Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು - Vistara News

ವೈರಲ್ ನ್ಯೂಸ್

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Viral News: ಇದೊಂದು ವಿಚಿತ್ರ, ವಿರಳ ಪ್ರಕರಣ. ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿದ ಅಪ್ರಾಪ್ತ ಬಾಲಕಿಯೊಬ್ಬಳು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಇದು. ಅಕ್ರಮ ಸಂಬಂಧ ಹೊಂದಿದ್ದ ಆಕೆ ಇಬ್ಬರು ಬೇರೆ ಬೇರೆ ಪುರುಷರಿಂದ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ಮಗುವನ್ನು ಪೋಷಕರು ತನಗೆ ತಿಳಿಯದೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಇದೀಗ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿರುವ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಸದ್ಯ ಈ ಘಟನೆ ಸಿನಿಮೀಯ ತಿರುವು ಪಡೆದುಕೊಂಡಿದೆ. ತನ್ನ ಒಂದು ಮಗುವನ್ನು ತನಗೆ ತಿಳಿಯದಂತೆಯೇ ಮಾರಾಟ ಮಾಡಲಾಗಿದೆ ಎಂದು ದೂರಿರುವ ಆಕೆ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. ಪೋಷಕರು, ಶಿಕ್ಷಕರು, ವಕೀಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ(Viral News). ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ ಇಬ್ಬರು ವಿಭಿನ್ನ ಪುರುಷರ ಜತೆ ದೇಹ ಸಂಬಂಧ ಬೆಳೆಸಿದ್ದಳು. ಹೀಗಾಗಿ ಎರಡು ಬಾರಿ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ನವಜಾತ ಶಿಶುವನ್ನು ತನ್ನ ಪೋಷಕರು, ಶಾಲಾ ಪ್ರಾಂಶುಪಾಲರು, ಇಬ್ಬರು ಮಹಿಳಾ ವೈದ್ಯರು, ಸಾಮಾಜಿಕ ಕಾರ್ಯಕರ್ತೆ, ವಕೀಲರು ಮತ್ತು ಇತರರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ಪೋಷಕರು ಸೇರಿದಂತೆ ಕನಿಷ್ಠ 16 ಮಂದಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆ (Juvenile Justice Act)ಯಡಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ವಿವರ

2021ರಲ್ಲಿ 23 ವರ್ಷದ ಅನ್ಯ ಕೋಮಿನ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಾಲಕಿ ಮೊದಲ ಬಾರಿ ಗರ್ಭಿಣಿಯಾಗಿದ್ದಳು. ಆಕೆ ಗರ್ಭ ಧರಿಸಿರುವ ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಬಳಿಕ ಪೋಷಕರು ಶಾಲೆಯ ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಗೆ ವಿಚಾರ ತಿಳಿಸಿ ಅವರ ಸಹಾಯ ಕೋರಿದರು.

