RBI Report | ತಮಿಳುನಾಡಿನಲ್ಲಿ ಅತಿ ಹೆಚ್ಚು ಫ್ಯಾಕ್ಟರಿ! ಎರಡನೇ ಸ್ಥಾನದಲ್ಲಿ ಯಾವ ರಾಜ್ಯ? - Vistara News

ದೇಶ

RBI Report | ತಮಿಳುನಾಡಿನಲ್ಲಿ ಅತಿ ಹೆಚ್ಚು ಫ್ಯಾಕ್ಟರಿ! ಎರಡನೇ ಸ್ಥಾನದಲ್ಲಿ ಯಾವ ರಾಜ್ಯ?

ಒಟ್ಟು 38,337 ಕೈಗಾರಿಕೆಗಳೊಂದಿಗೆ ತಮಿಳುನಾಡು ಭಾರತದಲ್ಲೇ ಅತ್ಯಧಿಕ ಕೈಗಾರಿಕೆಗಳನ್ನು ಹೊಂದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಯನ ವರದಿ (RBI Report) ತಿಳಿಸಿದೆ.

VISTARANEWS.COM


on

RBI Report @ Tamil Nadu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿದ ರಾಜ್ಯ ಎಂಬ ಕೀರ್ತಿಗೆ ತಮಿಳುನಾಡು ಭಾಜನವಾಗಿದೆ. ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI Report) ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ. ಕೇಂದ್ರ ಸಾಂಖೀಕ ಮತ್ತು ಕಾರ್ಯಕ್ರಮ ಜಾರಿ ಇಲಾಖೆ ನಡೆಸಿರುವ ವಾರ್ಷಿಕ ಕೈಗಾರಿಕಾ ಸಮೀಕ್ಷೆಯ ದತ್ತಾಂಶಗಳನ್ನು ಉಲ್ಲೇಖಿಸಿ, ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ. ದೇಶದಲ್ಲಿರುವ ಒಟ್ಟು ಕೈಗಾರಿಕೆಗಳ ಪೈಕಿ ನಮ್ಮ ನೆರೆಯ ತಮಿಳುನಾಡಿನಲ್ಲೇ ಶೇ.15ರಷ್ಟಿವೆ! ನಂತರದ ಸ್ಥಾನದಲ್ಲಿ ಗುಜರಾತ್ ರಾಜ್ಯವಿದೆ.

ತಮಿಳುನಾಡಿನಲ್ಲಿ ಒಟ್ಟು 38,837 ಕೈಗಾರಿಕೆಗಳಿದ್ದರೆ, ಗುಜರಾತ್‌ನಲ್ಲಿ 28,479 ಫ್ಯಾಕ್ಟರಿಗಳಿವೆ. ಕಳೆದ ಒಂದು ದಶಕದಲ್ಲಿ ಗುಜರಾತ್‌ ಕೈಗಾರಿಕೆಗಳಲ್ಲಿ ಶೇ.82ರಷ್ಟು ಏರಿಕೆಯ ಹೊರತಾಗಿಯೂ ತಮಿಳನಾಡು ಪ್ರಾಬಲ್ಯವನ್ನು ಮೆರೆದಿದೆ. ಈ ಅವಧಿಯಲ್ಲಿ ತಮಿಳನಾಡು ಕೈಗಾರಿಕೆಗಳಲ್ಲಿ ಶೇ.45ರಷ್ಟು ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್ ಶೇ.11.5 ಫ್ಯಾಕ್ಟರಿಗಳನ್ನು ಹೊಂದಿದ್ದರೆ, ಮೂರನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ.10.3(25,610)ರಷ್ಟು ಕೈಗಾರಿಕೆಗಳಿವೆ. ನಂತರದ ಸ್ಥಾನದಲ್ಲಿ ಆಂಧ್ರ ಪ್ರದೇಶ 19,924(ಶೇ.6.8), ಉತ್ತರ ಪ್ರದೇಶ 19,184(ಶೇ.6.5) ಕೈಗಾರಿಕೆಗಳನ್ನು ಹೊಂದಿವೆ.

