Dr Doddarange Gowda | ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ದೊಡ್ಡರಂಗೇಗೌಡಗೆ ಸನ್ಮಾನ - Vistara News

ಕನ್ನಡ ಸಾಹಿತ್ಯ ಸಮ್ಮೇಳನ

Dr Doddarange Gowda | ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ದೊಡ್ಡರಂಗೇಗೌಡಗೆ ಸನ್ಮಾನ

Dr Doddarange Gowda | ವೆಂಕಟೇಶ ಶೇಷಾದ್ರಿ ಅವರ “ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತುʼ ಪುಸ್ತಕವನ್ನು ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಬಿಡುಗಡೆ ಮಾಡಿದ್ದಾರೆ.

VISTARANEWS.COM


on

Dr Doddarange Gowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಡಾ. ದೊಡ್ಡರಂಗೇಗೌಡ (Dr Doddarange Gowda) ಅವರನ್ನು ಪಿ.ಆರ್. ಮುರಳಿಧರ್, ವೆಂಕಟೇಶ ಶೇಷಾದ್ರಿ ಹಾಗೂ ಸಂಪತ್ ಕುಮಾರ್ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ವೆಂಕಟೇಶ ಶೇಷಾದ್ರಿ ಅವರು ಸಂಪಾದಿಸಿರುವ “ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತುʼ ಪುಸ್ತಕವನ್ನು ಡಾ. ದೊಡ್ಡರಂಗೇಗೌಡ ಅವರು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ | Yakshagana Program : ಬಾಲ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ; ಯಶಸ್ವಿ ಪ್ರದರ್ಶನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕನ್ನಡ ಸಾಹಿತ್ಯ ಸಮ್ಮೇಳನ

Sahitya Sammelana: ಮಾ.20 ರಂದು ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ವಿ.ಗಣೇಶ್ ಅಧ್ಯಕ್ಷತೆ

Sahitya Sammelana: ಹಿರಿಯ ಸಾಹಿತಿ ವಿ.ಗಣೇಶ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಹಾಲಪ್ಪ ಅವರು ಉದ್ಘಾಟಿಸಲಿದ್ದಾರೆ.

VISTARANEWS.COM


on

V Ganesh writer Sahitya Sammelana sagara
ಹಿರಿಯ ಸಾಹಿತಿ ವಿ.ಗಣೇಶ್.
Koo

ಸಾಗರ: ಇಲ್ಲಿನ ಶಿವಪ್ಪ ನಾಯಕ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Sahitya Sammelana) ಹಿರಿಯ ಸಾಹಿತಿ ವಿ.ಗಣೇಶ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಮಾ. 20ರಂದು ಬೆಳಗ್ಗೆ 9 ರಿಂದ ಆಯೋಜಿಸಲಾಗಿದೆ.

ಬೆಳಗ್ಗೆ 8.45ಕ್ಕೆ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ರಾಷ್ಟ್ರ ಧ್ವಜಾರೋಹಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲಾಳ ನಾಡ ಧ್ವಜವನ್ನು ಹಾಗೂ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ನಾಡ ಧ್ಜಜಾರೋಹಣ ನೆರವೇರಿಸುವರು.

ಬೆಳಗ್ಗೆ 9ಕ್ಕೆ ಶಿವಪ್ಪ ನಾಯಕ ನಗರ ಆಶ್ರಮ ಶಾಲೆಯಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆಯನ್ನು ಕಲಾ ತಂಡಗಳೊಂದಿಗೆ ಆಯೋಜಿಸಿದ್ದು ಬಿಇಒ ಯಮನೂರಪ್ಪ, ನಗರಸಭೆ ಸದಸ್ಯರಾದ ಸವಿತಾವಾಸು, ಮಧುಮಾಲತಿ, ಉಮೇಶ್ ಎ, ಸಬೀನಾ ತನ್ವೀರ್, ಬಿ.ಎಚ್.ಲಿಂಗರಾಜ್, ಗಜೇಂದ್ರ, ಡಿ.ಕೆ.ಮೋಳೆ ಮೊದಲಾದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಪೂರ್ತಿಯಾಗಿ ಮಾಡಿದ್ರಾ ರಿಷಬ್‌?ವಿಡಿಯೊದಲ್ಲಿ ಏನಿದೆ?

ಬೆಳಗ್ಗೆ 10ಕ್ಕೆ ಶಾಸಕ ಎಚ್. ಹರತಾಳು ಹಾಲಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ನಾ.ಡಿಸೋಜ ದಿಕ್ಸೂಚಿ ಮಾತುಗಳನ್ನಾಡುವರು. ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮೋಹನ್ ಮೂರ್ತಿ, ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್, ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಜಿ, ಪ್ರಮುಖರಾದ ಬಿ.ಆರ್.ಜಯಂತ್, ಗಣೇಶ್ ಪ್ರಸಾದ್, ಸೈಯದ್ ಜಾಕೀರ್, ವಿಜಯ ಕುಮಾರ್ ವಿ.ಕೆ, ಮೊದಲಾದವರು ಉಪಸ್ಥಿತರಿರುವರು.

