India vs Netherlands | ನೆದರ್ಲೆಂಡ್ಸ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ! ರೋಹಿತ್, ವಿರಾಟ್, ಸೂರ್ಯ, ಭುವಿ ಮಿಂಚಿಂಗ್! - Vistara News

Latest

India vs Netherlands | ನೆದರ್ಲೆಂಡ್ಸ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ! ರೋಹಿತ್, ವಿರಾಟ್, ಸೂರ್ಯ, ಭುವಿ ಮಿಂಚಿಂಗ್!

ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಟೀಮ್​ ಇಂಡಿಯಾ ನೆದರ್ಲೆಂಡ್ಸ್​(India vs Netherlands) ವಿರುದ್ಧ56 ರನ್​ ಅಂತರದಿಂದ ಗೆಲುವು ಸಾಧಿಸಿದೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಸಿಡ್ನಿ: ಆರಂಭದಲ್ಲಿ ಬ್ಯಾಟಿಂಗ್​ ಬಳಿಕ ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಟೀಮ್​ ಇಂಡಿಯಾ ಟಿ20 ವಿಶ್ವ ಕಪ್​ನ ಸೂಪರ್​12 ಹಂತದ ಪಂದ್ಯದಲ್ಲಿ ನೆದರ್ಲೆಂಡ್ಸ್​(India vs Netherlands) ತಂಡವನ್ನು 56 ರನ್​ ಅಂತರದಿಂದ ಮಣಿಸಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

ಸಿಡ್ನಿ ಮೈದಾನದಲ್ಲಿ ಗುರುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ. ನಾಯಕ ರೋಹಿತ್​ ಶರ್ಮಾ(53), ವಿರಾಟ್​ ಕೊಹ್ಲಿ(62*) ಮತ್ತು ಸೂರ್ಯಕುಮಾರ್ ಯಾದವ್(51*) ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 179 ರನ್​ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್​ ತಂಡ ತನ್ನ ಪಾಲಿನ ಓವರ್​ನಲ್ಲಿ 9 ವಿಕೆಟ್​ ಕಳೆದುಕೊಂಡು 123 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ನೆದರ್ಲೆಂಡ್ಸ್​ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತು.

ಭುವನೇಶ್ವರ್​ ಮಾರಕ ದಾಳಿ
ಅನುಭವಿ ಬೌಲರ್​ ಭುವನೇಶ್ವರ್ ಕುಮಾರ್​​ ಈ ಪಂದ್ಯದಲ್ಲಿ ಮೊದಲ ಎರಡು ಓವರ್​ ಮೇಡನ್​ ಸಹಿತ ವಿಕೆಟ್​ ಟೇಕಿಂಗ್​ ಪ್ರದರ್ಶನ ತೋರಿದರು. ಈ ಮೂಲಕ ನೆದರ್ಲೆಂಡ್ಸ್​ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ಪಾಕ್​ ವಿರುದ್ಧ ದುಬಾರಿಯಾಗಿದ್ದ ಅಕ್ಷರ್​ ಪಟೇಲ್​ ಕೂಡ ತಮ್ಮ ಮೊದಲ ಓವರ್​ನಲ್ಲೇ ವಿಕೆಟ್​ ಹಾರಿಸುವಲ್ಲಿ ಯಶಸ್ವಿಯಾದರು. ನೆದರ್ಲೆಂಡ್ಸ್​ 20 ರನ್​ಗೆ ಎರಡು ಪ್ರಮುಖ ವಿಕೆಟ್​ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ನೆದರ್ಲೆಂಡ್ಸ್​ ಪರ ಮಧ್ಯಮ ಕ್ರಮಾಂಕದ ಆಟಗಾರ ಕಾಲಿನ್ ಅಕೆರ್ಮನ್ ಒಂದು ಹಂತದಲ್ಲಿ ಪ್ರತಿ ಹೋರಾಟ ನಡೆಸುವ ಸೂಚನೆ ನೀಡಿದರೂ 17 ರನ್​ ಗಳಿಸಿದ ವೇಳೆ ಅಶ್ವಿನ್​ ಅವರ ಸ್ಪಿನ್​ ಬಲೆಗೆ ಬಿದ್ದರು. ಇಲ್ಲಿಂದ ನೆದರ್ಲೆಂಡ್ಸ್​ ಆಟಗಾರರು ಪೆವಿಲಿಯನ್‌ಗೆ​ ಪರೇಡ್​ ನಡೆಸಿದರು. ಕ್ರೀಸ್‌ನಲ್ಲಿ ಯಾವೊಬ್ಬ ಆಟಗಾರರೂ ಹೆಚ್ಚು ಹೊತ್ತು ಕಳೆಯಲು ಸಾಧ್ಯವಾಗಲಿಲ್ಲ.

