IND VS BANGLA | ಭಾರತ- ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಸಾಧ್ಯತೆ - Vistara News

Latest

IND VS BANGLA | ಭಾರತ- ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಸಾಧ್ಯತೆ

ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ಪಂದ್ಯದಕ್ಕೆ ಮಳೆ ಆತಂಕವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

VISTARANEWS.COM


on

rain2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಟ್​: ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ (IND VS BANGLA) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಐಸಿಸಿ ಟಿ20 ವಿಶ್ವ ಕಪ್‌ನ (T20 World Cup) ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎಂದು ವರದಿಯಾಗಿದೆ.

ಅಡಿಲೇಡ್​ನಲ್ಲಿಯೂ ಮಳೆ ಆತಂಕ

ಮೆಲ್ಬೋರ್ನ್​ ಮತ್ತು ಸಿಡ್ನಿ ಬಳಿಕ ಟೀಮ್​ ಇಂಡಿಯಾಕ್ಕೆ ಅಡಿಲೇಡ್​ನಲ್ಲಿಯೂ ಮಳೆಯ ಭೀತಿ ಎದುರಾಗಿದೆ. ಬುಧವಾರ ಮಳೆ ಬರುವ ಸಾಧ್ಯತೆ ಶೇ.70ರಷ್ಟು ಇದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಮಂಗಳವಾರ ಅಡಿಲೇಡ್​ನಲ್ಲಿ ಧಾರಾಕಾರ ಮಳೆಯಾಗಿದ್ದು, ಚಳಿಯೂ ಸಾಕಷ್ಟು ಹೆಚ್ಚಾಗಿದೆ. ಒಂದೊಮ್ಮೆ ಪಂದ್ಯದ ವೇಳೆ ವಿಪರೀತ ಮಳೆಯಾಗದಿದ್ದರೂ ತುಂತುರು ಮಳೆಯಂತು ಕಾಣಿಸಬಹುದು. ಹೀಗಾಗಿ ಓವರ್​ ಕಡಿತಗೊಂಡರು, ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ದಾಖಲಾಗುವ ನಿರೀಕ್ಷೆ ಇದೆ. ಹಾಲಿ ವಿಶ್ವ ಕಪ್​ನಲ್ಲಿ ಈಗಾಗಲೆ ಮಳೆಯಿಂದಾಗಿ 4 ಪಂದ್ಯಗಳು ರದ್ದುಗೊಂಡಿದ್ದು, ಸೆಮಿಫೈನಲ್​ ಲೆಕ್ಕಾಚಾರದಲ್ಲಿ ಸಾಕಷ್ಟು ಏರುಪೇರು ತಂದಿದೆ. ಇನ್ನು ಸೂಪರ್​12 ಹಂತದ ನಿರ್ಣಾಯಕ ಸಮಯದಲ್ಲಿ ಮಳೆ ಕಾಡಿದರೆ ಕೆಲ ತಂಡಗಳ ಅವಕಾಶಕ್ಕೆ ಕಲ್ಲು ಬೀಳಬಹುದು. ಆದರೆ ಭಾರತಕ್ಕೆ ಬಾಂಗ್ಲಾ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದುಗೊಂಡರೂ, ಜಿಂಬಾಬ್ಬೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದು ಉಪಾಂತ್ಯಕ್ಕೆರುವ ಅವಕಾಶ ಜೀವಂತವಾಗಿರಲಿದೆ.

ಪಿಚ್​ ರಿಪೋರ್ಟ್

ಅಡಿಲೇಡ್​ ಓವಲ್ ಮೈದಾನ ಬ್ಯಾಟರ್​ಗಳಿಗೆ ಮತ್ತು ಬೌಲರ್​ಗಳಿಗೆ ಅನುಕೂಲಕರವಾಗಿದೆ. ಆದರೆ ಬೌಂಡರಿ ಲೈನ್​ ದೂರ ಇರುವ ಕಾರಣ ಬೌಲರ್​ಗಳಿಗೆ ಅಧಿಕ ಲಾಭ. ಬ್ಯಾಟರ್​ಗಳು ಇಲ್ಲಿ ಸಂಪೂರ್ಣ ಬಲದೊಂದಿಗೆ ಬ್ಯಾಟ್​ ಬೀಸಬೇಕಾಗಿದೆ. ಮಂಜು ಕವಿದ ವಾತಾವರಣ ಇರುವುದರಿಂದ ಇಬ್ಬನಿ ಸಮಸ್ಯೆಯೂ ಕಾಡುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬೌಲರ್​ಗಳಿಗೆ ಚೆಂಡನ್ನು ನಿರ್ಧಿಷ್ಟ ಗುರಿಯೆಡೆಗೆ ಎಸೆಯಲು ಕಷ್ಟಸಾಧ್ಯ.

