ನಳನಳಿಸುವ ಆರೋಗ್ಯಕ್ಕಾಗಿ ಐದು ಸೂಪರ್‌ ಫುಡ್‌ಗಳು - Vistara News

ಆರೋಗ್ಯ

ನಳನಳಿಸುವ ಆರೋಗ್ಯಕ್ಕಾಗಿ ಐದು ಸೂಪರ್‌ ಫುಡ್‌ಗಳು

ಈ ಐದು ತರಕಾರಿ- ಹಣ್ಣುಗಳನ್ನು ನೀವು ನಿತ್ಯದ ಆಹಾರದಲ್ಲಿ ಅಳವಡಿಸಿಕೊಂಡರೆ ಬೇಗನೆ ವಯಸ್ಸಾಗುವುದನ್ನು ತಪ್ಪಿಸಬಹುದು ಎನ್ನುತ್ತಾರೆ ತಜ್ಞರು.

VISTARANEWS.COM


on

super foods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾರಿಗೆ ತಾನೇ ಚಿರಯವ್ವನದಿಂದ ಕಂಗೊಳಿಸಲು ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರೂ ಕೂಡಾ ವಯಸ್ಸಾದಂತೆ ತನ್ನ ಯೌವನದ ದಿನಗಳನ್ನೇ ನೆನೆಯುತ್ತಾರೆ. ಆದರೆ ಮುಪ್ಪನ್ನು ಯಾರಿಗಾದರೂ ತಪ್ಪಿಸಲು ಸಾಧ್ಯವೇ ಹೇಳಿ? ಆದರೂ, ಚರ್ಮ ಯಾವಾಗಲೂ ಫ್ರೆಶ್‌ ಆಗಿ, ಆರೋಗ್ಯಯುತವಾಗಿ, ಕಳೆಗುಂದದೆ, ನಯವಾಗಿ ಸುಕ್ಕುರಹಿತವಾಗಿರುವಂತೆ ಬಹಳ ಕಾಲ ಇರಲಿ ಎಂದು ಪ್ರತಿಯೊಬ್ಬರಿಗೂ ಅನಿಸದೆ ಇರದು. ಎಲ್ಲವೂ ಸಾಧ್ಯವಾಗದೇ ಇದ್ದರೂ, ಕೆಲವಷ್ಟನ್ನಾದರೂ ಶಿಸ್ತಿನ ಜೀವನದಿಂದ, ಆರೋಗ್ಯಯುತ ಆಹಾರದಿಂದ ಪಡೆಯಲು ಸಾಧ್ಯವಿದೆ.

ನಾವೇನು ತಿನ್ನುತ್ತೇವೋ ಅದು ನಮ್ಮ ಆರೋಗ್ಯದ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ನಮ್ಮ ಚರ್ಮ, ನಮ್ಮ ಕೂದಲು, ಎಲುಬಿನಲ್ಲಿರುವ ಶಕ್ತಿಪಚನಕ್ರಿಯೆ ಪ್ರತಿಯೊಂದೂ ಕೂಡಾ ನಾವು ಸೇವಿಸುವ ಆಹಾರವನ್ನು ಅವಲಂಬಿಸಿವೆ. ಉತ್ತಮ ಆರೋಗ್ಯಕರ ಆಹಾರ ಸೇವಿಸಿದರೆ, ಖಂಡಿತಾ ಆರೋಗ್ಯಯುತ ಜೀವನ ನಡೆಸಬಹುದು. ಹಾಗಾದರೆ, ಮುಪ್ಪಿನ ಲಕ್ಷಣಗಳು ಬೇಗನೆ ನಮ್ಮನ್ನು ಆವರಿಸಿಕೊಳ್ಳದಂತೆ ನಾವು ಯಾವೆಲ್ಲ ಆಹಾರವನ್ನು ನಮ್ಮ ನಿತ್ಯದಲ್ಲಿ ಸೇರಿಸಿಕೊಳ್ಳಬಹುದು ಎಂಬುದನ್ನು ನೋಡೋಣ ಬನ್ನಿ.

೧. ದೊಡ್ಡ ಮೆಣಸಿನಕಾಯಿ: ಹಳದಿ, ಕೆಂಪು ಹಾಗೂ ಹಸಿರು ಬಣ್ಣಗಳಲ್ಲಿ ಆಕರ್ಷಿಸುವ ದೊಡ್ಡ ಮೆಣಸಿನಕಾಯಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ ಹಾಗೂ ಕೆರಾಟಿನಾಯ್ಡ್‌ಗಳನ್ನು ಹೊಂದಿದೆ. ಕೆರಾಟಿನಾಯ್ಡ್‌ಗಳೇ ಈ ತರಕಾರಿಗೆ ಬಣ್ಣ ನೀಡುವ ವಸ್ತುವಾಗಿದ್ದು, ಇದು ವಾತಾವರಣ ನಮ್ಮ ಚರ್ಮಕ್ಕೆ ಬೀರುವ ನೇರ ಪರಿಣಾಮಗಳನ್ನು ಸಾಕಷ್ಟು ತಗ್ಗಿಸುತ್ತದೆ. ಜೊತೆಗೆ ಇದರಲ್ಲಿರುವ ವಿಟಮಿನ್‌ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.

೨.ಬ್ಲೂಬೆರಿ: ಬ್ಲೂಬೆರಿಯಲ್ಲಿ ಅತ್ಯಂತ ಕಡಿಮೆ ಕ್ಯಾಲೊರಿ ಇದ್ದು ಹೇರಳವಾಗಿ ವಿಟಮಿನ್‌ ಸಿ, ಕೆ ಹಾಗೂ ಎ ಯನ್ನು ಹೊಂದಿದೆ. ಇದರಲ್ಲಿ ನಾರಿನಂಶ ಹೆಚ್ಚಿದ್ದು ಆಂಟಿ ಆಕ್ಸಿಡೆಂಟ್ಗಳನ್ನು ಸಮೃದ್ಧವಾಗಿ ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ ಹತೋಟಿಯಲ್ಲಿಡಬಹುದು.

