Actor Mohanlal: ಮಲಯಾಳಂ ನಟ ಮೋಹನ್‌ಲಾಲ್ ಆಸ್ಪತ್ರೆಗೆ ದಾಖಲು  - Vistara News

ಮಾಲಿವುಡ್

Actor Mohanlal: ಮಲಯಾಳಂ ನಟ ಮೋಹನ್‌ಲಾಲ್ ಆಸ್ಪತ್ರೆಗೆ ದಾಖಲು 

Actor Mohanlal: ಐದು ದಿನಗಳವರೆಗೆ ವಿಶ್ರಾಂತಿಗೆ ತಿಳಿಸಲಾಗಿದೆ. ಸಾರ್ವಜನಿಕ ಭೇಟಿ ತಪ್ಪಿಸಲು ಮತ್ತು ಸೂಚಿಸಲಾದ ಔಷಧಿ ಸೂಚನೆ ಅನುಸರಿಸಲು ಸಲಹೆ ನೀಡಲಾಗಿದೆ. ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಹಂಚಿಕೊಂಡಿದ್ದಾರೆ.

VISTARANEWS.COM


on

Actor Mohanlal hospitalised due to breathing issues
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಿರಿಯ ನಟ ಮೋಹನ್‌ಲಾಲ್ (Actor Mohanlal) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಆರೋಗ್ಯ ತೊಂದರೆ ಕಾರಣ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ಶ್ವಾಸಕೋಶದ ವೈರಲ್ ಸೋಂಕು ಇದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಐದು ದಿನಗಳವರೆಗೆ ವಿಶ್ರಾಂತಿಗೆ ತಿಳಿಸಲಾಗಿದೆ. ಸಾರ್ವಜನಿಕ ಭೇಟಿ ತಪ್ಪಿಸಲು ಮತ್ತು ಸೂಚಿಸಲಾದ ಔಷಧಿ ಸೂಚನೆ ಅನುಸರಿಸಲು ಸಲಹೆ ನೀಡಲಾಗಿದೆ. ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಹಂಚಿಕೊಂಡಿದ್ದಾರೆ.

‘ಎಲ್ 2: ಎಂಪುರಾನ್’ ಮತ್ತು ಅವರ ನಿರ್ದೇಶನದ ಚೊಚ್ಚಲ ‘ಬರೋಜ್’ ನ ಪೋಸ್ಟ್-ಪ್ರೊಡಕ್ಷನ್ ಚಿತ್ರೀಕರಣವನ್ನು ಮುಗಿಸಿದ ನಂತರ, ಮೋಹನ್ ಲಾಲ್ ಗುಜರಾತ್‌ನಿಂದ ಕೊಚ್ಚಿಗೆ ಮರಳಿದ್ದರು. ಅಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು ಎನ್ನಲಾಗಿದೆ. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kannada New Movie: ಹೊಸ ಪ್ರತಿಭೆಗಳ ಸಿನಿಮಾ ‘ವೈಕುಂಠ ಸಮಾರಾಧನೆʼ; ಕನ್ನಡದಲ್ಲಿ ಹೀಗೊಂದು ಚಿತ್ರ!

ಸಿನಿಮಾ ವಿಚಾರಕ್ಕೆ ಬಂದರೆ ʻಬರೋಜ್ʼ ಚಿತ್ರವು ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಇದು ನಟನ ಮೊದಲ ನಿರ್ದೇಶನದ ಸಿನಿಮಾ. ಈ ಚಲನಚಿತ್ರವನ್ನು ಆರಂಭದಲ್ಲಿ ಮಾರ್ಚ್ 28, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಬರೋಜ್ʼ ಸಿನಿಮಾವನ್ನು ಮೋಹನ್ ಲಾಲ್‌ ಅವರೇ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕರಾಗಿಯೂ ನಟಿಸಿದ್ದಾರೆ. ಬರೋಜ್ 2018ರಲ್ಲಿ ಘೋಷಿಸಲಾಯಿತು. ಅಂತಿಮವಾಗಿ ಐದು ವರ್ಷಗಳ ನಂತರ ಸೆಟ್ಟೇರಿದೆ. ಮೈ ಡಿಯರ್ ಕುಟ್ಟಿಚತನ್ ಚಲನಚಿತ್ರ ನಿರ್ಮಾಪಕ ಜಿಜೋ ಪುನ್ನೂಸ್ ಆರಂಭದಲ್ಲಿ ಚಿತ್ರದ ನಿರ್ದೇಶಕ ಎಂದು ಹೇಳಲಾಗಿತ್ತು. 3ಡಿ ಫ್ಯಾಂಟಸಿ ಈ ಸಿನಿಮಾದ ಛಾಯಾಗ್ರಹಣವನ್ನು ಸಂತೋಷ್ ಶಿವನ್ ನಿರ್ವಹಿಸುತ್ತಿದ್ದರೆ, ಲಿಡಿಯನ್ ನಾದಸ್ವರನ್ ಮತ್ತು ಮಾರ್ಕ್ ಕಿಲಿಯನ್ ಸಂಗೀತ ಸಂಯೋಜಿಸಿದ್ದಾರೆ. ಇದನ್ನು ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ನಿರ್ಮಿಸುತ್ತಿದ್ದಾರೆ. 

ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Mohanlal: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ಲಾಲ್ ರಾಜೀನಾಮೆ

ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಅನಂತರ ಮಲಯಾಳಂ ಚಿತ್ರರಂಗದ ಹಿರಿಯ ವ್ಯಕ್ತಿಗಳು ಲೈಂಗಿಕ ದೌರ್ಜನ್ಯದ ದೂರುಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಲಯಾಳಂ ಚಲನಚಿತ್ರ ನಟರ ಸಂಘದ (AMMA) ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ (Mohanlal) ಹಾಗೂ ಚಲನಚಿತ್ರ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ರಾಜೀನಾಮೆ ಸಲ್ಲಿಸಿದರು.

VISTARANEWS.COM


on

By

Mohanlal
Koo

ತಿರುವನಂತಪುರಂ: ಹಿರಿಯ ನಟ ಸಿದ್ದಿಕ್ (veteran actor Siddique) ಮತ್ತು ಚಿತ್ರನಿರ್ಮಾಪಕ ರಂಜಿತ್ ಬಾಲಕೃಷ್ಣನ್ (Filmmaker Ranjith Balakrishnan) ಸೇರಿದಂತೆ ಮಾಲಿವುಡ್‌ನ ಕೆಲವು ಮಂದಿಯ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳು ಕೇಳಿ ಬಂದ ಬಳಿಕ ನಟ ಮೋಹನ್‌ಲಾಲ್ (Mohanlal) ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಲನಚಿತ್ರ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ನೈತಿಕ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಸಮಿತಿಯ ವಿರುದ್ಧ ಕೆಲವು ನಟರು ಮಾಡಿದ ಆರೋಪಗಳಿಂದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು ನಿರ್ಧರಿಸಲಾಗಿದೆ. ಎರಡು ತಿಂಗಳೊಳಗೆ ಹೊಸ ಸಮಿತಿ ರಚನೆಗೆ ಚುನಾವಣೆ ನಡೆಯಲಿದೆ ಎಂದು ʼಅಮ್ಮʼ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವಾರ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಅನಂತರ ಮಲಯಾಳಂ ಚಿತ್ರರಂಗದ ಹಿರಿಯ ವ್ಯಕ್ತಿಗಳು ಲೈಂಗಿಕ ದೌರ್ಜನ್ಯದ ದೂರುಗಳನ್ನು ಎದುರಿಸುತ್ತಿದ್ದಾರೆ.

ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯದ ಆಘಾತಕಾರಿ ಕಥೆಗಳನ್ನು ಒಳಗೊಂಡಿರುವ ವರದಿಯನ್ನು 2019ರಲ್ಲಿ ಕೇರಳ ಸರ್ಕಾರಕ್ಕೆ ಸಲ್ಲಿಸಿದ್ದರೂ ಅದನ್ನು ನಿರ್ಲಕ್ಷಿಸಲಾಗಿತ್ತು. 2019ರಲ್ಲಿ ನಟ ಸಿದ್ದಿಕ್ ಎರ್ನಾಕುಲಂ ಜಿಲ್ಲೆಯ ತಮ್ಮ ಮನೆಯಲ್ಲಿ ಚಲನಚಿತ್ರವೊಂದರ ಪಾತ್ರದ ಕುರಿತು ಮಾತನಾಡಲು ಜೂನಿಯರ್ ಕಲಾವಿದರೊಬ್ಬರನ್ನು ಆಹ್ವಾನಿಸಿ ಅನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ಸಿದ್ದಿಕ್ ಈ ಆರೋಪವನ್ನು ತಿರಸ್ಕರಿಸಿದ್ದು, ಚಲನಚಿತ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಸಿದುಕೊಳ್ಳಲು ಈ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಿದ್ದಿಕ್ ಕಳೆದ ವಾರ ತಮ್ಮ ಹುದ್ದೆಯನ್ನು ತ್ಯಜಿಸಿದ್ದು, ರೇವತಿ ಸಂಪತ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರು ಲೈಂಗಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನಟಿ ಮಿನು ಮುನೀರ್, ಪ್ರಮುಖ ನಟರಾದ ಎಂ. ಮುಖೇಶ್, ಜಯಸೂರ್ಯ ಮತ್ತು ಇತರ ಇಬ್ಬರು 2013 ರಲ್ಲಿ ಚಲನಚಿತ್ರವೊಂದರ ಸೆಟ್‌ನಲ್ಲಿ ತನ್ನನ್ನು ದೈಹಿಕವಾಗಿ ಮತ್ತು ಮಾತಿನಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಶೂಟಿಂಗ್ ವೇಳೆ ನನಗೆ ಕಹಿ ಅನುಭವವಾಗಿದೆ. ನಾನು ರೆಸ್ಟ್ ರೂಂಗೆ ಹೋಗಿದ್ದೆ ಮತ್ತು ನಾನು ಹೊರಗೆ ಬಂದಾಗ ಜಯಸೂರ್ಯ ನನ್ನ ಒಪ್ಪಿಗೆಯಿಲ್ಲದೆ ನನ್ನನ್ನು ತಬ್ಬಿಕೊಂಡು ಮುತ್ತು ಕೊಟ್ಟರು. ನಾನು ಆಘಾತಕ್ಕೊಳಗಾಗಿ ಓಡಿಹೋದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Samantha Ruth Prabhu: ನೀವು ಪರಿಪೂರ್ಣ ತಂದೆಯಾಗುತ್ತೀರಿ; ನಾಗಚೈತನ್ಯ ಬಗ್ಗೆ ಸಮಂತಾ ಹೇಳಿದ ವಿಡಿಯೊ ವೈರಲ್

