Aishwarya rai | 48ರಲ್ಲೂ ಕಂಗೊಳಿಸುವ ಐಶ್ ಫಿಟ್‌ನೆಸ್‌ ರಹಸ್ಯ ಇಲ್ಲಿದೆ! - Vistara News

ಮಹಿಳೆ

Aishwarya rai | 48ರಲ್ಲೂ ಕಂಗೊಳಿಸುವ ಐಶ್ ಫಿಟ್‌ನೆಸ್‌ ರಹಸ್ಯ ಇಲ್ಲಿದೆ!

ಆಹಾರದ ಬಗ್ಗೆ ವಿಪರೀತ ಕಾಳಜಿ ವಹಿಸುವ ಐಶ್ವರ್ಯಾ ರೈ ಬಚ್ಚನ್‌ ಅದರಿಂದಲೇ ತಮ್ಮ ಫಿಟ್‌ನೆಸ್‌ ಮೇಂಟೇನ್‌ ಮಾಡಿದ್ದಾರೆ. ಅವರ ಡೈಲಿ ಡಯಟ್‌ ಏನು ಎಂಬುದನ್ನು ಇಲ್ಲಿ ನೋಡೋಣ.

VISTARANEWS.COM


on

Aishwarya Rai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್‌ ಸೆಲ್ವಂ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿರುವ ಚಿರಯೌವನದ ೪೮ರ ಚೆಲುವೆ ಐಶ್ವರ್ಯಾ ರೈ ಬಚ್ಚನ್‌ ತಮ್ಮ ಮಾಸದ ಚೆಲುವಿನೊಂದಿಗೆ ತೆರೆಯ ಮೇಲೆ ಮಿಂಚುತ್ತಿದ್ದಾರೆ. ವಿಶ್ವಸುಂದರಿ ಪಟ್ಟವೇರಿ ಇಂದಿಗೂ ಅದೇ ಸೌಂದರ್ಯವನ್ನು ಉಳಿಸಿಕೊಂಡಿರುವ, ʻಬ್ಯೂಟಿ ವಿತ್‌ ಬ್ರೈನ್‌ʼ ಎಂದೇ ಹೆಸರಾಗಿರುವ ಐಶ್‌ ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದರೂ ಇಂದಿಗೂ ತನ್ನ ಛಾಪನ್ನು ಉಳಿಸಿಕೊಂಡಿರುವುದು ಪೊನ್ನಿಯಿನ್‌ ಸೆಲ್ವಂ ಚಿತ್ರದ ಮೂಲಕ ಸಾಬೀತಾಗುತ್ತದೆ.

ಇನ್ನೂ ಹೊಳೆಯುವ ರಾಯಲ್‌ ಸೌಂದರ್ಯದಿಂದ ಮನಸೂರೆಗೊಳ್ಳುವ ಈ ಐಶ್‌ ಹೀಗೆ ಕಂಗೊಳಿಸಲು ಹೊಟ್ಟೆಗೇನು ತಿನ್ನುತ್ತಾರೆ ಎಂದು ತಮಾಷೆಯಾಗಿ ಜನಸಾಮಾನ್ಯರು ಕೇಳಬಹುದು. ಆದರೆ, ನಿಜವಾಗಿಯೂ ಆಹಾರದ ಬಗ್ಗೆ ವಿಪರೀತ ಕಾಳಜಿ ವಹಿಸುವ ಐಶ್ವರ್ಯಾ ರೈ ಬಚ್ಚನ್‌ ಅವರು ಇಷ್ಟಪಡುವ ಹಾಗೂ ದಿನನಿತ್ಯ ಆರೋಗ್ಯದ ದೃಷ್ಟಿಯಿಂದ ತಿನ್ನುವ ಆಹಾರಗಳೇನು ಎಂಬುದನ್ನು ಇಲ್ಲಿ ನೋಡೋಣ.

೧. ಐಶ್ವರ್ಯಾ ರೈ ಬಚ್ಚನ್‌ಗೆ ಮಂಗಳೂರು ಶೈಲಿಯ ಚಿಕನ್‌ ಕರಿ ಹಾಗೂ ಮೀನಿನ ಖಾದ್ಯಗಳು ಬಹಳ ಇಷ್ಟವಂತೆ. ಆದರೆ ಇವು ನಿತ್ಯದ ಸೇವನೆಯ ಲಿಸ್ಟಿನಲ್ಲಿ ಸೇರಿಸಿಲ್ಲ.

೨. ಐಶ್‌ ಅವರ ಬ್ಯೂಟಿ ಸೀಕ್ರೆಟ್‌ ಅಂದರೆ ತಪ್ಪಿಸದೆ ನಿತ್ಯ ಮಾಡುವ ಯೋಗ. ಈಕೆ ಪ್ರತಿನಿತ್ಯ ಜಿಮ್‌ ಮಾಡುವ ಮನಸ್ಥಿತಿಯವರಲ್ಲವಂತೆ. ಆದರೂ ವಾರದಲ್ಲಿ ಎರಡು ಬಾರಿ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿದರೆ, ವಾರಪೂರ್ತಿ ಮನೆಯಲ್ಲೇ ಯೋಗಾಭ್ಯಾಸವನ್ನು ತಪ್ಪದೆ ಮಾಡುತ್ತಾರಂತೆ.‌

ಇದನ್ನೂ ಓದಿ | Life lessons | ಹುಡುಗಿಯರೇ, 25ರೊಳಗೆ ನೀವು ಹೀಗಿದ್ದರೆ ಪ್ರಪಂಚ ಗೆದ್ದಂತೆ!

