ವಿಸ್ತಾರ ಸಂಪಾದಕೀಯ | ಮತ್ತೆ ಅಲ್ ಕೈದಾದ ಒಣ ಬೆದರಿಕೆ! - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ | ಮತ್ತೆ ಅಲ್ ಕೈದಾದ ಒಣ ಬೆದರಿಕೆ!

ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಸೌದಿ ಅರೇಬಿಯಾ ಸೇರಿದಂತೆ ಹಲವಾರು ಮುಸ್ಲಿಂ ದೇಶಗಳು ಭಾರತದ ಜತೆ ಹೆಚ್ಚಿನ ಸ್ನೇಹದಿಂದಿವೆ. ರಕ್ತಪಿಪಾಸು ಅಲ್ ಕೈದಾವನ್ನು ಭಾರತದೊಳಗೆ ನುಸುಳಲು ಬಿಡಬಾರದು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಾಗತಿಕ ಭಯೋತ್ಪಾದಕ ಸಂಸ್ಥೆ ಅಲ್‌ ಕೈದಾ ಮತ್ತೆ ಭಾರತದ ವಿಚಾರದಲ್ಲಿ ಮೂಗು ತೂರಿಸಲು ಯತ್ನಿಸಿದೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕರೆ ಕೊಟ್ಟಿದೆ. ಹಿಂದೂಗಳನ್ನು ಉದ್ಯೋಗದಿಂದ ತೆಗೆಯುವಂತೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಕರೆ ನೀಡಿದೆ. ಭಾರತದ ಜತೆಗಿನ ಭದ್ರತೆ, ವ್ಯಾಪಾರ ಸೇರಿ ಹಲವು ಕ್ಷೇತ್ರಗಳಲ್ಲಿ ಮಾಡಿಕೊಂಡ ಒಪ್ಪಂದಗಳನ್ನು ಮೊಟಕುಗೊಳಿಸಬೇಕು. ಪ್ರತೀ ಮುಸ್ಲಿಂ ದೇಶವೂ ಭಾರತವನ್ನು ಬಾಯ್ಕಾಟ್‌ ಮಾಡಬೇಕು, ಭಾರತದ ಉತ್ಪನ್ನಗಳನ್ನು ಬ್ಯಾನ್‌ ಮಾಡಬೇಕು ಎಂದಿದೆ. ಪ್ರಧಾನಿ ಮೋದಿ ವಿರುದ್ಧ ಸಿಟ್ಟು ಕಾರಿಕೊಂಡಿರುವ ಅದು, ಮೋದಿ ಆಡಳಿತದಲ್ಲಿ ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂದು ಹಸಿಹಸಿ ಸುಳ್ಳು ಹೇಳಿದೆ.

ಅಲ್‌ ಕೈದಾ ಭಾರತದ ಒಳಗಿನ ಸಂಗತಿಗಳಲ್ಲಿ ಮೂಗು ತೂರಿಸುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೆ ಅದು ಕರ್ನಾಟಕದಲ್ಲಿ ಸೃಷ್ಟಿಯಾದ ಹಿಜಾಬ್ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿತ್ತು. ವ್ಯಂಗ್ಯವೆಂದರೆ, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಪ್ರತಿಭಟನೆಗಳ ಬಗ್ಗೆ ಅದು ಚಕಾರ ತೆಗೆದಂತಿಲ್ಲ. ಚೀನಾದಲ್ಲಿ ಉಯಿಗುರ್‌ ಮುಸ್ಲಿಮರ ಜನಾಂಗೀಯ ಹತ್ಯೆ ಸದ್ದಿಲ್ಲದೇ ನಡೆಯುತ್ತಿದೆ. ಅದರ ಬಗ್ಗೆಯೂ ಅಲ್‌ ಕೈದಾ ಮಾತನಾಡುವುದಿಲ್ಲ. ಭಾರತದ ವಿಚಾರದಲ್ಲಿ ಮಾತ್ರ ಅದರ ರೋಷಾವೇಶ. ಭಾರತೀಯರ ಬಗ್ಗೆ ಏನು ಬೇಕಿದ್ದರೂ ಮಾತನಾಡಿ ದಕ್ಕಿಸಿಕೊಳ್ಳಬಹುದು ಎಂದು ಅದು ತಿಳಿದಂತಿದೆ. ಅಲ್‌ ಕೈದಾವನ್ನು ಜಾಗತಿಕ ಉಗ್ರ ಸಂಘಟನೆ ಎಂದು ಈಗಾಗಲೇ ವಿಶ್ವಸಂಸ್ಥೆ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ಒಪ್ಪಿಕೊಂಡಿವೆ. ಆದ್ದರಿಂದ ಈ ಸಂಘಟನೆಯ ಮಾತುಗಳಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂಬುದು ಬೇರೆ ಮಾತು. ಹಾಗಿದ್ದರೂ ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಬೇಕಾಗುತ್ತದೆ.

