ಅಮ್ಮ 2 ದಶಕಗಳಿಂದ ಬಳಸುತ್ತಿದ್ದ ಪುಟ್ಟ ಪ್ಲೇಟಿನ ಗುಟ್ಟು ತಿಳಿದ ಮಗ ಭಾವುಕ; ತಾಯಿ ತೀರಿ ಹೋದ ಬಳಿಕ ಸೋದರಿ ಹೇಳಿದ ಸತ್ಯ - Vistara News

ವೈರಲ್ ನ್ಯೂಸ್

ಅಮ್ಮ 2 ದಶಕಗಳಿಂದ ಬಳಸುತ್ತಿದ್ದ ಪುಟ್ಟ ಪ್ಲೇಟಿನ ಗುಟ್ಟು ತಿಳಿದ ಮಗ ಭಾವುಕ; ತಾಯಿ ತೀರಿ ಹೋದ ಬಳಿಕ ಸೋದರಿ ಹೇಳಿದ ಸತ್ಯ

ಪುತ್ರನ ಹೆಸರು ವಿಕ್ರಮ್​ ಎಸ್​. ಬುದ್ಧನೇಸನ್​. ಇವರೀಗ ಟ್ವಿಟರ್​​ನಲ್ಲಿ ಪ್ಲೇಟ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗೇ, ಅಮ್ಮ ಯಾಕೆ ಅದೇ ಪ್ಲೇಟ್​​ನಲ್ಲೇ ಊಟ ಮಾಡುತ್ತಿದ್ದರೂ ಎಂಬ ವಿಷಯ ತಿಳಿಸಿದ್ದಾರೆ.

VISTARANEWS.COM


on

Son finds out why his mom used the same plate After Her Death
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

20 ವರ್ಷಗಳಿಂದ ಅಮ್ಮ ಯಾಕೆ ಒಂದು ಚಿಕ್ಕ ಸ್ಟೀಲ್​ ಪ್ಲೇಟ್​​ನಲ್ಲೇ ಊಟ ಮಾಡುತ್ತಿದ್ದಳು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡ ಮಗ ಆ ವಿಷಯವನ್ನೀಗ ತಮ್ಮ ಟ್ವಿಟರ್​​ (Twitter)ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ತಿಂಡಿ ತಿನ್ನಲು, ಊಟ ಮಾಡಲು ಅಮ್ಮ ಪ್ರತಿದಿನವೂ ಸಣ್ಣ ಪ್ಲೇಟ್​​ನ್ನೇ ತೆಗೆದುಕೊಂಡರೂ, ಆಕೆ ಆ ಬಟ್ಟಲನ್ನು ಬೇರೆ ಯಾರಿಗೂ ಬಳಸಲು ಬಿಡದೆ ಇದ್ದರೂ ಒಂದಿನನೂ ಆತ ಪ್ರಶ್ನೆ ಮಾಡಿರಲಿಲ್ಲ. ಅದೇನೂ ದೊಡ್ಡ ವಿಷಯ ಎಂದು ಅವನಿಗೆ ಅನ್ನಿಸಿರಲೂ ಇಲ್ಲ. ಆದರೆ ಅಮ್ಮ ತೀರಿಕೊಂಡ ಮೇಲೆ ಆ ಪ್ಲೇಟ್​ನ ಗುಟ್ಟು ರಟ್ಟಾಗಿದೆ. ವಿಷಯ ತಿಳಿದ ಮಗ ಅತ್ಯಂತ ಭಾವನಾತ್ಮಕವಾಗಿ ಟ್ವೀಟ್​ ಮಾಡಿಕೊಂಡಿದ್ದಾರೆ.

ಅಪ್ಪ-ಅಮ್ಮನ ಪಾಲಿಗೆ ಮಕ್ಕಳ ಸಣ್ಣಸಣ್ಣ ಗೆಲುವೂ ದೊಡ್ಡ ಸಂಭ್ರಮ. ಮಕ್ಕಳು ಗೆಲ್ಲುವ ಪ್ರತಿ ಬಹುಮಾನ, ಪ್ರಶಸ್ತಿಗಳೂ ತಂದೆ-ತಾಯಿಯ ಪಾಲಿಗೆ ಕಾಪಿಟ್ಟುಕೊಳ್ಳುವ ಸಂಗತಿಗಳೇ ಆಗಿರುತ್ತವೆ. ಮಕ್ಕಳು ದೊಡ್ಡವರಾಗುತ್ತ ತಾವು ಬಾಲ್ಯದಲ್ಲಿ ಪಡೆದಿದ್ದ ಪ್ರಶಸ್ತಿ-ಬಹುಮಾನಗಳನ್ನು ಮರೆತೇ ಬಿಡಬಹುದು, ಆದರೆ ಅಮ್ಮನನ್ನು ಕೇಳಿನೋಡಿ ‘ನನ್ನ ಮಗ ಇಷ್ಟನೇ ವಯಸ್ಸಿನಲ್ಲಿ, ಇಂಥದ್ದೇ ಸ್ಪರ್ಧೆಗೆ, ಇದೇ ಬಹುಮಾನವನ್ನು/ಪ್ರಶಸ್ತಿಯನ್ನು ಪಡೆದಿದ್ದ’ ಎಂದು ಎಷ್ಟೇ ವರ್ಷಗಳು ಕಳೆದರೂ ನಿಖರವಾಗಿ ಹೇಳುತ್ತಾಳೆ. ಇಲ್ಲಿ ಕೂಡ ಆಗಿದ್ದು ಅದೇ, ಆ ತಾಯಿ ತನ್ನ ಮಗ 7ನೇ ಕ್ಲಾಸಿನಲ್ಲಿ ಬಹುಮಾನವಾಗಿ ಗೆದ್ದಿದ್ದ ಈ ಸ್ಟೀಲ್​ ಪ್ಲೇಟ್​​ನ್ನು ಅಷ್ಟು ಜೋಪಾನವಾಗಿ ಕಾದಿಟ್ಟುಕೊಂಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಅದೇ ಪ್ಲೇಟ್​​ನಲ್ಲಿಯೇ ಊಟ ಮಾಡುತ್ತಿದ್ದರು.

