ಸಂಸಾರ ಸರಿಗಮದಲ್ಲಿ ಬರುವ ಅಪಸ್ವರ ನಿವಾರಿಸಲು ಎಂಟು ಸೂತ್ರ - Vistara News

ಲೈಫ್‌ಸ್ಟೈಲ್

ಸಂಸಾರ ಸರಿಗಮದಲ್ಲಿ ಬರುವ ಅಪಸ್ವರ ನಿವಾರಿಸಲು ಎಂಟು ಸೂತ್ರ

ಮದುವೆ ಎಂಬ ಹೊಸ ಲೋಕಕ್ಕೆ ಖುಷಿಯಿಂದ ಎಂಟ್ರಿ ಕೊಡುವ ಜೋಡಿಗಳು ನಿಧಾನವಾಗಿ ತಮ್ಮ ನಡುವಿನ ಬಾಂಧವ್ಯ ಹಳಸದಂತೆ ಕಾಪಾಡಿಕೊಳ್ಳಬೇಕು. ಅದು ಹೇಗೆ? 8 ಸೂತ್ರಗಳು ಇಲ್ಲಿವೆ.

VISTARANEWS.COM


on

married life
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈಗಷ್ಟೇ ಹಸೆಮಣೆಗೆ ಏರುವಾತನನ್ನು ಆತನ ಗೆಳೆಯರೆಲ್ಲ ಸೇರಿ ಇನ್ನು ನಿನ್ನ ಕಥೆ ಮುಗಿದಂತೆಯೇ, ಬಾವಿಗೆ ಬಿದ್ದಾಯಿತು, ಈಜಿದರೂ ಬಾವಿಯೊಳಗೇ ಎಂದು ಕಾಲೆಳೆಯುವುದುಂಟು. ಹುಡುಗಿಗೂ ಅಷ್ಟೇ, ಮದುವೆಯಾದರೆ, ಮೊದಲಿನಂತಿರುವುದಿಲ್ಲ, ತನ್ನ ಕನಸುಗಳಿಗೆಲ್ಲ ಇನ್ನು ಎಳ್ಳುನೀರು ಎಂಬ ಭಯ ಇದ್ದರೂ, ಇಬ್ಬರೂ ಮದುವೆಯೆಂಬ ಹೊಸ ಲೋಕಕ್ಕೆ ಖುಷಿಯಾಗಿಯೇ ಎಂಟ್ರಿ ಕೊಡುತ್ತಾರೆ. ಕೆಲವರಿಗೆ ಕೆಲಕಾಲ ಕಳೆದ ಮೇಲೆ, ಪ್ರತಿಯೊಬ್ಬರೂ ಹೇಳಿದ್ದು ಅಪ್ಪಟ ಸತ್ಯ ಅಂತ ಅನಿಸಿದರೆ, ಇನ್ನೂ ಕೆಲವರಿಗೆ ಸುಮ್ಮನೆ ಕಾಲೆಳೆಯುವುದಷ್ಟೇ, ಚಂದದ ಜೀವನವಿದು ಅನಿಸಬಹುದು. ಇರಲಾಗದೆ ಈ ಬಂಧದಿಂದಲೇ ಹೊರಬರುವ ಒಂದಷ್ಟು ಮಂದಿಯೂ ಇದ್ದಾರೆ.

೧.. ಸಮಾನತೆ ಎಂಬುದು ಉತ್ತಮ ದಾಂಪತ್ಯದ ಲಕ್ಷಣ ಎಂಬುದು ನಿಜವೇ ಆದರೂ ಕೆಲವರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಪ್ರತಿಯೊಂದನ್ನೂ ಇದೇ ಆಧಾರದಲ್ಲಿ ಅಳೆದು ತೂಗಿ ದಾಂಪತ್ಯದ ಅಂದಗೆಡಿಸುವರು. ಪ್ರತಿಯೊಂದನ್ನೂ ಹೀಗೇ ಆಗಬೇಕು ಎಂಬ ಒಡಂಬಡಿಕೆಯ ರೂಪದಲ್ಲಿ ದಾಂಪತ್ಯದಲ್ಲಿ ಮುನ್ನಡೆಯಲಿಚ್ಛಿಸಿದರೆ ಅಲ್ಲಿ ಖಂಡಿತ ಸಂಬಂಧವೊಂದು ಹಳಸಿಹೋಗುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ಇಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರೀತಿಯಿಂದಲೇ ಅವುಗಳನ್ನು ನಿರ್ವಹಿಸಬೇಕಾದ್ದು ಅಗತ್ಯ. ಪ್ರತಿಯೊಂದನ್ನೂ ೫೦:೫೦ರ ಆಧಾರದಲ್ಲಿ ಹಂಚಿಕೊಂಡು ತೀರಾ ಖಡಕ್‌ ಲೆಕ್ಕಾಚಾರದ ನಿರ್ವಹಣೆ ಇಲ್ಲಿ ಸಾಧ್ಯವಿಲ್ಲ.

