CET Result: ಅಧಿಕಾರಿಗಳ ಎಡವಟ್ಟಿನಿಂದ ವಿಳಂಬ; ಸಿಇಟಿ ಫಲಿತಾಂಶ ಯಾವಾಗ ಪ್ರಕಟವಾಗಬಹುದು? - Vistara News

ಶಿಕ್ಷಣ

CET Result: ಅಧಿಕಾರಿಗಳ ಎಡವಟ್ಟಿನಿಂದ ವಿಳಂಬ; ಸಿಇಟಿ ಫಲಿತಾಂಶ ಯಾವಾಗ ಪ್ರಕಟವಾಗಬಹುದು?

CET Result: 2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ರಿಸಲ್ಟ್‌ಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಆದರೆ ಸಿಇಟಿ ಫಲಿತಾಂಶ ಲೋಕಸಭಾ ಚುನಾವಣೆಯ ರಿಸಲ್ಟ್‌ ಬಳಿಕವೇ ಘೋಷಣೆಯಾಗಲಿದೆ ಎನ್ನಲಾಗಿದೆ. ಏಪ್ರಿಲ್ 18, 19ರಂದು ನಡೆದ ಪರೀಕ್ಷೆಯನ್ನು 3.49 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

VISTARANEWS.COM


on

CET Result
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (CET)ಯ ರಿಸಲ್ಟ್‌ಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ (CET Result). ಮೂಲಗಳ ಪ್ರಕಾರ ಸಿಇಟಿ ಫಲಿತಾಂಶ ಲೋಕಸಭಾ ಚುನಾವಣೆಯ ರಿಸಲ್ಟ್‌ ಬಳಿಕವೇ ಘೋಷಣೆಯಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 18, 19ರಂದು ನಡೆಸಿತ್ತು.

ಅಧಿಕಾರಿಗಳ ಎಡವಟ್ಟಿನಿಂದ ವಿಳಂಬ?

ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ವೃತ್ತಿಪರ ಕೋಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ ಈ ಬಾರಿಯ ಸಿಇಟಿ ಪರೀಕ್ಷೆ ಗೊಂದಲದ ಗೂಡಾಗಿತ್ತು. ಪರೀಕ್ಷೆಯಲ್ಲಿ 4 ವಿಷಯಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಔಟ್‌ ಆಫ್‌ ಸಿಲಬಸ್‌ (Out of Syllabus) ಪ್ರಶ್ನೆಗಳನ್ನು ಕೇಳಲಾಗಿತ್ತು. ರಸಾಯನ ಶಾಸ್ತ್ರ ವಿಷಯದಲ್ಲಿ 6, ಭೌತಶಾಸ್ತ್ರ ವಿಷಯದಲ್ಲಿ 5, ಪ್ರಶ್ನೆಗಳು, ಜೀವಶಾಸ್ತ್ರ ಪರೀಕ್ಷೆಯಲ್ಲಿ 11 ಪ್ರಶ್ನೆಗಳು, ಗಣಿತದಲ್ಲಿ 9 ಪ್ರಶ್ನೆಗಳು ಪಠ್ಯಕ್ರಮದಿಂದ ಹೊರತಾಗಿದ್ದವು. ಇದಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದ್ದವು. ಬಳಿಕ ಆ 50 ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳ ಮೌಲ್ಯ ಮಾಪನ ಮಾಡಲಾಗಿದೆ.

ಸದ್ಯ ಸಿಇಟಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೌಲ್ಯಮಾಪನ ಮಾಡಿ ಸಿದ್ಧಪಡಿಸಿದೆ. ಇದರ ಜತೆಗೆ ಶೇ. 50ರಷ್ಟು ದ್ವಿತೀಯ ಪಿಯುಸಿ ಅಂಕ ಮತ್ತು ಬಿಎಸ್‌ಸಿ ಸೀಟು ಹಂಚಿಕೆಗಾಗಿ ಜಿಕೆವಿಕೆ ನಡೆಸುವ ಪ್ರಾಯೋಗಿಕ ಪರೀಕ್ಷೆ ಫಲಿತಾಂಶದ ಅಂಕ ಸೇರಿಸಬೇಕಾಗಿರುವುದರಿಂದ ಕೆಇಎ ಅದಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ.

ಜೆಕೆವಿಕೆಯ ಪ್ರಾಯೋಗಿಕ ಪರೀಕ್ಷೆ ಮೇ 25ರಂದು ನಡೆಯಲಿದ್ದು, ಫಲಿತಾಂಶ ಮೇ 30ರಂದು ಪ್ರಕಟವಾಗಲಿದೆ. ಇತ್ತ ದ್ವಿತೀಯ ಪಿಯು ಪರೀಕ್ಷೆ-2ರ ಫಲಿತಾಂಶವೂ ಇನ್ನಷ್ಟೇ ಹೊರ ಬರಬೇಕಿದೆ. ಇದರ ಫಲಿತಾಂಶ ಮೇ 30ರಂದು ಹೊರಬರುವ ನಿರೀಕ್ಷೆ ಇದೆ.

ಇನ್ನು ಜೂನ್‌ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು ಅದಾದ ಬಳಿಕವೇ ಸಿಇಟಿ ರಿಸಲ್ಟ್‌ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಪ್ರತಿವರ್ಷ ಮೇ, ಜೂನ್‌ನಲ್ಲಿ ಪರೀಕ್ಷೆ ನಡೆದರೆ ಈ ಬಾರಿ ಏಪ್ರಿಲ್‌ನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಆದರೆ ಅಧಿಕಾರಿಗಳ ಎಡವಟ್ಟಿನಿಂದ ಫಲಿತಾಂಶ ವಿಳಂಬವಾಗಿದೆ ಎಂಬ ದೂರು ಕೇಳಿ ಬಂದಿದೆ.

