ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್‌; ಏನಿದರ ಹಿನ್ನೆಲೆ? - Vistara News

EXPLAINER

ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್‌; ಏನಿದರ ಹಿನ್ನೆಲೆ?

ಭಾರತ ಮತ್ತು ಚೀನಾ ಸುಮಾರು 3488 ಕಿ.ಮೀನಷ್ಟು ಗಡಿಯನ್ನು ಹಂಚಿಕೊಂಡಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಗಡಿಯಲ್ಲಿ ಆಗಾಗ ಸಂಘರ್ಷ ನಡೆಯುತ್ತಲೇ ಇರುತ್ತದೆ.
ಇತ್ತೀಚೆಗೆ ಅರುಣಾಚಲದ ತವಾಂಗ್ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಸಂಘರ್ಷದಲ್ಲಿ ತೊಡಗಿದ್ದರು. ಭಾರತ-ಚೀನಾ ಗಡಿ ಸಂಘರ್ಷದ ಹಿನ್ನೋಟ (ವಿಸ್ತಾರ Explainer) ಇಲ್ಲಿದೆ.

VISTARANEWS.COM


on

India and China Border Issue
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಮ್ಮು-ಕಾಶ್ಮೀರದ ಲಡಾಕ್‌ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ವರ್ಷಗಟ್ಟಲೆ ಬಿಕ್ಕಟ್ಟು ಸೃಷ್ಟಿಸಿದ್ದ ಕುತಂತ್ರಿ ಚೀನಾ ಈಗ ಅರುಣಾಚಲ ಪ್ರದೇಶ ತವಾಂಗ್‌ ಸೆಕ್ಟರ್‌ನ ಗಡಿಯಲ್ಲಿ ಉಪಟಳ ಆರಂಭಿಸಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಡಿಸೆಂಬರ್‌ 9ರಂದು ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ (India China Clash) ನಡೆದಿದ್ದು, ಚೀನಾ ಸೈನಿಕರನ್ನು ಭಾರತದ ಸೈನಿಕರು (ವಿಸ್ತಾರ Explainer) ಬಗ್ಗುಬಡಿದಿದ್ದಾರೆ.

ಅರುಣಾಚಲ ಪ್ರದೇಶದ ಮೇಲೆ ಮೊದಲಿನಿಂದಲೂ ಚೀನಾ ಹಿಡಿತ ಸಾಧಿಸಲು ಯತ್ನಿಸುತ್ತಿದ್ದು, ಅದು ಸಾಧ್ಯವಾಗಿಲ್ಲ. ಇದರ ಬದಲಾಗಿ ಗಡಿಯಲ್ಲಿ ಚೀನಾ ಉಪಟಳ ಮಾಡುತ್ತದೆ. ಇಂತಹ ಉಪಟಳದ ಭಾಗವಾಗಿಯೇ ಡಿಸೆಂಬರ್‌ 9 ರಂದು ಭಾರತದ ಸೈನಿಕರನ್ನು ಕೆಣಕಿದ್ದಾರೆ. ಇದಕ್ಕೆ ಭಾರತದ ಯೋಧರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಸಂಘರ್ಷದಲ್ಲಿ ನಮ್ಮ ದೇಶದ 6 ಯೋಧರು ಗಾಯಗೊಂಡಿದ್ದಾರೆ. ಆದರೆ, ಕಮ್ಯುನಿಸ್ಟ್‌ ರಾಷ್ಟ್ರದ ಹೆಚ್ಚಿನ ಯೋಧರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಭಾರತದ ಗಾಯಾಳು ಯೋಧರಿಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅರುಣಾಚಲದಲ್ಲಿ ಆಗಿದ್ದೇನು?
ಡಿಸೆಂಬರ್ 9ರಂದು ಅರುಣಾಚಲದ ವಾಸ್ತವ ಗಡಿ ರೇಖೆ(ಎಲ್ಎಸಿ) ಬಳಿಯ ತವಾಂಗ್‌ ಪ್ರದೇಶದ ಯಾಂಗತ್ಸೆ ಎಂಬಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ 300ರಿಂದ 400 ಸೈನಿಕರು ಮತ್ತು ಭಾರತದ ಸೈನಿಕರು ಗಡಿಯಲ್ಲಿ ಕಾದಾಟಕ್ಕೆ ನಿಂತರು. ಭಾರತ ಮತ್ತು ಚೀನಾ ಮಧ್ಯೆ ಲಡಾಕ್‌ನಿಂದ ಅರುಣಾಚಲ ಪ್ರದೇಶದವರೆಗೂ 3488 ಕಿ.ಮೀ ಗಡಿ ಇದೆ. ಕಳೆದ ಎರಡು ವರ್ಷಗಳಿಂದ ಈ ಗಡಿಯಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಸಂಘರ್ಷ ಆಗಾಗ ತಲೆದೋರುತ್ತಿದೆ.

ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲಾ ಕೇಂದ್ರದ ನೋಟ.

ಯಾಂಗತ್ಸೆ ಸೂಕ್ಷ್ಮ ಪ್ರದೇಶ ಏಕೆ?
ಅರುಣಾಚಲ ಪ್ರದೇಶವು ಭಾರತಕ್ಕೆ ಸೇರಿದ್ದು ಎಂದು ಅಂತಾರಾಷ್ಟ್ರೀಯ ಸಮುದಾಯವು ಒಪ್ಪಿಕೊಂಡಿದೆ. ಆದರೆ, ಇದಕ್ಕೆ ಚೀನಾದ ತಕರಾರಿದೆ. ಆ ಪ್ರದೇಶ ತನ್ನದು ಎಂದು ಆಗಾಗ ಕಾಲು ಕೆದರಿಕೊಂಡು ಭಾರತದ ಜತೆ ಜಗಳ ಕಾಯುತ್ತದೆ. ಚೀನಾದ ಪ್ರಕಾರ ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗವಾಗಿದ್ದು, ಅದು ತನಗೇ ಸೇರಬೇಕು ಎಂದು ವಾದಿಸುತ್ತದೆ. ಚೀನಾದ ಪ್ರಮುಖ ಆಸಕ್ತಿಯು ಭೂತಾನ್ ಮತ್ತು ಟಿಬೆಟ್ ಗಡಿಯಲ್ಲಿರುವ ವಾಯವ್ಯ ಅರುಣಾಚಲದಲ್ಲಿ ಆಯಕಟ್ಟಿನ ಸ್ಥಳವಾಗಿರುವ ತವಾಂಗ್‌‌ನ ಯಾಂಗತ್ಸೆ ಮೇಲಿದೆ. ಈ ಪ್ರದೇಶವು ನಿಯಮಿತವಾಗಿ ಚೀನೀ ಆಕ್ರಮಣಗಳಿಗೆ ಸಾಕ್ಷಿಯಾಗಿದೆ. 1962ರ ಯುದ್ಧದಲ್ಲಿ ಭಾರತೀಯ ಪಡೆಗಳು ತವಾಂಗ್‌ನಲ್ಲಿ ಚೀನಾದ ಪಡೆಗಳೊಂದಿಗೆ ಹೋರಾಡಿದ್ದವು. ಈ ಪ್ರದೇಶವು ಟಿಬೆಟ್‌ನ ಜನರಿಗೆ ಸಾಂಸ್ಕೃತಿಕ ಸಂಪರ್ಕವನ್ನು ಹೊಂದಿದೆ. ಇತ್ತೀಚಿಗಷ್ಟೇ, ಅಂದರೆ 2021ರ ಅಕ್ಟೋಬರ್‌ನಲ್ಲಿ ಚೀನಾ ಪಡೆಗಳು ಯಾಂಗತ್ಸೆಯಲ್ಲಿ 17,000 ಅಡಿ ಶಿಖರದ ಮೇಲೆ ನಿಯಂತ್ರಣ ಸ್ಥಾಪಿಸಲು ಪ್ರಯತ್ನಿಸಿದ್ದವು. ಆದರೆ, ಭಾರತೀಯ ಸೈನಿಕರು ಚೀನಾ ಸೈನ್ಯದ ಪ್ರಯತ್ನವನ್ನು ಹಾಳು ಮಾಡಿ ಮತ್ತು ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ಏನಿದು ಎಲ್ಎಸಿ?
ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್( Line of Actual Control-LAC)ದ ಹೃಸ್ವರೂಪವೇ ಎಲ್ಎಸಿ. ಈ ಗಡಿ ರೇಖೆಯು ಗಾಲ್ವಾನ್‌‌ನಿಂದ ಶ್ಯೋಕ್ ನದಿಗಳ ಸಂಗಮದವರೆಗೆ ಹರಡಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಚೀನಾ ಎರಡೂ ಈ ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಗಲ್ವಾನ್ ಸಂಘರ್ಷದ ಬಳಿಕ, ಚೀನಾ ಇಡೀ ಗಲ್ವಾನ್ ಕಣಿವೆಯ ಚೀನಾದ ಗಡಿಯೊಳಗೇ ಇದೆ ಎಂದು ಹೇಳಿಕೊಂಡಿತ್ತು.

