ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಸೂತಿ‍ Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಸೂತಿ‍

ಸರಿಯಾಗಿ ನೋಡಿದರೆ, ದಿಂಬು ಮಾತ್ರವಲ್ಲ, ಹೊದಿಕೆಗಳು, ಮಂದ್ರಿ, ಕರ್ಟನ್ ಎಲ್ಲದರ ಮೇಲೆಯೂ ಹೂವು, ಬಳ್ಳಿಗಳ ಚಿತ್ತಾರಗಳು. ಅರೇ! ಅತ್ತೆ ಸೀರೆ, ರವಕೆಯಲ್ಲೂ ಇದ್ದದ್ದು ಇವೇ ಚಿತ್ತಾರಗಳು ಎಂದು ನೆನಪಾಯ್ತು. ಬಟ್ಟೆ ಅಂತ ಕಾಣಿಸಿದ್ದರ ಮೇಲೆಲ್ಲಾ ಕಸೂತಿಯ ಚಿತ್ತಾರಗಳೇ ತುಂಬಿಕೊಂಡಿದ್ದವು.

VISTARANEWS.COM


on

kannada short story kasuthi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
soumya prabhu kalyankar

:: ಸೌಮ್ಯ ಪ್ರಭು ಕಲ್ಯಾಣಕರ್‌

Hurt people hurt people

 ― Yehuda Berg

ಬಸ್ಸಿಳಿಯುವಾಗಲೇ ಪೂರ್ತಿ ಕತ್ತಲು ಕವಿದಿತ್ತು. ಕೈಲಿದ್ದ ಮೊಬೈಲಿನ ಟಾರ್ಚು ಆನ್ ಮಾಡಿ ಕಲ್ಲಿನ ಚಪ್ಪಡಿಗಳ ಸಂಕದ ಮೇಲೆ ಕಾಲಿಟ್ಟು ನಡೆಯುವಾಗ ‘ಅರೇ ಈ ಚಪ್ಪಡಿಗಳು ಅದೆಷ್ಟು ವರ್ಷಗಳಿಂದ ಬಿದ್ದುಕೊಂಡಿವೆಯಲ್ಲಾ?, ಈ ಕೊಂಪೆಯಲ್ಲಿ ಏನೂ ಬದಲಾಗಿಲ್ಲ, ಆಗುವುದೂ ಇಲ್ಲ’ ಅಂದುಕೊಂಡೆ. ಬಂದು ಏಳು ವರ್ಷಗಳಾಯ್ತಲ್ಲ ಎಂದು ಆ ಕ್ಷಣಕ್ಕೇ ಹೊಳೆಯಿತು. ಅದರಿಂದ ಕೆಳಕ್ಕಿಳಿದು ನಡೆಯುತ್ತಿದ್ದಂತೆ ದಾರಿ ಮಹೇಶನ ಮನೆಯ ಪಕ್ಕಕ್ಕೆ ಹೊರಳಿತು. ಮಂದ ಬೆಳಕಿನಲ್ಲಿ ಆರಾಮವಾಗಿ ಬಿದ್ದುಕೊಂಡ ಅವರ ಮನೆಯ ನಾಯಿ ಬೊಗಳಲು ಶುರು ಮಾಡಿತು.

ಮನೆಯೊಳಗಿಂದ “ಏರ್ ಅವು (ಯಾರದು)” ಎಂಬ ಪ್ರಶ್ನೆಗೆ ‍“ನಾನು” ಎಂದಷ್ಟೇ‌ ಹೇಳಿದೆ.

“ಓಹ್! ಬಾಬಣ್ಣ ಈಗ ಬರುವುದಾ?, ಗಿರ್ಜತ್ತೆ ಹೇಗಿದ್ದಾರೆ ಈಗ? ಎಂಥ ತಡ ಮಾಡಿ ಹೊರಟ್ರಿಯಾ?” ಎಂಬ ಮಾತಿನೊಂದಿಗೆ ಮಹೇಶನ ಆಕೃತಿ ಮಸುಕಾಗಿ ಕುಂಟುತ್ತಾ ಹೊರಬಂದದ್ದು ಕಂಡಿತು.

“ಹೂಂ, ಮಹೇಶಣ್ಣ, ಕಾಲೇಜು ಬಿಟ್ಟು ಮನೆಗೆ ಹೋಗಿ ಹೊರಟು ಬರುವಾಗ ತಡವಾಯ್ತು, ಅಮ್ಮ ಆರಾಮಿದ್ದಾಳೆ, ಕಾಲು ಹೇಗಿದೆ ಇವಾಗ?” ಎಂದು ನಡೆಯುತ್ತಲೇ ಕೇಳಿದೆ.

ಅವನು “ಹೂಂ ಪರ್ವಾಗಿಲ್ಲ ಬಾಬಣ್ಣ, ಜಾಗ್ರತೆ ಹೋಗಿ” ಎಂದ.

ಮಹೇಶ ಅಮ್ಮನ ದೂರದ ಸಂಬಂಧಿ, ಮಾಧ್ವಿಯತ್ತೆಯ ಎಲ್ಲಾ ಸಮಾಚಾರಗಳನ್ನು ಅಮ್ಮನಿಗೆ ತಿಳಿಸುವಾತ. ಅಡಿಕೆ ಮರಗಳ ಸಪೂರ, ಉದ್ದ ಕಪ್ಪು ನೆರಳುಗಳ ಮಧ್ಯೆ ನಡೆಯುತ್ತಾ ಹೋದಂತೆ, ಮಿಣುಕುಹುಳಗಳ ಮಿಂಚಿ ಮಾಯವಾಗುವ ಬೆಳಕು, ಜೀರುಂಡೆಗಳ ಸದ್ದು, ಕಪ್ಪೆಗಳ ವಟವಟಗಳ ನಡುವೆ ಈ ಕತ್ತಲ ಪ್ರಪಂಚದಲ್ಲಿ ಸುಖವೆನಿಸಿತು. ‍ಕತ್ತಲಿದ್ದರೂ ಸುತ್ತಣ ಏನಿದೆ, ಏನಿಲ್ಲ ಎಂಬುದರ ಅರಿವು ಚೆನ್ನಾಗಿಯೇ ಮನಸ್ಸಿಗೆ ತಿಳಿದಿತ್ತು. ಜಯ, ಸುಧೀ ಇಬ್ಬರೂ ಹತ್ತಿ ಕೂತು ದಾರಿ ಕಾಯುತ್ತಿದ್ದ ಮಾವಿನ ಮರ, ಅದರಾಚೆಗೆ ಸಣ್ಣ ಹೊಂಡ, ಅದರ ಸುತ್ತ ಬೆಳೆದ ಜರಿ ಗಿಡ, ದಂಡೆಯಂಚಿಗೆ ಬೆಳೆದ ಕತ್ತರಿ ದಾಸವಾಳದ ಗಿಡ, ಅದರ ಪಕ್ಕದ ಜಂಬೂ ನೇರಳೆ ಮರ, ಮೈ ತುಂಬ ಹೂ ಬಿಡುತ್ತಿದ್ದ ಕರವೀರ ಮತ್ತದರ ಗಟ್ಟಿ ಕಾಯಿಗಳು ಎಲ್ಲವೂ ಬೆಳಕಿದ್ದಾಗ ಹೇಗೆ ಕಾಣಿಸುತ್ತಿತ್ತೋ ಅಷ್ಟೇ ನಿಚ್ಚಳವಾಗಿ ಮನದ ಕಣ್ಣಿಗೆ ಗೋಚರಿಸುತ್ತಿತ್ತು. ಆ ಕರವೀರದ ಕಾಯಿಗಳಲ್ಲಿ ಜಯಾ ಅದೆಷ್ಟು ಚೆನ್ನಾಗಿ ಪೊಕ್ಕ ಆಡ್ತಿದ್ದಳು!

ಅತ್ತೆ ಮನೆಯ ದೀಪದ ಬೆಳಕು ಕಾಣಿಸುತ್ತಿದ್ದಂತೆ ರಾಜನ್ ನಾಯಿ ಜೋರಾಗಿ ಬೊಗಳುತ್ತಾ ಸ್ವಾಗತಿಸಿದ.

“ಎಂಥಾ ಮಾರಾಯ, ಅಜ್ಜ ಆಗಿದ್ದೀಯಲ್ಲಾ? ನನ್ನ ಗುರ್ತ ಸಿಗುವುದಿಲ್ಲ ಅಲ್ಲಾ ನಿಂಗೀಗ, ಕಾಟು ಎಲ್ಲಾದ್ರೂ ತಂದು” ಅನ್ನುತ್ತಾ ಬೈದು ಅದರ ಹತ್ತಿರ ಹೋದರೆ, ಬಾಲ ಆಡಿಸುತ್ತಾ, ಶೇಲೆ ಮಾಡುತ್ತಾ ಕಾಲು, ಕೈ ನೆಕ್ಕಲು ಶುರು ಮಾಡಿದ.

ಅದರ ಸಂಭ್ರಮ ಮುಗಿದ ಮೇಲೆ, ತಪ್ಪಲೆಯಲ್ಲಿಟ್ಟಿದ್ದ ನೀರಿನಲ್ಲಿ ಕೈ ಕಾಲು ತೊಳೆಯುತ್ತಾ ಬಲಗಡೆ ಕಣ್ಣು ಹಾಯಿಸಿದರೆ, ದೊಡ್ಡ ಚಾವಡಿಯ ಮೂಲೆಯಲ್ಲಿ ರಾಶಿ ಬಟ್ಟೆಗಳಲ್ಲಿ ಮುಳುಗಿರುವ ತಲೆಯೊಂದು ಕಾಣಿಸಿತು. ನಾಯಿ ಬೊಗಳಿದರೂ ಕೇಳಲಿಲ್ವಾ ಇವಳಿಗೆ ಅಂದುಕೊಂಡು ಚಾವಡಿಯ ಕಡೆ ನಡೆದು ಮೆಟ್ಟಲು ಹತ್ತುತ್ತಿದ್ದಂತೆ ಎಮರ್ಜೆನ್ಸಿ ದೀಪದ ಹತ್ತಿರ ಕೂತು, ರಾಶಿ ರಾಶಿ ಬಟ್ಟೆಯ ತುಂಡುಗಳು, ಬೇರೆ ಬೇರೆ ಸೈಜಿನ ರಿಂಗುಗ‍ಳು, ಬಣ್ಣ ಬಣ್ಣದ ಹೊಳೆಯುವ ಮಣಿಗಳು, ಬಗೆ ಬಗೆಯ ದಾರಗಳು ಎಲ್ಲವನ್ನೂ ಪುಟ್ಟ ಪುಟ್ಟ ತಟ್ಟೆಗಳಲ್ಲಿ ಹರಡಿಸಿಕೊಂಡು ಅದರ ಮಧ್ಯೆ ಕಸೂತಿ ಹಾಕುತ್ತಾ ಕೂತಿದ್ದಳು ಮಾಧ್ವಿಯತ್ತೆ… ಯಾವುದೋ ಬೇರೆ ಲೋಕಕ್ಕೆ ಬಂದಂತನಿಸಿತು.

“ಅತ್ತೆ!” ಎಂದಾಗ ತಲೆಯೆತ್ತಿದವಳ ಕಣ್ಣಲ್ಲಿ ಸಂತಸದೆಳೆ ಒಂದರೆಗಳಿಗೆ ಕಂಡಂತಾಯ್ತು.

“ಬಾಬಣ್ಣ, ಬಂದ್ಯಾ, ತಡವಾಯ್ತಲ್ಲಾ ಮಗ?” ಎಂದಳು. ಮಹೇಶ ಹೇಳಿರಬೇಕು ಅಂದುಕೊಂಡು ತಲೆಯಾಡಿಸಿದೆ.

“ಹೋಗು, ಸ್ನಾನ ಮುಗಿಸಿ ಬಾ, ಊಟ ಮಾಡುವೆಯಂತೆ, ಕಾಫಿ ಬೇಡ ಅಯ್ತಾ ಇಷ್ಟು ಹೊತ್ತಲ್ಲಿ” ಎನ್ನುತ್ತಾ ಕನ್ನಡಕ ತೆಗೆದು ಮೇಲೇಳಹೊರಟಳು.

“ಬೇಡ, ಸಧ್ಯಕ್ಕೆ ಹಸಿವಿಲ್ಲತ್ತೆ, ನೀನು ಕೂತ್ಕೊ, ಕಾಲೇಜಿಂದ ಬಂದು ಸ್ನಾನ ಮುಗಿಸಿಯೇ ಹೊರಟೆ, ಬಸ್ಸಲ್ಲಿ ಏನೂ ಆಯಾಸವಾಗಿಲ್ಲ, ಸ್ನಾನ ನಾಳೆ ಮಾಡ್ತೆ, ಆಗ್ದಾ?” ಎಂದು ಒಂದು ನಿಮಿಷ ತಡೆದು, “ಸುಧೀ?” ಎಂದು ತಡವರಿಸುತ್ತಾ ಕೇಳಿದಾಗ ಅವಳು ಏನೂ ಭಾವನೆಗಳನ್ನು ತೋರದೆ “ಬಾಣಂತಿ ಕೋಣೆಯಲ್ಲಿ” ಎಂದಳು.

“ಬಾಣಂತಿ ಕೋಣೆ?” ಎಂದು ಆಶ್ಚರ್ಯದ ಉದ್ಗಾರ ಬಾಯಿಂದ ಗೊತ್ತಿಲ್ಲದೆಯೇ ಹೊರಬಿತ್ತು, ಮಾಧ್ವಿಯತ್ತೆ ತಲೆಯೆತ್ತಲೂ ಇಲ್ಲ, ಮಾತೂ ಆಡದೇ ಮತ್ತೆ ಕನ್ನಡಕ ಧರಿಸಿ ತನ್ನ ಕೆಲಸ ಮುಂದುವರಿಸಿದಳು.

ಎದ್ದು ಚಾವಡಿ ದಾಟಿ ನಡುಮನೆಗೆ ಬಂದರೆ ಮಾವ ಕತ್ತಲಲ್ಲಿ ಕೂತು ಮಣ ಮಣ ಮಾಡುತ್ತಿದ್ದದ್ದು ಕೇಳಿತು.

“ಮಾವ, ನಾನು ಬಾಬು” ಎಂದೆ, ಉತ್ತರವಿಲ್ಲ.

ಮತ್ತೆ ಚಾವಡಿ ಹಾದು, ಕೊಟ್ಟಿಗೆ ಮತ್ತು ಬಚ್ಚಲ ನಡುವೆಯಿದ್ದ ‍ಬಾಣಂತಿ ಕೋಣೆಗೆ ನಡೆದೆ. ಬಾಗಿಲು ಸ್ವಲ್ಪವೇ ಸ್ವಲ್ಪ ತೆರೆದಿತ್ತು, ಜೀರೋ ಬಲ್ಬಿನ ಮಂದ ಬೆಳಕು ಹೊರಗೆ ಬರಲು ಸೆಣೆಸುತ್ತಿತ್ತು. ಮೆಲ್ಲಗೆ ಬಾಗಿಲು ದೂಡಿ ಕಾಲಿಟ್ಟು ಸುತ್ತ ನೋಡಿದರೆ, ಗೊರಬುಗಳು, ನೇಗಿಲು ಇತ್ಯಾದಿ, ಗದ್ದೆಗೆ ನೇಜಿ ನೆಡಲು, ಉಳಲು ಬೇಕಾದ ಎಲ್ಲಾ ವಸ್ತುಗಳಿದ್ದವು.

“ಸುಧೀ” ಎಂದು ಮೆತ್ತಗೆ ಕರೆದರೆ, ಯಾವುದೋ ಮೂಲೆಯಿಂದ ಅವನ ಸ್ವರ ಕೇಳಿದಂತಾಯ್ತು. ಗೋಡೆ ತಡಕಾಡಿ ಲೈಟ್ ಸ್ವಿಚ್ ಆನ್ ಮಾಡಿದರೆ, ಮೂಲೆಯೊಂದರಲ್ಲಿ ಹಾಸಿಗೆಯ ಮೇಲೆ ಕೃಶಕಾಯ ಆಕೃತಿ ಮಲಗಿದೆ, ಸುಧೀ ಎಂದು ನಂಬಲಾರದಷ್ಟು ಬದಲಾಗಿದ್ದಾನೆ. ಮುಖಕ್ಕೆ ಯಾರೋ ರಪ್ ಎಂದು ಬಾರಿಸಿದಂತಾಯ್ತು. ಅಲ್ಲಿ ಕಾಣುತ್ತಿದ್ದದ್ದು, ಸುಮಾರು ಹದಿನೈದು ವರ್ಷಗಳಿಂದ ಭೀಮಸೇನ ಎಂದು ಕರೆಸಿಕೊಳ್ಳುತ್ತಿದ್ದ ಜೀವ ಎಂದು ನಂಬಲು ಆಗಲೇ ಇಲ್ಲ, ಕಣ್ಣಿಗೆ ಕಂಡದ್ದನ್ನು ಜೀರ್ಣಿಸಿಕೊಳ್ಳಲು ಒದ್ದಾಡಿದೆ. ಕಣ್ಣು ಮಂಜಾಗಿ, ಗಂಟಲು ಕಟ್ಟಿ ಬಂತು. ಹೇಗಿದ್ದ ಜೀವ, ಛೇ! ಮೊದಲೇ ಬಂದಿದ್ರೆ ಏನಾಗ್ತಿತ್ತು ನಂಗೆ? ಏಳು ವರ್ಷ ಕತ್ತೆ ಕಾಯ್ತಿದ್ದೆನಾ ಅನಿಸಿ ನನ್ನ ಮೇಲೆ ನನಗೇ ಸಿಟ್ಟು ಬಂತು.

ಸ್ವಲ್ಪ ಸಾವರಿಸಿಕೊಳ್ಳುವಷ್ಟರಲ್ಲಿ ಸುಧೀ ತನ್ನ ನಿತ್ರಾಣ ದನಿಯಲ್ಲಿ “ಬಾಬಣ್ಣ, ನಿನ್ನ ನೋಡಬೇಕು ಅಂತ ತುಂಬಾ ಆಸೆಯಾಗಿತ್ತೋ” ಅಂದ.

