Fifa World Cup| ಆಕಾಶದಲ್ಲೂ ಈ ದೇಶದ ಫುಟ್ಬಾಲ್​ ಆಟಗಾರರಿಗೆ ಮಿಲಿಟರಿ ರಕ್ಷಣೆ! - Vistara News

Latest

Fifa World Cup| ಆಕಾಶದಲ್ಲೂ ಈ ದೇಶದ ಫುಟ್ಬಾಲ್​ ಆಟಗಾರರಿಗೆ ಮಿಲಿಟರಿ ರಕ್ಷಣೆ!

ಎಫ್16 ಯುದ್ಧ ವಿಮಾನದ ಬಿಗಿ ಭದ್ರತೆಯಲ್ಲಿ ವಿಶ್ವಕಪ್‌ಗಾಗಿ ಕತಾರ್‌ಗೆ ಬಂದಿಳಿದ ಪೋಲೆಂಡ್ ತಂಡದ ಫುಟ್ಬಾಲ್​ ಆಟಗಾರರು.

VISTARANEWS.COM


on

fifa world cup 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ: ಫಿಫಾ ಫುಟ್ಬಾಲ್ ವಿಶ್ವ ಕಪ್‌ ಹಬ್ಬಕ್ಕೆ (FIFA World Cup 2022) ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 20 ರಿಂದ ಕತಾರ್‌ನಲ್ಲಿ ಪ್ರಾರಂಭವಾಗುವ ಕಾಲ್ಚೆಂಡಿನ ಜಾತ್ರೆಯಲ್ಲಿ ಭಾಗವಹಿಸಲು ಬಹುತೇಕ ಎಲ್ಲ ತಂಡಗಳು ಕತಾರ್‌ ತಲುಪಿವೆ. ಇದೇ ವೇಳೆ ಪೋಲೆಂಡ್ ತಂಡ ವಿಶೇಷ ಭದ್ರತೆಯೊಂದಿಗೆ ಕತಾರ್ ತಲುಪಿದ್ದು ಇದೀಗ ವಿಶ್ವಾದಂತ್ಯ ಚರ್ಚೆಗೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಪೋಲೆಂಡ್‌ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಹೀಗಾಗಿ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಎಫ್16 ಯುದ್ಧ ವಿಮಾನದ ಬಿಗಿ ಭದ್ರತೆಯಲ್ಲಿ ವಿಶ್ವಕಪ್‌ಗಾಗಿ ಕತಾರ್‌ಗೆ ಕರೆದೊಯ್ಯಲಾಗಿದೆ. ಪೋಲೆಂಡ್ ತಂಡವು ಈ ಭದ್ರತೆಯ ವೀಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ರಕ್ಷಣೆ ನೀಡಿದಕ್ಕಾಗಿ ಧನ್ಯವಾದ ತಿಳಿಸಿದೆ.

ಏಕೆ ಈ ರಕ್ಷಣೆ

ಪೋಲೆಂಡ್‌ನ ಹಳ್ಳಿಯ ಮೇಲೆ ಕೆಲ ದಿನಗಳ ಹಿಂದೆ ಕ್ಷಿಪಣಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಪೋಲೆಂಡ್ ನ್ಯಾಟೋ ಸದಸ್ಯ ರಾಷ್ಟ್ರವಾಗಿರುವುದರಿಂದ ರಷ್ಯಾ, ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಹೊರಿಸಿತ್ತು. ಈ ಸ್ಫೋಟ ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿತ್ತು. ಆದರೆ ಕೆಲ ಹೊತ್ತಿನ ನಂತರ ಈ ಸ್ಫೋಟಕ್ಕೆ ರಷ್ಯಾದಿಂದ ಹಾರಿಬಂದ ಕ್ಷಿಪಣಿ ಕಾರಣವಲ್ಲ ಎಂದು ದೃಢಪಟ್ಟ ಬಳಿಕ ಹಲವು ದೇಶಗಳು ನಿಟ್ಟುಸಿರು ಬಿಟ್ಟಿದ್ದವು. ರಷ್ಯಾದಿಂದ ಬರುತ್ತಿದ್ದ ಕ್ಷಿಪಣಿಯನ್ನು ತಡೆಗಟ್ಟಲು ಉಕ್ರೇನ್ ಹಾರಿಬಿಟ್ಟ ಬರಾಜ್ (ಕ್ಷಿಪಣಿಗಳನ್ನು ಆಗಸದಲ್ಲಿಯೇ ತಡೆಯುವ ಯುದ್ಧೋಪಕರಣ) ಪೊಲೆಂಡ್ ಗಡಿಯೊಳಗೆ ಬಂದಿರಬಹುದು ಎಂದು ಪ್ರಾಥಮಿಕ ತನೆಖೆಯ ಬಳಿಕ ಮಾಹಿತಿ ಹೊರಬಿದ್ದಿತ್ತು. ಆದರೂ ಮುಂಜಾಗ್ರತ ಕ್ರಮವಾಗಿ ಪೋಲೆಂಡ್‌ ಸರ್ಕಾರ ಆಟಗಾರರನ್ನು ಎಫ್16 ಯುದ್ಧ ವಿಮಾನದ ಬಿಗಿ ಭದ್ರತೆಯಲ್ಲಿ ಕತಾರ್​ಗೆ ಕಳುಹಿಸಿದೆ.