7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ʼʼಇದಕ್ಕೂ ಮೊದಲು ಪೋಷಕರು ತನ್ನನ್ನು ಮುಂಬೈಯ ಯಾವುದೋ ಒಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ವಕೀಲರ ಸಮ್ಮುಖದಲ್ಲಿ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿದ್ದರುʼʼ ಎಂದು ಬಾಲಕಿ ತಿಳಿಸಿದ್ದಾಳೆ ಎಂದು ಮೂಲಗಳು ವರದಿ ಮಾಡಿವೆ. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಲಾಯಿತು. ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಹೆರಿಗೆಯ ಆರು ತಿಂಗಳ ನಂತರ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದಳು. ಈ ವೇಳೆ ಆತ ಆಕೆಯನ್ನು ವರಿಸಲು ಸಿದ್ಧನಾಗಿರುವುದಾಗಿ ಹೇಳಿದ್ದ. ಆದರೆ ಪೋಷಕರು ಇದಕ್ಕೆ ಸಮ್ಮತಿ ನೀಡಲಿಲ್ಲ. ʼʼತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. ಪಡೆದರೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆʼʼ ಎಂದು ಅಪ್ರಾಪ್ತೆ ದೂರಿದ್ದಾಳೆ. ಈ ಬಗ್ಗೆ ಅವಳು ಪೋಷಕರನ್ನು ಪ್ರಶ್ನಿಸಿದಾಗ ಅಜ್ಜಿಯ ಮನೆಗೆ ಕಳುಹಿಸಿದ್ದರು. ಅಲ್ಲಿ ಅವಳ ಕುಟುಂಬವು 23 ವರ್ಷದ ವ್ಯಕ್ತಿಯೊಂದಿಗೆ ಮದುವೆಯನ್ನು ನಿಶ್ಚಯಿಸಿತ್ತು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಅಪ್ರಾಪ್ತೆ ಮತ್ತೆ ತನ್ನ ವಿವಾಹ ನಿಶ್ಚಿತವಾದ ಯುವಕನೊಂದಿಗೆ ದೇಹ ಸಂಪರ್ಕ ಬೆಳೆಸಿದಳು. ಬಳಿಕ ಮತ್ತೊಮ್ಮೆ ಗರ್ಭ ಧರಿಸಿದಳು. ಈ ವೇಳೆ ಆತನಿಗೆ ಅಪ್ರಾಪ್ತೆಯ ಮೊದಲ ಮಗುವಿನ ಬಗ್ಗೆ ತಿಳಿದು ಬಂದಿತ್ತು. ಹೀಗಾಗಿ ವಿವಾಹವಾಗಲು ನಿರಾಕರಿಸಿದ. ನಂತರ ಬಾಲಕಿ ಅಜ್ಜಿ ಮನೆಯಿಂದ ತನ್ನ ಮನೆಗೆ ಮರಳಿದಳು. ಪರಿಚಯಸ್ಥರ ನೆರವಿನಿಂದ ಆಕೆ 2024ರ ಮಾರ್ಚ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎರಡನೇ ಮಗುವನ್ನೂ ಮಾರಾಟ ಮಾಡುವಂತೆ ಪೋಷಕರು ಒತ್ತಡ ಹೇರುತ್ತಿರುವುದರಿಂದ ಆಕೆ ಇದೀಗ ಪೊಲೀಸ್‌ ಠಾಣೆಯ ಮೊರೆ ಹೋಗಿದ್ದಾಳೆ. ಮಾರಾಟವಾದ ಹೆಣ್ಣು ಮಗು ಎಲ್ಲಿದೆ ಎಂಬುದನ್ನು ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

Medical Negligence: 5 ದಿನಗಳ ಹೆಣ್ಣು ಮಗುವೊಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೈನ್‌ಪುರಿಯ ಆಸ್ಪತ್ರೆಯೊಂದರ ವೈದ್ಯರ ಸಲಹೆಯಂತೆ ನವಜಾತ ಶಿಶುವನ್ನು ತುಂಬಾ ಹೊತ್ತು ಸೂರ್ಯನ ಬಿಸಿಲು ತಾಕುವಂತೆ ತೆರೆದ ಸ್ಥಳದಲ್ಲಿ ಇರಿಸಲಾಗಿತ್ತು. ಇದರಿಂದ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ. ಸದ್ಯ ವೈದ್ಯರ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

VISTARANEWS.COM


on

Medical Negligence
Koo

ಲಕ್ನೋ: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ (Medical Negligence). ಇದಕ್ಕೆ ತಾಜಾ ಉದಾಹರಣೆ ಇದು. 5 ದಿನಗಳ ಹೆಣ್ಣು ಮಗುವೊಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೈನ್‌ಪುರಿಯ ಆಸ್ಪತ್ರೆಯೊಂದರ ವೈದ್ಯರ ಸಲಹೆಯಂತೆ ನವಜಾತ ಶಿಶುವನ್ನು ತುಂಬಾ ಹೊತ್ತು ಸೂರ್ಯನ ಬಿಸಿಲು ತಾಕುವಂತೆ ತೆರೆದ ಸ್ಥಳದಲ್ಲಿ ಇರಿಸಲಾಗಿತ್ತು. ಇದರಿಂದ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ (Viral News).

