Pulse of Karnataka: ಮಧ್ಯ ಕರ್ನಾಟಕ: ವಿಸ್ತಾರ-ಅಖಾಡಾ ಸಮೀಕ್ಷೆ: ಸಿಎಂ ಬೊಮ್ಮಾಯಿ ತವರು ಪ್ರದೇಶದಲ್ಲಿ ಯಾರು ಹೆಚ್ಚು ಫೇಮಸ್‌? - Vistara News

ಕರ್ನಾಟಕ

Pulse of Karnataka: ಮಧ್ಯ ಕರ್ನಾಟಕ: ವಿಸ್ತಾರ-ಅಖಾಡಾ ಸಮೀಕ್ಷೆ: ಸಿಎಂ ಬೊಮ್ಮಾಯಿ ತವರು ಪ್ರದೇಶದಲ್ಲಿ ಯಾರು ಹೆಚ್ಚು ಫೇಮಸ್‌?

2018 ರಲ್ಲಿ ಜಿಜೆಪಿ – 19, ಕಾಂಗ್ರೆಸ್ -07, ಜೆಡಿಎಸ್ -4 ಸ್ಥಾನಗಳಲ್ಲಿ ಜಯಗಳಿಸಿತ್ತು. ಶಿರಾ ಶಾಸಕ ಸತ್ಯನಾರಾಯಣ ಅಕಾಲಿಕ ಮರಣದ ಕಾರಣ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರಾಜೇಶ್ ಗೌಡ ಗೆಲುವು ಸಾಧಿಸಿದ ಪರಿಣಾಮ ಬಿಜೆಪಿ ಸಂಖ್ಯೆ 20ಕ್ಕೆ ಏರಿಕೆ, ಜೆಡಿಎಸ್ ಸಂಖ್ಯೆ 03ಕ್ಕೆ ಇಳಿಕೆಯಾಗಿದೆ.

VISTARANEWS.COM


on

pulse-of-karnataka-vistara Akhada election Survey Mid Karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲುವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.

ಪಲ್ಸ್ ಆಫ್ ಕರ್ನಾಟಕ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರದಂತಹ ಅತಿದೊಡ್ಡ ಸರ್ವೇ. ರಾಜ್ಯದ ಮೂಲೆಮೂಲೆಯಲ್ಲಿ ನಮ್ಮ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಸಂಗ್ರಹಿಸಿರೋ ಮಾಹಿತಿ ಇದು. ಕರುನಾಡಿನ ಜನರ ನಾಡಿಮಿಡಿತ ಅರಿಯಲು ಉದ್ಯಮಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಹಿಂದುಳಿದ ವರ್ಗದ ಜನ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗ, ಸಮುದಾಯವನ್ನು ಪ್ರತಿನಿಧಿಸಿ ಈ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಸ್ಥಳೀಯ, ಜಿಲ್ಲಾವಾರು, ರಾಜ್ಯ ಮತ್ತು ಕೇಂದ್ರ ನಾಯಕರು ಹೀಗೆ ಎಲ್ಲಾ ವಲಯ, ವಿಚಾರ, ನಾಯಕರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಯಶ ಪಡೆಯಲಾಗಿದೆ.

ಈ ಸರ್ವೇಯಲ್ಲಿ ಕರ್ನಾಟಕವನ್ನ ಭೌಗೋಳಿಕವಾಗಿ ಆರು ಭಾಗಗಳಾಗಿ ಗುರುತಿಸಲಾಗಿದೆ. ಅದರಲ್ಲಿ ಹಳೆ ಮೈಸೂರು, ಮಧ್ಯ ಕರ್ನಾಟಕ, ಕರಾವಳಿ & ಮಲೆನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವಲಯಗಳಾಗಿ ಗುರುತಿಸಿ ಅದರಡಿ ಬರೋ ವಿಧಾನಸಭಾ ಕ್ಷೇತ್ರಗಳ ಮತದಾರರ ಪಲ್ಸ್ ಅರಿತು ಆ ಸರ್ವೇ ರಿರ್ಪೋಟ್​​ ಅನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇದರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲೂ ಯಾರ ಹವಾ ಹೇಗಿದೆ ಅನ್ನೋದನ್ನ ನಿಮಗೆ ತಿಳಿಸಲಿದ್ದೇವೆ.

ಮಧ್ಯ ಕರ್ನಾಟಕ ಭಾಗದ ಜನರ ನಾಡಿಮಿಡಿತ ಹೇಗಿದೆ ಅನ್ನೋದನ್ನ ನಿಮ್ಮ ಮುಂದೆ ಇಡ್ತಿದ್ದೇವೆ. ಈ ಭಾಗದಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳನ್ನ ತೆಗೆದುಕೊಳ್ಳಲಾಗಿದೆ. ಭತ್ತ, ತೆಂಗು ಸೇರಿ ಕೃಷಿ ಪ್ರಧಾನವಾದ ಈ ಭಾಗದ ಪಲ್ಸ್ ಹೇಗಿದೆ? ಇಲ್ಲಿದೆ ವಿವರ.

ಪ್ರಶ್ನೆ 1 – ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ನೀಡುತ್ತೀರಿ.?

pulse-of-karnataka-vistara Akhada election Survey Mid Karnataka

ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಹಾವೇರಿ ಜಿಲ್ಲೆಯೂ ಈ ವಲಯದಲ್ಲಿದೆ. ಬಿಜೆಪಿಗೆ ಹೆಚ್ಚು ಜನರು ಒಲವು ತೋರಿದ್ದಾರೆ ಎನ್ನುವುದು ಸಿಎಂಗೆ ಸಮಾಧಾನ ತರುವ ಸಂಗತಿ. ತುಮಕೂರಿನಲ್ಲಿ ಇತ್ತೀಚೆಗೆ ಎಚ್​​ಎಎಲ್​ ಹೆಲಿಕಾಪ್ಟರ್​ ಘಟಕವನ್ನು ಮೋದಿ ಉದ್ಘಾಟಿಸಿದ್ದು, ಅಲ್ಲಿನ ಯುವಕರಿಗೆ ಉದ್ಯೋಗ ನೀಡುವ ಆಶಯ ಹುಟ್ಟಿಸಿದೆ. ಕೇಂದ್ರ ಬಜೆಟ್​​ನಲ್ಲಿ ಈ ವರ್ಷ ನಮೂದಾದ ಏಕೈಕ ರಾಜ್ಯದ ಹೆಸರು ಕರ್ನಾಟಕ, ಅಲ್ಲಿ ಘೋಷಣೆಯಾದ ಭದ್ರಾ ಮೇಲ್ದಂಡೆ ಯೋಜನೆಯ ಲಾಭ ಈ ವಲಯಕ್ಕೇ ಆಗುತ್ತದೆ. ಕಾಂಗ್ರೆಸ್​​ ಪಕ್ಷದ ಪರವಾಗಿಯೂ ಸಾಕಷ್ಟು ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಟಸ್ಥ ಮತದಾರರು ಸರಿಸುಮಾರು ಶೇ.7.6 ರಷ್ಟಿದ್ದಾರೆ. ತಟಸ್ಥ ಮತದಾರರನ್ನು ಸೆಳೆಯುವ ಪಕ್ಷಕ್ಕೆ ಹೆಚ್ಚಿನ ಲಾಭವಿದೆ ಎನ್ನುವುದನ್ನು ರಿಪೋರ್ಟ್​ ತೋರಿಸುತ್ತಿದೆ

