುಲು ತೆಲುಗು ವಿವಿ ಅವರಿಗೆ 1999ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ಅದೇ ವರ್ಷ ಮಧ್ಯಪ್ರದೇಶ ಸರ್ಕಾರವು ಲತಾ ಮಂಗೇಶ್ಕರ್ ಪುರಸ್ಕಾರ ಪ್ರದಾನ ಮಾಡಿತು. ಸತ್ಯಂಬಾ ಮತ್ತು ಆಂಧ್ರ, ಅನಂತಪುರ ವಿವಿಗಳು ಗೌರವ ಡಾಕ್ಟರೇಟ್ ನೀಡಿವೆ.

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

Continue Reading

ಅಂಕಣ

ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

ಎಸ್‌ಪಿ ಬಾಲಸುಬ್ರಹ್ಮಣ್ಯಂ ಎಂದರೆ ಉಸಿರು ಬಿಗಿಹಿಡಿದು ಹಾಡಿದ ಒಬ್ಬ ಗಂಧರ್ವನ ಚಿತ್ರ ಕಣ್ಣ ಮುಂದೆ ಮೂಡುವುದು. ಕೇಳಡಿ ಕಣ್ಮಣಿಯಲ್ಲಿ ಅವರು ಹಾಡಿದ ಬ್ರೆತ್‌ಲೆಸ್‌ ಹಾಡು ಕೂಡ ಇದನ್ನೇ ನೆನಪಿಸುವುದು.

VISTARANEWS.COM


on

spb
Koo
kerum board

1990 ಎಂದರೆ ತಮಿಳು ಚಿತ್ರರಂಗದಲ್ಲಿ (ಕನ್ನಡದಲ್ಲೂ) ಕಾಲೇಜ್‌ ರೊಮ್ಯಾನ್ಸ್‌ಗಳ ಕಾಲ. ಅದೇ ಸಂದರ್ಭದಲ್ಲಿ ʻಕೇಳಡಿ ಕಣ್ಮಣಿʼ ಎಂಬ ಸಿನಿಮಾ ಬಂತು. 285 ದಿನ ದಿನ ಥಿಯೇಟರ್‌ಗಳಲ್ಲಿ ಓಡಿತು. ಎಸ್‌.ಪಿ ಬಾಲಸುಬ್ರಹ್ಮಣ್ಯಂ ಈ ಸಿನಿಮಾದ ಹೀರೋ! ಅದುವರೆಗೂ ಬಾಲು ಸಿನಿಮಾಗಳಲ್ಲಿ ಸಣ್ಣ ಪುಟ್ಟ ರೋಲ್‌ ಮಾಡುತ್ತಿದ್ದುದಿತ್ತು. ಇಂಥದೇ ಒಂದು ಕ್ಯಾಮಿಯೋ ರೋಲ್‌ ಶೂಟ್‌ ಮಾಡುತ್ತಿದ್ದ ಸಂದರ್ಭದಲ್ಲಿ ತರುಣ ನಿರ್ದೇಶಕ ವಸಂತ್‌ ಇವರನ್ನು ಗಮನಿಸಿದರು. ‘ಎಷ್ಟೊಂದು ಕ್ಯಾಶುಯಲ್ಲಾಗಿ, ಕ್ಯಾಮೆರಾ ಎದುರಿಗಿಲ್ಲ ಎಂಬಂತೆ ಇರುತ್ತಾರಲ್ಲʼ ಎನಿಸಿತು ಅವರಿಗೆ. ನಂತರ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಅನಂತು ಜತೆ ಸೇರಿ ಒಂದು ಸ್ಕ್ರಿಪ್ಟ್‌ ರಚಿಸಿದರು.

ಆಗ ಬಾಲು ಸರ್‌ ಹಾಡುವುದರಲ್ಲಿ ಬ್ಯುಸಿಯಾಗಿದ್ದ ಕಾಲ. ವಸಂತ್‌ ಸ್ಕ್ರಿಪ್ಟ್‌ ತೆಗೆದುಕೊಂಡು ಅವರ ಬಳಿ ಹೋದಾಗ, ʼʼಈ ಸಿನಿಮಾ ಫೇಲ್‌ ಆದರೆ ನಾನೇನೋ ಮತ್ತೆ ಹಾಡುಗಾರಿಕೆಗೆ ಮರಳುವೆ. ಆದರೆ ನಿನ್ನ ಕಥೆಯೇನು?ʼʼ ಎಂದು ಬಾಲು ತಮಾಷೆ ಮಾಡಿದರಂತೆ. ವಸಂತ್‌ ಅವರನ್ನು ಉಳಿಸುವುದು ಬಾಲು ಇರಾದೆಯಾಗಿತ್ತು. ಆದರೆ ವಸಂತ್‌ ಹಠ ಹಿಡಿದರು. ಬಾಲು ಬಗ್ಗಿದರು.