ಇದನ್ನೂ ಓದಿ | Neeraj Chopra | ಒಂದು ಪರೋಟ ತಿಂದರೂ ಕೋಚ್​ ದಂಡ ವಿಧಿಸುತ್ತಾರೆ; ನೀರಜ್​ ಚೋಪ್ರಾ ಆರೋಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Bengaluru Metro: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

Bengaluru Metro: Metro Line ಬಹುನಿರೀಕ್ಷಿತ ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.5 ಕಿಮೀ ಉದ್ದದ 3ಎ ಮೆಟ್ರೋ ಮಾರ್ಗವು 2031ರ ವೇಳೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ತಿಳಿಸಿದೆ. ಈ ಯೋಜನೆಗೆ 26,405 ಕೋಟಿ ರೂ. ವೆಚ್ಚವಾಗಲಿದೆ ಮತ್ತು 28 ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ಬಹುಮೆಟ್ರೋ ಮೂಲಗಳು ತಿಳಿಸಿವೆ.

VISTARANEWS.COM


on

Bengaluru Metro
Koo

ಬೆಂಗಳೂರು: ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.5 ಕಿ.ಮೀ ಉದ್ದದ 3ಎ ಮೆಟ್ರೋ ಮಾರ್ಗವು (Bengaluru Metro) 2031ರ ವೇಳೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
(ಬಿಎಂಆರ್ ಸಿಎಲ್) ತಿಳಿಸಿದೆ.

18 ತಿಂಗಳ ನಂತರ ಬಿಎಂಆರ್‌ಸಿಎಲ್ ಕಳೆದ ವಾರ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿದೆ. ಈ ಯೋಜನೆಗೆ 26,405 ಕೋಟಿ ರೂ. ವೆಚ್ಚವಾಗಲಿದೆ ಮತ್ತು 28 ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 2022-23ರ ಬಜೆಟ್ ಭಾಷಣದಲ್ಲಿ ಅನೇಕ ಯೋಜನೆಗಳ ಘೋಷಣೆ ಮಾಡಿದ್ದರು. ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲು 8 ತಿಂಗಳ ಗಡುವನ್ನು ನಿಗದಿಪಡಿಸಿದ್ದರು. ಆಗ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್‌ಸಿಎಲ್ ರೀನಾ ಕನ್ಸಲ್ಟಿಂಗ್ ಕಂಪನಿಗೆ ಗುತ್ತಿಗೆ ನೀಡಿತ್ತು. ಆಗ ಯೋಜನಾ ವೆಚ್ಚ 16,000 ಕೋಟಿ ರೂ. ಆಗಿತ್ತು. ಆದರೆ ಅದು ಈಗ ಹೆಚ್ಚಾಗಿದೆ ಎನ್ನಲಾಗಿದೆ.

ವರದಿ ಪ್ರಕಾರ ಈ ಯೋಜನೆಯು ಕೋರಮಂಗಲ 2ನೇ ಬ್ಲಾಕ್‌ನಿಂದ ಪಶುವೈದ್ಯಕೀಯ ಕಾಲೇಜಿನವರೆಗೆ 14.4 ಕಿ.ಮೀ ಅಂಡರ್ ಗ್ರೌಂಡ್ ಪ್ರದೇಶದಲ್ಲಿ 11 ನಿಲ್ದಾಣಗಳನ್ನು ಹೊಂದಿರುತ್ತದೆ. 22.1 ಕಿ.ಮೀ ಎತ್ತರದ ಕಾರಿಡಾರ್‌ನಲ್ಲಿ 17 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ನಿಲ್ದಾಣ ಸರ್ಜಾಪುರದಿಂದ ಕೋರಮಂಗಲ 2ನೇ ಬ್ಲಾಕ್ ಅನ್ನು ಸಂಪರ್ಕಿಸುತ್ತದೆ. ನಂತರ ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳದವರೆಗೆ ಅಂಡರ್ ಗ್ರೌಂಡ್ ಮಾರ್ಗದಿಂದ ಮುಂದುವರಿಯುತ್ತದೆ ಎನ್ನಲಾಗಿದೆ. ಈ ಮಾರ್ಗವು 2031ರಲ್ಲಿ 6.21 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆ ವ್ಯಕ್ತವಾಗಿದೆ. 2041ರಲ್ಲಿ 7.2 ಲಕ್ಷ, 2051ರಲ್ಲಿ 8.51 ಲಕ್ಷ, ಹಾಗೂ 2061ರ ವೇಳೆಗೆ 9.5 ಲಕ್ಷ ಪ್ರಯಾಣಿಕರನ್ನು ಹೊಂದಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ: ಅತ್ಯಾಚಾರಿಗೆ ಬೈದಿದ್ದಕ್ಕೆ ಜೈಲುಪಾಲಾದ ಮಹಿಳೆ! ಇದೆಂಥಾ ನ್ಯಾಯ?

