ಮಾಲಿವುಡ್
Vaashi | ಕೋರ್ಟ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ಟೋವಿನೋ ಥಾಮಸ್ ಹಾಗೂ ಕೀರ್ತಿ ಸುರೇಶ್
Vaashi ಮೂಲಕ ಟೋವಿನೋ ಥಾಮಸ್ ಹಾಗೂ ಕೀರ್ತಿ ಸುರೇಶ್ ಕೋರ್ಟ್‌ನಲ್ಲಿ ಕಥೆ ಹೇಳಲು ಹೊರಟಿದ್ದಾರೆ. ಚಿತ್ರದ ಟ್ರೈಲರ್ ಹೊರ ಬಂದಿದ್ದು, ಚಿತ್ರರಸಿಕರು ಸಖತ್ ರೆಸ್ಪಾನ್ಸ್ ತೋರುತ್ತಿದ್ದಾರೆ.
ಬೆಂಗಳೂರು : ಟೋವಿನೋ ಥಾಮಸ್ (Tovino Thomas) ಹಾಗೂ ಕೀರ್ತಿ ಸುರೇಶ್ ( Keerthy Suresh) ಅಭಿನಯದ ʼವಾಶಿʼ (‘Vaashi’) ಚಿತ್ರದ ಟ್ರೈಲರ್ ಬಿಡುಗೊಡೆಗೊಂಡಿದೆ. ವಾಶಿ ಮಲಯಾಳಂ ಚಿತ್ರವಾಗಿದ್ದು, ಚಿತ್ರದ ಟ್ರೈಲರ್ ಮೂಲಕ ನಾಯಕ ಮತ್ತು ನಾಯಕಿಯ ಪಾತ್ರದ ಹೆಸರನ್ನು ಚಿತ್ರತಂಡ ರಿವೀಲ್ ಮಾಡಿದೆ. ಟೋವಿನೋ ಥಾಮಸ್, ಎಬಿನ್ ಮ್ಯಾಥ್ಯೂ ಆಗಿ ಕಾಣಿಸಿಕೊಳ್ಳುತ್ತಿದ್ದರೆ, ಮಾಧವಿ ಮೋಹನ್ ಆಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ.
ಇಬ್ಬರೂ ವಕೀಲರಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತಾರೆ. ಆದರೆ ಒಂದು ಪ್ರಕರಣ ಇವರಿಬ್ಬರನ್ನು ದೂರ ಮಾಡುತ್ತದೆ. ಪ್ರಕರಣದಲ್ಲಿ ಗೆಲುವು ಮತ್ತು ಅವರ ವೃತ್ತಿಯನ್ನು ಒಳಗೊಂಡಂತೆ ಅನೇಕ ವಿಷಯಗಳನ್ನು ಸಿನಿಮಾ ಒಳಗೊಂಡಿದೆ. ಶೀರ್ಷಿಕೆಯೇ ಹೇಳುವಂತೆ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಭೇಟಿ ನೀಡಲೇ ಬೇಕು.
ಇದನ್ನೂ ಓದಿ | Keerthy Suresh : ಸೀರೆಯಲ್ಲಿ ಸಕತ್ ಹಾಟ್ ಲುಕ್, ಇದೀಗ ಸಿಕ್ಕಾಪಟ್ಟೆ ವೈರಲ್
ಟ್ರೈಲರ್‌ನಲ್ಲಿ ಸಖತ್ ಕುತೂಹಲವನ್ನು ಚಿತ್ರತಂಡ ಸೃಷ್ಟಿ ಮಾಡಿದ್ದು, ಜನರು ಸಿನಿಮಾ ರಿಲೀಸ್ ಆಗಲು ಕಾಯುತ್ತಿದ್ದಾರೆ. ವಿಡಿಯೋ ಶೇರಿಂಗ್ ಪ್ಲಾಟ್ ಫಾರ್ಮ್‌ನಲ್ಲಿ ಇದೀಗ ಟ್ರೈಲರ್ ಟ್ರೆಂಡಿಂಗ್ ಆಗಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ಚಿತ್ರತಂಡ ಟೋವಿನೋ ಥಾಮಸ್ ಹಾಗೂ ಕೀರ್ತಿ ಸುರೇಶ್ ಅವರ ಪ್ರತ್ಯೇಕ ಮೇಕಿಂಗ್ ವಿಡಿಯೋ ಕೂಡ ರಿವೀಲ್ ಮಾಡಿದ್ದು, ತಮ್ಮ ಇನ್ಸ್ಟಾ ಮೂಲಕ ಕೀರ್ತಿ ಸುರೇಶ್ ಹಾಗೂ ಟೋವಿನೋ ಥಾಮಸ್ ಶೇರ್ ಮಾಡಿಕೊಂಡಿದ್ದಾರೆ.