ವಸಂತ್‌ಗೂ ಅದು ಹೊಸತು, ಲೀಡ್‌ ರೋಲ್‌ ಆಗಿ ಎಸ್‌ಪಿಬಿಗೂ ಹೊಸತು. ಬಾಲು ಸರ್‌ಗೆ ಜತೆಗಾತಿಯಾಗಿ ರಾಧಿಕಾ. ಇವರು ಪ್ರಬುದ್ಧ ವಯಸ್ಸಿನ ಪ್ರೇಮಿಗಳಾಗಿ ಕಾಣಿಸಿಕೊಂಡರು. ಇನ್ನೊಂದು ಯುವಜೋಡಿ- ಆ ಪಾತ್ರಗಳಲ್ಲಿ ನಮ್ಮ ರಮೇಶ್‌ ಅರವಿಂದ್‌ ಮತ್ತು ಅಂಜು. ಚಿತ್ರ ಆರಂಭವಾಗುವುದು ಕಾಲೇಜ್‌ಮೇಟ್‌ಗಳಾದ ರಮೇಶ್‌ ಮತ್ತು ಅಂಜು ಅವರ ರೊಮ್ಯಾನ್ಸ್‌, ಹುಡುಗಾಟಿಕೆಯ ದೃಶ್ಯಗಳಿಂದ. ಇದರ ಮೂಲಕ ಪ್ರೇಕ್ಷಕರನ್ನು ಚಿತ್ರದೊಳಕ್ಕೆ ಸೆಳೆದುಕೊಳ್ಳುವ ವಸಂತ್‌, ನಿಧಾನವಾಗಿ ಬಾಲು ಮತ್ತು ರಾಧಿಕಾರ ಪ್ರೌಢ ಪ್ರೇಮದ ಸುಳಿಯೊಳಕ್ಕೆ ನಮ್ಮನ್ನು ಸೆಳೆದುಕೊಂಡುಬಿಡುತ್ತಾರೆ.

ಬಾಲು ಇದರಲ್ಲಿ ವಿಧುರ ಮತ್ತು ಪುಟ್ಟ ಹುಡುಗಿಯೊಬ್ಬಳ ಸಿಂಗಲ್‌ ಫಾದರ್‌. ರಾಧಿಕಾ ಇದರಲ್ಲಿ ಟೀಚರ್.‌ ತಂದೆ ತಾಯಿಗೆ ಮಾತು- ಶ್ರವಣ ಸಮಸ್ಯೆ ಇರುವುದರಿಂದಾಗಿ, ಅವರನ್ನು ನೋಡಿಕೊಳ್ಳುವುದಕ್ಕಾಗಿ ಎಂದೂ ಮದುವೆಯಾಗದಿರುವ ನಿರ್ಧಾರ ಮಾಡಿದ್ದಾಳೆ ಆಕೆ. ಆದರೆ ಸನ್ನಿವೇಶಗಳು ಬಾಲು ಮತ್ತು ರಾಧಿಕಾರನ್ನು ಹತ್ತಿರ ಹತ್ತಿರ ತರುತ್ತವೆ.

