Vaashi | ಕೋರ್ಟ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ಟೋವಿನೋ ಥಾಮಸ್‌ ಹಾಗೂ ಕೀರ್ತಿ ಸುರೇಶ್‌ - Vistara News

ಮಾಲಿವುಡ್

Vaashi | ಕೋರ್ಟ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ಟೋವಿನೋ ಥಾಮಸ್‌ ಹಾಗೂ ಕೀರ್ತಿ ಸುರೇಶ್‌

Vaashi ಮೂಲಕ ಟೋವಿನೋ ಥಾಮಸ್‌ ಹಾಗೂ ಕೀರ್ತಿ ಸುರೇಶ್‌ ಕೋರ್ಟ್‌ನಲ್ಲಿ ಕಥೆ ಹೇಳಲು ಹೊರಟಿದ್ದಾರೆ. ಚಿತ್ರದ ಟ್ರೈಲರ್‌ ಹೊರ ಬಂದಿದ್ದು, ಚಿತ್ರರಸಿಕರು ಸಖತ್‌ ರೆಸ್ಪಾನ್ಸ್‌ ತೋರುತ್ತಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಟೋವಿನೋ ಥಾಮಸ್‌ (Tovino Thomas) ಹಾಗೂ ಕೀರ್ತಿ ಸುರೇಶ್‌ ( Keerthy Suresh) ಅಭಿನಯದ ʼವಾಶಿʼ (‘Vaashi’) ಚಿತ್ರದ ಟ್ರೈಲರ್‌ ಬಿಡುಗೊಡೆಗೊಂಡಿದೆ. ವಾಶಿ ಮಲಯಾಳಂ ಚಿತ್ರವಾಗಿದ್ದು, ಚಿತ್ರದ ಟ್ರೈಲರ್‌ ಮೂಲಕ ನಾಯಕ ಮತ್ತು ನಾಯಕಿಯ ಪಾತ್ರದ ಹೆಸರನ್ನು ಚಿತ್ರತಂಡ ರಿವೀಲ್‌ ಮಾಡಿದೆ. ಟೋವಿನೋ ಥಾಮಸ್‌, ಎಬಿನ್‌ ಮ್ಯಾಥ್ಯೂ ಆಗಿ ಕಾಣಿಸಿಕೊಳ್ಳುತ್ತಿದ್ದರೆ, ಮಾಧವಿ ಮೋಹನ್‌ ಆಗಿ ಕೀರ್ತಿ ಸುರೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಇಬ್ಬರೂ ವಕೀಲರಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತಾರೆ. ಆದರೆ ಒಂದು ಪ್ರಕರಣ ಇವರಿಬ್ಬರನ್ನು ದೂರ ಮಾಡುತ್ತದೆ. ಪ್ರಕರಣದಲ್ಲಿ ಗೆಲುವು ಮತ್ತು ಅವರ ವೃತ್ತಿಯನ್ನು ಒಳಗೊಂಡಂತೆ ಅನೇಕ ವಿಷಯಗಳನ್ನು ಸಿನಿಮಾ ಒಳಗೊಂಡಿದೆ. ಶೀರ್ಷಿಕೆಯೇ ಹೇಳುವಂತೆ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಭೇಟಿ ನೀಡಲೇ ಬೇಕು.

ಇದನ್ನೂ ಓದಿ | Keerthy Suresh : ಸೀರೆಯಲ್ಲಿ ಸಕತ್‌ ಹಾಟ್‌ ಲುಕ್‌, ಇದೀಗ ಸಿಕ್ಕಾಪಟ್ಟೆ ವೈರಲ್‌

ಟ್ರೈಲರ್‌ನಲ್ಲಿ ಸಖತ್‌ ಕುತೂಹಲವನ್ನು ಚಿತ್ರತಂಡ ಸೃಷ್ಟಿ ಮಾಡಿದ್ದು, ಜನರು ಸಿನಿಮಾ ರಿಲೀಸ್‌ ಆಗಲು ಕಾಯುತ್ತಿದ್ದಾರೆ. ವಿಡಿಯೋ ಶೇರಿಂಗ್‌ ಪ್ಲಾಟ್‌ ಫಾರ್ಮ್‌ನಲ್ಲಿ ಇದೀಗ ಟ್ರೈಲರ್‌ ಟ್ರೆಂಡಿಂಗ್‌ ಆಗಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆ ಚಿತ್ರತಂಡ ಟೋವಿನೋ ಥಾಮಸ್‌ ಹಾಗೂ ಕೀರ್ತಿ ಸುರೇಶ್‌ ಅವರ ಪ್ರತ್ಯೇಕ ಮೇಕಿಂಗ್‌ ವಿಡಿಯೋ ಕೂಡ ರಿವೀಲ್‌ ಮಾಡಿದ್ದು, ತಮ್ಮ ಇನ್ಸ್ಟಾ ಮೂಲಕ ಕೀರ್ತಿ ಸುರೇಶ್‌ ಹಾಗೂ ಟೋವಿನೋ ಥಾಮಸ್‌ ಶೇರ್‌ ಮಾಡಿಕೊಂಡಿದ್ದಾರೆ.