ಇಷ್ಟೂ ಹೊತ್ತು ಗಮನಕ್ಕೆ ಬಾರದ ಕಮಟು ವಾಸನೆ ಒಂದೇ ಸಲ ಮೂಗಿಗೆರಗಿತು. ಕೂರಲು ಜಾಗವೇ ಇರಲಿಲ್ಲ, ತಲೆ ಹತ್ತಿರ ಒಂದು ಚೊಂಬು, ಮತ್ತೊಂದು ಲೋಟವಿತ್ತು ಅಷ್ಟೆ. ಅಲ್ಲಿದ್ದ ಒಂದಿಷ್ಟು ಸಾಮಾನುಗಳನ್ನು ಬದಿಗೆ ಸರಿಸಿ, ಅವನ ಪಕ್ಕದಲ್ಲಿ ಹೋಗಿ ಕೂತೆ. ಕುರುಚಲು ಗಡ್ಡ, ಕೆದರಿದ್ದ ರಾಶಿ ತಲೆ ಕೂದಲು.

ಅವನ ಕಟ್ಟಿಗೆಯ ಹಾಗಿದ್ದ ಕೈ ಹಿಡಿದು “ಹೇಗಿದ್ದೀ ಸುಧೀ?” ಎಂದರೆ, ಅವನು ನಿರ್ಭಾವುಕನಾಗಿ ಸುಮ್ಮಗೆ ದಿಟ್ಟಿಸಿದ.

ಒಂದಿಷ್ಟು ಹೊತ್ತಾದ ಮೇಲೆ “ಗೊತ್ತಿಲ್ಲ ಬಾಬಣ್ಣ, ಓಬಯ್ಯ ಏನೋ ಮೂರೂ ಹೊತ್ತು ಅನ್ನ ಕಲೆಸಿ ತಿನ್ನಿಸುತ್ತಾನೆ, ಆ ಅಡಕೆಯ ಸೋಗೆ ಮೇಲೆ ಪಾಯಿಖಾನೆ ಆಗುತ್ತೆ. ನೀರು ತಲೆಯ ಹತ್ತಿರ ಉಂಟು, ಹಗಲು ರಾತ್ರಿ ಇಲ್ಲೇ ಬಿದ್ದಿರುವುದು. ಉರುವಾಗ್ತದೆ, ಹೊರಗೆ ಹೋಗಬೇಕು, ಗುಡ್ಡ ಸುತ್ತಬೇಕು ಅನಿಸ್ತದೆ” ಅಂದ.

ಯಾವ ಮಾತೂ ಹೊಳೆಯಲಿಲ್ಲ, ತಲೆ ಬ್ಲಾಂಕ್ ಆಯ್ತು. ಸುಧೀ ಏಳಲು ಪ್ರಯತ್ನಿಸಿದ, ಗೋಡೆಗೆ ದಿಂಬು ಒರಗಿಸಿ, ಅವನನ್ನೆತ್ತಿ ಕೂರಿಸಿದೆ.

“ನನ್ನ ಅಮ್ಮ ಎಂಬ ಮಹಾರಾಣಿಗೆ ಉಚ್ಚೆ, ಚಿಚ್ಚಿಗಳ ವಾಸನೆ ಮನೆಯಿಡೀ ಹರಡಿ ಊಟಕ್ಕೆ ಕೂತ್ರೆ ವಾಕರಿಕೆ ಬರ್ತದಂತೆ, ಅಪ್ಪನ ಕೆಲ್ಸ ಮಾಡಿಯೇ ಸಾಕಾಗಿರ್ತದೆ ಅವ್ಳಿಗೆ, ನನ್ನಿಂದ ಇನ್ನಷ್ಟು ಕಷ್ಟ ಯಾಕೆ, ನಾನೇ ಇಲ್ಲಿಗೆ ಹಾಸಿಗೆ ಹಿಡ್ಕೊಂಡು ಬಂದೆ, ಆರಾಮಾಗಿರ್ಲಿ ಅವ್ಳು ಅಲ್ಲಿ” ಎಂದ.

ದನಿಯಲ್ಲಿನ ತಾತ್ಸಾರ, ಕಹಿ, ತಿರಸ್ಕಾರ ಅರ್ಥವಾಯಿತು. ನಾಲಿಗೆ ಹೊರಳಿಸುವ ಪ್ರಯತ್ನ ಮಾಡಿದರೂ ಶಬ್ದ ಹೊರಡಲಿಲ್ಲ.

“ಜಯಾ ಕರೀತಾನೆ ಇರ್ತಾಳೆ, ಇಬ್ರೂ ಒಟ್ಟಿಗೆ ಆರಾಮಾಗಿರಬಹುದು, ಹೋದ್ರಾಯ್ತು ಅಲ್ಲಿಗೆ ಬೇಗ” ಎಂದವನು “ಇರ್ಲಿ ಬಾಬಣ್ಣ, ನೀ ಹೇಳು, ಕೇಶವ ಮಾಮ, ಗಿರ್ಜಾ ಮಾಮಿ ಹೇಗಿದ್ದಾರೆ? ನಂಗೇನಾದ್ರೂ ತಂದ್ಯಾ?” ಎಂದು ಸ್ವಲ್ಪ ಗೆಲುವಿನ ಸ್ವರದಲ್ಲಿ ಕೇಳಿದ.

“ಹೌದು, ಅಮ್ಮ ಈವಾಗ ಆರಾಮಾಗಿದ್ದಾಳೆ, ನಿನ್ನ ತುಂಬಾ ನೆನಪಿಸಿಕೊಳ್ಳುತ್ತಾಳೆ, ಆಸ್ಪತ್ರೆಯಿಂದ ಬಂದು ಹದಿನೈದು ದಿನ ಆಯ್ತು, ಅವಳು ಎಲ್ಲೂ ಟ್ರಾವೆಲ್ ಮಾಡಬಾರದು ಒಂದು ತಿಂಗಳು, ಅದಕ್ಕೆ ಬಂದಿಲ್ಲ, ಈ ತಿಂಗಳ ಕೊನೆಗೆ ಬರ್ತಾಳೆ ನಿನ್ನ ನೋಡೋಕೆ, ಓಹ್! ಮರೆತೇ ಹೋಗಿತ್ತು, ತಡಿ” ಎಂದವನಿಗೆ ಹೇಳಿ, ಚಾವಡಿಗೆ ಓಡಿ ಬ್ಯಾಗಿನಲ್ಲಿದ್ದ, ತಿಂಡಿಯ ಚೀಲ, ಮತ್ತೆ ಒಂದಿಷ್ಟು ಪುಸ್ತಕಗಳನ್ನು ತೆಗೆದುಕೊಂಡೆ.

ಅತ್ತೆ ಕಡೆ ನೋಡಬೇಕೆನಿಸಲಿಲ್ಲ. ತಿಂಡಿಯ ಚೀಲದಿಂದ ಡೈರಿ ಮಿಲ್ಕು, ಚಿಪ್ಸ್, ಹಣ್ಣುಗಳು ಮತ್ತು ಅವನಿಷ್ಟದ ಖಾರ ಶೇಂಗಾದ ಪ್ಯಾಕೆಟುಗಳನ್ನು ತೆಗೆಯುತ್ತಿದಂತೆ ಅವನ ಮುಖವರಳಿತು. ಮೊದಲಿನ ಪುಟ್ಟ ಭೀಮಸೇನ ಕಣ್ಮುಂದೆ ಬಂದು ನಕ್ಕಂತಾಯ್ತು. ಎಲ್ಲವನ್ನೂ ಬಾಚಿ ಅಪ್ಪಿಕೊಂಡ.

ಡೈರಿಮಿಲ್ಕಿನ ರ್ಯಾಪರ್ ಬಿಚ್ಚಿ ತಿನ್ನುತ್ತಾ “ಇದೊಂದು ಮಾತ್ರ ಗಿರ್ಜಾ ಮಾಮಿ ಮರೆಯಲ್ಲ ನೋಡು, ನಂಗಿಪ್ಪತ್ತೆರಡು ವರ್ಷವಾದ್ರೂ ಅವರಿಗೆ ನಾನಿನ್ನೂ ಮಗೂನೇ” ಎಂದು ಪುಸ್ತಕಗಳಲ್ಲೊಂದನ್ನು ಎತ್ತಿಕೊಂಡು ನನ್ನ ಕಡೆಗೆ ಒಮ್ಮೆ ಧನ್ಯತೆಯಿಂದ ನೋಡಿ, “ನಾ ತಿಂತಾ ಓದ್ಲಾ ಬಾಬಣ್ಣ ?”ಎಂದಾಗ ಸರಿಯೆಂದು ನಕ್ಕು ಅಲ್ಲಿಂದೆದ್ದೆ. ಅದಷ್ಟನ್ನೂ ಗಿರ್ಜಾ ಮಾಮಿ ಕಳಿಸದ್ದಲ್ಲ, ನಾನೇ ತಂದೆ ಎನ್ನಲು ಮನಸ್ಸಾಗಲಿಲ್ಲ.

ಹೊರಬರುವಷ್ಟರಲ್ಲಿ ರಾಜನ್ ಗುರ್ರ್ ಎಂದಿದ್ದೂ, ಅದರ ಹತ್ರ ತುಳುವಿನಲ್ಲಿ ಮಾತಾಡಿದ ಓಬಯ್ಯನ ಸ್ವರವೂ, ಅವನ ಸ್ಲಿಪರ್ರಿನ ಶಬ್ದವೂ ಕೇಳಿ ನಂತರ ಅವನ ದೃಢಕಾಯವೂ ಕಾಣಿಸಿಕೊಂಡಿತು.

“ಓಬಯ್ಯ…ಸೌಖ್ಯಾ ?”ಎಂದೆ.

ಅವನೂ “ಹಾಂ” ಎಂದ.

ಅವನು ಹತ್ತಿರ ಬರುವುದನ್ನೇ ಕಾದು, ಮೆಲು ದನಿಯಲ್ಲಿ, “ನಾಳೆ ಆ ಕೋಣೆ ಪೂರ್ತಿ ಸ್ವಚ್ಛ ಮಾಡಿ, ಎಲ್ಲಾ ಗದ್ದೆ, ನಾಟಿ ಸಾಮಾನುಗಳನ್ನು ಬಚ್ಚಲ ಮೇಲೆ ಅಟ್ಟಕ್ಕೆ ಹಾಕಿ, ಅಲ್ಲಿ ಸುಧೀಗೊಂದು ಮಂಚ ಹಾಕಲು ಜಾಗ ಆಗಬೇಕು” ಎಂದೆ.

ನನ್ನ ದನಿಯಲ್ಲಿದ್ದ ಅಪ್ಪಣೆ ಕೇಳಿ ಅವನಿಗೆ ಆಶ್ಚರ್ಯವಾಗಿರಬೇಕು. “ಅಲ್ಲ, ಅಮ್ಮ…” ಎಂದು ಏನೋ ಮಾತನಾಡಲು ಹೊರಟ. ತಡೆದು, “ಆ ಮಹೇಶನ ತಮ್ಮ ಉಜಿರೆಯಲ್ಲಿ ಓದೋದಲ್ವಾ, ನಾಳೆ ಅವ್ನು ಕಾಲೇಜಿಗೆ ಹೋಗಿ ಬರುವಾಗ ಒಂದು ಬೆಡ್ ಪಾನ್ ತರೋಕೆ ಹೇಳು” ಎಂದು ಸ್ವಲ್ಪ ದನಿ ಎತ್ತರಿಸಿಯೇ ಹೇಳಿದೆ.

“ಸರಿ ಬಾಬಣ್ಣ” ಎಂದ ಅವನು.

ಕೊಟ್ಟಿಗೆಯಲ್ಲಿ ದನಗಳು ಮೆಲುಕು ಹಾಕುವ, ಅವುಗಳ ಕೊರಳಿನ ಘಂಟೆಯ ಸದ್ದು ಕೇಳುತ್ತಾ ಚಾವಡಿಯ ಮೆಟ್ಟಲ ಮೇಲೆ ಕೂತೆ. ದೊಡ್ಡ ತುಳಸಿಕಟ್ಟೆಯಲ್ಲಿ ದೀಪ ಗಾಳಿಗೆ ಓಲಾಡುತ್ತಾ ಉರಿಯುತ್ತಿತ್ತು. ಅದರ ಬೆಳಕಲ್ಲಿ ಕಟ್ಟೆಯ ಮೇಲೆ ಕೆತ್ತಿದ್ದ ಲಕ್ಷ್ಮಿ ಸುಂದರವಾಗಿ ಕಾಣುತ್ತಿದ್ದಳು. ದೂರದಲ್ಲಿ ಕಾಣುತ್ತಿದ್ದ ಬಾವಿಕಟ್ಟೆ, ಮಾವಿನ, ತೆಂಗಿನ, ಅಡಿಕೆ ಮರದ ಛಾಯೆಗಳು. ವರ್ಷಕ್ಕೆರಡು ಸರ್ತಿ ರಜೆಯಲ್ಲಿ ಇಲ್ಲಿಗೆ ಬಂದಾಗ ಆ ಬಾವಿಕಟ್ಟೆಯಲ್ಲಿ ಅಮ್ಮ ಬಟ್ಟೆ ಒಗೆಯುತ್ತಿದ್ದದ್ದು, ನಾನು, ಜಯ, ಸುಧೀ ಮೂರೂ ಜನ ಸುತ್ತ ಆಟವಾಡುತ್ತಾ ಅಮ್ಮನಿಗೆ ಉಪದ್ರ ಕೊಟ್ಟು ಬೈಸಿಕೊಳ್ಳುತ್ತಿದ್ದದ್ದು, ಪಕ್ಕದ ಹಳ್ಳದಲ್ಲಿ ಬೈರಾಸಿನಲ್ಲಿ ಮೀನು ಹಿಡಿಯುತ್ತಾ, ಗದ್ದೆ, ಗುಡ್ಡ, ತೋಟ, ನಾಗಬನ, ಕೆರೆದಂಡೆ, ಬೆಟ್ಟುಗದ್ದೆ ಸುತ್ತುತ್ತಿದ್ದದ್ದು ಎಲ್ಲವೂ ಕಣ್ಮುಂದೆ ಸಿನಿಮಾ ರೀಲಿನ ಥರಾ ಸಾಗಿ ಹೋಯ್ತು. ಜಯಾ ಅದೆಷ್ಟು ಚೆಂದವಿದ್ದಳು, ಎರಡು ಜಡೆ ಕಟ್ಟಿ ಕೆಂಪು ರಿಬ್ಬನ್ ಹಾಕಿ, ಹಣೆಗೆ ಲಾಲ್ ಗಂಧ ಇಟ್ಟರೆ ಮುದ್ದು ಮುದ್ದು ಬೊಂಬೆಯಂತೆ ಕಾಣುತ್ತಿದ್ದಳು. ಸುಧೀ ದೊಡ್ಡ ಜೀವ, ನಮ್ಮಿಬ್ರಿಗೂ ಅವನೇ ರಕ್ಷಕ, ಎಲ್ಲಾ ಕಿತಾಪತಿಗಳೂ ಅವನ ಸುಪರ್ದಿಯಲ್ಲೇ ನಡೆಯಬೇಕು. ತೆಂಗಿನ ಸೋಗೆಯಲ್ಲಿ ನಮ್ಮನ್ನು ಕೂರಿಸಿ ಎಳೆಯೋದೂ ಅವನೇ. ಗೇರು , ಕುಂಟಾಳ, ಮಾವಿನ ಹಣ್ಣು ಕೊಯ್ಯೋದೂ ಅವನೇ. ವಯಸ್ಸಿನಲ್ಲಿ ಜಯಾ ದೊಡ್ಡವಳು, ಆದರೆ ಸ್ವಲ್ಪ ಕಡ್ಡಿಯೇ, ಅವಳಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ‍ನಾನೂ ಹಾಗೇ. ನನಗಿಂತ ಒಂದು ವರ್ಷ ಚಿಕ್ಕವನಾದ ಸುಧೀಗೆ ಮಾತ್ರ ಭೀಮಬಲ. ಒಂದ್ಸಲ ಅದು ಹೇಗೋ ಅವನಿಗೆ ಕೆಸುವಿನ ಎಲೆ ತಿನ್ನಿಸಿ ಅಳುವಂತೆ ಮಾಡಿದ್ದೆ ಅಲ್ಲಾ, ಆಮೇಲೆ ಅಮ್ಮ ಬೈದ್ರೆ ಜಯಾ ಬಂದು ತಾ ಮಾಡಿದ್ದೆಂದು ಸುಳ್ಳು ಹೇಳಿದರೂ ಮಾಧ್ವಿಯತ್ತೆ ದಡ್ಡನೇನೋ ನೀನು ಅಂತ ಸುಧೀಗೆ ಹೊಡೆದಿದ್ದು…ಎಲ್ಲಾ ನೆನಪುಗಳೂ ತಾ ಮುಂದು ತಾ ಮುಂದು ಅಂತ ಬರತೊಡಗಿದವು, ಆದರೀಗ? ಜಯಾ ಇಲ್ಲ, ಸುಧೀ ಅವಳೆಡೆಗೇ ಜಾರಿ ಹೋಗುತ್ತಿದ್ದಾನೆ, ಅತ್ತೆ ಅವರದ್ದೇ ಲೋಕದ್ದಲ್ಲಿದ್ದರೆ, ಮಾಮ ಇದ್ದೂ ಇಲ್ಲದ ಹಾಗೆ… ಅಯ್ಯೋ ಈ ಮನೆಯ ಅವಸ್ಥೆಯೇ ಅನಿಸಿ ಅರಿವಿಲ್ಲದೆಯೇ ನಿಟ್ಟುಸಿರು ಹೊರಬಿತ್ತು.

