Viral video: ಹತ್ತಾರು ಪಂಜು ಕಟ್ಟಿಕೊಂಡು ಬಂದ ಪಂಜುರ್ಲಿ: ಯಕ್ಷಗಾನದ ವೇಷ ವೈರಲ್ - Vistara News

ದಕ್ಷಿಣ ಕನ್ನಡ

Viral video: ಹತ್ತಾರು ಪಂಜು ಕಟ್ಟಿಕೊಂಡು ಬಂದ ಪಂಜುರ್ಲಿ: ಯಕ್ಷಗಾನದ ವೇಷ ವೈರಲ್

ಕೋಲದ ವೇಷದಲ್ಲಿ ವಿಭಿನ್ನವಾಗಿ ಹತ್ತಾರು ದೊಂದಿಗಳೊಂದಿಗೆ ರಂಗಸ್ಥಳಕ್ಕೆ ಬಂದ ವೇಷಧಾರಿ ಅವುಗಳನ್ನು ಸುಂದರವಾಗಿ ಬ್ಯಾಲೆನ್ಸ್‌ ಮಾಡಿಕೊಂಡು ನರ್ತಿಸಿದ್ದು, ಇದನ್ನು ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಕರಾವಳಿಯಾದ್ಯಂತ ಭಾರಿ ವೈರಲ್ ಆಗಿದೆ ಕೂಡ.

VISTARANEWS.COM


on

panjurli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಡುಪಿ: ಯಕ್ಷಗಾನ ಪ್ರದರ್ಶನವೊಂದರ ವೇಳೆ ಪಂಜುರ್ಲಿ ದೈವದ ವೇಷಧಾರಿ ಹತ್ತಾರು ದೊಂದಿಗಳ ಸಮೇತ ಪ್ರತ್ಯಕ್ಷವಾಗಿ ನರ್ತಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರಾವಳಿಯಲ್ಲಿ ಸದ್ಯ ಯಕ್ಷಗಾನ ಪ್ರದರ್ಶನಗಳ ಸೀಸನ್ ನಡೆಯುತ್ತಿದ್ದು, ಗ್ರಾಮೀಣ ಪದೇಶಗಳಲ್ಲಿಯೂ ಸ್ಥಳೀಯ ಹತ್ತಾರು ಯಕ್ಷಗಾನ ಮೇಳಗಳು ಪ್ರದರ್ಶನ ನೀಡುತ್ತಿವೆ. ಬ್ರಹ್ಮಾವರದ ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಸೇವೆಯಲ್ಲಿ ಹಟ್ಟಿಯಂಗಡಿ ಮೇಳ ನೀಡಿರುವ ಯಕ್ಷಗಾನ ಪ್ರದರ್ಶನದ ಸಂದರ್ಭ ಪಂಜರ್ಲಿ ದೈವದ ಪ್ರವೇಶದ ವೇಳೆಯಲ್ಲಿ ಹೀಗೆ ದೊಂದಿಗಳ ಬಳಕೆ ಮಾಡಲಾಗಿದೆ.

ಕೋಲದ ವೇಷದಲ್ಲಿ ವಿಭಿನ್ನವಾಗಿ ಹತ್ತಾರು ದೊಂದಿಗಳೊಂದಿಗೆ ರಂಗಸ್ಥಳಕ್ಕೆ ಬಂದ ವೇಷಧಾರಿ ಅವುಗಳನ್ನು ಸುಂದರವಾಗಿ ಬ್ಯಾಲೆನ್ಸ್‌ ಮಾಡಿಕೊಂಡು ನರ್ತಿಸಿದ್ದು, ಇದನ್ನು ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಕರಾವಳಿಯಾದ್ಯಂತ ಭಾರಿ ವೈರಲ್ ಆಗಿದೆ ಕೂಡ.

