Kantara Movie | ತುಳುವಿನಲ್ಲಿ ಬರ್ತಾ ಇದೆ ಕಾಂತಾರ: ರಿಷಬ್‌ ಹೇಳಿದ್ದೇನು? - Vistara News

ಸಿನಿಮಾ

Kantara Movie | ತುಳುವಿನಲ್ಲಿ ಬರ್ತಾ ಇದೆ ಕಾಂತಾರ: ರಿಷಬ್‌ ಹೇಳಿದ್ದೇನು?

ತುಳುನಾಡಿನ ಆರಾಧ್ಯ ದೈವದ ಕುರಿತಾದ (Kantara Movie) ಸಿನಿಮಾ ಇದಾಗಿದ್ದರಿಂದ, ಇದೀಗ ತುಳುವಿಗೂ ಡಬ್‌ ಮಾಡುತ್ತಿದೆ ಚಿತ್ರತಂಡ.

VISTARANEWS.COM


on

Kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಕಾಂತಾರ ಸಿನಿಮಾ (Kantara Movie) 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ತಮಿಳುನಾಡಿನಲ್ಲಿ 6ನೇ ವಾರವೂ ಸಿನಿಮಾ 150 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಿಂದಿ ಬೆಲ್ಟ್‌ನಲ್ಲಿ 50 ಕೋಟಿ ಕ್ಲಬ್‌ ಸೇರಿದೆ. ಹೀಗೆ ಕನ್ನಡ ಸೇರಿದಂತೆ ಹಲವ ಭಾಷೆಗಳಲ್ಲಿ ಕಾಂತಾರ ಬಿಡುಗಡೆಗೊಂಡಿದೆ. ತುಳುನಾಡಿನ ಆರಾಧ್ಯ ದೈವದ ಕುರಿತಾದ ಸಿನಿಮಾ ಇದಾಗಿದ್ದರಿಂದ, ಇದೀಗ ತುಳುವಿಗೂ ಡಬ್‌ ಮಾಡುತ್ತಿದೆ ಚಿತ್ರತಂಡ.

ಗುರುವಾರ ನವೆಂಬರ್‌ 3ರಂದು ರಿಷಬ್‌ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಈ ಕುರಿತು ಮಾತನಾಡಿದ ರಿಷಬ್‌ ʻʻಕಾಂತಾರ ಸಿನಿಮಾವನ್ನು ತುಳು ಭಾಷೆಗೆ ಮಾಡಬೇಕು ಎಂಬುದು ನಿರ್ಮಾಪಕರ ಆಸೆ. ಹಾಗಾಗಿ ಈ ಚಿತ್ರವನ್ನು ತುಳುವಿಗೆ ಡಬ್‌ ಮಾಡಲಾಗುತ್ತದೆ. ಈಗಾಗಲೇ ಸಿನಿಮಾ ಎಲ್ಲ ಕಡೆ ಪ್ರದರ್ಶನ ಕಂಡಿದೆ. ಗೆಲುವು ಸಾಧಿಸಿದೆ. ಇದೆಲ್ಲ ಸಾಧ್ಯವಾಗಿದ್ದು ದೈವದ ಕಾರಣದಿಂದ. ಹಾಗಾಗಿ ಈ ಸಿನಿಮಾವನ್ನು ತುಳುವನಲ್ಲಿ ಡಬ್‌ ಮಾಡಲು ಯೋಚನೆ ಮಾಡಿದ್ದೇವೆʼʼ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Kantara movie | ಪಂಜುರ್ಲಿ ದೈವದ ರೀಲ್ಸ್‌ ವಿವಾದ: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ ಯುವತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್‌ ಬೆಂಗಳೂರಿನ ಗರುಡ ಮಾಲ್‌ನಲ್ಲಿ ನವೆಂಬರ್‌ 2ರಂದು ಸಿನಿಮಾ ವೀಕ್ಷಿಸಿದ್ದರು. ವಿಶ್ವದೆಲ್ಲೆಡೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ | Kantara Movie | ಎಬಿಡಿ ವಿಲಿಯರ್ಸ್‌ ಭೇಟಿ ಮಾಡಿದ ಕಾಂತಾರದ ಹೀರೊ ರಿಷಬ್‌ ಶೆಟ್ಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

