Republic Day Parade: ದೆಹಲಿ ಕರ್ತವ್ಯ ಪಥದಲ್ಲಿ ವೈಭವದ ಪಥ ಸಂಚಲನ; ಇಲ್ಲಿವೆ ಫೋಟೋಗಳು - Vistara News

ಗಣರಾಜ್ಯೋತ್ಸವ

Republic Day Parade: ದೆಹಲಿ ಕರ್ತವ್ಯ ಪಥದಲ್ಲಿ ವೈಭವದ ಪಥ ಸಂಚಲನ; ಇಲ್ಲಿವೆ ಫೋಟೋಗಳು

ಬೆಳಗ್ಗೆ 10.30ರ ಹೊತ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯ ಪಥದಲ್ಲಿ ಧ್ವಜಾರೋಹಣ ಮಾಡಿದ ನಂತರ, ಭಾರತದ ಮಿಲಿಟರಿ ಸಾಮರ್ಥ್ಯ ಪ್ರದರ್ಶಿಸುವ ಪಥಸಂಚಲನ ನಡೆಯಿತು.

VISTARANEWS.COM


on

Republic day 2023 parade At Delhi Kartavya Path
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 74ನೇ ಗಣರಾಜ್ಯೋತ್ಸವ (Republic Day 2023)ನಿಮಿತ್ತ ದೆಹಲಿ ಕರ್ತವ್ಯ ಪಥದಲ್ಲಿ ವೈಭವಯುತ ಪಥಸಂಚಲನ ನಡೆಯುತ್ತಿದೆ. ಬೆಳಗ್ಗೆ 10.30ರ ಹೊತ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದರು. ಅದರ ಬೆನ್ನಲ್ಲೇ ಪಥಸಂಚಲನ ಪ್ರಾರಂಭವಾಯಿತು. ಭಾರತದ ಮಿಲಟರಿ ಸಾಮರ್ಥ್ಯ ತೋರಿಸುವ ಈ ಪರೇಡ್​​ನಲ್ಲಿ ಮೊದಲಿಗೆ ಪರಮ ವೀರ ಚಕ್ರ ಮತ್ತು ಅಶೋಕ ಚಕ್ರ ಪುರಸ್ಕೃತರು ಪರೇಡ್​ ನಡೆಸಿ, ರಾಷ್ಟ್ರಪತಿಯವರಿಗೆ ಗೌರವ ವಂದನೆ ಸಲ್ಲಿಸಿದರು. ಹಾಗೇ, ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾ ತುಕಡಿಯೊಂದು ದೆಹಲಿ ಕರ್ತವ್ಯ ಪಥದಲ್ಲಿ ಪರೇಡ್​ ನಡೆಸಿದ್ದು, ಇದರ ನೇತೃತ್ವವನ್ನು ಈಜಿಪ್ಟ್ ಸೇನಾ ಕರ್ನಲ್​ ಕರ್ನಲ್ ಮಹಮೂದ್ ಮೊಹಮ್ಮದ್ ಅಬ್ದೆಲ್ ಫತ್ತಾಹ್ ಎಲ್ ಖರಾಸಾವಿ ವಹಿಸಿದ್ದರು.

ಇದಾದ ಬಳಿಕ ಕ್ಯಾಪ್ಟನ್ ರೈಜಾದಾ ಶೌರ್ಯ ಬಾಲಿ ನೇತೃತ್ವದಲ್ಲಿ 61ನೇ ಅಶ್ವದಳದ ಪಥಸಂಚಲನ ನಡೆಯಿತು. ಈ 61ನೇ ಅಶ್ವದಳ ವಿಶ್ವದ ಏಕೈಕ ಸಕ್ರಿಯ ಅಶ್ವದಳ ರೆಜಿಮೆಂಟ್​​ ಎನ್ನಿಸಿದೆ. ಈ ದಳ ‘ಅಶ್ವಶಕ್ತಿ ಯಶೋಬಲ’ ಎಂಬ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅದಾದ ಬಳಿಕ ಕ್ಯಾಪ್ಟನ್​ ಅಮನ್​ಜೀತ್​ ಸಿಂಗ್​ ನೇತೃತ್ವದಲ್ಲಿ 75 ಸಶಸ್ತ್ರ ರೆಜಿಮೆಂಟ್​​ನ ಮುಖ್ಯ ಯುದ್ಧ ಟ್ಯಾಂಕ್​ ‘ಅರ್ಜುನ್​’ ಪರೇಡ್​ ನಡೆಯಿತು.