ಮೊದಲನೆಯದಾಗಿ, ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿಲ್ಲ. ಪಾಕಿಸ್ತಾನದಲ್ಲಿ, ಅಫಘಾನಿಸ್ತಾನದಲ್ಲಿ ಹಿಂದುಗಳು ಅಸುರಕ್ಷಿತರಾಗಿದ್ದಾರೆ ಎನ್ನಬಹುದು, ಆದರೆ ಭಾರತದ ಮುಸ್ಲಿಮರ ಬಗ್ಗೆ ಈ ಮಾತು ಹೇಳುವಂತಿಲ್ಲ. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ. ಅಲ್ಲಿ ಇಲ್ಲಿ ಕೆಲವು ಕೋಮು ಸಂಘರ್ಷಗಳು ಅಲ್‌ ಕೈದಾದಂಥ ದುರುಳ ಹಿತಾಸಕ್ತಿಗಳ ಕಾರಣದಿಂದ ಆಗಿರಬಹುದು ಎಂಬುದನ್ನು ಹೊರತುಪಡಿಸಿದರೆ, ಒಟ್ಟಾರೆ ಶಾಂತಿಯುತ ಸಹಬಾಳ್ವೆ ನಮ್ಮದಾಗಿದೆ.

ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಸೌದಿ ಅರೇಬಿಯಾ ಸೇರಿದಂತೆ ಹಲವಾರು ಮುಸ್ಲಿಂ ದೇಶಗಳು ಭಾರತದ ಜತೆ ಹೆಚ್ಚಿನ ಸ್ನೇಹದಿಂದಿವೆ. ಮುಕ್ತ ವ್ಯಾಪಾರ ಸಂಬಂಧ ಹೊಂದಿವೆ. ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಅರಬ್‌ ದೇಶಗಳ ಜತೆಗಿನ ಸ್ನೇಹ ಸಂಬಂಧ ಹಿಂದೆಂದೂ ಕಾಣದಷ್ಟು ಎತ್ತರಕ್ಕೆ ಹೋಗಿದೆ. ಬಾಂಗ್ಲಾ, ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಆಗ್ನೇಯ ಏಷ್ಯಾ ದೇಶಗಳು ಕೂಡ ಮೋದಿ ಸರ್ಕಾರದ ʼಲುಕ್‌ ಈಸ್ಟ್‌ʼ ಪಾಲಿಸಿಯ ಪರಿಣಾಮ ಇನ್ನಷ್ಟು ನಿಕಟವಾಗಿವೆ.

ಭಾರತಕ್ಕಿರುವ ಸಮಸ್ಯೆ ಏನೆಂದರೆ, ಈ ಆಣಿಮುತ್ತುಗಳನ್ನು ಉದುರಿಸಿರುವ ಅಲ್‌ ಕೈದಾದಂಥ ಭಯೋತ್ಪಾದಕ ಸಂಘಟನೆಗಳು ಹಾಗೂ ಅದನ್ನು ಪೋಷಿಸುತ್ತಿರುವ ಪಾಕಿಸ್ತಾನದ ಐಎಸ್‌ಐನಂಥ ಬೇಹುಗಾರಿಕೆ ಸಂಸ್ಥೆಗಳು. ಕಾಶ್ಮೀರ, ಪಂಜಾಬ್‌ ಸೇರಿದಂತೆ ಭಾರತದ ನೆಲದಲ್ಲಿ ರಕ್ತದೋಕುಳಿ ಹರಿಸುವ ಈ ವಿಚ್ಛಿದ್ರಕಾರಿಗಳ ಕೃತ್ಯಗಳನ್ನು ಭಾರತ ಸಮರ್ಥವಾಗಿ ಬಗ್ಗು ಬಡಿಯುತ್ತ ಬಂದಿದೆ. ಅಲ್ ಕೈದಾ, ಐಸಿಸ್ ಬೆದರಿಕೆಯನ್ನೂ ಎದುರಿಸುವ ತಾಕತ್ತು ಭಾರತಕ್ಕಿದೆ.‌ ಬಾಹ್ಯ ಬೆದರಿಕೆ ಮತ್ತು ಆಕ್ರಮಣವನ್ನು ಇಲ್ಲಿಯ ಹಿಂದೂ ಮತ್ತು ಮುಸ್ಲಿಮರು ಒಂದಾಗಿ ಹಲವು ಬಾರಿ ಎದುರಿಸಿ ದೇಶವನ್ನು ಗೆಲ್ಲಿಸಿದ್ದಾರೆ. ಭಾರತದ ಮುಸ್ಲಿಮರು ಅಲ್ ಕೈದಾದ ಪ್ರಚೋದನೆ, ಪುಸಲಾಯಿಸುವಿಕೆಗೆ ಒಳಗಾಗಲಾರರು. ಆದರೂ ಕೇಂದ್ರ ಸರ್ಕಾರ ಅಲ್ ಕೈದಾ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಕಟ್ಟೆಚ್ಚರ ವಹಿಸಬೇಕು. ಕೆಲ ಮುಸ್ಲಿಂ ಮೂಲಭೂತವಾದಿಗಳು ಭಾರತದದ ಒಳಗೂ ಇದ್ದಾರೆ; ಇವರನ್ನು ಭಾರತದ ವಿರುದ್ಧ ಅಲ್ ಕೈದಾ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು. ಅಂಥ ವಿಷ ಬೀಜ ಬಿತ್ತುವ ಯತ್ನಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು.