೨. ಇಬ್ಬರ ನಡುವೆ ಸ್ಪರ್ಧೆಯೇರ್ಪಟ್ಟರೆ ಉಳಿಗಾಲವಿಲ್ಲ. ಇದು ಕೊನೆಗೆ ಸರಿ ತಪ್ಪುಗಳ ದ್ವಂದ್ವದಲ್ಲೇ ಕೊನೆಯಾಗುತ್ತದೆ. ಪರಿಸ್ಥಿತಿಗಳು ಬದಲಾಗುತ್ತವೆ. ಇಬ್ಬರೂ ಪರಿಸ್ಥಿತಿಯ ಅನುಗುಣವಾಗಿ ಬದಲಾಗುವುದು, ತಮ್ಮ ಆದ್ಯತೆ ಜವಾಬ್ದಾರಿಗಳನ್ನರಿತು ಮುನ್ನಡೆಯುವುದಷ್ಟೆ ಮುಖ್ಯವಾಗುತ್ತದೆ.

೩. ಸಂಗಾತಿ ಪ್ರತಿ ಬಾರಿಯೂ ತನ್ನನ್ನು ಅರಿತು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ, ಇದು ಇಬ್ಬರಲ್ಲೂ ಇರುವುದು ತಪ್ಪಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿಗಳು, ಒತ್ತಡಗಳು ಹೀಗಿರಲು ಬಿಡುವುದಿಲ್ಲ. ಪ್ರತಿ ಬಾರಿಯೂ ಸಂಗಾತಿ ಮನದಲ್ಲಿ ಏನಿದೆ ಅಂತ ಅರಿತುಕೊಳ್ಳುವುದೂ ಅಷ್ಟು ಸುಲಭವಲ್ಲ. ಏನನ್ನೂ ಹೇಳಿಕೊಳ್ಳದೆ ಇದ್ದರೆ ಇದು ಸುಲಭವೂ ಅಲ್ಲ. ಹಾಗಾಗಿ ಮನಸ್ಸು ಬಿಚ್ಚಿ ಮಾತಾಡುವುದು ಬಹಳ ಮುಖ್ಯ.

೪. ಪರಿಸ್ಥಿತಿ ಬಿಗಡಾಯಿಸಿದರೆ, ಸಂಬಂಧ ಹಳಸುತ್ತಿದೆ ಎನಿಸಿದರೆ, ಅದನ್ನು ಹಾಗೆಯೇ ಬಿಡುವುದು ಒಳ್ಳೆಯದಲ್ಲ. ಇಬ್ಬರೂ ಇದನ್ನು ಸರಿಪಡಿಸಲು ಪ್ರಯತ್ನಿಸಬೇಕಾಗುತ್ತದೆ. ಅಗತ್ಯ ಬಿದ್ದರೆ, ಕೌನ್ಸೆಲಿಂಗ್‌ ಪಡೆದುಕೊಳ್ಳುವುದು ತಪ್ಪಲ್ಲ. ಸಂವಹನ ಸಂಸಾರದಲ್ಲಿ ಅತೀ ಅಗತ್ಯ. ಒಂದೊಳ್ಳೆ ಸಂಬಂಧ ವರ್ಕೌಟ್‌ ಆಗಬೇಕೆಂದರೆ, ಮಾತು ಕೀಲಿಕೈ. ಹಾಗಾಗಿ, ಇಬ್ಬರು ಕೂತು ಆಡಲಾಗದ ಮಾತುಗಳೂ ಕೂಡಾ ತಜ್ಙರ ಸಮ್ಮುಖದಲ್ಲಿ ಬಗೆಹರಿದು ಸಮಸ್ಯೆ ಬಗೆಹರಿದು ದಾರಿ ಸುಗಮವಾಗಬಹುದು.