ಮೆಟ್ರೋ ಮಾರ್ಗದ ನಿರ್ಮಾಣಕ್ಕಾಗಿ ಒಟ್ಟು 5400 ಮರಗಳನ್ನು ಕತ್ತರಿಸಲಾಗಿದೆ. ಆದರೆ ಅವುಗಳಲ್ಲಿ ಅರ್ಧದಷ್ಟು ಮರಗಳನ್ನು ಬೇರೆ ಕಡೆ ಕಸಿ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಮೆಟ್ರೋ 3ಎ ಮಾರ್ಗವು 8 ಇಂಟರ್ ಚೇಂಜ್‌ಗಳನ್ನು ಹೊಂದಿದ್ದು, ಸರ್ಜಾಪುರ, ಕಾರ್ಮಲರಾಮ್‌, ಇಬ್ಲೂರು, ಅಗರ, ಡೈರಿ ಸರ್ಕಲ್, ಶಾಂತಿನಗರ, ಕೆಆರ್ ಸರ್ಕಲ್ ಮತ್ತು ಹೆಬ್ಬಾಳದಲ್ಲಿ ಇದು ನಡೆಯಲಿದೆ. ಅಲ್ಲದೇ ಈ ಮಾರ್ಗವು 4 ನಿಲ್ದಾಣಗಳಲ್ಲಿ ಇತರ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುತ್ತದೆ. ಡೇರಿ ಸರ್ಕಲ್‌ನಲ್ಲಿ ಹಂತ 3ಎ ಲೈನ್ ಪಿಂಕ್ ಲೈನ್ ನ ಡೇರಿ ಸರ್ಕಲ್ ನಿಲ್ದಾಣವನ್ನು ಸಂಪರ್ಕಿಸುತ್ತದೆ. ಕೆ ಆರ್ ವೃತ್ತದಲ್ಲಿ ಪರ್ಪಲ್ ಲೈನ್‌ನ ಸರ್ ಎಂ ವಿ ಸ್ಟೇಷನ್ ಅನ್ನು ಹಾಗೂ ಇಬ್ಲೂರು ಮತ್ತು ಹೆಬ್ಬಾಳದಲ್ಲಿ ಬ್ಲೂಲೈನ್ ಅದೇ ನಿಲ್ದಾಣಗಳನ್ನು, ಕಾರ್ಮಲರಾಮ್‌ನಲ್ಲಿ ರೈಲು ಮಾರ್ಗಗಳೊಂದಿಗೆ ಈ ಮಾರ್ಗ ಸಂಪರ್ಕಿಸುತ್ತದೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

Nitin Gadkari: ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಟೋಲ್​​ಗಳನ್ನು ಪರಿಚಯಿಸುವ ಅವಸರದಲ್ಲಿದ್ದೇವೆ. ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸುವಲ್ಲಿ ಬಳಕೆದಾರ ಶುಲ್ಕವನ್ನು ವಿಧಿಸಬೇಕು ಎಂದು ಗಡ್ಕರಿ ಅವರು ಹೇಳಿದ್ದಾರೆ.

VISTARANEWS.COM


on

Nitin Gadkari
Koo

ಬೆಂಗಳೂರು: ಕಳಪೆ ಗುಣಮಟ್ಟದ ರಸ್ತೆಗಳಿದ್ದರೆ ವಾಹನಗಳ ಮಾಲೀಕರಿಗೆ ಹೆದ್ದಾರಿ ಅಧಿಕಾರಿಗಳು ಟೋಲ್ ಶುಲ್ಕ ವಿಧಿಸಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ಪ್ರಸಕ್ತ (2024-25) ಹಣಕಾಸು ವರ್ಷದಲ್ಲಿ 5,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಿಚಯಿಸಲಾಗುವ ಜಿಪಿಎಸ್​ ಆಧಾರಿತ ಟೋಲ್ ಪಾವತಿ ವ್ಯವಸ್ಥೆಗಳ ಕುರಿತ ಜಾಗತಿಕ ಕಾರ್ಯಾಗಾರದಲ್ಲಿ ಮಾತನಾಡಿದ ಬಿಜೆಪಿ ನಾಯಕ, ” ಗುಣಮಟ್ಟದ ಸೇವೆಯನ್ನು ಒದಗಿಸದಿದ್ದರೆ, ನೀವು ಟೋಲ್ ವಿಧಿಸಬಾರದು” ಎಂದು ಹೇಳಿದ್ದಾರೆ.

“ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಟೋಲ್​​ಗಳನ್ನು ಅಳಡಿಸಿಕೊಂಡು ಹೋಗಲಾಗುತ್ತಿದೆ. ಅದಕ್ಕೆ ಅವಸರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಿದರೆ ಮಾತ್ರ ಬಳಕೆದಾರ ಶುಲ್ಕ ವಿಧಿಸಬೇಕು. ಗುಂಡಿಗಳು ಮತ್ತು ಮಣ್ಣಿನಿಂದ ಕೂಡಿದ ರಸ್ತೆಗಳಲ್ಲಿ ನೀವು ಟೋಲ್ ವಿಧಿಸಿದರೆ, ಜನರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ” ಎಂದು ರಸ್ತೆ ಮತ್ತು ಸಾರಿಗೆ ಸಚಿವರು ಹೇಳಿದ್ದಾರೆ.

