ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್

ಮ್ಯಾಡಿ ಎಂಬ ಸ್ಟೈಲಿಶ್‌ ತರುಣನ ಮೇಲೆ ಮ್ಯಾಡ್‌ ಮ್ಯಾಡ್‌ ಆಗಿ ಕ್ರಶ್‌ ಮೂಡಿದ ಆಕೆಗೆ ಮುಂದೆ ಆದ ಸತ್ಯದರ್ಶನ ಬೇರೆ. ಅದು ಆಕೆಯನ್ನು ರೆಬೆಲ್‌ ಆಗುವಂತೆ ಮಾಡಿತು… ಅದೊಂದು ಮೌನ ಬಂಡಾಯ. ಓದಿ, ವಿಸ್ತಾರ ಕಥಾಸ್ಪರ್ಧೆಯ ಮೂರನೇ ಬಹುಮಾನ ಪುರಸ್ಕೃತ ಕಥೆ.

VISTARANEWS.COM


on

purnima story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಪೂರ್ಣಿಮಾ ಮಾಳಗಿಮನಿ

:: ಪೂರ್ಣಿಮಾ ಮಾಳಗಿಮನಿ    

ನಿಜ ಹೇಳಬೇಕೆಂದರೆ ನೆನ್ನೆ ಬೆಳಿಗ್ಗೆ ನಾಲ್ಕು ಘಂಟೆಗೆ ಫಾಲ್ಗುಣಿ ಫೋನ್ ಮಾಡಿ, “ಇನ್ನು ಹದಿನೈದು ನಿಮಿಷದಲ್ಲಿ ಬಂದು ಪಿಕ್ ಮಾಡ್ತೀನಿ” ಎಂದಾಗ ಯಾಕಾದರೂ ಈ ಟ್ರಿಪ್ ಗೆ ಹೋಗೋಕೆ ಒಪ್ಪಿಕೊಂಡೆನೋಂತ ಚಿಂತೆಯಾಗಿ, “ಯಾಕೋ ಹೊಟ್ಟೆ ನೋಯ್ತಿದೆ ಕಣೇ, ಮೋಸ್ಟ್ಲಿ ಪಿರಿಯಡ್ಸ್ ಆಗಬಹುದು, ನಾನು ಬರೋಕಾಗಲ್ಲ” ಎಂದು ಸುಳ್ಳು ಹೇಳಿದ್ದೆ. ಆಗವಳು, “ಅಯ್ಯೋ ದಡ್ಡಿ, ಇವತ್ತೇನಾದ್ರೂ ನೀನು ತಪ್ಪಿಸಿಕೊಂಡ್ರೆ, ಮ್ಯಾಡಿನ ನೋಡಿ ಮಾತಾಡ್ಸಿ, ಪಟಾಯಿಸಿಕೊಳ್ಳೋ ಚಾನ್ಸ್ ಕಳ್ಕೋತೀಯ ಅಷ್ಟೇ! ” ಎಂದೊಡನೆ ಸುಳ್ಳು ಹೇಳಿ ಸಿಕ್ಕಿಕೊಂಡ ನಾಚಿಕೆಯಿಲ್ಲದೆ, “ನಿಜ್ವಾಗ್ಲೂ?” ಎಂದು ಕೂಗಿ, ಚಕ್ಕಂತ ರೆಡಿಯಾಗಿದ್ದೆ. ಆದ್ರೆ ಎರಡನೇ ದಿನವೇ ನಿಜಕ್ಕೂ ಪೀರಿಯಡ್ಸ್ ಆಗಿ ನಾನು ಈ ಟ್ರಿಪ್ ಗೆ ಬರದಿದ್ದಿದ್ರೆ ಚೆನ್ನಾಗಿತ್ತು ಅನಿಸಿತು!

     ಅಗತ್ಯವಿರುವವರಿಗೆ ಧನ ಸಹಾಯ, ಬೀದಿ ನಾಟಕಗಳಾಡಿಸುವುದು, ಉಚಿತ ಹೆಲ್ತ್ ಕ್ಯಾಂಪ್ಸ್, ಮಕ್ಕಳಿಗೆ ಕೆರಿಯರ್ ಕೌನ್ಸೆಲಿಂಗ್ ಮುಂತಾದವನ್ನು ಮಾಡುತ್ತಿದ್ದ ನಾವು ಸಾಮಾನ್ಯವಾಗಿ ವೀಕೆಂಡುಗಳಲ್ಲಿ ನಮ್ಮ ನಮ್ಮ ಗಾಡಿಗಳಲ್ಲಿ ಹಳ್ಳಿಗಳನ್ನು ಸುತ್ತುತ್ತಿದ್ದೆವು.  ನನ್ನತ್ರ ಒಂದು ಸ್ಕೂಟಿ ಕೂಡ ಇರಲಿಲ್ಲವಾದ್ದರಿಂದ ಸದ್ಯಕ್ಕೆ ಫಾಲ್ಗುಣಿಯ ಕಾರಿನಲ್ಲೇ ಹೋಗುತ್ತಿದ್ದೆ. ಈ ರೀತಿ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ನಂಗಿಷ್ಟವಿಲ್ಲ ಎಂದೆಷ್ಟೇ ಹೇಳಿದರೂ ಬಿಡದೆ ಈ ಗುಂಪಿಗೆ ನನ್ನನ್ನು ಬಲವಂತವಾಗಿ ಸೇರಿಸಿದ್ದಳು ಫಾಲ್ಗುಣಿ. ನನ್ನ ಆಸಕ್ತಿಗಳು ಸಿನೆಮಾ, ನಾಟಕ, ಅಭಿನಯ, ಪೇಂಟಿಂಗ್ ಇತರೆಯಾಗಿದ್ದರೂ ‘ಏನ್ ಟ್ಯಾಲೆಂಟು ನಿಂದು, ಎಂಥಾ ಬ್ಯೂಟಿ, ಎಫರ್ಟ್ಲೆಸ್ ಆಕ್ಟಿಂಗ್’ ಎಂದೆಲ್ಲಾ ಜ್ಯಾಕ್ ಎತ್ತಿ ಅವಳ ಗುಂಪಿನ ಉದ್ದೇಶ ಈಡೇರಿಸುವಂಥ ಕೆಲಸ ತೆಗೆಯಬಹುದೆಂದು ಅರಿತಿದ್ದಳು. ನನಗೆ ಯಾವುದೇ ವಿಷಯ ಕೊಟ್ಟರೂ ಅದನ್ನು ಬೀದಿ ನಾಟಕವಾಡಿಸುವುದು ಕಷ್ಟವೇನಿರಲಿಲ್ಲ. ಮೈಕ್ ಇಲ್ಲದೆಯೂ ನೆರೆದವರಿಗೆಲ್ಲಾ ಕೇಳಿಸುವಂಥ ನನ್ನ ಜೋರುದನಿ ಅವಳ ಕೆಲಸವನ್ನು ಸುಲಭ ಮಾಡಿತ್ತು. 

     ನಮ್ಮ ವಯಸ್ಸಿನವರು ಸಿನಿಮಾ, ಶಾಪಿಂಗ್, ಟ್ರೆಕ್ಕಿಂಗ್, ಪಬ್ಬಿಂಗ್ ಅಂತೆಲ್ಲಾ ಮಜಾ ಮಾಡ್ತಿದ್ರೆ ನಾವ್ಯಾಕೆ ಈ ಆಂಟಿ ಅಂಕಲ್ಗಳ ಜೊತೆ ಸೋಶಿಯಲ್ ಸರ್ವಿಸ್ ಮಾಡಬೇಕೂಂತ ಫಾಲ್ಗುಣಿ ಜೊತೆ ಜಗಳವಾಡುತ್ತಿದ್ದೆ. ಆಗ ‘ಬರೀ ಆಂಟಿ ಅಂಕಲ್ಗಳಷ್ಟೇ ಅಲ್ಲ, ಒಬ್ಬ ಹಾಟ್ ಹುಡುಗ ಮ್ಯಾಡಿ ಅಂತಿದಾನೆ. ಅವನಂತೂ ನಿನ್ನ ಹೈಟ್ ನೋಡೇ ಬಿದ್ದೋಗ್ ಬಿಡ್ತಾನೆ, ನಿನ್ ಪರ್ಫಾರ್ಮೆನ್ಸ್ ನೋಡಿದ್ರಂತೂ ಕ್ಲೀನ್ ಬೋಲ್ಡ್, ಇಂಟ್ರೊಡ್ಯೂಸ್ ಮಾಡಿಸ್ತೀನಿ ಬಾ’ ಎಂದಾಗ ಮ್ಯಾಡಿ ಫೋಟೋ ನೋಡಿಯೇ ಕನಸೊಂದು ಚಿಗುರಿತ್ತು. ಮೂರು ತಿಂಗಳುಗಳಾಗಿದ್ದರೂ ಒಮ್ಮೆಯೂ ಅವನ ದರ್ಶವಾಗಿರಲೇಯಿಲ್ಲ. ಹಾಗಾಗಿ ಅವನು ಬರ್ತಾನೆಂದೊಡನೆ ನಾನು ಸ್ವಾರ್ಥದಿಂದಲೇ ಹೊರಟಿದ್ದೆ.

     ಈ ಗಣರಾಜ್ಯೋತ್ಸವವನ್ನು ಯಾವುದಾದರೂ ದೂರದ ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ವಿಶೇಷವಾಗಿ ಆಚರಿಸೋದು, ಚಾಕಲೇಟ್ಸ್, ನೋಟಬುಕ್ಸ್, ಶೂಸ್ ಇತರೆ ಗಿಫ್ಟ್ಸ್ ಕೊಡೋದು, ಡ್ರಾಯಿಂಗ್ ಮಾಡಿಸೋದು, ನಾಟಕ ಮಾಡೋದಂತ ನಿರ್ಧಾರವಾಗಿತ್ತು. ಪೂರ್ತಿ ಟ್ರಿಪ್ಪಿನ ರೂಟ್ ಮ್ಯಾಪ್ ಮಾಡಿ ತಂಡವನ್ನು ಲೀಡ್ ಮಾಡುವ ಕೆಲಸ ಮ್ಯಾಡಿಯದಾಗಿತ್ತು. ನಾನು ಅಂಬೇಡ್ಕರ್ ರೂಪಿಸಿದ ಸಂವಿಧಾನದಿಂದ ಹೇಗೆ ಭಾರತದಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಬ್ರಿಟಿಷರಿಗಿಂತಲೂ ಮೊದಲೇ ಸಿಕ್ಕಿತ್ತು ಎನ್ನುವ ಕುರಿತು ನಾಟಕ ಮಾಡುವುದೆಂದೆಣಿಸಿದ್ದೆ. ಅದಕ್ಕೆ ಬೇಕಾದ ಸೈನ್ ಬೋರ್ಡ್ ಗಳನ್ನೆಲ್ಲಾ ತಡ ರಾತ್ರಿಯ ತನಕ ಕುಳಿತು ಚಾರ್ಟ್ ಪೇಪರು, ವಾಟರ್ ಪೇಂಟ್ಸ್, ಸ್ಕೆಚ್ ಪೆನ್ಸ್, ಮಾರ್ಕರುಗಳನ್ನೆಲ್ಲಾ ಹರಡಿಕೊಂಡು ಬರೆಯುತ್ತಿದ್ದಾಗ ಮ್ಯಾಡಿಯನ್ನು ಇಂಪ್ರೆಸ್ ಇಷ್ಟೆಲ್ಲಾ ಮಾಡ್ತಿದ್ದೀನಾ ಅಂತ ನನ್ನನ್ನೇ ಕೇಳಿಕೊಂಡು ನಾಚಿಕೊಂಡಿದ್ದೆ. 

ನೆನ್ನೆ ಬೆಂಗಳೂರಿನಿಂದ ಹೊರಟಾಗಲೂ ನಾವು ಇದೇ ಹೋಟೆಲಿನಲ್ಲೇ ಊಟಕ್ಕೆ ನಿಲ್ಲಿಸಿದ್ದೆವು. ನೆನ್ನೆ ಮ್ಯಾಡಿಯನ್ನು ಅಷ್ಟು ಹತ್ತಿರದಿಂದ ನೋಡಿದಾಗ ನನ್ನ ಖುಷಿಯನ್ನು ಹತ್ತಿಕ್ಕಲು ಹೆಣಗಿದ್ದು, ಅವನ ಫ್ಯಾಟ್ ಬಾಯ್ ಹಾರ್ಲೆ ಡೇವಿಡ್ಸನ್ ಬೈಕನ್ನು ಮುಟ್ಟಿ ಪುಳಕಗೊಂಡಿದ್ದು, ನೆಪ ಮಾಡಿ ಮಾತಾಡಿಸುತ್ತಿದ್ದುದೆಲ್ಲಾ ನೆನಪಾಯಿತು.

“ಮ್ಯಾಡಿ ನೀವ್ಯಾಕೆ ಹೆಚ್ಚಾಗಿ ಟ್ರಿಪ್‌ಗಳಿಗೆ ಬರಲ್ಲ?” ಎಂದು ತಡೆಯಲಾರದೆ ಕೇಳಿಬಿಟ್ಟಾಗ, “ಹಾನೆಸ್ಟ್ಲಿ, ನನಗೆ ಈ ರೀತಿ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ಇಷ್ಟವಿಲ್ಲ. ಈ ರೀತಿ ಬಡಮಕ್ಕಳಿಗೆ ಗಿಫ್ಟ್ಸ್ ಕೊಟ್ಟು, ಅದರ ಫೋಟೋ, ವಿಡಿಯೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಳ್ಳುವುದೆಲ್ಲಾ ಒಂದು ರೀತಿಯ ಶೋ-ಆಫ್! ನಾವು ಕೊಡೋ ಒಂದು ನೋಟಬುಕ್‌ನಿಂದ, ಸೈಜ್ ಚೆಕ್ ಮಾಡದೇ ತರೋ ಶೂಸ್‌ನಿಂದ ಅವರ ಲೈಫ್ ಏನೂ ಬದ್ಲಾಗಿಬಿಡಲ್ಲ” ಎಂದಿದ್ದ.  ಸೋಶಿಯಲ್ ಸರ್ವಿಸ್ ಬಗ್ಗೆ ಅವನಿಗೂ ನನ್ನಂತೆ ಆಸಕ್ತಿಯಿಲ್ಲ ಎನ್ನುವುದು ಒಂಥರಾ ಖುಷಿಕೊಟ್ಟಿತ್ತು. 

     ನಾನು ಕುಳಿತಿದ್ದ ಟೇಬಲ್ನಿಂದ ಹೊರಗೆ ಮರದ ಕೆಳಗೆ ನಿಂತು ಸಿಗರೇಟ್ ಸೇದುತ್ತಿದ್ದ ಮ್ಯಾಡಿಯ ಬೆನ್ನು ಮಾತ್ರ ಕಾಣಿಸುತಿತ್ತು. ನೆನ್ನೆಯಿಂದ ಮೊದಲ ಬಾರಿಗೆ ದೂರದಿಂದಲೇ ಅದು ಅವನೇ ಎಂದು ಗುರುತಿಸಲು ಅವನ ಬೈಕಾಗಲೀ,  ದುಬಾರಿ ಜಾಕೆಟಾಗಲೀ, ಬೋಡು ತಲೆ ಮೇಲೆರಡು ಕೊಂಬು ಮೂಡಿದಂತಿದ್ದ ಹೆಲ್ಮೆಟ್ ಆಗಲೀ, ಸಿಗರೇಟಿನ ವಾಸನೆಯಾಗಲೀ, ಹತ್ತಿರ ಸುಳಿದರೆ ಸಾಕು ಉಸಿರೆಳೆದುಕೊಳ್ಳಬೇಕೆನ್ನಿಸುವ ಸೆಂಟಾಗಲೀ, ಅವತಾರ್ ಸಿನಿಮಾದ ಹೀರೋನಂಥ ಎತ್ತರದ ನಿಲುವಾಗಲೀ ಬೇಕಾಗಲಿಲ್ಲ!

ಫಾಲ್ಗುಣಿ ನೆನ್ನೆಯಿಂದಲೂ ಫೋನಿನಲ್ಲಿ ತೆಗೆದಿದ್ದ ಫೋಟೋಗಳನ್ನು ಒಂದೊಂದೇ ನೋಡುತ್ತಾ, ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುತ್ತಾ, ಖುಷಿಯಿಂದ ತೋರಿಸುತ್ತಿದ್ದರೆ, ನಾನು ಬೆಳಿಗ್ಗೆಯಿಂದ ಸ್ಕೂಲಿನಲ್ಲಿ ನಡೆದದ್ದನ್ನೆಲ್ಲಾ ಒಡಲಲ್ಲಿ ಬೆಂಕಿಯಂತಿಟ್ಟುಕೊಂಡು ಮಂಕಾಗಿ ಕೂತುಬಿಟ್ಟಿದ್ದೆ.

“ಏನಾಯ್ತೆ ನಿಂಗೆ? ಯಾಕ್ ಹಾಗೆ ಸಾಂಬಾರ್ ಇಲ್ದಿರೋ ಇಡ್ಲಿ ಥರ ಸಪ್ಪಗಿದೀಯ?” 

ನನಗೆ ಖಾಲಿಯಾಗಿದ್ದ ಅವಳ ಸಾಂಬಾರ್ ಬಟ್ಟಲಿನಲ್ಲೇ ಮುಳುಗಿ ಸಾಯಬೇಕೆನಿಸುತಿತ್ತು. 

“ಅಥವಾ ಪೀಟಿ ಮೇಷ್ಟ್ರೋ, ಹೆಡ್ ಮೇಷ್ಟ್ರೋ ಲೈನ್ ಹೊಡಿತಿದ್ರಾ?”

ನಾನು ಅದಕ್ಕೂ ಪ್ರತಿಕ್ರಿಯಿಸದೆ ಮ್ಯಾಡಿ ಕಡೆಗೇ ನೋಡುತ್ತಾ ಕುಳಿತಿದ್ದೆ.

“ಓಹ್, ಸೋ ಯು ಆರ್ ಮ್ಯಾಡ್ ಅಬೌಟ್ ಮ್ಯಾಡಿ ಈಸ್ ಇಟ್? ಗಾಡ್ ಸೇವ್ ಯು ಫ್ರಮ್ ದಟ್ ಹಾರ್ನಿ ಫೆಲೋ” 

ನಾನು ಅಚ್ಚರಿಯಿಂದ ಅವಳ ಕಡೆ ನೋಡಿದೆ.