೫. ಯಾವುದೇ ವಿಚಾರದಲ್ಲಿ ವಾದ ಸಲ್ಲ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅವರಿರುವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಪ್ರಯತ್ನಿಸುವುದು ಆರೋಗ್ಯಕರ ಸಂಬಂಧವೊಂದು ಚಿರಸ್ಥಾಯಿಯಾಗಿ ಉಳಿಯಬಹುದು.

ಇದನ್ನೂ ಓದಿ: World Motorcycle Day | ಬೈಕೆಂಬ ಭಾವಗೀತೆ! ನೆನಪುಗಳ ಗಂಟು, ಅಳಿಸಲಾಗದ ಪ್ರೀತಿ ನಂಟು

೬. ಪ್ರತಿ ದಾಂಪತ್ಯದ ಮುಂದೆಯೂ ಒಂದು ಗುರಿಯಿರುತ್ತದೆ. ಒಂದು ಕುಟುಂಬವಾಗಿ ಹೇಗೆ ಮುಂದುವರಿಯಬೇಕು, ಏನನ್ನು ಸಾಧಿಸಬೇಕು, ಪಡೆಯಬೇಕು ಎಂಬುದರ ಬಗ್ಗೆ ಒಮ್ಮತವಿರಲಿ. ಇಬ್ಬರೂ ಪ್ರಾಮಾಣಿಕವಾಗಿ ಈ ನಿಟ್ಟಿನಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾದ ವಾತಾವರಣವಿರಲಿ. ಪರಿಸ್ಥಿತಿಗೆ ಅನುಗುಣವಾಗಿ ಇಬ್ಬರೂ ಮುಂದುವರಿವ ಗುಣವಿರಲಿ.

೭. ನೀವು ಪ್ರೀತಿಸಿ ಮದುವೆಯಾಗಿದ್ದರೆ ಆರಂಭದಲ್ಲಿ ಅರಿತುಕೊಳ್ಳುವಲ್ಲಿ ಸಮಸ್ಯೆಯಾಗಲಿಕ್ಕಿಲ್ಲ. ಆದರೆ ವಿವಾಹ ವೆಬ್‌ಸೈಟ್‌ಗಳ ಮೂಲಕವೋ ಮತ್ತೊಂದು ರೀತಿಯಲ್ಲೋ ಮದುವೆಯಾಗಿದ್ದರೆ, ಆಸಕ್ತಿಗಳ ಆಧಾರದಲ್ಲಿ ರಚಿತವಾಗಿರುತ್ತದೆ. ಕೆಲವಾದರೂ ಆಸಕ್ತಿಗಳು ಇಬ್ಬರದ್ದೂ ಒಂದೇ ಆಗಿದ್ದಲ್ಲಿ, ಸಂಬಂಧ ಚೆನ್ನಾಗಿರುತ್ತದೆ ಎಂಬುದನ್ನು ಶೇ.೬೦ರಷ್ಟು ಮಂದಿ ನಂಬುತ್ತಾರೆ. ಒಂದೇ ತರದ ಆಸಕ್ತಿಗಳು ಇಬ್ಬರಲ್ಲೂ ಇಲ್ಲದಿದ್ದಲ್ಲಿ ದಾಂಪತ್ಯ ಖಂಡಿತ ಏಕತಾನತೆಯನ್ನು ಹುಟ್ಟುಹಾಕುತ್ತದೆ. ಲವಲವಿಕೆ ಕಳೆದುಕೊಳ್ಳುತ್ತದೆ. ಆಸಕ್ತಿಗಳು ಬೇರೆ ಬೇರೆ ಇದ್ದರೂ ಇಬ್ಬರ ಆಸಕ್ತಿಗಳ ಮೇಲೂ ಒಬ್ಬರಿಗೊಬ್ಬರು ಗೌರವ ಹೊಂದಿರಬೇಕು. ತಮಾಷೆ, ಉಡಾಫೆ ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಸಂಗಾತಿ ತನ್ನಿಷ್ಟದ ಸಂಗತಿಗಳ ಬಗ್ಗೆ ಮಾತನಾಡುವಾಗ ಕಿವಿಗೊಡಿ. ಅವಕ್ಕೂ ಸಮಯ ನೀಡಿ. ಮಾತಿಗೆ ಕಿವಿಯಾಗುವುದೂ ಪ್ರೋತ್ಸಾಹವೇ. ಕುರುಡು ನಂಬಿಕೆಗಳಿಂದ ಸಂಗಾತಿಯ ಆಸಕ್ತಿಯನ್ನು ಬಲಿಕೊಡಬೇಡಿ.

