ಸಿಸೋಡಿಯಾ ಸಿಬಿಐ ವಿಚಾರಣೆ ವಿರೋಧಿಸಿ, ಮೋದಿ ಮರ್​ ಗಯಾ ಎಂದ ಆಪ್​ ಕಾರ್ಯಕರ್ತರು; ನನ್ನ ಪತ್ನಿಯ ಕಾಳಜಿ ಮಾಡಿ ಎಂದ ದೆಹಲಿ ಡಿಸಿಎಂ - Vistara News

ದೇಶ

ಸಿಸೋಡಿಯಾ ಸಿಬಿಐ ವಿಚಾರಣೆ ವಿರೋಧಿಸಿ, ಮೋದಿ ಮರ್​ ಗಯಾ ಎಂದ ಆಪ್​ ಕಾರ್ಯಕರ್ತರು; ನನ್ನ ಪತ್ನಿಯ ಕಾಳಜಿ ಮಾಡಿ ಎಂದ ದೆಹಲಿ ಡಿಸಿಎಂ

Delhi Liquor Scam: ಇಂದು ಬೆಳಗ್ಗೆ ಮನೀಶ್​ ಸಿಸೋಡಿಯಾ ಅವರು ರೋಡ್​ ಶೋ ಮೂಲಕ ಸಿಬಿಐ ವಿಚಾರಣೆಗೆ ತೆರಳಿದರು. ಈ ವೇಳೆ ಆಪ್​ ನಾಯಕರು ಮೋದಿ ವಿರುದ್ಧ ಕೀಳು ಮಟ್ಟದ ಘೋಷಣೆ ಕೂಗಿದ್ದಾರೆ.

VISTARANEWS.COM


on

AAP Workers chants Modi mar gaya as CBI grills Delhi DCM Manish Sisodia
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ (Delhi Liquor scam) ಸಂಬಂಧಪಟ್ಟಂತೆ ಇಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದೆ. ಬೆಳಗ್ಗೆಯಿಂದಲೂ ವಿಚಾರಣೆ ನಡೆಯುತ್ತಲೇ ಇದೆ. ಮನೀಶ್ ಸಿಸೋಡಿಯಾ ವಿಚಾರಣೆಯನ್ನು ಆಮ್​ ಆದ್ಮಿ ಪಕ್ಷ ಕಟುವಾಗಿ ವಿರೋಧಿಸಿದೆ. ಪ್ರಧಾನಿ ಮೋದಿ-ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದ ಆಪ್​ ಕಾರ್ಯಕರ್ತರು, ನಾಯಕರು ‘mar ja Modi (ಮೋದಿ ನೀ ಸತ್ತು ಹೋಗು), Modi mar gaya (ಮೋದಿ ಸತ್ತಿದ್ದಾರೆ) ಎಂದು ಕೂಗಿದ್ದಾರೆ. ಆಪ್​ನ ಈ ಘೋಷಣೆ ವಿರುದ್ಧ ಬಿಜೆಪಿ ಕಿಡಿಕಾರಿದೆ.

ದೆಹಲಿಯಲ್ಲಿ 2021ರಲ್ಲಿ ನೂತನ ಅಬಕಾರಿ ನೀತಿ ಜಾರಿಗೊಳಿಸಿದಾಗ, ಲೈಸೆನ್ಸ್​ ಕೊಡುವಲ್ಲಿ ಕೋಟ್ಯಂತರ ರೂಪಾಯಿ ಹಗರಣವಾಗಿರುವ ಕೇಸ್​​ನ ತನಿಖೆಯನ್ನು ಇಡಿ ಮತ್ತು ಸಿಬಿಐಗಳು ನಡೆಸುತ್ತಿವೆ. ಹಿಂದೊಮ್ಮೆ ಮನೀಶ್​ ಸಿಸೋಡಿಯಾ ಮನೆ, ಕಚೇರಿಗಳನ್ನು ಸಿಬಿಐ -ಇಡಿ ಶೋಧ ಮಾಡಿದ್ದವು. ಇಂದು ಮತ್ತೆ ಸಿಬಿಐ ವಿಚಾರಣೆಗೆ ಕರೆದಿತ್ತು. ಬೆಳಗ್ಗೆ 10ಗಂಟೆ ಹೊತ್ತಿಗೆ, ಮನೆಯಿಂದ ಹೊರಟ ಮನೀಶ್ ಸಿಸೋಡಿಯಾ ರೋಡ್ ಶೋ ಮಾಡಿಕೊಂಡು ಸಿಬಿಐ ಕಚೇರಿಗೆ ಹೋದರು. ಕಾರಿನಲ್ಲಿ ನಿಂತು, ಜನರತ್ತ ಕೈಬೀಸುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಕೈಯಲ್ಲಿ ವಿವಿಧ ಘೋಷಣೆಗಳುಳ್ಳ ಫಲಕವನ್ನು ಹಿಡಿದು, ಬಾಯಲ್ಲಿ ಘೋಷಣೆಗಳನ್ನು ಕೂಗುತ್ತ ಸಿಸೋಡಿಯಾ ಜತೆ ಸಾಗಿದರು. ಬಳಿಕ ಮನೀಶ್​ ಸಿಸೋಡಿಯಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅವರೇನೂ ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೋ, ವಿಜಯ ಯಾತ್ರೆ ನಡೆಸುತ್ತಿದ್ದಾರೋ ಅಥವಾ ಸಿಬಿಐ ವಿಚಾರಣೆಗೆ ತೆರಳುತ್ತಿದ್ದಾರೋ ಎಂದು ಗೊಂದಲ ಏರ್ಪಡುವ ಸನ್ನಿವೇಶ ಅಲ್ಲಿತ್ತು.

