Suicide case | ತನ್ನ ಕಾರನ್ನು ತಾನೇ ಸುಟ್ಟು ಸತ್ತು ಹೋದಂತೆ ನಾಟಕವಾಡಿದ್ದ ವ್ಯಕ್ತಿ ಈಗ ಜೈಲಿನಲ್ಲಿ ಆತ್ಮಹತ್ಯೆ! - Vistara News

Latest

Suicide case | ತನ್ನ ಕಾರನ್ನು ತಾನೇ ಸುಟ್ಟು ಸತ್ತು ಹೋದಂತೆ ನಾಟಕವಾಡಿದ್ದ ವ್ಯಕ್ತಿ ಈಗ ಜೈಲಿನಲ್ಲಿ ಆತ್ಮಹತ್ಯೆ!

ತಾನು ಸತ್ತಿದ್ದೇನೆಂದು ಬಿಂಬಿಸಿ ತಪ್ಪಿಸಿಕೊಳ್ಳಲು ಯತ್ನಿಸಿ, ಇನ್ನೊಬ್ಬ ಅಮಾಯಕನನ್ನು ಬಲಿ ಪಡೆದ ಧೂರ್ತ ವ್ಯಕ್ತಿಯೊಬ್ಬ ಈಗ ಜೈಲಿನಲ್ಲಿ ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾನೆ. ಇಲ್ಲಿದೆ ಒಂದು ಭಯಾನಕ ಕಥೆ.

VISTARANEWS.COM


on

sadanand sherigar
ಆತ್ಮಹತ್ಯೆ ಮಾಡಿಕೊಂಡಿರುವ ಸದಾನಂದ ಶೇರಿಗಾರ್‌ ಮತ್ತು ಆವತ್ತು ಸುಟ್ಟುಹೋದ ಕಾರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಡುಪಿ: ಕಳೆದ ಜುಲೈ ೧೨ರಂದು ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಿರೂರು ಬಳಿಯ ಹೇನಬೇರು ಎಂಬಲ್ಲಿ ಭಯಾನಕವಾದ ಘಟನೆಯೊಂದು ನಡೆದಿತ್ತು. ಕಾರೊಂದು ಧಗಧಗನೆ ಉರಿದು ಭಸ್ಮವಾಗಿತ್ತು. ಅದರಲ್ಲೊಬ್ಬ ವ್ಯಕ್ತಿ ಸುಟ್ಟು ಕರಕಲಾಗಿದ್ದ. ಕಾರಿನ ನಂಬರ್‌ ಗಮನಿಸಿ ಸತ್ತು ಹೋಗಿರುವವನು ಸದಾನಂದ ಸೇರಿಗಾರ್‌ ಎಂಬಾತ ಎಂದು ಅಂದಾಜಿಸಲಾಗಿತ್ತು. ಆದರೆ, ಬಳಿಕ ತನಿಖೆ ನಡೆಸಿದಾಗ ಗೊತ್ತಾಗಿದ್ದು ಬೇರೆಯೇ ಕಥೆ. ಸದಾನಂದ ಶೇರಿಗಾರ್‌ ತಾನೇ ಸತ್ತಿದ್ದಂತೆ ಬಿಂಬಿಸಲು ತನ್ನದೇ ಕಾರಿಗೆ ಬೆಂಕಿ ಕೊಟ್ಟಿದ್ದ. ಆದರೆ, ಕೊಂದಿದ್ದು ಮಾತ್ರ ಬೇರೊಬ್ಬನನ್ನು! ಒಬ್ಬ ಅಮಾಯಕನಿಗೆ ಚೆನ್ನಾಗಿ ಮದ್ಯ ಕುಡಿಸಿ ಅವನನ್ನು ಕಾರಿನೊಳಗೆ ಬಿಟ್ಟು ಬೆಂಕಿ ಹಚ್ಚಿ ತಾನು ಪರಾರಿಯಾಗಿದ್ದ!

ಮುಂದೆ ಎರಡೇ ದಿನದಲ್ಲಿ ಸದಾನಂದ್‌ ಶೇರಿಗಾರ್‌ನನ್ನು ಆತನ ಪ್ರೇಯಸಿ ಮತ್ತು ಇನ್ನೊಬ್ಬನ ಜತೆ ಬಂಧಿಸಲಾಗಿತ್ತು. ಹಾಗೆ ಬಂಧನಕ್ಕೆ ಒಳಗಾದ ಸದಾನಂದ ಶೇರಿಗಾರ್‌ ಉಡುಪಿ ಸಬ್‌ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೀವನ ಕಳೆಯುತ್ತಿದ್ದ. ಭಾನುವಾರ ಮುಂಜಾನೆ ಐದು ಗಂಟೆಯ ಹೊತ್ತಿಗೆ ಆತ ತನ್ನದೇ ಪಂಚೆಯನ್ನು ನೇಣಾಗಿಸಿಕೊಂಡು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾನೆ. ಸುಮಾರು ೨೦ ಮಂದಿ ಕೈದಿಗಳಿರುವ ಕೊಠಡಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸಹ ಕೈದಿಗಳಿಗೆ ವಿಷಯ ತಿಳಿಯುತ್ತಿದ್ದಂತೆಯೇ ಅವರು ಕುಣಿಕೆಯಿಂದ ಬಿಡಿಸಿದರು. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲಿ ಸದಾನಂದ ಸಾವು ಕಂಡಿದ್ದಾನೆ.

ಕಾರ್ಕಳ ಮೂಲದ ಸದಾನಂದ ಶೇರಿಗಾರ್ ಮೂಲತಃ ಒಬ್ಬ ಸರ್ವೇಯರ್ ಆಗಿದ್ದ. ಒಂದು ಫೋರ್ಜರಿ ಪ್ರಕರಣದಲ್ಲಿ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆವತ್ತು ಆತ ಒಂದು ದುಬಾರಿ ಕಾರ್ಯಾಚರಣೆಗೆ ಇಳಿದು ಅಮಾಯಕನ ಪ್ರಾಣವನ್ನು ತೆಗೆದಿದ್ದ. ಇದು ಕುರುಪ್‌ ಎಂಬ ಸಿನಿಮಾ ಮಾದರಿಯಲ್ಲಿ ನಡೆದ ಕೊಲೆ ಎಂದು ಭಾರಿ ಸುದ್ದಿಯಾಗಿತ್ತು.

