ಪ್ರೀತಿಸಿದವನ ಮೇಲೆ ರೇಪ್‌ ದೂರು, ಅಂಗದಾನ ಮಾಡಿಕೊಂಡು ಯುವಕ ಆತ್ಮಹತ್ಯೆ - Vistara News

ಕರ್ನಾಟಕ

ಪ್ರೀತಿಸಿದವನ ಮೇಲೆ ರೇಪ್‌ ದೂರು, ಅಂಗದಾನ ಮಾಡಿಕೊಂಡು ಯುವಕ ಆತ್ಮಹತ್ಯೆ

ಬಹುವರ್ಷಗಳಿಂದ ಪ್ರೀತಿಸಿದ ಯುವಕನೊಬ್ಬ, ಯುವತಿಯ ಮನೆಯವರಿಂದ ಕೊಲೆ ಬೆದರಿಕೆ, ಅತ್ಯಾಚಾರ ದೂರಿನ ಬೆದರಿಕೆಗೆ ಒಳಗಾಗಿದ್ದೇನೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

VISTARANEWS.COM


on

youth suicide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಭಗ್ನ ಪ್ರೇಮ ಪ್ರಕರಣ ಹಾಗೂ ಅತ್ಯಾಚಾರದ ದೂರು ಕಾರಣವಾಗಿದೆ ಎಂದು ತಿಳಿದುಬಂದಿದೆ. ಸಾಯುವ ಮುನ್ನ ಯುವಕ ಅಂಗದಾನ ಮಾಡಿದ್ದಾನೆ.

ಹಿತ್ತಲ ಗ್ರಾಮದ ಮದನ್ ಕುಮಾರ್ (24) ಮೃತ ಯುವಕ. ವೈರಿಂಗ್ ಕೆಲಸ ಮಾಡಿಕೊಂಡಿದ್ದ ಮದನ್ ಕುಮಾರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಪ್ರಕರಣ ಆತ್ಮಹತ್ಯೆಗೆ ಕಾರಣ ಎಂದ ಕುಟುಂಬಸ್ಥರು ಹೇಳಿದ್ದಾರೆ.

ಅದೇ ಗ್ರಾಮದ ಯುವತಿಯನ್ನು ಮದನ್ ಕುಮಾರ್ ಪ್ರೀತಿಸುತ್ತಿದ್ದ. ಹಲವು ವರ್ಷಗಳಿಂದ ಇಬ್ಬರ ನಡುವೆ ಪ್ರೀತಿಯಿತ್ತು. ಆದರೆ ಯುವತಿ ಮನೆಯವರಿಂದ ಈತನ ಮೇಲೆ ಕಿರುಕುಳ ನಡೆಯುತ್ತಿತ್ತು. ಅವರು ಮದನ್ ಕುಮಾರ್ ಮೇಲೆ ಅತ್ಯಾಚಾರ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿತ್ತು. ಯುವತಿ ಮನೆಯವರು 25 ಲಕ್ಷ ರೂ. ನೀಡಲು ಒತ್ತಡ ಹಾಕಿದ್ದರು ಎಂದು ಯುವಕನ ಕುಟುಂಬದವರು ಆರೋಪಿಸಿದ್ದು, ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ನಡುವೆ, ಡೆತ್‌ ನೋಟ್‌ ಬರೆದಿಟ್ಟಿರುವ ಯುವಕ, ತನ್ನ ಕಣ್ಣು ಮತ್ತಿತರ ಅಂಗಾಂಗಗಳನ್ನು ದಾನ ಮಾಡುವಂತೆಯೂ ಬರೆದಿಟ್ಟಿದ್ದಾನೆ. ಯುವತಿಯ ತಂದೆ ಮಂಜಪ್ಪ, ಅವರ ಪತ್ನಿ ಮತ್ತು ಮಗಳು ಕೊಲೆ ಬೆದರಿಕೆ ಒಡ್ಡಿದ್ದಾರೆ. ನನ್ನ ಫೋನ್‌ನಲ್ಲಿ ಕೊಲೆ ಬೆದರಿಕೆ ರೆಕಾರ್ಡಿಂಗ್ ಇದೆ. ಅತ್ಯಾಚಾರದ ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿದ್ದಾರೆ. ಅಪಹರಣ ಮಾಡಿಯೂ ಕೊಲೆಗೆ ಯತ್ನಿಸಿದ್ದರು. ಮಂಜಪ್ಪ, ಗೀತಮ್ಮ, ಗುರುರಾಜ್, ಕಿರಣ್, ಶಿವಪ್ಪ ತನ್ನ ಸಾವಿಗೆ ಕಾರಣ ಎಂದು ಯುವಕ ಬರೆದಿಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | ವಿಮ್ಸ್‌ ಆಸ್ಪತ್ರೆ ಸಾವಿನ ಹೊಣೆ ಹೊರದ ಸರ್ಕಾರ: ಆಕಸ್ಮಿಕವಲ್ಲ, ಕೊಲೆ ಎಂದ ಸಿದ್ದರಾಮಯ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Hero MotoCorp: ಹೊಸ ಬೈಕ್‌ ‘ದಿ ಸೆಂಟೆನಿಯಲ್’ ಪರಿಚಯಿಸಿದ ಹೀರೋ ಮೋಟೋಕಾರ್ಪ್

