ಕ ಸಾ ಪ
ವಿಸ್ತಾರ ಸಂಪಾದಕೀಯ | ಕನ್ನಡ ನಾಡಿನ ನುಡಿ ತೇರ ಎಳೆಯೋಣ ಬನ್ನಿ
ಸುಮಾರು ಎರಡೂವರೆ ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡಿಗರ ನುಡಿ ಜಾತ್ರೆ ಅರ್ಥಪೂರ್ಣವಾಗಿ ನಡೆಯಲಿ, ಸಾಹಿತ್ಯಾಸಕ್ತರನ್ನು ಬೆಸೆಯಲಿ.
ಪ್ರತಿ ವರ್ಷ ನಡೆಯುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳಿಂದ ನಡೆದಿರಲಿಲ್ಲ. ಕನ್ನಡ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಿಗೆ ಈ ಬಗ್ಗೆ ಬೇಸರವಿತ್ತು. ಕೊರೊನಾ ಸಾಂಕ್ರಾಮಿಕ ತೀವ್ರತೆ ತಗ್ಗಿದ ಕಾರಣ, ‘ಏಲಕ್ಕಿ ನಾಡು’ ಹಾವೇರಿಯಲ್ಲಿ 86ನೇ ಕನ್ನಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ(ಜನವರಿ 6)ರಿಂದ ಮೂರು ದಿನಗಳ ಕಾಲ ನಡೆಯಲಿದೆ. ನಾಡಿನ ಹಿರಿಯ ಸಾಹಿತಿ, ಕವಿ ಡಾ. ದೊಡ್ಡರಂಗೇಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ‘ನುಡಿ ಜಾತ್ರೆ’ ವಿಜೃಂಭಣೆಯಿಂದ ತೆರೆದುಕೊಳ್ಳಲಿದೆ. ನಮ್ಮ ನಾಡು ಚರ್ಚೆ, ಸಂವಾದ ಮತ್ತು ಅಭಿಪ್ರಾಯಭೇದಕ್ಕೆ ಯಾವತ್ತೂ ವೇದಿಕೆಯಾಗಿದೆ. ಅದೇ ರೀತಿ, ಈ ಸಾಹಿತ್ಯ ಸಮ್ಮೇಳನವೂ ವಿವಾದದಿಂದ ಹೊರತಾಗಿಲ್ಲ ಮತ್ತು ಪ್ರತಿ ಸಮ್ಮೇಳನದ ವೇಳೆ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಅದನ್ನು ಅಲ್ಲಿಗೇ ಬಿಟ್ಟು ಕನ್ನಡಿಗರು ಸಂಭ್ರಮ, ಸಡಗರ ಮತ್ತು ಉತ್ಸಾಹದಿಂದ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದರಲ್ಲಿ ಅನುಮಾನ ಇಲ್ಲ.
ಹೆಸರೇ ಹೇಳುವಂತೆ ಇದು ಸಾಹಿತ್ಯದ ಸಮ್ಮೇಳನ; ಆದರೆ ಇದಕ್ಕೆ ಜಾತ್ರೆಯ ಸ್ವರೂಪವಿದೆ; ಯಾತ್ರೆಯ ಗುಣವಿದೆ. ಹಾಗಾಗಿ ಯಾವುದೇ ಬಣ, ಪಕ್ಷ, ಜಾತಿ, ಧರ್ಮದ ಕಿತ್ತಾಟಗಳು ಸಮ್ಮೇಳನದ ಮೂಲ ಉದ್ದೇಶಕ್ಕೆ ಭಂಗ ತರಲಾರವು. ಇವುಗಳನ್ನು ಮೀರಿ, ಕನ್ನಡಿಗರ ನುಡಿ ಜಾತ್ರೆ ಇಂದಿಗೂ ಯಶಸ್ವಿಯಾಗುತ್ತಲೇ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರ ಊರಿನಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ. ಶಿಶುನಾಳ ಶರೀಫರಂಥ ಸಮನ್ವಯ ಕವಿ, ಸೂಫಿ ಸಂತರ ಊರಿನಲ್ಲಿ ನಡೆಯುತ್ತಿರುವ ಸಮ್ಮೇಳನ ಸಾಹಿತ್ಯದಲ್ಲಿ ಜಾತಿ ಧರ್ಮಗಳ ಭೇದ ಅಳಿಸಲಿ. ಜೊತೆಗೆ, ಕಿತ್ತೂರು ಕರ್ನಾಟಕದ ಸಾಹಿತ್ಯ- ಸಾಂಸ್ಕೃತಿಕ ಶ್ರೀಮಂತಿಕೆ ನಾಡಿಗೆ ತಿಳಿಸುವ ಕೆಲಸಕ್ಕೆ ಈ ಸಮ್ಮೇಳ ವೇದಿಕೆಯಾಗಲಿ.
