ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್​ರೇಪ್​ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು - Vistara News

ವಿದೇಶ

ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್​ರೇಪ್​ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು

ಮಹಿಳೆ ಹತ್ಯೆಯಾದ ಸ್ಥಳಕ್ಕೆ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಮಹಿಳೆಯ ತಲೆಯನ್ನು ಕಡಿದು, ಅದರಲ್ಲಿನ ಮಾಂಸವನ್ನೆಲ್ಲ ತೆಗೆದು ಹಾಕಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Hindu woman Killed In Pakistan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ, ಅವರ ಹತ್ಯೆ, ಶೋಷಣೆ, ಅತ್ಯಾಚಾರ, ಬಲವಂತದ ಮತಾಂತರ ಹೊಸದಲ್ಲ. ಹಿಂದುಗಳು ಜಾಸ್ತಿ ಇರುವ ಸಿಂಧ್​ ಪ್ರಾಂತ್ಯವೊಂದರಲ್ಲೇ ವರ್ಷಕ್ಕೆ 1000 ಹಿಂದು ಹೆಣ್ಣುಮಕ್ಕಳು ಲೈಂಗಿಕ ಗುಲಾಮಗಿರಿ ಕೂಪಕ್ಕೆ ಬೀಳುತ್ತಿದ್ದಾರೆ. ಅಲ್ಲಿ ಹಿಂದೂಗಳನ್ನು ಅದೆಷ್ಟು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಇಡೀ ವಿಶ್ವವೇ ನೋಡುತ್ತಿದೆ. ಅಂಥ ದರಿದ್ರ​ ದೇಶ ಪಾಕಿಸ್ತಾನದಲ್ಲೀಗ ಮತ್ತೊಬ್ಬಳು ಹಿಂದು ಮಹಿಳೆಯನ್ನು ಭಯಾನಕವಾಗಿ ಹತ್ಯೆ ಮಾಡಲಾಗಿದೆ.

ಪಾಕ್​​ನ ಸಿಂಧ್​ ಪ್ರಾಂತ್ಯದಲ್ಲಿರುವ ಶಿಂಜೋರೋ ಪಟ್ಟಣದಲ್ಲಿ 40 ವರ್ಷದ ಹಿಂದು ಮಹಿಳೆಯೊಬ್ಬರ ಮೃತದೇಹ ತಲೆ ಮತ್ತು ಸ್ತನಗಳನ್ನು ಕತ್ತರಿಸಿದ, ಚರ್ಮವನ್ನು ಸುಲಿದ ರೀತಿಯಲ್ಲಿ ಪತ್ತೆಯಾಗಿದೆ. ಈ ಮಹಿಳೆಯನ್ನು ದಿಯಾ ಎಂದು ಗುರುತಿಸಲಾಗಿದ್ದು, ಭೀಲ್​ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ. ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಗಳು ಬಳಿಕ ಅವಳ ತಲೆ ಮತ್ತು ಸ್ತನಗಳನ್ನು ಕತ್ತರಿಸಿ, ಚರ್ಮವನ್ನು ಸುಲಿದು ಗೋಧಿ ಹೊಲದಲ್ಲಿ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ. ‘ಈ ಮಹಿಳೆ ವಿಧವೆಯಾಗಿದ್ದು, ನಾಲ್ಕು ಮಕ್ಕಳ ತಾಯಿ’ ಎಂದು ಆ ದೇಶದ ಪಾಕಿಸ್ತಾನ್​ ಪೀಪಲ್ಸ್​ ಪಾರ್ಟಿಯ ಲೀಡರ್ ಮತ್ತು ಹಿಂದು ಸಮುದಾಯದ ಮೊದಲ ಸೆನೆಟರ್​ ಆಗಿರುವ ಕೃಷ್ಣಕುಮಾರಿ​​ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಮಹಿಳೆ ಹತ್ಯೆಯಾದ ಸ್ಥಳಕ್ಕೆ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಮಹಿಳೆಯ ತಲೆಯನ್ನು ಕಡಿದು, ಅದರಲ್ಲಿನ ಮಾಂಸವನ್ನೆಲ್ಲ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಆ ಶವದ ಪೋಸ್ಟ್​ಮಾರ್ಟಮ್​ ಮುಕ್ತಾಯಗೊಂಡಿದ್ದು, ತನಿಖೆ ಪ್ರಾರಂಭವಾಗಿದೆ. ಆರೋಪಿಗಳು ಯಾರೆಂದು ಪತ್ತೆಯಾಗಿಲ್ಲ.

