WPL 2023: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್​ ಲೀಗ್​ಗೆ ವರ್ಣರಂಜಿತ ಚಾಲನೆ - Vistara News

ಕ್ರಿಕೆಟ್

WPL 2023: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್​ ಲೀಗ್​ಗೆ ವರ್ಣರಂಜಿತ ಚಾಲನೆ

ಚೊಚ್ಚಲ ಆವೃತ್ತಿಯ ಹಾಗೂ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್​ ಲೀಗ್(WPL 2023)ಗೆ ಅಧಿಕೃತ ಚಾಲನೆ ದೊರೆತಿದೆ.

VISTARANEWS.COM


on

WPL 2023: A colorful run for the much-awaited Women's Premier League
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಚೊಚ್ಚಲ ಆವೃತ್ತಿಯ ಹಾಗೂ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್​ ಲೀಗ್(WPL 2023)ಗೆ ಅಧಿಕೃತ ಚಾಲನೆ(wpl opening ceremony) ದೊರೆತಿದೆ. ಬಾಲಿವುಡ್​ ನಟಿಯರಾದ ಕೃತಿ ಸನೂನ್(Kriti Sanon)​, ಕಿಯಾರ ಆಡ್ವಾನಿ(Kiara Advani) ಮತ್ತು ಭಾರತೀಯ ಮೂಲಕ ಕೆನಡಾದ ಖ್ಯಾತ ಸಿಂಗರ್​ ಎಪಿ ಧಿಲ್ಲೋನ್(AP Dhillon) ಅವರ ಸಮ್ಮುಖದಲ್ಲಿ ನಡೆದ ವರ್ಣರಂಜಿತ ನೃತ್ಯ ಮತ್ತು ಹಾಡುಗಳ ಮೂಲಕ ಈ ಟೂರ್ನಿ ಆರಂಭಗೊಂಡಿದೆ.

ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. 5 ತಂಡಗಳ ನಡುವೆ ಐಪಿಎಲ್‌ ಮಾದರಿಯಲ್ಲೇ ಟೂರ್ನಿ ನಡೆಯಲಿದೆ. ವಿಶ್ವದ ತಾರಾ ಆಟಗಾರ್ತಿಯರೆಲ್ಲ ಒಟ್ಟುಗೂಡುವ ಕಾರಣದಿಂದ ಈ ಟೂರ್ನಿ ಕ್ರಿಕೆಟ್‌ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ WPL 2023: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ನ ಗೀತೆ ಬಿಡುಗಡೆ

ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕಾರ್ಯದರ್ಶಿ ಜಯ್​ ಶಾ, ಖಜಾಂಚಿ ಅರುಣ್ ಧುಮಾಲ್ ಸೇರಿದಂತೆ ಹಲವು ಬಿಸಿಸಿಐ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಇನ್ನು ಈ ಸಮಾರಂಭದಲ್ಲಿ ಎಲ್ಲ 5 ತಂಡಗಳ ಆಟಗಾರ್ತಿಯರು ಪಾಲ್ಗೊಂಡಿದ್ದರು. ಇದುವರೆಗೆ ವಿದೇಶದಲ್ಲಿ ಮಾತ್ರ ನಡೆಯುತ್ತಿದ್ದ ಮಹಿಳಾ ಕ್ರಿಕೆಟ್​ ಪ್ರೀಮಿಯರ್​ ಲೀಗ್​ ಇದೀಗ ಭಾರತದಲ್ಲಿಯೂ ಆರಂಭಗೊಂಡಿದೆ. ಇದರೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್​ ರಂಗದಲ್ಲಿ ನೂತನ ಹೊಸ ಶಕೆ ಆರಂಭವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

KKR vs SRH: ಇಂದು ಮೊದಲ ಕ್ವಾಲಿಫೈಯರ್‌ ಪಂದ್ಯ: ಅಯ್ಯರ್​-ಕಮಿನ್ಸ್​ ಪಡೆಗಳ ಫೈನಲ್‌ ರೇಸ್‌

KKR vs SRH: ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಟ್ರಾವಿಸ್​ ಹೆಡ್​ ಇದೇ ಸ್ಟೇಡಿಯಂನಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕದ ಆಟವಾಡುವ ಮೂಲಕ ಭಾರತದ ಗೆಲುವನ್ನು ಕಸಿದಿದ್ದರು. ಹೀಗಾಗಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್​ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ

VISTARANEWS.COM


on

KKR vs SRH
Koo

ಅಹಮದಾಬಾದ್​: 17ನೇ ಆವೃತ್ತಿಯ ಐಪಿಎಲ್​ನ(IPL 2024) ಮೊದಲ ಕ್ವಾಲಿಫೈಯರ್(KKR vs SRH) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯದಲ್ಲಿ ಕೆಕೆಆರ್​(Kolkata Knight Riders) ಮತ್ತು ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡಗಳು ಕಾದಾಟ ನಡೆಸಲಿದೆ. ಇತ್ತಂಡಗಳ ಈ ಹೋರಾಟಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ. ಸೋಮವಾರ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳವು (ATS) ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರನ್ನು (ISIS Terrorists) ಬಂಧಿಸಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇತ್ತಂಡಗಳಲ್ಲಿ ಕೆಕೆಆರ್​ ಲೀಗ್‌ ಹಂತದ ಅಗ್ರಸ್ಥಾನಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ, ಲೀಗ್‌ ಹಂತದಲ್ಲಿ ಎದುರಾದ ಒಂದು ಪಂದ್ಯಗಳಲ್ಲಿ ಹೈದರಾಬಾದ್​ಗೆ 4 ರನ್​ ಅಂತರದ ಸೋಲುಣಿಸಿದ ಹಿರಿಮೆಯನ್ನೂ ಹೊಂದಿದೆ. ಜತೆಗೆ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್​ 17 ಪಂದ್ಯ ಗೆದ್ದಿದೆ. ಹೈದರಾಬಾದ್​ ಗೆದ್ದಿರುವುದು ಕೇವಲ 9 ಪಂದ್ಯ ಮಾತ್ರ. ಈ ಲೆಕ್ಕಾಚಾರದಲ್ಲಿ ಕೆಕೆಆರ್​ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.

ಹೆಡ್​-ಅಭಿಷೇಕ್​ ಮೇಲೆ ಭಾರೀ ನಿರೀಕ್ಷೆ


ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಟ್ರಾವಿಸ್​ ಹೆಡ್​ ಇದೇ ಸ್ಟೇಡಿಯಂನಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕದ ಆಟವಾಡುವ ಮೂಲಕ ಭಾರತದ ಗೆಲುವನ್ನು ಕಸಿದಿದ್ದರು. ಹೀಗಾಗಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್​ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಜತೆಗೆ 25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ ಬ್ಯಾಟಿಂಗ್​ ಮೇಲು ತಂಡ ಹೆಚ್ಚಿನ ನಂಬಿಕೆ ಇರಿಸಿದೆ.

ಈ ಆವೃತ್ತಿಯ ಐಪಿಎಲ್​ನಲ್ಲಿ ಹೆಡ್ ಮತ್ತು ಅಭಿಷೇಕ್​ ​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರುವುದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಈ ಜೋಡಿ ಲೀಗ್​ನಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 5 ಓವರ್​ನಲ್ಲಿಯೇ 100ರ ಗಡಿ ದಾಟಿದ ದಾಖಲೆಯನ್ನು ಕೂಡ ಹೊಂದಿದ್ದಾರೆ. ಅಭಿಷೇಕ್​ ಶರ್ಮ ಈ ಬಾರಿಯ ಕೂಟದಲ್ಲಿ 41 ಸಿಕ್ಸರ್​ ಬಾರಿಸಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಕೆಕೆಆರ್​ ಕೂಡ ಸಮರ್ಥ ತಂಡ