ಕನ್ನಡ ನಾಡು ಮತ್ತು ನುಡಿ ಎದುರಿಸುತ್ತಿರುವ ವರ್ತಮಾನದ ತಲ್ಲಣಗಳು, ಸಮಕಾಲೀನ ಸಮಸ್ಯೆಗಳು ಹಾಗೂ ಭವಿಷ್ಯದ ಸವಾಲುಗಳ ಕುರಿತು ಚರ್ಚೆಗೆ ಸಾಹಿತ್ಯ ಸಮ್ಮೇಳನವು ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಈವರೆಗೆ ನಡೆದ ಸಮ್ಮೇಳನಗಳು ಒಂದಲ್ಲ ಒಂದು ಕಾರಣದಿಂದ, ಹುಟ್ಟುಹಾಕಿದ ಚರ್ಚೆಯ ಕಾರಣದಿಂದ ವೈಶಿಷ್ಟ್ಯವನ್ನು ಸಾಧಿಸುತ್ತಾ ಬಂದಿವೆ. ಇದು ಸಮ್ಮೇಳನದ ಉದ್ದೇಶವೂ ಹೌದು. ಜಾಗತಿಕರಣದ ಈ ಜಮಾನಾದಲ್ಲಿ ಕನ್ನಡವನ್ನು ಹೆಚ್ಚು ಪ್ರಸ್ತುತಗೊಳಿಸುವುದು, ಅನ್ನದ ಭಾಷೆಯಾಗಿ ರೂಪಿಸುವುದು ಈಗಿನ ಜರೂರಾಗಿದೆ. ಜತೆಗೆ, ನಮ್ಮ ವಿದೇಶಿ-ಸ್ವದೇಶಿ ಭಾಷೆಗಳ ಹೇರಿಕೆಯಿಂದ ತಪ್ಪಿಸಿಕೊಳ್ಳುವ ಬಗೆಯನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನವು ಒಂದು ನಿರ್ದಿಷ್ಟ ದಿಕ್ಸೂಚಿಯನ್ನು ಒದಗಿಸುವ ಕೆಲಸವನ್ನು ಮಾಡಬೇಕು. ಆಗ, ಇದಕ್ಕೆ ಸಾರ್ಥಕತೆ ದಕ್ಕುತ್ತದೆ.
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಸಮ್ಮೇಳನ ನಡೆಯುವುದು ಹೌದಾದರೂ, ಆರ್ಥಿಕ ಚೈತನ್ಯವನ್ನು ಸರ್ಕಾರವೇ ತುಂಬುತ್ತದೆ. ಪ್ರತಿ ಸಮ್ಮೇಳನಕ್ಕೆ ಹಣಕಾಸಿನ ನೆರವು ಒದಗಿಸುತ್ತದೆ. ಹಾಗಾಗಿ, ಕೆಲವೊಮ್ಮೆ ಅದು ರಾಜಕೀಯ ವೇದಿಕೆಯಾದ ಉದಾಹರಣೆಗಳಿವೆ. ಅದಕ್ಕೆ ಹಾವೇರಿ ಸಮ್ಮೇಳನವು ಅವಕಾಶವನ್ನು ಮಾಡಿಕೊಡಬಾರದು. ಇದು ಶುದ್ಧಾನುಶುದ್ಧ ನಾಡಿ-ನುಡಿಯ ಕಾರ್ಯಕ್ರಮ. ಹಾಗಾಗಿ, ರಾಜಕೀಯ ಭಾಷಣಗಳಿಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಪರಿಷತ್ ಜವಾಬ್ದಾರಿಯನ್ನು ಹೊರಬೇಕಿದೆ.