ಇದನ್ನೂ ಓದಿ | Al-Qaeda Targets India | ಇಸ್ಲಾಂ ರಾಷ್ಟ್ರಗಳು ಭಾರತವನ್ನು ಬಾಯ್ಕಾಟ್‌ ಮಾಡಲಿ, ಹಿಂದುಗಳನ್ನು ಓಡಿಸಲಿ: ಅಲ್‌ಕೈದಾ ಮತ್ತೆ ಕುತಂತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

Narendra Modi: ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘದ ವಿರುದ್ಧ ಮಮತಾ ಬ್ಯಾನರ್ಜಿ ಹಲವು ಆರೋಪ ಮಾಡಿದ್ದರು. ಇದಕ್ಕೆ ನರೇಂದ್ರ ಮೋದಿ ತಿರುಗೇಟು ನೀಡಿದ್ದು, “ಮುಸ್ಲಿಮರ ಮತಗಳ ಓಲೈಕೆಗಾಗಿ ಮಮತಾ ಬ್ಯಾನರ್ಜಿ ಅವರು ಹೀಗೆ ಮಾಡುತ್ತಿದ್ದಾರೆ” ಎಂದು ಕುಟುಕಿದ್ದಾರೆ.

VISTARANEWS.COM


on

Narendra Modi
Koo

ಕೋಲ್ಕೊತಾ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಜಾತಿ, ಧರ್ಮ, ಮೀಸಲಾತಿ ಸೇರಿ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬರುತ್ತಿವೆ. ರಾಜಕೀಯ ನಾಯಕರ ಹೇಳಿಕೆಗಳು ತೀಕ್ಷ್ಣತೆ ಪಡೆದುಕೊಂಡಿವೆ. ಇನ್ನು, ಹಿಂದು ಸಂಘ-ಸಂಸ್ಥೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಹರಿಹಾಯ್ದಿದ್ದಾರೆ. “ಮುಸ್ಲಿಮರ ಮತಗಳಿಗಾಗಿ ಮಮತಾ ಬ್ಯಾನರ್ಜಿ ಅವರು ಹಿಂದು ಸಂಘ-ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ” ಎಂದು ಕುಟುಕಿದ್ದಾರೆ.

“ಚುನಾವಣೆ ಸಂದರ್ಭದಲ್ಲಿ ಟಿಎಂಸಿಯು ಜನರಿಗೆ ಬೆದರಿಕೆ ಒಡ್ಡಿತ್ತು. ಈಗ ಅದು ತನ್ನ ಮಿತಿಯನ್ನು ಮೀರಿದೆ. ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘವು ಜಗತ್ತಿನಾದ್ಯಂತ ಜನರಿಗೆ ಸೇವೆ ಮಾಡುತ್ತಿವೆ. ನೈತಿಕ ಬೆಂಬಲ, ಮಾರ್ಗದರ್ಶನ ನೀಡುತ್ತಿವೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು ಇಂತಹ ಹಿಂದು ಸಂಘ-ಸಂಸ್ಥೆಗಳ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ, ಬೆದರಿಕೆ ಒಡ್ಡುತ್ತಿದ್ದಾರೆ. ಮುಸ್ಲಿಮರ ಮತಗಳ ಓಲೈಕೆಗಾಗಿ ಮಮತಾ ಬ್ಯಾನರ್ಜಿ ಅವರು ಹೀಗೆ ಮಾಡುತ್ತಿದ್ದಾರೆ” ಎಂದು ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

