ಸರ್ಕಾರದ ₹400 ಕೋಟಿ ಮೌಲ್ಯದ ಭೂಮಿ ಪರರ ಪಾಲು?: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು - Vistara News

ಪ್ರಮುಖ ಸುದ್ದಿ

ಸರ್ಕಾರದ ₹400 ಕೋಟಿ ಮೌಲ್ಯದ ಭೂಮಿ ಪರರ ಪಾಲು?: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಿಡೂ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಆರೋಪದಲ್ಲಿ ಈ ಹಿಂದೆಯೂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದ ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಇದೀಗ ಮತ್ತೊಂದು ದೂರು ದಾಖಲು ಮಾಡಿದ್ದಾರೆ.

VISTARANEWS.COM


on

siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸುಮಾರು 400 ಕೋಟಿ ರೂ. ಮೌಲ್ಯದ ಸರ್ಕಾರದ ಭೂಮಿಯನ್ನು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಖಾಸಗಿಯವರಿಗೆ ನೀಡಲು ಸಹಕರಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಎನ್‌. ಆರ್‌. ರಮೇಶ್‌ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಜತೆಗೆ ಬಿಡಿಎ, ನಗರಾಭಿವೃದ್ಧಿ ಅಧಿಕಾರಿಗಳು, ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಎನ್‌.ಆರ್‌. ರಮೇಶ್‌ ಆಗ್ರಹಿಸಿದ್ದಾರೆ.

ದೂರಿನ ಸಾರಾಂಶ

RMV 2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1984 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಭೂಪಸಂದ್ರ ಗ್ರಾಮದ ಪ್ರದೇಶಗಳನ್ನು ಭೂಸ್ವಾಧೀನಪಡಿಸಿಕೊಂಡಿತ್ತು.

ಭೂಪಸಂದ್ರ ಗ್ರಾಮದ ಸರ್ವೆ ನಂ. 20 ರಲ್ಲಿನ 03.34 ಎಕರೆ, ಸರ್ವೆ ನಂ. 21 ರಲ್ಲಿ 02.32 ಎಕರೆ ಸೇರಿ ಒಟ್ಟು 06.26 ಎಕರೆ ಜಮೀನಿಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿತ್ತು. ಸಂಬಂಧಪಟ್ಟ ಭೂ ಮಾಲೀಕರಿಗೆ ಸಲ್ಲಬೇಕಾದ ಪರಿಹಾರದ ಮೊತ್ತವನ್ನು ನಗರ ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿತ್ತು. ನಂತರ ಸ್ವತ್ತುಗಳು ಬಿಡಿಎ ಹೆಸರಿಗೆ ವರ್ಗಾವಣೆಗೊಂಡಿದ್ದವು.

ತಾನು ಕಾನೂನು ರೀತ್ಯಾ ಭೂ ಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತನ್ನ ಎಂಜಿನಿಯರಿಂಗ್ ಇಲಾಖೆಯ ಮೂಲಕ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಬಡಾವಣೆ ನಿರ್ಮಾಣಕ್ಕೆ ಬೇಕಾದ ಮೂಲ ಸೌಕರ್ಯಗಳನ್ನೂ ನಿರ್ಮಿಸಿ, 42 ಅರ್ಜಿದಾರರಿಗೆ ಹಂಚಿಕೆ ಮಾಡಿ ʼಸ್ವಾಧೀನ ಪತ್ರʼವನ್ನು ನೀಡಿ, ಹಂಚಿಕೆದಾರರಿಗೆ ಆಯಾ ನಿವೇಶನಗಳ ಸುಪರ್ದನ್ನು ನೀಡಿತ್ತು.

ಈ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ನಂತರ, ಪರಿಹಾರದ ಮೊತ್ತವನ್ನು ಪಡೆದಿದ್ದ ಜಮೀನಿನ ಮಾಲೀಕರು ಅತಿಯಾದ ದುರಾಸೆಯಿಂದ, ಡಿನೋಟಿಫಿಕೇಷನ್‌ ಮಾಡಲು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ತೀರ್ಪು ಬಿಡಿಎ ಪರವಾಗಿ ಬಂದರೂ, ಜಮೀನಿಗೆ ಯಾವುದೇ ಸಂಬಂಧ ಇಲ್ಲದಂತಹ ವ್ಯಕ್ತಿಗಳು (ಕೆ. ವಿ. ಜಯಲಕ್ಷ್ಮಮ್ಮ, ಎಸ್. ಎನ್. ವಿಜಯಲಕ್ಷ್ಮಿ ಮತ್ತು ಕೆ. ವಿ. ಪ್ರಭಾಕರ್) ಕೀರ್ತಿ ರಾಜ್‌ ಶೆಟ್ಟಿ ಎನ್ನುವವರು ಕಾನೂನು ಬಾಹಿರವಾಗಿ GPA ಪಡೆದು ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದರು. ಈ ಸಂದರ್ಭದಲ್ಲಿ ಪ್ರಕರಣದ ತೀರ್ಪು ಸರ್ಕಾರಕ್ಕೆ ವ್ಯತಿರಿಕ್ತವಾಗಿತ್ತು.

ಬಿಡಿಎ ತನ್ನ ನಿಲುವನ್ನು ಸಮರ್ಥನೆ ಮಾಡಿಕೊಂಡು ಮೇಲ್ಮನವಿ ಸಲ್ಲಿಸಿದರೂ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಉಚ್ಛ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲಿಲ್ಲ. ಅರ್ಜಿದಾರರಾಗಿದ್ದ ಕೆ. ವಿ. ಜಯಲಕ್ಷ್ಮಮ್ಮ, ಎಸ್. ಎನ್. ವಿಜಯಲಕ್ಷ್ಮಿ, ಕೆ. ವಿ. ಪ್ರಭಾಕರ್ ಮತ್ತು ಇವರುಗಳಿಂದ ಕಾನೂನು ಬಾಹಿರವಾಗಿ GPA ಪಡೆದಿರುವ ಕೀರ್ತಿ ರಾಜ್ ಶೆಟ್ಟಿ ಅವರುಗಳಿಗೆ ಸಹಾಯ ಮಾಡಲೇಬೇಕೆಂದು ಸಿದ್ದರಾಮಯ್ಯ ನಿರ್ಧರಿಸಿದ್ದರು. ಅಂದಿನ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಅಧೀನ ಕಾರ್ಯದರ್ಶಿ ಎನ್. ನರಸಿಂಹಮೂರ್ತಿ, ನಗರಾಭಿವೃದ್ಧಿ ಇಲಾಖೆಯ ಕಾನೂನು ಕೋಶದ ಅಧಿಕಾರಿ ಎರ್ಮಲ್ ಕಲ್ಪನಾ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಾಂಭಟ್ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್‌ ಮೇಲೆ ತಮ್ಮ ಪ್ರಭಾವವನ್ನು ಬಳಸಿ ನಗರಾಭಿವೃದ್ಧಿ ಇಲಾಖೆ ಉಚ್ಛ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸದಂತೆ ಕೆಲಸ ಮಾಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದು ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ.