ಪ್ರಶ್ನೆ 2 – ನೀವು ಈ ಬಾರಿ ಮತ ಚಲಾಯಿಸಲು ಇವುಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ವಿಚಾರ ಯಾವುದು.?

pulse-of-karnataka-vistara Akhada election Survey Mid Karnataka

ಈ ವಲಯದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವ ಅನೇಕ ಅಭ್ಯರ್ಥಿಗಳಿದ್ದಾರೆ, ಅವರು ಬೇರೆ ಬೇರೆ ಪಕ್ಷಗಳಿಗೆ ತೆರಳಿದಾಗಲೂ ಗೆದ್ದವರಿದ್ದಾರೆ. ಉದ್ಯಮ, ಉದ್ಯೋಗದ ಹಾಗೂ ಕೃಷಿ ಮೇಲೆ ಹೆಚ್ಚು ಅವಲಂಬಿತವಾಗಿರುವ ಮತದಾರರು ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕಿದ್ದಾರೆ ಎನ್ನಬಹುದು. ದಿನನಿತ್ಯ ತಮ್ಮ ಜೀವನದ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ನಾಯಕತ್ವವೇ ಪಕ್ಷಕ್ಕಿಂತಲೂ ಮುಖ್ಯ ಎಂಬ ಸಂದೇಶವನ್ನು ನೀಡಿರುವುದು ಕಂಡುಬರುತ್ತದೆ. ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದಕ್ಕಿಂತಲೂ ತಮ್ಮನ್ನು ಯಾರು ಪ್ರತಿನಿಧಿಸುತ್ತಾರೆ ಎನ್ನುವುದು ಮುಖ್ಯ ಎಂಬ ಸಂದೇಶ ನೀಡಿರುವುದನ್ನ ಕಾಣಬಹುದು.

ಪ್ರಶ್ನೆ 3 – ಈ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದನ್ನು ಇವುಗಳಲ್ಲಿ ಯಾವುದರ ಆಧಾರದಲ್ಲಿ ನಿರ್ಧಾರ ಮಾಡುತ್ತೀರಿ?

pulse-of-karnataka-vistara Akhada election Survey Mid Karnataka

ಧರ್ಮ ಹಾಗೂ ಜಾತಿ ರಾಜಕಾರಣದ ಬದಲಿಗೆ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ಎನ್ನುತ್ತಿದ್ದಾರೆ ಮಧ್ಯ ಕರ್ನಾಟಕದ ಮತದಾರರು. ಚಿತ್ರದುರ್ಗದಲ್ಲಿ ಕಳೆದ 2018ರ ಚುನಾವಣೆ ಸಂದರ್ಭದಲ್ಲಿ ಟಿಪ್ಪು ವರ್ಸಸ್​​ ಒನಕೆ ಓಬವ್ವ, ಟಿಪ್ಪು ವರ್ಸಸ್​​​ ಮದಕರಿನಾಯಕ ಅಭಿಯಾನವನ್ನು ಬಿಜೆಪಿ ನಡೆಸಿತ್ತು, ಇದರಿಂದ ಕೆಲ ಮಟ್ಟಿಗೆ ಬಿಜೆಪಿಗೆ ಅನುಕೂಲ ಆಗಿತ್ತು. ಧರ್ಮದ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದರೂ, ಅಂತಿಮವಾಗಿ ಅಭಿವೃದ್ಧಿಯೇ ಮುಖ್ಯ ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ. ಅಭಿವೃದ್ಧಿ ರಾಜಕಾರಣವು ಸ್ಥಳೀಯ ನಾಯಕತ್ವದ ಮೂಲಕ ಆಗಬೇಕು ಎಂಬ ಪರೋಕ್ಷ ಅಭಿಪ್ರಾಯವನ್ನೂ ಮತದಾರರು ಹೇಳುತ್ತಿದ್ದಾರೆ ಎನ್ನಬಹುದು.

ಪ್ರಶ್ನೆ 4 – ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಕುರಿತು ನಿಮ್ಮ ಅಭಿಪ್ರಾಯ?

pulse-of-karnataka-vistara Akhada election Survey Mid Karnataka

ಬಿಜೆಪಿ ಹಾಗೂ ಕಾಂಗ್ರೆಸ್​​ ಸಮಬಲವಿರುವ, ಹಿಂದೂ ಹಾಗೂ ಮುಸ್ಲಿಂ ಜನಸಂಖ್ಯೆಯೂ ಗಣನೀಯವಾಗಿರುವ ವಲಯದಲ್ಲಿ ಬಿಜೆಪಿ ಸರ್ಕಾರಕ್ಕೆ ಫಿಫ್ಟಿ ಫಿಫ್ಟಿ ಮಾರ್ಕ್ಸ್ ​ಸಿಕ್ಕಿದೆ. ಬಿಜೆಪಿ ಸರ್ಕಾರ ಅತ್ಯುತ್ತಮ ಎನ್ನುವಷ್ಟೇ ಬಹುತೇಕ ಪ್ರಮಾಣದಲ್ಲಿ ಕಳಪೆ ಎನ್ನುವವರೂ ಇದ್ದಾರೆ, ಆದರೂ ಅತ್ಯುತ್ತಮ ಹಾಗೂ ಉತ್ತಮ ಸೇರಿಸಿದರೆ ಬಿಜೆಪಿ ಸರ್ಕಾರಕ್ಕೇ ಪಾಸಿಟಿವ್​ ಆಗಿದೆ ವರದಿ. ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್​​ನಲ್ಲಿ 5,300 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿರುವುದು ಈ ವಲಯದಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿರುವಂತಿದೆ.

ಪ್ರಶ್ನೆ 5 – ಈ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರದ ಶಾಸಕರ ಕಾರ್ಯ ನಿರ್ವಹಣೆ ತೃಪ್ತಿ ನೀಡಿದೆಯೇ?

pulse-of-karnataka-vistara Akhada election Survey Mid Karnataka

ಈ ವಲಯದ 30 ವಿಧಾನಸಭಾ ಕ್ಷೇತ್ರದಲ್ಲಿ 20s18ರಲ್ಲಿ ಬಿಜೆಪಿಯ 19 ಶಾಸಕರು ಆಯ್ಕೆಯಾಗಿದ್ದರು, ಈ ನಿಟ್ಟಿನಲ್ಲಿ ಬಿಜೆಪಿ ಶಾಸಕರಿಗೆ ಮತದಾರರಿಂದ ಸಿಕ್ಕ ಪ್ರಮಾಣಪತ್ರ ಎಂದು ಹೇಳಬಹುದು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್​​ಸಿ, ಎಸ್​​ಟಿ ಸಮುದಾಯದ ಮತದಾರರೂ ಇರುವುದರಿಂದ, ಎಸ್​​ಸಿ, ಎಸ್​​ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವು ಸ್ಥಳೀಯ ಶಾಸಕರ ಮೇಲೆ ಪ್ರಭಾವ ಬೀರಿದೆ ಎನ್ನಬಹುದು.