ಹಿರಿಯ ನಟ ಮಣಿಯನ್ ಪಿಳ್ಳರಾಜು ಅವರು ಆರೋಪಗಳ ತನಿಖೆಗೆ ಒತ್ತಾಯಿಸಿದ್ದು, ಆರೋಪಗಳ ಹಿಂದೆ ಬಹು ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ಹೇಳಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಲ್ಲ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಏಳು ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದಾರೆ.

Continue Reading

ಸಿನಿಮಾ

Revathy Sampath: ನಟಿಯ ಮೇಲೆ ಹಿರಿಯ ನಟನಿಂದ ಲೈಂಗಿಕ ದೌರ್ಜನ್ಯ; ಕೇರಳ ಚಿತ್ರರಂಗದಲ್ಲಿ ಮತ್ತೊಂದು ಕರಾಳ ವಿದ್ಯಮಾನ!

ಪಿಯುಸಿ ಮುಗಿದ ಬಳಿಕ ನನಗೆ ಭಯಾನಕ ಅನುಭವವಾಗಿದೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ನನಗೆ ಫೇಸ್ ಬುಕ್ ನಲ್ಲಿ ಸಂದೇಶ ಕಳುಹಿಸಿದ್ದರು. ಸಿನಿಮಾದ ಚರ್ಚೆಗೆ ಕರೆದಿದ್ದರು. ಚರ್ಚೆಯ ವೇಳೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈಗ ಅವರು ತೋರಿಸುವ ಮುಖ ನಾನು ಅಂದು ನೋಡಿದ ಮುಖವಲ್ಲ ಎಂದು ನಟಿ ರೇವತಿ ಸಂಪತ್ (Revathy Sampath) ಆರೋಪಿಸಿದ್ದಾರೆ.

VISTARANEWS.COM


on

By

Revathy Sampath
Koo

ಮಲಯಾಳಂ ಚಲನಚಿತ್ರ (Malayalam movie) ಕಲಾವಿದರ ಸಂಘದ (AMMA) ಪ್ರಧಾನ ಕಾರ್ಯದರ್ಶಿ ಆಗಿರುವ ಹಿರಿಯ ನಟ ಸಿದ್ದಿಕ್ (Veteran actor Siddique) ತಮ್ಮ ಮೇಲೆ ಲೈಂಗಿಕ ದೌರ್ಜನ್ಯ (Sexual assault) ನಡೆಸಿದ್ದಾರೆ ಎಂದು ನಟಿ ರೇವತಿ ಸಂಪತ್ (Revathy Sampath) ಆರೋಪಿಸಿದ್ದಾರೆ. ತಾವು 21 ವರ್ಷದವಳಿದ್ದಾಗ ಈ ಘಟನೆ ನಡೆದಿರುವುದಾಗಿ ಹೇಳಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಸಿದ್ದಿಕ್‌ ರಾಜೀನಾಮೆ ನೀಡಿದ್ದು, ಕೇರಳ ಚಿತ್ರರಂಗದಲ್ಲಿ ಈ ಪ್ರಕರಣದ ಕುರಿತು ಸಂಚಲನ ಉಂಟಾಗಿದೆ.

