Christmas celebration | ಕ್ರಿಸ್‌ಮಸ್‌ ಸಂಭ್ರಮಾಚರಣೆಗೆ ಭಾರತದ ಈ ಎಲ್ಲ ತಾಣಗಳು ಬೆಸ್ಟ್‌! - Vistara News

ಪ್ರವಾಸ

Christmas celebration | ಕ್ರಿಸ್‌ಮಸ್‌ ಸಂಭ್ರಮಾಚರಣೆಗೆ ಭಾರತದ ಈ ಎಲ್ಲ ತಾಣಗಳು ಬೆಸ್ಟ್‌!

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂದರ್ಭ ಬಹುತೇಕ ಎಲ್ಲ ಖ್ಯಾತ ಪ್ರವಾಸೀ ತಾಣಗಳು ಜನರಿಂದ ತುಂಬಿ ತುಳುಕುತ್ತವೆ.  ನಮ್ಮ ದೇಶದಲ್ಲಿಯೇ ಕ್ರಿಸ್‌ಮಸ್‌ನ ಸಂಭ್ರಮವನ್ನು ನೋಡಲು ಸಾಕಷ್ಟು ತಾಣಗಳಿವೆ. ಹಬ್ಬದ ಮೂಡನ್ನು ತರಿಸುವ ಇಂತಹ ಜಾಗಗಳು ಯಾವುವು ನೋಡೋಣ.

VISTARANEWS.COM


on

christmas celebration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವರ್ಷಾಂತ್ಯದಲ್ಲಿ ಬರುವ ಕ್ರಿಸ್‌ಮಸ್‌ ಒಂದು ಬಗೆಯ ಖುಷಿ, ಸಡಗರಗಳನ್ನು ಎಲ್ಲೆಡೆ ಚಿಮ್ಮಿ, ವರ್ಷವೊಂದನ್ನು ಅದ್ಭುತವಾಗಿ, ಮುಗಿಸಿದ ತೃಪ್ತಿಯೊಂದಿಗೆ ಮುಂದಿನ ಹೊಸವರ್ಷಕ್ಕೆ ಒಂದಿಷ್ಟು ನಿರೀಕ್ಷೆಯನ್ನೂ ಹುಟ್ಟು ಹಾಕುವ ಸಂಭ್ರಮಾಚರಣೆ. ವರ್ಷಪೂರ್ತಿ ದುಡಿದು ಸುಸ್ತಾಗಿ, ಬದಲಾವಣೆ ಬಯಸುವ ಎಲ್ಲ ಜೀವಗಳನ್ನು ಈ ಕ್ರಿಸ್‌ಮಸ್‌ ಸಡಗರ ಒಂದಿಷ್ಟು ರಿಲ್ಯಾಕ್ಸ್‌ ಮಾಡಿಸಿ ಮುಂದಿನ ವರ್ಷಕ್ಕೆ, ಮುಂದಿನ ಕೆಲಸಗಳಿಗೆ ತಯಾರು ಮಾಡುತ್ತದೆ. ಇಂತಹ ಸಂದರ್ಭ ಕೈಯಲ್ಲಿ ಸಾಕಷ್ಟು ರಜೆಗಳನ್ನು ಇಟ್ಟುಕೊಂಡು ಬಹುತೇಕರು ಎಲ್ಲಿಗೆ ಹೋಗೋಣ ಎಂದು ತಲೆಕೆಡಿಸಿಕೊಂಡು ಕೊನೇ ಕ್ಷಣದಲ್ಲಿ ಯೋಜನೆಗಳನ್ನು ಹಾಕಿಕೊಂಡು ಹೊರಟು ನಿಲ್ಲುವವರೂ ಇದ್ದಾರೆ. ಹಾಗಾಗಿಯೇ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂದರ್ಭ ಬಹುತೇಕ ಎಲ್ಲ ಖ್ಯಾತ ಪ್ರವಾಸೀ ತಾಣಗಳು ಜನರಿಂದ ತುಂಬಿ ತುಳುಕುತ್ತವೆ.  ನಮ್ಮ ದೇಶದಲ್ಲಿಯೇ ಕ್ರಿಸ್‌ಮಸ್‌ನ ಸಂಭ್ರಮವನ್ನು ನೋಡಲು ಸಾಕಷ್ಟು ತಾಣಗಳಿವೆ. ಹಬ್ಬದ ಮೂಡನ್ನು ತರಿಸುವ ಇಂತಹ ಜಾಗಗಳು ಯಾವುವು ನೋಡೋಣ.

Christmas celebration

ದಿಯು ದಾಮನ್‌, ದಾದ್ರ ಮತ್ತು ನಗರ್‌ ಹವೇಲಿ: ಕೇಂದ್ರಾಡಳಿತ ಪ್ರದೇಶಗಳಾದ ದಿಯು ದಾಮನ್‌, ದಾದ್ರಾ ಹಾಗೂ ನಗರ್‌ ಹವೇಲಿಯಲ್ಲಿ ಸುತ್ತಾಡಿ ಬರಲು ಕ್ರಿಸ್‌ಮಸ್‌ನಂತಹ ಇನ್ನೊಂದು ಅತ್ಯುತ್ತಮ ಸಮಯ ಇನ್ನೊಂದಿಲ್ಲ. ಈ ಇಡೀ ಪರಿಸರವೇ ಕ್ರಿಸ್‌ಮಸ್‌ಗಾಗಿ ಶೃಂಗಾರಗೊಳ್ಳುತ್ತದೆ. ಇಲ್ಲಿನ ಎಲ್ಲಾ ಚರ್ಚ್‌ಗಳಲ್ಲೂ ಮಧ್ಯರಾತ್ರಿಯ ಸಂಭ್ರಮಾಚರಣೆಗಳೂ ನಡೆಯುತ್ತವೆ. ಪೋರ್ಚುಗೀಸ್‌ ನೃತ್ಯಗಳು, ಎಲ್ಲೆಡೆ ಕ್ರಿಸ್‌ಮಸ್‌ ಪಾರ್ಟಿಗಳು, ಶಾಪಿಂಗ್‌ ಉತ್ಸವಗಳು ಧಾಂ ಧೂಂ ಆಗಿ ನಡೆಯುತ್ತವೆ. ಕೆಂಪು, ಹಸಿರು ಹಾಗೂ ಬಿಳಿ ಬಣ್ಣಗಳಲ್ಲಿ ಸಜ್ಜಾಗಿ ರಾತ್ರಿ ಪಳಪಳ ವಿದ್ಯುದ್ದೀಪಗಳಿಂದ ಇದು ಝಗಮಗಿಸುತ್ತದೆ. ಒಂದು ವರ್ಷವನ್ನು ಚಂದಕ್ಕೆ ಸ್ಮರಣೀಯವಾಗಿ ಮುಗಿಸಲು ಇದಕ್ಕಿಂದ ಚಂದದ ಜಾಗ ಬೇಕಿಲ್ಲ.

Christmas celebration

ಗೋವಾ: ಗೋವಾದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕೆಂದರೆ ಈ ಸಮುದ್ರ ತೀರದ ನಗರಿಯೇ ಹಾಗೆ. ವರ್ಷಪೂರ್ತಿ ಸಡಗರ ಮೂಡಿನಲ್ಲೇ ಇರುತ್ತದೆ. ಆದರೆ, ಕ್ರಿಸ್‌ಮಸ್‌ ಹಾಗೂ ಹೊಸವರ್ಷಗಳಲ್ಲಿ ಸ್ವಲ್ಪ ಹೆಚ್ಚೇ ಇರುತ್ತದೆ. ನೀವು ಪಾರ್ಟಿಪ್ರಿಯರಾಗಿದ್ದಲ್ಲಿ, ಕ್ರಿಸ್‌ಮಸ್‌, ಹೊಸ ವರ್ಷಗಳನ್ನು ಗೆಳೆಯರ ಗುಂಪಿನಲ್ಲಿ ಮಸ್ತಾಗಿ ಸಂಭ್ರಮಿಸುವ ಮೂಡಿರುವ ಮಂದಿ ಎಂದಾದಲ್ಲಿ ಒಮ್ಮೆಯಾದರೂ ಕ್ರಿಸ್‌ಮಸ್‌ ಸಮಯದಲ್ಲಿ ಗೋವಾಕ್ಕೆ ಹೋಗಬೇಕು. ಕ್ರಿಸ್‌ಮಸ್‌ಗಾಗಿಯೇ ಇಲ್ಲಿ ಏರ್ಪಡುವ ಪಾರ್ಟಿಗಳು, ಚರ್ಚ್‌ಗಳಲ್ಲಿರುವ ವಿಶೇಷ ಅಲಂಕಾರಗಳು, ಝಗಮಗಿಸುವ ರಾತ್ರಿಗಳು ಎಲ್ಲವೂ ಬೇರೆಯದೇ ಲೋಕಕ್ಕೆ ನಿಮ್ಮನ್ನು ಕೊಂಡೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಕೊನೆಯ ಕ್ಷಣದ ಪ್ಲಾನಿಂಗ್‌ ಖಂಡಿತ ಫ್ಲಾಪ್‌ ಆಗಬಹುದು. ಮೊದಲೇ ಪ್ಲಾನ್‌ ಮಾಡಿಕೊಂಡಿದ್ದರೆ ಒಳ್ಳೆಯದು.