ಇದನ್ನೂ ಓದಿ | Fifa World Cup | ಕತಾರ್​ ವಿಶ್ವಕಪ್​ ಮೈದಾನದ ಬಳಿ ಬಿಯರ್​ ಮಾರಾಟ ನಿಷೇಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಈ ಬಾರಿ ಲೋಕ ಸಭಾ ಚುನಾವಣಾ ಪ್ರಚಾರದ ಅಂತ್ಯವನ್ನು ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ನಡೆಸಲಿದ್ದಾರೆ. ಇಲ್ಲಿ ಸುಮಾರು 45 ಗಂಟೆಗಳ ಕಾಲ ಅವರು ಕಳೆಯಲಿದ್ದಾರೆ.

VISTARANEWS.COM


on

By

PM Modi
Koo

ಲೋಕಸಭಾ ಚುನಾವಣೆ- 2024ರ (Loksabha election-2024) ಬಿಜೆಪಿ ಪ್ರಚಾರ ಕಾರ್ಯವನ್ನು ಅಂತ್ಯಗೊಳಿಸಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕನ್ಯಾಕುಮಾರಿಗೆ ತೆರಳಲಿದ್ದು, ( Kanyakumari) ಇಲ್ಲಿನ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ (Vivekananda Rock Memorial) ಮೇ 30ರಿಂದ ಜೂನ್ 1ರವರೆಗೆ ಒಟ್ಟು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ಇದೇ ಸ್ಥಳದಲ್ಲಿ ಭಾರತದ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು 1892ರಲ್ಲಿ ಮೂರು ದಿನಗಳ ಕಾಲ ಧ್ಯಾನ ಮಾಡಿ ಜ್ಞಾನೋದಯವನ್ನು ಪಡೆದಿದ್ದರು.

2019ರ ಚುನಾವಣಾ ಪ್ರಚಾರದ ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ 15 ಗಂಟೆಗಳ ‘ಏಕಾಂತವಾಸ್’ (ಏಕಾಂತ ಧ್ಯಾನ) ಕೈಗೊಂಡಿದ್ದರು.

2014 ರಲ್ಲಿ ಮಹಾರಾಷ್ಟ್ರದ ಪ್ರತಾಪಗಢಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. 1659ರ ನವೆಂಬರ್ ನಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ಅವರನ್ನು ಕೊಂದು ಯುದ್ಧದಲ್ಲಿ ಗೆದ್ದ ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದರು. ಈ ವಿಜಯವು ಮರಾಠಾ ಸಾಮ್ರಾಜ್ಯದ ಮುಖ್ಯಸ್ಥನಾಗಿ ಶಿವಾಜಿಯ ಪಟ್ಟಾಭಿಷೇಕಕ್ಕೆ ದಾರಿ ಮಾಡಿಕೊಟ್ಟಿತು. ಇದನ್ನು ಹಿಂದವಿ ಸ್ವರಾಜ್ ಎಂದು ಛತ್ರಪತಿ ಶಿವಾಜಿ ಕರೆದರು.

ಇದೀಗ ಜೂನ್ 4 ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ ಮೋದಿ ಕನ್ಯಾಕುಮಾರಿ ಪ್ರವಾಸ ಯೋಜನೆ ಹಾಕಿಕೊಂಡಿದ್ದಾರೆ.


ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು.

ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಸ್ವಾಮಿ ರಾಮಕೃಷ್ಣಾನಂದರಿಗೆ 1894ರಲ್ಲಿ ವಿವೇಕಾನಂದರು, ಭಾರತೀಯ ಬಂಡೆಯ ಕೊನೆಯ ತುಣುಕಿನ ಮೇಲೆ ಕುಳಿತು ನಾನು ಒಂದು ಯೋಜನೆಯನ್ನು ಕಂಡಿದ್ದೇನೆ. ಸನ್ಯಾಸಿಗಳು ಅಲೆದಾಡುತ್ತಾ ಜನರಿಗೆ ಆಧ್ಯಾತ್ಮಿಕತೆಯನ್ನು ಕಲಿಸುವುದು ಹುಚ್ಚುತನ. ಬಡವರು ಅತ್ಯಂತ ಕಷ್ಟವಾದ ಜೀವನ ನಡೆಸುತ್ತಿರುವುದು ಅವರ ಅಜ್ಞಾನದಿಂದಾಗಿ. ನಾವು ಅದನ್ನು ಹೋಗಲಾಡಿಸುವ ಬದಲು ಅವರ ರಕ್ತವನ್ನು ಹೀರುತ್ತಿದ್ದೇವೆ ಮತ್ತು ಅವರನ್ನು ಪಾದದಡಿಯಲ್ಲಿ ತುಳಿಯುತ್ತಿದ್ದೇವೆ ಎಂದು ಹೇಳಿದ್ದರು.