ವಿಷ್ಣು ಜಿ ರಾಘವ್ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೋರ್ಟ್ ರೂಮ್ ಡ್ರಾಮಾ ಆಗಿರುವ ವಾಶಿ ಸಿನಿಮಾದ ಟ್ರೈಲರ್ ಹೆಚ್ಚಿನ ವ್ಯೂಸ್ ಪಡೆದು ಜನರ ಮನರಂಜಿಸುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಟೋವಿನೋ ಥಾಮಸ್ ಅವರ ಸೂಪರ್ ಹೀರೋ ಚಲನಚಿತ್ರ ʼಮಿನ್ನಲ್ ಮುರುಳಿʼ ಮೆಚ್ಚುಗೆ ಗಳಿಸಿತ್ತು.
ನಟಿ ಕೀರ್ತಿ ಸುರೇಶ್ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ಮತ್ತು ಬಹು ಬೇಡಿಕೆಯಲ್ಲಿ ಇದ್ದಾರೆ. ನೀಲ್ ಡಿಕುನ್ಹಾ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದು, ಅರ್ಜುನ್ ಬೆನ್ ಸಂಕಲನ ಮಾಡಿದ್ದಾರೆ. ಕೈಲಾಸ್ ಮೆನನ್ ಸಂಗೀತ ಸಂಯೋಜನೆ ಮಾಡಿದ್ದು, ವಿನಾಯಕ್ ಶಶಿಕುಮಾರ್ ಸಾಹಿತ್ಯ ಬರೆದಿದ್ದಾರೆ. ಸಾಬು ಮೋಹನ್ ಕಲಾ ನಿರ್ದೇಶಕರಾಗಿದ್ದು, ದಿವ್ಯಾ ಜಾರ್ಜ್ ಚಿತ್ರದ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಚಿತ್ರ ಜೂನ್ 17ರಂದು ತೆರೆಗೆ ಬರಲಿದ್ದು, ಜನರನ್ನು ಹೇಗೆ ರಂಜಿಸಲಿದೆ ಎನ್ನುವುದು ಕಾದು ನೋಡಬೇಕಿದೆ.
ಇದನ್ನೂ ಓದಿ | ಆಶಿಕ್ ಬಾಬು ಹೊಸ ಚಿತ್ರ Neelavelicham ಫಸ್ಟ್ ಲುಕ್ ರಿಲೀಸ್, ಇದು ಬಶೀರ್ ಹಾರರ್!