ಹಾಗಿದ್ದರೆ ಆವತ್ತು ಆಗಿದ್ದೇನು? ಕೊಲೆಯಾದವನು ಯಾರು?
ಸದಾನಂದ ಶೇರಿಗಾರ್‌ ಕಾರ್ಕಳ ತಾಲೂಕಿನ ಮಾಳ ಮೂಲದವನು. ಆತ 2013 ರಿಂದ 2018ರ ತನಕ ಖಾಸಗಿ ಸರ್ವೆಯರ್‌ ಆಗಿ ಕೆಲಸ ಮಾಡುತ್ತಿದ್ದ. ಕೆಲವು ವರ್ಷದ ಹಿಂದೆ ಫೋರ್ಜರಿ ಸರ್ವೇ ಮಾಡಿ ಸಿಕ್ಕಿಬಿದ್ದಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇನ್ನೇನು ಕೆಲವು ದಿನದಲ್ಲಿ ತೀರ್ಪು ಬರಬೇಕಿತ್ತು. ಆಗ ತಾನು ಬಂಧನಕ್ಕೆ ಒಳಗಾಗಬಹುದು ಎಂಬ ಭಯ ಅವನನ್ನು ಕಾಡಲಾರಂಭಿಸಿತು. ಜೈಲು ಶಿಕ್ಷೆಯಾದರೆ ಜೈಲಿನಲ್ಲೇ ಕಾಲ ಕಳೆಯಬೇಕಲ್ಲ ಎಂದು ಕಂಪಿಸಿ ಹೋದ.

ಆಗ ಅವನಿಗೆ ನೆನಪಾಗಿದ್ದೇ ತಾನು ಹಿಂದೆ ನೋಡಿದ್ದ ಮಲಯಾಳಂನ ಕುರುಪ್‌ ಎಂಬ ಸಿನಿಮಾ. ಆ ಸಿನಿಮಾದಲ್ಲಿ ತನ್ನ ಹೆಸರಿನಲ್ಲಿ ಬೇರೆಯವರನ್ನು ಸಾಯಿಸಿ, ಶಿಕ್ಷೆಯ ಭೀತಿಯಲ್ಲಿಯಲ್ಲಿದ್ದ ವ್ಯಕ್ತಿಯೊಬ್ಬ ತಲೆಮರೆಸಿಕೊಳ್ಳುವುದು ಮುಖ್ಯಾಂಶ.

ಒಂದು ಕಾರು ಬೆಂಕಿಯಲ್ಲಿ ಸುಟ್ಟುಹೋಗುವಂತೆ ಮಾಡುವುದು. ಅದರಲ್ಲಿ ತಾನೇ ಸತ್ತು ಹೋದಂತೆ ಮಾಡುವುದು. ಆದರೆ ತಾನು ಮಾತ್ರ ತಪ್ಪಿಸಿಕೊಂಡು ಹೋಗಿ ತಲೆಮರೆಸಿಕೊಂಡು ಬದುಕುವುದು ಅವನ ಪ್ಲ್ಯಾನ್‌ ಆಗಿತ್ತು. ಆದರೆ, ಕಾರಿನಲ್ಲಿ ಸತ್ತು ಹೋಗಲು ತನ್ನಂತೆಯೇ ಇರುವ ಒಬ್ಬ ಅಮಾಯಕ ಬೇಕಲ್ಲ! ಅವನನ್ನು ಹುಡುಕಿಕೊಟ್ಟಿದ್ದು ಇದೇ ಸದಾನಂದ ಶೇರಿಗಾರನ ಪ್ರೇಯಸಿ ಶಿಲ್ಪಾ!

ಕರಾವಳಿ ಕಂಡು ಕೇಳರಿಯದ ಒಂದು ಭಯಾನಕ ಘಟನೆ ಆವತ್ತು ನಡೆದೇ ಹೋಯಿತು. ಜುಲೈ ೧೨ರಂದು ಬೈಂದೂರು ತಾಲೂಕಿನ ಒತ್ತಿನೆಣೆಯ ಹೇನಬೇರು ಎಂಬಲ್ಲಿ ಬೆಳ್ಳಂಬೆಳಗ್ಗೆ ಕಾರೊಂದು ಪ್ಲ್ಯಾನ್‌ನಂತೆ ಸುಟ್ಟು ಹೋಯಿತು. ಸುಟ್ಟು ಕರಕಲಾದ ಕಾರಿನಿಂದ ಬರುತ್ತಿದ್ದ ಹೊಗೆಗೆ ಒಬ್ಬ ವ್ಯಕ್ತಿ ಬಲಿಯಾದ. ವಾಹನದ ಸಂಖ್ಯೆ ಆಧಾರದಲ್ಲಿ ಎಲ್ಲರೂ ಸತ್ತವನು ಸದಾನಂದ ಶೇರಿಗಾರ್‌ ಅಂದುಕೊಂಡರು. ಆದರೆ, ಬಲಿಯಾದ ಅಮಾಯಕನ ಆನಂದ ದೇವಾಡಿಗ. ಅವನನ್ನು ಸೆಟ್‌ ಮಾಡಿದ್ದು ಶಿಲ್ಪಾ ಸಾಲ್ಯಾನ್‌.

ಶಿಲ್ಪಾ ಸಾಲ್ಯಾನ್‌ ಮತ್ತು ಸದಾನಂದ ಶೇರಿಗಾರ್‌ನಿಗೆ ಹಿಂದಿನಿಂದಲೂ ಪರಿಚಯ ಮತ್ತು ಪ್ರೇಮ. ಸದಾನಂದ ತನ್ನ ಖತರ್ನಾಕ್‌ ಐಡಿಯಾವನ್ನು ಪ್ರೇಯಸಿ ಮುಂದೆ ಹೇಳಿಕೊಂಡ. ಆಕೆ ಅವನಿಗಿಂತಲೂ ಭಯಾನಕ ಕ್ರಿಮಿನಲ್‌. ಆಕೆ ತನ್ನ ಪರಿಚಯದ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಆನಂದ ದೇವಾಡಿಗ ಎಂಬಾತನನ್ನು ಸೆಟ್‌ ಮಾಡೇಬಿಟ್ಟಿದ್ದಳು.

ಜುಲೈ 1೧ರಂದು ಈಕೆ ಆನಂದ ದೇವಾಡಿಗನನ್ನು ಮನೆಗೆ ಕರೆಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ಕುಡಿಸಿದಳು. ಆತ ಪ್ರಜ್ಞೆ ಕಳೆದುಕೊಂಡ ಬಳಿಕ ಹಳೆ ಮಾಡೆಲ್‌ ಫೋರ್ಡ್‌ ಐಕಾನ್‌ ಕಾರಿನಲ್ಲಿ ಕುಳ್ಳಿರಿಸಿಕೊಂಡು ರಾತ್ರಿ ೧೧.೩೦ರ ಹೊತ್ತಿಗೆ ಹೇನಬೇರುವಿನ ನಿರ್ಜನ ಜಾಗ ತಲುಪಿದರು. ರಾತ್ರಿ 1.15ರ ಹೊತ್ತಿಗೆ ಮತ್ತೆ ಮದ್ಯ ಕುಡಿಸಿದರು. ಬಳಿಕ ಮೇಸ್ತ್ರಿ ಆನಂದ ದೇವಾಡಿಗನನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕುಳ್ಳಿರಿಸಿ ಕಾರಿಗೆ ಬೆಂಕಿ ಹಚ್ಚಿ ಎಸ್ಕೇಪ್‌ ಆದರು.