ಈಗಾಗಲೇ ಆರಂಭವಾಗಿರುವ ಪ್ರತಿಷ್ಠಿತ ಕಾನೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಾಲಿವುಡ್‌-ಬಾಲಿವುಡ್‌ ಸೇರಿದಂತೆ ನಾನಾ ಕ್ಷೇತ್ರದ ಫ್ಯಾಷನ್‌ ಐಕಾನ್‌ಗಳು, ರೆಡ್‌ಕಾರ್ಪೆಟ್‌ನಲ್ಲಿ ತಮ್ಮತಮ್ಮ ಫ್ಯಾಷನ್‌ವೇರ್ಸ್ ಅನಾವರಣಗೊಳಿದರು. ಮೊದಲ ದಿನವೇ ಯಾರ್ಯಾರು ಹೇಗೆಲ್ಲ ಕಾಣಿಸಿಕೊಂಡರು ಎಂಬುದರ ಕುರಿತಂತೆ ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿದ್ದು, ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Cannes 2024 Fashion celebrities trend
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮತ್ತೊಮ್ಮೆ ಸೆಲೆಬ್ರೆಟಿಗಳ (Cannes 2024 Fashion) ಫ್ಯಾಷನ್‌ ಟ್ರೆಂಡ್‌ಗೆ ಸಾಕ್ಷಿಯಾಗುತ್ತಿದೆ. ಹೌದು, ಈಗಾಗಲೇ ಆರಂಭವಾಗಿರುವ ವಿಶ್ವದ ಪ್ರತಿಷ್ಠಿತ 77ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಹಾಲಿವುಡ್‌-ಬಾಲಿವುಡ್‌ ಸೇರಿದಂತೆ ನಾನಾ ಕ್ಷೇತ್ರದ ಫ್ಯಾಷನ್‌ ಐಕಾನ್‌ಗಳು ಪಾಲ್ಗೊಂಡು ತಮ್ಮದೇ ಆದ ಫ್ಯಾಷನ್‌ವೇರ್ಸ್ ಅನಾವರಣಗೊಳಿಸತೊಡಗಿದ್ದಾರೆ.

ಫ್ಯಾಷನ್‌ ವಿಮರ್ಶಕರ ರಿವ್ಯೂ
” ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಎಂದಿನಂತೆ ನಾನಾ ಧಿರಿಸು ಹಾಗೂ ಗೌನ್‌ಗಳ ಅನಾವರಣದಿಂದಲೇ ಆರಂಭವಾಗಿದೆ. ಸ್ಪರ್ಧೆಗಿಳಿದವರಂತೆ ತಾರೆಯರು ಕೂಡ ಊಹೆಗೂ ಮೀರಿದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸತೊಡಗಿದ್ದಾರೆ. ಹಾಲಿವುಡ್‌ ತಾರೆಯರು ನಾನ್‌ ವೇರಬಲ್‌ ಡಿಸೈನರ್‌ವೇರ್‌ಗಳಿಗೆ ಆದ್ಯತೆ ನೀಡಿದರೇ, ನಮ್ಮ ರಾಷ್ಟ್ರದ ಸೆಲೆಬ್ರೆಟಿಗಳು ವೇರಬಲ್‌ ಪ್ಲಸ್‌ ನಾನ್‌ ವೇರಬಲ್‌ ಡಿಸೈನರ್‌ ಗೌನ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಇನ್ನು ಸಾಕಷ್ಟು ದಿನಗಳು ಈ ಫೆಸ್ಟಿವಲ್‌ ನಡೆಯುವುದರಿಂದ ಈಗಲೇ ಏನೂ ಹೇಳಲಾಗದು” ಎನ್ನುತ್ತಾರೆ ಫ್ಯಾಷನ್‌ ದಿಗ್ಗಜರಾದ ಸೆಲೆಬ್ರೆಟಿ ಡಿಸೈನರ್‌ ನೀರಜ್‌ ವರ್ಮಾ.
” ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಬಾಲಿವುಡ್‌ ನಟಿ ಐಶ್ವರ್ಯಾ ರೈ ಪ್ರತಿಬಾರಿಯೂ ವಿನೂತನ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ನಿರೀಕ್ಷೆ ಇದೆ. ಇನ್ನು ಕಿಯಾರಾ, ಶೋಭಿತಾ, ಜಾಕ್ವೇಲಿನ್‌ ಹಾಗೂ ಅದಿತಿ ರಾವ್‌ ಹೈದರಿ ಕೂಡ ಮುಂಬರುವ ದಿನಗಳಲ್ಲಿ ಭಾಗವಹಿಸಲಿದ್ದು, ಇವರ ಡಿಸೈನರ್‌ವೇರ್‌ಗಳ ಬಗ್ಗೆಯೂ ಸಾಕಷ್ಟು ಕುತೂಹಲವಿದೆ” ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ರೋಹನ್‌ ರಾಜ್‌.