ಅಶ್ವದಳ ಪಥ ಸಂಚಲನ

ಅಶ್ವದಳ, ಅರ್ಜುನ್​ ಯುದ್ಧ ಟ್ಯಾಂಕ್​ ಬೆನ್ನಲ್ಲೇ, ಕರ್ತವ್ಯಪಥದಲ್ಲಿ ಸಾಗಿದ್ದು ಭಾರತೀಯ ಸೇನೆಯ 17ನೇ ಯಾಂತ್ರೀಕೃತ ಪದಾತಿ ದಳದ ನಾಗ್​ ಕ್ಷಿಪಣಿ. ಇದನ್ನು ಮುನ್ನಡೆಸಿದ ಲೆಫ್ಟಿನೆಂಟ್​ ಸಿದ್ಧಾರ್ಥ್​ ತ್ಯಾಗಿ ರಾಷ್ಟ್ರಪತಿ ಮುರ್ಮು ಅವರಿಗೆ ಗೌರವ ಸಲ್ಲಿಸಿದರು. ಅದಾದ ಬಳಿಕ, ಲಡಾಖ್​, ಸಿಕ್ಕಿಂ, ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗಾಗಿಯೇ ವಿನ್ಯಾಸಗೊಳಿಸಲಾದ ಕ್ಷಿಪ್ರ ಪ್ರತಿಕ್ರಿಯಾ ಫೈಟಿಂಗ್​ ವಾಹನ (Quick (Reaction Fighting Vehicle)ದ ಪರೇಡ್​ ನಡೆಯಿತು. ಸಿಕ್ಕಿಂ ಸ್ಕೌಟ್ಸ್​​ ರೆಜಿಮೆಂಟ್​ಗೆ ಸೇರಿದ ಈ ವಾಹನವನ್ನು ಕ್ಯಾಪ್ಟನ್​ ನವೀನ್​ ಧತ್ತೇರ್ವಾಲ್ ಮುನ್ನಡೆಸಿದರು.

ಅರ್ಜುನ್​ ಯುದ್ಧದ ಟ್ಯಾಂಕ್​

ಕ್ಷಿಪ್ರ ಪ್ರತಿಕ್ರಿಯಾ ಫೈಟಿಂಗ್​ ವಾಹನ

K9-ವಜ್ರ-T (ಸ್ವಯಂ ಚಾಲಿತ) ಗನ್ ಸಿಸ್ಟಮ್ ಪ್ರದರ್ಶನದ ಬಳಿಕ, 861 ಕ್ಷಿಪಣಿ ರೆಜಿಮೆಂಟ್​​ಗೆ ಸೇರಿದ ಬ್ರಹ್ಮೋಸ್​ ಕ್ಷಿಪಣಿಯ ಉಪಕರಣಗಳನ್ನು ಪ್ರದರ್ಶಿಸುವ ಪರೇಡ್ ನಡೆಯಿತು. ನಂತರ, ಅಮೃತ್​ಸರ ವಾಯುನೆಲೆಗೆ ಸೇರಿದ 27ನೇ ವಾಯು ರಕ್ಷಣಾ ಕ್ಷಿಪಣಿ ರೆಜಿಮೆಂಟ್​​​ನ ಆಕಾಶ್​ ವೆಪನ್​ ವ್ಯವಸ್ಥೆ ಪ್ರದರ್ಶನದ ಪಥಸಂಚಲನವನ್ನು ಕ್ಯಾಪ್ಟನ್​ ಸುನಿಲ್​ ದಶರಥೆ ಮತ್ತು 512 ಲೈಟ್​ ಎಡಿ ಮಿಸೆಲ್​​ ರೆಜಿಮೆಂಟ್​​ನ ಲೆಫ್ಟಿನೆಂಟ್​ ಚೇತನ್​ ಶರ್ಮಾ ಮುನ್ನಡೆಸಿದರು.