ರಿಸಲ್ಟ್‌ ಚೆಕ್‌ ಮಾಡುವ ವಿಧಾನ

ರಿಸಲ್ಟ್‌ ಪ್ರಕಟವಾದ ಬಳಿಕ ಚೆಕ್‌ ಮಾಡುವ ವಿಧಾನದ ಹಂತ ಹಂತದ ಮಾಹಿತಿ ಇಲ್ಲಿದೆ.

 • ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿ ಅಫೀಶಿಯಲ್ ವೆಬ್‌ಸೈಟ್‌ https://cetonline.karnataka.gov.in/kea/ಗೆ ಭೇಟಿ ನೀಡಿ.
 • ಅಥವಾ ಇಲ್ಲಿ ಕ್ಲಿಕ್‌ ಮಾಡಿ.
 • ಈ ಓಪನ್‌ ಆದ ಪುಟದ ಮೇಲ್ಭಾಗದಲ್ಲಿರುವ ʼಪ್ರವೇಶʼ ಆಯ್ಕೆಯನ್ನು ಕ್ಲಿಕ್‌ ಮಾಡಿ ಬಳಿಕ ʼಯುಜಿಸಿಇಟಿ 2024′ ಆಪ್ಶನ್‌ ಸೆಲೆಕ್ಟ್‌ ಮಾಡಿ.
 • ಇತ್ತೀಚಿನ ಪ್ರಕಟಣೆಗಳು ಎಂದಿರುವ ಕೆಳಗಡೆ ‘ಯುಜಿಸಿಇಟಿ 2024’ ಫಲಿತಾಂಶದ ಲಿಂಕ್ ನೀಡಲಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿ.
 • ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ, ‘Submit’ ಬಟನ್‌ ಕ್ಲಿಕ್‌ ಮಾಡಿದರೆ ಫಲಿತಾಂಶ ಕಾಣಿಸುತ್ತದೆ.

ಇದನ್ನೂ ಓದಿ: KEA : ಸಿಇಟಿ ಪರೀಕ್ಷೆಯಲ್ಲಿ ಸಾಲು ಸಾಲು ವಿವಾದ; ಕೆಇಎ ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ರಮ್ಯಾ ಎತ್ತಂಗಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

NMMS Scholarship: ಎನ್‌ಎಂಎಂಎಸ್‌ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಕೆ ಹೇಗೆ?

NMMS Scholarship: ಎನ್‌ಎಂಎಂಎಸ್‌ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್‌ ತೆರಯಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ, ಕೊನೆಯ ದಿನಾಂಕ ಯಾವಾಗ? ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

VISTARANEWS.COM


on

NMMS scholarship
Koo

ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ಎನ್‌ಎಂಎಂಎಸ್‌ (NMMS) ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆಯಲಾಗಿದೆ. ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು ಆಗಸ್ಟ್‌ 31 ಕೊನೆಯ ದಿನಾಂಕವಾಗಿದ್ದು, ಅರ್ಹ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ತಿಳಿಸಿದೆ.

NMMS ವಿದ್ಯಾರ್ಥಿ ವೇತನಕ್ಕಾಗಿ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್‌ನಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನಂತೆ ವೇಳಾಪಟ್ಟಿ ನಿಗದಿ ಪಡಿಸಲಾಗಿದೆ.

ಕಾರ್ಯ ಚಟುವಟಿಕೆಯ ವಿವರ

ಪೋರ್ಟಲ್ ಆರಂಭ: ಜೂನ್‌ 30
ಅರ್ಜಿ ಸಲ್ಲಿಸಲು/ನವೀಕರಿಸಲು ಅಂತಿಮ ದಿನಾಂಕ: ಆಗಸ್ಟ್‌ 31
ಶಾಲಾ/ ಕಾಲೇಜು ಹಂತದಲ್ಲಿ INOಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ: ಸೆಪ್ಟೆಂಬರ್‌ 15
ಜಿಲ್ಲಾ ಹಂತದಲ್ಲಿ DNOಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ: ಸೆಪ್ಟೆಂಬರ್‌ 30

ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಮುಖ ಅಂಶಗಳು

 • 2024-25ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಗಳನ್ನು ಸಲ್ಲಿಸಲು One Time Registration(OTR) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
 • (OTR) is a unique 14-digit number issued based on the Aadhaar/Aadhaar Enrolment ID (EID)
 • One Time Registration (OTR) ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ (unique) ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನಲ್ಲಿ ಅರ್ಜಿ ಸಲ್ಲಿಸಲು ಅನ್ವಯವಾಗುತ್ತದೆ.
 • NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSP ನಲ್ಲಿ ನೋಂದಾಯಿತ ಮೋಬೈಲ್ ಗೆ SMS ಮೂಲಕ Reference / OTR ಸಂಖ್ಯೆ ಕಳುಹಿಸಲಾಗುತ್ತದೆ.
 • Fresh ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ (Fresh) National Scholarship Portal 2 Student Login ಲಭ್ಯವಿರುವ “Know your OTR” ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರೆಫೆರನ್ಸ್ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
 • 2024-25 ನೇ ಸಾಲಿನಲ್ಲಿ NSP ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು. ( ಆಧಾರ್ ನಲ್ಲಿ ಅತಿ ಚಿಕ್ಕ ವಯಸ್ಸಿನ ಫೋಟೊಗಳಿರುವುದರಿಂದ Face authentication Error ಎಂದು ಕಾಣಿಸಿಕೊಳ್ಳುತ್ತದೆ)

ಅ) ಆಧಾ‌ರ್ ಸಂಖ್ಯೆ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯ ದಾಖಲೆಗಳು

 • ಸಕ್ರಿಯ ಮೊಬೈಲ್ ಸಂಖ್ಯೆ
 • ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ.
 • ವಿದ್ಯಾರ್ಥಿಯ ಆಧಾ‌ರ್ ಸಂಖ್ಯೆ.