ಇದನ್ನೂ ಓದಿ: ಪತ್ನಿಯನ್ನು​ ಕೊಂದು ಶವವನ್ನು ಮನೆಯಲ್ಲೇ ಹೂತಿಟ್ಟ ಪತಿ; ಇಸ್ಲಾಂಗೆ ಮತಾಂತರ ಆಗಿದ್ದ ಹಿಂದು ಮಹಿಳೆಯ ಬರ್ಬರ ಹತ್ಯೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Israel-Hamas Conflict: ಅಹ್ಮದ್ ಅಲ್ಸೌರ್ಕಾ ಹಮಾಸ್ ನುಖ್ಬಾ ಪಡೆಗಳಲ್ಲಿ ಕಮಾಂಡರ್ ಆಗಿದ್ದ. ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದಲ್ಲಿ ಅವರು ಪ್ರಮುಖ ರೂವಾರಿಯಾಗಿದ್ದ. ಈ ಹತ್ಯಾಕಾಂಡದಲ್ಲಿ 1,189 ಜನರು ಸಾವನ್ನಪ್ಪಿದ್ದರು. IDF ಮತ್ತು ಇಸ್ರೇಲ್ ಸೆಕ್ಯುರಿಟಿ ಏಜೆನ್ಸಿ (ISA)ಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಇಸ್ರೇಲಿ ವಾಯುಪಡೆಯು ಕಾರ್ಯಾಚರಣೆಯನ್ನು ನಡೆಸಿತು.

VISTARANEWS.COM


on

Israel-Hamas Conflict
Koo

ಗಾಜಾ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಸಂಘರ್ಷ(Israel-Hamas Conflict) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಇಸ್ರೇಲ್‌ ಸೇನೆ(Israeli Air Force) ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಉಗ್ರರ ಕಮಾಂಡರ್‌(Hamas Commander) ಅಹ್ಮದ್ ಹಸನ್ ಸಲಾಮೆ ಅಲ್ಸೌರ್ಕಾನನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಈ ಬಗ್ಗೆ ಇಸ್ರೇಲ್ ರಕ್ಷಣಾ ಪಡೆಗಳು ಅಧಿಕೃತ ಘೋಷಣೆ ಹೊರಡಿಸಿದೆ.

ಅಹ್ಮದ್ ಅಲ್ಸೌರ್ಕಾ ಹಮಾಸ್ ನುಖ್ಬಾ ಪಡೆಗಳಲ್ಲಿ ಕಮಾಂಡರ್ ಆಗಿದ್ದ. ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದಲ್ಲಿ ಅವರು ಪ್ರಮುಖ ರೂವಾರಿಯಾಗಿದ್ದ. ಈ ಹತ್ಯಾಕಾಂಡದಲ್ಲಿ 1,189 ಜನರು ಸಾವನ್ನಪ್ಪಿದ್ದರು. IDF ಮತ್ತು ಇಸ್ರೇಲ್ ಸೆಕ್ಯುರಿಟಿ ಏಜೆನ್ಸಿ (ISA)ಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಇಸ್ರೇಲಿ ವಾಯುಪಡೆಯು ಕಾರ್ಯಾಚರಣೆಯನ್ನು ನಡೆಸಿತು. ಉತ್ತರ ಗಾಜಾದ ಬೀಟ್ ಹನೌನ್ ಪ್ರದೇಶದಲ್ಲಿ ಅಲ್ಸೌರ್ಕಾ ತನ್ನ ಪಡೆಗಳೊಂದಿಗೆ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ್ದವು. ಇನ್ನು ಈ ಕಾರ್ಯಾಚರಣೆ ವಿಡಿಯೋ ಸಿಸಿಟಿವಿಯನ್ನು ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಘಟನೆಯಲ್ಲಿ ನಾಗರಿಕರಿಗೆ ಯಾವುದೇ ಹಾನಿಗಳಾಗದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಹಮಾಸ್‌ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಇಸ್ರೇಲ್‌ ಪ್ರಜೆಗಳನ್ನು ರಕ್ಷಿಸಲಾಗಿತ್ತು. ಇಸ್ರೇಲ್‌ ರಕ್ಷಣಾ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿತ್ತು. ದುರಾದೃಷ್ಟವಶಾತ್‌ ಈ ರಕ್ಷಣಾ ಕಾರ್ಯಾಚಣೆ ವೇಳೆ ಒಬ್ಬ ಇಸ್ರೇಲ್‌ ಯೋಧ ಹುತಾತ್ಮನಾಗಿದ್ದ.

ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

ಇದನ್ನೂ ಓದಿ: International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

Continue Reading

ವಿದೇಶ

Pakistan Violence: ಕುರಾನ್‌ಗೆ ಅಪಮಾನ; ಪೊಲೀಸ್‌ ಸ್ಟೇಶನ್‌ಗೆ ಬೆಂಕಿ..ಠಾಣೆಯೊಳಗೇ ಆರೋಪಿಯ ಬರ್ಬರ ಕೊಲೆ

Pakistan Violence: ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕುರಾನ್‌ ಗ್ರಂಥಕ್ಕೆ ಅವಹೇಳನ ಮಾಡಿದ ಆರೋಪದದಲ್ಲಿ ವ್ಯಕ್ತಿಯೊಬ್ಬನನ್ನು ಮಧ್ಯಾನ್‌ ಸ್ಟೇಷನ್‌ನ ಪೊಲೀಸರು ಅರೆಸ್ಟ್‌ ಮಾಡಿ ಠಾಣೆಗೆ ಕರೆತಂದಿದ್ದರು. ಇದರ ಬೆನ್ನಲ್ಲೇ ಠಾಣೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಆರೋಪಿಯನ್ನು ತಮ್ಮ ಕೈಗೊಪ್ಪಿಸುವಂತೆ ಜನ ಆಗ್ರಹಿಸಿದ್ದರು. ಇದಕ್ಕೆ ಪೊಲೀಸರು ಒಪ್ಪದೇ ಇದ್ದಾರೆ ಪೊಲೀಸರು ಮತ್ತು ಜನ ನಡುವೆ ಭಾರೀ ಘರ್ಷಣೆ ಉಂಟಾಗಿತ್ತು. ಕೊನೆಗೆ ವಿಧಿಯಿಲ್ಲದೇ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿಚಾರ್ಜ್‌ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣ ಮಧ್ಯಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

VISTARANEWS.COM


on

Pakistan Violence
Koo

ಇಸ್ಲಾಮಾಬಾದ್‌: ಇಸ್ಲಾಂ ಧರ್ಮ ಗ್ರಂಥ ಕುರಾನ್‌(Quran)ಗೆ ಅಪವಿತ್ರಗೊಳಿಸಿದ ಎಂಬ ಆರೋಪದಲ್ಲಿ ಉದ್ರಿಕ್ತ ಗುಂಪು ವ್ಯಕ್ತಿಯೊಬ್ಬನನ್ನು ಠಾಣೆಯಲ್ಲೇ ಶೂಟ್‌ ಮಾಡಿ ಕೊಂದಿರುವ ಘಟನೆ ಪಾಕಿಸ್ತಾನ(Pakistan Violence)ದಲ್ಲಿ ನಡೆದಿದೆ. ಖೈಬರ್‌ ಫಕ್ತುನ್‌ಖ್ವಾ ಜಿಲ್ಲೆಯ ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಭಾರೀ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್‌ ಬಂದೋಬಸ್ತ್‌ ವಹಿಸಲಾಗಿದೆ.

ಘಟನೆ ವಿವರ:

ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕುರಾನ್‌ ಗ್ರಂಥಕ್ಕೆ ಅವಹೇಳನ ಮಾಡಿದ ಆರೋಪದದಲ್ಲಿ ವ್ಯಕ್ತಿಯೊಬ್ಬನನ್ನು ಮಧ್ಯಾನ್‌ ಸ್ಟೇಷನ್‌ನ ಪೊಲೀಸರು ಅರೆಸ್ಟ್‌ ಮಾಡಿ ಠಾಣೆಗೆ ಕರೆತಂದಿದ್ದರು. ಇದರ ಬೆನ್ನಲ್ಲೇ ಠಾಣೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಆರೋಪಿಯನ್ನು ತಮ್ಮ ಕೈಗೊಪ್ಪಿಸುವಂತೆ ಜನ ಆಗ್ರಹಿಸಿದ್ದರು. ಇದಕ್ಕೆ ಪೊಲೀಸರು ಒಪ್ಪದೇ ಇದ್ದಾರೆ ಪೊಲೀಸರು ಮತ್ತು ಜನ ನಡುವೆ ಭಾರೀ ಘರ್ಷಣೆ ಉಂಟಾಗಿತ್ತು. ಕೊನೆಗೆ ವಿಧಿಯಿಲ್ಲದೇ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿಚಾರ್ಜ್‌ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣ ಮಧ್ಯಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಗುಂಪು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದೆ. ಬಳಿಕ ಕೆಲವರು ನೇರವಾಗಿ ಪೊಲೀಸ್‌ ಠಾಣೆಗೆ ನುಗ್ಗಿ ಆರೋಪಿ ಶೂಟ್‌ ಮಾಡಿ ಕೊಂದು ಆತನ ಮೃತದೇಹವನ್ನು ಹೊರಗೆಳೆದು ಅದನ್ನು ಮರಕ್ಕೆ ನೇತು ಹಾಕಿ ವಿಕೃತಿ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಕೆಲವು ಪೊಲೀಸರಿಗೂ ಗಂಭೀರ ಗಾಯಗಳಾಗಿವೆ ಎಂದು ಜಿಲ್ಲ ಪೊಲೀಸ್‌ ವರಿಷ್ಟಾಧಿಕಾರಿ ಜಹೀದುಲ್ಲಾ ಹೇಳಿದ್ದಾರೆ.