Hero MotoCorp: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ ಸ್ಥಾಪಕ, ಅಧ್ಯಕ್ಷ ದಿ. ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101 ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

VISTARANEWS.COM


on

Hero MotoCorp has introduced the new motorcycle The Centennial
Koo

ಬೆಂಗಳೂರು: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ (Hero MotoCorp) ಸ್ಥಾಪಕ, ಅಧ್ಯಕ್ಷ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

ಈ ಕುರಿತು ಹೀರೋ ಮೋಟೋಕಾರ್ಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಪವನ್ ಮುಂಜಾಲ್ ಮಾತನಾಡಿ, ತಮ್ಮ ತಂದೆ ಹಾಗೂ ಹೀರೋ ಮೋಟೋಕಾರ್ಪ್‌ನ ಸ್ಥಾಪಕ ಚೇರ್ಮನ್ ಆದ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ ಅವರ ಶತಮಾನೋತ್ಸವದ ಒಂದು ವರ್ಷದ ಪೂರ್ಣಗೊಳ್ಳುವಿಕೆಯನ್ನು ನಾವು ಆಚರಿಸುತ್ತಿರುವಂತಹ ಸಂದರ್ಭದಲ್ಲಿ ಎಂಜಿನಿಯರಿಂಗ್ ಅದ್ಭುತವಾದ “ದಿ ಸೆಂಟೆನಿಯಲ್” (The Centennial) ಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಅತೀವ ಉತ್ಸಾಹ ಮತ್ತು ಹೆಮ್ಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಭಾರತದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (CIT) ಮತ್ತು ಜರ್ಮನಿಯ ಹೀರೋ ಟೆಕ್ ಸೆಂಟರ್ (TCG) ನ ಜಾಗತಿಕ ನಿಪುಣರು ʼದಿ ಸೆಂಟೆನಿಯಲ್ʼ ಅನ್ನು ಪರಿಕಲ್ಪಿಸಿ, ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಇದರ ಆವಿಷ್ಕಾರ ಮತ್ತು ಅತ್ಯುತ್ಕೃಷ್ಟತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ, ಕೇವಲ 100 ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಯೂನಿಟ್‌ಗಳೊಂದಿಗೆ, ಇದು ಪ್ರೀಮಿಯಮ್ ಕಾರ್ಯಕ್ಷಮತೆ ಹಾಗೂ ಕಲಾಕೃತಿಯ ಆಕರವಾಗಿದೆ.

ದಿ ಸೆಂಟೆನಿಯಲ್

ʼದಿ ಸೆಂಟೆನಿಯಲ್‌ʼ ವಿಶಿಷ್ಟವಾದ ಅಂಶಗಳು, ವರ್ಧಿತ ಚಾಲನಾ ಅನುಭವಕ್ಕಾಗಿ ಹಗುರತೂಕದ ಅಲ್ಯುಮಿನಿಯಮ್ ಸ್ವಿನ್‌ಗರ್ಮ್ ಮತ್ತು ತೆಳುವಾದ ಸೌಂದರ್ಯ ಹಾಗೂ ರಚನಾತ್ಮಕ ದೃಢತೆಗಾಗಿ ಹೊಸದಾಗಿ ವಿನ್ಯಾಸಗೊಂಡಿರುವ ಇಂಗಾಲ ಫೈಬರ್‌ನ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಹ್ಯಾಂಡಲ್‌ಬಾರ್‌ಗಳು, ಹ್ಯಾಂಡಲ್‌ಬಾರ್ ಮೌಂಟ್ಸ್, ಟ್ರಿಪಲ್ ಕ್ಲಾಂಪ್ಸ್, ಮತ್ತು ರೇರ್-ಸೆಟ್ ಫುಟ್ ಪೆಗ್ಸ್ ಒಳಗೊಂಡಂತೆ, ’ದಿ ಸೆಂಟೆನಿಯಲ್ʼ ನ ಗುಣವಿಶೇಷತೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿ, ಯಾಂತ್ರೀಕೃತಗೊಳಿಸಿ ಆನೋಡೈಜ್ಡ್ ಮಾಡಲಾಗಿದೆ.