ನಾಡಿನ ವಿವಿಧ ಪ್ರದೇಶಗಳಲ್ಲಿ ಸಮ್ಮೇಳನ ನಡೆಯುವುದರಿಂದ ಆಯಾ ಭಾಗದ ವೈಶಿಷ್ಟ್ಯ, ಇತಿಹಾಸ, ಸ್ಥಳ ವಿಶೇಷಗಳು, ಹೆಚ್ಚುಗಾರಿಕೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಜತೆಗೆ, ವ್ಯಾಪಾರ-ವಹಿವಾಟು ದೃಷ್ಟಿಯಿಂದಲೂ ಸಮ್ಮೇಳನಗಳು ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತ ಬಂದಿವೆ. ವಿಶೇಷವಾಗಿ ಪುಸ್ತಕ ವ್ಯಾಪಾರವು ಸಮ್ಮೇಳನದ ಪ್ರಮುಖ ಆಕರ್ಷಣೆ ಆಗಿರುತ್ತದೆ. ಬಹಳಷ್ಟು ಜನರು ಪುಸ್ತಕಗಳನ್ನು ಖರೀದಿಸುವುದಕ್ಕಾಗಿಯೇ ಸಮ್ಮೇಳನ ಬರುತ್ತಾರೆ. ಇದಕ್ಕೆ ಈ ಹಿಂದಿನ ಸಮ್ಮೇಳನಗಳು ಸಾಕ್ಷಿಯಾಗಿವೆ.
86ನೇ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಪಟ್ಟಿ ವಿಭಿನ್ನವಾಗಿದೆ. ಸಾಕಷ್ಟು ಹೊಸ ವಿಷಯಗಳಿಗೆ ಮಣೆ ಹಾಕಲಾಗಿದೆ. ಭಿನ್ನ, ವಿಭಿನ್ನ ಗೋಷ್ಠಿಗಳಿವೆ. ಎಲ್ಲವೂ ವೇಳಾಪಟ್ಟಿಯಂತೆ ನಡೆಯಲಿ. ಯಾವುದೇ ಪ್ರಮಾದಕ್ಕೆ ಅವಕಾಶ ಇಲ್ಲದಂತೆ ಸಮ್ಮೇಳನ ಯಶಸ್ವಿಯಾಗಲಿ. ಈ ಹಿಂದಿನ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಸ್ಥಿತಿ ಏನಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಹಾವೇರಿ ಸಮ್ಮೇಳನವು ಈ ನಿಟ್ಟಿನಲ್ಲಿ ವಿಭಿನ್ನ ಹಾದಿ ತುಳಿದು, ಅರ್ಥಪೂರ್ಣ ಮತ್ತು ಕಾರ್ಯಸಾಧುವಾಗುವ ನಿರ್ಣಯ ಕೈಗೊಳ್ಳಲಿ. ಈ ಸಾಹಿತ್ಯ ಸಮ್ಮೇಳನ ಕನ್ನಡ ನಾಡು-ನುಡಿಯ ಹಿರಿಮೆಯನ್ನು ಮೆರೆಸಲಿ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಬೆಂಗಳೂರಿಗೆ ಕ್ರೈಂ ಸಿಟಿ ಎಂಬ ಕಳಂಕ ಬರುವುದನ್ನು ತಪ್ಪಿಸಿ
ಕ ಸಾ ಪ
ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ನಾ. ಡಿಸೋಜ ಹಾಗೂ ದು. ಸರಸ್ವತಿ ಆಯ್ಕೆ
Kannada sahitya parishat: ಸಂಚಲನ ಬಳಗದವರು ಆಶಯದಂತೆ ಒಬ್ಬ ಕನ್ನಡ ಕ್ರೈಸ್ತ ಸಾಧಕರಿಗೆ ಹಾಗೂ ಇನ್ನೊಬ್ಬರು ಕನ್ನಡ ಪರ ಹೋರಾಟಗಾರಿಗೆ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (Kannada Sahitya Parishat) 2023ನೇ ಸಾಲಿನ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗಾಗಿ ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ (Dr. Nadoja Mahesh Joshi) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗಾಗಿ, ಪರಿಷತ್ತಿನ ಪಂಪ ಸಭಾಭವನದಲ್ಲಿ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ದತ್ತಿ ದಾನಿಗಳ ಆಶಯದಂತೆ ಪ್ರತಿ ವರ್ಷ ಇಬ್ಬರು ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಒಬ್ಬರು ಕನ್ನಡ ಕ್ರೈಸ್ತ ಸಾಧಕರಿಗೆ ಮತ್ತು ಇನ್ನೊಬ್ಬರು ಕನ್ನಡ ಜನಪರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರನ್ನು ಆಯ್ಕೆ ಮಾಡಲಾಗುತ್ತದೆ.