1963ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದ ಮುನ್ನಾದಿನ ಆರ್‌ಎಸ್‌ಎಸ್ ಕಾರ್ಯಕರ್ತ ಏಕನಾಥ್ ರಾನಡೆ ನೇತೃತ್ವದ ವಿವೇಕಾನಂದ ರಾಕ್ ಸ್ಮಾರಕ ಸಮಿತಿಯು ಈ ಸ್ಥಳವನ್ನು ನೆನಪಿಸಿತ್ತು. ಇದನ್ನು 1970 ರಲ್ಲಿ ರಾಷ್ಟ್ರಪತಿ ವಿ.ವಿ.ಗಿರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.

ಒಂದು ನಂಬಿಕೆಯ ಪ್ರಕಾರ ಪಾರ್ವತಿ ದೇವಿಯು ಶಿವನಿಗಾಗಿ ಕಾಯುತ್ತಿರುವಾಗ ಇದೇ ಬಂಡೆಯ ಮೇಲೆ ಒಂದೇ ಕಾಲಿನ ಮೇಲೆ ಧ್ಯಾನ ಮಾಡುತ್ತಿದ್ದಳು.

ವವತುರೈನಿಂದ 15 ನಿಮಿಷಗಳ ದೋಣಿ ಸಂಚಾರದ ಮೂಲಕ ಕಲ್ಲಿನ ದ್ವೀಪವನ್ನು ಪ್ರವೇಶಿಸಬಹುದು. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ.


ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ.

ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು.

ಈ ಬಾರಿ ತಮಿಳುನಾಡಿನ ಕನ್ಯಾಕುಮಾರಿಯನ್ನು ಅವರು ಧ್ಯಾನ ಮಾಡಲು ಅವರು ಆಯ್ಕೆ ಮಾಡಿರುವುದು ಈ ವರ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಪಕ್ಷ ದಕ್ಷಿಣ ಭಾರತದಲ್ಲಿ ಬಲವಾಗಿರುವುದನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಅವರ ಒಟ್ಟು ಪ್ರವಾಸಗಳಲ್ಲಿ ಮೂರನೇ ಒಂದು ಭಾಗದಷ್ಟು ಅವರು ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. 2024ರಲ್ಲಿ ತಮಿಳುನಾಡಿಗೆ ಏಳು ಭಾರಿ ಭೇಟಿ ನೀಡಿದ್ದಾರೆ.

ದಕ್ಷಿಣದ ರಾಜ್ಯಗಳ ಮೇಲೆ ದೃಷ್ಟಿ

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವು ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 131 ಸ್ಥಾನಗಳನ್ನು ಹೊಂದಿವೆ. ತಮಿಳುನಾಡುವೊಂದೇ ಸಂಸತ್ತಿನಲ್ಲಿ 39 ಸ್ಥಾನಗಳನ್ನು ಹೊಂದಿದೆ. ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಮೋದಿ ಭೇಟಿಗೆ ಸಿದ್ಧತೆ ಏನು?

ಗುರುವಾರ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ಪ್ರಧಾನಿಯವರ 45 ಗಂಟೆಗಳ ವಾಸ್ತವ್ಯ ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸುಮಾರು 2,000 ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

ತಿರುನೆಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವತನಂ ಅವರೊಂದಿಗೆ ಇಲ್ಲಿನ ಕಲ್ಲಿನ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಪ್ರಚಾರವನ್ನು ಮುಗಿಸಿದ ಅನಂತರ ಪ್ರಧಾನಿ ಗುರುವಾರ ಮಧ್ಯಾಹ್ನ ತಿರುವನಂತಪುರಂ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಸಂಜೆ ಕನ್ಯಾಕುಮಾರಿಯಲ್ಲಿರುವ ರಾಜ್ಯ ಅತಿಥಿ ಗೃಹ ತಲುಪಿ ದೋಣಿ ಮೂಲಕ ವಿವೇಕಾನಂದ ಕಲ್ಲಿನ ಸ್ಮಾರಕಕ್ಕೆ ತೆರಳಲಿದ್ದಾರೆ. ಅವರು ಶನಿವಾರ ಮಧ್ಯಾಹ್ನದವರೆಗೆ ಅಲ್ಲಿಯೇ ಇರುತ್ತಾರೆ ಎನ್ನಲಾಗಿದೆ.