ಪ್ರಭಾವಶಾಲಿ ಮೂರನೇ ವ್ಯಕ್ತಿಗಳಿಗೆ ಅತ್ಯಂತ ಆತ್ಮೀಯರಾಗಿದ್ದ ಮಾಜಿ ಶಾಸಕ ವಸಂತ್ ಬಂಗೇರ, ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅರ್ಜಿದಾರರ ನಡುವಿನ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು ಎಂದಿರುವ ಎನ್‌ ಆರ್‌ ರಮೇಶ್‌, ಸರ್ಕಾರವು ಈ ರೀತಿಯ ಆದೇಶ ನೀಡಲು ಕಾನೂನಿನ ಅಡಿಯಲ್ಲಿ ಅವಕಾಶ ಇರುವುದಿಲ್ಲ. ಮುಂದಿನ ದಿನಗಳಲ್ಲಿ ತಾವು ಮಾಡಿದ ಇಂತಹ ಕಾನೂನು ಬಾಹಿರ ಕಾರ್ಯ ಒಂದು ವೇಳೆ ಹೊರಬಂದರೂ ಸಹ ತಾವು ಇದರಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಅತ್ಯಂತ ನಾಜೂಕಾಗಿ ನಗರಾಭಿವೃದ್ಧಿ ಇಲಾಖೆಯ ಕಾನೂನು ಕೋಶದ ಅಧಿಕಾರಿಯ ಮೂಲಕ ಅಂದಿನ ಸಿಎಂ ಸಿದ್ಧರಾಮಯ್ಯ ಕಾನೂನನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.

ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಸ್ವತ್ತು ನಷ್ಟ ಉಂಟಾಗಲು ಕಾರಣಕರ್ತರಾಗುವ ಮೂಲಕ ಮತ್ತು ಭ್ರಷ್ಟಾಚಾರ ನಡೆಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ವತ್ತು ಹೋಗಲು ಕಾರಣಕರ್ತರಾಗಿರುವ ಸಿದ್ಧರಾಮಯ್ಯ, ಮಹೇಂದ್ರ ಜೈನ್, ಎನ್. ನರಸಿಂಹಮೂರ್ತಿ, ಎರ್ಮಲ್ ಕಲ್ಪನಾ, ಶಾಂಭಟ್, ಅಂದಿನ ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್, ಕೆ. ವಿ. ಜಯಲಕ್ಷ್ಮಮ್ಮ, ಎಸ್. ಎನ್. ವಿಜಯಲಕ್ಷ್ಮಿ, ಕೆ. ವಿ. ಪ್ರಭಾಕರ್, ಕೀರ್ತಿ ರಾಜ್ ಶೆಟ್ಟಿ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ಎನ್‌.ಆರ್‌. ರಮೇಶ್‌ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Election 2023 | ಕೊನೆಗೂ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ: ಒಂದೇ ಕ್ಷೇತ್ರದಿಂದ ಸ್ಪರ್ಧೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Actor Darshan: ಹಾಸ್ಯನಟ ಚಿಕ್ಕಣ್ಣ ಬೆನ್ನಲ್ಲೇ ನಟ ಯಶಸ್‌ ಸೂರ್ಯಗೂ ನೋಟೀಸ್‌, ವಿಚಾರಣೆ

Actor Darshan: ನಟ ಯಶಸ್‌ ಸೂರ್ಯ ಕೂಡ ಅಂದು ಕುಖ್ಯಾತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಲ್ಲಿ ಡಿ ಗ್ಯಾಂಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಗೊತ್ತಾಗಿದೆ. ಈತ ದರ್ಶನ್‌ಗೆ ಆಪ್ತನಾಗಿದ್ದು, ಅದೇ ದಿನ ನಡೆಸಲಾದ ಪಾರ್ಟಿಯಲ್ಲಿ ಚಿಕ್ಕಣ್ಣ ಜೊತೆಗೆ ಹಾಜರಿದ್ದರು.

VISTARANEWS.COM


on

actor darshan yashas surya
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಆರೆಸ್ಟ್ ಆಗಿರುವ ನಟ ದರ್ಶನ್ (Actor Darshan) ಜೊತೆ ಅದೇ ದಿನ ಪಾರ್ಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ (comedian Chikkanna) ಅವರ ವಿಚಾರಣೆ ನಡೆಸಲಾಗಿದ್ದು, ಅದೇ ಪಾರ್ಟಿಯಲ್ಲಿದ್ದ ಇನ್ನೊಬ್ಬ ನಟನಿಗೂ ಪೊಲೀಸ್‌ ವಿಚಾರಣೆ ನೋಟೀಸ್‌ (police notice) ಹೋಗಿದೆ.

ನಟ ಯಶಸ್‌ ಸೂರ್ಯ (Yashas Surya) ಕೂಡ ಅಂದು ಕುಖ್ಯಾತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಲ್ಲಿ ಡಿ ಗ್ಯಾಂಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಗೊತ್ತಾಗಿದೆ. ಈತ ದರ್ಶನ್‌ಗೆ ಆಪ್ತನಾಗಿದ್ದು, ಅದೇ ದಿನ ನಡೆಸಲಾದ ಪಾರ್ಟಿಯಲ್ಲಿ ಚಿಕ್ಕಣ್ಣ ಜೊತೆಗೆ ಹಾಜರಿದ್ದರು. ಇದೀಗ ವಿಚಾರಣೆಗೆ ಹಾಜರಾಗಲು ಯಶಸ್‌ಗೂ ನೋಟೀಸ್‌ ನೀಡಲಾಗಿದೆ.

ಚಿಕ್ಕಣ್ಣ, ಯಶಸ್ ಸೂರ್ಯ ಸೇರಿದಂತೆ ಇನ್ನೂ ಕೆಲ ನಟರಿಗೂ ಪೊಲೀಸರು ನೋಟೀಸ್ ನೀಡುವ ಸಾಧ್ಯತೆ ಇದೆ. ಮುಖ್ಯವಾಗಿ, ಅಂದು ದರ್ಶನ್‌ ಯಾರುಯಾರನ್ನು ಭೇಟಿಯಾಗಿದ್ದರೋ ಅವರೆಲ್ಲರೂ ಪೊಲೀಸ್‌ ತನಿಖೆಯನ್ನು ಎದುರಿಸಬೇಕಿದೆ. ಅಂದು ನಡೆಸಿದ ಮಾತುಕತೆಯನ್ನು ದರ್ಶನ್‌, ರೇಣುಕಾಸ್ವಾಮಿ ವಿಚಾರ ಎತ್ತಿದ್ದರೇ ಎಂಬುದು ತನಿಖೆಯ ಮುಖ್ಯ ವಿಚಾರವಾಗಿರಲಿದೆ.

actor darshan yashas surya

ಸಾಕ್ಷಿದಾರರಾಗಿ ಬಳಕೆ

ದರ್ಶನ್ ಆಂಡ್ ಗ್ಯಾಂಗ್‌ನಿಂದ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಲ್ಲದೇ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಹೇಳಿಕೆ ನೀಡಿದವರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳು ಸೇರಿ 27ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ. 27 ಮಂದಿಯಲ್ಲಿ 17 ಮಂದಿ ಬಂಧಿತ ಆರೋಪಿಗಳು. ನಟ ದರ್ಶನ್, ಪವಿತ್ರ ಗೌಡ ಸೇರಿ 17 ಮಂದಿ ಬಂಧಿತ ಆರೋಪಿಗಳು. ಇನ್ನುಳಿದ 10 ಮಂದಿಯನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಸಾಕ್ಷಿಗಳು ಎಂದು ಈವರೆಗೆ 10 ಮಂದಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.