ಬೆಳಗ್ಗೆ 11.45 ಕ್ಕೆ ವರ್ತಮಾನದ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ ಕೆ.ಎನ್.ವೆಂಕಟಗಿರಿ ವಹಿಸಲಿದ್ದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಆರಡಿ ಮಲ್ಲಯ್ಯ ಕಟ್ಟೇರ ವಿಷಯ ಮಂಡಿಸಲಿದ್ದಾರೆ. ವೇದಿಕೆಯಲ್ಲಿ ಗಣಪತಿ ಮಂಡಗಳಲೆ, ಶಿವಾನಂದ ಕುಗ್ವೆ, ಪರಮೇಶ್ವರ ದೂಗೂರು, ಲಕ್ಷ್ಮಣ್ ಸಾಗರ್, ರವಿರಾಜ್ ಮಂಡಗಳಲೆ, ರಾಮಚಂದ್ರ ಸಾಗರ್, ಸಫ್ರಾಜ್ ಚಂದ್ರಗುತ್ತಿ, ಡಾ.ಕೆಳದಿ ವೆಂಕಟೇಶ್ ಜೋಯಿಸ್, ಸತೀಶ್ ಕೆ. ಉಪಸ್ಥಿತರಿರುವರು. ಮಧ್ಯಾಹ್ನ 12.45ರಿಂದ ನಡೆಯುವ ಎರಡನೇ ಗೋಷ್ಠಿ ರಾಜಕೀಯ ಮತ್ತು ಮಹಿಳಾ ಪ್ರಾತಿನಿಧ್ಯ ಗೋಷ್ಠಿ ಅಧ್ಯಕ್ಷತೆಯನ್ನು ಹೆಸರಾಂತ ವೈದ್ಯೆ ಡಾ.ರಾಜನಂದಿನಿ ಕಾಗೋಡು ವಹಿಸಲಿದ್ದು ಸಾಹಿತಿ ಹಾಗೂ ಉಪನ್ಯಾಸಕಿ ಡಾ. ವಸುಮತಿ ಗೌಡ ವಿಷಯ ಮಂಡಿಸುವರು. ವೇದಿಕೆಯಲ್ಲಿ ಎನ್.ಲಲಿತಮ್ಮ, ಶರಾವತಿ ಸಿ.ರಾವ್, ರೋಹಿಣಿ ಶರ್ಮ, ಚೂಡಾಮಣಿ ರಾಮಚಂದ್ರ, ಸುಮಂಗಲ ರಾಮಕೃಷ್ಣ, ವೀಣಾ ನಾಯ್ಡು, ಕಸ್ತೂರಿ ಸಾಗರ್, ನಾದಿರ ಪರ್ವಿನ್ ಉಪಸ್ಥಿತರಿರುವರು.

ಮಧ್ಯಾಹ್ನ 2.15ಕ್ಕೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಂಬ್ರಯ್ಯ ಮಠ ವಹಿಸಲಿದ್ದು, ಸಾಹಿತಿ ಡಾ.ಗುರುದತ್ತ ಶಿವಮೊಗ್ಗ ಇವರು ವಿಷಯ ಮಂಡಿಸಲಿದ್ದಾರೆ. ಗೋಷ್ಠಿಯಲ್ಲಿ ಕೃಷ್ಣಯ್ಯ, ತಿಮ್ಮಪ್ಪ ಕಲಸಿ, ಪ್ರೊ.ಮಹಾಬಲೇಶ್ವರ, ಶಕುಂತಲ ಹಿರೇಮಠ, ಈಳಿ ಶ್ರೀಧರ್, ಎಸ್.ಬಿ.ಮಹಾದೇವ್, ಬಿ.ಜಿ.ಮಂಜಪ್ಪ, ಮ.ಸ.ನಂಜುಂಡಸ್ವಾಮಿ, ದಿನೇಶ್ ಶಿರವಾಳ, ರಮೇಶ್ ಕೆಳದಿ, ಸತ್ಯನಾರಾಯಣ ಖಂಡಿಕಾ, ಬಿ.ಡಿ.ರವಿಕುಮಾರ್ ಉಪಸ್ಥಿತರಿರುವರು.

ಮಧ್ಯಾಹ್ನ 3ಕ್ಕೆ ನಡೆಯುವ ಕಾವ್ಯ ಕಲರವ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ವಹಿಸಲಿದ್ದು, ಗೋಷ್ಠಿಯಲ್ಲಿ ಕುಸುಮ ಸುಬ್ಬಣ್ಣ, ಶಂಕರ್ ಅಳ್ವಿಕೋಡು, ತಸ್ರಿಫ್ ಇಬ್ರಾಹಿಂ ಉಪಸ್ಥಿತರಿರುವರು. ಕವಿಗೋಷ್ಠಿಯಲ್ಲಿ ಭಾಗೀರಥಿ, ಚಂದ್ರಶೇಖರ್ ಸಿರಿವಂತೆ, ಯೋಗೀಶ್ ಭಟ್, ಚಂದ್ರಮೌಳಿ, ವಿಷ್ಣುಮೂರ್ತಿ, ಆನಂದಪುರ, ಪಾಲಾಕ್ಷಪ್ಪ ಎಸ್.ಎನ್, ಗವಿಯಪ್ಪ ಎಲ್.ಟಿ., ಜಗನ್ನಾಥ ಕೆ, ಗಜಾನನ, ಡಾ.ಅನ್ನಪೂರ್ಣ, ಅರ್ಚನ ಪ್ರಸನ್ನ, ಅವಿನಾಶ್ ಜಿ, ಗಾರ್ಗಿ ಬಂದಗದ್ದೆ, ಭದ್ರಪ್ಪ ಗೌಡ, ವೆಂಕಟೇಶ್ ಸಂಪ, ಕವನ ವಾಚಿಸಲಿದ್ದಾರೆ, ಎಚ್.ಜಿ.ಸುಬ್ರಹ್ಮಣ್ಯ ಭಟ್, ಕೋದಂಡ ಸಾಗರ್, ದೀಪಕ್ ಸಾಗರ್, ಸಹನಾ ಜಿ ಭಟ್ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: World Sleep Day : ಉದ್ಯೋಗಿಗಳಿಗೆ ಸಾವಕಾಶ ನಿದ್ದೆ ಮಾಡಲು ರಜೆ ಘೋಷಿಸಿದ ಬೆಂಗಳೂರಿನ ವೇಕ್‌ಫಿಫ್ಟ್