ಹೇಮಾ ಸಮಿತಿ ವರದಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ಅವರು, ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಸಿದ್ದಿಕ್ ಮೊದಲು ತಮ್ಮನ್ನು ಮೋಲ್ ಎಂದು ಕರೆದರು. ಮೋಲ್ ಎಂಬುದನ್ನು ಕೇರಳದಲ್ಲಿ ಸಾಮಾನ್ಯವಾಗಿ ಚಿಕ್ಕ ಹುಡುಗಿ ಅಥವಾ ಮಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ ಎಂದು ತಿಳಿಸಿದರು.

ಪಿಯುಸಿ ಮುಗಿದ ಬಳಿಕ ನನಗೆ ಈ ಭಯಾನಕ ಅನುಭವವಾಗಿದೆ. ಸಿದ್ದಿಕ್ ನನಗೆ ಫೇಸ್ ಬುಕ್ ನಲ್ಲಿ ಸಂದೇಶ ಕಳುಹಿಸಿದ್ದರು. ಸಿನಿಮಾದ ಚರ್ಚೆಗೆ ಕರೆದಿದ್ದರು. ಚರ್ಚೆಯ ವೇಳೆ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈಗ ಅವರು ತೋರಿಸುವ ಮುಖ ನಾನು ಅಂದು ನೋಡಿದ ಮುಖವಲ್ಲ ಎಂದು ರೇವತಿ ಹೇಳಿದ್ದಾರೆ. ಸಿದ್ದಿಕ್ ಅವರು ʼಅಮ್ಮ ʼ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿರುವುದಾಗಿ ಅಮ್ಮಾ ಉಪಾಧ್ಯಕ್ಷ ಜಯನ್ ಚೇರ್ತಲ ಖಚಿತಪಡಿಸಿದ್ದಾರೆ.


ಸಿದ್ದಿಕ್ ಅವರನ್ನು “ಕ್ರಿಮಿನಲ್” ಎಂದು ಕರೆದ ನಟಿ ರೇವತಿ, ಸಿದ್ದಿಕ್ ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ ಬಳಿಕ ನಾನು ತೀವ್ರ ಮಾನಸಿಕ ಆಘಾತ ಅನುಭವಿಸಿದೆ. ಇದು ನನ್ನ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿದೆ. ಯಾವ ವ್ಯವಸ್ಥೆಯೂ ನನ್ನ ಬೆಂಬಲಕ್ಕೆ ನಿಂತಿರಲಿಲ್ಲ. ಮಾತನಾಡಲು ನನಗೆ ಬಹಳ ಸಮಯ ಹಿಡಿಯಿತು. ಘಟನೆಯ ಬಳಿಕ ಸಿದ್ದಿಕ್ ಏನೂ ಆಗಿಲ್ಲ ಎಂಬಂತೆ ವರ್ತಿಸಿ ನನ್ನ ಮುಂದೆ ಸಾಮಾನ್ಯ ಎಂಬಂತೆ ನಿಂತಿದ್ದರು. ಇದು ಸಾಮಾನ್ಯ ಸಂಗತಿ ಎಂಬಂತೆ ಎಲ್ಲರೂ ಪ್ರತಿಕ್ರಿಯಿಸಿದರು. ಅವರೆಲ್ಲರೂ ಇದನ್ನು ತಿಳಿದೇ ಮಾಡಿದ್ದಾರೆ ಎಂದು ಅನಿಸಿತು.

ಪರಿಸ್ಥಿತಿಯಿಂದ ಪಾರಾಗಲು ಓಡಿಹೋದೆ. ಆ ವಯಸ್ಸಿನಲ್ಲಿ ನಾನು ಸಾಧ್ಯವಾದಷ್ಟು ಉತ್ತಮವಾಗಿ ಪ್ರತಿಕ್ರಿಯಿಸಿದೆ. ನಾನು ಏನೂ ಮಾಡಲೂ ಸಾಧ್ಯವಿರಲಿಲ್ಲ. ಓಡಿಹೋಗಿ ಆಟೋ ಹತ್ತಿ ಪರಾರಿಯಾದೆ ಎಂದು ರೇವತಿ ಹೇಳಿದ್ದಾರೆ. ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಕೆಲಸದ ಪರಿಸ್ಥಿತಿಗಳು ಮತ್ತು ಲೈಂಗಿಕ ಶೋಷಣೆಯ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಗೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಶುಕ್ರವಾರ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ: Pranitha Subhash: 2ನೇ ಮಗುವಿನ ನಿರೀಕ್ಷೆಯಲ್ಲಿರೋ ನಟಿ ಪ್ರಣೀತಾ ಸುಭಾಷ್; ಮತ್ತೆ ಬೇಬಿ ಬಂಪ್ ಫೋಟೋಶೂಟ್