ಆ ಪುತ್ರನ ಹೆಸರು ವಿಕ್ರಮ್​ ಎಸ್​. ಬುದ್ಧನೇಸನ್​. ಇವರೀಗ ಟ್ವಿಟರ್​​ನಲ್ಲಿ ಪ್ಲೇಟ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಇದು ನನ್ನ ಅಮ್ಮನ ಬಟ್ಟಲು. ಕಳೆದ 24 ವರ್ಷಗಳಿಂದಲೂ ಏನೇ ತಿನ್ನುವುದಾದರೂ ಆಕೆ ಈ ಪ್ಲೇಟ್​​ನ್ನೇ ಬಳಸುತ್ತಿದ್ದರು. ಆ ಬಟ್ಟಲನ್ನು ಅವಳು ಬಿಟ್ಟರೆ ನಾನು ಮತ್ತು ನನ್ನ ಸಹೋದರಿಯ ಮಗಳು ಶ್ರುತಿ ಇಬ್ಬರು ಮಾತ್ರ ಬಳಸಬಹುದಿತ್ತು. ಉಳಿದ ಇನ್ಯಾರಿಗೂ ಅದನ್ನು ಉಪಯೋಗಿಸಲು ಬಿಡುತ್ತಿರಲಿಲ್ಲ. ಅಮ್ಮ ಇತ್ತೀಚೆಗೆ ತೀರಿಕೊಂಡರು. ಅವರು ಮೃತಪಟ್ಟ ಬಳಿಕವಷ್ಟೇ ನನ್ನ ಸಹೋದರಿ ಈ ಪ್ಲೇಟ್​​ನ ಬಗ್ಗೆ ತಿಳಿಸಿದಳು. 1999ರಲ್ಲಿ ನಾನು 7ನೇ ಕ್ಲಾಸಿನಲ್ಲಿದ್ದಾಗ ಯಾವುದೋ ಸ್ಪರ್ಧೆಯಲ್ಲಿ ಗೆದ್ದಾಗ ಬಹುಮಾನವಾಗಿ ಸಿಕ್ಕ ಪ್ಲೇಟ್​ ಇದು. ಅಂದಿನಿಂದಲೂ ಅಮ್ಮ ಇದನ್ನು ಜೋಪಾನ ಮಾಡಿದ್ದಾರೆ. ಆದರೆ ಒಂದಿನನೂ ಅಮ್ಮ ನನಗಿದನ್ನು ಹೇಳಿರಲಿಲ್ಲ. ಅವರ ಪ್ರೀತಿಗೆ ಸಾಟಿಯೇ ಇಲ್ಲ. ನಾನು ನನ್ನ ಅಮ್ಮನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಅಂದಹಾಗೇ, ಈ ವಿಕ್ರಮ್​ ಅವರು ಒಬ್ಬರು ಡೆಂಟಿಸ್ಟ್​ ಎಂಬುದು ಅವರ ಟ್ವಿಟರ್ ಪ್ರೊಫೈಲ್​​ನಿಂದ ಗೊತ್ತಾಗುತ್ತದೆ.

ವಿಕ್ರಮ್​ ಅವರ ಟ್ವಿಟರ್​ ಪೋಸ್ಟ್​ಗೆ ಅನೇಕರು ಅತ್ಯಂತ ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ಅಮ್ಮನ ಪ್ರೀತಿ ಅನಂತ, ನೀವು ಹೇಳಿದ ವಿಷಯ ಅತ್ಯಂತ ಹೃದಯಸ್ಪರ್ಶಿಯಾಗಿದೆ, ಈ ಜಗತ್ತಿನಲ್ಲಿ ಅಮ್ಮನ ಪ್ರೀತಿಗೆ ಹೋಲಿಕೆಯೇ ಇಲ್ಲ ಎಂಬಿತ್ಯಾದಿ ಕಮೆಂಟ್​ಗಳನ್ನು ಬರೆದಿದ್ದಾರೆ.

ಇನ್ನಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral video: ʼಅಸಹ್ಯಕರ!ʼ ಬೆಂಗಳೂರಿನ ರಸ್ತೆಗಳ ಕಸದ ವಿಡಿಯೋ ಪೋಸ್ಟ್‌ ಮಾಡಿದ ಕಿರಣ್ ಮಜುಂದಾರ್ ಶಾ

Viral video: ಈ ಕಸದ ರಾಶಿಯನ್ನು ತ್ವರಿತವಾಗಿ ಕ್ಲೀನ್‌ ಮಾಡಿಸುವಂತೆ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರೆ ನೀಡಿದ್ದಾರೆ. ಅವರು ಮಾಡಿದ ಪೋಸ್ಟ್‌ನಲ್ಲಿ ಕಸದ ರಾಶಿಯಿಂದ ತುಂಬಿದ ಹೊರ ವರ್ತುಲ ರಸ್ತೆಯ ವಿಡಿಯೋ ಕಂಡುಬಂದಿದೆ. ಈ ದೃಶ್ಯವನ್ನು “ಅಸಹ್ಯಕರ” ಎಂದು ಕರೆದಿರುವ ಬಯೋಕಾನ್ ಮುಖ್ಯಸ್ಥೆ, “ಕೊಳಕು ಅವ್ಯವಸ್ಥೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ” ಬಿಬಿಎಂಪಿಗೆ ಕೋರಿದ್ದಾರೆ.