“ಮಮತಾ ಬ್ಯಾನರ್ಜಿ ಅವರು ಓಲೈಕೆ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೂಲಭೂತವಾದಿಗಳನ್ನು ಓಲೈಸುವ ದೃಷ್ಟಿಯಿಂದ ಅವರು ಸಾಧು-ಸಂತರ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ, ಜನರು ಅಭಿವೃದ್ಧಿಯನ್ನು ನೋಡುತ್ತಾರೆಯೇ ಹೊರತು ಓಲೈಕೆ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ. ಪಶ್ಚಿಮ ಬಂಗಾಳದ ಜನರು ಬಿಜೆಪಿಯ ಆಡಳಿತವನ್ನು ಬಯಸುತ್ತಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರ ನಿದ್ದೆಗೆಡಿಸಲು ಕಾರಣವಾಗಿದೆ” ಎಂದು ಟೀಕಿಸಿದರು.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಶನಿವಾರ (ಮೇ 18) ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಅವರು ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘದ ವಿರುದ್ಧ ಆರೋಪ ಮಾಡಿದ್ದರು. “ಮೂರೂ ಸಂಸ್ಥೆಗಳು ದೆಹಲಿಯಿಂದ ಬರುವ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿವೆ. ರಾಮಕೃಷ್ಣ ಮಿಷನ್‌ ಅನುಯಾಯಿಗಳ ಒಂದು ವಾಟ್ಸ್‌ಆ್ಯಪ್‌ ಗ್ರೂಪ್‌ ಇದೆ. ಇಂತಹ ಚಟುವಟಿಕೆಗಳಲ್ಲಿ ಸನ್ಯಾಸಿಗಳು ಏಕೆ ಭಾಗಿಯಾಗಬೇಕು? ರಾಮಕೃಷ್ಣ ಮಿಷನ್‌ ಬಗ್ಗೆ ಜನರಿಗೆ ಗೌರವವಿದೆ. ರಾಮಕೃಷ್ಣ ಮಿಷನ್‌ನ ಸನ್ಯಾಸಿಗಳು ಮತದಾನ ಮಾಡುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ, ನೀವೇಕೆ ಬಿಜೆಪಿಗೆ ಮತ ನೀಡಿ ಎಂಬುದಾಗಿ ಬೇರೆಯವರಿಗೆ ಕರೆ ನೀಡುತ್ತೀರಿ? ಎಲ್ಲರೂ ಅಲ್ಲ, ಕೆಲವು ಸನ್ಯಾಸಿಗಳು ಹೀಗೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

“ಭಾರತ ಸೇವಾಶ್ರಮ ಸಂಘದ ಮೇಲೆ ನನಗೆ ಅಪಾರ ಗೌರವ ಇತ್ತು. ಆದರೆ, ತೃಣಮೂಲ ಕಾಂಗ್ರೆಸ್‌ ಏಜೆಂಟ್‌ನನ್ನು ಮತಗಟ್ಟೆ ಒಳಗೆ ಬಿಡುವುದಿಲ್ಲ ಎಂಬುದಗಿ ಒಬ್ಬ ಕಾರ್ತಿಕ ಮಹಾರಾಜ ಹೇಳಿದ್ದಾರೆ ಎಂಬುದಾಗಿ ನಾನು ಕೇಳುತ್ತಲೇ ಇದ್ದೇನೆ. ರಾಜಕೀಯದಲ್ಲ ಹೀಗೆ ಭಾಗಿಯಾದವರನ್ನು ನಾನು ಸನ್ಯಾಸಿ ಎಂಬುದಾಗಿ ಕರೆಯುವುದಿಲ್ಲ. ಹೀಗೆ ರಾಜಕೀಯ ಮಾಡುತ್ತಿರುವವರನ್ನು ನಾನು ಗುರುತಿಸಿದ್ದೇನೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿಯ ಕೆಲ ನಾಯಕರೂ ಟೀಕಿಸಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿಕೆ ವಿರುದ್ಧ ನರೇಂದ್ರ ಮೋದಿ ಟೀಕಿಸುತ್ತಲೇ ಬಿಜೆಪಿ ನಾಯಕ ಅಮಿತ್‌ ಮಾಳವಿಯ ಅವರು ಪೋಸ್ಟ್‌ ಮಾಡಿದ್ದಾರೆ. “ಭಾರತ ಸೇವಾಶ್ರಮ ಸಂಘವು ಮಮತಾ ಬ್ಯಾನರ್ಜಿ ಅವರು ಸಂತರ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ಹೈಕೋರ್ಟ್‌ ಮೊರೆ ಹೋಗಲಿದ್ದಾರೆ. ಕಾರ್ತಿಕ್‌ ಮಹಾರಾಜ ಅವರು ಎಂದಿಗೂ ಬೂತ್‌ ಏಜೆಂಟ್‌ಗಳ ವಿರುದ್ಧ ಮಾತನಾಡಿಲ್ಲ” ಎಂದು ಮಮತಾ ಆರೋಪವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

Continue Reading

ಕರ್ನಾಟಕ

Bengaluru Rain: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ; ರಸ್ತೆಗಳು ಜಲಾವೃತ, ಹಲವೆಡೆ ಸಂಚಾರ ಅಸ್ತವ್ಯಸ್ತ

Bengaluru Rain: ಧಾರಾಕಾರ ಮಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.