ಆ) ಆಧಾ‌ರ್ ಸಂಖ್ಯೆ ಇಲ್ಲದೇ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯವಿರುವ ದಾಖಲೆಗಳು

 • ಸಕ್ರಿಯ ಮೊಬೈಲ್ ಸಂಖ್ಯೆ
 • ಪೋಷಕರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ
 • ವಿದ್ಯಾರ್ಥಿಯು ಆಧಾರ್ ಸಂಖ್ಯೆಗಾಗಿ ಸಲ್ಲಿಸಿದ ಅರ್ಜಿಯ EID ಸಂಖ್ಯೆ.
 • ಪೋಷಕರ ಆಧಾರ್ ಸಂಖ್ಯೆ.

ವಿಶೇಷ ಸೂಚನೆ: ಪೋಷಕರ ಆಧಾರ್ ಸಂಖ್ಯೆ ನೀಡಿದ್ದರೂ ಕೂಡ ಉಳಿದ ಎಲ್ಲಾ ಮಾಹಿತಿಗಳು ಹಾಗೂ ಭಾವಚಿತ್ರ ವಿದ್ಯಾರ್ಥಿಯದ್ದೇ ಆಗಿರಬೇಕು. ವಿದ್ಯಾರ್ಥಿ ವೇತನವನ್ನು ಪಡೆಯಲು, ಕಾಲ ಮಿತಿಯೊಳಗೆ ವಿದ್ಯಾರ್ಥಿಯು ತನ್ನ ಆಧಾರ್ ಸಂಖ್ಯೆಯನ್ನು update ಮಾಡಿಸಬೇಕು.

ಇ) OTR (One Time Registration) ಸಂಖ್ಯೆ ಪಡೆದ ವಿದ್ಯಾರ್ಥಿಗಳಿಗೆ ಸೂಚನೆಗಳು

 • 2023-24ನೇ ಸಾಲಿನಲ್ಲಿ face authentication ಮಾಡಿದ ವಿದ್ಯಾರ್ಥಿಗಳಿಗೆ NSPಯ ಮೂಲಕ ಜೆನರೇಟ್ ಆದ One Time Registration(OTR) ಸಂಖ್ಯೆಯನ್ನು ಅರ್ಜಿದಾರರ ನೊಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಿಕೊಡಲಾಗಿದೆ.
 • ಈಗಾಗಲೇ OTR ಸಂಖ್ಯೆಯನ್ನು ಪಡೆದಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ನೇರವಾಗಿ NSP ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು

ಈ) ರೆಫೆರೆನ್ಸ್‌ ಸಂಖ್ಯೆ ಪಡೆದಿರುವ ವಿದ್ಯಾರ್ಥಿಗಳು OTR ಪಡೆಯಲು ಅನುಸರಿಸಬೇಕಾದ ಕ್ರಮಗಳು (ರೆಫರನ್ಸ್ ಸಂಖ್ಯೆ ಉದಾ: R23-003101555)

 • 2023-24ನೇ ಸಾಲಿನಲ್ಲಿ OTP based eKYC ಯನ್ನು ಪೂರ್ಣಗೊಳಿಸಿದ್ದರೂ ಕೂಡ, face authentication ಅನ್ನು ಪೂರ್ಣಗೊಳಿಸದೇ ಇರುವ ವಿದ್ಯಾರ್ಥಿಗಳಿಗೆ MOE ಯಿಂದ ನೋಂದಾಯಿತ ಮೊಬೈಲ್‌ಗೆ ರೆಫೆರೆನ್ಸ್ ಸಂಖ್ಯೆಯನ್ನು ಕಳುಹಿಸಲಾಗಿರುತ್ತದೆ.
 • ರೆಫೆರೆನ್ಸ್ ಸಂಖ್ಯೆಯನ್ನು ಬಳಸಿಕೊಂಡು, ವಿದ್ಯಾರ್ಥಿಗಳು Face Authentication ಪೂರ್ಣಗೊಳಿಸುವ ಮೂಲಕ OTR ಸಂಖ್ಯೆಯನ್ನು ಪಡೆದುಕೊಳ್ಳುವುದು.
 • ಅದಕ್ಕಾಗಿ ಆಂಡ್ರಾಯ್ಡ್ ಮೊಬೈಲ್‌ನ google play store ನಿಂದ ಈ ಮುಂದೆ ಸೂಚಿಸಿರುವ ಎರಡೂ App ಗಳನ್ನು install ಮಾಡಿಕೊಳ್ಳುವುದು
 • AadhaarFaceRD App ನ್ನು install ಮಾಡಿಕೊಳ್ಳುವುದು.

(Link: https://play.google.com/store/apps/details?id=in.gov.uidai.facerd

 • NSP OTR App ಅನ್ನು install ಮಾಡುವುದು.