೩. ಐಶ್ವರ್ಯಾ ರೈ ಎಲ್ಲಿಗೇ ಶೂಟಿಂಗ್‌ಗೆಂದು ಹೋಗಲಿ, ಬೆಳಗ್ಗೆದ್ದ ಕೂಡಲೇ ಉಗುರು ಬೆಚ್ಚಗಿನ ನೀರಿಗೆ ನಿಂಬೆಹಣ್ಣು ಹಾಗೂ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುತ್ತಾರಂತೆ. ಇದು ದೇಹದ ಕಶ್ಮಲಗಳನ್ನೆಲ್ಲ ಹೊಡೆದೋಡಿಸುತ್ತದೆ ಎಂಬುದು ಅವರು ನಂಬಿಕೊಂಡು ಅನುಸರಿಸಿಕೊಂಡ ಬಂದ ಕಂಡುಕೊಂಡ ಸತ್ಯ.

೪. ಬೆಳಗ್ಗಿನ ತಿಂಡಿಗೆ ಐಶ್‌ ಹೆಚ್ಚೇನೂ ಸೇವಿಸುವುದಿಲ್ಲ. ತುಂಬ ಸರಳವಾದ ಬ್ರೌನ್‌ ಬ್ರೆಡ್‌ ಟೋಸ್ಟ್‌ ಜೊತೆಗೆ ಒಂದು ಬೌಲ್‌ನಲ್ಲಿ ಬೇಯಿಸಿದ ಓಟ್‌ಮೀಲನ್ನು ಸೇವಿಸುತ್ತಾರಂತೆ. ಇದಕ್ಕಿಂತ ಹೆಚ್ಚೇನನ್ನೂ ಬ್ರೇಕ್‌ಫಾಸ್ಟ್‌ಗೆ ತಿನ್ನುವುದಿಲ್ಲವಂತೆ.

೫. ಮಧ್ಯಾಹ್ನದೂಟವೂ ಅಷ್ಟೇ. ಬಹುತೇಕ ಸಿಂಪಲ್.‌ ರೋಟಿ ಜೊತೆಗೆ ದಾಲ್‌ ತಡ್ಕಾ ಹಾಗೂ ಒಂದಿಷ್ಟು ಬೇಯಿಸಿದ ತರಕಾರಿಯನ್ನು ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರಂತೆ.

೬. ರಾತ್ರಿಯೂಟಕ್ಕೆ ಕೆಲವೊಮ್ಮೆ ಒಂದು ಸಣ್ಣ ತುಂಡು ಗ್ರಿಲ್‌ ಮಾಡಿದ ಮೀನು, ಕೇವಲ ಒಂದು ಕಪ್‌ ಅನ್ನ ಜೊತೆಗೊಂದಿಷ್ಟು ಬೇಯಿಸಿದ ತರಕಾರಿ. ಅಷ್ಟೇ. ರಾತ್ರಿಯೂಟ ಆದಷ್ಟೂ ಬೇಗ ಮಾಡಬೇಕು ಹಾಗೂ ಅಷ್ಟೇ ಲೈಟ್‌ ಆಗಿರಬೇಕು ಎಂಬುದನ್ನು ನಂಬಿ ನಡೆಯುತ್ತಾರಂತೆ ರೈ.

ಇದನ್ನೂ ಓದಿ | ಇದು ಅಪ್ಪ ಮಗಳ ಕಥೆ | ಸಿಂಗಲ್‌ ಅಪ್ಪ ಮಗಳಿಗೆ ಅಡುಗೆ ಕಲಿಸಿದ್ದೇ ಈಗ ಸಮಸ್ಯೆ!

೭. ಈ ಎಲ್ಲವುಗಳ ಮಧ್ಯೆ ಆಗಾಗ ತುಂಬ ನೀರು ಕುಡಿದು ದೇಹವನ್ನು ಸದಾ ಹೈಡ್ರೇಟೆಡ್‌ ಆಗಿಡುತ್ತಾರಂತೆ ಐಶ್‌. ಜೊತೆಗೆ ಹಣ್ಣು ತರಕಾರಿಗಳು ಯಥೇಚ್ಛವಾಗಿ ಪ್ರತಿದಿನ ಹೊಟ್ಟೆ ಸೇರುತ್ತವಂತೆ. ಸರಿಯಾದ ಆಹಾರ ಸೇವನೆಯೇ ದೇಹಸಿರಿ ಹಾಗೂ ಚರ್ಮದ ಆರೋಗ್ಯದ ಮೂಲ ಮಂತ್ರ ಎಂಬುದನ್ನು ನಂಬುವವರಂತೆ. ಸೌಂದರ್ಯದ ಗುಟ್ಟು ಅಡಗಿರುವುದೇ ನಾವು ತಿನ್ನುವ ಆಹಾರದಲ್ಲಿ ಎಂಬುದನ್ನು ನಂಬುವ ಐಶ್‌ ಆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರಂತೆ. ಸಿಂಪಲ್‌ ಆದ ಆದರೆ ಕಟ್ಟುನಿಟ್ಟಿನ ಈ ಆಹಾರ ಕ್ರಮವನ್ನು ಐಶ್‌ ಚಾಚೂ ತಪ್ಪದೆ ಪಾಲಿಸುತ್ತಾರಂತೆ. ಅದಕ್ಕಾಗಿಯೇ ೪೮ ವರ್ಷ ವಯಸ್ಸಾದರೂ ಈಗಲೂ ತೆರೆಯ ಮೇಲೆ ಅದೇ ರಾಯಲ್‌ ಲುಕ್‌ನೊಂದಿಗೆ ಗಮನ ಸೆಳೆಯುತ್ತಾರೆ! ಪೊನ್ನಿಯಿನ್‌ ಸೆಲ್ವಂ ನೋಡಿ ಐಶ್‌ಗೆ ಐಶ್‌ ಅಲ್ಲದೆ ಬೇರ್ಯಾರು ಸಾಟಿ ಎನ್ನುತ್ತಿದ್ದಾರಂತೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Electric Airport Taxi : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