೩. ಹೂಕೋಸು: ಹೂಕೋಸಿನಲ್ಲಿ ಪ್ರೋಟೀನ್‌, ವಿಟಮಿನ್‌, ಕಬ್ಬಿಣಾಂಶ, ಆಂಟಿ ಆಕ್ಸಿಡೆಂಟ್‌ಗಳು ಹಾಗೂ ನಾರಿನಂಶ ಹೇರಳವಾಗಿರುವುದರಿಂದ ಇದರ ಬಳಕೆ ದೇಹದ ಆರೋಗ್ಯಕ್ಕೆ ಉತ್ತಮ. ಅತೀ ಕಡಿಮೆ ಕ್ಯಾಲೊರಿಯನ್ನು ಹೊಂದಿರುವ ತರಕಾರಿ ಇದಾಗಿದ್ದು ಸರಿಯಾದ ತೂಕವನ್ನು ಕಾಪಾಡಲು ಕೂಡಾ ಸಹಕಾರಿ. ಇದರಲ್ಲಿರುವ ವಿಟಮಿನ್‌ ಸಿ ಚರ್ಮಕ್ಕೆ ಕಾಂತಿಯನ್ನು ನೀಡುವ ಜೊತೆಗೆ ಸಾಕಷ್ಟು ಚರ್ಮದ ತೊಂದರೆಗಳಿಗೆ ಪರಿಹಾರ ನೋಡುತ್ತದೆ. ರಕ್ತದೊತ್ತಡವನ್ನು ಸಮತೋಲನದಲ್ಲಿಡುವುದಲ್ಲದೆ, ಎಲುಬಿನ ಶಕ್ತಿವರ್ಧಕವಾಗಿಯೂ, ಕ್ಯಾನ್ಸರ್‌ ಮತ್ತಿತರ ಮಾರಕ ರೋಗಗಳಿಂದ ದೂರವಿರಿಸುತ್ತದೆ. ಕಣ್ಣಿನ ಆರೋಗ್ಯಕ್ಕೂ ಉತ್ತಮ.

ಇದನ್ನೂ ಓದಿ: ಆಸ್ಟ್ರೇಲಿಯಾ ಮಾಸ್ಟರ್‌ ಶೆಫ್‌ನಲ್ಲಿ ಮಿಂಚಿದ ಭೇಲ್‌ಪುರಿ!

೪. ಪಾಲಕ್/ಬಸಳೆ:‌ ಪಾಲಕ್‌/ಬಸಳೆ ಸೊಪ್ಪು ಒಂದು ಮ್ಯಾಜಿಕ್‌ ಸೊಪ್ಪು. ಅತೀ ಕಡಿಮೆ ಕ್ಯಾಲೊರಿ ಹೊಂದಿರುವ ಇದು ಅತೀ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನೂ ಪೋಷಕಾಂಶಗಳನ್ನೂ ತನ್ನಲ್ಲಿ ಹೊಂದಿದೆ. ನಾರಿನಂಶ ಹೇರಳವಾಗಿರುವುದರಿಂದ ಪಚನಕ್ರಿಯೆಗೂ ಸಹಕಾರಿ. ಹೂಕೋಸಿನಂತೆಯೇ ಇದರಲ್ಲೂ ಅತೀ ಹೆಚ್ಚು ವಿಟಮಿನ್‌ ಸಿ ಇದ್ದು, ಇದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

೫. ಅವಕಾಡೋ/ಬಟರ್ ಫ್ರುಟ್: ಅವಕಾಡೋ ಒಂದು ವಿಶಿಷ್ಟವಾದ ಹಣ್ಣು. ಅತ್ಯಂತ ಹೆಚ್ಚು ಕ್ಯಾಲೊರಿಯನ್ನು ಹೊಂದಿದ್ದರೂ ಇದೊಂದು ಸೂಪರ್‌ ಫುಡ್‌ ಎನ್ನಬಹುದೇನೋ. ಇದರಲ್ಲಿರುವ ಕೊಬ್ಬಿನಂಶ ದೇಹಕ್ಕೆ ಬೇಕಾದದ್ದು. ಇದು ತನ್ನಲ್ಲಿ ೨೦ ಬಗೆಯ ಪೋಷಕಾಂಶಗಳನ್ನೂ ವಿಟಮಿನ್‌ಗಳನ್ನೂ ಹೊಂದಿರುವುದರಿಂದ ಇದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿದೆ. ವಿಟಮಿನ್‌ ಕೆ, ವಿಟಮಿನ್‌ ಸಿ, ಪೊಟಾಶಿಯಂ, ಫೋಲೇಟ್‌, ವಿಟಮಿನ್‌ ಬಿ೬, ಬಿ೫, ವಿಟಮಿನ್‌ ಇಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.

ಈ ಐದು ನಿಸರ್ಗದತ್ತ ಉಡುಗೊರೆಗಳನ್ನು ದಿನನಿತ್ಯದ ಆಹಾರದಲ್ಲಿ ಬಳಕೆ ಮಾಡುತ್ತಾ ಶಿಸ್ತಿನ ಆಹಾರ ಶೈಲಿಯನ್ನು ಬೆಳೆಸಿಕೊಂಡಲ್ಲಿ, ಖಂಡಿತಾ ನೀವು ನಿಮ್ಮ ಮುಪ್ಪನ್ನು ಮುಂದೂಡಬಹುದು. ವಯಸ್ಸಾದರೂ, ಹೆಚ್ಚಿನ ಆರೋಗ್ಯ ಸಮಸ್ಯೆಗಳಿಲ್ಲದೆ, ಲವಲವಿಕೆಯಿಂದ ನೆಮ್ಮದಿಯ ಜೀವನ ನಡೆಸಬಹುದು.

ಇದನ್ನೂ ಓದಿ: best drink: ಹೊಟ್ಟೆಯ ಆಪ್ತಮಿತ್ರ ಈ ಜಲ್‌ಜೀರಾ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Ayushman Bharat Diwas: ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಗುರಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ 30 ರಂದು ಭಾರತವು ಆಯುಷ್ಮಾನ್ ಭಾರತ್ ದಿನವನ್ನು ಆಚರಿಸುತ್ತದೆ. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಈ ಯೋಜನೆಯಿಂದ ಭಾರತ ಸರ್ಕಾರವು ಸುಮಾರು 50 ಕೋಟಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಅಗ್ಗದ ಮತ್ತು ಸುಲಭವಾದ ಆರೋಗ್ಯ ಸೇವೆಯನ್ನು ನೀಡುತ್ತಿದೆ.

VISTARANEWS.COM


on

By

Ayushman Bharat Diwas
Koo

ಕೋಟ್ಯಂತರ ಭಾರತೀಯರಿಗೆ(indians) ಉಚಿತ ಆರೋಗ್ಯ ಸೇವೆ (free health service) ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ ಕೊನೆಯ ದಿನವಾದ ಏಪ್ರಿಲ್ 30ರಂದು ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas) ಆಚರಿಸಲಾಗುತ್ತದೆ.

ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಮತ್ತು ಅದರ ಗುರಿ ಏನು ಎಂಬುದರ ಕುರಿತು ಜನರಿಗೆ ತಿಳಿಸಲು ಈ ದಿನ ಆಚರಣೆ ನಡೆಸಲು ಕರೆ ನೀಡಿದೆ. ಈ ಯೋಜನೆಯೊಂದಿಗೆ ಭಾರತ ಸರ್ಕಾರವು ಪ್ರತಿಯೊಬ್ಬರೂ ಸರ್ಕಾರದಿಂದ ನಿಭಾಯಿಸಲ್ಪಡುವ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು ಬಯಸುತ್ತದೆ.

ಬಡವರಿಗೆ ಆರೋಗ್ಯ ರಕ್ಷಣೆ ಒದಗಿಸಲು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿ ಮಾಡಿದ್ದು ಈ ಮೂಲಕ ಸರ್ಕಾರಿ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯು ಲಕ್ಷಾಂತರ ನಾಗರಿಕರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಉಚಿತವಾಗಿ ಹೆಚ್ಚು ಸುಲಭವಾಗಿ ಸಿಗುವಂತೆ ಮಾಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ:  Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?


ಇದು ಜಾರಿಯಾಗಿದ್ದು ಯಾವಾಗ?

ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಘೋಷಿಸಿದರು. ಇದು ಎರಡು ಮುಖ್ಯ ಸ್ತಂಭಗಳನ್ನು ಹೊಂದಿದೆ.

1. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (AB-HWCs)
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಜನರ ಮನೆಗಳಿಗೆ ಹತ್ತಿರ ತರುವ ಗುರಿಯನ್ನು ಹೊಂದಿವೆ.

2. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY)
ಇದು ಆರೋಗ್ಯ ವಿಮಾ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ನಗದು ರಹಿತ ಮತ್ತು ಕೈಗೆಟುಕುವ ವೈದ್ಯಕೀಯ ರಕ್ಷಣೆಯನ್ನು ನೀಡುವ ಉದ್ದೇಶ ಹೊಂದಿದೆ.


ಆಯುಷ್ಮಾನ್ ಭಾರತ್ ದಿವಸ್‌ನ ಮಹತ್ವ

ಆಯುಷ್ಮಾನ್ ಭಾರತ್ ದಿವಸ್ ಹಲವಾರು ಉದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ:
1. ಆಯುಷ್ಮಾನ್ ಭಾರತ್ ಯೋಜನೆಯ ಗುರಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಆಯುಷ್ಮಾನ್ ಭಾರತ್ ದಿವಸ್ ಅನ್ನು ಆಚರಿಸಲಾಗುತ್ತದೆ.
2. ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಮಾಡಿದ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು ಭಾರತದಲ್ಲಿ 10 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.
3. ಅರ್ಹ ಕುಟುಂಬಗಳು ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ 5 ಲಕ್ಷ ರೂ.ವರೆಗೆ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು.
4. ಸರ್ಕಾರವು ಆಯುಷ್ಮಾನ್ ಮಿತ್ರ ಎಂಬ ಹೊಸ ಉದ್ಯೋಗವನ್ನು ಆರೋಗ್ಯ ಕ್ಷೇತ್ರದಲ್ಲಿ ಸೃಷ್ಟಿಸಿದೆ. ಇದಕ್ಕಾಗಿ ಸಾಕಷ್ಟು ಯುವಕರನ್ನು ನೇಮಿಸಿಕೊಳ್ಳಲಾಗಿದೆ.
5. ಆಯುಷ್ಮಾನ್ ಭಾರತ್ ಯೋಜನೆಯಡಿ ಯುವಜನರಿಗೆ ಉದ್ಯೋಗ ನೀಡಲು ಆಯುಷ್ಮಾನ್ ಮಿತ್ರರನ್ನು ಆಸ್ಪತ್ರೆಗಳು ನೇಮಿಸಿಕೊಂಡಿವೆ.
6. ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಉತ್ತಮ ಆರೋಗ್ಯ ವಿಮಾ ಯೋಜನೆಯ ಅಗತ್ಯವಿದೆ.

Continue Reading

ಆರೋಗ್ಯ

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

ಹಸಿಯಾದ ಈರುಳ್ಳಿ ತಿಂದರೆ ಬಾಯಿ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೋ ಅಥವಾ ಅದರ ಕಟು ರುಚಿಗಾಗಿಯೋ, ಹಸಿ ಈರುಳ್ಳಿಯ ಬಳಕೆಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ, ಸಲಾಡ್‌ಗಳಲ್ಲಿ, ಊಟದ ಸಂದರ್ಭ ಹಸಿ ಈರುಳ್ಳಿ ತಿನ್ನುವ ಅಭ್ಯಾಸವೂ ಹಲವರಲ್ಲಿದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಕುರಿತು (Onion Benefits) ಇಲ್ಲಿದೆ ಮಾಹಿತಿ.

VISTARANEWS.COM


on

Onion Benefits
Koo

ಈರುಳ್ಳಿಯನ್ನು ನಿತ್ಯವೂ ನಮ್ಮ ಮನೆಗಳಲ್ಲಿ ಬಳಸುತ್ತೇವೆ. ಈರುಳ್ಳಿಯಿಲ್ಲದೆ ಅಡುಗೆ ಮಾಡುವುದೇ ಸವಾಲು ಕೂಡಾ. ಪ್ರತಿಯೊಂದು ಅಡುಗೆಗೂ ಈರುಳ್ಳಿಯನ್ನು ಹಾಕುತ್ತೇವಾದರೂ, ಈರುಳ್ಳಿಯನ್ನು ಹಸಿಯಾಗಿ ನಾವು ತಿನ್ನುವುದು ಕಡಿಮೆಯೇ. ಹಸಿಯಾದ ಈರುಳ್ಳಿ ತಿಂದರೆ ಬಾಯಿ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೋ, ಅಥವಾ ಅದರ ಕಟು ರುಚಿಗಾಗಿಯೋ, ಹಸಿ ಈರುಳ್ಳಿಯ ಬಳಕೆಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ, ಸಲಾಡ್‌ಗಳಲ್ಲಿ, ಊಟದ ಸಂದರ್ಭ ಹಸಿ ಈರುಳ್ಳಿ ತಿನ್ನುವ ಅಭ್ಯಾಸವೂ ಹಲವರಲ್ಲಿದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಬೇಸಗೆಯಲ್ಲಂತೂ ಆಗಾಗ ಸಲಾಡ್‌ಗಳ ರೂಪದಲ್ಲಾದರೂ ಹಸಿ ಈರುಳ್ಳಿ ಬಳಸಬೇಕು. ಯಾಕೆ ಹಸಿ ಈರುಳ್ಳಿಯನ್ನು ತಿನ್ನಬೇಕು ಎಂಬುದಕ್ಕೆ (Onion Benefits) ಕಾರಣಗಳು ಇಲ್ಲಿವೆ.