(link: https://play.google.com/store/apps/details?id=in.gov.scholarships.nspotr&pli=1)

ಉ) App ಗಳ ಮೂಲಕ OTR ಪಡೆಯುವ ಪ್ರಕ್ರಿಯೆ

 • Mobileನಲ್ಲಿ NSP OTR App ಅನ್ನು ತೆರೆದಾಗ ಕಾಣಿಸಿಕೊಳ್ಳುವ ಸ್ಕ್ರೀನ್‌ನಲ್ಲಿ ಕೆಂಪು ಬಣ್ಣದಲ್ಲಿ ಗುರುತು ಮಾಡಿರುವ “eKYC with FaceAuth” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
 • ಈ screenನಲ್ಲಿ ವಿದ್ಯಾರ್ಥಿಯು ಪಡೆದಿರುವ Reference ID ನಮೂದಿಸುವುದು.
 • ನಂತರ ಮೊಬೈಲ್ ಗೆ ಬಂದಿರುವ OTP ಹಾಗೂ ಸ್ಕಿನ್‌ನಲ್ಲಿ ಸೂಚಿಸಿರುವ CAPTCHA ಸರಿಯಾಗಿ ನಮೂದಿಸಿ Next ಎಂಬುದರ ಮೇಲೆ ಕ್ಲಿಕ್ ಮಾಡಿ.
 • ವಿದ್ಯಾರ್ಥಿಯ ಆಧಾರ್‌ನಲ್ಲಿರುವಂತೆ ಮಾಹಿತಿಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ. ಮಾಹಿತಿಯನ್ನು ಖಚಿತಪಡಿಸಿಕೊಂಡು Proceed For Face Authentication ಮೇಲೆ ಕ್ಲಿಕ್ ಮಾಡಿ.
 • ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಸೂಚನೆಗಳನ್ನು ಓದಿಕೊಂಡು | Agree ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 • ಈಗ ವಿದ್ಯಾರ್ಥಿಯು Face authentication ಮಾಡಲು ಹೊಸ screen ಕಾಣಿಸಿಕೊಳ್ಳುತ್ತದೆ.
 • Screen check box ” Tick Mark” ಗುರ್ತಿಸಿ Proceed ಆಯ್ಕೆ ಮೇಲೆ ಕ್ಲಿಕ್ ಮಾಡಿ.
 • ನಂತರ Face authentication screen ಕಾಣಿಸಿಕೊಳ್ಳುತ್ತದೆ.
 • Screen ಮೇಲೆ ಕಾಣಿಸಿಕೊಳ್ಳುವ ವೃತ್ತಾಕಾರದೊಳಗೆ ವಿದ್ಯಾರ್ಥಿಯ ಮುಖ ಸ್ಪಷ್ಟವಾಗಿ ಗೋಚರಿಸುವಂತೆ ಇರಬೇಕು.
 • ನಂತರ Pls Blink to capture ಎಂಬ ಸೂಚನೆ ಕಾಣಿಸಿದಾಗ ವಿದ್ಯಾರ್ಥಿಯು ಕಣ್ಣು ರೆಪ್ಪೆ ಮುಚ್ಚಿ ತೆರೆದಾಗ Face Capture ಆಗುತ್ತದೆ. ( Error ಬಂದಲ್ಲಿ ಮತ್ತೆ ಪ್ರಯತ್ನಿಸಿ)
 • Face authentication successfully completed OTR ಜನರೇಟ್ ಆಗುತ್ತದೆ.
 • ಜನರೇಟ್ ಆದ OTR ಸಂಖ್ಯೆ ಹಾಗೂ Password ನೋಂದಾಯಿತ ಮೊಬೈಲ್ ಗೆ SMS ಬರುತ್ತದೆ.
 • ಈಗ login ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಕಾಣಿಸಿಕೊಳ್ಳುವ ಸ್ಕ್ರೀನ್‌ನಲ್ಲಿ OTR ಸಂಖ್ಯೆ ಹಾಗೂ Password ಹಾಗೂ CAPTCHA password ಸೃಜಿಸಿಕೊಳ್ಳವುದು. (ಕನಿಷ್ಠ ಒಂದು Upper case, Lower case, special character, numerical character ಒಳಗೊಂಡಂತೆ ಕನಿಷ್ಠ 8 character ಇರಬೇಕು)
 • ಕೆಳಗಿರುವ CAPTCHA ನಮೂದಿಸಿ Next ಎಂಬುದರ ಮೇಲೆ ಕ್ಲಿಕ್ ಮಾಡಿದಾಗ, Password successfully updated ಎಂಬ ಮಾಹಿತಿ ಲಭ್ಯವಾಗುತ್ತದೆ.
 • OTR a password w National Scholarship Portal F ಸಲ್ಲಿಸಲು ಕ್ರಮವಹಿಸುವುದು.

ಊ) Reference ID ಪಡೆಯದೇ ಇರುವ Fresh ವಿದ್ಯಾರ್ಥಿಗಳು ವಹಿಸಬೇಕಾದ ಕ್ರಮಗಳು

 • ವಿದ್ಯಾರ್ಥಿಗಳು NSP ನಲ್ಲಿ Login ಆಗುವುದು.
 • Apply for One Time Registration ಮೇಲೆ ಕ್ಲಿಕ್ ಮಾಡುವುದು.
 • ಕಾಣಿಸಿಕೊಳ್ಳುವ ಸ್ಕಿನ್ ನಲ್ಲಿ Register ಮೇಲೆ ಕ್ಲಿಕ್ ಮಾಡುವುದು.
 • ಸೂಚನೆಗಳನ್ನು ಓದಿಕೊಂಡು check box ನಲ್ಲಿ ” TICK MARK” ಗುರ್ತಿಸಿ Next ಮೇಲೆ ಕ್ಲಿಕ್ ಮಾಡುವುದು.
 • ಕಾಣಿಸಿಕೊಳ್ಳುವ ಸ್ಟೀನ್ ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿ OTP ಪಡೆಯುವುದು.
 • ಪಡೆದ OTP ಹಾಗೂ CAPTCHA ಅನ್ನು ನಮೂದಿಸಿ Verify ಆಯ್ಕೆಯ ಮೇಲೆ ಕ್ಲಿಕ್ ಮಾಡುವುದು.
 • ಕಾಣಿಸಿಕೊಳ್ಳುವ ಸ್ಕಿನ್ ನಲ್ಲಿ ಆಧಾರ್ ಸಂಖ್ಯೆ ಹಾಗೂ CAPCTHA ಅನ್ನು ನಮೂದಿಸಿ Submit ಮೇಲೆ ಕ್ಲಿಕ್ ಮಾಡುವುದು.
 • ಈಗ Reference ID ಜನರೇಟ್ ಆಗುತ್ತದೆ.
 • ಮೇಲೆ ಕಂಡಿಕೆ ಈ ಹಾಗೂ ಉ ನಲ್ಲಿ ತಿಳಿಸಿರುವ ಕ್ರಮಗಳನ್ನು ಅನುಸರಿಸಿ ನಂತರ National Scholarship Portal ನಲ್ಲಿ ಅರ್ಜಿ ಸಲ್ಲಿಸಲು ಕ್ರಮವಹಿಸುವುದು.