2029ರ ಹೊತ್ತಿಗೆ ಭಾರತವು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹಾಕಿಕೊಂಡಿದ್ದರೆ, ತಮಿಳುನಾಡು ಇದರ ಪೈಕಿ ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನುಸಾಧಿಸುವ ಹುಮ್ಮಸ್ಸು ತೋರುತ್ತಿದೆ. ಅದರ ಭಾಗವಾಗಿಯೇ, ಮುಂದಿನ 8 ವರ್ಷಗಳಲ್ಲಿ ತಮಿಳುನಾಡು 45 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ. ಆ ಮೂಲಕ ಭಾರತದ ಉತ್ಪಾದನೆಯ ತೊಟ್ಟಿಲು ಎಂಬ ಕೀರ್ತಿಯನ್ನು ಉಳಿಸಿಕೊಳ್ಳಲು ಹೊರಟಿದೆ.

ಇದನ್ನೂ ಓದಿ | Inflation | ಹಣದುಬ್ಬರ ವಿರುದ್ಧದ ಹೋರಾಟ ಸುದೀರ್ಘ ಸಂಭವ : ಆರ್‌ಬಿಐ ವರದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Ajit Pawar: ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ಗೆ ಶಾಕ್‌; ಎನ್‌ಸಿಪಿಗೆ ರಾಜೀನಾಮೆ ನೀಡಿದ ಆಪ್ತ

Ajit Pawar: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿನ ಕಳಪೆ ಪ್ರದರ್ಶನದ ನಂತರ ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಗೆ ಮತ್ತೊಂದು ಆಘಾತ ಎದುರಾಗಿದೆ. ಪಿಂಪ್ರಿ ಚಿಂಚ್ವಾಡ್ದ ಉನ್ನತ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರುವ ಸಾಧ್ಯತೆ ಇದೆ.

VISTARANEWS.COM


on

Ajit Pawar
Koo

ಮುಂಬೈ: ಇತ್ತೀಚಿನ ಲೋಕಸಭಾ ಚುನಾವಣೆ (Lok Sabha Election)ಯಲ್ಲಿನ ಕಳಪೆ ಪ್ರದರ್ಶನದ ನಂತರ ಮಹಾರಾಷ್ಟ್ರ (Maharashtra)ದಲ್ಲಿ ಅಜಿತ್‌ ಪವಾರ್‌ (Ajit Pawar) ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (Nationalist Congress Party)ಗೆ ಮತ್ತೊಂದು ಆಘಾತ ಎದುರಾಗಿದೆ. ಪಿಂಪ್ರಿ ಚಿಂಚ್ವಾಡ್ (Pimpri Chinchwad)ದ ನಾಲ್ವರು ಉನ್ನತ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರುವ ಸಾಧ್ಯತೆ ಇದೆ.

ಅಜಿತ್ ಪವಾರ್ ಅವರಿಗೆ ರಾಜೀನಾಮೆ ಸಲ್ಲಿಸಿದವರಲ್ಲಿ ಎನ್‌ಸಿಪಿಯ ಪಿಂಪ್ರಿ-ಚಿಂಚ್ವಾಡ್ ಘಟಕದ ಮುಖ್ಯಸ್ಥ ಅಜಿತ್ ಗವ್ಹಾನೆ ಕೂಡ ಸೇರಿದ್ದಾರೆ. ಪಿಂಪ್ರಿ ಚಿಂಚ್ವಾಡ್ ವಿದ್ಯಾರ್ಥಿ ಘಟಕದ ಮುಖ್ಯಸ್ಥ ಯಶ್ ಸಾನೆ, ಮಾಜಿ ಕಾರ್ಪೊರೇಟರ್‌ಗಳಾದ ರಾಹುಲ್ ಭೋಸಲೆ ಮತ್ತು ಪಂಕಜ್ ಭಲೇಕರ್ ರಾಜೀನಾಮೆ ನೀಡಿದ ಇತರ ನಾಯಕರು. ಅಜಿತ್ ಪವಾರ್ ಬಣದ ಕೆಲವು ನಾಯಕರು ಶರದ್ ಪವಾರ್ ಬಣಕ್ಕೆ ಮರಳಲು ಸಿದ್ಧರಾಗಿದ್ದಾರೆ ಎನ್ನುವ ವದಂತಿಯ ಮಧ್ಯೆ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು ಶರದ್ ಪವಾರ್ ಈ ಬಗ್ಗೆ ಮಾತನಾಡಿ, ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಬಯಸುವವರನ್ನು ಸೇರಿಸಿಕೊಳ್ಳುವುದಿಲ್ಲ. ಆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರದ ನಾಯಕರನ್ನು ಸ್ವಾಗತಿಸುವುದಾಗಿ ತಿಳಿಸಿದ್ದರು. “ಪಕ್ಷವನ್ನು ದುರ್ಬಲಗೊಳಿಸಲು ಬಯಸುವವರನ್ನು ನಾವು ಸ್ವಾಗತಿಸುವುದಿಲ್ಲ. ಆದರೆ ಸಂಘಟನೆಯನ್ನು ಬಲಪಡಿಸಲು ಸಹಾಯ ಮಾಡುವ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದ ನಾಯಕರನ್ನು ಸೇರಿಸುತೇವೆ” ಎಂದು ಅವರು ಘೋಷಿಸಿದ್ದರು.