ಸಂಘರ್ಷಗಳು ನಿರಂತರ…
ಭಾರತ ಮತ್ತು ಚೀನಾ ಮಧ್ಯೆ ಗಡಿ ರೇಖೆಗೆ ಸಂಬಂಧಿಸಿದಂತೆ ಸಂಘರ್ಷಗಳು ನಿರಂತರವಾಗಿವೆ. ಉಭಯ ರಾಷ್ಟ್ರಗಳು ಒಂದು ಬಾರಿ ಯುದ್ಧ ಕೂಡ ಮಾಡಿವೆ. ಏಷ್ಯಾದ ಎರಡು ಬಲಾಢ್ಯ ರಾಷ್ಟ್ರಗಳಾಗಿರುವ ಚೀನಾ ಮತ್ತು ಭಾರತವು ಸುಮಾರು 3488 ಕಿ.ಮೀ ಉದ್ದದಷ್ಟು ಗಡಿಯನ್ನು ಹಂಚಿಕೊಂಡಿದ್ದು, ಇಲ್ಲಿ ಆಗಾಗ ಕಾಳಗಗಳು ನಡೆಯುತ್ತಲೇ ಇರುತ್ತವೆ.

ಮ್ಯಾಕ್‌ಮಹೋನ್ ಲೈನ್ ಒಪ್ಪದ ಚೀನಾ
ಬ್ರಿಟಿಷ್ ವಷಾಹತುಷಾಹಿ ಅಧಿಕಾರಸ್ಥರಿಂದ ಚೀನಾ ಜತೆಗಿನ ಗಡಿ ಸಂಘರ್ಷವು ಭಾರತಕ್ಕೆ ಬಳುವಳಿಯಾಗಿ ಬಂದಿದೆ. ಬ್ರಿಟಿಷ್ ಆಡಳಿತಗಾರರು 1914ರಲ್ಲಿ ಟೆಬೆಟಿಯನ್ ಮತ್ತು ಚೀನೀ ಸರ್ಕಾರಗಳೊಂದಿಗೆ ಸಮಾವೇಶ ನಡೆಸಿ, ಗಡಿಯನ್ನು ಗುರುತಿಸುವ ಕೆಲಸವನ್ನು ಮಾಡಿದರು. ಆದರೆ, ಈ ವೇಳೆ ಗುರುತಿಸಲಾದ ಮ್ಯಾಕ್‌ಮಹೋನ್ ಲೈನ್ ಅನ್ನು ಚೀನಿ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ. ಇದರಿಂದಾಗಿ ಪ್ರಸ್ತುತ 90,000 ಚದರ ಕಿಲೋಮೀಟರ್ (34,750 ಚದರ ಮೈಲುಗಳು) ಭೂಪ್ರದೇಶವು ತನ್ನದೆಂದು ಚೀನಾ ವಾದಿಸುತ್ತಿದೆ. ಇದರಲ್ಲಿ ಭಾರತದ ಅರುಣಾಚಲ ಪ್ರದೇಶವೂ ಇದೆ.

ಸಂಘರ್ಷ ಯಾವಾಗ ಶುರು?
ಭಾರತದ ಪ್ರಧಾನಿ ಜವಾಹರ ಲಾಲ್ ನೆಹರು ಅವರು 1959ರಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದ್ದರು. ಆಗ ಮೊದಲ ಬಾರಿಗೆ ಗಡಿ ವಿವಾದವು ಪ್ರಸ್ತಾಪವಾಯಿತು. ಚೀನಿ ನಕಾಶೆಯಲ್ಲಿ ಅಧಿಕಾರಿಗಳು ತೋರಿಸಿರುವ ಗಡಿಯ ಬಗ್ಗೆ ನೆಹರು ಅವರು ಆಕ್ಷೇಪಿಸಿದರು. ಆಗ, ಚೀನಾದ ಪ್ರಧಾನಿಯಾಗಿದ್ದ ಝೌ ಎನ್‌ಲೈ ಅವರು, ತಮ್ಮ ದೇಶವು ವಷಾಹತು ಗಡಿಯನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು. ಆಗಿನಿಂದಲೇ ಉಭಯ ರಾಷ್ಟ್ರಗಳ ಮಧ್ಯೆ ಗಡಿ ಸಂಘರ್ಷ ಶುರುವಾಯಿತು.

ಏನಿದು ಮ್ಯಾಕ್‌ಮಹೋನ್ ಲೈನ್?
ಮ್ಯಾಕ್‌ಮಹೋನ್ ಲೈನ್ ಎಂಬುದು ಚೀನಾ ಮತ್ತು ಭಾರತದ ನಡುವಿನ ಗಡಿಯನ್ನು ಗುರುತಿಸುವ ಒಂದು ರೇಖೆಯಾಗಿದೆ. ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯಾಗಿದ್ದ ಸರ್‌ ಹೆನ್ರಿ ಮ್ಯಾಕ್‌ಮಹೋನ್‌ ಎಂಬಾತ ಬಳಿಕ ಬ್ರಿಟಿಷ್‌ ಆಡಳಿತವನ್ನು ಸೇರಿಕೊಂಡಿದ್ದ. ಮ್ಯಾಕ್‌ಮಹೋನ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ. ಈ ಸಂದರ್ಭದಲ್ಲಿ, ಅಂದರೆ 1914ರಲ್ಲಿ ಭಾರತ-ಚೀನಾ ನಡುವಿನ ಗಡಿರೇಖೆಯನ್ನು ಗುರುತಿಸಲು ಮುಂದಾದ. ಆಗ ಬ್ರಿಟಿಷ್‌ ಇಂಡಿಯಾ ಮತ್ತು ಟಿಬೆಟ್‌ ನಡುವೆ ನಡೆದ ಸಿಮ್ಲಾ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ. ಆತ, ಅಂದು ನಕಾಶೆ ಮೇಲೆ ಎಳೆದ ಒಂದು ರೇಖೆಯನ್ನು ಮ್ಯಾಕ್‌ಮಹೋನ್ ಲೈನ್ ಎಂದು ಗುರುತಿಸಲಾಗುತ್ತದೆ. ಆದರೆ, ಈ ಗಡಿ ರೇಖೆಗೆ ಚೀನಾ ಎಂದಿಗೂ ಮಾನ್ಯತೆ ನೀಡಲಿಲ್ಲ. ಹಾಗಾಗಿ, ಬ್ರಿಟಿಷರು ಮಾಡಿದ ಎಡವಟ್ಟಿನ ದುಷ್ಪರಿಣಾಮವನ್ನು ಭಾರತವು ಇಂದಿಗೂ ಕಿರುಕುಳ ಎದುರಿಸುತ್ತಿದೆ.

1962ರ ಭಾರತ-ಚೀನಾ ಯುದ್ಧ
ಭಾರತ-ಚೀನಾ ನಡುವಿನ ಅತಿ ದೊಡ್ಡ ಸಂಘರ್ಷವಿದು. 1962ರಲ್ಲಿ ಚೀನಿ ಸೇನಾ ಪಡೆಯು ಗಡಿಯ ವಿವಾದಿತ ಪ್ರದೇಶದಲ್ಲಿ ದಂಡೆತ್ತಿ ಬಂದಿತು. ಆಗ ಭಾರತ ಮತ್ತು ಚೀನಾ ನಡುವೆ ಸುಮಾರು ನಾಲ್ಕು ವಾರಗಳ ಕಾಲ ಯುದ್ಧ ನಡೆಯಿತು. ಯುದ್ಧದ ಪರಿಣಾಮ ನಮ್ಮ ಸಾವಿರಾರು ಸೈನಿಕರು ಹುತಾತ್ಮರಾದರು. ಆಗ, ಯುದ್ಧ ವಿರಾಮ ನಡೆದು ಭಾರತದ ಅಕ್ಸಾಯಿ ಚಿನ್ ಪ್ರದೇಶ ತನ್ನದೆಂದು ಚೀನಾ ವಶಪಡಿಸಿಕೊಂಡಿತು. ಈ ಪ್ರದೇಶವು ಟಿಬೆಟ್‌ನಿಂದ ವೆಸ್ಟರ್ನ್ ಚೀನಾಗೆ ಸಂಪರ್ಕಿಸುವ ಕಾರಿಡಾರ್ ಆಗಿದೆ. ಆದರೆ, ಭಾರತವು ಈಗಲೂ ಈ ಪ್ರದೇಶವು ತನ್ನದೆಂದು ಅಂತಾರಾಷ್ಟ್ರೀಯವಾಗಿ ವಾದಿಸುತ್ತಲೇ ಇದೆ. ಈ ಯುದ್ಧದಲ್ಲಿ ಭಾರತವು ಅಕ್ಸಾಯಿ ಚಿನ್ ಮತ್ತು ನಮ್ಮ ಯೋಧರನ್ನು ಕಳೆದುಕೊಳ್ಳಬೇಕಾಯಿತು.