8. ಮಗು ಹುಟ್ಟಿದ ತಕ್ಷಣ ಎಲ್ಲ ಸರಿಯಾಗಿಬಿಡುತ್ತದೆ ಎಂಬುದೊಂದು ದೊಡ್ಡ ಸುಳ್ಳು ನಂಬಿಕೆ. ಮಗುವೊಂದರ ಆಗಮನ ಇಬ್ಬರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆಯೆಂಬುದು ನಿಜವೇ. ಆದರೆ, ಇದು ಚೆನ್ನಾಗಿದ್ದ ಸಂಬಂಧಕ್ಕೆ ಮಾತ್ರ ಅನ್ವಯಿಸುತ್ತದೆ. ಚೆನ್ನಾಗಿದ್ದ ಸಂಬಂಧ ಮಗುವೊಂದರ ಆಗಮನದೊಂದಿಗೆ ಮತ್ತಷ್ಟು ಒಲವನ್ನು ಸುರಿದುಕೊಂಡು ಸಮೃದ್ಧವಾಗುತ್ತದೆ. ಆದರೆ, ಮೊದಲೇ ಸಂಸಾರ ಹದಗೆಟ್ಟಿದ್ದರೆ, ಮಗು ಮ್ಯಾಜಿಕ್‌ ಮಾಡಿ ಸರಿ ಮಾಡುವುದಿಲ್ಲ. ಇಲ್ಲಿ ಇಬ್ಬರ ಪ್ರಯತ್ನ, ಈ ಸಂದರ್ಭ ತಾವೇನು ಮಾಡಬೇಕು ಎಂಬುದನ್ನು ಅರಿತು ನಡೆಯುವುದರ ಮೇಲೆ ನಿಂತಿದೆ. ಇಬ್ಬರಿಗೂ ತಾವೆಷ್ಟು ಇಲ್ಲಿ ಸಮಯ ನೀಡಬೇಕು ಎಂಬುದೂ ಗೊತ್ತಿರಬೇಕು. ಇಲ್ಲದಿದ್ದಲ್ಲಿ, ಮಕ್ಕಳನ್ನು ಬೆಳೆಸುವ ಬಹು ದೊಡ್ಡ ಜವಾಬ್ದಾರಿಯನ್ನು ಕಾಲ್ಚೆಂಡಾಟದಂತೆ ಇಬ್ಬರೂ ಒಬ್ಬರಿಗೊಬ್ಬರು ಒದೆಯುತ್ತ, ಮತ್ತಷ್ಟು ದಿಕ್ಕೆಡಿಸುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

ಆಹಾರದ ಬದಲಾವಣೆಗಳಿಂದ ಕೊಲೆಸ್ಟ್ರಾಲ್‌ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ವಾಸ್ಥ್ಯ ಪರಿಣಿತರು. ಎಂಥಾ ಆಹಾರಗಳವು? ಈ (Health Tips Kannada) ಲೇಖನ ಓದಿ.