“ಅವನ ಹೆಲ್ಮೆಟ್ ಮೇಲೆ ಎರಡೆರಡು ಕೋಡುಗಳಿದಾವಲ್ಲ ಅದಕ್ಕೇ ತಮಾಷೆ ಮಾಡಿದೆ ಅಷ್ಟೇ, ನಂಗೇನ್ ಗೊತ್ತು ಅವನೆಷ್ಟು ಹಾರ್ನಿ ಅಂತ. ನಮ್ಮಕ್ಕನಿಗೆ ಕೇಳಿದ್ರೆ ಗೊತ್ತಾಗಬಹುದು”

“ಏನು?”

“ಅಯ್ಯೋ ಹಾಗಲ್ಲ… ಅಂದ್ರೆ… ಅವ್ನು ನಮ್ಮಕ್ಕನ ಮನೆಯೆದುರಿಗೇ ಇರೋದು. ಫ್ಯಾಮಿಲಿ-ಫ್ರೆಂಡ್ಸ್ ಅಂತ ಹೇಳಿದೆನಷ್ಟೇ.” ಎಂದು ನಕ್ಕು, “ಅವ್ನು ತುಂಬಾ ಒಳ್ಳೇವ್ನಂತ  ಕೇಳಿದೀನಿ. ಅಕ್ಕನ ಮಗನ ಜೊತೆ ತುಂಬಾ ಆಡ್ತಾನಂತೆ. ಎಷ್ಟೊಂದು ಸಲ ಬೈಕಲ್ಲಿ ರೌಂಡ್ ಹೊಡುಸ್ತಾನಂತೆ.”

     ನನಗೆ ಅವಳ ಮಾತಿನಲ್ಲಿ ಆಸಕ್ತಿ ಹುಟ್ಟಿದ್ದಕ್ಕಿಂತ ಆತಂಕವೇ ಹೆಚ್ಚಾಗಿದ್ದನ್ನು ನೋಡಿ, “ಯಾವಾಗ್ಲೂ ನೆಗಟಿವ್ ಆಗೇ ಯೋಚಿಸ್ಬೇಡ, ಮೇ ಬಿ ಯು ಆರ್ ಮಿಸ್ಟೇಕನ್” ಎಂದಳು. ನಾನು ಮತ್ತೆ ಮ್ಯಾಡಿ ಕಡೆ ನೋಡಿದೆ. ಅವನ ತಲೆಯ ಮೇಲಿನಿಂದ ಸಿಗರೇಟಿನ ಹೊಗೆ ಹರಡಿಕೊಳ್ಳುತ್ತಿದ್ದರೆ ನನ್ನ ಕಣ್ಮುಂದೆ ಬೆಳಗಿನ ಘಟನೆಗಳೆಲ್ಲಾ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿದ್ದವು.

***
     ಬೆಳಿಗ್ಗೆ ಶಾಲೆಯಲ್ಲಿ ಮೇಷ್ಟುಗಳು, ಮಕ್ಕಳು ಮತ್ತು ಪೋಷಕರನ್ನೆಲ್ಲಾ ಕಾಯಿಸಬಾರದು, ಸರಿಯಾದ ಸಮಯಕ್ಕೆ ಹಾಜರಾಗಲೇಬೇಕೆಂದು ಫಾಲ್ಗುಣಿ ಎಲ್ಲರನ್ನೂ ಬಲವಂತವಾಗಿ ಏಳಿಸಿ, ಬೇಗನೇ ಹೊರಡಿಸಿಕೊಂಡು ಬಂದಿದ್ದಳು. ನಮ್ಮ ಗುಂಪಿನ ಲೋಗೋ ಇದ್ದ ಬಿಳಿ ಟಿ-ಶರ್ಟ್, ನೀಲಿಜೀನ್ಸ್ ಹಾಕಿಕೊಂಡು, ನಮ್ಮ ಗಾಡಿಗಳಿಗೆ ಬಾವುಟಗಳನ್ನು ಸಿಕ್ಕಿಸಿಕೊಂಡು, ಗದ್ದಲವೆಬ್ಬಿಸುತ್ತಾ ನಾವುಗಳು ಶಾಲೆಯ ಕಾಂಪೌಂಡ್ ಒಳಗೆ ಹೋಗುತ್ತಿದ್ದಂತೆಯೇ ನಿದ್ದೆಗಣ್ಣಿನ ಮಕ್ಕಳ ಕಣ್ಣುಗಳು ಮಿಂಚಿದ್ದವು! ಸಂಭ್ರಮದಿಂದಿದ್ದ ಚಿಕ್ಕಮಕ್ಕಳೆಲ್ಲಾ ಹೋ ಎಂದು ಖುಷಿಯಿಂದ ಕೂಗುತ್ತಾ ನಮ್ಮತ್ತ ಓಡಿಬರುವುದನ್ನು ಟೀಚರುಗಳು ಅಸಹಾಯಕರಾಗಿ ನೋಡುತ್ತಾ ನಿಂತುಬಿಟ್ಟಿದ್ದರು. ನಮ್ಮತ್ರ ಬಂದು ಬಾವುಟವನ್ನು ಕೈಗೆತ್ತಿಕೊಳ್ಳುವುದು, ಮ್ಯಾಡಿಗೆ ಒಂದು ರೌಂಡ್ ಬೈಕಲ್ಲಿ ಕರ್ಕೊಂಡು ಹೋಗ್ತೀರಾ ಎಂದೆಲ್ಲಾ ಕೇಳುವುದು, ಅವನ ಹೆಲ್ಮೆಟ್ ಹಾಕಿಕೊಂಡು ಗುಮ್ ಬುಡ್ತೀನಿ ಎಂದೆಲ್ಲಾ ತರಲೆ ಮಾಡತೊಡಗಿದರು. ಸ್ವಲ್ಪ ದೊಡ್ಡಮಕ್ಕಳು ವಯಸ್ಸಿಗೆ ಸಹಜವಾದ ಸಂಕೋಚದಿಂದ ಅಲ್ಲಲ್ಲೇ ನಿಂತಿದ್ದರು.

ಫಾಲ್ಗುಣಿ, “ಈ ಪುಟ್ಟಮಕ್ಕಳನ್ನು ನೋಡಿದ್ರೆ ನನಗೆ ನನ್ನಕ್ಕನ ಮಗ ಗುಂಡನ ನೆನಪಾಗ್ತಿದೆ” ಎಂದಳು.

     ಅಷ್ಟರಲ್ಲಿ ಪೀಟಿ ಮೇಷ್ಟ್ರು ಬಂದು ಮಕ್ಕಳನ್ನು ಗದರಿಕೊಂಡು, ನಮ್ಮನ್ನು ಸ್ವಾಗತಿಸಿದರು. ಅಂಗಳದಲ್ಲಿ ಪುಟಾಣಿ ವೇದಿಕೆಯಿತ್ತು. ಕುಂಟದಂತೆ ಕಲ್ಲಿಟ್ಟ ಕಾಲು ಮುರಿದ ಕುರ್ಚಿಯೊಂದರ ಮೇಲಿದ್ದ ಗಾಂಧೀಜಿಯ ಫೋಟೋ, ಕಂಠ ಸೀಳಿದೊಂದು ಸ್ಟೀಲ್ ಕಪ್ ಒಳಗೆ ಗಂಧದಕಡ್ಡಿಗಳನ್ನು ನಿಲ್ಲಿಸಿಕೊಂಡಿದ್ದ ಮರಳು, ಹೊಟ್ಟೆ ತುಂಬಾ ಹೂವುಗಳನ್ನು ತುಂಬಿಕೊಂಡು ಹಾರಾಡಲು ಕಾಯುತ್ತಿದ್ದ  ಬಾವುಟ,  ಅಡ್ಡಾದಿಡ್ಡಿ ಓಡಾಡುವ ಮಕ್ಕಳ ಕಾಲುಗಳಿಗೆ ಕಣ್ಣುಬರಿಸಿದ್ಧ ಬಣ್ಣ ಬಣ್ಣದ ರಂಗೋಲಿ, ಮಂದಾರ, ದಾಸವಾಳಗಳ ಮಕರಂದ ತುಂಬಿಕೊಂಡಿದ್ದ ಚಹಾ ಕಪ್ ಎಲ್ಲಾ ಸರಳವಾದೊಂದು ಸಂಭ್ರಮಕ್ಕೆ ಸಜ್ಜಾದಂತಿದ್ದವು. ಅಲ್ಲಲ್ಲಿ ಹರಿದಿದ್ದರೂ ಬಿಸಿಲುಕೋಲುಗಳನ್ನು ಇಳಿಸಿಕೊಡುತಿದ್ದ ಶಾಮಿಯಾನ ಮಕ್ಕಳನ್ನು ಬೆಚ್ಚಗಾಗಿಸಿತ್ತು. ಹುಡುಗಿಯರ ಬಟ್ಟೆಗಳ ಮೇಲಿನ ಚಮಕಿಗಳು ಪ್ರತಿಫಲಿಸಿ  ಹಲ್ಲುದುರಿದ ಮಕ್ಕಳ ನಗುವನ್ನೂ ಹೊಳೆಯಿಸಿತ್ತು. ಜಮಖಾನದಲ್ಲಿದ್ದ ತೂತುಗಳಲ್ಲಿ ಬೆರಳು ತೂರಿಸಿ ಇನ್ನಷ್ಟು ದೊಡ್ಡದು ಮಾಡುತ್ತಾ ಕೆಲವು ಮಕ್ಕಳು ತುಂಟಾಟದಲ್ಲಿ ತೊಡಗಿದ್ದರು. 

     ಇದೆಲ್ಲದರ ನಡುವೆ ನನ್ನ ಕಣ್ಣುಗಳು ಮಾತ್ರ ನಾನೆಷ್ಟು ಲೈನ್ ಹೊಡೀತಿದ್ರೂ ಕಾಳು ಹಾಕದೆ ತಪ್ಪಿಸಿಕೊಂಡು ಹೋಗುತ್ತಿದ್ದ ಮ್ಯಾಡಿಯನ್ನೇ ಹುಡುಕುತ್ತಿದ್ದವು. ನಾವು ಹುಡುಗಿಯರು ಯಾಕಿಂಗೆ ಜೊಲ್ಲು ಪಾರ್ಟಿ ಹುಡುಗರನ್ನು ಇಗ್ನೋರ್ ಮಾಡಿ, ನಮ್ಮನ್ನು ಇಗ್ನೋರ್ ಮಾಡುವ ಹುಡುಗರ ಹಿಂದೆ ಬೀಳ್ತೀವಂತ ಹಳಿದುಕೊಂಡೆ.

    “ಇವತ್ತು ಬೆಂಗಳೂರಿನಿಂದ ಯಾರೋ ಬತ್ತರೆ, ಏನಾರ ಗಿಫ್ಟ್ಸ್ ಕೊಡ್ತಾರೆ, ತಪ್ಪಿಸ್ಕಳ್ಳಬಾರ್ದು ಅಂತ ಎಲ್ಲಾ ಮಕ್ಳು ಬಂದವ್ರೆ” ಪೀಟಿ ಮೇಷ್ಟ್ರು ತಮಾಷೆಯೆನ್ನುವಂತೆ ಹೇಳಿ, ಜಮಖಾನದ ಹಿಂದಿದ್ದ ಬೆಂಚುಗಳ ಮೇಲೆ ನಮಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ವೇದಿಕೆ ಮೇಲೆ ಗ್ರಾಮದ ಗಣ್ಯರು, ಅತಿಥಿಗಳು, ಹೆಡ್-ಮೇಷ್ಟ್ರು ಕುಳಿತಿದ್ದರು. ಅವರ ಎಡಕ್ಕೆ ಸ್ವಲ್ಪ ದೂರದಲ್ಲಿ ಹತ್ತಾರು ಮಕ್ಕಳು ಬ್ಯಾಂಡ್ ಸೆಟ್ ಹಿಡಿದು ತಮ್ಮ ಸರದಿಗಾಗಿ ಕಾಯುತ್ತಾ ಬೇಸರಗೊಂಡಂತಿದ್ದರು. ಶಾಲೆಯ ಮತ್ತೊಂದು ಬದಿಯಲ್ಲಿ ಬಿಸಿ ಬಿಸಿ ಉಪ್ಪಿಟ್ಟು ಸಿದ್ಧವಾಗುತ್ತಿತ್ತು!

     ನಾನು ಉಡುಗೊರೆಗಳನ್ನೆಲ್ಲಾ ಬೆಂಚುಗಳ ಮೇಲೆ ಜೋಡಿಸಿಟ್ಟು ಪೆಚ್ಚಾಗಿ ನೋಡಿದೆ. ಮ್ಯಾಡಿ ಮಾತು ನೆನಪಾಗಿ ನಿಟ್ಟುಸಿರಿಟ್ಟು ಮಕ್ಕಳ ಕಡೆ ನೋಡಿದರೆ ಅವರೆಲ್ಲಾ ಉಡುಗೊರೆಗಳನ್ನೇ ಆಸೆಯಿಂದ ನೋಡುತ್ತಿದ್ದರು. ನಾನು ಮುಗುಳ್ನಕ್ಕು, “ಪ್ರೋಗ್ರಾಮ್ ಮುಗಿಯೋ ತನಕ ಸೈಲೆಂಟ್ ಆಗಿ ಕೂತಿರಿ, ಎಲ್ಲರಿಗೂ ಸಿಗುತ್ತೆ.” ಎಂದೆ. ಅವಸರದಲ್ಲಿ ಮಾಡಿದ್ದ ನನ್ನ ನಾಟಕದ ಸೈನ್ ಬೋರ್ಡುಗಳಿಗೆ ಮಾರ್ಕರುಗಳಿಂದ ಕಲಾತ್ಮಕವಾಗಿ ಫೈನಲ್ ಟಚ್ ಕೊಡುತ್ತಾ ಕುಳಿತೆ. ನನ್ನ ಜೊತೆ ನಾಟಕದಲ್ಲಿ ಪಾರ್ಟ್ ಮಾಡುವ ಹುಡುಗರು  ಸ್ಕ್ರಿಪ್ಟ್ ಹಿಡಿದುಕೊಂಡು ಆಗಾಗ ಕಣ್ಣಾಡಿಸುತ್ತಿದ್ದರು.

     ಮಕ್ಕಳ ಆಶಯವನ್ನರಿಯದೆ ಉರುಹೊಡೆದ ಬಡಿದೇಳಿಸುವ ಭಾಷಣಗಳು, ಹುರುಪಿಲ್ಲದ ಹಾಡುಗಳು, ನವೆಯಾಗಿಸುವ ನೃತ್ಯಗಳು ನನಗೆ ಬಹಳ ಕಿರಿಕಿರಿಯಾಗುತ್ತಿತ್ತು.  

    “ಇಂಥ ಹಳ್ಳಿಗೆ ಬಂದು ರಂಗಶಂಕರದಂಥ ಪರ್ಫಾರ್ಮೆನ್ಸ್ ಎಕ್ಸ್ಪೆಕ್ಟ್ ಮಾಡ್ಬೇಡ, ಮುಗ್ಧ ಮಕ್ಕಳ ಉತ್ಸಾಹ ಮುಖ್ಯ” ಎಂದು ಫಾಲ್ಗುಣಿಯಿಂದ ಬೈಸಿಕೊಂಡು ನಾನು ತೆಪ್ಪನೆ ಅತ್ತಿತ್ತ ನೋಡತೊಡಗಿದೆ. ಶಾಲೆಯ ಸುತ್ತ ಕಾಂಪೌಂಡ್ ಇದ್ದರೂ ಒಂದು ಮೂಲೆಯಲ್ಲಿ ಗೋಡೆ ಕುಸಿದಿತ್ತು. ಅಲ್ಲಿಂದ ಮೊದಲು ಒಂದು ನಾಯಿಮರಿ ಜಿಗಿಯುತ್ತಾ ಬಂತು. ಅದರ ಹಿಂದೆಯೇ ನಾಲ್ಕೈದು ವರ್ಷದ ಬಾಲಕನೊಬ್ಬ ಜಿಗಿದು ಬಂದ. ಗಮನಿಸಿದರೆ ನಿಕ್ಕರ್ ತೊಟ್ಟೇ ಇಲ್ಲ! ಇದೇನು ಬಡತನವೋ, ಉದ್ಧಟತನವೋ ಎಂದು ನನಗೆ ಮುಜುಗರವಾಯಿತು. ಕೂಡಲೇ ಅವನ ಹಿಂದೆಯೇ ಒಬ್ಬ ಹೆಂಗಸು ಬಂದು ಅವನನ್ನು ಎಳೆದುಕೊಂಡು ಮತ್ತೆ ಮೋಟುಗೋಡೆಯ ಹಿಂಬದಿಗೆ ಹೋದಳು. “ಯವ್ವಾ ಬಿಡೇ, ಬಿಡೇ” ಅವನು ಕೂಗಿಕೊಳ್ಳುತ್ತಿದ್ದ. ನಾನಿದೇನು ತಮಾಷೆಯೆಂದು  ಅತ್ತಲೇ ನೋಡುತ್ತಿದ್ದೆ. ಆನಂತರ ನಾಯಿಮರಿಯೂ ತನ್ನ ಸ್ನೇಹಿತನಿಗಾಗಿ ಮರಳಿತು. ಕೆಲನಿಮಿಷಗಳ ಬಳಿಕ ನಾಯಿಮರಿ, ಹುಡುಗ ಇಬ್ಬರೂ ಓಡೋಡಿ ಬಂದರು. ಈಗವನು ನಿಕ್ಕರ್ ಹಾಕಿಕೊಂಡಿದ್ದು ನನಗೆ ಸಮಾಧಾನವಾಯಿತು. ಅವನು ನಾನು ಕುಳಿತಿದ್ದ ಬೆಂಚಿನಿಂದ ಸ್ವಲ್ಪವೇ ಮುಂದೆ ಕುಳಿತಿದ್ದ ಒಬ್ಬನೇ ಪುಟ್ಟ ಹುಡುಗನ ಜೊತೆ ಕುಳಿತು ನನ್ನ ಕಡೆ ನೋಡಿ ದೊಡ್ಡದಾಗಿ ನಕ್ಕನು.

“ನಿನ್ನ ಹೆಸರೇನು?” 