ಈ ಮಧ್ಯೆ ಎನ್‌ಸಿಪಿ ವಕ್ತಾರರು ಮಾತನಾಡಿ, “ಯಾವುದೇ ನಾಯಕರು ಪಕ್ಷವನ್ನು ತೊರೆಯುವುದು ಹಿನ್ನಡೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ಅಜಿತ್ ಗವ್ಹಾನೆ ನಮ್ಮೊಂದಿಗೆ ಇರುತ್ತಾರೆ ಎಂಬ ವಿಶ್ವಾಸವಿದೆ. ಅವರು ಅಜಿತ್ ಪವಾರ್‌ನ ನಿಕಟವರ್ತಿ. ಆದ್ದರಿಂದ ಅವರು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಹಿತ್‌ ಗವ್ಹಾನೆ , ʼʼಎನ್‌ಸಿಪಿಗೆ ರಾಜೀನಾಮೆ ನೀಡಿದ್ದೇನೆ. ಆದರೆ ಶರದ್‌ ಪವಾರ್‌ ಬಣಕ್ಕೆ ಸೇರುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಇಂದು (ಜುಲೈ 17) ಪತ್ರಿಕಾಗೋಷ್ಠಿ ಕರೆದು ನಿರ್ಧಾರ ಪ್ರಕಟಿಸುತ್ತೇನೆʼʼ ಎಂದು ತಿಳಿಸಿದ್ದಾರೆ.

2023ರಲ್ಲಿ ಅಜಿತ್ ಪವಾರ್ ತಮ್ಮ ಸಂಬಂಧಿ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ವಿರುದ್ಧ ದಂಗೆ ಎದ್ದ ನಂತರ ಪವಾರ್ ಕುಟುಂಬವು ಎರಡು ರಾಜಕೀಯ ಪಕ್ಷಗಳಾಗಿ ವಿಭಜನೆಯಾಯಿತು. ಶರದ್ ಪವಾರ್ ಪ್ರತಿಪಕ್ಷದ ಪಾಳಯದಲ್ಲಿ ಉಳಿದರೆ, ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ಭಾಗವಾದರು. ಜತೆಗೆ ಅಜಿತ್ ಪವಾರ್ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಅಜಿತ್ ಪವಾರ್ ಅವರ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎಯ ಮಿತ್ರಪಕ್ಷವಾಗಿ ಲೋಕಸಭಾ ಚುನಾವಣೆ ಎದುರಿಸಿತು. ಆದರೆ ಒಂದು ಸ್ಥಾನವನ್ನು (ರಾಯಗಢ) ಮಾತ್ರ ಗೆದ್ದುಕೊಂಡಿದೆ. ಶರದ್ ಪವಾರ್ ಪಕ್ಷವು ಎಂಟು ಕ್ಷೇತ್ರಗಳಲ್ಲಿ ಗೆದ್ದಿದೆ.

ಇದನ್ನೂ ಓದಿ: Real NCP: ಅಜಿತ್‌ ಪವಾರ್‌ ಬಣದ್ದೇ ನಿಜವಾದ ಎನ್‌ಸಿಪಿ ಎಂದ ಆಯೋಗ; ಶರದ್‌ ಪವಾರ್‌ಗೆ ಹಿನ್ನಡೆ

Continue Reading

ಆರೋಗ್ಯ

Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Chandipura Virus: ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ. ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಅಧಿಕ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ.

VISTARANEWS.COM


on

Chandipura Virus
Koo

ಗಾಂಧಿನಗರ: ರಾಜ್ಯ ಸೇರಿದಂತೆ ದೇಶದ ಕೆಲವೆಡೆ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಇತ್ತ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಹಾವಳಿ ಕಂಡು ಬಂದಿದೆ. ಈ ಮಧ್ಯೆ ಗುಜರಾತ್‌ನಲ್ಲಿ ಚಾಂದಿಪುರ ವೈರಸ್ (Chandipura Virus) ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ.

ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಎಲ್ಲ ಸೋಂಕಿತರ ರಕ್ತದ ಮಾದರಿಗಳನ್ನು ದೃಢೀಕರಣಕ್ಕಾಗಿ ಪುಣೆಯ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (National Institute of Virology)ಗೆ ಕಳುಹಿಸಲಾಗಿದೆ.

ರೋಗ ಲಕ್ಷಣ

ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ಬಾಧಿತರಲ್ಲಿ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ.

ಯಾಕಾಗಿ ಈ ಹೆಸರು?

ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿಕೊಂಡಿತ್ತು. ಹೀಗಾಗಿ ಇದನ್ನು ಚಾಂದಿಪುರ ವೈರಸ್‌ ಎಂದು ಕರೆಯುತ್ತಾರೆ. ಚಾಂದಿಪುರ ವೈರಸ್ ಸೋಂಕು ಹೆಚ್ಚಾಗಿ ಮಕ್ಕಳಿಗೆ ಬಾಧಿಸುತ್ತದೆ. ಅದರಲ್ಲಿಯೂ 9 ತಿಂಗಳಿನಿಂದ 14 ವರ್ಷದ ಮಕ್ಕಳಿಗೆ ಬಾಧಿಸುವ ಸಾಧ್ಯತೆ ಅಧಿಕ. ಈ ವೈರಸ್ ಮಕ್ಕಳ ಮೇಲೆ ದಾಳಿ ಮಾಡಿದಾಗ ಮೊದಲಿಗೆ ಜ್ವರ, ಅತಿಸಾರ, ವಾಂತಿ, ಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಮೆದುಳಿನ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ. ಈ ವೈರಸ್ ವಿರುದ್ಧ ಯಾವುದೇ ಲಸಿಕೆ ಇಲ್ಲದ ಕಾರಣ ಇದನ್ನು ಇನ್ನಷ್ಟು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.

ಒಬ್ಬರಿಂದ ಒಬ್ಬರಿಗೆ ಹರಡುತ್ತಾ?

ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣ, ಉಣ್ಣೆಗಳಿಂದ ಈ ಸೋಂಕು ಹರಡುತ್ತದೆ. ಶುಚಿತ್ವ ಕೊರತೆಯೇ ಮುಖ್ಯ ಕಾರಣ. ಸದ್ಯ ಈ ರೀತಿಯ ಅನೇಕ ಪ್ರಕರಣಗಳು ಗುಜರಾತ್‌ನಲ್ಲಿ ಕಂಡುಬಂದಿವೆ. ಗುಜರಾತ್‌ನ ಸಬರ್‌ಕಾಂಠಾ ರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಜತೆಗೆ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿಯೂ ಸೋಂಕು ಬಾಧಿಸಿರುವುದು ವರದಿಯಾಗಿದೆ. ಶಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರೋಗದಿಂದ ಪಾರಾಗುವುದು ಹೇಗೆ?

ಚಾಂದಿಪುರ ವೈರಸ್‌ನಿಂದ ತಪ್ಪಿಸಿಕೊಳ್ಳಲು ನೈರ್ಮಲ್ಯ ಕಾಪಾಡುವುದು ಅಗತ್ಯ. ಸೊಳ್ಳೆ, ನೊಣ ಮತ್ತು ಕೀಟಗಳು ಕಡಿಯದಂತೆ ಎಚ್ಚರ ವಹಿಸಿ. ಮಕ್ಕಳಿಗೆ ರಾತ್ರಿ ಪೂರ್ಣ ತೋಳಿನ ಬಟ್ಟೆಗಳನ್ನು ತೊಡಿಸಿ. ಸೊಳ್ಳೆಗಳು ಮತ್ತು ಕೀಟಗಳಿಂದ ತಪ್ಪಿಸಿಕೊಳ್ಳಲು ಬಲೆಗಳನ್ನು ಬಳಸಿ. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸಲು ಬಿಡಬೇಡಿ. ಮನೆಯ ಸುತ್ತಮುತ್ತ ನೀಡು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ. ಸಾಕು ಪ್ರಾಣಿಗಳ ಬಳಿಗೆ ತೆರಳುವಾಗ ಎಚ್ಚರವಹಿಸಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Continue Reading

ರಾಜಕೀಯ

CV Ananda Bose: ಉಪಚುನಾವಣೆ ವೇಳೆ ವೋಟಿಂಗ್‌ ಹಕ್ಕು ಕಸಿದ ಟಿಎಂಸಿ ಕಾರ್ಯಕರ್ತರು; ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಮತದಾರರು

CV Ananda Bose: ಉಪಚುನಾವಣೆಯ ವೇಳೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಸುಮಾರು 100 ಮತದಾರರು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರನ್ನು ಭೇಟಿಯಾಗಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ 100 ಮಂದಿ, ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಯ ವೇಳೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮಗೆ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ದೂರಿದ್ದಾರೆ.