ನನ್ನ ಬಗ್ಗೆ ಹೆಮ್ಮೆ ಪಡಿ
ಮನೀಶ್​ ಸಿಸೋಡಿಯಾ ಅವರು ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ತಾನು ಜೈಲಿಗೆ ಹೋಗುವುದು ಗ್ಯಾರಂಟಿ ಎಂಬರ್ಥದಲ್ಲೇ ಮಾತನಾಡಿದರು. ‘ನಾನೊಮ್ಮೆ ಜೈಲಿಗೆ ಹೋದರೂ ನನ್ನ ಬಗ್ಗೆ ಯಾರೂ ವಿಷಾದಿಸಬೇಡಿ. ನಿಜಕ್ಕೂ ಹೆಮ್ಮೆ ಪಡಿ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅರವಿಂದ್ ಕೇಜ್ರಿವಾಲ್​ ಎಂದರೆ ಭಯ. ಅದೇ ಕಾರಣಕ್ಕೆ ಅವರು ನನ್ನನ್ನು ಸುಳ್ಳು ಕೇಸ್​ನಲ್ಲಿ ಜೈಲಿಗೆ ಕಳಿಸಲು ನೋಡುತ್ತಿದ್ದಾರೆ. ನೀವೆಲ್ಲರೂ ನನ್ನ ಪರವಾಗಿ ಹೋರಾಡಿ. ಈ ಸಂಕಷ್ಟ ಬಂದದಿನದಿಂದಲೂ ನನಗೆ ಬೆಂಬಲವಾಗಿ, ಬೆನ್ನೆಲುಬಾಗಿ ನಿಂತ ನನ್ನ ಪತ್ನಿ ಈಗ ಅನಾರೋಗ್ಯಕ್ಕೀಡಾಗಿ ಮನೆಯಲ್ಲೇ ಇದ್ದಾಳೆ. ಅವಳ ಬಗ್ಗೆ ನೀವೇ ಕಾಳಜಿ ತೆಗೆದುಕೊಳ್ಳಬೇಕು. ನಾನು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಹೆದರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾನು ದೆಹಲಿಯ ಮಕ್ಕಳಿಗೆ ಚೆನ್ನಾಗಿ ಓದಿ ಎಂದು ಹೇಳಲು ಇಷ್ಟಪಡುತ್ತೇನೆ. ನಿಮ್ಮ ಪಾಲಕರನ್ನು ಮಾತನ್ನು ಕೇಳಿ ಎಂದು ಸಲಹೆ ನೀಡುತ್ತೇನೆ’ ಎಂದು ಹೇಳಿದರು.

ಬಿಜೆಪಿ ಕಿಡಿ
ಇನ್ನು ಸಿಸೋಡಿಯಾ ಅವರು ಹೀಗೆ ರೋಡ್ ಶೋ ಮೂಲಕ ಸಿಬಿಐ ವಿಚಾರಣೆಗೆ ತೆರಳಿದ್ದನ್ನು ಬಿಜೆಪಿ ಕಟುವಾಗಿ ವಿರೋಧಿಸಿದೆ. ಅದರಲ್ಲೂ ಮೋದಿ ವಿರುದ್ಧ ಮಾಡಿದ ಘೋಷಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಆಪ್​​ನವರು ಮೋದಿ ಸತ್ತು ಹೋಗು ಎಂದು ಘೋಷಣೆ ಕೂಗಿದ್ದು ನಿಜಕ್ಕೂ ದುರದೃಷ್ಟಕರ. ಅವರು ಏನು ಹೇಳಲು ಹೊರಟಿದ್ದಾರೆ. ಆಪ್​​ನವರು ಈ ಮೂಲಕ ತಮ್ಮ ಭ್ರಷ್ಟಾಚಾರ ಮರೆಮಾಚುತ್ತಿದ್ದಾರಾ?’ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

China Road: ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ಹಿಮಪ್ರದೇಶದ ಬಳಿಯೇ ಚೀನಾ ರಸ್ತೆ ನಿರ್ಮಿಸಿರುವ ಸ್ಯಾಟಲೈಟ್‌ ಫೋಟೊಗಳು ಲಭ್ಯವಾಗಿವೆ. ಕಳೆದ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಚೀನಾ ರಸ್ತೆ ನಿರ್ಮಾಣ ಆರಂಭಿಸಿದ್ದು, ಇದರ ಚಿತ್ರಗಳನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿದೆ. ಚೀನಾ ರಸ್ತೆ ನಿರ್ಮಿಸಿದ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿವೆ.