ಪ್ರಶ್ನೆ 6 – ಮುಂದಿನ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೀರಿ?

pulse-of-karnataka-vistara Akhada election Survey Mid Karnataka

ಈ ವಲಯದಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯೂ ಇರುವುದರಿಂದ, ಅವರ ನಾಯಕತ್ವಕ್ಕೆ ಹೆಚ್ಚಿನ ಅಂಕ ಲಭಿಸಿದೆ. ಬಿಜೆಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಲೆಕ್ಕಕ್ಕೆ ಇರಿಸಿಲ್ಲ ಎಂಬ ಕಾಂಗ್ರೆಸ್​ ಟೀಕೆಯನ್ನು ಈ ಭಾಗದ ಮತದಾರರು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನಂತರದಲ್ಲಿ ಸಿದ್ದರಾಮಯ್ಯ ಇದ್ದು, ಡಿ.ಕೆ. ಶಿವಕುಮಾರ್​ ಅತ್ಯಂತ ಹಿಂದೆ ಉಳಿದಿದ್ದಾರೆ. ಇದು ಕಾಂಗ್ರೆಸ್​​​ನಲ್ಲಿ ಸಿದ್ದರಾಮಯ್ಯ ಮೇಲುಗೈ ಸಂದೇಶವನ್ನು ಮಧ್ಯ ಕರ್ನಾಟಕದ ಜನರು ನೀಡುತ್ತಿದ್ದಾರೆ ಎನ್ನಬಹುದು. ಪಂಚರತ್ನ ಯಾತ್ರೆ ನಡೆಸುತ್ತ, 123 ಸ್ಥಾನ ಗಳಿಸುತ್ತೇವೆ ಎಂಬ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಯವರು ಪ್ರಭಾವವು ಮಧ್ಯ ಕರ್ನಾಟಕಕ್ಕೆ ಬರುವಾಗಲೇ ಕ್ಷೀಣವಾಗಿರುವುದು ಕಾಣುತ್ತದೆ.

ಪ್ರಶ್ನೆ 7- ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಕೇಂದ್ರದ ನಾಯಕ ಯಾರು?

pulse-of-karnataka-vistara Akhada election Survey Mid Karnataka

ಹಳೆ ಮೈಸೂರು, ಕರಾವಳಿ-ಮಲೆನಾಡಿನಂತೆಯೇ ಮಧ್ಯ ಕರ್ನಾಟಕದಲ್ಲೂ ಮೋದಿ ಅಲೆ ನಿಚ್ಛಳವಾಗಿರುವುದು ಕಾಣುತ್ತದೆ. ಎಸ್​ಸಿಎಸ್​​ಟಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದಲೂ ಇರಬಹುದು, ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ತುಸು ಹೆಚ್ಚಿನ ಒಲವನ್ನು ಮತದಾರರು ಹೊಂದಿದ್ದಾರೆ ಎನ್ನಬಹುದು. ಆಮ್​ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್​ ಕುರಿತು ಮತದಾರರು ತುಸು ಒಲವು ಹೊಂದಿದ್ದಾರೆ, ಬಹುಶಃ ಇದೇ ಕಾರಣಕ್ಕೆ ಅರವಿಂದ ಕೇಜ್ರಿವಾಲ್​​ ಮಾರ್ಚ್​​ 4ರಂದು ದಾವಣಗೆರೆಗೆ ಆಗಮಿಸಿ ಪ್ರಚಾರಾಂದೋಲನ ನಡೆಸುತ್ತಿದ್ದಾರೆ.

ಪ್ರಶ್ನೆ 8 – ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಯಾವ ಮೈತ್ರಿಕೂಟ ನಿಮಗಿಷ್ಟ?

pulse-of-karnataka-vistara Akhada election Survey Mid Karnataka

ಬಿಜೆಪಿ ಪ್ರಾಬಲ್ಯ ಹೆಚ್ಚಿರುವ ಕಾರಣ ಸಹಜವಾಗಿಯೇ ಮತದಾರರು, ಬಿಜೆಪಿ ಅಧಿಕಾರದಲ್ಲಿರುವ ಕಾಂಬಿನೇಷನ್ನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಬಹುದು. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಕಂಡುಬಂದ ಅಂಶವೆಂದರೆ ಹೆಚ್ಚಿನವರಿಗೆ ಸಮ್ಮಿಶ್ರ ಸರ್ಕಾರವೇ ಇಷ್ಟವಿಲ್ಲ. ಅನಿವಾರ್ಯವಾಗಿ ಯಾರಿಗೂ ಬಹುಮತ ಬಾರದಿದ್ದರೆ ಮಾತ್ರ ಮೈತ್ರಿ ಕುರಿತು ಆಲೋಚಿಸುತ್ತಾರೆ ಎನ್ನುವುದು. ಮೈತ್ರಿ ಸರ್ಕಾರಗಳು ರಚನೆಯಾದ ಸಂದರ್ಭದಲ್ಲಿ ಗೊಂದಲ, ಗದ್ದಲಗಳೇ ಜನರ ಕಣ್ಣಮುಂದೆ ಬರುತ್ತಿರಬೇಕು ಎನ್ನಿಸುತ್ತದೆ. ಈ ವಲಯದಲ್ಲಿ ಜೆಡಿಎಸ್​​ ಪ್ರಾಬಲ್ಯವೂ ತುಸು ಇದ್ದು, ಕಾಂಗ್ರೆಸ್​​ಗಿಂತಲೂ ಬಿಜೆಪಿ ಜತೆಗೆ ಮೈತ್ರಿ ಮಾಡುವುದೇ ಉತ್ತಮ ಎಂಬ ಅಭಿಪ್ರಾಯವನ್ನು ಹೆಚ್ಚಿನ ಜನರು ವ್ಯಕ್ತಪಡಿಸಿದ್ದಾರೆ.

ಪ್ರಶ್ನೆ 9 – ಬಿಜೆಪಿಯವರು ಮತಕ್ಕಾಗಿ ಇವುಗಳಲ್ಲಿ ಯಾವ ಅಂಶವನ್ನು ನೆಚ್ಚಿಕೊಂಡಿದ್ದಾರೆ?

pulse-of-karnataka-vistara Akhada election Survey Mid Karnataka

ಒಂದೆಡೆ ಮೋದಿ ಅಲೆ ಹೆಚ್ಚಾಗಿರುವುದೂ ಇದೇ ವಲಯದಲ್ಲಾದರೆ, ಬಿಜೆಪಿಯು ರಾಜ್ಯ ನಾಯಕತ್ವವನ್ನು ಹೆಚ್ಚಾಗಿ ನೆಚ್ಚಿಕೊಳ್ಳುವುದಿಲ್ಲ ಎನ್ನುವುದಕ್ಕೆ ತಾಳೆ ಆಗುತ್ತಿರುವುದನ್ನು ರಿಪೋರ್ಟ್​​ನಲ್ಲಿ ನೋಡಬಹುದು. ಬಿಜೆಪಿಯ ಕೋರ್​​​ ಐಡಿಯಾಲಜಿ ಹಿಂದುತ್ವವನ್ನೂ ಮೀರಿ ಮೋದಿ ನಾಯಕತ್ವವನ್ನೇ ಪಕ್ಷ ನೆಚ್ಚಿಕೊಂಡಿದೆ ಎಂದು ಜನರು ನಂಬಿರುವುದು ಕಂಡುಬರುತ್ತಿದೆ. ಇದು ಬಿಜೆಪಿ ಪಕ್ಷದ ಸಿದ್ಧಾಂತವನ್ನೂ ಮೀರಿ ಮೋದಿ ಜನಪ್ರಿಯತೆ ಹೆಚ್ಚಾಗುತ್ತಿರುವುದನ್ನು ಸೂಚಿಸುತ್ತಿದೆ. ಕಾಲು ಭಾಗದಷ್ಟು ಜನರು, ಬಿಜೆಪಿಯು ಅಭಿವೃದ್ಧಿಯನ್ನು ನೆಚ್ಚಿಕೊಂಡಿದೆ ಎಂದು ಅಭಿಪ್ರಾಯಪಟ್ಟಿರುವುದು ಆ ಪಕ್ಷದ ಪ್ರಚಾರಾಭಿಯಾನ ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಮುಟ್ಟಿರುವ ಸಂದೇಶ ನೀಡುತ್ತಿದೆ.