ಬೆಳಗ್ಗೆ ಹೊರಜಗತ್ತಿಗೆ ಈ ಘಟನೆ ಗೊತ್ತಾಯಿತು. ಸುಟ್ಟು ಹೋದ ಕಾರಿನ ಚಾಸ್ಸಿ ನಂಬರ್‌ ಅನ್ನು ಫೊರೆನ್ಸಿಕ್‌ ತಜ್ಞರ ಸಹಾಯದಿಂದ ಸ್ವಚ್ಛಗೊಳಿಸಿ ಚಾಸ್ಸಿ ನಂಬರ್‌ ಮೂಲಕ ಮಾಲೀಕನನ್ನು ಪತ್ತೆ ಹಚ್ಚಿದಾಗ, ಕಾರು ಸದಾನಂದ ಶೇರೆಗಾರ್‌ಗೆ ಸೇರಿದ್ದು ಎಂದು ಗೊತ್ತಾಗಿದೆ. ಆತನೇ ಸತ್ತಿದ್ದಾನೆ ಎಂದೇ ಎಲ್ಲರೂ ಭಾವಿಸಿದರು. ಆದರೆ, ಈ ಕಾರು ಉಡುಪಿ ಕಡೆಯಿಂದ ಬಂದಿದ್ದು, ಉಡುಪಿ ತಾಲೂಕಿನ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಮಹಿಳೆಯೊಬ್ಬರು ಟೋಲ್‌ ಹಣ ಕಟ್ಟಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ, ಇದರ ಹಿಂದೆ ಒಂದು ಸಂಚಿರುವುದನ್ನು ಪೊಲೀಸರು ಸಂಶಯಿಸಿದ್ದರು.

ಈ ನಡುವೆ, ಭೀಕರ ಕೃತ್ಯ ಎಸಗಿದ ಸದಾನಂದ ಹಾಗೂ ಶಿಲ್ಪಾ ತಲೆಮರೆಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಸ್‌ನಲ್ಲಿ ಹೊರಟಿದ್ದ. ಜುಲೈ ೧೪ರಂದು ಪೊಲೀಸರು ಆ ಬಸ್ಸನ್ನು ತಡೆದು ಹಿಡಿದೇ ಬಿಟ್ಟರು. ಇವರಿಗೆ ಸಹಾಯ ಮಾಡಿದ ಇನ್ನೂ ಇಬ್ಬರು ಜೈಲು ಸೇರಿದರು. ಈಗ ಸದಾನಂದ ಶೇರಿಗಾರ್‌ ಸಾವಿಗೆ ಶರಣಾಗಿದ್ದಾನೆ.

ಇದನ್ನೂ ಓದಿ | Murder Case | ಅಳಿಯನ ಜತೆಗೆ ಅಕ್ರಮ ಸಂಬಂಧ; ಗಂಡನನ್ನೇ ಹತ್ಯೆ ಮಾಡಿಸಿದಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Narendra Modi 3.0 : ಮೋದಿ ಪ್ರಮಾಣ ವಚನ; ಬಿರಿಯಾನಿ, ಹೋಳಿಗೆ ಹಂಚಿದ ಕರುನಾಡಿನ ಅಭಿಮಾನಿಗಳು

Narendra Modi 3.0: ರಾಜ್ಯದ ನಾನಾ ಭಾಗಗಳಲ್ಲಿ ಮೋದಿ ಅಭಿಮಾನಿಗಳು ಬೈಕ್​ ರ್ಯಾಲಿ, ಮಾನವ ಸರಪಳಿ, ಮೆರವಣಿಗೆ ನಡೆಸಿದ ಮೋದಿ ಪರ ಜೈಕಾರ ಕೂಗಿದ್ದಾರೆ. ಇನ್ನೂ ಕೆಲವು ಕಡೆ ಮೋದಿಯ ಅಪ್ಪಟ ಅಭಿಮಾನಿಗಳು ಬಿರಿಯಾನಿ, ಹೋಳಿಗೆ ಊಟವನ್ನು ಸಾರ್ವಜನಿಕರಿಗೆ ಹಂಚಿ ಖುಷಿ ಪಟ್ಟಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲೂ ಸಂಭ್ರಮಾಚರಣೆ ನಡಸಲಾಗಿದೆ.

VISTARANEWS.COM


on

Narendra Modi 3.0
Koo

ಬೆಂಗಳೂರು: ಎನ್​ಡಿಎ ಮೈತ್ರಿಕೂಟದ ನೂತನ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿ (Narendra Modi 3.0) ನರೇಂದ್ರ ಮೋದಿ ಭಾನುವಾರ ಸಂಜೆಯ ವೇಳೆ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಅವರ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಮೋದಿ ಅಭಿಮಾನಿಗಳು ಬೈಕ್​ ರ್ಯಾಲಿ, ಮಾನವ ಸರಪಳಿ, ಮೆರವಣಿಗೆ ನಡೆಸಿದ ಮೋದಿ ಪರ ಜೈಕಾರ ಕೂಗಿದ್ದಾರೆ. ಇನ್ನೂ ಕೆಲವು ಕಡೆ ಮೋದಿಯ ಅಪ್ಪಟ ಅಭಿಮಾನಿಗಳು ಬಿರಿಯಾನಿ, ಹೋಳಿಗೆ ಊಟವನ್ನು ಸಾರ್ವಜನಿಕರಿಗೆ ಹಂಚಿ ಖುಷಿ ಪಟ್ಟಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲೂ ಸಂಭ್ರಮಾಚರಣೆ ನಡಸಲಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿಯಿಂದ ಬೃಹತ್ ಬೈಕ್ ರ್ಯಾಲಿ ನಡೆದಿದೆ. ಸಾವಿರಾರು ಬೈಕ್​ಗಳ ಮೂಲಕ ಹೊಸಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಭಿಮಾನಿಗಳು ಮೋದಿ ಹಾಗೂ ಕೇಂದ್ರ ಸರ್ಕಾರದ ಪರ ಜೈಕಾರ ಕೂಗಿದ್ದಾರೆ. ನಗರದ ಭಟ್ರಳ್ಳಿ ಆಂಜನೇಯ ದೇಗುಲದಿಂದ ಆರಂಭಗೊಂಡ ಬೈಕ್​ ರ್ಯಾಲಿ ಹೊಸಪೇಟೆ ತಾಲೂಕಿನ ವಿವಿಧ ಹಳ್ಳಿಗಳಿಗೆ ಸಾಗಿದೆ. ಹಂಪಿಗೆ ಹೋಗುವ ಬೈಪಾಸ್ ರಸ್ತೆ, ರಾಮಾ ಥಿಯೇಟರ್, ಪುನೀತ್ ಸರ್ಕಲ್, ಉದ್ಯೋಗ ಪೆಟ್ರೋಲ್ ಬಂಕ್, ಪಟೇಲ್ ನಗರ ಸೇರಿ ಹತ್ತಾರು ಸರ್ಕಲ್ ಗಳಲ್ಲಿ ಬೈಕ್ ರ್ಯಾಲಿ ಸಾಗಿತು. ಮಳೆಯನ್ನೂ ಲೆಕ್ಕಿಸದೇ ಅವರು ಬೈಕ್​ ರ್ಯಾಲಿ ನಡೆಸಲಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಜೆಡಿಎಸ್ ಕಾರ್ಯಕರ್ತರು, ಯುವ ಬ್ರಿಗೇಡ್ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಸಾಥ್ ನೀಡಿದರು. ಇದೇ ವೇಳೆ ಪ್ರಮಾಣ ವಚನ ಸಮಾರಂಭ ನೋಡಲು ಬೃಹತ್​ ಎಲ್​ಇಡಿ ಪರದೆಯ ವ್ಯವಸ್ಥೆಯೂ ಮಾಡಲಾಗಿದೆ. ಹೊಸಪೇಟೆಯ ಬಿಜೆಪಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Modi 3.0 Cabinet: ಮತ್ತೆ ಮಂತ್ರಿಯಾಗಿ ದಾಖಲೆ ಬರೆದ ಪ್ರಲ್ಹಾದ್‌ ಜೋಶಿ; ಬೆನ್ನು ತಟ್ಟಿ ಆಶೀರ್ವದಿಸಿದ ಬಿಎಸ್‌ವೈ