ಇನ್ನು ಪೊಲೀಸರ ಮಾಹಿತಿ ಪ್ರಕಾರ, ಪಂಜಾಬ್‌ನ ಸಿಯಾಲ್ಕೋಟ್‌ ಜಿಲ್ಲೆಯ ವ್ಯಕ್ತಿ ಮಧ್ಯಾನ್‌ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಕುರಾನ್‌ನ ಕೆಲವು ಪುಟಗಳನ್ನು ಹರಿದು ಸುಟ್ಟು ಹಾಕಿದ್ದ. ಇದರ ವಿರುದ್ಧ ಕೇಸ್‌ ದಾಖಲಿಸಲಾಗಿದ್ದು, ಆತನನ್ನು ಅರೆಸ್ಟ್‌ ಮಾಡಲಾಗಿತ್ತು. ಇದು ತಿಳಿಯುತ್ತಿದ್ದಂತೆ ನೂರಾರು ಮಂದಿ ಠಾಣೆ ಎದುರು ಜಮಾಯಿಸಿದ್ದರು.

ಮುಖ್ಯಮಂತ್ರಿ ಕೆಪಿಕೆ ಅಲಿ ಅಮೀನ್ ಗಂಡಾಪುರ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ವರದಿ ಕೇಳಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಐಜಿಪಿಗೆ ಸಿಎಂ ಸೂಚಿಸಿದ್ದು, ಜನರು ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದಾರೆ.

‌ಇದನ್ನೂ ಓದಿ: Actor Darshan: ದರ್ಶನ್‌ ಗ್ಯಾಂಗ್‌ನಿಂದ ಪೊಲೀಸರು ವಶಪಡಿಸಿಕೊಂಡದ್ದೇನು?

Continue Reading

ದೇಶ

International Yoga Day 2024: ಇಂದು ಯೋಗ ದಿನ; ಕಾಶ್ಮೀರದಲ್ಲಿ ಮೋದಿ ಯೋಗಾಸನ, ವಿಶ್ವಾದ್ಯಂತ ಆಚರಣೆ

International Yoga Day 2024: ಭಾರತ ಸೇರಿ ಜಗತ್ತಿನಾದ್ಯಂತ ಯೋಗ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ವಿವಿಧ ಯೋಗಾಸನಗಳ ಮೂಲಕ ನೂರಾರು ದೇಶಗಳಲ್ಲಿ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

VISTARANEWS.COM


on

International Yoga Day 2024
Koo

ನವದೆಹಲಿ: ಇಂದು ಅಂತಾರಾಷ್ಟ್ರೀಯ ಯೋಗ ದಿನ. ಭಾರತ ಸೇರಿ ಜಗತ್ತಿನಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್ ಸೆಂಟರ್ (Sher-e-Kashmir International Conference Centre)ನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆ (World Yoga Day) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಯೋಗ ದಿನದ ಕಾರ್ಯಕ್ರಮ ಆರಂಭವಾಗಲಿದೆ. ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ (International Yoga Day 2024) ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಬೆಳಗ್ಗೆ 6.30ಕ್ಕೆ ನರೇಂದ್ರ ಮೋದಿ ಅವರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಅವರು ಭಾಷಣ ಮಾಡಲಿದ್ದಾರೆ.