ಅಶ್ವಿನ್​ ನಾಲ್ಕು ಓವರ್​ನಲ್ಲಿ 21 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಉರುಳಿಸಿದರು. ಅಕ್ಷರ್​ 18 ರನ್​ಗೆ 2 ವಿಕೆಟ್ ಕಬಳಿಸಿ ಮಿಂಚಿದರು. ಟಿಮ್ ಪ್ರಿಂಗಲ್ ಅಂತಿಮವಾಗಿ 20 ರನ್​ ಗಳಿಸಿ ನೆದರ್ಲೆಂಡ್ಸ್​ ಪರ ಅತ್ಯಧಿಕ ಸ್ಕೋರರ್​ ಎನಿಸಿಕೊಂಡರು.

ಕೊಹ್ಲಿ-ಸೂರ್ಯ ಉತ್ತಮ ಜತೆಯಾಟ
ಮೂರನೇ ವಿಕೆಟ್​ಗೆ ಜತೆಯಾದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್​ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿದರು. ಎದುರಾಳಿ ಬೌಲರ್​ಗಳಿಗೆ ಬೌಂಡರಿ, ಸಿಕ್ಸರ್​ ರುಚಿ ತೋರಿಸಿದ ಉಭಯ ಆಟಗಾರು ಅಜೇಯವಾಗಿ ಅರ್ಧ ಶತಕ ಪೂರೈಸಿದರು. ಕೊಹ್ಲಿ 44 ಎಸೆತಗಳಲ್ಲಿ 62 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಅರ್ಧ ಶತಕ ಗಳಿಸುವ ಮೂಲಕ ಮುರಿಯದ ಮೂರನೇ ವಿಕೆಟ್​ಗೆ 95 ರನ್ ಜತೆಯಾಟ ನಡೆಸಿದರು. ಈ ಮೊತ್ತ ಕೇವಲ 48 ಎಸೆತದಿಂದ ದಾಖಲಾಯಿತು.

ಆರಂಭಿಕ ಆಟಗಾರ ಕೆ.ಎಲ್‌ ರಾಹುಲ್ ಮತ್ತೆ ವಿಫಲರಾಗಿದ್ದಾರೆ. 12 ಎಸೆತಗಳಲ್ಲಿ 9 ರನ್​ ಗಳಿಸಿ ನಿರಾಸೆ ಮೂಡಿಸಿದರು. ಪಾಕಿಸ್ತಾನ ಎದುರು 4 ರನ್‌ಗೆ ವಿಕೆಟ್‌ ಕೈಚೆಲ್ಲಿದ್ದ ರೋಹಿತ್‌, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದರು. ಮೂರು ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಸಹಿತ 53 ರನ್​ ಪೇರಿಸಿದರು.

ಸ್ಕೋರ್​ ವಿವರ

ಭಾರತ: 20 ಓವರ್​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 179 (ರೋಹಿತ್​ 53, ಕೊಹ್ಲಿ 62* ಸೂರ್ಯಕುಮಾರ್​ 51* ವ್ಯಾನ್ ಮೀಕೆರೆನ್ 32ಕ್ಕೆ 1)

ನೆದರ್ಲೆಂಡ್ಸ್​: 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 (ಟಿಮ್ ಪ್ರಿಂಗಲ್ 20, ಕಾಲಿನ್ ಅಕೆರ್ಮನ್ 17, ಭುವನೇಶ್ವರ್​ ಕುಮಾರ್​ 9ಕ್ಕೆ2, ಅಕ್ಷರ್​ 18ಕ್ಕೆ 2, ಅಶ್ವಿನ್​ 21ಕ್ಕೆ2, ಅರ್ಶ್​ದೀಪ್​ ಸಿಂಗ್ 37ಕ್ಕೆ 2​ ).

ಇದನ್ನೂ ಓದಿ | BCCI WOMEN | ಬಿಸಿಸಿಐನಿಂದ ಐತಿಹಾಸಿಕ ಹೆಜ್ಜೆ, ಇನ್ನು ಪುರುಷ, ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Muhammad Usman : ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಯುಎಇ ಕ್ರಿಕೆಟಿಗ ಉಸ್ಮಾನ್​ಬ