ಪ್ರಸ್ತುತ ಫಾಸ್ಟ್ತಾಗ್​ ವ್ಯವಸ್ಥೆಯಡಿ ಜಿಎನ್ಎಸ್ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರಿ ಸ್ವಾಮ್ಯದ ಎನ್ಎಚ್ಎಐ ಉದ್ದೇಶಿಸಿದೆ. ಆರಂಭದಲ್ಲಿ ಆರ್​ಎಫ್​ಐಡಿ ಆಧಾರಿತ ಮತ್ತು ಜಿಎನ್ಎಸ್ಎಸ್ (ಗ್ಲೋಬಲ್ ನ್ಯಾವಿಗೇಷನ್​ ಸ್ಯಾಟ್​ಲೈಟ್​ ಸಿಸ್ಟಮ್​) ಆಧಾರಿತ ಟೋಲ್ ವ್ಯವಸ್ಥೆಗಳ ಮೂಳಕ ಹೈಬ್ರಿಡ್ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಗೌಪ್ಯತೆ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮೊದಲು ವಾಣಿಜ್ಯ ವಾಹನಗಳಿಗೆ ಮತ್ತು ನಂತರ ಖಾಸಗಿ ವಾಹನಗಳಿಗೆ ಈ ವ್ಯವಸ್ಥೆ ಜಾರಿಗೆ ತರಲು ಎನ್ಎಚ್ಎಐ ಯೋಜಿಸಿದೆ. ವಂಚನೆ ಪತ್ತೆಹಚ್ಚಲು ಚಾಲಕರ ನಡವಳಿಕೆ ವಿಶ್ಲೇಷಣೆ ಮತ್ತು ಬ್ಯಾಕ್ ಎಂಡ್ ಡೇಟಾ ವಿಶ್ಲೇಷಣೆಯೂ ನಡೆಯಲಿದೆ.

ಬ್ಯಾಂಕ್​ನಿಂದ ಟೋಲ್​ ಸಾಲ

ಜಿಎನ್​ಎಸ್​ಎಸ್​ ಮೂಲಕ ಪಾವತಿ ವಿಧಾನಗಳನ್ನು ಪ್ರಿಪೇಯ್ಡ್​​ನಿಂದ ಪೋಸ್ಟ್​​​ಪೇಯ್ಡ್​ಗೆ ಬದಲಾಯಿಸಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಯಾಣದ ಯೋಜನೆಗಳ ಆಧಾರದ ಮೇಲೆ ತ್ವರಿತ ಸಾಲ ನೀಡಬಹುದು ಎಂದು ಎನ್ಎಚ್ಎಐ ಹೇಳಿದೆ.

ಇದನ್ನೂ ಓದಿ:Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

ಹೈಬ್ರಿಡ್ ವರ್ಷಾಶನ ಮಾದರಿ (ಎಚ್ಎಎಂ) ಅಡಿಯಲ್ಲಿ, ಹೆದ್ದಾರಿ ನಿರ್ಮಾಣವನ್ನು ಹೊಂದಿಕೊಳ್ಳುವ ಮತ್ತು ಮಾರುಕಟ್ಟೆ ಚಾಲಿತವಾಗಿಸಬಹುದು ಎಂದು ಗಡ್ಕರಿ ಮಂಗಳವಾರ ಹೇಳಿದ್ದಾರೆ. “ಗುತ್ತಿಗೆದಾರರು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ನಂಬುತ್ತೇನೆ.”

ಹೈಬ್ರಿಡ್ ಆನ್ಯುಟಿ ಮಾಡೆಲ್​ ಅಡಿಯಲ್ಲಿ, ಯೋಜನಾ ವೆಚ್ಚದ ಸುಮಾರು ಶೇಕಡಾ 40 ಸರ್ಕಾರ ಭರಿಸಿದರೆ, ಉಳಿದದ್ದನ್ನು ಗುತ್ತಿಗೆದಾರರು ಭರಿಸುತ್ತಾರೆ. “ಗುತ್ತಿಗೆದಾರರು ಯೋಜನೆಯ ಶೇಕಡಾ 60 ಕ್ಕಿಂತ ಹೆಚ್ಚು ಹೂಡಿಕೆ ಮಾಡಲು ಸಿದ್ಧರಿದ್ದರೆ ಸರ್ಕಾರವು ಅದಕ್ಕೂ ಬದ್ಧವಾಗಿರುತ್ತದೆ. ನಮಗೆ ಬೇಕಾಗಿರುವುದು ಒಪ್ಪಂದ ಮತ್ತು ಚಾಲಿತ ಮಾರುಕಟ್ಟೆ ” ಎಂದು ಗಡ್ಕರಿ ಹೇಳಿದ್ದಾರೆ.

ಜಿಪಿಎಸ್​ ಮೂಲಕ ಟೋಲ್​ ಸಂಗ್ರಹ ಹೆಚ್ಚಳ

ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ಪರಿಚಯಿಸುವುದರಿಂದ ಭಾರತದ ಒಟ್ಟು ಟೋಲ್ ಆದಾಯವನ್ನು ಕನಿಷ್ಠ 10,000 ಕೋಟಿ ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಗಡ್ಕರಿ ಹೇಳಿದ್ದಾರೆ, 2023-24ರಲ್ಲಿ, ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗೆ ತಲುಪಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 35 ರಷ್ಟು ಹೆಚ್ಚಳವಾಗಿದೆ.