ಮೋದಿ ಶನಿವಾರ ಸಂಜೆ ವೇಳೆಗೆ ಕನ್ಯಾಕುಮಾರಿ ಹೆಲಿಪ್ಯಾಡ್ ತಲುಪಿ ತಿರುವನಂತಪುರಕ್ಕೆ ಹಿಂತಿರುಗಿ ಅದೇ ದಿನ ದೆಹಲಿಗೆ ತೆರಳಲಿದ್ದಾರೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರವು ಪ್ರಧಾನಿಯವರ ಈ ಭೇಟಿಗೆ ಅನುಮತಿಯನ್ನು ವಿರೋಧಿಸಿ ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ನಡೆಯುತ್ತಿರುವ ಪ್ರವಾಸೋದ್ಯಮ ಋತುವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Continue Reading

ಧಾರ್ಮಿಕ

Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

ವಾಸ್ತು ನಿಯಮಗಳನ್ನು (Vastu Tips) ಪಾಲಿಸುವುದು ಮನೆಯ ಸಮೃದ್ಧಿಗಾಗಿ ಒಳ್ಳೆಯದು. ಇದರಲ್ಲಿ ಕೆಲವೊಮ್ಮೆ ವೈಜ್ಞಾನಿಕ ಅಂಶಗಳು ಅಡಕವಾಗಿರುತ್ತದೆ. ಶೂ, ಚಪ್ಪಲಿಗಳನ್ನು ಇಡುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಅವುಗಳನ್ನು ಅನುಸರಿಸಿದರೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗುವಂತೆ ಮಾಡಬಹುದು.

VISTARANEWS.COM


on

By

Vastu Tips
Koo

ಮನೆಯ (home) ಹೊರಗೆ ಸುತ್ತಾಡಲು ಬಳಸುವ ಬೂಟು ಮತ್ತು ಚಪ್ಪಲಿಗಳನ್ನು (shoes and slippers) ಮನೆಯೊಳಗೇ ಕೊಂಡೊಯ್ಯಬಾರದು ಎನ್ನುತ್ತಾರೆ ಹಿರಿಯರು. ಅಲ್ಲದೇ ಮನೆಯ ಮೆಟ್ಟಿಲ ಬಳಿ ಚಪ್ಪಲಿ ಇಡಬಾರದು, ಅಡ್ಡಾದಿಡ್ಡಿಯಾಗಿ ಚಪ್ಪಲಿಗಳನ್ನು ಇರಿಸಬಾರದು ಎನ್ನುವ ಶಾಸ್ತ್ರವೇ (Vastu Tips) ಇದೆ. ನಾವು ಮಾಡುವ ಸಣ್ಣಪುಟ್ಟ ಅಜಾಗರೂಕತೆಗಳು ಮನೆಯ ವಾಸ್ತುವಿಗೆ ದೋಷ ಉಂಟು ಮಾಡುತ್ತದೆ. ಚಪ್ಪಲಿಯನ್ನು ಇಡುವ ವಿಚಾರದಲ್ಲೂ ಇದು ಅನ್ವಯವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಶೂ ಮತ್ತು ಚಪ್ಪಲಿಗಳನ್ನು ಇಡಲು ವಾಸ್ತು ಸಲಹೆಗಳಿವೆ. ಬೂಟು ಮತ್ತು ಚಪ್ಪಲಿಗಳು ಅಲ್ಲೊಂದು ಇಲ್ಲೊಂದು ಬಿದ್ದಿರುವ ಮನೆಗಳಲ್ಲಿ ಎಂದಿಗೂ ಸಮೃದ್ಧಿ ಇರುವುದಿಲ್ಲ. ಇದರಿಂದ ವಾಸ್ತು ದೋಷವನ್ನು ಎದುರಿಸಬೇಕಾಗಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.

ಅನೇಕ ಜನರು ತಮ್ಮ ಬೂಟು ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಎಲ್ಲಿಯಾದರೂ ತೆಗೆಯುತ್ತಾರೆ ಅಥವಾ ಅಲ್ಲೇ ಇಟ್ಟು ಬಿಡುತ್ತಾರೆ. ಇದನ್ನು ಮಾಡಲೇಬಾರದು. ಹೀಗೆ ಮಾಡುವುದು ನಿಮಗೂ, ಮನೆಗೂ ಒಳ್ಳೆಯದಲ್ಲ.

ಸುಖ, ಶಾಂತಿ, ಸಮೃದ್ಧಿಗಾಗಿ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಈ ಬಾರಿ ನಾವು ಚಪ್ಪಲಿಗಳನ್ನು ಇಡುವ ವಿಚಾರದಲ್ಲಿ ವಾಸ್ತು ನಿಯಮಗಳ ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.


ಯಾವ ದಿಕ್ಕಿನಲ್ಲಿ ಇಡಬಾರದು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಇಡಬಾರದು. ಈ ದಿಕ್ಕಿನಲ್ಲಿ ಬೂಟು ಮತ್ತು ಚಪ್ಪಲಿಗಳನ್ನು ಇಟ್ಟುಕೊಳ್ಳುವುದರಿಂದ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಎಲ್ಲಿ ಇಡಬೇಕು?

ಯಾವಾಗಲೂ ಬೂಟು ಮತ್ತು ಚಪ್ಪಲಿಗಳನ್ನು ಮುಚ್ಚಿರುವ ಬೀರುಗಳಲ್ಲಿ ಇಡಬೇಕು ಎನ್ನುತ್ತದೆ ವಾಸ್ತು ನಿಯಮ. ಚಪ್ಪಲಿಗಳು ನೆಗೆಟಿವ್ ಎನರ್ಜಿಯನ್ನು ಹೆಚ್ಚಿಸುವುದರಿಂದ ತೆರೆದ ಜಾಗದಲ್ಲಿ, ಮನೆಯ ಮೆಟ್ಟಿಲುಗಳ ಬಳಿ ಇಡಬಾರದು.