ಘಟನಾ ಸ್ಥಳದಲ್ಲಿ ಹಾಜರಿದ್ದ ಕೆಲವರು, ಬೇರೆಬೇರೆ ಕಡೆಗಳಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಕಂಡು ಬಂದ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ. ಅವರನ್ನು ರೇಣುಕಾಸ್ವಾಮಿ ಕೊಲೆ ಸಂಬಂಧ ಸಾಕ್ಷಿಗಳು ಎಂದು ಪರಿಗಣಿಸಿ ಹೇಳಿಕೆ ದಾಖಲು ಮಾಡಲಾಗಿದೆ. ಶೆಡ್ ಬಳಿ ಇದ್ದ ಇನ್ನೂ ಕೆಲವರ ಹೇಳಿಕೆ ಪಡೆದುಕೊಂಡಿದ್ದಾರೆ. ಘಟನೆ ಹೇಗಾಯ್ತು, ಯಾರು ಯಾರು ಇದ್ದರು, ಎಷ್ಟು ಜನ ಸೇರಿದ್ದರು, ದರ್ಶನ್ ಎಷ್ಟು ಹೊತ್ತಿಗೆ ಬಂದಿದ್ದು, ಯಾವಯಾವ ಆಯುಧಗಳಿಂದ ಹಲ್ಲೆ ಮಾಡಿದರು, ಹೀಗೆ ಹಲವು ವಿಚಾರಗಳ ಬಗ್ಗೆ ಹೇಳಿಕೆ ದಾಖಲಿಸಿದ್ದಾರೆ. ಶೆಡ್‌ನ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ದರ್ಶನ್‌ ಗ್ಯಾಂಗ್‌ ನಾಶ ಮಾಡಿರುವ ಹಿನ್ನೆಲೆಯಲ್ಲಿ, ಈ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಮಹತ್ವ ಪಡೆದುಕೊಳ್ಳಲಿದೆ.

ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌

ನಟ ದರ್ಶನ್ (Actor Darshan) ಜೊತೆ ಕೊಲೆಯ ದಿನ ಪಾರ್ಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸ್‌ ತನಿಖೆಯ ಉರುಳು ಸುತ್ತಿಕೊಂಡಿದ್ದು, ನಿನ್ನೆ ಮೂರು ಗಂಟೆಗಳ ಕಾಲ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿದೆ. ವಿಚಾರಣೆ ಸಂದರ್ಭದಲ್ಲಿ, ಅದೇ ದಿನ ತಾನು ದರ್ಶನ್ ಜೊತೆ ಪಾರ್ಟಿ ಮಾಡಿದ್ದು ನಿಜ ಎಂದು ಚಿಕ್ಕಣ್ಣ ಒಪ್ಪಿಕೊಂಡಿದ್ದಾರೆ.

“ಇಬ್ಬರೂ ಪಾರ್ಟಿ ಮುಗಿಸಿ ಒಟ್ಟಿಗೆ ಪಬ್‌ನಿಂದ ಹೋದೆವು ಎಂದು ಚಿಕ್ಕಣ್ಣ ಹೇಳಿದ್ದಾರೆ. 8ನೇ ತಾರೀಕು ಆರ್‌ಆರ್ ನಗರದ ಸ್ಟೋನಿ ಬ್ರೋಕ್ ಪಬ್‌ಗೆ ನಾನು ಬಂದಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಪಬ್‌ಗೆ ಬಂದಿದ್ದೆ. ದರ್ಶನ್ ಮತ್ತು ನಾನು ಒಂದೇ ಟೇಬಲ್ ನಲ್ಲಿ ಪಾರ್ಟಿ ಮಾಡಿದೆವು. ಸುಮಾರು 4:30ರ ಹೊತ್ತಿಗೆ ಅವರು ಹೊರಟರು. ಅವರ ಜೊತೆಗೆ ನಾನೂ ಅಲ್ಲಿಂದ ಹೊರಟೆ. ನಾನು ನಮ್ಮ‌ ಮನೆಗೆ ಹೋದೆ, ದರ್ಶನ್ ಎಲ್ಲಿಗೆ ಹೋದ್ರೋ ನನಗೆ ಗೊತ್ತಿಲ್ಲ” ಎಂದು ಚಿಕ್ಕಣ್ಣ ಹೇಳಿದ್ದಾರೆ.

ʼನಾವು ಸೇರಿದ್ದು ಸಿನಿಮಾ ವಿಚಾರ ಮಾತಾನಾಡೋಕೆ. ಅದನ್ನಷ್ಟೇ ಮಾತಾಡಿ ಅಲ್ಲಿಂದ ಹೊರಟೆʼ ಎಂದು ಚಿಕ್ಕಣ್ಣ ತಿಳಿಸಿದ್ದಾರೆ. ವಕೀಲರ ಜೊತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ ಅವರ ಬಳಿ ಪೊಲೀಸರು ನೂರಾರು ಪ್ರಶ್ನೆಗಳನ್ನು ಹಾಕಿ ವಿಷಯ ಸಂಗ್ರಹಿಸಿದರು. 1.30ರಿಂದ 4.30ರವರೆಗೆ ಏನೆಲ್ಲಾ ಆಯ್ತು? ಮತ್ತೋರ್ವ ನಟ ಹಾಗೂ ನಿರ್ಮಾಪಕ ಇದ್ರಾ? ಯಾವ ಸಿನಿಮಾ ವಿಚಾರಕ್ಕೆ ಮಾತು ಕತೆ ನಡೀತಿತ್ತು? ಬರೀ ಸಿನಿಮಾ‌ ವಿಚಾರವಾ ಅಥವಾ ಬೇರೆ ಏನಾದ್ರೂ ಮಾತು ಕತೆ ನಡೆದಿತ್ತಾ? ಅವತ್ತು ದರ್ಶನ್ ವರ್ತನೆ ಹೇಗಿತ್ತು? ಪಾರ್ಟಿ ವೇಳೆ ದರ್ಶನ್‌ಗೆ ಕರೆಗಳು ಬರ್ತಿದ್ವಾ?ರೇಣುಕಾಸ್ವಾಮಿ ಬಗ್ಗೆ ಅವತ್ತು ಚರ್ಚೆ ಏನಾದ್ರು ಆಗಿತ್ತಾ? ಹೀಗೆ ಹಲವು ವಿಚಾರಗಳ ಬಗ್ಗೆ ಚಿಕ್ಕಣ್ಣನನ್ನು ಪ್ರಶ್ನೆ ಮಾಡಲಾಗಿದೆ.