ಅತ್ತೆ ಊಟಕ್ಕೆ ಕರೆದರು, ಅಷ್ಟು ದೊಡ್ಡ ಅಡುಗೆಮನೆಯಲ್ಲಿ ನಾವಿಬ್ಬರೇ, ಒಂದು ಕಾಲದಲ್ಲಿ ಯಾವಾಗಲೂ ತಿರುಗುತ್ತಿದ್ದ ದೊಡ್ಡ ಗ್ರೈಂಡರ್, ಎಲೆಯ ಸುತ್ತಮುತ್ತ ತಿರುಗುತ್ತಿದ್ದ ಚಾಮಿಯ ವಂಶದ ಕುಡಿಗಳು, ನಿಂಗೆ ದೊಡ್ಡ ಎಲೆ, ನಂಗೆ ಸಣ್ಣ ಎಲೆ ಎಂದು ಕೋಳಿ ಜಗಳವಾಡಿ ತಿನ್ನುತ್ತಿದ್ದ ಸುಧೀ, ಜಯಾ, ಹೆಚ್ಚು ಮಾತನಾಡದೇ ಸುಮ್ಮನೆ ದೊಡ್ಡ ದೊಡ್ಡ ತುತ್ತುಗಳನ್ನು ಇಳಿಸುತ್ತಿದ್ದ ಮಾಮ, ಅಡುಗೆಮನೆಯ ಹಿಂದಣ ಬಾಗಿಲಿನ ಹತ್ತಿರ ಬೆಳೆದಿದ್ದ ‍ಬಿಂಬುಳಿ ಮರ ಮತ್ತದರ ಸುತ್ತ ತಿರುಗುತ್ತಿದ್ದ ಗಿರಿರಾಜ ಕೋಳಿ ಎಲ್ಲಾ ಕಣ್ಮುಂದೆ ಸರಿದವು. ಅಯಾಚಿತವಾಗಿ ತಲೆ ಎತ್ತಿ ನೋಡಿದರೆ, ತೂಗುತ್ತಿದ್ದ ಬೆಣ್ಣೆ ಮಡಕೆಗಳು ಕಾಣಲಿಲ್ಲ. ನನ್ನನ್ನೇ ನೋಡುತ್ತಿದ್ದ ಅತ್ತೆ ಅರ್ಥವಾದಂತೆ ತಲೆಯಲುಗಿಸಿದರು. ಕಪ್ಪು ಹಿಡಿದಿದ್ದ ಗೋಡೆಗಳನ್ನು ಬೆಳಗುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಬಲ್ಬ್ ಮಂಕಾಗಿತ್ತು. ಅರ್ಧಕ್ಕರ್ಧ ಅಡುಗೆ ಮನೆ ಖಾಲಿ, ಒಂದು ಮೂಲೆಯಲ್ಲಿ ಪಾತ್ರೆ ಪಗಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು ಅತ್ತೆ.

ನಾನು ತಿನ್ನುವ ಶಬ್ದ ನನಗೇ ಕೇಳಲು ಅಸಹನೆಯೆನಿಸಿ “ಮಾಮ ಮತ್ತೆ ಸುಧೀಗೆ ಊಟ?” ಎಂದು ಕೇಳಿದೆ.

“ಇಬ್ಬರದ್ದು ಆಯ್ತು” ಎಂದರು ಅತ್ತೆ.

ಹೊಂಚು ಹಾಕಿದ್ದ ಮೌನ ಮತ್ತೆ ಎರಗಿತು.

ಊಟ ಮುಗಿಸಿ ಅವಳು ಮುಗಿಸುವವರೆಗೆ ಕಾದು, “ನಾಳೆ ಓಬಯ್ಯನಿಗೆ ಹೇಳಿ ಸುಧೀ ಮಲಗಲು ಅಲ್ಲೊಂದು ಮಂಚ ಹಾಕಿಸಿ ಆ ಕೋಣೆ ಸ್ವಲ್ಪ ಖಾಲಿ ಮಾಡಿಸ್ತೀನಿ” ಎಂದು, ಅವಳ ಉತ್ತರದ ನೀರೀಕ್ಷೆಯಿಲ್ಲದೆ ಹೊರನಡೆದೆ.

ಚಾವಡಿಯ ಎಡಭಾಗಕ್ಕಿದ್ದ ಕೋಣೆಯ ಒಳಗೆ ಆಗಲೇ‌ಹಾಸಿಗೆ ಹಾಸಿತ್ತು. ಕೈಲಿ ಮೊಬೈಲ್ ಹಿಡಿದು ಕೂತೆ. ಮನೆಯ ವಿಷಾದ ತನ್ನಲ್ಲೂ ಇಳಿಯುತ್ತದೆಯೆನಿಸಿ ಜೋರಾಗಿ ತಲೆ ಕೊಡಹಿದೆ. ತಲೆದಿಂಬಿನ ಮೇಲೂ ಕಸೂತಿಯ ಹೂವಿನ ಚಿತ್ತಾರಗಳು, ಅದನ್ನು ಕೈಲೊಮ್ಮೆ ಸವರಿದೆ. ಸರಿಯಾಗಿ ನೋಡಿದರೆ, ದಿಂಬು ಮಾತ್ರವಲ್ಲ, ಹೊದಿಕೆಗಳು, ಮಂದ್ರಿ, ಕರ್ಟನ್ ಎಲ್ಲದರ ಮೇಲೆಯೂ ಹೂವು, ಬಳ್ಳಿಗಳ ಚಿತ್ತಾರಗಳು. ಸುಧೀ ರೂಮಲ್ಲಿದ್ದವುಗಳ ಮೇಲೂ ಇದೇ ಚಿತ್ತಾರವಿತ್ತು, ಅರೇ! ಅತ್ತೆ ಸೀರೆ, ರವಕೆಯಲ್ಲೂ ಇದ್ದದ್ದು ಇವೇ ಚಿತ್ತಾರಗಳು ಎಂದು ನೆನಪಾಯ್ತು. ಬಟ್ಟೆ ಅಂತ ಕಾಣಿಸಿದ್ದರ ಮೇಲೆಲ್ಲಾ ಕಸೂತಿಯ ಚಿತ್ತಾರಗಳೇ ತುಂಬಿಕೊಂಡಿದ್ದವು.

ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಟ್ಟಿದ್ದ ವಿಡಿಯೋಗಳನ್ನು ನೋಡುತ್ತಾ ಅದ್ಯಾವಾಗ ನಿದ್ದೆ ಹೋದೆನೋ ತಿಳಿಯಲಿಲ್ಲ, ಎಚ್ಚರಿಸಿದ್ದು ಒಂದು ವಿಚಿತ್ರ ಕನಸು. ತಲೆಯ ಬಳಿಯಿದ್ದ ಚೆಂಬಿನ ನೀರು ಕುಡಿದು ಸಾವರಿಸಿಕೊಂಡು ಕತ್ತಲೆಯನ್ನೇ ನೋಡುತ್ತಾ ಕೂತೆ.

ಕನಸಲ್ಲಿ ಜಯಾ, ನಾನು, ಸುಧೀ ಇದೇ ಮನೆಯ ಅಂಗಳದಲ್ಲಿ ಕುಣಿಯುತ್ತಿದ್ದೇವೆ, ಇದ್ದಕ್ಕಿದ್ದ ಹಾಗೆ ಮಾಮ ಎಲ್ಲಿಂದಲೋ ಓಡಿ ಬಂದು ನನ್ನ ಬಿಟ್ಟು ಅವರಿಬ್ಬರನ್ನು ಹಿಡಿದು ತಬ್ಬುವ ಪ್ರಯತ್ನ ಮಾಡುತ್ತಿದ್ದರೆ, ಅತ್ತೆ ಇಬ್ಬರನ್ನೂ ತನ್ನ ಎಂಬ್ರಾಯ್ಡರಿ ರಿಂಗುಗಳ ಮಧ್ಯೆ ಬಂಧಿಸಿ ರೇಶಿಮೆಯ ‍ದಾರಗಳಿಂದ ಹೊಲೆಯುತ್ತಿದ್ದಾರೆ. ಬಿಡಿಸಲು ಹೋದ ನನ್ನನ್ನು ದೊಡ್ಡ ಕೆಂಪು ಕಣ್ಣುಗಳಿಂದ ದುರುಗಟ್ಟಿ ತೆಂಗಿನ ಮರದಷ್ಟು ದೊಡ್ಡ ಸೂಜಿಯಲ್ಲಿ ಚುಚ್ಚಲು ಬರುತ್ತಿದ್ದಾರೆ. ಮಾಮ ಕಿರುಚುತ್ತಾ ಅತ್ತೆಯನ್ನು ದೂಡಲು ಪ್ರಯತ್ನಿಸುತ್ತಿದ್ದಾರೆ, ಕೊನೆಗೆ ಅತ್ತೆ ಬೆಳೆದು ಹೆಮ್ಮರವಾಗಿದ್ದಾಳೆ. ಮಕ್ಕಳಿಬ್ಬರೂ ಕಸೂತಿಯ ಹೂವುಗಳಾಗಿ ಬದಲಾಗುತ್ತಾ ನೋವಿನಲ್ಲಿ ಕಿರುಚುತ್ತಿದ್ದಾರೆ. ‍

ಅಬ್ಬಾ! ಎಂಥಾ ಕನಸು! ಭಯಕ್ಕೆ ಇಡೀ ಮೈ ಬೆವೆತು ಹೋಗಿತ್ತು. ಮೊಬೈಲ್ ಸ್ಕ್ರೀನ್ ಆನ್ ಮಾಡಿ ನೋಡಿದರೆ ನಾಲ್ಕೂವರೆ, ಇನ್ನು ನಿದ್ದೆ ಹತ್ತಿದ ಹಾಗೆ ಎಂದುಕೊಂಡು ಹೊರಬಂದು ಚಾವಡಿಯ ಕಡೆ ನಡೆದೆ. ಮಾಮನ ಮಣ ಮಣ ಕೇಳುತ್ತಲೇ ಇತ್ತು. ಮಾಧ್ವಿಯತ್ತೆ ಎಮರ್ಜನ್ಸಿ ಲ್ಯಾಂಪಿನ ಹತ್ತಿರಕ್ಕೆ ಕೂತು ದಾರವನ್ನು ಎಳೆಯುತ್ತಲೇ ಇದ್ದಳು.

ಆಶ್ಚರ್ಯವಾಗಿ ಹತ್ತಿರ ಹೋಗಿ “ಅತ್ತೆ ನಿದ್ದೆನೇ ಮಾಡುದಿಲ್ವಾ ನೀನು?” ಕೇಳಿದೆ.

ಒಮ್ಮೆಗೆ ಬೆಚ್ಚಿಬಿದ್ದು ನೋಡಿದಳು, ಅವಳ ಕಣ್ಣುಗಳಲ್ಲಿ ಚೂರೂ ನಿದ್ದೆಯಿರಲಿಲ್ಲ.

“ನೀನ್ಯಾಕೆ ಇಷ್ಟು ಬೇಗ ಎದ್ದೆ?, ನೀರು ಇಟ್ಟಿದ್ನಲ್ಲಾ, ಎಂಥ ಬೇಕಿತ್ತು?” ಎಂದು ಕೇಳಿದಳು.

ಇವಾಗಷ್ಟೇ ಕನಸಲ್ಲಿ ರಾಕ್ಷಸಿಯಾಗಿದ್ದಳಲ್ಲ, ಹೇಗೆ ಹೀಗಾದಳು ಅನಿಸಿ ಕೂಡಲೇ ಇವಳ ಈ ಪ್ರೀತಿ, ಅಂತಃಕರಣ ಸುಧೀ ಮೇಲೆ, ಅದೂ ಅವನು ಈ ಸ್ಥಿತಿಯಲ್ಲಿದ್ದಾಗಲೂ ಹರಿದಿಲ್ಲವಲ್ಲಾ ಅನಿಸಿತು. ಇಲ್ಲ ಅಂತ ತಲೆಯಾಡಿಸಿ, ಅಲ್ಲೇ ಇದ್ದ ಈಸೀಚೇರಲ್ಲಿ ಮೈ ಚೆಲ್ಲಿದೆ.

ಬಂದಾಗಿಂದ ಅಪ್ಪ ಅಮ್ಮನ ಬಗ್ಗೆ ಏನೂ ಕೇಳದವಳು, ಇದ್ದಕ್ಕಿದ ಹಾಗೆ, “ಅಣ್ಣ ನನ್ನ ನೆನಪಿಸ್ಕೊತಾನಾ? ಅತ್ತಿಗೆ ಯಾವತ್ತಾದ್ರೂ ಮಹೇಶನಿಗೆ ಫೋನ್ ಮಾಡಿ ಕೇಳ್ತಾಳಂತೆ” ಎಂದಳು.

“ಮೊಬೈಲಾದ್ರೂ ತೊಗೋ ಅತ್ತೆ, ಅಮ್ಮ, ಅಪ್ಪನ ಹತ್ತಿರ ಮಾತಾಡಬಹುದು, ಸುಧೀಗೂ ಟೈಮ್ ಪಾಸಾಗುತ್ತೆ” ಎಂದರೆ ಕೇಳದವಳಂತೆ ಸುತ್ತಣ ತಟ್ಟೆಗಳಲ್ಲಿ ಏನೋ ಹುಡುಕಲಾರಂಭಿಸಿದಳು.

ಸ್ವಲ್ಪ ಹೊತ್ತು ಬಿಟ್ಟು ಸ್ವಗತವೆಂಬಂತೆ “ಜಯಾ ಹೋದಾಗ ಅಣ್ಣ ಅತ್ತಿಗೆ ಬಂದಿದ್ದು, ನೀನೂ ಕಾಲೇಜು ಸೇರಿದ ಮೇಲೆ ಬಂದೇ ಇಲ್ಲ.” ಎಂದಳು.

ಅಷ್ಟರಲ್ಲಿ ಮಾಮ ಜೋರಾಗಿ “ಮಾಧ್ವೀ, ಎಲ್ಲೋದ್ಯೆ, ನನ್ನ ಬಿಟ್ಟು ತಿರುಗಲು ಹೋಗ್ತಾಳೆ, ಯಾರೊಟ್ಟಿಗೆ ಸುತ್ತಿ ಹಾಳಾಗಿದ್ಯೇ? ಅಯ್ಯೋ ಬಾರೆ ಇಲ್ಲಿ, ನಂಗೇನೋ ಆಗ್ತಿದೆ” ಎಂದು ಬೊಬ್ಬೆ ಹಾಕಿದರು.

ನಂಗೆ ಗಾಭರಿಯಾಗಿ ಏಳಲು ಹೊರಟರೆ, “ಸುಮ್ನಿರು ಬಾಬು, ಆ ಮನುಷ್ಯನದ್ದು ಇದ್ದಿದ್ದೇ, ನಾ ಹದಿನೆಂಟು ವರ್ಷದವಳಿದ್ದಾಗ್ಲೇ ಓಡಿ ಹೋಗಲಿಲ್ಲ, ಇವಾಗೆಲ್ಲಿ ಹೋಗ್ಲಿ?” ಎಂದವಳು ಮಾಮನ್ನುದ್ದೇಶಿಸಿ, “ಒಂದ್ಸಲ ಸುಮ್ನಿರಕ್ಕಾಗ್ದಾ? ಇಲ್ಲೇ ಇದ್ದೇನೆ, ಹೊರಕಡೆ ಹೋಗೋ ಟೈಮಾಗಿಲ್ಲ, ಬಿದ್ಕೊಳ್ಳಿ ” ಎಂದು ದಪ್ಪ ಸ್ವರದಲ್ಲಿ ಆದೇಶಿಸಿದಳು.

“ರಕ್ತನೇ ಸರಿಯಿಲ್ಲ, ಮನುಷ್ಯ ಹೇಗೆ ಸರಿಯಿರೋದು?, ಇವನಮ್ಮ, ಆ ತಾಟಗಿತ್ತಿ ಬದುಕಿರೋವರೆಗೂ ನನ್ನ ಹುರಿದು ಮುಕ್ಕಿದಳು, ಈ ಮನುಷ್ಯ ಜೀವಂತ ಹೆಣ ಮಾಡಿದ, ಇನ್ನೇನು ಉಳೀತು, ಹಾಗೇ ಆಗಬೇಕು, ಅಲ್ಲಾದ್ರೂ ಆರಾಮಾಗಿರ್ಲಿ. ಅದೊಂದು ಪಾಪದ ಕೂಸು, ಲಗಾಡಿ ತೆಗೆದ್ರು ಎಲ್ರೂ ಸೇರಿಕೊಂಡು.” ಎಂದು ಪಿತ್ತ ನೆತ್ತಿಗೇರಿದವಳಂತೆ ಬಡಬಡಿಸಿದಳು.

“ಅತ್ತೆ, ಸುಮ್ನಿರು” ಎಂದು ಪದೇ ಪದೇ ಹೇಳಿದ ಮೇಲೆ ತೆಪ್ಪಗಾದಳು.

ಆ ದಿನವನ್ನಾದರೂ ಹೇಗೆ ಮರೆಯೋದು? ಆಫೀಸಿನಿಂದ ನೇರ ಸ್ಕೂಲಿಗೆ ಬಂದು ಅಪ್ಪ ನನ್ನನ್ನು ಕರ್ಕೊಂಡು ಸೀದಾ ಮನೆಗೆ ಹೋಗಿ ಅಮ್ಮನನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದರು. ಮೊದಲು ಏನೂ ಅರ್ಥವಾಗದ ಅಮ್ಮ ‘ಏನು ಅಂತ ಹೇಳಿದ್ರೆ ಮಾತ್ರ ಹೊರಡ್ತೀನಿ’ ರಚ್ಚೆ ಹಿಡಿದು ಕೂತಿದ್ದಳು.

ಅಪ್ಪ “ಬಾಬು, ಇಲ್ಲೇ ಇದ್ದಾನೆ ಅಮೇಲೆ ಹೇಳ್ತೀನಿ ಗಿರ್ಜಾ” ಎಂದರೂ ಅವಳು ಕೇಳದೇ ಕೂತಿದ್ದು… ಕೊನೆಗೆ ತಡೆಯಲಾಗದೇ “ಆ ಪ್ರಾಣಿ ಮಗು ಜೀವ ತೆಗೆದೇ ಬಿಡ್ತೇ” ಎಂದು ಕಿರುಚಿದ್ದೂ, ಅಮ್ಮನಿಗೆ ಅರ್ಥವಾಗದಾಗ, “ಭಾವ ಮತ್ತೆ ಅವರಮ್ಮ ಸೇರಿ ಆ ಜಯಾನ ಕೊಂದುಬಿಟ್ರೇ…” ಎಂದಿದ್ದರು. ಅಮ್ಮ ಕುಸಿದು ಕೂತವಳು ಅದೆಷ್ಟೋ ಹೊತ್ತು ಮಾತೇ ಆಡಲಿಲ್ಲ.