ಅದರಂತೆ ಈ ಬಾರಿಯ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗಾಗಿ ಹಿರಿಯ ಕಥೆಗಾರ, ಸಾಹಿತಿಗಳಾಗಿರುವ ಕ್ರೈಸ್ತ ಧರ್ಮಕ್ಕೆ ಸೇರಿದ ಶಿವಮೊಗ್ಗದ ಸಾಗರದ ನಾ. ಡಿಸೋಜ ಹಾಗೂ ಕನ್ನಡ ಪರ ಹೋರಾಟಗಾರ್ತಿ, ರಂಗಕರ್ಮಿ ಬೆಂಗಳೂರಿನ ದು. ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ಹತ್ತು ಸಾವಿರ ರೂ.ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಸಂಚಲನ ಬಳಗದವರು 2017ರಲ್ಲಿ ಈ ದತ್ತಿ ನಿಧಿ ಸ್ಥಾಪಿಸಿದ್ದರು. ಇದುವರೆಗೆ 12 ಜನರಿಗೆ ಕನ್ನಡ ಸಾಹಿತ್ಯ ಪರಿಷತ್ತು ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರದಾನ ಮಾಡಲಾಗಿದೆ. ಪ್ರಸ್ತುತ ದತ್ತಿ ಪ್ರಶಸ್ತಿಯನ್ನು ದತ್ತಿ ದಾನಿಗಳು ಆಶಯದಂತೆ ಒಬ್ಬ ಕನ್ನಡ ಕ್ರೈಸ್ತ ಸಾಧಕರಿಗೆ ಹಾಗೂ ಇನ್ನೊಬ್ಬರು ಕನ್ನಡ ಪರ ಹೋರಾಟಗಾರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಇದನ್ನೂ ಓದಿ: ಕನ್ನಡ ಚಳುವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಜಿ.ಕೆ. ಸತ್ಯ ಆಯ್ಕೆ
ನಿತ್ಯ ಬದುಕಿನಲ್ಲಿ ಕನ್ನಡ ನಾಡು- ನುಡಿಯ ಕುರಿತು ಅಪಾರ ಗೌರವ ಹೊಂದಿರುವ ಹಿರಿಯ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಪ್ರಶಸ್ತಿ ಪುರಸ್ಕಾರ ಪಡೆದ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ಪುರಸ್ಕೃತರಿಂದ, ಕನ್ನಡ ನಾಡಿನ ನೆಲಮೂಲ ಸಂಸ್ಕೃತಿಯನ್ನು ಉಳಿಸಿ- ಬೆಳೆಸುವಲ್ಲಿ ನಿರಂತರ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ಸಂಚಲನ ಬಳಗದವರ ಪರವಾಗಿ ರೀಟಾ ರೀನಿ ಹಾಗೂ ರಫಾಯಲ್ ರಾಜ್ ಸೇರಿ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕ ಸಾ ಪ
ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಜಿ.ಕೆ. ಸತ್ಯ ಆಯ್ಕೆ
ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಕಲಾವಿದ ಹಾಗೂ ಕನ್ನಡ ಹೋರಾಟಗಾರಾದ ಜಿ.ಕೆ. ಸತ್ಯ ಅವರು ಆಯ್ಕೆ ಆಗಿದ್ದಾರೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ಆಯ್ಕೆ ಸಮಿತಿಯಲ್ಲಿ ನಿರ್ಧಾರವಾಗಿದೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆದಿದೆ. ಈ ಸಭೆಯಲ್ಲಿ 2023ನೇ ಸಾಲಿನ ಕನ್ನಡ ಚಳವಳಿ ವೀರಸೇನಾನಿ ಮ.ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಕನ್ನಡ ಪರ ಹೋರಾಟಗಾರ ಹಿರಿಯ ಕಲಾವಿದರಾದ ಜಿ.ಕೆ. ಸತ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಟಿ. ತಿಮ್ಮೇಶ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಕನ್ನಡ ಚಳವಳಿ ವೀರಸೇನಾನಿ ಮ.ರಾಮಮೂರ್ತಿ ದತ್ತಿ ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಹೊಂದಿದೆ. ಜತೆಗೆ ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿದೆ. ಕನ್ನಡ ಚಳವಳಿ ಸೇನಾನಿ ಮ. ರಾಮಮೂರ್ತಿ ಅವರು ರಾಜ್ಯಾದ್ಯಂತ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋರಾಟಕ್ಕೆ ಶಕ್ತಿ ಮತ್ತು ಚೈತನ್ಯವನ್ನು ತುಂಬಿದವರು.