Christmas celebration

ಶಿಲ್ಲಾಂಗ್‌: ಮೇಘಾಲಯದ ಶಿಲ್ಲಾಂಗ್‌ ಕೂಡಾ ಕ್ರಿಸ್‌ಮಸ್‌ಗೆ ಹೇಳಿ ಮಾಡಿಸಿದ ಜಾಗ. ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪ್ರಮುಖ ಹಾಗೂ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಮಳೆನಾಡು ಮೇಘಾಲಯದ ಶಿಲ್ಲಾಂಗ್‌ ಕ್ರಿಸ್‌ಮಸ್‌ನಲ್ಲಿ ಕೆಂಪೇರುತ್ತದೆ. ಇಲ್ಲಿನ ಚರ್ಚ್‌ಗಳು, ರಸ್ತೆಗಳು, ಬದಿಬದಿಯಲ್ಲಿ ಸಾಲಾಗಿ ಚಳಿಗಾಲಕ್ಕೆ ಅರಳಿ ನಿಂತ ಹೂಗಳ ಜೊತೆಗೆ ಸುಂದರವಾಗಿ ಕಾಣುತ್ತದೆ. ವರ್ಷಪೂರ್ತಿ ಎಡೆಬಿಡದೆ ಸುರಿವ ಮಳೆಗೆ ತಣ್ಣಗೆ ಮಲಗಿರುವ ಊರು ಝಗಮಗಿಸಿ ಚುರುಕಾಗುವುದು ಕ್ರಿಸ್‌ಮಸ್‌ಗೇ.

ಇದನ್ನೂ ಓದಿ | Christmas Decoration | ಕ್ರಿಸ್ಮಸ್‌ ಆಕರ್ಷಕ ಡೆಕೋರೇಷನ್‌ಗೆ ಇಲ್ಲಿದೆ 5 ಐಡಿಯಾ

Christmas celebration

ಪಾಂಡಿಚೇರಿ: ಪಾಂಡಿಚೇರಿ ಎಂಬ ಪುಟಾಣಿ ನಗರ ಖಂಡಿತ ಪ್ರವಾಸಿಗರಲ್ಲೊಂದು ಅದ್ಭುತ ಅನುಭವ ಕಟ್ಟಿಕೊಡುತ್ತದೆ. ಪುಟಾಣಿ ಫ್ರಾನ್ಸ್‌ ಎಂದು ಕರೆಯಲ್ಪಡುವ ಇದು ನಿಜಕ್ಕೂ ತನ್ನ ಶುಚಿತ್ವ, ಒಪ್ಪ ಓರಣ, ಹಳೇ ಫ್ರೆಂಚ್‌ ವಸಾಹತುಶಾಹೀ ಕಟ್ಟಡಗಳ ಶೈಲಿಯಿಂದ ವಿಶೇಷವಾಗಿ ಆಕರ್ಷಿಸುತ್ತದೆ. ಧ್ಯಾನ ಕೇಂದ್ರಗಳು, ಆಶ್ರಮಗಳಿಂದ ಹಿಂದೂಗಳನ್ನು ಸೆಳೆದಷ್ಟೇ, ಕ್ರಿಸ್‌ಮಸ್‌ಗೂ ಇಲ್ಲೆ ಪಾತಿನಿಧ್ಯವಿದೆ. ಇಲ್ಲಿನ ಚರ್ಚ್‌ಗಳು ಕ್ರಿಸ್‌ಮಸ್‌ಗೆಂದೇ ವಿಶೇಷವಾಗಿ ಸಜ್ಜಾಗಿ, ನಗರವಿಡೀ ವಿದ್ಯುದ್ದೀಪಗಳಿಂದ ಝಗಮಗಿಸುತ್ತದೆ. ಬೆಂಗಳೂರಿನಿಂದ ದಿಢೀರ್‌ ಭೇಟಿ ಕೊಡಬಹುದಾದ ಅದ್ಭುತ ಜಾಗವಿದು.

Christmas celebration

ಕೇರಳ: ಕೇರಳವನ್ನು ನೋಡಲು ಇಂಥದ್ದೇ ಸಮಯ ಬೇಕೆಂದಿಲ್ಲ. ಕೇರಳದ ಬಹುತೇಕ ಎಲ್ಲ ಪ್ರವಾಸೀ ತಾಣಗಳೂ ರಿಸ್‌ಮಸ್‌ ಸಂದರ್ಭ ಭೆಟಿಗೆ ಯೋಗ್ಯವೇ. ಯಾಕೆಂದರೆ, ಕೇರಳದ ಇನ್ನೊಂದು ಆಯಾಮವನ್ನು ಕಣ್ತುಂಬಿಕೊಳ್ಳಲು ಕ್ರಿಸ್‌ಮಸ್‌ ಸಂದರ್ಭ ಭೇಟಿಕೊಡಬೇಕು. ಇಲ್ಲಿನ ಚರ್ಚ್‌ಗಳಲ್ಲಿ ನಡೆವ ಪ್ರಾರ್ಥನೆಗಳು, ವಿಶೇಷ ಅಲಂಕಾರಗಳು, ಅಲಂಕಾರಗಳ ಹಿನ್ನೆಲೆಯಲ್ಲಿ, ಸಹಜ ಪ್ರಾಕೃತಿಕ ಸೌಂದರ್ಯ, ನೀಲಿ ಹಿನ್ನೀರಿನ ಹಿನ್ನೆಲೆಯಲ್ಲಿ ಅಲಂಕೃತ ಊರುಗಳು ನೋಡುವುದೇ ಒಂದು ಸಡಗರ!

ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಗೆ ರಾಜಧಾನಿ ರೆಡಿ; ಪ್ರೇಮಿಗಳು, ಪತಿ-ಪತ್ನಿ ಡ್ಯಾನ್ಸ್‌ಗೆ ಸ್ಪೆಷಲ್ ಫ್ಲೋರ್, ರಕ್ಷಣೆಗೆ ಲೇಡಿ ಬೌನ್ಸರ್ಸ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರವಾಸ

Uttarkashi Tour: ಪ್ರವಾಸ ಪ್ರಿಯರಿಗೆ ಸ್ವರ್ಗ ಉತ್ತರಕಾಶಿಗೆ ಹೋಗಲು ಉತ್ತಮ ಸಮಯ ಯಾವುದು?

ಹಿಮಾಲಯದ ನಿಧಿಯ ನಿಜವಾದ ಚೈತನ್ಯವನ್ನು ಅನುಭವಿಸಲು ಉತ್ತರಕಾಶಿಗೊಮ್ಮೆ ಭೇಟಿ ನೀಡಲೇಬೇಕು. ಉತ್ತರಕಾಶಿಗೆ (Uttarkashi Tour) ಭೇಟಿ ನೀಡುವ ಮುನ್ನ ಅಲ್ಲಿನ ವಿವಿಧ ಋತುಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಈ ಮಾಂತ್ರಿಕ ಸ್ಥಳಕ್ಕೆ ಅದ್ಭುತ ಪ್ರವಾಸಕ್ಕೆ ಹೋಗಲು ಉತ್ತಮ ಸಮಯ ಯಾವುದು ಎಂಬುದನ್ನು ನಿರ್ಧರಿಸಬಹುದು.