ಪ್ರಶ್ನೆ 10 – 40% ಕಮಿಷನ್ ಅಥವಾ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಹಿನ್ನಡೆ ತರುತ್ತಾ?

pulse-of-karnataka-vistara Akhada election Survey Mid Karnataka

ಗುತ್ತಿಗೆದಾರರ ಸಂಘದ ಸದಸ್ಯರು ಆರೋಪ ಮಾಡಿದ 40 ಪರ್ಸೆಂಟ್​ ಕಮಿಷನ್​ ಆರೋಪ ಈ ವಲಯದ ಜನರ ಮನಸ್ಸಿನಲ್ಲೂ ಬೇರೂರಿವುದು ಕಂಡುಬರುತ್ತದೆ. ಅರ್ಧದಷ್ಟು ಮತದಾರರು, ಈ ಆರೋಪ ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎಂದಿರುವುದು ಕಾಂಗ್ರೆಸ್​​ ಅಭಿಯಾನವು ಜನರನ್ನು ತಲುಪಿದೆ ಎಂದು ಹೇಳಬಹುದು. ಆರೋಪವು ಸುಳ್ಳು ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ, ಅದನ್ನು ನಿರೂಪಿಸಲು ಪರಿಣಾಮಕಾರಿ ಹೆಜ್ಜೆಗಳನ್ನು ಇಟ್ಟಿರುವ ಕುರಿತು ಜನರಲ್ಲಿ ಅನುಮಾನಗಳಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಪ್ರಶ್ನೆ 11 – ಕಾಂಗ್ರೆಸ್ ಒಳಜಗಳ ಚುನಾವಣೆಯ ವೇಳೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ?

pulse-of-karnataka-vistara Akhada election Survey Mid Karnataka

ಡಿ.ಕೆ. ಶಿವಕುಮಾರ್​​ ಹಾಗೂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಹಣಾಹಣಿಯು ಕಾಂಗ್ರೆಸ್​​ಗೆ ಡ್ಯಾಮೇಜ್​ ಆಗುತ್ತದೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಇಬ್ಬರ ನಡುವಿನ ಸ್ಪರ್ಧೆಯು ಪಕ್ಷಕ್ಕೆ ಹೆಚ್ಚು ಮತಗಳನ್ನು ತಂದುಕೊಡುತ್ತದೆ ಎಂಬ ಕೆಲ ಕಾಂಗ್ರೆಸಿಗರ ಲೆಕ್ಕಾಚಾರವು ಅಷ್ಟು ಸಫಲವಾದಂತೆ ಕಾಣುತ್ತಿಲ್ಲ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್​​​​​​ ಮತದಾರರು, ಸಂಘಟನೆಯೂ ಸಾಕಷ್ಟು ಸದೃಢವಾಗಿದ್ದು, ಇದು ಒಟ್ಟಾರೆ ರಾಜ್ಯ ಮಟ್ಟದಲ್ಲೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆಯೇ ಮುಂದೆ ನೋಡಬೇಕು.

ಪ್ರಶ್ನೆ 12 – ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳಿಂದ ಮತ ಸೆಳೆಯಲು ಸಾಧ್ಯವೇ?

pulse-of-karnataka-vistara Akhada election Survey Mid Karnataka

ಮಧ್ಯ ಕರ್ನಾಟಕವು ಕೃಷಿ, ಉದ್ಯಮ ಹಾಗೂ ವ್ಯಾಪಾರವನ್ನು ಹೆಚ್ಚು ನೆಚ್ಚಿಕೊಂಡ ಪ್ರದೇಶ, ಇಲ್ಲಿ ಉಚಿತ ಯೋಜನೆಗಳು ಅಷ್ಟು ಗಮನ ಸೆಳೆದಂತೆ ಕಾಣುತ್ತಿಲ್ಲ. ಮುಖ್ಯವಾಗಿ ತುಮಕೂರಿನಲ್ಲಿ ಹೆಲಿಕಾಪ್ಟರ್​ ಘಟಕ, ಚಿತ್ರದುರ್ಗದಲ್ಲಿ ಇಸ್ರೊ, ಡಿಆರ್​ಡಿಒ ಘಟಕಗಳ ಸ್ಥಾಪನೆ ಮೂಲಕ ಬಿಜೆಪಿಯು ಡಬಲ್​ ಇಂಜಿನ್​ ಸರ್ಕಾರದ ಅಭಿಯಾನ ನಡೆಸುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವಾದರೆ ಲಕ್ಷಾಂತರ ರೈತರು ತಾವೇ ದುಡಿದು ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದು, ಉಚಿತ ಕೊಡುಗೆಗಳ ಕುರಿತು ಹೆಚ್ಚು ಆಸಕ್ತಿ ವಹಿಸಿಲ್ಲ ಎನ್ನುವುದನ್ನು ರಿಪೋರ್ಟ್​ ಹೇಳುತ್ತಿದೆ.

ಪ್ರಶ್ನೆ 13 – ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಈ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯಕವಾಗಲಿವೆಯೇ?

pulse-of-karnataka-vistara Akhada election Survey Mid Karnataka

ಕೇಂದ್ರ ಬಜೆಟ್​​ನಲ್ಲಿ ಘೋಷಣೆಯಾದ, ರಾಜ್ಯ ಕೇಂದ್ರಿತ ಏಕೈಕ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ, ಇದು ಪ್ರದೇಶದ ಜನರ ಮನಸ್ಸನ್ನು ನಾಟಿರುವುದು ಕಾಣುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ಕೇಂದ್ರ ಒಪ್ಪಿದೆಯಾದರೂ ಇನ್ನೂ ಆದೇಶವಾಗಿಲ್ಲ, ಆದರೂ ಜನರಲ್ಲಿ ಒಂದು ಭರವಸೆ ಮೂಡಿರುವುದು ಕಾಣುತ್ತದೆ. ಶೇ.44 ಮತದಾರರು ಇದು ಬಿಜೆಪಿಗೆ ಸಹಾಯಕವಾಗಲಿದೆ ಎಂದಿದ್ದಾರೆ, ಶೇ.25 ಮತದಾರರು ಸ್ಪಷ್ಟ ನಿರ್ಧಾರ ಹೇಳಿಲ್ಲ, ಮೂರನೇ ಒಂದು ಭಾಗದಷ್ಟು ಮತದಾರರು ಮಾತ್ರವೇ ಯಾವದೇ ಪ್ರಯೋಜನ ಆಗದು ಎಂದಿದ್ದಾರೆ. ಯಾವುದೇ ನೀರಾವರಿ ಯೋಜನೆಗಳ ಅನುಷ್ಠಾನ ನಿಧಾನವಾಗುತ್ತದೆ, ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿದರೆ ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆಗೂ ಲಾಭ ತಂದುಕೊಡುವ ಸಾಧ್ಯತೆಯಿದೆ.