“ರಾಮಲಿಂಗ, ಒನ್ನೇ ಕ್ಲಾಸು” ಎಂದು ಹೇಳಿ ಹಲ್ಕಿರಿದು, “ಇವ್ನು ಚೆನ್ನ, ಇವ್ನಿಗೆ ಕೈ ಮುರ್ದೋಗೈತೆ, ನೆನ್ನೆ ಮರ ಹತ್ತಕೋಗಿ ಬಿದ್ದೋದ, ಪಾಪ” ಎಂದು ರಾಗವಾಗಿ ಹೇಳಿದ.

     ಚೆನ್ನನ ಬಲಗೈ ಮುರಿದಿತ್ತು. ಒಂದು ಮಾಸಿದ ಟವೆಲನ್ನು ಕೊರಳಿಗೆ ಕಟ್ಟಿ, ಪ್ಲಾಸ್ಟರ್ ಹಾಕಿದ ಅವನ ಕೈಯನ್ನು ಅದರಲ್ಲಿ ತೂರಿಸಿಡಲಾಗಿತ್ತು. ಆ ಎಳೆವಯಸ್ಸಿನ ಮುಖದ ಮೇಲೆ ನೋವೆಷ್ಟು ದಟ್ಟವಾಗಿತ್ತೆಂದರೆ ಅವನಿಗೆ ಯಾವುದರಲ್ಲಿಯೂ ಆಸಕ್ತಿಯಿದ್ದಂತಿರಲಿಲ್ಲ. ಅಪ್ಪ-ಅಮ್ಮನ ಬಲವಂತಕ್ಕೋ, ಮೇಷ್ಟ್ರುಗಳ ಹೆದರಿಕೆಯಿಂದಲೋ ಸುಮ್ಮನೆ ಬಂದು ಕುಳಿತಂತಿತ್ತು. ನಾನು, “ಓಹ್, ತುಂಬಾ ನೋಯ್ತಾ ಇದೆಯಾ ಪುಟ್ಟಾ?” ಎಂದು ಕೇಳಿದೆ. ಅಷ್ಟು ಕೇಳಿದ್ದೇ ಸಾಕು, ರಾಮಲಿಂಗ ನನ್ನೆಡೆಗೆ ಎದ್ದು ಬಂದು, “ಊಂ ಆಂಟಿ, ನೆನ್ನೆಯಿಂದ ಅಳ್ತಾ ಅವ್ನೆ, ಏನ್ ಕೊಟ್ಟರೂ ಸುಮ್ಕಾಯ್ತಾನೇ ಇಲ್ಲ” ಎಂದು ಹೇಳಿ ನಾವು ಜೋಡಿಸಿಟ್ಟ ತಿನಿಸು ಉಡುಗೊರೆಗಳ ಕಡೆ ನೋಡತೊಡಗಿದ. ನಾನು ತಡೆಯಲಾರದೆ ಎದ್ದು ಹೋಗಿ ಒಂದು ಚಾಕೊಲೇಟ್ ತಂದು ಚೆನ್ನನ ಕೈಗೆ ಕೊಟ್ಟೆ. ಅವನ ಮುಖದ ಮೇಲೆ ಬಲವಂತವಾಗಿ ಸಣ್ಣ ನಗು ಮಿಂಚಿತು. ನಾನು ಮರಳಿ ಬಂದಾಗ ರಾಮಲಿಂಗ ಇನ್ನೇನು ತನ್ನ ಸರದಿ ಎಂದು ಉತ್ಸುಕನಾಗಿ ನಿಂತಿದ್ದ. ಅಷ್ಟರಲ್ಲಿ ಪೀಟಿ ಮೇಷ್ಟ್ರು ಇತ್ತ ಕಡೆಯೇ ಬಂದು ಅವನಿಗೆ ಕುಳಿತುಕೊಳ್ಳುವಂತೆ ಗದರಿಸಿದರು. ನಾನು ಆಮೇಲೆ ಕೊಡ್ತೀನಿ ಎಂದು ಕಣ್ಣಿನಲ್ಲೇ ಸನ್ನೆ ಮಾಡಿ ಹೇಳಿ ಕುಳಿತು ಮಕ್ಕಳ ನೃತ್ಯ ನೋಡತೊಡಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಮುಗಿದಾಗ ನೋಡಿದರೆ ರಾಮಲಿಂಗ ಮತ್ತವನ ನಾಯಿಮರಿ ಯಾವಾಗಲೋ ಎದ್ದು ಹೋಗಿಬಿಟ್ಟಿದ್ದರು. ಅವನು ಮರಳಿ ಬರುವುದರೊಳಗೆ ಎಲ್ಲಾ ಚಾಕೊಲೇಟ್ಸ್ ಖಾಲಿಯಾಗಿಬಿಟ್ಟಾವೆಂದು ಒಂದು ಚಾಕಲೇಟನ್ನು ನನ್ನ ಬ್ಯಾಗಿನೊಳಗಿಟ್ಟುಕೊಂಡೆ. ಇನ್ನೇನು ಉಡುಗೊರೆಗಳನ್ನು ಪಡೆಯುವ ಸಮಯವೆಂದು ಮಕ್ಕಳೆಲ್ಲಾ ಖುಷಿಯಿಂದ ಸಾಲಾಗಿ ನಿಂತರು. ನಾನು ಅವರಿಗೆಲ್ಲಾ ಹಂಚುತ್ತಾ ಅತ್ತಿತ್ತ ಕಣ್ಣಾಯಿಸಿದಾಗ ಮ್ಯಾಡಿ ಮಾತ್ರ ಎಲ್ಲೂ ಕಾಣಲಿಲ್ಲ.

     ಹೆಡ್ ಮೇಷ್ಟ್ರು ‘ತಿಂಡಿ ತಿಂದ ಮೇಲೆ ಬೆಂಗಳೂರಿನ ತಂಡದಿಂದ ಹಲವಾರು ಕಾರ್ಯಕ್ರಮಗಳಿವೆ, ಯಾರೂ ಹೋಗಬಾರದು’ ಎಂದು ಅನೌನ್ಸ್ ಮಾಡಿದರು. ಆಗಲೇ ಸಮಯ ಹತ್ತೂವರೆಯಾಗಿತ್ತು, ಚೆನ್ನಾಗಿ ಹಸಿದಿದ್ದ ನಾವು ಬಿಸಿಬಿಸಿ ಉಪ್ಪಿಟ್ಟು ಸವಿಯಲು ಎದ್ದೆವು. ಆಗಲೂ ಮ್ಯಾಡಿ ಕಾಣಲಿಲ್ಲ. ತಿಂಡಿ ಮುಗಿಸಿ ನಾನೂ, ಫಾಲ್ಗುಣಿ ಕೈ ತೊಳೆದುಕೊಳ್ಳಲು ಶೌಚಾಲಯದ ಕಡೆಗೆ ಹೋಗುತ್ತಿರುವಾಗ ಮೋಟುಗೋಡೆಯ ಮೇಲಿನಿಂದ ಮತ್ತೆ ಜಿಗಿದು ರಾಮಲಿಂಗ ಒಳಗೋಡಿ ಬಂದ.

“ಏಯ್ ರಾಮಲಿಂಗ, ನಿಂತುಕೊಳ್ಳೋ, ಎಲ್ಲೋ ಹೋಗಿದ್ದೆ, ತಗೋ … ” ಎಂದು ಕೂಗಿ ಕರೆದೆ. ಅವನೋ ಚಾಕಲೇಟ್ ಫ್ಯಾಕ್ಟರಿಯೇ ತನ್ನ ನಿಕ್ಕರಿನ ಜೇಬಿನಲ್ಲಿರುವಂತೆ ಅದನ್ನು ಹಿಡಿದುಕೊಂಡು ಕುಣಿದಾಡುತ್ತಾ ಚೆನ್ನ ಕುಳಿತಿದ್ದ ಕಡೆಗೆ ಹೋಗುತ್ತಿದ್ದ. ನಾನು ಮತ್ತೆ ಕರೆದಾಗ, ಬಲವಂತಕ್ಕೆ ನನ್ನ ಬಳಿ ಬಂದ.

“ಎಲ್ಲೋ ಹೋಗಿದ್ದೆ? ನೀನ್ಯಾಕೆ ಯಾವಾಗ್ಲೂ ಕಾಂಪೌಂಡು ಹಾರಿ ಬರ್ತೀಯ, ಗೇಟಿಂದ ಬರ್ಬೇಕು ತಾನೇ?” ನನ್ನ ಪ್ರಶ್ನೆಯಿಂದಲೇ ಮೊದಲ ಬಾರಿಗೆ ಅವನೂ ಆ ಕುರಿತು ಯೋಚಿಸುತ್ತಿರುವುದೆನಿಸಿತು.

“ಕಳ್ಳ ದಾರೀಲಿ ಕಲ್ಲು ಮುಳ್ಳುಗಳಿರ್ತವೆ ಕಣೋ” ಫಾಲ್ಗುಣಿ ನಗುತ್ತಾ ಗದರಿದಳು.

“ಅವ್ನಿಗೆ ತೆಗ್ದಿರೋ ಗೇಟೂ, ಬಿದ್ದೋಗಿರೋ ಗೋಡೆ ಎರಡೂ ದಾರಿಗಳಷ್ಟೇ; ಕಳ್ಳ ದಾರಿ ಸುಳ್ಳು ದಾರಿ ಅನ್ನೋ ಮುಳ್ಳುಗಳು ಚುಚ್ಚೋದಿಕ್ಕೆ ಇನ್ನೂ ನಾಜೂಕಾಗ್ಬೇಕು ಅವನ ಕಾಲುಗಳು”

“ಓಹೋ, ಇದೇನು ನಿನ್ನ ಮುಂದಿನ ನಾಟಕದ ಡೈಲಾಗಾ?”

“ಹೇಗಿದೆ?” 

“ಸೂಪರ್” ಎಂದು ಹೇಳಿ ಕೈ ತೊಳೆದುಕೊಳ್ಳಲು ಹೋದಳು.

ಛೇ, ಇನ್ನೊಂಚೂರು ಡೀಟೈಲ್ ಆಗಿ ಹೊಗಳಬಾರದಿತ್ತಾ ಇವ್ಳು ಎಂದುಕೊಂಡು ಮತ್ತೆ ರಾಮಲಿಂಗನಿಗೆ, “ಬಾರೋ ಇಲ್ಲಿ, ಚಾಕ್ಲೇಟ್ ಬೇಡ್ವಾ” ಅಂತ ನನ್ನ ಬ್ಯಾಗಿನಿಂದ ಚಾಕ್ಲೇಟ್ ತೆಗೆದು ಹತ್ತಿರಕ್ಕೆ ಕರೆದೆ. ಅವನು ಅನುಮಾನಿಸುತ್ತಲೇ ಬಂದು ಮೆಲ್ಲನೆ, “ಇಲ್ನೋಡಿ… ” ಎಂದು ತನ್ನ ನಿಕ್ಕರಿನ ಜೇಬಿನಿಂದ ಚಾಕೊಲೇಟಿನ ದೊಡ್ಡ ಬಾರ್ ತೆಗೆದು ತೋರಿಸಿದ. ನಾವು ಮಕ್ಕಳಿಗೆ ತಂದಿದ್ದು ಅದಕ್ಕಿಂತ ಚಿಕ್ಕ ಚಾಕೊಲೇಟ್ಸ್ ಆಗಿದ್ದವು.

“ಈ ಚಾಕೊಲೇಟ್ ಯಾರು ಕೊಟ್ರು? ನಾವು ಇಂಥದ್ದು ತಂದೇ ಇಲ್ವಲ್ಲ?” ನಾನು ಅಚ್ಚರಿಯಿಂದ ಕೇಳಿದೆ.

“ಒಬ್ಬರು ಅಂಕಲ್ ಕೊಟ್ರು, ಶ್ ಯಾರಿಗೂ ಹೇಳ್ಬೇಡ ಅಂದವ್ರೆ” ಎಂದು ಚಾಕೊಲೇಟ್ ಅನ್ನು ಜೇಬಿನಲ್ಲಿಟ್ಟುಕೊಂಡ.

“ಓಹೋ ನಿಂದೇ ಚಾನ್ಸ್ ಬಿಡಪ್ಪ. ಎಷ್ಟು ದೊಡ್ಡ ಚಾಕಲೇಟ್ ಸಿಕ್ಕಿದೆ ನಿಂಗೆ. ನಂಗೊಂದು ಕೊಡುಸ್ತೀಯಾ?” ನಾನು ತಮಾಷೆ ಮಾಡಿದೆ.

ಅವನು ಜೋರಾಗಿ ನಗತೊಡಗಿದ.

“ಯಾಕೆ ಬರೀ ಚಿಕ್ ಮಕ್ಳಿಗಷ್ಟೇನಾ ಆವಂಕಲ್ ಕೊಡೋದು?”

“ಅಯ್ಯೋ ಪೆದ್ದು ಆಂಟಿ, ನಿನ್ನತ್ರ ಬುಲ್ಲಕಾಯಿ ಇಲ್ವಲ್ಲಾ?”

“ಏನು?” ನನಗೆ ಅವನು ಹೇಳಿದ್ದು ಅರ್ಥವಾಗದೆ, “ಏಯ್ ಸರಿಯಾಗಿ ಹೇಳೋ, ಏನದು ಬುಲ್ಲಕಾಯಿ ಅಂದ್ರೆ?”
“ಅಯ್ಯೋ ನಿಂಗೆ ಚಾಕಲೇಟ್ ಸಿಗಾಕಿಲ್ಲ ಬುಡಾಂಟಿ, ಇಲ್ಲಿ ಇಂಗೆ ಚಡ್ಡಿ ತೆಗ್ದಿ ಬುಲ್ಲಕಾಯಿ ತೋರ್ಸುದ್ರೆ ಅಸ್ಟೆ ಚಾಕಲೇಟ್ ಕೊಡದು ಆವಂಕಲು” ಎಂದು ಅವಸರದಲ್ಲಿ ಹೇಳಿ ಓಡಿ ಹೋದ.

ನನ್ನ ಕೈಲಿದ್ದ ಚಾಕ್ಲೇಟ್ ನೆಲಕ್ಕೆ ಬಿತ್ತು!

     ಸಿಟ್ಟಿನಿಂದ ಕಂಪಿಸುತ್ತಾ ಯಾರಿರಬಹುದು ಈ ನೀಚ ಎಂದು ಹಾಗೇ ಮೋಟುಗೋಡೆ ಕಡೆ ತಿರುಗಿದಾಗ ಮೋಟುಗೋಡೆಯ ಹಿಂದಿನಿಂದ ಸಿಗರೇಟ್ ಹೊಗೆ ಕಾಣಿಸಿತು. ಏನೋ ಕೆಡುಕೆನಿಸಿ, ನನ್ನ ಮನಸ್ಸು ‘ದೇವ್ರೇ, ಅದು ಮ್ಯಾಡಿ ಆಗಿಲ್ದೇ ಇರ್ಲಿ’ ಎಂದು ಬೇಡಿಕೊಂಡಿತು. ಗಾಬರಿ ಬಿದ್ದು ಹಾಗೇ ನೋಡುತ್ತಿದ್ದಾಗ ಕೋಡುಗಳಿದ್ದ ಹೆಲ್ಮೆಟ್ ಅನ್ನು ಎರಡು ಕೈಗಳು ಮೇಲಕ್ಕೆತ್ತಿ ಹಿಡಿದು ಮತ್ತೆ ಕೆಳಗಿಳಿಸಿದ್ದು ಕಂಡಿತು. ಆನಂತರ ಮ್ಯಾಡಿಯ ಬೈಕ್ ಗುಡುಗುಡು ಸದ್ದು ಮಾಡುತ್ತಾ ಹೋಗುವುದು ಕಾಣಿಸುತ್ತಿದ್ದಂತೆಯೇ ನಾನು ನಿಂತಲ್ಲೇ ಕುಸಿದೆ!

ಒಬ್ಬಳು ಮುದ್ದಾದ ಹುಡುಗಿ ಸೀರೆ ಉಟ್ಟುಕೊಂಡು, ನಮ್ಮ ಗುಂಪಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಳು!      ವೇದಿಕೆಯಿಂದ ದೂರ ಮಿಸುಕಾಡದೆ ಕುಳಿತೇಯಿದ್ದ ನನ್ನನ್ನು ಫಾಲ್ಗುಣಿ ಕೈ ಬೀಸಿ ಕರೆಯುತ್ತಿದ್ದಳು. ಅವಳ ಮುಖದಲ್ಲಿ ಉದ್ವೇಗ, ಅಚ್ಚರಿ, ಗೊಂದಲ ಕಾಣುತ್ತಿದ್ದವು. ಅವಳಿಗೆ ನನ್ನೆದೆಯಲ್ಲಿ ಸ್ಪೋಟಗೊಂಡಿದ್ದ ಜ್ವಾಲಾಮುಖಿ ಕಾಣುವಂತಿದ್ದರೆ ಎನಿಸಿತು. ಆಗಲೇ ನಾಟಕದ ಇತರ ಪಾತ್ರಧಾರಿಗಳು ವೇದಿಕೆ ತಲುಪಿ ನನಗಾಗಿ ಕಾಯುತ್ತಿದ್ದರು. ನಿಧಾನವಾಗಿ ನಾನು ಎದ್ದು ಅವರನ್ನು ಸೇರಿಕೊಂಡೆ. ಆದರೆ ನನ್ನ ಮುಖ ನೋಡಿ ಅವರಿಗೆಲ್ಲಾ ಇನ್ನಷ್ಟು ಗೊಂದಲವಾಯಿತು.

“ಆರ್ ಯು ಆಲ್ರೈಟ್?” ಫಾಲ್ಗುಣಿ ಹತ್ತಿರ ಬಂದು, “ಪಿರಿಯಡ್ಸ್ ಆಗಿಬಿಡ್ತಾ?” ಕೇಳಿದಳು.