ಸಂಜೆ 4ಕ್ಕೆ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದು ಶಾಸಕರಾದ ಎಚ್. ಹರತಾಳು ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದು ಸಂಸದರಾದ ಬಿ.ವೈ.ರಾಘವೇಂದ್ರ, ಮಾಜಿ ವಿಧಾನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಸಾಧಕರನ್ನು ಸನ್ಮಾನಿಸುವರು, ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಅಧಿಕಾರಿ ರೋಹನ್ ಜಗದೀಶ್, ಪ್ರಮುಖರಾದ ಅಶ್ವಿನಿ ಕುಮಾರ್, ಟಿ.ಡಿ.ಮೇಘರಾಜ್, ಐ.ಎನ್.ಸುರೇಶ್ ಬಾಬು, ಶ್ರೀನಿವಾಸ್ ಆರ್, ಟಿ.ವಿ.ಪಾಂಡುರಂಗ ಉಪಸ್ಥಿತರಿರುವರು, ಡಾ.ಎಚ್.ಎಸ್.ಮೋಹನ್-ಸಾಹಿತ್ಯ, ಮುನಾಫ್ ಶ್ರೀಧರನಗರ-ಕಾಯಕ, ಗಣಪತಿಯಪ್ಪ ಜಂಬೂರು ಮನೆ-ಕೃಷಿ, ಅಬಸೆ ದಿನೇಶ್ ಕುಮಾರ್ ಜೋಷಿ-ಸಮಾಜಸೇವೆ, ಎಂ.ಎಸ್.ಗೌಡರು —ಕಾನೂನು, ಫ್ರಾನ್ಸಿಸ್ ಪಿಯೂಸ್ ಫರ್ನಾಂಡಿಸ್-ಸಾಂಸ್ಕೃತಿಕ, ಡಿ.ಎಂ.ಗಜಾನನ-ಕಲೆ, ಮಂಜಣ್ಣ-ಶ್ರಮಜೀವಿ, ಸಾವಿತ್ರಿ-ಮಹಿಳಾ ಕ್ಷೇತ್ರ, ರೋಟರಿ ರಕ್ತನಿಧಿ-ಸಂಘ ಸಂಸ್ಥೆ, ಸರ್ಕಾರಿ ಉರ್ದು ಪ್ರೌಢಶಾಲೆ-ಶಿಕ್ಷಣ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು.

ಇದನ್ನೂ ಓದಿ: Shakib Al Hasan: ಜುವೆಲ್ಲರಿ ಶಾಪ್​ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲ್ಲೆಗೊಳಗಾದ ಬಾಂಗ್ಲಾ ಆಟಗಾರ​; ವಿಡಿಯೊ ವೈರಲ್

ಸಂಜೆ 5.30ಕ್ಕೆ ಕ.ಸಾ.ಪ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಾಹಿತಿ ಹಾಗೂ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶುಭಾ ಮರವಂತೆ ಸಮಾರೋಪ ನುಡಿಗಳನ್ನಾಡುವರು. ವೇದಿಕೆಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ರಾಯ್ಕರ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಕೆ. ದಿವಾಕರ್, ಪೌರಾಯುಕ್ತ ಸಿ.ಚಂದ್ರಪ್ಪ, ಹೆಚ್.ಕೆ.ನಾಗಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಹಿತಕರ್ ಜೈನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜನಾರ್ಧನ ಪೂಜಾರಿ ಮೊದಲಾದವರು ಉಪಸ್ಥಿತರಿರುವರು.

ಸಮ್ಮೇಳನಾಧ್ಯಕ್ಷರ ಪರಿಚಯ

ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಮಾ. 20 ರಂದು ಆಯೋಜಸಿರುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ವಿ.ಗಣೇಶ್ ಅವರು ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video : ರಾಷ್ಟ್ರೀಯ ಹೆದ್ದಾರಿಯಲ್ಲಿ ಬರ್ತ್‌ಡೇ ಆಚರಿಸಿಕೊಂಡ ಯೂಟ್ಯೂಬರ್‌; ಪೊಲೀಸರಿಂದ ಭರ್ಜರಿ ಗಿಫ್ಟ್‌!

ಸಾಗರದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಮಾರು 38 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾ ಸಹಸ್ರಾರು ವಿದ್ಯಾರ್ಥಿಗಳಿಗೆ ಗಣಿತ ಮತ್ತು ಇಂಗ್ಲಿಷ್ ಎರಡನ್ನೂ ಬೋಧಿಸುತ್ತಾ ಮೆಚ್ಚಿನ ಶಿಕ್ಷಕರಾಗಿ ಅವರ ಬದುಕನ್ನು ಬೆಳಗುವುದರಲ್ಲಿ ಸಹಕಾರಿಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿ ಕಾಲೇಜನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ನಿವೃತ್ತಿ ನಂತರ ನಿಂತ ನೀರಾಗದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಪಾಂಡಿತ್ಯವನ್ನು ಹೊಂದಿರುವ ಗಣೇಶ್‍ ಅವರು ಎರಡೂ ಭಾಷೆಗಳಲ್ಲಿ ಕಥೆ, ಕಾದಂಬರಿ, ಕವನ, ಅನುವಾದ ಮುಂತಾದ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಮಕ್ಕಳ ಸಾಹಿತ್ಯ ಕುರಿತು ಹೆಚ್ಚಿನ ಕೃತಿ ರಚನೆ ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar: ರಾಘಣ್ಣನ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆ

ಸಾರ್ವಜನಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿರುವ ವಿ.ಗಣೇಶ್, ಸುಗಮ ಸಂಗೀತ ಪರಿಷತ್, ಸಿರಿಗನ್ನಡ ವೇದಿಕೆ, ಸ್ಮಾರ್ತ ಬ್ರಾಹ್ಮಣ ಒಕ್ಕೂಟ, ಎಸ್.ವಿ.ಪಿ. ಕಾಲೋನಿ ರಾಮ ಮಂದಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಸುಮ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಗರದ ಶ್ರೀ ಶೃಂಗೇರಿ ಶಂಕರ ಮಠ, ನಿವೃತ್ತ ನೌಕರರ ಸಂಘ, ರಾಷ್ಟ್ರೋತ್ತಾನ ಪರಿಷತ್ತು, ಹೊಸಪೇಟೆಯ ಶಂಕರ ಸಾಹಿತ್ಯ ಪರಿಷತ್ತು,, ಜನ್ ಜೀವನ್ ಜಾಗೃತ್ ವೇದಿಕೆ ಮುಂತಾದ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುತ್ತಾರೆ. ಇತ್ತೀಚೆಗೆ ಶಿಕಾರಿಪುರದ ಹಳೆಯ ವಿದ್ಯಾರ್ಥಿಗಳ ಸಂಘವು ಶ್ರೀಯುತರನ್ನು ಗೌರವಿಸಿ ಪ್ರಸನ್ನವದನ ಪ್ರಥಿತರು ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿರುತ್ತಾರೆ.

ಪತ್ನಿ ನಿರ್ಮಲಾ ಅವರೊಂದಿಗೆ ಸಾಗರದಲ್ಲಿ ವಾಸವಾಗಿರುವ ಗಣೇಶ್ ಅವರಿಗೆ ಸಾಫ್ಟ್ ವೇರ್ ಎಂಜಿನಿಯುರುಗಳಾಗಿ ಕೆಲಸ ಮಾಡುತ್ತಿರುವ ಆಕಾಶ್ ಮತ್ತು ಅವಿನಾಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆಕಾಶ್ ಕೆನಡಾದಲ್ಲಿದ್ದರೆ, ಅವಿನಾಶ್ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಗಣೇಶ್ ಅವರ ಇಬ್ಬರು ಮಕ್ಕಳೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Kr pura to Whitefield Metro: ಕೆ.ಆರ್. ಪುರಂನಿಂದ ವೈಟ್ ಫೀಲ್ಡ್ ಮೆಟ್ರೋ ಓಡಾಟಕ್ಕೆ ಕೌಂಟ್‌ಡೌನ್‌ ಆರಂಭ; ಮಾರ್ಚ್‌ 25ಕ್ಕೆ ಡೇಟ್‌ ಫಿಕ್ಸ್‌!

Continue Reading

ಕನ್ನಡ ಸಾಹಿತ್ಯ ಸಮ್ಮೇಳನ

ಕಸಾಪ ಸದಸ್ಯತ್ವದಿಂದ ಡಿಡಿ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ. ಯಲಿಗಾರ್‌ ಅಮಾನತು, ಪ್ರಶಸ್ತಿ ವಾಪಸ್‌

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡೀಸೆಲ್‌ ವ್ಯವಸ್ಥೆ ಮಾಡಿಕೊಡದ್ದನ್ನು ಆಕ್ಷೇಪಿಸುವ ವೇಳೆ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಿರ್ಮಲಾ ಸಿ ಯಲಿಗಾರ್‌ ಅವರನ್ನು ಸಂಸ್ಥೆಯ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

VISTARANEWS.COM


on

Nirmala C yaligar
Koo

ಬೆಂಗಳೂರು: ದೂರದರ್ಶನ ಚಂದನದ ಸಹಾಯಕ ನಿರ್ದೇಶಕಿಯಾಗಿರುವ ನಿರ್ಮಲಾ ಸಿ. ಯಲಿಗಾರ್ʼ ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ ಮತ್ತು ಅವರಿಗೆ ಪ್ರಕಟಿಸಲಾಗಿದ್ದ ಶ್ರೀಮತಿ ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿಯ ಆಯ್ಕೆಯನ್ನು ಹಿಂಪಡೆಯಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಸಂಬದ್ಧವಾಗಿ ನಡೆದುಕೊಂಡಿದ್ದಲ್ಲದೆ, ಕನ್ನಡ ಸಾಹಿತ್ಯ ಪರಿಷತ್‌ ವಿರುದ್ಧ ಮೌನಾಚರಣೆಯ ಪ್ರತಿಭಟನೆ ದಾಖಲಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಹಿತ್ಯ ಪರಿಷತ್‌ನ ಮಾಧ್ಯಮ ಸಲಹೆಗಾರರಾದ ಶ್ರೀನಾಥ್‌ ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ಮಲಾ ಸಿ. ಯಲಿಗಾರ್‌ ಮೇಲಿನ ಆರೋಪವೇನು?