ಪೊಲೀಸ್‌ ವಿಚಾರಣೆ ಬಳಿಕ ಹೊರಗೆ ಬಂದ ಚಿಕ್ಕಣ್ಣ, “ಇವತ್ತು ಪೊಲೀಸರು ವಿಚಾರಣೆಗೆ ಕರೆದಿದ್ರು, ಹೋಗಿದ್ದೆ. ಅವತ್ತು ಊಟಕ್ಕೆ ಹೋಗಿದ್ದೆ ಅದನ್ನು ಹೇಳಿದೆ. ತನಿಖೆಯಲ್ಲಿರುವ ಕಾರಣ ಬೇರೆ ಏನೂ ಹೇಳುವುದಕ್ಕೆ ಆಗದು. ಅವರು ಕೇಳಿದ್ದಕ್ಕೆ ಉತ್ತರ ಕೊಟ್ಟಿದೀನಿ” ಎಂದು ತಿಳಿಸಿದರು.

ಇದನ್ನೂ ಓದಿ: Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

Continue Reading

Latest

Viral News: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು! ವಿಡಿಯೊ ನೋಡಿ

Viral News: ಆಹಾರವನ್ನು ಅನ್ನಪೂರ್ಣೆ ಎಂದು ಕಣ್ಣಿಗೊತ್ತಿ ಸೇವಿಸುವ ನಂಬಿಕೆಯುಳ್ಳ ಈ ದೇಶದಲ್ಲಿ ಇಂದು ತಿನ್ನುವ ಆಹಾರವನ್ನು ಅನುಮಾನದಿಂದ ನೋಡುವ ಕಾಲ ಬಂದಿದೆ. ಬಿಹಾರದ ಬಂಕಾದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಕಾಲೇಜಿನ ಅವ್ಯವಸ್ಥೆಯಿಂದ ಹಿಡಿದು ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದಾನೆ. ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಊಟದಲ್ಲಿ ಸತ್ತ ಹಾವು ಇತ್ತು ಎಂದು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದಿದ್ದಾನೆ. ಆ ಆಹಾರವನ್ನು ಸೇವಿಸಿದ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದರು ಎಂಬುದಾಗಿ ತಿಳಿಸಿದ್ದಾನೆ.

VISTARANEWS.COM


on

Viral News
Koo

ಬಿಹಾರ : ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸರ್ಕಾರ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ನೀಡುತ್ತಿದೆ. ಅದರಂತೆ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಶಾಲೆಯಲ್ಲಿಯೇ ತಯಾರಿಸಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಈ ಊಟ ಸೇವಿಸಿ ಹಲವು ಬಾರಿ ಮಕ್ಕಳು ಅಸ್ವಸ್ಥರಾದ ಬಗ್ಗೆ ನಾವು ಕೇಳಿದ್ದೇವೆ. ಅಂತಹದೊಂದು ಘಟನೆ ಬಿಹಾರದ ಬಂಕಾದಲ್ಲಿ ನಡೆದಿದ್ದು, ಈ ಬಗ್ಗೆ ಇಲ್ಲಿನ ವಿದ್ಯಾರ್ಥಿಯೊಬ್ಬ ಸಾಕ್ಷಿ ಸಮೇತ ನಿರೂಪಿಸಿದ್ದಾನೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ಬಿಹಾರದ ಬಂಕಾದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ರಿಷಿ ಸಿಂಗ್ ಕಾಲೇಜಿನ ಅವ್ಯವಸ್ಥೆಯಿಂದ ಹಿಡಿದು ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದಾನೆ.
ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಊಟದಲ್ಲಿ ಸತ್ತ ಹಾವು ಇತ್ತು ಎಂದು ತನ್ನ ಸೋಷಿಯಲ್‌ ಮೀಡಿಯಾ ಪೇಜ್ ನಲ್ಲಿ ಬರೆದಿದ್ದಾನೆ. ಆ ಆಹಾರವನ್ನು ಸೇವಿಸಿದ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದರು ಎಂಬುದಾಗಿ ತಿಳಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಪೋಟೊಗಳನ್ನು ಪೋಸ್ಟ್ ಮಾಡಿದ್ದಾನೆ.

ಹಾಗೇ ಮತ್ತೊಂದು ಪೋಸ್ಟ್ ನಲ್ಲಿ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಬ್ರೆಡ್‌ನ ಬಗ್ಗೆ ತಿಳಿಸಿದ್ದಾನೆ. ಬ್ರೆಡ್‌ಗೆ ಅವಧಿ ಮೀರಿದ ಕಾರಣ ಅದರಲ್ಲಿ ಇರುವೆ, ಹುಳುಗಳು ಇವೆ. ಅದನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳ ಆರೋಗ್ಯವನ್ನು ಹಾಳುಮಾಡುತ್ತದೆ ಎಂದು ಅದಕ್ಕೆ ಸಂಬಂಧಪಟ್ಟ ವಿಡಿಯೊ ತುಣುಕೊಂದನ್ನು ಪೋಸ್ಟ್ ಮಾಡಿದ್ದಾನೆ.

ಅಲ್ಲದೇ ಇದರ ಕುರಿತು ಕ್ರಮ ತೆಗೆದುಕೊಳ್ಳಲು ಕಾಲೇಜು ಆಡಳಿತ ಮತ್ತು ಸ್ಥಳೀಯ ಪ್ರಾಧಿಕಾರ ಯಾರು ಮುಂದೆ ಬರುತ್ತಿಲ್ಲ ಎಂದು ವಿದ್ಯಾರ್ಥಿಯು ತಿಳಿಸಿದ್ದಾನೆ. ಹಾಗಾಗಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಬಂಕಾಗೆ ಟ್ಯಾಗ್ ಮಾಡಿದ್ದಾನೆ. ಜೂನ್ 17 ಸೋಮವಾರದಿಂದು ಈ ಘಟನೆ ವರದಿಯಾಗಿದೆ.

ಇದನ್ನೂ ಓದಿ: Viral Video: ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ; ಗೇಟ್ ಬಳಿ ಮೂರ್ಛೆ ಹೋದ ತಾಯಿ!