ಏನೂ ತೋಚದೇ, ಅರ್ಥವಾಗದೇ ಕೂತ ನನ್ನನ್ನು ಅಪ್ಪ “ಹೊರಡು ಬಾಬು, ನಿನ್ನ ಬಟ್ಟೆ ಬ್ಯಾಗಲ್ಲಿ ಹಾಕ್ಕೋ” ಎಂದಿದ್ದರು. ‍ಜಯಾ ಸತ್ತು ಹೋದ್ಲು ಅಂದ್ರೆ ಏನು? ಎಲ್ಲಿಗೆ ಹೋಗ್ತಾಳೆ ಅವಳು? ಸುಧೀ ಏನು ಮಾಡ್ತಾನೆ ಇನ್ನು?ಮಾಧ್ವಿಯತ್ತೆ ಏನು ಮಾಡ್ತಾಳೆ…ತಲೆ ತುಂಬಾ ಪ್ರಶ್ನೆಗಳಿದ್ದವು ಆ ದಿನ‍. ಅತ್ತೆಯೂರು ಮುಟ್ಟಿದಾಗ ಅತ್ತೆ ಅಕ್ಷರಶಃ ಹುಚ್ಚಿಯಾಗಿದ್ದಳು. ಅಮ್ಮ ಹೋಗಿ ಅಪ್ಪಿಕೊಂಡರೂ ಒಂದೂ ಹನಿ ಕಣ್ಣೀರು ಹಾಕದವಳು, ಜಯಾಳನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಮಾತ್ರ ಮಾಮನಿಗೆ ಮುಟ್ಟಲು ಬಿಡದೇ, ಹುಲಿಯಂತೆ ಅಬ್ಬರಿಸಿ ಹಾರಾಡಿದ್ದಳು. ಕೊನೆಗೆ ಅಪ್ಪನೇ ಬೆಂಕಿಕೊಟ್ಟಿದ್ದರು. ಜಯಾ ಮುಖ ಅಚ್ಚಳಿಯದೇ ನನ್ನ ಎದೆಯಲ್ಲಿ ಉಳಿದುಬಿಟ್ಟಿತ್ತು. ಮೈ ಹೊಡೆದೇಟುಗಳಿಂದ ನೀಲಿಗಟ್ಟಿ ಹೋಗಿತ್ತು, ಅಷ್ಟು ಸಣ್ಣವನಾದ ನನಗೂ ಜಯಾ ಮಾಯದ ನೋವಾಗಿ ಉಳಿದಿರಬೇಕಾದರೆ ಅತ್ತೆ ಅದು ಹೇಗೆ ತಡೆದುಕೊಂಡಿರಬೇಕು.

ಅಮ್ಮ ಅಪ್ಪನೊಂದಿಗೆ ಜಗಳವಾದಾಗೆಲ್ಲಾ ಅತ್ತೆ ಬಗ್ಗೆ ಬೈಯುತ್ತಾಳೆ. “ಹೇಡಿ ನೀವು, ಯಾರೋ ಅಯೋಗ್ಯರು ಬರೆದ ಹೆಸರಿಲ್ಲದ ಪತ್ರಗಳು ಬಂದ ಕೂಡಲೇ, ಓದು ನಿಲ್ಲಿಸಿ ಆ ರಾಕ್ಷಸನಿಗೆ ನಿಮ್ಮ ತಂಗಿಯನ್ನು ಕಟ್ಟಿ ಅವಳ ಜೀವನ ಬಲಿ ತೊಗೊಂಡ್ರಿ, ಅದ್ರ ಹೊಟ್ಟೆಯಲ್ಲಿ ಹುಟ್ಟಿದವಕ್ಕೂ ಗ್ರಹಚಾರ ತಪ್ಪಿಲ್ಲ” ಎನ್ನುತ್ತಾ ಸಂಕಟಪಟ್ಟು ಅಳುತ್ತಾಳೆ.

ಅಪ್ಪ ಸುಮ್ಮನೇ ಹೊರಹೋಗುತ್ತಾರೆ.

ಅಮ್ಮ ಹೇಳಿದ ಮೇಲೆ ತಿಳಿದಿದ್ದು ಇಷ್ಟು, ತುಂಬಾ ಚೆಂದದ ಮಾಧ್ವಿಯತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದೇ ತಡ ಮನೆಗೆ ಪತ್ರಗಳು ಬರಲಾರಂಭಿಸಿದ್ದವು. ಹಾಸಿಗೆ ಹಿಡಿದಿದ್ದ ಅಜ್ಜ ಅಜ್ಜಿಯದ್ದು ಒಂದೇ ವರಾತ, ಅವಳಿಗೆ ಮದ್ವೆ ಮಾಡಿಬಿಡು ಅಂತ. ಕೊನೆಗೆ ಸುಮಾರು ೨೦ ವರ್ಷ ದೊಡ್ಡವರಾಗಿದ್ದ ಮಾವನಿಗೆ ಅತ್ತೆಯನ್ನು ಮದುವೆ ಮಾಡಿಕೊಟ್ಟಿದ್ದರು ಅಪ್ಪ. ಒಂಚೂರು ಓದು, ನಯನಾಜೂಕಿನ ಗಂಧ ಗಾಳಿಯಿಲ್ಲದ ಗಂಡ, ಮಾತು ಮಾತಿಗೂ ಹುರಿದು ಮುಕ್ಕುತ್ತಿದ್ದ ಅತ್ತೆಯೊಡನೆ ಮೂಕಪಶುವಿನಂತೆ ಜೀವನ ಸಾಗಿಸುತ್ತಿದ್ದ ಮಾಧವಿ ಜಯಾ ಹುಟ್ಟಿದ ಮೇಲೆ ಬದುಕೋ ಪ್ರಯತ್ನ ಒಂದಿಷ್ಟು ಮಾಡಲಾರಂಭಿಸಿದ್ದಳು. ‍ಆದರೆ ಅವಳತ್ತೆ ಮತ್ತು ಗಂಡನಿಗೆ ಅದೂ ಸಮ್ಮತವಿರಲಿಲ್ಲ, ಹೆಣ್ಣು ಮಗುವೆಂದು ಅದನ್ನೂ, ಹೆತ್ತ ಅವಳನ್ನೂ ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ಬೈಗುಳಗಳಲ್ಲೇ ಮುಳುಗೇಳಿಸುತ್ತಿದ್ದರು. ನಂತರ ಹುಟ್ಟಿದ ಸುಧೀ ಜಯಾಳಿಗಿಂತ ಸ್ವಲ್ಪ ಅದೃಷ್ಟವಂತನಾದರೂ ಏಟುಗಳು ಇಬ್ಬರಿಗೂ ಸಮನಾಗಿ ಬೀಳುತ್ತಿದ್ದವು. ಅಮ್ಮ ಇಲ್ಲಿಗೆ ಬಂದಾಗೆಲ್ಲಾ ಆ ಅಜ್ಜಿಗೆ, ಮಾವನಿಗೆ ಸೂಕ್ಷ್ಮವಾಗಿ ಏನಾದರೂ ಹೇಳುವ ಪ್ರಯತ್ನ ಮಾಡುತ್ತಿದ್ದದ್ದು ಇನ್ನೂ ನೆನಪಿದೆ. ಆದರೆ ಅದರಿಂದ ಪರಿಸ್ಥಿತಿ ಇನ್ನೂ ಕೆಡುತ್ತಿತ್ತು ಎಂದು ಅಮ್ಮ ಸುಮ್ಮಗಾಗುತ್ತಿದ್ದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ

ಆ ಅಜ್ಜಿಯ ಹತ್ತಿರವಿದ್ದ ಬೆಳ್ಳಿಯ ಎಲೆಯಡಿಕೆಯ ಸಂಚಿಯನ್ನು ತರುವಾಗ ಎತ್ತಿ ಹಾಕಿ ನಜ್ಜುಗುಜ್ಜು ಮಾಡಿದ್ದಾಳೆಂಬುದು ಒಂದು ನೆಪ, ಅದೆಷ್ಟು ಹೊಡೆದರೋ, ಎಲ್ಲಿಗೆ ಏಟು ಬಿತ್ತೋ ಪುಟ್ಟ ಜಯಾ ಉಸಿರಿಲ್ಲದೇ ಮಲಗಿದ್ದಳು. ಕೆರೆಗೆ ಜಾರಿಬಿದ್ದಳು ಅಂದೇನೋ ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು ಮಾಮ. ಸುಧೀ ಮಂಕಾಗಿ ಕೂತಿದ್ದ, ಅವನ ಹತ್ತಿರ ಏನು ಮಾತಾಡಬೇಕು ಗೊತ್ತಿಲ್ಲದೇ ನಾನೂ ಸುಮ್ಮನೇ‌ಕೂತಿದ್ದೆ. ಇಲ್ಲಿದ್ದ ಒಂದು ವಾರದಲ್ಲಿ ಅತ್ತೆ ಸುಧೀಯ ಬಳಿ ಒಂದೂ ಮಾತನಾಡಿರಲಿಲ್ಲ ಎಂದು ಮೊದಲು ಗಮನಿಸಿದ್ದು ಅಮ್ಮ, ಸುಧೀಯನ್ನು ಕರೆದುಕೊಂಡು ಬಂದು ಊಟ ಮಾಡಿಸು, ಮಲಗಿಸು ಎಂದು ಹೇಳಿದಾಗೆಲ್ಲಾ ಅತ್ತೆ ಕಿವುಡಾಗಿದ್ದಳು. ಪುಟ್ಟ ಸುಧೀ ಆ ಕಡೆ ತಾಯಿಯೂ ಇಲ್ಲದೇ, ಸದಾ ಬೆನ್ನಿಗಿದ್ದ ಅಕ್ಕನೂ ಇಲ್ಲದೇ ಕಂಗಾಲಾಗಿದ್ದ.

ಹೊರಡುವ ದಿನ “ಮಾಧ್ವಿ, ಇನ್ನೊಂದು ಮಗುವಿದೆ ನಿಂಗೆ, ಸ್ವಲ್ಪ ಗಟ್ಟಿಯಾಗು, ಅದಕ್ಕಾಗಿಯಾದರೂ ಬದುಕಬೇಕಲ್ವೇ” ಎಂದಾಗಲೂ ಅತ್ತೆ ತುಟಿ ಬಿಚ್ಚಿರಲೇ ಇಲ್ಲ.

ಕೊನೆಗೆ ಅಮ್ಮ ಅವನನ್ನು ಕರ್ಕೊಂಡು ಬಂದು ಒಂದಿಷ್ಟು ತಿಂಗಳು ನಮ್ಮೊಟ್ಟಿಗೇ ಇಟ್ಟುಕೊಂಡಿದ್ದೂ ಆಗಿತ್ತು. ವಾಪಾಸು ಬಿಡಲು ಬಂದದ್ದು ಆ ಅಜ್ಜಿ ತೀರಿಕೊಂಡಾಗ. ಅಷ್ಟು ನರಕಯಾತನೆ ಕೊಟ್ಟ ಮುದುಕಿ ಅದೆಷ್ಟು ಆರಾಮಾಗಿ ಸತ್ತು ಹೋದಳು ಎಂದು ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಹೇಳುತ್ತಿದ್ದದ್ದೂ ನೆನಪಿದೆ. ಆಮೇಲೆ ಅಪ್ಪ ಬಂದೇ ಇಲ್ಲ ಇಲ್ಲಿಗೆ, ಅಮ್ಮ ಮಾತ್ರ ನನ್ನ ಕಟ್ಟಿಕೊಂಡು ಆಗಾಗ ಬರುತ್ತಿದ್ದಳು. ಜಯಾ ಹೋದ ಮೇಲೆ, ಮಾಧ್ವಿಯತ್ತೆ ಮೊದಲಿನ ಹಾಗೆ ಆಗಲೇ ಇಲ್ಲ, ಸುಧೀ ಈ ಕಡೆ ತಂದೆ-ತಾಯಿ ಇದ್ದೂ ಅನಾಥನೇ‌ ಆಗಿ ಹೋದ. ಗೊತ್ತಿದ್ದೋ ಗೊತ್ತಿಲ್ಲದೆಯೇ ಅತ್ತೆ ಎರಡೂ ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳೇನೋ ಎಂದು ಅಮ್ಮ ಹೇಳುತ್ತಿದ್ದಳು. ಅವನಿಗೆ ನಾವು ಮೂವರೇ ಪ್ರಪಂಚದಲ್ಲಿದ್ದ ಬಂಧುಗಳು. ಅದೆಷ್ಟೋ ಸಲ ಈ ಮನುಷ್ಯನನ್ನು ಬಿಟ್ಟು ಬಾ ಅಂತಲೋ, ಈ ಮಗುವನ್ನು ನನಗಾದರೋ ಕೊಟ್ಟುಬಿಡು ಅಂತಲೋ ಅಮ್ಮ ಜಗಳವಾಡಿದ್ದೂ ಇದೆ. ಅದ್ಯಾವುದೂ ಅತ್ತೆ ಮಾಡಲಿಲ್ಲ. ಜಯಾ ಹೋದ ಮೇಲೆ ಅತ್ತೆ ಮನೆ ಬಿಟ್ಟು ಎಲ್ಲಿಗೂ ಹೋಗದೆ ಸ್ವಯಂ ಗೃಹಬಂಧನ ಶಿಕ್ಷೆ ಕೊಟ್ಟುಕೊಂಡಿದ್ದಳು. ಎಷ್ಟೇ ಬೈದುಕೊಂಡಾದರೂ ಅಮ್ಮ ನನ್ನನ್ನು ಕರ್ಕೊಂಡು ಬರುವುದನ್ನು ಬಿಡಲಿಲ್ಲ, ಪ್ರತೀಸಲ ಸುಧೀಗೆ ಇಷ್ಟವಾಗುವ ಎಲ್ಲವನ್ನೂ ಹೊತ್ತು ತರುತ್ತಿದ್ದಳು.

ಕಾಲೇಜಿನ ಮೆಟ್ಟಲು ಹತ್ತಿ ಎರಡು ವರ್ಷವಾಗುವಷ್ಟರಲ್ಲಿ ಸುಧೀಗೆ ಕ್ಯಾನ್ಸರ್ ಅಂತೆ ಅಂತ ಅಮ್ಮ ಹೇಳಿದಾಗ ಹುಚ್ಚು ಹಿಡಿದಂತಾಗಿತ್ತು. ಮಹೇಶನೊಟ್ಟಿಗೆ ಅವನೇ ಜಿಲ್ಲಾಸ್ಪತ್ರೆಗೆ ಹೋಗಿ ಬಂದಿದ್ದನಂತೆ, ಏನೂ ಮಾಡಲಾಗಲ್ಲ ಅಂತ ವೈದ್ಯರೂ ಕೈ ಚೆಲ್ಲಿದ್ದರಂತೆ. ಜಯಾ ಮಾಯದ ಗಾಯವಾಗಿ ಉಳಿದು ಹೋಗಿದ್ದಳು, ಈವಾಗ ಮತ್ತೊಂದು ಗಾಯ ಮಾಡಿಕೊಳ್ಳಲು ಹೆದರಿ ಸ್ನೇಹಿತರು, ಕಾಲೇಜು, ಗೇಮು, ಮೊಬೈಲ್ ಅಂತೆಲ್ಲಾ ಮುಳುಗಿ ನನ್ನ ಪ್ರಪಂಚವನ್ನು ಕಿರಿದುಗೊಳಿಸಿಕೊಂಡಿದ್ದೆ. ಇಲ್ಲಿಗೆ ಬರಬೇಕು ಅನಿಸಿರಲಿಲ್ಲ. ಅಮ್ಮ ಅದೆಷ್ಟು ಸಲ ಗೋಗೆರೆದಿದ್ದಳು, ಹೋಗಿ ನೋಡಿ ಬರೋಣ ಬಾರೋ ಅಂತ, ಉಹೂಂ, ಧೈರ್ಯವಾಗುತ್ತಿರಲಿಲ್ಲ. ಈವಾಗ ಹಂಗಾಮಿ ಶಿಕ್ಷಕನಾಗಿ ಓದಿದ ಕಾಲೇಜಿನಲ್ಲೇ ಕೆಲಸಕ್ಕೆ ಸೇರಿಕೊಂಡು, ಕಂಡ ಕಂಡ ವಿದ್ಯಾರ್ಥಿಗಳ ಮುಖದಲ್ಲೆಲ್ಲಾ ಸುಧೀ, ಜಯಾರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೆ. ಮಾಧ್ವಿಯತ್ತೆಯ ನೆನಪೂ ಸದಾ ಬರುತ್ತಿತ್ತು. ‍ಕನಿಷ್ಠ ಆರು ಕುಟುಂಬಗಳಿಗೆ ಹಂಚುವಷ್ಟು ನೋವನ್ನು ಮಾಧ್ವಿಯತ್ತೆ ಒಬ್ಬಳಿಗೇ ದೇವರು ಸುರಿದಿದ್ದಾನೆ ಎಂದು ಅಮ್ಮ ಅಲವತ್ತುಕೊಳ್ಳುತ್ತಿದ್ದದ್ದು ನಿಜ ಅನಿಸುತ್ತಿತ್ತು. ಅವಳ ಮೇಲೆ ಯಾಕಿಷ್ಟು ದ್ವೇಷ ವಿಧಿಗೆ? ಅವಳೋ ಆ ವಿಧಿಯ ಮೇಲೆಯೇ ಯುದ್ಧ ಸಾರುತ್ತಾ ಬದುಕುವ ಸೋಗು ಹಾಕುತ್ತಿದ್ದಾಳೆ. ತನ್ನದು ಅಂತ ಉಳಿದ ಒಂದು ಜೀವವನ್ನೂ ಅಪ್ಪಿಕೊಂಡು ಹೇಗೋ ಬದುಕಬಹುದಿತ್ತು. ಅದೂ ಮಾಡ್ತಿಲ್ಲ. ಅಮ್ಮನಿಗೆ ಹೃದಯ ಶಸ್ತ್ರಚಿಕಿತ್ಸೆಯಾದಾಗ ಅವಳು ಕೇಳಿದ್ದು ಒಂದೇ.