ಇದನ್ನೂ ಓದಿ: Sandalwood Actress At Cannes 2023: ಮತ್ತೊಮ್ಮೆ ಕಾನ್‌ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ

ಟಿವಿ ತಾರೆ ದೀಪ್ತಿಯ ಆಕರ್ಷಕ ಲಾಂಗೆಸ್ಟ್‌ ಗೌನ್‌

ಆರಂಭದಲ್ಲೆ, ಟಿವಿ ತಾರೆ ದೀಪ್ತಿ ಸದ್ವಾನಿಯ ಹಳದಿ ಕಲರ್‌ ರಫಲ್‌ ನೆಟ್ಟೆಡ್‌ ಗೌನ್‌ ಕಾನೆ ಫೆಸ್ಟಿವಲ್‌ನ ಆರಂಭದ ದಿನದಲ್ಲೆ ಎಲ್ಲರನ್ನು ಸೆಳೆಯಿತು. ಆಂಚಲ್‌ ಕಾಚರ್‌ ಡಿಸೈನ್‌ನ ಈ ಗೌನ್‌ ಮೊದಲನೆ ದಿನದ ಅತಿ ಉದ್ದನೆಯ ಗೌನ್‌ ಎಂದು ರೆಕಾರ್ಡ್‌ ಮಾಡಿತು.

ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ತಾಪರ್‌ ಲುಕ್‌:

ಉದ್ಯಮಿ ಹಾಗೂ ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ಟಾಪರ್‌ರ ಪಾಸ್ಟೆಲ್‌ ಶೇಡ್‌ನ ಆಫ್‌ ಶೋಲ್ಡರ್‌, ಸ್ಲಿಟ್‌ ಇರುವ ಬಲೂನ್‌ ಸ್ಲೀವ್‌ನ ಗೌನ್‌ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯಿತು.

ಡಿಸೈನರ್‌ವೇರ್‌ ಕಾಪಿ ಮಾಡಿದ ಊರ್ವಶಿ

ಪಿಂಕ್‌ ಗೌನ್‌ನಲ್ಲಿ ಊರ್ವಶಿ ಚಂದನಾಗಿ ಕಾಣಿಸಿದರೂ, ದೀಪಿಕಾ ಪಡುಕೋಣೆಯ ಗೌನ್‌ ಕಾಪಿ ಮಾಡಿದ ಬಿರುದು ದೊರೆಯಿತು.