Electric Airport Taxi : ಪರಿಸರಕ್ಕೆ ಪೂರಕವಾಗುವ ದೃಷ್ಟಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳಿಗೆ ಚಾಲನೆ ನೀಡಲಾಗಿದೆ. ಎರಡು ಬಣ್ಣದ ಟ್ಯಾಕ್ಸಿಗಳಲ್ಲಿ ಒಂದು ಗುಲಾಬಿ ಟ್ಯಾಕ್ಸಿಯು ವಿಶೇಷವಾಗಿ ಮಹಿಳೆಯರಿಗಾಗಿಯೇ ಮೀಸಲಿಡಲಾಗಿದೆ. ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸಲಿದ್ದಾರೆ.

VISTARANEWS.COM


on

By

Electric airport taxis introduced at Kempegowda International Airport
Koo

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ರಿಫೆಕ್ಸ್‌ ಇವೀಲ್ಜ್‌ (Refex eVeelz) ಸಹಯೋಹದೊಂದಿಗೆ ಈ ಬಾರಿ ವಿಶ್ವ ಪರಿಸರ ದಿನದ ಪ್ರಯುಕ್ತ ನೂತನವಾಗಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು (Electric Airport Taxi) ಪರಿಚಯಿಸಲಾಗಿದೆ.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಒಟ್ಟು 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಐಎಎಲ್‌ನ ಸಿಇಒ ಹರಿ ಮರಾರ್, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ. ಚಾಲನೆ ನೀಡಿದರು.

ಬಳಿಕ ಮಾತನಾಡಿದ ಬಿಐಎಎಲ್‌ನ ಸಿಇಒ ಹರಿ ಮರಾರ್, ಏರ್‌ಪೋರ್ಟ್‌ನಲ್ಲಿ ಪರಿಸರಯುಕ್ತ ವಾತಾವರಣ ನಿರ್ಮಾಣ ಮಾಡಲು ಈ ಪರಿಸರ ದಿನದಂದೇ ಬಹುತೇಕ ಇಂಧನಯುಕ್ತ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್‌ ಟ್ಯಾಕ್ಸಿಗಳಾಗಿ ಪರಿವರ್ತಿಸಲಾಗಿದೆ. ಇದೀಗ 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಸೇರಿದಂತೆ ಶೇ.50 ಟ್ಯಾಕ್ಸಿಗಳು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ ಎಂದರು.

ರಿಫೆಕ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಜೈನ್ ಮಾತನಾಡಿ, ರಿಫೆಕ್ಸ್‌ನ ಗ್ರೀನ್, ರಿಫೆಕ್ಸ್ ಇವೀಲ಼್ ಮೂಲಕ ಏರ್‌ಪೋರ್ಟ್‌ನಲ್ಲಿ ಇವಿ ಟ್ಯಾಕ್ಸಿ ಒದಗಿಸುವ ಅವಕಾಶ ನಮಗೆ ದೊರೆತಿದೆ. ಈ ನೂತನ EV ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರು ಸುಲಭವಾಗಿ ಬುಕ್ ಮಾಡಬಹುದು. ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಲ್ಲಿ ಹಾಗೂ ಬಳಕೆದಾರ ಸ್ನೇಹಿ BLR ಪಲ್ಸ್ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಬುಕ್‌ ಮಾಡಬಹುದು.

Electric airport taxi

ಇದನ್ನೂ ಓದಿ: Aishwarya Arjun: ಅರ್ಜುನ್ ಸರ್ಜಾ ಪುತ್ರಿ ವಿವಾಹ; ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

ಇನ್ನು, ಮರುವಿನ್ಯಾಸಗೊಳಿಸಲಾದ EV ಟ್ಯಾಕ್ಸಿಗಳು ತಿಳಿನೀಲಿ ಬಣ್ಣ ಹಾಗೂ ಗುಲಾಬಿ ಬಣ್ಣ ಈ ಎರಡು ವಿಶಿಷ್ಟ ಬಣ್ಣಗಳಲ್ಲಿ ಇರಲಿವೆ. ತಿಳಿನೀಲಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಎಲ್ಲರೂ ಬಳಸಬಹುದಾಗಿದ್ದು, ಈ ಬಣ್ಣವು ಸುಸ್ಥಿರತೆಯನ್ನು ಒತ್ತಿ ಹೇಳುತ್ತದೆ. ಇನ್ನು, ಗುಲಾಬಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಮಹಿಳೆಯರಿಗಾಗಿ ಮೀಸಲಿಟ್ಟಿದ್ದು, ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸಲಿರುವುದು ವಿಶೇಷವಾಗಿದೆ.