ವಿಷ್ಣು ಜಿ ರಾಘವ್‌ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೋರ್ಟ್‌ ರೂಮ್‌ ಡ್ರಾಮಾ ಆಗಿರುವ ವಾಶಿ ಸಿನಿಮಾದ ಟ್ರೈಲರ್‌ ಹೆಚ್ಚಿನ ವ್ಯೂಸ್ ಪಡೆದು ಜನರ ಮನರಂಜಿಸುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಟೋವಿನೋ ಥಾಮಸ್‌‌ ಅವರ ಸೂಪರ್‌ ಹೀರೋ ಚಲನಚಿತ್ರ ʼಮಿನ್ನಲ್‌ ಮುರುಳಿʼ ಮೆಚ್ಚುಗೆ ಗಳಿಸಿತ್ತು.

ನಟಿ ಕೀರ್ತಿ ಸುರೇಶ್‌ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ಮತ್ತು ಬಹು ಬೇಡಿಕೆಯಲ್ಲಿ ಇದ್ದಾರೆ. ನೀಲ್‌ ಡಿಕುನ್ಹಾ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದು, ಅರ್ಜುನ್‌ ಬೆನ್‌ ಸಂಕಲನ ಮಾಡಿದ್ದಾರೆ. ಕೈಲಾಸ್‌ ಮೆನನ್‌ ಸಂಗೀತ ಸಂಯೋಜನೆ ಮಾಡಿದ್ದು, ವಿನಾಯಕ್‌ ಶಶಿಕುಮಾರ್‌ ಸಾಹಿತ್ಯ ಬರೆದಿದ್ದಾರೆ. ಸಾಬು ಮೋಹನ್‌ ಕಲಾ ನಿರ್ದೇಶಕರಾಗಿದ್ದು, ದಿವ್ಯಾ ಜಾರ್ಜ್‌ ಚಿತ್ರದ ಫ್ಯಾಷನ್‌ ಡಿಸೈನರ್‌ ಆಗಿದ್ದಾರೆ. ಚಿತ್ರ ಜೂನ್‌ 17ರಂದು ತೆರೆಗೆ ಬರಲಿದ್ದು, ಜನರನ್ನು ಹೇಗೆ ರಂಜಿಸಲಿದೆ ಎನ್ನುವುದು ಕಾದು ನೋಡಬೇಕಿದೆ.

ಇದನ್ನೂ ಓದಿ | ಆಶಿಕ್‌ ಬಾಬು ಹೊಸ ಚಿತ್ರ Neelavelicham ಫಸ್ಟ್‌ ಲುಕ್‌ ರಿಲೀಸ್‌, ಇದು ಬಶೀರ್‌ ಹಾರರ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

Rachel Movie: ಮಲಯಾಳಿ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗಲಿದೆ. ಚಿತ್ರವು ಹಿಂಸಾಚಾರ ಮತ್ತು ರಕ್ತಪಾತದ ಕಥೆಯಾಗಿರುತ್ತದೆ ಎಂದು ಟೀಸರ್ ಸುಳಿವು ನೀಡುತ್ತದೆ. ಎಬ್ರಿಡ್ ಶೈನ್ ಸಹ ನಿರ್ಮಾಣದ ಜತೆಗೆ ಮತ್ತು ಬರಹಗಾರರಾಗಿರುವ ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಹನಿ ರೋಸ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

VISTARANEWS.COM


on

Malayali actress Honey Rose starring Rachel movie Teaser release
Koo

ಬೆಂಗಳೂರು: ಮಲಯಾಳಿ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗಲಿದೆ. ಚಿತ್ರವು ಹಿಂಸಾಚಾರ ಮತ್ತು ರಕ್ತಪಾತದ ಕಥೆಯಾಗಿರುತ್ತದೆ ಎಂದು ಟೀಸರ್ ಸುಳಿವು ನೀಡುತ್ತದೆ.