ಈ ಹೃದಯ ವಿದ್ರಾವಕ ಘಟನೆ ಮೈನ್‌ಪುರಿಯ ಘಿರೊರ್‌ ಥಾನಾ ಪ್ರದೇಶದಲ್ಲಿ ನಡೆದಿದೆ. ಭುಗೈ ಎಂಬ ಹಳ್ಳಿಯ ರಿತಾ ಎನ್ನುವ ಮಹಿಳೆ ಇತ್ತೀಚೆಗೆ ಮೈನ್‌ಪುರಿಯ ರಾಧಾರಮಣ್‌ ರಸ್ತೆಯಲ್ಲಿರುವ ಸಾಯಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಿಸೇರಿಯನ್‌ ಮೂಲಕ ಈ ಮಗು ಜನಿಸಿತ್ತು. ಜನಿಸುವಾಗಲೇ ಮಗುವಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು. ಇದಕ್ಕೆ ವೈದ್ಯರು ಪ್ರತಿ ದಿನ ಅರ್ಧ ಗಂಟೆ ಮಗುವನ್ನು ಬಿಸಿಲಿನಲ್ಲಿ ಇರಿಸುವಂತೆ ಮನೆಯವರಿಗೆ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಬಿಸಿಲಿನ ತಾಪಕ್ಕೆ ಅಸುನೀಗಿದ ಹಸುಳೆ

ವೈದ್ಯರ ಸಲಹೆಯಂತೆ ಮಗುವಿನ ಮನೆಯವರು 5 ದಿನಗಳ ಹಸುಳೆಯನ್ನು ಆಸ್ಪತ್ರೆಯ ಟೆರೇಸ್‌ಗೆ ಒಯ್ದು ಬಿಸಿಲಿನಲ್ಲಿ ಮಲಗಿಸಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಟೆರೇಸ್‌ನಲ್ಲಿ ಇರಿಸಿ ಅರ್ಧ ಗಂಟೆ ಆದ ಮೇಲೆ ಮಗುವನ್ನು ವಾರ್ಡ್‌ಗೆ ಕರೆದೊಯ್ದಿದ್ದರು. ಇದಾಗಿ ಕೆಲ ಹೊತ್ತಿನಲ್ಲೇ ಮಗು ಮೃತಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಹೇಳಿ ಕೇಳಿ ಇದು ಬಿರು ಬೇಸಗೆ ಕಾಲ. ಇತ್ತೀಚೆಗಂತೂ ಉಷ್ಣಾಂಶ ವಿಪರೀತ ಎನ್ನುವಷ್ಟು ಏರಿಕೆಯಾಗಿದೆ. ಹೀಗಾಗಿ ಅತಿಯಾದ ತಾಪಮಾನ ತಾಳಲಾರದೆ ಮಗು ಅಸುನೀಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. ವಯಸ್ಕರಿಗೇ ಈ ಬಿಸಿಲಿನ ಝಳವನ್ನು ತಾಳಲು ಸಾಧ್ಯವಾಗುತ್ತಿಲ್ಲ. ಇನ್ನು 5 ದಿನಗಳ ಹಸುಳೆ ಹೇಗೆ ತಡೆದುಕೊಳ್ಳುತ್ತದೆ ಎಂದು ಮನೆಯವರು ಪ್ರಶ್ನಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ತಮ್ಮ ಮಗುವಿನ ಸಾವಿಗೆ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ

ಪ್ರತಿದಿನ ಅರ್ಧ ಗಂಟೆ ಬಿಸಿಲಿನಲ್ಲಿ ಇರುವಂತೆ ವೈದ್ಯರು ಸಲಹೆ ನೀಡಿದ್ದರಿಂದಲೇ ಮಗು ಅಸುನೀಗಿದೆ ಎಂದಿರುವ ಕುಟುಂಬಸ್ಥರು ಆಸ್ಪತ್ರೆಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಆಸ್ಪತ್ರೆಯ ಆಡಳಿತದ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಮಗು ಮೃತಪಡುತ್ತಿದ್ದಂತೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ. ಸಿಎಂಒ ಆದೇಶದ ಮೇರೆಗೆ ಸದ್ಯ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಮತ್ತು ವೈದ್ಯರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: Medical Negligence : ವೈದ್ಯರ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಬಲಿ? ಆಕ್ಸಿಜನ್‌ ಹಾಕಿದ 10 ನಿಮಿಷಕ್ಕೆ ಮೃತ್ಯು!