VISTARANEWS.COM


on

viral video garbage bengaluru roads
Koo

ಬೆಂಗಳೂರು: ರಾಜಧಾನಿ ಮೂಲದ ಖ್ಯಾತ ಬಿಟಿ ಕಂಪನಿ ಬಯೋಕಾನ್ (Biocon)‌ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರು ಮಂಗಳವಾರ ಬೆಂಗಳೂರಿನ ರಸ್ತೆಗಳ (Bengaluru Roads) ಪಕ್ಕದ ಕಸದ ರಾಶಿಗಳ (garbage) ವಿಡಿಯೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬಿಬಿಎಂಪಿಗೆ (BBMP) ಮುಜುಗರ ಸೃಷ್ಟಿಸಿದ್ದಾರೆ. ಈ ವಿಡಿಯೋ ಈಗ ವೈರಲ್‌ (Viral video) ಆಗಿದೆ.

ಈ ಕಸದ ರಾಶಿಯನ್ನು ತ್ವರಿತವಾಗಿ ಕ್ಲೀನ್‌ ಮಾಡಿಸುವಂತೆ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರೆ ನೀಡಿದ್ದಾರೆ. ಅವರು ಮಾಡಿದ ಪೋಸ್ಟ್‌ನಲ್ಲಿ ಕಸದ ರಾಶಿಯಿಂದ ತುಂಬಿದ ಹೊರ ವರ್ತುಲ ರಸ್ತೆಯ ವಿಡಿಯೋ ಕಂಡುಬಂದಿದೆ. ಈ ದೃಶ್ಯವನ್ನು “ಅಸಹ್ಯಕರ” ಎಂದು ಕರೆದಿರುವ ಬಯೋಕಾನ್ ಮುಖ್ಯಸ್ಥೆ, “ಕೊಳಕು ಅವ್ಯವಸ್ಥೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ” ಬಿಬಿಎಂಪಿಗೆ ಕೋರಿದ್ದಾರೆ.

“ಅಸಹ್ಯಕರ ನೋಟ. @BBMPSWMSplComm ಈ ಕೊಳಕು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಅವರು ಮೂಲ ವೀಡಿಯೊವನ್ನು ಟ್ವೀಟ್ ಮಾಡಿ Xನಲ್ಲಿ ಬರೆದಿದ್ದಾರೆ. ಕಿರಣ್‌ ಶಾ ಅವರ ಪೋಸ್ಟ್‌ಗೆ ತೀಕ್ಷ್ಣವಾದ ಕಾಮೆಂಟ್‌ಗಳು ಎಕ್ಸ್‌ನಲ್ಲಿ ಬಳಕೆದಾರರಿಂದ ಬಂದಿವೆ. ವೀಡಿಯೊ ಈಗ ವೈರಲ್ ಆಗುತ್ತಿದೆ. ಅನೇಕ X ಬಳಕೆದಾರರು ತಕ್ಷಣದ ಕ್ರಮಕ್ಕಾಗಿ ಕರೆ ನೀಡಿದ್ದಾರೆ.

ಹಲವಾರು ಜನರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ದೃಶ್ಯವು ಇತರ ನಗರಗಳಲ್ಲಿಯೂ ದುರದೃಷ್ಟವಶಾತ್ ಸಾಮಾನ್ಯವಾಗಿದೆ ಎಂದಿದ್ದಾರೆ ಕೆಲವರು. ಆದಾಗ್ಯೂ, ನಾಗರಿಕರು ಮೂಲಭೂತ ನಾಗರಿಕ ಪ್ರಜ್ಞೆಯನ್ನು ಹೊಂದಿರಬೇಕು ಮತ್ತು ಬೀದಿಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದು ಕೆಲವರು ಹೇಳಿದ್ದಾರೆ.

“ಇನ್ನೂ ನಾಚಿಕೆಗೇಡಿನ ಸಂಗತಿಯೆಂದರೆ ಹೆಚ್ಚಿನ ಅನಿವಾಸಿಗಳು, ಕಾನ್ಸುಲೇಟ್‌ಗಳು, ಮಂತ್ರಿಗಳು, ಬಿಬಿಎಂಪಿಯ ಉನ್ನತ ಅಧಿಕಾರಿಗಳು ಸಹ ಈ ಪ್ರದೇಶದಲ್ಲಿಯೇ ಇರುತ್ತಾರೆ ಮತ್ತು ಅವರು ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ! ಇಂತಹ ಕೊಳಕು ಅಭ್ಯಾಸಗಳನ್ನು ಪ್ರದರ್ಶಿಸುವ ಮೂಲಕ ನಾವು ನಮ್ಮ ನಗರವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರವನ್ನೂ ಸಹ ಹತಾಶಗೊಳಿಸುತ್ತಿದ್ದೇವೆ” ಎಂದಿದ್ದಾರೆ ಬಳಕೆದಾರರೊಬ್ಬರು.

ಮತ್ತೊಬ್ಬರು, “ಪ್ರತಿಯೊಂದು ಮೊದಲ ಹಂತದ ಹಾಗೂ ಎರಡನೇ ಹಂತದ ನಗರಗಳಲ್ಲಿ ಇದು ಇಂದು ಕಾಣಬರುವ ದುರಂತ ಸನ್ನಿವೇಶ. ಸಾರ್ವಜನಿಕ ಕಸದ ತೊಟ್ಟಿಗಳಿಲ್ಲ. ಆದ್ದರಿಂದ ಜನರು ತಮಗಿಷ್ಟ ಬಂದ ಕಡೆ ಕಸ ಎಸೆಯುತ್ತಾರೆ. ನಾಗರಿಕ ಸಂಸ್ಥೆಗಳು ಸಾರ್ವಜನಿಕ ಕಸದ ಬುಟ್ಟಿಗಳನ್ನು ಸ್ಥಾಪಿಸಲು, ಬಳಸಲು ಮತ್ತು ನಿರ್ವಹಿಸಲು ಮುಂದಾಗದ ಹೊರತು ಇದು ಮುಂದುವರಿಯುತ್ತದೆ” ಎಂದಿದ್ದಾರೆ.