ಎಬ್ರಿಡ್ ಶೈನ್ ಸಹ ನಿರ್ಮಾಣದ ಜತೆಗೆ ಮತ್ತು ಬರಹಗಾರರಾಗಿರುವ ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಹನಿ ರೋಸ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಬಾಬು ರಾಜ್, ಕಲಾಭವನ್ ಶಾಜೋನ್, ರೋಷನ್ ಬಶೀರ್, ಚಂದು ಸಲೀಂಕುಮಾರ್, ರಾಧಿಕಾ ರಾಧಾಕೃಷ್ಣನ್, ಜಾಫರ್ ಇಡುಕ್ಕಿ, ವಿನೀತ್ ತಟ್ಟಿಲ್, ಜೋಜಿ, ದಿನೇಶ್ ಪ್ರಭಾಕರ್, ಪಾಲಿ ವಲ್ಸನ್, ವಂದಿತಾ ಮನೋಹರನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರಿಕೆ? ಇಲ್ಲಿದೆ ಮಹತ್ವದ ಅಪ್‌ಡೇಟ್

ಈ ಚಿತ್ರವನ್ನು ಬಾದುಶಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಬಾದುಶಾ ಎನ್‌ಎಂ, ರಾಜನ್ ಚಿರಾಯಿಲ್ ಮತ್ತು ಎಬ್ರಿಡ್ ಶೈನ್ ನಿರ್ಮಿಸಿದ್ದಾರೆ. ಕಥೆಯನ್ನು ರಾಹುಲ್ ಮನಪ್ಪಟ್ಟು ಬರೆದಿದ್ದು, ಚಿತ್ರಕಥೆಯನ್ನು ರಾಹುಲ್ ಮನಪ್ಪಟ್ಟು ಮತ್ತು ಎಬ್ರಿಡ್ ಶೈನ್ ಮಾಡಿದ್ದಾರೆ. ಸಹ ನಿರ್ಮಾಪಕ – ಹನ್ನನ್ ಮರಮುತ್ತಮ್, ಛಾಯಾಗ್ರಹಣ – ಸ್ವರೂಪ್ ಫಿಲಿಪ್, ಸಂಗೀತ ಮತ್ತು ಬಿಜಿಎಂ – ಇಶಾನ್ ಛಾಬ್ರಾ, ಸಂಕಲನ – ಮನೋಜ್, ನಿರ್ಮಾಣ ವಿನ್ಯಾಸಕ – ಸುಜಿತ್ ರಾಘವ್, ಧ್ವನಿ ಮಿಶ್ರಣ – ರಾಜಕೃಷ್ಣನ್ ಎಂ ಆರ್, ಧ್ವನಿ ವಿನ್ಯಾಸ – ಶ್ರೀ ಶಂಕರ್, ಕಾರ್ಯನಿರ್ವಾಹಕ ನಿರ್ಮಾಪಕರು – ಮಂಜು ಬಾದುಷಾ, ಶೆಮಿ ಬಶೀರ್, ಶೈಮಾ ಮುಹಮ್ಮದ್ ಬಶೀರ್ ಅವರದ್ದು.

Continue Reading

ರಾಜಕೀಯ

Suresh Gopi: ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿರುವ ಸುರೇಶ್‌ ಗೋಪಿ ಜೀವನದಲ್ಲಿ ನಡೆದಿತ್ತೊಂದು ಘೋರ ದುರಂತ

ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿರುವ ಸುರೇಶ್ ಗೋಪಿ (Suresh Gopi) ಮಲಯಾಳಂ ಚಿತ್ರರಂಗದ ಅಪ್ರತಿಮ ನಟರಲ್ಲಿ ಒಬ್ಬರು. ಇವರ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಸುರೇಶ್‌ ಗೋಪಿ ಜೀವನದ ಹಿನ್ನೋಟ ಇಲ್ಲಿದೆ.

VISTARANEWS.COM


on

By

Suresh Gopi
Koo

ಲೋಕಸಭಾ ಚುನಾವಣೆ 2024ರ (Loksabha election-2024) ಫಲಿತಾಂಶ ಬಹುತೇಕ ಬಿಜೆಪಿಗೆ (BJP) ಬೇಸರವನ್ನು ಉಂಟು ಮಾಡಿದ್ದರೂ ಕಮ್ಯುನಿಸ್ಟ್ (Communist) ಆಡಳಿತವಿರುವ ಕೇರಳದಲ್ಲಿ (kerala) ಒಂದು ಖಾತೆ ತೆರೆದು ಸಂಭ್ರಮ ಪಡುವಂತೆ ಮಾಡಿದೆ. ಹಲವು ಹಲವು ದಶಕಗಳ ಸುದೀರ್ಘ ಕಾಯುವಿಕೆಯ ಬಳಿಕ ಮೊದಲ ಬಾರಿಗೆ ಕೇರಳದಲ್ಲಿ ಕಮಲ ಅರಳಿದೆ. ಈ ಸಾಧನೆ ಬಿಜೆಪಿ ನಾಯಕ ಮತ್ತು ನಟ ಸುರೇಶ್ ಗೋಪಿ (Suresh Gopi) ಅವರದ್ದು.