ಹಾಲಿವುಡ್‌ ತಾರೆಯರ ಬೆಸ್ಟ್‌ ಲುಕ್ಸ್‌

ನಟಿ ನೌಮಿ ಕಾಂಪ್ಬೆಲ್‌ ಬ್ಲಾಕ್‌ ಶೇಡ್‌ ಆರ್ಕಿವ್‌ ಚಾನೆಲ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಅನ್ಯಾ ಟಾಯ್ಲರ್‌ ಡಿಯೋರ್‌ ಶೋಲ್ಡರ್‌ಲೆಸ್‌ ಕ್ರೀಮಿಶ್‌ ಸಿಂಡ್ರೆಲ್‌ ಗೌನ್‌ನಲ್ಲಿ ಗಮನ ಸೆಳೆದರು. ಕ್ರಿಸ್‌ ಹೆಮ್ಸ್ವರ್ತ್‌ – ಎಲ್ಸಾ ಕಪಲ್‌ ಕಾಂಟ್ರಸ್ಟ್‌ ಬ್ಲಾಕ್‌ & ವೈಟ್‌ ಔಟ್‌ಫಿಟ್‌ನಲ್ಲಿ ರೆಡ್‌ ಕಾರ್ಪೆಟ್‌ ತುಳಿದರು. ಲಾ ರೋಚ್‌ ಬ್ಲಾಕ್‌ ಶೈನಿಂಗ್‌ ಕೋಟ್‌ ಶರ್ಟ್-ಪ್ಯಾಂಟ್‌ನಲ್ಲಿ, ಸಬ್ರು ಡಬ್ಬಲ್‌ ಶೇಡ್‌ ವನ್‌ ಶೋಲ್ಡರ್‌ ಗೌನ್‌ನಲ್ಲಿ, ಗ್ರೇಟಾ ರೆಡ್‌ ಫಿಶ್‌ಟೇಲ್‌ ಗೌನ್‌ನಲ್ಲಿ, ಇವಾ ಬಾಲ್ಮೈಮ್‌ ಶಿಮ್ಮರ್‌ ಗೌನ್‌ನಲ್ಲಿ ಫ್ಯಾಷನ್‌ ಪ್ರಿಯರನ್ನು ಸೆಳೆದರು. ಇವರೊಂದಿಗೆ ಸಿನಿಮಾ ಪ್ರೀಮಿಯರ್‌ ಟೀಮ್‌ನವರು ನಾನಾ ಶೈಲಿಯ ಡಿಸೈನರ್‌ವೇರ್ಗಳಲ್ಲಿ ಕಾಣಿಸಿಕೊಂಡರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಸಿನಿಮಾ

Chandu Champion: ಗುರುತೇ ಸಿಗದಂತೆ ಬದಲಾದ ಈ ಸ್ಟಾರ್‌ ನಟ ಯಾರು? ಪೋಸ್ಟರ್​ ವೈರಲ್​!

Chandu Champion: ಚಂದು ಚಾಂಪಿಯನ್ ಮೊದಲ ಪೋಸ್ಟರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟ, “ಚಾಂಪಿಯನ್ ಬರುತ್ತಿದ್ದಾನೆ. ನನ್ನ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನ ಮತ್ತು ವಿಶೇಷ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಳ್ಳಲು ಬಹಳ ಉತ್ಸುಕನಾಗಿದ್ದೇನೆ, ಹೆಮ್ಮೆಯಾಗುತ್ತಿದೆ. ಜೂನ್​​ 14ಕ್ಕೆ ಚಂದು ಚಾಂಪಿಯನ್​ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Chandu Champion Injured Kartik Aaryan looks intense
Koo

ಬೆಂಗಳೂರು: ಕಾರ್ತಿಕ್ ಆರ್ಯನ್ ( Kartik Aaryan) ಅವರು ತಮ್ಮ ಮುಂಬರುವ ಚಿತ್ರ ‘ಚಂದು ಚಾಂಪಿಯನ್’ ನ (Chandu Champion) ಎರಡನೇ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ. ಬಾಕ್ಸಿಂಗ್ ರಿಂಗ್‌ನಲ್ಲಿ ಗಾಯಗೊಂಡ ಮುಖದೊಂದಿಗೆ ಕಂಡಿದ್ದಾರೆ. ಮೊದಲ ಪೋಸ್ಟರ್ ಅನ್ನು ಮೇ 15ರಂದು ಅನಾವರಣಗೊಳಿಸಲಾಯಿತು. ಕಬೀರ್ ಖಾನ್ ನಿರ್ದೇಶನದ ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ಕಾರ್ತಿಕ್​​ ಗಮನಾರ್ಹ ರೂಪಾಂತರಕ್ಕೆ ಒಳಗಾಗಿರುವುದು ಕಂಡಿದೆ. ಕಠಿಣ ತಯಾರಿ ನಡೆಸಿರುವುದಾಗಿ ಕಂಡು ಬರುತ್ತಿದೆ.