1962 War Between China and India

1967ರ ನಾಥು ಲಾ ಸಂಘರ್ಷ
ನಾಥು ಲಾ ಪಾಸ್ ಭಾರತದ ಈಶಾನ್ಯ ರಾಜ್ಯದ ಸಿಕ್ಕಿಂನಲ್ಲಿರುವ ಪ್ರಮುಖ ಹಾಗೂ ಭಾರತದ ಅತಿ ಎತ್ತರದ ಪರ್ವತ ಮಾರ್ಗವಾಗಿದೆ. ಭಾರತ ಮತ್ತು ಚೀನಾಗಳೆರಡಕ್ಕೂ ಈ ಪ್ರದೇಶವು ತುಂಬ ಮಹತ್ವದ್ದಾಗಿದೆ. ನಾಥು ಲಾ ಹಿಮಾಲಯದ ಡೋಂಗ್ಕ್ಯಾ ಶ್ರೇಣಿಯಲ್ಲಿನ ಟಿಬೆಟ್‌, ಚೀನಾದ ಯಡಾಂಗ್ ಕೌಂಟಿ, ನೇಪಾಳ ಮತ್ತು ಭಾರತದ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ನಡುವಿನ ಸಂಪರ್ಕದ ಕೊಂಡಿಯಾಗಿದೆ. ಹಾಗಾಗಿ, ಈ ಪಾಸ್ ಮೇಲೆ ನಿಯಂತ್ರಣ ಸಾಧಿಸಲು ಚೀನಾ, ಭಾರತದ ಜತೆ ಆಗಾಗ ಸಂಘರ್ಷವನ್ನು ಮಾಡುತ್ತಲೇ ಇರುತ್ತದೆ. 1967ರಲ್ಲಿ ನಡೆದ ಸಂಘರ್ಷದಲ್ಲಿ ಫಿರಂಗಿ ದಾಳಿ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಇದರಿಂದಾಗಿ ಸಾಕಷ್ಟು ಸಾವು – ನೋವು ಸಂಭವಿಸಿತ್ತು. ಈ ಸಂಘರ್ಷದಲ್ಲಿ 80 ಭಾರತೀಯ ಯೋಧರು ಹುತಾತ್ಮರಾದರೆ, ಚೀನಾದ 400 ಯೋಧರು ಮೃತಪಟ್ಟಿದ್ದರು.

1975ರ ತುಲುಂಗ್ ಲಾ ದಾಳಿ
ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಿರಂತರವಾಗಿರುತ್ತದೆ. ಆದರೆ, ಶಸ್ತ್ರಾಸ್ತ್ರಗಳನ್ನು ಬಳಸುವುದು ಕಡಿಮೆ. ಹಾಗೆಯೇ, 1975ರ ತುಲುಂಗ್ ಲಾ ಹೊಂಚು ದಾಳಿ ವೇಳೆ, ಉಭಯ ರಾಷ್ಟ್ರಗಳ ಸೈನಿಕರು ಪರಸ್ಪರ ಗುಂಡು ಹಾರಿಸಿದ್ದರು. ಇದೇ ಕೊನೆ, ಬಳಿಕ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿಲ್ಲ. ಅಂದು ಚೀನಿ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಅರುಣಾಚಲ ಪ್ರದೇಶದ ವಿಭಜನಾ ರೇಖೆಯಲ್ಲಿ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾವು ಭಾರತದ ಗಡಿಯನ್ನು ಮೀರಿ ಒಳಬರುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಭಾರತವು ದೂರು ನೀಡಿತ್ತು. ಆದರೆ, ಚೀನಾ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿತ್ತು.

2017ರ ಡೋಕ್ಲಾಮ್ ಸಂಘರ್ಷ
ಇತ್ತೀಚಿನ ವರ್ಷಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾದ ಸಂಘರ್ಷಗಳ ಪೈಕಿ 2017ರ ಡೋಕ್ಲಾಮ್ ಸಂಘರ್ಷವೂ ಒಂದು. ಭೂತಾನ್, ಚೀನಾ ಮತ್ತು ಭಾರತಕ್ಕೆ ಆಯಕಟ್ಟಿನ ಸ್ಥಳವಾಗಿರುವ ಡೋಕ್ಲಾಮ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಸಂಘರ್ಷಕ್ಕೆಇಳಿದಿದ್ದರು. ಈ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಆಗ ಭಾರತೀಯ ಸೇನೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಚೀನಾ ಸೇನೆಯನ್ನು ಹಿಂದಕ್ಕೆ ಕಳುಹಿಸಿತ್ತು. ಡೋಕ್ಲಾಮ್ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿದೆ. ಭಾರತವನ್ನು ಈಶಾನ್ಯ ಭಾರತದ ರಾಜ್ಯಗಳೊಂದಿಗೆ ಸಂಪರ್ಕ ಕಲ್ಪಿಸುವ ಚಿಕನ್ ನೆಕ್ ಎಂದು ಕರೆಯಲಾಗುವ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಡೋಕ್ಲಾಮ್ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಡೋಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಆಗ ಉಭ ರಾಷ್ಟ್ರಗಳ ಮಧ್ಯೆ ಗಡಿಯಲ್ಲಿ ಸಂಘರ್ಷವೇರ್ಪಟ್ಟಿತ್ತು. ಆ ಬಳಿಕ ಮಾತುಕತೆಯ ಮೂಲಕ ಸಂಘರ್ಷಕ್ಕೆ ಇತಿಶ್ರೀ ಹಾಡಲಾಯಿತು.

Galwan Valley @ Border Conflic

2020ರ ಗಲ್ವಾನ್ ಘನಘೋರ ಘರ್ಷಣೆ
ಭಾರತದ ಲಡಾಕ್ ವಲಯದಲ್ಲಿನ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರು 2020 ಮೇ ತಿಂಗಳಿನಿಂದಲೂ ಸಂಘರ್ಷ ನಿರತರಾಗಿದ್ದರು. ಆದರೆ, 2020ರ ಜೂನ್ ಹೊತ್ತಿಗೆ ಈ ಸಂಘರ್ಷ ಉಲ್ಬಣಗೊಂಡಿತ್ತು. ಉಭಯ ರಾಷ್ಟ್ರಗಳ ಸೈನಿಕರು ಗಲ್ವಾನ್ ಕಣಿವೆಯ ನದಿಯಲ್ಲಿ ಜಗಳ ಕಾಯ್ದರು. ಕೋಲು, ರಾಡ್, ಬಡಿಗೆಗಳನ್ನು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡರು. ಈ ರೀತಿ ಹೊಡೆದಾಟವು ಸುಮಾರು 7 ಗಂಟೆಗಳ ಕಾಲ ನಡೆಯಿತು. ನಮ್ಮ ಭಾರತದ ಸುಮಾರು 20 ಯೋಧರು ಹುತಾತ್ಮರಾದರು. ಬಳಿಕ, ಈ ಸಂಘರ್ಷದಲ್ಲಿ ಚೀನಾ ತನ್ನ ಐದು ಸೈನಿಕರು ಮೃತರಾಗಿದ್ದಾರೆಂದು ಹೇಳಕೊಂಡಿತ್ತು. ಆದರೆ, ಆಸ್ಟ್ರೇಲಿಯಾದ ವೆಬ್‌ಸೈಟ್ ವರದಿಯ ಪ್ರಕಾರ, ಚೀನಾದ ಸುಮಾರು 38 ಯೋಧರು ಈ ಘರ್ಷಣೆಯಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ | ಭಾರತ-ಚೀನಾ ಗಡಿ ಸಂಘರ್ಷ; ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಇಂದು ಸಚಿವ ರಾಜನಾಥ್​ ಸಿಂಗ್​​ರಿಂದ ಮಾಹಿತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Rahul Gandhi: ರಾಹುಲ್‌ ಗಾಂಧಿ ಈಗ ಪ್ರತಿಪಕ್ಷ ನಾಯಕ; ಅವರಿಗಿರುವ ಅಧಿಕಾರ ಯಾವವು? ಸಂಬಳ ಎಷ್ಟು?

Rahul Gandhi: 10 ವರ್ಷಗಳ ಬಳಿಕ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನವು ಕಾಂಗ್ರೆಸ್‌ಗೆ ಲಭಿಸಿದ್ದು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕರಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಲು ರಾಹುಲ್‌ ಗಾಂಧಿ ಅವರು ಸಜ್ಜಾಗಿದ್ದಾರೆ. ಇನ್ನು ಪ್ರತಿಪಕ್ಷ ನಾಯಕನಾಗಿರುವ ರಾಹುಲ್‌ ಗಾಂಧಿ ಅವರಿಗೆ ಸಿಗುವ ಸಂಬಳ ಎಷ್ಟು? ಅವರಿಗೆ ಇರುವ ವಿಶೇಷ ಅಧಿಕಾರಗಳು ಯಾವವು? ಸವಲತ್ತುಗಳು ಏನೇನು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Rahul Gandhi
Koo

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ (Leader Of The Opposition) ಆಯ್ಕೆಯಾಗಿದ್ದಾರೆ. ಕಳೆದ ಎರಡು (2014, 2019) ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಪ್ರತಿಪಕ್ಷವಾಗುವಷ್ಟು ಸೀಟುಗಳನ್ನು ಗೆದ್ದಿರದ ಕಾರಣ ಪ್ರತಿಪಕ್ಷ ನಾಯಕರೇ ಇರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ 99 ಕ್ಷೇತ್ರಗಳನ್ನು ಗೆದ್ದಿದ್ದು, ಈಗ ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇವರು ಆಡಳಿತಾರೂಢ ಪಕ್ಷಕ್ಕೆ ಸೆಡ್ಡು ಹೊಡೆಯುವ ಜತೆಗೆ ಹಲವು ಅಧಿಕಾರಗಳು ಹಾಗೂ ಸವಲತ್ತುಗಳನ್ನು ಪಡೆಯಲಿದ್ದಾರೆ. ಅವುಗಳ ಕುರಿತ ಮಾಹಿತಿ ಹೀಗಿದೆ…

ರಾಹುಲ್‌ ಗಾಂಧಿ ಸಂಬಳ ಎಷ್ಟು?