Muhammad Usman

VISTARANEWS.COM


on

Muhammad Usman
Koo

ಬೆಂಗಳೂರು: ಯುಎಇ ಬ್ಯಾಟರ್​ ಮುಹಮ್ಮದ್ ಉಸ್ಮಾನ್ (Muhammad Usman) ಶುಕ್ರವಾರ (ಜೂನ್ 28) ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾರೆ. ಆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಅಗಿದ್ದ ಅವರು ಒಟ್ಟು 85 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಪಾಕಿಸ್ತಾನದ ಲಾಹೋರ್​ನಲ್ಲಿ ಜನಿಸಿದ 38ರ ಹರೆಯದ ಉಸ್ಮಾನ್​ 2016ರಿಂದ 2022ರವರೆಗೆ ಯುಎಇ ಪರ 38 ಏಕದಿನ ಮತ್ತು 47 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಫೆಬ್ರವರಿ 2016 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಟಿ 20 ಐ ಮೂಲಕ ಯುಎಇ ಪರ ಪಾದಾರ್ಪಣೆ ಮಾಡಿದರು. ಅದೇ ವರ್ಷದ ಆಗಸ್ಟ್​​ನಲ್ಲಿ ಮುಹಮ್ಮದ್ ಉಸ್ಮಾನ್ ಎಡಿನ್​ಬರ್ಗ್​​ನಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್​ಗೆ ಪದಾ ರ್ಪಣೆ ಮಾಡಿದರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯುಎಇಯನ್ನು ಪ್ರತಿನಿಧಿಸುವ ಮೊದಲು, ಎಡಗೈ ಬ್ಯಾಟರ್​ ಜನವರಿ 2016 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಅವರು ಯುಎಇ ಪರ ಒಟ್ಟು 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

ಮೊಹಮ್ಮದ್ ಉಸ್ಮಾನ್ 38 ಏಕದಿನ ಪಂದ್ಯಗಳಲ್ಲಿ 31.50 ಸರಾಸರಿಯಲ್ಲಿ 1008 ರನ್ ಗಳಿಸಿದ್ದಾರೆ. ಅವರು 50 ಓವರ್​ಗಳ ಸ್ವರೂಪದಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಟಿ20ಐನಲ್ಲಿ ದಕ್ಷಿಣ ಆಫ್ರಿಕಾ 47 ಪಂದ್ಯಗಳಲ್ಲಿ ಮೂರು ಅರ್ಧಶತಕಗಳ ಸಹಾಯದಿಂದ 891 ರನ್ ಗಳಿಸಿದೆ.

ಅವರು 2016 ರ ಏಷ್ಯಾ ಕಪ್​ಗಾಗಿ ಯುಎಇ ತಂಡದ ಭಾಗವಾಗಿದ್ದರು. ಅವರು 7 ಪಂದ್ಯಗಳಲ್ಲಿ 176 ರನ್ ಗಳಿಸಿದ ನಂತರ ಯುಎಇಯ ಅತಿ ಹೆಚ್ಚು ರನ್ ಗಳಿಸಿದ ಮತ್ತು ಒಟ್ಟಾರೆ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಪಂದ್ಯಾವಳಿಯನ್ನು ಮುಗಿಸಿದ್ದರು. 5 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅನುಭವಿ ಬ್ಯಾಟ್ಸ್ಮನ್ ಶತಕದ ಸಹಾಯದಿಂದ 217 ರನ್ ಗಳಿಸಿದ್ದಾರೆ. 2022ರ ಫೆಬ್ರವರಿಯಲ್ಲಿ ಒಮಾನ್ ಹಾಗೂ ನೇಪಾಳ ವಿರುದ್ಧ ಏಕದಿನ ಹಾಗೂ ಟಿ20ಐನಲ್ಲಿ ಕೊನೆಯ ಬಾರಿ ಆಡಿದ್ದರು.

ಇದು ನಂಬಲಾಗದ ಪ್ರಯಾಣ: ಮುಹಮ್ಮದ್ ಉಸ್ಮಾನ್

ಮುಹಮ್ಮದ್ ಉಸ್ಮಾನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ತಮ್ಮ ಪ್ರಯಾಣವನ್ನು ನಂಬಲಾಗದ ಎಂದು ಕರೆದರು ಮತ್ತು ಅವರ ಕ್ರಿಕೆಟ್ ಪ್ರಯಾಣದಲ್ಲಿ ಪಾತ್ರವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅವರು ತಮ್ಮ ಆಟದ ವೃತ್ತಿಜೀವನದ ಅಂತ್ಯದ ನಂತರವೂ ಆಟದೊಂದಿಗೆ ಸಂಬಂಧ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: Virat Kohli : ಫಾರ್ಮ್​ ಕಳೆದುಕೊಂಡಿರುವ ವಿರಾಟ್​ ಕೊಹ್ಲಿಯ ಬೆಂಬಲಕ್ಕೆ ನಿಂತ ಗಂಗೂಲಿ

ಯುಎಇ ಕ್ರಿಕೆಟ್ ತಂಡ ಮತ್ತು ಕ್ರಿಕೆಟ್ ಮಂಡಳಿಯೊಂದಿಗೆ ಇದು ನಂಬಲಾಗದ ಪ್ರಯಾಣವಾಗಿದೆ. ನನ್ನ ತಂಡದ ಸದಸ್ಯರು, ತರಬೇತುದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ಸೇರಿದಂತೆ ನನ್ನ ಪ್ರಯಾಣದಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. 85 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಯುಎಇಯನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಮತ್ತು ಹೆಮ್ಮೆ ಎನಿಸುತ್ತದೆ ಎಂದುಹೇಳಿದರು.