ʼಚಂದು ಚಾಂಪಿಯನ್ʼ ಮೊದಲ ಪೋಸ್ಟರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟ, “ಚಾಂಪಿಯನ್ ಬರುತ್ತಿದ್ದಾನೆ. ನನ್ನ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನ ಮತ್ತು ವಿಶೇಷ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಳ್ಳಲು ಬಹಳ ಉತ್ಸುಕನಾಗಿದ್ದೇನೆ, ಹೆಮ್ಮೆಯಾಗುತ್ತಿದೆ. ಜೂನ್​​ 14ಕ್ಕೆ ʼಚಂದು ಚಾಂಪಿಯನ್ʼ​ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sara Ali Khan: ಬ್ರೇಕಪ್‌ ಕ್ಲ್ಯಾರಿಟಿ ಬೆನ್ನಲ್ಲೇ ಸಾರಾ ಆಯೋಜಿಸಿದ್ದ ಪಾರ್ಟಿಯಲ್ಲಿ ಕಾರ್ತಿಕ್ ಆರ್ಯನ್!

ಕಾರ್ತಿಕ್ ಆರ್ಯನ್ ಅವರ ಈ ಕಠಿಣ ಶ್ರಮಕ್ಕೆ ನಿರ್ದೇಶಕ ಕಬೀರ್ ಖಾನ್ ಟಿಪ್ಪಣಿಯನ್ನು ಬರೆದಿದ್ದಾರೆ. ʻʻಚಂದು ಚಾಂಪಿಯನ್‌ನ ಕಥೆಯು ನಂಬಲಾಗದಷ್ಟು ಸ್ಪೂರ್ತಿದಾಯಕ ನೈಜ ಕಥೆಯಾಗಿದೆ. ಆದರೆ ಈ ಚಾಂಪಿಯನ್ ಆಗಲು ಕಾರ್ತಿಕ್ ಮಾಡಿದ ಪ್ರಯಾಣವು ಸ್ಫೂರ್ತಿದಾಯಕವಾಗಿದೆ. ಶೇ. 39ರಷ್ಟು ಬಾಡಿ ಫ್ಯಾಟ್‌ ಕರಗಿಸಿದರುʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

ಕಬೀರ್ ಖಾನ್ ಆ್ಯಕ್ಷನ್​ ಕಟ್​ ಹೇಳಿರುವ ʻಈ ಚಂದು ಚಾಂಪಿಯನ್ʼ, ಓರ್ವ ಕ್ರೀಡಾಪಟುವಿನ ನೈಜ ಕಥೆಯನ್ನು ಬಿಚ್ಚಿಡಲಿದೆ. ಈ ಪಾತ್ರಕ್ಕಾಗಿ ಕಾರ್ತಿಕ್ ಅವರ ಪ್ರಯಾಣ ಗಮನಾರ್ಹವಾದದ್ದು. ಜೂನ್ 14 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ.

Continue Reading

ಕಿರುತೆರೆ

Amruthadhaare Serial: ಇಂದು ಭೂಮಿಕಾಗೆ ಹುಟ್ಟು ಹಬ್ಬ: ರೀಲ್‌ ಗಂಡ ಎಸ್ಟೇಟ್​ ಬರೆದು ಕೊಟ್ರು! ರಿಯಲ್‌ ಗಂಡ ಕೊಟ್ಟ ಗಿಫ್ಟ್‌ ಏನು?