ರಾಹುಲ್‌ ಗಾಂಧಿ ಅವರು ಸಂಸದನಾಗಿ ಪಡೆಯುವ ಸಂಬಳದ ಜತೆಗೆ ಪ್ರತಿಪಕ್ಷ ನಾಯಕರೂ ಆಗಿರುವ ಕಾರಣ ಅವರಿಗೆ ಮಾಸಿಕ 3.3 ಲಕ್ಷ ರೂ. ಸಂಬಳ ಸಿಗಲಿದೆ. ಅಲ್ಲದೆ, ಕ್ಯಾಬಿನೆಟ್‌ ದರ್ಜೆಯ ಸಚಿವರಿಗೆ ಸಿಗುವ ಸವಲತ್ತುಗಳು, ಭದ್ರತೆ (ಝಡ್‌ ಪ್ಲಸ್‌) ಸಿಗಲಿದೆ. ಕ್ಯಾಬಿನೆಟ್‌ ಸಚಿವರೊಬ್ಬರಿಗೆ ಸಿಗುವ ಬಂಗಲೆಯೇ ರಾಹುಲ್‌ ಗಾಂಧಿ ಅವರಿಗೂ ನೀಡಲಾಗುತ್ತದೆ. ಇದರ ಜತೆಗೆ ಹಲವು ಭತ್ಯೆಗಳು ಕೂಡ ರಾಹುಲ್‌ ಗಾಂಧಿ ಅವರಿಗೆ ಸಿಗಲಿವೆ.

Rahul Gandhi

ಅವರ ಅಧಿಕಾರ ವ್ಯಾಪ್ತಿ ಹೇಗಿರಲಿದೆ?

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಹಲವು ಸಂಸದೀಯ ಸಮಿತಿಗಳ ಸದಸ್ಯರೂ ಆಗಿರುತ್ತಾರೆ. ಜಂಟಿ ಸಂಸದೀಯ ಸಮಿತಿಗಳು, ಪಬ್ಲಿಕ್‌ ಅಕೌಂಟ್ಸ್‌ ಸಮಿತಿ ಸದಸ್ಯರಾಗಿರುತ್ತಾರೆ. ಹಾಗೆಯೇ, ಸಿಬಿಐ ನಿರ್ದೇಶಕ, ಮುಖ್ಯ ಚುನಾವಣಾ ಆಯುಕ್ತರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಚೀಫ್‌ ವಿಜಿಲನ್ಸ್‌ ಕಮಿಷನರ್‌, ಕೇಂದ್ರೀಯ ಮಾಹಿತಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವಾಗ ರಾಹುಲ್‌ ಗಾಂಧಿ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಸದನದ ಮುಂದಿನ ಸಾಲಿನಲ್ಲಿರುವ ಆಸನದಲ್ಲಿ ಕುಳಿತುಕೊಳ್ಳಲಿದ್ದಾರೆ. ಹಾಗೆಯೇ, ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾತನಾಡುವಾಗ ಕೂಡ ಅವರಿಗೆ ಮುಂದಿನ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಮಾಡಲಾಗುತ್ತದೆ.

ಲೋಕಸಭೆಯ ಒಟ್ಟು ಕ್ಷೇತ್ರಗಳ ಶೇ.10ರಷ್ಟು ಅಂದರೆ 55 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷವು ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆಯುತ್ತದೆ. ಆ ಪಕ್ಷದ ನಾಯಕ ಪ್ರತಿಪಕ್ಷ ನಾಯಕರಾಗುತ್ತಾರೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 44 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ 52 ಕ್ಷೇತ್ರ ಗೆದ್ದ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇತ್ತು. ಈ ಬಾರಿ 99 ಕ್ಷೇತ್ರಗಳನ್ನು ಗೆದ್ದಿರುವ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

Continue Reading

ಕರ್ನಾಟಕ

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

CM Siddaramaiah: ‘ಗ್ಯಾರಂಟಿ’ ಹೆಸರಲ್ಲಿ ನಮಗೆ ಗೊತ್ತಿಲ್ಲದಂತೆಯೇ ಜೇಬು ಖಾಲಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮಾಡುತ್ತಿರುವ ಬೆಲೆ ಏರಿಕೆಗಳನ್ನು, ಇಷ್ಟರಲ್ಲಿಯೇ ಮಾಡಲಿರುವ ಬೆಲೆಯೇರಿಕೆಗಳನ್ನು ಗಮನಿಸಿ ಈ ಮಾತು ಆಡಲಾಗುತ್ತಿದೆ. ಒಂದು ಕಡೆಯಿಂದ ಕೊಟ್ಟಂತೆ ನಟಿಸುತ್ತಿರುವ ಸರಕಾರ, ಇನ್ನೊಂದು ಕಡೆಯಿಂದ ಅದರ ದುಪ್ಪಟ್ಟು ಹಣ ನಮ್ಮ ಕಿಸೆಯಿಂದ ಪೀಕುತ್ತಿದೆ!

VISTARANEWS.COM


on

cm siddaramaiah price hikes
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್‌ ಸರಕಾರ (Congress government) ರಾಜ್ಯದಲ್ಲಿ ಬಂದ ಕೂಡಲೇ ಚುನಾವಣೆ (Assembly Election) ಸಂದರ್ಭದಲ್ಲಿ ನೀಡಿದ ʼಗ್ಯಾರಂಟಿ ಯೋಜನೆʼಗಳನ್ನು (Guarantee schemes) ಜಾರಿ ಮಾಡಿತು. ಇದಕ್ಕಾಗಿ ಮುಂದೆ ಯಾವ ಬೆಲೆ ತೆರಬೇಕಾಗಲಿದೆಯೋ ಎಂಬ ಆತಂಕ ಆಗಲೇ ರಾಜ್ಯದ ಜನತೆಯನ್ನು ಕಾಡಿತ್ತು. ಅದು ಈ ನಿಜವಾಗುತ್ತಿದೆ. ಒಂದು ಕಡೆಯಿಂದ ಕೊಟ್ಟಂತೆ ನಟಿಸುತ್ತಿರುವ ಸರಕಾರ, ಇನ್ನೊಂದು ಕಡೆಯಿಂದ ಅದರ ದುಪ್ಪಟ್ಟು ಹಣ ನಮ್ಮ ಕಿಸೆಯಿಂದ ಪೀಕುತ್ತಿದೆ!

ಹೌದು, ಈ ಲೆಕ್ಕಾಚಾರ ನೋಡಿದರೆ ನೀವು ಖಂಡಿತಾ ಬಾಯಿ ಬಾಯಿ ಬಡಿದುಕೊಳ್ಳುತ್ತೀರಿ. ‘ಗ್ಯಾರಂಟಿ’ ಹೆಸರಲ್ಲಿ ನಮಗೆ ಗೊತ್ತಿಲ್ಲದಂತೆಯೇ ಜೇಬು ಖಾಲಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮಾಡುತ್ತಿರುವ ಬೆಲೆ ಏರಿಕೆಗಳನ್ನು, ಇಷ್ಟರಲ್ಲಿಯೇ ಮಾಡಲಿರುವ ಬೆಲೆಯೇರಿಕೆಗಳನ್ನು ಗಮನಿಸಿ ಈ ಮಾತು ಆಡಲಾಗುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ (Petrol price hike) ಏರಿಸಲಾಗಿದೆ; ಹಾಲು ದರವೂ (milk price hike) ಹೆಚ್ಚಿತು. ಮುಂದೆ ಕುಡಿಯವ ಕಾವೇರಿ ನೀರು (Kaveri Water Price hike) ಮತ್ತು ಆಲ್ಕೋಹಾಲ್‌ ದರಕ್ಕೂ (Liquor rates) ಸರಕಾರ ಕೈಹಾಕಲಿದೆ. ಶೀಘ್ರದಲ್ಲೇ ಟೀ- ಕಾಫಿ ರೇಟ್‌ ಏರಿಕೆಯೂ ಆಗಬಹುದು. ಮೆಡಿಕಲ್‌ ಸೀಟು ಶುಲ್ಕಗಳು ಹೆಚ್ಚಲಿವೆ, ಆಟೋ ದರ (Auto Fare) ಅಧಿಕವಾಗಲಿದೆ.

ಈಗ ಲೆಕ್ಕಾಚಾರ ತುಸು ನೋಡೋಣ. ಮೊದಲಿಗೆ ಸರಕಾರ ಏನು ಕೊಟ್ಟಿದೆ ಎಂಬ ಲೆಕ್ಕ.