Electric airport taxi

ತುರ್ತು ಸಂಪರ್ಕಕ್ಕೆ ಪಿಂಕ್‌ ಕಾರ್ಡ್‌

ಇನ್ನು, ಪ್ರತಿ ಪ್ರಯಾಣಿಕರಿಗೆ ಡ್ಯೂಟಿ ಮ್ಯಾನೇಜರ್, ಸ್ಥಳೀಯ ಪೊಲೀಸ್ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒಳಗೊಂಡಿರುವ ಪೂರಕ “ಪಿಂಕ್ ಕಾರ್ಡ್” ಅನ್ನು ಸಹ ಒದಗಿಸಲಾಗುತ್ತದೆ. ಇದರಿಂದ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಅರೆ-ರೊಬೊಟಿಕ್ ವಿಮಾನ ಟೋಯಿಂಗ್ ವಾಹನಗಳು ಮತ್ತು EV ವಾಹನಗಳನ್ನು ಏರ್‌ಸೈಡ್ ಮತ್ತು ಲ್ಯಾಂಡ್‌ಸೈಡ್ ಎರಡೂ ಕಡೆಯಲ್ಲೂ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ BLR ಏರ್‌ಪೋರ್ಟ್‌ನಲ್ಲಿರುವ ಎಲ್ಲಾ ವಾಹನಗಳನ್ನು ಸಮರ್ಥನೀಯ ಆಯ್ಕೆಗಳಿಗೆ ಪರಿವರ್ತಿಸುವ ದೀರ್ಘಾವಧಿಯ ದೃಷ್ಟಿಯೊಂದಿಗೆ BIAL ಹೊಂದಾಣಿಕೆಯನ್ನು ಮುಂದುವರೆಸಿದೆ. ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನದ ನೆನಪಿನಾರ್ಹ, ವಿಮಾನ ನಿಲ್ದಾಣದ ಕ್ಯಾಂಪಸ್‌ನಲ್ಲಿ 100 ಸಸಿಗಳನ್ನು ನೆಡಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Vijayanagara News: ಹೊಸಪೇಟೆ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.

VISTARANEWS.COM


on

World Menstrual Hygiene Day in Hosapete
Koo

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ (Vijayanagara News) ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು.

ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಋತುಚಕ್ರದ ಕುರಿತು ಅರಿವು ಪಡೆದು ಜ್ಞಾನವಂತರಾಗಬೇಕು. ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಕಿಶೋರಿಯರು ಮತ್ತು ಮಹಿಳೆಯರು ಋತುಸ್ರಾವ ಉಂಟಾದಾಗ ವೈಯಕ್ತಿಕ ಕಾಳಜಿ, ಸಂತಾನೋತ್ಪತ್ತಿ, ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಡಿಎಂಒ ಕಾರ್ಯಕ್ರಮದ ಅಧಿಕಾರಿ ಡಾ. ಕಮಲಮ್ಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಎಂದರೆ ಹದಿಹರೆಯದ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತವಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಿದೆ ಎಂದು ಸಲಹೆ ನೀಡಿದರು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಮುಟ್ಟಿನ ನೈರ್ಮಲ್ಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರ್‌ಸಿಎಚ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಂಗ್ ಹೋಂನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Child Trafficking Racket: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ ಪತ್ತೆ; 11 ಮಕ್ಕಳ ರಕ್ಷಣೆ

ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಟ್ಟಿನ ನೈರ್ಮಲ್ಯದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರಾಸಾವಿಕ ಮಾತನಾಡಿದರು. ಧರ್ಮನಗೌಡ ವಂದಿಸಿದರು.

Continue Reading

ಆರೋಗ್ಯ

Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

Tips for Mothers: ಕೆಲಸದ ಧಾವಂತದಲ್ಲಿ, ಗಡಿಬಿಡಿಯಲ್ಲಿ ಇಂಥ ಅಮ್ಮಂದಿರು ಮನೆಯವರಿಗೆ ಬೇಕಾದ್ದೆಲ್ಲವನ್ನೂ ಮಾಡಿ ಕೊಟ್ಟರೂ ತಮ್ಮ ಆಹಾರ, ಕಾಳಜಿಯ ಬಗ್ಗೆ ಅತ್ಯಂತ ಕಡಿಮೆ ಗಮನ ಹರಿಸುತ್ತಾರೆ. ಎಲ್ಲರ ಬೇಕು ಬೇಡಗಳ ಬಗ್ಗೆ ಗಮನ ಹರಿಸುವುದರಲ್ಲೇ ಅವರ ದಿನ ಕಳೆದು ಹೋಗುತ್ತದೆ. ಆದರೆ ದುಡಿಯುವ ತಾಯಂದಿರು ತಮ್ಮ ಆಹಾರ, ಆರೋಗ್ಯದ ಕಾಳಜಿಯನ್ನು ಮೊದಲು ಮಾಡಿಕೊಳ್ಳಬೇಕು. ಯಾಕೆಂದರೆ ಅವರು ಆರೋಗ್ಯವಾಗಿದ್ದರೆ ಮಾತ್ರ ಮನೆ ಮಂದಿ ಎಲ್ಲ ಆರೋಗ್ಯ ಚೆನ್ನಾಗಿರಲು ಸಾಧ್ಯ.

