ವಿಸ್ತಾರ PF info | ಆರೋಗ್ಯ, ಅಂಗವೈಕಲ್ಯಕ್ಕೆ ಪಿಂಚಣಿ ನೆರವು ನೀಡಲು ಇಪಿಎಫ್‌ಒ ಚಿಂತನೆ - Vistara News

ಪ್ರಮುಖ ಸುದ್ದಿ

ವಿಸ್ತಾರ PF info | ಆರೋಗ್ಯ, ಅಂಗವೈಕಲ್ಯಕ್ಕೆ ಪಿಂಚಣಿ ನೆರವು ನೀಡಲು ಇಪಿಎಫ್‌ಒ ಚಿಂತನೆ

ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (EPFO) ತನ್ನ ಸಾಮಾಜಿಕ ಭದ್ರತೆ ಯೋಜನೆಯನ್ನು ಆರೋಗ್ಯ, ಅಂಗವೈಕಲ್ಯ, ಹೆರಿಗೆ ಇತ್ಯಾದಿಗಳಿಗೆ ಪಿಂಚಣಿ ನೆರವಿನ ಮೂಲಕ ವಿಸ್ತರಿಸಲು ಉದ್ದೇಶಿಸಿದೆ.

VISTARANEWS.COM


on

Higher EPS pension EPFO ​​extends deadline to apply for higher pension to June 26 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು (EPFO) ಆರೋಗ್ಯ, ಹೆರಿಗೆ, ಅಂಗ ವೈಕಲ್ಯಕ್ಕೆ ಸಂಬಂಧಿಸಿ ಪಿಂಚಣಿ ನೆರವು ನೀಡಲು ಚಿಂತನೆ ನಡೆಸಿದೆ.

ಇಪಿಎಫ್‌ಒ ಪ್ರಾಥಮಿಕ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ದೃಷ್ಟಿಯಿಂದ ಹೊಸ ಸೌಲಭ್ಯಗಳನ್ನು ನೀಡಲು ಪರಿಶೀಲಿಸುತ್ತಿದೆ.

ಬೇಸಿಕ್‌ ಸೋಶಿಯಲ್‌ ಪ್ರೊಟೆಕ್ಷನ್‌ ಫ್ಲೋರ್‌ ( Basic social protection floor-SPF) ಅನ್ನು ಒದಗಿಸಲು ಚಿಂತನೆ ನಡೆಸಿದೆ. ಈ ಯೋಜನೆಯ ಅಡಿಯಲ್ಲಿ ಆರೋಗ್ಯ, ಹೆರಿಗೆ, ಅಂಗವೈಕಲ್ಯಕ್ಕೆ ಸಂಬಂಧಿಸಿ ಪಿಂಚಣಿ ದೊರೆಯಲಿದೆ.ಈ ಹೊಸ ಯೋಜನೆಯು ಬಡತನ ನಿರ್ಮೂಲನೆಯ ಉದ್ದೇಶವನ್ನು ಹೊಂದಿದೆ. ಪ್ರಸ್ತಾಪಕ್ಕೆ ಸಂಬಂಧಿಸಿ ಪ್ರಾಥಮಿಕ ಹಂತದ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಇಪಿಎಫ್‌ಒ 2021-22ರ ಅವಧಿಗೆ 8.10% ಬಡ್ಡಿ ದರ ನಿಗದಿಪಡಿಸಿದೆ. ೨೦೨೦-೨೧ರಲ್ಲಿ 8.5% ಬಡ್ಡಿ ದರ ನೀಡಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna case : ಪ್ರಜ್ವಲ್​ನ ಪುರುಷತ್ವ ಸಾಮರ್ಥ್ಯ ಪರೀಕ್ಷೆ ನಡೆಸಲು ಕೋರ್ಟ್​ ಸಮ್ಮತಿ

Prajwal Revanna case : ಜ್ವಲ್ ಅವರ ಎಸ್​ಐಟಿ ಕಸ್ಟಡಿ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಅಧಿಕಾರಿಗಳು ಪರಿಕ್ಷೆ ನಡೆಸಿದ್ದಾರೆ. ಇದೇ ವೇಳೆ ಹಾಸನ ಹಾಗು ಬಸವನಗುಡಿಯ ಮನೆಗೆ ಕರೆದೊಯ್ದು ಸ್ಪಾಟ್ ಮಹಜರ್ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

VISTARANEWS.COM


on

Prajwal Revanna
Koo

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna case ) ಅತ್ಯಾಚಾರ ಮಾಡಲು ಸಮರ್ಥರೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಲ್ಲಿ ಪತ್ತೆ ಹಚ್ಚಲು ಪ್ರಮುಖ ವೈದ್ಯಕೀಯ ವಿಧಾನವಾಗಿರುವ ಪುರುಷತ್ವ ಪರೀಕ್ಷೆಗೆ ಕೋರ್ಟ್​ ಒಪ್ಪಿಗೆ ನೀಡಿದೆ. ಹೀಗಾಗಿ ಎಸ್​ಐಟಿ ಅಧಿಕಾರಿಗಳು ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪುರುಷತ್ವ ಪರೀಕ್ಷೆ ನಡೆಸುತ್ತಿದ್ದಾರೆ.