South Cinema
ARM Teaser: ಮಲಯಾಳಿ ಹಿರೋನ ಪ್ಯಾನ್ ಇಂಡಿಯಾ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ನಟ ರಕ್ಷಿತ್ ಶೆಟ್ಟಿ
ಕನ್ನಡ ಟೀಸರ್ ಬಿಡುಗಡೆ ಮಾಡಿದ ರಕ್ಷಿತ್ ಶೆಟ್ಟಿ ‘ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ತುಂಬ ಖುಷಿಯಾಯಿತು. ಈ ಸಿನಿಮಾದಲ್ಲಿ ಟೊವಿನೋ ಥಾಮಸ್ ಅವರ ನಟನೆಯನ್ನು ನೋಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
‘ಮಿನ್ನಲ್ ಮುರಳಿ’ ಎಂಬ ಮಲಯಾಳಂ ಭಾಷೆಯ, ಸೂಪರ್ ಹೀರೋ ಚಲನಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ನಟ ಟೊವಿನೋ ಥಾಮಸ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ‘ (Ajayante Randam Moshanam- ARM)ನ ಟೀಸರ್ ಇಂದು ಬಿಡುಗಡೆಯಾಗಿದೆ. ಸಿನಿಮಾದ ಕನ್ನಡ ಟೀಸರ್ನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರು ರಿಲೀಸ್ ಮಾಡಿದ್ದಾರೆ. ಟೊವಿನೋ ಥಾಮಸ್ ಅವರ ಸಿನಿ ಬದುಕಿನ ಅತ್ಯಂತ ಮಹತ್ವದ ಪ್ರಾಜೆಕ್ಟ್ ಎನ್ನಿಸಿರುವ ‘ಅಜಯಂತೆ ರಂದಂ ಮೋಷನಂ’ ಸಿನಿಮಾದ ಟೀಸರ್ನ್ನು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಹಿಂದಿಯಲ್ಲಿ ಹೃತಿಕ್ ರೋಷನ್, ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ಲೋಕೇಶ್ ಕನಕರಾಜ್ ಮತ್ತು ಆರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಸೋಷಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಿದ್ದಾರೆ.
ಕನ್ನಡ ಟೀಸರ್ ಬಿಡುಗಡೆ ಮಾಡಿದ ರಕ್ಷಿತ್ ಶೆಟ್ಟಿ ‘ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ತುಂಬ ಖುಷಿಯಾಯಿತು. ಈ ಸಿನಿಮಾದಲ್ಲಿ ಟೊವಿನೋ ಥಾಮಸ್ ಅವರ ನಟನೆಯನ್ನು ನೋಡಲು ಉತ್ಸುಕನಾಗಿದ್ದೇನೆ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ. ಹಾಗೇ, ಟೀಸರ್ನ ಯೂಟ್ಯೂಬ್ ಲಿಂಕ್ ಅಡ್ರೆಸ್ ಕೊಟ್ಟಿದ್ದಾರೆ. ಹಿಂದಿಯಲ್ಲಿ ಬಿಡುಗಡೆ ಮಾಡಿದ ಹೃತಿಕ್ ರೋಷನ್ ಅವರು ‘ARM ಸಿನಿಮಾದ ಹಿಂದಿ ಟೀಸರ್ ಬಿಡುಗಡೆ ಮಾಡಿದ್ದು ಖುಷಿಯಾಯಿತು. ಮಲಯಾಳಂ ಸಿನಿಮಾ ಇಂಡಸ್ಟ್ರಿಯ ತಾರಾಗಣ ಸೇರಿಕೊಂಡು ಒಂದು ಮಹಾತ್ವಾಕಾಂಕ್ಷಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ARM ಕನ್ನಡ ಟೀಸರ್ ಇಲ್ಲಿದೆ
ಟೊವಿನೋ ಥಾಮಸ್ ಅವರು ಅಜಯಂತೆ ರಂದಂ ಮೋಷನಂ ಸಿನಿಮಾದಲ್ಲಿ ಮಾಸ್ ಅವತಾರ ತಾಳಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಘಟನೆ ಸುತ್ತ ಇಡೀ ಟೀಸರ್ ಸಾಗುತ್ತದೆ. ಈ ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ.
ಟೊವಿನೋ ಥಾಮಸ್ ಜೋಡಿಯಾಗಿ ಕೃತಿ ನಟಿಸುತ್ತಿದ್ದು, ಉಳಿದಂತೆ ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ.
South Cinema
Actress Abhirami: 14 ವರ್ಷದಿಂದ ಮಕ್ಕಳಾಗದ್ದಕ್ಕೆ ಹೊಸ ನಿರ್ಧಾರ ಕೈಗೊಂಡ ʻರಕ್ತ ಕಣ್ಣೀರುʼ ನಟಿ; ಅದೇನು?