ಇನ್ನುಳಿದಂತೆ ಭಾರತೀಯ ನೌಕಾದಳದ 80 ಸಂಗೀತಗಾರರು, ನೌಕಾಪಡೆ ಹಾಡು ‘ಜೈ ಭಾರತಿ’ಯನ್ನು ನುಡಿಸುತ್ತ ಕರ್ತವ್ಯಪಥದಲ್ಲಿ ಸಾಗಿದರು. ಬಳಿಕ ನೌಕಾಪಡೆಯ 144 ಯುವ ನಾಯಕರನ್ನು ಒಳಗೊಂಡ ತುಕಡಿ, ಲೆಫ್ಟಿನೆಂಟ್​ ದಿಶಾ ಅಮೃತ್​​ ನೇತೃತ್ವದಲ್ಲಿ ಪರೇಡ್​ ನಡೆಸಿತು. ಈ ತುಕಡಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 3 ಮಹಿಳಾ ಮತ್ತು 6 ಪುರುಷ ಅಗ್ನಿವೀರರನ್ನು ಒಳಗೊಂಡಿದೆ. ​ ನಂತರ ಕರ್ತವ್ಯ ಪಥದಲ್ಲಿ ಸಾಗಿದ್ದು, ಅಖಿಲ ಮಹಿಳಾ ಕೇಂದ್ರೀಯ ಮೀಸಲು ಪೊಲೀಸ್ ಪಡೆ ತುಕಡಿ. ವಾಯುಪಡೆಯ 144 ಯೋಧರು, ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಕವಾಯತು ತಂಡ ಸ್ಕ್ವಾಡ್ರನ್ ಲೀಡರ್​ ಸಿಂಧು ರೆಡ್ಡಿ ನೇತೃತ್ವದಲ್ಲಿ ಪರೇಡ್​ ನಡೆಸಿತು. ಇನ್ನುಳಿದಂತೆ ಎನ್​ಸಿಸಿ ಬಾಲಕ/ಬಾಲಕಿಯರ ತಂಡ, ಅಸ್ಸಾಂ ರೈಫಲ್ಸ್​, ಒಂಟೆದಳ, ಗೋರ್ಖಾ ಬ್ರಿಗೇಡ್​, ಬಿಹಾರ್ ರೆಜಿಮೆಂಟ್​ ಸೇರಿ ವಿವಿಧ ಸೇನಾ ವಿಭಾಗದ ಯೋಧರು, ಸೇನಾ ಉಪಕರಣಗಳ ಪ್ರದರ್ಶನ ಮಾಡುತ್ತ ಪರೇಡ್​ ನಡೆಸಿದ್ದಾರೆ.

ಇದನ್ನೂ ಓದಿ: Republic Day 2023: 74ನೇ ಗಣರಾಜ್ಯೋತ್ಸವ; ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಧ್ವಜಾರೋಹಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗಣರಾಜ್ಯೋತ್ಸವ

Republic Day: ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ದೋಸ್ತಿ! ಮಾಲ್ಡೀವ್ಸ್ ಅಧ್ಯಕ್ಷನಿಗೆ ಬಂತಾ ಬುದ್ಧಿ?

Republic Day: ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ನಿಂದನಾತ್ಮಕ ಭಾಷೆ ಬಳಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.

VISTARANEWS.COM


on

Maldives Election
Koo

ನವದೆಹಲಿ: ಭಾರತ ವಿರೋಧಿ(Anti India), ಚೀನಾ ಸ್ನೇಹಿತ (Friend of China) ಅಧ್ಯಕ್ಷ ಎಂದು ಗುರುತಿಸಿಕೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu)ಅವರು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಭಾಶಯ ಕೋರಿದ್ದಾರೆ. ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ಸ್ನೇಹ (Centuries of Friendship) ಎಂದು ಹೇಳಿದ್ದಾರೆ. ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಅರ್ಥದಲ್ಲಿ ಸ್ಥಾಪಿಸಲಾದ ಎರಡು ರಾಷ್ಟ್ರಗಳ ನಡುವಿನ ಶತಮಾನಗಳ ಹಳೆಯ ಸ್ನೇಹ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ(Republic Day).