Continue Reading

ಕ್ರೀಡೆ

Fazalhaq Farooqi : ವಿಶ್ವ ಕಪ್​ 2024ರಲ್ಲಿ ಹೊಸ ದಾಖಲೆ ಬರೆದ ಆಪ್ಘನ್ ಬೌಲರ್​ ಫಜಲ್ಹಾಕ್​ ಫಾರೂಕಿ

Fazalhaq Farooqi :

VISTARANEWS.COM


on

Fazalhaq Farooqi
Koo

ಬೆಂಗಳೂರು: ವೆಸ್ಟ್​ ಇಂಡೀಸ್​​ನ ಟ್ರಿನಿಡಾಡ್ ಮತ್ತು ಟೊಬಾಗೊದ ಬ್ರಿಯಾನ್ ಲಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 27 ರಂದು ನಡೆದ ಐಸಿಸಿ ಟಿ 20 ವಿಶ್ವಕಪ್ 2024 ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಎಡಗೈ ವೇಗಿ ಫಜಲ್ಹಾಕ್ ಫಾರೂಕಿ (Fazalhaq Farooqi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪಂದ್ಯದಲ್ಲಿ ಅವರ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿರುವ ಹೊರತಾಗಿಯೂ ಫಜಲ್ಹಾಕ್​ಗೆ ಇದು ಸ್ಮರಣೀಯ ಪಂದ್ಯವಾಗಲಿದೆ.

ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 9 ವಿಕೆಟ್ ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಗೆ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಪ್ರಬಲ ಪ್ರದರ್ಶನವನ್ನು ನೀಡಿತು. ಇದೇ ವೇಳೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಈ ಸೋಲು ಕಹಿ ಕ್ಷಣ. ಆದರೆ ಟಿ 20 ವಿಶ್ವಕಪ್ 2024 ರಲ್ಲಿ ಅವರ ಗಮನಾರ್ಹ ಪಯಣವು ಅವರ ರಾಷ್ಟ್ರ ಮತ್ತು ಅಭಿಮಾನಿಗಳಿಗೆ ಅಪಾರ ಹೆಮ್ಮೆ ತಂದಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಹೊರತಾಗಿಯೂ ಸಂಭ್ರಮಿಸಲು ಅವರಿಗೊಂದು ಕಾಣವಿದೆ. ಅವರೇ ಎಡಗೈ ವೇಗಿ ಅವರ ಎಡಗೈ ವೇಗಿ ಫಜಲ್ಹಾಕ್ ಫಾರೂಕಿ. ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ರೂಪದಲ್ಲಿ 2024 ರ ಟಿ 20 ವಿಶ್ವಕಪ್ನಲ್ಲಿ 17 ನೇ ವಿಕೆಟ್ ಪಡೆಯುವ ಮೂಲಕ ಅವರು ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

2024 ರ ಟಿ 20 ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಫಾರೂಕಿ ಪಾತ್ರರಾಗಿದ್ದಾರೆ. ಅಫ್ಘಾನಿಸ್ತಾನದ ವೇಗದ ಬೌಲರ್ 2021 ರಲ್ಲಿ ಸ್ಥಾಪಿಸಲಾದ ಟಿ 20 ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರ ಹಿಂದಿನ 16 ವಿಕೆಟ್​ಗಳ ದಾಖಲೆ ಮುರಿದಿದ್ದಾರೆ.

ಅಫ್ಘಾನಿಸ್ತಾನ ಪರ ಚೆಂಡಿನೊಂದಿಗೆ ಫಾರೂಕಿ ಅಸಾಧಾರಣವಾಗಿದ್ದರು, ಅಲ್ಲಿ ಅವರು ಎಂಟು ಪಂದ್ಯಗಳಲ್ಲಿ 9.41 ರ ಪ್ರಭಾವಶಾಲಿ ಸರಾಸರಿ ಮತ್ತು 6.31 ಎಕಾನಮಿ ರೇಟ್​ನಲ್ಲಿ ಒಟ್ಟು 17 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರ ಗಮನಾರ್ಹ ಅಭಿಯಾನವು ಮೆಗಾ ಐಸಿಸಿ ಈವೆಂಟ್​​ನಲ್ಲಿ ಐದು ವಿಕೆಟ್ ಸಾಧನೆ ಮತ್ತು ನಾಲ್ಕು ವಿಕೆಟ್ ಸಾಧನೆಯನ್ನು ಒಳಗೊಂಡಿದೆ,

​ದೀಪ್​ಗೆ ಸಿಂಗ್ ಇದೆ ದಾಖಲೆ ಮುರಿಯುವ ಅವಕಾಶ

ಫಾರೂಕಿ ಅವರ ಸಾಧನೆಯು ತಕ್ಷಣದ ಬೆದರಿಕೆಗೆ ಒಳಗಾಗಿದೆ. ಏಕೆಂದರೆ ಭಾರತದ ವೇಗಿ ಅರ್ಷ್ದೀಪ್ ಸಿಂಗ್ ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ರಲ್ಲಿ ಆರು ಪಂದ್ಯಗಳಲ್ಲಿ 15 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರಿಗೆ ತಮ್ಮ ದಾಖಲೆ ಮುರಿಯಲು ಕೇವಲ ಎರಡು ವಿಕೆಟ್​ಗಳ ಅಗತ್ಯವಿದೆ

ಗಯಾನಾದಲ್ಲಿ ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್​​ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸುವಾಗ ಅಫ್ಘಾನ್ ಬೌಲರ್​ ದಾಖಲೆ ಮುರಿಯಲು ಉತ್ತಮ ಅವಕಾಶ ಹೊಂದಿದ್ದಾರೆ.