ನಾನು ಕ್ರೀಡೆಯೊಂದಿಗೆ ಬೇರೆ ಸಂಬಂಧ ಹೊಂದಲು ಬಯಸುವುದರಿಂದ ನನ್ನ ಜೀವನದ ಮುಂದಿನ ಅಧ್ಯಾಯವನ್ನು ಎದುರು ನೋಡುತ್ತಿದ್ದೇನೆ. ಯುಎಇ ತಂಡ ಮತ್ತು ಆಟಗಾರರಿಗೆ ದೇಶದಲ್ಲಿ ಆಟಕ್ಕೆ ಬಹಳ ರೋಮಾಂಚನಕಾರಿ ಸಮಯದಲ್ಲಿ ನಾನು ಶುಭ ಹಾರೈಸಲು ಬಯಸುತ್ತೇನೆ ಎಂದು ಮುಹಮ್ಮದ್ ಉಸ್ಮಾನ್ ಹೇಳಿದರು.

Continue Reading

ತಂತ್ರಜ್ಞಾನ

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಫೋನ್, ಲುವೊ, ಗಾ, ಕಿಕೊಂಗೊ, ಸ್ವಾತಿ, ವೆಂಡಾ ಮತ್ತು ವುಲ್ಫ್‌ನಂತಹ ಹೆಚ್ಚಿನ ಆಫ್ರಿಕನ್ ಭಾಷೆಗಳನ್ನು ಸೇರಿಸಲಾಗಿದ್ದು, ಇದರಲ್ಲಿ ಏಳು ಭಾರತೀಯ ಭಾಷೆಗಳಾದ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿ ಮತ್ತು ತುಳು (Tulu language) ಕೂಡ ಸೇರ್ಪಡೆಗೊಂಡಿದೆ.

VISTARANEWS.COM


on

By

Tulu language
Koo

ಲಕ್ಷಾಂತರ ಜನರ ಸಂವಹನಕ್ಕೆ (communication) ಸಹಾಯ ಮಾಡುತ್ತಿರುವ ಗೂಗಲ್‌ನಲ್ಲಿ ಈಗ ತುಳು ಭಾಷೆ (Tulu language) ಸೇರಿ 110 ಹೊಸ ಭಾಷೆಗಳನ್ನು (new languages) ಅನುವಾದಕ್ಕೆ ಲಭ್ಯವಾಗಿದೆ. ಅನುವಾದದಲ್ಲಿ ಹೊಸ ನವೀಕರಣವನ್ನು ಗೂಗಲ್ (google) ಪ್ರಕಟಿಸಿದ್ದು, ಅಪ್ಲಿಕೇಶನ್ ಮೂಲಕ ವಿವಿಧ ಭಾಷೆಗಳನ್ನು ಅನುವಾದಗೊಳಿಸಲು ಆರ್ಟಿಫಿಷಿಯಲ್ ತಂತ್ರಜ್ಞಾನವನ್ನು ಬಳಸುತ್ತಿರುವುದಾಗಿ ಗೂಗಲ್ ಹೇಳಿದೆ.

PaLM 2 ಭಾಷೆಯ ಮಾದರಿಯ ಬೆಂಬಲದೊಂದಿಗೆ ಗೂಗಲ್ ಈಗ 110 ಹೊಸ ಭಾಷೆಗಳನ್ನು ಅನುವಾದಗೊಳಿಸುತ್ತಿದೆ. ಆಲ್ಫಾಬೆಟ್ ಇಂಕ್ ಕಂಪೆನಿಯು ಇದು ತನ್ನ ಅತಿದೊಡ್ಡ ವಿಸ್ತರಣೆಯಾಗಿದೆ ಎಂದು ಹೇಳಿಕೊಂಡಿದೆ. ಗೂಗಲ್‌ನಲ್ಲಿ ಅನುವಾದವನ್ನು 2006ರಲ್ಲಿ ಪರಿಚಯಿಸಲಾಯಿತು. 2024ರ ಜೂನ್ ವೇಳೆಗೆ ಈ ವೈಶಿಷ್ಟ್ಯವು 243 ಭಾಷೆಗಳನ್ನು ಬೆಂಬಲಿಸುತ್ತದೆ. ಹೆಚ್ಚು ಜನರಿಗೆ ಅನುಕೂಲವಾಗುವಂತೆ ಮಾಡಲು ಈ ವೈಶಿಷ್ಟ್ಯಕ್ಕೆ ಇತ್ತೀಚಿನ ತಂತ್ರಜ್ಞಾನಗಳನ್ನು ಸತತವಾಗಿ ಅನ್ವಯಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