“ಬೆಂಗಳೂರಿನ ಪ್ರತಿಯೊಂದು ಪ್ರದೇಶವೂ ಈ ರೀತಿಯ ರಸ್ತೆಗಳನ್ನು ಹೊಂದಿದೆ. ಮೊದಲು ಜನರಿಗೆ ಶಿಕ್ಷಣ ನೀಡಬೇಕು ಮತ್ತು ಶಿಕ್ಷೆ ನೀಡಬೇಕು” ಎಂದಿದ್ದಾರೆ ಮತ್ತೊಬ್ಬರು. “ಮೆಟ್ರೋ ನಿಲ್ದಾಣಗಳು, ಡಿವೈಡರ್‌ಗಳ ಬಳಿ ಜನರು ತ್ಯಾಜ್ಯವನ್ನು ಎಸೆಯುವುದನ್ನು ನಾನು ಗಮನಿಸಿದ್ದೇನೆ. ಇದು ರಾತ್ರಿ ಸಮಯದಲ್ಲಿ ನಡೆಯುತ್ತದೆ. ಈ ಸ್ಥಳಗಳಲ್ಲಿ ಪದೇ ಪದೆ ಕಸ ಸುರಿಯುವವರನ್ನು ಗುರುತಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಜೊತೆಗೆ ಅಪರಾಧಿಗಳಿಗೆ ಭಾರಿ ದಂಡ ವಿಧಿಸಬೇಕಾಗಿದೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Continue Reading

ವಿದೇಶ

Viral News: ಗಾಜಾದಲ್ಲಿ ಆಹಾರ ಸಿಗದೆ ನಾಣ್ಯ, ಕಲ್ಲು, ಬ್ಯಾಟರಿ ತಿನ್ನುತ್ತಿರುವ ಮಕ್ಕಳು!

ಆಹಾರದ ಕೊರತೆಯಿಂದ ಗಾಜಾ ಪಟ್ಟಿಯಲ್ಲಿ ಮಕ್ಕಳು ರಸ್ತೆಯಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದಾರೆ ಎಂದು ಒಮಾನಿ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯನ್ನು ನೀಡಿದ್ದಾರೆ. ಇದರ ವಿಡಿಯೋ ಭಾರೀ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಗಾಜಾ ಪಟ್ಟಿಯಲ್ಲಿ (Gaza strip) ಆಹಾರದ ಕೊರತೆಯಿಂದ ತೀವ್ರ ಹಸಿವಿನಿಂದ ಬಳಲುತ್ತಿರುವ ಮಕ್ಕಳು ರಸ್ತೆಯಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದಾರೆ ಎಂದು ಪ್ಯಾಲೆಸ್ಟೀನಿಯಾದವರಿಗೆ (Palestinians) ಚಿಕಿತ್ಸೆ ನೀಡಲು ಗಾಜಾದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಯಂಸೇವಕರಾಗಿ ಕೆಲಸ ಮಾಡುವ ಒಮಾನಿ (omani) ವೈದ್ಯ ಖಲೀದ್ ಅಲ್-ಶಮೌಸಿ (Khaled Al-Shamousi) ಅವರು ಸಾಮಾಜಿಕ ಜಾಲತಾಣವಾದ (Viral News) ಎಕ್ಸ್ ನಲ್ಲಿ (x) ಹೇಳಿಕೊಂಡಿದ್ದಾರೆ.

ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿನ ಅವರ ಖಾತೆಯಲ್ಲಿ ಡಾ. ಖಲೀದ್ ಅಲ್-ಶಮೌಸಿ ಅವರು, ಒಂದು ಮಗು ಲೋಹದ ತುಂಡನ್ನು ನುಂಗಿತ್ತು. ಅದು ಅನ್ನನಾಳದಲ್ಲಿ ಸಿಲುಕಿಕೊಂಡಿತ್ತು ಎಂದು ವಿವರಿಸಿದ್ದಾರೆ.

ಅವರು ಪರೀಕ್ಷಿಸಿದ ಚಿಕ್ಕ ಹುಡುಗಿಯ ಎದೆಯ ಎಕ್ಸ್-ರೇ ಅನ್ನು ತೋರಿಸಿರುವ ಅವರು ಗಾಜಾದ ಮಕ್ಕಳು ತೀವ್ರ ಹಸಿವಿನಿಂದ ನಾಣ್ಯಗಳು, ಬೆಣಚುಕಲ್ಲುಗಳು ಮತ್ತು ಸಣ್ಣ ಬ್ಯಾಟರಿಗಳನ್ನು ತಿನ್ನುತ್ತಿದ್ದಾರೆ. ಅವುಗಳಲ್ಲಿ ಒಬ್ಬಾಕೆ 8 ವರ್ಷದ ಬಾಲಕಿ. ಅವಳು ಲೋಹದ ತುಂಡನ್ನು ನುಂಗಿದಳು ಮತ್ತು ಅದು ಅವಳ ಅನ್ನನಾಳದಲ್ಲಿ ಸಿಲುಕಿಕೊಂಡಿತು ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಅವರು ಮಗುವಿನ ಮೇಲೆ ಸೂಕ್ಷ್ಮವಾದ ಆಪರೇಷನ್ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಲೋಹದ ತುಂಡನ್ನು ತೆಗೆದುಹಾಕಿದ ಬಳಿಕ ವೈದ್ಯಕೀಯ ಸಿಬ್ಬಂದಿಯ ಚಪ್ಪಾಳೆಗಳನ್ನು ಕೇಳಿದಾಗ ಶಮೌಸಿ ತನ್ನ ಬಾಯಿಯ ಮೂಲಕ ಮಗುವಿನ ಕರುಳಿನಿಂದ ಸಣ್ಣ ಬ್ಯಾಟರಿಯನ್ನು ತೆಗೆದುಹಾಕುತ್ತಿರುವಂತೆ ಕಾಣಿಸಿಕೊಂಡರು.