ಕೇರಳದಲ್ಲಿ ಮತ್ತೊಂದು ಪ್ರಕರಣ

ಇತ್ತ ಕೇರಳದಲ್ಲಿಯೂ ವೈದ್ಯರು ಎಡವಟ್ಟು ಮಾಡಿಕೊಂಡಿದ್ದಾರೆ. ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಡಾಕ್ಟರ್‌ ಮಗುವಿನ ಕೈ ಬೆರಳಿನ ಬದಲು ನಾಲಿಗೆಯ ಶಸ್ತ್ರಚಿಕಿತ್ಸೆಯ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಅಸಮಾಧಾನ ಹೊರ ಹಾಕುತ್ತಿದ್ದಂತೆ ವೈದ್ಯರು ಬಂದು ತಪ್ಪಿಗೆ ಕ್ಷಮೆ ಯಾಚಿಸಿದ್ದು, ಮತ್ತೆ ಮಗುವನ್ನು ಕರೆದುಕೊಂಡು ಹೋಗಿ ಬೆರಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಗುವಿನ ಕೈಯಲ್ಲಿರುವ ಆರನೇ ಬೆರಳನ್ನು ತೆಗೆಯಲು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Continue Reading

ದೇಶ

ಗಾಯಕನ ಹಾಡಿಗೆ ಮನಸೋತು ವೇದಿಕೆ ಮೇಲೆಯೇ ಕಿಸ್‌ ಕೊಟ್ಟ ಲೇಡಿ ಕಾನ್‌ಸ್ಟೆಬಲ್;‌ ಈಗ ಮುತ್ತು ತಂದಿದೆ ಕುತ್ತು!

ಅಸ್ಸಾಂನ ದಿಬ್ರುಗಢದಲ್ಲಿ ಮೇ 10ರಂದು ಮ್ಯೂಸಿಕ್‌ ಕನ್ಸರ್ಟ್‌ ನಡೆದಿದೆ. ಇದರಲ್ಲಿ ಲೇಡಿ ಕಾನ್‌ಸ್ಟೆಬಲ್‌ ಕೂಡ ಭಾಗಿಯಾಗಿದ್ದರು. ಗಾಯಕ ಮನಮೋಹಕವಾಗಿ ಹಾಡಿದ್ದಕ್ಕೆ ಮಹಿಳಾ ಪೇದೆಯು ಮನದುಂಬಿ ಅವರಿಗೆ ಮುತ್ತು ಕೊಟ್ಟರು. ತಬ್ಬಿಕೊಂಡು ಅಭಿಮಾನ ವ್ಯಕ್ತಪಡಿಸಿದರು. ಈಗ ಇದೇ ಅವರಿಗೆ ಮುಳುವಾಗಿದೆ.

VISTARANEWS.COM


on

Lady Constable
Koo

ದಿಸ್ಪುರ: ನೆಚ್ಚಿನ ನಟ-ನಟಿ, ಗಾಯಕ-ಗಾಯಕಿ ಸೇರಿ ಯಾವುದೇ ಸೆಲೆಬ್ರಿಟಿ (Celebrity) ಸಿಕ್ಕರೆ ಹೇಗೆ ವರ್ತಿಸುತ್ತೇವೆ? ಅವರ ಜತೆ ಒಂದು ಸೆಲ್ಫಿ ತೆಗೆದುಕೊಳ್ಳುತ್ತೇವೆ. ತುಸು ಸಮಯ ಸಿಕ್ಕರೂ ಆಟೋಗ್ರಾಫ್‌ ಹಾಕಿಸಿಕೊಳ್ಳುತ್ತೇವೆ. ಆದರೆ, ಅಸ್ಸಾಂನಲ್ಲಿ (Assam) ಲೇಡಿ ಕಾನ್‌ಸ್ಟೆಬಲ್‌ ಒಬ್ಬರು (Lady Constable) ಮೆಚ್ಚಿದ ಗಾಯಕನನ್ನು ವೇದಿಕೆ ಮೇಲೆಯೇ ತಬ್ಬಿಕೊಂಡು, ಗಾಯಕನ ಕೆನ್ನೆಗೊಂದು ಮುತ್ತು ಕೊಟ್ಟು ಅಭಿಮಾನ ಮೆರೆದಿದ್ದಾರೆ. ಆದರೆ, ಗಾಯಕನಿಗೆ ವೇದಿಕೆ ಮೇಲೆಯೇ ಮುತ್ತುಕೊಟ್ಟ ಮಹಿಳಾ ಪೇದೆಯನ್ನು ಈಗ ಅಮಾನತು ಮಾಡಲಾಗಿದೆ.