Red onion

ಈರುಳ್ಳಿಯಲ್ಲಿ ಫ್ಲೇವನಾಯ್ಡ್‌ಗಳಿದ್ದು, ಅವುಗಳು ಆಂಟಿ ಆಕ್ಸಿಡೆಂಟ್‌ಗಳ ರೀತಿಯಲ್ಲಿ ವರ್ತಿಸುತ್ತವೆ. ಇವು ದೇಹದಲ್ಲಿ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ಸಮತೋಲನಗೊಳಿಸುವಲ್ಲಿ ಹಾಗೂ ಆಕ್ಸಿಡೇಟಿವ್‌ ಸ್ಟ್ರೆಸ್‌ ಅನ್ನು ಕಡಿಮೆಗಳಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಹೃದಯದ ಕಾಯಿಲೆ ಅಥವಾ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಕ್ವೆರ್‌ಸೆಟಿನ್‌ ಹಾಗೂ ಸಲ್ಫರ್‌ ಇರುವುದರಿಂದ ಇವುಗಳ ಮೂಲಕ ದೇಹಕ್ಕೆ ಆಂಟಿ ಇನ್‌ಫ್ಲಮೇಟರಿ ಗುಣಗಳು ದೊರೆಯುತ್ತವೆ. ಇದರಿಂದ ಆರ್ತ್ರೈಟಿಸ್‌, ಅಸ್ತಮಾ ಮತ್ತಿತರ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಬಹುದು ಹಾಗೂ ಅವುಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಆರ್ಗನೋಸಲ್ಫರ್‌ನ ಅಂಶಗಳು ಅಲ್ಲಿಸಿನ್‌ ರೂಪದಲ್ಲಿ ಇರುವುದರಿಂದ ಇದು ಕೊಲೆಸ್ಟೆರಾಲ್‌ ಹಾಗೂ ಅಧಿಕ ರಕ್ತದೊತ್ತಡವನ್ನೂ ಇಳಿಸುವಲ್ಲಿ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತಸಂಚಾರವನ್ನು ಚುರುಕುಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಈರುಳ್ಳಿ ಬಹಳ ಒಳ್ಳೆಯದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈರುಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಸಹಾಯ ಮಾಡುತ್ತವೆ. ಈರುಳ್ಳಿಯಲ್ಲಿ ಆಂಟಿ ಮೈಕ್ರೋಬಿಯಲ್‌ ಗುಣಗಳೂ ಹೇರಳವಾಗಿದ್ದು ಇದು ದೇಹದ ಒಟ್ಟು ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆ.

onion cut

ಈರುಳ್ಳಿಯಲ್ಲಿ ಕ್ರೋಮಿಯಂ ಹಾಗೂ ಸಲ್ಫರ್‌ ಇವೆರಡೂ ಇರುವುದರಿಂದ ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವ ಮಂದಿ ಹಸಿ ಈರುಳ್ಳಿ ತಿನ್ನುವುದರಿಂದ ಸಹಾಯವಾಗುತ್ತದೆ.

ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೆ ಒಳ್ಳೆಯದು. ಇದು ಪಚನಕಾರಿ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಂಬಂಧೀ ಸಮಸ್ಯೆಗಳು ಹತ್ತಿರ ಸುಳಿಯದು.

ಈರುಳ್ಳಿಯಲ್ಲಿರುವ ಸಲ್ಫರ್‌ನ ಅಂಶಗಳಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಬಹುಮುಖ್ಯವಾಗಿ ಕರುಳು ಹಾಗೂ ಹೊಟ್ಟೆಯ ಸಂಬಂಧಿ ಕ್ಯಾನ್ಸರ್‌ಗಳಿಂದ ಇದು ದೂರವಿರಿಸುತ್ತದೆ.

ಕ್ವೆರ್ಸೆಟಿನ್‌ ಹಾಗೂ ಸಲ್ಫರ್‌ನ ಅಂಶಗಳು ಎಲುಬಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಳೆಗಳು ಗಟ್ಟಿಯಾಗಿರಲು, ಮೂಳೆಯಲ್ಲಿನ ಸಾಂದ್ರತೆ ಉಳಿಯಲು ಈರುಳ್ಳಿ ಸೇವನೆ ಒಳ್ಳೆಯದು. ಮುಖ್ಯವಾಗಿ ಮೂಳೆ ಸವೆತ, ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ಇದು ಬಹಳ ಒಳ್ಳೆಯದು.

Onion Price

ಶವಾಸಕೋಶದ ಆರೋಗ್ಯಕ್ಕೂ ಈರುಳ್ಳಿ ಬಹಳ ಒಳ್ಳೆಯದು. ಅಸ್ತಮಾ ಹಾಗೂ ಅಲರ್ಜಿಗಳಂತಹ ಸಮಸ್ಯೆ ಇರುವ ಮಂದಿಗೆ ಈರುಳ್ಳಿ ಒಳ್ಳೆಯದು. ಕಫ ಕಟ್ಟಿದಂತಹ ಸಂದರ್ಭ, ನೆಗಡಿ, ಶೀತವಿದ್ದಾಗಲೂ ಈರುಳ್ಳಿಯಲ್ಲಿ ನೈಸರ್ಗಿಕವಾದ ಗುಣಗಳಿರುವುದರಿಂದ ಇದು ಕಫವನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಉಸಿರಾಟ ಸುಲಭವಾಗುತ್ತದೆ.