ಇದನ್ನೂ ಓದಿ: Pulse of Karnataka: ಹಳೆ ಮೈಸೂರು: ವಿಸ್ತಾರ-ಅಖಾಡಾ ಸಮೀಕ್ಷೆ: ಮೂವರು ಸಿಎಂ ಅಭ್ಯರ್ಥಿಗಳ ತವರು ಜನರ ಮನದಲ್ಲೇನಿದೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಪ್ರಜ್ವಲ್‌, ರೇವಣ್ಣಗೆ ಮತ್ತೊಂದು ನೋಟಿಸ್‌; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್‌: ಡಾ. ಜಿ. ಪರಮೇಶ್ವರ್

Prajwal Revanna Case: ನಾವು ಸಂತ್ತಸ್ತ ಮಹಿಳೆಯರಿಗೆ ರಕ್ಷಣೆ ನೀಡುತ್ತೇವೆ. ಭಯದ ವಾತಾವರಣ ಸೃಷ್ಟಿಯಾದರೆ ಯಾರು ಬಂದು ಹೇಳುತ್ತಾರೆ. ಸಾವಿರಾರು ವಿಡಿಯೊ ಇದೆ ಅಂತ ಹೇಳುತ್ತಿದ್ದಾರೆ. ಕೆ.ಆರ್. ನಗರದ ಸಂತ್ರಸ್ತೆ ಬಗ್ಗೆ ನನಗೆ ಗೊತ್ತಿಲ್ಲ. ಟೆಕ್ನಿಕಲ್ ವಿಷಯದಲ್ಲಿ ನಾವ್ಯಾರೂ ಎಕ್ಸ್‌ಪರ್ಟ್ ಅಲ್ಲ. ಯಾವ ಯಾವುದೋ ಸೆಕ್ಷನ್ಸ್ ಹಾಕಲು ಸಾಧ್ಯವಿಲ್ಲ. ದೂರಿನಲ್ಲಿ ಏನಿದೆಯೋ ಅದರ ಆಧಾರದ ಮೇಲೆ ಸೆಕ್ಷನ್‌ಗಳನ್ನು ಹಾಕುತ್ತಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತ್ರಸ್ತೆಯರು ಮುಂದೆ ಬಂದು ಹೇಳಿಕೆ ಕೊಡಬಹುದು. ಹೀಗಾಗಿ ಕೇಸ್ ಮತ್ತಷ್ಟು ಕಾಂಪ್ಲಿಕೇಟೇಡ್ ಆಗಬಹುದು ಎಂದು ಗೃಹ ಸಚಿವ ಡಾ. ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Prajwal Revanna Case If Prajwal and Revanna fails to appear infront of SIT they will be arrested says Dr Parameshwara
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿಗೆ ಅಧಿಕಾರ ಇದೆ. ಎರಡನೇ ನೋಟಿಸ್‌ಗಾದರೂ 24 ಗಂಟೆಯ ಒಳಗೆ ವಿಚಾರಣೆಗೆ ಹಾಜರಾಗಬೇಕು. ಹಾಜರಾಗದೇ ಇದ್ದರೆ ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇನ್ನು ರೇವಣ್ಣ ಅವರಿಗೂ ಮತ್ತೊಂದು ನೋಟಿಸ್‌ ನೀಡಿದ್ದು, ಸ್ಪಂದಿಸದಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್‌, ರೇವಣ್ಣಗೂ ಕೂಡ 41ಎ ಅಡಿ ಇನ್ನೊಂದು ನೋಟಿಸ್ ನೀಡಿದ್ದೇವೆ. ರೇವಣ್ಣ ಕೂಡ 24 ಗಂಟೆ ಸಮಯ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೋಟಿಸ್‌ ನೀಡಿದ್ದೇವೆ. ಅದಕ್ಕೂ ಸ್ಪಂದನೆ ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮಹಿಳೆಯ ಕಿಡ್ನ್ಯಾಪ್ ವಿಚಾರವಾಗಿಯೂ ಎಸ್‌ಐಟಿಯವರು ಕ್ರಮ ಕೈಗೊಳ್ಳುತ್ತಾರೆ. ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ನಾವು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ನಾವು ಸಂತ್ತಸ್ತ ಮಹಿಳೆಯರಿಗೆ ರಕ್ಷಣೆ ನೀಡುತ್ತೇವೆ. ಭಯದ ವಾತಾವರಣ ಸೃಷ್ಟಿಯಾದರೆ ಯಾರು ಬಂದು ಹೇಳುತ್ತಾರೆ. ಸಾವಿರಾರು ವಿಡಿಯೊ ಇದೆ ಅಂತ ಹೇಳುತ್ತಿದ್ದಾರೆ. ಕೆ.ಆರ್. ನಗರದ ಸಂತ್ರಸ್ತೆ ಬಗ್ಗೆ ನನಗೆ ಗೊತ್ತಿಲ್ಲ. ಟೆಕ್ನಿಕಲ್ ವಿಷಯದಲ್ಲಿ ನಾವ್ಯಾರೂ ಎಕ್ಸ್‌ಪರ್ಟ್ ಅಲ್ಲ. ಯಾವ ಯಾವುದೋ ಸೆಕ್ಷನ್ಸ್ ಹಾಕಲು ಸಾಧ್ಯವಿಲ್ಲ. ದೂರಿನಲ್ಲಿ ಏನಿದೆಯೋ ಅದರ ಆಧಾರದ ಮೇಲೆ ಸೆಕ್ಷನ್‌ಗಳನ್ನು ಹಾಕುತ್ತಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತ್ರಸ್ತೆಯರು ಮುಂದೆ ಬಂದು ಹೇಳಿಕೆ ಕೊಡಬಹುದು. ಹೀಗಾಗಿ ಕೇಸ್ ಮತ್ತಷ್ಟು ಕಾಂಪ್ಲಿಕೇಟೇಡ್ ಆಗಬಹುದು ಎಂದು ಗೃಹ ಸಚಿವ ಡಾ. ಪರಮೇಶ್ವರ್ ಅಭಿಪ್ರಾಯಪಟ್ಟರು.

ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ಹೇಳಿಕೆ

ಸಂತ್ರಸ್ತೆಯರಿಂದ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆಯನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನನೀಡಲಾಗಿದೆ. ಯಾರು ಕೂಡ ಮುಂದೆ ಎಸ್ಐಟಿ ಮೇಲೆ ಬೆರಳು ತೋರಿಸಬಾರದು. ಹೀಗಾಗಿ ನೇರವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ಹೇಳಿಕೆಯನ್ನು ಕೊಡಿಸಲಾಗುತ್ತಿದೆ. ಈ ಮಧ್ಯೆ 41ಎ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದೇವೆ. ನೋಟಿಸ್‌ಗೆ ಪ್ರಜ್ವಲ್ ರೇವಣ್ಣ ಪರ ವಕೀಲ ಸಮಯ ಕೊಡಿ ಅಂತ ಕೇಳಿದ್ದಾರೆ. ಅದಕ್ಕೆ ಸಮಯ ಕೊಡುವುದಕ್ಕೆ ಪ್ರಾವಿಷನ್ ಇಲ್ಲ ಅಂತ ತಿಳಿಸಿದ್ದೇವೆ. ಪ್ರಜ್ವಲ್‌ ಪ್ರಕರಣದಲ್ಲಿ ಕಾನೂನಿನಡಿ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಲುಕ್‌ಔಟ್ ನೋಟಿಸ್‌ ಅನ್ನು ಕೊಟ್ಟಿದ್ದೇವೆ. ಇದನ್ನು ಸಹ ಕಾನೂನಿನ ಪ್ರಕಾರವೇ ನೀಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ, ರೇವಣ್ಣ ಮನೆ ಇಂಚಿಂಚೂ ತಲಾಶ್, ಸಿಗ್ತಾ ಮಹತ್ವದ ಕ್ಲೂ?