ʼಅಮ್ಮಾʼ ವರದಿಯನ್ನು ಕೆಲವು ಬಣಗಳು ತಿರಸ್ಕರಿಸಿದ್ದು, ಕಾಸ್ಟಿಂಗ್ ಕೌಚ್ ಆರೋಪವನ್ನು ತಳ್ಳಿಹಾಕಿವೆ. ನಾನು ಕಳೆದ ನಾಲ್ಕು ದಶಕಗಳಿಂದ ಉದ್ಯಮದಲ್ಲಿದ್ದೇನೆ. ವರದಿಯಲ್ಲಿ ಉಲ್ಲೇಖಿಸಿರುವಂತೆ ಯಾವುದೇ ಗುಂಪು ಅಸ್ತಿತ್ವದಲ್ಲಿಲ್ಲ. ಏಕೆಂದರೆ ಇದು ಚಲನಚಿತ್ರೋದ್ಯಮ ಮತ್ತು ಅಂತಹ ಯಾವುದೇ ಗುಂಪುಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಎಲ್ಲಿಯಾದರೂ ಯಾವುದೇ ಅಪರಾಧ ನಡೆದಿದ್ದರೆ ಅದನ್ನು ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರಿದ್ದರೆ ಅವರನ್ನು ಬಂಧಿಸಬೇಕು ಎಂದು ನಾವು ಬಯಸುತ್ತೇವೆ. ಇದರಲ್ಲಿ ನಮಗೆ ಯಾವುದೇ ಸಂಕೋಚವಿಲ್ಲ ಎಂದು ಸಿದ್ದಿಕ್ ಹೇಳಿದ್ದಾರೆ.

Continue Reading

ಮಾಲಿವುಡ್

Manjummel Boys: ʻಮಂಜುಮ್ಮೇಲ್ ಬಾಯ್ಸ್ʼ ವಿರುದ್ಧ ಗೆದ್ದ ಇಳಯರಾಜ..!

Manjummel Boys: ಮಂಜುಮ್ಮೇಲ್ ಬಾಯ್ಸ್’ ಕಥೆ ಸಾಗೋದು ಗುಣ ಗುಹೆಯಲ್ಲಿ. ಹೀಗಾಗಿ, ‘ಗುಣ’ ಚಿತ್ರದಲ್ಲಿ ಬಳಕೆ ಆದ ‘ಕಣ್ಮಣಿ..’ ಸಾಂಗ್​ನ ತಂಡದವರು ಬಳಕೆ ಮಾಡಿಕೊಂಡಿದ್ದರು. ಇದಕ್ಕೆ ಮ್ಯೂಸಿಕ್ ಕಂಪನಿಯಿಂದ ಒಪ್ಪಿಗೆ ಕೂಡ ಪಡೆದಿದ್ದರು. ಆದರೆ, ಇವರು ಇಳಯರಾಜ ಅವರ ಒಪ್ಪಿಗೆ ಪಡೆದಿರಲಿಲ್ಲ.

VISTARANEWS.COM


on

Manjummel Boysproducers pay Rs 60 lakh as compensation to Ilaiyaraaja
Koo

ಬೆಂಗಳೂರು: ʼಮಂಜುಮ್ಮೇಲ್ ಬಾಯ್ಸ್’ (Manjummel Boys) ಮಲಯಾಳಂ ಸಿನಿಮಾ ಹಿಟ್‌ ಕಂಡಿದೆ. ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿದೆ. . ಈ ಚಿತ್ರದ ನಿರ್ಮಾಪಕರಿಗೆ ತೊಂದರೆ ಎದುರಾಗಿತ್ತು. ಈ ಸಿನಿಮಾ ತಂಡದ ವಿರುದ್ಧ ಇಳಯರಾಜ ಅವರು ಕೇಸ್ ಹಾಕಿದ್ದರು. ಈ ಕೇಸ್​ನಲ್ಲಿ ಅವರಿಗೆ ಜಯ ಆಗಿದೆ.

ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರಾದ ಸೌಬಿನ್ ಶಾಹಿರ್, ಬಾಬು ಶಾಹಿರ್ ಮತ್ತು ಶಾನ್ ಆಂಟೋನಿ ಅವರು ಚಿತ್ರದಲ್ಲಿನ ‘ಗುಣ’ ಚಿತ್ರದ ‘ಕಣ್ಮಣಿ ಅನ್ಬೋಡು’ ಹಾಡನ್ನು ಅನಧಿಕೃತವಾಗಿ ಬಳಸಿದ್ದಕ್ಕಾಗಿ ಸಂಯೋಜಕ ಇಳಯರಾಜ ಅವರಿಗೆ 60 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