VISTARANEWS.COM


on

CV Ananda Bose
Koo

ಕೋಲ್ಕತ್ತಾ: ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ವೇಳೆ ಪಶ್ಚಿಮ ಬಂಗಾಳದಲ್ಲಿ ಸುಮಾರು 2 ಲಕ್ಷ ಹಿಂದುಗಳ ಮತದಾನದ ಹಕ್ಕನ್ನು ಕಸಿಯಲಾಗಿತ್ತು ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ (Suvendu Adhikari) ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್ (Trinamool Congress) ಕಾರ್ಯಕರ್ತರು ಮತ ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಸುಮಾರು 100 ಮತದಾರರು ರಾಜ್ಯಪಾಲ ಸಿ.ವಿ.ಆನಂದ ಬೋಸ್ (CV Ananda Bose) ಅವರನ್ನು ಭೇಟಿಯಾಗಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆದ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ 100 ಮಂದಿ, ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಯ ವೇಳೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮಗೆ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಅವಕಾಶ ವಂಚಿತರೊಂದಿಗೆ ಮಾತುಕತೆ ನಡೆಸಿದ ಸಿ.ವಿ.ಆನಂದ ಬೋಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ʼʼಈ ವಿಷಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ಸಮಯ ಕೋರುತ್ತೇನೆ ಮತ್ತು ಈ ಮತದಾರರನ್ನು ಅವರ ಬಳಿಗೆ ಕರೆದೊಯ್ಯುತ್ತೇನೆ. ಈ ದೌರ್ಜನ್ಯವನ್ನು ಸುಮ್ಮನೆ ಬಿಡುವುದಿಲ್ಲʼʼ ಎಂದು ತಿಳಿಸಿದ್ದಾರೆ.

“ರಾಷ್ಟ್ರಪತಿ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಮನವರಿಕೆ ಮಾಡುತ್ತೇವೆ. ಈ ರೀತಿಯ ಅನ್ಯಾಯ ಮುಂದುವರಿಯಲು ಬಿಡಬಾರದು. ಅವಕಾಶ ವಂಚಿತರ ಪೈಕಿ ಪ್ರತಿನಿಧಿಗಳಾಗಿ ಐವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿಗೆ ಕರೆದೊಯ್ಯುತ್ತೇನೆ” ಎಂದು ಹೇಳಿದ್ದಾರೆ.

ಏನಿದು ವಿವಾದ?

ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜತೆಗೆ ಮಾತನಾಡಿದ ಸುವೇಂದು ಅಧಿಕಾರಿ ʼʼಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಿದೆ. ಇದರ ವಿರುದ್ಧ ನಾವು ಹೋರಾಟ ನಡೆಸಲಿದ್ದೇವೆ. ಲೋಕಸಭಾ ಚುನಾವಣೆಯ ವೇಳೆ ಟಿಎಂಸಿ ಸುಮಾರು 50 ಲಕ್ಷ ಹಿಂದುಗಳಿಗೆ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಿಲ್ಲ. ಇನ್ನು ಇತ್ತೀಚೆಗೆ ನಡೆದ 4 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳ ಹಕ್ಕನ್ನು ಹತ್ತಿಕ್ಕಲಾಯಿತುʼʼ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: Suvendu Adhikari: ಉಪಚುನಾವಣೆಯಲ್ಲಿ ಭಾರಿ ವಂಚನೆ? 2 ಲಕ್ಷ ಹಿಂದುಗಳ ವೋಟಿಂಗ್‌ ಹಕ್ಕು ಕಸಿಯಲಾಗಿತ್ತು ಎಂದ ಬಿಜೆಪಿ ನಾಯಕ

ಉಪಚುನಾವಣೆಯ ಫಲಿತಾಂಶ

ಜುಲೈ 13ರಂದು 7 ರಾಜ್ಯಗಳ 13 ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಈ ಪೈಕಿ ಪ್ರತಿಪಕ್ಷಗಳ ಇಂಡಿ ಒಕ್ಕೂಟ 10 ಕಡೆ ಗೆದ್ದಿದ್ದರೆ ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಇನ್ನು ಪಶ್ಚಿಮ ಬಂಗಾಳದ ರಾಯ್‌ಗಂಜ್‌, ರಣಘತ್ ದಕ್ಷಿಣ, ಬಾಗ್ಡಾ, ಮತ್ತು ಮಾನಿಕ್ತಾಲಾ ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವಿನ ನಗೆ ಬೀರಿತ್ತು.