1. ಈ ವರ್ಷದ ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ನಿರ್ಮಲಾ ಸಿ. ಯಲಿಗಾರ್‌ ಅವರು ತಮ್ಮ 31 ಸಿಬ್ಬಂದಿಗಳಿಗೆ ವಸತಿ ಮತ್ತು ಕಾರ್ಯಕ್ರಮಗಳ ಪ್ರಸಾರಕ್ಕೆ 65/35 ಕೆವಿಎ ಡಿಸೇಲ್ ಜನರೇಟರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡಲಿಲ್ಲ, ಎಂಬ ಕಾರಣಕ್ಕಾಗಿ ಜನವರಿ 6ರಂದು ಮಾಧ್ಯಮಗಳ ಎದುರು ಹಾಗೂ ಜನಸಾಮಾನ್ಯರ ಎದುರು ಅಸಂಬದ್ಧವಾಗಿ ಮಾತನಾಡಿದ್ದರು.

2. ನಿರ್ಮಲಾ ಸಿ. ಯಲಿಗಾರ್‌ ಅವರು ಜನವರಿ 8ರಂದು ದೂರದರ್ಶನ ಕೇಂದ್ರದಲ್ಲಿ ಸಾಹಿತ್ಯ ಪರಿಷತ್‌ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದಾರೆ. ಮತ್ತು ಇದನ್ನು ಸಾಮಾಜಿಕ ಜಾಲ ತಾಣದಲ್ಲೂ ಪ್ರಕಟಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ಆಕ್ಷೇಪವೇನು?

1. ಕನ್ನಡ ಸಾಹಿತ್ಯ ಪರಿಷತ್‌ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಮಾಡಿದ ಅಪಮಾನ.
2. ಈ ರೀತಿ ಮೌನಾಚರಣೆ ಮಾಡುವುದು ಯಾರಾದರು ಮೃತ ಹೊಂದಿದ ಸಂದರ್ಭದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತು ಮೃತ ಹೊಂದುವ ಸಂಸ್ಥೆಯಲ್ಲ. ಸೂರ್ಯ ಚಂದ್ರರಿರುವವರೆಗೂ ಹಾಗೂ ಕನ್ನಡಿಗರು ಈ ಭೂಮಿಯಲ್ಲಿ ಇರುವವರೆಗೂ ಪರಿಷತ್ತು ಜೀವಂತವಾಗಿರುವ ಸಂಸ್ಥೆ.
3. ನಿರ್ಮಲಾ ಯಲಿಗಾರ್‌ ಅವರಿಗೆ ಫೆಬ್ರವರಿ 7ರಂದು ನೀಡಿದ್ದ ಕಾನೂನು ತಿಳುವಳಿಕೆ ಪತ್ರಕ್ಕೆ 15 ದಿನದಲ್ಲು ವಿವರಣೆ ಕೋರಿದ್ದರೂ ಅದನ್ನು ನೀಡಿಲ್ಲ. ಹೀಗಾಗಿ ಅವರನ್ನು ಸದಸ್ಯತ್ವದಿಂದ ವಜಾ ಮಾಡಲಾಗಿದೆ.

ಪಂಕಶ್ರೀ ಸಾಹಿತ್ಯ ಪ್ರಶಸ್ತಿ ವಾಪಸ್‌

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್‌ 6ರಂದು ಪರಿಷತ್‌ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಮಲಾ ಸಿ. ಯಲಿಗಾರ್‌ ಅವರಿಗೆ ನೀಡಿದ ʻಶ್ರೀಮತಿ ಪಂಕಜಶ್ರೀ ಸಾಹಿತ್ಯ ಪ್ರಶಸ್ತಿʼ ಆಯ್ಕೆಯನ್ನು ಹಿಂಪಡೆಯಲು ನಿರ್ಧರಿಸಲಾಯಿತು.

ಇದನ್ನೂ ಓದಿ : BKS Varma Death | ಬಿ.ಕೆ.ಎಸ್‌. ವರ್ಮ ಅವರಿಗೆ ಕೊನೆಗೂ ಗೌರವ ನೀಡಿತ್ತು ಕನ್ನಡ ಸಾಹಿತ್ಯ ಪರಿಷತ್ತು

Continue Reading

ಕನ್ನಡ ಸಾಹಿತ್ಯ ಸಮ್ಮೇಳನ

Sahitya Sammelana: ಜಾತಿ, ಧರ್ಮ ಮೀರಿರುವುದೇ ಸಾಹಿತ್ಯ: ಎಸ್.ಜಿ. ಸಿದ್ದರಾಮಯ್ಯ

Sahitya Sammelana: ಶಿವಮೊಗ್ಗ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಾಹಿತ್ಯವು ಸೋತವರಿಗೆ ಸಾಂತ್ವನ ನೀಡುತ್ತದೆ‌ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

sahitya sammelana shivamogga
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರು ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರನ್ನು ಸನ್ಮಾನಿಸಿದರು.
Koo

ಶಿವಮೊಗ್ಗ: ಸಾಹಿತ್ಯವೆಂಬುದು (Sahitya Sammelana) ಜಾತಿ ಧರ್ಮಗಳನ್ನು ಮೀರಿದೆ. ನೋವುಂಡವರ ನೆಲೆಗೆ ಹತ್ತಿರವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಭಾಷೆ ಎಂಬುದು ನೆಪ. ಅದರೊಳಗಿರುವ ವಿಶ್ವಕ್ಕೆ ಯಾವುದೇ ಅಡತಡೆಗಳಿಲ್ಲ. ಅದಕ್ಕಾಗಿಯೇ ವಾಲ್ಮೀಕಿ, ಟಾಲ್‌ಸ್ಟಾಯ್ ತಮ್ಮ ಸಾಹಿತ್ಯದ‌ ಮೂಲಕ ಹತ್ತಿರವಾಗುತ್ತಾರೆ. ಸಾಹಿತ್ಯವು ಸೋತವರಿಗೆ ಸಾಂತ್ವನ ನೀಡುತ್ತದೆ‌. ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿಯನ್ನು ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಲವರಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲಕ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸಾಕ್ಷಿ ಪ್ರಜ್ಞೆ ಮೂಡಿಸಿದರು ಎಂದರು.