ಮೆಚ್ಚಿಕೊಳ್ಳುವಂತಹ ಕಾರ್ಯಕ್ಷಮತೆ ಹಾಗೂ ಚುರುಕುತನ ಒದಗಿಸುವ ಈ ಬೈಕ್, 43-ಮಿ.ಮೀ ತಲೆಕೆಳಗಾದ ಫ್ರಂಟ್ ಸಸ್ಪೆನ್ಶನ್‌ನೊಂದಿಗೆ ಸಜ್ಜುಗೊಂಡಿದೆ.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ʼದಿ ಸೆಂಟೆನಿಯಲ್‌ʼ ಬೈಕ್‌ 158 ಕಿಲೋ ಕಡಿಮೆ ಕರ್ಬ್ ತೂಕದೊಂದಿಗೆ ’ದಿ ಸೆಂಟೆನಿಯಲ್’ಅತ್ಯಂತ ಹಗುರವಾಗಿದ್ದು, ಸುಧಾರಿತ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ʼದಿ ಸೆಂಟೆನಿಯಲ್ʼ ನ ಡೆಲಿವರಿ, ಸೆಪ್ಟೆಂಬರ್ 2024ರಿಂದ ಆರಂಭವಾಗಲಿದೆ.

Continue Reading

ಕರ್ನಾಟಕ

Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

Kannada New Movie: ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ” ಜಿಗರ್” ಚಿತ್ರ ಈ ವಾರ (ಜುಲೈ 5) ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯು.ಕೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿರುವ, ಸೂರಿ ಕುಂದರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಈಗಾಗಲೇ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಮನ ಗೆದ್ದಿದೆ.

VISTARANEWS.COM


on

Praveen Tej starrer Jigar released on July 5
Koo

ಬೆಂಗಳೂರು: ಯು.ಕೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿರುವ, ಸೂರಿ ಕುಂದರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “ಜಿಗರ್” ಚಿತ್ರ (Kannada New Movie) ಈ ವಾರ ಜುಲೈ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈಗಾಗಲೇ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಮನ ಗೆದ್ದಿದೆ. ಚಿತ್ರ ಕೂಡ ಯಶಸ್ವಿಯಾಗುವ ಭರವಸೆ ಚಿತ್ರ ತಂಡಕ್ಕಿದೆ.

ಶಿವಸೇನ ಛಾಯಾಗ್ರಹಣ, ಜ್ಞಾನೇಶ್ ಮಠದ್ ಸಂಕಲನ, ಧನಂಜಯ ಬಿ. ನೃತ್ಯ ನಿರ್ದೇಶನ ಹಾಗೂ ಚೇತನ್ ಡಿಸೋಜ ಅವರ ಸಾಹಸ ನಿರ್ದೇಶನವಿರುವ “ಜಿಗರ್” ಚಿತ್ರಕ್ಕೆ ಸುನೀಲ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಹಾಗೂ ಗಣೇಶ್ ಪರಶುರಾಮ್ ಹಾಡುಗಳನ್ನು ರಚಿಸಿದ್ದಾರೆ.

ಇದನ್ನೂ ಓದಿ: UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

ಪ್ರವೀಣ್ ತೇಜ್ ಅವರಿಗೆ ನಾಯಕಿಯಾಗಿ ವಿಜಯಶ್ರೀ ನಟಿಸಿದ್ದಾರೆ. ವಿನಯಪ್ರಸಾದ್, ಯಶ್ವಂತ್ ಶೆಟ್ಟಿ, ಬಲರಾಜ್ ವಾಡಿ, ಭವ್ಯ ಪೂಜಾರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Continue Reading

ಬೆಂಗಳೂರು

Bengaluru News: ಮಾದಕ ದ್ರವ್ಯ ಅಕ್ರಮ ಸಾಗಾಟ; ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