2022ರಲ್ಲಿ ಕಂಪನಿಯು ಝೀರೋ- ಶಾಟ್ ಮೆಷಿನ್ ಅನುವಾದವನ್ನು ಬಳಸಿಕೊಂಡು 24 ಹೊಸ ಭಾಷೆಗಳನ್ನು ಸೇರಿಸಿತು. ಈ ತಂತ್ರದ ಮೂಲಕ ಯಂತ್ರ ಕಲಿಕೆಯ ಮಾದರಿಗಳು ಹೇಗೆ ಅನುವಾದಿಸಬೇಕೆಂದು ಕಲಿಯಬಹುದು. ಆಗ ಕಂಪೆನಿಯು ತನ್ನ 1,000 ಭಾಷೆಯ ಉಪಕ್ರಮವನ್ನು ಘೋಷಿಸಿತ್ತು. ಉಪಕ್ರಮದ ಭಾಗವಾಗಿ ಕಂಪೆನಿಯು ಪ್ರಪಂಚದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಎಐ ಮಾದರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಸುಮಾರು ಅರ್ಧ ಬಿಲಿಯನ್ ಅನುವಾದಿಸಲು ಸಹಾಯ

ಗೂಗಲ್ ತನ್ನ ಅಧಿಕೃತ ಬಿಡುಗಡೆಯಲ್ಲಿ ಹೊಸ ಭಾಷೆಗಳು 614 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವವರನ್ನು ಪ್ರತಿನಿಧಿಸುತ್ತವೆ. ಇದರಿಂದಾಗಿ ಪ್ರಪಂಚದ ಜನಸಂಖ್ಯೆಯ ಸುಮಾರು ಎಂಟು ಪ್ರತಿಶತದಷ್ಟು ಜನರ ಭಾಷೆಗಳನ್ನು ಅನುವಾದ ಮಾಡಬಹುದು. ಇವುಗಳಲ್ಲಿ ಕೆಲವು 100 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವ ಪ್ರಮುಖ ಭಾಷೆಗಳಾಗಿವೆ. ಆದರೆ ಇತರವು ಸ್ಥಳೀಯ ಜನರ ಸಣ್ಣ ಸಮುದಾಯಗಳಿಂದ ಮಾತನಾಡುತ್ತವೆ.


ಏಳು ಭಾರತೀಯ ಭಾಷೆಗಳು

ಇತ್ತೀಚಿನ ವಿಸ್ತರಣೆಯು ಫೋನ್, ಲುವೊ, ಗಾ, ಕಿಕೊಂಗೊ, ಸ್ವಾತಿ, ವೆಂಡಾ ಮತ್ತು ವುಲ್ಫ್‌ನಂತಹ ಹೆಚ್ಚಿನ ಆಫ್ರಿಕನ್ ಭಾಷೆಗಳನ್ನು ಅಪ್ಲಿಕೇಶನ್‌ಗೆ ಸೇರಿಸಿದೆ. ಹೊಸ ಸೇರ್ಪಡೆಯು ಏಳು ಭಾರತೀಯ ಭಾಷೆಗಳಾದ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿ ಮತ್ತು ತುಳುವನ್ನು ಒಳಗೊಂಡಿದೆ.

ಹೇಗೆ ಅನ್ವಯ?

ಅನುವಾದಕ್ಕೆ ಹೊಸ ಭಾಷೆಗಳನ್ನು ಹೇಗೆ ಸೇರಿಸುತ್ತದೆ ಎಂಬುದನ್ನು ಗೂಗಲ್ ಉಲ್ಲೇಖಿಸಿದೆ. ಟೆಕ್ ದೈತ್ಯ ಪ್ರಾದೇಶಿಕ ಪ್ರಭೇದಗಳು, ಉಪಭಾಷೆಗಳು ಮತ್ತು ಕಾಗುಣಿತ ಮಾನದಂಡಗಳಂತಹ ಹಲವಾರು ಅಂಶಗಳನ್ನು ಇದಕ್ಕಾಗಿ ಪರಿಗಣಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಅನೇಕ ಭಾಷೆಗಳು ಒಂದೇ ಪ್ರಮಾಣಿತ ರೂಪವನ್ನು ಹೊಂದಿರದ ಕಾರಣ ಸಾಮಾನ್ಯವಾಗಿ ಬಳಸುವ ಪ್ರಭೇದಗಳಿಗೆ ಆದ್ಯತೆ ನೀಡುವುದಾಗಿ ಗೂಗಲ್ ಹೇಳಿದೆ. ಪಾಲ್ಎಮ್ 2 ತಂತ್ರಜ್ಞಾನವು ಹಿಂದಿ ಮತ್ತು ಫ್ರೆಂಚ್ ಕ್ರಿಯೋಲ್‌ಗಳಂತಹ ಪರಸ್ಪರ ನಿಕಟ ಸಂಬಂಧ ಹೊಂದಿರುವ ಭಾಷೆಗಳನ್ನು ಕಲಿಯಲು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿದೆ.