     ನಾನು ತಲೆಯನ್ನು ಅತ್ತಿಂದಿತ್ತ ಆಡಿಸಿ, ಅಸಹಾಯಕಳಾಗಿ, ದುಃಖದಿಂದ ಅವಳನ್ನು ನೋಡಿದೆ. ಆದರೆ ಎಲ್ಲರೂ ನಮ್ಮನ್ನು ನೋಡುತ್ತಿರುವುದು, ನಮ್ಮ ನಾಟಕಕ್ಕಾಗಿ ಕಾಯುತ್ತಿರುವುದು ನೆನಪಾಗಿ ಸ್ವಲ್ಪ ಸುಧಾರಿಸಿಕೊಂಡು ಶುರು ಮಾಡಿದೆ. ಹೆಣ್ಣು ಮಕ್ಕಳ ವೋಟಿಂಗ್ ಹಕ್ಕುಗಳ ಬಗ್ಗೆ ಡೈಲಾಗ್ ಹೇಳುತ್ತಿದ್ದಂತೆಯೇ ನನಗೆ ಅರಿವಿಲ್ಲದಂತೆ, ಲೈಂಗಿಕ ಶೋಷಣೆ, ಮಾನಸಿಕ ಶೋಷಣೆ ಎಂದೆಲ್ಲಾ ಬಡಬಡಾಯಿಸಿದೆ. ಆಸಕ್ತಿ ಕಳೆದುಕೊಳ್ಳುತ್ತಿದ್ದ ಮಕ್ಕಳು ನಿಧಾನವಾಗಿ ಗುಜುಗುಜು ಮಾತಾಡತೊಡಗಿದ್ದು ಗೊತ್ತಾಗುತ್ತಿತ್ತು. 

ಬರೀ ಹೆಣ್ಣು ಮಕ್ಕಳಲ್ಲ ಇಂದು ಗಂಡು ಮಕ್ಕಳು ಕೂಡ ಸೇಫ್ ಇಲ್ಲ…

ಕಾಮುಕರು ಎಲ್ಲೆಡೆ ಇರುತ್ತಾರೆ, ನಿಮ್ಮ ಹತ್ತಿರದವರೇ …

ಗುಡ್ ಟಚ್ ಬ್ಯಾಡ್ ಟಚ್  …

ನನ್ನ ಮಾತು ಎತ್ತೆತ್ತಲೋ ಹೋಗುತ್ತಿತ್ತು.

     ನಾನಿನ್ನೂ ಮುಗಿಸಿರಲಿಲ್ಲ, ಫಾಲ್ಗುಣಿ ಮೈಕ್ ಕಸಿದುಕೊಂಡು, “ಇಲ್ಲಿಗೆ ನಮ್ಮ ನಾಟಕ ಮುಕ್ತಾಯವಾಯಿತು. ಮುಂದೆ ಡ್ರಾಯಿಂಗ್ ಮಾಡೋಕೆ ಆಸಕ್ತಿ ಇರೋ ಮಕ್ಕಳು ಬನ್ನಿ” ಎಂದಳು. ಎಲ್ಲರೂ ಸದ್ಯ ಏನೋ ಒಂದು ಅಹಿತಕರವಾದದ್ದು ಮುಗಿಯಿತೆನ್ನುವ ನಿರಾಳತೆಯಿಂದ ಚೆದುರಿದರು. “ವಾಟ್ ದ ಹೆಲ್ ವಾಸ್ ದಟ್?” ಫಾಲ್ಗುಣಿ ಸಿಟ್ಟಿನಿಂದ ನನ್ನ ತೋಳು ಹಿಡಿದು ಶೌಚಾಲಯದತ್ತ ಎಳೆದುಕೊಂಡು ಹೋದಳು. “ಹೇಳು ಏನಾಯ್ತು?” ಅವಳ ಕಣ್ಣುಗಳಲ್ಲಿ ಸಿಟ್ಟಿತ್ತು.

“ಮ್ಯಾಡಿ …” ನನಗೆ ಮಾತನಾಡಲು ಆಗಲಿಲ್ಲ.

“ನೀನೇ ಪ್ರೊಪೋಸ್ ಮಾಡಿಬಿಟ್ಯ? ರಿಜೆಕ್ಟ್ ಮಾಡಿದ್ನಾ? ಅಷ್ಟ್ಯಾಕ್ ಅರ್ಜೆಂಟ್ ಮಾಡಿದೆ?”

“ಅವನೇನು ರಿಜೆಕ್ಟ್ ಮಾಡೋದು ನನ್ನ?” ನಾನು ಅವುಡುಗಚ್ಚಿ, ಟಾಯ್ಲೆಟ್ ಬಾಗಿಲಿಗೆ ಗುದ್ದಿದೆ. ತುಕ್ಕು ಹಿಡಿದಿದ್ದ ಅದರ ಚಿಲಕ ಮುರಿದು ಬಿತ್ತು. ನಾನು ನಡೆದುದ್ದನ್ನು ಹೇಳುತ್ತಿದ್ದಂತೆ ಫಾಲ್ಗುಣಿಯ ಸಿಟ್ಟು ಹೆಚ್ಚಾಗತೊಡಗಿತು.

“ನೀನು ರಿಜೆಕ್ಷನ್ ತಡ್ಕೊಳೋಕಾಗ್ದೆ ರಿವೇಂಜ್ ತಗೋತ್ತಿಲ್ಲ ತಾನೇ?” 

ನನಗೆ ತಲೆ ಗಿರ್ ಅಂತು. ಇಂಥವರನ್ನು ಬಯಲಿಗೆಳೆಯುವಾಗ ಯಾಕೆ ಎಲ್ಲರೂ ನಮ್ಮದೇನಾದರೂ ಮೋಟಿವ್ ಇದೆಯಾಂತ ಕೆದಕುತ್ತಾರೆ ಎಂದು ಚಿಂತೆಯಾಯಿತು. 

“ನಾನು ನಿಂಗೆ ಏನೂ ಪ್ರೂವ್ ಮಾಡ್ಬೇಕಾಗಿಲ್ಲ” ನಾನು ಸಿಟ್ಟಿನಿಂದ ಹೊರನಡೆಯತೊಡಗಿದೆ. 

“ಸೀರಿಯಸ್ಲೀ? ಇಷ್ಟಕ್ಕೇ ಯಾವ್ದೋ ಮರ್ಡರ್ ಗೆ ವಿಟ್ನೆಸ್ ಆಗಿದ್ದೋಳಂಗೆ ಆಡ್ತಿಯಲ್ಲೇ? ಅವ್ನಿಗೆ ಆಮೇಲೆ ಹೇಳ್ಬೋದಿತ್ತು ಹಿಂಗೆಲ್ಲ ಮಾಡ್ಬೇಡಾಂತ, ಅಷ್ಟಕ್ಕೂ ಆ ಹುಡುಗ ಮೊದ್ಲು ಚಡ್ಡಿನೇ ಹಾಕ್ಕೊಂಡು ಬಂದಿರಲಿಲ್ವಲ್ಲಾ?” ನನ್ನ ಕೈ ಹಿಡಿದೆಳೆದು ನಿಲ್ಲಿಸಿ ಕೇಳಿದಳು. 

     ನನಗೆ ನಾನು ನಡೆದಿದ್ದನ್ನೆಲ್ಲಾ ಸರಿಯಾಗಿ ಹೇಳಿದೆನೋ ಇಲ್ಲವೋ ಎಂದು ಅನುಮಾನವಾಯಿತು. “ಅಲ್ವೇ ಬಟ್ಟೆಯಿಂದ ಹೇಗೆ ಮೈ ಮುಚ್ಚಿಕೊಳ್ಳೋದು ಅಂತಾನೂ ಗೊತ್ತಿಲ್ದಿರೋ ಮಗೂಗೆ ಚಾಕ್ಲೇಟ್ ಆಸೆ ತೋರಿಸಿ ಬಟ್ಟೆ ಬಿಚ್ಚಿಸೋದು ಎಂಥ ವಿಕೃತಿ? ಮ್ಯಾಡಿಗೆ ನಿಜಕ್ಕೂ ಚಾರಿಟಿಯಲ್ಲಿ ನಂಬಿಕೆಯಿಲ್ಲ. ಅವನು ಬಂದಿದ್ದೇ ಚಿಕ್ಕ ಮಕ್ಕಳು ಸಿಗ್ತಾರೆ ಅಂತ. ಹಿ ಈಸ್ ಸಿಕ್ ” ನಾನು ಚೀರಿದೆ.

“ಆರ್ ಯು ಕ್ರೇಝಿ? ಅಷ್ಟಕ್ಕೂ ಏನ್ ಪ್ರೂಫ್ ಇದೆ ನಿನ್ನತ್ರ? ಅವನು ನಮ್ಮ ಫ್ಯಾಮಿಲಿ ಫ್ರೆಂಡ್ …” 

     ಇವಳು ನಿಜಕ್ಕೂ ನನ್ನ ಸ್ನೇಹಿತೆ ಫಾಲ್ಗುಣಿಯೇ? ನಾವು ಇಷ್ಟು ಬೇರೆ ಬೇರೆಯಾಗಿ ಯೋಚಿಸ್ತಿವಾ? ಇಂಥ ಸೀರಿಯಸ್ಸಾದ ವಿಷಯವಾದರೂ ಇವಳಿಷ್ಟು ತಣ್ಣಗೆ ಮಾತಾಡುತ್ತಿದ್ದಾಳಲ್ಲಾಂತ  ಸಿಟ್ಟೂ ಬಂತು.

“ಫಾಲು ನಿಂಗೆ … ” ನಾನು ಮಾತಾಡ್ತಿದ್ರೂ ಅವಳು ಹೋಗ್ಬಿಟ್ಳು. 

     ನಾನು ಯಾವ ಕಾರಣಕ್ಕೂ ಈ ವಿಷಯವನ್ನು ಇಲ್ಲಿಗೇ ಬಿಡಬಾರದೆಂದು ರಾಮಲಿಂಗನನ್ನು ಹುಡುಕಿ, “ನಿಮ್ಮಮ್ಮನತ್ರ ಕರ್ಕೊಂಡೋಗು” ಎಂದೆ. ಅವನು ಎಲ್ಲಿ ತನ್ನ ಚಡ್ಡಿ ಜೇಬು ಹಿಡಿಸದಷ್ಟು ದೊಡ್ಡ ಚಾಕ್ಲೇಟ್ ತಿನ್ನುವ ಮೊದಲೇ ಕಳೆದುಹೋಗುತ್ತೋ ಎನ್ನುವ ಭಯದಿಂದ ಒಂದು ಕೈಯಲ್ಲಿ ಅದನ್ನು ಹಿಡಿದುಕೊಂಡೇ ಮನೆಯತ್ತ ನಡೆಯುತ್ತಾ, “ಯಾಕ್ ಆಂಟಿ? ಯಾಕ್ ಅಂತೇಳಿ ಪಷ್ಟು?” ಎಂದು ಗೋಗರೆಯತೊಡಗಿದ. ಕುಡಿಯುವ ನೀರಿನ ಟ್ಯಾಂಕಿ ಹತ್ತಿರ ಬಿಂದಿಗೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ ಆಕೆ ನನ್ನನ್ನು ನೋಡಿದೊಡನೆ ನಾಚಿಕೊಂಡು, “ಅಯ್ಯೋ ಮೇಡಮ್ಮೊರೇ ನೀವ್ಯಾಕೆ ಇಲ್ಲಿಗಂಟ ಬರಾಕೋದ್ರಿ, ನಮ್ ಮಗಾ ಏನಾರ ತರ್ಲೆ ಮಾಡುದ್ನಾ?” ಎಂದು ಮೈಯೆಲ್ಲಾ ಹಿಡಿ ಮಾಡಿಕೊಂಡು, ಅವನ ತಲೆ ಮೊಟಕಿ, ಕೇಳಿದಳು.

ನಾನು ಆಕೆಯನ್ನು ಹತ್ತಿರ ಕರೆದು ನಡೆದುದ್ದನ್ನೆಲ್ಲಾ ಹೇಳಿ, “ನೀವು ತಕ್ಷಣ ನನ್ ಜೊತೆ ಬನ್ನಿ, ಹೆಡ್ ಮೇಷ್ಟ್ರುಗೆ ಕಂಪ್ಲೇಂಟ್ ಕೊಡಿ” ಎಂದೆ. ಆಕೆ ಸೆರಗಿನಿಂದ ಬಾಯಿ ಮುಚ್ಚಿಕೊಂಡು ನಗುತ್ತಾ, “ಏ ಬುಡಿ ಮೇಡಮ್ಮೋರೆ, ಬುದ್ದಿ ಬಂದ್ಮ್ಯಾಕೆ ನಮ್ ರಾಮಲಿಂಗ ಅಂಗೆಲ್ಲಾ ಮಾಡಾಕಿಲ್ಲ” ಎನ್ನುತ್ತಾ ಹೊರಟೇ ಹೋದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ನನಗೆ ಆ ಟ್ಯಾಂಕಿಗೆ ನನ್ನ ತಲೆ ಚಚ್ಚಿಕೊಳ್ಳಲೇ ಎನಿಸಿತು.

     ನಾನು ವಾಪಸ್ ಸ್ಕೂಲಿಗೆ ಬಂದು ಮಕ್ಕಳಿಂದ ಬ್ಯಾಂಡ್ ಸೆಟ್ ಗಳನ್ನು ಎತ್ತಿ ಒಳಗಿಡಿಸುತ್ತಿದ್ದ ಪೀಟಿ ಮೇಷ್ಟ್ರತ್ರ ಹೋದೆ. ಆತನೋ, ಎಲ್ಲಾ ಕೇಳಿದ್ಮೇಲೆ, “ಮೇಡಂ, ಇಂಥ ಒಂದು ಖುಸಿ ಟೆಮಲ್ಲಿ, ಏನೋ ನಮಳ್ಳಿ ಮಕ್ಳಿಗೆ ಒಳ್ಳೇದಾಗ್ಲಿ ಅಂತವ ನೀವೆಲ್ಲಾ ಬಂದಿರುವಾಗ, ಇದೆಲ್ಲಾ ಕೆಟ್ ಮಾತಾಡಿ ಮನ್ಸ್ ಕೆಡಿಸ್ಕಳದು ಯಾಕೆ ಬುಡಿ, ನಾನು ನಮ್ಮ ಉಡುಗ್ರುಗೆ ಆಮ್ಯಾಕೆ ಹೇಳ್ತಿನಿ.” ಎಂದುಬಿಟ್ಟರು. ನನಗೆ ಅವರು ಕುತ್ತಿಗೆಗೆ ಹಾಕಿಕೊಂಡಿದ್ದ ವಿಶಲ್ ಕಸಿದುಕೊಂಡು, ಜೋರಾಗಿ ಊದಿ, ಈ ಮ್ಯಾಡಿ ಎಂಥ ಹಲ್ಕಟ್ ನನ್ಮಗಾಂತ ಕೂಗಿ ಹೇಳಬೇಕನ್ನಿಸಿತು. ಮಕ್ಕಳು ಡ್ರಾಯಿಂಗ್ ಮಾಡುತ್ತಿದ್ದುದ್ದನ್ನು ಸಂತೋಷದಿಂದ ನೋಡುತ್ತಾ, ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ಹೆಡ್ ಮೇಷ್ಟ್ರ ಬಳಿ ಹೋದೆ. ಅವರಂತೂ ನಾನು ಗುಡ್ ಟಚ್ ಬ್ಯಾಡ್ ಟಚ್ ಎಂದೆಲ್ಲಾ ಮಾತನಾಡಲು ಶುರು ಮಾಡಿದಾಗಿನಿಂದಲೂ ಮುಖ ಕೊಟ್ಟು ಮಾತನಾಡಿಸಿರಲೇ ಇಲ್ಲ. ಅವರತ್ತಲೇ ಬಿರುಸಾಗಿ ನಡೆದು ಬರುತ್ತಿದ್ದ ನನ್ನನ್ನು ನೋಡುತ್ತಿದ್ದಂತೆಯೇ ಮೆಲ್ಲಗೆ ತಪ್ಪಿಸಿಕೊಂಡು ಬಿಟ್ಟರು.

     ಅಷ್ಟರಲ್ಲಿ ಫಾಲ್ಗುಣಿ, ಗ್ರೂಪ್ ಫೋಟೋಗಾಗಿ ನನ್ನನ್ನು ಹುಡುಕಿಕೊಂಡು ಬಂದಳು. ನಾನು ಇಲ್ಲಿಂದ ಹೊರಡುವ ಮೊದಲು ಯಾರಿಗಾದರೂ ಹೇಳಲೇಬೇಕೆಂದು ಒದ್ದಾಡಿ ಪ್ರಯೋಜನವಾಗದೇ, ಹತಾಶಳಾಗಿ, ಫೋಟೋಗಳಿಗೆ ಪೋಸ್ ಕೊಟ್ಟೆ. ನಂತರ ಎಲ್ಲರೂ ವಾಪಸ್ ಹೊರಡಲನುವಾದರು. ನಾನು ಕೊನೇಪಕ್ಷ ರಾಮಲಿಂಗನಿಗಾದರೂ ಬುದ್ದಿ ಹೇಳಬೇಕೆಂದು ಅವನನ್ನು ಹುಡುಕಿದೆ. ಚೆನ್ನನ ಪಕ್ಕ ಕುಳಿತು ಹೊಸ ಚಾಕೊಲೇಟ್ ಅನ್ನು ತೋರಿಸಿಕೊಂಡು ಜಂಭ ಪಡುತ್ತಾ ತಿನ್ನುತ್ತಿದ್ದ.  ನನ್ನನ್ನು ನೋಡಿದೊಡನೆ, “ಆಂಟಿ, ನೀವು ನೆಕ್ಸ್ಟ್ ಟೆಮ್ ಬರೋತ್ಗೆ ನಾನೂ ಕೈ ಮುರ್ಕೊಂಡಿರ್ತೀನಿ, ಆಗ ನಂಗೂ ಪಸ್ಟ್ ಚಾಕೊಲೇಟ್ ಕೊಡ್ಬೇಕು” ಎಂದು ಪೆದ್ದು ಪೆದ್ದಾಗಿ ಹೇಳಿದ.

ನಾನು ಅಷ್ಟು ಹೊತ್ತೂ ತಡೆದಿಟ್ಟುಕೊಂಡಿದ್ದ ಕಣ್ಣೀರನ್ನು ಹರಿಯಲು ಬಿಟ್ಟು, ಮಂಡಿಯೂರಿ ಕುಳಿತು, ಅವನನ್ನು ತಬ್ಬಿಕೊಂಡೆ.