ಭಾರತದ 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಸಂದೇಶಗಳಲ್ಲಿ, ಅಧ್ಯಕ್ಷ ಮುಯಿಝು ಅವರು ಭಾರತದ 75 ನೇ ಗಣರಾಜ್ಯೋತ್ಸವವನ್ನು ಸ್ಮರಿಸಿದ್ದಾರೆ ಮತ್ತು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಅಧ್ಯಕ್ಷ ಮುಯಿಜು ಅವರು ಸರ್ಕಾರ ಮತ್ತು ಮಾಲ್ಡೀವ್ಸ್ ಜನರಿಂದ ಭಾರತದ ಜನರಿಗೆ ಶುಭ ಹಾರೈಸಿದರು. ಅವರು ಶತಮಾನಗಳ ಸ್ನೇಹ, ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಪ್ರಜ್ಞೆಯಿಂದ ಪೋಷಿಸಿದ ಮಾಲ್ಡೀವ್ಸ್-ಭಾರತದ ಬಾಂಧವ್ಯವನ್ನು ಒತ್ತಿಹೇಳಿದರು. ಮುಂಬರುವ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ಜನರಿಗೆ ನಿರಂತರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ದೊರೆಯಲಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಮತ್ತು ಭಾರತದ ಸ್ನೇಹಪರ ಜನರಿಗೆ ಹಾರ್ದಿಕ ಶುಭಾಶಯಗಳು. ಮುಂದಿನ ವರ್ಷಗಳಲ್ಲಿ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸ್ನೇಹ ಮತ್ತು ಸಹಕಾರದ ನಿಕಟ ಬಂಧಗಳು ಪ್ರವರ್ಧಮಾನಕ್ಕೆ ಬರುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಜಮೀರ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಇದೊಂದು ಅತ್ಯುತ್ತಮ ಪ್ರವಾಸಿತಾಣವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಕುರಿತು ಮಾಲ್ಡೀವ್ಸ್ ಕೆಲವು ಸಚಿವರು ಮೋದಿ ಅವರು ವಿರುದ್ಧ ನಿಂದನಾತ್ಮಕ ಭಾಷೆ ಬಳಸಿ ಟೀಕಿಸಿದ್ದರು. ಇದರಿಂದಾಗಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಈ ಶತಮಾನದ ದೋಸ್ತಿ ಎಂಬ ಹೇಳಿಕೆ ಮಹತ್ವದ ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: ಭಾರತದ ವಿಮಾನ ಬಳಸಲು ಮಾಲ್ಡೀವ್ಸ್‌ ಅಧ್ಯಕ್ಷ ನಕಾರ; 13 ವರ್ಷದ ಬಾಲಕ ಸಾವು

Continue Reading

ವಿಜಯನಗರ

Vijayanagara News: ಕೊಟ್ಟೂರಿನಲ್ಲಿ 75ನೇ ಗಣರಾಜ್ಯೋತ್ಸವ ದಿನ ಆಚರಣೆ

Vijayanagara News: ಕೊಟ್ಟೂರು ಪಟ್ಟಣದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

VISTARANEWS.COM


on

75th Republic Day celebrations in Kottur
ಕೊಟ್ಟೂರು ಪಟ್ಟಣದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
Koo

ಕೊಟ್ಟೂರು: ಪಟ್ಟಣದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು (75th Republic Day) ಆಚರಿಸಲಾಯಿತು.

ಗಣರಾಜ್ಯೋತ್ಸವದ ಅಂಗವಾಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ. ರವಿಕುಮಾರ್‌, ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದರು.

ಇದನ್ನೂ ಓದಿ: Karnataka Weather: ಕಡಿಮೆ ಆಯಿತೇ ಚಳಿ? ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ?