ಸಮಾಜ ಸೇವೆಗಾಗಿ ಹೆಸರುವಾಸಿಯಾಗಿರುವ ಸುರೇಶ್ ಗೋಪಿ ಅವರು ತ್ರಿಶೂರ್ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಕೇಸರಿ ಪಕ್ಷದ ಸುರೇಶ್ ಗೋಪಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ “ತ್ರಿಶೂರ್ ನಂ ಎಡುಕ್ಕುವ (ತ್ರಿಶೂರ್ ಅನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ), ಎನಿಕ್ಕು ವಿಷ ತ್ರಿಶೂರ್ (ನನಗೆ ತ್ರಿಶೂರ್ ಬೇಕು)” ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರವನ್ನು ನಡೆಸಿದ್ದರು.


ಬಿಜೆಪಿಗೆ ಐತಿಹಾಸಿಕ ಗೆಲುವು

ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಸುರೇಶ್ ಗೋಪಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ನ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಮತ್ತು ಮಾಜಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಅವರನ್ನು 73,573 ಮತಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ದಾಖಲಿಸಿದರು.


ಯಾರು ಸುರೇಶ್ ಗೋಪಿ?

ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿರುವ ಸುರೇಶ್ ಗೋಪಿ ಮಲಯಾಳಂ ಚಿತ್ರರಂಗದ ಅಪ್ರತಿಮ ನಟರಲ್ಲಿ ಒಬ್ಬರು. ಇವರ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ.

ಕೊಲ್ಲಂನಲ್ಲಿ ಚಲನಚಿತ್ರ ವಿತರಕ ಗೋಪಿನಾಥನ್ ಪಿಳ್ಳೈ ಮತ್ತು ಅವರ ಪತ್ನಿ ಜ್ಞಾನಲಕ್ಷ್ಮಿ ಅವರ ಮೂವರು ಮಕ್ಕಳಲ್ಲಿ ಸುರೇಶ ಗೋಪಿ ಕೂಡ ಒಬ್ಬರು. ಪ್ರಾಣಿಶಾಸ್ತ್ರದಲ್ಲಿ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ನಟ, ಟಿವಿ ನಿರೂಪಕ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲ ತಮ್ಮ ವಿನಮ್ರ ಸ್ವಭಾವ ಮತ್ತು ಸಮಾಜ ಸೇವೆಗಾಗಿ ಗುರುತಿಸಿಕೊಂಡಿದ್ದಾರೆ.


ಬಹುಬೇಡಿಕೆಯ ನಟ

ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಸುರೇಶ್ ಗೋಪಿ, 1965ರಲ್ಲಿ ಓಡೈಲ್ ನಿನ್ನಲ್ಲಿ ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅನಂತರ ಅವರು 1986ರಲ್ಲಿ ನೀರಮುಲ್ಲಾ ರಾವುಕಲ್ ಚಿತ್ರಕ್ಕೆ ಪ್ರವೇಶ ಮಾಡಿದರು. 1992ರಲ್ಲಿ ತಲಸ್ತಾನಂ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿದರು. ಏಕಲವ್ಯನ್ ಚಿತ್ರದ ಮೂಲಕ ಅವರು ಚಿತ್ರರಂಗದ ಅದ್ಭುತ ತಾರೆಯಾಗಿ ಗುರುತಿಸಿಕೊಂಡರು.

ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಕಲಿಯಾಟಂನಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. 2015ರ ಬಳಿಕ ಚಿತ್ರರಂಗದಿಂದ ದೂರವಾದ ಅವರು 2020 ರಲ್ಲಿ ವರಣೆ ಅವಶ್ಯಮುಂದ್ ಚಿತ್ರದೊಂದಿಗೆ ಮತ್ತೆ ಬಣ್ಣ ಹಚ್ಚಿದರು.