ಭಾಷಾಶಾಸ್ತ್ರಜ್ಞರು ಮತ್ತು ಸ್ಥಳೀಯ ಭಾಷಿಕರೊಂದಿಗೆ ಸಹಯೋಗ ಮಾಡುವ ಮೂಲಕ ಕಾಲಾನಂತರದಲ್ಲಿ ಹೆಚ್ಚಿನ ಭಾಷಾ ಪ್ರಭೇದಗಳು ಮತ್ತು ಕಾಗುಣಿತ ಸಂಪ್ರದಾಯಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಎಂದು ಗೂಗಲ್ ಹೇಳಿದೆ.

Continue Reading

Latest

Viral Video: ಈ ಆರು ಯೂಟ್ಯೂಬರ್‌ಗಳು ಜೈಲು ಪಾಲಾಗಲು ಶಾರುಖ್‌ ಖಾನ್‌ ಕಾರಣವಂತೆ!

Viral Video: ಈಗ ಸೋಶಿಯಲ್ ಮೀಡಿಯಾದ್ದೇ ಹವಾ. ಕೈಲ್ಲೊಂದು ಮೊಬೈಲ್ ಇದ್ದರೆ ಜಗತ್ತೇ ಮೆರಯುವ ಯುವಜನಾಂಗ ಏನು ಮಾಡುತ್ತಿದ್ದೇವೆ? ಇದು ಸರಿನಾ… ತಪ್ಪಾ…? ಇದರ ಪರಿವೇ ಇಲ್ಲದೇ ವರ್ತಿಸುತ್ತಿದ್ದಾರೆ. ಉತ್ತರ ಪ್ರದೇಶದ ಬುಲಂದ್ ಶಹರ್ನ ದಿಬಾಯ್‌ನಲ್ಲಿ ಆರು ಯುಟ್ಯೂಬರ್‌ಗಳು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರು ಬ್ಯಾಂಡೇಜ್ ಧರಿಸಿದ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿದ್ದಾರೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗಿದ್ದು, ಮಾತ್ರವಲ್ಲ ಇದರಿಂದ ಪೊಲೀಸರು ಇವರನ್ನು ಹುಡುಕಿಕೊಂಡು ಬರುವಂತಾಯಿತು!

VISTARANEWS.COM


on

Viral Video
Koo

ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಲೈಕ್ಸ್ , ಕಾಮೆಂಟ್‌ ಪಡೆಯಲು ಯುವಕರು ಅನೇಕ ದುಸ್ಸಾಹಸಗಳಿಗೆ ಕೈ ಹಾಕಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದೇ ರೀತಿ ಇದೀಗ ಯುವಕರು ಸಿನಿಮಾವೊಂದರಲ್ಲಿ ಹೀರೊ ಲುಕ್‌ ಅನ್ನು ನಕಲು ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್
(Viral Video) ಆಗಿದೆ.

ಉತ್ತರ ಪ್ರದೇಶದ ಬುಲಂದ್ ಶಹರ್‌ನ ದಿಬಾಯ್‌ನಲ್ಲಿ ಆರು ಯುಟ್ಯೂಬರ್‌ಗಳು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರು ಬ್ಯಾಂಡೇಜ್ ಧರಿಸಿದ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿದ್ದಾರೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ ಎನ್ನಲಾಗಿದೆ.

ಈ ವಿಡಿಯೊದಲ್ಲಿ ಆರು ಮಂದಿ ಯುವಕರು ರಕ್ತದಂತೆ ಕಾಣುವ ಬಣ್ಣವನ್ನು ಬ್ಯಾಂಡೇಜ್‌ಗೆ ಬಳಿದುಕೊಂಡು ಅದನ್ನು ಮುಖಕ್ಕೆ ಸುತ್ತಿಕೊಂಡು ಕೈಯಲ್ಲಿ ಕೋಲುಗಳನ್ನು ಹಿಡಿದು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿಹಾಕಿದ್ದಾರೆ. ಇವರಲ್ಲಿ ಒಬ್ಬ ಶರ್ಟ್ ಧರಿಸಿದೆ ತನ್ನ ಇಡೀ ದೇಹವನ್ನು ರಕ್ತದ ಕಲೆಯಂತೆ ಕಾಣುವ ಬ್ಯಾಂಡೇಜ್‌ನಿಂದ ಮುಚ್ಚಿಕೊಂಡಿದ್ದಾನೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗಿದ್ದು, ಮಾತ್ರವಲ್ಲ ಇದರಿಂದ ಪೊಲೀಸರು ಇವರನ್ನು ಹುಡುಕಿಕೊಂಡು ಬರುವಂತಾಗಿದೆ. ಈ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ವಿಡಿಯೊ 15 ನಿಮಿಷಗಳ ಕಾಲವಿದ್ದು, ಸಮಾಜದ ಜನತೆಗೆ ಉಪದ್ರವ ನೀಡುವಂತಹ ಈ ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಈ ಆರು ಮಂದಿ ಸ್ಥಳೀಯರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೇ ಮುಂದೆ ಇಂತಹ ಕುಚೇಷ್ಠೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರೀಲ್ಸ್ ಮಾಡಲು ಹೋದ ಹುಡುಗರು; ರೈಲಿನ ಪ್ರಯಾಣಿಕರು ಏನು ಮಾಡಿದರು ನೋಡಿ!