ಗುರುವಾರವೂ ಒಂದು ದೂರು ದಾಖಲಾಗಿದೆ‌‌. ಅದೇ ಸ್ಟೇಟ್‌ಮೆಂಟ್‌ ಅನ್ನು ಮ್ಯಾಜಿಸ್ಟ್ರೇಟ್ ಮುಂದೆಯೇ ಮಾಡಿಸಲಾಗಿದೆ. ಆನಂತರ ಎಸ್‌ಐಟಿಯವರು ಒತ್ತಾಯ ಮಾಡಿ ಹೇಳಿಸಿದ್ದಾರೆ ಎಂದು ಹೇಳಬಾರದಲ್ಲವೇ? ಅದಕ್ಕೆ ಮ್ಯಾಜಿಸ್ಟ್ರೇಟ್ ಮುಂದೆಯೇ ಹೇಳಿಕೆ ಕೊಡಿಸಲಾಗಿದೆ. ಹಲವು ವಿಚಾರಗಳನ್ನು ಪಬ್ಲಿಕ್ ಡೊಮೈನ್‌ನಲ್ಲಿ ಹೇಳೋಕೆ ಆಗಲ್ಲ. ಅವರ ಮನೆ ಮೇಲೆ ರೈಡ್ ಆಗಿರುವ ಸಂಗತಿ ಗೊತ್ತಿಲ್ಲ. ಆದರೆ, ಲುಕ್‌ಔಟ್ ನೋಟಿಸ್ ಕೊಟ್ಟಿದ್ದೇವೆ. ಎಲ್ಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ರವಾನೆ ಆಗಿದೆ. ದುಬೈಗೆ ಪ್ರಜ್ವಲ್‌ ಹೋಗಿರುವುದು ಗೊತ್ತಿಲ್ಲ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಜರ್ಮನಿಗೆ ಹೋಗಿದ್ದಾರೆ. ಜರ್ಮನಿಯಲ್ಲಿ ನಾವು ಹುಡುಕೋಕೆ ಹೋಗಿಲ್ಲ. ನಾವು ಅಲ್ಲಿ ಅದನ್ನು ಮಾಡೋಕೆ ಆಗಲ್ಲ. ನೋಟಿಸ್ ಕೊಟ್ಟ ಮೇಲೆ 24 ಗಂಟೆಯಲ್ಲಿ ಅವರು ಹಾಜರಾಗಬೇಕು. ಹಾಜರಾಗದಿದ್ದರೆ ಬಂಧನವೋ? ಮುಂದೇನು ಅನ್ನೋದನ್ನು ಎಸ್‌ಐಟಿಯವರು ತೀರ್ಮಾನ ಮಾಡ್ತಾರೆ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

Continue Reading

ಚಿನ್ನದ ದರ

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ; 10 ಗ್ರಾಂ 22 ಕ್ಯಾರಟ್‌ ಬಂಗಾರದ ಬೆಲೆಯಲ್ಲಿ ₹500 ಕಡಿತ

Gold Rate Today: ಇಂದು 10 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ (Gold price today) ಕ್ರಮವಾಗಿ ₹500 ಹಾಗೂ ₹540 ಇಳಿಕೆಯಾಗಿವೆ. ಬೆಂಗಳೂರಿನಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿಯ ದರಗಳು ಇಲ್ಲಿವೆ.

VISTARANEWS.COM


on

gold rate today
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ (Gold Market) ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಮತ್ತೆ ಇಳಿಕೆ ಕಂಡಿದೆ. ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ (Gold price today) ಕ್ರಮವಾಗಿ ₹50 ಹಾಗೂ ₹54 ಇಳಿಕೆಯಾಗಿವೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,575ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹52,600 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹65,750 ಮತ್ತು ₹6,57,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,173 ಆಗಿದ್ದರೆ, ಎಂಟು ಗ್ರಾಂ ಬೆಲೆ ₹57,314 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹71,730 ಮತ್ತು ₹7,17,300 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹82.25, ಎಂಟು ಗ್ರಾಂ ₹658 ಮತ್ತು 10 ಗ್ರಾಂ ₹822.50ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,225 ಮತ್ತು 1 ಕಿಲೋಗ್ರಾಂಗೆ ₹82,250 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ65,90071,880
ಮುಂಬಯಿ65,750 71,730
ಬೆಂಗಳೂರು65,750 71,730
ಚೆನ್ನೈ66,15072,160

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ಬಂಗಾರ‌ ಇಂದೇ ತಗೊಳ್ಳಿ! ಚಿನ್ನದ ಬೆಲೆ ಭಾರೀ ಇಳಿಕೆ; ಇಂದು ಇಷ್ಟಿದೆ ನೋಡಿ

Continue Reading

ಕೋಲಾರ

Drowned In water : ಈಜಲು ಕೃಷಿ ಹೊಂಡಕ್ಕೆ ಜಿಗಿದ; ಸಾವಿನ ಕೊನೆ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ತಂಗಿ!

Drowned In water : ಕೃಷಿ ಹೊಂಡದಲ್ಲಿ ಈಜಲು ಹೋದ ವ್ಯಕ್ತಿಯೊಬ್ಬ ದಾರುಣ ಅಂತ್ಯ ಕಂಡಿದ್ದಾನೆ. ಕೃಷಿ ಹೊಂಡದಲ್ಲಿ ಅಣ್ಣ ಈಜುವುದನ್ನು ತಂಗಿ ಮೊಬೈಲ್‌ನಲ್ಲಿ ವಿಡಿಯೊ ಮಾಡುವಾಗಲೇ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ.

VISTARANEWS.COM


on

By

Drowned in water
Koo

ಕೋಲಾರ : ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ (Drowned In water) ಆಕಸ್ಮಿಕವಾಗಿ ಮುಳುಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೊನ್ನೆ ಬುಧವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್ ಗೌಡ (26) ಮೃತ ದುರ್ದೈವಿ.

ಗೌತಮ್‌ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ. ಕುಟುಂಬದವರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ. ಒಂದು ಬದಿ ಮಕ್ಕಳಿಬ್ಬರು ಈಜುತ್ತಿದ್ದರು. ಈ ಕಡೆ ತಂಗಿಗೆ ಮೊಬೈಲ್‌ನಲ್ಲಿ ಕೊಟ್ಟು ಈಜುವುದನ್ನು ವಿಡಿಯೊ ಮಾಡು ಎಂದು ತಿಳಿಸಿದ್ದ.

ಬಳಿಕ ಗೌತಮ್‌ ಕೃಷಿ ಹೊಂಡಕ್ಕೆ ಜಿಗಿದು ಈಜುತ್ತಿದ್ದ. ಇತ್ತ ತಂಗಿಯು ವಾಪಸ್‌ ಬಾ ಎಂದು ಕೂಗಿದ್ದಾಳೆ. ಆಕೆಯ ಮಾತನ್ನು ಕೇಳಿಸಿಕೊಳ್ಳದ ಗೌತಮ್‌ ಈಜುತ್ತಾ ಕೊಂಚ ದೂರ ಹೋಗಿದ್ದಾನೆ. ಅಷ್ಟೇ ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾನೆ.