ನಿರೂಪಕನಾಗಿಯೂ ಸೈ

2012ರಲ್ಲಿ ಸುರೇಶ್ ಗೋಪಿ ಅವರು ಕೌನ್ ಬನೇಗಾ ಕರೋಡ್ ಪತಿಯ ಮಲಯಾಳಂ ಆವೃತ್ತಿಯಾದ ನಿಂಗಲ್ಕ್ಕುಮ್ ಆಕಾಂ ಕೋಡೀಶ್ವರನ್ ಕಾರ್ಯಕ್ರಮದೊಂದಿಗೆ ಟಿವಿ ಶೋ ನಿರೂಪಣೆಗೆ ಇಳಿದರು. ಇದರಲ್ಲಿ ಅವರು ಲಕ್ಷಾಂತರ ಮಂದಿಯ ಹೃದಯವನ್ನು ಗೆದ್ದರು.

ವೈವಾಹಿಕ ಜೀವನ

ಸುರೇಶ್ ಗೋಪಿ ಅವರು ನಟಿ ಅರ್ಣಮುಲಾ ಪೊನ್ನಮ್ಮ ಅವರ ಮೊಮ್ಮಗಳು ರಾಧಿಕಾ ನಾಯರ್ ಅವರನ್ನು 1990 ರಲ್ಲಿ ವಿವಾಹವಾದರು. ಇವರಿಗೆ ಗೋಕುಲ್ ಸುರೇಶ್, ಭಾಗ್ಯ ಸುರೇಶ್, ಭವ್ನಿ ಸುರೇಶ್ ಮತ್ತು ಮಾಧವ್ ಸುರೇಶ್ ಎಂಬ ನಾಲ್ಕು ಮಕ್ಕಳಿದ್ದಾರೆ. ಗೋಕುಲ್ ಸುರೇಶ್ ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ನಟನೆಗೆ ಕಾಲಿಟ್ಟಿದ್ದಾರೆ.


ಬದುಕಿನಲ್ಲಿ ನಡೆದ ದುರಂತ

ಸುರೇಶ್ ಗೋಪಿ ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಅವರು ತಮ್ಮ ಮೊದಲ ಭೇಟಿಯಲ್ಲಿ ತಮ್ಮ ಪತ್ನಿ ರಾಧಿಕಾ ಅವರಿಗೆ ಇದನ್ನು ಹೇಳಿದ್ದರು. ರಾಧಿಕಾ ಅವರು ಮೊದಲು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೆ ಲಕ್ಷ್ಮಿ ಎಂದು ಹೆಸರಿಟ್ಟರು. 1992ರ ಜೂನ್ 6ರಂದು, ದಂಪತಿ ತಮ್ಮ ಒಂದೂವರೆ ವರ್ಷದ ಮಗಳೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿಂದ ಸುರೇಶ್ ತಮ್ಮ ಶೂಟಿಂಗ್‌ಗಾಗಿ ಕೊಚ್ಚಿಗೆ ಹೋದರೆ ರಾಧಿಕಾ ಮತ್ತು ಲಕ್ಷ್ಮಿ ಸುರೇಶ್ ಅವರ ಸಹೋದರನೊಂದಿಗೆ ತಮ್ಮ ಮನೆಗೆ ಮರಳಲು ಹೊರಟಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯಿತು, ಈ ಭೀಕರ ಅಪಘಾತದಲ್ಲಿ ಸುರೇಶ್ ಮತ್ತು ರಾಧಿಕಾ ತಮ್ಮ ಒಂದೂವರೆ ವರ್ಷದ ಮಗಳು ಲಕ್ಷ್ಮಿಯನ್ನು ಕಳೆದುಕೊಂಡರು. ಕೆಲವು ದಿನಗಳ ಕಾಲ ರಾಧಿಕಾ ಪ್ರಜ್ಞಾಹೀನರಾಗಿದ್ದರು. ಸುರೇಶ್ ಮತ್ತು ರಾಧಿಕಾ ಸದಾ ಲಕ್ಷ್ಮಿಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.


ರಾಜಕೀಯ ಜೀವನ

ಕಾಲೇಜಿನಲ್ಲಿದ್ದಾಗ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ಸಕ್ರಿಯ ಸದಸ್ಯರಾಗಿದ್ದಾಗ ಸುರೇಶ್ ಗೋಪಿ ರಾಜಕೀಯದಲ್ಲಿ ಆಸಕ್ತಿಯನ್ನು ಪ್ರಾರಂಭಿಸಿದರು. 2016ರ ಏಪ್ರಿಲ್ ನಲ್ಲಿ ಸುರೇಶ್ ಗೋಪಿ ಅವರು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. 2016ರ ಅಕ್ಟೋಬರ್‌ನಲ್ಲಿ ಅವರು ಬಿಜೆಪಿ ಸೇರಿದರು.