VISTARANEWS.COM


on

China Road
Koo

ನವದೆಹಲಿ: ಕಾಶ್ಮೀರದ ಲಡಾಕ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ (LoC) ಬಳಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಾ ಈಗ ಮತ್ತೊಂದು ಉದ್ಧಟತನ ತೋರಿದೆ. ಹೌದು, ಪಾಕ್‌ ಆಕ್ರಮಿತ ಕಾಶ್ಮೀರದ (Pak Occupied Kashmir) ಬಳಿ ನೂತನವಾಗಿ ರಸ್ತೆ ನಿರ್ಮಿಸುವ (China Road) ಮೂಲಕ ಚೀನಾ ಗಡಿ ನಿಯಮಗಳನ್ನು ಗಾಳಿಗೆ ತೂರಿದೆ. ಇದು ಭಾರತದ ಜತೆ ಮತ್ತೊಂದು ಬಿಕ್ಕಟ್ಟು ಸೃಷ್ಟಿಸುವ ಹುನ್ನಾರ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಚೀನಾ ರಸ್ತೆ ನಿರ್ಮಾಣ ಆರಂಭಿಸಿದ್ದು, ಇದರ ಚಿತ್ರಗಳನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿದೆ. ಚೀನಾ ರಸ್ತೆ ನಿರ್ಮಿಸಿದ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿವೆ.

ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ಹಿಮಪ್ರದೇಶದ ಬಳಿಯೇ ಚೀನಾ ರಸ್ತೆ ನಿರ್ಮಿಸಿರುವ ಸ್ಯಾಟಲೈಟ್‌ ಫೋಟೊಗಳು ಲಭ್ಯವಾಗಿವೆ. 1963ರಲ್ಲಿ ಚೀನಾಗೆ ಬಿಟ್ಟುಕೊಟ್ಟಿರುವ, ಪಾಕ್‌ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದ ಶಾಕ್ಸ್‌ಗಾಮ್‌ ಕಣಿವೆಯಲ್ಲಿ ಚೀನಾ ರಸ್ತೆ ನಿರ್ಮಿಸಿದೆ. ಇದು ಭಾರತದ ಇಂದಿರಾ ಕೋಲ್ ಪ್ರದೇಶದಿಂದ ಕೇವಲ 50 ಕಿಲೋ ಮೀಟರ್‌ ದೂರದಲ್ಲಿರುವುದರಿಂದ ಆತಂಕ ಹೆಚ್ಚಾಗಿದೆ.

ಇಂದಿರಾ ಕೋಲ್‌ ಪ್ರದೇಶಕ್ಕೆ ಕಳೆದ ಮಾರ್ಚ್‌ನಿಂದ ಇದುವರೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಎರಡು ಬಾರಿ ಭೇಟಿ ನೀಡಿದ್ದರು. ಇದರಿಂದ ಕೇವಲ 50 ಕಿಲೋಮೀಟರ್‌ ದೂರದಲ್ಲಿ ಚೀನಾ ರಸ್ತೆ ನಿರ್ಮಿಸಿದ ಕಾರಣ ಮುಂದಿನ ದಿನಗಳಲ್ಲಿ ಭಾರತದ ಜತೆಗಿನ ಬಿಕ್ಕಟ್ಟನ್ನು ಉಲ್ಬಣಿಸುವ ಸಾಧ್ಯತೆ ಇದೆ. ಇದೇ ಸಂಚಿನಿಂದಾಗಿಯೇ ಚೀನಾ ರಸ್ತೆ ನಿರ್ಮಾಣ ಮಾಡಿದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಏಕೆ ಆತಂಕಕಾರಿ?

ಸಿಯಾಚಿನ್‌ ಹಿಮಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸಿರುವುದು ಭಾರತಕ್ಕೆ ಹಲವು ರೀತಿಯಲ್ಲಿ ಆತಂಕ ಎನಿಸಿದೆ. ಗಡಿಯಲ್ಲಿ ರಸ್ತೆ ನಿರ್ಮಿಸಿದರೆ ಚೀನಾ ಸುಲಭವಾಗಿ ಮಿಲಿಟರಿ ಸಲಕರಣೆಗಳನ್ನು, ಸೈನಿಕರನ್ನು ಗಡಿಗೆ ನಿಯೋಜಿಸಬಹುದು. ಇದಾದ ಬಳಿಕ ಭಾರತದ ಜತೆ ತಗಾದೆ ತೆಗೆಯಲು ಚೀನಾಗೆ ಅನುಕೂಲವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಇದಕ್ಕೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