ಬಳಿಕ ಈ ಕುರಿತು ಎಕ್ಸ್ ನಲ್ಲಿ ಹೇಳಿರುವ ಅವರು, ತೀವ್ರವಾದ ಹಸಿವು,ಆಹಾರ ಪದಾರ್ಥಗಳ ಸರಬರಾಜುಗಳ ಕೊರತೆ ಮತ್ತು ಸುತ್ತಮುತ್ತಲಿನ ದೇಶಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ಬ್ಯಾಟರಿಗಳನ್ನು ಮಿಠಾಯಿಗಳೆಂದು ಭಾವಿಸಿ ನುಂಗಿದರು. ಇಲ್ಲಿ ನಾವು ಗಾಜಾದಲ್ಲಿ ಮಗು ನುಂಗಿದ ಬ್ಯಾಟರಿಯನ್ನು ಹೊರತೆಗೆದಿದ್ದೇವೆ ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲಿ ಅನೇಕರು ಈ ಗೊಂದಲದ ದೃಶ್ಯಗಳ ಬಗ್ಗೆ ತಮ್ಮ ಕೋಪ ಮತ್ತು ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆಹಾರ ಪೂರೈಕೆ ಇಲ್ಲ

ಕಳೆದ ವಾರದಿಂದ ದಕ್ಷಿಣ ಗಾಜಾದ ಎರಡು ಪ್ರಮುಖ ಪ್ರದೇಶಗಳಿಗೆ ಯಾವುದೇ ಆಹಾರ ಪೂರೈಕೆಯಾಗಿಲ್ಲ. ಗಾಜಾದಲ್ಲಿ ಸುಮಾರು 1.1 ಮಿಲಿಯನ್ ಪ್ಯಾಲೆಸ್ಟೀನಿಯಾದವರು ಹಸಿವಿನಿಂದ ಕಂಗೆಟ್ಟಿದ್ದಾರೆ. ಹಸಿವಿನ ದುರಂತದ ಮಟ್ಟವನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ ಮತ್ತು ಯುಎನ್ ಪ್ರಕಾರ ಉತ್ತರದಲ್ಲಿ “ಪೂರ್ಣ ಕ್ಷಾಮ” ಉಂಟಾಗಿದೆ ಎನ್ನಲಾಗಿದೆ.

ದಕ್ಷಿಣ ಮತ್ತು ಉತ್ತರ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಪ್ಯಾಲೆಸ್ಟೀನಿಯಾದವರು ಸ್ಥಳಾಂತರಗೊಂಡಿದ್ದಾರೆ. ಕಳೆದ ವಾರದಲ್ಲಿ ಸುಮಾರು 4,50,000 ಪ್ಯಾಲೆಸ್ಟೀನಿಯನ್ನರನ್ನು ಗಾಜಾದ ದಕ್ಷಿಣದಲ್ಲಿರುವ ರಫಾದಿಂದ ಹೊರಹಾಕಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇದನ್ನೂ ಓದಿ: Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

ಇಸ್ರೇಲ್ ನಗರಕ್ಕೆ ತಳ್ಳುವ ಮೊದಲು ರಫಾದಲ್ಲಿ ಸುಮಾರು 1.3 ಮಿಲಿಯನ್ ಜನರು ಆಶ್ರಯ ಪಡೆದಿದ್ದರು. ಇದು ಕೊನೆಯ ಹಮಾಸ್ ಭದ್ರಕೋಟೆ ಎಂದು ಇಸ್ರೇಲ್ ಹೇಳುತ್ತದೆ.

ಗಾಜಾದಲ್ಲಿ ಏಳು ತಿಂಗಳ ಇಸ್ರೇಲಿ ಬಾಂಬ್ ದಾಳಿ ಮತ್ತು ನೆಲದ ಕಾರ್ಯಾಚರಣೆಗಳು 35,000 ಕ್ಕೂ ಹೆಚ್ಚು ಜನರನ್ನು ಕೊಂದಿವೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: 25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಹುಟ್ಟಿಕೊಂಡಿದ್ದು ಹೇಗೆ ಗೊತ್ತೇ?

25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ನ ಟ್ಯೂನ್ ಸಂಯೋಜನೆ ಗೊಂಡಿದ್ದು ಹೇಗೆ ಎನ್ನುವ ಕಥೆಯನ್ನು ಬ್ರಿಟಿಷ್ ಮ್ಯೂಸಿಕ್ ಸಂಯೋಜಕ ಮತ್ತು ಸಂಗೀತ ನಿರ್ಮಾಪಕ ಡೇವಿಡ್ ಲೋವ್ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಹೇಳಿರುವುದು ಈಗ ಭಾರೀ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಬ್ರಿಟಿಷ್ ಮ್ಯೂಸಿಕ್ ಸಂಯೋಜಕ (British music composer) ಮತ್ತು ಸಂಗೀತ ನಿರ್ಮಾಪಕ (music producer) ಡೇವಿಡ್ ಲೋವ್ (David Lowe ) ಅವರು 25 ವರ್ಷಗಳ ಹಿಂದೆ ಬಿಬಿಸಿ (BBC) ನ್ಯೂಸ್ ಥೀಮ್ (News theme) ಟ್ಯೂನ್ (tune) ಅನ್ನು ಹೇಗೆ ಸಂಯೋಜಿಸಿದರು ಎಂಬುದರ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ (social media) ಎಕ್ಸ್ ನಲ್ಲಿ (x) ಹೇಳಿಕೊಂಡಿದ್ದು, ಇದು ಭಾರಿ ವೈರಲ್ (Viral Video) ಆಗಿದೆ.