VISTARANEWS.COM


on

By

Uttarkashi Tour
Koo

ಪ್ರಕೃತಿ ಪ್ರಿಯರು (nature lovers), ಸಾಹಸ ಕ್ರೀಡೆಯನ್ನು ( adventure sports) ಇಷ್ಟಪಡುವವರು ನೀವಾಗಿದ್ದರೆ ಹಿಮಾಲಯದಲ್ಲಿ ನೆಲೆಯಾಗಿರುವ ಉತ್ತರಕಾಶಿಗೊಮ್ಮೆ (Uttarkashi Tour) ಭೇಟಿ ನೀಡಲೇಬೇಕು. ಆಧ್ಯಾತ್ಮಿಕ ಸನ್ನಿಧಿಯಲ್ಲಿ ಶಾಂತವಾದ ಪರಿಸರದಲ್ಲಿ ಕಾಲ ಕಳೆಯಲೆಂದೇ ಇಲ್ಲಿಗೆ ದೇಶ ವಿದೇಶಗಳಿಂದ ಅನೇಕ ಪ್ರವಾಸಿಗರು ಬರುತ್ತಾರೆ. ಎತ್ತರದ ಪರ್ವತ ಶಿಖರಗಳು, ಪವಿತ್ರ ದೇವಾಲಯಗಳು ಮತ್ತು ಪ್ರಾಚೀನ ನದಿಗಳೊಂದಿಗೆ ವಿಸ್ಮಯಕಾರಿ ಅನುಭವವನ್ನು ಉತ್ತರಕಾಶಿಯು ಪ್ರಯಾಣಿಕರಿಗೆ ಒದಗಿಸುತ್ತದೆ. ಹಿಮಾಲಯದ ನಿಧಿಯ ನಿಜವಾದ ಚೈತನ್ಯವನ್ನು ಅನುಭವಿಸಲು ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು. ಉತ್ತರಕಾಶಿಗೆ ಭೇಟಿ ನೀಡುವ ಮುನ್ನ ಅಲ್ಲಿನ ವಿವಿಧ ಋತುಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಈ ಮಾಂತ್ರಿಕ ಸ್ಥಳಕ್ಕೆ ಅದ್ಭುತ ಪ್ರವಾಸಕ್ಕೆ ಹೋಗಲು ಉತ್ತಮ ಸಮಯ ಯಾವುದು ಎಂಬುದನ್ನು ನಿರ್ಧರಿಸಬಹುದು.

ಉತ್ತರಕಾಶಿಯ ಹವಾಮಾನವು ವರ್ಷವಿಡೀ ತೀವ್ರವಾಗಿ ಬದಲಾಗುತ್ತದೆ. ಇದು ಪ್ರವಾಸಿಗರಿಗೆ ಆಸಕ್ತಿದಾಯಕವಾಗಿರುತ್ತದೆ. ಯಾಕೆಂದರೆ ಪ್ರತಿ ಋತುವಿನಲ್ಲಿ ವಿಭಿನ್ನ ಅನುಭವಗಳನ್ನು ಇದು ನೀಡುತ್ತದೆ. ಹಿಮದಿಂದ ಆವೃತವಾದ ಚಳಿಗಾಲದಿಂದ ಹಿಡಿದು ವರ್ಣರಂಜಿತ ಬೇಸಿಗೆ, ಹಚ್ಚ ಹಸಿರಿನ ಮಳೆಗಾಲದಲ್ಲಿ ಈ ಸ್ಥಳದ ಸೌಂದರ್ಯವು ಒಂದಕ್ಕಿಂತ ಒಂದು ಮಿಗಿಲು ಎನ್ನುವಂತೆ ಭಾಸವಾಗುತ್ತದೆ.

Uttarkashi Tour
Uttarkashi Tour


ಚಳಿಗಾಲ

ಉತ್ತರಾಖಂಡವು ಅಕ್ಟೋಬರ್‌ನಿಂದ ಫೆಬ್ರುವರಿ ವರೆಗೆ ಚಳಿಗಾಲದ ಹೊದಿಕೆ ಹೊದ್ದುಕೊಳ್ಳುತ್ತದೆ. ಇದು ಪ್ರದೇಶದ ಪ್ರತಿಯೊಂದು ಭಾಗವನ್ನು ಹಿಮದ ಬಿಳಿ ಹೊದಿಕೆಯಲ್ಲಿ ಮುಳುಗಿಸುತ್ತದೆ. ಶಾಂತಿ ಮತ್ತು ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಈ ತಿಂಗಳುಗಳಲ್ಲಿ ತಾಪಮಾನವು ತುಂಬಾ ಕಡಿಮೆಯಾಗುತ್ತದೆ. ಹೀಗಾಗಿ ಕೆಲವರಿಗೆ ಇದು ಪ್ರವಾಸಕ್ಕೆ ಯೋಗ್ಯವಾದ ಸಮಯವಾಗುವುದಿಲ್ಲ. ಹಿಮದ ನಡುವೆ ಏಕಾಂತತೆಯನ್ನು ಬಯಸುವ ಅಥವಾ ಸ್ಕೀಯಿಂಗ್ ಅಥವಾ ಸ್ನೋಬೋರ್ಡಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಲು ಬಯಸುವವರು ಈ ಸಂದರ್ಭದಲ್ಲಿ ಭೇಟಿ ನೀಡಬಹುದು.


ವಸಂತ

ಮಾರ್ಚ್ ನಿಂದ ಮೇ ತಿಂಗಳಲ್ಲಿ ವಸಂತಕಾಲ. ಉತ್ತರಕಾಶಿಯ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶವು ಸ್ವರ್ಗವಾಗಿ ರೂಪಾಂತರಗೊಳ್ಳುತ್ತದೆ. ಎಲ್ಲದಕ್ಕೂ ಹೊಸ ಜೀವ ಬಂದಂತೆ ಕಾಣುತ್ತದೆ. ಹೇರಳವಾಗಿ ಅರಳುವ ರೋಡೋಡೆಂಡ್ರಾನ್ ಹೂವುಗಳೊಂದಿಗೆ ತಾಪಮಾನ ಹಿತವಾಗಿರುತ್ತದೆ. ಪ್ರಕೃತಿಯ ನಡುವೆ ನಡಿಗೆ, ಚಾರಣ, ಛಾಯಾಗ್ರಹಣ ಇತ್ಯಾದಿಗಳಿಗೆ ಇದು ಸೂಕ್ತ ಸಮಯವಾಗಿದೆ. ಸ್ಪಷ್ಟವಾದ ಆಕಾಶದ ಸಮಯದಲ್ಲಿ ಹಿಮದಿಂದ ಆವೃತವಾದ ಶಿಖರಗಳ ಅತ್ಯುತ್ತಮ ನೋಟವನ್ನು ಒದಗಿಸುತ್ತದೆ. ಆಹ್ಲಾದಕರ ವಾತಾವರಣವು ಪವಿತ್ರ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಯಾತ್ರಿಕರನ್ನು ಉತ್ತೇಜಿಸುತ್ತದೆ.

Uttarkashi Tour
Uttarkashi Tour


ಬೇಸಿಗೆ

ಬೇಸಿಗೆಯಲ್ಲಿ ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉತ್ತರಕಾಶಿಯು ಬೆಚ್ಚಗಿನ ಹಗಲು ಮತ್ತು ರಾತ್ರಿಗಳನ್ನು ಉಂಟು ಮಾಡುತ್ತದೆ. ಆದರೂ ಮರುಕಳಿಸುವ ಮಳೆಯು ಸುಡುವ ಶಾಖದಿಂದ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಈ ಅವಧಿಯು ವಿವಿಧ ರೀತಿಯ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತವಾಗಿದೆ.

ವಿಶೇಷವಾಗಿ ಹೆಚ್ಚಿನ ಎತ್ತರದಲ್ಲಿ ತಂಪಾದ ಗಾಳಿಯು ಹಗಲು ಮತ್ತು ರಾತ್ರಿಯಿಡೀ ಬೀಸುತ್ತದೆ, ಟ್ರೆಕ್ಕಿಂಗ್, ತೀರ್ಥಯಾತ್ರೆ ಪ್ರವಾಸಗಳಿಗೆ ಸಾಕಷ್ಟು ತಂಪಾಗಿರುವುದಿಲ್ಲ. ಆದರೆ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಬಹುದು, ಇದರಿಂದಾಗಿ ರಸ್ತೆ ತಡೆ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಯಾವಾಗ ಉತ್ತಮ ಸಮಯ ?

ಹವಾಮಾನ ಪರಿಸ್ಥಿತಿಗಳು ಮತ್ತು ಪ್ರವಾಸಿಗರ ಹರಿವನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ ನಿಂದ ಮೇ ವರೆಗೆ ಅಂದರೆ ವಸಂತ ಋತುವನ್ನು ಉತ್ತರಕಾಶಿಗೆ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಇದಕ್ಕೆ ಹಲವು ಕಾರಣಗಳೂ ಇವೆ.