VISTARANEWS.COM


on

Health Tips Kannada
Koo

ಜೀವನಶೈಲಿಯ ದೋಷಗಳಿಂದಾಗಿ ಹಲವಾರು ರೋಗಗಳು ನಮಗೆ ಗಂಟಿಕ್ಕಿಕೊಳ್ಳುತ್ತಿವೆ. ಆಹಾರ ಕ್ರಮದಲ್ಲಿನ ದೋಷ ಮತ್ತು ವ್ಯಾಯಾಮ ಇಲ್ಲದಿರುವಂಥ ಕಾರಣದಿಂದ ದೇಹದಲ್ಲಿ ಜಮೆಯಾಗುವ ಕೊಬ್ಬು ಹೆಚ್ಚುತ್ತಿದೆ. ನಮ್ಮ ಶರೀರ ಚೆನ್ನಾಗಿ ಕೆಲಸ ಮಾಡಲು ಸಣ್ಣ ಪ್ರಮಾಣದಲ್ಲಿ ಕೊಲೆಸ್ಟ್ರಾಲ್‌ ಅಗತ್ಯವಿದೆ. ಅದು ನಮಗೆ ನಿತ್ಯದ ಆಹಾರದಿಂದಲೇ ದೊರೆಯುತ್ತದೆ. ಆದರೆ ಅತಿಯಾದ ಕೊಬ್ಬಿನ ಆಹಾರದ ಸೇವನೆ, ಸಂಸ್ಕರಿತ ಸಕ್ಕರೆಯ ಮೇಲಿನ ನಮ್ಮ ಪ್ರೀತಿಯಿಂದಾಗಿ ಶರೀರದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಹೃದಯದ ತೊಂದರೆ ಮತ್ತು ಪಾರ್ಶ್ವವಾಯುವಿನಂಥ ಮಾರಣಾಂತಿಕ ಸಮಸ್ಯೆಗಳು ಗಂಟಿಕ್ಕಿಕೊಳ್ಳಬಹುದು. ಇದಕ್ಕಾಗಿ ವೈದ್ಯರು ಸೂಚಿಸುವ ಔಷಧಿ ಮತ್ತು ವ್ಯಾಯಾಮ ಕಡ್ಡಾಯವಾಗಿ ಬೇಕಾಗುತ್ತದೆ. ಇದಲ್ಲದೆ, ಇನ್ನೂ ಕೆಲವು ಆಹಾರದ ಬದಲಾವಣೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ವಾಸ್ಥ್ಯ ಪರಿಣಿತರು. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಾವು ದೇಹಕ್ಕೆ ನೀಡುವಂಥ ಆಹಾರಗಳು ಹಲವು ರೀತಿಯಲ್ಲಿ ಮಹತ್ವವನ್ನು ಪಡೆದಿವೆ. ಅದರಲ್ಲೂ ಬೆಳಗಿನ ಪೇಯಗಳು ಕೊಲೆಸ್ಟ್ರಾಲ್‌ ಕಡಿತ ಮಾಡುವುದಕ್ಕೆ ಸೂಕ್ತವಾದಂಥವು. ಎಂಥ ಪೇಯಗಳನ್ನು ಬೆಳಗಿನ ಹೊತ್ತು ದೇಹಕ್ಕೆ ನೀಡಿದರೆ (Health Tips Kannada) ಸೂಕ್ತ?

Green tea

ಗ್ರೀನ್‌ ಟೀ

ಹಲವು ರೀತಿಯ ಉತ್ತಮ ಪಾಲಿಫೆನಾಲ್‌ಗಳನ್ನು ಹೊಂದಿರುವ ಗ್ರೀನ್‌ ಟೀ, ಉತ್ಕರ್ಷಣ ನಿರೋಧಕಗಳ ಖಜಾನೆಯಂತಿದೆ. ಅದರಲ್ಲೂ ಗ್ರೀನ್‌ ಟೀದಲ್ಲಿರುವ ಕೆಟಿಚಿನ್‌ ಅಂಶಗಳು ಕೊಲೆಸ್ಟ್ರಾಲ್‌ಗಳ ಜೊತೆ ಕೆಲಸ ಮಾಡುತ್ತವೆ. ಇದರಿಂದ ಆಹಾರದಲ್ಲಿನ ಕೊಲೆಸ್ಟ್ರಾಲ್‌ ಅಂಶವನ್ನು ದೇಹ ಹೀರಿಕೊಳ್ಳುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಹಾಗಾಗಿ ನಿಯಮಿತವಾಗಿ ಗ್ರೀನ್‌ ಟೀ ಕುಡಿಯುವುದರಿಂದ ದೇಹದಲ್ಲಿ ಎಲ್‌ಡಿಎಲ್‌ ಮತ್ತು ಒಟ್ಟಾರೆ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.