ಸಾವಿರಾರು ಹೆಣ್ಣು ಮಕ್ಕಳನ್ನು ವಯಸ್ಸಿನ ಭೇದವಿಲ್ಲದೇ ಅತ್ಯಾಚಾರ ಮಾಡಿರುವುದಲ್ಲದೇ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಎಸ್​ಐಟಿ ಪೊಲೀಸರು ಮೇ 31ರಂದು ರಾತ್ರಿ ಬಂಧಿಸಿದ್ದರು. ಆದರೆ ಚುನಾವಣಾ ಫಲಿತಾಂಶ ಬರುವ ತನಕ ಕಾದಿದ್ದ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಪುರುಷತ್ವ ಪರೀಕ್ಷೆ ನಡೆಸುತ್ತಿದ್ದಾರೆ.

ಪೊಲೀಸರ ವಶದಲ್ಲಿದ್ದ ಪ್ರಜ್ವಲ್ ರೇವಣ್ಣ ತಾನು ಸಂಸದ ಎಂಬ ಅಹಂನಲ್ಲಿ ತನಿಖೆಗೆ ಅಸಹಾಕಾರ ನೀಡುತ್ತಿದ್ದ. ಹೀಗಾಗಿ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ನಡೆಯುತ್ತಿರಲಿಲ್ಲ. ಮಂಗಳವಾರ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಪ್ರಜ್ವಲ್​ಗೆ ಹಾಸನದ ಜನರು ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಅದೇ ರೀತಿ ಪ್ರಜ್ವಲ್ ಅವರ ಎಸ್​ಐಟಿ ಕಸ್ಟಡಿ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಅಧಿಕಾರಿಗಳು ಪರಿಕ್ಷೆ ನಡೆಸಿದ್ದಾರೆ. ಇದೇ ವೇಳೆ ಹಾಸನ ಹಾಗು ಬಸವನಗುಡಿಯ ಮನೆಗೆ ಕರೆದೊಯ್ದು ಸ್ಪಾಟ್ ಮಹಜರ್ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: Valmiki Corporation Scam : ವಾಲ್ಮಿಕಿ ನಿಗಮ ಹಗರಣ; ಆಂಧ್ರದ ಫಸ್ಟ್​​ ಬ್ಯಾಂಕ್ ಅಧ್ಯಕ್ಷ . ಸಚಿವ ನಾಗೇಂದ್ರ ಆಪ್ತರ ಬಂಧನ

ಹಾಗಿದ್ರೆ ಹೇಗೆ ನಡೆಯುತ್ತೆ ಪುರುಷತ್ವ ಪರೀಕ್ಷೆ?

ಇದು ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ. ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷತ್ವ ಪರೀಕ್ಷೆ ನಡೆಸಲಾಗುತ್ತೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ.

1) ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆಯನ್ನು ಮುಖ್ಯವಾಗಿ ನಡೆಸಲಾಗುತ್ತದೆ. ಆಂಡ್ರೋಲಜಿಸ್ಟ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ.

2) ನಂತರ ವೀರ್ಯ ವಿಶ್ಲೇಷಣೆ (A Semen Analysis) ನಡೆಯುತ್ತದೆ. ಪುರುಷನ ವೀರ್ಯ ಮತ್ತು ವೀರ್ಯಾಣುಗಳ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದು.

3) ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ (Penile Doppler Ultrasound) ನಡೆಯಲಿದೆ. ಆರೋಪಿಯ ಖಾಸಗಿ ಅಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಯುವ ಟೆಸ್ಟ್. ವಯಾಗ್ರಾದಂಥ ಮೆಡಿಸಿನ್ ಸೇವಿಸಿದರೂ ಕೂಡ ಈ ಪರೀಕ್ಷೆಯಲ್ಲಿ ಗೊತ್ತಾಗುತ್ತೆ.

4) Nocturnal Penile Tumescence (NPT) Test. ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆ ಇದು. ಆರೋಪಿಯ ಖಾಸಗಿ ಅಂಗ ರಾತ್ರಿ ನಿದ್ರೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತೆ ಎಂದು ಎನ್‌ಪಿಟಿ ಪರೀಕ್ಷೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ. ಆರೋಪಿಯ ಅರಿವಿಗೆ ಬಾರದಂತೆ ನಡೆಯುವ ಪರೀಕ್ಷೆ ಇದು. ಈ ಮೂರು ಟೆಸ್ಟ್ ಮೂಲಕ ಆರೋಪಿಯ ಪುರುಷತ್ವ ಪರೀಕ್ಷೆ ನಡೆಯುತ್ತವೆ. ಈ ಟೆಸ್ಟ್‌ನ ರಿಪೋರ್ಟ್‌ಗಳು ಅತ್ಯಾಚಾರ ಪ್ರಕರಣದಲ್ಲಿ ಬಹಳ ಮುಖ್ಯವಾಗುತ್ತವೆ.