“ಹಾಗೆಲ್ಲಾ ಅನ್ನಬಾರದು ದಡ್ಡ, ನಾವು ನೆಕ್ಸ್ಟ್ ಟೈಮ್ ಬರೋ ಹೊತ್ತಿಗೆ, ನಿಂಗೆ ಬುಲ್ಲಕಾಯಿ ತೋರಿಸು ಅಂತ ಕೇಳೋವ್ರ ಕೈ ಮುರೀಬೇಕು, ಆಯ್ತಾ?” ಅವನು ಗೊಂದಲದಿಂದ ನಾನು ಅಳುವುದನ್ನೇ ನೋಡಿದ. “ಕೈ ಮುರ್ಕೊಂಡು ಕೂತ್ರೆ ನಿನ್ನ ನೋಡಿ ಅಯ್ಯೋ ಪಾಪ ಅಂತಾರೆ. ಅದೂ ಗ್ಯಾರಂಟಿ ಇಲ್ಲ. ಕೆಲವರು ನಿನ್ನತ್ರಿರೋ ಚಾಕ್ಲೇಟ್ನ ಕಸ್ಕೊಂಡು ಬಿಡಬೋದು. ಹಂಗಾಗಬಾರ್ದಲ್ವಾ? ರಾಮಲಿಂಗ ಅಂದ್ರೆ ತುಂಬಾ ಸ್ಟ್ರಾಂಗು, ಅವನ ಹತ್ರ ನಾಯಿ ಮರಿ ಬೇರೆ ಇದೆ, ಅವನ ತಂಟೆಗೋಗ್ಬೇಡಿ ಅಂತ ಹೇಳ್ಬೇಕು. ಆಯ್ತಾ?”

     ನನ್ನ ಮಾತು ಅವನಿಗಾಗಲೀ, ಚೆನ್ನನಿಗಾಗಲೀ ಅರ್ಥವಾಗಲೇ ಇಲ್ಲ. ಬೇಸರದಿಂದಲೇ ಅಲ್ಲಿಂದ ಹೊರಟು, ನಾನು ಫಾಲ್ಗುಣಿ ಕಾರಿನಲ್ಲಿ ಕುಳಿತುಕೊಂಡೆ. ದಾರಿಯುದ್ದಕ್ಕೂ ಫಾಲ್ಗುಣಿ ಆ ಟಾಪಿಕ್ ಮಾತಾಡೋದೇ ಬೇಡವೆಂದುಬಿಟ್ಟಿದ್ದಳು. ಆಗಾಗ ನಮ್ಮ ಕಾರಿನ ಮುಂದೆ ಹಾದು ಹೋಗುತ್ತಿದ್ದ ಮ್ಯಾಡಿಯ ಬೈಕ್ ಬೇಡವೆಂದರೂ ಅದೇ ನೆನಪುಗಳಿಂದ ನನ್ನನ್ನು ವ್ಯಗ್ರಗೊಳಿಸುತಿತ್ತು. ಮೊದಲೇ ನಿರ್ಧರಿಸಿದ್ದಂತೆ ಅದೇ ಹೋಟೆಲಿನಲ್ಲಿ ಊಟಕ್ಕೆ ನಿಲ್ಲಿಸಿದಾಗ ನನಗಂತೂ ಹಸಿವೇ ಇರಲಿಲ್ಲ.

***

     ನಾನು ಫಾಲ್ಗುಣಿಯನ್ನು ದಿಟ್ಟಿಸಿ ನೋಡಿ, “ಫಾಲು, ಮಿಸ್ ಬಿಹೇವ್ ಮಾಡಿದವ್ರನ್ನ ತೆಗೆದಾಕದಿದ್ರೆ ನಾಳೆ ಗ್ರೂಪಿಗೇ ಕೆಟ್ಟೆಸರು ಬರಲ್ವಾ?” ಎಂದು ಕೇಳಿದೆ.

“ನೀನು ಹಿಂಗೆ ಓವರ್ ರಿಯಾಕ್ಟ್ ಮಾಡ್ಬಾರ್ದು. ಆ ಹೆಡ್ ಮೇಷ್ಟ್ರು ನಿನ್ ಬಗ್ಗೆ ಏನು ಹೇಳಿದ್ರು ಗೊತ್ತಾ? ಟೈಮಿಗೆ ಸರಿಯಾಗಿ ಮದ್ವೆ ಮಾಡಲಿಲ್ಲ ಅಂದ್ರೆ ಹೆಣ್ಮಕ್ಳು ಹಿಂಗೇ … “

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

“ಸಮಸ್ಯೆಯಿದೆ ಅಂತಾನೇ ಒಪ್ಪಿಕೊಳ್ಳದವರು ಪರಿಹಾರ ಹುಡುಕುತ್ತಾರ?”

“ಹೋಗ್ಲಿ ಬಿಡೇ, ಏನಾದ್ರೂ ಇಂಟೆರೆಸ್ಟಿಂಗ್ ಮಾತಾಡೋಣ? ಸ್ಕೂಟರ್ ಯಾವಾಗ ತಗೋತಿದೀಯ? ಮ್ಯಾಡಿಯಂಥ ಬೈಕ್ ತಗೊಂಡುಬಿಡು. ಅಷ್ಟೇ ಹುಡುಗ್ರೆಲ್ಲಾ ಫಿದಾ ಆಗ್ಬಿಡ್ತಾರೆ. ಇಲ್ಲಾಂದ್ರೂ ಬೀದಿಲಿರೋ ಮಕ್ಳೆಲ್ಲಾ , ಒಂದ್ ರೌಂಡ್ ಅಂತ ಗೋಗರಿತಾರೆ. ನನ್ನ ಅಕ್ಕನ ಮಗನ ಬಗ್ಗೆ ಹೇಳ್ತಿದ್ದನಲ್ಲ, ಅವನಿಗಂತೂ ಮ್ಯಾಡಿ ಜೊತೆ ಬೈಕ್ ನಲ್ಲಿ ಒಂದು ರೌಂಡ್ ಹೋಗೋದಂದ್ರೆ…”

“ಮ್ಯಾಡಿ ಜೊತೆನಾ?” ನಾನು ಹೆಚ್ಚು ಕಡಿಮೆ ಚೀರಿದೆ.

     ಫಾಲ್ಗುಣಿ ಇದ್ದಕ್ಕಿದ್ದಂತೆ ಸೈಲೆಂಟ್ ಆದಳು. ಏನೋ ಯೋಚಿಸುತ್ತಾ, “ಆದ್ರೆ ಮೊದ್ಲಿನಷ್ಟು ಇಷ್ಟ ಪಡ್ತಿಲ್ಲಾಂತ ಹೇಳ್ತಿದ್ಲು ಅಕ್ಕ. ಈಗೀಗ ಯಾಕೋ ಮಂಕಾಗಿರ್ತಾನೆ, ಚಾಕ್ಲೇಟ್ ಕೊಟ್ಟರೂ … ” ಅವಳ ಮನಸ್ಸು ಏನೋ ಒದ್ದಾಟದಲ್ಲಿ ಸಿಲುಕಿರುವುದು ಸ್ಪಷ್ಟವಾಗಿತ್ತು.

“ಫಾಲು?” ಮ್ಯಾಡಿನ ಏನೂಂತ ಸರಿಯಾಗಿ ಗುರುತಿಸುವಲ್ಲಿ ಗೆದ್ದೆನೆನ್ನುವ ಖುಷಿಗಿಂತ ನೋವೇ ಹೆಚ್ಚಾಗತೊಡಗಿತು.  
“ಛೇ, ಹಾಗಿರಲ್ಲ ಬಿಡೇ, ಅಕ್ಕನತ್ರ ಗುಂಡ ಹೇಳ್ಕೊತಿದ್ದ ಅಲ್ವಾ? ಅಲ್ದೆ ಅವ್ನಿಗೆ ಎದುರು ಮನೆಯವರ ಜೊತೆಲೇ ಹಾಗೆ ನಡ್ಕೊಳೋವಷ್ಟು ಧೈರ್ಯ ಹೇಗೆ …ನಂಗಾದ್ರು ಗೊತ್ತಾಗಬಾರದ … ಪಾಪ ಗುಂಡ” ಅವಳ ಕೈಗಳು ಕಂಪಿಸುತ್ತಿದ್ದುದು ಕಾಣಿಸುತಿತ್ತು. ಇಡ್ಲಿ ತಿನ್ನುತ್ತಿದ್ದ ಎರಡೂ ಚಮಚೆಗಳು ತಟ್ಟೆಯೊಳಗೆ ಬಿದ್ದವು. ಅವಳ ತುಟಿಗಳು ನೋವಿನಿಂದ ಅದುರತೊಡಗಿ, ಕಣ್ಣುಗಳು ತುಂಬಿಕೊಂಡವು.

“ಅಕ್ಕನಿಗೆ ಹೇಗೇಳೋದು?”

“… “

“ಸುಮ್ನೆ ಬಿಡಲ್ಲ ಅವನನ್ನ.” ಸಿಟ್ಟಿನಿಂದ ಎದ್ದು ನಿಂತವಳು,  “ಐ ಯಾಮ್ ಸಾರಿ ಕಣೇ” ಎಂದಳು.  

“ಯಾಕೆ?”

“ಮ್ಯಾಡಿ ನನ್ನ ಸ್ವಂತ ಅಕ್ಕನ ಮಗನ್ನೇ ಅಬ್ಯೂಸ್ ಮಾಡ್ತಿದಾನೇಂತ ಗೊತ್ತಾಗ್ದಿದ್ರೆ ನಾನೂ ಅವನನ್ನ ಎಕ್ಸ್ಪೋಸ್ ಮಾಡೋದ್ರ ಬಗ್ಗೆ ತಲೆ ಕೆಡಿಸ್ಕೊಳ್ತಿರ್ಲಿಲ್ಲಾನ್ಸುತ್ತೆ. ನಮ್ಮ ಬುಡಕ್ಕೆ ಬರೋ ತನಕ ಅದು ನಮ್ ಪ್ರಾಬ್ಲಮ್ ಅನ್ಸೋದೇ ಇಲ್ವಲ್ಲ?”

“ನಿವ್ಯಾರೂ ಸಪೋರ್ಟ್ ಮಾಡದಿದ್ರೂ ನಾನು ಅವನನ್ನು ಸುಮ್ನೆ ಬಿಡಲ್ಲ. ವಿ ನೀಡ್ ಟು ಆಕ್ಟ್, ನೌ!” ನಾನು ರೋಷದಿಂದ ಹೇಳಿದೆ.

“ಯಸ್”

***
     ನಾನು ಮ್ಯಾಡಿ ಹತ್ತಿರ ಹೋಗಿ ಮುಗುಳುನಕ್ಕು, “ನಾನು ಸ್ವಲ್ಪ ದೂರ ನಿಮ್ಮ ಬೈಕಲ್ಲಿ ಹಿಂದೆ ಕೂತ್ಕೊಬಹುದಾ?” ಎಂದೆ. 

“ಅಫ್ ಕೋರ್ಸ್” ನಿರ್ಭಾವುಕನಾಗಿ ಹೇಳಿದ. ನಾನೂ ಒಬ್ಬಳು ಪುಟ್ಟ ಹುಡುಗಿಯಾಗಿದ್ದರೆ ಖುಷಿಯಿಂದ ಒಪ್ಪಿಕೊಳ್ತಿದ್ದನೇನೋ ರಾಸ್ಕಲ್ ಎಂದು ಬೈದುಕೊಂಡು ನನ್ನ ಬ್ಯಾಗನ್ನು ನಡುವೆ ಇಟ್ಟುಕೊಂಡು ಕುಳಿತೆ. ನೆನ್ನೆಯಿಂದ ಆಸೆಪಡುತಿದ್ದ ಈ ಸೀಟು ಇಷ್ಟು ಬೇಗ ಹೇಸಿಗೆ ಹುಟ್ಟಿಸುತ್ತದೆಯೆಂದು ಯಾವೋಳಿಗೆ ಗೊತ್ತಿತ್ತು? ಸುಮಾರು ಹತ್ತು ಕಿಲೋಮೀಟರ್ ಹೋಗಿದ್ದೆವೇನೋ ಅಷ್ಟೇ. 

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

“ಮ್ಯಾಡಿ ಪ್ಲೀಸ್ ನಿಲ್ಲುಸ್ತೀರಾ? ನನಗೆ ಭಯ ಆಗ್ತಿದೆ. ಹೆಲ್ಮೆಟ್ ಬೇರೆ ಇಲ್ಲ. ಸಾರಿ ನಾನು ಫಾಲ್ಗುಣಿ ಜೊತೆಲೇ ಬರ್ತೀನಿ. ಪ್ಲೀಸ್” 

“ಶ್ಯೂರ್”

     ಇಡೀ ಗುಂಪನ್ನು ಲೀಡ್ ಮಾಡುತ್ತಿದ್ದ ಅವನು ತನ್ನ ಬಲಗೈಯನ್ನು ಎತ್ತಿ ಎಲ್ಲರಿಗೂ ನಿಲ್ಲಿಸುತ್ತಿರುವ ಸೂಚನೆ ಕೊಟ್ಟ. ನಮ್ಮನ್ನು ಫಾಲೋ ಮಾಡುತ್ತಿದ್ದ ಎಲ್ಲರೂ ಗಕ್ಕನೆ ನಿಲ್ಲಿಸಿ ಕುತೂಹಲದಿಂದ ನಮ್ಮನ್ನೇ ನೋಡತೊಡಗಿದರು. ನಾನು ಇಳಿದು ಫಾಲ್ಗುಣಿ ಕಾರ್ ಹತ್ತಿದೆ.

“ನಿಂಗೆ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ಇಷ್ಟ ಇಲ್ಲಾಂತ ಯಾವತ್ತೂ ಹೇಳ್ಬೇಡ” ಫಾಲು ಭಾವುಕಳಾಗಿ ಹೇಳಿದಳು.

     ಮ್ಯಾಡಿ ಹೊರಡೋಣವೇ ಎಂದು ಸಿಗ್ನಲ್ ಮಾಡುತ್ತಿದ್ದರೂ ಯಾರೂ ಹೊರಡಲೇ ಇಲ್ಲ. ಎಲ್ಲಾ ಬಿಟ್ಟ ಬಾಯಿ ಬಿಟ್ಟಂತೆಯೇ ಮ್ಯಾಡಿಯ ದುಬಾರಿ ತಿಳಿ ಬೂದು ಬಣ್ಣದ ಜಾಕೆಟ್ ಮೇಲೆ ನಾನು ಕಪ್ಪು ಮಾರ್ಕರ್ ನಿಂದ ದೊಡ್ಡದಾಗಿ ಬರೆದಿದ್ದ ‘ಐ ಯಾಮ್ ಎ ಪೀಡೊಫೈಲ್’ ಎನ್ನುವ ಪದಗಳನ್ನೇ ಕೆಕ್ಕರಿಸಿಕೊಂಡು ನೋಡತೊಡಗಿದರು!

***

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

ರಾಜಮಾರ್ಗ ಅಂಕಣ: ತನ್ನ ಅದ್ಭುತವಾದ ಅಭಿನಯ ಹಾಗೂ ರೋಚಕವಾದ ಸಿನೆಮಾಗಳ ಮೂಲಕ ಇಡೀ ಜಗತ್ತನ್ನು ಚಾರ್ಲಿ ಚಾಪ್ಲಿನ್‌ಗೆ ಮೊನ್ನೆ ಮೊನ್ನೆ (ಏಪ್ರಿಲ್ 16) ಹುಟ್ಟುಹಬ್ಬ. A day without laughter is a day wasted ಎಂದು ಹೇಳಿದ್ದ ಚಾಪ್ಲಿನ್ ಅದರಂತೆ ಬದುಕಿದ್ದ! ತನ್ನ ನೂರಾರು ನೋವುಗಳನ್ನು ನುಂಗಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಬದುಕು ಅವನ ಸಿನೆಮಾಗಳಷ್ಟೆ ರೋಚಕ.

VISTARANEWS.COM


on

charlie chaplin rajamarga
Koo

ಜಗತ್ತಿಗೆ ನಗುವನ್ನು ಕಲಿಸಿದ ಚಾರ್ಲಿ ಬದುಕು ದುರಂತ ಆಗಿತ್ತು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಜಗತ್ತಿನ ಮಹೋನ್ನತವಾದ ಕಾಮಿಡಿ (comedy) ಸ್ಟಾರ್, ನಿರ್ಮಾಪಕ, ಎಡಿಟರ್, ನಿರ್ದೇಶಕ (Director), ಲೇಖಕ, ಮಹಾನ್ ನಟ (Actor), ಸಂಗೀತ ನಿರ್ದೇಶಕ…………..ಇನ್ನೂ ಏನೇನೋ ಅವತಾರಗಳು! ಚಾರ್ಲಿ ಚಾಪ್ಲಿನ್ (Charlie Chaplin) ಬದುಕಿದ ರೀತಿಯೇ ಹಾಗಿತ್ತು.

ಆತನ TRAMP ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರ!

ಆ ವಿಚಿತ್ರವಾದ ಬುಟ್ಟಿಯಾಕಾರದ ಟೋಪಿ, ಬೂಟ್ ಪಾಲಿಶ್ ಮೀಸೆ, ಉದ್ದವಾದ ನಡೆಕೋಲು ಈ ಮೂರು ಸೇರಿದರೆ ಚಾಪ್ಲಿನ್ ಚಿತ್ರವು ಕಣ್ಮುಂದೆ ಬಂದಾಯಿತು! ಆ ಪಾತ್ರದ ಹೆಸರು TRAMP. ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರವದು!

1889ರ ಏಪ್ರಿಲ್ 16ರಂದು ಲಂಡನ್ನಿನಲ್ಲಿ ಹುಟ್ಟಿದ ಅವನ ಬಾಲ್ಯವು ದೊಡ್ಡ ಸಮಸ್ಯೆಗಳಿಂದ ಕೂಡಿತ್ತು. ಹುಟ್ಟಿಸಿದ ತಂದೆಯು ಮಗನನ್ನು ಬಿಟ್ಟು ಹೋಗಿದ್ದರು. ತಾಯಿಗಂತೂ ಗುಣವಾಗದ ಮನೋವ್ಯಾಧಿ. ಮಗ ಚಾರ್ಲಿ ಒಂಬತ್ತನೆಯ ವಯಸ್ಸಿಗೆ ತಲುಪಿದಾಗ ಅಮ್ಮ ಹೆಚ್ಚು ಕಡಿಮೆ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು.