Actress Abhirami: 14 ವರ್ಷ ಕಳೆದರೂ ಮಗು ಆಗದೇ ಇರುವುದಕ್ಕೆ ತಮ್ಮ ಜೀವನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ನಟಿ ಅಭಿರಾಮಿ, ರಾಹುಲ್ ಪವನನ್ ಎಂಬುವವರ ಕೈ ಹಿಡಿದಿದ್ದರು.
ಬೆಂಗಳೂರು: ರಕ್ತ ಕಣ್ಣೀರು, ಲಾಲಿ ಹಾಡು ಸಿನಿಮಾದಲ್ಲಿ ನಟಿಸಿರುವ ಬಹುಭಾಷಾ ನಟಿ ಅಭಿರಾಮಿ (Actress Abhirami) ಅವರು ಇದೀಗ ತಾಯಿಯಾಗಿದ್ದಾರೆ. 14 ವರ್ಷ ಕಳೆದರೂ ಅವರಿಗೆ ಮಕ್ಕಳಾಗರಲಿಲ್ಲ. ಹಾಗಾಗಿ, ಅವರೀಗ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಈ ವಿಷಯವನ್ನು ನಟಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬಹರಂಗಪಡಿಸಿದ್ದಾರೆ.
ನಟಿ ಅಭಿರಾಮಿ ‘ವನವಿಲ್’ (2001) ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ಮಿಡಲ್ ಕ್ಲಾಸ್ ಮಾಧವನ್’, ‘ಸಮುತ್ರಂ’ ಮತ್ತು ‘ಚಾರ್ಲಿ ಚಾಪ್ಲಿನ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಟಾಪ್ ಹೀರೊಗಳೊಂದಿಗೆ ನಟಿಸಿದರು. ಕಮಲ್ ಹಾಸನ್ ಅವರ ‘ವಿರುಮಾಂಡಿ’ ಸಿನಿಮಾದಲ್ಲಿ ಅವರ ಪಾತ್ರ ನೆನಪುಳಿವಂತದ್ದು.
ನಟಿ ಅಭಿರಾಮಿ, ರಾಹುಲ್ ಪವನನ್ ಎಂಬುವವರ ಕೈ ಹಿಡಿದಿದ್ದರು. ರಾಹುಲ್ ಮಲಯಾಳಂನ ಖ್ಯಾತ ಸಾಹಿತಿ ಪುತನ್ ವಿಟಿಲ್ ನಾರಾಯಣನ್ ನಾಯರ್ ಮೊಮ್ಮಗ. ನಟಿ ಅಭಿರಾಮಿ- ರಾಹುಲ್ ದಂಪತಿ ಕಳೆದ ವರ್ಷ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳು ಆಗಿರಲಿಲ್ಲ. ಹಾಗಾಗಿ ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ .
ಇದೀಗ ನಟಿ ಇನ್‌ಸ್ಟಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ “”ಆತ್ಮೀಯ ಸ್ನೇಹಿತರೇ, ರಾಹುಲ್ ಮತ್ತು ನಾನು ಹೆಣ್ಣು ಮಗುವಿಗೆ ಪೋಷಕರಾಗಿದ್ದೇವೆ. ನಾವು ಕಳೆದ ವರ್ಷ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡೆವು. ನಾನು ಈ ವರ್ಷ ತಾಯಿಯಾಗಿ ತಾಯಂದಿರ ದಿನವನ್ನು ಆಚರಿಸಲು ಆಶೀರ್ವದಿಸಿದ್ದೇನೆ! ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Mother’s Day: ಮೊದಲ ತಾಯಂದಿರ ದಿನವನ್ನು ಯಾವೆಲ್ಲ ಸೆಲೆಬ್ರಿಟಿಗಳು ಆಚರಿಸಿಕೊಳ್ಳಲಿದ್ದಾರೆ?