ಸರಿಯಾಗಿ ಈಜು ಬಾರದಿದ್ದರು ಈಜಲು ಹೋಗಿ ನೀರುಪಾಲಾಗಿದ್ದಾನೆ. ಗೌತಮ್‌ ನೀರಿನಲ್ಲಿ ಮುಳುಗುತ್ತಿರುವ ಎಲ್ಲವೂ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Elephant attack : ನಿಲ್ಲದ ಕಾಡು ಪ್ರಾಣಿಗಳ ಹಾವಳಿ; ಶಿವಮೊಗ್ಗದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ

ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಭೂಪ

ಲಕ್ನೋ: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ (Triple Talaq) ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೂ ಕಾನೂನು ಕಣ್ಣು ತಪ್ಪಿಸಿ ಹಲವರು ಇನ್ನೂ ಈ ಅನಾಚಾರವನ್ನು ಮುಂದುವರಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ್ದಾನೆ.

ಏಪ್ರಿಲ್‌ 29ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷದ ಮೊಹಮ್ಮದ್‌ ಅರ್ಷದ್‌ ಹೀಗೆ ತ್ರಿವಳಿ ತಲಾಕ್‌ ನೀಡಿದ ಭೂಪ. ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ಸಮೀಪ ಈ ಘಟನೆ ನಡೆದಿದೆ.

ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ರೈಲಿನಿಂದ ಇಳಿದಿದ್ದಾನೆ. ಹೋಗುವ ಮುನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ. ಅನಿರೀಕ್ಷಿತ ಆಘಾತದಿಂದ ತಬ್ಬಿಬ್ಬಾದ ಅಫ್ಸಾನಾ ಕೂಡಲೇ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದರು. ಪೊಲೀಸರು ಅವರನ್ನು ಕಾನ್ಪುರ್ ದೆಹತ್‌ನ ಪುಖ್ರಾಯನ್‌ಗೆ ಕಳುಹಿಸಿದರು. ಅಲ್ಲಿಂದ ಅವರು ಭೋಪಾಲ್‌ಗೆ ರೈಲು ಹತ್ತಿದ್ದರು. ಕೊನೆಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಮೊಹಮ್ಮದ್ ಅರ್ಷದ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಭೋಪಾಲ್‌ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆಗಿರುವ ಅರ್ಷದ್‌ ಈ ವರ್ಷದ ಜನವರಿ 12ರಂದು ರಾಜಸ್ಥಾನದ ಕೋಟದ ಅಫ್ಸಾನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಮ್ಯಾಟ್ರಿಮೋನಿ ಜಾಹೀರಾತು ಮೂಲಕ ಪದವೀಧರೆಯಾದ ಅಫ್ಸಾನಾ ಮತ್ತು ಅರ್ಷದ್‌ ಪರಸ್ಪರ ಪರಿಚಿತರಾಗಿದ್ದರು. ದಂಪತಿ ಕಳೆದ ವಾರ ಪುಖ್ರಾಯನ್‌ನಲ್ಲಿರುವ ಅರ್ಷದ್‌ನ ಪೂರ್ವಜರ ಮನೆಗೆ ಭೇಟಿ ನೀಡಿದಾಗ ಅಫ್ಸಾನಾ ಅವರಿಗೆ ಆಘಾತಕಾರಿ ಸತ್ಯವೊಂದು ತಿಳಿಯಿತು. ಅರ್ಷದ್‌ಗೆ ಅದಾಗಲೇ ಮದುವೆಯಾಗಿತ್ತು ಎನ್ನುವುದು ಅಫ್ಸಾನಾ ಅವರಿಗೆ ಆಗಷ್ಟೇ ತಿಳಿದು ಬಂದಿತ್ತು.

ಈ ಬಗ್ಗೆ ಅಫ್ಸಾನಾ ಪ್ರಶ್ನಿಸಿದಾಗ ಕಿರುಕುಳ ಆರಂಭವಾಗಿತ್ತು. ಅರ್ಷದ್‌ ಮತ್ತು ಆತನ ತಾಯಿ ವರದಕ್ಷಿಣೆ ನೀಡುವಂತೆ ಪೀಡಿಸತೊಡಗಿದರು ಎಂದು ಅಫ್ಸಾನಾ ದೂರಿನಲ್ಲಿ ತಿಳಿಸಿದ್ದಾರೆ. ಕೊನೆಗೆ ರೈಲಿನಲ್ಲಿ ಆತ ತ್ರಿವಳಿ ತಲಾಕ್‌ ಕೊಟ್ಟು ನಾಪತ್ತೆಯಾಗಿದ್ದಾನೆ ಎಂದು ಅಫ್ಸಾನಾ ವಿವರಿಸಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ

ಸದ್ಯ ಈ ವಿಚಾರ ಸದ್ದು ಮಾಡುತ್ತಿದೆ. ಅಫ್ಸಾನಾ ಈ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ ಸಲ್ಲಿಸಿ ತನಗೆ ನೆರವಾಗಬೇಕು ಎಂದು ಕೋರಿದ್ದಾರೆ. ಹೀಗೆ ತ್ರಿವಳಿ ತಲಾಕ್‌ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ. ಸರ್ಕಲ್‌ ಆಫೀಸರ್‌ ಪ್ರಿಯಾ ಸಿಂಗ್‌ ಈ ಬಗ್ಗೆ ಮಾತನಾಡಿ, ʼʼಅಫ್ಸಾನಾ ಅವರ ದೂರಿನ ಮೇರೆಗೆ ಅರ್ಷಾದ್‌, ಆತನ ಮಾವ ಅಖೀಲ್‌, ತಂದೆ ನಫೀಸುಲ್ ಹಸನ್ ಮತ್ತು ತಾಯಿ ಪರ್ವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆʼʼ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Murder Case: ಎಣ್ಣೆ ಪಾರ್ಟಿ ನಂತರ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌

Murder Case: ಮೂರ್ತಿ (45) ವರ್ಷ ಕೊಲೆಯಾದ ಆಟೋ ಡ್ರೈವರ್. ಶರಣಪ್ಪ ಕೊಲೆ ಮಾಡಿದ ರೌಡಿ. ನಿನ್ನೆ ಇಬ್ಬರೂ ಸ್ನೇಹಿತರು ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.

VISTARANEWS.COM


on

murder case stabbing bengaluru
Koo

ಬೆಂಗಳೂರು: ಕುಡಿದ ಅಮಲಿನಲ್ಲಿ ಹುಟ್ಟಿಕೊಂಡ ಗಲಾಟೆ ಕೊಲೆಯಲ್ಲಿ (Murder Case) ಅಂತ್ಯವಾಗಿದ್ದು, ರೌಡಿ ಶೀಟರ್‌ (Rowdy Sheeter) ಒಬ್ಬಾತ ಸ್ನೇಹಿತ ರಿಕ್ಷಾ ಚಾಲಕನನ್ನು ಇರಿದು (Stabbing) ಕೊಂದು ಹಾಕಿದ್ದಾನೆ. ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ನಿನ್ನೆ ತಡರಾತ್ರಿ (Crime news) ಈ ಕೃತ್ಯ ನಡೆದಿದೆ.