ಈ ಘಟನೆಯ ನಂತರ ಬಂಕಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಶುಲ್ ಕುಮಾರ್ ಮತ್ತು ಇತರ ಕೆಲವು ಅಧಿಕಾರಿಗಳು ಈ ವಿಷಯವನ್ನು ತನಿಖೆ ಮಾಡಲು ಮೆಸ್ ಗೆ ಭೇಟಿ ನೀಡಿದ್ದಾರೆ ಮತ್ತು ಮೆಸ್ ಮಾಲೀಕರಿಗೆ ದಂಡ ವಿಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Continue Reading

ಪ್ರಮುಖ ಸುದ್ದಿ

Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

Actor Darshan: ಅವತ್ತು ದರ್ಶನ್ ವರ್ತನೆ ಹೇಗಿತ್ತು? ಪಾರ್ಟಿ ವೇಳೆ ದರ್ಶನ್‌ಗೆ ಕರೆಗಳು ಬರ್ತಿದ್ವಾ?ರೇಣುಕಾಸ್ವಾಮಿ ಬಗ್ಗೆ ಅವತ್ತು ಚರ್ಚೆ ಏನಾದ್ರು ಆಗಿತ್ತಾ? ಹೀಗೆ ಹಲವು ವಿಚಾರಗಳ ಬಗ್ಗೆ ಚಿಕ್ಕಣ್ಣನನ್ನು ಪ್ರಶ್ನೆ ಮಾಡಲಾಗಿದೆ.

VISTARANEWS.COM


on

actor darshan Actor Chikkanna
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಆರೆಸ್ಟ್ ಆಗಿರುವ ನಟ ದರ್ಶನ್ (Actor Darshan) ಜೊತೆ ಅದೇ ದಿನ ಪಾರ್ಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ (comedian Chikkana) ಅವರನ್ನು ಪೊಲೀಸ್‌ ತನಿಖೆಯ (police investigation) ಉರುಳು ಸುತ್ತಿಕೊಂಡಿದ್ದು, ನಿನ್ನೆ ಮೂರು ಗಂಟೆಗಳ ಕಾಲ ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸಿದೆ.

ವಿಚಾರಣೆ ಸಂದರ್ಭದಲ್ಲಿ, ಅದೇ ದಿನ ತಾನು ದರ್ಶನ್ ಜೊತೆ ಪಾರ್ಟಿ ಮಾಡಿದ್ದು ನಿಜ ಎಂದು ಚಿಕ್ಕಣ್ಣ ಒಪ್ಪಿಕೊಂಡಿದ್ದಾರೆ. “ಇಬ್ಬರೂ ಪಾರ್ಟಿ ಮುಗಿಸಿ ಒಟ್ಟಿಗೆ ಪಬ್‌ನಿಂದ ಹೋದೆವು ಎಂದು ಚಿಕ್ಕಣ್ಣ ಹೇಳಿದ್ದಾರೆ. 8ನೇ ತಾರೀಕು ಆರ್‌ಆರ್ ನಗರದ ಸ್ಟೋನಿ ಬ್ರೋಕ್ ಪಬ್‌ಗೆ ನಾನು ಬಂದಿದ್ದೆ. ಮಧ್ಯಾಹ್ನ 1.30ರ ಸುಮಾರಿಗೆ ಪಬ್‌ಗೆ ಬಂದಿದ್ದೆ. ದರ್ಶನ್ ಮತ್ತು ನಾನು ಒಂದೇ ಟೇಬಲ್ ನಲ್ಲಿ ಪಾರ್ಟಿ ಮಾಡಿದೆವು. ಸುಮಾರು 4:30ರ ಹೊತ್ತಿಗೆ ಅವರು ಹೊರಟರು. ಅವರ ಜೊತೆಗೆ ನಾನೂ ಅಲ್ಲಿಂದ ಹೊರಟೆ. ನಾನು ನಮ್ಮ‌ ಮನೆಗೆ ಹೋದೆ, ದರ್ಶನ್ ಎಲ್ಲಿಗೆ ಹೋದ್ರೋ ನನಗೆ ಗೊತ್ತಿಲ್ಲ” ಎಂದು ಚಿಕ್ಕಣ್ಣ ಹೇಳಿದ್ದಾರೆ.

ʼನಾವು ಸೇರಿದ್ದು ಸಿನಿಮಾ ವಿಚಾರ ಮಾತಾನಾಡೋಕೆ. ಅದನ್ನಷ್ಟೇ ಮಾತಾಡಿ ಅಲ್ಲಿಂದ ಹೊರಟೆʼ ಎಂದು ಚಿಕ್ಕಣ್ಣ ತಿಳಿಸಿದ್ದಾರೆ. ವಕೀಲರ ಜೊತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ ಅವರ ಬಳಿ ಪೊಲೀಸರು ನೂರಾರು ಪ್ರಶ್ನೆಗಳನ್ನು ಹಾಕಿ ವಿಷಯ ಸಂಗ್ರಹಿಸಿದರು. 1.30ರಿಂದ 4.30ರವರೆಗೆ ಏನೆಲ್ಲಾ ಆಯ್ತು? ಮತ್ತೋರ್ವ ನಟ ಹಾಗೂ ನಿರ್ಮಾಪಕ ಇದ್ರಾ? ಯಾವ ಸಿನಿಮಾ ವಿಚಾರಕ್ಕೆ ಮಾತು ಕತೆ ನಡೀತಿತ್ತು? ಬರೀ ಸಿನಿಮಾ‌ ವಿಚಾರವಾ ಅಥವಾ ಬೇರೆ ಏನಾದ್ರೂ ಮಾತು ಕತೆ ನಡೆದಿತ್ತಾ? ಅವತ್ತು ದರ್ಶನ್ ವರ್ತನೆ ಹೇಗಿತ್ತು? ಪಾರ್ಟಿ ವೇಳೆ ದರ್ಶನ್‌ಗೆ ಕರೆಗಳು ಬರ್ತಿದ್ವಾ?ರೇಣುಕಾಸ್ವಾಮಿ ಬಗ್ಗೆ ಅವತ್ತು ಚರ್ಚೆ ಏನಾದ್ರು ಆಗಿತ್ತಾ? ಹೀಗೆ ಹಲವು ವಿಚಾರಗಳ ಬಗ್ಗೆ ಚಿಕ್ಕಣ್ಣನನ್ನು ಪ್ರಶ್ನೆ ಮಾಡಲಾಗಿದೆ.

ಪೊಲೀಸ್‌ ವಿಚಾರಣೆ ಬಳಿಕ ಹೊರಗೆ ಬಂದ ಚಿಕ್ಕಣ್ಣ, “ಇವತ್ತು ಪೊಲೀಸರು ವಿಚಾರಣೆಗೆ ಕರೆದಿದ್ರು, ಹೋಗಿದ್ದೆ. ಅವತ್ತು ಊಟಕ್ಕೆ ಹೋಗಿದ್ದೆ ಅದನ್ನು ಹೇಳಿದೆ. ತನಿಖೆಯಲ್ಲಿರುವ ಕಾರಣ ಬೇರೆ ಏನೂ ಹೇಳುವುದಕ್ಕೆ ಆಗದು. ಅವರು ಕೇಳಿದ್ದಕ್ಕೆ ಉತ್ತರ ಕೊಟ್ಟಿದೀನಿ” ಎಂದು ತಿಳಿಸಿದರು.