ರಾಧಿಕಾ- ಬಾಲು ಪ್ರೇಮ ಒಂದು ತಂಗಾಳಿಯಂತೆ, ಶ್ರೀಗಂಧದ ಪರಿಮಳದಂತೆ ಈ ಚಿತ್ರದಲ್ಲಿ ಸಾಗುತ್ತದೆ. ಇಬ್ಬರಿಗೂ ತಮ್ಮೆದುರು ಇರುವ ಅಡೆತಡೆಗಳ ಅರಿವು ಇದೆ. ಎಸ್‌ಪಿಬಿ ಈ ಚಿತ್ರದಲ್ಲಿ ಮೊದಲ ಪ್ರವೇಶದಲ್ಲಿ ನಮಗೆ ಇಷ್ಟವಾಗದಿರಬಹುದು. ಆದರೆ ನಂತರ ಗುಂಡುಗುಂಡಾದ ತಮ್ಮ ದೇಹದಲ್ಲಿ ಸದಾ ಚಿಮ್ಮುವ ಲವಲವಿಕೆ, ಮುಗುಳುನಗೆಗಳಿಂದ ಇಡೀ ಚಿತ್ರವನ್ನು ತಮ್ಮ ಹೆಸರಿಗೆ ಬರೆಸಿಕೊಂಡುಬಿಡುತ್ತಾರೆ. ಸಿನಿಮಾದಲ್ಲಿ ಸ್ಮರಣೀಯ ಅನಿಸುವ ಹಲವಾರು ದೃಶ್ಯಗಳಿವೆ. ತನ್ನ ಅಪ್ಪನನ್ನು ಬೇರೊಬ್ಬ ತಾಯಿಯ ಜತೆ ಹಂಚಿಕೊಳ್ಳಲಾಗದ ಪುಟ್ಟ ಮಗು ಅನುವಿನ ಸಿಟ್ಟು, ಪರಿತ್ಯಕ್ತ ಭಾವ, ಅದರಿಂದಾಗಿ ಬಾಲು- ರಾಧಿಕಾ ಜೋಡಿ ತೆಗೆದುಕೊಳ್ಳಬೇಕಾಗಿ ಬರುವ ವಿಷಾದಮಯ ನಿರ್ಧಾರಗಳೆಲ್ಲ ಒಂದು ಪ್ರೇಮಮಯ ಚಿತ್ರಪಟದ ಶಿಖರಗಳು.

ಈ ಸಿನಿಮಾ ಬಾಲು ಸರ್‌ ಅವರ ಗಾಯನ ಪ್ರತಿಭೆಗೂ ನಟನಾ ಪ್ರತಿಭೆಗೂ ಜನ ಸಲ್ಲಿಸಿದ ಘನತೆಯ ಗೌರವ ಎಂಬಂತೆ ತಮಿಳುನಾಡಿನ ಥಿಯೇಟರ್‌ಗಳಲ್ಲಿ 285 ದಿನ ʻಕಿತ್ತುಕೊಂಡು ಓಡಿತುʼ. ಯಾವ ಸ್ಟಾರ್‌ ಫಿಲಂಗಳಿಗೂ ಇದನ್ನು ನಿಲ್ಲಿಸಲಾಗಲಿಲ್ಲ. ಇಂದಿಗೂ ತಮಿಳು ಸಿನಿಮಾ ಹಿಸ್ಟರಿಯಲ್ಲಿ ಈ ಫಿಲಂ ಟಾಪ್‌ ಟೆನ್‌ ಲಿಸ್ಟಿನಲ್ಲಿ ಸದಾ ಇರುವಂಥದು. ಇದರ ಬಳಿಕವೂ ಮೊದಲೂ ಬಾಲು ಅನೇಕ ಫಿಲಂಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದರಲ್ಲೂ ಕೇಳಡಿ ಕಣ್ಮಣಿಯಂಥ ಪ್ರಮುಖ ಪಾತ್ರ ಮಾಡಲಿಲ್ಲ (ʼಮಿಥುನʼ ಮಾತ್ರ ಇದಕ್ಕೆ ಅಪವಾದ).