ಗೌತಮ್​ ಗಂಭಿರ್​ ಅವರ ಮಾರ್ಗದರ್ಶನ ಮತ್ತು ಆಟಗಾರರ ಸಂಘಟಿತ ಪ್ರದರ್ಶನ ಕೆಕೆಆರ್​ ಪಾಲಿನ ಬಲ. ಅದರಲ್ಲೂ ಆಲ್​ರೌಂಡರ್​ ಸುನೀಲ್​ ನರೈನ್​ ಅವರಂತು ಈ ಬಾರಿ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ತಂಡಕ್ಕೆ ಹಿನ್ನಡೆಯಾಗಿರುವುದೆಂದರೆ ಇಂಗ್ಲೆಂಡ್​ನ ಫಿಲ್​ ಸಾಲ್ಟ್ ಪಾಕ್​ ವಿರುದ್ಧದ ಟಿ20 ಸರಣಿಯ ಭಾಗವಾಗಿ ತವರಿಗೆ ಮರಳಿದ್ದು. ಹೀಗಾಗಿ ಅವರ ತಂಡ ಇವರ ಸೇವೆ ಕಳೆದುಕೊಂಡಿದೆ. ಇವರ ಸ್ಥಾನದಲ್ಲಿ ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಈ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲ ಪಂದ್ಯವನ್ನಾಡುತ್ತಿರುವ ಕಾರಣ ಅವರ ಫಾರ್ಮ್​ ಹೇಗಿರಲಿದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗಿದೆ.

ಇದನ್ನೂ ಓದಿ KKR vs SRH: ಕೆಕೆಆರ್​-ಹೈದರಾಬಾದ್​ ಕ್ವಾಲಿಫೈಯರ್​ ಪಂದ್ಯದ ಹವಾಮಾನ ವರದಿ ಹೇಗಿದೆ?

ಆ್ಯಂಡ್ರೆ ರೆಸಲ್​ ಈ ಬಾರಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಯುವ ಆಟಗಾರ ಆಂಗ್ಕ್ರಿಶ್ ರಘುವಂಶಿ, ಗಾಯದಿಂದ ಚೇತರಿಕೆ ಕಂಡು ಕಮ್​ಬ್ಯಾಕ್​ ಮಾಡಿರುವ ನಿತೇಶ್​ ರಾಣಾ, ವೆಂಕಟೇಶ್​ ಅಯ್ಯರ್​ ಮತ್ತು ನಾಯಕ ಶ್ರೇಯಸ್​ ಅಯ್ಯರ್​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನೆರವು ನೀಡಲಿದ್ದಾರೆ. ರಿಂಕು ಸಿಂಗ್​ ಕಳೆದ ಆವೃತ್ತಿಯಲ್ಲಿ ತೋರಿದ ಪ್ರದರ್ಶನ ಇದುವರೆಗೂ ತೋರಿಲ್ಲ. ಹೀಗಾಗಿ ಈ ಮಹತ್ವದ ಪಂದ್ಯದಲ್ಲಿ ಅವರು ಅಬ್ಬರಿಸುವ ಅನಿವಾರ್ಯತೆ ಇದೆ. 24 ಕೋಟಿ ವೀರ ಮಿಚೆಲ್​ ಸ್ಟಾರ್ಕ್​ ಈ ಪಂದ್ಯದಲ್ಲಾದರೂ ತಾವು ಪಡೆದ ಈ ಮೊತ್ತಕ್ಕೆ ನ್ಯಾಯ ಒದಗಿಸಲೇ ಬೇಕು. ದುಬಾರಿ ಮೊತ್ತ ಪಡೆದರೂ ಕೂಡ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ.

Continue Reading

ಕ್ರೀಡೆ

KKR vs SRH: ಕೆಕೆಆರ್​-ಹೈದರಾಬಾದ್​ ಕ್ವಾಲಿಫೈಯರ್​ ಪಂದ್ಯದ ಹವಾಮಾನ ವರದಿ ಹೇಗಿದೆ?

KKR vs SRH: ಹವಾಮಾನ ವರದಿಯ ಪ್ರಕಾರ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಒಂದೊಮ್ಮೆ ಮಳೆ ಬಂದರೂ ಕೂಡ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಮೀಸಲು ದಿನ ಇದೆ. ಮಳೆಯಿಂದ ಇಂದು ಪಂದ್ಯ ಸಾಗದಿದ್ದರೂ ಕೂಡ ಮೀಸಲು ದಿನಕ್ಕೆ ಮುಂದುವರಿಯಲಿದೆ.