Continue Reading

ಪ್ರಮುಖ ಸುದ್ದಿ

Election results 2024: ಎನ್‌ಡಿಎ ಸರಕಾರದಲ್ಲಿ ರಾಜ್ಯದಿಂದ 4 ಮಂದಿಗೆ ಸಚಿವ ಸ್ಥಾನ ಫಿಕ್ಸ್?‌

Election results 2024: ಇಂದು ಸಂಜೆ ನಾಲ್ಕು ಗಂಟೆಗೆ ಎನ್‌ಡಿಎ ಮೈತ್ರಿಕೂಟದ ಸಭೆ ನಡೆಯಲಿದ್ದು, ಎನ್‌ಡಿಎ ಸರ್ಕಾರ ರಚನೆ ಕುರಿತು ಮಿತ್ರ ಪಕ್ಷಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದಿದ್ದಾರೆ. ಇಲ್ಲಿ ಸರ್ಕಾರ ರಚನೆಗೆ ಪಕ್ಷಗಳು ತಮ್ಮ ಬೆಂಬಲದ ಪತ್ರ ನೀಡಲಿದ್ದು, ಇದಾದ ಬಳಿಕ ಸರ್ಕಾರ ರಚನೆಗೆ ಅವಕಾಶ ಕೋರಿ ರಾಷ್ಟ್ರಪತಿಗಳನ್ನು ಎನ್‌ಡಿಎ ಭೇಟಿಯಾಗಲಿದೆ.

VISTARANEWS.COM


on

election results 2024 joshi hdk cnm bommai
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶದ (Election results 2024) ಬಳಿಕ ಎನ್‌ಡಿಎ (NDA) ಒಕ್ಕೂಟ ಸರಕಾರ ರಚನೆಯ ಹಾದಿಯಲ್ಲಿದೆ. ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ.

ಪ್ರಹ್ಲಾದ ಜೋಶಿ (Prahlad Joshi) ಅವರು ಎನ್‌ಡಿಎ ಮೂರನೆಯ ಅವಧಿಯಲ್ಲೂ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿರರ್ಗಳತೆ ಹೊಂದಿರುವ ಪ್ರಹ್ಲಾದ್‌ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ನಾಲ್ಕನೇ ಬಾರಿಗೆ ಹುಬ್ಬಳ್ಳಿ- ಧಾರವಾಡದ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, ಬ್ರಾಹ್ಮಣ ಕೋಟಾವನ್ನು ತುಂಬಲಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗೂ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಮಾಜಿ ಸಿಎಂ ಆಗಿ ಅನುಭವ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತುಗಾರಿಕೆ, ಆರ್ಥಿಕತೆಯ ವಿಚಾರಗಳಲ್ಲಿ ವಿಶೇಷ ಜ್ಞಾನ ಹೊಂದಿರುವಿಕೆಯ ಜೊತೆಗೆ ಲಿಂಗಾಯತ ಕೋಟಾ ಕೂಡ ಬೊಮ್ಮಾಯಿ ಅವರಿಗೆ ನೆರವಾಗಲಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಸಿ.ಎನ್‌ ಮಂಜುನಾಥ್‌ (Dr CN Manjunath) ಅವರೂ ಸಚಿವ ಸ್ಥಾನ ಪಡೆಯಬಲ್ಲವರ ಯಾದಿಯಲ್ಲಿ ಇದ್ದಾರೆ ಎನ್ನಲಾಗಿದೆ. ಮಂಜುನಾಥ್‌ ಅವರ ಹಿರಿತನ, ಆರೋಗ್ಯ ಕ್ಷೇತ್ರದ ಅನುಭವ ಸರಕಾರದಲ್ಲಿ ನೆರವಾಗಲಿದೆ ಎಂಬ ಮುಂದಾಲೋಚನೆ. ಜೊತೆಗೆ, ಹಲವು ಬಾರಿಯ ಸಂಸದರಾಗಿರುವ, ಕಾಂಗ್ರೆಸ್‌ನ ಹೆಬ್ಬಂಡೆ ಡಿ.ಕೆ ಸುರೇಶ್‌ (DK Suresh) ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿ ಮಣ್ಣು ಮುಕ್ಕಿಸಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದ ಹೆಗ್ಗಳಿಕೆ ಜೊತೆಗಿದೆ.

ಮಾಜಿ ಸಿಎಂ, ಜೆಡಿಎಸ್‌ ಮುಖಂಡ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಮೈತ್ರಿ ಖೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಆಗಿದೆ ಎನ್ನಲಾಗಿದೆ. ಜೆಡಿಎಸ್‌ ಎರಡು ಸ್ಥಾನಗಳ ಬೆಂಬಲ ಈಗ ಎನ್‌ಡಿಎಗೆ ಮಹತ್ವದ್ದಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಜೆಡಿಎಸ್‌ ಮೈತ್ರಿಯನ್ನು ಬೆಂಬಲಿಸುವುದು ಎನ್‌ಡಿಗೆ ಮೈತ್ರಿ ಧರ್ಮವಾಗಿದೆ ಎನ್ನಲಾಗಿದೆ. ಜೊತೆಗೆ ಒಕ್ಕಲಿಗ ಕೋಟಾ ಕೂಡ ತುಂಬಲಿದೆ.