ಇದನ್ನೂ ಓದಿ: Shardul Thakur: ಹಳದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಶಾರ್ದೂಲ್​ ಠಾಕೂರ್​; ವಿಡಿಯೊ ವೈರಲ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಒಳನಾಡಿನಲ್ಲಿ ಬ್ರೇಕ್‌ ಕೊಟ್ಟು, ಕರಾವಳಿ- ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ

Karnataka Weather Forecast : ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆರಾಯ ಬ್ರೇಕ್‌ (Rain News) ಕೊಟ್ಟಿದ್ದು, ಕರಾವಳಿ-ಮಲೆನಾಡಿನಲ್ಲಿ ಭಾರಿ ವರ್ಷಧಾರೆಯಾಗುವ ಸಾಧ್ಯತೆ ಇದೆ. ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ (Yellow Alert) ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾದರೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಲವಾದ ಮೇಲ್ಮೈ ಗಾಳಿಯೊಂದಿಗೆ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಬದಲಿಗೆ ಒಣ ಹವಾಮಾನ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಬೆಳಗಾವಿಯಲ್ಲಿ ಸಾಧಾರಣ ಮಳೆ

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆಯಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕೆಲವೊಮ್ಮೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಯೆಲ್ಲೋ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು,40-50 ಕಿ.ಮೀದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕೂಲ್‌ ಆದ ಬೆಂಗಳೂರು; ನಾಳೆಗೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

Karnataka Weather Forecast : ಬೆಂಗಳೂರಿನಲ್ಲಿ ಜೋರಾಗಿ ಗಾಳಿ ಬೀಸಲಿದ್ದು, ವಾತಾವರಣ ಕೂಲ್‌ ಆಗಿರಲಿದೆ. ನಾಳೆಯೂ ಉತ್ತರ ಕನ್ನಡ ಸೇರಿದಂತೆ ಹಲವೆಡೆ ಮಳೆಯಾಗುವ (Rain News) ನಿರೀಕ್ಷೆ ಇದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು (Karnataka Weather Forecast) ದುರ್ಬಲವಾಗಿತ್ತು. ಕರಾವಳಿ ಬಹುತೇಕ ಕಡೆಗಳಲ್ಲಿ (Rain News) ಮಳೆಯಾಗಿದೆ. ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡು ಮೂಲಕ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ 7 ಸೆಂ.ಮೀ ಮಳೆಯಾಗಿದೆ. ಜಗಲಬೆಟ್, ಲೋಂಡಾದಲ್ಲಿ 6, ಕದ್ರಾ 5 ಸೆಂ.ಮೀ ಮಳೆಯಾಗಿದೆ.

ಯಲ್ಲಾಪುರ, ಸಿದ್ದಾಪುರ, ಬೆಳಗಾವಿ ಪಿಟಿಒ, ಕಮ್ಮರಡಿ 3 ಸೆಂ.ಮೀ, ಮಂಕಿ, ಗೇರ್ಸೊಪ್ಪ, ಕಾರವಾರ ವೀಕ್ಷಣಾಲಯ, ಬನವಾಸಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಸಿದ್ದಾಪುರ, ಗೋಕರ್ಣ, ಧರ್ಮಸ್ಥಳ, ಬೆಳ್ತಂಗಡಿ, ಹಳಿಯಾಳ, ಉಪ್ಪಿನಂಗಡಿ, ಔರಾದ್ , ಬೆಳಗಾವಿ ವಿಮಾನ ನಿಲ್ದಾಣ ವೀಕ್ಷಣಾಲಯ, ಸೋಮವಾರಪೇಟೆ, ಶೃಂಗೇರಿ ಎಚ್‌ಎಂಎಸ್, ಲಿಂಗನಮಕ್ಕಿ ಎಚ್‌ಎಂಎಸ್‌ನಲ್ಲಿ 1 ಸೆಂ.ಮೀ ಮಳೆಯಾಗಿದೆ.