ಗ್ಯಾರಂಟಿ ಯೋಜನೆಗಳು

ಗೃಹಲಕ್ಷ್ಮೀ – 2,000 ರೂ.
ಯುವನಿಧಿ – ಡಿಪ್ಲೊಮಾ 1500/- ಪದವೀಧರರಿಗೆ 3000/-
ಶಕ್ತಿಯೋಜನೆ – ಮಹಿಳೆಯರಿಗೆ ಸರ್ಕಾರಿ ಬಸ್​​ನಲ್ಲಿ ಉಚಿತ ಪ್ರಯಾಣ
ಅನ್ನಭಾಗ್ಯ – 5ಕೆಜಿ ಅಕ್ಕಿ & 170 ರೂಪಾಯಿ
ಗೃಹಜ್ಯೋತಿ – 200 ಯೂನಿಟ್​​ವರೆಗೆ ಉಚಿತ ವಿದ್ಯುತ್​​

ಇನ್ನು ಬೆಲೆ ಏರಿಕೆಗಳು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಪೆಟ್ರೋಲ್ – 3 ರೂಪಾಯಿ ಏರಿಕೆ
ಡೀಸೆಲ್ – 3.50 ರೂ. ಏರಿಕೆ
ಪೆಟ್ರೋಲ್ ಸದ್ಯದ ದರ – 103 ರೂ.
ಡೀಸೆಲ್ ಸದ್ಯದ ದರ – 89.20 ರೂ.
1 ದ್ವಿಚಕ್ರ ವಾಹನ – ದಿನಕ್ಕೆ 1 ಲೀಟರ್ ಬಳಕೆ
ತಿಂಗಳಿಗೆ ​ಬಳಕೆ ಸರಾಸರಿ ಹೆಚ್ಚಳ 30 ಲೀಟರ್​​ – ತಿಂಗಳಿಗೆ 100 ರೂ. ಹೆಚ್ಚಳ

ಹಾಲಿನ ದರ ಹೆಚ್ಚಳ

ಹಾಲಿನ ದರ – ವರ್ಷದಲ್ಲಿ 2 ಬಾರಿ ಏರಿಕೆ
ಮೊದಲು ಲೀಟರ್​​ಗೆ ಹೆಚ್ಚಾಗಿದ್ದು – 3 ರೂಪಾಯಿ
ಇದೀಗ ಲೀಟರ್​ಗೆ ಹೆಚ್ಚಾಗಿದ್ದು – 2 ರೂಪಾಯಿ
ಲೀಟರ್ ಹಾಲಿನ ಸದ್ಯದ ದರ – 44 ರೂ. (ನೀಲಿ ಪ್ಯಾಕೆಟ್)
1 ಕುಟುಂಬದಿಂದ ಹಾಲು ಬಳಕೆ – 1 ಲೀಟರ್
ತಿಂಗಳಿಗೆ ಕುಟುಂಬದಿಂದ ಬಳಕೆ – 30 ಲೀಟರ್
ಹಾಲಿನ ದರ ಹೆಚ್ಚಳದಿಂದ ಹೊರೆ – 150 ರೂ.

ತರಕಾರಿ ದರ ಏರಿಕೆ

ಹಣ್ಣು, ತರಕಾರಿ, ಸೊಪ್ಪು ಬೆಲೆ ನಿರಂತರ ಏರಿಕೆ
ಹಣ್ಣು, ತರಕಾರಿ ಏರಿಕೆಯಿಂದ ಹೆಚ್ಚುವರಿ ಹೊರೆ
ಟ್ರಾನ್ಸ್​ಪೋರ್ಟ್ ಚಾರ್ಜಸ್ ಸೇರಿ ವಿವಿಧ ಚಾರ್ಜಸ್
ಪ್ರತಿ ತಿಂಗಳಿಗೆ ಜನರಿಗೆ ಅಂದಾಜು 500 ರೂ. ಹೊರೆ

ದಿನಸಿ ವಸ್ತುಗಳ ಬೆಲೆ ಏರಿಕೆ

ದಿನಸಿ ವಸ್ತುಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆ
ಅಕ್ಕಿ, ಬೇಳೆ, ಡಿಟರ್ಜೆಂಟ್​​ ಸೇರಿ ವಸ್ತುಗಳ ಬೆಲೆ ಗಗನಕ್ಕೆ
ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ
ತಿಂಗಳಿಗೆ ಅಂದಾಜು 700 ರೂಪಾಯಿಯಷ್ಟು ಜನರಿಗೆ ಹೊರೆ

ಮಾಂಸಪ್ರಿಯರಿಗೂ ಶಾಕ್

ರಾಜ್ಯದಲ್ಲಿ ಮಾಂಸದ ಬೆಲೆಯಲ್ಲೂ ಹೆಚ್ಚಳ
ಮಾಂಸದ ಬೆಲೆ ಹೆಚ್ಚಳದಿಂದ ಹೆಚ್ಚುವರಿ ಹೊರೆ
ಜನರಿಗೆ ತಿಂಗಳಿಗೆ ಅಂದಾಜು 300 ರೂಪಾಯಿ ಹೆಚ್ಚಳ

ಮದ್ಯಪ್ರಿಯರಿಗೆ ಬಿಗ್ ಶಾಕ್

2023ರ ಜುಲೈನಲ್ಲಿ ಬಿಯರ್ 10%, ಮದ್ಯ 20% ಏರಿಕೆ
3 ತಿಂಗಳ ಹಿಂದೆ ಬಿಯರ್ 10%, ಮದ್ಯ 25% ದರ ಹೆಚ್ಚಳ
ಜುಲೈ 1ರಿಂದ ಮತ್ತೆ ಅಬಕಾರಿ ದರ ಹೆಚ್ಚಳಕ್ಕೆ ನಿರ್ಧಾರ?

ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ಶಾಕ್!?

ಉಚಿತ ವಿದ್ಯುತ್​ ಮಧ್ಯೆಯೂ ವಾಣಿಜ್ಯ ಬಳಕೆ ವಿದ್ಯುತ್​ ದರ ಏರಿಕೆ
ಕೈಗಾರಿಕೆ ಸೇರಿ ವಾಣಿಜ್ಯ ಬಳಕೆಯ ವಿದ್ಯುತ್​ ದರ ಹೆಚ್ಚಳ
ವಿದ್ಯುತ್ ದರ ಹೆಚ್ಚಳದಿಂದ ವಸ್ತುಗಳ ಮೇಲೆ ಪರಿಣಾಮ
ಅಂದಾಜು 300 ರೂಪಾಯಿಯಷ್ಟು ಹೊರೆ ಬೀಳುವ ಸಾಧ್ಯತೆ

ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್?

ಉಚಿತ ಪ್ರಯಾಣದ ನಡುವೆ ಬಸ್ ಟಿಕೆಟ್ ದರ ಏರಿಕೆ ಚಿಂತನೆ
ಗಂಡಸರ ಪ್ರಯಾಣದ ದರ ಹೆಚ್ಚಿಸಲು ಸರ್ಕಾರದ ಚಿಂತನೆ
ಶೀಘ್ರದಲ್ಲೇ ಸರ್ಕಾರಿ ಬಸ್​ಗಳ ಪ್ರಯಾಣದ ದರ ಏರಿಕೆ ಸಾಧ್ಯತೆ
ಖಾಸಗಿ ಬಸ್‌ಗಳ ದರವೂ ದುಬಾರಿಯಾಗುವ ಸಾಧ್ಯತೆ
ಟಿಕೆಟ್ ದರ ಏರಿಕೆಯಿಂದ ಪ್ರತಿ ಕುಟುಂಬಕ್ಕೂ ಹೆಚ್ಚುವರಿ ಹೊರೆ
1 ಕುಟುಂಬಕ್ಕೆ ಅಂದಾಜು 200 ರೂಪಾಯಿಯಷ್ಟು ಹೆಚ್ಚು ಹೊರೆ

ಜನರಿಗೆ ಜಲ‘ಶಾಕ್’!
ರಾಜ್ಯದ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ
ಹೆಚ್ಚು ಟ್ಯಾಂಕರ್ ನೀರು ಅವಲಂಬಿಸಿರುವ ಜನರು
ಟ್ಯಾಂಕರ್​ ಮೂಲಕ ನೀರು ತರಿಸಿಕೊಳ್ತಿರುವ ಜನರು
ಒಂದು ಟ್ಯಾಂಕರ್​​ ನೀರಿನ ಬೆಲೆ ಸುಮಾರು ₹2000

ತಿಂಗಳಿಗೆ 1 ಕುಟುಂಬಕ್ಕೆ ಅಂದಾಜು ಹೊರೆ

ಹಾಲು 30 ಲೀಟರ್ ಬಳಕೆ – 150 ರೂ.
ಪೆಟ್ರೋಲ್, ಡೀಸೆಲ್ 30 ಲೀ. – 90 ರೂ.
ತರಕಾರಿ – 500 ರೂಪಾಯಿ
ಮದ್ಯ – 500 ರೂಪಾಯಿ
ವಿದ್ಯುತ್ ವಾಣಿಜ್ಯ ಬಳಕೆ – 300 ರೂ.
ಬಸ್ ಟಿಕೆಟ್ ದರ – 200 ರೂ.
ದಿನಸಿ – 700 ರೂ.
ಮಾಂಸ – 300 ರೂ.
ಟ್ಯಾಂಕರ್ ನೀರು – 2,000 ರೂ.
ಒಟ್ಟು ಅಂದಾಜು ಹೊರೆ – 4740

ವರ್ಷಕ್ಕೆ ಎಷ್ಟು ಹೊರೆ?

ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಅಧಿಕ ಹೊರೆ

ವರ್ಷಕ್ಕೆ ಎಷ್ಟು ಹೆಚ್ಚುವರಿ ಹೊರೆ?