ಇದನ್ನೂ ಓದಿ: Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

2019ರ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಆದರೆ ಈ ಬಾರಿ ಮತ್ತೆ ತ್ರಿಶೂರ್‌ನಿಂದ ಕಣಕ್ಕೆ ಇಳಿದ ಅವರು ಭರ್ಜರಿ ಬಹುಮತದೊಂದಿಗೆ ಐತಿಹಾಸಿಕ ವಿಜಯ ದಾಖಲಿಸಿದರು.


ಸಮಾಜ ಸೇವೆ

ದತ್ತಿ ಕಾರ್ಯಗಳಿಂದಾಗಿ ಸುರೇಶ್ ಅವರು ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ನಿರಾಶ್ರಿತರಿಗೆ ಸೂರು ಕಲ್ಪಿಸುವುದರಿಂದ ಹಿಡಿದು, ಹಿಂದುಳಿದವರ ಸಂಪೂರ್ಣ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡುವವರೆಗೆ ಅವರ ಮಾನವೀಯ ಕಾರ್ಯಗಳು ಸಾಕಷ್ಟಿವೆ. ಇವರ ಸಮಾಜ ಸೇವೆಯ ಕುರಿತು ನಟ ಜಯರಾಮ್ ಹೇಳುವುದು ಹೀಗೆ.. ರಾಜಕಾರಣಿಗಳಾದ ಮೇಲೆ ಹಲವರು ಸಮಾಜ ಸೇವೆ ಮಾಡುತ್ತಾರೆ. ಆದರೆ ಸುರೇಶ್ ಗೋಪಿ ಇದಕ್ಕೆ ಅಪವಾದ. ರಾಜಕೀಯಕ್ಕೆ ಬರುವ ಮುನ್ನವೇ ಅವರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯತೊಡಗಿದರು. ಅದೂ ಪ್ರಚಾರವಿಲ್ಲದೆ. ಯಾರಾದರೂ ಕಷ್ಟವನ್ನು ಅವರ ಮುಂದೆ ಹೇಳಿಕೊಂಡರೆ ಸಾಕು ಅವರ ಕಣ್ಣುಗಳು ತೇವವಾಗುತ್ತವೆ ಎನ್ನುತ್ತಾರೆ ಅವರು.

Continue Reading

ಮಾಲಿವುಡ್

Parvathi Menon: ಸದ್ದಿಲ್ಲದೇ ಮದುವೆಯಾದ್ರಾ ʻಮಿಲನʼ ನಾಯಕಿ ಪಾರ್ವತಿ ಮೆನನ್?

Parvathi Menon: ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು. ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

VISTARANEWS.COM


on

Parvathi Menon secretly marry prashant murali
Koo

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

ಪಾರ್ವತಿ ಇನ್ನೂ ಮದುವೆಯಾಗಿಲ್ಲ. ಈ ನಡುವೆ ಪಾರ್ವತಿ ಮೆನನ್ ಗುಟ್ಟುಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಕಾರಣ ವೈರಲ್‌ ಆಗಿರುವ ಫೋಟೊ. ಆದರೆ ಸತ್ಯ ಸಂಗತಿ ಏನೆಂದರೆ ವೈರಲ್ ಆದ ಈ ಫೋಟೋಗಳು ಪಾರ್ವತಿ ಮೆನನ್ ಅವರ ಖಾಸಗಿ ಬದುಕಿನದ್ದಲ್ಲ ಬದಲಿಗೆ ಸಿನಿಮಾಗೆ ಸಂಬಂಧಿಸಿದ್ದು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಪಾರ್ವತಿ ಮೆನನ್ ”ಉಲ್ಲೋಜುಕ್ಕು” ಎಂಬ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಈ ಸಿನಿಮಾ ಪ್ರೋಮೊ ಈ ಮದುವೆ ಸೀನ್‌. ರೀಲ್‌ನಲ್ಲಿ ಆಗಷ್ಟೇ ಮದುವೆಯಾದ ಹಿನ್ನೆಲೆ ದೋಣಿಯಲ್ಲಿ ಕುಳಿತು ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ. ಹೀಗೆ ತೆಗೆಯಲಾದ ಈ ಫೋಟೋಗಳೇ ಇದೀಗ ವೈರಲ್ ಆಗಿವೆ.

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು.

Continue Reading

ಮಾಲಿವುಡ್

All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

All We Imagine As Light : ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ʻ ಆಲ್ ವಿ ಇಮ್ಯಾಜಿನ್ ಆಸ್ ಲೈಟ್‌ʼನಲ್ಲಿನ ಅಭಿನಯಕ್ಕಾಗಿ ಮಲಯಾಳಂ ನಟಿ ʻಕಣಿ ಕುಸರುತಿʼ (Kani Kusruti ) ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು.