ಈ ಬಾರಿ ಎನ್‌ಡಿಎ ಸರ್ಕಾರದಲ್ಲಿ ಮೈತ್ರಿ ಪಕ್ಷಗಳಿಗೂ ಸಚಿವ ಸ್ಥಾನ ಕೊಡಬೇಕಿರುವುದರಿಂದ ರಾಜ್ಯದಿಂದ ಮೂವರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಎಚ್‌ಡಿಕೆ ಅವರನ್ನೂ ಸೇರಿಸಿದರೆ ನಾಲ್ಕಾಗುತ್ತದೆ. ಕೊನೆಯ ಗಳಿಗೆಯಲ್ಲಿ ಅದೃಷ್ಟ ಕುದುರಿದರೆ ರಮೇಶ್ ಜಿಗಜಿಣಗಿ ಇಲ್ಲವೇ ಗೋವಿಂದ ಕಾರಜೋಳಗೆ ರಾಜ್ಯ ಖಾತೆ ಸಚಿವ ಸ್ಥಾನ ಕೊಡಬಹುದು. ಆದರೆ ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನದ ಲಭ್ಯತೆ ಬಗ್ಗೆ ಅನುಮಾನವಿದೆ.

ದೆಹಲಿಗೆ ಹೊರಟ ಕುಮಾರಸ್ವಾಮಿ

ಮಾಜಿ ಸಿಎಂ, ನೂತನ ಸಂಸದ ಎಚ್‌.ಡಿ ಕುಮಾರಸ್ವಾಮಿ ಅವರು ಈಗಾಗಲೇ ಅಮಿತ್ ಶಾ ಕರೆ ಮೇರೆಗೆ ದೆಹಲಿಗೆ ತೆರಳಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ಮೂಲಕ ದೆಹಲಿಯತ್ತ ಏರ್ ಇಂಡಿಯಾ ವಿಮಾನದಲ್ಲಿ ಪಯಣ ಬೆಳೆಸಿದ್ದಾರೆ. ನೂತನವಾಗಿ ಆಯ್ಕೆ ಆಗಿರುವ ಮಿತ್ರ ಪಕ್ಷಗಳ ಸಂಸದರನ್ನು ಅಮಿತ್‌ ಶಾ ಅವರು ದೆಹಲಿಗೆ ಆಹ್ವಾನಿಸಿದ್ದು, ದೆಹಲಿಯಲ್ಲಿ ಅಮಿತ್ ಶಾ ಮತ್ತು ನಡ್ಡಾ ಅವರನ್ನು ಎಚ್‌ಡಿಕೆ ಭೇಟಿ ಆಗಲಿದ್ದಾರೆ.

ಇಂದು ಸಂಜೆ ನಾಲ್ಕು ಗಂಟೆಗೆ ಎನ್‌ಡಿಎ ಮೈತ್ರಿಕೂಟದ ಸಭೆ ನಡೆಯಲಿದ್ದು, ಎನ್‌ಡಿಎ ಸರ್ಕಾರ ರಚನೆ ಕುರಿತು ಮಿತ್ರ ಪಕ್ಷಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದಿದ್ದಾರೆ. ಇಲ್ಲಿ ಸರ್ಕಾರ ರಚನೆಗೆ ಪಕ್ಷಗಳು ತಮ್ಮ ಬೆಂಬಲದ ಪತ್ರ ನೀಡಲಿದ್ದು, ಇದಾದ ಬಳಿಕ ಸರ್ಕಾರ ರಚನೆಗೆ ಅವಕಾಶ ಕೋರಿ ರಾಷ್ಟ್ರಪತಿಗಳನ್ನು ಎನ್‌ಡಿಎ ಭೇಟಿಯಾಗಲಿದೆ. ಜೆಡಿಯು ಮತ್ತು ಟಿಡಿಪಿ ಪಕ್ಷಗಳು ಕೂಡ ಬೆಂಬಲವನ್ನು ಘೋಷಿಸಬೇಕಿವೆ. ಈ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ (Nitish kumar) ನಡೆ ಏನು ಎಂಬ ಕುತೂಹಲ ಇನ್ನೂ ಇದೆ.

ಇದನ್ನೂ ಓದಿ: Election Results 2024: ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ, ಇಂಡಿಯಾ ಸೇರ್ಪಡೆ? ಸುಳಿವು ನೀಡಿದ ಎರಡು ಬೆಳವಣಿಗೆ!

Continue Reading

ಪ್ರಮುಖ ಸುದ್ದಿ

Valmiki Corporation Scam : ವಾಲ್ಮಿಕಿ ನಿಗಮ ಹಗರಣ; ಆಂಧ್ರದ ಫಸ್ಟ್​​ ಬ್ಯಾಂಕ್ ಅಧ್ಯಕ್ಷ . ಸಚಿವ ನಾಗೇಂದ್ರ ಆಪ್ತರ ಬಂಧನ