“ ನಿಮ್ಮಪ್ಪ ಹೇಡಿ ಬಾಬು, ಅವಳನ್ನು, ಆ ಹುಡುಗನನ್ನ ಎದುರಿಸೋ ಧೈರ್ಯ ಅವರಿಗಿಲ್ಲ, ನೀನಾದ್ರೂ ಸುಧೀನ ಇಲ್ಲಿಗೆ ಕರ್ಕೊಂಡು ಬಾರೋ, ಅವಳು ಮರಗಟ್ಟಿ ಜೀವನ ಲಗಾಡಿ ತೆಗೆದುಕೊಂಡಳು, ಅವನನ್ನ ಇಲ್ಲಿ ಹಾಸ್ಪಿಟಲ್ಲಾಗಾದ್ರೂ ತೋರಿಸೋಣ” ಅಂತ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಶ್ರಾವಣಾ

ಅಪ್ಪನ, ಅತ್ತೆಯ ಮರಗಟ್ಟುವಿಕೆ ಕಾಯಿಲೆ ನಂಗೂ ಹರಡಿತ್ತು.

ಅಮ್ಮನಿಗೆ ಸ್ವಲ್ಪ ಆರಾಮಾದ ಮೇಲೆ ಕೊಟ್ಟ ಮಾತಿನಂತೆ ಹೊರಟಾಗ ಆಕೆಗೆ ಅದೆಷ್ಟು ಖುಷಿಯಾಗಿತ್ತು. ಅಪ್ಪನೂ ಥ್ಯಾಂಕ್ಸ್ ಅಂತ ಕಣ್ಣಲ್ಲೇ ಹೇಳಿದಂತೆ ಅನಿಸಿತ್ತಲ್ಲಾ? ಕೂತಲ್ಲೇ ಜೋಂಪು ಹತ್ತಿದಂತಾಯ್ತು. ಎಚ್ಚರವಾದಾಗ ಬೆಳಕು ಹರಿದಿತ್ತು. ಎಮರ್ಜೆನ್ಸಿ ಲ್ಯಾಂಪ್ ಈಗ ಉರಿಯುತ್ತಿರಲಿಲ್ಲ, ಅತ್ತೆ ಕಾಣಲಿಲ್ಲ, ಅಡುಗೆ ಮನೆಯಲ್ಲಿರಬೇಕು. ಬಚ್ಚಲ ಹತ್ತಿರ ಓಬಯ್ಯನ ಸ್ವರ ಕೇಳಿತು. ಸುಧೀಗೆ ಬೆಳಗ್ಗಿನ ಕೆಲ್ಸಕ್ಕೆ ಸಹಾಯ ಮಾಡಲು ಬಂದಿರಬೇಕು ಅನಿಸಿತು. ಬಾಣಂತಿ ಕೋಣೆಯಲ್ಲಿದ್ದ ಎಲ್ಲವನ್ನೂ ಕ್ಲೀನ್ ಮಾಡಿಸಿ ಮಂಚ ಹಾಕಿಸಿ, ಪಕ್ಕದಲ್ಲೊಂದು ಮೇಜು, ಸಣ್ಣ ಕಪಾಟು ಎಲ್ಲವನ್ನೂ ಇಡಿಸಿದೆ. ನಾನೇ ಕೂತು ಅವನ, ಗಡ್ಡ, ಕೂದಲು ಕತ್ತರಿಸಿ ಅವನನ್ನು ಸ್ವಲ್ಪ ನೋಡುವ ಹಾಗೆ ಮಾಡಿದೆ. ಮಹೇಶನ ತಮ್ಮ ತಂದ ಬೆಡ್ ಪಾನ್ ಬಳಸಲು ಹೇಳಿ ಕೊಟ್ಟೆ. ಅವನ ಮುಖದಲ್ಲೊಂದು ಕಿರುನಗು. “ಮುಂದಿನ ತಿಂಗಳು ಬರುವಾಗ ಇನ್ನಷ್ಟು ಪುಸ್ತಕ ತನ್ನಿ ಬಾಬಣ್ಣ” ಅಂದ. “ಹೂಂ, ನಾಳೆ ಬೆಳಗ್ಗೆ ಹೊರಡ್ತೀನಿ, ಮುಂದಿನ ಹದಿನೈದು ದಿನದಲ್ಲಿ ಬರ್ತೀನೋ, ಅಲ್ಲಿಯವರೆಗೆ ಸಾಕಲ್ಲ ಇಷ್ಟು? ಆಮೇಲೆ ನಮ್ಮನೆಗೆ ಹೋಗೋಣ ಆಗ್ದಾ?, ಅಲ್ಲಿ ಇಡೀ ಲೈಬ್ರೆರಿ ನಿಂದೇ ”ಅಂದೆ. ಅವನು ಖುಷಿಯಲ್ಲಿ ಚಿಕ್ಕ ಮಗುವಿನಂತೆ ನಕ್ಕ.

ಮರುದಿನ ಬೆಳಗ್ಗೆ ಬೇಗ ಎದ್ದು ಹೊರಟು ಅತ್ತೆ ಕಾಲಿಗೆ ಬಿದ್ದಾಗ ತಲೆಸವರಿದಳು, “ಅತ್ತೆ, ಸುಧೀ ಕಡೆ ಸ್ವಲ್ಪ ಗಮನ ಕೊಡು ಈವಾಗಾದ್ರೂ, ಎಷ್ಟು ದಿನ ಇರುತ್ತಾನೋ ಖುಷಿಯಲ್ಲಿರಲಿ” ಅಂದೆ.

ಏನೂ ಉತ್ತರಿಸದೆ, ಕೈಗೆ ಒಂದು ಬಟ್ಟೆಯ ಚೀಲ ಕೊಟ್ಟಳು, ತೆಗೆದು ನೋಡಿದರೆ ಕಸೂತಿಯ ಹೂವಿನ ಚಿತ್ತಾರಗಳ ಅಂಚಿರುವ ಒಂದು ಡಬಲ್ ಬೆಡ್ ಶೀಟ್ ಮತ್ತು ತಲೆದಿಂಬಿನ ಕವರುಗಳ ಸೆಟ್. ಅವಳ ಮುಖ ನೋಡಿದರೆ ವಿಚಿತ್ರವಾಗಿ ನಕ್ಕಳು.

“ಚೆಂದ ಉಂಟು, ಥ್ಯಾಂಕ್ಸ್ ಅತ್ತೆ” ಎಂದು ನಡುಮನೆಗೆ ಕಡೆ ತಿರುಗಿ “ಮಾಮ ಹೊರಡ್ತೀನಿ” ಎಂದು ಗಟ್ಟಿಯಾಗಿ ಹೇಳಿದರೆ, ಸಿಕ್ಕಿದ್ದು ರಾಮ ನಾಮ ಪಾಯಸಕ್ಕೆ ಹಾಡು. ಮೆಲ್ಲಗೆ ಸುಧೀ ಕೋಣೆಗೆ ಇಣುಕಿ ಹಾಕಿದರೆ, ಸ್ವಚ್ಛವಾದ ಕೋಣೆಯಲ್ಲಿ ಹೂವಿನ ಚಿತ್ತಾರದ ಮಧ್ಯೆ ನೀಟಾಗಿ ಮಲಗಿದ್ದ. ಹತ್ತಿರ ಹೋಗಿ ಕೈ ಸವರಿ ಹೊರಟೆ, ಮುಂದಿನ ಸರ್ತಿ ನೋಡ್ತೀನೋ ಇಲ್ವೋ ಅನಿಸಿ ಗಂಟಲುಬ್ಬಿ ಬಂತು. ಮೇಲಿನವರೆಗೆ ನಡೆದು ಬರುತ್ತಿದ್ದಂತೆ ಪಕ್ಕದಲ್ಲೇ ಜಯಾ ಉದ್ದ ಲಂಗ ತೊಟ್ಟು ಕೆಂಪು ಕೇಪುಳ ಹೂವಿನ ಗೊಂಚಲು ತಿರುಗಿಸುತ್ತಾ ಬಂದಂತೆ ಅನಿಸಿತು. ನಿಂತು ತಿರುಗಿ ನೋಡಿದರೆ, ಗದ್ದೆಯಲ್ಲಿ ಅ‍ವಳೂ, ಸುಧೀಯೂ ಒಬ್ಬರ ಹಿಂದೆ ಒಬ್ಬರು ಓಡುತ್ತಿದ್ದಂತೆ ಅನಿಸಿತು. ಇಬ್ಬರ ಮೈಮೇಲೂ ಹೂವಿನ ಚಿತ್ತಾರವಿರುವ ಅಂಗಿಗಳು, ತಲೆ ಕೊಡಹಿ ನಡೆದೆ. ‍ಬಸ್ಸು ನಿಲ್ಲುವ ತಾಣಕ್ಕೆ ಬಂದರೆ, ಮಹೇಶ ಅಲ್ಲಿಗೆ ಬಂದು ಕಾಯುತ್ತಾ ನಿಂತಿದ್ದ.

“ಬಾಬಣ್ಣ, ಸುಧೀಯಣ್ಣನಿಗಾದ್ರೂ ಬರ್ತಾ ಇರಿ” ಅಂದ. ಹೂಂ ಅಂದೆ.

ಮಂಗಳೂರಿಗೆ ಡೈರೆಕ್ಟ್ ಬಸ್ ಬರಲೇ ಇಲ್ಲ, ಸರಿ ಬೆಳ್ತಂಗಡಿಗೆ ಹೋಗಿ ಅಲ್ಲಿಂದ ಎಕ್ಸ್ಪ್ರೆಸ್ ಹಿಡಿದರಾಯ್ತು ಅಂತ ಸಿಕ್ಕಿದ ಶಟಲ್ ಬಸ್ಸಿಗೆ ಹತ್ತಿ ಕೂತೆ. ಭಾವಗಳು, ನೆನಪುಗಳು ಪದೇ ‍ಪದೇ ಧಾಳಿಯಿಡುತ್ತಿದ್ದವು. ಮರಗಟ್ಟಿದ ಮನಸ್ಸು ಕರಗುತ್ತಿದ್ದಂತೆ ಭಾಸವಾಗುತ್ತಿತ್ತು. ಕಣ್ಣು ಮುಚ್ಚಿ ಕೂತೆ. ಬೆಳ್ತಂಗಡಿಯಲ್ಲಿಳಿದು ಎಕ್ಸ್ಪ್ರೆಸ್ ಬಸ್ಸು ಹತ್ತಿ ಟಿಕೇಟು ತೊಗೊಂಡು ಮೂರು ನಾಲ್ಕು ನಿಮಿಷಗಳಾಗಿರಬೇಕು. ಪಾಕೇಟಿನಲ್ಲಿದ್ದ ಮೊಬೈಲ್ ರಿಂಗಾಯ್ತು. ತೆಗೆದು ನೋಡಿದರೆ, ಮಹೇಶನ ನಂಬರ್. ಕೈ ನಡುಗಲಾರಂಭಿಸಿತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮೈ ಲೈಫ್ ಮೈ ಪ್ರಾಬ್ಲಮ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

15 ವರ್ಷ ಪೂರೈಸಿದ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕಕ್ಕೆ ಹೊಸ ಮೆರಗು

Splendours of Royal Mysore: ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕವು 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸ ಮೆರಗು ನೀಡಿ ಮರುಮುದ್ರಿಸಿ ಪ್ರಕಟಿಸಲಾಗಿದೆ.

VISTARANEWS.COM


on

By

Splendours of Royal Mysore book
Koo

ಮೈಸೂರು/ಬೆಂಗಳೂರು: ಮೈಸೂರು ಸಂಸ್ಥಾನದ ಗತ ವೈಭವವನ್ನು ಸಾರುವ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ (Splendours of Royal Mysore) ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ದಿ ಒಡೆಯರ್ಸ್‌ ಎಂಬ ಪುಸ್ತಕ ಪ್ರಕಟಣೆಗೊಂಡು 15 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಡಬ್ಲ್ಯೂಎಂಜಿ ಹಾಗೂ ಎಂಬಸ್ಸಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸ್ಪ್ಲೆಂಡರ್ಸ್ ಆಫ್ ಮೈಸೂರ್ ಪುಸ್ತಕದ ಕರ್ತೃ ವಿಕ್ರಂ ಸಂಪತ್ ಸೇರಿ ಹಲವು ಮಂದಿ ಗಣ್ಯರು ಭಾಗಿ ಆಗಿದ್ದರು. ಕನ್ನಡ ನಾಡು ನುಡಿ ವಿಚಾರವಾಗಿ ಮೈಸೂರು ಸಂಸ್ಥಾನ ನೀಡಿದ ಕೊಡುಗೆಯನ್ನು ಸಾರುವ ಸ್ಪ್ಲೆಂಡರ್ಸ್ ಆಫ್ ಮೈಸೂರ್ ಪುಸ್ತಕದಲ್ಲಿ ಮೈಸೂರು ರಾಜ ವಂಶಸ್ಥರ ಕುರಿತಾಗಿ ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ.

ವಿಕ್ರಮ್ ಸಂಪತ್ ಅವರ “ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು” ಒಂದು ಭವ್ಯವಾದ ಮತ್ತು ದೃಷ್ಟಿಗೋಚರವಾಗಿ ಅದ್ಭುತವಾದ ಪುಸ್ತಕವಾಗಿದೆ. ವೈಭವದ ಮೈಸೂರಿನ ಸಾರವನ್ನು ಸೆರೆ ಹಿಡಿದಿದೆ. ನಗರದ ರಾಜಮನೆತನದ ಗತಕಾಲದ ಬಗ್ಗೆ ಸಂಶೋಧನೆ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಗಮನಾರ್ಹ ಕೆಲಸವನ್ನು ಮಾಡಿದ್ದಾರೆ. ಜತೆಗೆ ಮೈಸೂರು ನಗರದ ಅನೇಕ ಗುಪ್ತ ರತ್ನಗಳನ್ನು ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್‌, ಆಧುನಿಕ ಕಾಲಕ್ಕೆ ಮೈಸೂರು ಅರಸರ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ಈ ಪುಸ್ತಕವನ್ನು ಓದಬಹುದು. ಕನ್ನಡದಲ್ಲಿ ಮೈಸೂರು ಸಂಬಂಧ ಹಲವಾರು ಪುಸ್ತಕಗಳಿವೆ. ಆದರೆ ಇಂಗ್ಲೀಷ್‌ ಭಾಷೆಯಲ್ಲಿ ಯಾವುದೇ ಪುಸ್ತಕ ಇರಲಿಲ್ಲ. ಇತಿಹಾಸ ಸದಾ ಎಲ್ಲರಿಗೂ ಲಭ್ಯವಿರಲಿ ಎಂದರು.

ಬಳಿಕ ಮಾತನಾಡಿದ ಲೇಖಕ ವಿಕ್ರಂ ಸಂಪತ್, ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕವನ್ನು ಸತತ 10 ವರ್ಷಗಳ ಸಂಶೋಧನೆ ನಡೆಸಿ ಬರೆಯಲಾಗಿದೆ. 2008ರಲ್ಲಿ ಮೊದಲ ಬಾರಿ ಪ್ರಕಟಿಸಲಾಯಿತು. ಈ ಪುಸ್ತಕದಲ್ಲಿ ಮೈಸೂರಿನ 600 ವರ್ಷದ ರಾಜವಂಶಸ್ಥರ ಇತಿಹಾಸ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಹೇಗೆ ಬೆಳೆಯಿತು ಎಂಬುದನ್ನು ತಿಳಿಸಲಾಗಿದೆ. ಕರ್ನಾಟಕ ಹೊರತು ಪಡಿಸಿ ಹೊರಗಿನವರು ಓದಲು ಇಂಗ್ಲಿಷ್‌ ಭಾಷೆಯಲ್ಲಿ ಯಾವುದೇ ಪುಸ್ತಕ ಇರಲಿಲ್ಲ. ಅದನ್ನೂ ಈಗ ಕೆಲವು ಬದಲಾವಣೆಗಳೊಂದಿಗೆ ಮರುಮುದ್ರಿಸಲಾಗಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

Award Ceremony : ಪಾಂಚಜನ್ಯ ಪ್ರತಿಷ್ಠಾನದ 11ನೇ ವಾರ್ಷಿಕೋತ್ಸವ, ಪುರಸ್ಕಾರ ಪ್ರದಾನ ಇಂದು

Award Ceremony : ಬೆಂಗಳೂರಿನ ಪಾಂಚಜನ್ಯ ಪ್ರತಿಷ್ಠಾನ ನೀಡುವ 11ನೇ ವರ್ಷದ ವಾರ್ಷಿಕ ಪ್ರಶಸ್ತಿಗೆ ನಿವೃತ್ತ ಶಿಕ್ಷಕ ಸುರೇಶ್‌ ವಿ. ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

VISTARANEWS.COM


on

Panchajanya award Suresh Kulakarni
Koo

ಬೆಂಗಳೂರು: ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ – ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ (Panchajanya Foundation) ಹನ್ನೊಂದನೇ ವಾರ್ಷಿಕೋತ್ಸವ ಮತ್ತು ಧಾರವಾಡದ ನಿವೃತ್ತ ಶಿಕ್ಷಕ ಸುರೇಶ್.ವಿ.ಕುಲಕರ್ಣಿ (Suresh V Kulakarni) ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ (Panchajanya puraskara) ಪ್ರದಾನ ಸಮಾರಂಭ (Award Ceremony) ಡಿಸೆಂಬರ್‌ 9 (ಭಾನುವಾರ) ಬೆಂಗಳೂರಿನ ಜಯನಗರದಲ್ಲಿ ನಡೆಯಲಿದೆ.