VISTARANEWS.COM


on

By

Tips for Mothers
Koo

ದುಡಿಯುವ ಅಮ್ಮಂದಿರಿಗೆ (Tips for Mothers) ತಮ್ಮ ವೃತ್ತಿಯನ್ನೂ ಮಕ್ಕಳನ್ನೂ (children) ಸಂಸಾರವನ್ನೂ (family) ತೂಗಿಸಿಕೊಂಡು ಹೋಗುವುದೇ ದೊಡ್ಡ ಸವಾಲು. ಕೆಲಸದ (work) ಧಾವಂತದಲ್ಲಿ, ಗಡಿಬಿಡಿಯಲ್ಲಿ ಇಂಥ ಅಮ್ಮಂದಿರು ಮನೆಯವರಿಗೆ ಬೇಕಾದ್ದೆಲ್ಲವನ್ನೂ ಮಾಡಿ ಕೊಟ್ಟರೂ ತಮ್ಮ ಆಹಾರ, ಕಾಳಜಿಯ ಬಗ್ಗೆ ಅತ್ಯಂತ ಕಡಿಮೆ ಗಮನ ಹರಿಸುತ್ತಾರೆ.

ಮಕ್ಕಳಿಗೆ ಬೇಕಾದ ಆಹಾರವನ್ನು, ಅವರ ಬೇಕು ಬೇಡಗಳನ್ನು ಗಮನ ಹರಿಸುವುದರಲ್ಲೇ ದಿನ ಕಳೆದು ಹೋಗಿ ತಮ್ಮ ಆಹಾರದ, ಆರೋಗ್ಯದ ಕಾಳಜಿಯನ್ನು ಮಾಡುವುದು ಗೌಣವಾಗುತ್ತದೆ. ಆದರೆ, ಮಹಿಳೆಯರ ಅತ್ಯಂತ ಅಗತ್ಯವಿರುವ ಇಂಥ ನಡುವಯಸ್ಸಿನಲ್ಲಿಯೇ ಬೇಕಾದ ಅಗತ್ಯ ಪೋಷಕಾಂಶಗಳು ಮಹಿಳೆಯರಿಗೆ ದಕ್ಕದೆ, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ, ಈ ಸುಲಭ ಅಭ್ಯಾಸಗಳನ್ನಾದರೂ ಬೆಳೆಸಿಕೊಳ್ಳುವ ಮೂಲಕ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿಕೊಳ್ಳಬಗಹುದು. ಅವು ಯಾವುವು ಎಂಬುದನ್ನು ನೋಡೋಣ.

ಬಾದಾಮಿ ಗೆಳೆಯನಾಗಲಿ

ಬಾದಾಮಿ ನಿಮ್ಮ ಗೆಳೆಯನಾಗಲಿ. ಕಚೇರಿಗೆ ಹೋಗುವಾಗ ಒಂದಿಷ್ಟು ಬಾದಾಮಿ ನಿಮ್ಮ ಬ್ಯಾಗ್‌ನಲ್ಲಿರಲಿ. ಇದು ನಿಮ್ಮ ಆಪತ್ಬಾಂಧವನಾಗಿ, ಗೆಳೆಯನಾಗಿ ಸದಾ ನಿಮಮ ಸಹಾಯಕ್ಕೆ ಬರುತ್ತದೆ. ಪ್ರೊಟೀನ್‌, ಆರೋಗ್ಯಯುತ ಕೊಬ್ಬು, ನಾರಿನಂಶ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಬಾದಾಮಿಯನ್ನು ಕಚೇರಿಯ ಬಿಡುವಿನಲ್ಲಿ ಹೊಟ್ಟೆಗಿಳಿಸಬಹುದು. ಆಗ, ಏನೋ ಸಿಕ್ಕಿದ್ದನ್ನು ತಿನ್ನುವ ಅಭ್ಯಾಸಕ್ಕೆ ಕಡಿವಾಣ ಬೀಳುತ್ತದೆ. ಮಹಿಳೆಯರ ದೇಹಕ್ಕೆ ಅಗತ್ಯ ಪೋಷಕಾಂಶಗಳೂ ದಕ್ಕುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಚರ್ಮ, ಕೂದಲ ಆರೋಗ್ಯವೂ ಇಮ್ಮಡಿಗೊಳ್ಳುತ್ತದೆ.

ಸಮಯ ಮೀಸಲಿಡಿ

ವಾರಾಂತ್ಯದಲ್ಲಿ ಒಂದಿಷ್ಟು ಸಮಯ ಕೇವಲ ನಿಮಗಾಗಿ ಮೀಸಲಿಡಿ. ಆ ವಾರವಿಡೀ, ಕಚೇರಿಯಲ್ಲಿ ನೀವು ತಿನ್ನಬಹುದಾದ ಆರೋಗ್ಯಯುತ ಆಹಾರಗಳ ಸೇವನೆಗಾಗಿ ಪಟ್ಟಿ ತಯಾರಿಸಿ. ಮುಂಚಿತವಾಗಿ ಪಟ್ಟಿ ರೆಡಿ ಮಾಡುವುದರಿಂದ ಪ್ರತಿ ದಿನ ಯಾವ ಸ್ನ್ಯಾಕ್ಸ್‌ ತಾನು ತಿನ್ನಬೇಕೆಂಬ ಮುಂಚಿತ ಅರಿವು ಇರುತ್ತದೆ.