ಎಲ್ಲಿ ತೆಗೆಯಬಾರದು?

ಮನೆಯ ಬಾಗಿಲಿನ ಬಳಿ ಶೂ ಮತ್ತು ಚಪ್ಪಲಿಗಳನ್ನು ಬಿಚ್ಚಿಡುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಈ ಅಭ್ಯಾಸ ಇದ್ದರೆ ಕೂಡಲೇ ಬದಲಾಯಿಸಿಕೊಳ್ಳಿ. ವಾಸ್ತು ನಿಯಮದ ಪ್ರಕಾರ ಮನೆಯ ಬಾಗಿಲ ಬಳಿ ಶೂ, ಚಪ್ಪಲಿಗಳನ್ನು ಎಂದಿಗೂ ತೆಗೆಯಬೇಡಿ. ಹೀಗೆ ಮಾಡುವುದರಿಂದ ಕೌಟುಂಬಿಕ ಕಲಹದ ಸಾಧ್ಯತೆ ಹೆಚ್ಚುತ್ತದೆ. ಕುಟುಂಬ ಸದಸ್ಯರ ನಡುವೆ ಜಗಳಗಳು ಉಂಟಾಗಬಹುದು.

ಇದನ್ನೂ ಓದಿ: Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು


ಶೂ ರಾಕ್ ಎಲ್ಲಿ ಇಡಬೇಕು?

ಶೂ ರಾಕ್ ಗಳನ್ನು ಯಾವಾಗಲೂ ಮನೆಯ ಹೊರಗೆ ಇಡಬೇಕು. ಮನೆಯೊಳಗೆ ಶೂ ರಾಕ್ ಗಳನ್ನು ಇಡುವುದರಿಂದ ಪತಿ-ಪತ್ನಿಯರ ನಡುವೆ ಘರ್ಷಣೆಗಳು ಹೆಚ್ಚಾಗುತ್ತವೆ.

ಹೇಗಿಡಬೇಕು?

ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಯಾಕೆಂದರೆ ಇದು ಮನೆಯಲ್ಲಿ ರೋಗಗಳು ನೆಲೆಸುವಂತೆ ಮಾಡುತ್ತದೆ ಎನ್ನುತ್ತದೆ ವಾಸ್ತು ನಿಯಮ.

Continue Reading

ಕೃಷಿ

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM Kisan Samman) ನಿಧಿ ಯೋಜನೆಯ ೧೭ನೇ ಕಂತಿನ ಹಣ ಜೂನ್ 4 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಅನಂತರ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಿಸಾನ್ ಸಮ್ಮಾನ್ ಗಾಗಿ ಅರ್ಜಿ ಸಲ್ಲಿಸಿದ್ದರೆ ಸ್ಥಿತಿಗತಿಯನ್ನು ಒಮ್ಮೆ ಪರಿಶೀಲಿಸಿ. ಜನಸಾಮಾನ್ಯರಿಗೆ ಈ ಕುರಿತ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

By

PM Kisan Samman
Koo

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman) ಯೋಜನೆಯ 17ನೇ ಕಂತಿಗಾಗಿ (17th installment) ಫಲಾನುಭವಿ ರೈತರು (beneficiary farmers) ಕಾಯುತ್ತಿದ್ದು ಶೀಘ್ರದಲ್ಲೇ ಇದು ಬಿಡುಗಡೆಯಾಗಲಿದೆ. ಜೂನ್ 4ರಂದು (june) ನಡೆಯುವ ಲೋಕಸಭೆ ಚುನಾವಣೆಯ (loksabha election) ಫಲಿತಾಂಶ ಪ್ರಕಟವಾದ ಅನಂತರ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತನ್ನು 2024ರ ಫೆಬ್ರವರಿ 28ರಂದು ಮಹಾರಾಷ್ಟ್ರದ ಯವತ್ಮಾಲ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 9 ಕೋಟಿಗೂ ಹೆಚ್ಚು ರೈತರಿಗೆ 21,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದರು. 15 ನೇ ಕಂತಿನ ಹಣ ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾಗಿತ್ತು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ಗಳನ್ನು ಪಡೆಯುತ್ತಾರೆ, ಇದು ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ಏಪ್ರಿಲ್- ಜುಲೈ, ಆಗಸ್ಟ್- ನವೆಂಬರ್ ಮತ್ತು ಡಿಸೆಂಬರ್- ಮಾರ್ಚ್ ನಲ್ಲಿ ನೀಡಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಈ ಯೋಜನೆಯನ್ನು 2019 ರ ಮಧ್ಯಂತರ ಬಜೆಟ್‌ನಲ್ಲಿ ಆಗಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಘೋಷಿಸಿದರು. ಕಂತುಗಳನ್ನು ಸ್ವೀಕರಿಸಲು ರೈತರು ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕು. ಯೋಜನೆಯ ಅಧಿಕೃತ ವೆಬ್‌ಸೈಟ್ ಪ್ರಕಾರ,ಪಿಎಂ ಕಿಸಾನ್ ನೋಂದಾಯಿತ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಒಟಿಪಿ -ಆಧಾರಿತಇ-ಕೆವೈಸಿ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಗಾಗಿ ಹತ್ತಿರದ ಸಿಎಸ್ಸಿ ಕೇಂದ್ರಗಳನ್ನು ಸಂಪರ್ಕಿಸಬಹುದು.