ಟಿ 20 ವಿಶ್ವಕಪ್ 2024 ರ ಫೈನಲ್​​ನಲ್ಲಿ ಸ್ಥಾನ ಪಡೆಯಲು ಭಾರತ ಇನ್ನೂ ಸ್ಪರ್ಧೆಯಲ್ಲಿರುವುದರಿಂದ, ಯುವ ವೇಗಿ ಫಾರೂಕಿ ಅವರ ದಾಖಲೆಯನ್ನು ಮೀರಿಸಲು ಮತ್ತು ಪಂದ್ಯಾವಳಿಯಲ್ಲಿ ಹೊಸ ವಿಶ್ವ ದಾಖಲೆ ಸ್ಥಾಪಿಸಲು ಅರ್ಶ್​ದೀಪ್​ ಅವರಿಗೆ ಸಾಧ್ಯವಿದೆ. ವಿಶೇಷವೆಂದರೆ, ಫೈನಲ್ ಜೂನ್ 29 ರಂದು ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆಯಲಿದೆ.

ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿ ಇಲ್ಲಿದೆ

  • ಫಜಲ್ಹಾಕ್ ಫಾರೂಕಿ (ಅಫ್ಘಾನಿಸ್ತಾನ) – 2024ರಲ್ಲಿ 17 ವಿಕೆಟ್
  • ವನಿಂದು ಹಸರಂಗ (ಶ್ರೀಲಂಕಾ) – 2021ರಲ್ಲಿ 16 ವಿಕೆಟ್
  • ಅಜಂತಾ ಮೆಂಡಿಸ್ (ಶ್ರೀಲಂಕಾ) – 2012ರಲ್ಲಿ 15 ವಿಕೆಟ್
  • ಅರ್ಷ್ದೀಪ್ ಸಿಂಗ್ (ಭಾರತ) – 2024ರಲ್ಲಿ 15 ವಿಕೆಟ್
  • ವನಿಂದು ಹಸರಂಗ (ಶ್ರೀಲಂಕಾ) – 2022ರಲ್ಲಿ 15 ವಿಕೆಟ್
  • ರಶೀದ್ ಖಾನ್ (ಅಫ್ಘಾನಿಸ್ತಾನ) – 2024ರಲ್ಲಿ 14 ವಿಕೆಟ್
Continue Reading

Latest

Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

Vande Bharath Train ಬೆಂಗಳೂರಿನಲ್ಲಿ ಏಳನೇ ವಂದೇ ಭಾರತ್ ಎಕ್ಸ್ ಪ್ರೆಸ್ ಜುಲೈ ಆರಂಭದಿಂದ ಕಾರ್ಯ ನಿರ್ವಹಿಸಲಿದೆ. ಆದರೆ ಇದು ಪ್ರಯಾಣಿಕರ ಬೇಡಿಕೆಯ ಆಧಾರದ ಮೇಲೆ ಸೀಮಿತ ಅವಧಿಗಳಲ್ಲಿ ಮಾತ್ರ ವಿಶೇಷ ರೈಲು ಸೇವೆಯಾಗಿ ಕಾರ್ಯ ನಿರ್ವಹಿಸಲಿದೆ. ಈ ರೈಲು ಸೇವೆ ಜೂನ್ 20ರಂದು ಪ್ರಾರಂಭವಾಗಬೇಕಿತ್ತು. ಆದರೆ ಜೂನ್ 17ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಪಘಾತದಿಂದಾಗಿ ಈ ವಿಶೇಷ ರೈಲು ಸೇವೆಯನ್ನು ವಿಳಂಬಗೊಳಿಸಲಾಗಿತ್ತು.

VISTARANEWS.COM


on

Vande Bharath Train
Koo


ಬೆಂಗಳೂರು: ಜುಲೈ ಆರಂಭದಲ್ಲಿ ಬೆಂಗಳೂರಿನಲ್ಲಿ ಏಳನೇ ́ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯ ನಿರ್ವಹಿಸಲಿದೆ. ಆದರೆ ಇದು ಪ್ರಯಾಣಿಕರ ಬೇಡಿಕೆಯ ಆಧಾರದ ಮೇಲೆ ಸೀಮಿತ ಅವಧಿಗಳಲ್ಲಿ ಮಾತ್ರ ವಿಶೇಷ ರೈಲು (Vande Bharath Train ) ಸೇವೆಯಾಗಿ ಕಾರ್ಯ ನಿರ್ವಹಿಸಲಿದೆ ಎಂಬುದಾಗಿ ತಿಳಿದುಬಂದಿದೆ.