ಹೌದು, ಅಸ್ಸಾಂನ ದಿಬ್ರುಗಢದಲ್ಲಿ ಮೇ 10ರಂದು ಮ್ಯೂಸಿಕ್‌ ಕನ್ಸರ್ಟ್‌ ಆಯೋಜಿಸಲಾಗಿತ್ತು. ಗ್ಯಾಂಗ್‌ಸ್ಟರ್‌ ಬಾಲಿವುಡ್‌ ಸಿನಿಮಾದ ಯಾ ಅಲಿ ಎಂಬ ಹಾಡು ಹಾಡಿದ ಖ್ಯಾತ ಜುಬೀನ್‌ ಗರ್ಗ್‌ ಅವರು ಮ್ಯೂಸಿಕ್‌ ಕನ್ಸರ್ಟ್‌ ನಡೆಸಿಕೊಟ್ಟರು. ಅವರ ಮನಮೋಹಕ ಹಾಡಿಗೆ ಅಲ್ಲಿ ನೆರೆದಿದ್ದ ಎಲ್ಲರೂ ಚಪ್ಪಾಳೆ, ಕೇಕೆ ಮೂಲಕ ಪ್ರೋತ್ಸಾಹ ನೀಡಿದರು. ಆದರೆ, ಅಲ್ಲಿಯೇ ಇದ್ದ ಮಹಿಳಾ ಪೇದೆ ಮಿಲಿಪ್ರಭಾ ಚುಟಿಯಾ ಅವರು ವೇದಿಕೆ ಮೇಲೆ ಹತ್ತಿ ಜುಬೀನ್‌ ಗರ್ಗ್‌ ಅವರಿಗೆ ಮುತ್ತು ಕೊಟ್ಟರು. ಈ ವಿಡಿಯೊ ಭಾರಿ ವೈರಲ್‌ ಕೂಡ ಆಯಿತು.

ನೆಚ್ಚಿನ ಗಾಯಕನ ಹಾಡಿಗೆ ಫಿದಾ ಆದ ಮಿಲಿಪ್ರಭಾ ಚುಟಿಯಾ ಅವರು ವೇದಿಕೆ ಮೇಲೆ ಹತ್ತಿ ಜುಬೀನ್‌ ಗರ್ಗ್‌ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡರು. ಅವರನ್ನು ಮನಸಾರೆ ಹೊಗಳಿದರು. ಗಾಯಕನ ಮೇಲೆ ಎಷ್ಟು ಅಭಿಮಾನ ಹೊಂದಿದ್ದೇನೆ ಎಂಬುದನ್ನು ಭಾವುಕರಾಗಿ ತಿಳಿಸಿದರು. ಇದೇ ವೇಳೆ ಅವರು ಜುಬೀನ್‌ ಗರ್ಗ್‌ ಅವರ ಕೆನ್ನೆಗೆ ಪದೇಪದೆ ಮುತ್ತು ಕೊಟ್ಟರು. ಅಷ್ಟೇ ಅಲ್ಲ, ಗಾಯಕನ ಪಾದ ಮುಟ್ಟಿ ನಮಸ್ಕಾರ ಮಾಡಿದರು. ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಯಿತು.

ವಿಡಿಯೊ ವೈರಲ್‌ ಆಗುತ್ತಲೇ ಮಿಲಿಪ್ರಭಾ ಚುಟಿಯಾ ಅವರನ್ನು ಅಸ್ಸಾಂ ಪೊಲೀಸ್‌ ಇಲಾಖೆಯು ಅಮಾನತುಗೊಳಿಸಿದೆ. ಪೊಲೀಸ್‌ ಇಲಾಖೆಯ ಶಿಸ್ತು ಹಾಗೂ ಸಾರ್ವಜನಿಕ ವರ್ತನೆಯ ನಿಯಮಗಳನ್ನು ಮೀರಿದ ಆರೋಪದಲ್ಲಿ ಅವರನ್ನು ಅಮಾನತುಗೊಳಿಸಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೇದೆ ವರ್ತನೆ ಬಗ್ಗೆ ಪರ-ವಿರೋಧ ಚರ್ಚೆಯಾಗಿದೆ. ನೆಚ್ಚಿನ ಗಾಯಕನನ್ನು ತಬ್ಬಿಕೊಂಡು, ಮುತ್ತು ಕೊಡುವುದರಲ್ಲಿ ಅಶ್ಲೀಲತೆ ಏನಿದೆ ಎಂದು ಒಂದಷ್ಟು ಜನ ಹೇಳಿದರೆ, ಪೊಲೀಸ್‌ ಅಧಿಕಾರಿಯಾದವರು ಸಾರ್ವಜನಿಕವಾಗಿ ಹೇಗಿರಬೇಕು ಎಂಬುದು ಗೊತ್ತಿರಬೇಕು ಎಂದು ಒಂದಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

Continue Reading

ದೇಶ

ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ.