ರಾಮನಗರದಲ್ಲಿ ಕೇಕ್​ ಕತ್ತರಿಸಿದ ಕಾರ್ಯಕರ್ತರು

ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಕೇಕ್ ಕತ್ತರಿಸಿ ಹಾಗೂ ಸಿಹಿ ಹಂಚಿ ಪರಸ್ಪರ ಶುಭ ಕೋರಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್​​ ಮೈತ್ರಿ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಿಸಿದ್ದರು. ಮೋದಿ 3.0 ಎಂಬ ಕೇಕ್ ಕತ್ತರಿಸಿ ಪರಸ್ಪರ ಸಂಭ್ರಮಿಸಿದ್ದಾರೆ

ಚಿತ್ರದುರ್ಗದಲ್ಲಿ ವಿಶೇಷ ಪೂಜೆ

ಮೂರನೇ ಬಾರಿಗೆ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಲು ಚಿತ್ರದುರ್ಗ ಬಿಜೆಪಿ ಘಟಕದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಮಾಜಿ ಶಾಸಕ ತಿಪ್ಪಾರೆಡ್ಡಿ ಹಾಗೂ ಕಾರ್ಯಕರ್ತರಿಂದ ಪೂಜೆ ಆಯೋಜನೆ ಮಾಡಲಾಗಿತ್ತು. ನಗರದ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಕಾರ್ಯಕರ್ತರು ಸುಭದ್ರ ಸರ್ಕಾರಕ್ಕಾಗಿ ಪ್ರಾರ್ಥನೆ ಮಾಡಿದರು. ಈ ವೇಳೆ ಮೋದಿ ಭಾವಚಿತ್ರ ಹಿಡಿದು ಜೈಕಾರ ಕೂಗಿದರು.

ಉಜ್ಜಯಿನಿ ಮಠದ ಶ್ರೀಗಳಿಂದ ಶುಭಾಶಯ

ಕೊಟ್ಟೂರು ತಾಲೂಕಿನಲ್ಲಿ ಉಜ್ಜಯಿನಿ ಮಠದ ಶ್ರೀಗಳು ಮೋದಿಗೆ ಶುಭಾಶಯ ಕೋರಿದರು. ಭಾರತ ದೇಶದ ನೇತೃತ್ವವನ್ನು ಮೋದಿ ಅವರು ಮೂರನೇ ಬಾರಿಗೆ ಹಿಡಿಯುತ್ತಿದ್ದಾರೆ. ಭಾರತ ದೇಶಕ್ಕೆ ಸಾವಿರಾರು ವರ್ಷಗಳ ಸನಾತನ ಧರ್ಮದ ಹಿನ್ನೆಲೆ ಇದೆ. ವಿವಿಧತೆಯಲ್ಲಿ ಏಕತೆ ಕಾಣುವ ದೇಶ ಭಾರತ. ಭಾರತ ದೇಶಕ್ಕಾಗಿ ಪ್ರಧಾನಿ ಮೋದಿ ಅವರು ತಮ್ಮದೇ ಆದ ಕನಸು ಕಂಡಿದ್ದಾರೆ ಮೂರನೇ ಅವಧಿಯಲ್ಲಿ ಆ ಎಲ್ಲಾ ಕನಸುಗಳು ಈಡೇರಲಿ ಎಂದು ಅವರು ಆಶಯ ಕೋರಿದರು.

ಹಾವೇರಿಯಲ್ಲಿ ಹೋಳಿಗೆ ಊಟ

ನರೇಂದ್ರ ಮೋದಿ ಮೂರನೆ ಬಾರಿ ಪ್ರಧಾನಿಯಾಗುತ್ತಿರುವುದರ ಖುಷಿಗೆ ಅಭಿಮಾನಿಗಳು ಹೊಳಿಗೆ ಊಟ ವಿತರಿಸಿದರು. ಹಾವೇರಿ ಜಿಲ್ಲೆಯ ರಾಣಿಬೇನ್ನೂರು ತಾಲೂಕಿನ ಹಲಗೇರಿಯಲ್ಲಿ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೋದಿ ಟಿ ಸ್ಟಾಲ್ ಮಾಲೀಕರು ಮತ್ತು ಅಭಿಮಾನಿಗಳಿಂದ ಹೋಳಿಗೆ ಊಟ ವಿತರಣೆ ಮಾಡಲಾಯಿತು. ಬರೊಬ್ಬರಿ ನಾಲ್ಕು ಸಾವಿರ ಮಂದಿಗೆ ಹೋಳಿಗೆ ಊಟ ವಿತರಣೆ ಮಾಡಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಬಿರಿಯಾನಿ ವಿತರಣೆ

ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಏರಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಬಿರಿಯಾನಿ ವಿತರಣೆ ಮಾಡಲಾಯಿತು. ಜತೆಗೆ ಸಿಹಿಯೂ ಹಂಚಲಾಯಿತು. ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಿಹಿ ಹಂಚಿ‌ ಸಂಭ್ರಮಿಸಲಾಯಿತು. ಚಿಂತಾಮಣಿ ನಗರದ ಹೃದಯಭಾಗಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ಇಂಧನ ಹಾಕಿಸಲು ಬಂದವರಿಗೆ ಪೆಟ್ರೋಲ್ ಬಂಕ್ ಮಾಲೀಕರಿಂದ ಸಿಹಿ ಹಂಚಿಕೆ ಮಾಡಿದರು. ಅನುಪಮಾರೆಡ್ಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕ ಬಿರಿಯಾನಿ ಹಂಚಿದ್ದರು.