ಯೋಗ ದಿನಾಚರಣೆಯಲ್ಲಿ 9 ಸಾವಿರ ಮಂದಿ ಭಾಗಿ

ಸತತ ಮೂರನೇ ಬಾರಿಗೆ ಕೇಂದ್ರ ಸಚಿವರಾದ ನಂತರ ಜಮ್ಮು ರಾಜಧಾನಿ ಶ್ರೀನಗರಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಜಿತೇಂದ್ರ ಸಿಂಗ್, ಜೂನ್ 21ರಂದು ಶ್ರೀನಗರದಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲಿದ್ದಾರೆ. ಇವರ ಜತೆ ಸುಮಾರು 9,000 ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ ಮೂಲಗಳು ತಿಳಿಸಿವೆ.

Yoga practice by G-20 delegates at Hampi

ಜಗತ್ತಿನ ಎಲ್ಲೆಲ್ಲೆ ಯೋಗ ದಿನಾಚರಣೆ?

ಭಾರತ ಸೇರಿದಂತೆ ಜಗತ್ತಿನಾದ್ಯಂತ 175ಕ್ಕೂ ಅಧಿಕ ರಾಷ್ಟ್ರಗಳು ಯೋಗ ದಿನವನ್ನು ಆಚರಿಸುತ್ತವೆ. ಅದರಲ್ಲೂ, ಅಮೆರಿಕ, ಬ್ರಿಟನ್‌, ಯುಎಇ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಜಪಾನ್‌, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ ಸೇರಿ ಜಗತ್ತಿನಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತದೆ. ಬೇರೆ ದೇಶಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳಲ್ಲೂ ಯೋಗ ಸೆಷನ್‌ಗಳ ಮೂಲಕ ಆಚರಣೆ ಮಾಡಲಾಗುತ್ತದೆ. ಈ ಬಾರಿ ಶಾರ್ಜಾದಲ್ಲಿ ಭಾರತದ ರಾಯಭಾರಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನ ಯೋಗ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Yoga for students

ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ಜಗತ್ತಿನಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಇಟ್ಟರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿತ್ತು. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು 2015ರಲ್ಲಿ ಅನುಮೋದಿಸಿವೆ. ಆಗಿನಿಂದ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ.

ಯೋಗದಲ್ಲಿರುವ ಬಗೆಗಳನ್ನು, ಇದು ಮನುಷ್ಯನ ಮನಸು, ದೇಹವನ್ನು ಆರೋಗ್ಯವನ್ನಾಗಿಸುವ ರೀತಿಯನ್ನು ಮನಮುಟ್ಟುವಂತೆ ಹೇಳುತ್ತಿದೆ. ಹೀಗಾಗಿ ಯೋಗದ ಪ್ರಸಿದ್ಧಿ ದಿನೇದಿನೇ ಪ್ರಖರಿಸುತ್ತಲೇ ಇದೆ. ಹೆಚ್ಚೆಚ್ಚು ರಾಷ್ಟ್ರಗಳು ಒಪ್ಪಿಕೊಳ್ಳುತ್ತಿವೆ. ಕೊವಿಡ್ 19 ಕಾಲದಲ್ಲೂ ಕೂಡ ಜಗತ್ತಿನಾದ್ಯಂತ ಯೋಗ ಅನೇಕರ ಕೈ ಹಿಡಿದಿದೆ. ಈ ವರ್ಷ ಜೂ.21ಕ್ಕೂ ಕೂಡ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಅತ್ಯುತ್ಸಾಹದಿಂದ ಕಾಯುತ್ತಿವೆ.

ಇದನ್ನೂ ಓದಿ: Essay on Yoga: ವಿಶ್ವದ ಎಲ್ಲ ಜನರನ್ನು ಒಗ್ಗೂಡಿಸುತ್ತಿರುವುದು ಭಾರತದ ʼಯೋಗʼ

Continue Reading

ಆರೋಗ್ಯ

Essay on Yoga: ವಿಶ್ವದ ಎಲ್ಲ ಜನರನ್ನು ಒಗ್ಗೂಡಿಸುತ್ತಿರುವುದು ಭಾರತದ ʼಯೋಗʼ

Essay on Yoga: ಯೋಗಾಭ್ಯಾಸವು ಎಲ್ಲರನ್ನೂ ತಲುಪಬೇಕು, ಎಲ್ಲರೂ ಇದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ವಿಶ್ವದಾದ್ಯಂತ ಜೂನ್‌ 21ರಂದು ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day 2024) ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ, ಥೀಮ್ ಮತ್ತು ಮಹತ್ವ ಏನು? ಈ ಕುರಿತ ಪ್ರಬಂಧ ಇಲ್ಲಿದೆ.