ಬಹುಮುಖ್ಯವಾಗಿ ಈರುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್‌ ಗುಣಗಳು ಹಾಗೂ ಸಲ್ಫರ್‌ ಆರೋಗ್ಯಕರ ಕೂದಲು ಹಾಗೂ ಚರ್ಮಕ್ಕೆ ಬಹಳ ಒಳ್ಳೆಯದು. ಕೊಲಾಜೆನ್‌ ಹೆಚ್ಚಿಸುವಲ್ಲಿ ಇದು ನೆರವಾಗುವ ಮೂಲಕ ಚರ್ಮವನ್ನು ತಾಜಾ ಹಾಗೂ ಹೊಳಪಾಗಿರಿಸುತ್ತದೆ. ದೃಢವಾದ, ನಯವಾದ ಕೂದಲ ಅಂದವನ್ನೂ ಹೆಚ್ಚಿಸುತ್ತದೆ.

ಇದನ್ನೂ ಓದಿ: Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Continue Reading

ಆರೋಗ್ಯ

Paneer Test: ನಾವು ತಿನ್ನುವ ಪನೀರ್‌ ಶುದ್ಧವಾದದ್ದೋ, ಕಲಬೆರಕೆಯದ್ದೋ ಪರೀಕ್ಷೆ ಮಾಡೋದು ಹೇಗೆ?

ಫಿಟ್‌ನೆಸ್‌ ಪ್ರಿಯರೂ ಕೂಡಾ ಪ್ರೊಟೀನ್‌ಗಾಗಿ ತಿನ್ನುವ ನಿತ್ಯಾಹಾರಗಳಲ್ಲಿ ಪನೀರ್‌ ಕೂಡ ಒಂದು. ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ, ಡೈರಿ ಉತ್ಪನ್ನಗಳ ಅಂಗಡಿಗಳಲ್ಲಿ ದೊರೆಯುವ ಈ ಪನೀರ್‌ ಅನ್ನು ಬಹುತೇಕರು ಮನೆಯಲ್ಲೇ ತಯಾರಿಸುವ ಬದಲು ಮಾರುಕಟ್ಟೆಯಿಂದ ಖರೀದಿಸಿ ಮಾಡುವವರೇ ಹೆಚ್ಚು. ಆದರೆ, ಪನೀರ್‌ ಹೆಸರಿನಲ್ಲಿ ಸಾಕಷ್ಟು ಕಲಬೆರಕೆಗಳೂ ನಡೆಯುತ್ತಿವೆ. ಇದನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ (Paneer Test) ಉಪಯುಕ್ತ ಮಾಹಿತಿ.

VISTARANEWS.COM


on

Paneer test
Koo

ಪನೀರ್‌ ಮಂಚೂರಿಯನ್‌, ಪನೀರ್‌ ಟಿಕ್ಕಾ, ಪನೀರ್‌ ಬುರ್ಜಿ, ಪನೀರ್‌ ಮಖನಿ, ಪನೀರ್‌ ಪರಾಠಾ ಹೀಗೆ ಪನೀರ್‌ ಹಾಕಿದ ತಿನಿಸುಗಳನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಾದಿಯಾಗಿ ದೊಡ್ಡವರೂ ಇಷ್ಟಪಡುವ ಒಳ್ಳೆಯ ಆಹಾರವಿದು. ಫಿಟ್‌ನೆಸ್‌ ಪ್ರಿಯರೂ ಕೂಡಾ ಪ್ರೊಟೀನ್‌ಗಾಗಿ ತಿನ್ನುವ ನಿತ್ಯಾಹಾರಗಳಲ್ಲಿ ಪನೀರ್‌ ಕೂಡ ಒಂದು. ಬಹಳ ರುಚಿಯಾಗಿಯೂ ಮಾಡಬಹುದಾದ, ಆರೋಗ್ಯಕರವೂ ಆದ, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನೂ ನೀಡುವ ಈ ಪನೀರನ್ನು ಸಸ್ಯಾಹಾರಿಗಳೂ, ಮಾಂಸಾಹಾರಿಗಳೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ, ಡೈರಿ ಉತ್ಪನ್ನಗಳ ಅಂಗಡಿಗಳಲ್ಲಿ ದೊರೆಯುವ ಈ ಪನೀರ್‌ ಅನ್ನು ಬಹುತೇಕರು ಮನೆಯಲ್ಲೇ ತಯಾರಿಸುವ ಬದಲು ಮಾರುಕಟ್ಟೆಯಿಂದ ಖರೀದಿಸಿ ಮಾಡುವವರೇ ಹೆಚ್ಚು. ಆದರೆ, ಪನೀರ್‌ ಹೆಸರಿನಲ್ಲಿ ಸಾಕಷ್ಟು ಕಲಬೆರಕೆಗಳೂ ನಡೆಯುತ್ತಿವೆ. ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವೆಡೆ ಕಲಬೆರಕೆ ಪನೀರ್‌ನ ಮಾರಾಟದ ಕೇಂದ್ರಗಳನ್ನು ಆಹಾರ ಅಧಿಕಾರಿಗಳು ಪತ್ತೆಹಚ್ಚುವ ಪ್ರಕರಣಗಳೂ ನಡೆದಿವೆ. ಕಲಬೆರಕೆ ವ್ಯಾಪಕವಾಗಿ ನಡೆಯುವ ಇಂತಹ ಕಾಲಘಟ್ಟದಲ್ಲಿ ನಮ್ಮ ಆಹಾರದ ಕಾಳಜಿಯನ್ನು ನಾವು ಮಾಡಲೇಬೇಕು. ಒಳ್ಳೆಯ ಪನೀರ್‌ ಎಂದು ಭಾವಿಸಿ ಕೊಂಡು ತಂದ ಪನೀರ್‌ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಬೀರುವಂಥದ್ದೂ ಆಗಿರಬಹುದ್ದರಿಂದ ಕೆಲವು ಸಾಮಾನ್ಯ ತಿಳಿವಳಿಕೆಗಳನ್ನು ಕೊಳ್ಳುವ ಮುನ್ನ ಹೊಂದಿರುವುದು ಬಹಳ ಒಳ್ಳೆಯದು. ಆದರೆ, ಇದು ತಿಳಿಯುವುದು ಹೇಗೆ ಎಂಬ ಪ್ರಶ್ನೆ ಹಲವರಲ್ಲಿರಬಹುದು. ತಾನು ಕೊಂಡುಕೊಂಡಿದ್ದು ಒಳ್ಳೆಯ ಪನೀರೋ, ಕಲಬೆರಕೆಯಾದುದೋ (Paneer Test) ಎಂದು ಕಂಡುಹಿಡಿಯುವ ಕೆಲವು ಸರಳ ವಿಧಾನಗಳು ಇಲ್ಲಿವೆ. ಆ ಮೂಲಕ ಕೆಟ್ಟ ಆಹಾರ ಸೇವನೆಯಿಂದ ನೀವು ದೂರವಿರಬಹುದು.