ಸರಳ ಆಹಾರ ತಯಾರಿಸಿ

ಸುಲಭ ಹಾಗೂ ಸರಳವಾದ ಆಹಾರ ತಯಾರಿಸಿ. ವಾರಾಂತ್ಯದಲ್ಲೇ, ಈ ಬಗ್ಗೆ ತಯಾರಿ ನಡೆಸಿ, ಒಂದಿಷ್ಟು ಅಡುಗೆಗೆ ಪೂರಕ ತಯಾರಿಯನ್ನು ಮಾಡಿಡಬಹುದು. ಉದಾಹರಣೆಗೆ ಮಾರುಕಟ್ಟೆಯ ಕೆಚಪ್‌ ಪದೇ ಪದೇ ಬಳಸುವ ಮೊದಲು ಟೊಮೇಟೋ ಚಟ್ನಿ ತಯಾರಿಸಿ ಇಟ್ಟುಕೊಳ್ಳಬಹದು. ಒಂದಿಷ್ಟು ಚಟ್ನಿಪುಡಿಗಳು, ತರಕಾರಿ ಕತ್ತರಿಸಿಡುವುದು, ಹಿಟ್ಟು ಮೊದಲೇ ರೆಡಿ ಮಾಡಿಡುವುದು ಇತ್ಯಾದಿ ಕೆಲಸಗಳನ್ನು ಮಾಡಿದರೆ, ಕೆಲಸ ಸುಲಭವಾಗುತ್ತದೆ.


ಆರೋಗ್ಯಕರ ಸ್ನ್ಯಾಕ್

ಕಚೇರಿಗೆ ಒಯ್ಯುವಾಗ ಆರೋಗ್ಯಕರ ಸ್ನ್ಯಾಕ್‌ ತೆಗೆದುಕೊಂಡು ಹೋಗಿ. ಉದಾಹರಣೆ, ಒಂದು ಹಣ್ಣು, ಒಂದಿಷ್ಟು ಬಾದಾಮಿ ಅಥವಾ ಬೀಜಗಳು, ಒಣ ಹಣ್ಣುಗಳು, ಮೊಳಕೆಕಾಳು ಹಸಿ ತರಕಾರಿಗಳು, ಸಲಾಡ್‌ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ: Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

ಪೋಷಕಾಂಶಗಳ ಆಹಾರ

ಆಹಾರದ ಆಯ್ಕೆ ಮಾಡುವಾಗ ಪೋಷಕಾಂಶಗಳಿಂದ ಸಮೃದ್ಧವಾದ್ದನ್ನೇ ಆಯ್ಕೆ ಮಾಡಿ. ಸಂಪೂರ್ಣ ಆಹಾರದತ್ತ ಗಮನ ಇರಲಿ. ನಿತ್ಯವೂ ಬಗೆಬಗೆಯ ಪೋಷಕಾಂಶಗಳ ವೆರೈಟಿ ಆಹಾರಗಳು ಹೊಟ್ಟೆ ಸೇರಲಿ. ಒಂದೇ ಬಗೆಯ ನೀರಸ ಆಹಾರಗಳ ಅಭ್ಯಾಸವಿದ್ದರೆ ಬಿಟ್ಟುಬಿಡಿ.

ಮೈಂಡ್‌ಫುಲ್‌ ಈಟಿಂಗ್‌

ಮೈಂಡ್‌ಫುಲ್‌ ಈಟಿಂಗ್‌ ಬಗ್ಗೆ ಗಮನ ಹರಿಸಿ. ಅಂದರೆ ಪ್ರತಿ ತುತ್ತನ್ನೂ ಅನುಭವಿಸಿ ತಿನ್ನಿ. ನಿಧಾನವಾಗಿ ತಿನ್ನಲು ಅಭ್ಯಾಸ ಮಾಡಿ. ಊಟ ಮಾಡುವಾಗ ಬೇರೆ ಕೆಲಸಗಳ ಮೇಲೆ ಗಮನ ಹರಿಸಬೇಡಿ. ಊಟವನ್ನು ಅನುಭವಿಸಿ ಚೆನ್ನಾಗಿ ಜಗಿದು ನಿಧಾನವಾಗಿ ತಿನ್ನಿ. ನಿಧಾನವಾಗಿ ತಿನ್ನುವುದರಿಂದ ಹೆಚ್ಚು ತಿನ್ನುವ ಬಯಕೆಯಾಗುವುದಿಲ್ಲ. ಅಗತ್ಯಕ್ಕಿಂದ ಹೆಚ್ಚು ಉಣ್ಣುವುದು ತಪ್ಪುತ್ತದೆ. ಸರಿಯಾಗಿ ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇರುತ್ತದೆ.

Continue Reading

ಮಹಿಳೆ

Indian Railway: ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಎಷ್ಟೊಂದು ಸುರಕ್ಷತಾ ಕ್ರಮಗಳಿವೆ ನೋಡಿ!