‘ಮಂಜುಮ್ಮೇಲ್ ಬಾಯ್ಸ್’ ಕಥೆ ಸಾಗೋದು ಗುಣ ಗುಹೆಯಲ್ಲಿ. ಹೀಗಾಗಿ, ‘ಗುಣ’ ಚಿತ್ರದಲ್ಲಿ ಬಳಕೆ ಆದ ‘ಕಣ್ಮಣಿ..’ ಸಾಂಗ್​ನ ತಂಡದವರು ಬಳಕೆ ಮಾಡಿಕೊಂಡಿದ್ದರು. ಇದಕ್ಕೆ ಮ್ಯೂಸಿಕ್ ಕಂಪನಿಯಿಂದ ಒಪ್ಪಿಗೆ ಕೂಡ ಪಡೆದಿದ್ದರು. ಆದರೆ, ಇವರು ಇಳಯರಾಜ ಅವರ ಒಪ್ಪಿಗೆ ಪಡೆದಿರಲಿಲ್ಲ. ಈ ಕಾರಣದಿಂದಲೇ ಇಳಯರಾಜ ಅವರು ಕೋರ್ಟ್​ನಲ್ಲಿ ಕೇಸ್ ಹಾಕಿ, ತಂಡದವರು ಎರಡು ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.

ʻಮ್ಯೂಸಿಕ್ ಕಂಪನಿಯಿಂದ ಈ ಹಾಡಿನ ಬಳಕೆಗೆ ಹಕ್ಕನ್ನು ಪಡೆದಿದ್ದೇವೆ’ ಎಂದು ಸಿನಿಮಾ ತಂಡದ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಇಳಯರಾಜ ಪರ ವಕೀಲರು, ‘ಇಳಯರಾಜ ಅವರು ಮಾಡಿದ ಕೆಲಸಗಳಿಗೆ ಅವರು ಕೂಡ ಹಕ್ಕನ್ನು ಹೊಂದಿದ್ದಾರೆ’ ಎಂದರು. ಹೀಗಾಗಿ, ಇಳಯರಾಜ ಅವರು ಈ ಹಾಡನ್ನು ಬಳಸಲು ‘ಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ಯಾವುದೇ ಒಪ್ಪಿಗೆ ನೀಡಿರಲಿಲ್ಲ.

ಇದನ್ನೂ ಓದಿ: Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್‌ ಕಟ್‌!

ಸೌಬಿನ್ ಶಬೀರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 2006ರಲ್ಲಿ ಕೇರಳದಿಂದ ತಮಿಳುನಾಡಿನ ಕೊಡೈಕೆನಲ್​ಗೆ ಫ್ರೆಂಡ್ಸ್ ಗ್ರೂಪ್ ಒಂದು ಟ್ರಿಪ್ ಹೊರಡುತ್ತದೆ. ʻಡೆವಿಲ್ಸ್ ಕಿಚನ್ʼ ಹೆಸರಿನ ಗುಹೆಯಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನ ರಕ್ಷಿಸಲು ಫ್ರೆಂಡ್ಸ್ ಪ್ರಯತ್ನಿಸುತ್ತಾರೆ. ಇದರಲ್ಲಿ ಸಕ್ಸೆಸ್‌ ಆಗ್ತಾರಾ? ಇಲ್ಲವಾ ಎಂಬುದೇ ಕಥೆ. ಮಲಯಾಳಂ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿದೆ.ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಮತ್ತು ಜೀನ್ ಪಾಲ್ ಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿದಂಬರಂ ಪೊದುವಾಲ್ ಅವರ ಎರಡನೇ ನಿರ್ದೇಶನ ಸಿನಿಮಾ ಇದು. ಈ ಮುಂಚೆ ʻಜೇನ್‌ಮ್ಯಾನ್ʼ ಹೆಚ್ಚು ಮೆಚ್ಚುಗೆ ಪಡೆದುಕೊಂಡಿತ್ತು. ಸುಶಿನ್ ಶ್ಯಾಮ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Continue Reading

South Cinema

Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Filmfare South 2024: 2023ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕೆಲವು ಸಿನಿಮಾಗಳು ದಕ್ಷಿಣ ಭಾರತದಲ್ಲಿ ಸಿನಿಪ್ರಿಯರ ಮನಗೆದ್ದಿದೆ. ಅಂತಹ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