ರಾಗವನ್ನು ನಿರ್ಮಿಸುವ ಹಂತ-ಹಂತದ ಪ್ರಕ್ರಿಯೆಯನ್ನು ಈ ವಿಡಿಯೋದಲ್ಲಿ ಅವರು ಹೇಳಿಕೊಂಡಿದ್ದು, 25 ವರ್ಷಗಳ ಹಿಂದೆ ನಾನು ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಅನ್ನು ಸಂಯೋಜಿಸಿದ್ದೇನೆ. ಇದು ಪ್ರತಿದಿನ ಪ್ರಪಂಚದಾದ್ಯಂತ ಪ್ರಸಾರವಾಗುತ್ತಿದೆ. ಸಮಯದ ನಿಖರವಾದ ಬೀಪ್‌ಗಳಿಂದ ಪ್ರಬಲ ಬಾಸ್ ಮತ್ತು ಮುಖ್ಯಾಂಶಗಳಿಗಾಗಿ ನಾಟಕೀಯ ಡ್ರಮ್‌ಗಳವರೆಗೆ… ನಾನು ಇದನ್ನು ಹೀಗೆ ಮಾಡಿದ್ದೇನೆ ಎಂದು ವಿವರಿಸಿದ್ದಾರೆ.

ಬೀಪ್ ಧ್ವನಿಯೊಂದಿಗೆ ಪ್ರಾರಂಭವಾಯಿತು. ಗಡಿಯಾರವು ಸೆಕೆಂಡಿಗೆ ಒಂದು ಬೀಟ್ ಅನ್ನು ಟಿಕ್ ಮಾಡುತ್ತದೆ. ಅನಂತರ ಶಕ್ತಿ ಮತ್ತು ಘನತೆ ಮತ್ತು ಆಳದ ಅರ್ಥವನ್ನು ನೀಡಲು ಅದಕ್ಕೆ ಬಾಸ್ ಲೈನ್ ಅನ್ನು ಸೇರಿಸಿದೆ. ಧ್ವನಿಯನ್ನು ಹೆಚ್ಚಿಸಲು ಬಾಸ್ ಡ್ರಮ್ಸ್ ಮತ್ತು ಕಿಕ್ ಅನ್ನು ಜೊತೆಗೂಡಿಸಿದೆ ಎಂದವರು ವಿವರಿಸಿದ್ದಾರೆ.

ನಾವು ಮುಖ್ಯಾಂಶಗಳಿಗೆ ದೊಡ್ಡ ಧ್ವನಿಯನ್ನು ಬಯಸಿದ್ದೇವೆ. ಅದಕ್ಕಾಗಿ ಈ ದೊಡ್ಡ ಡ್ರಮ್‌ನೊಂದಿಗೆ ಬಂದಿದ್ದೇವೆ ಎಂದ ಅವರು, ಆ ಸಾಂಪ್ರದಾಯಿಕ ಬಿಬಿಸಿ ನ್ಯೂಸ್ ಥೀಮ್ ಅನ್ನು ರಚಿಸಲು ಸ್ವರಮೇಳಗಳು, ಹೆಚ್ಚಿನ ಸ್ಟ್ರಿಂಗ್ ಮತ್ತು ಫೇಡ್ ಅನ್ನು ಸೇರಿಸಲಾಗಿದೆ ಎಂದು ಲೋವ್‌ ತಿಳಿಸಿದರು.

ವೈರಲ್ ಆಗಿದ್ದು ಯಾವಾಗ?

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಟಿಕ್‌ಟಾಕ್ ಸೃಷ್ಟಿಕರ್ತ ರಾಚೆಲ್ ಲಿಯರಿ ಅವರು ಸಾಮಾಜಿಕ ಮಾಧ್ಯಮದಾದ್ಯಂತ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟ ವಿಡಿಯೋದಲ್ಲಿ ಸಂಗೀತದೊಂದಿಗೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ವೈರಲ್ ಆಯಿತು.

ಡೇವಿಡ್ ಲೋವ್ ಅವರು 25 ವರ್ಷಗಳ ಹಿಂದೆ ಬಿಬಿಸಿ ಥೀಮ್ ಟ್ಯೂನ್ ಅನ್ನು ಹೇಗೆ ಸಂಯೋಜಿಸಿದ್ದಾರೆ ಎಂಬುದರ ವಿವರಣೆಯನ್ನು ಒಳಗೊಂಡಿರುವ ವಿಡಿಯೋವನ್ನು ಮೇ 10 ರಂದು ಹಂಚಿಕೊಂಡಿದ್ದಾರೆ. ಅಂದಿನಿಂದ ಇದು 7.5 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇನ್ನೂ ಎಣಿಕೆಯಲ್ಲಿದೆ. ಪೋಸ್ಟ್ 5,600 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.


ಪ್ರತಿಕ್ರಿಯೆಗಳು ಹೇಗಿವೆ?

ಇದು ತುಂಬಾ ಅದ್ಭುತವಾಗಿದೆ. ನನಗೆ, ಕನಿಷ್ಠ ಮೇಲಿನ ಪದರವು ಕೊನೆಯಲ್ಲಿ ಸ್ವರಮೇಳವನ್ನು ಬದಲಾಯಿಸುವುದರಿಂದ ಪಿಪ್‌ಗಳು ಟಿಪ್ಪಣಿಯನ್ನು ಬದಲಾಯಿಸುವಂತೆ ತೋರುತ್ತಿದೆ ಎಂದೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಲೋವ್, ಅದನ್ನು ಗುರುತಿಸಿದ್ದಕ್ಕಾಗಿ ತಾನು ಸಂತೋಷಪಡುತ್ತೇನೆ. ಪಿಪ್ ಒಂದೇ ಟಿಪ್ಪಣಿಯಲ್ಲಿ ಸ್ಥಿರವಾಗಿರುತ್ತದೆ ಮತ್ತು ಸ್ವರಮೇಳಗಳು ಅದರ ಸುತ್ತಲೂ ಬದಲಾಗುತ್ತವೆ. ಒಂದೇ ಸ್ಥಿರ ದಿಕ್ಕಿನ ಭಾವನೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಕುರ್ಕುರೆ ಪ್ಯಾಕ್‌ ತರದೇ ಹೋದ ಗಂಡನಿಗೆ ಡೈವೋರ್ಸ್!‌