ಇವರ ಹೆಸರಿನಲ್ಲಿರುವ ಈ ದತ್ತಿ ಪ್ರಶಸ್ತಿಯನ್ನು ರಾಜ್ಯದಲ್ಲಿ ಕನ್ನಡದ ಹೋರಾಟದಲ್ಲಿ ತೊಡಗಿಸಿಕೊಂಡಿರುವ 50 ವರ್ಷ ಮೀರಿದ ವಯೋಮಾನದ ಕನ್ನಡ ಕಾರ್ಯಕರ್ತರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದುವರೆಗೆ 8 ಜನ ಕನ್ನಡ ಚಳುವಳಿಗಾರರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಸಾಲಿನ ಕನ್ನಡ ಚಳವಳಿ ವೀರಸೇನಾನಿ ಮ.ರಾಮಮೂರ್ತಿ ದತ್ತಿ ಪ್ರಶಸ್ತಿಗಾಗಿ ಕನ್ನಡ ಪರ ಹೋರಾಟಗಾರ ಹಿರಿಯ ಕಲಾವಿದ ಜಿ.ಕೆ. ಸತ್ಯ ಅವರು ಆಯ್ಕೆ ಆಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿ.ಕೆ. ಸತ್ಯ ಕನ್ನಡದ ಅತ್ಯಂತ ಜನಪ್ರಿಯ ವರ್ಣಚಿತ್ರಕಾರರು. ಅವರು ಚಿತ್ರಕಲೆಗೆ ಸೀಮಿತವಾಗದೆ ಕನ್ನಡ ಹೋರಾಟಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಕನ್ನಡ ಚಳವಳಿಗಾರರಾದ ಅ.ನ.ಕೃ, ಮ.ರಾಮಮೂರ್ತಿ, ನಾಡಿಗೇರರು ಮೊದಲಾದವರ ನಿಕಟ ಒಡನಾಡಿಯಾಗಿದ್ದರು. ಗೋಕಾಕ್ ಚಳುವಳಿ ಅನುಷ್ಟಾನಕ್ಕೆ ಹೋರಾಡಿದ ಪ್ರಮುಖ ನೇತಾರರಲ್ಲಿ ಒಬ್ಬರು. ಕನ್ನಡ ಶಕ್ತಿ ಕೇಂದ್ರದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳೂ ಆಗಿದ್ದರು. ಸದಾ ಕನ್ನಡ, ಕನ್ನಡಿಗ, ಕರ್ನಾಟಕದ ಹಿತರಕ್ಷಣೆಗೆ ಹೋರಾಡುತ್ತಾ ಬಂದಿರುವ ಸತ್ಯ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತಿದೆ ಎಂದು ನಾಡೋಜ. ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ತಿಮ್ಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕ ಸಾ ಪ
ನಾಡಿನ ಸಾಧಕರ ಪರಿಚಯಕ್ಕೆ ಕಸಾಪದಿಂದ ಕನ್ನಡದ ಹೆಸರು, ಸಹಿ ಅಭಿಯಾನ
ಸಾಧಕರ ಹೆಸರನ್ನು ಆಂಗ್ಲ ಭಾಷೆಯಲ್ಲಿ ಹೃಸ್ವಗೊಳಿಸುವುದರಿಂದ ಮೂಲ ಅರ್ಥದಿಂದ ದೂರವಾಗುತ್ತದೆ. ಹೀಗಾಗಿ ಹೊಸ ಪೀಳಿಗೆಗೆ ಸಾಧಕರ ಪರಿಚಯ ಮಾಡಲು ಕನ್ನಡ ಸಾಹಿತ್ಯ ಪರಿಷತ್, ಕನ್ನಡದ ಹೆಸರು ಮತ್ತು ಸಹಿ ಅಭಿಯಾನ ಕೈಗೊಳ್ಳಲು ನಿರ್ಧರಿಸಿದೆ.