ಚಿತ್ರದಲ್ಲಿ ಎಲ್ಲದಕ್ಕೂ ಕಲಶವಿಟ್ಟಂತೆ ಇರುವುದು ʼಮನ್ನಿಲ್‌ ಇಂದ ಕಾದಲನ್ರಿʼ ಹಾಡು. ನೀವು ಯೂಟ್ಯೂಬ್‌ನಲ್ಲಿ ಹೋಗಿ ʻಎಸ್‌ಪಿಬಿ ಬ್ರೆತ್‌ಲೆಸ್‌ ಸಾಂಗ್‌ʼ ಎಂದು ಸರ್ಚ್‌ ಕೊಟ್ಟರೆ ಮೊದಲು ಕಾಣಿಸಿಕೊಳ್ಳುವುದೇ ಈ ಹಾಡು. ಈ ಹಾಡಿನ ಮೂಲ ಪರಿಕಲ್ಪನೆ ನಿರ್ದೇಶಕ ವಸಂತ್‌ ಅವರದ್ದಂತೆ. ಸಂಗೀತ ನಿರ್ದೇಶನ ಒನ್ಸ್‌ ಎಗೇಯ್ನ್‌ ದಿ ಗ್ರೇಟ್‌, ಇಳಯರಾಜ ಅವರದು. ಆದರೆ ಹಾಡಿಗೆ ಜೀವ ತುಂಬಿದವರು ಬಾಲು. ʻʻಪ್ರೇಮವಿಲ್ಲದೇ ಯಾರಾದರೂ ಜೀವಿಸಬಹುದೇ? ಹೆಣ್ಣಿನ ನೋಟವಿಲ್ಲದೆ ಏಳು ಸ್ವರಗಳು ಸಂಗೀತವಾಗಬಹುದೆ? ಹೆಣ್ಣು ಜೀವವಿಲ್ಲದೆ ಯಾವ ಸಂತೋಷ?ʼʼ ಎಂದು ಆರಂಭವಾಗುವ ಹಾಡನ್ನು ಉಸಿರು ಬಿಗಿಹಿಡಿದು ಹಾಡುತ್ತೇನೆಂದು ರಾಧಿಕಾ ಮುಂದೆ ಸವಾಲು ಹಾಕುತ್ತಾರೆ ಬಾಲು. ಹಾಗೇ ನಂತರದ ಎರಡು ಚರಣಗಳನ್ನು ಉಸಿರು ತೆಗೆದುಕೊಳ್ಳದೆ ಹಾಡುತ್ತಾರೆ.

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು

ಕಡಲಿನ ಅಲೆಗಳ ಮುಂದೆ ಬಾಲು- ರಾಧಿಕಾ ಜೋಡಿ, ಹಿಡಿದಿಟ್ಟುಕೊಂಡ ಉಸಿರಲ್ಲಿ ಹಾಡುತ್ತಾ ರಾಧಿಕಾ ಮುಂದೆ ಬಂದು ನಿಂತು ನಿಲ್ಲಿಸಿ ಫಟ್ಟನೆ ಉಸಿರುಬಿಡುವ ಬಾಲು ಎಷ್ಟು ಮುದ್ದು ಉಕ್ಕಿಸುತ್ತಾರೆಂದರೆ…ಸಂಗೀತಪ್ರೇಮಿಗಳಿಗೂ ಸಿನಿಪ್ರೇಮಿಗಳಿಗೂ ಅವರು ಇಷ್ಟವಾಗಿದ್ದರಲ್ಲಿ ವಿಶೇಷವೇನು! ಈ ಹಾಡಿನ ಮೂಲಕ ಉಸಿರು ನಿಲ್ಲಿಸಿಕೊಂಡು ಹಾಡುವ ಒಂದು ಸಾಧ್ಯತೆಯನ್ನೂ, ಧ್ವನಿಯ ಏರಿಳಿತದ ಮೂಲಕವೇ ಉಸಿರನ್ನು ನಿಭಾಯಿಸುವ ತಂತ್ರವನ್ನೂ ಬಾಲು ಹೇಳಿಕೊಟ್ಟರು ಎಂದರೆ ಅತಿಶಯೋಕ್ತಿಯಲ್ಲ. ಇದಾದ ಎಷ್ಟೋ ಕಾಲದ ನಂತರ ಶಂಕರ್‌ ಮಹದೇವನ್‌ ಹಿಂದಿಯಲ್ಲೂ ಬ್ರೆತ್‌ಲೆಸ್‌ ಹಾಡು ಹಾಡಿದರು. ಮಧ್ಯೆ ನಮ್ಮ ರಾಜೇಶ್‌ಕೃಷ್ಣನ್‌ ಕೂಡ ʼಒಂದೇ ಉಸಿರಂತೆʼ ಹಾಡಿದರು. ಆದರೆ ಮನ್ನಿಲ್‌ ಇಂದ ಹಾಡಿನಲ್ಲಿರುವ ಸಾಂದ್ರ ಪ್ರೇಮ ಮತ್ತು ಉಸಿರುಗಟ್ಟಿಸುವ ವಿಷಾದ ಇವೆರಡರಲ್ಲೂ ಇಲ್ಲ. ಹೀಗಾಗಿಯೇ ಇದು cult classic ಅನ್ನಿಸಿಕೊಂಡಿದ್ದರಲ್ಲೂ ಅರ್ಥವಿದೆ.