ಆಕೆ ಹಲವು ಮನೆಗಳಲ್ಲಿ ಕೆಲಸ ಮಾಡಿದ್ದು, ಹಲವು ನಾಟಕ ಮಂಡಳಿಗಳಲ್ಲಿ ಕಾಮಿಡಿ ಪಾತ್ರ ಮಾಡಿ ನಗಿಸಿದ್ದು ಎಲ್ಲವೂ ಹೊಟ್ಟೆಪಾಡಿಗಾಗಿ! ಅಮ್ಮನ ಮೇಲೆ ಮಗನಿಗೆ ಅತಿಯಾದ ಪ್ರೀತಿ. ಬದುಕು ಜಟಕಾ ಬಂಡಿ ಅವನನ್ನು ಅತ್ಯಂತ ಕಿರಿಯ ಪ್ರಾಯದಲ್ಲಿ ಅಮೆರಿಕಕ್ಕೆ ಕರೆದುಕೊಂಡು ಹೋಯಿತು. ಆ TRAMP ಪಾತ್ರದ ಕಲ್ಪನೆಯು ಮೂಡಿದ್ದು, ಚಾರ್ಲಿಯು ಸಿನೆಮಾದ ಭಾಷೆಯನ್ನು ಕಲಿತದ್ದು ಅಮೆರಿಕಾದಲ್ಲಿ.

ಆತನ ವಿಚಿತ್ರ ಮ್ಯಾನರಿಸಂ ಜಗತ್ತಿಗೆ ಹುಚ್ಚು ಹಿಡಿಸಿದವು!

1921ರಲ್ಲಿ ಅವನ ಮೊದಲ ಸಿನೆಮಾವಾದ The Kid ತೆರೆಗೆ ಬಂದಿತು. ಅವನ ವಿಚಿತ್ರವಾದ ನಡಿಗೆ, ದೇಹ ಭಾಷೆ, ವಿಚಿತ್ರ ಮ್ಯಾನರಿಸಂಗಳು ಮತ್ತು ವ್ಯಂಗ್ಯವಾದ ನಗು ಜಗತ್ತಿನ ಸಿನಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟವು. ಆಗ ಟಾಕಿ ಸಿನೆಮಾಗಳು ಆರಂಭ ಆಗಿದ್ದರೂ ಚಾರ್ಲಿ ಆರಂಭದಲ್ಲಿ ಮಾಡಿದ್ದೆಲ್ಲವೂ ಮೂಕಿ ಸಿನಿಮಾಗಳೇ! SILENCE is the best mode of expressions ಎಂದು ಚಾರ್ಲಿ ನಂಬಿದ್ದ.

ಹಿಟ್ಲರನನ್ನು ನಗಿಸಿದ ಚಾಪ್ಲಿನ್!

ಅವನ ಸಿನೆಮಾಗಳ ಕಥೆಗಾರ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಎಡಿಟರ್ ಎಲ್ಲವೂ ಅವನೇ! ನಂತರ ಬಂತು ನೋಡಿ ಸಾಲು ಸಾಲು ಚಿತ್ರಗಳು. The Circus, Gold Rush, City Lights, Modern Times…. ಎಲ್ಲವೂ ಸೂಪರ್ ಹಿಟ್! ತನ್ನ ಮೊದಲ ಟಾಕಿ ಸಿನೆಮಾ ಆಗಿ The Great Dictator(1940) ತೆರೆಗೆ ತಂದ ಚಾರ್ಲಿ. ಅದು ಆ ಕಾಲದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನನ್ನು ಅಣಕಿಸುವ ಸಿನೆಮಾ. ಆಗ ಹಿಟ್ಲರನು ಜೀವಂತ ಇದ್ದ. ಆ ಸಿನೆಮಾವನ್ನು ನೋಡಿ ಸಿಟ್ಟು ಮಾಡಿಕೊಂಡು ಆತನು ಚಾರ್ಲಿಯನ್ನು ಕೊಂದೇ ಬಿಡ್ತಾನೆ ಎಂಬ ಸುದ್ದಿಯು ಎಲ್ಲೆಡೆಯು ಹರಡಿತ್ತು! ಆದರೆ ಆ ಸಿನೆಮಾವನ್ನು ನೋಡಿದ ಹಿಟ್ಲರ್ ಬಿದ್ದು ಬಿದ್ದು ನಕ್ಕು ಬಿಟ್ಟನು ಮತ್ತು ಚಾರ್ಲಿಗೆ ಶಾಬಾಷ್ ಹೇಳಿದ್ದನು ಅನ್ನೋದೇ ಚಾರ್ಲಿಗೆ ದೊರೆತ ಬಹುದೊಡ್ಡ ಪ್ರಶಸ್ತಿ!

charlie chaplin rajamarga

ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದ ಚಾರ್ಲಿ!

ದಾಖಲೆಯ ಪ್ರಕಾರ ಆತ ಮಾಡಿದ ಒಟ್ಟು ಸಿನೆಮಾಗಳು 83. ‘ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ’ ಅಂತ ಹೇಳುತ್ತಿದ್ದ ಆತ ಸಾಯುವವರೆಗೂ(1977) ಸಿನೆಮಾಗಳಲ್ಲಿ ಮುಳುಗಿಬಿಟ್ಟಿದ್ದ. ಅವನ ಸಿನೆಮಾಗಳು ಕೇವಲ ಕಾಮಿಡಿ, ನಗುವುದಕ್ಕಾಗಿ ಮಾತ್ರ ಇರದೇ ವಿಡಂಬನೆ, ವ್ಯಂಗ್ಯ, ಪ್ರೀತಿ, ಕಣ್ಣೀರು ಮತ್ತು ಪ್ರೇಮಗಳಿಂದ ಶ್ರೀಮಂತವಾಗಿ ಇದ್ದವು. ಅದರಲ್ಲಿಯೂ ಗೋಲ್ಡ್ ರಶ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್ ಮತ್ತು ದಿ ಗ್ರೇಟ್ ಡಿಕ್ಟೇಟರ್ ಸಿನೆಮಾಗಳು ಜಗತ್ತಿನ ಅತೀ ಶ್ರೇಷ್ಟ ಸಿನೆಮಾಗಳ ಸಾಲಿನಲ್ಲಿ ಸ್ಥಾನವನ್ನು ಪಡೆದವು. ಚಾರ್ಲಿಯ ಸಿನೆಮಾಗಳು ಎಷ್ಟು ರೋಚಕವಾಗಿ ಇದ್ದವೋ ಅವನ ಬದುಕು ಅಷ್ಟೇ ದುರಂತ ಆಗಿತ್ತು!

ಚಾಪ್ಲಿನ್ ಬದುಕಲ್ಲಿ ವಿವಾದಗಳು ಬೆನ್ನು ಬಿಡಲಿಲ್ಲ!

ಬೆನ್ನು ಬಿಡದ ನೂರಾರು ವಿವಾದಗಳು ಅವನನ್ನು ಹಿಂಡಿ ಹಿಪ್ಪೆ ಮಾಡಿದವು. ತನ್ನ ಸಿನೆಮಾದಲ್ಲಿ ಅಭಿನಯಿಸಿದ ಹದಿಹರೆಯದ ಎಲ್ಲ ಚಂದದ ಹುಡುಗಿಯರನ್ನು ಚಾರ್ಲಿ ಮಿತಿಗಿಂತ ಹೆಚ್ಚು ಮೋಹಿಸಿದ್ದ. ಜೀವನದಲ್ಲಿ 3 ಬಾರಿ ಮದುವೆಯಾಗಿ 11 ಮಕ್ಕಳನ್ನು ಪಡೆದ! ಅದರ ನಂತರವೂ ಅವನ ದಾಹವು ನೀಗಲಿಲ್ಲ. ಕೊನೆಯ ಕೆಲವು ಸಿನೆಮಾಗಳು ಸೋತು ಹೋದಾಗ ಚಾರ್ಲಿಯು ಕುಸಿದು ಹೋದರೂ ಸಿನೆಮಾ ಮಾಡುವುದನ್ನು ಬಿಡಲಿಲ್ಲ. ಚಾಪ್ಲಿನ್ ಕೊನೆಯ ಸಿನೆಮಾಗಳು ಪೂರ್ಣವಾಗಿ ಸೋತವು.

ಇನ್ನು ಸಿನೆಮಾ ಮಾಡುವುದಿಲ್ಲ ಅಂದ ಚಾಪ್ಲಿನ್!

ಅವನ ಜೀವನದ ಒಂದು ಘಟನೆಯನ್ನು ನಾನು ಉಲ್ಲೇಖ ಮಾಡಲೇಬೇಕು. ಅವನು ಜೀವಂತವಾಗಿ ಇದ್ದಾಗ ಅಮೇರಿಕಾದಲ್ಲಿ ಒಂದು ದೊಡ್ಡ ಸ್ಪರ್ಧೆ ನಡೆಯಿತು. ಅದು ಚಾರ್ಲಿಯನ್ನು, ಅವನ ಡ್ರೆಸ್ಸನ್ನು, ಅವನ ನಡಿಗೆ, ಅವನ ಅಭಿನಯ.. ಇತ್ಯಾದಿಗಳನ್ನು ಅನುಕರಣೆ ಮಾಡುವ ಸ್ಪರ್ಧೆ! ಕುತೂಹಲದಿಂದ ಚಾರ್ಲಿ ಚಾಪ್ಲಿನ್ ಆ ಸ್ಪರ್ಧೆಯಲ್ಲಿ ಬೇರೆ ಹೆಸರು ಕೊಟ್ಟು ಭಾಗವಹಿಸಿದ್ದನು. ಆದರೆ ಫಲಿತಾಂಶ ಬಂದಾಗ ಚಾರ್ಲಿಗೆ ನಿಜವಾದ ಶಾಕ್ ಆಯಿತು. ಏಕೆಂದರೆ ಅವನಿಗೇ ಸೆಕೆಂಡ್ ಪ್ರೈಜ್ ಬಂದಿತ್ತು!

ಅಂದು ವೇದಿಕೆ ಹತ್ತಿದ ಚಾಪ್ಲಿನ್ ವಿಜೇತ ಕಲಾವಿದನನ್ನು ಅಪ್ಪಿಕೊಂಡು ಅಭಿನಂದಿಸಿದನು ಮತ್ತು ತಾನು ಇನ್ನು ಯಾವ ಸಿನೆಮಾವನ್ನು ಕೂಡ ಮಾಡುವುದಿಲ್ಲ ಎಂದು ಆ ವೇದಿಕೆಯಲ್ಲಿಯೇ ಘೋಷಿಸಿದನು! ಅವನ ಕೊನೆಯ ಸಿನೆಮಾ A Countess from Hong Kong (1967).

ತನ್ನ ಅದ್ಭುತವಾದ ಅಭಿನಯ ಹಾಗೂ ರೋಚಕವಾದ ಸಿನೆಮಾಗಳ ಮೂಲಕ ಇಡೀ ಜಗತ್ತನ್ನು ನಗಿಸಿದ ಅವನಿಗೆ ಮೊನ್ನೆ ಮೊನ್ನೆ (ಏಪ್ರಿಲ್ 16) ಹುಟ್ಟುಹಬ್ಬ.

A day without laughter is a day wasted ಎಂದು ಹೇಳಿದ್ದ ಚಾಪ್ಲಿನ್ ಅದರಂತೆ ಬದುಕಿದ್ದ! ತನ್ನ ನೂರಾರು ನೋವುಗಳನ್ನು ನುಂಗಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಬದುಕು ಅವನ ಸಿನೆಮಾಗಳಷ್ಟೆ ರೋಚಕ ಆಗಿದೆ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

Continue Reading

ಶಿವಮೊಗ್ಗ

Book Release: ರಾಮನೇನು ದೇವನೇ? ಪುಸ್ತಕ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Book Release: ಶಿವಮೊಗ್ಗ ಜಿಲ್ಲೆಯ ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಡಾ. ಕೆ. ಎಸ್. ಕಣ್ಣನ್ ಅವರ ʼರಾಮನೇನು ದೇವನೇ?ʼ ಪುಸ್ತಕವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

VISTARANEWS.COM


on

Koo

ಶಿವಮೊಗ್ಗ: ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿರುವ, ಲೇಖಕ ಡಾ. ಕೆ. ಎಸ್. ಕಣ್ಣನ್ ಅವರ ʼರಾಮನೇನು ದೇವನೇ?ʼ ಪುಸ್ತಕವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಪುಸ್ತಕದ (Book Release) ಲೇಖಕರಾದ ಡಾ. ಕೆ. ಎಸ್. ಕಣ್ಣನ್, ಶ್ರೀ ಭಾರತೀ ಪ್ರಕಾಶನದ ಕವಿತಾ ಜೋಯ್ಸ್, ನಾಗೇಂದ್ರ ಕೊಪ್ಪಲು ಉಪಸ್ಥಿತರಿದ್ದರು.

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿ ʼರಾಮನೇನು ದೇವನೇ?ʼ ಪುಸ್ತಕವಾಗಿದೆ.

‘ರಾಮನೂ ನಮ್ಮ-ನಿಮ್ಮಂತೆ ಮನುಷ್ಯ, ನಮಗಿಂತ ಹೆಚ್ಚು ಸಾಧನೆ ಮಾಡಿ ಪುರುಷೋತ್ತಮನಾದವ’ ಎನ್ನುವ ವಾದವೊಂದು ಪ್ರಚಲಿತವಾಗಿದೆ. ಈ ವಾದ ಮಾಡುವವರು ‘ರಾಮಾಯಣದಲ್ಲಿ ವಾಲ್ಮೀಕಿಗಳು ರಾಮ ದೇವರು ಎಂದಿಲ್ಲ’ ಎಂದು ಹೇಳುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ರಾಮಾಯಣ, ಹೆಜ್ಜೆ ಹೆಜ್ಜೆಗೆ ರಾಮನ ದಿವ್ಯತೆಯನ್ನು ಗುರುತಿಸುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವಾಗಿ, ಇನ್ನು ಕೆಲವೊಮ್ಮೆ ಪರೋಕ್ಷವಾಗಿ ಅದು ಕಾಣಸಿಗುತ್ತದೆ. ಅದನ್ನು ಸಾಧಿಸುವ ಸತ್ಕಾರ್ಯವನ್ನು ಈ ಕೃತಿ ಮಾಡಿದೆ.

ರಾಮಾಯಣದ ಶ್ಲೋಕಗಳನ್ನು ಉಲ್ಲೇಖಿಸುತ್ತಾ, ಅದರ ಆಶಯವನ್ನು ವಿವರಿಸುತ್ತಾ, ತರ್ಕಬದ್ಧವಾಗಿ ಸಾಗುವ ಈ
ಕೃತಿ, ಶಾಸ್ತ್ರೀಯ ಕ್ರಮದ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಇಲ್ಲಿ ಕಲ್ಪನೆಯಿಲ್ಲ, ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ರಾಮಾಯಣದಲ್ಲಿದೆ ಎನ್ನುವ ಅಪಭ್ರಂಶವಿಲ್ಲ, ತನಗನ್ನಿಸಿದ್ದೇ ಸತ್ಯ ಎಂದುಕೊಳ್ಳುವ ಅಹಂಕಾರವೂ ಇಲ್ಲ. ಋಷಿಹೃದಯದ ಒಳಹೊಕ್ಕು, ಆ ಆರ್ಷತನವನ್ನು ಆಸ್ವಾದಿಸುತ್ತಾ, ಸತ್ಯವನ್ನು ಮಾತ್ರ ಹೇಳುತ್ತೇನೆ ಎನ್ನುವ ವಿನಯಪೂರ್ವಕವಾದ ದಿಟ್ಟತನ ಕೃತಿಯಲ್ಲಿದೆ.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ರಾಮನೇನು ದೇವನೇ?

ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ 39ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ, ಮದ್ರಾಸು ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ, ಬಹುಶ್ರುತ ವಿದ್ವಾಂಸರಾದ ಡಾ. ಕೆ. ಎಸ್. ಕಣ್ಣನ್ ಅವರು ರಚಿಸಿರುವ, ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಪ್ರತಿಗಳಿಗಾಗಿ ಶ್ರೀಪುಸ್ತಕಮ್ (9591542454) ಸoಪರ್ಕಿಸಬಹುದಾಗಿದೆ.

“ಶ್ರೀರಾಮ, ಶ್ರೀಮನ್ನಾರಾಯಣನ ಅವತಾರ. ವಾಲ್ಮೀಕಿ ರಾಮಾಯಣ ಇದನ್ನು ಬಗೆಬಗೆಯಾಗಿ ತೋರಿಸಿಕೊಡುತ್ತದೆ. ವ್ಯಕ್ತವಾಗಿಯಲ್ಲದೇ ರಾಮಾಯಣದ ಅಂತಃಸೂತ್ರವೇ ಇದಾಗಿದೆ. ವೈಕುಂಠದಿಂದ ಆರಂಭವಾಗಿ ಮತ್ತೆ ವೈಕುಂಠವನ್ನು ಸೇರುವುದೇ ರಾಮನ ಅಯನ. ಈ ಅಯನ ಜೀವಿಗಳೆಲ್ಲರದ್ದೂ ಆಗಬೇಕೆನ್ನುವುದೇ ರಾಮಾಯಣದ ಸಂದೇಶ, ಶ್ರೀರಾಮನ ಅವತಾರವೂ, ಶ್ರೀಮದ್ರಾಮಾಯಣದ ಅವತಾರವೂ ಈ ಉದ್ದೇಶದ್ದೇ ಆಗಿದೆ. ಇದೀಗ ರಾಮನೇನು ದೇವನೇ? ಕೃತಿ ವಾಲ್ಮೀಕಿಗಳು ರಾಮಾಯಣದಲ್ಲಿ ಎಲ್ಲೆಲ್ಲಿ ಈ ಅಂಶವನ್ನು ಪ್ರಸ್ತುತಪಡಿಸಿದ್ದಾರೆ ಎನ್ನುವುದನ್ನು ಸಾಧಾರವಾಗಿ ನಿರೂಪಿಸಿದೆ.
| ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ

Continue Reading

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ಧವಳ ಧಾರಿಣಿ ಅಂಕಣ: ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ.