VISTARANEWS.COM


on

Shah Rukh Khan
Koo

ನವದೆಹಲಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ ಹೀರೊಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು (Celebrities) ನೂರಾರು ಉತ್ಪನ್ನಗಳ ಜಾಹೀರಾತುಗಳಲ್ಲಿ (Advertisements) ಅಭಿನಯಿಸುವ ಮೂಲಕ, ಆ ಉತ್ಪನ್ನಗಳನ್ನೂ ತಾವೇ ಬಳಸಿದ್ದೇವೆ ಎಂದು ಹೇಳುವ ಮೂಲಕ ಅಥವಾ ನಟಿಸುವ ಮೂಲಕ ಕೋಟ್ಯಂತರ ಜನರನ್ನು ಸೆಳೆಯುತ್ತಾರೆ. ಇನ್ನು, ಅಭಿಮಾನಿಗಳು, ಅನುಯಾಯಿಗಳು ಕೂಡ ನೆಚ್ಚಿನ ನಟ, ಕ್ರಿಕೆಟಿಗನ ಜಾಹೀರಾತು ನೋಡಿ, ಆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಹೀಗೆ ನಟರು ಸೇರಿ ಸೆಲೆಬ್ರಿಟಿಗಳ ಜಾಹೀರಾತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೌದು, ಶಾರುಖ್‌ ಖಾನ್‌ ಅವರ ಪಾನ್‌ ಮಸಾಲ (Pan Masala) ಜಾಹೀರಾತಿನಿಂದ ಪ್ರಚೋದನೆಗೊಂಡು ಗುಟ್ಕಾ ಸೇವಿಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ. “ಶಾರುಖ್‌ ಖಾನ್‌ ಏಕೆ ಸಾಯುತ್ತಾರೆ” ಎಂಬ ಪ್ರಶ್ನೆಗೆ, “ಶಾರುಖ್‌ ಖಾನ್‌ ಗುಟ್ಕಾ ತಿಂತಾರಲ್ಲ, ಅವ್ರೇ ಸಾಯಲ್ಲ, ನಾವ್‌ ಹೇಗೆ ಸಾಯ್ತೀವಿ” ಎಂದಿದ್ದಾರೆ. ಅಷ್ಟೇ ಅಲ್ಲ, “ಶಾರುಖ್ ಖಾನ್‌ ಗುಟ್ಕಾ ತಿನ್ನೋದು ನಿಮಗೆ ಹೇಗೆ ಗೊತ್ತು” ಎಂದು ಕೇಳಿದ್ದಕ್ಕೆ, “ಜಾಹೀರಾತಿನಲ್ಲಿ ನೋಡಿದ್ದೀವಲ್ಲ” ಎಂದಿದ್ದಾರೆ.

ಶಾರುಖ್‌ ಖಾನ್‌ ಪಾನ್‌ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದನ್ನೇ ಈ ಮಕ್ಕಳು ನಿಜ ಎಂದು ಭಾವಿಸಿದ್ದಾರೆ. ಶಾರುಖ್‌ ಖಾನ್‌ ಗುಟ್ಕಾ ತಿಂತಾರೆ, ಅವರಿಗೇ ಏನೂ ಆಗಲ್ಲ. ಇನ್ನು ನಮಗೆ ಏನಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದು, ಚಿಕ್ಕ ವಯಸ್ಸಿನಲ್ಲೇ ಗುಟ್ಕಾ ತಿನ್ನೋದನ್ನು ಕಲಿತಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ನಟಿಸುವಾಗ, ಆ ಉತ್ಪನ್ನದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನು ಎಂಬುದನ್ನು ಈ ವಿಡಿಯೊ ನೋಡಿ ಕಲಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.