ಈಗ ನೋಡಿದರೆ, ಎಸ್‌ಪಿಬಿ ನಿಜಕ್ಕೂ ಸಮಯದ ವಿರುದ್ಧ ಸವಾಲಿಗೆ ಬಿದ್ದವರಂತೆ, ತಮ್ಮ ಜೀವನದುದ್ದಕ್ಕೂ ಉಸಿರುಗಟ್ಟಿ ಹಾಡಿದವರಂತೆ ಕಾಣಿಸುತ್ತಾರೆ. ಹಾಗೆ ನೋಡಿದಾಗ ಈ ಹಾಡೇ ಅವರ ಜೀವನಕ್ಕೆ ಒಂದು ಹೋಲಿಕೆ. ಬಾಲು ಹಾಡಿದ ಹಾಡುಗಳ ಸಂಖ್ಯೆ ನಲುವತ್ತು ಸಾವಿರ ಅನ್ನುತ್ತಾರಾದರೂ ನಿಜಕ್ಕೂ ಯಾರಿಗೂ ಅದು ಎಷ್ಟೆಂದು ಗೊತ್ತಿಲ್ಲ. ಹಿಂದಿಯಿಂದ ಮಲಯಾಳದವರೆಗೂ ಹತ್ತಾರು ಭಾಷೆಗಳಲ್ಲಿ ಹಾಡಿದಂತೆ ಕ್ಲಾಸಿಕ್‌ ಚಿತ್ರಗಳಿಂದ ಸ್ಥಳೀಯ ಕ್ಷೇತ್ರಗಳ ಭಜನಾ ಕ್ಯಾಸೆಟ್‌ಗಳವರೆಗೆ ಅವರ ರೇಂಜು ಹಬ್ಬಿದೆ. ಸ್ಟುಡಿಯೋಗೆ ಬಂದ ಕ್ಷಣಾರ್ಧದಲ್ಲಿ ರೆಡಿಯಾಗಿ ಒಂದೇ ಟೇಕ್‌ನಲ್ಲಿ ಹಾಡಿ ಓಕೆ ಅನ್ನಿಸಿಕೊಳ್ಳುತ್ತಿದ್ದ ಅವರ ಅಗಾಧ ಪ್ರತಿಭೆಯ ಮುಂದೆ ಉಳಿದವರು ಮಂಕಾಗಿಬಿಡುತ್ತಾರೆ. ಉಸಿರು ಬಿಗಿಹಿಡಿದು ಹಾಡಿ ನಮ್ಮನ್ನೆಲ್ಲ ರಂಜಿಸಲೆಂದೇ ಧರೆಗಿಳಿದ ಗಂಧರ್ವನೇ ಏನೋ ಅನಿಸಿಬಿಡುತ್ತಾರೆ ಅವರು.

ಕೇಳಡಿ ಕಣ್ಮಣಿ- ಎಂಬುದಕ್ಕೆ “ಕೇಳು, ಕಣ್ಮಣಿʼ ಎಂದರ್ಥ. ಎಸ್‌ಪಿಬಿ ಇಲ್ಲದ ಹೊತ್ತಿನಲ್ಲಿ ನಮಗೆ ಅವರ ಹಾಡುಗಳನ್ನು ಕೇಳುವುದೇ ಆನಂದದ, ಅವರಿಲ್ಲದ ಶೂನ್ಯವನ್ನು ತುಂಬಿಕೊಳ್ಳುವ ದಾರಿ ಎನಿಸುತ್ತದಲ್ಲವೇ. ೧೯೮೫ರಲ್ಲಿ ತಮಿಳಿನಲ್ಲಿ ಬಂದ ʻಉದಯ ಗೀತಂʼ ಎಂಬ ಒಂದು ಸಿನಿಮಾದಲ್ಲಿ ʻಸಂಗೀತ ಮೇಘಂʼ ಎಂಬ ಒಂದು ಹಾಡು ಇದೆ. ಇಳಯರಾಜ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಇದರಲ್ಲೊಂದು ಸಾಲು- ʻಇಂದ ದೇಹಂ ಮರೈಯಾಂದಾಲುಂ/ ಇಸೈಯಾಯಿ ಮಲರ್ವೆನ್…‌ʼʼ ಇದರ ಅರ್ಥ- ʼʼಈ ದೇಹ ಮರೆಯಾಗುತ್ತದೆ, ಆದರೆ ನಾನು ಸಂಗೀತವಾಗಿ ಮರಳುವೆʼʼ ಎಂದಾಗುತ್ತದೆ. ಈ ಹಾಡನ್ನು ಎಸ್‌ಪಿಬಿಗಾಗಿಯೇ ಬರೆದಿರಬೇಕು. ಅವರ ವಿಷಯದಲ್ಲಿ ಇದು ಅಕ್ಷರಶಃ ನಿಜ. ಅವರು ನಮ್ಮ ಎದೆಗೆ ಸಂಗೀತವಾಗಿ ಮತ್ತೆ ಮತ್ತೆ ಮರಳುತ್ತಲೇ ಇರುವವರು.