ಆ ಭಯಾನಕ ಶೆಡ್!‌

ರೇಣುಕಾಸ್ವಾಮಿ ಕೊಲೆಯಾದ ಪಟ್ಟಣಗೆರೆಯ ಆ ಶೆಡ್ ಬಗ್ಗೆ ಇದೀಗ ಇನ್ನಿತರ ಕೆಲವು ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಇಲ್ಲಿ ಅದೆಷ್ಟೋ ಕನ್ನಡ ಚಿತ್ರ ನಿರ್ಮಾಪಕರು ಕೂಡ ಗೂಸಾ ತಿಂದಿದ್ದಾರೆ ಎಂಬುದು ಬಯಲಾಗಿದೆ. ತನಗೆ ಆಗದವರು, ತನ್ನ ವಿರೋಧಿಗಳು ಹಾಗೂ ಪೇಮೆಂಟ್‌ ಮಾಡದ ನಿರ್ಮಾಪಕರನ್ನು ಅಟ್ಯಾಕ್ ಮಾಡಲು ದರ್ಶನ್‌ ಬಳಸುತ್ತಿದ್ದ ಜಾಗವೇ ಈ ಶೆಡ್ ಎನ್ನಲಾಗಿದೆ.

ನಟ ದರ್ಶನ್ ಎಷ್ಟೋ ಮಂದಿಗೆ ಇಲ್ಲೇ ಹಲ್ಲೆ ಮಾಡಿ, 2ರಿಂದ 3 ದಿನಗಳ ಕಾಲ ಇಲ್ಲೇ ಇರಿಸಿಕೊಳ್ಳುತ್ತಿದ್ದ. ಕಳಿಸಿಕೊಡುವಾಗ ಬ್ಯಾಂಡೇಜ್ ಹಾಕಿಸಿ ಕೈಗೆ ಹಣ ಕೊಟ್ಟು ಕಳುಹಿಸುತ್ತಿದ್ದ ಎಂದು ಕೆಲವರು ಇದೀಗ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ದರ್ಶನ್‌ ಕಾರು ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದುದನ್ನು ಕೆಲವು ಸ್ಥಳೀಯರು ಗಮನಿಸಿದ್ದಾರೆ. ದರ್ಶನ್‌ಗೆ ಇನ್ನೆಷ್ಟು ಕರಾಳ ಮುಖಗಳಿವೆ ಎಂದು ಪೊಲೀಸರೇ ಇದೀಗ ಬೆಚ್ಚಿ ಬೀಳುವಂತಾಗಿದೆ.

ಇದನ್ನೂ ಓದಿ: Actor Darshan: ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

Continue Reading

ಅಂಕಣ

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

ರಾಜಮಾರ್ಗ ಅಂಕಣ: ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ she 1
Koo

ಈಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮನೆಯೊಳಗೆ ಆಕೆಯನ್ನು (she) ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು (children) ಅಮ್ಮ (mother) ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅವರನ್ನು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಅಜ್ಜಿ ಎನ್ನುತ್ತಾರೆ. ಹೊರಗಿನವರು ಯಾರು ಬಂದರೂ ಆಕೆಯನ್ನು ಆಂಟಿ (Aunty) ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ (Husband) ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ (wife) ಎಂದೇ ರಿಜಿಸ್ಟರ್ ಆಗಿದ್ದಾಳೆ. ಅವಳಿಗೆ ತನ್ನ ಸ್ವಂತ ಹೆಸರೇ ಮರೆತು ಹೋಗಿದೆ! ಅವಳಿಗೆ ಸ್ವಂತ ಐಡೆಂಟಿಟಿಯು (Identity) ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿವೆ.

ಆಕೆಯ ಬಾಲ್ಯವೂ ಹಾಗೇ ಇತ್ತು!

ಆಕೆ ಮೊದಲ ಬಾರಿಗೆ ಕಣ್ಣು ತೆರೆದು ಈ ಜಗತ್ತಿಗೆ ಬಂದಾಗ ಕೇಳಿದ ಮೊದಲ ಉದ್ಗಾರ – ಛೇ! ಈ ಬಾರಿಯೂ ಹೆಣ್ಣು! ಆಗ ಅದು ಅವಳಿಗೆ ಅರ್ಥ ಆಗದ ವಯಸ್ಸು.

ಅವಳನ್ನು ತೊಟ್ಟಿಲಲ್ಲಿ ಮಲಗಿಸಿ ಆಕೆಯ ಕಿವಿಯಲ್ಲಿ ಯಾವುದೋ ಒಂದು ಹೆಸರನ್ನು ಹೆತ್ತವರು ಉಸಿರಿದ್ದರು. ಅದೂ ಅವಳಿಗೆ ನೆನಪಿಲ್ಲ. ಮನೆಯವರು ಅಪ್ಪ, ಅಮ್ಮ ಎಲ್ಲರೂ ಆಕೆಯನ್ನು ಪೂರ್ತಿ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ಅಮ್ಮಿ, ಅಮ್ಮು, ಪುಟ್ಟಿ, ಚಿನ್ನು…. ಹೀಗೆ ತರಹೇವಾರಿ ಹೆಸರುಗಳು. ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದ ಕಾರಣ ಆಕೆಗೇ ಕೆಲವು ಬಾರಿ ಗೊಂದಲ ಆದದ್ದು ಇದೆ.

ಶಾಲೆಯಲ್ಲಿಯೂ ಆಕೆಗೆ ಐಡೆಂಟಿಟಿ ಇರಲಿಲ್ಲ!

ಆಕೆಯನ್ನು ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿಯನ್ನು ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು. ಆಕೆಯು ಅವಳ ಅಣ್ಣನಷ್ಟು, ಅಕ್ಕನಷ್ಟು ಪ್ರತಿಭಾವಂತೆ ಆಗಿರಲಿಲ್ಲ. ಮಾರ್ಕ್ಸ್ ಕಡಿಮೆ ಬಂದಾಗ ಶಿಕ್ಷಕರು ‘ ನಿನಗೆ ಅಣ್ಣನಷ್ಟು ಯಾಕೆ ಮಾರ್ಕ್ ಬಂದಿಲ್ಲ? ಅಕ್ಕನ ಹಾಗೆ ಯಾಕೆ ಮಾರ್ಕ್ ಬರೋದಿಲ್ಲ?’ ಎಂದು ಕೇಳಿದಾಗ ಆಕೆಗೆ ಸಿಟ್ಟು ಬರುತ್ತಿತ್ತು.