ಸುತ್ತೋಲೆಯ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಆಡಳಿತ)ರವರು, ತಮ್ಮ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳಿಗೆ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಮುಖಾಂತರ ಮಾಹಿತಿ ನೀಡಿ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ National Scholarship Portal ಮೂಲಕ ಸಲ್ಲಿಸಲು ಸೂಕ್ತ ಕ್ರಮವಹಿಸಿ, ಎಲ್ಲಾ ಫಲಾನುಭವಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಕ್ರಮವಹಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೂಚಿಸಿದೆ.

Continue Reading

ಪ್ರಮುಖ ಸುದ್ದಿ

‌2nd PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶ ಪ್ರಕಟ, 23.73% ವಿದ್ಯಾರ್ಥಿಗಳು ಪಾಸ್

‌2nd PUC Exam Result: ಜೂನ್/ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ- 3 ಅನ್ನು ದಿನಾಂಕ ಜೂನ್‌ 24ರಿಂದ ಜುಲೈ 5ರವರೆಗೆ ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 12 ಮೌಲ್ಯಮಾಪನ ಶಿಬಿರಗಳಲ್ಲಿ ದಿನಾಂಕ ಜುಲೈ 9ರಿಂದ 14ರವರೆಗೆ 2293 ಮೌಲ್ಯಮಾಪಕರಿಂದ ನಡೆಸಲಾಯಿತು.

VISTARANEWS.COM


on

2nd Puc Result
Koo

ಬೆಂಗಳೂರು: 2024ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶಗಳನ್ನು (2nd PUC Exam Result) ಪ್ರಕಟಿಸಲಾಗಿದೆ. 23.73% ವಿದ್ಯಾರ್ಥಿಗಳು (PUC Students) ಉತ್ತೀರ್ಣರಾಗಿದ್ದಾರೆ. ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶದ (PUC Result) ಅಂಕಿ ಅಂಶ ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ಹಾಜರಾದ 75,466 ವಿದ್ಯಾರ್ಥಿಗಳಲ್ಲಿ 17,911 ಮಂದಿ ಪಾಸ್ (Pass) ಆಗಿದ್ದಾರೆ.

ಜೂನ್/ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ- 3 ಅನ್ನು ದಿನಾಂಕ ಜೂನ್‌ 24ರಿಂದ ಜುಲೈ 5ರವರೆಗೆ ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 12 ಮೌಲ್ಯಮಾಪನ ಶಿಬಿರಗಳಲ್ಲಿ ದಿನಾಂಕ ಜುಲೈ 9ರಿಂದ 14ರವರೆಗೆ 2293 ಮೌಲ್ಯಮಾಪಕರಿಂದ ನಡೆಸಲಾಯಿತು.

ಫಲಿತಾಂಶವನ್ನು ಇಂದು ಮಧ್ಯಾಹ್ನ 3:00 ಗಂಟೆಗೆ ಕಾಲೇಜುಗಳಲ್ಲಿ ಪ್ರಕಟಿಸಲಾಗುತ್ತಿದೆ. ಪರೀಕ್ಷೆ-3ರ ಫಲಿತಾಂಶವನ್ನು https://karresults.nic.in ವೆಬ್‌ಸೈಟ್‌ನಲ್ಲಿಯೂ ಪ್ರಚುರಪಡಿಸಲಾಗಿದೆ. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ 1, ಪರೀಕ್ಷೆ 2 ಮತ್ತು ಪರೀಕ್ಷೆ- 3ರಲ್ಲಿ ವಿಷಯವಾರು ಗಳಿಸಿದ ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು https://kseab.karnataka.gov.in ಅಂತರ್ಜಾಲದಲ್ಲಿ ನಂತರ ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಪರೀಕ್ಷೆಗೆ ನೋಂದಾಯಿಸಿದವರ ಸಂಖ್ಯೆ 76,005, ಹಾಜರಾದವರು 75,466, ಉತ್ತೀರ್ಣರಾದವರು 17,911 ಹಾಗೂ ಶೇಕಡವಾರು ಫಲಿತಾಂಶ 23.73. ಉತ್ತೀರ್ಣರಾದವರಲ್ಲಿ ಬಾಲಕಿಯರ ಪ್ರಮಾಣ 26.65% ಹಾಗೂ ಬಾಲಕರು 21.65%. ಕಲಾ ವಿಭಾಗದಲ್ಲಿ 21.71%, ವಾಣಿಜ್ಯದಲ್ಲಿ 23.58% ಹಾಗೂ ವಿಜ್ಞಾನದಲ್ಲಿ 27.06% ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 17ರಿಂದ 21
ಸ್ಕ್ಯಾನಿಂಗ್‌ ಪ್ರತಿಯನ್ನು ಅಂತರ್ಜಾಲದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ದಿನಾಂಕ: ಜುಲೈ 18ರಿಂದ 22
ಮರುಮೌಲ್ಯಮಾಪನ ಹಾಗೂ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಜುಲೈ 18ರಿಂದ 24. ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ.
ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ಪೇಪರ್‌ಗೆ ಶುಲ್ಕ- 530 ರೂ.
ಮರುಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ- 1670 ರೂ.