ಇದನ್ನೂ ಓದಿ | ರಾಜಮಾರ್ಗ ಅಂಕಣ | ಎ‌ಸ್ಪಿಬಿ ಹೃದಯ ವೈಶಾಲ್ಯತೆ ಒಬ್ಬ ಹೊಸ ಗಾಯಕನಿಗೆ ಜನ್ಮ ಕೊಟ್ಟಿತು!

Continue Reading
Advertisement
Lok Sabha Election 2024 Two die of heart attack in Tumakuru and Kodagu
Lok Sabha Election 202413 mins ago

Lok Sabha Election 2024: ಹೃದಯಾಘಾತಕ್ಕೆ 3 ಬಲಿ; ಮೈಸೂರು, ತುಮಕೂರಿನಲ್ಲಿ ಮತ ಹಾಕಿದ್ದ, ಕೊಡಗಲ್ಲಿ ವೋಟ್‌ ಹಾಕಲು ನಿಂತಿದ್ದವ ಸಾವು!

Lok Sabha Election 2024 Anant Nag outrage against non-voters
ಸ್ಯಾಂಡಲ್ ವುಡ್20 mins ago

Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?

Healthcare Tips For Women
ಆರೋಗ್ಯ22 mins ago

Healthcare Tips For Women: 30 ವರ್ಷದ ಬಳಿಕ ಮಹಿಳೆಯರು ಮಾಡಿಸಿಕೊಳ್ಳಲೇಬೇಕಾದ ಆರೋಗ್ಯ ಪರೀಕ್ಷೆಗಳಿವು

Lok Sabha Election 2024
ಬೆಂಗಳೂರು27 mins ago

Lok Sabha Election 2024: ಮೋದಿ ಮತ್ತೊಮ್ಮೆ ಎಂಬ ನುಡಿ ಸತ್ಯವಾಗಲಿದೆ: ಎಂಎಲ್‌ಸಿ ಟಿ.ಎ.ಶರವಣ

Lok sabha election 2024
Lok Sabha Election 202439 mins ago

Lok Sabha Election 2024 : ವೋಟ್‌ ಮಾಡಲು ಒಂದೂವರೆ ಲಕ್ಷ ರೂ. ಖರ್ಚು; ಲಂಡನ್‌ನಿಂದ ಮಂಡ್ಯಕ್ಕೆ ಬಂದ ಮಹಿಳೆ

IPL 2024
ಪ್ರಮುಖ ಸುದ್ದಿ44 mins ago

IPL 2024 : ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದ ಅಫಘಾನಿಸ್ತಾನ ತಂಡದ ಆಟಗಾರ

Lok Sabha Election 2024 union minister pralhad joshi latest statement at hubballi
ಕರ್ನಾಟಕ44 mins ago

Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ

X Server Down
ದೇಶ44 mins ago

X Server Down: ದೇಶಾದ್ಯಂತ ಎಕ್ಸ್‌ ಜಾಲತಾಣದ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

Lok Sabha Election 2024 Sri Vishwapriya Theertha Swamiji of Adamaru Mutt casts his vote for second time
Lok Sabha Election 202445 mins ago

Lok Sabha Election 2024: 2ನೇ ಬಾರಿಗೆ ಬಂದು ಮತದಾನ ಮಾಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು!

Rekha kisses Richa Chadha baby bump at Heeramandi event
ಬಾಲಿವುಡ್51 mins ago

Richa Chadda:  ರಿಚಾ ಚಡ್ಡಾ ಬೇಬಿ ಬಂಪ್‌ಗೆ ಮುತ್ತಿಟ್ಟ ನಟಿ ರೇಖಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ5 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20246 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20247 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ13 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