VISTARANEWS.COM


on

By

International Yoga Day 2024
Koo

ದೈಹಿಕ (body), ಮಾನಸಿಕ (mind) ಆರೋಗ್ಯ (health) ವೃದ್ಧಿಸುವಲ್ಲಿ ಯೋಗದ (yoga) ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯೋಗವು (International Yoga Day 2024) ಪ್ರಾಚೀನ ಭಾರತದ (india) ಅಮೂಲ್ಯ ಕೊಡುಗೆಗಳಲ್ಲಿ ಒಂದು. ಯೋಗವನ್ನು ನಿತ್ಯ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಸುದೀರ್ಘ ಕಾಲದವರೆಗೆ ಕಾಪಾಡಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ಯೋಗಾಭ್ಯಾಸವು ಎಲ್ಲರನ್ನೂ ತಲುಪಬೇಕು, ಎಲ್ಲರೂ ಇದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ವಿಶ್ವದಾದ್ಯಂತ ಜೂನ್‌ 21 ರಂದು ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ತಲೆತಲಾಂತರದಿಂದ ಬಂದಿರುವ ಯೋಗವು ಶತಮಾನಗಳ ಹಿಂದಿನ ಹಳೆಯ ಅಭ್ಯಾಸವಾಗಿದೆ. ಇದು ಆರೋಗ್ಯ ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ದೇಹ, ಉಸಿರು ಮತ್ತು ಮನಸ್ಸನ್ನು ಒಗ್ಗೂಡಿಸುತ್ತದೆ. ದೇಹ ಮತ್ತು ಮನಸ್ಸಿನ ಸಾಮರ್ಥ್ಯವನ್ನು ವೃದ್ಧಿಸಲು ಇದು ಆರೋಗ್ಯಕರ ಜೀವನಶೈಲಿಗೆ ನಮ್ಮನ್ನು ಉತ್ತೇಜಿಸುತ್ತದೆ.

ವಿಶ್ವದಾದ್ಯಂತ ಕಳೆದ ಹತ್ತು ವರ್ಷಗಳಿಂದ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದೆ. ಒತ್ತಡದ ಬದುಕಿನಲ್ಲಿ ಆಂತರಿಕ ಶಾಂತಿ ಮತ್ತು ಸಮತೋಲನದ ಜೀವನಕ್ಕೆ ಇದು ದಾರಿಯನ್ನು ತೋರುತ್ತದೆ. ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ವಿವಿಧ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ತರಗತಿಗಳನ್ನು ನಡೆಸುವ ಮೂಲಕ ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಯ ಜನರು ಯೋಗದ ಪ್ರಯೋಜನಗಳನ್ನು ಅನುಭವಿಸಲು ಪ್ರೋತ್ಸಾಹಿಸಲಾಗುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆ ಏನು?

2014ರ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆಯನ್ನು ವಿಶ್ವಕ್ಕೆ ಪರಿಚಯಿಸಿದರು. ಇವರ ಈ ಪ್ರಸ್ತಾವನೆಗೆ 177 ದೇಶಗಳು ಬೆಂಬಲವನ್ನು ಗಳಿಸಿತು. ಇದು ವಿಶ್ವ ಸಂಸ್ಥೆಯಲ್ಲಿ ಅನುಮೋದಿಸಲ್ಪಟ್ಟಿದ್ದರಿಂದ ಬಳಿಕ 2015 ರ ಜೂನ್ 21ರಂದು ವಿಶ್ವದಾದ್ಯಂತ ಮೊದಲ ಬಾರಿಗೆ ಯೋಗ ದಿನವನ್ನು ಆಚರಿಸಲಾಯಿತು.

ಜೂನ್ 21ರಂದು ಯಾಕೆ ಆಚರಿಸಲಾಗುತ್ತದೆ?

ಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಅತ್ಯಂತ ದೀರ್ಘವಾದ ದಿನವಾಗಿದೆ. ಇದು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತೀಯ ಕ್ಯಾಲೆಂಡರ್‌ಗಳಲ್ಲಿ ಬೇಸಿಗೆಯ ಅಯನ ಸಂಕ್ರಾಂತಿಯು ದಕ್ಷಿಣಾಯನಕ್ಕೆ ಪರಿವರ್ತನೆಯನ್ನು ಸೂಚಿಸುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯ ಅನಂತರದ ಎರಡನೇ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣಗಳಲ್ಲಿ ಮೊದಲ ಯೋಗಿಯಾಗಿರುವ ಶಿವನು ಈ ದಿನದಂದು ಯೋಗದ ಜ್ಞಾನವನ್ನು ಉಳಿದ ಮಾನವಕುಲಕ್ಕೆ ನೀಡಲು ಪ್ರಾರಂಭಿಸಿದ ಎಂದು ನಂಬಲಾಗಿದೆ.