Continue Reading

ವಾಣಿಜ್ಯ

Anant Radhika Wedding: ಅನಂತ್ ಅಂಬಾನಿ ಟರ್ಬನ್‌ನಲ್ಲಿದ್ದ ಡೈಮಂಡ್ ಬ್ರೋಚ್‌ ಮೌಲ್ಯ 150 ಫ್ಲಾಟ್‌ಗಳ ಬೆಲೆಗೆ ಸಮಾನ!

ಅನಂತ್ ಮತ್ತು ರಾಧಿಕಾ ಅವರ ಮದುವೆಯ (Anant Radhika Wedding) ವೈಭವ ವಿಶ್ವದ ಗಮನ ಸೆಳೆದಿದೆ. ಉಡುಗೆ ತೊಡುಗೆಯಿಂದ ಹಿಡಿದು ಐಷಾರಾಮಿ ಅಲಂಕಾರಗಳವರೆಗೆ ಎಲ್ಲರ ಗಮನ ಸೆಳೆದ ಈ ಮದುವೆಯಲ್ಲಿ ಅನಂತ್ ಅವರು ಪೇಟಾದಲ್ಲಿ ಧರಿಸಿದ್ದ ಕಲ್ಗಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅವರು ಧರಿಸಿದ್ದ ಟರ್ಬನ್‌ನಲ್ಲಿದ್ದ ಕಲ್ಗಿ ಬ್ರೋಚ್‌ನ ಬೆಲೆಯ ಬಗ್ಗೆ ಈಗ ಆಭರಣ ಆಸಕ್ತರ ನಡುವೆ ಭಾರೀ ಚರ್ಚೆ ನಡೆಯುತ್ತಿದೆ.

VISTARANEWS.COM


on

By

Anant Radhika Wedding
Koo

ಭಾರತದ ಶ್ರೀಮಂತ ಕುಟುಂಬವಾದ ಅಂಬಾನಿ ಮನೆತನದ (ambani family) ವಿವಾಹ (Anant Radhika Wedding) ಸಮಾರಂಭ ವಿಶ್ವದ ಗಮನ ಸೆಳೆದಿದೆ. ಉಡುಗೆ ತೊಡುಗೆಯಿಂದ ಹಿಡಿದು ಖಾದ್ಯ ವೈಶಿಷ್ಟ್ಯಗಳು ಸೇರಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಪ್ರತಿಯೊಂದು ಕ್ಷಣ, ಪ್ರತಿಯೊಂದು ವಿಷಯಗಳು ಎಲ್ಲರ ಗಮನ ಸೆಳೆದಿತ್ತು. ಇದರಲ್ಲಿ ಈಗ ಅನಂತ್ ಪೇಟಾದಲ್ಲಿ ಧರಿಸಿದ್ದ ಕಲ್ಗಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮುಂಬಯಿಯಲ್ಲಿ (mumbai) ಕನಸಿನ ಲೋಕವನ್ನೇ ತೆರೆದಿಟ್ಟಿತ್ತು. ಅನೇಕರ ಕಲ್ಪನೆಗೆ ಬಣ್ಣ ತುಂಬಿದ ಈ ಮದುವೆಯಲ್ಲಿ ಬೆರಗುಗೊಳಿಸುವ ಅಲಂಕಾರ, ಅದ್ದೂರಿ ವಿನ್ಯಾಸಕ ಉಡುಪುಗಳು ಹೀಗೆ ಮದುವೆಯ ಪ್ರತಿಯೊಂದು ಅಂಶವು ಇಲ್ಲಿಯವರೆಗಿನ ಅತ್ಯಂತ ಅತಿರಂಜಿತ ಭಾರತೀಯ ವಿವಾಹಗಳಲ್ಲಿ ಒಂದಾಗಿ ಅಲೆಗಳನ್ನು ಸೃಷ್ಟಿಸಿತು.

ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಬಿಕೆಸಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಬಾಲ್ಯದ ಸ್ನೇಹಿತೆಯನ್ನು ವಿವಾಹವಾದ ಅನಂತ್ ಅವರ ಮದುವೆ ಕಾರ್ಯಕ್ರಮಗಳು ಐಷಾರಾಮಿ ಮತ್ತು ಸೊಬಗುಗಳ ಅದ್ಭುತ ಪ್ರದರ್ಶನವಾಗಿತ್ತು. ಸಂಕೀರ್ಣವಾದ ಹೂವಿನ ಅಲಂಕಾರ, ಬೆರಗುಗೊಳಿಸುವ ದೀಪಗಳು ಮತ್ತು ಐಷಾರಾಮಿ ಸೆಟ್ಟಿಂಗ್‌ಗಳೊಂದಿಗೆ ಅತಿಥಿಗಳಿಗೆ ವೈಭವಯುತವಾದ ಹಬ್ಬದ ಸತ್ಕಾರ ನೀಡಲಾಯಿತು.


ಅಬು ಜಾನಿ ಸಂದೀಪ್ ಖೋಸ್ಲಾ ಅವರು ವಿನ್ಯಾಸಗೊಳಿಸಿದ ಕೆಂಪು ಮತ್ತು ಬಿಳಿ ಬಣ್ಣದ ಲೆಹೆಂಗಾದಲ್ಲಿ ರಾಧಿಕಾ ಮರ್ಚೆಂಟ್ಸ ಸಹೋದರಿಯ ಆಭರಣಗಳನ್ನು ಧರಿಸಿ ಮಿಂಚಿದ್ದರು. ಅನಂತ್ ಅಂಬಾನಿ ಅವರು ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಬೆರಗುಗೊಳಿಸುವ ಕೆಂಪು ಶೆರ್ವಾನಿಯನ್ನು ಧರಿಸಿದ್ದು, ಸಂಕೀರ್ಣವಾದ ಚಿನ್ನದ ವಿನ್ಯಾಸ, ಪಚ್ಚೆ ಮತ್ತು ವಜ್ರದ ಗುಂಡಿಗಳನ್ನು ಹೊಂದಿದ್ದು, ರಾಜಪ್ರಭುತ್ವದ ವೈಭವವನ್ನು ಇದು ಸಾರುತ್ತಿತ್ತು.

Anant Radhika Wedding


ಅನಂತ್ ಅವರ ಉಡುಪಿನ ಅಸಾಧಾರಣ ಅಂಶವೆಂದರೆ ಅವರ ರಾಯಲ್ ಕಲ್ಗಿ ಬ್ರೋಚ್. ಸಫಾ ಸಮಾರಂಭದಲ್ಲಿ ಅವರು ಚಿನ್ನದ ಸಫಾ (ಟರ್ಬನ್) ಮತ್ತು ಅವರ ಕೆಂಪು ಬಂಧನಿ ಸಫಾ ಎರಡರಲ್ಲೂ ಇದನ್ನು ಧರಿಸಿದ್ದರು. ಬೃಹತ್ ವಜ್ರ ಹೊದಿಕೆಯನ್ನು ಹೊಂದಿದ್ದ ಇದು ಸಾಂಪ್ರದಾಯಿಕವಾಗಿ ರಾಜಮನೆತನದವರು ಧರಿಸುವ ಅತಿರಂಜಿತ ಪರಿಕರವಾಗಿದೆ. ವೈರಲ್ ಭಯಾನಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಪ್ರಕಾರ ಈ ಕಲ್ಗಿಯ ಮೌಲ್ಯವು 160 ಕೋಟಿ ರೂ. ಗಳಾಗಿದ್ದು, ಇದು 150 ಫ್ಲಾಟ್‌ಗಳ ಬೆಲೆಗೆ ಸಮನಾಗಿದೆ.


ಅನಂತ್ ಮತ್ತು ರಾಧಿಕಾ ಅವರ ಮದುವೆಯ ಸಂಭ್ರಮವು ಮೂರು ದಿನಗಳ ಕಾಲ ನಡೆದು ಅಂತಿಮ ದಿನದಂದು ‘ಮಂಗಲ್ ಉತ್ಸವ’ದಲ್ಲಿ ಕೊನೆಗೊಂಡಿತು.