ರೀಲ್ಸ್‌ಗಾಗಿ ಯುವಕರು ಇಂತಹ ಕುಚೇಷ್ಠೆಗಳನ್ನು ಈ ಹಿಂದೆ ಹಲವು ಬಾರಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಅನೇಕ ಬಾರಿ ಎಚ್ಚರಿಕೆ ನೀಡಿದರೂ ಕೂಡ ಇಂತಹ ಘಟನೆಗಳು ನಡೆಯುತ್ತಿರುತ್ತದೆ. ಈ ಹಿಂದೆ ಪಾಕಿಸ್ತಾನದಲ್ಲಿ ಯುವಕರು ಗುಂಪೊಂದು ತಮಾಷೆ ರೀಲ್ ಮಾಡಲು ವೇಗವಾಗಿ ಬರುವ ರೈಲಿಗೆ ನೀರು ಚುಮ್ಮುವಂತೆ ರೈಲು ಹಳಿ ಮೇಲೆ ಹಾದು ಹೋಗುವ ತೊರೆಗೆ ತಮ್ಮ ಬೈಕ್ ಅನ್ನು ಅಡ್ಡಲಾಗಿ ನಿಲ್ಲಿಸಿ ರೈಲಿನ ಪ್ರಯಾಣಿಕರಿಂದ ಒದೆ ತಿಂದಿದ್ದಾರೆ. ಹಾಗೇ ರೀಲ್ಸ್ ಗಾಗಿ ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ಕೆಳಗಿಳಿದು ನೇತಾಡಿದ ಯುವತಿಯನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.

Continue Reading

Latest

Sonakshi Sinha: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

Sonakshi Sinha: ಇತ್ತೀಚೆಗಷ್ಟೇ ಜಹೀರ್ ಇಕ್ಬಾಲ್ ಜೊತೆ ಹೊಸ ಬದುಕಿಗೆ ಕಾಲಿಟ್ಟ ಸೋನಾಕ್ಷಿ ಸಿನ್ಹಾ ಈಗ ಪ್ರೆಗ್ನೆಂಟ್ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊ ತೆಗೆಯಲು ಪ್ರಯತ್ನಿಸಿದ್ದಾರೆ. ದಂಪತಿ ಪೋಟೊ ಕ್ಲಿಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಇದರಲ್ಲಿ ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ಸಂಶಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Sonakshi Sinha
Koo

ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಇತ್ತೀಚೆಗಷ್ಟೇ ತಮ್ಮ ಪ್ರೇಮಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಹೊಸತರಲ್ಲೇ ನಟಿ ತಮ್ಮ ಪತಿಯ ಜೊತೆ ಆಸ್ಪತ್ರೆಯೊಂದರ ಹೊರಗೆ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಪಟ್ಟ ಪೋಟೊ, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾಗಿ ಆಕೆ ಗರ್ಭಿಣಿಯೇ ಎಂಬ ಸಂಶಯ ನೆಟ್ಟಿಗರಲ್ಲಿ ವ್ಯಕ್ತವಾಗಿದೆ.

ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ನಟಿ ಸೋನಾಕ್ಷಿ ಅವರು ತಮ್ಮ ಪತಿ ಜಹೀರ್ ಅವರ ಜೊತೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊಗಳಲ್ಲಿ ಸೆರೆ ಹಿಡಿದಿದ್ದಾರೆ. ದಂಪತಿ ಪೋಟೊ ಕ್ಲಿಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಇದರಲ್ಲಿ ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ಸಂಶಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