ಪಾಂಚಜನ್ಯ ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರತಿಷ್ಠಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಷರ, ಆರೋಗ್ಯ, ಅಧ್ಯಾತ್ಮ ಕ್ಷೇತ್ರದಲ್ಲಿನ ಸಾಧಕ ಶ್ರೇಷ್ಠರನ್ನು ಗುರುತಿಸಿ ಪಾಂಚಜನ್ಯ ಪುರಸ್ಕಾರ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ. ಅದರಂತೆ ಈ ಬಾರಿಯ ಪುರಸ್ಕಾರವನ್ನು ಸುರೇಶ್‌ ವಿ. ಕುಲಕರ್ಣಿ ಅವರಿಗೆ ನೀಡಲಾಗುತ್ತಿದೆ.

ಡಿಸೆಂಬರ್‌ 9ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ಜಯನಗರ 4ನೇ ಬ್ಲಾಕ್‌ನ ಯುವಪಥ, ವಿವೇಕ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಆರ್.ವಿ.ಶಿಕ್ಷಣ ಸಮೂಹದ ನಿರ್ದೇಶಕರಾಗಿರುವ ಡಾ.ಟಿ.ವಿ.ರಾಜು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಿಹೆಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ಕೆ.ಎಸ್.ಸಮೀರ ಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಎಂಇಎಸ್ ಶಿಕ್ಷಣ ಸಮೂಹ ಶೈಕ್ಷಣಿಕ ನಿರ್ದೇಶಕರು ಡಾ.ಎಚ್.ಎಸ್.ಗಣೇಶ ಭಟ್ಟ ಪಾಲ್ಗೊಳ್ಳುವರು ಮತ್ತು ಕಾರ್ಯಕ್ರಮವನ್ನು ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈವೇಟ್‌ ಲಿ. ಮತ್ತು ಬ್ಲೂನೀಮ್ ಮೆಡಿಕಲ್ ಡಿವೈಸೆಸ್ ಪ್ರೈ.ಲಿ ಪ್ರಾಯೋಜಿಸಿದ್ದಾರೆ , ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್.ವಿ.ಸುಬ್ರಹ್ಮಣ್ಯ , ಅನಂತ ವೇದಗರ್ಭಂ ಹಾಗು ವೆಂಕಟೇಶ ಆರ್. ವೇದಾಂತಿ ಉಪಸ್ಥಿತರಿರುವರು ಎಂದು ಸಂಸ್ಥಾಪಕ ಗೌರವ ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತ ಸುರೇಶ್‌ ವಿ. ಕುಲಕರ್ಣಿ ಕಿರು ಪರಿಚಯ

ಸುರೇಶ್.ವಿ.ಕುಲಕರ್ಣಿ ಅವರು ಧಾರವಾಡದ ಕೆ.ಇ. ಬೋರ್ಡ್ ಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯರು. ಪ್ರಸಿದ್ಧ ಕಲಾವಿದರೂ ಹೌದು. ದ.ರಾ ಬೇಂದ್ರೆ ಕುರಿತು ಸಮಗ್ರವಾಗಿ ಮಾತನಾಡುವ ವಾಗ್ಮಿ. ಕುಲಕರ್ಣಿಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದರು; ವನ್ಯಜೀವಿ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಜಿ.ಡಿ.ಆರ್ಟ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುವ “ವಿಜ್ಞಾನ ಸಂಗತಿ” (ವಿಜ್ಞಾನ ಮಾಸಿಕ ಪತ್ರಿಕೆ) ಸಂಪಾದಕರಾಗಿದ್ದರು. ಆಕಾಶವಾಣಿ ಧಾರವಾಡದಿಂದ ಕುಲಕರ್ಣಿಯವರ 100ಕ್ಕೂ ಹೆಚ್ಚು ಕಾರ್ಯಕ್ರಮಗಳು ಪ್ರಸಾರವಾಗಿವೆ.

ಇದನ್ನೂ ಓದಿ : The Nandi Awards: ನಂದಿ ಫಿಲ್ಮ್‌ ಅವಾರ್ಡ್; ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

Panchajanya foundation and award

ಪಾಂಚಜನ್ಯ ಪ್ರತಿಷ್ಠಾನದ ಕಿರು ಪರಿಚಯ

ಸಮಾನ ಮನೋಧರ್ಮದ ಗೆಳೆಯರು ಒಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮ ವೆಂಬ ಮಂತ್ರಗಳ ಬುನಾದಿಯ ಮೇಲೆ ಭವ್ಯ ಸಮಾಜ ನಿರ್ಮಾಣದ ದೀಕ್ಷೆ ತೊಟ್ಟು, ಹಲವಾರು ಜನಮುಖಿ ಕಾರ್ಯಗಳನ್ನು ನಡೆಸುತ್ತ ಒಂದು ದಶಕದಿಂದ ನಿಸ್ವಾರ್ಥ ಚಿಂತನೆ ವಿಶಾಲದೃಷ್ಟಿಯಿಂದ ಸದ್ದಿಲ್ಲದೆ ಸೇವಾಕ್ರಾಂತಿ ಮಾಡುತ್ತ ಬಂದಿದೆ. ಪಾಂಚಜನ್ಯ ಮೊಳಗುವುದಕ್ಕಾಗಿ ಅಲ್ಲ, ದೀನರ ಬಾಳು ಬೆಳಗುವುದಕ್ಕಾಗಿ ಉದಯವಾಗಿದೆ ಎನ್ನುತ್ತಾರೆ ಈ ಪ್ರತಿಷ್ಠಾನವನ್ನು ಮುನ್ನಡೆಸುತ್ತಿರುವವರು.

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಅಗಸ್ತ್ಯರ ಆಶ್ರಮದಲ್ಲಿ ರಾವಣ ವಧೆಗೆ ಸಿದ್ಧವಾದ ವೇದಿಕೆ

ಜನಪೀಡಕನಾದ ರಾವಣನ ವಧೆಗಾಗಿಯೇ ದೇವತೆಗಳು ರಚಿಸಿದ ಮಹಾನಾಟಕದಲ್ಲಿ ರಾಮ ಲಕ್ಷ್ಮಣ ಸೀತೆಯರು ಮಾಡಿದ ಪಾತ್ರಪೋಷಣೆಯನ್ನು ವಾಲ್ಮೀಕಿ ಕವಿ ರಸಪೂರ್ವಕವಾಗಿ ರಾಮಾಯಣದಲ್ಲಿ ಕಂಡರಸಿದ್ದಾರೆ.

VISTARANEWS.COM


on

mayamruga
Koo

ರಾವಣತ್ವದ ದರ್ಪಕ್ಕೆ ಸೀತಾಕಂಪನವನ್ನು ತಂದ ಅಕಂಪ

dhavala dharini by Narayana yaji

ಹಿಂದಿನ ಸಂಚಿಕೆಯಲ್ಲಿ ಸೀತಾಪಹರಣದ ಘಟನೆಯ ಹಿಂದಿನ ಮುಖ್ಯವಾದ ವಿಷಯಗಳನ್ನು ಗಮನಿಸಿದೆವು. ಅಕಂಪನ ಮೂಲಕ ರಾವಣನ ಮನಸ್ಥಿತಿಯನ್ನು ತಿಳಿದುಕೊಳ್ಳೋಣ.

ಭಾರ್ಯಾ ತಸ್ಯೋತ್ತಮಾ ಲೋಕೇ ಸೀತಾ ನಾಮ ಸುಮಧ್ಯಮಾ.
ಶ್ಯಾಮಾ ಸಮವಿಭಕ್ತಾಙ್ಗೀ ಸ್ತ್ರೀರತ್ನಂ ರತ್ನಭೂಷಿತಾ৷৷ಅ.31.29৷৷

ರಾಮನಿಗೆ ಸುಂದರವಾದ ನಡುವುಳ್ಳ ಸೀತಾ ಎನ್ನುವ ಹೆಸರಿನ ಉತ್ತಮಳಾದ ಹೆಂಡತಿಯಿದ್ದಾಳೆ. ಅವಳು ಯೌವನಮಧ್ಯಸ್ಥಳು. ಆಕೆಯ ಅಂಗಗಳು ಯಾವ ಯಾವ ಪರಿಮಾಣದಲ್ಲಿರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿವೆ. ರತ್ನಾಭರಣಗಳಿಂದ ಭೂಷಿತೆಯಾಗಿರುವ ಆಕೆ ಸ್ತ್ರೀ ರತ್ನವೇ ಆಗಿದ್ದಾಳೆ.

ಅಕಂಪನೆನ್ನುವ ರಾವಣನ ಗೂಢಚರ. ಆತ ಜನಸ್ಥಾನದಲ್ಲಿ ಖರನೊಂದಿಗೆ ಇದ್ದ. ರಾಮನ ಬಾಣದಿಂದ ಅದು ಹೇಗೋ ತಪ್ಪಿಸಿಕೊಂಡು ಲಂಕೆಗೆ ಬಂದು ರಾವಣನನ್ನು ಕಂಡು ಜನಸ್ಥಾನದಲ್ಲಿ ರಾಮನ ಪರಾಕ್ರಮಕ್ಕೆ ಖರ ದೂಷಣ ತ್ರಿಶಿರಾದಿಗಳ ಸಹಿತ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮ ಏಕಾಂಗಿಯಾಗಿ ಸಂಹರಿಸಿದ ವಿವರಗಳನ್ನು ತಿಳಿಸಿದ. ಇದಕ್ಕೆ ಕಾರಣಳಾದ ಶೂರ್ಪನಖಿಯ ವಿಷಯವನ್ನು ರಾವಣನಿಂದ ಮುಚ್ಚಿಟ್ಟ. ಕ್ರುದ್ಧನಾದ ರಾವಣ ಆಗಲೇ ಎದ್ದು ರಾಮನನ್ನು ಕೊಂದುಬಿಡುವೆ ಎಂದು ಜನಸ್ಥಾನಕ್ಕೆ ಹೊರಡಲು ಸಿದ್ಧನಾದನು. ಆಗ ಆತನನ್ನು ತಡೆಯುವ ಅಕಂಪ ರಾವಣನಿಗೆ ರಾಮನ ಪರಾಕ್ರಮವನ್ನು ವಿವರವಾಗಿ ತಿಳಿಸುತ್ತಾನೆ. ಚಿನ್ನದ ರೆಕ್ಕೆಗಳುಳ್ಳ ರಾಮನ ಬಾಣಗಳಿಗೆ ಹುಸಿಯಿಲ್ಲವೆಂದು ಎಚ್ಚರಿಸುತ್ತಾನೆ, ದೇವತೆಗಳಿಂದಲೂ ರಾಮನು ಅವಧ್ಯನೆಂದು ಹೇಳುತ್ತಾನೆ. ರಾವಣ ತನ್ನ ಪರಾಕ್ರಮದಿಂದ ದೇವತೆಗಳನ್ನು ಸೋಲಿಸಿದವ. ಯಮಧರ್ಮನ ಕಾಲ ದಂಡವನ್ನೇ ಕಸಿದುಕೊಂಡವ. ಅಂತಹಾ ರಾವಣ ರಾಮನ ಪರಾಕ್ರಮದ ಕುರಿತು ಅಕಂಪ ಹೇಳಿದ ಮಾತುಗಳನ್ನು ಕೇಳುತ್ತಾನೆ ಎಂದರೆ ಆತನೋರ್ವ ನಂಬಿಗಸ್ಥ ದೂತನಾಗಿರಲೇಬೇಕು. ರಾವಣ ಎಲ್ಲ ಯುದ್ಧವನ್ನು ಗೆದ್ದಿದ್ದೂ ಕುಟಿಲತನದಿಂದಲೇ. ಅಜೇಯನೇನೂ ಅಲ್ಲ; ಅದಾಗಲೇ ಆತ ಕಾರ್ತವೀರ್ಯ, ಬಲಿ, ವಾನರರಾಜನಾದ ವಾಲಿಯ ಹತ್ತಿರ ಸೋತಿದ್ದ. ತನ್ನ ವರದ ಮಿತಿಯ ಅರಿವು (ಮನುಷ್ಯರನ್ನು ಹೊರತು ಪಡಿಸಿ ಬೇರೆ ಯಾರೂ ತನ್ನನ್ನು ಕೊಲ್ಲಲು ಸಾಧ್ಯವಾಗದಿರಲಿ ಎನ್ನುವುದು ಆತ ಬೇಡಿ ಪಡಕೊಂಡ ವರ) ಆತನಿಗೆ ಆಗಿರಬೇಕು. ಅಕಂಪನೇ ರಾವಣನಿಗೆ ರಾಮನನ್ನು ನೇರವಾದ ಯುದ್ಧದಲ್ಲಿ ಕೊಲ್ಲಲು ಸಾಧ್ಯವಾಗದಿದ್ದರೂ ಕುಟಿಲತೆಯಿಂದ ಆತನನ್ನು ಕೊಲ್ಲಬಹುದು ಎನ್ನುತ್ತಾ ಸ್ತ್ರೀ ಚಪಲಚಿತ್ತನಾದ ರಾವಣನಿಗೆ ಸೀತೆಯ ಸೌಂದರ್ಯದ ಕುರಿತು ಮೇಲೆ ಹೇಳಿದ ಶ್ಲೋಕದಲ್ಲಿದ್ದಂತೆ ವರ್ಣಿಸುತ್ತಾನೆ.

ರಾಮಾಯಣದಲ್ಲಿ ರಾವಣನ ಪರಿಚಯವಾಗುವದೇ ಅಕಂಪನ ಮೂಲಕವಾಗಿ. ಅಲ್ಲಿಯ ತನಕ ಅವನ ವಿವರ ಬರುವುದೇ ಇಲ್ಲ. ರಾವಣನ ಶೌರ್ಯ ರೂಪ ಮತ್ತು ತೇಜಸ್ಸಿನ ಕುರಿತು ಕವಿ ವಿವರಿಸುವುದು ಶೂರ್ಪನಖಿ ರಾವಣನಲ್ಲಿಗೆ ಬಂದಾಗ. ಅರಣ್ಯಕಾಂಡದ 32ನೆಯ ಸರ್ಗ ಸಂಪೂರ್ಣವಾಗಿ ರಾವಣನ ವರ್ಣನೆಗಾಗಿ ಮೀಸಲಾಗಿದೆ. ಅದ್ಭುತ ತೇಜಸ್ಸು ಆತನದ್ದು. ಆಮೇಲೆ ಹನುಮಂತ ಸೀತಾನ್ವೇಷಣೆಯಲ್ಲಿ ಲಂಕೆಗೆ ಹೋದಾಗ ಅಶೋಕವನವನ್ನು ಹಾಳುಗೆಡವಿ ರಾವಣನ ಆಸ್ಥಾನಕ್ಕೆ ಬಂಧಿಯಾಗಿ ಬಂದಾಗ ರಾವಣನನ್ನು ನೋಡಿ ಅವನ ರೂಪವನ್ನು ವರ್ಣಿಸುತ್ತಾನೆ. ರಾಕ್ಷಸರಾಜನ ರೂಪ ಹನುಮಂತನನ್ನೇ ಸೆರೆಹಿಡಿದು ಬಿಟ್ಟಿತ್ತು. ಅಂತಹಾ ವರ್ಚಸ್ಸುಳ್ಳವ ರಾವಣ. ರಾಮ ಕಥಾ ನಾಯಕನಾದರೆ ರಾವಣ ರಾಮಾಯಣದ ಪ್ರತಿನಾಯಕ. ರಾವಣ ಇಲ್ಲದಿದ್ದರೆ ರಾಮನ ಅವತಾರವೇ ಆಗುತ್ತಿರಲಿಲ್ಲ. ಆತನ ಶೌರ್ಯ ಎಷ್ಟು ಪ್ರಖರವೋ ಅದೇ ರೀತಿ ಆತನ ಹೆಣ್ಣುಬಾಕತನವೂ ಅಷ್ಟೇ ತೀವ್ರವಾಗಿತ್ತು.