ಪರಿಶೀಲನೆ ಹೇಗೆ?

ನೋಂದಾಯಿಸಿರುವ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಅಧಿಕೃತ ವೆಬ್‌ಸೈಟ್‌ pmkisan.gov.in ಗೆ ಭೇಟಿ ನೀಡಿ. ಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ‘ಡೇಟಾ ಪಡೆಯಿರಿ’ ಎಂಬ ಆಯ್ಕೆಯನ್ನು ಆರಿಸಿ. ಬಳಿಕ ಫಲಾನುಭವಿಯ ಸ್ಥಿತಿಯು ಪರದೆಯ ಮೇಲೆ ಬರುತ್ತದೆ.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲನೆ

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ ‘ಫಲಾನುಭವಿಗಳ ಪಟ್ಟಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಬಳಿಕ ಡ್ರಾಪ್-ಡೌನ್‌ನಿಂದ ಆಯ್ದ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ವಿವರಗಳನ್ನು ಆಯ್ಕೆ ಮಾಡಿ.ದ ಮೇಲೆ ‘ಗೆಟ್ ರಿಪೋರ್ಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ಅನಂತರ, ಫಲಾನುಭವಿಗಳ ಪಟ್ಟಿಯ ವಿವರವನ್ನು ಪ್ರದರ್ಶಿಸಲಾಗುತ್ತದೆ.

ಈ ಮಾಹಿತಿಗಳನ್ನು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿಯೂ ತಿಳಿದುಕೊಳ್ಳಬಹುದು. ಸಹಾಯವಾಣಿ ಸಂಖ್ಯೆ- 155261 ಮತ್ತು 011-24300606.

ಇದನ್ನೂ ಓದಿ: PSI Exam: ಪಿಎಸ್‌ಐ ಸೇರಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಅನೌನ್ಸ್‌; ಯಾವ ದಿನಕ್ಕೆ ಯಾವ ಪರೀಕ್ಷೆ?

ಅರ್ಜಿ ಸಲ್ಲಿಸುವುದು ಹೇಗೆ?

pmkisan.gov.in ವೆಬ್ ಸೈಟ್ ಗೆ ಭೇಟಿ ನೀಡಿ, ‘ಹೊಸ ರೈತ ನೋಂದಣಿ’ ಮೇಲೆ ಕ್ಲಿಕ್ ಮಾಡಿ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ. ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ‘ಹೌದು’ ಎಂದು ಕ್ಲಿಕ್ ಮಾಡಿ. ಪಿಎಂ ಕಿಸಾನ್ ಅರ್ಜಿ ನಮೂನೆ 2024 ರಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ. ಅದನ್ನು ಉಳಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Continue Reading

ವಾಣಿಜ್ಯ

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

ಜನಪ್ರಿಯ ವಿನ್ಯಾಸಕಾರರಿಂದ ಕಸ್ಟಮೈಸ್ ಮಾಡಿದ ಬಾಟಲಿಯಲ್ಲಿ 49 ಲಕ್ಷ ರೂಪಾಯಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಚಿನ್ನದ ನೀರನ್ನು ನೀತಾ ಅಂಬಾನಿ (Nita Ambani) ಕುಡಿಯುತ್ತಾರೆ ಎನ್ನಲಾಗುತ್ತದೆ. ಈ ನೀರು ಯಾಕೆ ಇಷ್ಟು ದುಬಾರಿ, ಇದರ ವಿಶೇಷತೆ ಏನು ಗೊತ್ತೇ? ವಿಶ್ವದ ಅತ್ಯಂತ ದುಬಾರಿ ನೀರಿನ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Nita Ambani
Koo

ಅಂಬಾನಿ (Ambani) ಕುಟುಂಬದ ಪ್ರತಿಯೊಬ್ಬರ ಬಗ್ಗೆಯೂ ತಿಳಿದುಕೊಂಡಷ್ಟು ಮತ್ತಷ್ಟು ತಿಳಿಯುವ ಕುತೂಹಲವಂತೂ ಇದ್ದೇ ಇದೆ. ಅದರಲ್ಲೂ ನೀತಾ ಅಂಬಾನಿ (Nita Ambani) ಅವರ ಸ್ಟೈಲಿಶ್ ಲುಕ್ (Stylish look) ಎಲ್ಲರನ್ನೂ ಮೋಡಿ ಮಾಡುತ್ತದೆ. ಅವರ ಚಪ್ಪಲಿಯಿಂದ ಹಿಡಿದು ಹಣೆಯ ಬಿಂದಿಯವರೆಗೆ ಅವರ ಕುರಿತು ಒಂದಲ್ಲ ಒಂದು ವಿಷಯಗಳು ಸದಾ ಚರ್ಚೆಯಲ್ಲಿರುತ್ತದೆ.