ಇದನ್ನೂ ಓದಿ: Anant Ambani Wedding: ಮಗನ ಮದುವೆಯಲ್ಲಿ ರಿಲಯನ್ಸ್ ಉದ್ಯೋಗಿಗಳಿಗೂ ಭರ್ಜರಿ ಔತಣ ನೀಡಿದ ಮುಖೇಶ್ ಅಂಬಾನಿ

ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಇಂಡಿಯನ್ ಚಿಕ್’ ನ ಡ್ರೆಸ್ ಕೋಡ್‌ನೊಂದಿಗೆ ಔಪಚಾರಿಕ ವಿವಾಹದ ಆರತಕ್ಷತೆ ನಡೆಯಿತು. ಹೆಚ್ಚುವರಿಯಾಗಿ ಅಂಬಾನಿ ಕುಟುಂಬವು ಜುಲೈ 15ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ತಮ್ಮ ಮನೆಯ ಸಿಬ್ಬಂದಿಗೆ ಮತ್ತೊಂದು ಧನ್ಯವಾದ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

Continue Reading
Advertisement
Director Arrest gajendra in murder case
ಸ್ಯಾಂಡಲ್ ವುಡ್14 mins ago

Director Arrest: ಕೊಲೆ ಕೇಸ್​​ನಲ್ಲಿ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸ್ಯಾಂಡಲ್​ವುಡ್ ನಿರ್ದೇಶಕ ಅರೆಸ್ಟ್​!

Vicky Kaushal Kissing Scenes of 27 Seconds deleated From Bad Newz
ಬಾಲಿವುಡ್42 mins ago

Vicky Kaushal: 27 ಸೆಕೆಂಡುಗಳ ಕಾಲ ಚುಂಬಸಿದ ವಿಕ್ಕಿ ಕೌಶಲ್ -ತೃಪ್ತಿ; ಸೆನ್ಸಾರ್‌ ಬೋರ್ಡ್‌ನಿಂದ ಬಿತ್ತು ಕತ್ತರಿ!

uttara kannada landslide shirur
ಉತ್ತರ ಕನ್ನಡ52 mins ago

Uttara Kannada Landslide: ಭೂಕುಸಿತದ ಜಾಗದ ಬಳಿಯೇ ʼಸುನಾಮಿʼ ಎಫೆಕ್ಟ್‌; ನೀರಿನ ರಭಸಕ್ಕೆ ಕೊಚ್ಚಿಹೋದ ಮಹಿಳೆ

Ajit Pawar
ರಾಜಕೀಯ53 mins ago

Ajit Pawar: ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ಗೆ ಶಾಕ್‌; ಎನ್‌ಸಿಪಿಗೆ ರಾಜೀನಾಮೆ ನೀಡಿದ ಆಪ್ತ

KL Rahul
ಕ್ರೀಡೆ57 mins ago

KL Rahul: ಮುಂದಿನ ವರ್ಷ ಆರ್​ಸಿಬಿ ಪರ ಆಡಲಿದ್ದಾರೆ ಕೆ.ಎಲ್​ ರಾಹುಲ್​; ಪೋಸ್ಟರ್ ವೈರಲ್

Samarjit Lankesh Monalisa Kannada Movie 20 Years Celebration Gowri Movie 2 Songs Released
ಸ್ಯಾಂಡಲ್ ವುಡ್1 hour ago

Samarjit Lankesh: ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ: ರಿಲೀಸ್ ಆಯ್ತು ‘ಗೌರಿ’ ಚಿತ್ರದ ಹಾಡುಗಳು

gt world mall
ಪ್ರಮುಖ ಸುದ್ದಿ1 hour ago

GT World Mall: ಪಂಚೆ ಧರಿಸಿ ಬಂದ ರೈತರಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ ಜಿಟಿ ವರ್ಲ್ಡ್‌ ಮಾಲ್‌

Kylian Mbappe
ಕ್ರೀಡೆ2 hours ago

Kylian Mbappe: ಬಾಲ್ಯದ ಕನಸಿನ ರಿಯಲ್‌ ಮ್ಯಾಡ್ರಿಡ್‌ ತಂಡ ಸೇರಿದ ಕೀಲಿಯನ್‌ ಎಂಬಾಪೆ

SIIMA 2024 nomination list announced kaatera
ಸ್ಯಾಂಡಲ್ ವುಡ್2 hours ago

SIIMA 2024: ಸೈಮಾ ನಾಮಿನೇಷನ್ ರೇಸ್‌ನಲ್ಲಿ ʻಕಾಟೇರʼ, ʻಸಪ್ತ ಸಾಗರದಾಚೆ ಎಲ್ಲೋ ಸೈಡ್-ಎʼ!

Chandipura Virus
ಆರೋಗ್ಯ2 hours ago

Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