VISTARANEWS.COM


on

Bengaluru Rain
ಭಾರಿ ಮಳೆಯಿಂದ ದೇವನಹಳ್ಳಿ ಹೊರವಲಯದ ಬೈಪಾಸ್‌ನ ಕೆಂಪೇಗೌಡ ಸರ್ಕಲ್‌ ಕೆರೆಯಂತೆ ಬದಲಾಗಿತ್ತು
Koo

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರವೂ ಮಳೆ ಆರ್ಭಟ (Bengaluru Rain) ಮುಂದುವರಿಯಿತು. ನಗರದ ಹಲವೆಡೆ ಸುರಿದ ಧಾರಾಕಾರ ಮಳೆಯಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಇದರಿಂದ ವಾಹನ ಸವಾರರು ಪರದಾಡಿದರು.

ಚಿಕ್ಕಪೇಟೆ, ಮೆಜೆಸ್ಟಿಕ್, ಯಲಹಂಕ, ಯಶವಂತಪುರ, ಲಗ್ಗೆರೆ, ರಾಜಾಜಿನಗರದಲ್ಲಿ ಭಾರಿ ಮಳೆಯಾಯಿತು. ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (ಕೆ.ಆರ್.ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ವೈಟ್‌ಫೀಲ್ಡ್‌, ಮಹದೇವಪುರ ಮತ್ತು ಕೆ.ಆರ್.ಪುರ ಕಡೆಗೆ ನಿಧಾನಗತಿಯ ವಾಹನ ಸಂಚಾರ ಕಂಡುಬಂದಿತು.

ಇನ್ನು ಪೈಪ್‌ಲೈನ್ ಮುಖ್ಯ ರಸ್ತೆಯ ಕಮಲಾ ನಗರದಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಪಾದಾಚಾರಿಗಳು ಮತ್ತು ವಾಹನ ಸವಾರರು ರಸ್ತೆ ದಾಟಲು ಪರದಾಡಬೇಕಾಯಿತು. ರಸ್ತೆಗಳು ಜಲಾವೃತವಾಗಿದ್ದರಿಂದ ರಾಮಮೂರ್ತಿ ನಗರ – ಟಿನ್ ಫ್ಯಾಕ್ಟರಿ ರಸ್ತೆ, ಸಂಜಯನಗರ ಕ್ರಾಸ್ – ವಿಮಾನ ನಿಲ್ದಾಣ ರಸ್ತೆ, ಹುಣಸಮಾರನಹಳ್ಳಿ ಸರ್ವಿಸ್ ರಸ್ತೆ, ಬಿಇಎಲ್‌ನಿಂದ ಹೆಬ್ಬಾಳ ಮಾರ್ಗ, ಅನಿಲ್ ಕುಂಬ್ಳೆ ಜಂಕ್ಷನ್-ಬಿಆರ್ವಿ ಜಂಕ್ಷನ್ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು.

ಕೆರೆಯಂತಾದ ದೇವನಹಳ್ಳಿಯ ಸರ್ಕಲ್

ದೇವನಹಳ್ಳಿ: ಪಟ್ಟಣದ ಸುತ್ತಮುತ್ತಲ ಪ್ರದೇಶದಲ್ಲಿ ಧಾರಕಾರ ಮಳೆ ಸುರಿದಿದೆ. ನಿರಂತರ ಒಂದು ಗಂಟೆ ಸುರಿದ ಮಳೆಗೆ ಪಟ್ಟಣದ ಹೊರವಲಯದ ಬೈಪಾಸ್‌ನ ಕೆಂಪೇಗೌಡ ಸರ್ಕಲ್‌ ಕೆರೆಯಂತೆ ಬದಲಾಗಿತ್ತು. ಸುಮಾರು ಮೂರು ಅಡಿಗಿಂತ ಹೆಚ್ಚು ನೀರು ನಿಂತಿದ್ದರಿಂದ ವಾಹನ ಸವಾರರು ಮುಂದೆ ಹೋಗಲು ಹೈರಾಣಾದರು.