ಜೂನ್ ಆರಂಭದಲ್ಲಿ ದಕ್ಷಿಣ ರೈಲ್ವೆ (ಎಸ್ ಆರ್) ಎಸ್‌ಎಂವಿಟಿ ಬೆಂಗಳೂರು ಮತ್ತು ಮಧುರೈ ನಡುವೆ ಈ ವಿಶೇಷ ರೈಲು ಸೇವೆಯನ್ನು ಪರಿಚಯಿಸುವುದಾಗಿ ಘೋಷಿಸಿತ್ತು ಮತ್ತು ಆ ಬಗ್ಗೆ ಪ್ರಯೋಗ ನಡೆಸಿ ಯಶಸ್ಸನ್ನು ಕಂಡಿತ್ತು. ಹಾಗಾಗಿ ಈ ರೈಲು ಸೇವೆ ಜೂನ್ 20ರಂದು ಪ್ರಾರಂಭವಾಗಬೇಕಿತ್ತು. ಆದರೆ ಜೂನ್ 17ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಪಘಾತದಿಂದಾಗಿ ಈ ವಿಶೇಷ ರೈಲು ಸೇವೆಯನ್ನು ವಿಳಂಬಗೊಳಿಸಲಾಗಿತ್ತು.

ಹಾಗಾಗಿ ದಕ್ಷಿಣ ರೈಲ್ವೆ(ಎಸ್ ಆರ್) ಎಸ್ ಎಂವಿಟಿ ಅಧಿಕಾರಿಗಳು ರೈಲು ಪ್ರಾರಂಭವಾಗುವ ದಿನಾಂಕದ ಬಗೆಗಿನ ಅಧಿಕೃತ ಮಾಹಿತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದರು. ಹಾಗೇ ಸದ್ಯಕ್ಕೆ ರೈಲ್ವೆ ಮಂಡಳಿಯು ತನ್ನ ನಿಯಮಿತ ಕಾರ್ಯಾಚರಣೆಯನ್ನು ತಿಳಿಸುವವರೆಗೂ ಈ ರೈಲು ವಿಶೇಷ ಸೇವೆಯಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ನಿರ್ದಿಷ್ಟ ಸಂಖ್ಯೆಯ ಟ್ರಿಪ್ ಗಳೊಂದಿಗೆ ವಿಶೇಷ ರೈಲು 14 ದಿನಗಳಲ್ಲಿ ಪ್ರಾರಂಭವಾಗಬಹುದು. ಈಗಾಗಲೇ ಮಧುರೈ ವಿಭಾಗವು ಟ್ರೈನ್ ಸೆಟ್ ಅನ್ನು ಪಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೀಸನ್ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ರೈಲ್ವೆಯು ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಆದರೆ ಈ ವಂದೇ ಭಾರತ್ ಸೇವೆ ವಿಶೇಷ ರೈಲುಗಳಂತೆ ಕಾರ್ಯನಿರ್ವಹಿಸುವುದು ಅಪರೂಪ ಎನ್ನಲಾಗಿದೆ. ಬೆಂಗಳೂರು-ಮಧುರೈ ವಂದೇ ಭಾರತ್ ಅನ್ನು ಮಧುರೈ ಜಂಕ್ಷನ್ ನಲ್ಲಿ ನಿರ್ವಹಿಸಲಾಗುವುದು. ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ ನಂತರ ಅದರ ಕಾರ್ಯಚರಣೆಯ ವೇಗ ಮತ್ತು ದರಗಳ ಬಗ್ಗೆ ಮಾಹಿತಿ ತಿಳಿಯುತ್ತದೆ ಎನ್ನಲಾಗಿದೆ.

ಪ್ರಸ್ತುತ ಬೆಂಗಳೂರು-ಮಧುರೈ ನಗರಗಳ ನಡುವಿನ ಅತಿವೇಗದ ರೈಲು 9.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ವಂದೇ ಭಾರತ್ ಎಂಟು ಗಂಟೆಗಳಲ್ಲಿ 430 ಕಿಮೀ ದೂರವನ್ನು ಕ್ರಮಿಸುತ್ತದೆ. ಹಾಗಾಗಿ ಇದನ್ನು ಬೆಂಗಳೂರು-ಮಧುರೈ ನಗರಗಳ ನಡುವಿನ ಅತಿವೇಗದ ರೈಲು ಎಂದು ಕರೆಯಲಾಗಿದೆ.
ಬೆಂಗಳೂರಿನಿಂದ ಈಗಾಗಲೇ ಧಾರವಾಡ, ಕಲಬುರಗಿ, ಹೈದರಾಬಾದ್ ಮತ್ತು ಕೊಯಮತ್ತೂರುಗಳಿಗೆ ವಂದೇ ಭಾರತ್ ರೈಲುಗಳಿವೆ. ಅಲ್ಲದೇ ಚೆನ್ನೈ/ಮೈಸೂರಿಗೆ ಎರಡು ವಂದೇ ಭಾರತ್ ರೈಲುಗಳಿವೆ. ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ವಂದೇ ಭಾರತ್ ರೈಲು ಸೇವೆ ಬಗ್ಗೆ ಪ್ರಸ್ತಾಪವಾಗಿದೆ ಎನ್ನಲಾಗಿದೆ.