‘ನಾನು ನಾನೇ ‘ಎಂದು ಕಿರುಚಿ ಹೇಳಬೇಕು ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಆಗುತ್ತಲೇ ಇರಲಿಲ್ಲ. ಆಗಲೇ ಆಕೆಯು ಐಡೆಂಟಿಟಿ ಕಳೆದುಕೊಂಡಾಗಿತ್ತು.

ರಾಜಮಾರ್ಗ ಅಂಕಣ she 1

ಮುಂದೆ ಹೈಸ್ಕೂಲಿಗೆ ಬಂದಾಗಲೂ ಐಡೆಂಟಿಟಿ ಇರಲಿಲ್ಲ!

ಹೈಸ್ಕೂಲ್ ವಿದ್ಯಾಬ್ಯಾಸಕ್ಕೆ ಆಕೆ ಬಂದಾಗ ಇನ್ನೂ ಕೆಲವು ಕಿರುಕುಳಗಳು ಆರಂಭ ಆದವು. ಮೂರು ದಿನ ಹೊರಗೆ ಕೂರಲೇಬೇಕು ಎಂದು ಅಮ್ಮ ಅಪ್ಪಣೆ ಕೊಡಿಸಿದರು. ಆಗ ಶಾಲೆಗೆ ಬಂದಾಗಲೂ ಆಕೆಯು ಮೈಯನ್ನು ಮುದ್ದೆ ಮಾಡಿ ಕುಳಿತುಕೊಳ್ಳುತ್ತಿದ್ದಳು. ಆಗೆಲ್ಲ ಕೀಳರಿಮೆ ಹೆಚ್ಚಾಯಿತು. ಭಯ ಹೆಚ್ಚಾಯಿತು. ಮಾರ್ಕ್ ಮತ್ತೂ ಕಡಿಮೆ ಆಯಿತು.

ಒಮ್ಮೆ ಒಬ್ಬ ಓರಗೆಯ ಹುಡುಗ ಟಿಫಿನ್ ಬಾಕ್ಸನಲ್ಲಿ ಒಂದು ಲವ್ ಲೆಟರ್ ಇಟ್ಟು ನನ್ನನ್ನು ಪ್ರೀತಿ ಮಾಡುತ್ತಿಯಾ? ಎಂದು ಬರೆದಿದ್ದ. ಆಗ ಇನ್ನೂ ಭಯವು ಹೆಚ್ಚಾಯಿತು. ಮದುವೆ ಆಗ್ತೀಯಾ ಎಂದು ಕೇಳಿದಾಗ ಅವನು ʼಅದೆಲ್ಲ ಬೇಡ, ಪ್ರೀತಿ ಮಾತ್ರ ಮಾಡೋಣ’ ಅಂದನು. ಆಕೆಗೆ ಅದೆಲ್ಲ ಅರ್ಥವೇ ಆಗಲಿಲ್ಲ. ಮನೆಗೆ ಬಂದಾಗ ಅಮ್ಮ ಪ್ರತೀ ದಿನ ಆಕೆಯ ಶಾಲೆಯ ಬ್ಯಾಗ್ ಚೆಕ್ ಮಾಡುತ್ತಾ ಇದ್ದರು. ಜೋರಾಗಿ ಪ್ರತಿಭಟಿಸಬೇಕು ಅನ್ನಿಸಿದರೂ ಆಕೆಗೆ ಧ್ವನಿಯೇ ಬರಲಿಲ್ಲ.

ಎಲ್ಲರೂ ಡಾಮಿನೇಟ್ ಮಾಡುವವರು!

ಆಕೆಯ ತಿಂಗಳ ಆ ಡೇಟ್ ಆಕೆಗೆ ಮರೆತು ಹೋದರೂ ಅಮ್ಮನಿಗೆ ನೆನಪು ಇರುತ್ತಿತ್ತು. ಆಕೆಯ ತಂಗಿ, ತಮ್ಮ ಕೂಡ ಆಕೆಯ ಮೇಲೆ ಡಾಮಿನೇಟ್ ಮಾಡ್ತಾ ಇದ್ದರು. ಆಕೆಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವೇ ಮರೆತುಹೋಗಿತ್ತು.

ಕಡಿಮೆ ಮಾರ್ಕ್ ಬಂದ ಕಾರಣ ಆಕೆಯು ಕಾಲೇಜಿನ ಮೆಟ್ಟಲು ಹತ್ತಲಿಲ್ಲ. ‘ಗಂಡನ ಮನೆಗೆ ಹೋದ ನಂತರ ಅಡುಗೆ ಮಾಡಬೇಕಲ್ಲ’ ಎಂದು ಆಕೆಯ ಅಮ್ಮ ಅದನ್ನೇ ಚಂದ ಮಾಡಿ ಕಲಿಸಿದರು. ಮನೆಯ ನಾಲ್ಕು ಕೋಣೆಗಳ ನಡುವೆ ಆಕೆಯ ಧ್ವನಿ ಮತ್ತು ಐಡೆಂಟಿಟಿಗಳು ನಿರಂತರ ಉಸಿರುಗಟ್ಟುತ್ತಿದ್ದವು.

ಮದುವೆಯ ನಂತರ…

ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

ಚಂದ ಅಡುಗೆ ಮಾಡ್ತೀ ಎಂಬ ಪ್ರಶಸ್ತಿ ಕೊಟ್ಟು ಆಕೆಯನ್ನು ಅಡುಗೆ ಮನೆಯ ಮಹಾರಾಣಿಯನ್ನಾಗಿ ಮಾಡಿಬಿಟ್ಟರು. ‘ಅನ್ನಪೂರ್ಣೆ ‘ ಎಂಬ ಬಿರುದು ಆಕೆಗೆ ಮುಳ್ಳಿನ ಕಿರೀಟ ಆಗಿ ಬಿಟ್ಟಿತು. ಇಡೀ ದಿನ ಊಟ, ತಿಂಡಿ, ಪಾತ್ರೆ, ಬಟ್ಟೆ, ಸ್ವಚ್ಛತೆ, ಒಂದಿಷ್ಟು ನೆಂಟರು, ಹಬ್ಬಗಳು, ಮದುವೆ, ಮುಂಜಿ, ಗೃಹ ಪ್ರವೇಶ, ಸೀಮಂತ ಇಷ್ಟರಲ್ಲಿ ಆಕೆಯ ದಿನಚರಿಯು ಮುಗಿದು ಹೋಗುತ್ತಿತ್ತು. ಒಂದೆರಡು ಧಾರಾವಾಹಿಗಳು ಸ್ವಲ್ಪ ರಿಲೀಫ್ ಕೊಡುತ್ತಿದ್ದವು. ಆಗೆಲ್ಲ ನನ್ನ ಬದುಕು ಆ ಧಾರಾವಾಹಿಗಳ ಕಥೆಯ ಹಾಗೆ ಇಲ್ಲವಲ್ಲ ಎಂಬ ದುಃಖವೂ ಆಕೆಯನ್ನು ಕಾಡುತ್ತಿತ್ತು.