ಇದನ್ನೂ ಓದಿ: Crocodile attack: ರಾಯಚೂರಿನಲ್ಲಿ ಬಾಲಕನ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್‌

ದುಸ್ತರ ಕಾಲಘಟ್ಟದಲ್ಲಿ ಅದನ್ನು ಎದುರಿಸುವ ಮನಸ್ಸುಗಳನ್ನು ಬೆಂಬಲಿಸದಿದ್ದಲ್ಲಿ ಅದು ನಾವು ಮಾಡಿದ ದ್ರೋಹದಂತಾಗುತ್ತದೆ. ಜಾಗತಿಕ ನೆಲೆಯೊಳಗೆ ಎದುರಿಸುತ್ತಿರುವ ಕನ್ನಡದ‌ ಸಮಸ್ಯೆಗಳ ಬಗ್ಗೆ ಮುಖಾಮುಖಿ ಚರ್ಚೆಗಳ ಅವಶ್ಯಕತೆಯಿದೆ. ಗಂಭೀರವಾದ ವಿಚಾರಗಳ ಚರ್ಚೆ ಸಾಹಿತ್ಯ ಸಮ್ಮೇಳನದ ಘನತೆ ಹೆಚ್ಚಿಸಿದೆ. ಅಧ್ಯಾಪಕರು ಶಿಕ್ಷಣದ ಬಗ್ಗೆ ಚರ್ಚಿಸುವ ಗೋಷ್ಠಿಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಭಾಯಿಸಬೇಕಾದ ಕೌಶಲ್ಯತೆ ರೂಢಿಸಿಕೊಳ್ಳಬೇಕಿದೆ. ಸಾಹಿತ್ಯ ಸಮ್ಮೇಳನದ ಚರ್ಚಿತ ವಿಚಾರಗಳನ್ನು ಕನ್ನಡದ ಮನಸ್ಸುಗಳು ಆತ್ಮಾವಲೋಕನ ನಡೆಸಬೇಕಿದೆ ಎಂದು ಹೇಳಿದರು‌.

ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಮಾತನಾಡಿ, ಸಾಹಿತ್ಯ ಸಮ್ಮೇಳನ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾರಸ್ವತ ಲೋಕದಿಂದ ಅನೇಕ ಗೌರವ ಪಡೆಯುವಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Karnataka Election: ವಿಧಾನಸಭೆಗೆ ಸ್ಪರ್ಧಿಸುವೆನೆಂದು ಪತ್ರ ಬರೆದ ಎಂಎಲ್‌ಸಿ ಆಯನೂರು ಮಂಜುನಾಥ್;‌ ಈಶ್ವರಪ್ಪಗೆ ಅಡ್ಡಗಾಲು?

ಮುಖ್ಯ ಅತಿಥಿ ಅರಣ್ಯ ಇಲಾಖೆ‌ಯ ನೌಕರರ ಮಹಾಮಂಡಲದ‌ ರಾಜ್ಯಾಧ್ಯಕ್ಷ ರಘುರಾಮ ದೇವಾಡಿಗ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರು ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರನ್ನು ಸನ್ಮಾನಿಸಿದರು. ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಶಿಕಾರಿಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಹೊಸನಗರ ತಾಲೂಕು ಕಸಾಪ ಅಧ್ಯಕ್ಷ ತಾ.ಮ.ನರಸಿಂಹ, ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Continue Reading

ಉತ್ತರ ಕನ್ನಡ

Siddapura News: ಇಂದು ಪಟ್ಟಣದಲ್ಲೂ ಪುಸ್ತಕದ ಅಂಗಡಿಗಳಿಲ್ಲ; ಸರಕಾರಕ್ಕೆ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲ: ಸಾಹಿತಿ ನಾಗೇಶ್ ಹೆಗಡೆ

Siddapura News: ಇಂದಿನ ಬದುಕಿಗೆ ಎಂತಹ ಸಾಹಿತ್ಯಗಳು ಬೇಕು ಎನ್ನುವುದನ್ನು ಚರ್ಚಿಸುವ ಅಗತ್ಯ ಇದೆ ಎಂದು ಸಾಹಿತಿ ನಾಗೇಶ್ ಹೆಗಡೆ ಬಕ್ಕೆಮನೆ ಹೇಳಿದರು.

VISTARANEWS.COM


on

Siddapura sahitya sammelana
ಶಂಕರ ಮಠದಲ್ಲಿ ನಡೆದ 6 ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಾಹಿತಿ ನಾಗೇಶ್ ಹೆಗಡೆ ಬಕ್ಕೆಮನೆ.
Koo

ಸಿದ್ದಾಪುರ: ಹೊರಗಿನ ಜ್ಞಾನ ನಮ್ಮಲ್ಲಿ ಪ್ರಜ್ವಲಿಸಬೇಕು. ನಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸಬೇಕು. ಇಲ್ಲಿನ ಸುಸ್ಥಿರ ಬದುಕಿನ ಜೀವನವನ್ನು ಪ್ರಪಂಚಕ್ಕೆ ಸಾಹಿತ್ಯದ ಮೂಲಕ ಸಾರುವ ಕೆಲಸ ಆಗಬೇಕು ಎಂದು ಸಾಹಿತಿ ನಾಗೇಶ್ ಹೆಗಡೆ ಬಕ್ಕೆಮನೆ ಹೇಳಿದರು.