Sonakshi Sinha

ಯಾಕೆಂದರೆ ಈ ಹಿಂದೆ ಮದುವೆಯಾದ ಬಾಲಿವುಡ್ ನಟಿಯರಾದ ಆಲಿಯಾ ಭಟ್, ಸ್ವರಾ ಭಾಸ್ಕರ್ ಅವರು ತಮ್ಮ ಮದುವೆಯಾದ ಕೆಲವೇ ದಿನಗಳಲ್ಲಿ ತಾವು ಗರ್ಭಿಣಿ ಎಂದು ಘೋಷಣೆ ಮಾಡಿದ್ದು, ಈ ಬಗ್ಗೆ ಅನೇಕರು ಗಾಸಿಪ್ ಮಾಡಿದ್ದರು. ಹಾಗಾಗಿ ಸೋನಾಕ್ಷಿ ಅವರು ಕೂಡ ಇವರಂತೆ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ನೆಟ್ಟಿಜನ್ ಮನಸ್ಸಿನಲ್ಲಿ ಮೂಡಿದೆ ಎನ್ನಲಾಗಿದೆ. ಹಾಗಾಗಿ ನೆಟ್ಟಿಜನ್ ಸೋನಾಕ್ಷಿಯವರನ್ನು ಗರ್ಭಿಣಿ ಅವತಾರದಲ್ಲಿ ನೋಡಲು ಬಯಸುವುದಾಗಿ ತಿಳಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರು ಜೂನ್ 23ರಂದು ವಿವಾಹವಾದರು. ಅವರ ಮದುವೆಯ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನೇಕರು ಅವರ ಜೋಡಿ ನೋಡಿ ಸ್ವರ್ಗದಲ್ಲಿ ಮಾಡಿದ ಪರಿಪೂರ್ಣ ಜೋಡಿ ಎಂದು ಹೊಗಳಿದ್ದಾರೆ.

Sonakshi Sinha

ಆದರೆ ಇವರಿಬ್ಬರು ಅಂತರ್ಧಮೀಯ ವಿವಾಹವಾಗಿದ್ದರಿಂದ ಈ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾ ಕೂಡ ಅಸಮಾಧಾನಗೊಂಡಿದ್ದರು. ಅವರ ಮದುವೆಯಿಂದ ಅವರ ಕುಟುಂಬದವರು ಸಂತೋಷವಾಗಿಲ್ಲ ಎನ್ನಲಾಗಿತ್ತು. ಆದರೆ ಆ ಬಳಿಕ ಶತ್ರುಘ್ನ ಸಿನ್ಹಾ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಈ ದಂಪತಿ ಮದುವೆಗೂ ಮುನ್ನ 7 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಹಾಗಾಗಿ ಇವರು ಲಿವಿಂಗ್ ಟು ಗೇದರ್ ರಿಲೆಷನ್ಶಿಪ್‌ನಲ್ಲಿದ್ದರು ಎಂದು ಅನೇಕರು ಊಹಿಸಿದ್ದರು.

ಆದರೆ ನಟಿ ಈ ವದಂತಿಯನ್ನು ಅಲ್ಲಗೆಳೆದಿದ್ದು, ತಾನು ಹೆತ್ತವರೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸುವ ಮೂಲಕ ಈ ವದಂತಿಗೆ ತೆರೆ ಎಳೆದಿದ್ದರು.

Continue Reading
Advertisement
Muhammad Usman
ಪ್ರಮುಖ ಸುದ್ದಿ33 mins ago

Muhammad Usman : ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಯುಎಇ ಕ್ರಿಕೆಟಿಗ ಉಸ್ಮಾನ್​ಬ

Dina Bhavishya
ಭವಿಷ್ಯ33 mins ago

Dina Bhavishya : ಈ ದಿನ ಆತ್ಮೀಯರೊಂದಿಗೆ ಕಾಲ ಕಳೆಯುವಿರಿ

UGC NET Exam
ದೇಶ5 hours ago

UGC NET Exam: ರದ್ದಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ; ಪರೀಕ್ಷೆಗೆ ಹೊಸ ವಿಧಾನ, ಇಲ್ಲಿದೆ ವಿವರ‌

Vodafone Idea
ದೇಶ6 hours ago

Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

T20 World Cup 2024
ಪ್ರಮುಖ ಸುದ್ದಿ6 hours ago

T20 World Cup 2024 : ಭಾರತ ತಂಡವನ್ನು ಟೀಕಿಸಿದ ಮೈಕೆಲ್​ ವಾನ್​ಗೆ ತಿರುಗೇಟು ಕೊಟ್ಟ ಗಂಗೂಲಿ

CM SIddaramaiah
ಪ್ರಮುಖ ಸುದ್ದಿ6 hours ago

Siddaramaiah: ಅಮಿತ್‌ ಶಾ-ಸಿದ್ದರಾಮಯ್ಯ ಭೇಟಿ; ರಾಜ್ಯದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಒತ್ತಾಯ

Religious Freedom
ದೇಶ8 hours ago

Religious Freedom: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಹುಸಿ ಕಳವಳ; ಭಾರತ ತಿರುಗೇಟು

Virat Kohli
ಪ್ರಮುಖ ಸುದ್ದಿ8 hours ago

Virat Kohli : ಫಾರ್ಮ್​ ಕಳೆದುಕೊಂಡಿರುವ ವಿರಾಟ್​ ಕೊಹ್ಲಿಯ ಬೆಂಬಲಕ್ಕೆ ನಿಂತ ಗಂಗೂಲಿ

Application Invitation to Join Air Wing NCC July 09 is the last day for submission of application
ಕರ್ನಾಟಕ8 hours ago

Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

Tulu language
ತಂತ್ರಜ್ಞಾನ8 hours ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ11 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ18 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