ಮುಂದುವರಿಯಲಿದೆ ಮಳೆ ಅಬ್ಬರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯೊಂದಿಗೆ ನಿರಂತರ ಗಾಳಿಯ ವೇಗ 30-40 ಕಿ.ಮೀ ಬೀಸುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯ ಬಹುತೇಕ ಕಡೆಗಳಲ್ಲಿ ಗಾಳಿ ಸಹಿತ ಲಘುವಾಗಿ ಮಧ್ಯಮ ಮಳೆಯಾಗಲಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಹಗುರ ಮಳೆ

ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು 40-50 ಕಿ.ಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 21 ಡಿ.ಸೆ ಇರಲಿದೆ.

ಇದನ್ನೂ ಓದಿ: Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಹೊರ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದ್ದು, ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಹಂಚಿನಾಳ, ಯರಗೋಡಿ, ಕಡದರಗಡ್ಡಿ, ಯಳಗುಂದಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ನಡುಗಡ್ಡೆಯಲ್ಲಿ ವಾಸಿಸುವ ಜನರಿಗೆ ಸಂಪೂರ್ಣ ಜಲದಿಗ್ಭಂಧನ ಹಾಕಲಾಗಿದೆ. ರೈತರ ಪಂಪ್ ಸೆಟ್, ಪೈಪ್‌ಗಳು ಮುಳುಗಡೆಯಾಗಿದೆ.

ಇದೇ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡು ಕುರಿಗಾಹಿಗಳು ಪೇಚಿಗೆ ಸಿಲುಕಿದರು. ಮುಳುಗಡೆಯಾದ ಶೀಲಹಳ್ಳಿ ಸೇತುವೆ ಬಳಿಯ ಗುಡ್ಡದಲ್ಲಿ ಕುರಿಗಳನ್ನು ಮೇಯಲುಬಿಟ್ಟು,ಮೂವರು ಕುರಿಗಾಹಿಗಳು ಬೆಟ್ಟ ಇಳಿದಿದ್ದರು. ಈ ವೇಳೆ ಧುಮ್ಮಿಕ್ಕಿ ಹರಿಯಿತ್ತಿರುವ ನದಿ ನೋಡಿ‌ ಬೆಚ್ಚಿ ಬಿದ್ದರು. ಕೆಲಹೊತ್ತು ಹೇಗೆ ಸುರಕ್ಷಿತವಾಗಿ ಸ್ಥಳ ತಲುಪ ಬೇಕೆಂದು ಗೊತ್ತಾಗದೇ ಕಂಗಾಲಾಗಿದ್ದರು. ಸುಮಾರು ಒಂದು ಗಂಟೆ ಬೆಟ್ಟದಲ್ಲೇ ಅತ್ತಿತ್ತ ಓಡಾಡಿ, ಬಳಿಕ ಮತ್ತೊಂದು ದಡದಲ್ಲಿ ವ್ಯಕ್ತಿಯೊಬ್ಬ ಸೂಚಿಸಿದ ದಿಕ್ಕಿನತ್ತ ಹೊರಟು ಹೋದರು.

ಇತ್ತ ತುಂಗಭದ್ರಾ ಡ್ಯಾಂನಿಂದ 1,50,000 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಯಚೂರಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ರಾಯರ ಜಪದ ಕಟ್ಟೆಗೆ ಮುಳುಗಿದೆ. ಜಪದ ಕಟ್ಟೆ ಬಳಿ ತೆರಳದಂತೆ ಆಡಳಿತ ಮಂಡಳಿ ಬ್ಯಾರಿಕೇಡ್ ಅಳವಡಿಸಿ-ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ. ರಾಯಚೂರಿನ ಕೃಷ್ಣಾ ತೀರದ ಮತ್ತೊಂದು ದೇವಸ್ಥಾನ ಜಲಾವೃತಗೊಂಡಿದೆ. ಕೊಪ್ಪರದಲ್ಲಿರೊ ಲಕ್ಷ್ಮೀ ನರಸಿಂಹ ದೇವಸ್ಥಾನ ಮುಳುಗುಡೆಯಾಗಿದೆ. ದೇವಸ್ಥಾನ ಜಲಾವೃತ ಹಿನ್ನೆಲೆ ಅರ್ಚಕರು ನೀರಲ್ಲೇ ನಡೆದುಕೊಂಡು ಹೋಗಿ ಪೂಜಾ ಕೈಂಕರ್ಯ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

Elephant attack : ಭಾರಿ ಮಳೆಗೆ (Karnataka Rain) ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ ಶುರುವಾಗಿದೆ. ಇತ್ತ ನದಿಗಳು ಉಕ್ಕಿ ಹರಿಯುತ್ತಿದ್ದು 150 ಮನೆಗಳು ಜಲಾವೃತಗೊಂಡಿದೆ.