ಕುಟುಂಬಕ್ಕೆ ಸರ್ಕಾರ ಕೊಡೋದು ವರ್ಷಕ್ಕೆ 24 ಸಾವಿರಕ್ಕೂ ಹೆಚ್ಚು
ಆದರೆ ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಹೊರೆ
ಸರ್ಕಾರ ಕೊಟ್ಟ 24 ಸಾವಿರ ಬಿಟ್ಟರೆ 32,880 ರೂ. ಹೆಚ್ಚುವರಿ ಹೊರೆ
ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಸರ್ಕಾರ ಕೊಡುವ 2 ಸಾವಿರ ಹೊರತುಪಡಿಸಿದರೆ 2740 ರೂ. ಹೆಚ್ಚುವರಿ ಹೊರೆ

ಇದನ್ನೂ ಓದಿ: CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್‌ ಟಿಕೆಟ್‌ ದರ ಏರಿಕೆ ಗ್ಯಾರಂಟಿ

Continue Reading

Latest

Members of Parliament: ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ? ಜೈಲಿನಲ್ಲಿದ್ದವರ ಕತೆಯೇನು?

ಲೋಕ ಸಭಾ ಚುನಾವಣೆ ಬಳಿಕ ಸಂಸದರಾಗಿ (Members of Parliament) ಆಯ್ಕೆಯಾಗುವವರು ಯಾವ ರೀತಿ ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಂಸದೀಯ ಪಾತ್ರವನ್ನು ಪೂರೈಸುವಲ್ಲಿ ಪ್ರಮಾಣ ವಚನ ಸ್ವೀಕಾರವು ಮೊದಲ ಮತ್ತು ಪ್ರಮುಖ ಹೆಜ್ಜೆಯಾಗಿದೆ. ಆದರೂ ಕೆಲವು ಸಂಸದರು ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗದೇ ಇದ್ದರೆ ಮುಂದಿನ ನಡೆ ಹೇಗಿರುತ್ತದೆ ಎಂಬಿತ್ಯಾದಿ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

By

Members of Parliament
Koo

18ನೇ ಲೋಕಸಭೆಯ (loksabha election) ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಹೊಸದಾಗಿ ಚುನಾಯಿತರಾದ ಸಂಸತ್ ಸದಸ್ಯರು (Members of Parliament) ಸೋಮವಾರದಿಂದ ಪ್ರಮಾಣ ವಚನ (taking oath) ಸ್ವೀಕರಿಸಲು ಆರಂಭಿಸಿದ್ದಾರೆ. ಎರಡು ದಿನಗಳಲ್ಲಿ ಕೆಳಮನೆಯ (lower house) 543 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 26ರಂದು ನೂತನ ಲೋಕಸಭಾ ಸ್ಪೀಕರ್ (Speaker) ಆಯ್ಕೆ ನಡೆಯಲಿದೆ.

ಪ್ರಮಾಣ ವಚನ ಬೋಧಿಸುವವರು ಯಾರು?

ಸಂಸದೀಯ ಪದ್ಧತಿಗಳ ಪ್ರಕಾರ ಪ್ರತಿ ಸಾರ್ವತ್ರಿಕ ಚುನಾವಣೆಯ ಅನಂತರ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಪ್ರಮಾಣ ವಚನ ಸ್ವೀಕರಿಸುವ ಹೊಣೆ ನಿರ್ವಹಿಸುತ್ತಾರೆ. ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಯನ್ನು ನಡೆಸುವ ಜವಾಬ್ದಾರಿ ಕೂಡ ಈ ಹಂಗಾಮಿ ಸ್ಪೀಕರ್‌ದೇ ಆಗಿರುತ್ತದೆ.

ಸಂವಿಧಾನದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಂಸದೀಯ ಪಾತ್ರವನ್ನು ಪೂರೈಸುವಲ್ಲಿ ಪ್ರಮಾಣ ವಚನ ಸ್ವೀಕಾರವು ಮೊದಲ ಹೆಜ್ಜೆಯಾಗಿದೆ. ಆದರೂ ಕೆಲವು ಸಂಸದರು ಅನಾರೋಗ್ಯದ ಕಾರಣ ಅಥವಾ ಅವರ ಸ್ಥಳದಿಂದ ತೆರಳಲು ಸಾಧ್ಯವಾಗದ ಕಾರಣ ಪ್ರಮಾಣ ವಚನ ಸ್ವೀಕರಿಸದಿರುವ ಸಾಧ್ಯತೆಯಿದೆ.

ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ?

1. ಮೊದಲ ದಿನ ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡದ ಚುನಾಯಿತ ಸಂಸದರು ಸದನದ ಅಧಿವೇಶನದ ಪ್ರಾರಂಭದಲ್ಲಿ ಅದೇ ಅಧಿವೇಶನದಲ್ಲಿ ಅಥವಾ ಅನಂತರದ ಅಧಿವೇಶನದಲ್ಲಿ ಯಾವುದೇ ನಂತರದ ದಿನದಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು.

2. ಸಂಸದರ ಕೋರಿಕೆಯ ಮೇರೆಗೆ ಸಭಾಧ್ಯಕ್ಷರ ಚೇಂಬರ್‌ನಲ್ಲಿ ಮಧ್ಯಂತರ ಅವಧಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಗುತ್ತದೆ.

3. ಅನಾರೋಗ್ಯದಿಂದ ಬಳಲುತ್ತಿರುವವರು, ಸದನಕ್ಕೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಅವರು ಬಯಸಿದಲ್ಲಿ ಪ್ರಮಾಣ ಅಥವಾ ದೃಢೀಕರಣವನ್ನು ಮಾಡಬಹುದು. ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಯು ಸದಸ್ಯರಿಗೆ ಸಂಬಂಧಿತ ಪ್ರಮಾಣ ಅಥವಾ ದೃಢೀಕರಣ ಕಾರ್ಡ್ ಅನ್ನು ನೀಡುತ್ತಾರೆ.

4. ಸಂವಿಧಾನದ ಪ್ರಕಾರ ಚುನಾಯಿತ ಸಂಸದರು 60 ದಿನಗಳವರೆಗೆ ಸಂಸತ್ತಿಗೆ ಹಾಜರಾಗದಿದ್ದರೆ ಅವರ ಸ್ಥಾನವನ್ನು ಖಾಲಿ ಎಂದು ಘೋಷಿಸಬಹುದು. ಇದೇ ಆಧಾರದಲ್ಲಿ ನ್ಯಾಯಾಲಯಗಳು ಜೈಲಿನಲ್ಲಿರುವ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸುವುದಕ್ಕಾಗಿ ಸಂಸತ್‌ಗೆ ಬರಲು ಅವಕಾಶ ನೀಡಬಹುದು. ಆದರೆ ಪ್ರಮಾಣ ವಚನ ಸ್ವೀಕರಿಸಿದ ಅನಂತರ ಅವರು ಮತ್ತೆ ಜೈಲಿಗೆ ಮರಳಬೇಕಾಗುತ್ತದೆ.

5. ದೃಷ್ಟಿ ಸಮಸ್ಯೆಯಿಂದ ಸದಸ್ಯರಿಗೆ ಸಹಿ ಮಾಡಲು, ಪ್ರಮಾಣ ಪತ್ರ ಓದಲು ಸಾಧ್ಯವಾಗದೇ ಇದ್ದರೆ ಇನ್ನೊಬ್ಬ ಸದಸ್ಯರು ಇವರಿಗೆ ಓದಿ ಹೇಳಬಹುದಾಗಿದೆ.

6. ನ್ಯಾಯಾಲಯದ ಆದೇಶದ ಪರಿಣಾಮವಾಗಿ ಒಬ್ಬ ವ್ಯಕ್ತಿಯು ಸದಸ್ಯರಾಗುವುದನ್ನು ತಡೆದರೆ ಮತ್ತು ಅವರ ಸ್ಥಾನದಲ್ಲಿ ಇನ್ನೊಬ್ಬರು ಚುನಾಯಿತರೆಂದು ಘೋಷಿಸಲ್ಪಟ್ಟರೆ ಮತ್ತೆ ಹೊಸದಾಗಿ ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಬೇಕು.

7. ಮೊದಲ ಸುತ್ತಿನಲ್ಲಿ ಪ್ರಮಾಣವಚನಕ್ಕೆ ಹಾಜರಾಗದ ಸದಸ್ಯರ ಹೆಸರನ್ನು ಕೊನೆಯಲ್ಲಿ ಮತ್ತೆ ಕರೆಯಲಾಗುತ್ತದೆ.

ಯಾವ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂವಿಧಾನದ ಮೂರನೇ ಶೆಡ್ಯೂಲ್ ಸಂಸತ್ತಿನ ಪ್ರಮಾಣ ವಚನದ ಪಠ್ಯವನ್ನು ಒಳಗೊಂಡಿದೆ. ಅದು ಹೀಗೆ ಹೇಳುತ್ತದೆ: ನಾನು…. ಚುನಾಯಿತನಾದ ಅಥವಾ ನಾಮನಿರ್ದೇಶನಗೊಂಡ ಸದಸ್ಯರ ಸಂಸತ್‌ ಸದಸ್ಯನಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ನಾನು ಕಾನೂನಿನ ಮೂಲಕ ಸ್ಥಾಪಿಸಿದಂತೆ ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುತ್ತೇನೆ ಎಂದು ಸ್ಪಷ್ಟವಾಗಿ ದೃಢಪಡಿಸುತ್ತೇನೆ. ನಾನು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ. ನನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ.

ಪ್ರಮಾಣ ವಚನ ಏಕೆ ಮಹತ್ವದ್ದಾಗಿದೆ?