ತನ್ನದೇ ಆದ ಶೈಲಿ ಮತ್ತು ಸೊಬಗಿಗೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಈಗ ಮತ್ತೆ ಚರ್ಚೆಯಲ್ಲಿರುವುದು ಅವರ ವಿಶಿಷ್ಟವಾದ ಬಾಟಲಿಯ ನೀರಿನಿಂದ (water bottle). ನೀರಲ್ಲಿ ಅಂತಹ ವಿಶೇಷತೆ ಏನಿದೆ ಎಂಬ ಪ್ರಶ್ನೆ ಕಾಡಬಹುದು. ಆದರೆ ಇದು ಅಂತಿಂತ ನೀರಲ್ಲ ವಿಶ್ವದ ಅತ್ಯಂತ ದುಬಾರಿ ನೀರು (costliest gold water).

ಜನಪ್ರಿಯ ಡಿಸೈನರ್ ಫರ್ನಾಂಡೋ ಅಲ್ಟಾಮಿರಾನೊ ವಿನ್ಯಾಸಗೊಳಿಸಿದ ಕಸ್ಟಮೈಸ್ ಮಾಡಿದ ಬಾಟಲಿಯಲ್ಲಿ ನೀತಾ ಅಂಬಾನಿ ನೀರು ಕುಡಿಯುತ್ತಾರೆ. ಇದು ವಿಶ್ವದ ಅತ್ಯಂತ ದುಬಾರಿ ನೀರು. ಏಕೆಂದರೆ ಈ ಚಿನ್ನದ ಬಾಟಲಿಯ ಬೆಲೆಯೇ 49 ಲಕ್ಷ ರೂಪಾಯಿಯಂತೆ!


ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ಬ್ರಾಂಡ್ ನ 49 ಲಕ್ಷ ರೂಪಾಯಿಗಳ ಈ ನೀರನ್ನು ನೀತಾ ಅಂಬಾನಿ ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ನೀರು ಎನ್ನಲಾಗುತ್ತದೆ. ಚಿನ್ನದಂತಹ ನೀರಿನ ಬಾಟಲಿಯನ್ನು ಹಿಡಿದಿರುವ ಮಾರ್ಫ್ ಮಾಡಿದ ಚಿತ್ರವನ್ನು ಆಧರಿಸಿ ಈ ಸುದ್ದಿಯನ್ನು ಆಂಗ್ಲ ಮಾಧ್ಯಮವೊಂದು ಪ್ರಕಟಿಸಿದೆ. 2015ರ ಐಪಿಎಲ್ ಪಂದ್ಯದ ಸಮಯದಲ್ಲಿ ಮೂಲ ಫೋಟೋದಲ್ಲಿ ನೀತಾ ಅಂಬಾನಿ ಸಾಮಾನ್ಯ ನೀರಿನ ಬಾಟಲಿಯನ್ನು ಹಿಡಿದುಕೊಂಡಿದ್ದಾರೆ. ಅದೇ ಚಿತ್ರವನ್ನು ಚಿನ್ನದ ಬಾಟಲಿಗೆ ರೂಪಾಂತರಿಸಿ ಪ್ರಕಟಿಸಲಾಗಿದೆ. ಈ ಬ್ರಾಂಡ್ ನ ನೀರು ವಿಶ್ವದಲ್ಲೇ ಅತ್ಯಂತ ದುಬಾರಿ ಎನ್ನುವುದು ನಿಜ. ಆದರೆ ನೀತಾ ಅಂಬಾನಿ ಎಷ್ಟು ಪ್ರಮಾಣದಲ್ಲಿ ಅದನ್ನು ಕುಡಿಯುತ್ತಾರೆ ಎನ್ನುವುದು ಖಚಿತವಾಗಿಲ್ಲ.

ನೀರಿನ ವಿಶೇಷ ಏನು?

ತ್ವಚೆಯನ್ನು ಯೌವನವಾಗಿಡಲು ಚಿನ್ನದ ಕಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ಯುವ ಮತ್ತು ಕ್ರಿಯಾತ್ಮಕವಾಗಿ ಕಾಣಲು ನೀತಾ ಅಂಬಾನಿ ಈ ಚಿನ್ನದ ನೀರನ್ನು ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ.


ಏಕೆ ದುಬಾರಿ?

ವಿಶ್ವದ ಅತ್ಯಂತ ದುಬಾರಿ ಚಿನ್ನದ ನೀರಿನ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಹಲವು ಪ್ರಮುಖ ವಿಷಯಗಳಿವೆ.