VISTARANEWS.COM


on

By

Elephant attack
Koo

ಚಿಕ್ಕಮಗಳೂರು: ಮಳೆ (Karnataka Rain) ಮಧ್ಯೆ ಮಲೆನಾಡಲ್ಲಿ ಕಾಡಾನೆಗಳ ಕಾಟ (Elephant attack) ಶುರುವಾಗಿದೆ. 18 ಕಾಡಾನೆಗಳ ಹಿಂಡಿನಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಪುರ, ಗಬ್ಬಳ್ಳಿ, ಕಾರ್ಬೈಲು ಗ್ರಾಮ ಸುತ್ತಮುತ್ತ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗುತ್ತಿದೆ.

ದಿನಕ್ಕೊಂದು ಹಳ್ಳಿಯಲ್ಲಿ ಕಾಡಾನೆಗಳು ಕಾಣಿಸುಕೊಳ್ಳುತ್ತಿದ್ದು, ಕಾಫಿ ತೋಟಗಳನ್ನು ನಾಶ ಮಾಡುತ್ತಿವೆ. ಮಳೆಯಿಂದ ನಾನಾ ಅವಾಂತರವೇ ಸೃಷ್ಟಿಯಾಗಿದೆ. ಇದೀಗ ಮತ್ತೆ ಕಾಡಾನೆಗಳ ದಾಳಿಯಿಂದ ಜನರು ಕಂಗಾಲಾಗಿದದಾರೆ. ಆನೆಗಳನ್ನ ಓಡಿಸುವಂತೆ ಮೂಡಿಗೆರೆಯ ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ.

ಮಳೆಗೆ ಮನೆಗಳಿಗೆ ನುಗ್ಗುತ್ತಿರುವ ಹಾವುಗಳು

ಕೊಪ್ಪಳದಲ್ಲಿ ವ್ಯಾಪಕ ಮಳೆಗೆ ಆಶ್ರಯ ಪಡೆಯಲು ಮನೆಗಳಿಗೆ, ಗುಡಿಸಲಿಗೆ ಹಾವುಗಳು ನುಗ್ಗುತ್ತಿವೆ. ಹಾವುಗಳ ರಕ್ಷಣೆ ಮಾಡಿ ಉರಗ ಪ್ರೇಮಿ ಅನಿಲ್ ಕಾಡಿಗೆ ಬಿಡುತ್ತಿದ್ದಾರೆ. 1,500ಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಲಾಗಿದೆ. ಕೊಪ್ಪಳ ತಾಲೂಕಿ ಹಿಟ್ನಾಳ ಗ್ರಾಮದ ಸ್ನೇಕ್ ಅನಿಲ್ ಅವರು, ಮಳೆಗಾಲದಲ್ಲಿ ಹೆಚ್ಚು ಹಾವುಗಳ ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ನಾಗರಹಾವು, ರಸೆಲ್ ವೈಪರ್, ಕಾಮನ್ ಕ್ರೇಟ್, ಕೇರೆ ಹಾವು, ತೋಳದ ಹಾವು, ನೀರು ಹಾವು, ಚೆಕ್ ಕೀಲ್ ಬ್ಯಾಕ್ಸ್ ಹಾವುಗಳ ರಕ್ಷಣೆ ಮಾಡಲಾಗಿದೆ.