Valmiki Corporation Scam : ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅಧಿಕೃತ ಬ್ಯಾಂಕ್ ಖಾತೆಯಿಂದ ಆಂಧ್ರದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಇದು ಅಕ್ರಮದ ಹಣ ಎಂಬ ಆರೋಪದ ಹಿನ್ನೆಲೆಯಲ್ಲಿ ಆಂಧ್ರದ ಫಸ್ಟ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಹಿಟ್ಕಾರ್ ಅವರನ್ನು ಬಂಧಿಸಲಾಗಿದೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮ (Valmiki development corporation) ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ (Officer self Harming) ಪ್ರಕರಣದ (Valmiki corporation Scam) ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್ಐಟಿ (SIT) ಅಧಿಕಾರಿಗಳು ಹಣ ವರ್ಗಾವಣೆಯಾಗಿದೆ ಎನ್ನಲಾದ ಆಂಧ್ರಪ್ರದೇಶ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಹಿಟ್ಕಾರ್ ಅವರನ್ನು ಬಂಧಿಸಿದ್ದಾರೆ. ಇದೇ ವೇಳೆ ಸಚಿವ ನಾಗೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್ ನೆಕ್ಕಂಟಿ ಮತ್ತು ನಾಗೆಶ್ ಎಂಬುವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅಧಿಕೃತ ಬ್ಯಾಂಕ್ ಖಾತೆಯಿಂದ ಆಂಧ್ರದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಇದು ಅಕ್ರಮದ ಹಣ ಎಂಬ ಆರೋಪದ ಹಿನ್ನೆಲೆಯಲ್ಲಿ ಆಂಧ್ರದ ಫಸ್ಟ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಹಿಟ್ಕಾರ್ ಅವರನ್ನು ಬಂಧಿಸಲಾಗಿದೆ. ಈ ಹಣ ನಾಗರಾಜ್ ನೆಕ್ಕಂಟಿ ಮತ್ತು ನಾಗೇಶ ಅಣತಿ ಮೇರೆಗೆ ಹಣ ವರ್ಗಾವಣೆಯಾಗಿರುವ ಅನುಮಾನ ಮೇರೆಗೆ ಅವರನ್ನೂ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Suicide Attempt : ಕಾಮಗಾರಿ ನಡೆಸಿದ 9 ಕೋಟಿ ರೂಪಾಯಿ ಬಿಲ್​ಬಾಕಿ , ಗುತ್ತಿಗೆದಾರನಿಂದ ಆತ್ಮಹತ್ಯೆ ಯತ್ನ

ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕದ ಬೊಕ್ಕಸದಿಂದ ಆಂಧ್ರ ಹಣ ವರ್ಗಾವಣೆಯಾಗಿತ್ತಾ ಎಂಬ ಅನುಮಾನ ಮೂಡಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಅದೇ ಆಯಾಮದಲ್ಲಿ ಎಸ್ ಐಟಿ ತನಿಖೆ ನಡೆಸುತ್ತಿದೆ.

ವಾಲ್ಮೀಕಿ ನಿಗಮ ಹಗರಣ; ವರ್ಗಾವಣೆಯಾದ ಹಣ ಹಿಂಪಡೆಯಲು ಸರ್ಕಾರ ಕಸರತ್ತು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ (Valmiki Corporation Scam) ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆ ಆಗಿದೆ ಎನ್ನಲಾದ 87 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯಲು ಕಸರತ್ತು ನಡೆಸುತ್ತಿದೆ. ಮೊದಲ ಕಂತಿನಲ್ಲಿ 26 ಕೋಟಿ ವಾಪಸ್ ಆಗಿದೆ ಎಂದು ಸಚಿವ ಬಿ ನಾಗೇಂದ್ರ ಹೇಳಿದ್ದರು. ಎರಡನೇ ಕಂತಿನಲ್ಲಿ 42 ಕೋಟಿ ವಾಪಸ್ ಆಗಿದೆ ಎಂದು ಸಚಿವರ ಆಪ್ತ ವಲಯದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇದೀಗ ಇಷ್ಟು ಮೊತ್ತ ನಿಗಮಕ್ಕೆ ವಾಪಸ್‌ ಆಗಿಯೇ ಇಲ್ಲ ಎನ್ನಲಾಗುತ್ತಿದೆ.

87 ಕೋಟಿ ಅಕ್ರಮದಲ್ಲಿ ಸರ್ಕಾರಕ್ಕೆ ವಾಪಸ್ ಆಗಿದ್ದು ಕೇವಲ 5 ಕೋಟಿ. ಈವರೆಗೂ ಕೇವಲ 5 ಕೋಟಿ ಮಾತ್ರ ವಾಪಸ್ ಆಗಿದೆ ಎಂಬ ಮಾಹಿತಿ ಸರ್ಕಾರ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನಿರೀಕ್ಷಿತ ಹಣ ವಾಪಸ್ ಆಗದೆ, ಸಚಿವರು 26 ಕೋಟಿ ಬಂದಿದೆ ಎಂದಿದ್ದು ಯಾಕೆ ಎಂಬ ಅನುಮಾನಗಳು ಮೂಡಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿಯಿಂದ ಸರ್ಕಾರಕ್ಕೆ ಗಡುವು ನೀಡಿದ್ದು, ಹೀಗಾಗಿ ಸಚಿವ ತಲೆದಂಡ ಬಹುತೇಕ ಫಿಕ್ಸ್ ಎನ್ನಲಾಗಿದೆ.