Paneer Benefits

ಬಣ್ಣ ಕೂಡ ಮುಖ್ಯ

ಸಾಮಾನ್ಯವಾಗಿ ಒಳ್ಳೆಯ ಪನೀರ್‌ನ ಬಣ್ಣ ಒಂದೇ ತೆರನಾಗಿರುತ್ತದೆ. ಬಿಳಿ ಅಥವಾ ಕೆನೆಬಣ್ಣದ ಬಿಳಿಯನ್ನು ಹೊಂದಿರುವ ಪನೀರ್‌ ಮುಟ್ಟಲು ನುಣುಪಾಗಿರುತ್ತದೆ. ಅದರ ಮೇಲ್ಮೈಯಲ್ಲಿ ಬಣ್ಣದ ಅಥವಾ ಶೇಡ್‌ನಲ್ಲಿ ಸ್ವಲ್ಪವೂ ವ್ಯತ್ಯಾಸವಿರುವುದಿಲ್ಲ. ಬಣ್ಣದಲ್ಲಿ ವ್ಯತ್ಯಾಸ ಕಂಡರೆ ಅದು ಒಳ್ಳೆಯ ಪನೀರ್‌ ಅಲ್ಲ.

ಪೇಸ್ಟ್‌ನಂತಾಗುತ್ತದೆಯಾ ನೋಡಿ

ಸ್ವಲ್ಪ ಪನೀರನ್ನು ಕೈಯಿಂದ ಹಿಸುಕಿ ನೋಡಿ. ಹಿಸುಕಿದಾಗ ತರಿತರಿಯಾದಂತೆ ಅನಿಸಿದರೆ ಅದು ಒಳ್ಳೆಯ ಪನೀರ್‌. ಹಿಸುಕಿದಾಗಲೂ ನುಣುಪಾಗಿ ಪೇಸ್ಟ್‌ನಂತೆ ಇರುವುದಿಲ್ಲ.

smell Paneer

ಮೂಸಿ ನೀಡಿ ಗ್ರಹಿಸಬಹುದು

ಒಳ್ಳೆಯ ಶುದ್ಧವಾದ ಪನೀರನ್ನು ನೀವು ಮೂಸಿ ನೋಡಿ. ಅದರ ಪರಿಮಳ ಹಾಲಿನ ಹಾಗೆ ಮೆದುವಾದ ಘಮವನ್ನು ಹೊಂದಿರುತ್ತದೆ. ಕಲಬೆರಕೆಯಾಗಿದ್ದರೆ, ಇದರ ಪರಿಮಳ ಹೀಗಿರುವುದಿಲ್ಲ. ಹೆಚ್ಚು ಹುಳಿಯಾಗಿಯೋ ಅಥವಾ ಪರಿಮಳದಲ್ಲಿ ವ್ಯತ್ಯಾಸವನ್ನು ಹೊಂದಿರುತ್ತದೆ.

ನೀರಿಗೆ ಹಾಕಿ ನೋಡಿ

ಪನೀರ್‌ನ ಸಣ್ಣ ತುಣುಕೊಂದನ್ನು ನೀರಿಗೆ ಹಾಕಿ ನೋಡಿ. ಶುದ್ಧ ಪನೀರ್‌ ಆಗಿದ್ದರೆ ನೀರಲ್ಲಿ ಮುಳುಗುತ್ತದೆ. ಕಲಬೆರಕೆಯದಾಗಿದ್ದರೆ ಅದು ಅರೆಬರೆ ಕರಗಿಬಿಡಬಹುದು ಅಥವಾ ಇನ್ನಷ್ಟು ಸಣ್ಣ ಸಣ್ಣ ತುಣುಕುಗಳಾಗಿ ಒಡೆಯಬಹುದು.

ಆಕಾರ ಬದಲಾಗುತ್ತದೆ

ಒಂದು ಪ್ಯಾನ್‌ನಲ್ಲಿ ಒಂದು ಸಣ್ಣ ತುಂಡು ಪನೀರ್‌ ಅನ್ನು ಯಾವುದೇ ನೀರು ಅಥವಾ ಎಣ್ಣೆಯನ್ನು ಹಾಕದೆ ಹಾಗೆಯೇ ಬಿಡಿ. ಉರಿಯ ತಾಪಕ್ಕೆ ಪ್ಯಾನ್‌ನಲ್ಲಿ ಅದು ನೀರು ಬಿಡಲಾರಂಭಿಸುತ್ತದೆ. ಆದರೆ, ತನ್ನ ಆಕಾರವನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ. ಕಲಬೆರಕೆಯ ಪನೀರ್‌ ಹೆಚ್ಚು ಕರಗಿ ಹೆಚ್ಚು ನೀರು ಬಿಡಬಹುದು. ಹಾಗೂ ಅದರ ಆಕಾರ ಬದಲಾಗಬಹುದು.

Paneer

ಅಯೋಡಿನ್‌ ಟಿಂಚರ್‌ ಟೆಸ್ಟ್‌

ಒಂದು ಸಣ್ಣ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಪನೀರ್‌ನ ಸಣ್ಣ ತುಂಡನ್ನು ಹಾಕಿ ಅದನ್ನು ಕುದಿಸಿ. ನಂತರ ಅದಕ್ಕೆ ಕೆಲವು ಹನಿ ಅಯೋಡಿನ್‌ ಟಿಂಚರ್‌ ಅನ್ನು ಹಾಕಿ. ಅದು ನೀಲಿಯಾಗಿ ಬದಲಾದರೆ ಅದರಲ್ಲಿ ಸ್ಟಾರ್ಚ್‌ ಅಥವಾ ಬೇರೇನೋ ಮಿಕ್ಸ್‌ ಮಾಡಲಾಗಿದೆ ಎಂದರ್ಥ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Continue Reading

ಆರೋಗ್ಯ

Tears Of Joy: ಕಣ್ಣೀರು ಸುರಿಸುವುದರಿಂದಲೂ ಲಾಭವಿದೆ!