ಆಹ್ಲಾದಕರ ಹವಾಮಾನ

ಈ ತಿಂಗಳುಗಳಲ್ಲಿ ತಾಪಮಾನ ಸೌಮ್ಯವಾಗಿರುತ್ತದೆ. ಟ್ರೆಕ್ಕಿಂಗ್, ಕ್ಯಾಂಪಿಂಗ್, ದೃಶ್ಯವೀಕ್ಷಣೆಯ ಮೂಲಕ ಹೊರಗಿನ ಪ್ರಪಂಚವನ್ನು ಆನಂದಿಸಲು ಅದ್ಭುತ ಅವಕಾಶಗಳನ್ನು ಸೃಷ್ಟಿಸುತ್ತದೆ. ಚಳಿಗಾಲದ ಶೀತ ಅಥವಾ ಬೇಸಿಗೆಯ ಬಿಸಿಲಿನ ಕಾರಣದಿಂದ ಪ್ರವಾಸ ಮಾಡಲಾಗದವರು ಈ ಸಮಯವನ್ನು ಉತ್ತರ ಕಾಶಿಗೆ ಭೇಟಿ ನೀಡಲು ಆಯ್ದುಕೊಳ್ಳಬಹುದು.

ಹೂಬಿಡುವ ಸಸ್ಯವರ್ಗ

ಈ ಅವಧಿಯಲ್ಲಿ ಉತ್ತರಾಖಂಡದ ಬೆಟ್ಟಗಳು ರೋಡೋಡೆಂಡ್ರಾನ್ ಹೂವುಗಳಿಂದ ತುಂಬಿರುತ್ತದೆ. ಮುಖ್ಯವಾಗಿ ಕೆಂಪು, ಗುಲಾಬಿ ಮತ್ತು ಬಿಳಿ ಬಣ್ಣಗಳಿಂದ ಚಿತ್ರ ಬಿಡಿಸಿದಂತೆ ಭಾಸವಾಗುತ್ತದೆ. ಅನೇಕ ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರನ್ನು ಸೆಳೆಯುತ್ತದೆ.


ಚಾರ್ ಧಾಮ್ ಯಾತ್ರೆ

ವಸಂತಕಾಲವು ಚಾರ್ ಧಾಮ್ ಯಾತ್ರೆಯ ಆರಂಭವನ್ನು ಸೂಚಿಸುತ್ತದೆ. ನಾಲ್ಕು ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥವನ್ನು ಇದು ಒಳಗೊಂಡಿದೆ.

ವಾಕ್‌ಬೌಟ್‌ಗಳಿಗೆ ಅವಕಾಶಗಳು

ಹಿಮವು ಕರಗಿ ನಡೆಯಲು ಅನೇಕ ಹಾದಿಗಳನ್ನು ತೆರೆಯುತ್ತದೆ. ಚಾರಣಿಗರು ಇದರ ಪ್ರಯೋಜನ ಪಡೆಯಬಹುದು. ಅಲ್ಲದೇ ಈ ಸಮಯದಲ್ಲಿ ದಯಾರಾ ಬುಗ್ಯಾಲ್, ದೋಡಿತಾಲ್ ಸರೋವರ, ಅಥವಾ ಗಂಗೋತ್ರಿ ರಾಷ್ಟ್ರೀಯ ಉದ್ಯಾನಕ್ಕೂ ಭೀತಿ ನೀಡಬಹುದು.

ಪ್ರಯಾಣಕ್ಕೆ ಹೊರಡುವ ಮುನ್ನ

ಉತ್ತರಕಾಶಿಗೆ ಭೇಟಿ ನೀಡುವ ಮುನ್ನ ಕೆಲವೊಂದು ವಿಷಯಗಳು ನೆನಪಿನಲ್ಲಿರಲಿ.

ಸ್ಮಾರ್ಟ್ ಪ್ಯಾಕ್ ಮಾಡಿ

ಯಾವ ಋತುವಿನಲ್ಲಿ ಭೇಟಿ ನೀಡುತ್ತಿರೋ ಅದಕ್ಕೆ ತಕ್ಕುದಾಗಿ ಬ್ಯಾಗ್ ಪ್ಯಾಕ್ ಮಾಡಿ. ಅಗತ್ಯವಿದ್ದರೆ ಬೆಚ್ಚಗಿನ ಬಟ್ಟೆಗಳನ್ನು ಇರಿಸಿಕೊಳ್ಳಿ. ಸನ್ ಗ್ಲಾಸ್, ಗಟ್ಟಿಮುಟ್ಟಾದ ಹೈಕಿಂಗ್ ಬೂಟುಗಳು ಇರಲಿ.

ಇದನ್ನೂ ಓದಿ: Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

ಹವಾಮಾನ ಅಪ್‌ಡೇಟ್‌

ಹವಾಮಾನ ಮುನ್ಸೂಚನೆ ಮತ್ತು ರಸ್ತೆಯ ಸ್ಥಿತಿಗತಿಗಳ ಮೇಲೆ ಗಮನವಿರಲಿ. ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ. ಯಾಕೆಂದರೆ ಇದು ಪ್ರಯಾಣಿಸುವ ಸಮಯ, ದಾರಿಯ ಬಗ್ಗೆ ಸ್ಪಷ್ಟ ಸೂಚನೆಯನ್ನು ನೀಡುತ್ತದೆ.

ಸ್ಥಳೀಯ ಪದ್ಧತಿಗಳನ್ನು ಗೌರವಿಸಿ

ಉತ್ತರಕಾಶಿ ಒಂದು ಭಕ್ತಿ, ಸಂಪ್ರದಾಯದ ಕೇಂದ್ರವಾಗಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವಾಗ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಿ ಮತ್ತು ಅಲ್ಲಿನ ಸಂಪ್ರದಾಯ, ನಿಯಮಗಳನ್ನು ಪಾಲಿಸಿ.

Continue Reading

ದೇಶ

Krishna Janmastami 2024: ಭೇಟಿ ನೀಡಲೇಬೇಕಾದ ವಿಶ್ವ ಪ್ರಸಿದ್ಧ 5 ಕೃಷ್ಣ ದೇವಾಲಯಗಳಿವು

ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು (Krishna janmastami 2024) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವು ಕೃಷ್ಣನ ದೇಗುಲಗಳು ಇದರ ಆಚರಣೆಗೆ ವಿಶ್ವ ಪ್ರಸಿದ್ಧಿಯನ್ನು ಗಳಿಸಿವೆ. ಜನ್ಮಾಷ್ಟಮಿ ಸಮಯದಲ್ಲಿ ಅತ್ಯಂತ ಸುಂದರವಾಗಿ ಅಲಂಕರಿಸಲ್ಪಡುವ ಆ ದೇವಾಲಯಗಳು ಯಾವುದು, ಎಲ್ಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Krishna Janmastami 2024
Koo

ಕೃಷ್ಣನ ಜನ್ಮದಿನವನ್ನು ಸೋಮವಾರದಿಂದ ಮೂರು ದಿನಗಳ ಕಾಲ ದೇಶಾದ್ಯಂತ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ (Krishna janmastami 2024) ಈ ವಿಶೇಷ ಸಂದರ್ಭದಲ್ಲಿ ಭೇಟಿ ನೀಡಬಹುದಾದ ದೇಶದ ಐದು ಸುಪ್ರಸಿದ್ಧ ಶ್ರೀಕೃಷ್ಣ ದೇವಾಲಯಗಳಿವೆ (sri krishna temple). ಇಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯು (janmastami) ಅತ್ಯಂತ ವೈಭವಾಗಿ ನಡೆಯುತ್ತದೆ.

Krishna janmastami
Krishna janmastami


1. ದ್ವಾರಕಾಧೀಶ ದೇವಾಲಯ, ದ್ವಾರಕಾ

ಗುಜರಾತಿನ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು ಜಗತ್ ಮಂದಿರ ಎಂದೂ ಕರೆಯಲಾಗುತ್ತದೆ. ದ್ವಾರಕಾಧೀಶ ದೇವಾಲಯವನ್ನು 2,500 ವರ್ಷಗಳ ಹಿಂದೆ ಶ್ರೀಕೃಷ್ಣನ ಮೊಮ್ಮಗ ವಜ್ರನಾಭ್ ಸ್ಥಾಪಿಸಿದನೆಂದು ನಂಬಲಾಗಿದೆ. ಸಣ್ಣ ಬೆಟ್ಟದ ಮೇಲಿರುವ ಈ ದೇವಾಲಯವನ್ನು ಭಕ್ತರು 50 ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು. ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜನ್ಮಾಷ್ಟಮಿ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ.


2. ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯ, ಮಥುರಾ

ಉತ್ತರ ಪ್ರದೇಶದ ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯವಿದೆ. ಇದು ಶ್ರೀಕೃಷ್ಣನ ತಂದೆತಾಯಿಗಳಾದ ವಸುದೇವ ಮತ್ತು ದೇವಕಿಯನ್ನು ಅವನ ಮಾವ ಕಂಸನಿಂದ ಬಂಧಿಸಲಾಗಿದೆ ಎನ್ನಲಾಗುವ ಸ್ಥಳದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಸಂಕೀರ್ಣವು ಶ್ರೀಕೃಷ್ಣನಿಗೆ ಸಮರ್ಪಿತವಾದ ಹಲವಾರು ದೇವಾಲಯಗಳನ್ನು ಒಳಗೊಂಡಿದೆ. ಇಲ್ಲಿ ಜನ್ಮಾಷ್ಟಮಿ ಸಮಯದಲ್ಲಿ ಸುಂದವಾಗಿ ಅಲಂಕರಿಸಲಾಗುತ್ತದೆ.


3. ಬಂಕೆ ಬಿಹಾರಿ ದೇವಾಲಯ, ಉತ್ತರ ಪ್ರದೇಶ

ಉತ್ತರ ಪ್ರದೇಶದ ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯವು ಭಾರತದಲ್ಲಿನ ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ವೃಂದಾವನದ ಏಳು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಜನ್ಮಾಷ್ಟಮಿ ಆಚರಣೆಯ ಸಮಯದಲ್ಲಿ ಭಕ್ತರು ಸಾಂಪ್ರದಾಯಿಕವಾದ ಬಂಕೆ ಬಿಹಾರಿಯಲ್ಲಿ ಮಂಗಳ ಆರತಿಯಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ ದೇವರ ದರ್ಶನವು ಮಧ್ಯಾಹ್ನ ಎರಡು ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಗ್ಗೆ ಆರು ಗಂಟೆಯವರೆಗೆ ಮುಂದುವರಿಯುತ್ತದೆ.


4. ಗುರುವಾಯೂರು ಕೃಷ್ಣ ದೇವಾಲಯ, ಕೇರಳ

ದಕ್ಷಿಣದ ದ್ವಾರಕಾ ಎಂದೂ ಕರೆಯಲ್ಪಡುವ ಐತಿಹಾಸಿಕ ಕೃಷ್ಣ ದೇವಾಲಯವು ಕೇರಳದ ಗುರುವಾಯೂರಿನಲ್ಲಿದೆ. ಇದು ಇಂದಿಗೂ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಮುಖ್ಯ ದೇವಾಲಯವನ್ನು 1638ರಲ್ಲಿ ಪುನರ್ನಿರ್ಮಿಸಲಾಯಿತು ಎನ್ನಲಾಗುತ್ತದೆ. ದೇವಾಲಯದ ಒಳಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪದ ಶೈಲಿಯು ಪ್ರವಾಸಿಗರಿಗೆ ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಅತ್ಯಂತ ಸುಂದರ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು


5. ಉಡುಪಿ ಶ್ರೀ ಕೃಷ್ಣ ಮಠ

ನಮ್ಮ ರಾಜ್ಯದ ಉಡುಪಿಯ ಶ್ರೀಕೃಷ್ಣ ದೇವಾಲಯವು ಒಂದು ಅಪ್ರತಿಮ ಯಾತ್ರಾಸ್ಥಳವಾಗಿದೆ. ಶ್ರೀಕೃಷ್ಣನ ಸುಂದರವಾದ ವಿಗ್ರಹವೊಂದು ಅಲ್ಲಿ ಸ್ಥಾಪಿಸಲಾಗಿದೆ. ಜನ್ಮಾಷ್ಟಮಿ ಸಮಯದಲ್ಲಿ ಭವ್ಯವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತದೆ. ವಿಗ್ರಹವನ್ನು ಒಂಬತ್ತು ರಂಧ್ರಗಳ ಕಿಟಕಿ ಅಥವಾ ನವಗ್ರಹ ಕಿಟಿಕಿ ಮೂಲಕವೂ ಭಕ್ತರು ನೋಡುತ್ತಾರೆ. ವಿಟ್ಲ ಪಿಂಡಿ ಉತ್ಸವ ಮತ್ತು ಮೊಸರು ಕುಡಿಕೆ ಇಲ್ಲಿಯ ವಿಶೇಷ ಆಕರ್ಷಣೆ. ಹುಲಿ ವೇಷ ಕುಣಿತ ಜನರನ್ನು ರಂಜಿಸುತ್ತದೆ.

Continue Reading

ಪ್ರವಾಸ

Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದಾಗಿ ಛಾಯಾಗ್ರಹಣಕ್ಕೆ ಅಸಂಖ್ಯಾತ ಅವಕಾಶಗಳನ್ನು ಒದಗಿಸುವ ನಗರ ಹೈದರಾಬಾದ್ (Hyderabad Tour). ಪುರಾತನ ಸ್ಮಾರಕ, ಬಿಡುವಿಲ್ಲದ ಮಾರುಕಟ್ಟೆ, ಶಾಂತಿಯುತ ಪರಿಸರ ಹೀಗೆ ಇಲ್ಲಿನ ಪ್ರತಿಯೊಂದು ಪ್ರದೇಶವೂ ಛಾಯಾಗ್ರಾಹಕರನ್ನು ಸೆಳೆಯುವುದು. ಕೆಮರಾ ಲೆನ್ಸ್ ಮೂಲಕ ಸುಂದರ ನಗರದ ಕಥೆಯನ್ನು ಇಲ್ಲಿ ಹೆಣೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Hyderabad Tour
Koo

ಸುಂದರವಾಗಿ ಫೋಟೋಶೂಟ್ (photoshoot) ಮಾಡಿಕೊಳ್ಳಬೇಕು, ಜೊತೆಗೆ ಒಂದಷ್ಟು ಪ್ರವಾಸದ (tour guide) ಸವಿಯನ್ನು ಅನುಭವಿಸಬೇಕು ಎಂದು ಬಯಸುವವರು ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ (Hyderabad Tour) ಭೇಟಿ ನೀಡಬಹುದು. ಇಲ್ಲಿ ಅತಂತ್ಯ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಬಹುದು. ಶ್ರೀಮಂತ ಐತಿಹಾಸಿಕ ಭೂತಕಾಲ ಮತ್ತು ಆಧುನಿಕ ನಗರ ಭೂದೃಶ್ಯದ ಮಿಶ್ರಣವಾಗಿರುವ ಈ ಪ್ರದೇಶ ಉತ್ತಮ ಛಾಯಾಗ್ರಹಣದ ಆಯ್ಕೆಗಳನ್ನು ನೀಡುತ್ತದೆ.

ಪ್ರಾಚೀನ ವಾಸ್ತುಶಿಲ್ಪ, ಬಿಡುವಿಲ್ಲದ ಮಾರುಕಟ್ಟೆಗಳು, ಶಾಂತಿಯುತ ಸರೋವರ, ಉತ್ಸಾಹಭರಿತ ಬೀದಿಗಳು ಹೈದರಾಬಾದ್ ನಲ್ಲಿ ಛಾಯಾಗ್ರಾಹಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಹೊಂದಿದೆ. ನಗರದೊಳಗಿನ ಈ ಕೆಲವು ಪ್ರಮುಖ ತಾಣಗಳಲ್ಲಿ ಉತ್ತಮ ಛಾಯಾಚಿತ್ರಗಳನ್ನು ಪಡೆಯಬಹುದು.


ಚಾರ್‌ ಮಿನಾರ್‌

ಹಳೆಯ ನಗರದ ಹೃದಯಭಾಗದಲ್ಲಿರುವ ಚಾರ್ ಮಿನಾರ್‌ ಹೈದರಾಬಾದ್‌ನ ಪರಂಪರೆ ಮತ್ತು ಇತಿಹಾಸವನ್ನು ಸಂಕೇತಿಸುವ ವಾಸ್ತು ಶಿಲ್ಪದ ಐಕಾನ್ ಆಗಿದೆ. 1591ರಲ್ಲಿ ನಿರ್ಮಿಸಲಾದ ನಾಲ್ಕು ಸೊಗಸಾದ ಮಿನಾರ್‌ಗಳು ಮತ್ತು ಕಮಾನುಗಳು ರಾತ್ರಿಯಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತದೆ. ಚಾರ್ಮಿನಾರ್ ಸುತ್ತಮುತ್ತಲಿನ ಪ್ರದೇಶವು ವರ್ಣರಂಜಿತ ಬಜಾರ್‌ಗಳು ಮತ್ತು ಸಂಕೀರ್ಣವಾದ ಕಟ್ಟಡಗಳಿಂದ ಸುತ್ತುವರಿದಿದೆ.