ಸಚಿವ ಬಿ‌ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿ ಪಟ್ಟು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಬಿ‌.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟುಹಿಡಿದಿದೆ. ಸಚಿವರ ರಾಜೀನಾಮೆ ಪಡೆಯಲು ಜೂನ್ 6ರವರೆಗೂ ಗಡುವು ನೀಡಿರುವ ಬಿಜೆಪಿ, ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಬೃಹತ್‌ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಮತ್ತೊಂದೆಡೆ ಬಿಜೆಪಿ ಕಾಲದ ಹಗರಣಗಳನ್ನು ಪ್ರಸ್ತಾಪ ಮಾಡಲು ನಾಗೇಂದ್ರ ಮುಂದಾಗಿದ್ದಾರೆ. ಪ್ರಕರಣದಲ್ಲಿ ತನಿಖೆಗೆ ಸಿಬಿಐ ಎಂಟ್ರಿ ತಪ್ಪಿಸಲು ಹೊಸ ದಾಳ ಪ್ರಯೋಗಕ್ಕೆ ನಾಗೇಂದ್ರ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಾಲದಲ್ಲಿ ಮಂಡ್ಯ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಹಗರಣ ಕುರಿತು ಪ್ರಸ್ತಾಪ ಮಾಡಲು ಸಚಿವ ಪ್ಲ್ಯಾನ್‌ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

Election Results 2024: ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ, ಇಂಡಿಯಾ ಸೇರ್ಪಡೆ? ಸುಳಿವು ನೀಡಿದ ಎರಡು ಬೆಳವಣಿಗೆ!

Election Results 2024: ಜೆಡಿಯು (JDU) ಪಕ್ಷದ ಸಂಸದನೊಬ್ಬ, “ಪ್ರಧಾನಿ (Prime Minister) ಸ್ಥಾನಕ್ಕೆ ನಿತೀಶ್‌ಗಿಂತ ಅರ್ಹತೆ ಇರುವವರು ಬೇರೆ ಯಾರು?” ಎಂದು ಬಾಂಬ್‌ ಸಿಡಿಸಿದ್ದಾರೆ. ಹಾಗೆಯೇ ಜೆಡಿಯು ಎಕ್ಸ್‌ನಲ್ಲಿ ಮಾಡಿರುವ ಒಂದು ಪೋಸ್ಟ್‌ನಲ್ಲಿ ಇಂಡಿಯಾ ಬಣದ (INDIA Bloc) ಕಡೆಗೆ ಒಲವು ಹೊಂದಿರುವ ಸುಳಿವು ನೀಡಿದೆ.

VISTARANEWS.COM


on

Nitish Kumar election results 2024
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆ ಫಲಿತಾಂಶ (Election Results 2024) ಬಂದ ಬಳಿಕ ಎನ್‌ಡಿಎ (NDA) ಮೈತ್ರಿಪಕ್ಷಗಳನ್ನು ಸೇರಿಸಿಕೊಂಡು ಕೇಂದ್ರ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಇರುವಾಗಲೇ, ಬಿಜೆಪಿಗೆ (BJP) ಬೆವರು ಕಿತ್ತುಕೊಳ್ಳುವಂಥ ಕೆಲವು ಬೆಳವಣಿಗೆ ನಡೆದಿವೆ. ನಿತೀಶ್‌ ಕುಮಾರ್‌ (Nitish Kumar) ಅವರ ಜೆಡಿಯು (JDU) ಪಕ್ಷದ ಸಂಸದನೊಬ್ಬ, “ಪ್ರಧಾನಿ (Prime Minister) ಸ್ಥಾನಕ್ಕೆ ನಿತೀಶ್‌ಗಿಂತ ಅರ್ಹತೆ ಇರುವವರು ಬೇರೆ ಯಾರು?” ಎಂದು ಬಾಂಬ್‌ ಸಿಡಿಸಿದ್ದಾರೆ. ಹಾಗೆಯೇ ಜೆಡಿಯು ಎಕ್ಸ್‌ನಲ್ಲಿ ಮಾಡಿರುವ ಒಂದು ಪೋಸ್ಟ್‌ನಲ್ಲಿ ಇಂಡಿಯಾ ಬಣದ (INDIA Bloc) ಕಡೆಗೆ ಒಲವು ಹೊಂದಿರುವ ಸುಳಿವು ನೀಡಿದೆ.

ಬಿಹಾರದ ಜೆಡಿಯು ಸಂಸದ ಡಾ. ಖಾಲಿದ್ ಅನ್ವರ್ ಎಂಬವರು ನಿತೀಶ್‌ ಕುಮಾರ್‌ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. “ನಿತೀಶ್ ಕುಮಾರ್‌ಗಿಂತ ಉತ್ತಮ ಪ್ರಧಾನಿ ಆಗಬಲ್ಲವರು ಯಾರು?
ನಿತೀಶ್ ಕುಮಾರ್ ಅವರು ಒಬ್ಬ ಅನುಭವಿ ರಾಜಕಾರಣಿ. ಸಮಾಜ ಮತ್ತು ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ. ಮತ್ತು ಅವರು ಎಲ್ಲರನ್ನೂ ಗೌರವಿಸುತ್ತಾರೆ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗೌರವಿಸುತ್ತಾರೆ. ನಾವು ಸದ್ಯಕ್ಕೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದೇವೆ. ಆದರೆ ಈ ಮೊದಲು ಮತ್ತು ಇಂದೂ ಜನರು ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಲು ಬಯಸಿದ್ದಾರೆ. ಇಂದಿನ ಫಲಿತಾಂಶದ ಬಳಿಕ ಜನರ ನಿರೀಕ್ಷೆ ಹೆಚ್ಚಿದೆ” ಎಂದು ಹೇಳಿದ್ದಾರೆ.