VISTARANEWS.COM


on

KKR vs SRH:
Koo

ಅಹಮದಾಬಾದ್​​: ಇಂದು ನಡೆಯುವ ಐಪಿಎಲ್​ನ(IPL 2024) ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಅಗ್ರಸ್ಥಾನಿ ಕೋಲ್ಕತ್ತಾ ನೈಟ್​ ರೈಡರ್ಸ್(KKR vs SRH)​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಕಾದಾಟ ನಡೆಸಲಿದೆ. ಗೆದ್ದ ತಂಡ ನೇರವಾಗಿ ಫೈನಲ್​ ಪ್ರವೇಶಿಸಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದು, ಎಲಿಮಿನೇಟರ್​ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಇಂದಿನ ಕ್ವಾಲಿಫೈಯರ್​ ಪಂದ್ಯದ ಹವಾಮಾನ(ahmedabad weather) ವರದಿಯ ಪ್ರಕಾರ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ.

ಹವಾಮಾನ ವರದಿ


ಹವಾಮಾನ ವರದಿಯ ಪ್ರಕಾರ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಇದೇ ಮೈದಾನದಲ್ಲಿ ನಡೆಯಬೇಕಿದ್ದ ಒಂದು ಲೀಗ್​ ಪಂದ್ಯ ರದ್ದಾಗಿತ್ತು. ಇದು ಕೆಕೆಆರ್​ ಮತ್ತು ಗುಜರಾತ್​ ನಡುವಣ ಪಂದ್ಯವಾಗಿತ್ತು. ಮಳೆಯಿಂದ ಟಾಸ್​ ಕೂಡ ಆಗದೆ ರದ್ದಾಗಿತ್ತು. ಒಂದೊಮ್ಮೆ ಮಳೆ ಬಂದರೂ ಕೂಡ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಮೀಸಲು ದಿನ ಇದೆ. ಮಳೆಯಿಂದ ಇಂದು ಪಂದ್ಯ ಸಾಗದಿದ್ದರೂ ಕೂಡ ಮೀಸಲು ದಿನಕ್ಕೆ ಮುಂದುವರಿಯಲಿದೆ.

ಪಿಚ್​ ರಿಪೋರ್ಟ್​


ವಿಶ್ವದ ಅತಿ ದೊಡ್ಡ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನೇರ ಬೌಂಡರಿಗಳಿಗೆ ಸರಾಸರಿ 75 ಮೀಟರ್ ಮತ್ತು ಚದರ ಗಡಿಗಳಿಗೆ 60 ಮೀಟರ್ ಉದ್ದವನ್ನು ಹೊಂದಿದೆ. ಇಲ್ಲಿ ಇದುವರೆಗೆ 33 ಐಪಿಎಲ್​ ಪಂದ್ಯಗಳು ನಡೆದಿದ್ದು 15 ಬಾರಿ ಮೊದಲು ಬ್ಯಾಟಿಂಗ್​ ಮಾಡಿದ ತಂಡ, 18 ಬಾರಿ ಚೇಸಿಂಗ್​ ನಡೆಸಿದ ತಂಡಗಳು ಗೆದ್ದಿವೆ. ಇಲ್ಲಿ ದಾಖಲಾದ ಗರಿಷ್ಠ ಒತ್ತ 233 ರನ್​. ಮುಂಬೈ ಮತ್ತು ಗುಜರಾತ್ ನಡುವಣ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು.