ಆನೇಕಲ್ ಭಾಗದಲ್ಲಿ ಮಳೆರಾಯನ ಸಿಂಚನ

ಆನೇಕಲ್: ಬೆಂಗಳೂರು ನಗರ ಹೊರವಲಯದ ಆನೇಕಲ್ ಭಾಗದಲ್ಲಿ ಮಳೆರಾಯನ ಸಿಂಚನ ಕಂಡುಬಂತು. ಆನೇಕಲ್, ಅತ್ತಿಬೆಲೆ, ಸರ್ಜಾಪುರ ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ | Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ರಾಜ್ಯದ 17 ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, 17 ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ‌ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರದಲ್ಲಿ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು

ಕೊಪ್ಪಳ: ಸಿಡಿಲು ಬಡಿದು (Lightning strike) ರೈತ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಚನಾಳ ಗ್ರಾಮದಲ್ಲಿ ನಡೆದಿದೆ. ಉತ್ತಮ ಮಳೆ (Rain News) ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬಿತ್ತನೆ ಸಲುವಾಗಿ ಕೃಷಿ ಚಟುವಟಿಕೆ ಮಾಡುತ್ತಿದ್ದಾಗ ಅವಘಡ ನಡೆದಿದ್ದು, ಈಶಪ್ಪ ಕಳಮಳ್ಳಿ (40) ಮೃತ ರೈತ.

ಮಳೆ ಬಂದ ಖುಷಿಯಲ್ಲಿ ಎತ್ತುಗಳೊಂದಿಗೆ ರೈತ ಭೂಮಿ ಹದ ಮಾಡುತ್ತಿದ್ದ. ಈ ವೇಳೆ ಸಿಡಿಲು ಬಡಿದು ರೈತ ಈಶಪ್ಪ ಕಳಮಳ್ಳಿ ಮೃತಪಟ್ಟಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ರೈತನ ಸಹೋದರ ಪಾರಾಗಿದ್ದಾನೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಡಿಲು ಬಡಿದು ಯುವಕನಿಗೆ ಗಂಭೀರ ಗಾಯ

ಧಾರವಾಡ: ಸಿಡಿಲು ಬಡಿದು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಮುಗದ ಗ್ರಾಮದ ಕೆರೆ ಬಳಿ ನಡೆದಿದೆ. ಇಂದು ಮಧ್ಯಾಹ್ನ ಸುರಿದ ಸಿಡಿಲು ಸಹಿತ ಮಳೆ ವೇಳೆ ಅವಘಡ ನಡೆದಿದೆ. ದಡ್ಡಿಕಮಲಾಪುರ ಗ್ರಾಮದ ನಿವಾಸಿ ರವಿ ಕೊರಮಡ್ಡಿ ಗಾಯಾಳು. ಇದೆ ವೇಳೆ ಸಿಡಿಲಿಗೆ ಎಮ್ಮೆ ಕರು ಬಲಿಯಾಗಿದೆ. ಗಂಭೀರ ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

Continue Reading

ಸಿನಿಮಾ

Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ!

Kantara Movie: ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ಕಾಂತಾರ ಸಿನಿಮಾ ಭಾರತ ಸೇರಿ ಜಗತ್ತಿನಾದ್ಯಂತ ಹೆಸರು ಗಳಿಸಿದೆ. ರಿಷಬ್‌ ಶೆಟ್ಟಿ ಅವರ ಸಿನಿಮಾ ಬದುಕಿಗೆ ಹೊಸ ಸ್ವರೂಪ ನೀಡಿದೆ. ಹಾಗಾಗಿ, ಕಾಂತಾರ ಪ್ರಿಕ್ವೆಲ್‌ಅನ್ನು ಅದ್ಧೂರಿಯಾಗಿ ನಿರ್ಮಿಸುವುದು ರಿಷಬ್‌ ಶೆಟ್ಟಿ ಅವರ ಗುರಿಯಾಗಿದೆ. ಇದರ ಬೆನ್ನಲ್ಲೇ, ಕಾಂತಾರ ಚಾಪ್ಟರ್‌ 1 ಸಿನಿಮಾದ ಡಿಜಿಟಲ್‌ ಹಕ್ಕುಗಳು ದಾಖಲೆಯ ಮೊತ್ತಗೆ ಸೇಲ್‌ ಆಗಿರುವುದು ಮಹತ್ವದ ಸಂಗತಿಯಾಗಿದೆ.