ಕಣ್ಣೀರಿನಿಂದ ಲಾಭವಿದೆ! ಅಂದರೆ ನಮ್ಮ ಕಿಸೆ ತುಂಬುತ್ತದೆ ಎಂದಲ್ಲ, ಮನಸ್ಸು ತುಂಬಿ ಬಂದು ಒಳಗಿನ ಒತ್ತಡ ಹೆಚ್ಚಾದಾಗ ಅದನ್ನು ಹೊರ ಹಾಕುವುದಕ್ಕೆ ನಮಗೆ ಕಣ್ಣೀರು ಬೇಕು. ಬೇಸರದಲ್ಲಿ ಅಳುವಷ್ಟೇ ಸಹಜ, ಖುಷಿಯಾದಾಗ ಆನಂದದ ಕಣ್ಣೀರು. ಇದರಿಂದ ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುತ್ತವೆ. ಈ ಕುರಿತ (Tears Of Joy) ಮಾಹಿತಿ ಇಲ್ಲಿದೆ.

VISTARANEWS.COM


on

Tears Of Joy
Koo

ಬೇಸಿಗೆಯಲ್ಲಿ ಶರೀರದ ಉಷ್ಣತೆ ಹೆಚ್ಚಾದರೆ ಅದನ್ನು ತಣಿಸಲು ನಾವು ಬೆವರುವುದಿಲ್ಲವೇ? ಹಾಗೆಯೇ, ದೇಹಕ್ಕೆ ಬೇಡದಿರುವಂಥ ಯಾವುದು ಹೆಚ್ಚಾದರೂ ಅದನ್ನು ಹೊರಗೆ ಹಾಕುವುದಕ್ಕೆ ಶರೀರಕ್ಕೊಂದು ವಿಸರ್ಜನಾ ಕ್ರಮವೆಂಬುದಿದೆ. ಹಾಗಿರುವುದರಿಂದಲೇ ನಮ್ಮ ದೇಹ ಆರೋಗ್ಯಪೂರ್ಣವಾಗಿ ಇರುವುದು. ಇದು ಶರೀರಕ್ಕೆ ಮಾತ್ರವೇ ಅಲ್ಲ, ಮನಸ್ಸಿನ ವಿಷಯದಲ್ಲೂ ಹೌದು. ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಕ್ಕೆ ಹಾಕುವುದಕ್ಕೆ ಕಣ್ಣೀರು ನಮಗೆ ನೆರವಾಗುತ್ತದೆ (Tears Of Joy) ಎಂಬುದನ್ನು ಗಮನಿಸಿದ್ದೀರಾ? ದುಃಖ, ಬೇಸರವಾದಾಗ ಅಳುವಷ್ಟೇ ಸಹಜ, ಸಂತಸದಲ್ಲೂ ಅಳುವುದು. ಒಂದೊಮ್ಮೆ ಹೀಗೆ ಭಾವನೆಗಳ ಒತ್ತಡದಲ್ಲಿ ಕಣ್ಣೀರು ಬರುವುದನ್ನು ನಾಚಿಕೆ ಎಂದುಕೊಂಡರೆ- ತಪ್ಪು ತಿಳುವಳಿಕೆಯಿದು. ಸಂತೋಷದಲ್ಲಿ ಕಣ್ಣೀರು ಸುರಿಸುವುದರಲ್ಲೂ ಬಹಳಷ್ಟು ಪ್ರಯೋಜನಗಳಿವೆ. ಹಾಗಾಗಿ ಹೆಚ್ಚು ಯೋಚಿಸದೆ ಕಣ್ಣು, ಮೂಗು ಒರೆಸಿಕೊಳ್ಳುವುದಕ್ಕೆ ಕರವಸ್ತ್ರ ಇರಿಸಿಕೊಳ್ಳಿ.

happy Tears

ಖುಷಿಗೂ ಕಣ್ಣೀರೇ?

ನಮ್ಮ ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಹಾಕುವಂಥ ನೈಸರ್ಗಿಕ ವ್ಯವಸ್ಥೆಯೆಂದರೆ ಕಣ್ಣೀರು ಹಾಕುವುದು. ಕಣ್ಣೀರು ಹಾಕುವುದಕ್ಕೆ ಖುಷಿ-ಬೇಸರ ಎಂಬ ಭೇದವಿಲ್ಲ. ಮನಸ್ಸಿನಲ್ಲಿ, ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುವುದರಿಂದ ದೇಹ-ಮನಸ್ಸುಗಳ ಸ್ವಾಸ್ಥ್ಯಕ್ಕೆ ಬಹಳಷ್ಟು ಲಾಭವಿದೆ. ಕಣ್ಣು-ಮೂಗು ಒರೆಸಿಕೊಳ್ಳುತ್ತಿದ್ದಂತೆ ಮನಸ್ಸು ಶಾಂತವಾಗುವುದು, ದೇಹಾದ್ಯಂತ ಹರಡಿದ್ದ ಉದ್ವಿಗ್ನತೆ ಮಾಯವಾಗುವುದನ್ನು ಗಮನಿಸಬಹುದು. ಆನಂದಭಾಷ್ಪ ಸುರಿಸುವುದರಿಂದ ಆಗುವ ಲಾಭಗಳೇನು ಎಂದರೆ-

ಮನಸ್ಸು ಶಾಂತ

ಅತಿಯಾದ ಖುಷಿಯಲ್ಲಿ ಎಂಡಾರ್ಫಿನ್‌, ಆಕ್ಸಿಟೋಸಿನ್‌ ಮತ್ತು ಡೋಪಮಿನ್‌ ಮುಂತಾದ ಚೋದಕಗಳನ್ನು ದೇಹ ಸ್ರವಿಸುತ್ತದೆ. ಇಂಥ ಸಂದರ್ಭದಲ್ಲಿ ಭಾವನೆಗಳ ಹೊಳೆಯಿಂದ ಹೊರತಂದು ಮನಸ್ಸನ್ನು ಸ್ಥಿಮಿತಗೊಳಿಸುವುದಕ್ಕೆ ಸಂತೋಷದ ಕಣ್ಣೀರು ಸಹಾಯ ಮಾಡುತ್ತದೆ.