ಅಂತಾರಾಷ್ಟ್ರೀಯ ಯೋಗ ದಿನದ ಮೊದಲ ಆಚರಣೆ

ವಿಶ್ವದಾದ್ಯಂತ 2015ರ ಜೂನ್ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಪ್ರಧಾನಿ ಮೋದಿ ಮತ್ತು 84 ರಾಷ್ಟ್ರಗಳ ಗಣ್ಯರು ಸೇರಿದಂತೆ 35,985 ಜನರು ನವದೆಹಲಿಯ ರಾಜ್‌ಪಥ್‌ನಲ್ಲಿ 35 ನಿಮಿಷಗಳ ಕಾಲ 21 ಆಸನಗಳನ್ನು ಪ್ರದರ್ಶಿಸಿದರು. ಅಂದಿನಿಂದ ಪ್ರತಿ ವರ್ಷ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ನಗರಗಳಲ್ಲಿ ಇದೇ ರೀತಿ ಸಾಮೂಹಿಕವಾಗಿ ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಈ ವರ್ಷದ ಥೀಮ್ ಏನು?

ಈ ಬಾರಿ “ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎಂಬ ಥೀಮ್ ನೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಯೋಗದ ಮಹತ್ವವನ್ನು ತಿಳಿಸಲು ಈ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ವಿಧಾನಗಳ ಮೂಲಕ ಮಹಿಳೆಯರ ಸಬಲೀಕರಣದ ಮೇಲೆ ಕೇಂದ್ರೀಕರಿಸುವ ಯೋಗವು ಮಹಿಳೆಯರ ಜೀವನವನ್ನು ಹೇಗೆ ಧನಾತ್ಮಕವಾಗಿ ಪ್ರಭಾವಿಸುತ್ತದೆ ಎಂಬುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಯೋಗದಿಂದ ಏನು ಲಾಭ?

ಯೋಗವು ದೇಹ ಮತ್ತು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ ನಮ್ಮ ಸಂಪೂರ್ಣ ದೇಹದ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಇದನ್ನು ಎಲ್ಲಾ ವಯಸ್ಸಿನವರೂ ಮಾಡಬಹುದು.
ಯೋಗದ ನಿರಂತರ ಅಭ್ಯಾಸದಿಂದ ನಮ್ಮಲ್ಲಿ ಸಾವಧಾನತೆ, ಆಂತರಿಕ ಶಾಂತಿ ಮತ್ತು ಸುತ್ತಲಿನ ಪ್ರಪಂಚದೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಸಾಧ್ಯವಾಗುತ್ತದೆ. ಯೋಗವು ವೈಯಕ್ತಿಕ ಅಭಿವೃದ್ಧಿ ಮತ್ತು ಸ್ವಯಂ-ಆರೈಕೆಗಾಗಿ ಸಮಗ್ರ ಸಾಧನವಾಗಿದೆ.

ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಅನುಭವಿಸಲು ಯೋಗವು ಎಲ್ಲಾ ವಯಸ್ಸಿನವರು, ಹಿನ್ನೆಲೆಯುಳ್ಳವರನ್ನು ಪ್ರೋತ್ಸಾಹಿಸುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮತ್ತು ವೇಗದ ಜಗತ್ತಿನಲ್ಲಿ ಸಮತೋಲನವನ್ನು ಕಂಡುಕೊಳ್ಳುವ ಪ್ರಾಮುಖ್ಯತೆಯನ್ನು ಇದು ನೆನಪಿಸುತ್ತದೆ. ವಿಶ್ವಾದ್ಯಂತ ಜನರನ್ನು ಒಗ್ಗೂಡಿಸಿ ಸಮುದಾಯದಲ್ಲಿ ಶಾಂತಿ, ಸಾಮರಸ್ಯ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವಿವಿಧ ಸಂಘ ಸಮಸ್ಥೆಗಳ ಬೆಂಬಲ

ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ತೇಜಿಸುವಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಭಾರತದಲ್ಲಿ, ಆಯುಷ್ ಸಚಿವಾಲಯ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ. ಶಿಕ್ಷಣ ಸಂಸ್ಥೆಗಳು, ಲಾಭರಹಿತ, ಮತ್ತು ಯೋಗ ಕೇಂದ್ರಗಳು ವಿವಿಧ ಆಚರಣೆಗಳನ್ನು ಆಯೋಜಿಸುತ್ತದೆ.