VISTARANEWS.COM


on

Kantara Movie
Koo

ಬೆಂಗಳೂರು: ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ದೇಶ-ವಿದೇಶದಲ್ಲಿ ಭರ್ಜರಿ ಹೆಸರು ಗಳಿಸಿದ ಬೆನ್ನಲ್ಲೇ ರಿಷಬ್‌ ಶೆಟ್ಟಿ ಅವರು ಕಾಂತಾರ ಚಾಪ್ಟರ್‌ 1‌ (Kantara Movie) (ಪ್ರಿಕ್ವೆಲ್) ಚಿತ್ರೀಕರಣಕ್ಕೆ ಇಳಿದಿದ್ದಾರೆ. ಹಾಗಾಗಿ, ಕಾಂತಾರ ಚಾಪ್ಟರ್‌ 1 ಕುತೂಹಲ ಹೆಚ್ಚಿಸಿದೆ. ಇದರ ಬೆನ್ನಲ್ಲೇ, ಕಾಂತಾರ ಸಿನಿಮಾದ ಡಿಜಿಟಲ್‌ ಹಕ್ಕುಗಳು (Digital Rights) ಅಮೆಜಾನ್‌ ಪ್ರೈಮ್‌ ಪಾಲಾಗಿದ್ದು, ಸುಮಾರು 125 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ, ಸಿನಿಮಾ ಬಿಡುಗಡೆಗೆ ಮೊದಲೇ ಕಾಂತಾರ ಭರ್ಜರಿ ಆದಾಯ ಗಳಿಸಿದಂತಾಗಿದೆ.

ದೈವಾರಾಧನೆಯ ಎಳೆಯನ್ನು ಇಟ್ಟುಕೊಂಡು, ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ಕಾಂತಾರ ಸಿನಿಮಾ ಭಾರತ ಸೇರಿ ಜಗತ್ತಿನಾದ್ಯಂತ ಹೆಸರು ಗಳಿಸಿದೆ. ರಿಷಬ್‌ ಶೆಟ್ಟಿ ಅವರ ಸಿನಿಮಾ ಬದುಕಿಗೆ ಹೊಸ ಸ್ವರೂಪ ನೀಡಿದೆ. ಹಾಗಾಗಿ, ಕಾಂತಾರ ಪ್ರಿಕ್ವೆಲ್‌ಅನ್ನು ಅದ್ಧೂರಿಯಾಗಿ ನಿರ್ಮಿಸುವುದು ರಿಷಬ್‌ ಶೆಟ್ಟಿ ಅವರ ಗುರಿಯಾಗಿದೆ. ಇದರ ಬೆನ್ನಲ್ಲೇ, ಕಾಂತಾರ ಚಾಪ್ಟರ್‌ 1 ಸಿನಿಮಾದ ಡಿಜಿಟಲ್‌ ಹಕ್ಕುಗಳು ದಾಖಲೆಯ 125 ಕೋಟಿ ರೂ.ಗೆ ಮಾರಾಟವಾಗಿರುವುದು ಮಹತ್ವದ ಸಂಗತಿಯಾಗಿದೆ.

Rishab Shetty

ಚಿತ್ರೀಕರಣ ಆರಂಭ

ಕೆಲ ದಿನಗಳ ಹಿಂದಷ್ಟೇ ರಿಷಬ್‌ ಶೆಟ್ಟಿ ಅವರು ಕಾಂತಾರ 2 ಚಿತ್ರೀಕರಣ ಆರಂಭವಾಗಿದೆ ಎಂದು ಹೇಳಿದ್ದರು. ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬಹಳ ಚೆನ್ನಾಗಿ ಕೆಲಸಕಾರ್ಯಗಳು ನಡೆಯುತ್ತಿವೆ. ಮೊದಲಿಗಿಂತ ದೊಡ್ಡ ಜವಾಬ್ದಾರಿಯೊಂದಿಗೆ ದೊಡ್ಡ ತಂಡ ಕೆಲಸ ಮಾಡುತ್ತಿದೆ” ಎಂದು ಹೇಳಿದ್ದರು.

“ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್‌ಗಳಿಗೆ ಒಂದು ಪುಣ್ಯ. ಕಾಂತಾರದಲ್ಲಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಕೆಲಸಗಳು ನಡೆಯುತ್ತಿದ್ದು ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ. ಜನ ಕಾಂತಾರವನ್ನು ಗೆಲ್ಲಿಸಿದ್ದಾರೆ, ಹೀಗಾಗಿ ಮಾತಿನಲ್ಲಿ ಏನನ್ನೂ ಹೇಳುವುದಿಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ” ಎಂದಿದ್ದರು.

ಕಾಂತಾರ ಶೂಟಿಂಗ್‌ಗಾಗಿ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್‌ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

Continue Reading

ವಿದೇಶ

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

Ebrahim Raisi: ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ರಾಯಿಟರ್ಸ್‌ ಪ್ರಕಾರ, ಹೆಲಿಕಾಪ್ಟರ್‌ ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ವರದಿ ಪ್ರಕಟಿಸಿದೆ.