ಇದನ್ನೂ ಓದಿ IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

ಮುಖಾಮುಖಿ


ಉಭಯ ತಂಡಗಳ ಐಪಿಎಲ್​ ಇತಿಹಾಸ ನೋಡುವಾಗ ಕೆಕೆಆರ್​ ಬಲಿಷ್ಠವಾಗಿದೆ. ಇದುವರೆಗೆ 26 ಪಂದ್ಯಗಳನ್ನು ಆಡಿ 17 ಪಂದ್ಯಗಳಲ್ಲಿ ಕೆಕೆಆರ್​ ಗೆಲುವು ಸಾಧಿಸಿದೆ. ಹೈದರಾಬಾದ್​ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಪಂದ್ಯದಲ್ಲೂ ಹೈದರಾಬಾದ್​ ಸೋಲು ಕಂಡಿತ್ತು. ಉಭಯ ತಂಡಗಳ ನಡುವೆ ಒಂದು ಸೂಪರ್​ ಓವರ್​ ಪಂದ್ಯ ಕೂಡ ನಡೆದಿತ್ತು. 2020ರಲ್ಲಿ ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಕೆಕೆಆರ್​ ಜಯಿಸಿತ್ತು. ಈ ಲೆಕ್ಕಾಚಾರವನ್ನು ನೋಡುವಾಗ ನಾಳಿನ ಪಂದ್ಯದಲ್ಲಿಯೂ ಕೆಕೆಆರ್​ ಗೆಲುವಿನ ಫೇವರಿಟ್​ ಆಗಿದೆ.

ಸಂಭಾವ್ಯ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​: ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ವಿಜಯಕಾಂತ್ ವ್ಯಾಸಕಾಂತ್, ಟಿ. ನಟರಾಜನ್.

ಕೆಕೆಆರ್​: ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ನಿತೀಶ್ ರಾಣಾ, ಆಂಡ್ರೆ ರಸೆಲ್, ರಮಣ್​ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Continue Reading

ಕ್ರೀಡೆ

MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​

MS Dhoni Bike Riding: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್​ ಮಾಡುತ್ತಿರುವ ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು

VISTARANEWS.COM


on

MS Dhoni Bike Riding
Koo

ರಾಂಚಿ: ಆರ್​ಸಿಬಿ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​(CSK) ತಂಡ 17ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದಿತ್ತು. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ 27 ರನ್​ಗಳ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನ ಮರು ದಿನವೇ ಧೋನಿ(MS Dhoni) ತಮ್ಮ ತವರಾದ ರಾಂಚಿಗೆ ಮರಳಿದ್ದರು. ಇದೀಗ ತವರಿನಲ್ಲಿ ಬೈಕ್​ ರೈಡಿಂಗ್​ ಮಾಡಿದ್ದಾರೆ. ಅವರು ಬೈಕ್​ನಲ್ಲಿ ಸುತ್ತಾಡಿಕೊಂಡು ವಾಪಸ್​ ಮನೆಗೆ ಬರುತ್ತಿರುವ ವಿಡಿಯೊ ವೈರಲ್​ ಆಗಿದೆ. ಸದ್ಯ ಧೋನಿ ಅವರು ಬೈಕ್​ ಓಡಿಸಿದ(MS Dhoni Bike Riding) ವಿಡಿಯೊ ವೈರಲ್(Viral Video)​ ಆಗಿದ್ದು, ಅವರ ಅಭಿಮಾನಿಗಳು ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ.

ಧೋನಿ ಬಳಿ ಇದೆ ದೊಡ್ಡ ಬೈಕ್​ ಗ್ಯಾರೇಜ್​


ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್​ ಮಾಡುತ್ತಿರುವ ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಈ ಫಾರ್ಮ್​ಹೌಸ್​ನ ವಿಡಿಯೊ ವೈರಲ್​ ಆಗುತ್ತು.

ಇದನ್ನೂ ಓದಿ MS Dhoni Retirement: ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಚೆನ್ನೈ ಫ್ರಾಂಚೈಸಿ