ಭಾವಗಳಿಗೆ ಕೋಡಿ

ನಿತ್ಯದ ಬದುಕಿನಲ್ಲಿ ಸುಪ್ತವಾಗಿ ಮನದಲ್ಲಿ ಅಡಗುವ ಭೀತಿ, ನೋವು, ಶೋಕ, ಖುಷಿ, ಸಂಭ್ರಮ ಮುಂತಾದ ಹತ್ತೆಂಟು ಭಾವನೆಗಳು ಸಹಿಸಲು ಅಸಾಧ್ಯವಾದ ಒತ್ತಡವನ್ನು ಉಂಟುಮಾಡುತ್ತವೆ. ಕಣ್ಣೀರು ಅವುಗಳಿಗೆ ಹೊರಹೋಗುವ ದಾರಿಯನ್ನು ತೋರಿಸುತ್ತದೆ. ಮಕ್ಕಳ ವಿವಾಹದಲ್ಲಿ ಹೆತ್ತವರು ಸುರಿಸುವ ಆನಂದಭಾಷ್ಪ ಇರಬಹುದು, ಹೊಸ ಕೆಲಸ ಸಿಕ್ಕ ಸಂಭ್ರಮ ಆದರೂ ಸರಿಯೇ- ಅಂತೂ ಹಳೆಯದೆಲ್ಲಾ ಸುಪ್ತ ಖಾತೆಗಳನ್ನು ಹೊರತೆಗೆದು ಕಣ್ಣೀರು ಕರೆಯುತ್ತದೆ ಮನಸ್ಸು. ಇದರಿಂದ ಜೀವಕ್ಕೆ ಬಹಳ ಆರಾಮ ಲಭಿಸುವುದು ಅನುಭವಕ್ಕೆ ಬರುತ್ತದೆ.

Daughter Wipes Away Mother's Tears of Joy

ಸಂವಹನದ ಮಾಧ್ಯಮ

ಮಾನವ ಸಂಘಜೀವಿ. ಜೊತೆಗಿರುವವರೊಡನೆ ಸಂವಹನ ನಡೆಸುತ್ತಲೇ ಬದುಕು ನಡೆಸಬೇಕು. ಇಷ್ಟಾಗಿಯೂ ಕೆಲವೊಮ್ಮೆ ಎಲ್ಲವನ್ನೂ ವಾಚ್ಯವಾಗಿಯೇ ಹೇಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಭಾವನೆಗಳು ಅತಿಯಾದ ಹೊತ್ತಿನಲ್ಲಿ ಮಾತು ಸೋಲುವುದು ಸಹಜ. ಎದುರಿನವರ ಕಣ್ಣೀರು ಕಂಡಾಕ್ಷಣವೇ ಅವರ ಪ್ರೀತಿ, ಕೃತಜ್ಞತೆಯಂಥ ಭಾವನೆಗಳು ಫಕ್ಕನೆ ಮನಸ್ಸಿಗೆ ನಾಟುತ್ತವೆ. ಮನಸ್ಸುಗಳನ್ನು ಹತ್ತಿರವಾಗಿಸುತ್ತವೆ. ಆಕ್ಸಿಟೋಸಿನ್‌ನಂಥ ಚೋದಕಗಳು ಸಾಮಾಜಿಕವಾಗಿ ಇನ್ನೊಬ್ಬರೊಂದಿಗೆ ಸಂಪರ್ಕ ಸಾಧಿಸಲು ಸಹ ನೆರವಾಗುತ್ತವೆ. ಮಾನಸಿಕ ಸ್ಥಿರತೆಯಿಂದ ಬದುಕು ಸ್ಥಿರವಾಗುವುದು ಹೌದು.

ದೇಹಕ್ಕೂ ಲಾಭ

ಈವರೆಗಿನ ಉಪಯುಕ್ತತೆಗಳೆಲ್ಲಾ ಹೆಚ್ಚಿನವು ಮಾನಸಿಕ ಸ್ತರದಲ್ಲಿನವು. ಆದರೆ ಅಷ್ಟೇ ಅಲ್ಲ, ದೇಹಕ್ಕೂ ಉಪಯೋಗವಿದೆ. ಕಣ್ಣನ್ನು ಸ್ವಚ್ಚಗೊಳಿಸಲು ಕಣ್ಣೀರು ಸಾಧನ. ಇದರಿಂದ ಕಣ್ಣಿನ ಸೋಂಕನ್ನು ಸಹ ತಡೆಗಟ್ಟಬಹುದು. ಅಳುವುದರಿಂದ ಉಸಿರಾಟ ಮತ್ತು ಹೃದಯ ಬಡಿತವೂ ನಿಯಂತ್ರಣಕ್ಕೆ ಬರುತ್ತದೆ. ಈ ಎಲ್ಲವುಗಳಿಂದ ಒತ್ತಡವನ್ನು ನಿಭಾಯಿಸುವ ಕ್ಷಮತೆ ಹೆಚ್ಚುತ್ತದೆ. ಹಾಗಾಗಿ ಎಂದಾದರೂ ಭಾವನೆಗಳ ಮಹಾಪೂರದಲ್ಲಿ ತೇಲುತ್ತಿರುವಾಗ ಅಳು ಬಂತೋ, ನಾಚಿಕೆ ಪಡಬೇಡಿ. ಮನಸ್ಸು ತುಂಬುವಷ್ಟು ಕಣ್ಣೀರು ಸುರಿಸಿ, ಆರೋಗ್ಯವಂತರಾಗಿರಿ.

ಇದನ್ನೂ ಓದಿ: Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

Continue Reading
Advertisement
Covishield Vaccine
ಪ್ರಮುಖ ಸುದ್ದಿ5 mins ago

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ದೇಶ17 mins ago

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

Ayushman Bharat Diwas
ಆರೋಗ್ಯ42 mins ago

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Onion Benefits
ಆರೋಗ್ಯ49 mins ago

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

rajamarga column srikant bolla
ಅಂಕಣ54 mins ago

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Karnataka weather
ಕರ್ನಾಟಕ1 hour ago

Karnataka Weather: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮೇ 3ರವರೆಗೆ ಹೆಚ್ಚಿರಲಿದೆ ಶಾಖದ ಅಲೆಗಳ ತೀವ್ರತೆ!

Vistara Editorial
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಸ್ತ್ರೀಯರ ಘನತೆಗೆ ಹಾನಿ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ

Labour Day 2024
ದೇಶ2 hours ago

Labour Day 2024: ಕಾರ್ಮಿಕರು ಕೇಂದ್ರ ಸರ್ಕಾರದ ಇ-ಶ್ರಮ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Paneer test
ಆರೋಗ್ಯ2 hours ago

Paneer Test: ನಾವು ತಿನ್ನುವ ಪನೀರ್‌ ಶುದ್ಧವಾದದ್ದೋ, ಕಲಬೆರಕೆಯದ್ದೋ ಪರೀಕ್ಷೆ ಮಾಡೋದು ಹೇಗೆ?

dina bhavishya read your daily horoscope predictions for April 30 2024
ಭವಿಷ್ಯ3 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ3 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202419 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202420 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