VISTARANEWS.COM


on

Ebrahim Raisi
Koo

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತನವಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದರೆ, ಇನ್ನೂ ಕೆಲವು ಮಾಧ್ಯಮಗಳು ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ ಎಂದು ವರದಿ ಮಾಡಿವೆ. ಹಾಗಾಗಿ, ಹೆಲಿಕಾಪ್ಟರ್‌ ಪತನವಾಗಿದೆಯೋ, ತುರ್ತು ಲ್ಯಾಂಡ್‌ ಆಗಿದೆಯೋ ಎಂಬ ಮಾಹಿತಿ ನಿಖರವಾಗಿ ಲಭ್ಯವಾಗಿಲ್ಲ. ಆದಾಗ್ಯೂ, ಭದ್ರತಾ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ರಾಯಿಟರ್ಸ್‌ ಪ್ರಕಾರ, ಹೆಲಿಕಾಪ್ಟರ್‌ ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ವರದಿ ಪ್ರಕಟಿಸಿದೆ. ಆದಾಗ್ಯೂ, ಇರಾನ್‌ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇರಾನ್‌ ಬೆಂಗಾವಲು ಪಡೆ ಇದ್ದ ಹೆಲಿಕಾಪ್ಟರ್‌ ಪತನಗೊಂಡಿದೆ. ಅದರಲ್ಲಿ, ಇಬ್ರಾಹಿಂ ರೈಸಿ ಅವರು ಇದ್ದರೋ, ಇಲ್ಲವೋ ಎಂಬುದರ ಮಾಹಿತಿ ನಿಖರವಾಗಿಲ್ಲ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳುತ್ತಿದೆ ಎಂಬುದಾಗಿ ಸಚಿವರೊಬ್ಬರು ತಿಳಿಸಿದ್ದಾರೆ ಎಂಬುದಾಗಿ ಬಿಬಿಸಿ ವರದಿ ತಿಳಿಸಿದೆ. ಅಜರ್‌ಬೈಜಾನ್‌ ಸಮೀಪದ ಜೋಲ್ಫಾ ಎಂಬ ಪ್ರದೇಶದಲ್ಲಿ ಪತನಗೊಂಡಿರುವುದಾಗಿ ವರದಿಗಳು ಮಾಹಿತಿ ನೀಡಿವೆ. ಪತನಗೊಂಡಿರುವ ಹೆಲಿಕಾಪ್ಟರ್‌ ಪತ್ತೆಹಚ್ಚಲು ಸಿಬ್ಬಂದಿಯು ಹರಸಾಹಸ ಪಡುತ್ತಿದೆ ಎಂದು ಕೂಡ ತಿಳಿದುಬಂದಿದೆ.

ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ತುರ್ತು ಭೂಸ್ಪರ್ಶ ಮಾಡಿದ ಕಾರಣದಿಂದಾಗಿ ಯಾರಿಗೂ ಅಪಾಯವಾಗಿಲ್ಲ ಎಂದು ಮತ್ತೊಂದಿಷ್ಟು ಮೂಲಗಳು ತಿಳಿಸಿವೆ.

ಇದನ್ನೂ ಓದಿ: US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

Continue Reading
Advertisement
Narendra Modi
ದೇಶ13 mins ago

Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

SRH vs PBKS
ಕ್ರೀಡೆ27 mins ago

SRH vs PBKS: ಆರ್​ಸಿಬಿಯ ಸಿಕ್ಸರ್​ ದಾಖಲೆ ಮುರಿದ ಹೈದರಾಬಾದ್​

Drowned in Lake
ಕರ್ನಾಟಕ33 mins ago

Drown in Lake: ಮೀನು ಹಿಡಿಯಲು ಕೆರೆಗೆ ಹೋಗಿದ್ದ ಇಬ್ಬರು ನೀರು ಪಾಲು

Bengaluru Rain
ಕರ್ನಾಟಕ1 hour ago

Bengaluru Rain: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ; ರಸ್ತೆಗಳು ಜಲಾವೃತ, ಹಲವೆಡೆ ಸಂಚಾರ ಅಸ್ತವ್ಯಸ್ತ

Kantara Movie
ಸಿನಿಮಾ1 hour ago

Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ!

SRH vs PBKS
ಕ್ರೀಡೆ2 hours ago

SRH vs PBKS: ಒಂದು ದಿನ ಕಳೆಯುವ ಮುನ್ನವೇ ಕೊಹ್ಲಿಯ ಸಿಕ್ಸರ್​ ದಾಖಲೆ ಮುರಿದ ಅಭಿಷೇಕ್

Harish Poonja
ಕರ್ನಾಟಕ2 hours ago

Harish Poonja: ಪೊಲೀಸರಿಗೆ ಧಮ್ಕಿ; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

Ebrahim Raisi
ವಿದೇಶ2 hours ago

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

PBKS vs SRH
ಕ್ರೀಡೆ3 hours ago

PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

West Nile fever Health department on alert
ಆರೋಗ್ಯ3 hours ago

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ8 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