ಇದಕ್ಕೆ ಸ್ವಲ್ಪವೂ ವಯಸ್ಸಾಗಿಲ್ಲ ಎಂಬ ಅಂಶದಿಂದ ಅದರ ಶಕ್ತಿಯನ್ನು ತೋರಿಸುತ್ತದೆ. ಇನ್ನೂ ತಾಜಾವಾಗಿ ಧ್ವನಿಸುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ಅದ್ಭುತ! ಯಾವುದೇ ಸುದ್ದಿ ಕಾರ್ಯಕ್ರಮಕ್ಕೆ ಇದುವರೆಗಿನ ಅತ್ಯುತ್ತಮ ಥೀಮ್ ಟ್ಯೂನ್ ಎಂದು ಹೇಳಿದ್ದಾರೆ.

ನಾನು ಯಾವಾಗಲೂ ನಿಮ್ಮ ಕೆಲಸವನ್ನು ಆನಂದಿಸಿದೆ. ಡೇವಿಡ್, ಇದು ತುಂಬಾ ಚೆನ್ನಾಗಿದೆ. ಆಲ್ ದಿ ಬೆಸ್ಟ್ ಎಂದು ಇನ್ನೊಬ್ಬರು ಕಾಮೆಂಟ್‌ನಲ್ಲಿ ಸೇರಿಸಿದ್ದಾರೆ.

Continue Reading

ಬೆಂಗಳೂರು

Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

Silicon City Hospital: ಲಕ್ಷದಲ್ಲಿ ಇಬ್ಬರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಬಾಲಕಿ ಉಳಿಸಲು ಆಗಲ್ಲ ಎಂದು ಕೈಚೆಲ್ಲಿದ್ದ ದೊಡ್ಡ ಆಸ್ಪತ್ರೆಗಳಿಗೂ ಅಚ್ಚರಿ ಮೂಡಿಸುವುದರೊಂದಿಗೆ ಮೆಚ್ಚುಗೆಯನ್ನು ಪಡೆದಿದ್ದಾರೆ.

VISTARANEWS.COM


on

By

Silicon City Hospital doctors successful surgery on girl suffering from Arterio Venus malpermation
Koo

ಬೆಂಗಳೂರು: ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಪ್ರಾಣವನ್ನು ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು (Silicon City Hospital) ಉಳಿಸಿದ್ದಾರೆ. ಒಂದು ಲಕ್ಷದಲ್ಲಿ ಇಬ್ಬರಿಗೆ ಮಾತ್ರ ಬರುವ ಈ ಅಪರೂಪದ ಕಾಯಿಲೆಯು ಬಾಲಕಿಗೆ ಕೊನೆ ಹಂತದಲ್ಲಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬಾಲಕಿ ಜೀವ ಉಳಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನೆರನಹಳ್ಳಿ ಗ್ರಾಮದ ನೆರನಹಳ್ಳಿಯ ಬಾಬು ಮತ್ತು ಲಾವಣ್ಯ ದಂಪತಿ ಮಗಳು ಸ್ನೇಹಾ ಅಪಾಯದಿಂದ ಪಾರಾದವಳು . ಕಳೆದ ಮೇ 3ರಂದು ಚೆನ್ನಾಗಿದ್ದ ಸ್ನೇಹಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡು ಒದ್ದಾಡಿದ್ದಳು. ಮಗಳ ಪರಿಸ್ಥಿತಿ ಕಂಡು ಭಯಗೊಂಡ ಪೋಷಕರು ಮುಳಬಾಗಿಲಿನ ಖಾಸಗಿ‌ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಅಲ್ಲಿನ ವೈದ್ಯರು ನಿಮ್ಮ ಮಗಳಿಗೆ ನರರೋಗಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದಿದ್ದರು.

ತಡ ಮಾಡದೆ ಅಲ್ಲಿಂದ ಬೆಂಗಳೂರಿಗೆ ಮಗಳು ಸ್ನೇಹಾಳನ್ನು ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ವೇಳೆ ತಲೆ ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಈ ಕಾಯಿಲೆ ಇದೆ ಎಂದು ಗೊತ್ತಾಗಿತ್ತು. ಸ್ನೇಹಾಳಿಗೆ ಬಂದ ಈ ಕಾಯಿಲೆ ಅದಾಗಲೇ ಯಾರಿಗೂ ತಿಳಿಯದಂತೆ ಕೊನೆ ಹಂತ ತಲುಪಿತ್ತು. ಹೀಗಾಗಿ ನಿಮ್ಹಾನ್ಸ್‌ ವೈದ್ಯರು ನಿಮ್ಮ ಮಗಳನ್ನು ಬದುಕಿಸುವುದು ಕಷ್ಟ ವಾಪಸ್‌ ಕರೆದುಕೊಂಡು ಹೋಗಿ ಎಂದು ಕೈ ಚೆಲ್ಲಿದ್ದರು.