Chia seeds and soy milk

ಚಿಯಾ ಬೀಜ ಮತ್ತು ಸೋಯ್‌ ಹಾಲು

ಈ ಮಿಶ್ರಣ ಕೊಲೆಸ್ಟ್ರಾಲ್‌ ನಿರ್ವಹಣೆಯಲ್ಲಿ ಸಾಕಷ್ಟು ದಕ್ಷತೆಯನ್ನು ಪ್ರದರ್ಶಿಸಿದೆ. ನಾರು, ಪ್ರೊಟೀನ್‌ ಮತ್ತು ಒಮೇಗಾ ೩ ಕೊಬ್ಬಿನಾಮ್ಲಗಳ ಜೊತೆಗೆ ಹಲವು ಸೂಕ್ಷ್ಮ ಸತ್ವಗಳು ಇದರಿಂದ ದೇಹ ಸೇರುತ್ತವೆ. ದೇಹದಲ್ಲಿ ಎಚ್‌ಡಿಎಲ್‌ ಅಥವಾ ಉತ್ತಮ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆ ಚಿಯಾ ಬೀಜಗಳಿಗಿದೆ. ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಕ್ಷಮತೆ ಸೋಯಾ ಹಾಲಿಗಿದೆ. ಹಾಗಾಗಿ ಈ ಮಿಶ್ರಣವನ್ನೂ ಬೆಳಗಿನ ಪೇಯವಾಗಿ ಉಪಯೋಗಿಸಬಹುದು.

Beetroot and carrot juice

ಬೀಟ್‌ರೂಟ್‌ ಮತ್ತು ಕ್ಯಾರೆಟ್‌ ರಸ

ಹೆಚ್ಚಿನ ನೈಟ್ರೇಟ್‌ ಅಂಶವಿರುವ ಬೀಟ್‌ರೂಟ್‌ ರಸ ಕೊಲೆಸ್ಟ್ರಾಲ್‌ ತಗ್ಗಿಸುವ ಸಾಧ್ಯತೆಯನ್ನು ಹೊಂದಿದೆ. ಇನ್ನು, ಬೀಟಾ ಕ್ಯಾರೋಟಿನ್‌ನಂಥ ಕೆರೋಟಿನಾಯ್ಡ್‌ಗಳನ್ನು ಹೊಂದಿರುವ ಕ್ಯಾರೆಟ್‌ ಸಹ ಕೊಲೆಸ್ಟ್ರಾಲ್‌ ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಿದ್ದು, ಪೂರಕ ಪರಿಣಾಮವನ್ನು ದಾಖಲಿಸಿವೆ.

Ginger, lemon juice

ಶುಂಠಿ, ನಿಂಬೆ ರಸ

ಬೆಳಗಿನ ಹೊತ್ತು ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆ ರಸ ಮತ್ತು ಅರ್ಧ ಚಮಚ ಶುಂಠಿ ರಸ ಸೇರಿಸಿ ಕುಡಿಯುವುದು ಸಹ ಉತ್ತಮ ಪರಿಣಾಮಗಳನ್ನ ತೋರಿಸಬಲ್ಲದು. ಉತ್ಕರ್ಷಣ ನಿರೋಧಕಗಳನ್ನು ನಿಂಬೆ ರಸ ದೇಹಕ್ಕೆ ನೀಡಿದರೆ, ಟ್ರೈಗ್ಲಸರೈಡ್‌ ಮತ್ತು ಎಲ್‌ಡಿಎಲ್‌ ತಗ್ಗಿಸುವ ಗುಣವನ್ನು ಶುಂಠಿ ಹೊಂದಿದೆ. ಜೊತೆಗೆ, ಬೆಳಗಿನ ಹೊತ್ತು ಚೈತನ್ಯವನ್ನು ನೀಡಿ, ವ್ಯಾಯಾಮ ಮಾಡುವ ಉತ್ಸಾಹವನ್ನೂ ಹೆಚ್ಚಿಸುತ್ತದೆ ಈ ಪೇಯ.