ಭಾರಿ ಮಳೆಗೆ 150 ಮನೆಗಳು ಜಲಾವೃತ

ಘಟಪ್ರಭಾ ನದಿ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮ ಪತರಗುಟ್ಟಿದೆ. ಇದೊಂದೇ ಗ್ರಾಮದಲ್ಲಿ ಬೆಳಗಾಗುವಷ್ಟರಲ್ಲಿ 150 ಮನೆಗಳು ಜಲಾವೃತಗೊಂಡಿದೆ. ಗ್ರಾಮದಲ್ಲಿರುವ ಚರ್ಚ್‌ವರೆಗೂ ನೀರು ನುಗ್ಗಿದೆ. ಮನೆಗೆ ನೀರು ಬರುತ್ತಿದ್ದಂತೆ ಸಾಮಾಗ್ರಿಗಳನ್ನು ಬಿಟ್ಟು ಜನರು ಕಾಳಜಿ ಕೇಂದ್ರಕ್ಕೆ ಶಿಫ್ಟ್‌ ಆಗಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ನೆರೆ ಸಂತ್ರಸ್ತರ ಒತ್ತಾಯಿಸಿದ್ದಾರೆ. ನಮಗೆ ಪರಿಹಾರ ಬೇಡ ಮನೆಗಳನ್ನು ಕಟ್ಟಿಸಿಕೊಡಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Theft case : ಪೊಲೀಸ್‌ ಮನೆಯಲ್ಲಿ ಕಳ್ಳರ ಕಳ್ಳಾಟ; ಚಿನ್ನಾಭರಣ ಕದ್ದು ಎಸ್ಕೇಪ್‌

ಹರಿಯುವ ನೀರಿನಲ್ಲಿ ಪಂಪ್‌ಸೆಟ್‌ ತಂದ ರೈತರು

ನದಿ ತೀರದಲ್ಲಿ ಇಟ್ಟಿದ್ದ ಮೋಟಾರ್ ಪಂಪ್‌ಸೆಟ್‌ಗಳನ್ನು ಹೊರ ತೆಗೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಚನ್ನೂರು ಗ್ರಾಮದ ರೈತರು ಕಳೆದ ಎರಡು ತಿಂಗಳ ಹಿಂದೆ ನೀರು ಇಲ್ಲದೇ ಇದ್ದಾಗ, ನದಿ ಸಮೀಪ ಪಂಪ್ ಸೆಟ್ ಬಿಟ್ಟಿದ್ದರು. ಈಗ ನದಿಗೆ ನೀರು ಹರಿದು ಬರುತ್ತಿದ್ದು, ಪಂಪ್ ಸೆಟ್‌ಗಳು ಕೊಚ್ಚಿ ಹೋಗುವ ಆತಂಕವಿದೆ. ಈ ಕಾರಣಕ್ಕೆ ತೆಪ್ಪದ ಮೂಲಕ ತೆರಳಿ ಪಂಪ್ ಸೆಟ್ ತಂದಿದ್ದಾರೆ. ಹರಿಯುವ ನದಿ ನೀರಲ್ಲೇ ಜೀವದ ಹಂಗು ತೊರೆದು ಪಂಪ್ ಸೆಟ್ ಗಳನ್ನು ತಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

Karnataka Rain : ಕೊಡಗಿನ ಮಾದಪುರ ಟೌನ್‌ ಸಮೀಪ ಗುಡ್ಡ ಕುಸಿದು, ಭೂಮಿ ಬಿರುಕು ಬಿಟ್ಟಿದೆ. ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆ ಆತಂಕದ ಹುಟ್ಟಿಸಿದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಗಿದೆ. ವಿಜಯನಗರದಲ್ಲಿ ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆಯಾದರೆ, ಗೋಕಾಕ ನಗರ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ.