ಅಭಿರಾಮಿ ಅವರು ತಮ್ಮ ಪುಟ್ಟ ರಾಜಕುಮಾರಿ ಮತ್ತು ರಾಹುಲ್ ಜತೆಗಿನ ಫೋಟೊಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಅವರ ಅಭಿಮಾನಿಗಳು ದಂಪತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ‘ಲಾಲಿಹಾಡು’ ಖ್ಯಾತಿಯ ಅಭಿರಾಮಿ ಕೊನೆಯದಾಗಿ ಕನ್ನಡದಲ್ಲಿ ಸುದೀಪ್ ನಟನೆಯ ‘ಕೋಟಿಗೊಬ್ಬ-3’ ಚಿತ್ರದಲ್ಲಿ ನಟಿಸಿದ್ದರು.
South Cinema
The Kerala Story : 100 ಕೋಟಿ ರೂ. ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ: ಭರ್ಜರಿ ಪ್ರದರ್ಶನ!
The Kerala Story: ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಭಾರೀ ವಿರೋಧದ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಬೆಂಗಳೂರು: `ದಿ ಕೇರಳ ಸ್ಟೋರಿ‘ (The Kerala Story) ಈಗ 100 ಕೋಟಿ ರೂಪಾಯಿ ಗಳಿಸಿದೆ. ಒಂದು ವಾರ ಭರ್ಜರಿಯಾಗಿ ಪ್ರದರ್ಶನಗೊಂಡು ಮುನ್ನುಗ್ಗುತ್ತಿದೆ. ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಭಾರೀ ವಿರೋಧದ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸುದೀಪ್ತೋ ಸೇನ್ ನಿರ್ದೇಶಿಸಿದ ಮತ್ತು ವಿಪುಲ್ ಶಾ ನಿರ್ಮಿಸಿದ ಈ ಚಲನಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ.
ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ/ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ.
2ನೇ ದಿನ: 11.22 ಕೋಟಿ ರೂ., 3ನೇ ದಿನ: 16.40 ಕೋಟಿ ರೂ. 4ನೇ ದಿನ: 10.07 ಕೋಟಿ ರೂ. 5ನೇ ದಿನ: 11.14 ಕೋಟಿ ರೂ. 6ನೇ ದಿನ: 12 ಕೋಟಿ ರೂ. 7ನೇ ದಿನ: 12.50 ಕೋಟಿ ರೂ. 8ನೇ ದಿನ: 12.23 ಕೋಟಿ ರೂ. ಗಳಿಕೆ ಕಂಡಿದೆ. ಯಶಸ್ವಿಯಾಗಿ 8 ದಿನಗಳ ಕಾಲ ಪ್ರದರ್ಶನಗೊಂಡ ‘ದಿ ಕೇರಳ ಸ್ಟೋರಿ’ ಸಿನಿಮಾ ಒಟ್ಟು 93.37 ಕೋಟಿ ರೂಪಾಯಿ ಗಳಿಸಿದೆ.
ಒಟಿಟಿಯಲ್ಲಿ ಸಿನಿಮಾ ಯಾವಾಗ?
ಇದೀಗ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಚರ್ಚೆ ಶುರುವಾಗಿದೆ. ಈಗಾಗಲೇ ಭಾರೀ ಮೊತ್ತಕ್ಕೆ ‘ದಿ ಕೇರಳ ಸ್ಟೋರಿ’ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗುತ್ತಿದೆ. ಜೀ5 ಸಂಸ್ಥೆ ‘ದಿ ಕೇರಳ ಸ್ಟೋರಿ’ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎಂದು ವರದಿಯಾಗಿದೆ. ಸಿನಿಮಾ ಇಷ್ಟೆಲ್ಲ ವಿವಾದ ಸೃಷ್ಟಿಸಿರುವುದು, ಶೋಗಳು ಕ್ಯಾನ್ಸಲ್ ಆಗುತ್ತಿರುವುದು ನೋಡಿದರೆ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರ ಸ್ಮಾಲ್ ಸ್ಕ್ರೀನ್‌ಗೆ ಬರಲಿದೆ ಎನ್ನಲಾಗಿದೆ. ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಒಟಿಟಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುತ್ತಾರೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿದೆ.
ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ (The Kerala Story Ban in West Bengal). ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ರದ್ದುಗೊಳಿಸುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಘೋಷಣೆ ಮಾಡಿದ್ದಾರೆ. ಮಾತ್ರವಲ್ಲದೆ, ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ, ತಮಿಳುನಾಡಿನ ಕೆಲವು ಮಲ್ಟಿಪ್ಲೆಕ್ಸ್‌ಗಳು ಕೇರಳ ಸ್ಟೋರಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದ್ದಾರೆ. ಇದರ ನಡುವೆಯೂ ಭಾರಿ ಕಲೆಕ್ಷನ್‌ನತ್ತ ಸಿನಿಮಾ ಸಾಗುತ್ತಿದೆ.
ಇದನ್ನೂ ಓದಿ: The Kerala Story: ಮಗಳೊಂದಿಗೆ ʻದಿ ಕೇರಳ ಸ್ಟೋರಿ ಸಿನಿಮಾ ನೋಡಿʼ; ಅಸ್ಸಾಂ ಮುಖ್ಯಮಂತ್ರಿ
ತರಣ್ ಆದರ್ಶ್ ಟ್ವೀಟ್
ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್ಗಳಿಗೆ, ಸುಪ್ರೀಂಕೋರ್ಟ್ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಸಿನಿಮಾ ಬಿಡುಗಡೆಯಾಗಿತ್ತು.
South Cinema
The Kerala Story: ಮಗಳೊಂದಿಗೆ ʻದಿ ಕೇರಳ ಸ್ಟೋರಿ ಸಿನಿಮಾ ನೋಡಿʼ; ಅಸ್ಸಾಂ ಮುಖ್ಯಮಂತ್ರಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೇ 11ರಂದು ಗುವಾಹಟಿಯಲ್ಲಿ ತಮ್ಮ ಕುಟುಂಬ ಮತ್ತು ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು (The Kerala Story) ವೀಕ್ಷಿಸಿದರು.
ಬೆಂಗಳೂರು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೇ 11ರಂದು ಗುವಾಹಟಿಯಲ್ಲಿ ತಮ್ಮ ಕುಟುಂಬ ಮತ್ತು ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು (The Kerala Story) ವೀಕ್ಷಿಸಿದರು. ʻʻಈ ಸಿನಿಮಾವನ್ನು ನಿಷೇಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಈ ಸಿನಿಮಾ ಯಾವುದೇ ಸಮುದಾಯದ ವಿರುದ್ಧವಿಲ್ಲ. ಆದರೆ ಭಯೋತ್ಪಾದನೆಯ ವಿರುದ್ಧವಾಗಿದೆʼʼ ಎಂದು ಅವರು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸಿ ಸುದೀಪ್ತೋ ಸೇನ್-ನಿರ್ದೇಶನದ ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿರುವುದನ್ನು ಉಲ್ಲೇಖಿಸಿ ಹಿಮಂತ ಬಿಸ್ವಾ ಶರ್ಮಾ ಈ ಹೇಳಿಕೆಯನ್ನು ನೀಡಿದ್ದಾರೆ.ʻʻ ದಿ ಕೇರಳ ಸ್ಟೋರಿ ಮುಸ್ಲಿಂ ಸಮುದಾಯದವರೂ ಸೇರಿದಂತೆ ಮುಗ್ಧ ಹುಡುಗಿಯರ ವಿರುದ್ಧ ನಡೆಸಲಾದ ಷಡ್ಯಂತ್ರವನ್ನು ತೋರಿಸುತ್ತದೆʼʼ ಎಂದು ಶರ್ಮಾ ಹೇಳಿದ್ದಾರೆ. ʻʻಬಂಗಾಳ ಸರ್ಕಾರದಲ್ಲಿರುವವರು ಚಿತ್ರವನ್ನು ನಿಷೇಧಿಸುವ ಮೊದಲು ಈ ಸಿನಿಮಾ ನೋಡಬೇಕಿತ್ತುʼʼ ಎಂದು ಶರ್ಮಾ ಹೇಳಿದರು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಚಿತ್ರಕ್ಕೆ ತೆರಿಗೆ ಮುಕ್ತ ಎಂದು ಘೋಷಿಸಿವೆ.