VISTARANEWS.COM


on

Filmfare South 2024 mollywood tollywood 69th Filmfare Awards
Koo

ಬೆಂಗಳೂರು: 2023ರಲ್ಲಿ ತೆರೆಕಂಡು ಜನಪ್ರಿಯತೆ ಗಳಿಸಿದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. 2023ರಲ್ಲಿ ತೆರೆಕಂಡ ದಕ್ಷಿಣ ಭಾರತದ ಸಿನಿಮಾಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕೆಲವು ಸಿನಿಮಾಗಳು ದಕ್ಷಿಣ ಭಾರತದಲ್ಲಿ ಸಿನಿಪ್ರಿಯರ ಮನಗೆದ್ದಿದೆ. ಅಂತಹ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಫಿಲ್ಮ್‌ಫೇರ್ ತೆಲುಗು ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ – ಬಳಗಂ
ಅತ್ಯುತ್ತಮ ನಿರ್ದೇಶಕ – ವೇಣು ಎಲ್ದಂಡಿ ( ಬಳಗಂ)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಬೇಬಿ ( ಸಾಯಿ ರಾಜೇಶ್)
ಅತ್ಯುತ್ತಮ ನಟ – ನಾನಿ ( ದಸರಾ)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಪ್ರಕಾಶ್ ರಾಜ್ (ರಂಗ ಮಾರ್ತಾಂಡ)
ನವೀನ್ ಪೋಲಿಶೆಟ್ಟಿ ( ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ)
ಅತ್ಯುತ್ತಮ ನಟಿ – ಕೀರ್ತಿ ಸುರೇಶ್ ( ದಸರಾ)
ಅತ್ಯುತ್ತಮ ನಟಿ (ಕ್ರಿಟಿಕ್ಸ್) – ವೈಷ್ಣವಿ ಚೈತನ್ಯ (ಬೇಬಿ)
ಅತ್ಯುತ್ತಮ ಹೊಸ ಪ್ರತಿಭೆ (Male) – ಸಂಗೀತ್ ಶೋಭನ್ (ಮ್ಯಾಡ್)
ಅತ್ಯುತ್ತಮ ಪೋಷಕ ನಟ – ಬ್ರಹ್ಮಾನಂದಂ ( ರಂಗ ಮಾರ್ತಾಂಡ), ರವಿ ತೇಜಾ ( ವಾಲ್ತೇರು ವೀರಯ್ಯ)
ಅತ್ಯುತ್ತಮ ಪೋಷಕ ನಟಿ – ರೂಪಾ ಲಕ್ಷ್ಮಿ (ಬಳಗಂ)
ಅತ್ಯುತ್ತಮ ಸಂಗೀತ ನಿರ್ದೇಶಕ – ವಿಜಯ್ ಬಲ್ಗನಿನ್ (ಬೇಬಿ)
ಅತ್ಯುತ್ತಮ ಸಾಹಿತ್ಯ – ಅನಂತ ಶ್ರೀರಾಮ್ ( ಓ ರೆಂಡು ಪ್ರೇಮ, ಬೇಬಿ)
ಅತ್ಯುತ್ತಮ ಗಾಯಕ – ಶ್ರೀರಾಮ ಚಂದ್ರ (ಬೇಬಿ)
ಅತ್ಯುತ್ತಮ ಗಾಯಕಿ – ಶ್ವೇತಾ ಮೋಹನ್ ( ಸರ್)

ಇದನ್ನೂ ಓದಿ: Workshop: ಬೆಂಗಳೂರಿನಲ್ಲಿ ಆ.10ರಂದು ಸಿನಿಮಾಸಕ್ತರಿಗೆ ಕಾರ್ಯಾಗಾರ

ಫಿಲ್ಮ್‌ಫೇರ್ ತಮಿಳು ಪ್ರಶಸ್ತಿ ಗೆದ್ದವರ ಪಟ್ಟಿ

ಅತ್ಯುತ್ತಮ ಸಿನಿಮಾ – ಚಿತ್ತಾ
ಅತ್ಯುತ್ತಮ ನಿರ್ದೇಶಕ – ಎಸ್‌ ಯು ಅರುಣ್ ಕುಮಾರ್ (ಚಿತ್ತಾ)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ವಿದುತಲೈ 1,
ವೆಟ್ರಿ ಮಾರನ್ ಅತ್ಯುತ್ತಮ ನಟ – ವಿಕ್ರಮ್ (ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಸಿದ್ಧಾರ್ಥ್ (ಚಿತ್ತಾ)
ಅತ್ಯುತ್ತಮ ನಟಿ – ನಿಮಿಷಾ ಸಂಜಯನ್ (ಚಿತ್ತಾ)
ಅತ್ಯುತ್ತಮ ನಟಿ (ಕ್ರಿಟಿಕ್ಸ್) – ಐಶ್ವರ್ಯಾ ರಾಜೇಶ್‌, ಅಪರ್ಣ ದಾಸ್
ಅತ್ಯುತ್ತಮ ಪೋಷಕ ನಟ – ಫಹಾದ್ ಫಾಸಿಲ್ (ಮಾಮಣ್ಣನ್)
ಅತ್ಯುತ್ತಮ ಪೋಷಕ ನಟಿ – ಅಂಜಲಿ ನಾಯರ್ (ಚಿತ್ತಾ)
ಅತ್ಯುತ್ತಮ ಸಂಗೀತ ನಿರ್ದೇಶಕ – ಧಿಬು ನಿನನ್ ಥಾಮಸ್, ಸಂತೋಷ್ ನಾರಾಯಣನ್ (ಚಿತ್ತಾ)
ಅತ್ಯುತ್ತಮ ಸಾಹಿತ್ಯ – ಇಳಂಗೊ ಕೃಷ್ಣನ್ ( ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ಗಾಯಕ – ಹರಿಚರಣ್ ( ಪೊನ್ನಿಯನ್ ಸೆಲ್ವನ್ 2)
ಅತ್ಯುತ್ತಮ ಗಾಯಕಿ – ಕಾರ್ತಿಕಾ ವೈದ್ಯನಾಥನ್ (ಚಿತ್ತಾ)