VISTARANEWS.COM


on

All We Imagine As Light actor rejected audition call by The Kerala Story
Koo

ಬೆಂಗಳೂರು: ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪ್ರಶಸ್ತಿ ಕಾನ್ ಸಿನಿಮೋತ್ಸವದ ಎರಡನೇ ಅತ್ಯುತ್ತಮ ಪ್ರಶಸ್ತಿಯಾಗಿದೆ. ಪಾಯಲ್ ಕಪಾಡಿಯಾ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ʻ ಆಲ್ ವಿ ಇಮ್ಯಾಜಿನ್ ಆಸ್ ಲೈಟ್‌ʼನಲ್ಲಿನ ಅಭಿನಯಕ್ಕಾಗಿ ಮಲಯಾಳಂ ನಟಿ ʻಕಣಿ ಕುಸರುತಿʼ (Kani Kusruti ) ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು. ಕಣಿ ಕುಸರುತಿ ನೀಡಿದ ಸಂದರ್ಶನದಲ್ಲಿ, ʻʻಕಡಿಮೆ ಸಿನಿಮಾಗಳು ನನಗೆ ಆಫರ್‌ ಬಂದಿದ್ದವು. ಹಾಗೇ ನಿರ್ದೇಶಕ ಸುದೀಪ್ತೋ ಸೇನ್ ಅವರ ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ಕರೆ ಬಂದಿತ್ತು. ಅದನ್ನು ಕೂಡ ರಿಜೆಕ್ಟ್‌ ಮಾಡಿದ್ದೆʼʼಎಂದು ಹೇಳಿಕೊಂಡಿದ್ದಾರೆ.

ನಟಿ ಮಾತನಾಡಿ ʻʻನನಗೆ ಬಂದ ಸಿನಿಮಾಗಳನ್ನು ಮಾತ್ರ ನಾನು ಮಾಡಬಲ್ಲೆ. ಸಜಿನ್ ಬಾಬು ಅವರ 2019 ರ ಬಿಡುಗಡೆಯಾದ ʻಬಿರಿಯಾನಿʼ ಸಿನಿಮಾ ನಟನೆಗೆ ಕೇರಳ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದೆ. ಆದರೆ ನನಗೆ ಹೊಂದಿಕೆಯಾಗದ ಚಿತ್ರಗಳನ್ನು ಮಾಡದಿರಲು ಪ್ರಯತ್ನಿಸುತ್ತೇನೆ. ಉದಾಹರಣೆಗೆ ಕಳೆದ ವರ್ಷ ಬ್ಲಾಕ್‌ ಬಸ್ಟರ್‌ ಹಿಟ್‌ ಆದ ʻದಿ ಕೇರಳ ಸ್ಟೋರಿʼ ಸಿನಿಮಾ. ನಿರ್ದೇಶಕ ಸುದೀಪ್ತೋ ಸೇನ್ ಅವರು ಆಡಿಷನ್‌ಗೆ ಕರೆದಿದ್ದರು. ಆದರೆ ನಾನು ರಿಜೆಕ್ಟ್‌ ಮಾಡಿದ್ದೆʼʼ ಎಂದು ಬಹಿರಂಗಪಡಿಸಿದರು.

ಈ ಹಿಂದೆ ʻಬಿರಿಯಾನಿʼ ಸಿನಿಮಾದಲ್ಲಿ ಕಣಿ ಕುಸರುತಿ ಸಾಕಷ್ಟು ವಿವಾದಗಳನ್ನು ಎದುರಿಸಿದ್ದರು. ಈ ಬಗ್ಗೆಯೂ ನಟಿ ಹೇಳಿಕೊಂಡಿದ್ದಾರೆ. ʻʻಬಿರಿಯಾನಿ ಸಿನಿಮಾ ವೇಳೆ ನಾನು ಆ ಸ್ಕ್ರಿಪ್ಟ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ನಾನು ನಿರ್ದೇಶಕ ಸಜಿನ್‌ಗೆ ಹೇಳಿದ್ದೆ. ಸಜಿನ್ ಹಿಂದುಳಿದ ಮುಸ್ಲಿಂ ಸಮುದಾಯದಿಂದ ಬಂದವರು. ಅವರು ಅವರ ಸ್ಥಾನದಲ್ಲಿಯೇ ಯೋಚಿಸುತ್ತಿದ್ದರು. ಅವರ ರಾಜಕೀಯವನ್ನು ಮಾತ್ರ ಮಾತನಾಡುತ್ತಿದ್ದರುʼʼಎಂದರು.