Hyderabad Tour
Hyderabad Tour


ಗೋಲ್ಕೊಂಡ ಕೋಟೆ

ಹಳೆಯ ವಾಸ್ತುಶಿಲ್ಪ ಮತ್ತು ವಿಹಂಗಮ ನೋಟಗಳನ್ನು ಇಷ್ಟಪಡುವುದಾದರೆ ಗೋಲ್ಕೊಂಡ ಕೋಟೆಯು ಈ ಎರಡನ್ನೂ ಸಂಪೂರ್ಣವಾಗಿ ಸಂಯೋಜಿಸುತ್ತದೆ. 13ನೇ ಶತಮಾನಕ್ಕಿಂತ ಹಿಂದಿನ ಈ ಕೋಟೆಯು ಬೆರಗುಗೊಳಿಸುವ ಪಾಳುಬಿದ್ದ ಅರಮನೆಗಳು, ಗೇಟ್‌ವೇಗಳು ಮತ್ತು ಅವುಗಳ ಕೆಳಗೆ ನಗರಗಳ ಸುಂದರ ದೃಶ್ಯಗಳನ್ನು ಪ್ರಸ್ತುತಪಡಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಅಥವಾ ಮುಂಜಾನೆ ಈ ಕೋಟೆಯ ಮೇಲಿನ ಈ ನೋಟಗಳನ್ನು ಛಾಯಾಗ್ರಾಹಕರು ಅದ್ಭುತವಾಗಿ ಸೆರೆಹಿಡಿಯಬಹುದು.


ಹುಸೇನ್ ಸಾಗರ್ ಕೆರೆ

ಹುಸೇನ್ ಸಾಗರ್ ಕೆರೆ ಭಾರತದ ಅತಿದೊಡ್ಡ ಮಾನವ ನಿರ್ಮಿತ ಜಲಮೂಲಗಳಲ್ಲಿ ಒಂದಾಗಿದೆ. ಜಿಬ್ರಾಲ್ಟರ್ ರಾಕ್‌ನಲ್ಲಿ ಬುದ್ಧನ ಪ್ರತಿಮೆಯನ್ನು ಹೊಂದಿರುವ ಈ ಕೃತಕ ಸರೋವರದ ಮೇಲೆ ಸೂರ್ಯೋದಯ ಅಥವಾ ಸೂರ್ಯಾಸ್ತದ ವೇಳೆ ಪ್ರಶಾಂತವಾದ ನೀರಿನಲ್ಲಿ ದೋಣಿಗಳು ನೌಕಾಯಾನ ಮಾಡುತ್ತಿರುವ ಸುಂದರ ದೃಶ್ಯಗಳನ್ನು ಕಾಣಬಹುದು.


ಕುತುಬ್ ಶಾಹಿ ಗೋರಿಗಳು

ಗೋಲ್ಕೊಂಡಾ ಕೋಟೆಯ ಸಮೀಪದಲ್ಲಿರುವ ಕುತುಬ್ ಶಾಹಿ ಗೋರಿಗಳ ಸೊಗಸಾದ ಗುಮ್ಮಟಗಳು, ಉತ್ತಮ ಕೆತ್ತನೆಗಳು ಮತ್ತು ಶಾಂತಿಯುತ ಪರಿಸರ ಛಾಯಾಗ್ರಾಹಕರಿಗೆ ಸಂತೋಷವನ್ನು ಕೊಡುತ್ತದೆ. 16 ಮತ್ತು 17ನೇ ಶತಮಾನಗಳಲ್ಲಿ ನಿರ್ಮಿಸಲಾದ ಈ ಗೋರಿಗಳು ಪರ್ಷಿಯನ್ ಮತ್ತು ಭಾರತೀಯ ವಿನ್ಯಾಸಗಳ ಮಿಶ್ರಣವನ್ನು ಪ್ರದರ್ಶಿಸುತ್ತವೆ. ಇದು ಮ್ಯಾಕ್ರೋ ಶಾಟ್‌ಗಳು ಮತ್ತು ವೈಡ್ ಆಂಗಲ್ ಎರಡನ್ನೂ ಶೂಟ್ ಮಾಡಲು ಸಾಧ್ಯವಾಗಿಸುತ್ತದೆ.


ಲಾಡ್ ಬಜಾರ್ ಅಥವಾ ಚೂಡಿ ಬಜಾರ್

ಹೈದರಾಬಾದ್‌ನ ಜನಪ್ರಿಯ ಮಾರುಕಟ್ಟೆ ಲಾಡ್ ಬಜಾರ್ ಸಾಂಪ್ರದಾಯಿಕ ಬಳೆಗಳು, ಬಟ್ಟೆಗಳು, ಬೀದಿ ಆಹಾರಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಬಿಡುವಿಲ್ಲದ ವಾತಾವರಣ, ಬಳೆ ಪ್ರಭೇದಗಳು ಮತ್ತು ಸಂಕೀರ್ಣವಾದ ಸ್ಥಳೀಯ ಕರಕುಶಲತೆಯು ಇಲ್ಲಿ ಛಾಯಾಗ್ರಾಹಕರನ್ನು ಸೆಳೆಯುತ್ತದೆ. ರಸ್ತೆಯಲ್ಲಿ ಫೋಟೋಗಳನ್ನು ತೆಗೆದುಕೊಳ್ಳಲು ಇಷ್ಟಪಡುವವರಿಗೆ ಜನರಿಂದ ತುಂಬಿರುವ ಈ ಕಿರಿದಾದ ಹಾದಿಗಳು ಸಾಂಸ್ಕೃತಿಕ ಬಫೆಗಳಂತಿವೆ.


ನೆಹರು ಝೂಲಾಜಿಕಲ್ ಪಾರ್ಕ್

ವನ್ಯಜೀವಿ ಮತ್ತು ಪ್ರಕೃತಿ ಛಾಯಾಗ್ರಾಹಕರಿಗೆ ನೆಹರು ಝೂಲಾಜಿಕಲ್ ಪಾರ್ಕ್ ವಿವಿಧ ವಿಷಯಗಳನ್ನು ಒದಗಿಸುತ್ತದೆ. ಪಕ್ಷಿಗಳು ಅಥವಾ ಸರೀಸೃಪಗಳಂತಹ ಪ್ರಾಣಿಗಳು ಈ ಮೃಗಾಲಯದಲ್ಲಿದೆ. ಮುಂಜಾನೆಯ ಸಮಯವು ವನ್ಯಜೀವಿ ಛಾಯಾಗ್ರಾಹಕರಿಗೆ ಅಗತ್ಯವಿರುವ ಮೃದುವಾದ ಬೆಳಕನ್ನು ಒದಗಿಸುತ್ತದೆ.


ರಾಮೋಜಿ ಫಿಲ್ಮ್ ಸಿಟಿ

ಪ್ರಪಂಚದಲ್ಲೇ ಅತಿ ದೊಡ್ಡ ಫಿಲ್ಮ್ ಸ್ಟುಡಿಯೋ ಸಂಕೀರ್ಣ ರಾಮೋಜಿ ಫಿಲ್ಮ್ ಸಿಟಿ ಛಾಯಾಗ್ರಾಹಕರಿಗೆ ವಿವಿಧ ಹಿನ್ನೆಲೆಗಳನ್ನು ಒದಗಿಸುತ್ತದೆ. ವಿಷಯಾಧಾರಿತ ಸೆಟ್‌ಗಳು, ಉದ್ಯಾನ ಅಥವಾ ವಿಸ್ತಾರವಾದ ಚಲನಚಿತ್ರ ರಂಗಪರಿಕರ, ರಾಮೋಜಿಯ ಪ್ರತಿ ಇಂಚು ಸಿನಿಮೀಯ ಪರಿಣಾಮ ಅಥವಾ ನಾಟಕೀಯ ಸಂಯೋಜನೆಗಳನ್ನು ರಚಿಸಲು ಅವಕಾಶವನ್ನು ನೀಡುತ್ತದೆ. ಆಧುನಿಕ ಭೂದೃಶ್ಯ ಅಥವಾ ಪ್ರಾಚೀನ ಅರಮನೆಗಳ ಹಿನ್ನೆಲೆಯನ್ನೂ ಇಲ್ಲಿ ಪಡೆಯಬಹುದು.