VISTARANEWS.COM


on

valmiki dhavala dharini column
Koo

ರಾಮಾಯಣದ ಪೂರ್ವರಂಗ ಮತ್ತು ಅಂತರಂಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಕೃತ್ವಾಪಿ ತನ್ಮಹಾಪ್ರಾಜ್ಞಸ್ಸಭವಿಷ್ಯಂ ಸಹೋತ್ತರಮ್
ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ ৷৷ಬಾ.4.3৷৷

ಮಹಾ ಪ್ರಾಜ್ಞರು ಮತ್ತು ತ್ರಿಕಾಲವನ್ನು ಬಲ್ಲವರಾದ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಪಟ್ಟಾಭಿಷೇಕದ ನಂತರ ಭವಿಷ್ಯವನ್ನು ಹೇಳುವ ಉತ್ತರಕಾಂಡ ಸಹಿತವಾದ ರಾಮಾಯಣವನ್ನು ರಚಿಸಿದ ನಂತರ ನನ್ನಿಂದ ಇದರ (ರಾಮಾಯಣದ) ಉಪದೇಶವನ್ನು ಪಡೆದು ಸರಿಯಾಗಿ ಪ್ರಯೋಗಿಸಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆಗೊಳಗಾದರು (ಭಾವಾರ್ಥ).

ಕವಿಗೆ ಕಾವ್ಯವನ್ನು ರಚಿಸುವಾಗ ಹೇಗೆ ಮತ್ತು ಯಾಕೆ ಎನ್ನುವ ಚಿಂತೆ ಉಂಟಾಗುವುದು ಸಹಜದ ಕ್ರಿಯೆ. ಮನಸ್ಸಿನಲ್ಲಿ ಯಾವುದೋ ಅಮೂರ್ತವಾದ ಭಾವವನ್ನು ಇರಿಸಿಕೊಂಡು ಅದನ್ನು ಮೂರ್ತರೂಪಕ್ಕೆ ತರುವಾಗ ಕವಿ ಪ್ರಸವವೇದನೆಯನ್ನು ಅನುಭವಿಸುತ್ತಾನೆ. ಇಲ್ಲಿ ಕಾವ್ಯ ರೂಪುಗೊಳ್ಳುವಿಕೆಯೆನ್ನುವುದನ್ನು ಕೀಟವೊಂದು ಪತಂಗವಾಗಿ ಪರಿವರ್ತಿತವಾಗುವುದಕ್ಕೆ ಹೋಲಿಸಬಹುದು. ಕಾವ್ಯದ ವಸ್ತು ಮನಸ್ಸಿನಲ್ಲಿ ರೂಪುಗೊಳ್ಳುತ್ತಲೇ ಅದು ಹೊರ ಬರುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕಾಗುತ್ತದೆ. ಮನಸ್ಸಿನಲ್ಲಿ ಮಥನ ನಡೆಯುತ್ತಾ ನಂತರದಲ್ಲಿ ಅದು ತನ್ನ ಸುತ್ತಲೂ ಕಟ್ಟಿದ ಗೂಡನ್ನು ತಾನೇ ಒಡೆದುಕೊಂಡು ಮನೋಹರವಾದ ಪಾತರಗಿತ್ತಿಯಾಗಿ ಹಾರತೊಡಗುತ್ತದೆ. ಮೊದಲು ಕವಿ ರಸಭಾವದಲ್ಲಿ ಲೀನವಾಗುತ್ತಾನೆ. ತುರೀಯಾವಸ್ಥೆಗೆ ತಲುಪುವಾಗ ಭಾವದ ಆವರಣದೊಳಗೆ ಸಿಕ್ಕಿಬೀಳುತ್ತಾನೆ. ಹುತ್ತಗಟ್ಟುವ ಕ್ರಿಯೆ ಎಂದರೆ ಇದೆ. ರತ್ನಾಕರನೆನ್ನುವ ಬೇಡ ಹೆಂಡತಿ ಮಕ್ಕಳನ್ನು ಸುಖವಾಗಿರಿಸಲು ಹಿಂಸಾವೃತ್ತಿಯನ್ನೇ ಮೈಗೂಡಿಸಿಕೊಂಡು ಬದುಕಿದವ. ಲೌಕಿಕದ ಸುಖವನ್ನು ಹಂಚಿಕೊಳ್ಳಲು ಬಯಸುವ ಅವರ ಕುಟುಂಬದವರು ಅದರಿಂದ ಉಂಟಾಗಬಹುದಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿಲ್ಲದಾಗ ಆಘಾತಗೊಂಡ.

ಬದುಕೆನ್ನುವುದು ಆದರ್ಶವನ್ನು ಹುಡುಕುವುದಕ್ಕಾಗಿಯಲ್ಲ; ಆದರ್ಶವೇ ಬದುಕಾಗಬೇಕೆಂದು ಆಗ ಅನಿಸಿತು. ಅಂಗುಲಿಮಾಲ ಬುದ್ಧನಿಂದ ಪ್ರಭಾವಿತನಾಗಿರುವುದು ಇಂತಹುದೇ ಸಂದರ್ಭದಲ್ಲಿ. “ನಾನೃಷಿಃ ಕುರುತೇ ಕಾವ್ಯಂ” ಕವಿ ಜ್ಞಾನಿಯಷ್ಟೇ ಅಲ್ಲ, ಋಷಿಯೂ ಆಗಿರಬೇಕು. ಈ ಬದಲಾವಣೆಯ ಪರ್ವದಲ್ಲಿ, ತನಗಾಗಿ ಅಲ್ಲ ಲೋಕಕ್ಕಾಗಿ ಬದುಕಿದವ ಜಗತ್ತಿನಲ್ಲಿ ಇರಬಹುದೇ ಎನ್ನುವ ಸಂಶಯದ ಹುತ್ತ ಕಾಡಿದಾಗ ಹುಡುಕಾಟ ಪ್ರಾರಂಭವಾಯಿತು. ಆಗ ದರ್ಶನವಾಗಿರುವುದು ವೇದೋಪನಿಷತ್ತುಗಳಲ್ಲಿ ಅವಿತಿರುವ ಅಮೂರ್ತ ಜ್ಞಾನಭಂಡಾರ. ದರ್ಶನ ಆದರ್ಶವಾಗಬೇಕಾದರೆ ಅದಕ್ಕೊಂದು ಮೂರ್ತರೂಪ ಬೇಕು. ಅದೆಲ್ಲಿ ಎಂದು ಮತ್ತೆ ಮತ್ತೆ ಹಂಬಲಿಸುತ್ತಾ ಎಚ್ಚರವಾಗಿಯೂ ಎಚ್ಚರಗೊಳ್ಳದ ಸ್ಥಿತಿಯಲ್ಲಿ ಇದ್ದ. ಅಕ್ಷರವೆನ್ನುವುದು ಅವಿನಾಶಿ. ಅದು ಒಂದೂ ಅಲ್ಲದ ಬಹುತ್ವವೂ ಅಲ್ಲದ ವ್ಯಾಪಕತ್ವ. ಅದಕ್ಕೆ ಮತ್ತೊಂದು ಅಕ್ಷರ ಸೇರಿದಾಗ ಅದಕ್ಕೊಂದು ಮೂರ್ತರೂಪ ಬರುತ್ತದೆ. ಅದುವೇ ರಾಮ ಎನ್ನುವುದನ್ನು ಸಪ್ತರ್ಷಿಗಳೇ ಹೇಳಿದಾಗ ಮನಸ್ಸಿನೊಳಗೆ ಪಡಿಮೂಡಿತು ಆ ಆಕೃತಿ.

ಕವಿಸೃಷ್ಟಿಯನ್ನು “ನಿಯತಿಕೃತ ನಿಯಮರಹಿತ”ವೆಂದು ಹೇಳುತ್ತಾರೆ. ಲೋಕಾತೀತವಾದ ವಿಷಯಗಳನ್ನು ಅನುಭವಿಸುವಿಕೆಗೆ ದರ್ಶನವೆಂದು ಕರೆಯುತ್ತಾರೆ. ಅದು ಅಲೌಕಿಕ ಆನಂದವನ್ನು ನೀಡುತ್ತದೆ. ರತ್ನಾಕರ, ಪ್ರಾಚೇತಸ, ಋಕ್ಷ ಹೀಗೆ ಹಲವು ಹೆಸರುಳ್ಳ, ಆದರೆ ಹಿಂಸಾರತಿಯಲ್ಲಿ ಮನವಿಟ್ಟವನಿಗೆ ಸ್ವಾರ್ಥವನ್ನು ಬಿಟ್ಟು ಕೇವಲ ಕರ್ತವ್ಯವನ್ನೇ ತನ್ನ ಆಹ್ನಿಕವೆಂದುಕೊಂಡ ವ್ಯಕ್ತಿ ಇರಲು ಸಾಧ್ಯವೇ ಎನ್ನುವ ಸಂಶಯ ಬರುತ್ತಿತ್ತು. ಅನುಭವ ಪಕ್ವವಾಗಬೇಕಾದರೆ ಅದಕ್ಕೆ ನಿದರ್ಶನ ಬೇಕು. ನಾಟ್ಯದ ಭಾಷೆಯಲ್ಲಿ ಇದನ್ನು ಅಮೂರ್ತದಿಂದ ಮೂರ್ತಕ್ಕೆ ಮತ್ತು ಮೂರ್ತದಿಂದ ಅಮೂರ್ತಕ್ಕೆ ಎನ್ನುವ ಅವಸ್ಥೆಗಳಿಗೆ ತಲುಪುವ ಕ್ರಿಯೆ ಎನ್ನುತ್ತಾರೆ. ಸರಳವಾದ ರಂಗದ ಮೇಲೆ ತಾನು ಅನುಭವಿಸಿದ ವಿಷಯಗಳನ್ನು ನಟ ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾನೆ. ರಥ, ದೇವೇಂದ್ರನ ಸಭೆ, ಅರಣ್ಯ ಇವೆಲ್ಲವುಗಳ ಅಭಿನಯ ನಟನ ಸಾಮರ್ಥ್ಯದ ಮೇಲೆ ಪ್ರೇಕ್ಷಕನಿಗೆ ದರ್ಶನವಾಗಿ ಆತ ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿ ತನ್ನನ್ನು ಸಂಪೂರ್ಣವಾಗಿ ಮರೆಯುತ್ತಾನೆ. ರಸದಲ್ಲಿ ಲೀನವಾಗುತ್ತಾನೆ. ಅಲ್ಲಿಗೆ ಪ್ರೇಕ್ಷಕನಿಗೆ ಮೂರ್ತಸ್ವರೂಪದಲ್ಲಿ ಕಾಣಿಸಿಕೊಂಡು ಆತನನ್ನು ತನ್ನೊಟ್ಟಿಗೆ ಅಮೂರ್ತಲೋಕಕ್ಕೆ ಒಯ್ಯುತ್ತದೆ. (ಯಕ್ಷಗಾನ ಇದಕ್ಕೆ ಸ್ಪಷ್ಟ ಉದಾಹರಣೆ). ಈ ಅನುಭವದ ಸಾಕ್ಷಾತ್ಕಾರಕ್ಕಾಗಿ ಋಷಿ ವಾಲ್ಮೀಕಿ ಹಂಬಲಿಸುತ್ತಿದ್ದ.

ರಾಮಾಯಣದ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗೆ ಮೂರುಸಲ ಚಿಂತೆಯುಂಟಾಗಿತ್ತು. ಬದುಕಬೇಕಾದರೆ ಹಿಂಸೆಯೇ ಮಾರ್ಗವೆಂದು ಅದೇ ಹಾದಿ ಹಿಡಿದು ಇದೀಗ ಆದರ್ಶದ ಬೆನ್ನು ಹತ್ತಿದವನಿಗೆ, ಎಲ್ಲಾ ಕಡೆಯೂ ಇದ್ದು ಎಲ್ಲದರಿಂದಲೂ ಅಂತರವನ್ನು ಕಾಯ್ದುಕೊಂಡಂತಹ ವ್ಯಕ್ತಿ ಈ ಲೋಕದಲ್ಲಿ ಇರಲು ಸಾಧ್ಯವೇ ಎನ್ನುವ ಸಂಶಯ ಬಿಟ್ಟೂ ಬಿಡದೇ ಕಾಡುತ್ತಿತ್ತು. ಒಂದು ವೇಳೆ ಇಲ್ಲದೇ ಹೋದರೆ…??? ಎನ್ನುವ ಚಿಂತೆಗೂ ಇದೇ ಕಾರಣವಾಗಿತ್ತು. ಮುನಿಪುಂಗವ ಆ ಕುರಿತೇ ತಪಸ್ಸು ಮಾಡುತ್ತಿದ್ದ; ಈ ವಿಷಯದ ಕುರಿತು ಸ್ಪಷ್ಟ ನಿದರ್ಶನವನ್ನು ಬಯಸುತ್ತಿದ್ದ. ಸಪ್ತರ್ಷಿಗಳೇನೋ ಮಹಾಮಹಿಮನ ವಿಷಯಗಳ ಕುರಿತು ರಾಮ ಎನ್ನುವ ಹೆಸರನ್ನು ಹೇಳಿದ್ದಾರೆ. ಲೋಕದಲ್ಲಿ ಸಂಭಾವಿತನಾಗಿ ಬದುಕುವದೆನ್ನುವದು ಒಂದು ಆದರ್ಶ ಸ್ಥಿತಿ (Utopian State). ಆದರ್ಶವೆನ್ನುವುದು ವಾಸ್ತವವೂ ಆಗಬಹುದೇ ಎನ್ನುವ ಚಿಂತೆ ನಿರಂತರವಾಗಿ ಕಾಡುತ್ತಿರುವಾಗಲೇ, ಇದಕ್ಕೆ ಉತ್ತರಿಸಬಲ್ಲವರು ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾದ ತಪಸ್ವಿಗಳಾಗಿರಬೇಕು; ಏಕಾಗ್ರತೆಯನ್ನು ವಾಲ್ಮೀಕಿಗಿಂತಲೂ ಚನ್ನಾಗಿ ಸಾಧಿಸಿದವರಾಗಿರಬೇಕು. ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ಅಂಥವರು ಯಾರಿದ್ದಾರೆ ಎನ್ನುವ ಪ್ರಶ್ನೆ ನಿರಂತರವಾಗಿ ವಾಲ್ಮೀಕಿಯನ್ನು ಕಾಡುತ್ತಿತ್ತು.

ಹೀಗಿರುತ್ತಿರುವಾಗ ಅವರಲ್ಲಿಗೆ ನಾರದ ಬರುತ್ತಾನೆ. ಮಹರ್ಷಿಯ ಪ್ರಶ್ನೆಗೆ ಉತ್ತರಿಸಲು ಇವರಿಗಿಂತಲೂ ಬೇರೆ ಯಾರು ಸಮರ್ಥರಿಲ್ಲ ಎಂದುಕೊಳ್ಳುತ್ತಾನೆ. (ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್). ನೇರವಾಗಿ ಅವರಲ್ಲಿಯೇ ತನ್ನನ್ನು ಕಾಡುತ್ತಿರುವ ಚಿಂತೆಯನ್ನು ಹೇಳುತ್ತಾ “ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. (ಅವು ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸುಕೊಂಡು ಬರುವಾತ, ಭೂತದಯೆ, ಚತುರ್ದಶವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ) ಇಂಥಹ ಮಾನವನು “ಕೋನ್ವಸ್ಮಿನ್ ಸಾಂಪ್ರತಂ ಲೋಕೇ- ಈ ಕಾಲದಲ್ಲಿ” ಇದ್ದಾನೆಯೇ; ಇದ್ದರೆ ಆತನ ಕುರಿತು ವಿವರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ನಾರದರು ಇಕ್ಷಾಕುವಂಶದಲ್ಲಿ ಜನಿಸಿದ ರಾಮ ರಾಮ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ಆತನ ಕುರಿತು ವಿವರಿಸುತ್ತಾರೆ.

ರಾಮಾಯಣದ ಕಥೆಯನ್ನು ಕೇಳಿದ ವಾಲ್ಮೀಕಿಗೆ ಮನಸ್ಸು ಪ್ರಪುಲ್ಲವಾಗಿದೆ. ಹಗುರವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ. ಹೀಗೆ ತಮಸಾ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಬೇಡನೊಬ್ಬ ಮಿಥುನ ಸ್ಥಿತಿಯಲ್ಲಿದ್ದ ಜೋಡಿ ಕ್ರೌಂಚಪಕ್ಷಿಗೆ ಬಾಣ ಬಿಟ್ಟು ಗಂಡು ಹಕ್ಕಿಯನ್ನು ಕೊಂದುಬಿಟ್ಟ. ಹೆಣ್ಣು ಹಕ್ಕಿ ಅದನ್ನು ನೋಡಿ ಗೋಳಾಡತೊಡಗಿತು. ಅದರ ಸ್ಥಿತಿಯನ್ನು ನೋಡಿದ ಮುನಿಯ ಮನಸ್ಸಿನಲ್ಲಿ ಕರುಣಾರಸವು ಉಕ್ಕೇರಿತು. ಬೇಡನೆಡೆಗೆ ನೋಡಿ ಹೇಳಿದ ಮಾತು-

sage and poet valmiki

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶ್ಶಾಶ್ವತೀಸ್ಸಮಾಃ
ಯತ್ಕ್ರೌಞ್ಚಮಿಥುನಾದೇಕಮವಧೀ: ಕಾಮಮೋಹಿತಮ್ ৷৷ಬಾ. 15৷৷

“ಎಲೈ ನಿಷಾದನೇ! ಮಿಥುನದಲ್ಲಿ ನಿರತವಾಗಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದು ಕೊಂದಿರುವುದರಿಂದ ನೀನು ಬಹಳ ಕಾಲದವರೆಗೆ ಸ್ಥಿರವಾಗಿ ಬದುಕಲಾರೆ”