Bengaluru News: ಬೆಂಗಳೂರಿನಲ್ಲಿ ಕೃಪಾನಿಧಿ ಸಮೂಹ ಸಂಸ್ಥೆಗಳ (ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್) ವತಿಯಿಂದ ಬೆಂಗಳೂರು ಪೊಲೀಸ್ ವೈಟ್ ಫೀಲ್ಡ್ ವಿಭಾಗ ಹಾಗೂ ಮಾರತಹಳ್ಳಿ ಉಪವಿಭಾಗದ ಸಹಯೋಗದಲ್ಲಿ ಮಾದಕ ದ್ರವ್ಯಗಳ ದುರುಪಯೋಗ ಹಾಗೂ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.

VISTARANEWS.COM


on

Special awareness programme on drug abuse illegal trafficking
Koo

ಬೆಂಗಳೂರು: ಕೃಪಾನಿಧಿ ಸಮೂಹ ಸಂಸ್ಥೆಗಳ (ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್) ವತಿಯಿಂದ ಮಾದಕ ದ್ರವ್ಯಗಳ ದುರುಪಯೋಗ ಹಾಗೂ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ವಿಶೇಷ ಜಾಗೃತಿ ಕಾರ್ಯಕ್ರಮ (Bengaluru News) ನಡೆಯಿತು.

ಬೆಂಗಳೂರು ಪೊಲೀಸ್ ವೈಟ್ ಫೀಲ್ಡ್ ವಿಭಾಗ ಹಾಗೂ ಮಾರತಹಳ್ಳಿ ಉಪವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಕ್ರಮ ಸಾಗಾಟಕ್ಕೆ ತಳುಕು ಹಾಕಿಕೊಂಡಂತೆ ಇರುವ ಅಪಾಯಗಳು ಹಾಗೂ ಮಾದಕವಸ್ತು ಮುಕ್ತ ಪ್ರಪಂಚದ ಪ್ರಾಮುಖ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್, ಮಾರತಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಈಶ್ವರ್ ಸಾನಿಕೋಪ್ ಹಾಗೂ ವರ್ತೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯೋಗಾನಂದ್ ಸೋನಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ವಿಶೇಷ ಜಾಗೃತಿ ಕಾರ್ಯಕ್ರಮ

ಇನ್ನು ಕೃಪಾನಿಧಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ದೀರ್ಘ ನಡಿಗೆಯನ್ನು ಹಮ್ಮಿಕೊಂಡಿದ್ದರು. ಆ ಮೂಲಕ ಮಾದಕವಸ್ತು ಮುಕ್ತ ಸಮಾಜಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಇದೇ ಕಾರ್ಯಕ್ರಮದ ಅಂಗವಾಗಿ ಸ್ಕೆಚ್ ಬಿಡಿಸುವುದು ಹಾಗೂ ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಸಾಗಣೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆಯ ಮೂಲಕ ಪ್ರಮುಖ ಸಂದೇಶಗಳನ್ನು ನೀಡಿದರು. ಈ ಸ್ಪರ್ಧೆಗಳಲ್ಲಿ ಉತ್ತೇಜನಕಾರಿ ಆದಂಥ ಕಲಾಕೃತಿಗಳ ಪ್ರದರ್ಶನ ನಡೆಯಿತು. ಅದು ಪುನರ್ವಸತಿಯ ಬಗ್ಗೆ ಆಶಾವಾದ ಮತ್ತು ಮಾದಕ ದ್ರವ್ಯಗಳಿಂದ ಮುಕ್ತವಾದ ಭವಿಷ್ಯ ಹಾಗೂ ಮಾದಕ ವ್ಯಸನದ ಕಠಿಣ ವಾಸ್ತವವನ್ನು ಚಿತ್ರಿಸಿದವು.

ಮಾದಕವಸ್ತುಗಳ ಬಳಕೆ ವಿರುದ್ಧ ಹೋರಾಟದಲ್ಲಿ ಸಮುದಾಯ ಯಾಕೆ ಒಳಗೊಳ್ಳಬೇಕು ಹಾಗೂ ಜಾಗೃತಿ ಎಷ್ಟು ಮಹತ್ವವಾದದ್ದು ಎಂಬುದರ ಕುರಿತು ಡಾ. ಶಿವಕುಮಾರ್ ಹಾಗೂ ಪ್ರಿಯದರ್ಶಿನಿ ಈಶ್ವರ್ ಮಾತನಾಡಿದರು.