ಹಿಮಾಂತ ಬಿಸ್ವಾ ಶರ್ಮಾ ಅವರು ತಮ್ಮ ಕುಟುಂಬದೊಂದಿಗೆ, ವಿಶೇಷವಾಗಿ ನಿಮ್ಮ ಮಗಳೊಂದಿಗೆ ಈ ಚಿತ್ರವನ್ನು ವೀಕ್ಷಿಸಿ ಎಂದು ಜನರಿಗೆ ಮನವಿ ಮಾಡಿದರು. ಮಕ್ಕಳ ಮೇಲೆ ನಿಗಾ ಇಡಬೇಕು ಮತ್ತು ಯಾರೊಂದಿಗೆ ಸ್ನೇಹ ಬೆಳೆಸಬೇಕು ಎಂಬುದು ಅರಿವು ಮಕ್ಕಳಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಪೋಷಕರನ್ನು ಒತ್ತಾಯಿಸಿದರು.
ಸಿನಿಮಾ ಬಿಡುಗಡೆಗೂ ಮುನ್ನವೇ ಅನೇಕರು ವಿವಿಧ ಹೈಕೋರ್ಟ್, ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಫಲಪ್ರದ ವಾಗಿರಲಿಲ್ಲ. ಆದರೆ ದೇಶಕ್ಕೆ ಒಂದು ದಾರಿಯಾದರೆ ಪಶ್ಚಿಮ ಬಂಗಾಳಕ್ಕೇ ಮತ್ತೊಂದು ದಾರಿ ಎಂಬಂತೆ ವರ್ತಿಸುವ ಮಮತಾ ಬ್ಯಾನರ್ಜಿ ಈ ವಿಚಾರದಲ್ಲೂ ಅದನ್ನೇ ಮಾಡಿದ್ದಾರೆ. ಚಿತ್ರ ಬಿಡುಗಡೆಯಾದ ಮೂರು ದಿನಗಳ ಬಳಿಕ ಅದರ ಪ್ರದರ್ಶನವನ್ನು ಪಶ್ಚಿಮ ಬಂಗಾಳದಲ್ಲಿ ಬ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: The Kerala Story : ಯಾವ ಒಟಿಟಿಯಲ್ಲಿ ಪ್ರಸಾರವಾಗಲಿದೆ `ದಿ ಕೇರಳ ಸ್ಟೋರಿ’?
ಚಿತ್ರವನ್ನು ಭಾರತೀಯ ಜನತಾ ಪಕ್ಷ ಮತ್ತು ಇತರ ಬಲಪಂಥೀಯ ಸಂಘಟನೆಗಳು ಹೊಗಳಿವೆ. ಸುದೀಪ್ತೋ ಸೇನ್ ನಿರ್ದೇಶಿಸಿದ ಮತ್ತು ವಿಪುಲ್ ಶಾ ನಿರ್ಮಿಸಿದ ಈ ಚಲನಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ 56 ಕೋಟಿ ರೂ. ಗಳಿಕೆ ಮಾಡಿದೆ. ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ/ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ.
-
ಕರ್ನಾಟಕ20 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ15 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ11 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ16 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ಕರ್ನಾಟಕ8 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ದೇಶ19 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ9 hours ago
Free Bus: ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕಿತು ಅನುಮೋದನೆ; ಏಳು ಕಂಡೀಷನ್ನೊಂದಿಗೆ ಚಾಲನೆ!