Tomato juice

ಟೊಮೇಟೊ ರಸ

ಟೊಮೆಟೊದ ಕೆಂಪು ಬಣ್ಣಕ್ಕೆ ಕಾರಣವಾಗುವುದು ಅದರಲ್ಲಿರುವ ಲೈಕೊಪೇನ್‌ ಅಂಶ. ಇದು ಎಲ್‌ಡಿಎಲ್‌ ಕಡಿಮೆ ಮಾಡುವ ಗುಣವನ್ನು ಢಾಳಾಗಿ ತೋರಿಸಿದೆ. ಅಧ್ಯಯನಗಳ ಪ್ರಕಾರ, ಅತಿ ಹೆಚ್ಚು ಪ್ರಮಾಣದ ಲೈಕೊಪೇನ್‌ ಅಂಶವು (ದಿನಕ್ಕೆ 25 ಎಂಜಿಗಿಂತ ಹೆಚ್ಚು), ಕಡಿಮೆ ತೀವ್ರತೆಯ ಸ್ಟ್ಯಾಟಿನ್‌ಗಳು (ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಔಷಧಿಗಳು) ಬೀರುವ ಪರಿಣಾಮವನ್ನೇ ತೋರುತ್ತವೆ.

Turmeric and soy milk

ಅರಿಶಿನ ಮತ್ತು ಸೋಯ್‌ ಹಾಲು

ಸೋಯ್‌ ಹಾಲಿನಲ್ಲಿ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಇನ್ನು ಅರಿಶಿನದಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಎಲ್‌ಡಿಎಲ್‌ ಮತ್ತು ಟ್ರೈಗ್ಲಿಸರೈಡ್‌ಗಳನ್ನು ತಗ್ಗಿಸುವ ಗುಣವನ್ನು ತೋರಿಸಿದೆ. ಹಾಗಾಗಿ ಪ್ರಾಣಿಜನ್ಯ ಹಾಲಿಗೆ ಅರಿಶಿನ ಸೇರಿಸುವ ಬದಲು, ಸೋಯಾ ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು ಕೊಲೆಸ್ಟ್ರಾಲ್‌ ತಗ್ಗಿಸುವುದಕ್ಕೆ ಒಳ್ಳೆಯ ಉಪಾಯ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

Continue Reading

ಆರೋಗ್ಯ

Health Tips Kannada: ಕಣ್ಣಿನ ಕೆಳಗೆ ಕಪ್ಪಾಗಿದೆಯೇ? ಇಲ್ಲಿದೆ ಸರಳ ಮನೆಮದ್ದು

ಕಣ್ಣಿನ ಕೆಳಭಾಗದಲ್ಲಿ ಕಾಣುವ ಗಾಢಬಣ್ಣದ ವರ್ತುಲಗಳು ಇಡೀ ಮುಖಕ್ಕೆ ವಯಸ್ಸಾದ, ಸುಸ್ತಾದ ಮತ್ತು ನಿದ್ದೆಗೆಟ್ಟ ಕಳೆಯನ್ನು ನೀಡುವುದಂತೂ ಹೌದು. ಅದೇನು ಗಂಭೀರವಾದ ಆರೋಗ್ಯ ಸಮಸ್ಯೆಯ ಲಕ್ಷಣ ಅಲ್ಲದಿದ್ದರೂ, ಇದನ್ನು ಸರಿ ಮಾಡುವುದು ಹೇಗೆಂಬ ಪ್ರಶ್ನೆ ಮೂಡುವುದಂತೂ ಹೌದು. ಈ ಕುರಿತು (Health Tips Kannada) ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Health Tips Kannada
Koo