ಇದರಿಂದ ಮತ್ತಷ್ಟು ಗಾಬರಿಗೊಂಡ ಬಾಬು, ಲಾವಣ್ಯ ದಂಪತಿಗೆ ಆ್ಯಂಬುಲೆನ್ಸ್ ಚಾಲಕ ಸಮಾಧಾನಪಡಿಸಿದ್ದಾರೆ. ಬಳಿಕ ಹೊಸಕೋಟೆಯಲ್ಲಿರುವ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ನುರಿತ ವೈದ್ಯರು ಇರುವ ನಿಮ್ಹಾನ್ಸ್‌ ಆಸ್ಪತ್ರೆಯಲ್ಲೆ ಮಗುವನ್ನು ಬದುಕಿಸುವುದು ಕಷ್ಟ ಎಂದಿರುವಾಗ ಬೇರೊಂದು ಆಸ್ಪತ್ರೆಗೆ ಹೋಗಿ ಏನು ಪ್ರಯೋಜನ ಎಂದು ಸ್ನೇಹಿತರು, ಸಂಬಂಧಿಕರು ಹೇಳಿದ್ದಾರೆ. ಆದರೆ ಮಗಳು ಉಳಿಯುತ್ತಾಳೆ ಎಂದಾಗ ಬಾಬು, ಲಾವಣ್ಯ ದಂಪತಿ ಕ್ಷಣವೂ ಯೋಚಿಸದೇ ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Silicon City Hospital doctors

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರಾದ ಡಾ.ಸುಪ್ರಿತ್ ಮತ್ತು ಡಾ.ಮನೋಹರ್‌ರವರ ನರರೋಗ ತಜ್ಞರ ತಂಡ, ಅಚ್ಚರಿ ಪಡುವ ರೀತಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಮಗುವಿನ ಜೀವ ಉಳಿಸಿದ್ದಾರೆ.

Silicon City Hospital doctors

ವೈದ್ಯ ಲೋಕದಲ್ಲಿ ಅಚ್ಚರಿ ಎನಿಸುವ ಅನೇಕ‌ ಕಾಯಿಲೆಗಳಿವೆ. ಒಂದು ಕಡೆ ವೈದ್ಯರಿಗೆ ಕೆಲವು‌‌ ಕಾಯಿಲೆ ಸವಾಲಾದರೆ, ಕೆಲವು ಕಾಯಿಲೆಯ ಸಕ್ಸಸ್ ರೇಟ್ ವೈದ್ಯರನ್ನು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹೊಸಕೋಟೆ ಸಿಲಿಕಾನ್ ಸಿಟಿ ವೈದ್ಯರ ಸೇವೆಯೇ ಸಾಕ್ಷಿಯಾಗಿದೆ.

ಲಕ್ಷದಲ್ಲಿ ಇಬ್ಬರಿಗೆ ಕಾಣಿಸಿಕೊಳ್ಳುವ “ಅರ್ಟೆರಿಯೊ ವೀನಸ್ ಮಾಲ್ಪರ್ಮೇಷನ್- Alterio Venous Malformation (ಮೆದುಳು ನರಗಳಲ್ಲಿ ಗುಳ್ಳೆಗಳಾಗಿ‌ ಒಡೆದು ಹೋಗಿ ರಕ್ತ ಸೋರುವ ಕಾಯಿಲೆ) ಎಂಬ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಡು ಬಡವರಾದ ಅಂಗವಿಕಲರಾದ ಬಾಬು ಲಾವಣ್ಯ ದಂಪತಿ‌ ಇನ್ನೇನು ನಮ್ಮ ಒಬ್ಬಳೆ ಮಗಳು ನಮ್ಮಿಂದ ದೂರ ಆಗುತ್ತೆ ಎಂಬ ಆತಂಕವನ್ನು ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರು ದೂರ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
NewsClick case
ದೇಶ25 mins ago

NewsClick Case: ಚೀನಾ ಪರ ಪ್ರಚಾರ; ಬಂಧನದಲ್ಲಿದ್ದ ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ರಿಲೀಸ್‌

Drone Prathap Special Gift For sangeetha sringeri Birthday
ಕಿರುತೆರೆ36 mins ago

Drone Prathap: ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

gold rate today
ಚಿನ್ನದ ದರ37 mins ago

Gold Rate Today: ಬಂಗಾರದ ಬೆಲೆ ಏರಿಕೆ; ಮಾರುಕಟ್ಟೆ ದರ ಇಂದು ಹೀಗಿದೆ

Actor Diganth role in Crazystar Ravichandran The Judgement movie Kannada
ಸ್ಯಾಂಡಲ್ ವುಡ್1 hour ago

Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

US sanction
ದೇಶ1 hour ago

US sanction: ನಿರ್ಬಂಧ ಹೇರುವ ಎಚ್ಚರಿಕೆ ನೀಡಿದ್ದ ಅಮೆರಿಕಕ್ಕೆ ಭಾರತ ತಿರುಗೇಟು

Shehbaz Sharif
ವಿದೇಶ1 hour ago

Shehbaz Sharif: ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರಲು ನಿರ್ಧರಿಸಿದೆ ದಿವಾಳಿ ಪಾಕಿಸ್ತಾನ!

Rakhi Sawant Rushed to Hospital After Heart-Related Ailment
ಬಾಲಿವುಡ್2 hours ago

Rakhi Sawant: ಆಸ್ಪತ್ರೆಗೆ ದಾಖಲಾದ ನಟಿ ರಾಖಿ ಸಾವಂತ್‌

physical abuse gadag crime
ಕ್ರೈಂ2 hours ago

Physical Abuse: ಹಿಂದೂ ಯುವಕನ ಪ್ರೀತಿಸಿ ಮದುವೆಯಾದವಳಿಗೆ ಲೈಂಗಿಕ ಕಿರುಕುಳ, ಕಣ್ಣೀರಿಟ್ಟ ಮುಸ್ಲಿಂ ಮಹಿಳೆ

Narendra Modi
ದೇಶ2 hours ago

Narendra Modi: “ನಾನು ಹಿಂದೂ-ಮುಸ್ಲಿಂ ಅಂತ ಬೇಧ ಮಾಡಿದರೆ…”: ಪ್ರಧಾನಿ ಮೋದಿ ಹೇಳಿದ್ದೇನು?

Shamita Shetty Undergoes Surgery For Endometriosis
ಸಿನಿಮಾ2 hours ago

Shamita Shetty: ವಿಚಿತ್ರ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ: ಆಸ್ಪತ್ರೆಗೆ ದಾಖಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ7 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ17 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202419 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202423 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ23 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