ಈ ಬಾರಿ ಆಯ್ಕೆಯಾದ 105 ಸಂಸದರು ಪಿಯುಸಿ ದಾಟಿಲ್ಲ!

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಗೆದ್ದು ಸಂಸತ್ತು ಪ್ರವೇಶಿಸಿರುವ ಶೇ. 19ರಷ್ಟು ನೂತನ ಸಂಸದರ (MPs) ಶೈಕ್ಷಣಿಕ ಅರ್ಹತೆ (education qualification) 12 ನೇ ತರಗತಿಗಿಂತ ಕೆಳಗಿದೆ. ಶೇ. 77ರಷ್ಟು ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಅರ್ಹತೆಯನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.

ವಿಜೇತ ಅಭ್ಯರ್ಥಿಗಳಲ್ಲಿ ಸುಮಾರು 105 ಮಂದಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು 5ನೇ ತರಗತಿ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. 420 ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 17 ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಮಾಡಿದ್ದು, ಒಬ್ಬ ವಿಜೇತರು “ಕೇವಲ ಸಾಕ್ಷರರು” ಎಂದು ಹೇಳಿಕೊಂಡಿದ್ದಾರೆ. ಚುನಾವಣಾ ಕಣದಲ್ಲಿ ಇಳಿಯುವಾಗ ತಾವು ಅನಕ್ಷರಸ್ಥರೆಂದು ಘೋಷಿಸಿಕೊಂಡ ಎಲ್ಲಾ 121 ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.

ಯಾರು ಎಷ್ಟು?

5ನೇ ತರಗತಿಯವರೆಗೆ ಓದಿರುವ ಇಬ್ಬರು ವಿಜೇತ ಅಭ್ಯರ್ಥಿಗಳಿದ್ದರೆ, ನಾಲ್ವರು 8 ನೇ ತರಗತಿಯವರೆಗೆ ಓದಿದ್ದೇವೆ ಎಂದು ಹೇಳಿದ್ದಾರೆ. 34 ಅಭ್ಯರ್ಥಿಗಳು ತಾವು 10 ನೇ ತರಗತಿಯವರೆಗೆ ಮತ್ತು 65 ಅಭ್ಯರ್ಥಿಗಳು 12ನೇ ತರಗತಿಯವರೆಗೆ ಓದಿರುವುದಾಗಿ ಘೋಷಿಸಿದ್ದಾರೆ.

ಕೃಷಿಕರು

ಪಿ ಆರ್ ಎಸ್ ಶಾಸಕಾಂಗ ಸಂಶೋಧನೆ ವಿಶ್ಲೇಷಣೆಯ ಪ್ರಕಾರ 543 ಸಂಸದರಲ್ಲಿ ಛತ್ತೀಸ್‌ಗಢದ ಶೇ. 91 ಸಂಸದರು, ಮಧ್ಯಪ್ರದೇಶದಿಂದ ಶೇ. 72 ಮತ್ತು ಗುಜರಾತ್‌ನ ಶೇ. 65 ಸಂಸದರು ಕೃಷಿಯನ್ನು ತಮ್ಮ ವೃತ್ತಿ ಎಂದು ಘೋಷಿಸಿದ್ದಾರೆ.
18ನೇ ಲೋಕಸಭೆಗೆ ಚುನಾಯಿತರಾದ ಸಂಸದರಲ್ಲಿ ಸುಮಾರು ಶೇ. 7 ರಷ್ಟು ಮಂದಿ ವಕೀಲರು ಮತ್ತು ಶೇ. 4ರಷ್ಟು ಮಂದಿ ವೈದ್ಯಕೀಯ ವೃತ್ತಿಯವರು ಇದ್ದಾರೆ.

ಇದನ್ನೂ ಓದಿ: UGCET 2024: ಅರ್ಹತಾ ಅಂಕ ಶೇ 45ಕ್ಕೆ ಇಳಿಕೆ ; ಆರ್ಕಿಟೆಕ್ಚರ್ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಜು. 13ರವರೆಗೆ ಅವಕಾಶ

Continue Reading

ಕರ್ನಾಟಕ

Kannada In Madrasa: ರಾಜ್ಯದ ಮದರಸಾಗಳಲ್ಲಿ ಇನ್ನು ಕನ್ನಡ ಕಲಿಕೆ ಕಡ್ಡಾಯ; ಶೀಘ್ರವೇ ಆದೇಶ!

Kannada In Madrasa: ವಾರದಲ್ಲಿ ಕನಿಷ್ಠ 2-3 ಗಂಟೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಬೋಧನೆ ಮಾಡಬೇಕು. ಆ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು ಎಂಬ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದೆ. ಹಾಗೊಂದು ವೇಳೆ, ಪ್ರಾಧಿಕಾರವು ಆದೇಶ ಹೊರಡಿಸಿದರೆ, ಮುಸ್ಲಿಂ ಮಕ್ಕಳು ಮದರಸಾಗಳಲ್ಲಿ ಕನ್ನಡ ಕಲಿಯಲಿದ್ದಾರೆ.