ಎಂಎಸ್ ಧೋನಿ ಬೈಕ್ ಕಲೆಕ್ಷನ್

ಯಮಹಾ, ಡುಕಾಟಿ, ಕವಾಸಕಿ ಮುಂತಾದ ಪ್ರಸಿದ್ಧ ಬ್ರಾಂಡ್ ಗಳು ಧೋನಿ ಅವರ ಆಕರ್ಷಕ ಬೈಕ್ ಗಳ ಸಂಗ್ರಹದಲ್ಲಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಹೆಚ್ಚುವರಿಯಾಗಿ, ಕಾನ್ಫೆಡರೇಟ್ ಎಕ್ಸ್ 132 ಹೆಲ್ ಕ್ಯಾಟ್, ವಿಂಟೇಜ್ ನಾರ್ಟನ್ ಜುಬಿಲಿ 250 ಮತ್ತು ಹಲವಾರು ಗಮನಾರ್ಹ ಬೈಕುಗಳಂತಹ ವಿಶಿಷ್ಟ ಮತ್ತು ಅಪರೂಪದ ಮಾದರಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ, ಧೋನಿ ಹೊಸದಾಗಿ ಕಸ್ಟಮೈಸ್ ಮಾಡಿದ ಜಾವಾ 42 ಬಾಬ್ಬರ್ ಅನ್ನು ತಮ್ಮ ಬೆಳೆಯುತ್ತಿರುವ ಬೈಕುಗಳ ಸಂಗ್ರಹಕ್ಕೆ ಸೇರಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ(MS Dhoni Retirement) ಅವರ ನಿವೃತ್ತಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೀಗ ಧೋನಿ ನಿವೃತ್ತಿ ವಿಚಾರವಾಗಿ ಸಿಎಸ್​ಕೆ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಹತ್ವದ ಹೇಳಿಕೆ ನೀಡಿದ್ದಾರೆ.

“ಧೋನಿ ಅವರು ಸಿಎಸ್‌ಕೆ ಜತೆ ಯಾರೊಂದಿಗೂ ತಮ್ಮ ನಿವೃತ್ತಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಕೆಲವು ಸಕ್ರಿಯ ಕ್ರಿಕೆಟಿಗರಿಂದ ಹೆಚ್ಚು ಟೀಕೆಗೆ ಒಳಗಾಗಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಧೋನಿಯ ನಿವೃತ್ತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ನಿಯಮವು ಮುಂದುವರಿದರೆ, ತಂಡದೊಂದಿಗೆ ನಿರ್ದಿಷ್ಟ ಕೆಲಸವನ್ನು ಪೂರೈಸಲು ಇದು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ನಿಯಮವನ್ನು ರದ್ದುಗೊಳಿಸಿದರೆ, ಧೋನಿ ಆಡುವುದು ಕಷ್ಟ” ಎಂದು ಹೇಳಿದ್ದಾರೆ.

ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಾಗಿತ್ತು. ಇದೀಗ ಚೆನ್ನೈ ಸೋತು ಟೂರ್ನಿಯಿಂದ ಹೊರಬಿದ್ದರೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

Continue Reading

ಕ್ರೀಡೆ

KMF Nandini Logo: ನಂದಿನಿಗೆ ಸ್ವಾಗತಿಸಿ ಟಿ20 ವಿಶ್ವಕಪ್​ ಜೆರ್ಸಿ ಬಿಡುಗಡೆಗೊಳಿಸಿದ ಐರ್ಲೆಂಡ್ ತಂಡ

KMF Nandini Logo: ಜೆರ್ಸಿ ಬಿಡುಗಡೆಯ ಬಳಿಕ ಮಾತನಾಡಿದ, ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಹಣಕಾಸು ಅಧಿಕಾರಿ ಆ್ಯಂಡ್ರ್ಯೂ ಮೇ,” ಕರ್ನಾಟಕ ಹಾಲು ಒಕ್ಕೂಟವನ್ನು ಹೊಸ ಪಾಲುದಾರರಾಗಿ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಟಿ–20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಸಂತಸವಾಗುತ್ತಿದೆ” ಎಂದು ಹೇಳಿದರು.