Amruthadhaare Serial: ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ನಟ ರಾಜೇಶ್ ಅವರು ಗೌತಮ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. . ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ.

VISTARANEWS.COM


on

Amruthadhaare Serial bhoomika in birthday chaya singh
Koo

ಇಂದು (ಮೇ 16) ಅಮೃತಧಾರೆ ಧಾರಾವಾಹಿ (Amruthadhaare Serial) ಖ್ಯಾತಿಯ ನಟಿ ಛಾಯಾ ಸಿಂಗ್ (Chaya Singh)​ ಅವರಿಗೆ ಜನುಮದಿನದ ಸಂಭ್ರಮ. ಧಾರಾವಾಹಿಯಿಂದ ಜನರಿಗೆ ಭೂಮಿಕಾ ಎಂದೇ ಪರಿಚಯ.

ನಟಿಯ ವಿಶೇಷ ದಿನದಂದು ಜೀ ಕನ್ನಡ ವಾಹಿನಿ ಛಾಯಾ ಸಿಂಗ್​ ಕುರಿತು ವಿಡಿಯೊ ಒಂದನ್ನು ರಿಲೀಸ್​ ಮಾಡಿದೆ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಹೇಗೆ ಕೋಟ್ಯಧಿಪತಿ ಉದ್ಯಮಿ ಜತೆ ಜೀವನ ನಡೆಸುತ್ತಾಳೆ ಎಂಬುದೇ ಈ ಧಾರಾವಾಹಿಯ ಒನ್‌ಲೈನ್‌ ಸ್ಟೋರಿ.

ಧಾರಾವಾಹಿಯಲ್ಲಿ ಪತಿ ಗೌತಮ್‌ ಹೆಂಡತಿಯ ಹುಟ್ಟುಹಬ್ಬಕ್ಕೆಂದು ಚಿಕ್ಕಮಗಳೂರಿನ ಎಸ್ಟೇಟ್​ ಬರೆದು ಕೊಟ್ಟಿದ್ದಾನೆ. ಇದೀಗ ರಿಯಲ್‌ ಗಂಡ ಪತ್ನಿಗೆ ಏನು ಗಿಫ್ಟ್‌ ಕೊಟ್ಟಿದ್ದಾರೆ? ಎಂದು ನೆಟ್ಟಿಗರು ಪ್ರಶ್ನೆ ಮೂಲಕ ನಟಿಯ ಕಾಲೆಳೆಯುತ್ತಿದ್ದಾರೆ.

ಛಾಯಾ ಅವರ ರಿಯಲ್​ ಲೈಫ್​ ಪತಿಯ ಹೆಸರು ಕೃಷ್ಣ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜತೆ ಆಗಾಗ ಫೋಟೋ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: Kiccha Sudeep: ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಮುಗಿಸಿದ ಕಿಚ್ಚ ಸುದೀಪ್‌: ರಿಲೀಸ್‌ ಯಾವಾಗ?

ಕೃಷ್ಣ ಮತ್ತು ಛಾಯಾ ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಛಾಯಾ ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ.
ಕನ್ನಡ ಸಿನಿರಂಗದಲ್ಲಿಯೂ ಸಕ್ರಿಯರಾಗಿರುವ ಛಾಯಾ, 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನುಡಿ’ ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 
Continue Reading

ಕಿರುತೆರೆ

Bhavani Singh: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಸುಬ್ಬಲಕ್ಷ್ಮಿ ಸಂಸಾರʼ ಧಾರಾವಾಹಿ ನಟ!

Bhavani Singh: ಪಂಕಜ ಶಿವಣ್ಣ-ಭವಾನಿಸಿಂಗ್ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ರೀಲ್ಸ್‌ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಬೇಬಿ ಬಂಪ್‌ ಫೋಟೊ ಶೂಟ್‌ ಮಾಡಿಸಿಕೊಂಡಿದ್ದಾರೆ ಪಂಕಜ್‌. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿಗೆ ವಿಶ್‌ ಮಾಡುತ್ತಿದ್ದಾರೆ ಫ್ಯಾನ್ಸ್‌.