Continue Reading

ಪ್ರಮುಖ ಸುದ್ದಿ

Rishbha Pant : ನನ್ನ ಕಾಲನ್ನು ತುಂಡರಿಬೇಕಿತ್ತು; ಅಪಘಾತದ ಭಯಾನಕ ಸಂಗತಿಗಳನ್ನು ಹೇಳಿದ ರಿಷಭ್ ಪಂತ್​

Rishbha Pant: ರಿಷಭ್ ಪಂತ್ ಅವರನ್ನು ಅಪಘಾತದ ಸ್ಥಳದಿಂದ ರಕ್ಷಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ವಿಮಾನದಲ್ಲಿ ಕರೆದೊಯ್ಯುವ ಮೊದಲು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಪಂತ್​ 2-3 ವರ್ಷಗಳ ಅವಧಿಯಲ್ಲಿ ಚೇತರಿಸಿಕೊಳ್ಳಬಹುದು ಎಂದು ಭವಿಷ್ಯ ನುಡಿದಿದ್ದರು. ಆದರೆ ಆಟಗಾರನ ಇಚ್ಛಾಶಕ್ತಿಯು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿತು.

VISTARANEWS.COM


on

Rishabh Pant
Koo

ಬೆಂಗಳೂರು : ಭಾರತ ತಂಡ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ (Rishbha Pant) 2022 ರ ಡಿಸೆಂಬರ್​ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ 26 ವರ್ಷದ ಆಟಗಾರ ಅನೇಕ ಜೀವಕ್ಕೆ ಅಪಾಯ ತರುವ ಮತ್ತು ಅಂಗವೈಕಲ್ಯಕ್ಕೆ ತುತ್ತಾಗಬಹುದಾಗಿದ್ದಂತ ಗಾಯಗಳಿಗೆ ಒಳಗಾಗಿದ್ದರು. ಹೀಗಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್ ಆಡುವ ಅವಕಾಶ ಕಳೆದುಕೊಂಡಿದ್ದರು. ಈ ಬ್ಯಾಟರ್​ ಐಪಿಎಲ್ 2023 ಮತ್ತು ಏಕದಿನ ವಿಶ್ವಕಪ್ 2023 ಅನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಅವರು ಟಿ20 ವಿಶ್ವಕಪ್​ಗಾಗಿ ತಯಾರಿ ನಡೆಸುತ್ತಿದ್ದಾರೆ.

ರಿಷಭ್ ಪಂತ್ ಅವರನ್ನು ಅಪಘಾತದ ಸ್ಥಳದಿಂದ ರಕ್ಷಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ವಿಮಾನದಲ್ಲಿ ಕರೆದೊಯ್ಯುವ ಮೊದಲು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಪಂತ್​ 2-3 ವರ್ಷಗಳ ಅವಧಿಯಲ್ಲಿ ಚೇತರಿಸಿಕೊಳ್ಳಬಹುದು ಎಂದು ಭವಿಷ್ಯ ನುಡಿದಿದ್ದರು. ಆದರೆ ಆಟಗಾರನ ಇಚ್ಛಾಶಕ್ತಿಯು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿತು.

ಇತ್ತೀಚೆಗೆ, ಪಂತ್ ತಮ್ಮ ಅಪಘಾತದ ಬಗ್ಗೆ ಮಾತನಾಡಿದ್ದಾರೆ. ಅವರ ಗಾಯಗಳ ಬಗ್ಗೆ ವೈದ್ಯರು ಏನು ಹೇಳಿದರು ಮತ್ತು ಅದು ಅಂಗಗಳನ್ನು ತೆಗೆದು ಹಾಕುವುದಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ

ವೈದ್ಯರು ನನ್ನ ಬಳಿಗೆ ಬಂದು ರಿಷಭ್, ನೀವು ಮೂರು ಪವಾಡಗಳನ್ನು ಮಾಡಬೇಕಾಗಿದೆ. ಅವುಗಳಲ್ಲಿ ಎರಡು ನೀವು ಈಗಾಗಲೇ ಮಾಡಿದ್ದೀರಿ ಎಂದು ಹೇಳಿದರು. ಆಗ ನನ್ನ ಜೀವನದ ಬಗ್ಗೆ ನನಗೆ ಯಾವುದೇ ಕಲ್ಪನೆ ಇರಲಿಲ್ಲ. ಆದ್ದರಿಂದ ನಾನು ಅದನ್ನು ಸಂಪೂರ್ಣವಾಗಿ ಕೇಳುತ್ತಿದ್ದೆ. ಮೊದಲನೆಯದಾಗಿ, ಇಂತಹ ಭೀಕರ ಅಪಘಾತದ ನಂತರ ನೀವು ಜೀವಂತವಾಗಿದ್ದೀರಿ ಎಂಬುದೇ ದೊಡ್ಡ ಪವಾಡ ಎಂದು ವೈದ್ಯರು ಹೇಳಿದ್ದರು ಎಂಬುದಾಗಿ ‘ಆಪ್ ಕಿ ಅದಾಲತ್’ ನಲ್ಲಿ ಪಂತ್​ ಹೇಳಿದ್ದಾರೆ.

“ಅಪಘಾತವಾದಾಗ ನನ್ನ ಬಲಗಾಲು 90 ಡಿಗ್ರಿ ಬಾಗಿತ್ತು. ಆ ಹೊತ್ತಿನಲ್ಲಿ ನನಗೆ ಏನು ಮಾಡಬೇಕೋ ಎಂದು ತಿಳಿದಿರಲಿಲ್ಲ. ನನ್ನನ್ನು ರಕ್ಷಿಸಿದ ವ್ಯಕ್ತಿಗೆ ಕಾಲನ್ನು ಹಿಡಿದು ಸ್ವಸ್ಥಾನಕ್ಕೆ ಮರಳಿಸುವಂತೆ ಹೇಳಿದ್ದೆ. ನೋವಿನ ನಡುವೆಯೂ ಅದನ್ನು ಮಾಡಿದ್ದೆ. ಈ ಬಗ್ಗೆ ವೈದ್ಯರು ಹೇಳಿದ್ದರು. ಎರಡನೆಯದಾಗಿ, ನಿಮ್ಮ ಕಾಲನ್ನು ನೀವು ಸರಿ ಮಾಡದೇ ಹೋಗಿದ್ದರೆ ಅದು ಅಂಗಚ್ಛೇದನಕ್ಕೆ ಕಾರಣವಾಗುತ್ತಿತ್ತು” ಎಂದು ಅವರು ಹೇಳಿದರು.