VISTARANEWS.COM


on

Kannada In Madrasa
Koo

ಬೆಂಗಳೂರು: ಕರ್ನಾಟಕದ ಮದರಸಾಗಳಲ್ಲಿ ಉರ್ದುವಿನಲ್ಲೇ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕನ್ನಡ ಕಲಿಕೆಗೂ (Kannada In Madrasa) ರಾಜ್ಯ ಸರ್ಕಾರವು (Karnataka Government) ಪ್ರಾಮುಖ್ಯತೆ ನೀಡಲು ಮುಂದಾಗಿದೆ. ಇನ್ನುಮುಂದೆ ರಾಜ್ಯದ ಮದರಸಾಗಳಲ್ಲಿ (Madrasas In Karnataka) ಕಡ್ಡಾಯವಾಗಿ ಕನ್ನಡದಲ್ಲೇ ಬೋಧನೆ ಮಾಡಬೇಕು ಎಂಬ ದಿಸೆಯಲ್ಲಿ ಆದೇಶ ಹೊರಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆ ರೂಪಿಸಿದೆ. ಈ ಕುರಿತಂತೆ ಕನ್ನಡ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಸಾವಿರಾರು ಮದರಸಾಗಳಿದ್ದು, ಮುಸ್ಲಿಂ ವಿದ್ಯಾರ್ಥಿಗಳಿಗೆ ಬೋಧಕರು ಕನ್ನಡದಲ್ಲಿ ಪಾಠ ಮಾಡಲು, ಕನ್ನಡ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆ ರೂಪಿಸಿದೆ. ಕನ್ನಡದಲ್ಲೇ ಪಾಠ ಮಾಡಬೇಕು. ವಾರದಲ್ಲಿ ಕನಿಷ್ಠ 2-3 ಗಂಟೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಬೋಧನೆ ಮಾಡಬೇಕು. ಆ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು ಎಂಬ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದೆ. ಹಾಗೊಂದು ವೇಳೆ, ಪ್ರಾಧಿಕಾರವು ಆದೇಶ ಹೊರಡಿಸಿದರೆ, ಮುಸ್ಲಿಂ ಮಕ್ಕಳು ಮದರಸಾಗಳಲ್ಲಿ ಕನ್ನಡ ಕಲಿಯಲಿದ್ದಾರೆ.

ಮದರಸಾಗಳಲ್ಲಿ ರಾಮನ ಕುರಿತು ಅಧ್ಯಯನ

ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದು ಧಾರ್ಮಿಕ ಸೌಹಾರ್ದತೆಯ ಸಂಕೇತವೂ ಆಗಿದೆ ಎನ್ನಲಾಗುತ್ತಿದೆ.

ಹೌದು, ಈ ಕುರಿತು ಉತ್ತರಾಖಂಡ ವಕ್ಫ್‌ ಬೋರ್ಡ್‌ ಚೇರ್ಮನ್‌ ಆಗಿರುವ ಶಾದಾಬ್‌ ಶಾಮ್ಸ್‌ ಅವರೇ ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದ್ದರು. “ಮದರಸಾ ಆಧುನೀಕರಣ ಯೋಜನೆಯ ಭಾಗವಾಗಿ ಇನ್ನು ಮುಂದೆ ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಮುಸ್ಲಿಂ ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದರ ಜತೆಗೆ ಶ್ರೀರಾಮನ ಕುರಿತು ಕೂಡ ಅಧ್ಯಯನ ಮಾಡಲಿದ್ದಾರೆ” ಎಂದು ತಿಳಿಸಿದ್ದರು.

ಶಾದಾಬ್‌ ಶಾಮ್ಸ್‌ ಅವರು ಬಿಜೆಪಿ ಮುಖಂಡರೂ ಆಗಿದ್ದು, ಅವರು ಮದರಸಾಗಳಲ್ಲಿ ಬೋಧನೆ ಮಾಡುವ ಮೌಲ್ವಿಗಳನ್ನೂ ಒಪ್ಪಿಸಿದ್ದಾರೆ. ಧರ್ಮ, ಜಾತಿಯ ಸಂಕೋಲೆಗಳು ಇಲ್ಲದೆಯೇ ರಾಮನನ್ನು ಆರಾಧಿಸಬಹುದು. ಆತನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಮನೋಭಾವದಿಂದ ಶಾದಾಬ್‌ ಶಾಮ್ಸ್‌ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಉತ್ತರಾಖಂಡದ ವಕ್ಫ್‌ ಬೋರ್ಡ್‌ ವ್ಯಾಪ್ತಿಗೆ ಸುಮಾರು 117 ಮದರಸಾಗಳು ಬರುತ್ತವೆ. ಡೆಹ್ರಾಡೂನ್, ಹರಿದ್ವಾರ, ಉಧಾಮ್‌ ಸಿಂಗ್‌ ನಗರ ಹಾಗೂ ನೈನಿತಾಲ್‌ ಜಿಲ್ಲೆ ಸೇರಿ ಹಲವೆಡೆ ವಕ್ಫ್‌ ಬೋರ್ಡ್‌ ವ್ಯಾಪ್ತಿಯ ಮದರಸಾಗಳಲ್ಲಿ ರಾಮನ ಕುರಿತ ಅಧ್ಯಾಯಗಳನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Madrasa: ಉತ್ತರ ಪ್ರದೇಶದಲ್ಲಿ ಮದರಸಾ ಶಿಕ್ಷಣ ರದ್ದುಪಡಿಸುವ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

Continue Reading

ಕರ್ನಾಟಕ

Round table meeting: ಶಿಕ್ಷಣ ಗುಣಮಟ್ಟ ಸುಧಾರಿಸಲು ಜು.16ರಂದು ದುಂಡು ಮೇಜಿನ ಸಭೆ

Round table meeting: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಚಿಂತನ ಜಂಟಿ ಸಮಿತಿ ವತಿಯಿಂದ ಜು.16ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದ ಶಾಸಕರ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಿಸಲು “ದುಂಡು ಮೇಜಿನ ಸಭೆ” ಏರ್ಪಡಿಸಲಾಗಿದೆ.