ಬೆಂಗಳೂರು: ಕನ್ನಡ ನಾಡಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ ಹಲವು ಹಿರಿಯರು, ಸಾಧಕರ ಹೆಸರನ್ನು ರಸ್ತೆ, ಬಡಾವಣೆಗೆ ಇಡುವ ಪದ್ಧತಿ ಮೊದಲಿಂದಲೂ ಇದೆ. ಆದರೆ, ಕ್ರಮೇಣ ಆಂಗ್ಲ ಭಾಷೆಯಲ್ಲಿ ಹೃಸ್ವಗೊಳ್ಳುವ ಹೆಸರುಗಳು ಮೂಲ ಅರ್ಥದಿಂದ ದೂರವಾಗುತ್ತಿವೆ. ಹೀಗಾಗಿ ಹೊಸ ಪೀಳಿಗೆಯವರಿಗೆ ಸಾಧಕರ ಪರಿಚಯ ಮಾಡಲು ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡದ ಹೆಸರು ಮತ್ತು ಸಹಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಡಾ.ಮಹೇಶ ಜೋಶಿ ಅವರು, ಮಹಾತ್ಮ ಗಾಂಧಿ ರಸ್ತೆ ಈಗ ಎಂ.ಜಿ.ರಸ್ತೆಯಾಗಿದೆ, ಕೃಷ್ಣ ರಾಜ ಒಡೆಯರ ಹೆಸರಿನಲ್ಲಿ ಇರುವ ರಸ್ತೆ ಕೆ.ಆರ್.ರಸ್ತೆಯಾಗಿದೆ. ನರಸಿಂಹ ರಾಜ ಒಡೆಯರ್ ಅವರ ಹೆಸರಿನಲ್ಲಿ ರೂಪಿತವಾದ ಬಡಾವಣೆ ಎನ್.ಆರ್.ಕಾಲೋನಿಯಾಗಿದೆ. ಹೀಗೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಕನ್ನಡ ಬರಹಗಾರರಲ್ಲಿ ಡಿ.ವಿ.ಗುಂಡಪ್ಪ ಅವರ ಹೆಸರನ್ನು ಡಿ.ವಿ.ಜಿ ಎಂದು ಬರೆಯುವ ಪದ್ಧತಿ ಜನಜನಿತವಾಗಿದ್ದು, ಅವರ ಮೂಲ ಹೆಸರೇ ಮರೆಯಾಗುವ ಅಪಾಯವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Adhish Rajinish Wali: ಕಸಾಪ ಯುಕೆ ಗೌರವ ಯುವ ಸಂಚಾಲಕರಾಗಿ ಆದೀಶ್ ರಜನೀಶ್ ವಾಲಿ ನೇಮಕ
ಅದೇ ರೀತಿ ಎಚ್.ಎಸ್.ವಿ (ಎಚ್.ಎಸ್.ವೆಂಕಟೇಶ ಮೂರ್ತಿ), ಬಿ.ಆರ್.ಎಲ್ (ಬಿ.ಆರ್.ಲಕ್ಷ್ಮಣ ರಾವ್) ಪಿ.ಟಿ.ಎನ್, (ಪು.ತಿ.ನರಸಿಂಹಾಚಾರ್) ಕೆ.ಎಸ್.ಎನ್ (ಕೆ.ಎಸ್.ನರಸಿಂಹ ಸ್ವಾಮಿ) ಇಂತಹ ಪ್ರಯೋಗಗಳು ಸಾಮಾಜಿಕ ಜಾಲತಾಣಗಳು ಬೆಳೆಯುತ್ತಾ ಹೋದಷ್ಟು ಹೆಚ್ಚಾಗುತ್ತಿದೆ. ಸೌಂತ್ ಎಂಡ್ ಸರ್ಕಲ್‌ಗೆ ತೀನಂಶ್ರೀ ವೃತ್ತ ಎಂದು ಬೆಂಗಳೂರು ಮಹಾನಗರ ಪಾಲಿಕೆ ಅಧಿಕೃತ ನಾಮಕರಣ ಮಾಡಿದ್ದರೂ ಅದು ಜನ ಜನಿತವಾಗಿಲ್ಲ. ಟ್ಯಾಂಕ್ ಬಂಡ್ ರಸ್ತೆಗೆ ಆರ್.ನಾಗೇಂದ್ರ ರಾಯರ ಹೆಸರು ಇಟ್ಟಿದ್ದರೂ ಅದು ಆಚರಣೆಗೆ ಬಂದಿಲ್ಲ. ಇಂತಹ ಹಲವು ದೋಷಗಳನ್ನು ಪಟ್ಟಿ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಅಭಿಯಾನ ಆರಂಭಿಸಲು ಕನ್ನಡ ಸಾಹಿತ್ಯ ಪರಿಷತ್ ಅಲೋಚಿಸಿದೆ ಎಂದು ಡಾ.ಮಹೇಶ ಜೋಶಿ ಹೇಳಿದ್ದಾರೆ.