VISTARANEWS.COM


on

By

karnataka Rain
Koo

ಕೊಡಗು: ಕೊಡಗು ಜಿಲ್ಲೆಯಾದ್ಯಂತ ವರುಣನ (Karnataka Rain) ಆರ್ಭಟ ಕೊಂಚ ತಗ್ಗಿದೆ. ಮಳೆ ಕಡಿಮೆಯಾದರೂ ಮಳೆಯ ಅನಾಹುತ ನಿಂತಿಲ್ಲ. ಮಾದಪುರ ಟೌನ್ ಸಮೀಪ ಗುಡ್ಡ ಕುಸಿದಿದೆ. ಗುಡ್ಡ ಕುಸಿದ ಜಾಗದಲ್ಲೆ ಭೂಮಿ ಬಿರುಕು ಬಿಟ್ಟಿದೆ. ಮಳೆ ಹೆಚ್ಚಾದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಮಡಿಕೇರಿ ಮಾದಪುರ ಸೋಮವಾರಪೇಟೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ. ಗುಡ್ಡ ಕುಸಿದರೆ ಮಡಿಕೇರಿ – ಮಾದಾಪುರ ಸೋಮವಾರಪೇಟೆ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ. ಸದ್ಯ ಆತಂಕದಲ್ಲೇ ವಾಹನ ಸವಾರರು ಓಡಾಡುತ್ತಿದ್ದಾರೆ.

ಉಕ್ಕಿ ಹರಿಯುವ ನೀರಿಗೆ ಜಿಗಿದು ಯುವಕರ ಈಜಾಟ

ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನದಿ ಸೇರಿದಂತೆ ಕಾಲುವೆಗಳಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇತ್ತ ಬಾಲಕರು ಜೀವದ ಹಂಗು ತೊರೆದು, ಕಾಲುವೆಗಳಿಗೆ ಜಿಗಿಯುತ್ತಿದ್ದಾರೆ. ರಕ್ಷಣಾ ಕವಚಗಳು ಇಲ್ಲದೆ ಕಾಲುವೆಗಳಿಗೆ ಮೇಲಿಂದ ಜಿಗಿದು ಆಟವಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಜಲಾಶಯದ ಬಳಿ ಇರುವ ಕಾಲುವೆಗಳಲ್ಲಿ ಜಿಗಿದು ಈಜಾಡುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆ ಆತಂಕದ ಹುಟ್ಟಿಸಿದ ಕಾಳಿಂಗ

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರ ನಡುವೆ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡು ಆತಂಕದ ಹುಟ್ಟಿಸಿತ್ತು. 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಗಿದೆ. ಕಳಸದ ಸಂಸೆ ಗ್ರಾ.ಪಂ ವ್ಯಾಪ್ತಿಯ ಪಾತಿಗುಡ್ಡದಲ್ಲಿ‌ ಘಟನೆ ನಡೆದಿದೆ. ಕಾಳಿಂಗ ಸರ್ಪ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು. ಉರಗತಜ್ಞ ರಿಜ್ವಾನ್ ಹಾಗೂ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ವಿಜಯನಗರದಲ್ಲಿ ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆ

ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆಯಾಗಿದೆ. ವಿಜಯನಗರದ ಕೋದಂಡರಾಮ ದೇಗುಲದ ಅರ್ಧಕ್ಕೆ ನೀರು ಹರಿದು ಬಂದಿದೆ. ಸೀತೆ ಸೆರಗು, ಸುಗ್ರೀವ ಗುಹೆಯ ಬಳಿಯೂ ಜಲಾವೃತಗೊಂಡಿದೆ. ನದಿ ಪಾತ್ರಕ್ಕೆ ತೆರಳದಂತೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಕಳೆದ ಎರಡು ದಿನಗಳ ಹಿಂದೆಯೇ ಸ್ನಾನಘಟ್ಟಗಳು, ಪುರಂದರ ದಾಸರ ಮಂಟಪಗಳು ಮುಳುಗಿದೆ.

ಇತ್ತ ತುಂಗಭದ್ರಾ ನದಿಯ ನೀರು ತುಂಬಿ ಐತಿಹಾಸಿಕ ಮದಲಘಟ್ಟ ಆಂಜನೇಯ ದೇಗುಲದ ಬಳಿ ಹರಿದಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮದಲಘಟ್ಟ ಆಂಜನೇಯ ಸ್ವಾಮಿ ದೇಗುಲದಲ್ಲಿ ಇನ್ನೂ ಸ್ವಲ್ಪ ನೀರು ಹೆಚ್ಚಾದರೆ ಜಲಾವೃತ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Assault Case : ಠಾಣೆಗೆ ಬಂದ ಮಹಿಳೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ!