ಬುದ್ಧನ ಪ್ರತಿಮೆ

ಬೃಹತ್ ಬುದ್ಧನ ಪ್ರತಿಮೆಯು ಹುಸೇನ್ ಸಾಗರ್ ಸರೋವರದ ದ್ವೀಪದಲ್ಲಿದೆ. ಇದು ಹೈದರಾಬಾದ್ ನಗರದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಪ್ರಶಾಂತವಾದ ನೀರಿನ ಮೇಲೆ ಬುದ್ಧನ ಪ್ರತಿಬಿಂಬವನ್ನು ಸೆರೆಹಿಡಿಯಬಹುದು. ಹತ್ತಿರದಲ್ಲಿರುವ ಸಣ್ಣಸಣ್ಣ ವಿವರಗಳ ಮೇಲೆಯೂ ಛಾಯಾಚಿತ್ರ ತೆಗೆಯಲು ಆದ್ಯತೆ ನೀಡಬಹುದು. ಪ್ರತಿಮೆಯನ್ನು ಹಿನ್ನೆಲೆಯಾಗಿಯೂ ಬಳಸಿಕೊಳ್ಳಬಹುದು.


ಎನ್‌ಟಿಆರ್ ಗಾರ್ಡನ್ಸ್

ಎನ್‌ಟಿಆರ್ ಉದ್ಯಾನ ಸುಂದರ ಭೂದೃಶ್ಯ, ಸಂಗೀತ ಕಾರಂಜಿ ಮತ್ತು ಮನರಂಜನಾ ಪ್ರದೇಶಗಳ ಸಂಯೋಜನೆಯಾಗಿದ್ದು ರೋಮಾಂಚಕ ಬಣ್ಣಗಳು ಮತ್ತು ಸಂತೋಷದಾಯಕ ಕ್ಷಣಗಳನ್ನು ಸೆರೆ ಹಿಡಿಯಲು ಸರಿಯಾದ ಸ್ಥಳವಾಗಿದೆ. ಉದ್ಯಾನದ ಮೈದಾನದಲ್ಲಿ ಛಾಯಾಗ್ರಾಹಕರನ್ನು ಸೆಳೆಯುವ ನೀರಿನ ಕ್ಯಾಸ್ಕೇಡ್‌ಗಳು, ಹೂವಿನ ಪ್ರದರ್ಶನಗಳು, ಆಟದ ಕಾರಿಡಾರ್‌ಗಳಂತಹ ವಿವಿಧ ಆಕರ್ಷಣೆಗಳನ್ನು ಹೊಂದಿದೆ.

ಇದನ್ನೂ ಓದಿ: Shimla For Honeymoon: ಹನಿಮೂನ್‍ ಜೋಡಿಗಳ ರೊಮ್ಯಾನ್ಸ್‌ ಹೆಚ್ಚಿಸುತ್ತವೆ ಶಿಮ್ಲಾದ ಈ ತಾಣಗಳು!


ಬಂಜಾರಾ ಹಿಲ್ಸ್ ಮತ್ತು ಜುಬಿಲಿ ಹಿಲ್ಸ್‌ನಲ್ಲಿ ಸ್ಟ್ರೀಟ್ ಆರ್ಟ್

ಬಂಜಾರಾ ಹಿಲ್ಸ್ ಮತ್ತು ಜುಬಿಲಿ ಹಿಲ್ಸ್ ಉತ್ಸಾಹಭರಿತ ಬೀದಿ ಕಲಾಕೃತಿಗಳು ಮತ್ತು ಗೀಚುಬರಹವನ್ನು ಒಳಗೊಂಡಿದೆ. ಈ ಪ್ರದೇಶಗಳು ಛಾಯಾಗ್ರಾಹಕರಿಗೆ ಅನ್ವೇಷಿಸಲು ಯೋಗ್ಯವಾಗಿವೆ. ಸ್ಥಳೀಯ ಕಲಾವಿದರು ಮಾಡಿದ ಗೋಡೆಯ ಭಿತ್ತಿಚಿತ್ರಗಳನ್ನು ಹಲವಾರು ಬಣ್ಣಗಳು ಅಥವಾ ಆಲೋಚನೆಗಳನ್ನು ಪ್ರಚೋದಿಸುವ ವಿನ್ಯಾಸಗಳೊಂದಿಗೆ ಸೆರೆಹಿಡಿಯಬಹುದು.

Continue Reading

Latest

Madurai Tour: ಮಧುರೈಗೆ ಹೋದಾಗ ನೋಡಲೇಬೇಕಾದ 6 ರಮಣೀಯ ಸ್ಥಳಗಳು

ಮಧುರೈ (Madurai Tour) ಎಂದಾಕ್ಷಣ ನೆನಪಾಗುವುದು ಮೀನಾಕ್ಷಿ ಅಮ್ಮನವರ ದೇವಾಲಯ. ಇದನ್ನು ಮೀರಿದ ಹಲವು ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಐತಿಹಾಸಿಕ ಅದ್ಭುತಗಳನ್ನು ಒಳಗೊಂಡಿರುವ ತಾಣಗಳಿವೆ. ಮಧುರೈಗೆ ಪ್ರವಾಸ ಹೊರಡುವ ಯೋಜನೆ ಇದ್ದರೆ ಇಲ್ಲಿರುವ ಅಮೂಲ್ಯ ರತ್ನಗಳ ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ಇದು ನಿಮ್ಮ ಪ್ರವಾಸ ಯೋಜನೆಯನ್ನು ಪರಿಪೂರ್ಣಗೊಳಿಸುವುದು. ಮಧುರೈನ ಆರು ಸ್ಥಳಗಳ ಕುರಿತ ಪರಿಚಯ ಇಲ್ಲಿದೆ.

VISTARANEWS.COM


on

By

Madurai Tour
Koo

ಸಾಂಸ್ಕೃತಿಕವಾಗಿ ಶ್ರೀಮಂತ ನಗರಿ ಎಂದು ಖ್ಯಾತಿಗಳಿಸಿರುವ ಮಧುರೈನಲ್ಲಿ (Madurai Tour) ಹಲವು ಗೌಪ್ಯ ರತ್ನಗಳಿವೆ. ಸುಪ್ರಸಿದ್ಧ ಮೀನಾಕ್ಷಿ ಅಮ್ಮನವರ ದೇವಾಲಯವನ್ನು (Meenakshi Amman Temple) ಹೊರತುಪಡಿಸಿ ಇಲ್ಲಿ ಇನ್ನೂ ಹಲವು ತಾಣಗಳಿವೆ. ಹೆಚ್ಚು ಪ್ರಚಲಿತವಾಗಿ ಇಲ್ಲದೇ ಇದ್ದರೂ ಈ ತಾಣಗಳು ನಿಮ್ಮ ಪ್ರವಾಸ ಯೋಜನೆಯನ್ನು (tour plan) ಪೂರ್ಣಗೊಳಿಸುವುದು.

ಮಧುರೈಗೆ ಪ್ರವಾಸ ಹೊರಡುವ ಯೋಜನೆಯಲ್ಲಿದ್ದರೆ ಇಲ್ಲಿ ತಪ್ಪಿಸಿಕೊಳ್ಳಲೇ ಬಾರದ ಕೆಲವು ತಾಣಗಳಿವೆ. ಯಾಕೆಂದರೆ ಇದು ನಿಮ್ಮ ಪ್ರವಾಸ ಯೋಜನೆಯನ್ನು ಪರಿಪೂರ್ಣಗೊಳಿಸುವುದರಲ್ಲಿ ಸಂದೇಹವಿಲ್ಲ.