ಒಂದು ಕಾಲದಲ್ಲಿ ಆ ಬೇಡನಂತೆ ತಾನೂ ಹಿಂಸಾವೃತ್ತಿಯನ್ನು ಅನುಸರಿಸುತ್ತಿದ್ದ ವಾಲ್ಮೀಕಿ ಈಗ ಅದನ್ನು ತ್ಯಜಿಸಿದ್ದಾರೆ. ಬೇಡನಿಗೆ ಶಾಪವನ್ನು ಕೊಡುವಾಗಲೂ ಸಾಯಿ ಎಂದು ಹೇಳುವದಕ್ಕಿಂತ “ಬಹಳ ಕಾಲ ಸ್ಥಿರವಾಗಿ ಬದುಕಲಾರೆ” ಎನ್ನುವ ಮಾತನ್ನು ಆಡುತ್ತಾನೆ. “ಸಾಯಿ ಎನ್ನುವುದಕ್ಕಿಂತ ಬದುಕಲಾರೆ” ಎನ್ನುವ ಮಾತುಗಳು ಬಹು ಅರ್ಥಪೂರ್ಣ! ರಾಮಾಯಣವನ್ನು ಕೇಳಿದ ಪ್ರಭಾವದಿಂದ ಹಿಂಸೆಯ ಲವಲೇಶವೂ ಮನಸ್ಸಿನಲ್ಲಿ ಇಲ್ಲ. ಮರುಕ್ಷಣದಲ್ಲಿಯೇ ಬೇಡನ ವೃತ್ತಿಯೇ ಬೇಟೆಯಾಡುವುದು, ತನ್ನ ಶಾಪ ಅಗತ್ಯವಿತ್ತೇ ಎನ್ನುವ ಇನ್ನೊಂದು ಚಿಂತೆ ಅವರನ್ನು ಕಾಡಿತು. ಹೆಣ್ಣು ಕ್ರೌಂಚದ ಶೋಕ ವಾಲ್ಮೀಕಿಯ ಮನವನ್ನು ಕಲಕಿತ್ತು. ಅದಕ್ಕೆ ಪ್ರತಿಯಾಗಿ “ಬಹಳ ಕಾಲ ಬದುಕಲಾರೆ” ಎನ್ನುವುದು ಉತ್ತರವಾಗಲಾರದು. ತನ್ನ ಶಾಪ ನಿಜವಾದರೆ ಬೇಡನ ಹೆಂಡತಿಗೆ ದುಃಖವಾಗದೇ ಇದ್ದೀತೆ ಎನ್ನುವ ಮನೋಭಾವವೂ ಇದ್ದಿರಬಹುದಾಗಿದೆ. ಹಿಂಸೆಗೆ ಇನ್ನೊಂದು ಹಿಂಸೆ ಉತ್ತರವಾಗಲಾರದು. ಹಾಗಾಗಿ ಚಿಂತೆಗೆ ಪರಿಹಾರವೆಂದರೆ ಶೋಕ ಶ್ಲೋಕವಾಗುವುದು. ಶೋಕವೆಂದರೆ ದುಃಖ; ಶೋಕಕ್ಕೆ ಕಾರಣ ವಿಯೋಗ. ರಾಮಾಯಣವೂ ವಿಯೋಗದ ಕಥೆಯೇ. ಇಲ್ಲಿ ತಂದೆಗೆ ಮಕ್ಕಳ ವಿಯೋಗ, ಅಣ್ಣನಿಗೆ ತಮ್ಮನ ವಿಯೋಗ, ಗಂಡನಿಗೆ ಹೆಂಡತಿಯ ವಿಯೋಗ. ಕ್ರೌಂಚವೆಂದರೆ ಕುಟಿಲ ಸ್ವರೂಪರಾದ ರಾಕ್ಷಸರು ಎನ್ನುವ ಅರ್ಥವೂ ಇದೆ. ಸೀತೆಯನ್ನು ರಾಮನಿಂದ ಅಗಲಿಸಿದ ಕಾರಣಕ್ಕೆ ಮಂಡೋದರಿಗೂ ಇಲ್ಲಿ ರಾವಣನ ವಿಯೋಗವನ್ನು ಅನುಭವಿಸಬೇಕಾಯಿತು ಎನ್ನುವದೂ ಆಗುತ್ತದೆ. ಕಾಮದಿಂದ ಸುಗ್ರೀವನ ಹೆಂಡತಿಯನ್ನು ಅಪಹರಿಸಿದ ವಾಲಿಯನ್ನು ರಾಮ ಕೊಂದು ಸುಗ್ರೀವನಿಗೆ ಆತನ ಪತ್ನಿ ಪುನಃ ಸಿಗುವಂತೆ ಮಾಡಿದ್ದಾನೆ.

ಕರುಣರಸದ ಸ್ಥಾಯಿಭಾವವೇ ಶೋಕ. ಈ ಸ್ಥಾಯಿಭಾವವನ್ನು ಶ್ಲೋಕವಾಗಿಸುವುದು ಎಂದರೆ ಸ್ತೋತ್ರರೂಪವಾದ ಪದ್ಯವನ್ನಾಗಿಸುವುದು. ಸ್ತೋತ್ರವೆಂದರೆ ಸದ್ಗುಣಗಳನ್ನು (ದೇವರನ್ನು) ಹೊಗಳುವುದು. ನಿಷಾದ ಎಂದರೆ ಪೀಡಿಸುವವ ಎನ್ನುವ ಅರ್ಥವೂ ಆಗುತ್ತದೆ. ಅಲ್ಪೀಭೂತವಾದ ಮಿಥುನದಿಂದ ಎಂದರೆ ರಾಜ್ಯಭ್ರಂಶವನವಾಸಾದಿ ಕ್ಲೇಷಗಳಿಂದ ಕೃಶರಾದ ಸೀತಾರಾಮರೆನ್ನುವವರಲ್ಲಿ ಒಬ್ಬಳಾದ ಸೀತೆಯನ್ನು ಅವಧೀಃ- ಅಗಲಿಸಿದ ಕಾರಣದಿಂದಾಗಿ ಬ್ರಹ್ಮವರದಿಂದ ಲಭಿಸಿದ ರಾಜ್ಯವನ್ನು ರಾವಣ ಇನ್ನು ಬಹಳಕಾಲದ ವರೆಗೆ ಅನುಭವಿಸಲಾರೆ. ತ್ರಿಲೋಕಕಂಟಕನಾದ ರಾವಣನನ್ನು ಶಪಿಸಿರುವುದರಿಂದ ಸಕಲ ಲೋಕಕ್ಕೂ ಸನ್ಮಂಗಳವುಂಟಾಯಿತು ಎನ್ನುವುದಾಗಿಯೂ ಅರ್ಥವನ್ನು ಮಾಡಬಹುದು. ಶೋಕರೂಪವಾಗಿ ಹೊರಬಂದ ಮಾತು ಅನುಷ್ಟುಪ್ ಛಂದಸ್ಸಿನಲ್ಲಿತ್ತು. ಅದೇ ಶ್ಲೋಕವಾಗಿ ಮಂಗಳಕರ ನಾಂದೀ ಪದ್ಯವಾಯಿತು ಎನ್ನುವ ಸಮಾಧಾನವೂ ಇದೀಗ ಮುನಿಯಲ್ಲಿ ಮೂಡಿತು. ತನ್ನ ಶಿಷ್ಯ ಭಾರದ್ವಾಜನಿಗೆ “ತನ್ನ ಮಾತು ಕೇವಲ ಪದಜಾಲವಾಗದಿರಲಿ. ಪ್ರಾಸಬದ್ಧವಾಗಿ ಬಂದಿರುವ ಇದು ತಂತಿಯ ವಾದ್ಯದೊಡನೆ ಹಾಡುವ ಲಯಬದ್ಧಶ್ಲೋಕವಾಗಿ ಪರಿಣಮಿಸಲಿ” ಎನ್ನುತ್ತಾನೆ. ಅದನ್ನು ಭಾರದ್ವಾಜ ಕಂಠಪಾಠ ಮಾಡುತ್ತಾನೆ.

king dasharatha

ಇತ್ತ ಆಶ್ರಮಕ್ಕೆ ಬಂದರೆ, ಕವಿಯನ್ನು ನೋಡಲು ಬ್ರಹ್ಮನೇ ಬಂದಿರುತ್ತಾನೆ. ರಾಮಾಯಣದ ಕಾವ್ಯವನ್ನು ರಚಿಸು ಎಂದು ವರ ನೀಡುತ್ತಾನೆ. ವರದ ಫಲದಿಂದ ರಾಮಾಯಣದಲ್ಲಿ ನಡೆದ ವೃತ್ತಾಂತಗಳು, ಎಲ್ಲಾ ಪಾತ್ರಗಳ ರಹಸ್ಯಗಳು ವಾಲ್ಮೀಕಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ತೋರುತ್ತದೆ. ಎಲ್ಲಿ ಹೃದಯದ ಕಣ್ಣು ತೆರೆಯುತ್ತದೆಯೋ ಅಲ್ಲಿ ಕಾವ್ಯದ ರಸಸೃಷ್ಟಿಯಾಗುತ್ತದೆ. ಲೋಕದಲ್ಲಿ ಸಾಮಾನ್ಯವಾಗಿ ಕಂಡ ಸಂಗತಿಗಳು ಕವಿಗೆ ವಿಶೇಷ ರೂಪವಾಗಿ ಗೋಚರವಾಗುವುದು. ತೀ. ನಂ. ಶ್ರೀಕಂಠಯ್ಯನವರು ಕಾವ್ಯ ಹುಟ್ಟುವ ಹೊತ್ತನ್ನು “ತನ್ನೊಳಗೆ ತುಂಬಿರುವ ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತು ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ, ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನು ಸಾಕ್ಷಾತ್ತಾಗಿ ಕಾಣಬಲ್ಲನು(ಭಾ. ಕಾ. ಮೀ-10)” ಎಂದು ವಿವರಿಸುತ್ತಾರೆ. ವಾಲ್ಮೀಕಿ ಕುಳಿತಲ್ಲಿಯೇ ರಾಮಾಯಣದ ಎಲ್ಲಾ ವಿವರಗಳನ್ನು ಕಾಣುವದು ಈ ವಿಶೇಷದೃಷ್ಟಿಯಿಂದಲೇ. ಅದನ್ನೇ ಬ್ರಹ್ಮ ಆತನಿಗೆ ಕೊಟ್ಟ ವರ ಎಂದು ಅಲಂಕಾರಿಕವಾಗಿ ಹೇಳಲಾಗಿದೆ. ಸಕಲ ಚರಾಚರಗಳ ಸೃಷ್ಟಿಗೆ ಕಾರಣ ಬ್ರಹ್ಮ; ಆತನೇ ತನಗಿರುವ ಅಪೂರ್ವ ಕಾವ್ಯಸೃಷ್ಟಿಯನ್ನು ವಾಲ್ಮೀಕಿಗೆ ಅನುಗ್ರಹಿಸಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ. ವಾಲ್ಮೀಕಿಗೆ ತನ್ನ ಕಾವ್ಯ ಅದ್ವಿತೀಯವಾದುದೆನ್ನುವ ವಿಶ್ವಾಸ ಬಂದಿದೆ. ಈ ಮೊದಲು ಹದಿನಾರು ಗುಣಗಳುಳ್ಳ ಮನುಷ್ಯ ಇದ್ದಿರಬಹುದೇ ಎನ್ನುವ ಚಿಂತೆ ಅವರನ್ನು ಕಾಡಿತ್ತು. ನಂತರ ಹೆಣ್ಣು ಕ್ರೌಂಚದ ವಿರಹದ ಅಳುವನ್ನು ನೋಡಿ “ಹೆಚ್ಚು ಕಾಲ ಬದುಕಲಾರೆ” ಎನ್ನುವ ಶಾಪವನ್ನು ಕೊಟ್ಟ ಕಾರಣ ಚಿಂತೆ ಕಾಡಿತ್ತು. “ಸೃಷ್ಟಿ ಎನ್ನುವ ಶಬ್ಧದಲ್ಲಿ ಸಾವು ಎನ್ನುವುದು ಇರುವುದಿಲ್ಲ. ಸಾವಿನಲ್ಲಿ ಸೃಷ್ಟಿ ಇರುವುದಿಲ್ಲ, ಇವೆರಡೂ ಯಾವತ್ತಿಗೂ ಒಟ್ಟಿಗೆ ಇರಲಾರದು” ಬ್ರಹ್ಮನಿಗೆ ಸೃಷ್ಟಿಸುವುದು ತಿಳಿದಿದೆಯೇ ಹೊರತೂ ನಾಶದ ಅರಿವಿಲ್ಲ. ವಾಲ್ಮೀಕಿಗೆ ಈ ಕಾರಣಕ್ಕಾಗಿ ಬದುಕಲಾರೆ ಎನ್ನುವ ಮಾತು ಕವಿಸೃಷ್ಟಿಗೆ ವಿರುದ್ಧವಾಗಿ ತೋರಿದೆ. ಹಾಗಾಗಿ ಎರಡನೇ ಸಾರಿ ಚಿಂತೆಗೊಳಗಾದ. ಅದಕ್ಕೆ ಬ್ರಹ್ಮನೇ ಬಂದು ಸಮಾಧಾನ ಹೇಳಿ ನಂತರದಲ್ಲಿ ಮಹಾಕಾವ್ಯವನ್ನು ರಚಿಸಿದ ಬಳಿಕ “ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ” ಇಂತಹ ಕಾವ್ಯವನ್ನು ಉಪದೇಶ ಪಡೆಯಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆ ಮೂರನೇ ಬಾರಿಗೆ ಉದ್ಭವಿಸಿತು. ಹೀಗೆ ಚಿಂತಿಸುತ್ತಾ ಕಣ್ಮುಚ್ಚಿ ಕುಳಿತಿರುವ ಹೊತ್ತಿನಲ್ಲಿ ಅವರ ಕಾಲನ್ನು ಯಾರೋ ಹಿಡಿದುಕೊಂಡಿದ್ದು ಗಮನಕ್ಕೆ ಬಂತು. ಯಾರೆಂದು ಕಣ್ಣುತೆರೆದು ನೋಡಿದರೆ ಬಾಲಕರಾದ ಲವ-ಕುಶರು.

ಇಲ್ಲಿ ಎರಡು ಸಂಗತಿಗಳನ್ನು ವಾಲ್ಮೀಕಿ ಹೇಳುವುದು ಬಲು ಮುಖ್ಯ. ಮೊದಲನೆಯದು ಅವರು ಮುನಿವೇಷಧಾರಿಗಳಾಗಿದ್ದರು, ಅವರು ಆಶ್ರಮವಾಸಿಗಳಾಗಿರಲಿಲ್ಲವೆಂದು ಮುನಿವೇಷಧಾರಿಗಳಾಗಿದ್ದರು ಎನ್ನುವುದರ ಮೂಲಕ ಸೂಚಿಸುತ್ತಾರೆ, ಎರಡನೆಯದು ಆ ಬಾಲಕರಿಗೆ ಹಾಡುವುದಕ್ಕೆ ಯೋಗ್ಯವಾದ ಶಾರಿರ ಸಂಪತ್ತು – “ಭ್ರಾತರೌ ಸ್ವರಸಮ್ಪನ್ನೌ ದದರ್ಶಾಶ್ರಮವಾಸಿನೌ” ಇತ್ತು ಎನ್ನುವುದು. ರಾಮಾಯಣವನ್ನು ವಾಲ್ಮೀಕಿ ರಚಿಸುವಾಗಲೇ ತನ್ನ ಕಾವ್ಯ ಹಾಡುವುದಕ್ಕೆ ಯೋಗ್ಯವಾಗಿ ಇರಬೇಕೆನ್ನುವುದನ್ನು ಬಯಸಿದ್ದರು. ರಾಮಾಯಣದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ. ನವರಸಭರಿತವಾಗಿದೆ ಎನ್ನುವುದು ಬಲು ಮುಖ್ಯ. ಕವಿಯ ಮನಸ್ಸನ್ನು ಅರಿತು ಹಾಡುವ ಯೋಗ್ಯರಾದ ಗಾಯಕರು ಸಿಕ್ಕಿದರೆಂದು ಮುನಿಗೆ ಸಂತೋಷವಾಯಿತು. ಶಿಷ್ಯರೂ ಅಷ್ಟೇ, ರಾಮಾಯಣವನ್ನು ಆಮೂಲಾಗ್ರವಾಗಿ ಕಲಿತು ಕವಿ ವಾಲ್ಮೀಕಿಯ ಮನಸ್ಸು ತೃಪ್ತಿಯಾಗುವಂತೆ ಮಹರ್ಷಿಗಳ ಸಭೆಯಲ್ಲಿ ಹಾಡಿ ತೋರಿಸಿದರು.

ಇಲ್ಲಿಗೆ ಮುನಿಯನ್ನು ಕಾಡಿದ ಮೂರನೆಯ ಚಿಂತೆ ಯೋಗ್ಯರಾದ ಗಾಯಕರು ಸಿಕ್ಕಿದರು ಎನ್ನುವ ಸಂತೋಷದಲ್ಲಿ ಪರಿವರ್ತಿತವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading
Advertisement
Neha Murder Case dhruva sarja priya savadi and kavya shastry condemn
ಸಿನಿಮಾ7 mins ago

Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ!

IPL 2024
ಕ್ರೀಡೆ18 mins ago

IPL 2024 : ಸೋಲಿನ ಬಳಿಕ ಚೆನ್ನೈ ತಂಡದ ಅಂಕಪಟ್ಟಿಯಲ್ಲಿನ ಸ್ಥಾನವೆಷ್ಟು? ಇಲ್ಲಿದೆ ಎಲ್ಲ ವಿವರ

cet exam karnataka exam authority
ಪ್ರಮುಖ ಸುದ್ದಿ27 mins ago

CET Exam: ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾರೀ ಗೊಂದಲ, ದೂರು ನೀಡಲು ಏ.27ರವರೆಗೆ ಕಾಲಾವಕಾಶ

Ancient snake vasuki indicus
ವೈರಲ್ ನ್ಯೂಸ್55 mins ago

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

charlie chaplin rajamarga
ಪ್ರಮುಖ ಸುದ್ದಿ2 hours ago

ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Karnataka Weather Forecast
ಮಳೆ2 hours ago

Karnataka Weather : ವೀಕೆಂಡ್‌ನಲ್ಲಿ ಬೆಂಗಳೂರಲ್ಲಿ ಮಳೆ ಗ್ಯಾರಂಟಿ; ಹಲವೆಡೆ ಗುಡುಗು, ಸಿಡಿಲು ಮುನ್ನೆಚ್ಚರಿಕೆ

Modi in Karnataka today Massive rally in Chikkaballapur and roadshow in Bengaluru
Lok Sabha Election 20243 hours ago

Modi in Karnataka: ರಾಜ್ಯದಲ್ಲಿಂದು ಮೋದಿ ಮೋಡಿ; ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಸಮಾವೇಶ, ಬೆಂಗಳೂರಲ್ಲಿ ರೋಡ್‌ ಶೋ

Kids Sleep
ಲೈಫ್‌ಸ್ಟೈಲ್3 hours ago

Kids Sleep: ಪೋಷಕರೇ ಎಚ್ಚರ; ನಿಮ್ಮ ಮಕ್ಕಳ ನಿದ್ರೆ ಕಸಿದುಕೊಳ್ಳುವ ಈ ವಸ್ತುಗಳನ್ನು ಕೊಡಲೇಬೇಡಿ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

ಕರ್ನಾಟಕ9 hours ago

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ17 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