ಈ ನೀರಿನ ಬಾಟಲಿಯು 24 ಕ್ಯಾರಟ್ ಚಿನ್ನದಿಂದ ಮುಚ್ಚಲ್ಪಟ್ಟಿದೆ. ಫಿಜಿ ಮತ್ತು ಫ್ರಾನ್ಸ್‌ನ ನೈಸರ್ಗಿಕ ಬುಗ್ಗೆಯಿಂದ ನೀರನ್ನು ಸಂಗ್ರಹಿಸಲಾಗುತ್ತದೆ. ಐಸ್‌ಲ್ಯಾಂಡ್‌ನ ಹಿಮನದಿ ನೀರು 23 ಕ್ಯಾರಟ್ ಚಿನ್ನದ ಧೂಳನ್ನು ಹೊಂದಿರುತ್ತದೆ.

ದುಬಾರಿ ಫೋನ್ ಬಳಕೆ

ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಅತ್ಯಂತ ದುಬಾರಿ ಕಸ್ಟಮೈಸ್ ಮಾಡಿದ ಮೊಬೈಲ್ ಫೋನ್ ಗಳನ್ನು ಬಳಸುತ್ತಾರೆ. ಇತ್ತೀಚೆಗೆ, ಅವರು ಮಹತ್ವದ ಕಾರ್ಯಕ್ರಮವೊಂದರಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: Forbes World Billionaires List: ವಿಶ್ವದ ಶ್ರೀಮಂತ ಮಹಿಳೆಯರು; ಭಾರತದ ಸಾವಿತ್ರಿ ಜಿಂದಾಲ್‌ಗೆ ಎಷ್ಟನೇ ಸ್ಥಾನ?

ನೀತಾ ಅಂಬಾನಿ ಅವರು ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ ಅನ್ನು ಬಳಸುತ್ತಾರೆ, ಇದು ವಿಶ್ವದ ಅತ್ಯಂತ ದುಬಾರಿ ಫೋನ್‌ಗಳಲ್ಲಿ ಒಂದಾಗಿದೆ. ಈ ಕಸ್ಟಮ್ ವಿನ್ಯಾಸದ ಫೋನ್ ಹಿಂಭಾಗದಲ್ಲಿ ದೊಡ್ಡ ಗುಲಾಬಿ ವಜ್ರವನ್ನು ಹೊಂದಿದೆ ಮತ್ತು ಪ್ಲಾಟಿನಂನಲ್ಲಿ ಸುತ್ತುವರಿಯಲ್ಪಟ್ಟಿದೆ. ಇದರ ಬೆಲೆ ಸುಮಾರು 300 ಕೋಟಿ ರೂ. ಎನ್ನಲಾಗುತ್ತದೆ.

Continue Reading
Advertisement
Rishabh Pant
ಕ್ರೀಡೆ5 mins ago

Rishabh Pant: ದೇವರ ಕೃಪೆಯಿಂದ ಮತ್ತೆ ಟೀಮ್​ ಇಂಡಿಯಾ ಜೆರ್ಸಿ ಧರಿಸುವಂತಾಯಿತು ಎಂದು ಭಾವುಕರಾದ ರಿಷಭ್​ ಪಂತ್

IAS Exam
ಕರ್ನಾಟಕ10 mins ago

IAS Exam : ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ

Kamal Haasan indian 2 second song out
ಕಾಲಿವುಡ್13 mins ago

Kamal Haasan: ‘ಇಂಡಿಯನ್-2’ ಸಿನಿಮಾದ ಎರಡನೇ ಹಾಡು ರಿಲೀಸ್!

Bus accident
ದೇಶ25 mins ago

Bus Accident: ಕಂದಕಕ್ಕೆ ಉರುಳಿದ ಬಸ್‌; 9 ಜನ ಬಲಿ; 40 ಜನರಿಗೆ ಗಂಭೀರ ಗಾಯ

Money Guide
ಮನಿ-ಗೈಡ್27 mins ago

Money Guide: ಹಣ ಪಾವತಿ ಅಂಗಳಕ್ಕೆ ಕಾಲಿಡಲು ಅದಾನಿ ಗ್ರೂಪ್‌ ಸಜ್ಜು; ಗೂಗಲ್‌ ಪೇ, ಫೋನ್‌ ಪೇಗೆ ಪ್ರಬಲ ಪೈಪೋಟಿ?

DK Shivakumar
ಕರ್ನಾಟಕ32 mins ago

DK Shivakumar: ಸಿಎಂ, ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ; ಡಿಕೆಶಿ ಹೊಸ ಬಾಂಬ್

Food Poisoning
ಬೆಳಗಾವಿ32 mins ago

Food Poisoning : ಜಾತ್ರೆಲಿ ಪ್ರಸಾದ ಸೇವಿಸಿದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

IPL 2024
ಕ್ರೀಡೆ41 mins ago

IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

Kannada New Movie Dasappa Kannada Movie Trailer
ಸ್ಯಾಂಡಲ್ ವುಡ್52 mins ago

Kannada New Movie: ʻತಿಥಿʼ ಚಿತ್ರದ ಖ್ಯಾತಿಯ ತಮ್ಮಣ್ಣ ಅಭಿನಯದ ʻದಾಸಪ್ಪʼ ಸಿನಿಮಾ ಟ್ರೈಲರ್‌ ಔಟ್‌!

T20 World Cup 2024
ಕ್ರೀಡೆ52 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ಗಳಿವರು…

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ3 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