ಭಾರತೀಯ ರೈಲ್ವೇಯ (Indian Railway) ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Indian Railway
Koo

ಮನೆಯ ಮಗಳು ರೈಲಿನಲ್ಲಿ (Indian Railway) ಒಬ್ಬಳೇ ಪ್ರಯಾಣ (Solo trip) ಮಾಡಬೇಕಾದ ಅನಿವಾರ್ಯತೆ ಬಂದಾಗ ಪೋಷಕರಿಗೆ ಒಂದು ಕ್ಷಣ ಗಾಬರಿಯಾಗುವುದು ಸಹಜ. ಇನ್ನು ಮಹಿಳೆಯರಿಗೂ ಅಷ್ಟೇ.. ಏಕಾಂಗಿಯಾಗಿ ರೈಲು ಪ್ರಯಾಣ (solo women travellers) ಮಾಡಬೇಕಾದ ಸಂದರ್ಭ ಬಂದರೆ ಕೊಂಚ ಆತಂಕವಂತೂ ಮನದಲ್ಲಿ ಇದ್ದೇ ಇರುತ್ತದೆ. ಆದರೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಬೇಕಾದರೆ ಈ ಚಿಂತೆ ಬೇಕಾಗಿಲ್ಲ.

ಭಾರತೀಯ ರೈಲ್ವೇಯ ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

1989ರಲ್ಲಿ ಜಾರಿಗೆ ಬಂದ ಈ ವಿಶೇಷ ಕಾನೂನು ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 139 ರಲ್ಲಿ ವಿವರಿಸಲಾಗಿದೆ. ಒಂಟಿ ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಮಕ್ಕಳೊಂದಿಗೆ ಇರುವವರಿಗೆ ಇದು ರಕ್ಷಣೆ ನೀಡುತ್ತದೆ. ಉದಾಹರಣೆಗೆ ಈ ವಿಭಾಗದ ಪ್ರಕಾರ ಒಬ್ಬ ಮಹಿಳೆ ಪುರುಷ ಪ್ರಯಾಣಿಕರಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಆಕೆ ತನ್ನ ಮಗುವಿನೊಂದಿಗೆ ಇದ್ದರೆ ಅವಳು ರೈಲು ಪಾಸ್ ಅಥವಾ ಟಿಕೆಟ್ ಇಲ್ಲದೆ ಕಂಡುಬಂದರೆ ರಾತ್ರಿಯಲ್ಲಿ ರೈಲಿನಿಂದ ಇಳಿಯಲು ಆದೇಶಿಸಲಾಗುವುದಿಲ್ಲ.

ಹದಿಹರೆಯದ ಹುಡುಗಿ ಅಥವಾ ಮಹಿಳೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಟಿಕೆಟ್ ಹೊಂದಿಲ್ಲದಿದ್ದರೆ ಟಿಟಿಇ ಅವರನ್ನು ರೈಲಿನಿಂದ ಹೊರಹಾಕಲು ಅನುಮತಿ ಇಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟವಾಗಿ ಹೇಳಿದೆ.

ಮಹಿಳೆಯ ಬಳಿ ಹಣವಿದ್ದರೆ ದಂಡ ಪಾವತಿಸಿ ಪ್ರಯಾಣ ಮುಂದುವರಿಸಬಹುದು. ಮಹಿಳೆಗೆ ಹಣದ ಕೊರತೆಯಿರುವ ಸಂದರ್ಭಗಳಲ್ಲಿ ಸಹ ಟಿಟಿಇ ಅವರನ್ನು ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲು ಅನುಮತಿ ಇಲ್ಲ. ಆದರೆ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಈ ಬಗ್ಗೆ ತಿಳಿದಿಲ್ಲ. ಒಂಟಿಯಾಗಿ ಪ್ರಯಾಣಿಸುವ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕಾದ ಪ್ರಮುಖ ಪ್ರಯಾಣಿಕರ ನಿಯಮಗಳಲ್ಲಿ ಇದು ಒಂದು. ಮಹಿಳಾ ಪ್ರಯಾಣಿಕರಿಗಾಗಿ ಅಧಿಕಾರಿಗಳು ಜಾರಿಗೆ ತಂದಿರುವ ಇನ್ನೂ ಕೆಲವು ನಿಯಮಗಳನ್ನು ಇಲ್ಲಿವೆ.


ಮಹಿಳಾ ಸುರಕ್ಷತೆಗಾಗಿ ಭಾರತೀಯ ರೈಲ್ವೇಯಲ್ಲಿ ಹಲವು ನಿಯಮಗಳು ಜಾರಿಯಲ್ಲಿವೆ
1. ಭಾರತೀಯ ರೈಲ್ವೆ ಕಾಯಿದೆ 1989 ರ ಸೆಕ್ಷನ್ 311 ರ ಅಡಿಯಲ್ಲಿ ಮಿಲಿಟರಿ ಸಿಬ್ಬಂದಿಗೆ ಮಹಿಳಾ ಕಂಪಾರ್ಟ್‌ಮೆಂಟ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

2. ಅಧಿಕಾರಿಗಳೊಂದಿಗೆ ಮಹಿಳಾ ಕಾನ್‌ಸ್ಟೆಬಲ್ ಇದ್ದಾಗ ಮಾತ್ರ ಮಹಿಳೆಯನ್ನು ಹೊರಹೋಗುವಂತೆ ಹೇಳಬಹುದು.