ಲೋಕಸಭೆಯಲ್ಲಿ ಚರ್ಚೆ ಮತ್ತು ಮತ ಚಲಾಯಿಸುವ ಅಧಿಕಾರವನ್ನು ಪಡೆಯಲು ಸಂವಿಧಾನದಲ್ಲಿ (ಆರ್ಟಿಕಲ್ 99) ಸೂಚಿಸಿದಂತೆ ಸಂಸದರು ಪ್ರಮಾಣ ವಚನ ಸ್ವೀಕರಿಸಬೇಕು.

ಕೇವಲ ಚುನಾವಣೆಯಲ್ಲಿ ಗೆದ್ದು ಅವಧಿಯನ್ನು ಪ್ರಾರಂಭಿಸುವುದರಿಂದ ಅವರು ಸದನದ ಕಲಾಪಗಳಲ್ಲಿ ಭಾಗವಹಿಸಲು ಸ್ವಯಂಚಾಲಿತವಾಗಿ ಸಾಧ್ಯವಾಗುವುದಿಲ್ಲ.

ಹೇಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂಸದರು ಮೊದಲು ತಮ್ಮ ಚುನಾವಣಾ ಪ್ರಮಾಣಪತ್ರವನ್ನು ಲೋಕಸಭೆಯ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ. 1957ರಲ್ಲಿ ನಡೆದ ಘಟನೆಯ ಅನಂತರ ಸಂಸತ್ತು ಈ ಸುರಕ್ಷತೆಯನ್ನು ಸೇರಿಸಿತು. ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯೊಬ್ಬರು ಸಂಸದರೆಂದು ಪೋಸ್ ನೀಡಿ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು!

ಪ್ರಮಾಣಪತ್ರದ ಜೊತೆಗೆ ಸಂಸದರು ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡಲು ಬಯಸಿದ ಭಾಷೆಯನ್ನು ಸಹ ನಮೂದಿಸಬೇಕು.

ಸದಸ್ಯರು ಪ್ರಮಾಣ ವಚನ ಮಾಡುವಾಗ ಹಂಗಾಮಿ ಸ್ಪೀಕರ್ ಜೊತೆ ಹಸ್ತಲಾಘವ ಮಾಡುತ್ತಾರೆ. ಅನಂತರ ಅವರು ಸದನದಲ್ಲಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಸದಸ್ಯರಿಗೆ ಸ್ಪೀಕರ್‌ ಅನುಮತಿ ನೀಡುತ್ತಾರೆ. ಸದಸ್ಯರು ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡುತ್ತಾರೆ.

ಯಾವ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು?

ಸಂಸದರು ಇಂಗ್ಲಿಷ್ ಅಥವಾ ಅಸ್ಸಾಮಿ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು.. ಹೀಗೆ 22 ಭಾಷೆಗಳಲ್ಲಿ ಪ್ರಮಾಣವಚನವನ್ನು ಸ್ವೀಕರಿಸಬಹುದು.

ಅರ್ಧದಷ್ಟು ಸಂಸದರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಿಂದಿನ ಎರಡು ಲೋಕಸಭೆಯಲ್ಲಿ ಸಂಸ್ಕೃತವು ಜನಪ್ರಿಯ ಭಾಷೆಯಾಗಿ ಮಾರ್ಪಟ್ಟಿದ್ದು, ಹಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Bansuri Swaraj: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ

ಯಾವಾಗ ಸದನದ ಸದಸ್ಯರಾಗುತ್ತಾರೆ?

ಒಬ್ಬ ವ್ಯಕ್ತಿಯು ಚುನಾವಣಾ ಅಧಿಕಾರಿಯಿಂದ ಚುನಾಯಿತರೆಂದು ಘೋಷಿಸಲ್ಪಟ್ಟ ದಿನಾಂಕದಿಂದ ಸದನದ ಸದಸ್ಯರಾಗುತ್ತಾರೆ. ಸದನವನ್ನು ರಚಿಸುವ ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಅವರು ಸಂಸದರಾಗಿ ಸಂಬಳವನ್ನು ಸ್ವೀಕರಿಸಲು ಪ್ರಾರಂಭಿಸುತ್ತಾರೆ. ಸಂಸದರು ಸದನದ ಅಧಿವೇಶನಗಳಿಗೆ ಗೈರುಹಾಜರಿಯನ್ನು ಕೇಳಬಹುದಾಗಿದೆ.

Continue Reading

ದೇಶ

Rushikonda Palace: 500 ಕೋಟಿಯ ಋಷಿಕೊಂಡ ಅರಮನೆ; 12 ಬೆಡ್‌ರೂಮ್‌, ವಾಶ್‌ರೂಮ್‌ ಒಂದು ಮನೆಯಷ್ಟು!

ವಿಶಾಖಪಟ್ಟಣದ ಋಷಿಕೊಂಡ ಬೆಟ್ಟದ ಬಳಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ 500 ಕೋಟಿ ರೂ. ವೆಚ್ಚದಲ್ಲಿ ಅರಮನೆಯನ್ನು (Rushikonda Palace Issue) ನಿರ್ಮಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ವೈಎಸ್‌ಆರ್‌ಸಿ ಆಡಳಿತದಲ್ಲಿ ನಿರ್ಮಿಸಿರುವ ಈ ಯೋಜನೆಯ ಬಗ್ಗೆ ತನಿಖೆ ನಡೆಸುವುದಾಗಿ ಈಗಿನ ಸರ್ಕಾರ ಹೇಳಿದೆ. ಏನಿದು ವಿವಾದ? ಇಲ್ಲಿದೆ ವಿಸ್ತೃತ ಮಾಹಿತಿ.

VISTARANEWS.COM


on

By

Rushikonda Palace Issue
Koo

ಆಂಧ್ರಪ್ರದೇಶದ ಋಷಿಕೊಂಡ ಬೆಟ್ಟದ ಬಳಿ (andrapradesh) ಈ ಹಿಂದೆ ಮುಖ್ಯಮಂತ್ರಿಯಾಗಿದ್ದ (former CM) ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) 500 ಕೋಟಿ ರೂ. ವೆಚ್ಚದಲ್ಲಿ ʼರಾಜಾ ಮಹಲ್‌ʼ ಹೆಸರಿನಲ್ಲಿ ಅರಮನೆಯನ್ನು (Rushikonda Palace) ನಿರ್ಮಿಸಿದ್ದರು. ಈಗ ಜಗನ್‌ ಸರ್ಕಾರ ಅಧಿಕಾರ ಕಳೆದುಕೊಂಡು ಟಿಡಿಪಿಯ ಎನ್‌ ಚಂದ್ರಬಾಬು ನಾಯ್ಡು ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೀಗ ಈ ಅರಮನೆ ಭಾರೀ ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿದೆ.

ಭಾರಿ ಭ್ರಷ್ಟಾಚಾರದ ಮೂಲಕ ರಾಜ್ಯ ಸರ್ಕಾರದ ಹಣವನ್ನು ಈ ಹಿಂದಿನ ಮುಖ್ಯಮಂತ್ರಿ ಜಗನ್‌ ರೆಡ್ಡಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ತೆಲುಗು ದೇಶಂ ಪಕ್ಷ (TDP), ವಿಶಾಖಪಟ್ಟಣಂನ (Vishakhapatnam) ಋಷಿಕೊಂಡದ ಮೇಲೆ ನಿರ್ಮಿಸಲಾದ ಕಟ್ಟಡಗಳ ಡ್ರೋನ್ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಮೂಲಕ ಇದನ್ನು ಸಾರ್ವಜನಿಕರ ಗಮನಕ್ಕೆ ತಂದಿದೆ.

ಹಿಂದಿನ ವೈಎಸ್‌ಆರ್‌ಸಿ ಆಡಳಿತದಲ್ಲಿ ಋಷಿಕೊಂಡ ಮೇಲೆ ನಿರ್ಮಿಸಲಾದ ಕಟ್ಟಡಗಳಿಗೆ ಭೀಮಿಲಿ ಶಾಸಕ ಗಂಟಾ ಶ್ರೀನಿವಾಸ ರಾವ್ ಭೇಟಿ ನೀಡಿದಾಗ ಋಷಿಕೊಂಡ ಅರಮನೆ ವಿವಾದ ಭುಗಿಲೆದ್ದಿತು. ಟಿಡಿಪಿ ನಾಯಕರು ಈ ಯೋಜನೆಯ ಸ್ವರೂಪ ಮತ್ತು ಪ್ರಕೃತಿಯ ಮೇಲೆ ಇದರ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿರುವ ಟಿಡಿಪಿ ನಾಯಕರು, ‘ಋಷಿಕೊಂಡ ಅರಮನೆ’ ಎಂದು ಕರೆಯಲ್ಪಡುವ ಈ ಅರಮನೆಯನ್ನು ಅಕ್ರಮವಾಗಿ ಮತ್ತು ರಹಸ್ಯವಾಗಿ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ. ಭೀಮಿಲಿ ಶಾಸಕ ಗಂಟಾ ಶ್ರೀನಿವಾಸ ರಾವ್ ಅವರು ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿ) ಆಡಳಿತದಿಂದ ಋಷಿಕೊಂಡದ ಮೇಲೆ ನಿರ್ಮಿಸಲಾದ ಕಟ್ಟಡಗಳಿಗೆ ಭೇಟಿ ನೀಡಿದ ಈ ವಿಷಯ ಹೆಚ್ಚು ಚರ್ಚೆಗೆ ಕಾರಣವಾಯಿತು. ಈ ಕಟ್ಟಡಗಳನ್ನು ‘ರಾಜ ಮಹಲ್’ ಎಂದು ಬಣ್ಣಿಸಿರುವ ಟಿಡಿಪಿ ನಾಯಕ ನಾರಾ ಲೋಕೇಶ್, ಸಾರ್ವಜನಿಕ ನಿಧಿಯ ದುರುಪಯೋಗದ ಬಗ್ಗೆ ದನಿ ಎತ್ತಿದ್ದಾರೆ.