VISTARANEWS.COM


on

KMF Nandini Logo
Koo

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನಂದಿನಿ ಲೋಗೋ(KMF Nandini Logo) ಇರುವ ಜೆರ್ಸಿಯನ್ನು ‘ಕ್ರಿಕೆಟ್ ಸ್ಕಾಟ್ಲೆಂಡ್’ ಅನಾವರಣಗೊಳಿಸಿತ್ತು. ಇದೀಗ ಐರ್ಲೆಂಡ್(Ireland) ತಂಡ ಕೂಡ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಪ್ರಕಟಿಸಿದೆ. ಇದು ಮಾತ್ರವಲ್ಲದೆ ಕ್ರಿಕೆಟ್​ ಐರ್ಲೆಂಡ್ ತನ್ನ ಅಧಿಕೃತ ವೆಬ್​ಸೈಟ್​ನ ಫೋಟೊದಲ್ಲಿಯೂ ನಂದಿನಿ ಲೋಗೋ ಇರುವ ಜೆರ್ಸಿಯ ದೊಡ್ಡ ಫೋಟೊವನ್ನು ಹಾಕಿ ‘ವೆಲ್​ಕಮ್​ ನಂದಿನಿ'(WELCOME NANDINI) ಎಂದು ಬರೆದುಕೊಂಡಿದೆ. ಸೋಮವಾರ ಕ್ರಿಕೆಟ್​ ಐರ್ಲೆಂಡ್ ಈ ಜೆರ್ಸಿಯನ್ನು ಅನಾವರಣ ಮಾಡಿತು.

ಜೆರ್ಸಿ ಬಿಡುಗಡೆಯ ಬಳಿಕ ಮಾತನಾಡಿದ, ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಹಣಕಾಸು ಅಧಿಕಾರಿ ಆ್ಯಂಡ್ರ್ಯೂ ಮೇ,” ಕರ್ನಾಟಕ ಹಾಲು ಒಕ್ಕೂಟವನ್ನು ಹೊಸ ಪಾಲುದಾರರಾಗಿ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಟಿ–20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಸಂತಸವಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ನಮ್ಮ ಬ್ರಾಂಡ್​ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ. ಶುದ್ಧತೆ ಮತ್ತು ಶ್ರೇಷ್ಠತೆಯ ಪ್ರತೀಕವಾಗಿರುವ ನಂದಿನಿಯು ಈಗ ಜಾಗತಿಕ ಬ್ರ್ಯಾಂಡ್‌ ಆಗಿ ಗುರುತಿಸಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಈ ಮೂಲಕ ನಂದಿನಿಯ ಮೌಲ್ಯ ಮತ್ತು ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಪ್ರಿಯ ಕ್ರೀಡೆಯಾದ ಕ್ರಿಕೆಟ್‌ ತಂಡದ ಪ್ರಾಯೋಜಕತ್ವದಿಂದಾಗಿ ನಂದಿನಿ ಲೋಗೋ ವಿಶ್ವವ್ಯಾಪಿ ರಾರಾಜಿಸಲಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನಷ್ಟು ತಂಡಗಳ ಪ್ರಾಯೋಜಕ್ವ ಪಡೆದರೂ ಅಚ್ಚರಿಯಿಲ್ಲ.  

ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಐರ್ಲೆಂಡ್ ತಂಡ ಜೆರ್ಸಿ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ಮಿನಿ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ಮೋಹನ್‌ದಾಸ್‌ ಪೈ ವಿರೋಧ


ಉದ್ಯಮಿ ಮೋಹನ್‌ದಾಸ್‌ ಪೈ (Mohandas Pai) ಅವರು ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ ಪಡೆದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಕೆಎಂಎಫ್‌ನಿಂದ ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೊಜಕತ್ವ ಪಡೆದ ವಿಚಾರದ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋಹನ್‌ ದಾಸ್‌ ಪೈ, ಕರ್ನಾಟಕದ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿ ವೇತನಗಳಿಗೆ ಏಕೆ ಕೆಎಂಎಫ್‌ ಪ್ರಾಯೋಜಕತ್ವವನ್ನು ನೀಡಬಾರದು? ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಈ ಬಗ್ಗೆ ಟ್ಯಾಗ್‌ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು.