“ಸೆಲೆಬ್ರಿಟಿಗಳು ನಮ್ಮ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರಂತಹವರನ್ನು ನೋಡಿ ಕಲಿಯಬೇಕು. ಥೂ ನಿಮ್ಮ, ನಿಮಗೆಲ್ಲ ಇದನ್ನು ನೋಡಿ ನಾಚಿಕೆ ಆಗಬೇಕು. ಇಂತಹ ಜಾಹೀರಾತು ಕೊಟ್ಟು ಯುವ ಜನತೆಯ ದಾರಿ ತಪ್ಪಿಸುತಿರುವ ನಿಮಗೆ ಧಿಕ್ಕಾರವಿರಲಿ” ಎಂಬುದಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿದ್ದು, “ಈ ಗುಟ್ಕಾ ತಿಂದು ಮಕ್ಕಳು ಏನಾದರೂ ಮೃತಪಟ್ಟರೆ ಆಯಾ ಜಾಹೀರಾತು ಕಂಪನಿ ಹಾಗೂ ಜಾಹೀರಾತಿನಲ್ಲಿ ನಟಿಸುವ ಸೆಲೆಬ್ರಿಟಿಗಳು ಪರಿಹಾರ ನೀಡಬೇಕು ಎಂಬ ಕಾನೂನು ಬಂದರೆ ಮಾತ್ರ ಇದೆಲ್ಲ ಸರಿಯಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Continue Reading

ದೇಶ

CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

CAA: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯುವುದನ್ನು ಸಿಎಎ ಜಾರಿಯಿಂದ ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ. ಈಗ ಸಿಎಎ ನಿಯಮಗಳ ಅಡಿಯಲ್ಲಿ 14 ಜನರಿಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ನೀಡಿದೆ. ಪೌರತ್ವ ಪಡೆದ ಹಿಂದುಗಳು ಸಂತಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

CAA
Koo

ನವದೆಹಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ (Indian Citizenship) ನೀಡುವುದು ಕಾಯ್ದೆಯ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರವು (Central Government) 300 ಜನರಿಗೆ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿಯೇ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು (Citizenship Papers) ಹಸ್ತಾಂತರಿಸಲಾಗಿದೆ. ಹೀಗೆ, ಪಾಕಿಸ್ತಾನದಲ್ಲಿ ಬಹುಸಂಖ್ಯಾತರಿಂದ ಸಂಕಷ್ಟ ಅನುಭವಿಸಿ, ಭಾರತಕ್ಕೆ ಬಂದು ನೆಲೆಸಿದ ಹಿಂದುಗಳಿಗೆ ಪೌರತ್ವ ದೊರೆತಿದ್ದು, ಅವರ ಇಡೀ ಕುಟುಂಬವು ಸಂತಸ ವ್ಯಕ್ತಪಡಿಸಿದೆ.

ಹೌದು, ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿದ್ದು, ಅವರೀಗ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಹಿಡಿದಿರುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. “ಪಾಕಿಸ್ತಾನದಲ್ಲಿ ಹಿಂದು ಹೆಣ್ಣುಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಹಿಂದು ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಬಿಡಿ, ಮನೆಯಿಂದಲೂ ಹೊರಗೆ ಬರಲು ಆಗುವುದಿಲ್ಲ. ಮುಸ್ಲಿಮರು ಹಿಂದು ಹೆಣ್ಣುಮಕ್ಕಳನ್ನು ಅಪಹರಣ ಮಾಡುತ್ತಾರೆ. ಬಲವಂತವಾಗಿ ಮತಾಂತರ ಮಾಡುತ್ತಾರೆ, ಕಿರುಕುಳ ನೀಡುತ್ತಾರೆ. ಈಗ ಭಾರತದ ಪೌರತ್ವ ಸಿಕ್ಕಿರುವುದು ಖುಷಿಯಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಧನ್ಯವಾದಗಳು” ಎಂದು ಸಿಎಎ ಅಡಿಯಲ್ಲಿ ಪೌರತ್ವ ಪಡೆದ ಭಾವನಾ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Continue Reading
Advertisement
These foods are really what our body needs in summer
ಆರೋಗ್ಯ20 mins ago

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Lok Sabha Election 2024
ದೇಶ30 mins ago

Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Medical Negligence
ದೇಶ32 mins ago

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

anjali murder case girish
ಕ್ರೈಂ44 mins ago

Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ

techie wife udr case
ಕ್ರೈಂ1 hour ago

UDR Case: ಟೆಕ್ಕಿ ಪತ್ನಿಯ ಅನುಮಾನಾಸ್ಪದ ಸಾವು

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

World Hypertension Day Today is Global Blood Pressure Day
ಆರೋಗ್ಯ4 hours ago

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

Pakistan
ಸಂಪಾದಕೀಯ9 hours ago

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

Kapil Sibal
ದೇಶ9 hours ago

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ18 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು22 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