Continue Reading

ದೇಶ

Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

Lok Sabha Election 2024: ಕರ್ನಾಟಕ ಸೇರಿದಂತೆ ದೇಶದ ಒಟ್ಟು 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಹಬ್ಬ (Voting) ರಂಗೇರಿದೆ. ಎರಡನೇ ಹಂತದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ (Lok sabha election 2024) ಇಂದು ಮತದಾನಕ್ಕೆ ಮತದಾರ ಸಜ್ಜಾಗಿದ್ದು, ಕೇರಳ (Kerala) ದ ಎಲ್ಲಾ 20 ಕ್ಷೇತ್ರಗಳು, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 8 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರಗಳ 5 ಕ್ಷೇತ್ರಗಳು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದ 2, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರಗಳಲ್ಲಿ ತಲಾ 1 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

VISTARANEWS.COM


on

By

Lok sabha election 2024
Koo

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಒಟ್ಟು 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಹಬ್ಬ (Voting) ರಂಗೇರಿದೆ. ಎರಡನೇ ಹಂತದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ (Lok sabha election 2024) ಇಂದು ಮತದಾನಕ್ಕೆ ಮತದಾರ ಸಜ್ಜಾಗಿದ್ದು, ಕೇರಳ (Kerala) ದ ಎಲ್ಲಾ 20 ಕ್ಷೇತ್ರಗಳು, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 8 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರಗಳ 5 ಕ್ಷೇತ್ರಗಳು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದ 2, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರಗಳಲ್ಲಿ ತಲಾ 1 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 89 ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಮಧ್ಯಪ್ರದೇಶದ ಬೇಟುಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಹುಜನ ಸಮಾವಾದಿ ಪಕ್ಷದ ಅಭ್ಯರ್ಥಿ ನಿಧನದಿಂದಾಗಿ ಮತದಾನ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಈ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಇಂದು 88 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಹೈವೋಲ್ಟೇಜ್‌ ಕ್ಷೇತ್ರಗಳು ಯಾವ್ಯಾವು ?

ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖ ನಾಯಕರು ಸ್ಪರ್ಧಿಸುತ್ತಿರುವ ಹೈ ವೋಲ್ಟೇಜ್‌ (High Profile names) ಕ್ಷೇತ್ರಗಳ ಮೇಲೆ ಎಲ್ಲ ಕಣ್ಣು ನೆಟ್ಟಿದೆ.ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಸ್ಪರ್ಧಿಸುತ್ತಿರುವ ಕೇರಳದ ವಯನಾಡು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Rajiv Chandrshekar) ಮತ್ತು ಕಾಂಗ್ರೆಸ್‌ನ ಶಶಿ ತರೂರು (Shashi Tharoor) ಮುಖಾಮುಖಿಯಾಗಿ ಸ್ಪರ್ಧಿಸಿರುವ ತಿರುವನಂತಪುರಂನಲ್ಲಿ ಇಂದು ಮತದಾನ ನಡೆಯುತ್ತಿದೆ. ಅಷ್ಟೇ ಅಲ್ಲದೇ ನಟಿ ಹೇಮಾ ಮಾಲಿನಿ, ರಾಮಾಯಣ ಧಾರಾವಾಹಿ ಖ್ಯಾತಿಯ ಅರುಣ್‌ ಗೋವಿಲ್‌, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಕೆ.ಸಿ.ವೇಣುಗೋಪಾಲ್‌, ಭೂಪೇಶ್‌ ಭಗೇಲ್‌ ಮ್ತು ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ಕಣದಲ್ಲಿರುವ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ರಂಗೇರಿದೆ.

ಇದನ್ನೂ ಓದಿ: Loka sabha election-2024: ಮೋದಿ ಗೆದ್ದಿದ್ದ ವಡೋದರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ!

ಎರಡನೇ ಹಂತದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅತ್ಯಂತ ಚಾಲೆಂಜಿಂಗ್‌ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ಅತೀ ಹೆಚ್ಚು ಸೀಟು ಪಡೆದು ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಹವಣಿಸುತ್ತಿದ್ದರೆ, ಅತ್ತ ಕೇರಳದಲ್ಲಿ ಬಿಜೆಪಿಯೂ ಅದೇ ಕಸರತ್ತಿನಲ್ಲಿ ತೊಡಗಿದೆ. ಕೇರಳದಲ್ಲಿ ಗೆಲುವಿನ ಖಾತೆ ತೆರೆಯಲೇಬೇಕೆಂಬ ಗುರಿಯೊಂದಿಗೆ ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಮತ್ತು ವಿ. ಮುರಳೀಧರನ್‌ರನ್ನು ಕಣಕ್ಕಿಳಿಸಿದೆ. ಇನ್ನು ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ ಭದ್ರಕೋಟೆಯಂತಿರುವ ವಯನಾಡು ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂದ್ರನ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.


Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಈ ದಿನ ನಮ್ಮದು, ನಮ್ಮ ಅಧಿಕಾರ ಚಲಾಯಿಸೋಣ

ಪ್ರತಿ ಮತವೂ ಅಮೂಲ್ಯ. ಆದರೆ ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಶೇ.60ನ್ನು ದಾಟುವುದಿಲ್ಲ. ಸುಶಿಕ್ಷಿತರು ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಇದಕ್ಕೆ ಪರಿಹಾರ. ಪ್ರಜಾಪ್ರಭುತ್ವವೆಂಬುದು ಸುಮ್ಮನೇ ಯಾರೋ ನಮಗೆ ತಟ್ಟೆಯಲ್ಲಿಟ್ಟು ಕೊಟ್ಟ ಉಡುಗೊರೆಯಲ್ಲ. ಪ್ರತಿ ಪ್ರಜೆಯೂ ಪ್ರತಿ ಕಾಲದಲ್ಲೂ ತಮ್ಮ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು.

VISTARANEWS.COM


on

Lok sabha Election
Koo

ದೇಶದಲ್ಲಿ ಲೋಕಸಭೆ ಚುನಾವಣೆಯ (lok sabha election) ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ (ಏಪ್ರಿಲ್‌ 26) ಶುಕ್ರವಾರ ನಡೆಯುತ್ತಿದೆ. ಮತದಾನವನ್ನು ಶಾಂತಿಯುತವಾಗಿ ಹಾಗೂ ಯಾವುದೇ ಲೋಪದೋಷಗಳಿಲ್ಲದೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದರ ಜತೆಗೆ, ಮತದಾನ ಪ್ರಮಾಣವನ್ನೂ ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಆಯೋಗ ಘೋಷಿಸಿದೆ. ಭಾರತದಲ್ಲಿ ಚುನಾವಣೆ ನಡೆಯುತ್ತದೆ ಎಂದರೆ ಜಗತ್ತೇ ಅದನ್ನು ಕುತೂಹಲದಿಂದ ವೀಕ್ಷಿಸುತ್ತದೆ. ಯಾಕೆಂದರೆ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ, 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದಲ್ಲಿ, ಯಾವುದೇ ಹಿಂಸಾಚಾರವಿಲ್ಲದೆ, ಒಂದೇ ಒಂದು ಜೀವಹಾನಿಯಿಲ್ಲದೆ, ಯಾವ ಲೋಪದೋಷವೂ ಇಲ್ಲದಂತೆ, ಜಗತ್ತಿಗೇ ಮಾದರಿಯಾಗಿ ನಡೆಯುವ ಮತದಾನ ಪ್ರಕ್ರಿಯೆ ಹಲವು ದೇಶಗಳಿಗೆ ಅಧ್ಯಯನ ಯೋಗ್ಯವಾಗಿ ಕಾಣುತ್ತದೆ. ದಾಖಲೆ ಸಂಖ್ಯೆಯ ಜನರು ಮತದಾನ ಮಾಡಲು ಏಳೆಂಟು ಹಂತಗಳನ್ನು ತೆಗೆದುಕೊಂಡರೂ, ಒಂದೇ ದಿನದಲ್ಲಿ ಸಂಶಯಕ್ಕೆಡೆಯಿಲ್ಲದಂತೆ ಫಲಿತಾಂಶವನ್ನು ಪಡೆಯುವುದು ವಿಶೇಷ. ಅಮೆರಿಕದಂಥ ದೇಶದಲ್ಲೇ ಚುನಾವಣೆ ಹಲವು ಸಲ ಗೊಂದಲಮಯವಾಗಿರುತ್ತದೆ ಎಂಬುದನ್ನು ನೋಡಿದರೆ, ನಮ್ಮದು ಅಧ್ಯಯನಯೋಗ್ಯವೇ ಸರಿ.

ಪ್ರಸ್ತುತ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಏರಲು ಜನತೆಯ ಆಶೀರ್ವಾದ ಕೋರಿದೆ. ನರೇಂದ್ರ ಮೋದಿಯವರು ಪಕ್ಷಕ್ಕೆ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಸಮರ್ಥ ನಾಯಕತ್ವ ನೀಡಿದ್ದಾರೆ. ಹಲವು ದಶಕಗಳ ಕಾಲ ದೇಶವನ್ನು ಆಳಿ ಸದ್ಯ ಅಧಿಕೃತ ವಿಪಕ್ಷ ಸ್ಥಾನಮಾನವನ್ನೂ ಹೊಂದಿಲ್ಲದ ಕಾಂಗ್ರೆಸ್‌, ಮರಳಿ ಅಧಿಕಾರಕ್ಕೆ ಬರಲು ಹಾತೊರೆಯುತ್ತಿದೆ. ಕಾಂಗ್ರೆಸ್‌ ಪಕ್ಷ ಹಲವು ಮಿತ್ರಪಕ್ಷಗಳನ್ನು ಸೇರಿಸಿಕೊಂಡು ಇಂಡಿಯಾ ಬ್ಲಾಕ್‌ ರಚಿಸಿಕೊಂಡು ಬಿಜೆಪಿಯ ಅಶ್ವಮೇಧವನ್ನು ಕಟ್ಟಿಹಾಕಲು ಯತ್ನಿಸುತ್ತಿದೆ. ಚುನಾವಣೆಯ ಪ್ರಚಾರ ಕಣದಲ್ಲಿ ಹಲವು ವಾದವಿವಾದಗಳು, ವಾಗ್ವಾದಗಳು ನಡೆದುಹೋಗಿವೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದು ಮತದಾರನಿಗೆ ಬಿಟ್ಟ ವಿಷಯ. ಮತದಾರ ಸಾಕಷ್ಟು ಬುದ್ಧಿವಂತನಾಗಿದ್ದು, ತನ್ನ ಆಯ್ಕೆಯನ್ನು ಆತ ಮಾಡಬಲ್ಲ.