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ, ಸದಸ್ಯರಾದ ಕೆ.ಬಿ. ಮಲ್ಲಿಕಾರ್ಜುನ್, ಅಡಿಕೆ ಮಂಜುನಾಥಯ್ಯ, ಡಿ.ಎಸ್. ಶಿವಮೂರ್ತಿ, ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಪ್ರಶಾಂತ್ ಕುಮಾರ್, ಹಿರಿಯ ಉಪನ್ಯಾಸಕರಾದ ಡಿ. ರವೀಂದ್ರ ಗೌಡ, ಕೃಷ್ಣಪ್ಪ, ಜೆ.ಬಿ. ಸಿದ್ದನಗೌಡ, ಪೃಥ್ವಿರಾಜ್, ಡಾ. ಶಿವಕುಮಾರ್, ವಿಜಯಲಕ್ಷ್ಮಿ ಸಜ್ಜನ್, ಬಸವರಾಜ ಬಣಕಾರ್ ಉಮೇಶ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಚೈತ್ರ ಪ್ರಾರ್ಥಿಸಿದರು. ಕೆ.ಎಂ. ಪ್ರಭಾಕರ್ ನಿರೂಪಿಸಿದರು.

Continue Reading

ವಿಜಯನಗರ

Vijayanagara News: ಕೂಡ್ಲಿಗಿಯಲ್ಲಿ 75ನೇ ಗಣರಾಜ್ಯೋತ್ಸವ ದಿನ ಆಚರಣೆ

Vijayanagara News: ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನಡೆಸಿದರು.

VISTARANEWS.COM


on

75th Republic Day celebration in Kudligi
ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನಡೆಸಿದರು.
Koo

ಕೂಡ್ಲಿಗಿ: ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ (75th Republic Day) ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನೆರವೇರಿಸಿದರು.

ಗಣರಾಜ್ಯೋತ್ಸವದಲ್ಲಿ ಧ್ವಜಾವಂದನೆ ಸ್ವೀಕರಿಸಿ ಮಾತನಾಡಿದ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಭಾರತದ ಇತಿಹಾಸದಲ್ಲೇ ಗಣರಾಜ್ಯೋತ್ಸವ ದಿನ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಸುಮಾರು 400 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಕ್ಷೇತ್ರದ ಕಟ್ಟಕಡೆಯ ಹಳ್ಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಅರಿತಿದ್ದು,ಅವರಿಗೆ ಅವಶ್ಯವಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Weather: ಕಡಿಮೆ ಆಯಿತೇ ಚಳಿ? ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ?

ತುಂಗಭದ್ರಾ ನದಿಯಿಂದ ಪಾವಗಡಕ್ಕೆ ಕುಡಿಯುವ ನೀರಿನ ಬಹುಗ್ರಾಮ ಯೋಜನೆಯಿಂದ ಕೂಡ್ಲಿಗಿ ಪಟ್ಟಣ ಕೈಬಿಡಲಾಗಿತ್ತು, ಅದನ್ನ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಪಟ್ಟಣಕ್ಕೂ ಕುಡಿಯುವ ನೀರು ಒದಗಿಸಲು ಸುಮಾರು 68 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಮಾಡಿ ಟೆಂಡರ್ ಮುಗಿದಿದೆ, ಶ್ರೀಘ್ರದಲ್ಲಿ ಕಾಮಾಗಾರಿ ಆರಂಭವಾಗಲಿದೆ ಎಂದರು.

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಶಾಸಕರು ಸನ್ಮಾನಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: Tea And Coffee With Meals: ಊಟ ತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?

ಈ ವೇಳೆ ತಾಪಂ ಇಒ ವೈ. ರವಿಕುಮಾರ್, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಪಿ.ಚಂದ್ರು, ಸಚಿನ್ ಕುಮಾರ್, ಕೆ.ಈಶಪ್ಪ, ಸಿರಬಿ ಮಂಜುನಾಥ, ಲಕ್ಷ್ಮೀದೇವಿ, ಚೌಡಮ್ಮ, ಸರಸ್ವತಿ, ರೇಣುಕಾ ದುರುಗೇಶ್, ಲೀಲಾವತಿ ಪ್ರಭಾಕರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.