ಉತ್ತರಕಾಂಡದಲ್ಲಿರುವ ರಾವಣನ ಶೌರ್ಯ ಮತ್ತು ಆತನ ಸಾಹಸವನ್ನು ಮೊದಲೇ ಕವಿ ಬರೆದಿದ್ದರೆ ಓದುಗರೂ ಸಹ ರಾಮನಿಗಿಂತಲೂ ರಾವಣನ ಪಕ್ಷಪಾತಿಯಾಗಿಬಿಡುವ ಸಾಧ್ಯತೆ ಇತ್ತು. ರಾವಣನಂತಹ ವ್ಯಕ್ತಿಗಳ ಸಾವು ಏಕಾಗಬೇಕೆಂದು ತಿಳಿಸಬೇಕಾದರೆ ಆತನ ದುರ್ಗುಣಗಳ ಪರಿಚಯ ಮೊದಲು ಆಗಲೇ ಬೇಕು. ರಾವಣನ ವಿದ್ವತ್ತು ಹೇಗೇ ಇರಲಿ, ಆರು ಕೋಟಿ ವರ್ಷಗಳ ಕಾಲ ಲೋಕವನ್ನು ಆಳಿದವ. ರಾವಣನ ವ್ಯಕ್ತಿತ್ವದ ಸ್ಥಾಯಿ ಭಾವ ದುರುಳತನ, ಪರಸ್ತ್ರೀಯರ ಅಪಹರಣ, ಸುಲಿಗೆ ಮತ್ತು ವಿಪರೀತ ಆತ್ಮಪ್ರಶಂಸೆ. ಭೂಗತ ಲೋಕದ ಪಾಪಿಗಳು ದಾನ ಧರ್ಮ ಮಾಡಿ ಜನರ ಅನುಕಂಪ ಗಳಿಸಿಕೊಂಡಂತೆ ಆಗಕೂಡದು. ವಾಲ್ಮೀಕಿಯ ಈ ರಸಪ್ರಜ್ಞೆಯನ್ನು ಕಾವ್ಯದುದ್ದಕ್ಕೂ ಕಾಣಬಹುದಾಗಿದೆ. ಪ್ರಪಂಚದಲ್ಲಿರುವ ಸುಂದರಿಯರೆಲ್ಲರೂ ತನ್ನ ಅಂತಃಪುರಕ್ಕೆ ಸೇರಬೇಕೆನ್ನುವ ಆತನ ವ್ಯಕ್ತಿತ್ವಕ್ಕೆ ತಕ್ಕ ರೀತಿಯಲ್ಲಿ ಅವನ ದೂತ ವರ್ಣಿಸುತ್ತಾನೆ. ಶೂರ್ಪನಖಿಗೆ ರಾಮ ಲಕ್ಷ್ಮಣರು ನೀಡಿದ ಶಿಕ್ಷೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾನೆ. ಸೀತೆಯ ಅಂದವನ್ನು ಬಿಟ್ಟಬಾಯಿಯಿಂದ ಕಿವಿಯನ್ನು ನೆಟ್ಟಗೆ ಮಾಡಿಕೊಂದು ಕೇಳಿದ ರಾವಣನಿಗೆ ಅವಳನ್ನು ತಂದೇ ತರಬೇಕೆನ್ನುವ ಬಯಕೆ ಹುಟ್ಟಿತು. ಸೀತೆಯ ಸೌಂದರ್ಯವನ್ನು ಅಕಂಪ ವರ್ಣಿಸಿರುವುದು ಸಂಭೋಗ ಶೃಂಗಾರದ ವಿಶೇಷಣಗಳಾದ ಶಾಮಾ, ಸಮವಿಭಕ್ತಾಙ್ಗೀ ಮತ್ತು ಸುಮಧ್ಯಮಾ ಎನ್ನುವುದರ ಮೂಲಕ. ಸುಮಧ್ಯಮಾ ಸುಂದರವಾದ ನಡುವುಳ್ಳವಳು ಇದಕ್ಕಿಂತ ಮುಖ್ಯವಾಗಿ ಸಮವಿಭಕ್ತಾಙ್ಗೀ ಎಂದರೆ ಯಾವ ಯಾವ ಅಂಗಗಳು ಎಷ್ಟು ಪ್ರಮಾಣದಲ್ಲಿ ಇರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿದೆ. ಉತ್ತಮ ಜಾತಿಯ ಅಥವಾ ಪ್ರಸವಿಸದ ಹೆಂಗಸಿಗೆ ಶಾಮಾ ಎನ್ನುತ್ತಾರೆ. ಶೀತೇ ಸುಖೋಷ್ಣಸರ್ವಾಙ್ಗೀ ಗ್ರೀಷ್ಮೇ ಚ ಸುಖ ಶೀತಲಾ – ಶೀತಕಾಲದಲ್ಲಿ ಸುಖಕರವಾದ ಉಷ್ಣವಿರುವ ಮತ್ತು ಗ್ರೀಷ್ಮದಲ್ಲಿ ಹಿಮದಂತೆ ತಂಪಾಗಿ ಇರುವ ಸರ್ವಾಂಗಗಳಿಂದ ಕೂಡಿರುವವಳು.

seethapahara

ಈ ಬಣ್ಣನೆಗಳು ರಾವಣನಿಗೆ ಮಂಗನಿಗೆ ಹೆಂಡ ಕುಡಿಸಿದಂತೆ ಆಯಿತು. ಆ ಕ್ಷಣದಿಂದಲೇ ಸೀತೆಯನ್ನು ಪಡೆಯುವ ಬಯಕೆ ಉಂಟಾಯಿತು. ರಾಜನಿಗೆ ಏನನ್ನು ಹೇಳಬೇಕೋ ಅಂತಹ ಮಾತುಗಳನ್ನೇ ಭೃತ್ಯರು ಆಡುತ್ತಾರೆ. “ನೇರ ಯುದ್ಧದಲ್ಲಿ ರಾಮನನ್ನು ಎದುರಿಸುವುದು ಅಸಾಧ್ಯ. ನೀನೀಗಲೇ ಆ ಮಹಾರಣ್ಯಕ್ಕೆ ಹೋಗಿ ಅವನನ್ನು ವಂಚಿಸಿ ಅವನ ಭಾರ್ಯೆಯನ್ನು ಬಲತ್ಕಾರವಾಗಿ ಅಪಹರಿಸು, ಸೀತೆಯಿಲ್ಲದೇ ರಾಮನು ಖಂಡಿತವಾಗಿ ಬದುಕಿರುವುದಿಲ್ಲ” ಎಂದು ಹೇಳುತ್ತಾನೆ. ಅದನ್ನು ಕೇಳಿದ ರಾವಣನಿಗೆ ಈ ಮಾರ್ಗವೇ ಸರಿಯೆನಿಸಿತು. ಮಾರನೆಯ ದಿನವೇ ಹೇಸರಗತ್ತೆ ಎಳೆಯುತ್ತಿರುವ ರಥವನ್ನು ಏರಿ ಸೀದಾ ಮಾರೀಚನಲ್ಲಿಗೆ ಬಂದು ಸೀತಾಪಹರಣದಲ್ಲಿ ತನಗೆ ನೆರವಾಗುವಂತೆ ಕೇಳಿದ. ಮಾರೀಚ ಮೊದಲಿನ ರಾಕ್ಷಸನಾಗಿ ಉಳಿದಿಲ್ಲ. ಹಾಗಂತ ಸಾತ್ವಿಕನೂ ಅಲ್ಲ. ವಿಶ್ವಾಮಿತ್ರರ ಯಾಗವನ್ನು ಕೆಡಿಸಲಿಕ್ಕೆ ಹೋದಾಗ ರಾಮ ಬಾಣದಿಂದ ಆತನ ತಾಯಿ ಮತ್ತು ಅಣ್ಣನನ್ನು ಕಳೆದುಕೊಂಡ. ರಾಮ ಬಿಟ್ಟ ಮಾನವಾಸ್ತ್ರದಿಂದ ಸಮುದ್ರದಲ್ಲಿ ಬಿದ್ದು ಹೇಗೋ ಬದುಕಿಕೊಂಡಿದ್ದ.

ಆದರೂ ಪೂರ್ವ ವಾಸನೆ ಇನ್ನೂ ಇತ್ತು. ಆತನಿಗೆ ಮೃಗಗಳ ವೇಷವನ್ನು ತಾಳುವ ವಿದ್ಯೆ ತಿಳಿದಿತ್ತು. ಆಗಾಗ ದಂಡಕಾರಣ್ಯಕ್ಕೆ ಹೋಗಿ ಮೃಗವಾಗಿ ಇನ್ನಿತರ ಸಾಧು ಮೃಗಗಳನ್ನು ತಿನ್ನುತ್ತಿದ್ದ. ರಾಮ ಲಕ್ಷ್ಮಣ ಸೀತೆಯರು ದಂಡಕಾರಣ್ಯಕ್ಕೆ ಬಂದಾಗ ಅವರನ್ನು ಮಾರು ವೇಷದಲ್ಲಿರುವ ಮಾರೀಚ ಗಮನಿಸಿದ್ದ. ಪೂರ್ವದ್ವೇಷದಿಂದ ತಾಪಸಿವೇಷದಲ್ಲಿದ್ದ ರಾಮ ಸುಲಭದ ತುತ್ತಾಗಬಹುದೆಂದೂ ಮತ್ತು ಆತನನ್ನು ಕೊಲ್ಲಲು ಇದೇ ಸಮಯವೆಂದು ತಿಳಿದು ಆತ ಒಂದು ಮೃಗವಾಗಿ ತನ್ನ ಕೋರೆ ದಾಡೆಗಳಿಂದ ರಾಮನನ್ನು ಇರಿಯಲು ಬಂದಾಗ ರಾಮ ಮೂರು ಬಾಣಗಳನ್ನು ಬಿಟ್ಟ ರಭಸಕ್ಕೆ ಆತನ ಇಬ್ಬರು ಸಹಚರರು ಅದಕ್ಕೆ ಬಲಿಯಾದರು. ಈತ ಹೇಗೋ ತಪ್ಪಿಸಿಕೊಂಡು ಬಂದು ಗಜಪಚ್ಛವೆನ್ನುವ ಪ್ರದೇಶದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ. ಹಾಗಂತ ಆತನಲ್ಲಿದ್ದ ತಾಮಸ ಬುದ್ಧಿ ಹೋಗಿರಲಿಲ್ಲ; ರಾಮನ ಪರಾಕ್ರಮದ ಭಯ ಆತನನ್ನು ಆವರಿಸಿತ್ತು. ಮಾರೀಚ ರಾಮನನ್ನು ಗಂಧಹಸ್ತಿ (ಮದ್ದಾನೆ) ಎನ್ನುತ್ತಾ ಅವನ ಪರಾಕ್ರಮವನ್ನು ರಾವಣನಿಗೆ ವಿವರಿಸುತ್ತಾನೆ. ಸೀತಾಪಹರಣದ ಸಲಹೆಯನ್ನು ನೀಡಿ ನಿನ್ನ ತಲೆಯನ್ನು ಕೆಡಿಸಿದವ ಯಾರು, ಅವರನ್ನು ಶಿಕ್ಷಿಸು ಎನ್ನುತ್ತಾನೆ. ರಾವಣನಿಗೆ ತಲೆಗೇರಿದ ಪಿತ್ಥವಿಳಿದು “ಸರಿ ಹಾಗಾದರೆ” ಎಂದು ಲಂಕೆಗೆ ಮರಳುತ್ತಾನೆ.

ಸುಮ್ಮನಿದ್ದ ರಾವಣನನ್ನು ಕೆರಳಿಸಿ ಎಬ್ಬಿಸಿದವಳು ಶೂರ್ಪನಖಿ. ಆಕೆ ಬೊಬ್ಬಿಡುತ್ತಾ ಬಂದು ರಾವಣನಲ್ಲಿ ಖರ ದೂಷಣ ತ್ರಿಶಿರಸ್ಸುಗಳ ವಧೆಯನ್ನು ರಾಮನೊಬ್ಬನೇ ಮಾಡಿರುವುದನ್ನು ವಿವರವಾಗಿ ವರ್ಣಿಸುತ್ತಾಳೆ. ಖರನಲ್ಲಿ ತನಗೆ ರಾಮಾದಿಗಳ ಮಾಂಸದ ಆಸೆಯಿದೆ ಎಂದು ಯುದ್ಧಕ್ಕೆ ಪ್ರಚೋದಿಸಿ ಕೊಲ್ಲಿಸಲು ಕಾರಣಳಾದ ರಾಕ್ಷಸಿ ರಾವಣನ ಹತ್ತಿರ ಸೀತೆಯ ಸೌಂದರ್ಯವನ್ನು ಹೊಗಳುತ್ತಾ ಆಕೆ ರಾವಣನಿಗೆ ಯೋಗ್ಯಳೆಂದು ತಿಳಿದು ಅವಳನ್ನು ತರುವ ಸಲುವಾಗಿ ಹೋದಾಗ ಈ ಎಲ್ಲ ಕೃತ್ಯ ಆಯಿತೆನ್ನುತ್ತಾಳೆ. ರಾಮನ ಪರಾಕ್ರಮವನ್ನು ಯಥಾವತ್ತಾಗಿ ವರ್ಣಿಸಿ ಆಮೇಲೆ ಸೀತೆಯ ಸೌಂದರ್ಯವನ್ನೂ ವಿವರವಾಗಿ ತಿಳಿಸುತ್ತಾಳೆ. ಒಂದು ಹೆಣ್ಣೇ ಇನ್ನೊಬ್ಬ ಹೆಣ್ಣಿನ ರೂಪವನ್ನು ವರ್ಣಿಸಿದರೆ ಗಂಡಸಿಗೆ ಹೇಗಾಗಬೇಡ. ಸದ್ಧರ್ಮನಾಶಕನಾದ ಮತ್ತು ಪರಸ್ತ್ರೀಯಲ್ಲಿ ಆಸಕ್ತನಾದ ರಾವಣನ ದೌರ್ಬಲ್ಯವನ್ನು ಆಕೆ ಚೆನ್ನಾಗಿ ಬಲ್ಲಳು. (ಸರ್ಗ 32) ರಾವಣ ಜನಸ್ಥಾನವನ್ನು ಅಲಕ್ಷ್ಯ ಮಾಡಿದ ಪರಿಣಾಮವಾಗಿ ಆತನ ಸಾಮ್ರಾಜ್ಯ ರಾಮನಿಂದ ಅಪಾಯದಲ್ಲಿದೆ. ಖರಾದಿಗಳಿಗೆ ಮತ್ತು ತನಗೆ ಆ ಸ್ಥಿತಿ ಬರಲು ಕಾರಣವಾಗಿರುವುದು ಸೀತೆಯನ್ನು ರಾವಣನಿಗೆ ತರಬೇಕೆನ್ನುವ ತಮ್ಮ ಕಾರ್ಯಗಳಿಂದಾಗಿ. ಹಾಗಾಗಿ ಪ್ರತೀಕಾರಕ್ಕಾಗಿ ರಾವಣ ಸೇಡನ್ನು ತೀರಿಸಿಕೊಳ್ಳಲೇಬೇಕು ಎಂದು ಅವಳು ಆಗ್ರಹಿಸುತ್ತಾಳೆ.

shurpanakha

ಅವಳ ಈ ಕುಮ್ಮಕ್ಕಿನಿಂದ ವೈದೇಹಿಯ ವಿಷಯದಲ್ಲಿ ರಾವಣ ಕಾಮಪೀಡಿತನಾದ. ಅವಳನ್ನು ತರಲೇ ಬೇಕೆಂದು ನಿಶ್ಚಯಿಸಿ ಮತ್ತೆ ಮಾರೀಚನಲ್ಲಿಗೆ ಬಂದು ಆತ ಸೀತಾಪಹರಣದ ಕಾರ್ಯದಲ್ಲಿ ಮೃಗವಾಗಿ ಸಹಕರಿಸಲೇಬೇಕು. ಇಲ್ಲದಿದ್ದರೆ ಆತನನ್ನು ಕೊಲ್ಲುವೆ ಎಂದು ಬೆದರಿಕೆ ಹಾಕುತ್ತಾನೆ. ರಾವಣನಿಂದಲೋ ರಾಮನಿಂದಲೋ ತಾನು ಸಾಯಲೇಬೇಕಾಗಿರುವಾಗ ರಾಮನಿಂದ ಸಾಯುವುದೇ ಲೇಸು ಎಂದು ಆತ ರಾವಣನಿಗೆ ಸಹಕರಿಸಲು ಒಪ್ಪುತ್ತಾನೆ. ಇಲ್ಲಿಂದ ಮುಂದೆ ಪಂಚವಟಿಯ ಪ್ರದೇಶದಲ್ಲಿ ಚಿನ್ನದ ಜಿಂಕೆಯನ್ನು ನೋಡಿ ಸೀತೆ ಆಕರ್ಷಿತಳಾಗುವುದು ಎಲ್ಲವೂ ನಮಗೆ ತಿಳಿದಿರುವ ಕಥೆಯಂತೆಯೇ ಸಾಗುತ್ತದೆ. ಆ ಮಿಗವನ್ನು ಗಮನಿಸಿದ ಲಕ್ಷ್ಮಣನಿಗೆ ಅದು ಮಾಯಾಮೃಗ, ಮಾರೀಚನೇ ಈ ವೇಷವನ್ನು ತಾಳಿ ಬಂದಿದ್ದಾನೆಂದು ತಿಳಿಯಿತು. ಅದನ್ನೇ ಅಣ್ಣನಿಗೆ ಹೇಳುತ್ತಾನೆ. ಸೀತೆ ಲಕ್ಷ್ಮಣನ ಮಾತನ್ನು ಅರ್ಧಕ್ಕೇ ತಡೆದು ತನಗೆ ಅದು ಬೇಕು ಎಂದು ಹಟಹಿಡಿಯುತ್ತಾಳೆ. ತಾನು ಈ ಮೃಗವನ್ನು ಬಯಸುವುದು ಯುಕ್ತವಲ್ಲವೆಂದೂ ಸಹ ಅವಳಿಗೆ ಅನಿಸಿದೆ. “ಕಾಮವೃತ್ತಮಿದಂ ರೌದ್ರಂ ಸ್ತ್ರೀಣಾಮಸದೃಶಂ ಮತಮ್”- ತನಗುಂಟಾದ ಮೃಗದ ಮೇಲಿನ ಕಾಮನೆಯು ಸಾಧ್ವಿಯರಿಗೆ ಉಚಿತವಲ್ಲವೆಂದು ತಿಳಿದಿದೆ. ಆದರೂ ಇದು ತನಗೆ ಬೇಕು ಎಂದು ಹಟ ಹಿಡಿಯುತ್ತಾಳೆ.

ಲಕ್ಷ್ಮಣನಿಗೆ ತಿಳಿದ ಸತ್ಯ ರಾಮ ಸೀತೆಯರಿಗೆ ಅರಿವಾಗದೇ ಹೋದೀತೋ! ಆದರೂ ಏನೂ ತಿಳಿದಿಲ್ಲದಂತೆ ನಟಿಸುತ್ತಿದ್ದಂತೆ ಅನಿಸುತ್ತದೆ. ವನವಾಸ ಮುಗಿಸಿ ಅಯೋಧ್ಯೆಗೆ ತೆರಳುವಾಗ ಈ ಜಿಂಕೆಯನ್ನು ಕೊಂಡೊಯ್ದರೆ ಕೌಸಲ್ಯೆ, ಸುಮಿತ್ರೆಯರೂ ಸಂತಸ ಪಡುತ್ತಾರೆ ಎಂದು ಹೇಳುವ ಸೀತೆ ನಂತರ “ಇದು ಜೀವಂತ ಸಿಗದೇ ಇದ್ದರೆ ಇದನ್ನು ಕೊಂದು ಅದರ ಚರ್ಮವನ್ನು ತೆಗೆದುಕೊಂಡು ಬಾ. ನಾನು ಅದರ ಮೇಲೆ ಕುಳಿತುಕೊಳ್ಳುವೆ” ಎನ್ನುತ್ತಾಳೆ. ಜೀವಂತವಾಗಿ ಹಿಡಿದು ತಾ, ಎನ್ನುವ ಮಾತಾಡಿದವಳು ತಕ್ಷಣವೇ ಅದನ್ನು ಕೊಂದು ಚರ್ಮವನ್ನಾದರೂ ತೆಗೆದುಕೊಂಡು ಬಾ ಎನ್ನುವ ಮಾತುಗಳಿಂದ ರಾಮ ಸೀತೆಯರಿಗೂ ಈ ಕುರಿತು ಅರಿವಿತ್ತು. ಎಲ್ಲವನ್ನೂ ಲೆಕ್ಕಾಚಾರದ ಮೂಲಕವೇ ದಾಳ ಹಾಕುತ್ತಿರುವಂತಹ ಅರ್ಥವನ್ನೂ ನೀಡುತ್ತದೆ. ಆದರೆ ಸೀತೆಗೆ ಸ್ಪಷ್ಟವಾಗಿ ತಾನು ಪಾತ್ರಧಾರಿಯೋ ಅಥವಾ ಅಲ್ಲವೋ ಎನ್ನುವುದರ ಅರಿವಿದೆ ಎನ್ನುವುದಕ್ಕೆ ಸಾಕ್ಷಿ ರಾಮನ ವಿಷಯದಲ್ಲಿ ಸಿಗುವಷ್ಟು ಸಿಗುವುದಿಲ್ಲ. ಇಲ್ಲಿ ಹೇಳಿದ “ಮಿಗವನ್ನು ಕೊಂದಾದರೂ ಜಿಂಕೆಯನ್ನು ತಾ, ಚರ್ಮದ ಮೇಲೆ ಕುಳಿತುಕೊಳ್ಳುವೆ” ಎನ್ನುವ ಮಾತುಗಳು ಈ ವಿಷಯದಲ್ಲಿ ಪುಷ್ಟಿ ಕೊಡಲಾರವು. ಹಾಗಾಗಿ ಸೀತೆಗಾಗಲೀ, ಲಕ್ಷ್ಮಣನಿಗಾಗಲೀ ಇದೊಂದು ದೇವತೆಗಳು ಬಯಸಿದ ವ್ಯೂಹ, ಅದರ ಲಕ್ಷ್ಯ ರಾವಣ, ಅವನ ವಧೆಯಲ್ಲಿ ಇವುಗಳೆಲ್ಲವೂ ಪರ್ಯಾವಸಾನವಾಗಬೇಕು ಎನ್ನುವುದರ ಅರಿವಿಲ್ಲ.