ಮೂರ್ತಿ (45) ವರ್ಷ ಕೊಲೆಯಾದ ಆಟೋ ಡ್ರೈವರ್. ಶರಣಪ್ಪ ಕೊಲೆ ಮಾಡಿದ ರೌಡಿ. ಮೂರ್ತಿಗೆ ರೌಡಿಶೀಟರ್ ಶರಣಪ್ಪ ಕೆಲ ವರ್ಷಗಳಿಂದ ಪರಿಚಯ. ನಿನ್ನೆ ಇಬ್ಬರೂ ಸ್ನೇಹಿತರು ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿದ್ದು ರೌಡಿಶೀಟರ್ ಶರಣಪ್ಪ ಡ್ಯಾಗರ್‌ನಿಂದ ಹಲವು ಬಾರಿ ಮೂರ್ತಿಗೆ ಇರಿದಿದ್ದಾನೆ. ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದು. ಸದ್ಯ ಆರೋಪಿಗಾಗಿ ಸಂಜಯ್ ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇನ್ನೊಂದು ವಂಟಮೂರಿ ಮಾದರಿ ಕೇಸ್‌, ಕಂಬಕ್ಕೆ ಕಟ್ಟಿ ಮಹಿಳೆಗೆ ಥಳಿತ

ಹಾವೇರಿ: ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ಮೆರವಣಿಗೆ ಮಾಡಿದ ಅಮಾನುಷ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೊಂದು ಅಂಥದೇ ಪ್ರಕರಣ ನಡೆದಿದೆ. ಇದರಲ್ಲಿ ಮಹಿಳೆಯನ್ನು ಆಕೆಯ ಯಾವುದೇ ತಪ್ಪಿಲ್ಲದೆ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.

ಹಾವೇರಿ ಜಿಲ್ಲೆಯ ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಅರಮಲ್ಲಾಪುರ ಗ್ರಾಮದಲ್ಲಿ ಈ ಬರ್ಬರ ಘಟನೆ ನಡೆದಿದೆ. ಹನಮವ್ವ ದುರಗಪ್ಪ ಮೆಡ್ಲೆರಿ (50) ಹಲ್ಲೆಗೊಳಗಾದ ಮಹಿಳೆ. ಈಕೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳ ಜೊತೆಗೆ ಪರಾರಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಮಹಿಳೆಯ ಮೇಲೆ ಹಲ್ಲೆ ನಡೆಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಯುವಕನ ಮಗ ಯುವತಿಯೊಬ್ಬಳನ್ನು ಅಪಹರಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಯುವತಿ ಕಡೆಯವರು ಥಳಿಸಿದ್ದಾರೆ. ಅದೇ ಗ್ರಾಮದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಹಲ್ಲೆ ಮಾಡಿದ ಆರೋಪಿಗಳು. ಈಕೆಯ ಮಗ ಮಂಜುನಾಥ ಯುವತಿಯನ್ನು ಕರೆದುಕೊಂಡು ಹೋಗಿರುವ ಆರೋಪವಿದೆ. ಆತ ಯುವತಿಯನ್ನು ಬಲವಂತವಾಗಿ ಅಪಹರಿಸಿದ್ದಲ್ಲದೆ ಆಭರಣಗಳನ್ನೂ ದೋಚಿದ್ದಾನೆ ಎಂದು ಇವರು ದೂರಿದ್ದಾರೆ.

ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿ “ನಿನ್ನ ಮಗ ಎಲ್ಲಿದ್ದಾನೆ ಹೇಳು” ಎಂದು ಪೀಡಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಹಲ್ಲೆ ನಡೆಸಿದರು. ಗಾಯಗೊಂಡ ಹನಮವ್ವಳಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಾಣೇಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

ಬೆಂಗಳೂರು: ಬೆಂಗಳೂರಿನ (Bengaluru News) ಕೋರಮಂಗಲ ಪೊಲೀಸ್ ಠಾಣಾ (Kormangala police station) ವ್ಯಾಪ್ತಿಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಕೊಲೆಯಾಗಿದೆ. ಸೆಲ್ವಿನ್ ಪ್ರಾನ್ಸಿಸ್ ಎಂಬಾತ ಪತ್ನಿಯನ್ನು ನಡುರಸ್ತೆಯಲ್ಲೆ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಸೆಲ್ವಿನ್ ಪ್ರಾನ್ಸಿಸ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಪತಿಯಿಂದ 6 ತಿಂಗಳ ಹಿಂದೆ ದೂರಾಗಿದ್ದಳು. ವೆಂಕಟಾಪುರದ ತಾಯಿ ಮನೆಯಲ್ಲಿ ವಾಸವಿದ್ದಳು. ಇಂದು ಗುರುವಾರ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಪತ್ನಿ ಜತೆಗೆ ಸೆಲ್ವಿನ್‌ ಪ್ರಾನ್ಸಿಸ್‌ ಗಲಾಟೆ ಮಾಡಿಕೊಂಡಿದ್ದ. ಈ ಮೊದಲೇ ಪ್ರಿಪ್ಲಾನ್‌ ಮಾಡಿಕೊಂಡು ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸೆಂಜ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೃತ್ಯ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

Continue Reading
Advertisement
Prajwal Revanna Case If Prajwal and Revanna fails to appear infront of SIT they will be arrested says Dr Parameshwara
ಕ್ರೈಂ15 mins ago

Prajwal Revanna Case: ಪ್ರಜ್ವಲ್‌, ರೇವಣ್ಣಗೆ ಮತ್ತೊಂದು ನೋಟಿಸ್‌; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್‌: ಡಾ. ಜಿ. ಪರಮೇಶ್ವರ್

gold rate today
ಚಿನ್ನದ ದರ30 mins ago

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ; 10 ಗ್ರಾಂ 22 ಕ್ಯಾರಟ್‌ ಬಂಗಾರದ ಬೆಲೆಯಲ್ಲಿ ₹500 ಕಡಿತ

Gurucharan Singh Taarak Mehta Ka Ooltah Chashmah actor planned disappearance
ಕಿರುತೆರೆ30 mins ago

Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

Ram Mandir
ದೇಶ49 mins ago

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

MS Dhoni
ಕ್ರೀಡೆ50 mins ago

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

Drowned in water
ಕೋಲಾರ1 hour ago

Drowned In water : ಈಜಲು ಕೃಷಿ ಹೊಂಡಕ್ಕೆ ಜಿಗಿದ; ಸಾವಿನ ಕೊನೆ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ತಂಗಿ!

Triple Talaq
ದೇಶ1 hour ago

Triple Talaq: ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಭೂಪ

Covishield vaccine Puneeth Rakumar
ಸ್ಯಾಂಡಲ್ ವುಡ್1 hour ago

Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

Kavya Maran
ಕ್ರೀಡೆ1 hour ago

Kavya Maran: ರೋಚಕ ಗೆಲುವು ಕಂಡು ಆಕಾಶಕ್ಕೆ ಜಿಗಿದಂತೆ ಕುಣಿದು ಸಂಭ್ರಮಿಸಿದ ಕಾವ್ಯಾ ಮಾರನ್; ವಿಡಿಯೊ ವೈರಲ್​

murder case stabbing bengaluru
ಕ್ರೈಂ2 hours ago

Murder Case: ಎಣ್ಣೆ ಪಾರ್ಟಿ ನಂತರ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ18 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