Continue Reading
Advertisement
corona virus wave in singapore
ಪ್ರಮುಖ ಸುದ್ದಿ15 mins ago

Corona Virus: ಸಿಂಗಾಪುರದಲ್ಲಿ ಕೋವಿಡ್‌-19 ಹೊಸ ಅಲೆ, ರಾಜ್ಯದಲ್ಲಿ ಅಲರ್ಟ್‌, ಇಂದು ಆರೋಗ್ಯ ಇಲಾಖೆ ಸಭೆ

KKR vs SRH
ಕ್ರೀಡೆ21 mins ago

KKR vs SRH: ಇಂದು ಮೊದಲ ಕ್ವಾಲಿಫೈಯರ್‌ ಪಂದ್ಯ: ಅಯ್ಯರ್​-ಕಮಿನ್ಸ್​ ಪಡೆಗಳ ಫೈನಲ್‌ ರೇಸ್‌

ISIS Terrorists
ದೇಶ22 mins ago

ISIS Terrorists: ಬಿಜೆಪಿ, ಆರ್ ಎಸ್ ಎಸ್ ನಾಯಕರ ಮೇಲೆ ಆತ್ಮಾಹುತಿ ದಾಳಿಗೆ ಸಂಚು ಮಾಡಿದ್ದ ಐಸಿಸ್ ಉಗ್ರರು; ಸೆರೆ ಸಿಕ್ಕಿದ್ದು ಹೇಗೆ?

Shocking News
ವಿದೇಶ30 mins ago

Shocking News: ಎಚ್‌ಐವಿ ಪಾಸಿಟಿವ್‌ ವಿಚಾರ ಮುಚ್ಚಿಟ್ಟ ಲೈಂಗಿಕ ಕಾರ್ಯಕರ್ತೆ; 211 ಮಂದಿಗೆ ಎದುರಾಯ್ತು ಸಂಕಷ್ಟ

Darshan And Vijayalakshmi Celebrate Wedding Anniversary In Dubai pavitra gowda posted karma status
ಸ್ಯಾಂಡಲ್ ವುಡ್30 mins ago

Actor Darshan: ದುಬೈನಲ್ಲಿ ʻಡಿ ಬಾಸ್‌ʼ ವೆಡ್ದಿಂಗ್‌ ಆ್ಯನಿವರ್ಸರಿ ಸೆಲೆಬ್ರೇಷನ್‌: ಇತ್ತ ಪವಿತ್ರಾ ಗೌಡ ಕರ್ಮದ ಬಗ್ಗೆ ಪಾಠ!

KKR vs SRH:
ಕ್ರೀಡೆ45 mins ago

KKR vs SRH: ಕೆಕೆಆರ್​-ಹೈದರಾಬಾದ್​ ಕ್ವಾಲಿಫೈಯರ್​ ಪಂದ್ಯದ ಹವಾಮಾನ ವರದಿ ಹೇಗಿದೆ?

board exam public exam
ಪ್ರಮುಖ ಸುದ್ದಿ1 hour ago

Board Exam: ಮಕ್ಕಳೇ ನೀವು ಪಾಸ್!‌ 5, 8 ಮತ್ತು 9ನೇ ತರಗತಿಯ ಎಲ್ಲ ಮಕ್ಕಳು ಉತ್ತೀರ್ಣ

Kangana Ranaut
ದೇಶ1 hour ago

Kangana Ranaut: ಕಂಗನಾ ರಣಾವತ್‌ ಮೇಲೆ ಕಲ್ಲು ತೂರಾಟ; ಚು.ಆಯೋಗಕ್ಕೆ ದೂರು

Job Alert
ಉದ್ಯೋಗ2 hours ago

Job Alert: ಗಮನಿಸಿ: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಮೇ 24 ಕೊನೆಯ ದಿನ

belagavi farmer self harming
ಕ್ರೈಂ2 hours ago

Farmer Self Harming: ಸಾಲ ವಸೂಲಿಗೆ ಹೆಂಡತಿ- ಮಗನಿಗೆ ಗೃಹಬಂಧನ, ಅವಮಾನದಿಂದ ರೈತ ಆತ್ಮಹತ್ಯೆ, ಎಂಥ ರಾಕ್ಷಸಿ ಇವಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