ರಾಮ “ಲಕ್ಷ್ಮಣ, ಈ ಜಿಂಕೆ ಮಾರೀಚನ ಮೋಸವೇ ಹೌದಾದರೆ ಅವನನ್ನು ಕೊಲ್ಲುವುದು ತನ್ನ ಧರ್ಮ, ಅದನ್ನು ಕೊಂದು ಅದರ ಚರ್ಮವನ್ನು ತರುತ್ತೇನೆ, ಸೀತೆಯ ರಕ್ಷಣೆಯನ್ನು ಜಾಗರೂಕತೆಯಿಂದ ಮಾಡುತ್ತಿರು, ಜಟಾಯುವಿನ ಸಹಾಯವನ್ನೂ ಅಗತ್ಯವಿದ್ದರೆ ಪಡೆ” ಎನ್ನುವ ಮಾತುಗಳ ಅರ್ಥವನ್ನು ವಿಶ್ಲೇಷಿಸಿದರೆ ಇವೆಲ್ಲವೂ ಯಾವುದೋ ಒಂದು ತಂತ್ರಗಾರಿಕೆಯ ಮರ್ಮದಿಂದ ಕೂಡಿದೆ ಎನ್ನುವುದು ಸ್ಪಷ್ಟ. ಪತಂಗದ ಹುಳ ತಾನಾಗಿಯೇ ಹೋಗಿ ದೀಪದ ಜ್ವಾಲೆಗೆ ಬೀಳುವಂತೆ ಇಲ್ಲಿನ ಸನ್ನಿವೇಶದಲ್ಲಿ ಸ್ಪಷ್ಟವಾಗಿದೆ.

ಪ್ರದಕ್ಷಿಣೇನಾತಿಬಲೇನ ಪಕ್ಷಿಣಾ ಜಟಾಯುಷಾ ಬುದ್ಧಿಮತಾ ಚ ಲಕ್ಷ್ಮಣ.
ಭವಾಪ್ರಮತ್ತಃ ಪರಿಗೃಹ್ಯ ಮೈಥಿಲೀಂ ಪ್ರತಿಕ್ಷಣಂ ಸರ್ವತ ಏವ ಶಙ್ಕಿತಃ৷৷ಅ.43.50৷৷

“ಲಕ್ಷ್ಮಣ ! ಬಹಳ ದಕ್ಷನಾದ, ಅತಿಬಲಿಷ್ಠನಾದ, ಬುದ್ಧಿವಂತನಾದ, ಸುತ್ತಲೂ ಹಾರುತ್ತಿರುವ ಜಟಾಯುವಿನ ಸಹಕಾರವನ್ನು ಪಡೆದು ಪ್ರತಿಕ್ಷಣದಲ್ಲಿಯೂ ಆಪತ್ತು ಸಂಭವಿಸುವದೆನ್ನುವ ಶಂಕೆ ಪಡುತ್ತಾ ಜಾಗರೂಕನಾಗಿರುತ್ತಾ ಸೀತೆಯನ್ನು ಎಲ್ಲಾ ದಿಕ್ಕುಗಳಿಂದಲೂ ರಕ್ಷಿಸು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೀತಾಪಹಾರದ ಹಿಂದಿನ ಕುತೂಹಲಕಾರಿ ವಿಷಯಗಳು

ಜಟಾಯುವಿನ ಹೆಸರನ್ನು ರಾಮ ಉಲ್ಲೇಖಿಸಿರುವುದನ್ನು ಗಮನಿಸಿದರೆ ರಾಮನಿಗೆ ಜಟಾಯುವಿನ ಮಿತ್ರತ್ವವೂ ಇತ್ತೆನ್ನುವುದು ಅರಿವಾಗುತ್ತದೆ. ರಾಮನ ಈ ಎಲ್ಲ ಕಾರ್ಯಗಳ ಹಿಂದೆ ಅಗಸ್ತ್ಯಾಶ್ರಮ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಗಸ್ತ್ಯರು ರಾಮನಿಗೆ ವೈಷ್ಣವ ಧನುಸ್ಸನ್ನೂ, ಇಂದ್ರನಿಂದ ಅಗಸ್ತ್ಯರಿಗೆ ಕೊಡಲ್ಪಟ್ಟಂತಹ ಚಿನ್ನದ ರೆಕ್ಕೆಗಳಿರುವ ಅಕ್ಷಯವಾದ ಎರಡು ಬತ್ತಳಿಕೆಗಳನ್ನೂ ಕೊಡುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ ರಾವಣನ ವಧೆಗಾಗಿಯೇ ರಾಮಾವತಾರವಾಗಿರುವುದು. ಅದಕ್ಕೆ ಪೂರ್ವಭಾವಿಯಾಗಿ ಅಗಸ್ತ್ಯರ ಆಶ್ರಮದಲ್ಲಿ ರಾಮನಿಗೆ ಕೊಡಲ್ಪಟ್ಟ ಧನುಸ್ಸು ಮಹಾವಿಷ್ಣುವೇ ಹಿಂದೆ ರಾಕ್ಷಸರನ್ನು ಕೊಲ್ಲಲು ಬಳಸಿರುವಂತಹದ್ದು. ಆಗ ಬಿಲವನ್ನು ಸೇರಿರುವ ರಾಕ್ಷಸರೆಲ್ಲರೂ ರಾವಣನಿಂದಾಗಿ ಲಂಕೆಯನ್ನು ಆಶ್ರಯಿಸಿರುವ ವಿಷಯಗಳೆಲ್ಲವೂ ಒಂದಕ್ಕೊಂದು ಸೇರಿಕೊಂಡಿದೆ. ರಾಮನನ್ನು ಸದಾ ಅಗಸ್ತ್ಯರು ಗಮನಿಸುತ್ತಿದ್ದರು ಎನ್ನುವುದಕ್ಕೆ ರಾವಣನನ್ನು ಕೊಲ್ಲಲಾಗದೇ ರಾಮ ಆಯಾಸಗೊಂಡಾಗ ಲಂಕೆಯ ರಣಭೂಮಿಗೆ ಬಂದು ಆದಿತ್ಯಹೃದಯವನ್ನು ಬೋಧಿಸಿರುವುದನ್ನು ಉದಾಹರಿಸಬಹುದು.

ಅವರ ಆಶ್ರಮದಿಂದ ಎರಡು ಯೋಜನ ದೂರದಲ್ಲಿ ಇರುವ ಪಂಚವಟಿ ಪ್ರದೇಶದಲ್ಲಿ ವಾಸಮಾಡಲು ಸೂಚಿಸಿದ ಉದ್ದೇಶವೂ ತನ್ನ ಕಣ್ಣಳತೆಯಲ್ಲಿ ರಾಮ ಇರಬೇಕೆನ್ನುವುದು. ಅಗಸ್ತ್ಯರ ಆಶ್ರಮದ ಹೊರ ಆವರಣದಲ್ಲಿಯೇ ರಾಮನಿಗೆ ಜಟಾಯುವಿನ ಪರಿಚಯವಾಗಿ ಆತನೇ ರಾಮ ಲಕ್ಷ್ಮಣರಿಬ್ಬರೂ ಆಶ್ರಮದಿಂದ ಹೊರ ಹೋಗಬೇಕಾಗಿರುವ ಸಂದರ್ಭಗಳಲ್ಲಿ ತಾನು ಸೀತಾದೇವಿಯನ್ನು ಸಂರಕ್ಷಿಸುತ್ತೇನೆ ಎಂದು ಮಾತನ್ನು ಜಟಾಯು ಆಡುತ್ತಾನೆ. ಹೀಗಾಗಿ ಇವೆಲ್ಲವೂ ರಾವಣನ ವಧೆಗಾಗಿ ರಾಮನಿಗೆ ಅರಿವಿದ್ದೋ ಅಥವಾ ಮುಂಗಾಣ್ಕೆಯನ್ನು ಬಲ್ಲ ದೇವತೆಗಳೇ ಹೀಗೆ ವ್ಯೂಹವನ್ನು ಬಲಿದಿದ್ದಾರೆ ಎಂದುಕೊಳ್ಳಬಹುದು.

ಈ ವ್ಯೂಹದಲ್ಲಿ ರಾವಣ ತನಗರಿವಿಲ್ಲದೇ ಸಿಕ್ಕಿಬಿದ್ದ ವಿವರವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ

Continue Reading

ಕಲೆ/ಸಾಹಿತ್ಯ

Bhashavidya Kannada: ಜಯನಗರದಲ್ಲಿ ಡಿ. 17ರಂದು ʼಕನ್ನಡದಲ್ಲಿ ಮಾತಾಡೋಣʼ ಕಾರ್ಯಾಗಾರ

Bhashavidya Workshop: ʼಕನ್ನಡದಲ್ಲಿ ಮಾತಾಡೋಣʼ ಕನ್ನಡ ಕಲಿಕಾ ಕಾರ್ಯಾಗಾರವು ಡಿ.17ರಂದು ಬೆಂಗಳೂರಿನ ಜಯನಗರದ ನ್ಯಾಷನಲ್‌ ಕಾಲೇಜಿನ ಬಿ.ವಿ.ಜಗದೀಶ್‌ ಮಲ್ಟಿಮೀಡಿಯಾ ಸಭಾಂಗಣದಲ್ಲಿ ನಡೆಯಲಿದೆ.

VISTARANEWS.COM


on

KannaDadhalli MaathaaDoNa
Koo

ಬೆಂಗಳೂರು: ಬನಶಂಕರಿಯ ಭಾಷಾವಿದ್ಯಾ ಕನ್ನಡ ಕಲಿಕಾ ಕೇಂದ್ರದ (Bhashavidya Kannada) ವತಿಯಿಂದ ಡಿಸೆಂಬರ್‌ 17ರಂದು ಕನ್ನಡೇತರರು, ವಲಸಿಗರಿಗೆ ʼಕನ್ನಡದಲ್ಲಿ ಮಾತಾಡೋಣʼ (Kannadadhalli Maathaadona) ಕನ್ನಡ ಕಲಿಕಾ ಕಾರ್ಯಾಗಾರವನ್ನು ಜಯನಗರದ ನ್ಯಾಷನಲ್‌ ಕಾಲೇಜಿನ ಬಿ.ವಿ.ಜಗದೀಶ್‌ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಡಿಸೆಂಬರ್‌ 17ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 9.15ಕ್ಕೆ ಉದ್ಘಾಟನೆ ನೆರವೇರಲಿದ್ದು, ಮುಖ್ಯ ಅತಿಥಿಗಳಾಗಿ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್‌ ಕುಮಾರ್‌ ಡಿ.ಕೆ. ಮತ್ತು ನಿವೃತ್ತ ಅಧಿಕಾರಿ ಎ.ಆರ್‌. ವೆಂಕಟರಾಮನ್‌ ಭಾಗವಹಿಸಲಿದ್ದಾರೆ.

ಸಂಜೆ 5.15ಕ್ಕೆ ಲೇಖಕಿ ವೀಣಾ ರಾವ್‌ ರಚನೆಯ ʼಕನ್ನಡದಲ್ಲಿ ಮಾತನಾಡೋಣʼ ಸ್ವಯಂ ಕನ್ನಡ ಕಲಿಕಾ ಅಭ್ಯಾಸ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರಿಸಮ್‌ ಪುಸ್ತಕಾಲಯದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಾಣೇಶ್‌ ಸಿರಿವರ ಭಾಗವಹಿಸಲಿದ್ದಾರೆ. ಪ್ರಿಸಮ್‌ ಮತ್ತು ಏಜ್ಯಾಸ್ ಫೆಡರಲ್ ಲೈಫ್‌ ಇನ್ಶೂರೆನ್ಸ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್‌ ಚಾನೆಲ್‌ ಮಾಧ್ಯಮ ಸಹಯೋಗ ನೀಡಿದೆ.

12 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಆಸಕ್ತ ಮಕ್ಕಳು ಮತ್ತು ವಯಸ್ಕರು ಕನ್ನಡ ಕಲಿಕಾ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, ಪದಸಂಪತ್ತು ವೃದ್ಧಿ, ವಾಕ್ಯ ರಚನೆ, ಸಂವಾದ ಸೇರಿ ವಿವಿಧ ಚಟುವಟಿಕೆಗಳು ನಡೆಯಲಿದೆ. ನೋಂದಣಿ ಶುಲ್ಕ 200 ರೂ. ಇರಲಿದ್ದು, ಆಸಕ್ತರು ಹೆಸರು ನೋಂದಣಿ ಮಾಡಿಸಬಹುದು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಉಚಿತ ಕೈಪಿಡಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9844613467, 9845933246 ಸಂಪರ್ಕಿಸಬಹುದು ಎಂದು ಭಾಷಾವಿದ್ಯಾ ಸಂಸ್ಥೆಯ ವೀಣಾರಾವ್ ಮತ್ತು ವಾಸುಕಿ ಷಣ್ಮುಖಪ್ರಿಯ ತಿಳಿಸಿದ್ದಾರೆ.

ಕನ್ನಡ ಭಾಷಾಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ʼಭಾಷಾವಿದ್ಯಾʼ

ಬೆಂಗಳೂರಿನಲ್ಲಿ ಬಹುತೇಕ ಅನ್ಯಭಾಷಿಕರು ಕನ್ನಡದಲ್ಲಿ ಮಾತನಾಡುತ್ತಿಲ್ಲ. ಬದಲಾಗಿ ಅವರು ತಮ್ಮ ಭಾಷೆಯನ್ನು ನಮ್ಮ ಮೇಲೆ ಹೇರುತ್ತಿರುವ ವಿಚಾರ ಮತ್ತು ಅದರಿಂದ ಉಂಟಾಗುತ್ತಿರುವ ಪ್ರಮಾದ, ಗೊಂದಲ, ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ವಿಷಯಗಳು ತಮ್ಮಿಂದಲೇ ಬೆಳಕಿಗೆ ಬರುತ್ತಿವೆ. ಆದರೆ ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಅವರಿಗೆ ಕನ್ನಡ ಕಲಿಸುವ ಪ್ರಯತ್ನಗಳು ನಮ್ಮಿಂದ ಆಗಬೇಕಾದ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ಅವರಿಗೆ ವಿಭಿನ್ನ ರೀತಿಯಲ್ಲಿ ಕನ್ನಡ ಕಲಿಸುವ ಕೆಲಸಗಳು ಆಗಬೇಕಿವೆ.

ಇದನ್ನೂ ಓದಿ | Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ-ಗಮಕ ಅಧಿವೇಶನ

ಅನ್ಯಭಾಷಿಕರು ಕನ್ನಡ ಕಲಿತು ಕನ್ನಡ ಭಾಷೆಯನ್ನೂ ಮತ್ತು ಕನ್ನಡ ಭಾಷಿಕರನ್ನು ಪ್ರೀತಿಸುವಂತಾಗಬೇಕು. ನಿಯಮಗಳ ಮೂಲಕ ಸರ್ಕಾರಗಳಿಂದ ಒಂದಿಷ್ಟು ಕೆಲಸಗಳಾದರೂ, ಅವರಿಗೆ ಕನ್ನಡನುಡಿ ಕಲಿಸುವ ಕೆಲಸವನ್ನು ಖಾಸಗೀ ಸಂಸ್ಥೆಗಳೇ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ದಿಸೆಯಲ್ಲಿ ಕನ್ನಡ ಕಲಿಕೆ ಮತ್ತು ಭಾಷಾಭಿವೃದ್ಧಿಯ ಕುರಿತಾದ ಕೆಲಸಗಳನ್ನು ಆರಂಭದಿಂದಲೂ ಮಾಡಿಕೊಂಡು ಬರುತ್ತಿರುವ ಭಾಷಾವಿದ್ಯಾ ಅಡಿಯಲ್ಲಿ ಈಗ ಕನ್ನಡೇತರರು ಅಥವಾ ವಲಸಿಗರಿಗಾಗಿ ಕನ್ನಡ ಮಾತುಗಾರಿಕೆಯ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
kaivara tatayya
ಅಂಕಣ18 mins ago

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Madhu Bangarappa Beluru Gopalakrishna
ಅಂಕಣ33 mins ago

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Rain News
ಉಡುಪಿ33 mins ago

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Vistara Editorial, Let the strengthening government schools
ಕರ್ನಾಟಕ48 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ8 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ8 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ8 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