VISTARANEWS.COM


on

Round table meeting on June 16 in Bengaluru
Koo

ಬೆಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಚಿಂತನ ಜಂಟಿ ಸಮಿತಿ ವತಿಯಿಂದ ಜು.16 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದ ಶಾಸಕರ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಿಸಲು “ದುಂಡು ಮೇಜಿನ ಸಭೆ” (Round table meeting)‌ ಏರ್ಪಡಿಸಲಾಗಿದೆ.

ಇದನ್ನೂ ಓದಿ: Tata Motors: ಟಾಟಾ ಮೋಟರ್ಸ್‌ನಿಂದ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಮೂಲಕ 4000 ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ

ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ಬಸವರಾಜ್‌ ಶಿವಲಿಂಗಪ್ಪ ಹೊರಟ್ಟಿ ಸಭೆಯನ್ನು ಉದ್ಘಾಟಿಸುವರು. ಗೌರವ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಪಾಲ್ಗೊಳ್ಳುವರು. ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಅಧ್ಯಕ್ಷತೆ ವಹಿಸುವರು.

ಇದನ್ನೂ ಓದಿ: Grassroot Boxing: ಬೆಂಗಳೂರಿನಲ್ಲಿ ರೋಮಾಂಚನಗೊಳಿಸಿದ ಬಾಕ್ಸಿಂಗ್‌ ಪಂದ್ಯ

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯರಾದ ಶಶಿಲ್‌ ಜಿ. ನಮೋಶಿ, ಎಸ್‌.ಎಲ್‌. ಭೋಜೇಗೌಡ, ಡಾ.ಚಂದ್ರಶೇಖರ್‌ ಬಸವರಾಜ ಪಾಟೀಲ್‌, ಎಸ್‌.ವಿ.ಸಂಕನೂರ, ಹನುಮಂತ್‌ ನಿರಾಣಿ, ಪ್ರಕಾಶ್‌ ಹುಕ್ಕೇರಿ, ಚಿದಾನಂದ್‌ ಎಂ.ಗೌಡ, ಮಧು ಜಿ. ಮಾದೇಗೌಡ, ಡಿ.ಟಿ. ಶ್ರೀನಿವಾಸ್‌, ರಾಮೋಜಿಗೌಡ, ಡಾ. ಧನಂಜಯ ಸರ್ಜಿ, ವಿವೇಕಾನಂದ ಹಾಗೂ ಶಿಕ್ಷಣ ತಜ್ಞ ಪ್ರೊ. ಗಣೇಶ್‌ ಭಟ್‌, ಪ್ರೊ. ಬಿ.ರಮೇಶ್‌ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಪಿ.ಎಂ.ಟಿ.ಸಿ.ಸಿ. ಸಂಚಾಲಕ ಡಿ.ಶಶಿಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading
Advertisement
Mohammed Shami
ಕ್ರೀಡೆ3 mins ago

Mohammed Shami: ಎನ್​ಸಿಎಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ ಶಮಿ

gt world mall 3
ಪ್ರಮುಖ ಸುದ್ದಿ5 mins ago

GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

Anant Ambani wedding Shanaya Kapoor trolled for arguing with security
ಬಾಲಿವುಡ್6 mins ago

Anant Ambani: ಅನಂತ್ ಅಂಬಾನಿ ಮದುವೆಯಲ್ಲಿ ಖ್ಯಾತ ಬಾಲಿವುಡ್‌ ನಟನ ಮಗಳ ದರ್ಪ; ಮುನಿಸಿಕೊಂಡಿದ್ದೇಕೆ?

Sexual Harassment Case
Latest6 mins ago

Sexual Harassment Case: ಜನಜಂಗುಳಿಯ ಮಧ್ಯೆ ಮಹಿಳೆಯ ಖಾಸಗಿ ಭಾಗಕ್ಕೆ ಕೈ ಹಾಕಿದ ಬಸ್‍ ಕಂಡಕ್ಟರ್‌!

HD Revanna
ಕರ್ನಾಟಕ7 mins ago

HD Revanna: ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ; ಪಕ್ಕೆಲುಬಿಗೆ ಪೆಟ್ಟು

Viral Video
Latest20 mins ago

Viral Video: 600 ಲೋಡರ್‌ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು! ಕಾಲ್ತುಳಿತದ ಸನ್ನಿವೇಶ

Ankola landslide Case
ಕರ್ನಾಟಕ33 mins ago

Ankola landslide Case: ಅಂಕೋಲಾ ಗುಡ್ಡ ಕುಸಿತ ಪ್ರಕರಣ; ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Neenade Naa Serial Dileep R Shetty khushi will be marry in real life
ಕಿರುತೆರೆ37 mins ago

Neenade Naa Serial: ರಿಯಲ್‌ ಲೈಫಲ್ಲೂ ಒಂದಾಗ್ತಿದ್ದಾರಾ ವಿಕ್ರಂ-ವೇದಾ? ಮದುವೆ ಯಾವಾಗ?

cm siddaramaiah
ಪ್ರಮುಖ ಸುದ್ದಿ38 mins ago

CM Siddaramaiah: ಕನ್ನಡಿಗರಿಗೆ ಶೇ.100 ಉದ್ಯೋಗʼ ಟ್ವೀಟ್‌ ಡಿಲೀಟ್‌ ಮಾಡಿದ ಸಿಎಂ ಸಿದ್ದರಾಮಯ್ಯ; ಕಂಪನಿಗಳ ಜೊತೆ ಚರ್ಚೆ ಎಂದ ಎಂಬಿ ಪಾಟೀಲ್;‌ ಏನಿದು ಗೊಂದಲ?

Pooja Khedkar
ದೇಶ51 mins ago

Pooja Khedkar: ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ನಕಲಿ ವಿಳಾಸ ನೀಡಿದ್ದ ಪೂಜಾ ಖೇಡ್ಕರ್‌; ಮತ್ತೊಂದು ಕಳ್ಳಾಟ ಬಯಲು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