ಶಸ್ತ್ರ ಚಿಕಿತ್ಸೆಯ ಭರವಸೆ

ವೈದ್ಯರು ಎಸಿಎಲ್ ಮತ್ತು ಸಿಎಲ್​ನಲ್ಲಿ ಯಾವುದೇ ಗಾಯ ಉಳಿದಿಲ್ಲ ಎಂದು ಹೇಳಿದ್ದರು. ಅದು ನನಗೆ ನೆರವಾಯಿತು ಎಂದು ಪಂತ್ ಹೇಳಿದ್ದಾರೆ. ಮೂರನೇ ಪವಾಡವೆಂದರೆ ಎಸಿಎಲ್ ಮತ್ತು ಪಿಸಿಎಲ್​​ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದರು. ನನ್ನ ಮೊಣಕಾಲುಗಳಲ್ಲಿ ಯಾವುದೇ ಲಿಗಮೆಂಟ್​ ಉಳಿದಿಲ್ಲ ಎಂದು ಅವರು ಹೇಳಿದ್ದರು. ಇದು ಕೂಡ ಮೂರನೇ ಪವಾಡ ಎಂಬುದಾಗಿ ಪಂತ್ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ

Champions Trophy 2025 : ಈ ಬಾರಿ ಬಿಜೆಪಿ ಸರಳ ಬಹುಮತ ಪಡೆದಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಆದಾಗ್ಯೂ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್ಬಝ್ ವರದಿ ಮಾಡಿದೆ.

VISTARANEWS.COM


on

Champions Trophy 2025
Koo

ನವದೆಹಲಿ: 2024 ರ ಟಿ 20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ (IND vs PAK) ನಡೆಯುತ್ತಿರುವ ನಡುವೆಯೇ ಚಾಂಪಿಯನ್ಸ್ ಟ್ರೋಫಿಯ ಸಂಘಟಕರಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಪಂದ್ಯಾವಳಿಯ 2025 ರ ಆವೃತ್ತಿಗೆ 20 ದಿನಗಳನ್ನು ನಿಗದಿ ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 09 ರವರೆಗೆ ನಡೆಯಲಿದ್ದು, ಇದು 19 ದಿನಗಳ (+1 ಮೀಸಲು ದಿನ) ಟೂರ್ನಿಯಾಗಿದೆ.

2017 ರ ಫೈನಲ್ ತಲುಪಿದ ಭಾರತೀಯ ತಂಡವು ಟೂರ್ನಿಯ ಆತಿಥ್ಯ ವಹಿಸಿರುವ ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆಗಳು ಇಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯ ನಂತರ ಬಿಜೆಪಿ ನೇತೃತ್ವದ ಎನ್​ಡಿಎಗೆ ಅಧಿಕಾರಕ್ಕೆ ಏರಿದ ಬಳಿಕ ಈ ಸುದ್ದಿ ಪ್ರಕಟಗೊಂಡಿದೆ. ಈ ಬಾರಿ ಬಿಜೆಪಿ ಸರಳ ಬಹುಮತ ಪಡೆದಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಆದಾಗ್ಯೂ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್​ಬಜ್​ ವರದಿ ಮಾಡಿದೆ.

2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇದರ ಪರಿಣಾಮವಾಗಿ, 2012-13ರಲ್ಲಿ ಪಾಕಿಸ್ತಾನವು ಬಹು-ಸ್ವರೂಪದ ಸರಣಿಗಾಗಿ ಭಾರತಕ್ಕೆ ಭೇಟಿ ನೀಡಿದ ನಂತರ ಉಭಯ ದೇಶಗಳು ಯಾವುದೇ ದ್ವಿಪಕ್ಷೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿಲ್ಲ. ಅದರ ನಂತರ, ಎರಡೂ ತಂಡಗಳು ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ.

ಈ ಬಾರಿಯೂ ಸಾಧ್ಯವಿಲ್ಲ

ಪಕ್ಷವು ದೇಶದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದರಿಂದ, ಪಾಕಿಸ್ತಾನವನ್ನು ಪರಕೀಯ ರಾಷ್ಟ್ರವಾಗಿ ನೋಡುವ ಭಾರತದ ದೃಷ್ಟಿಕೋನವು ಬದಲಾಗದೆ ಉಳಿಯುವ ಸಾಧ್ಯತೆಯಿದೆ ಎಂದು ವರದಿ ಸೂಚಿಸಿದೆ. ಪಂದ್ಯಾವಳಿಯ ಆತಿಥ್ಯ ವಹಿಸಲು ಐಸಿಸಿ ಹೈಬ್ರಿಡ್ ಮಾದರಿಯನ್ನು ಬಳಸಲು ಹೇಳಬಹುದು. ಯುಎಇ ಸಹ-ಆತಿಥ್ಯ ಪಡೆಯುವ ಸಾಧ್ಯತೆಗಳಿವೆ.

ಮುಂದಿನ ಎರಡು ತಿಂಗಳಲ್ಲಿ ಸ್ಪಷ್ಟತೆ

ವಾಘಾ ಗಡಿಗೆ ಹತ್ತಿರದ ಸ್ಥಳವಾದ ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಭಾರತ ತಂಡ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಆಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗಾಗಲೇ ದೃಢಪಡಿಸಿದೆ. ಇದು ಭಾರತಕ್ಕೆ ಕನಿಷ್ಠ ವ್ಯವಸ್ಥಾಪನಾ ಮತ್ತು ಭದ್ರತಾ ಸವಾಲುಗಳನ್ನು ಒಡ್ಡಿದೆ. ಅಭಿಮಾನಿಗಳಿಗೆ ಪಂದ್ಯಗಳನ್ನು ವೀಕ್ಷಿಸಲು ಗಡಿಯಾಚೆಗಿನ ಅನುಭವ ನೀಡಲಿದೆ.

ಇದನ್ನೂ ಓದಿ: IND vs PAK : ​ ವಿರಾಟ್​ ಕೊಹ್ಲಿಯ ಚಪ್ಪಲಿಗೂ ಸಮವಲ್ಲ ಬಾಬರ್ ಅಜಂ; ಪಾಕಿಸ್ತಾನದ ಮಾಜಿ ಆಟಗಾರನ ಟೀಕೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಹಿಂದೆ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ ಮತ್ತು ಮಂಡಳಿಯು ಇದನ್ನು ಈ ಬಾರಿಯೂ ಅನುಸರಿಸುವ ನಿರೀಕ್ಷೆಯಿದೆ. “ಮುಂದಿನ ಎರಡು ತಿಂಗಳಲ್ಲಿ ನಾವು ಕೆಲವು ಆಲೋಚನೆಗಳನ್ನು ಹೊಂದಿದ್ದೇವೆ” ಎಂದು ಮೂಲಗಳು ತಿಳಿಸಿವೆ.

ಕೊಲಂಬೊದಲ್ಲಿ ಜುಲೈನಲ್ಲಿ ನಡೆಯಲಿರುವ ವಾರ್ಷಿಕ ಸಮ್ಮೇಳನದ ನಂತರ ಅಂತಿಮ ನಿರ್ಧಾರಕ್ಕೆ ಬರಲು ಸರ್ಕಾರದೊಂದಿಗೆ ಸಂವಹನ ನಡೆಸುವಂತೆ ಐಸಿಸಿ ಈಗಾಗಲೇ ಭಾರತೀಯ ಮಂಡಳಿಗೆ ತಿಳಿಸಿರಬೇಕು ಎಂದು ನಿರೀಕ್ಷಿಸಲಾಗಿದೆ.