ಫಿಲ್ಮ್‌ಫೇರ್ ಮಲಯಾಳಂ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ – 2018
ಅತ್ಯುತ್ತಮ ನಿರ್ದೇಶಕ – ಜೂಡ್ ಆಂಥನಿ ಜೋಸೆಫ್ (2018)
ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)- ಕಾಥಲ್ ದಿ ಕೋರ್
ಅತ್ಯುತ್ತಮ ನಟ – ಮಮ್ಮುಟ್ಟಿ (ನನ್ಪಕಲ್ ನೆರತು ಮಾಯಕ್ಕಂ)
ಅತ್ಯುತ್ತಮ ನಟ (ಕ್ರಿಟಿಕ್ಸ್) – ಜೋಜು ಜಾರ್ಜ್ಅ
ತ್ಯುತ್ತಮ ನಟಿ – ವಿನ್ಸಿ ಅಲೋಶಿಯಸ್ಅತ್ಯುತ್ತಮ ನಟಿ (ಕ್ರಿಟಿಕ್ಸ್) – ಜ್ಯೋತಿಕಾ
ಅತ್ಯುತ್ತಮ ಪೋಷಕ ನಟ – ಜಗದೀಶ್
ಅತ್ಯುತ್ತಮ ಪೋಷಕ ನಟಿ – ಪೂರ್ಣಿಮಾ ಇಂದ್ರಜಿತ್
ಅತ್ಯುತ್ತಮ ಸಂಗೀತ ನಿರ್ದೇಶಕ – ಸ್ಯಾಮ್ ಸಿಎಸ್
ಅತ್ಯುತ್ತಮ ಸಾಹಿತ್ಯ – ಅನ್ವರ್ ಅಲಿ
ಅತ್ಯುತ್ತಮ ಗಾಯಕ – ಕಪಿಲಾ ಕಪಿಲನ್
ಅತ್ಯುತ್ತಮ ಗಾಯಕಿ – ಕೆ. ಎಸ್. ಚಿತ್ರಾ

Continue Reading
Advertisement
Prosecution against Siddaramaiah Hc reserves verdict after hearing arguments
ಕೋರ್ಟ್41 mins ago

CM Siddaramaiah : ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿಸಿರಿದ ಹೈಕೋರ್ಟ್, ಮಧ್ಯಂತರ ತಡೆ ಮುಂದುವರಿಕೆ

Colon cancer is on the rise‌ Those above 50 years of age are targeted
ಆರೋಗ್ಯ2 hours ago

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Suvarna Celebrity League a reality show launched on Star Suvarna
ಸಿನಿಮಾ2 hours ago

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Self harming
ಬೆಂಗಳೂರು5 hours ago

Self Harming : ಅಮ್ಮ ಬೈಕ್‌ ಕೊಡಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ

Actor darshan
ಸಿನಿಮಾ5 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ದಿನ ಸೆರೆವಾಸ; ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್‌

CM Siddaramaiah
ರಾಜಕೀಯ6 hours ago

CM Siddaramaiah : ಸಿದ್ದರಾಮಯ್ಯ ವಿಷ್ಯದಲ್ಲಿ ಆತುರದ ನಿರ್ಣಯ; ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ- ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ

Road Accident
ಪ್ರಮುಖ ಸುದ್ದಿ7 hours ago

Road Accident : ಏರ್‌ಪೋರ್ಟ್‌ ರೋಡ್‌ನಲ್ಲಿ ಡೆಡ್ಲಿ ಹಿಟ್‌ ಆ್ಯಂಡ್‌ ರನ್‌; ಲಾಂಗ್‌ ಡ್ರೈವ್‌‌ ಬಂದಿದ್ದ ಮೂವರು ವಿದ್ಯಾರ್ಥಿಗಳು ಬಲಿ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರ ಅನುಮಾನವೇ ಸಂಬಂಧಗಳನ್ನು ಹಾಳು ಮಾಡುತ್ತೆ

Installation of Ganesha idol at home Muslim man preaches message of unity
ಗದಗ1 day ago

Ganesh Chaturthi: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಯ ಸಂದೇಶ ಸಾರಿದ ಮುಸ್ಲಿಂ ವ್ಯಕ್ತಿ

karnataka weather Forecast
ಮಳೆ2 days ago

Karnataka Weather : 40 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