ರಾಜಮಾರ್ಗ ಅಂಕಣ she 1

ಈಗಲೂ ಆಕೆಗೆ ಐಡೆಂಟಿಟಿ ಇಲ್ಲ!

ಮೊಮ್ಮಕ್ಕಳು ಅಜ್ಜಿ ಅಂತ ಕರೆದು ತಿಂಡಿಗಾಗಿ ಓಡಿ ಬರುತ್ತಾರೆ. ಈ ಪಾಠ ಹೇಳಿಕೊಡು, ಈ ಪಾಠ ಹೇಳಿಕೊಡು ಎಂದು ದುಂಬಾಲು ಬೀಳುತ್ತಾರೆ. ಆಗ ಆಕೆಗೆ ಅರ್ಥ ಆಗದೆ ಹೋದಾಗ ‘ ಏನಜ್ಜಿ? ನಿನಗೆ ಏನೂ ಗೊತ್ತಿಲ್ಲ. ಹೋಗಜ್ಜಿ’ ಎಂದು ಅಣಕಿಸಿದಾಗ ನೋವಾಗುತ್ತದೆ. ನೆರೆಹೊರೆಯವರ ಜೊತೆಗೆ ಮಾತಿಗೆ ನಿಂತರೆ ಸಿನೆಮಾ, ಗಾಸಿಪ್, ಫ್ಯಾಷನ್ ಎಂದೆಲ್ಲ ಮಾತಾಡುತ್ತಾರೆ. ಆಗೆಲ್ಲ ಆಕೆಯ ಅಜ್ಞಾನವು ಆಕೆಯನ್ನು ಅಣಕಿಸುತ್ತದೆ. ಆಕೆ ಈಗ ಮನೆಯಿಂದ ಹೊರಗೆ ಹೋಗೋದನ್ನು ಬಿಟ್ಟಿದ್ದಾರೆ. ತವರು ಮನೆಗೆ ಹೋಗದೆ ಎಷ್ಟೋ ವರ್ಷಗಳು ಕಳೆದಿವೆ.

ಆಕೆಯ ಗಂಡ ವಿ ಆರ್ ಎಸ್ ತೆಗೆದುಕೊಂಡು ಈಗ ಮನೆಯಲ್ಲಿಯೇ ಇದ್ದಾರೆ. ಪ್ರತೀ ಅರ್ಧ ಘಂಟೆಗೆ ಒಮ್ಮೆ ‘ ಓ ಇವಳೇ, ಒಂದು ಲೋಟ ಟೀ ಮಾಡಿ ಕೊಡು’ ಎಂದು ಕರೆಯುತ್ತಲೆ ಇರುತ್ತಾರೆ. ಮಗ, ಸೊಸೆ ಸಂಜೆ ಆಫೀಸ್ ಮುಗಿಸಿ ಬಂದು ಲ್ಯಾಪ್ ಟಾಪ್ ಕುಟ್ಟುತ್ತಾ ಕೂರುತ್ತಾರೆ. ಸೊಸೆ ಒಮ್ಮೆ ಕೂಡ ತಿಂಗಳಲ್ಲಿ ಮೂರು ದಿನ ಹೊರಗೆ ಕೂತದ್ದು ಅವಳು ನೋಡಲೇ ಇಲ್ಲ! ಆಗೆಲ್ಲ ನಾನೆಷ್ಟು ಕಳೆದುಕೊಂಡೆ ಎಂಬ ದುಃಖ ಆಕೆಯನ್ನು ಆವರಿಸುತ್ತದೆ. ಮೊಮ್ಮಕ್ಕಳು ಹೊಮ್ ವರ್ಕ್, ಪ್ರಾಜೆಕ್ಟ್, ವಿಡಿಯೋ ಗೇಮ್ ಎಂದು ಮುಳುಗಿರುತ್ತಾರೆ.

ಆಕೆ ʼಇವತ್ತಿನ ಊಟ, ತಿಂಡಿಯ ಮೆನು ಮುಗಿಯಿತು, ನಾಳೆ ಎಂತ ಅಡಿಗೆ ಮಾಡುವುದು?’ ಎಂದು ಲೆಕ್ಕ ಹಾಕುತ್ತ ತಡರಾತ್ರಿ ಹಾಸಿಗೆಗೆ ಒರಗುತ್ತಾರೆ.

ಆಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

ಇದನ್ನೂ ಓದಿ: ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Continue Reading
Advertisement
Euro 2024
ಕ್ರೀಡೆ6 mins ago

Euro 2024: ಉಕ್ರೇನ್​ಗೆ ಆಘಾತವಿಕ್ಕಿದ ರೊಮೇನಿಯಾ; 3-0 ಗೋಲ್​ ಅಂತರದ ಗೆಲುವು

actor darshan yashas surya
ಪ್ರಮುಖ ಸುದ್ದಿ7 mins ago

Actor Darshan: ಹಾಸ್ಯನಟ ಚಿಕ್ಕಣ್ಣ ಬೆನ್ನಲ್ಲೇ ನಟ ಯಶಸ್‌ ಸೂರ್ಯಗೂ ನೋಟೀಸ್‌, ವಿಚಾರಣೆ

Leader of the Opposition
ರಾಜಕೀಯ32 mins ago

Opposition Leader: 10 ವರ್ಷ ಬಳಿಕ ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ! ಇವರಿಗೆ ಸಿಗುವ ಸವಲತ್ತುಗಳೇನು?

Sonakshi Sinha
ಬಾಲಿವುಡ್43 mins ago

Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?

Viral News
Latest49 mins ago

Viral News: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು! ವಿಡಿಯೊ ನೋಡಿ

Pankaja Munde
ದೇಶ52 mins ago

ಚುನಾವಣೆಯಲ್ಲಿ ಸೋತಿದ್ದಕ್ಕೆ ನಾಲ್ವರ ಆತ್ಮಹತ್ಯೆ; ಸಾಂತ್ವನ ಹೇಳಿ ಕಣ್ಣೀರಿಟ್ಟ ಬಿಜೆಪಿ ನಾಯಕಿ

actor darshan Actor Chikkanna
ಪ್ರಮುಖ ಸುದ್ದಿ1 hour ago

Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

Income Tax Returns Filing
ವಾಣಿಜ್ಯ1 hour ago

Income Tax Returns Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ ತಪ್ಪುಗಳನ್ನು ಮಾಡಬೇಡಿ!

Vastu Tips
ಧಾರ್ಮಿಕ1 hour ago

Vastu Tips: ಮನೆಮಂದಿಯ ಸಂಕಷ್ಟ ನಿವಾರಿಸುತ್ತದೆ ಈ ಮರ!

ರಾಜಮಾರ್ಗ ಅಂಕಣ she 1
ಅಂಕಣ2 hours ago

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು20 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು20 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