ಪ್ರವಾಹಕ್ಕೆ ಸಿಲುಕಿ ನಲುಗಿ ಹೋದ ಗೋಕಾಕ ನಗರ

ಪ್ರವಾಹಕ್ಕೆ ಸಿಲುಕಿ ಗೋಕಾಕ ನಗರ ನಲುಗಿ ಹೋಗಿದೆ. ಹೀಗಾಗಿ ಶಾಸಕ‌ ರಮೇಶ ಜಾರಕಿಹೊಳಿಯವರಿಂದ ಪರಿಸ್ಥಿತಿ ಅವಲೋಕನ ಮಾಡಿದರು. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ವಿವಿಧ ಸ್ಥಳಗಳಿಗೆ ರಮೇಶ ಭೇಟಿ ನೀಡಿದರು. ಬೆಳಗಾವಿ, ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಚಿಕ್ಕೋಡಿ ಉಪವಿಭಾಗದ ಜನಜೀವನ ಅಸ್ತವ್ಯಸ್ತವಾಗಿದೆ. ಸರಿಯಾಗಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸದ ಸರ್ಕಾರದ ವಿರುದ್ಧ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ರೈತನ ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ಆಡಳಿತದವರು ನದಿಪಾತ್ರದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸುತ್ತಿದ್ದಾರೆ. ಆದರೆ ನಾವು ಹೋಗುವುದಾದರೂ ಎಲ್ಲಿಗೆ ? ರಾಜ್ಯದ ಜನತೆಗೆ ಬೆಳೆದ ಬೆಳೆಗಳನ್ನು ಪೂರೈಸಿ ಪ್ರತಿಯೊಬ್ಬರಿಗೂ ಆಸರೆಯಾಗುತ್ತೇವೆ.

ಆದರೆ ಪ್ರವಾಹದ ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಬಗ್ಗೆ ಕಾಳಜಿ ವಹಿಸಲು ಸರ್ಕಾರದಿಂದ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಾವು ಎಲ್ಲಿಯಾದರೂ ಗುಡಿ-ಗುಂಡಾತರಗಳಲ್ಲಿ ತಂಗಿ ಜೀವನ ನಡೆಸುತ್ತೇವೆ. ಆದರೆ ನಮ್ಮ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರುಗಳಿವೆ. ಜಾನುವಾರುಗಳು ಬೆಚ್ಚಗೆ ವಾತಾವರಣ ಬೇಕಾಗುತ್ತದೆ. ಸರ್ಕಾರಿ ಜಾಗಗಳಲ್ಲಿ ಜಾನುವಾರುಗಳಲ್ಲಿ ಶೆಡ್ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇತ್ತ ಘಟಪ್ರಭಾ ನದಿ ತೀರದಲ್ಲಿ ಪ್ರವಾಹದ ಆತಂಕ ಹೆಚ್ಚುತ್ತಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ಢವಳೇಶ್ವರ ಗ್ರಾಮದ ಸುಪ್ರಸಿದ್ಧ ಲಕ್ಷ್ಮೀ ದೇವಿ ದೇವಸ್ಥಾನ ಜಲಾವೃತಗೊಂಡಿದೆ. ಜತೆಗೆ ಡವಳೇಶ್ವರ ಮಹಾಲಿಂಗಪುರ ಸಂಪರ್ಕ ಕಲ್ಪಿಸುವ ನಂದಗಾಂವ ಸೇತುವೆ ಮುಳುಗಡೆಯಾಗಿದೆ. ನದಿ ಪಾತ್ರದ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಕ್ಕೆ ಜಿಲ್ಲಾ ಆಡಳಿತ ಆದೇಶಿಸಿದೆ. ಈಗಾಗಲೇ ಢವಳೇಶ್ವರ ಗ್ರಾಮದಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಮಳೆ ನಿಂತರೂ ನಿಲ್ಲದ ಅನಾಹುತ

ಹಾವೇರಿಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಮಳೆ ನಿಂತರೂ ಅದರಿಂದ ಆಗುತ್ತಿರುವ ಅನಾಹುತಕ್ಕೆ ರೈತರು ಕಂಗಾಲಾಗಿದ್ದಾರೆ. ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ವರದಾ ನದಿಯ ನೀರು ಹರಿದು ರೈತರು ಬೆಳೆ ಕಳೆದುಕೊಂಡಿದ್ದಾರೆ. ರೈತರ ಹೊಲಗಳಿಗೆ ನೀರು ನುಗ್ಗಿ ಶೇಂಗಾ, ಕಬ್ಬು ಬೆಳೆ ಹಾನಿಯಾಗಿದೆ.

ಮುಳುಗಡೆ ಹಂತ ತಲುಪಿದ ವೆಲ್ಲೆಸ್ಲಿ ಸೇತುವೆ

ಮಂಡ್ಯದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಹಂತ ತಲುಪಿದೆ. ಕೆಆರ್‌ಎಸ್ ಡ್ಯಾಂನಿಂದ 1.30,867 ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಶ್ರೀರಂಗಪಟ್ಟಣದ ಐತಿಹಾಸಿಕ ಸೇತುವೆಯನ್ನು 1804 ರಲ್ಲಿ ಸಂಪೂರ್ಣ ಕಲ್ಲುಗಳಿಂದಲೇ ನಿರ್ಮಿಸಲಾಗಿದೆ. ಆಗಿನ ದಿನಗಳಲ್ಲಿ ಬೆಂಗಳೂರು- ಮೈಸೂರು ನಡುವೆ ಸಂಚರಿಸಲು ಇದ್ದ ಏಕೈಕ ಸೇತುವೆ ಇದಾಗಿದೆ. ಡ್ಯಾಂ ನಿರ್ಮಾಣವಾದಗಿನಿಂದ ಈ ವರೆಗೆ ಮೂರು ಬಾರಿ ಸೇತುವೆ ಮುಳುಗಡೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
India Maldives
ದೇಶ4 mins ago

India Maldives: ದುರಹಂಕಾರ ಬಿಟ್ಟು ಭಾರತಕ್ಕೆ ಧನ್ಯವಾದ ತಿಳಿಸಿದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು!

Rajendra Nagar Tragedy
ವೈರಲ್ ನ್ಯೂಸ್10 mins ago

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ

Health Tips
ಆರೋಗ್ಯ12 mins ago

Health Tips: ಗ್ಯಾಸ್ಟ್ರಿಕ್‌, ಅಜೀರ್ಣ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಪರಿಣಾಮಕಾರಿ ಮದ್ದು!

Road Accident jigani anekal
ಬೆಂಗಳೂರು ಗ್ರಾಮಾಂತರ23 mins ago

Road Accident: ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ

India Pakistan War
ದೇಶ34 mins ago

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

ITR Filing
ಮನಿ-ಗೈಡ್42 mins ago

ITR Filing: ಐಟಿಆರ್ ಸಲ್ಲಿಕೆ; ಜುಲೈ 31ರ ಗಡುವು ತಪ್ಪಿಸಿಕೊಂಡರೆ ಎಷ್ಟು ದಂಡ?

peenya flyover
ಪ್ರಮುಖ ಸುದ್ದಿ46 mins ago

Peenya flyover: ಇಂದಿನಿಂದ ಪೀಣ್ಯ ಮೇಲ್ಸೇತುವೆ ಎಲ್ಲ ವಾಹನಗಳಿಗೆ ಮುಕ್ತ

bbmp lorry road accident
ಬೆಂಗಳೂರು1 hour ago

Road Accident: ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ

Lakshadweep Tour
Latest1 hour ago

Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು

Monsoon Healthy Cooking Tips
ಆರೋಗ್ಯ2 hours ago

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ14 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ16 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ18 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ19 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