ನೃತ್ಯ ಮತ್ತು ಕಿರುನಾಟಕಗಳ ಪ್ರದರ್ಶನ

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕೃಪಾನಿಧಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮತ್ತು ಕಿರುನಾಟಕಗಳ ಪ್ರದರ್ಶನ ನೀಡಿದರು. ಈ ಎಲ್ಲ ಪ್ರದರ್ಶನಗಳು ಸಹ ಮಾದಕದ್ರವ್ಯ ಬಳಕೆಯ ಅಡ್ಡ ಪರಿಣಾಮಗಳೇನು ಎಂಬುದನ್ನು ತಿಳಿಸುವಂತಿದ್ದವು ಹಾಗೂ ವ್ಯಸನಕ್ಕೆ ಬಿದ್ದಲ್ಲಿ ಅದರಿಂದ ಅನುಭವಿಸುವಂಥ ಸಮಸ್ಯೆಗಳು ಎಂಥವು ಎಂಬುದರ ಬಗ್ಗೆ ಕಣ್ತೆರೆಸುವಂತೆ ಇದ್ದವು.

ಇನ್ನು ಇಡೀ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಬೆಂಗಳೂರು ನಗರ ಪೊಲೀಸ್ (ಮಾರತಹಳ್ಳಿ ಉಪವಿಭಾಗ) ಮತ್ತು ಕೃಪಾನಿಧಿ ವಿದ್ಯಾ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮಧ್ಯೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಆ ನಂತರದಲ್ಲಿ ಮಾರತಹಳ್ಳಿ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಮಧ್ಯೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್, ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಈಶ್ವರ್ ಸಾನಿಕೋಪ್ ಮತ್ತು ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನಿರ್ದೇಶಕ ಡಾ. ಸ್ಯಾಮ್ ಪಾಲ್ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಿತು.

ಇದನ್ನೂ ಓದಿ: Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

ಕ್ರಿಕೆಟ್ ಪಂದ್ಯಾವಳಿಯಲ್ಲಿ ವರ್ತೂರು ಪೊಲೀಸ್ ಠಾಣೆ ತಂಡಕ್ಕೆ ಅಗ್ರಸ್ಥಾನ ಮತ್ತು ಎಚ್‌ಎಎಲ್ ಪೊಲೀಸ್ ಠಾಣೆ ರನ್ನರ್ ಅಪ್ ಆಗಿ ಹೊರಹೊಮ್ಮಿದವು.

Continue Reading

ಕರ್ನಾಟಕ

Monsoon session: ರಾಜ್ಯ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್‌; ದಿನಾಂಕ ಫೈನಲ್ ಮಾಡಿದ ಸಿಎಂ

Monsoon session: ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಅಧಿವೇಶನದ ದಿನಾಂಕವನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.

VISTARANEWS.COM


on

Monsoon session
Koo

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ (ಮುಂಗಾರು ಅಧಿವೇಶನ) ಮುಹೂರ್ತ ಫಿಕ್ಸ್‌ ಆಗಿದೆ. ಜುಲೈ 15ರಿಂದ 26ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದಾರೆ.

ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಅಧಿವೇಶನದ ದಿನಾಂಕವನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.

ಇದನ್ನೂ ಓದಿ | Parliament Sessions: ಹಿಂದೂ ಹಿಂಸಾವಾದಿ ಹೇಳಿಕೆ; ಸಂಸತ್‌ನಲ್ಲಿ ರಾಹುಲ್‌-ಮೋದಿ ಜಟಾಪಟಿ

ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ: ಸಿಎಂ

ರಾಜ್ಯದಲ್ಲಿ ಕಳೆದ ವರ್ಷ 2022-23ನೇ ಸಾಲಿನಲ್ಲಿ 1,22,821 ಕೋಟಿ, 2021- 22ರಲ್ಲಿ 1,45,266 ಕೋಟಿ ಜಿಎಸ್‌ಟಿ ಸಂಗ್ರಹಣೆ ಆಗಿತ್ತು. ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. 65 ಸಿಬ್ಬಂದಿಗೆ ಉತ್ತಮವಾಗಿ ತೆರಿಗೆ ಸಂಗ್ರಹ ಮಾಡಿದ್ದಕ್ಕೆ ಪ್ರಶಸ್ತಿ ಕೊಟ್ಟಿದ್ದೀವಿ. ನಮ್ಮಲ್ಲಿ 6 ಸಾವಿರ ವಾಣಿಜ್ಯ ಇಲಾಖೆ ಸಿಬ್ಬಂದಿ ಇದ್ದಾರೆ, ಅವರೆಲ್ಲರೂ ಪ್ರಶಸ್ತಿ ತಗೋಳೋಕೆ ಪ್ರಯತ್ನ ಮಾಡಬೇಕು. ನಮ್ಮ ರಾಜ್ಯದ ಅಧಿಕಾರಿಗಳು ಬೇರೆಯವರಿಗೆ ಪ್ರೇರಣೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಎಸ್‌ಟಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಜಿಎಸ್‌ಟಿ ದಿನದ ವೇಳೆಗೆ ಹೆಚ್ಚು ತೆರಿಗೆ ವಸೂಲಿ ಮಾಡಿ, ಇನ್ನು ಹೆಚ್ಚು ನೌಕರರು ಪ್ರಶಸ್ತಿ ತೆಗೆದುಕೊಳ್ಳಬೇಕು ಎಂದರು.

ನಂತರ ಕರವೇ ನಾರಾಯಣಗೌಡ ನಿಯೋಗ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡಿಗರಿಗೆ ವಿಶೇಷ ಉದ್ಯೋಗ ಮೀಸಲಾತಿ ನೀಡಲು ಹೊಸ ಕಾನೂನು ಜಾರಿಗೆ ತರಬೇಕು ಅಂತ ಹೇಳಿದ್ದಾರೆ. ನಾನು ಅದನ್ನು ಸಂವಿಧಾನ ಹಿನ್ನೆಲೆಯಲ್ಲಿ ಎಜಿ ಜತೆಗೆ ಚರ್ಚೆ ಮಾಡುತ್ತೇನೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡುವುದು ಹಾಗೂ ಕಾನೂನು ಮಾಡುವುದು ಅವರ ಬೇಡಿಕೆಯಾಗಿದೆ. ಅದಕ್ಕೆ ಕಾನೂನು, ಸಂವಿಧಾನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Continue Reading
Advertisement
IND vs SA:
ಪ್ರಮುಖ ಸುದ್ದಿ14 mins ago

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

Viral News
Latest19 mins ago

Viral News: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

Viral Video
Latest20 mins ago

Viral Video: 1 ನಿಮಿಷದಲ್ಲಿ 35 ಪುಲ್-ಅಪ್! ಮೇಜರ್ ಜನರಲ್ ವಿಡಿಯೊ ಫುಲ್ ವೈರಲ್

Hero MotoCorp has introduced the new motorcycle The Centennial
ವಾಣಿಜ್ಯ23 mins ago

Hero MotoCorp: ಹೊಸ ಬೈಕ್‌ ‘ದಿ ಸೆಂಟೆನಿಯಲ್’ ಪರಿಚಯಿಸಿದ ಹೀರೋ ಮೋಟೋಕಾರ್ಪ್

Praveen Tej starrer Jigar released on July 5
ಕರ್ನಾಟಕ26 mins ago

Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ವೈರಲ್ ನ್ಯೂಸ್33 mins ago

Viral News: ಇದೆಂಥಾ ಹುಚ್ಚಾಟ! ಎನ್‌ಡಿಎ ಕಳಪೆ ಪ್ರದರ್ಶನದಿಂದ ಖಿನ್ನತೆ; ವ್ಯಕ್ತಿ ಆತ್ಮಹತ್ಯೆಗೆ ಶರಣು

Hyperpigmentation
ಆರೋಗ್ಯ35 mins ago

Hyperpigmentation: ಕಾಡುವ ಈ ‘ಕಪ್ಪುಕಲೆ’ ಸಮಸ್ಯೆಗೆ ಇಲ್ಲಿದೆ ಪರಿಹಾರ

Viral Video
Latest41 mins ago

Viral Video: ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಪ್ಲೀಸ್‌ ಎಂದ ಸಂಸದೆ; ಹೆಂಗಸರನ್ನು ನೋಡಲ್ಲ ಎಂದ ಸ್ಪೀಕರ್‌!

Viral Video
Latest49 mins ago

Viral Video: ಪ್ರೇಯಸಿಯ ಕಣ್ಮುಂದೆಯೇ ಆಕೆಯ ತಂದೆಯನ್ನು ಬರ್ಬರವಾಗಿ ಕೊಂದ ಪ್ರಿಯಕರ!

Dating Application
Latest57 mins ago

Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