ಇದಲ್ಲದೆ ಈಗ ಹೆಸರು ಇಟ್ಟಿರುವ ಸಾಧಕರ ಕುರಿತು ಜನ ಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸಿ ಅರಿವನ್ನು ಹೆಚ್ಚಿಸುವ ಉದ್ದೇಶವೂ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ. ಉದಾಹರಣೆಗೆ ಬ್ಯೂಗಲ್ ರಾಕ್ ಪಾರ್ಕ್ ದ್ವಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ ಏಳಿಗೆಗೆ ಶ್ರಮಿಸಿದ ಬೆಳ್ಳಾವೆ ವೆಂಕಟನಾರಾಯಣಪ್ಪ ಅವರ ಹೆಸರನ್ನು ಇಡಲಾಗಿದೆ. ಆದರೆ, ಅವರ ಕುರಿತ ವಿವರಗಳು ಅಲ್ಲಿ ಲಭ್ಯವಿಲ್ಲ. ಈ ವಿವರಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಅಲ್ಲಿ ಅಳವಡಿಸುವ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ ಎಂದು ಅಭಿಯಾನದ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಸಹಿ ಮಾಡುವ ಅಭಿಯಾನವನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಲಿದೆ. ಸಹಿ ಎನ್ನುವುದು ವ್ಯಕ್ತಿಯ ವ್ಯಕ್ತಿತ್ವದ ಹೆಗ್ಗುರುತು ಇದ್ದಂತೆ. ಇಲ್ಲಿ ಕನ್ನಡ ಬಳಕೆಯಾದರೆ ಭಾಷೆಯ ಭಾವನಾತ್ಮಕ ಅಯಾಮದ ಜತೆಗಿನ ವ್ಯಕ್ತಿಯ ಬಾಂಧವ್ಯವೂ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿಯೇ ಸಹಿ ಮಾಡುವಂತೆ ಕನ್ನಡಿಗರೆಲ್ಲರೂ ಜಾಗೃತಿ ಉಂಟು ಮಾಡುವ ಇಂತಹ ಕನ್ನಡದ ಸಹಿಯನ್ನು ಎಲ್ಲಾ ಅಧಿಕೃತ ವ್ಯವಹಾರಗಳಲ್ಲಿಯೂ ಮಾನ್ಯ ಮಾಡುವಂತೆ ಮಾಡುವ ಅಭಿಯಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತೊಡಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಕಸೂತಿ
ಕನ್ನಡವನ್ನು ಎಲ್ಲಾ ಹಂತದಲ್ಲಿಯೂ ಸ್ಥಾಪಿಸುವ ಇನ್ನಷ್ಟು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದ ಡಾ.ಮಹೇಶ ಜೋಶಿ ಅವರು, ಅನುಷ್ಠಾನದಲ್ಲಿ ಎಲ್ಲಾ ಕನ್ನಡಿಗರ ಸಹಕಾರ ಅಗತ್ಯವಿದೆ. ಕನ್ನಡ ತಾಯಿ ಭುವನೇಶ್ವರಿಯ ನೆಲೆವೀಡಾದ ಸಿದ್ದಾಪುರಿಂದ ಈ ಅಭಿಯಾನ ಆರಂಭವಾಗಲಿದ್ದು, ಶೀಘ್ರದಲ್ಲಿಯೇ ದಿನಾಂಕವನ್ನು ನಿಗದಿ ಪಡಿಸುವುದಾಗಿ ತಿಳಿಸಿದ್ದಾರೆ.