3. ಸೆಕ್ಷನ್ 162 ರ ಪ್ರಕಾರ 12 ವರ್ಷದೊಳಗಿನ ಹುಡುಗರು ಮಹಿಳಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸಬಹುದು.

4. ಮಹಿಳಾ ಕೋಚ್‌ಗೆ ಪ್ರವೇಶಿಸುವ ಯಾವುದೇ ಪುರುಷ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

5. ಮಹಿಳೆಯರಿಗಾಗಿ ದೂರದ ಮೇಲ್/ ಎಕ್ಸ್‌ಪ್ರೆಸ್ ರೈಲುಗಳ ಸ್ಲೀಪರ್ ವರ್ಗದಲ್ಲಿ ಆರು ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, ಗರೀಬ್ ರಥ/ರಾಜಧಾನಿ/ ದುರೊಂಟೊ/ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಹಂತದ AC (3AC) ಕೋಚ್‌ಗಳಲ್ಲಿ ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ. ಅವರ ವಯಸ್ಸನ್ನು ಲೆಕ್ಕಿಸದೆ ಅಥವಾ ಅವರು ಏಕಾಂಗಿಯಾಗಿ ಅಥವಾ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ ಇದನ್ನು ಮಾಡಲಾಗುತ್ತದೆ.

6. ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಸಿಸಿಟಿವಿಗಳು ಮತ್ತು ಮೇಲ್ವಿಚಾರಣಾ ಕೊಠಡಿಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಿದೆ.

7. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) 2020ರ ಅಕ್ಟೋಬರ್ 17ರಂದು ‘ಮೇರಿ ಸಹೇಲಿ’ ಎಂಬ ಪ್ಯಾನ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Driving Tips: ವಾಹನ ಚಾಲನೆ ಮಾಡುತ್ತಿರುವಾಗ ಪ್ರಾಣಿಗಳಿಂದಾಗುವ ಅಪಘಾತ ತಪ್ಪಿಸಿಕೊಳ್ಳುವುದು ಹೇಗೆ?

8. ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಬೋರ್ಡಿಂಗ್‌ನಿಂದ ಡಿ-ಬೋರ್ಡಿಂಗ್‌ವರೆಗಿನ ಸಂಪೂರ್ಣ ಪ್ರಯಾಣಕ್ಕಾಗಿ ವರ್ಧಿತ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.

9. ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವವರಿಗೆ ಭದ್ರತೆಯನ್ನು ಒದಗಿಸುವುದು ಉಪಕ್ರಮದ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ.

Continue Reading
Advertisement
Health Tips
ಆರೋಗ್ಯ5 mins ago

Health Tips: ಆರೋಗ್ಯಕರ ಆಗಿರಬೇಕಿದ್ದರೆ ನಾವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು?

Narendra Modi Live
ದೇಶ12 mins ago

Narendra Modi Live: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ; ಲೈವ್‌ ಇಲ್ಲಿ ವೀಕ್ಷಿಸಿ

Champions Trophy 2025
ಪ್ರಮುಖ ಸುದ್ದಿ30 mins ago

IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ

Fake CBI Gang
ಕ್ರೈಂ49 mins ago

Fake CBI Gang: ನಿವೃತ್ತ ಅಧಿಕಾರಿಯ 85 ಲಕ್ಷ ರೂ. ಎಗರಿಸಿದ ನಕಲಿ ಸಿಬಿಐ ಗ್ಯಾಂಗ್!

Kannada New Movie Chilli Chicken Official Trailer
ಸ್ಯಾಂಡಲ್ ವುಡ್1 hour ago

Kannada New Movie: ‘ಚಿಲ್ಲಿ ಚಿಕನ್​’ ಟ್ರೈಲರ್‌ ಔಟ್‌; ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ!

IND vk PAK
ಕ್ರಿಕೆಟ್1 hour ago

IND vs PAK : ​ ವಿರಾಟ್​ ಕೊಹ್ಲಿಯ ಚಪ್ಪಲಿಗೂ ಸಮವಲ್ಲ ಬಾಬರ್ ಅಜಂ; ಪಾಕಿಸ್ತಾನದ ಮಾಜಿ ಆಟಗಾರನ ಟೀಕೆ

Champions Trophy 2025
ಕ್ರೀಡೆ1 hour ago

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಮುಹೂರ್ತ ಫಿಕ್ಸ್​; ಪಾಕ್​ಗೆ ತೆರಳಲಿದೆಯೇ ಭಾರತ?

Killer Python
ಕ್ರೈಂ1 hour ago

Killer Python: ಮಹಿಳೆಯನ್ನು ಜೀವಂತವಾಗಿ ನುಂಗಿದ ಹೆಬ್ಬಾವು! ಹೊಟ್ಟೆ ಸೀಳಿ ಹೊರ ತೆಗೆದರು!

Dupatta Selection Tips
ಫ್ಯಾಷನ್1 hour ago

Dupatta Selection Tips: ಪರ್ಫೆಕ್ಟ್ ದುಪಟ್ಟಾ ಸೆಲೆಕ್ಷನ್‌ಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

Viral Video
ಕ್ರೈಂ1 hour ago

Viral Video: ಹೋಟೆಲ್‌ನೊಳಗೆ ಪಿಜ್ಜಾ ತಿನ್ನುತ್ತಿರುವಾಗಲೇ ಮಹಿಳೆಯ ಸರ ಅಪಹರಣ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