“ನಿತೀಶ್‌ ಅವರು ಬಿಹಾರ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ದ ರೀತಿ, ಅವರು ಕೃಷಿ ಸಚಿವರಾಗಿದ್ದಾಗ ದೇಶಕ್ಕಾಗಿ ರೂಪಿಸಿದ ಮಾರ್ಗಸೂಚಿಯನ್ನು, ಅವರು ರೈಲ್ವೇ ಕ್ಷೇತ್ರಕ್ಕಾಗಿ ಮಾಡಿದ ಕಾರ್ಯವನ್ನು ಸಹ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ” ಎಂದಿದ್ದಾರೆ ಅನ್ವರ್.‌

ಈ ಮಾತುಗಳು ಎನ್‌ಡಿಎ ಸರ್ಕಾರದಲ್ಲಿ ನಿತೀಶ್‌ ಭಾಗವಹಿಸುವಿಕೆಯ ಕುರಿತು ಸಂಶಯ ಮೂಡಿಸಿವೆ. ನಿತೀಶ್‌ ಕುಮಾರ್‌ ಪ್ರಧಾನ ಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಅದನ್ನು ತಮ್ಮ ಸಂಸದರ ಮೂಲಕ ಹೇಳಿಸಿದರೇ ಎಂಬ ಜಿಜ್ಞಾಸೆ ಮೂಡಿದೆ. ಅಥವಾ, ಎನ್‌ಡಿಎ ಹಾಗೂ ಇಂಡಿ ಒಕ್ಕೂಟಗಳಲ್ಲಿ ಪ್ರಧಾನಿ ಪದವಿಯನ್ನು ತಮಗೆ ಯಾರು ನೀಡುತ್ತಾರೋ ಅವರ ಜೊತೆ ಹೋಗಲು ಸಿದ್ಧ ಎಂಬ ಸಂದೇಶವನ್ನು ನಿತೀಶ್‌ ರವಾನಿಸಿದರೇ ಎಂಬ ಅನುಮಾನವೂ ಮೂಡಿದೆ.

ಜನತಾ ದಳ (ಸಂಯುಕ್ತ) ಬಿಹಾರದಲ್ಲಿ 14 ಸ್ಥಾನಗಳಲ್ಲಿ ಮುಂದಿದೆ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟು 40 ಲೋಕಸಭಾ ಕ್ಷೇತ್ರಗಳು ಇಲ್ಲಿವೆ. ಏತನ್ಮಧ್ಯೆ ಇಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಜನತಾದಳ ಐದು ಸ್ಥಾನ, ಕಾಂಗ್ರೆಸ್ ಎರಡು ಸ್ಥಾನ, ಕಮ್ಯುನಿಸ್ಟ್ ಪಕ್ಷ 1 ಸ್ಥಾನ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) 1 ಸ್ಥಾನ ಗಳಿಸಿವೆ.

ಇನ್ನೊಂದು ಬೆಳವಣಿಗೆಯಲ್ಲಿ, ಜೆಡಿಯು ಪಕ್ಷದ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಾಕಲಾದ ಒಂದು ಪೋಸ್ಟ್‌, ಇನ್ನಷ್ಟು ಅಚ್ಚರಿ ಮೂಡಿಸಿದೆ. ಅದರಲ್ಲಿ, ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಿರುವ ನಿತೀಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಪಕ್ಷ, “ನ್ಯಾಯ್ ಕೆ ಸಾಥ್ ವಿಕಾಸ್ ಕಾ ಸಂಕಲ್ಪ್ ಹೋ ರಹಾ ಪೂರಾ (ನ್ಯಾಯದೊಂದಿಗೆ ಅಭಿವೃದ್ಧಿಯ ನಿರ್ಣಯವನ್ನು ಈಡೇರಿಸಲಾಗುತ್ತಿದೆ)” ಎಂದು ಬರೆದಿದೆ. ನಿತೀಶ್ ಕುಮಾರ್ ಅವರು ಅಭಿವೃದ್ಧಿ ಕುರಿತು ಮಾತನಾಡಿರುವ ವಿಡಿಯೋವನ್ನು ಪಕ್ಷವು ಹಂಚಿಕೊಂಡಿದೆ. ವಿಡಿಯೋದಲ್ಲಿರುವ ಹಿನ್ನೆಲೆ ಸಂಗೀತ ರಜನಿಕಾಂತ್ ಅವರ ಜೈಲರ್ ಚಿತ್ರದ್ದು.