ಕ ಸಾ ಪ
Adhish Rajinish Wali: ಕಸಾಪ ಯುಕೆ ಗೌರವ ಯುವ ಸಂಚಾಲಕರಾಗಿ ಆದೀಶ್ ರಜನೀಶ್ ವಾಲಿ ನೇಮಕ
Adhish Rajinish Wali: ಈ ಹಿಂದೆ ಲಂಡನ್‌ನಲ್ಲಿ ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಡೆದಿದ್ದ ಕನ್ನಡಿಗ ಆದೀಶ್ ರಜನೀಶ್ ವಾಲಿ, ಕನ್ನಡ ಸಾಹಿತ್ಯ ಪರಿಷತ್ ಯುಕೆ ಗೌರವ ಯುವ ಸಂಚಾಲಕರಾಗಿ ನೇಮಕಗೊಂಡಿದ್ದಾರೆ.
ಬೆಂಗಳೂರು: ಹೊರದೇಶದ ಕನ್ನಡಿಗರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ ಯುನೈಟೆಡ್ ಕಿಂಗ್‌ಡಮ್‌ನ(UK) ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಯುವ ಸಂಚಾಲಕರಾಗಿ ಲಂಡನ್‌ನ ಕನ್ನಡಿಗ ಆದೀಶ್ ರಜನೀಶ್ ವಾಲಿ ಅವರನ್ನು ಕಸಾಪ ನೇಮಕ ಮಾಡಿದೆ.
ಈ ಹಿಂದೆ ಸಿಟಿ ಯೂನಿವರ್ಸಿಟಿ ಆಫ್ ಲಂಡನ್‌ನಲ್ಲಿ ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶಿಸುವ ಮೂಲಕ ಬೀದರ್‌ನ ಆದೀಶ್ ರಜನೀಶ್ ವಾಲಿ ಕನ್ನಡಿಗರ ಮೆಚ್ಚುಗೆ ಪಡೆದಿದ್ದರು. ನಂತರ ಯುವಕನಿಗೆ ಕಸಾಪದಿಂದ ಸನ್ಮಾನ ಮಾಡಿ, ಸದಸ್ಯತ್ವ ನೀಡಲಾಗಿತ್ತು. ಇದೀಗ ವಿದೇಶದಲ್ಲಿ ಕನ್ನಡಪರ ಕಾರ್ಯ ಮಾಡಲು ಮುಂದಿನ ಆದೇಶದವರೆಗೆ ಯುಕೆ ಗೌರವ ಯುವ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧೈಯೋದ್ದೇಶವನ್ನು ಕನ್ನಡ ಸಾಹಿತ್ಯ ಪರಿಷತ್ ಹೊಂದಿದೆ. ಪರಿಷತ್ತನ್ನು ‘ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯುನೈಟೆಡ್ ಕಿಂಗ್‌ಡಮ್ ಗೌರವ ಯುವ ಸಂಚಾಲಕರಾಗಿ ಕನ್ನಡಿಗ ಆದೀಶ್ ರಜನೀಶ್ ವಾಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಗೋ ಸಂಪತ್ತು: ವಿದೇಶಗಳಲ್ಲಿ ಮಿಂಚುತ್ತಿವೆ ಭಾರತೀಯ ಗೋ ತಳಿಗಳು!
ಹೊರದೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಾಗುತ್ತಿದ್ದು, ಹೊರದೇಶದಲ್ಲಿರುವ ಕನ್ನಡಿಗರನ್ನು ಪರಿಷತ್ತಿಗೆ ಸದಸ್ಯರನ್ನಾಗಿಸಲು, ಕನ್ನಡಪರ ಕಾರ್ಯಚಟುವಟಿಕೆಗಳನ್ನು ಹೊರದೇಶದಲ್ಲಿ ನಡೆಸಲು, ಕನ್ನಡ ಸಾಹಿತ್ಯ ಸಮಾವೇಶ, ಸಮ್ಮೇಳನಗಳ ಯೋಜನೆಯನ್ನು ಕಾರ್ಯಾನುಷ್ಠಾನಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
-
ವಿದೇಶ18 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ16 hours ago
PSI Scam : ಪಿಎಸ್‌ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ11 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ12 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema15 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ18 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ16 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ8 hours ago
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