Continue Reading

ಉತ್ತರ ಕನ್ನಡ

Uttara Kannada News: ಯಲ್ಲಾಪುರದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

Uttara Kannada News: ಯಲ್ಲಾಪುರ ತಾಲೂಕಿನ ಕಾಳಮ್ಮ ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ತಹಸೀಲ್ದಾರ್‌ ಗುರುರಾಜ್‌ ಎಂ. ನೆರವೇರಿಸಿದರು.

VISTARANEWS.COM


on

75th Republic Day celebration in Yallapur
ಯಲ್ಲಾಪುರ ತಾಲೂಕಿನ ಕಾಳಮ್ಮ ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
Koo

ಯಲ್ಲಾಪುರ: ತಾಲೂಕಿನ ಕಾಳಮ್ಮ ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ (75th Republic Day) ಅಂಗವಾಗಿ ಧ್ವಜಾರೋಹಣವನ್ನು ತಹಸೀಲ್ದಾರ್‌ ಗುರುರಾಜ್‌ ಎಂ. ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್‌, ನಮ್ಮದು ಸಂಪೂರ್ಣ ವಿಶ್ವದಲ್ಲಿ ಅತ್ಯಂತ ಅಗ್ರಮಾನ್ಯದಲ್ಲಿರುವ ದೇಶವಾಗಿದೆ. ನಮ್ಮ ನೆಲ, ಜಲ, ಸಂಸ್ಕೃತಿಯನ್ನು ಗೌರವಿಸುವಂತ ಸಂಸ್ಕಾರ ನಮ್ಮ ದೇಶದ ಮಣ್ಣಿನ ಗುಣವಾಗಿದೆ. ಡಾ. ಬಿ.ಆರ್‌. ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ ಅವರಂತಹ ಮಹನೀಯರ ಆದರ್ಶಗಳು ನಮಗೆ ಪ್ರೇರಣೆಯಾಗಲಿ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್‌ ಗುರುರಾಜ್‌ ಎಂ., ಜಗತ್ತಿನ ಅತ್ಯುನ್ನತ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಶ್ರೇಷ್ಠ ಗುಣಗಳನ್ನು ಅಳವಡಿಸಿ ನಮ್ಮ ಸಂವಿಧಾನವನ್ನು ರೂಪಿಸಿದ ಡಾ. ಅಂಬೇಡ್ಕರ್‌ ಅವರನ್ನು ನಾವೆಲ್ಲ ಇಂದು ನೆನೆಯಲೇಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Padma Shri: ಭತ್ತದ ತಳಿಯ ಸಂರಕ್ಷನನ್ನು ಅರಸಿ ಬಂತು ಪದ್ಮಶ್ರೀ ಗೌರವ

ಇದೇ ಸಂದರ್ಭದಲ್ಲಿ ತಾನ್‌ಸೇನ್‌ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಗಣಪತಿ ಭಟ್‌ ಹಾಸಣಗಿ, ಗ್ರಾಮೀಣ ಭಾಗದಲ್ಲಿ ಸೇವೆಗಾಗಿ ಡಾ. ನಾಗರಾಜ್ ಬಿ.ಎಚ್‌. ಹಾಗೂ ನಾಟಿ ವೈದ್ಯ ನಾರಾಯಣ ಹೆಗಡೆ ಗವೇಗುಳಿ ಅವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಅಂತೆಯೇ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ಶ್ರೀದೇವಿ ಗಂಗಾ ನಾಯಕ ಹಾಗೂ ವಿಶೇಷ ಚೇತನರ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಜಯಶ್ರೀ ಮಂಜುನಾಥ ಮೈಲಾರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.