ಸಮಯ, ದರ ಮತ್ತು ನಿಲುಗಡೆ ಸ್ಥಳಗಳ ವಿವರ:

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಮಧುರೈನಿಂದ ಬೆಳಿಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 1.15ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 1.45ಕ್ಕೆ ಹೊರಟು ರಾತ್ರಿ 10.25ಕ್ಕೆ ಮಧುರೈ ತಲುಪುತ್ತದೆ.

ರೈಲಿನ ದರವು 1200-1300 ರೂ. ಆಗಿರಬಹುದು. ಎಕ್ಸಿಕ್ಯೂಟಿವ್‌ ವರ್ಗದ ಪ್ರಯಾಣಿಕರಿಗೆ 1800-2000 ರೂ. ದರ ನಿಗದಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ನೋಯ್ಡಾದಲ್ಲಿ ನಿರ್ಮಾಣವಾಗುತ್ತಿದೆ ಲಕ್ಷುರಿ ಅಪಾರ್ಟ್‌ಮೆಂಟ್‌! ಇದರ ಬೆಲೆ ಅಬ್ಬಬ್ಬಾ!

ಹಾಗೆಯೇ ದಿಂಡಿಗಲ್, ತಿರುಚಿರಾಪಳ್ಳಿ, ಕರೂರ್ ಮತ್ತು ಸೇಲಂಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ. ನಮಕ್ಕಲ್ ಮತ್ತು ಬೆಂಗಳೂರಿನ ಕೆಆರ್‌ಪುರಂನಲ್ಲಿ ಈ ರೈಲಿಗೆ ನಿಲುಗಡೆ ಸೌಲಭ್ಯ ಇರುವ ಸಾಧ್ಯತೆ ಇದೆ.

Continue Reading
Advertisement
Viral video
ವೈರಲ್ ನ್ಯೂಸ್13 mins ago

Viral Video : ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಂಕ್‌ ಮ್ಯಾನೇಜರ್‌- ವಿಡಿಯೋ ಇದೆ

Fake Complaint
ಕೋರ್ಟ್17 mins ago

Fake Complaint : ಹೆಸ್ಕಾಂ ಎಂಜಿನಿಯರ್‌ ವಿರುದ್ಧ ಸುಳ್ಳು ಅತ್ಯಾಚಾರ ಕೇಸ್‌; ದೂರುದಾರೆ ಸೇರಿ 13 ಮಂದಿ ಜೈಲುಪಾಲು

cm siddaramaiah kempegowda jayanthi
ಪ್ರಮುಖ ಸುದ್ದಿ24 mins ago

CM Siddaramaiah: ಡಿಕೆಶಿ ಮುಖ್ಯಮಂತ್ರಿ ಮಾಡಿ ಎಂದು ಸಿಎಂಗೆ ವೇದಿಕೆಯಲ್ಲೇ ಒತ್ತಾಯಿಸಿದ ಚಂದ್ರಶೇಖರ ಸ್ವಾಮೀಜಿ; ಸಿದ್ದರಾಮಯ್ಯ ಉತ್ತರ ಏನಿತ್ತು?

IND vs ENG
ಕ್ರೀಡೆ36 mins ago

IND vs ENG: ಹೈವೋಲ್ಟೇಜ್ ಸೆಮಿ ಕಾದಾಟಕ್ಕೆ ಕ್ಷಣಗಣನೆ; ಸೇಡು ತೀರಿಸಲು ರೋಹಿತ್​ ಪಡೆ ಸಜ್ಜು

Parliament Sessions
ದೇಶ48 mins ago

Parliament Sessions: ಸೆಂಗೋಲ್‌ ಮೇಲೆ ಪ್ರತಿಪಕ್ಷಗಳ ಕಣ್ಣು; ಸಂಸತ್‌ನಲ್ಲಿ ಭಾರೀ ಕೋಲಾಹಲ

Bengaluru Metro
Latest49 mins ago

Bengaluru Metro: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

Nitin Gadkari
ಪ್ರಮುಖ ಸುದ್ದಿ53 mins ago

Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

IND vs ENG Semi Final
ಕ್ರೀಡೆ1 hour ago

IND vs ENG Semi Final: ಮೀಸಲು ದಿನ ಇರದ ಭಾರತ-ಇಂಗ್ಲೆಂಡ್​ ಸೆಮಿ ಪಂದ್ಯದ ಮಳೆ ನಿಯಮ ಹೇಗಿದೆ?

Droupadi Murmu
ದೇಶ1 hour ago

Droupadi Murmu: ನೀಟ್‌ ಅಕ್ರಮ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು

Fazalhaq Farooqi
ಕ್ರೀಡೆ1 hour ago

Fazalhaq Farooqi : ವಿಶ್ವ ಕಪ್​ 2024ರಲ್ಲಿ ಹೊಸ ದಾಖಲೆ ಬರೆದ ಆಪ್ಘನ್ ಬೌಲರ್​ ಫಜಲ್ಹಾಕ್​ ಫಾರೂಕಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rains Effected
ಮಳೆ3 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

ಟ್ರೆಂಡಿಂಗ್‌