VISTARANEWS.COM


on

Bhavani Singh pankaj shivanna couple expecting-their first child
Koo

‘ಚರಣದಾಸಿ’, ‘ಸುಬ್ಬಲಕ್ಷ್ಮಿ ಸಂಸಾರ’,’ರಕ್ಷಾ ಬಂಧನ’ ಖ್ಯಾತಿಯ ಕಿರುತೆರೆ ನಟ ಭವಾನಿ ಸಿಂಗ್ (Bhavani Singh) ಅವರು ತಂದೆಯಾಗುತ್ತಿದ್ದಾರೆ. ಪತ್ನಿ ಪಂಕಜ ಶಿವಣ್ಣ ಕೂಡ ನಟಿಯಾಗಿದ್ದು, ಇದೀಗ ಜೋಡಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

ಭವಾನಿ ಸಿಂಗ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಶೇರ್‌ ಮಾಡಿ ʻʻನಮ್ಮ ಸಂಸಾರ ದೊಡ್ಡದಾಗುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.

‘ಚರಣದಾಸಿ’ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟರು ನಟ ಭವಾನಿ ಸಿಂಗ್. ಪಂಕಜ ಶಿವಣ್ಣ ಅವರು ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿ ಮೂಲಕ ಭವಾನಿ ಸಿಂಗ್ ಅವರಿಗೆ ಪರಿಚಯವಾದರು.

ಇದನ್ನೂ ಓದಿ: A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

2019ರಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಐದು ವರ್ಷಗಳ ನಂತರ ಈ ಜೋಡಿ ಸಿಹಿಸುದ್ದಿಯನ್ನು ಹಂಚಿಕೊಂಡಿದೆ.
Continue Reading
Advertisement
Sunil Chhetri
ಕ್ರೀಡೆ17 mins ago

Sunil Chhetri: ಭಾರತದ ಕಾಲ್ಚೆಂಡಿನ ಮಾಂತ್ರಿಕ ಸುನೀಲ್ ಚೆಟ್ರಿ ಸಾಧನೆಯೇ ರೋಚಕ

Fire Accident
ದೇಶ18 mins ago

Fire Accident: ಬಿಜೆಪಿ ಕಚೇರಿಯಲ್ಲಿ ಭಾರಿ ಅಗ್ನಿ ಅವಘಡ; ಅಗ್ನಿಶಾಮಕ ಸಿಬ್ಬಂದಿ ದೌಡು

XVU300
ಆಟೋಮೊಬೈಲ್20 mins ago

Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

Namrata Gowda Holiday Look in Red Ruffle Layered Maxi Dress
ಫ್ಯಾಷನ್25 mins ago

Namratha Gowda: ರೆಡ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ನಟಿ ನಮ್ರತಾ ಗೌಡ ಹಾಲಿಡೇ ಲುಕ್‌!

Viral News
ವೈರಲ್ ನ್ಯೂಸ್26 mins ago

Viral News: ಶ್ವಾನದ ಜತೆ ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಯ ವೇಳೆ ಹಲ್ಲೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

Karnataka Weather Forecast
ಮಳೆ39 mins ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

BMW X3 xDrive20d
ಪ್ರಮುಖ ಸುದ್ದಿ53 mins ago

BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

Most costly medicine
ಆರೋಗ್ಯ55 mins ago

Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

Cannes 2024 Fashion celebrities trend
ಫ್ಯಾಷನ್1 hour ago

Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

PM Narendra Modi
ದೇಶ1 hour ago

PM Narendra Modi:”ಅಬ್ಬಾ.. ಎಂಥಾ ಮೇಕಪ್!”- ಮತ್ತೆ ಗಮನ ಸೆಳೆದ ಮೋದಿ; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ39 mins ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Suspicious Case
ಬೆಂಗಳೂರು6 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ3 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

ಟ್ರೆಂಡಿಂಗ್‌