ಋಷಿಕೊಂಡ ನಿರ್ಮಾಣ

ಸಚಿವ ನಾರಾ ಲೋಕೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ತಮ್ಮ ಕಳವಳವನ್ನು ವ್ಯಕ್ತಪಡಿಸಿ, “ಬಡವರು ತಮ್ಮ ಮಕ್ಕಳ ತಲೆಯ ಮೇಲೆ ಸೂರು ನಿರ್ಮಿಸಲು ಹೆಣಗಾಡುತ್ತಿದ್ದರೆ, ಅವರ ಹಣದಲ್ಲಿ ಜಗನ್‌ ಅರಮನೆಯನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಲಾಗುವುದುʼʼ ಎಂದಿದ್ದಾರೆ. 9.88 ಎಕರೆ ಜಮೀನಿನಲ್ಲಿ ಕಟ್ಟಡವು 5 ಎಕರೆಯಲ್ಲಿ ಇರಬೇಕು, ಉಳಿದ ಪ್ರದೇಶವು ಭೂದೃಶ್ಯ ಮತ್ತು ಪಾರ್ಕಿಂಗ್ ಪ್ರದೇಶವಾಗಿರಬೇಕು ಎಂದು ಹೇಳಲಾಗಿತ್ತು. ಆದರೆ ಬೆಟ್ಟವನ್ನು 15 ಎಕರೆ ಹೆಚ್ಚುವರಿಯಾಗಿ ಅಗೆದಿರುವುದು ದೊಡ್ಡ ಉಲ್ಲಂಘನೆಯಾಗಿದೆ ಎಂದವರು ತಿಳಿಸಿದ್ದಾರೆ.


ಇದನ್ನೂ ಓದಿ: UGC-NET: ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿರುವ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಕೆ ತಡೆಯುತ್ತಿಲ್ಲ? ರಾಹುಲ್‌ ಗಾಂಧಿ ವ್ಯಂಗ್ಯ

ಜಗನ್‌ ಪಕ್ಷದ ಪ್ರತಿಪಾದನೆ ಏನು?

ವಿಶಾಖಪಟ್ಟಣಂನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನು ಈ ಪುನರಾಭಿವೃದ್ಧಿ ಯೋಜನೆ ಹೊಂದಿದೆ ಎಂದು ಜಗನ್ ನೇತೃತ್ವದ ಪಕ್ಷವು ಪ್ರತಿಪಾದಿಸಿದೆ. ಈ ಆಸ್ತಿ ಸರ್ಕಾರಿ ಸ್ವಾಮ್ಯದಲ್ಲಿದೆ, ಖಾಸಗಿಯಲ್ಲ ಎಂದು ಹೇಳಿರುವ ಪಕ್ಷದ ಪ್ರಮುಖರು, ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿ ವಿಶಾಖಪಟ್ಟಣಕ್ಕೆ ಭೇಟಿ ನೀಡಿದಾಗ ಇದನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈ ನಡುವೆಯೇ ಯೋಜನೆಯು ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳನ್ನು ಉಲ್ಲಂಘಿಸಿದ ಕಾರಣದಿಂದ ಪರಿಸರವಾದಿಗಳಿಂದಲೂ ವ್ಯಾಪಕ ವಿರೋಧವನ್ನು ಎದುರಿಸುತ್ತಿದೆ.

ಹೇಗಿದೆ ಈ ಅರಮನೆ?

9.88 ಎಕರೆ ಸಮುದ್ರಾಭಿಮುಖ ಸೈಟ್‌ನಲ್ಲಿ ಹರಡಿರುವ ಋಷಿಕೊಂಡ ಅರಮನೆಯು ಒಟ್ಟು 1,41,433 ಚದರ ಮೀಟರ್‌ಗಳ ನಿರ್ಮಾಣ ಪ್ರದೇಶದೊಂದಿಗೆ 12 ಬೆಡ್‌ ರೂಮ್‌ಗಳನ್ನು ಹೊಂದಿದೆ. ಮೂರು ಮಹಲುಗಳನ್ನು ರಚಿಸಲು ರಮಣೀಯವಾದ ಋಶಿಕೊಂಡ ಬೆಟ್ಟಗಳನ್ನು ಧ್ವಂಸಪಡಿಸಲಾಗಿದೆ. ಕೆಲವು ವಾಶ್‌ರೂಮ್‌ಗಳಂತೂ 480 ಚದರ ಅಡಿ ದೊಡ್ಡದಾಗಿದೆ. ಮೀಟಿಂಗ್ ಹಾಲ್‌ಗಳು 7,266 ಚದರ ಮೀಟರ್‌ ವ್ಯಾಪಿಸಿದೆ!

ಆಮದು ಮಾಡಿದ ದುಬಾರಿ ಮಾರ್ಬಲ್‌ಗಳನ್ನು ಬಳಸಿದ್ದು, ವಿಶಾಲವಾದ ಕಾರಿಡಾರ್‌ಗಳನ್ನು ಒಳಗೊಂಡಿದೆ. ವಾಲ್-ಟು-ವಾಲ್ ಸ್ಕ್ರೀನ್ ಹೊಂದಿರುವ ಹೋಮ್ ಥಿಯೇಟರ್ ಬ್ಲಾಕ್‌ ಇದರ ಮತ್ತೊಂದು ಪ್ರಮುಖ ಅಂಶವಾಗಿದೆ. ಸರ್ಕಾರವು ಲ್ಯಾಂಡ್‌ಸ್ಕೇಪಿಂಗ್‌ನಲ್ಲಿ 50 ಕೋಟಿ ರೂ. ಮತ್ತು ಒಳಾಂಗಣ ಅಲಂಕಾರಕ್ಕಾಗಿ 33 ಕೋಟಿ ರೂ. ವೆಚ್ಚ ಮಾಡಿದೆ ಎನ್ನಲಾಗಿದೆ. ರೆಸ್ಟ್ ರೂಮ್ಗ‌ಳನ್ನು ಒಳಗೊಂಡಂತೆ ಸಂಪೂರ್ಣ ಸಂಕೀರ್ಣದ ಉದ್ದಕ್ಕೂ ಸೆಂಟ್ರಲ್‌ ಹವಾನಿಯಂತ್ರಣವಿದೆ. ಸಮುದ್ರದ ನೋಟವನ್ನು ಹೊಂದಿರುವ ಡೈನಿಂಗ್ ಹಾಲ್, ಪ್ರತಿ ಮಲಗುವ ಕೋಣೆಯಲ್ಲಿ 12 ಹಾಸಿಗೆಗಳಿವೆ. ಸ್ಪಾ ಸೇವೆಗಳೊಂದಿಗೆ ಸ್ನಾನಗೃಹಗಳು ವಿಶೇಷ ವೈಶಿಷ್ಟ್ಯಗಳಿಂದ ಕೂಡಿದೆ.

Continue Reading
Advertisement
Job Alert
ಉದ್ಯೋಗ19 mins ago

Job Alert: ಗಮನಿಸಿ: ಗ್ರಾಮೀಣ ಬ್ಯಾಂಕ್‌ನ 9,995 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ನಾಳೆ ಕೊನೆಯ ದಿನ

Kannada New Movie Kenda in premier In world wide
ಸ್ಯಾಂಡಲ್ ವುಡ್23 mins ago

Kannada New Movie: ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ `ಕೆಂಡ’!

Orange Peel Benefits
ಆರೋಗ್ಯ24 mins ago

Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

Shivamogga News
ಕರ್ನಾಟಕ24 mins ago

Shivamogga News: ಶಿವಮೊಗ್ಗದಲ್ಲಿ ಆಂಬುಲೆನ್ಸ್-ಬೈಕ್‌ ಡಿಕ್ಕಿ; ಸ್ಥಳದಲ್ಲೇ ಮೂವರ ಸಾವು

IND vs SA Final
ಕ್ರೀಡೆ27 mins ago

IND vs SA Final: ಫೈನಲ್​ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ನಡುಕ ಹುಟ್ಟಿಸಿದ ಅಂಪೈರ್​!

Kalki 2898 AD box office day 2 prediction Prabhas
ಟಾಲಿವುಡ್36 mins ago

Kalki 2898 AD: ಎರಡನೇ ದಿನವೂ ಒಳ್ಳೆಯ ಗಳಿಕೆ ಕಂಡ  ‘ಕಲ್ಕಿ 2898 ಎಡಿ’ ಸಿನಿಮಾ!

US Presidential Election
ವಿದೇಶ52 mins ago

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

IND vs SA Final
ಕ್ರೀಡೆ54 mins ago

IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

Sadhguru Jaggi Vasudev
ಆರೋಗ್ಯ54 mins ago

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Kannada New Movie niveditha Shivarajkumar frefly cinema sudharani join
ಸಿನಿಮಾ1 hour ago

Kannada New Movie: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ22 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