Continue Reading

ಕ್ರೈಂ

Fake CBI Gang: ನಿವೃತ್ತ ಅಧಿಕಾರಿಯ 85 ಲಕ್ಷ ರೂ. ಎಗರಿಸಿದ ನಕಲಿ ಸಿಬಿಐ ಗ್ಯಾಂಗ್!

ಸಿಬಿಐ ಅಧಿಕಾರಿಗಳು (Fake CBI Gang) ಎಂದು ಹೇಳಿ ನಿವೃತ್ತ ಅಧಿಕಾರಿಗೆ 85 ಲಕ್ಷ ರೂ. ವಂಚಿಸಿರುವ ಗ್ಯಾಂಗ್ ವಿರುದ್ಧ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ದೆಹಲಿಯಲ್ಲಿ ಪ್ರಕರಣ ದಾಖಲಾಗಿದೆ. ‘ರಾಣಾ ಗಾರ್ಮೆಂಟ್ಸ್’ ಹೆಸರಿನ ಕಂಪೆನಿಗೆ ಹೆಚ್ ಡಿಎಫ್ ಸಿ ಬ್ಯಾಂಕ್ ನಿಂದ ಹಣ ವರ್ಗಾವಣೆ ಆಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

VISTARANEWS.COM


on

By

Fake CBI Gang
Koo

ನವದೆಹಲಿ: ಸಿಬಿಐ, ಕಸ್ಟಮ್ಸ್, ಮಾದಕ ದ್ರವ್ಯ ಮತ್ತು ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸುತ್ತಿದ್ದ ಗ್ಯಾಂಗ್ ವೊಂದು (Fake CBI Gang) ಬಹುರಾಷ್ಟ್ರೀಯ ಕಂಪನಿಯ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ (retired officer) 85 ಲಕ್ಷ ರೂ. ವಂಚಿಸಿರುವ ಕುರಿತು ಆಂಧ್ರಪ್ರದೇಶದ (andrapradesh) ವಿಶಾಖಪಟ್ಟಣಂ (Visakhapatnam) ಮತ್ತು ದೆಹಲಿಯಲ್ಲಿ (delhi) ಪ್ರಕರಣ ದಾಖಲಿಸಲಾಗಿದೆ.

ಹಣವನ್ನು ಚೆಕ್ ಮೂಲಕ ಪಡೆದ ಗ್ಯಾಂಗ್ ದೆಹಲಿಯ ಉತ್ತಮ್ ನಗರದಲ್ಲಿ ಹೆಚ್‌ಡಿಎಫ್‌ಸಿ ಖಾತೆಯನ್ನು ನಿರ್ವಹಿಸುತ್ತಿದ್ದ ‘ರಾಣಾ ಗಾರ್ಮೆಂಟ್ಸ್’ ಎಂಬ ಕಂಪನಿಗೆ ವರ್ಗಾಯಿಸಿದೆ. ವಿಶಾಖಪಟ್ಟಣಂನಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಗ್ಯಾಂಗ್ ‘ರಾಣಾ ಗಾರ್ಮೆಂಟ್ಸ್’ ನಡೆಸುತ್ತಿದ್ದ ಎಚ್‌ಡಿಎಫ್‌ಸಿ ಖಾತೆಯಿಂದ ಭಾರತದಾದ್ಯಂತ 105 ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದೆ. ಈ ಕುರಿತು ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಉತ್ತಮ್ ನಗರ ಶಾಖೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭಾರತದಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿರುವ ಜರ್ಮನಿಯ ಪ್ರಧಾನ ಕಚೇರಿಯ ಫಾರ್ಮಾ ಸಂಸ್ಥೆಯೊಂದರ 57 ವರ್ಷದ ನಿವೃತ್ತ ಅಸೋಸಿಯೇಟ್ ಜನರಲ್ ಮ್ಯಾನೇಜರ್ ವಂಚನೆಯ ಕುರಿತು ಪ್ರತಿಕ್ರಿಯಿಸಿದ್ದು, ನನಗೆ ಮೂರು ವರ್ಷಗಳ ಸೇವೆ ಉಳಿದಿತ್ತು. ಆದರೆ ಮಗನನ್ನು ಕಾಲೇಜಿಗೆ ಕಳುಹಿಸಲು ಸಮಯ ಬೇಕಾಗಿದ್ದರಿಂದ ಸ್ವಯಂ ನಿವೃತ್ತಿ ತೆಗೆದುಕೊಂಡೆ. ಮೇ 2ರಂದು ನಿವೃತ್ತಿ ಪರಿಹಾರ ಸಿಕ್ಕಿದೆ. ಮಗನ ವೀಸಾ ನೇಮಕಾತಿ ಮೇ 17ರಂದು ಆಗಿತ್ತು. ಆದರೆ ಮೇ 14ರಂದು, ನನ್ನ ದಾಖಲೆಗಳನ್ನು ಪರಿಶೀಲಿಸಿದ ಅನಂತರ ಹಿಂದಿರುಗಿಸುವುದಾಗಿ ಹೇಳಿ 85 ಲಕ್ಷ ರೂ.ವನ್ನು ಕಳುಹಿಸುವಂತೆ ಗ್ಯಾಂಗ್ ನನ್ನನ್ನು ವಂಚಿಸಿರುವುದಾಗಿ ಹೇಳಿದ್ದಾರೆ.

ವಿಶಾಖಪಟ್ಟಣಂ ಕ್ರೈಂ ಬ್ರಾಂಚ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್‌ನಲ್ಲಿ ಕೆಲವರು ಇದರಲ್ಲಿ ಭಾಗಿಯಾಗಿರಬಹುದು. ಯಾಕೆಂದರೆ ಗ್ಯಾಂಗ್‌ಗೆ ನಿವೃತ್ತಿಯ ಅನಂತರ ಅವರು ಪಡೆದ ನಿಖರವಾದ ಮೊತ್ತ ಸೇರಿದಂತೆ ಅವರ ಖಾತೆಯ ಬಗ್ಗೆ ಎಲ್ಲವೂ ತಿಳಿದಿತ್ತು. ಹತ್ತಿರದ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೋಗಿ ಚೆಕ್ ಡ್ರಾಪ್ ಮಾಡಲು ಗ್ಯಾಂಗ್ ಹೇಳಿತು ಎಂದು ನಿವೃತ್ತ ಅಧಿಕಾರಿ ದೂರಿದ್ದಾರೆ.