ಇದನ್ನೂ ಓದಿ: Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!


ಯೋಗದ ಮಹತ್ವ ಏನು?

ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆ, ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಈಡೇರಿಕೆ, ಮನುಷ್ಯ ಮತ್ತು ಪ್ರಕೃತಿ, ಆರೋಗ್ಯ ಮತ್ತು ಯೋಗಕ್ಷೇಮದ ನಡುವಿನ ಸಾಮರಸ್ಯಕ್ಕೆ ಸಮಗ್ರ ವಿಧಾನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ಸಾರಿದ್ದಾರೆ.

ಯೋಗದ ಪ್ರಾಚೀನ ಬೇರುಗಳು ಮತ್ತು ಆಧುನಿಕ ರೂಪಾಂತರಗಳೊಂದಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ. ಅಭ್ಯಾಸವು ಸಮತೋಲನ ಮತ್ತು ಆಂತರಿಕ ಶಾಂತಿಯ ಪ್ರಜ್ಞೆಯನ್ನು ಬೆಳೆಸಲು ಸಾವಧಾನತೆ, ಉಸಿರಾಟದ ತಂತ್ರಗಳು ಮತ್ತು ದೈಹಿಕ ಭಂಗಿಗಳನ್ನು ಒತ್ತಿಹೇಳುತ್ತದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಸ್ಮರಿಸಲು ಜನರು ಒಗ್ಗೂಡಿ ಕಾಲಾತೀತವಾಗಿ ಇದನ್ನು ಆಚರಿಸುತ್ತಾರೆ. ಸ್ವಯಂ-ಆರೈಕೆ ಮತ್ತು ಸ್ವಯಂ-ಸುಧಾರಣೆಗೆ ಇದು ಬದ್ಧತೆಯನ್ನು ತೋರುವಂತೆ ಮಾಡುತ್ತಿದೆ ಎಂದು ಅವರು ಹೇಳುತ್ತಾರೆ. ಆರೋಗ್ಯ, ಸಾಮರಸ್ಯ ಮತ್ತು ಏಕತೆಯ ಆಚರಣೆಯಲ್ಲಿ ಯೋಗವು ವಿಶ್ವದ ಎಲ್ಲ ಜನರನ್ನು ಒಗ್ಗೂಡಿಸಲು ಪ್ರೇರಣೆಯಾಗಿದೆ.

Continue Reading
Advertisement
IRCTC Ticket Booking
Latest2 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest5 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ10 mins ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್38 mins ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ45 mins ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Pakistan Violence
ವಿದೇಶ1 hour ago

Pakistan Violence: ಕುರಾನ್‌ಗೆ ಅಪಮಾನ; ಪೊಲೀಸ್‌ ಸ್ಟೇಶನ್‌ಗೆ ಬೆಂಕಿ..ಠಾಣೆಯೊಳಗೇ ಆರೋಪಿಯ ಬರ್ಬರ ಕೊಲೆ

Actor Darshan was careful at every step to escape from Renuka case
ಸ್ಯಾಂಡಲ್ ವುಡ್1 hour ago

Actor Darshan: ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದ ದರ್ಶನ್; ಬೇಟೆಯ ಹಿಂದೆ ಭರ್ಜರಿ ಮಾಸ್ಟರ್‌ ಪ್ಲ್ಯಾನ್‌!

pm narendra modi international yoga day 2024
ಪ್ರಮುಖ ಸುದ್ದಿ2 hours ago

International Yoga Day 2024: ಯೋಗ ದಿನಚರಿಯ ಭಾಗವಾಗಲಿ: ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ

Darshan Arrested troll of pavithra darshan in SSE A
ಸ್ಯಾಂಡಲ್ ವುಡ್2 hours ago

Darshan Arrested: ಇದು ʻಸಪ್ತ ಶೆಡ್ಡಿನಾಚೆ SSE side ‘D’! ಟ್ರೋಲ್‌ ಆದ್ರು ದರ್ಶನ್‌-ಪವಿತ್ರಾ!

Pavithra Gowda is restless without proper food and sleep in Parappa Agrahara
ಕ್ರೈಂ2 hours ago

Pavithra Gowda: ಪರಪ್ಪನ ಅಗ್ರಹಾರದಲ್ಲಿ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿರುವ ಪವಿತ್ರ ಗೌಡ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