ಆದರೆ, ಚಿಂತಿಸಬೇಕಾದ ಒಂದು ವಿಷಯವೆಂದರೆ, ಮತದಾನದ ಪ್ರಮಾಣ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಿದೆ. ವಿದ್ಯಾವಂತರೇ ಮತದಾನ ಮಾಡುತ್ತಿಲ್ಲ ಎಂಬುದು ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲಾಗಿರುವ ಕೊರಗುಗಳಲ್ಲಿ ಒಂದು. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸಬೇಕಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ (2019) ಇಡೀ ರಾಜ್ಯದಲ್ಲೇ ಕನಿಷ್ಠ ಪ್ರಮಾಣ (ಶೇ 53.7) ಮತದಾನವಾಗಿತ್ತು. ಬೆಂಗಳೂರು ಸೆಂಟ್ರಲ್‌ನಲ್ಲಿ ಮತದಾನ ಪ್ರಮಾಣ ಸೇಕಡ 54.3, ಬೆಂಗಳೂರು ಉತ್ತರದಲ್ಲಿ ಮತದಾನ ಪ್ರಮಾಣ ಶೇಕಡ 54.7 ಇತ್ತು. ಇದೇ ವೇಳೆ ಬೆಂಗಳೂರು ಗ್ರಾಮಾಂತರದಲ್ಲಿ ಮತದಾನ ಪ್ರಮಾಣ ಶೇಕಡ 64.9 ಇತ್ತು. ಕರ್ನಾಟಕದ ಒಟ್ಟು ಮತದಾನ ಪ್ರಮಾಣ ಶೇಕಡ 68 ಇತ್ತು. ಆದ್ದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂಬ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವುಗಳಿಗೆ ಪೂರಕವಾಗಿ ಎಲ್ಲರೂ ಸ್ಪಂದಿಸಬೇಕಿದೆ. ಸಾಮಾನ್ಯವಾಗಿ ವಾರಾಂತ್ಯ ಅಥವಾ ವಾರದ ಆರಂಭದಲ್ಲಿ ಮತದಾನ ದಿನ ನಿಗದಿಪಡಿಸಿದರೆ ಒಂದಿಷ್ಟು ಸಂಖ್ಯೆಯ ಮತದಾರರು ಪ್ರವಾಸಕ್ಕೆ ಹೊರಡುವ ಪ್ರವೃತ್ತಿಯನ್ನು ನಾವು ಈ ಹಿಂದಿನ ಚುನಾವಣೆಗಳಲ್ಲಿ ಗಮನಿಸಿದ್ದೇವೆ. ಅದನ್ನು ತಪ್ಪಿಸಲು ಆಯೋಗ ವಾರದ ನಡುವೆ ಮತದಾನದ ದಿನ ನಿಗದಿಪಡಿಸಿದೆ. ಹಾಗೆಯೇ ಈ ದಿನ ಸಾರ್ವತ್ರಿಕ ರಜೆಯನ್ನು ನೀಡಲಾಗಿದೆ. ರಜೆಯೆಂದು ಪ್ರವಾಸ ಹೋಗುವ ನಗರದ ಮತದಾರರ ಚಾಳಿಯನ್ನು ತಪ್ಪಿಸಲು ಹೆಚ್ಚಿನ ಪ್ರವಾಸೀ ತಾಣಗಳನ್ನು ಕ್ಲೋಸ್‌ ಮಾಡಲಾಗುತ್ತಿದೆ.

ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರಕ್ಕೆ ಬರಲು ಆಗದ 80 ವರ್ಷಕ್ಕೂ ಮೇಲ್ಪಟ್ಟವರು, ಗಂಭೀರ ಅನಾರೋಗ್ಯ ಬಾಧಿತರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಮತದಾನ ಕೇಂದ್ರದಲ್ಲೂ ಇವರಿಗೆ ವಿಶೇಷ ಸೌಲಭ್ಯ ಮಾಡಲಾಗಿದೆ. ಮೊದಲೇ ಈ ಬಗ್ಗೆ ನೋಂದಾಯಿಸಿಕೊಳ್ಳಬೇಕು. ಅಂಥ ಒಂದು ಮತದ ಸಂಗ್ರಹಕ್ಕೆ ಮೂರ್ನಾಲ್ಕು ಮಂದಿಯನ್ನು ನಿಯೋಜಿಸಲಾಗುತ್ತದೆ ಎಂದರೆ, ಒಂದೊಂದು ಮತವನ್ನೂ ಆಯೋಗ ಎಷ್ಟು ಗಂಭಿರವಾಗಿ ಪರಿಗಣಿಸಿದೆ ಎಂಬುದನ್ನು ಗಮನಿಸಬಹುದು. ಅಗತ್ಯವಿದ್ದವರು ಇದರ ಸದ್ಬಳಕೆ ಮಾಡಿಕೊಂಡಿದ್ದಾರೆ. ಭಾರತೀಯ ಚುನಾವಣಾ ಆಯೋಗವು ನವೀನ ಮತ್ತು ವಿನೂತನ ಮತದಾರರ ಜಾಗೃತಿ ಅಭಿಯಾನಗಳನ್ನು ಆಯೋಜಿಸಿರುವುದರ ಜೊತೆಗೆ ಹೋಟೆಲ್ ಉದ್ಯಮಿಗಳು, ಕಂಪನಿಗಳು ಮತ್ತು ಇತರ ಸಂಸ್ಥೆಗಳು ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮತದಾರರನ್ನು ಓಲೈಸಲು ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಯುವ ಮತದಾರರಿಗೆ, ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬುಡಕಟ್ಟು ಸಮುದಾಯಗಳಿಗೆ ವಿಶೇಷ ಮತಗಟ್ಟೆ ರಚಿಸಲಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರೈಲ್ವೇ ಇಲಾಖೆಯ ಸುಧಾರಣೆ ಕ್ರಮಗಳು ಪ್ರಶಂಸಾರ್ಹ

ಪ್ರತಿ ಮತವೂ ಅಮೂಲ್ಯ. ಆದರೆ ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಶೇ.60ನ್ನು ದಾಟುವುದಿಲ್ಲ. ಸುಶಿಕ್ಷಿತರು ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಇದಕ್ಕೆ ಪರಿಹಾರ. ಪ್ರಜಾಪ್ರಭುತ್ವವೆಂಬುದು ಸುಮ್ಮನೇ ಯಾರೋ ನಮಗೆ ತಟ್ಟೆಯಲ್ಲಿಟ್ಟು ಕೊಟ್ಟ ಉಡುಗೊರೆಯಲ್ಲ. ಪ್ರತಿ ಪ್ರಜೆಯೂ ಪ್ರತಿ ಕಾಲದಲ್ಲೂ ತಮ್ಮ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು. ಸಂವಿಧಾನದ ಪ್ರಕಾರ ಪ್ರತೀ ಪ್ರಜೆಗೂ ಮತದಾನ ಎಂಬುದು ಮೂಲಭೂತ ಹಕ್ಕು. ಮತದಾನದ ಒಂದು ದಿನದಂದು ಮಾತ್ರವೇ ಪ್ರಜೆ ಪ್ರಭುವಾಗಿರುತ್ತಾನೆ. ಅಂದು ಸರಿಯಾಗಿ ತಮ್ಮ ಅಧಿಕಾರ ಚಲಾಯಿಸದೇ ಹೋದರೆ ಮುಂದಿನ ಐದು ವರ್ಷ ತಮಗಿಷ್ಟವಿಲ್ಲದ ವ್ಯಕ್ತಿಗಳ ಗುಲಾಮರಾಗಿರಬೇಕಾಗುತ್ತದೆ. ಚುನಾವಣೆ ಆಯೋಗದ ಸುಧಾರಣಾವಾದಿ ಕ್ರಮಗಳನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಾಗರಿಕರು ಪರಿಗಣಿಸಬೇಕು. ಆಗ ಮಾತ್ರ ಮತದಾನ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ.

Continue Reading

ದೇಶ

Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

Narendra Modi: ಜೂನ್‌ನಲ್ಲಿ ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಔಟ್ರೀಚ್ ಅಧಿವೇಶನಗಳಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಗುರುವಾರ ಆಹ್ವಾನ ನೀಡಿದ್ದಾರೆ. ಇಟಲಿಯ ವಿಮೋಚನಾ ದಿನದ 79ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ದೂರವಾಣಿ ಸಂಭಾಷಣೆಯ ವೇಳೆ ಮೋದಿ ಈ ಆಹ್ವಾನ ಸ್ವೀಕರಿಸಿದ್ದಾರೆ. ಮಾತುಕತೆ ವೇಳೆ ಪ್ರಧಾನಮಂತ್ರಿ ಮೋದಿ ಅವರು ಮೆಲೋನಿ ಮತ್ತು ಇಟಲಿಯ ಜನತೆಗೆ ಶುಭಾಶಯಗಳನ್ನು ತಿಳಿಸಿದರು.