ನಂತರ ನಡೆದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ವೇದಿಕೆಯಲ್ಲಿ ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಸಿಪಿಐ ರಂಗನಾಥ ನೀಲಮ್ಮನವರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸುನಂದಾ ದಾಸ್ ಹಾಗೂ ಜ್ಯೋತಿ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Sachin Tendulkar: ಸಫಾರಿ ವೇಳೆ ಮೂರನೇ ತಲೆ ಮಾರಿನ ಹುಲಿಯನ್ನು ತೋರಿಸಿದ ಸಚಿನ್​ ತೆಂಡೂಲ್ಕರ್​

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಸಂಜೀವ್ ಕುಮಾರ್ ಹೊಸ್ಕೇರಿ ನಿರ್ವಹಿಸಿದರು. ಶಿಕ್ಷಣ ಸಂಯೋಜಕ ಸಂತೋಷ ಜಿಗಳೂರು ವಂದಿಸಿದರು.

Continue Reading
Advertisement
Season Hairstyle
ಫ್ಯಾಷನ್5 mins ago

Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!

Amit Shah
ದೇಶ8 mins ago

Amit Shah: ನಿಯಂತ್ರಣ ಕಳೆದುಕೊಂಡ ಅಮಿತ್‌ ಶಾ ಇದ್ದ ಹೆಲಿಕಾಪ್ಟರ್;‌ ಸ್ವಲ್ಪದರಲ್ಲೇ ಪಾರಾದ ವಿಡಿಯೊ ಇಲ್ಲಿದೆ

IPL 2024
ಕ್ರೀಡೆ41 mins ago

IPL 2024: ಆರ್​ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ; ಸದ್ಯದ​ ಲೆಕ್ಕಾಚಾರ ಹೇಗಿದೆ?

Hassan Pen Drive Case Where is Prajwal in Germany SIT is on lookout
ಕ್ರೈಂ45 mins ago

Hassan Pen Drive Case: ಜರ್ಮನಿಯಲ್ಲಿ ಪ್ರಜ್ವಲ್‌ ಎಲ್ಲಿದ್ದಾರೆ? ಪತ್ತೆ ಮಾಡುತ್ತಿದೆ ಎಸ್‌ಐಟಿ!

Hassan Pen Drive Case
ಕರ್ನಾಟಕ1 hour ago

Hassan Pen Drive Case: ಪ್ರಜ್ವಲ್ ರೇವಣ್ಣ ಉಚ್ಚಾಟನೆ ನಿರ್ಧಾರ ಆಗಿದೆ ಎಂದ ಎಚ್‌ಡಿಕೆ

Star Saree Fashion
ಫ್ಯಾಷನ್1 hour ago

Star Saree Fashion: ಪಾಸ್ಟೆಲ್‌ ಅರ್ಗಾನ್ಜಾ ಸೀರೆಯಲ್ಲಿ ಮಿಂಚಬೇಕೆ? ನಟಿ ಮೋಕ್ಷಿತಾ ಪೈ ನೀಡಿದ್ದಾರೆ 5 ಸಿಂಪಲ್‌ ಐಡಿಯಾ

Vinay Gowda Got three Film Offer
ಸ್ಯಾಂಡಲ್ ವುಡ್1 hour ago

Vinay Gowda: ಮೂರು ಸಿನಿಮಾಗಳಿಗೆ ಸಹಿ ಮಾಡಿದ ʻಬಿಗ್‌ ಬಾಸ್‌ʼ ಖ್ಯಾತಿಯ ವಿನಯ್‌ ಗೌಡ!

Hassan Pen Drive Case
ಕರ್ನಾಟಕ1 hour ago

ಪ್ರಜ್ವಲ್‌ ರೇವಣ್ಣ ವಿಡಿಯೊಗಳ ಕುರಿತು ಕೆಲ ತಿಂಗಳ ಮೊದಲೇ ಎಚ್ಚರಿಸಿದ್ದ ಬಿಜೆಪಿ ನಾಯಕ! ಯಾರವರು?

Politicians Scandals
Latest2 hours ago

Politicians Scandals : ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಲೈಂಗಿಕ ಹಗರಣಗಳಿವು!

MS Dhoni
ಕ್ರೀಡೆ2 hours ago

MS Dhoni: ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಆದ ಧೋನಿ ಅಭಿಮಾನಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20245 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20247 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