ಇಲ್ಲಿ ʼನ್ಯಾಯʼ ಎಂಬ ಪದ ಕಾಂಗ್ರೆಸ್‌ನ ಪ್ರಣಾಳಿಕೆಯೊಂದಿಗೆ ತಳುಕು ಹಾಕಿಕೊಂಡಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ʼನ್ಯಾಯಪತ್ರʼ ಎಂದು ಕರೆಯಲಾಗಿದೆ. ಆದರೆ, ʼವಿಕಾಸ್‌ʼ ಎಂಬ ಪದವು ಮೋದಿಯವರೊಂದಿಗೆ ತಳುಕು ಹಾಕಿಕೊಂಡಿದೆ. ಮೋದಿಯವರು ತಮ್ಮ ಭಾಷಣಗಳಲ್ಲಿ ಪದೇ ಪದೆ ಉಲ್ಲೇಖಿಸುವ ಸಂಗತಿಯೆಂದರೆ ʼಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್.ʼ ಹೀಗೆ ಎರಡೂ ಪದಗಳನ್ನು ಏಕಕಾಲಕ್ಕೆ ಬಳಸಿ, ಎರಡೂ ಒಕ್ಕೂಟಗಳ ಜೊತೆಗೆ ಹೋಗಲು ತಾನು ಸಿದ್ಧ ಎಂಬ ಸಂದೇಶವನ್ನು ಕೂಡ ನಿತೀಶ್‌ ರವಾನಿಸಿದ್ದಾರೆ ಎಂದು ತರ್ಕಿಸಲಾಗಿದೆ.

ಈ ಎರಡು ಸಂದೇಶಗಳ ಮೂಲಕ, ಪ್ರಧಾನಿ ಪದವಿಯನ್ನು ತನಗೆ ನೀಡಿದರೆ ತಾನು ಇಂಡಿಯಾ ಜೊತೆಗೂ ಹೋಗಲು ಸಿದ್ಧ ಎಂಬುದನ್ನು ನಿತೀಶ್‌ ಸಾರಿದ್ದಾರೆ ಎಂದು ಸಂದೇಹಿಸಲಾಗುತ್ತಿದೆ.

ಇದನ್ನೂ ಓದಿ: Election Results 2024: ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು ನೆರವಿಲ್ಲದೆ ಮೋದಿ ಸರ್ಕಾರ ನಡೆಸಲಾಗದೆ?

Continue Reading
Advertisement
Prajwal Revanna
ಪ್ರಮುಖ ಸುದ್ದಿ2 mins ago

Prajwal Revanna case : ಪ್ರಜ್ವಲ್​ನ ಪುರುಷತ್ವ ಸಾಮರ್ಥ್ಯ ಪರೀಕ್ಷೆ ನಡೆಸಲು ಕೋರ್ಟ್​ ಸಮ್ಮತಿ

election results 2024 joshi hdk cnm bommai
ಪ್ರಮುಖ ಸುದ್ದಿ4 mins ago

Election results 2024: ಎನ್‌ಡಿಎ ಸರಕಾರದಲ್ಲಿ ರಾಜ್ಯದಿಂದ 4 ಮಂದಿಗೆ ಸಚಿವ ಸ್ಥಾನ ಫಿಕ್ಸ್?‌

Election Results 2024
Lok Sabha Election 202432 mins ago

Election Results 2024: ಮೂರನೇ ಬಾರಿ ಸರ್ಕಾರ ರಚಿಸಲು ಎನ್‌ಡಿಎ ತಯಾರಿ; ಕೇಂದ್ರ ಸಚಿವ ಸಂಪುಟ ಸಭೆ

Valmiki Corporation Scam
ಪ್ರಮುಖ ಸುದ್ದಿ36 mins ago

Valmiki Corporation Scam : ವಾಲ್ಮಿಕಿ ನಿಗಮ ಹಗರಣ; ಆಂಧ್ರದ ಫಸ್ಟ್​​ ಬ್ಯಾಂಕ್ ಅಧ್ಯಕ್ಷ . ಸಚಿವ ನಾಗೇಂದ್ರ ಆಪ್ತರ ಬಂಧನ

Election Results 2024
Lok Sabha Election 20241 hour ago

Election Results 2024: ಸರ್ಕಾರ ರಚನೆಯ ಕಸರತ್ತು; ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್

Nitish Kumar election results 2024
ಪ್ರಮುಖ ಸುದ್ದಿ1 hour ago

Election Results 2024: ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ, ಇಂಡಿಯಾ ಸೇರ್ಪಡೆ? ಸುಳಿವು ನೀಡಿದ ಎರಡು ಬೆಳವಣಿಗೆ!

Suicide attempt
ಪ್ರಮುಖ ಸುದ್ದಿ1 hour ago

Suicide Attempt : ಕಾಮಗಾರಿ ನಡೆಸಿದ 9 ಕೋಟಿ ರೂಪಾಯಿ ಬಿಲ್​ಬಾಕಿ , ಗುತ್ತಿಗೆದಾರನಿಂದ ಆತ್ಮಹತ್ಯೆ ಯತ್ನ

Murder Case
ಪ್ರಮುಖ ಸುದ್ದಿ2 hours ago

Murder News : ಹಾಸನದಲ್ಲಿ ನಟೋರಿಯಸ್​ ರೌಡಿ ಚೈಲ್ಡ್​ ರವಿ ಬರ್ಬರ ಕೊಲೆ

Election Results 2024
Lok Sabha Election 20242 hours ago

Election Results 2024: ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು!

Chikkodi Lok Sabha Result:
ಪ್ರಮುಖ ಸುದ್ದಿ2 hours ago

Chikkodi Lok Sabha Result : ಕಾಂಗ್ರೆಸ್​ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಜೈಕಾರ ಕೂಗಿದ ಜಮೀರನ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