VISTARANEWS.COM


on

Narendra Modi
Koo

ನವದೆಹಲಿ: ಜೂನ್‌ನಲ್ಲಿ ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಔಟ್ರೀಚ್ ಅಧಿವೇಶನ (G7 Summit Outreach Sessions)ಗಳಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಗುರುವಾರ ಆಹ್ವಾನ ನೀಡಿದ್ದಾರೆ.

ಇಟಲಿಯ ವಿಮೋಚನಾ ದಿನದ 79ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ದೂರವಾಣಿ ಸಂಭಾಷಣೆಯ ವೇಳೆ ಮೋದಿ ಈ ಆಹ್ವಾನ ಸ್ವೀಕರಿಸಿದರು. ಮಾತುಕತೆ ವೇಳೆ ಪ್ರಧಾನಮಂತ್ರಿ ಮೋದಿ ಅವರು ಮೆಲೋನಿ ಮತ್ತು ಇಟಲಿಯ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಜತೆಗೆ ಜಿ 7 ಆಹ್ವಾನವನ್ನು ನೀಡಿದ್ದಕ್ಕಾಗಿ ಅವರು ಮೆಲೋನಿಗೆ ಕೃತಜ್ಞತೆ ಸಲ್ಲಿಸಿದರು.

“ಇಟಲಿ ಇಂದು ತನ್ನ ವಿಮೋಚನಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಾತನಾಡಿದೆ. ಜತೆಗೆ ಶುಭಾಶಯಗಳನ್ನು ಕೋರಿದ್ದೇನೆ. ಜೂನ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಜಿ 7ನಲ್ಲಿ G20India ವಿಚಾರದ ಬಗ್ಗೆ ಚರ್ಚಿಸಲಾಯಿತು. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ ಸಾಧಿಸಿದ ಗಮನಾರ್ಹ ಫಲಿತಾಂಶಗಳನ್ನು, ವಿಶೇಷವಾಗಿ ಇಟಲಿಯ ಅಧ್ಯಕ್ಷತೆಯಲ್ಲಿ ಜರಗಲಿರುವ ಮುಂಬರುವ ಜಿ 7 ಶೃಂಗಸಭೆಯ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು. ಇಬ್ಬರೂ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಪರಸ್ಪರ ಹಿತಾಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ದೃಷ್ಟಿಕೋನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ಗ್ರೂಪ್ ಆಫ್ ಸೆವೆನ್ (ಜಿ 7) ಏಳು ಪ್ರಮುಖ ದೇಶಗಳನ್ನು ಒಳಗೊಂಡಿರುವ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಆರ್ಥಿಕ ನೀತಿ, ಜಾಗತಿಕ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಸಮನ್ವಯಗೊಳಿಸಲು ಈ ದೇಶಗಳು ವಾರ್ಷಿಕವಾಗಿ ಸಭೆ ಸೇರುತ್ತವೆ. ಕಳೆದ ವರ್ಷ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಜಪಾನ್ ಅಧ್ಯಕ್ಷತರಯಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಪಿಎಂ ಮೋದಿ ಜಪಾನ್‌ನ ಹಿರೋಷಿಮಾಗೆ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ ಕೆಲವು ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದರು.

ಇದನ್ನೂ ಓದಿ: Giorgia Meloni: ಯುರೋಪ್‌ನಲ್ಲಿ ಇಸ್ಲಾಮ್‌ಗೆ ಜಾಗವಿಲ್ಲ: ಇಟಲಿ ಪ್ರಧಾನಿ ಬೋಲ್ಡ್‌ ಮಾತು

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

Continue Reading
Advertisement
China Road
ದೇಶ19 seconds ago

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

Lok sabha election 2024
ದೇಶ28 mins ago

Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

Crime Scene
ಕ್ರೈಂ30 mins ago

UDR Case: ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

lok sabha election 2024 sudha murthy voting
Live News1 hour ago

Lok Sabha Election 2024: ಲೋಕಸಭೆ ಚುನಾವಣೆ 2024 ಮತದಾನ Live News

ಅಂಕಣ1 hour ago

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Eating Bread
ಆಹಾರ/ಅಡುಗೆ1 hour ago

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Lok Sabha Election
ಪ್ರಮುಖ ಸುದ್ದಿ2 hours ago

Lok Sabha Election 2024: ಇಂದು ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

Karnataka Weather Forecast
ಮಳೆ2 hours ago

Karnataka Weather : ಮಳೆಯಾಟ ಬಂದ್‌; 12 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಟ್ಯಾಕ್‌, ಯೆಲ್ಲೋ ಅಲರ್ಟ್‌

drinking ors
ಆರೋಗ್ಯ2 hours ago

ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

Dina bhavishya
ಭವಿಷ್ಯ3 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ3 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ16 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ16 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ20 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202421 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು4 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ4 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

ಟ್ರೆಂಡಿಂಗ್‌