Madurai Tour
Madurai Tour


ತಿರುಮಲೈ ನಾಯಕರ್ ಮಹಲ್

ತಿರುಮಲೈ ನಾಯಕರ್ ಮಹಲ್ ನ ವಾಸ್ತುಶಿಲ್ಪದ ಮೇರುಕೃತಿಯು ಮಧುರೈ ನಗರದ ಭವ್ಯತೆಗೆ ಸಾಕ್ಷಿಯಾಗಿದೆ. ಈ ಅರಮನೆಯನ್ನು 17 ನೇ ಶತಮಾನದಲ್ಲಿ ರಾಜ ತಿರುಮಲೈ ನಾಯಕ್ ಅವರು ನಿರ್ಮಿಸಿದರು. ಸುಂದರವಾದ ಇಂಡೋ-ಸಾರ್ಸೆನಿಕ್ ವಿನ್ಯಾಸವನ್ನು ಹೊಂದಿರುವ ಇದ ಕೆತ್ತನೆಗಳು ಮತ್ತು ಮೇಲ್ಭಾಗದಲ್ಲಿ ಗುಮ್ಮಟಗಳು ಆಕರ್ಷಕವಾಗಿವೆ. ಇದು ದೊಡ್ಡ ಅಂಗಳಗಳು, ಸಭಾಂಗಣಗಳು, ಕಾಗುಣಿತ ಬೈಂಡಿಂಗ್ ಬೆಳಕು ಮತ್ತು ಧ್ವನಿ ಪ್ರದರ್ಶನಗಳನ್ನು ಒಳಗೊಂಡಿದ್ದು, ಗತಕಾಲದ ರಾಜಮನೆತನದ ಸೊಬಗನ್ನು ವರ್ಣಿಸುತ್ತದೆ.


ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ

ಮಧುರೈನಲ್ಲಿರುವ ಗಾಂಧಿ ಸ್ಮಾರಕ ವಸ್ತುಸಂಗ್ರಹಾಲಯವು ಗಾಂಧೀಜಿ ಅವರ ಪರಂಪರೆಯನ್ನು ಜೀವಂತವಾಗಿರಿಸಿರುವಂತೆ ಭಾಸವಾಗುತ್ತದೆ. ಶಾಂತಿಯುತವಾದ ತಮುಕ್ಕಂ ಅರಮನೆಯ ಆವರಣದಲ್ಲಿರುವ ಈ ವಸ್ತುಸಂಗ್ರಹಾಲಯವು ಮಹಾತ್ಮನಿಗೆ ಸೇರಿದ ಕಲಾಕೃತಿಗಳು, ಛಾಯಾಚಿತ್ರಗಳು ಅಥವಾ ವೈಯಕ್ತಿಕ ವಸ್ತುಗಳ ಅದ್ಭುತ ಸಂಗ್ರಹವನ್ನು ಹೊಂದಿದೆ. ಇದು ಅವರ ಜೀವನ ಮತ್ತು ಕಾರ್ಯಗಳ ಬಗ್ಗೆ ನಮಗೆ ಬೆಳಕು ಚೆಲ್ಲುತ್ತದೆ.


ಕೂಡಲ್ ಅಜಗರ್ ದೇವಸ್ಥಾನ

ಮಧುರೈ ಒಳಗೆ ಆಳವಾದ ಕಿರಿದಾದ ಲೇನ್‌ಗಳ ನಡುವೆ ಕೂಡಲ್ ಅಜಗರ್ ದೇವಸ್ಥಾನವಿದೆ. ಇದು ಭಗವಾನ್ ವಿಷ್ಣುವಿನ ಆರಾಧಕರಿಗಾಗಿ ನಿರ್ಮಿಸಲಾದ ಪ್ರಾಚೀನ ಹಿಂದೂ ಪವಿತ್ರ ಸ್ಥಳವಾಗಿದೆ. ಅತ್ಯಂತ ವರ್ಣರಂಜಿತ ವಾಸ್ತುಶಿಲ್ಪಗಳು ಮತ್ತು ಪ್ರತಿಮೆಗಳನ್ನು ಹೊಂದಿರುವ ಈ ದೇವಳದ ಹತ್ತಿರದಲ್ಲೇ ಇದೆ ಭವ್ಯವಾದ ಮೀನಾಕ್ಷಿ ದೇವಸ್ಥಾನ. ಶಾಂತ ವಾತಾವರಣದಲ್ಲಿ ಮುಳುಗಿ ಏಳ ಬಯಸುವವರಿಗೆ ಇದು ಭೇಟಿ ನೀಡಬಹುದಾದ ಸೂಕ್ತ ತಾಣವಾಗಿದೆ. ಧಾರ್ಮಿಕ ಸಂಕೇತಗಳ ನಡುವೆ ಹಲವಾರು ಪೌರಾಣಿಕ ಕಥೆಗಳನ್ನು ವಿವರಿಸುವ ಶಿಲ್ಪಗಳನ್ನು ಇದು ಒಳಗೊಂಡಿದೆ.


ವೈಗೈ ಅಣೆಕಟ್ಟು

ಪಟ್ಟಣದಿಂದ ದೂರವಾಗಿ ಶಾಂತ ಸ್ಥಳವನ್ನು ಹುಡುಕುತ್ತಿರುವ ಪ್ರಕೃತಿ ಪ್ರೇಮಿಗಳಿಗೆ ಮಧುರೈನ ಹೊರವಲಯದಲ್ಲಿರುವ ವೈಗೈ ಅಣೆಕಟ್ಟು ಭೇಟಿ ನೀಡಬಹುದಾದ ಅತ್ಯಂತ ಸುಂದರ ತಾಣ. ವೈಗೈ ನದಿಯ ಮೇಲಿರುವ ಸುಂದರವಾದ ಪ್ರದೇಶವು ಅದರ ಹಚ್ಚ ಹಸಿರಿನ ಸಸ್ಯವರ್ಗ ಮತ್ತು ಪ್ರಶಾಂತವಾದ ನೀರಿನಿಂದ ಪಿಕ್ನಿಕ್ ಗಳಿಗೆ, ವಿರಾಮದ ನಡಿಗೆಗಳಿಗೆ ಅಥವಾ ಸುಂದರವಾದ ಸೂರ್ಯಾಸ್ತಗಳನ್ನು ವೀಕ್ಷಿಸಲು ಉತ್ತಮವಾಗಿದೆ. ಇಲ್ಲಿ ಪ್ರವಾಸಿಗರು ಬೋಟಿಂಗ್ ಅನ್ನು ಆನಂದಿಸಬಹುದು.


ತಿರುಪರಂಕುಂದ್ರಂ ಮುರುಗನ್ ದೇವಸ್ಥಾನ

ಸುಂದರವಾದ ಬೆಟ್ಟದ ಮೇಲಿರುವ ತಿರುಪರಂಕುಂದ್ರಂ ಮುರುಗನ್ ದೇವಸ್ಥಾನವು ಮಧುರೈ ಪ್ರದೇಶದ ಅತ್ಯಂತ ಪುರಾತನ ಮತ್ತು ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ. ಮುರುಗನ್ ದೇವರಿಗೆ ಸಮರ್ಪಿತವಾಗಿರುವ ಈ ದೇವಾಲಯವು ವಿವಿಧ ಶಿಲ್ಪಗಳಿಂದ ತುಂಬಿದ ಪ್ರಾಚೀನ ರಾಕ್ ವಾಸ್ತುಶಿಲ್ಪವನ್ನು ತೋರಿಸುತ್ತದೆ.

ಇದನ್ನೂ ಓದಿ: Visa Free Countries: ಪ್ರವಾಸಿ ತಾಣಗಳಿಗೆ ಹೆಸರಾದ ಈ 10 ದೇಶಗಳಿಗೆ ಹೋಗಲು ವೀಸಾ ಬೇಕಿಲ್ಲ!


ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಂ

ವಂಡಿಯೂರ್ ಮಾರಿಯಮ್ಮನ್ ತೆಪ್ಪಕುಲಂ ಇತಿಹಾಸ ಮತ್ತು ಪುರಾಣಗಳಲ್ಲಿ ನೆಲೆಗೊಂಡಿರುವ ಮಧುರೈನ ಹೊರವಲಯದಲ್ಲಿರುವ ವಿಸ್ತಾರವಾದ ದೇವಾಲಯದ ಕೊಳವಾಗಿದೆ. 16 ಎಕರೆಗಳಲ್ಲಿ ಹರಡಿರುವ ದೈತ್ಯಾಕಾರದ ತೊಟ್ಟಿಯು ಸುಂದರವಾದ ಮಂಟಪಗಳನ್ನು ಸ್ತಂಭಗಳ ಕಾರಿಡಾರ್‌ಗಳೊಂದಿಗೆ ಮತ್ತು ಸೊಂಪಾದ ಗಿಡ, ಮರಗಳಿಂದ ಸುತ್ತುವರಿದಿದೆ. ಇಲ್ಲಿ ವಾರ್ಷಿಕ ತೆಪ್ಪಂ ಉತ್ಸವ ನಡೆಯುತ್ತದೆ.

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