ಕ್ರೈಂ ಬ್ರಾಂಚ್ ವಿಶಾಖಪಟ್ಟಣಂನಲ್ಲಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಿಂದ ಹಲವಾರು ದಾಖಲೆಗಳನ್ನು ತೆಗೆದುಕೊಂಡಿದೆ. ಅವರು ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾದಾಗ ಪ್ರಕರಣ ಕುರಿತು ಪ್ರತಿಕ್ರಿಯಿಸಲು ಬ್ಯಾಂಕ್ ನಿರಾಕರಿಸಿದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಉತ್ತಮ್ ನಗರ ಶಾಖೆಯ ಪೊಲೀಸರು ರಾಣಾ ಗಾರ್ಮೆಂಟ್ಸ್‌ ಗೆ ಭೇಟಿ ನೀಡಿದ್ದಾರೆ. ರಾಣಾ ಗಾರ್ಮೆಂಟ್ಸ್ ಮಾಲೀಕರು ಈ ಸ್ಥಳವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ನಿವೃತ್ತ ಅಧಿಕಾರಿ ಹೇಳಿದರು.

ನಿವೃತ್ತಿ ಅಧಿಕಾರಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾದ ಬಳಿಕ ಡಿಸಿಪಿ ಸೈಬರ್ ಕ್ರೈಮ್ ಬಾಲ್ಸಿಂಗ್ ರಜಪೂತ್ ಎಂದು ಹೇಳಿ ಒಬ್ಬ ವ್ಯಕ್ತಿ ಕರೆ ಮಾಡಿದ್ದೂ, ಹಲವಾರು ಮಾದಕ ದ್ರವ್ಯ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ತಮ್ಮ ಹೆಸರು ಬಂದಿದೆ ಮತ್ತು ಈ ಎಲ್ಲಾ ಪ್ರಕರಣಗಳಿಗೆ ಅವರ ಆಧಾರ್ ಲಿಂಕ್ ಮಾಡಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Murder Case : ಬಾಡಿಗೆ ಹಣ ಪಡೆಯಲು ಕಿರಿಕ್‌; ಬೆಡ್‌ ರೂಮ್‌ನಲ್ಲೇ ಪತ್ನಿ ಕೊಂದಿದ್ದ ಹಂತಕ ಅರೆಸ್ಟ್‌

ಎಫ್ ಐ ಆರ್ ನಲ್ಲಿ ಏನಿದೆ?

ಇನ್ನೊಬ್ಬ ಕರೆ ಮಾಡಿ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿದೆ. ಕೂಡಲೇ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು. ನಕಲಿ ಡಿಸಿಪಿ ಸ್ವಲ್ಪ ಹೊತ್ತು ಮಾತನಾಡಿ, ನೀವು ನಿರಪರಾಧಿಯಂತೆ ಕಾಣುತ್ತೀರಿ. ಹೀಗಾಗಿ 85 ಲಕ್ಷ ರೂ. ವನ್ನು ತನಿಖೆಗಾಗಿ ತೆಗೆದುಕೊಂಡು ಏನೂ ತಪ್ಪಿಲ್ಲ ಎಂದು ಕಂಡುಬಂದರೆ ಮರಳಿ ಕೊಡುವುದಾಗಿ ಹೇಳಿದ್ದರು. ಸ್ಕೈಪ್‌ನಲ್ಲಿ ಎರಡು ದಿನಗಳ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮನೆಯಿಂದ ಹೊರಹೋಗಲು ಅಥವಾ ಯಾರಿಗೂ ಕರೆ ಮಾಡಲು ಅವರು ಬಿಡಲಿಲ್ಲ ಎಂದು ನಿವೃತ್ತ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

ವಂಚನೆ ಬಗ್ಗೆ ಎಚ್ಚರವಿರಲಿ

ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಪತ್ತೆಯಾದ ಮಾಹಿತಿಗಳ ಬಗ್ಗೆ ವಿವರಣೆ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಪರಿಚಿತ ಸಂಖ್ಯೆಗಳಿಂದ ವಾಟ್ಸಾಪ್ ವಿಡಿಯೋ ಕರೆಗಳಿಗೆ ಉತ್ತರಿಸದಂತೆ ನಿವೃತ್ತ ಅಧಿಕಾರಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ವಿಶಾಖಪಟ್ಟಣ ಸೈಬರ್ ಪೊಲೀಸರಿಗೆ 300 ಕೋಟಿ ರೂ. ವಂಚನೆ ಮೊತ್ತದ ಕುರಿತು ದೂರುಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
HD Kumaraswamy
ಕರ್ನಾಟಕ3 mins ago

HD Kumaraswamy Profile: ಹರದನಹಳ್ಳಿಯಿಂದ ದೆಹಲಿವರೆಗೆ; ಕುಮಾರಸ್ವಾಮಿ ಸಾಗಿಬಂದ ದಾರಿ ಹೀಗಿದೆ

Narendra Modi
ದೇಶ28 mins ago

Narendra Modi: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ; 3.0 ಯುಗಾರಂಭ!

Narendra Modi 3.0
ಪ್ರಮುಖ ಸುದ್ದಿ32 mins ago

Narendra Modi 3.0 : ಮೋದಿ ಪ್ರಮಾಣ ವಚನ; ಬಿರಿಯಾನಿ, ಹೋಳಿಗೆ ಹಂಚಿದ ಕರುನಾಡಿನ ಅಭಿಮಾನಿಗಳು

Farmer Death
ದಾವಣಗೆರೆ58 mins ago

Farmer Death : ಬ್ಯಾಂಕ್‌ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್‌; ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡ ರೈತ

Modi 3.0 Cabinet BS Yediyurappa congratulates Pralhad Joshi
Lok Sabha Election 20241 hour ago

Modi 3.0 Cabinet: ಮತ್ತೆ ಮಂತ್ರಿಯಾಗಿ ದಾಖಲೆ ಬರೆದ ಪ್ರಲ್ಹಾದ್‌ ಜೋಶಿ; ಬೆನ್ನು ತಟ್ಟಿ ಆಶೀರ್ವದಿಸಿದ ಬಿಎಸ್‌ವೈ

Rishabh Pant
ಪ್ರಮುಖ ಸುದ್ದಿ2 hours ago

Rishbha Pant : ನನ್ನ ಕಾಲನ್ನು ತುಂಡರಿಬೇಕಿತ್ತು; ಅಪಘಾತದ ಭಯಾನಕ ಸಂಗತಿಗಳನ್ನು ಹೇಳಿದ ರಿಷಭ್ ಪಂತ್​

Health Tips
ಆರೋಗ್ಯ2 hours ago

Health Tips: ಆರೋಗ್ಯಕರ ಆಗಿರಬೇಕಿದ್ದರೆ ನಾವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು?

Narendra Modi Live
ದೇಶ2 hours ago

Narendra Modi Live: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ; ಲೈವ್‌ ಇಲ್ಲಿ ವೀಕ್ಷಿಸಿ

Champions Trophy 2025
ಪ್ರಮುಖ ಸುದ್ದಿ2 hours ago

IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ

Fake CBI Gang
ಕ್ರೈಂ2 hours ago

Fake CBI Gang: ನಿವೃತ್ತ ಅಧಿಕಾರಿಯ 85 ಲಕ್ಷ ರೂ. ಎಗರಿಸಿದ ನಕಲಿ ಸಿಬಿಐ ಗ್ಯಾಂಗ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