ಪಟ್ಟಣದ ಶಂಕರ ಮಠದಲ್ಲಿ ಭಾನುವಾರ (ಜ.೨೯) ನಡೆದ 6ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಬದುಕಿಗೆ ಎಂತಹ ಸಾಹಿತ್ಯಗಳು ಬೇಕು ಎನ್ನುವುದನ್ನು ಚರ್ಚಿಸುವ ಅಗತ್ಯ ಇದೆ. ನಮ್ಮಲ್ಲಿ ನಿಸರ್ಗ ಸಂಪತ್ತು ಮತ್ತು ಅಕ್ಷರ ಸಂಪತ್ತು ಅಗಾಧವಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ನಿಸರ್ಗ ಸಂರಕ್ಷಣೆಯ ಹೋರಾಟದವರೆಗೆ ನಮ್ಮವರು ಅನನ್ಯವಾದ ಕೊಡುಗೆ ನೀಡಿದ್ದಾರೆ. ಪ್ರತಿ ಮನೆಯ ಕಪಾಟುಗಳಲ್ಲಿಯೂ ಪುಸ್ತಕಗಳು ಇರಬೇಕು. ಆದರೆ ಇಂದು ಪಟ್ಟಣದಲ್ಲೂ ಪುಸ್ತಕದ ಅಂಗಡಿಗಳೇ ಇಲ್ಲವಾಗಿದೆ. ಸರಕಾರಕ್ಕೆ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲವಾಗಿದೆ ಎಂದರು.

#image_title

ಇದನ್ನೂ ಓದಿ | RBI Repo Rate : ಆರ್‌ಬಿಐ ರೆಪೊ ದರ 0.25% ಏರಿಕೆ ಸಾಧ್ಯತೆ: ಸಮೀಕ್ಷೆ

ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ʻʻನಮ್ಮ ಭಾಷೆಗೆ ಸಂಸ್ಕಾರ ಕೊಡುವಂತಹ ಸಂಸ್ಕಾರವನ್ನು ಪರಿಚಯಿಸುವಂತಹ ಅಗಾಧವಾದ ಶಕ್ತಿ ಇದೆ. ಹಾಗಾಗಿ ಭಾಷೆಯನ್ನು ನಾವು ರಕ್ಷಿಸಿಕೊಳ್ಳಬೇಕು ಅದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ. ಆದರೆ ಸವಾಲುಗಳು ಕೂಡ ಅಷ್ಟೇ ಇವೆ. ಇಂದಿನ ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಹಾಗೂ ಇತರೆ ಕಾರಣದಿಂದಾಗಿ ಭಾಷೆಗಳಿಗೆ ಅನೇಕ ಸವಾಲುಗಳು ಹುಟ್ಟಿಕೊಳ್ಳುತ್ತಿವೆ. ಈಗ ಹಿಂದಿನ ಭಾಷೆಗಳನ್ನು ಅಭ್ಯಾಸ ಮಾಡುವಂಥದ್ದು ಒಂದು ಪರಂಪರೆ. ಆದರೆ ಈ ಭಾಷೆ ಮುಂದೇನಾಗಬಹುದು ಎಂಬುದನ್ನು ಯೋಚಿಸುವುದು ಅಗತ್ಯವಾಗಿದೆ. ಮೊಬೈಲ್‌ಗಳಲ್ಲಿ ಇಂದಿನ ಯುವ ಪೀಳಿಗೆಯವರು ಕಳಿಸುತ್ತಿರುವ ಮೆಸೇಜ್‌ಗಳನ್ನು ನೋಡಿದರೆ ಈ ಭಾಷೆ ಏನಾಗುತ್ತಿದೆ ಎಂಬ ಆತಂಕವಾಗುತ್ತದೆ. ಹಾಗಾಗಿ ಈ ಕುರಿತು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆʼʼ ಎಂದರು.

ಇದನ್ನೂ ಓದಿ | Bharat Jodo Yatra: ಸಹೋದರಿ ಪ್ರಿಯಾಂಕಾ, ಕಾರ್ಯಕರ್ತರ ಜತೆ ರಾಹುಲ್ ಗಾಂಧಿ ಹಿಮ ಎರಚಾಟ! Video Viral