ಇದನ್ನೂ ಓದಿ: Kendall Jenner: ತಿಂಗಳಲ್ಲಿ ಎರಡು ಬಾರಿ ಟಾಪ್‌ಲೆಸ್‌ ಆದ ಹಾಲಿವುಡ್‌ ಬ್ಯೂಟಿ ಕೆಂಡಲ್‌ ಜೆನ್ನರ್‌!

ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ( Grand Prix At Cannes) ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ .77ನೇ ಆವೃತ್ತಿಯ ಕಾನ್ ಫಿಲ್ಮ್ಸ್‌ ಫೆಸ್ಟಿವಲ್‌ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿತ್ತು. ಸಿನಿಮಾ ಕಾನ್​ನಲ್ಲಿ ಪ್ರದರ್ಶನವಾದಾಗ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿತ್ತು.

ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವು ಮಲಯಾಳಂ-ಹಿಂದಿ ಸಿನಿಮಾ ಆಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುವ ಇಬ್ಬರು ರೂಮ್‌ಮೇಟ್‌ಗಳ ಕಥೆ ಇದರಲ್ಲಿದೆ. ಚಿತ್ರವು ಮೂರು ವಿಭಿನ್ನ ಮಹಿಳೆಯರ ನಡುವಿನ ಸ್ನೇಹದ ಕತೆ ಕೂಡ ಇದೆ. ಕನಿ ಕುಸರುತಿ ಮುಂದೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನಾಗೇಂದ್ರ ಅವರ ಮಲಯಾಳಂ ಸಿರೀಸ್‌ ಹನಿಮೂನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading
Advertisement
VHP leader murder
ದೇಶ3 mins ago

VHP leader murder: VHP ಮುಖಂಡನ ಬರ್ಬರ ಹತ್ಯೆ; ಹಂತಕರ ಪತ್ತೆಗಾಗಿ NIA 10ಲಕ್ಷ ರೂ. ಬಹುಮಾನ ಘೋಷಣೆ

Vinay Gowda acted darshan devil Movie and says Futture cant be predict
ಸ್ಯಾಂಡಲ್ ವುಡ್20 mins ago

Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

Mass Shooting
ವಿದೇಶ39 mins ago

Mass Shooting: ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ; ನಾಲ್ವರನ್ನು ಕೊಂದು ಆತ್ಮಹತ್ಯೆಗೆ ಶರಣಾದ ದುಷ್ಕರ್ಮಿ

Inzamam Ul Haq
ಕ್ರೀಡೆ46 mins ago

Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

rain news wall collapse 4 death
ಕ್ರೈಂ47 mins ago

Rain News: ಭಾರಿ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಸಾವು

Sanjith Hegde Nange Allava song Out
ಸ್ಯಾಂಡಲ್ ವುಡ್1 hour ago

Sanjith Hegde: ಸಂಜನಾ ದಾಸ್‌ಗೆ ʻನೀ ನಂಗೆ ಅಲ್ಲವಾʼ ಎಂದ ಸಂಜಿತ್ ಹೆಗಡೆ!

suraj revanna case 1
ಕ್ರೈಂ1 hour ago

Suraj Revanna Case: ಅಮಾವಾಸ್ಯೆ ದಿನ ಸೂರಜ್‌ ಬಳೆ ತೊಡ್ತಾನೆ, ಸೀರೆ ಉಡ್ತಾನೆ! ಬಯಲು ಮಾಡಿದ ಸಂತ್ರಸ್ತ

Lok Sabha Speaker Election
ದೇಶ1 hour ago

Lok Sabha Speaker Election: ಲೋಕಸಭೆ ಸ್ಪೀಕರ್ ಚುನಾವಣೆ ಇಂದು; ಆಡಳಿತ ಪಕ್ಷ-ಪ್ರತಿಪಕ್ಷ ಬಲಾಬಲ ಹೀಗಿದೆ

Albania vs Spain
ಕ್ರೀಡೆ1 hour ago

Albania vs Spain: ಯುರೋ ಕಪ್​ನಲ್ಲಿ ನಾಕೌಟ್‌ ಹಂತಕ್ಕೇರಿದ ಸ್ಪೇನ್‌

Parliament Session 2024
ದೇಶ1 hour ago

Parliament Session 2024: ಇಂದು ಐತಿಹಾಸಿಕ ಲೋಕಸಭಾ ಸ್ಪೀಕರ್‌ ಚುನಾವಣೆ; ಕ್ಷಣ ಕ್ಷಣದ ಮಾಹಿತಿಗಾಗಿ Live ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