ಕಸಾಪ ತಾಲೂಕು ಅಧ್ಯಕ್ಷ ಗೋಪಾಲ್ ಬಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಕಸಾಪ ಜಿಲ್ಲಾ ಅಧ್ಯಕ್ಷ ಬಿಎನ್ ವಾಸರೆ ಆಶಯ ನುಡಿಯಾಡಿದರು. ನಾಗರಾಜ್ ಮಾಳ್ಕೋಡ್ ದ್ವಾರಗಳನ್ನು ಪರಿಚಯಿಸಿದರು. ಸಾಹಿತಿ ತಮ್ಮಣ್ಣ ಬೀಗಾರ ಹೊಸ ಪುಸ್ತಕಗಳ ಬಿಡುಗಡೆ, ಆರ್ ಎಂ ಹೆಗಡೆ ಬಾಳೆಸರ ಮೆರವಣಿಗೆಗೆ ಚಾಲನೆ ನೀಡಿದರು. ಡಾ ಕೆ ಶ್ರೀಧರ್ ವೈದ್ಯ ದ್ವಾರಗಳನ್ನು ಉದ್ಘಾಟಿಸಿದರು. ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಸುಜಾತಾ ದಂಠಕಲ್ ಸಂದೇಶ ವಾಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಕೆ ಜಿ ನಾಗರಾಜ, ಆರ್ ಆರ್ ನಾಯ್ಕ, ಸಿ ಎಸ್ ಗೌಡರ್, ಸತೀಶ್ ಹೆಗಡೆ, ಶಶಿಭೂಷಣ ಹೆಗಡೆ, ಜಿಲ್ಲಾ ಕಸಾಪದ ಕಾರ್ಯದರ್ಶಿ ಪಿ ಆರ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಇಒ ಪ್ರಶಾಂತ ರಾವ್.
ಕುಮಾರಿ ನಿಶಾ ಮಂಜುನಾಥ್ ನಾಯ್ಕ್ ಯಕ್ಷ ನೃತ್ಯ ಮಾಡಿ ಸಭೆಯನ್ನು ಸ್ವಾಗತಿಸಿದರು.
ಶಿಕ್ಷಕರ ತಂಡದವರು ನಾಡಗೀತೆ ಹಾಡಿದರು. ಪ್ರಶಾಂತಿ ಪ್ರೌಢಶಾಲೆ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ತಹಶೀಲ್ದಾರ್ ಸಂತೋಷ್ ಭಂಡಾರಿ ಸ್ವಾಗತಿಸಿದರು.
ರತ್ನಾಕರ್ ಜಿ ನಾಯ್ಕ್, ಕುಮಾರಿ ನೇಹಾ, ಕುಮಾರಿ ಸಂಜನಾ ನಿರೂಪಿಸಿದರು. ಪಿ ಬಿ ಹೊಸೂರ್ ವಂದಿಸಿದರು.

ಇದನ್ನೂ ಓದಿ | ಗ್ರಾಮೀಣ ಶಾಸಕಿ ಸಲುವಾಗಿ ರಾಜ್ಯವನ್ನು ಹಾಳು ಮಾಡಿದ್ದು ಡಿ.ಕೆ. ಶಿವಕುಮಾರ್‌ : ಸಿಡಿ ಪ್ರಕರಣ ಸಿಬಿಐಗೆ ನೀಡಲು ರಮೇಶ್‌ ಜಾರಕಿಹೊಳಿ ಆಗ್ರಹ

Continue Reading
Advertisement
Chitta Ranjan Dash
ದೇಶ4 mins ago

Chitta Ranjan Dash: ಆರ್‌ಎಸ್‌ಎಸ್‌ನ ಸ್ವಯಂಸೇವಕನಾಗಿದ್ದೆ; ಈಗಲೂ ಮರಳಲು ಸಿದ್ಧ ಎಂದ ಹೈಕೋರ್ಟ್‌ ನಿವೃತ್ತ ಜಡ್ಜ್‌ ಚಿತ್ತರಂಜನ್‌ ದಾಸ್‌

Road Accident
ಕ್ರೈಂ6 mins ago

Road Accident : ತಾಯಿ-ಮಗನ ಬಲಿ ಪಡೆದ ಕಂಟೇನರ್‌; ಆಟೋ ಪ್ರಯಾಣಿಕ ಸೇರಿ ಸವಾರರಿಬ್ಬರ ಪ್ರಾಣ ಕಸಿದ ಬೈಕ್‌

DK Shivakumar statement in KPCC. no leadership if the booth lead is not given DK Shivakumar warns leaders
ರಾಜಕೀಯ14 mins ago

‌DK Shivakumar: ಬೂತ್ ಲೀಡ್ ಕೊಡಿಸದಿದ್ದರೆ ನಾಯಕತ್ವ ಇಲ್ಲ; ಜಾಗ ಖಾಲಿ ಮಾಡಿ: ಮುಖಂಡರಿಗೆ ಡಿಕೆಶಿ ವಾರ್ನಿಂಗ್

Mysuru News actress Vidhya Nandish congress leader killed by her husband
ಕ್ರೈಂ34 mins ago

Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

Anant Ambani Radhika 2nd pre wedding bash
ಬಾಲಿವುಡ್43 mins ago

Anant Ambani Radhika: ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಶೋ!

NIA raid rameshwaram cafe blast
ಪ್ರಮುಖ ಸುದ್ದಿ50 mins ago

Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ

Viral Video
ವೈರಲ್ ನ್ಯೂಸ್59 mins ago

Viral Video: ಮದುವೆಗೆ ಬಂದ ಮಾಜಿ ಪ್ರಿಯಕರ; ಆಮೇಲೆ ನಡೆದಿದ್ದೇ ಬೇರೆ- ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್‌ ಎಂದ ನೆಟ್ಟಿಗರು

Love Case Father throws hot water on man who loved his daughter for coming home
ಕೊಡಗು1 hour ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

RCB IPL Records
ಕ್ರೀಡೆ1 hour ago

RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

Emirates Flight
ದೇಶ1 hour ago

Emirates Flight: ವಿಮಾನ ಡಿಕ್ಕಿ ಹೊಡೆದು 36 ಫ್ಲೆಮಿಂಗೊ ಪಕ್ಷಿಗಳಿಗೆ ದಾರುಣ ಅಂತ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