ಅಂದದ ಮೊಗಕ್ಕೆ ಕಣ್ಣೇ ಭೂಷಣ ಎಂದು ಹಾಡಿದವರಿದ್ದಾರೆ. ಅಂಥ ಸುಂದರ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣಿಸಿಕೊಂಡರೆ… ಅದೇ ದೋಷ ಎನಿಸಿಬಿಡುತ್ತದೆ. ಜೊತೆಗೆ, ಆರೋಗ್ಯದ ಬಗ್ಗೆಯೂ ಪ್ರಶ್ನೆಗಳು ಏಳುತ್ತವೇ? ಸಾಕಷ್ಟು ನಿದ್ದೆ ಮಾಡಿ, ಚೆನ್ನಾಗಿ ನೀರು ಕುಡೀರಿ, ಸೊಪ್ಪು ತಿನ್ನಿ ಎಂದೆಲ್ಲಾ ಆರೋಗ್ಯ ಸಲಹೆಗಳು ಕೇಳಿ ಬಂದರೆ ಸಹಜವೇ. ಕಣ್ಣಿನ ಕೆಳಭಾಗದಲ್ಲಿ ಕಾಣುವ ಗಾಢಬಣ್ಣದ ವರ್ತುಲಗಳು ಇಡೀ ಮುಖಕ್ಕೆ ವಯಸ್ಸಾದ, ಸುಸ್ತಾದ ಮತ್ತು ನಿದ್ದೆಗೆಟ್ಟ ಕಳೆಯನ್ನು ನೀಡುವುದಂತೂ ಹೌದು. ಅದೇನು ಗಂಭೀರವಾದ ಆರೋಗ್ಯ ಸಮಸ್ಯೆಯ ಲಕ್ಷಣ ಅಲ್ಲದಿದ್ದರೂ, ಇದನ್ನು ಸರಿ ಮಾಡುವುದು ಹೇಗೆಂಬ (Health Tips Kannada) ಪ್ರಶ್ನೆ ಮೂಡುವುದಂತೂ ಹೌದು.

dark circles

ಇದು ಬರುವುದೇಕೆ?

ಕೆಲವರಿಗೆ ಆನುವಂಶಿಕವಾಗಿ ಈ ಲಕ್ಷಣಗಳು ಬರಬಹುದು. ಕುಟುಂಬದ ಹತ್ತಿರದ ರಕ್ತ ಸಂಬಂಧಿಗಳಲ್ಲಿ ಈ ತೊಂದರೆಯಿದ್ದರೆ, ಅದು ವರ್ಗಾವಣೆಗೊಂಡಿರಬಹುದು. ನಿದ್ದೆ ಸಾಕಾಗದಿದ್ದರೆ, ನಿದ್ರಿಸುವ ಸಮಯ ಅನಿಯಮಿತವಾಗಿದ್ದರೆ, ಕಪ್ಪು ವರ್ತುಲಗಳು ಬರುತ್ತವೆ. ಕಣ್ಣಿನ ಕೆಳಗಿನ ಭಾಗದ ಚರ್ಮ ಅತಿ ಸೂಕ್ಷ್ಮವಾದ್ದರಿಂದ ಈ ಭಾಗದಲ್ಲಿನ ರಕ್ತನಾಳಗಳ ಚಟುವಟಿಕೆ ಢಾಳಾಗಿ ಕಾಣುತ್ತದೆ. ಪಿಗ್ಮೆಂಟೇಶನ್‌ ಸಹ ಎದ್ದು ಕಾಣುವಂತಾಗುತ್ತದೆ. ವಯಸ್ಸು ಹೆಚ್ಚಿದಂತೆ. ಕೊಲಾಜಿನ್‌ ಕಡಿಮೆಯಾಗಿ ಚರ್ಮದ ಬಿಗಿ ನೈಸರ್ಗಿಜವಾಗಿಯೇ ಕಡಿಮೆಯಾಗುತ್ತದೆ. ಇದರಿಂದ ಕಣ್ಣಿನ ಕೆಳಗೆ ಚರ್ಮ ಜೋತಾಡಬಹುದು; ಮತ್ತೂ ಕಪ್ಪಾಗಿ ಕಾಣಬಹುದು. ಇದನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳು ನೆರವಾಗುತ್ತವೆ.

Cold compress

ತಣ್ಣನೆಯ ಕಂಪ್ರೆಸ್‌

ತಂಪಾದ ನೀರಲ್ಲಿ ಅದ್ದಿದ ಬಟ್ಟೆ, ಫ್ರಿಜ್‌ನಲ್ಲಿ ಕೆಲಕಾಲ ಇರಿಸಿದ ತೇವದ ಟೀ ಬ್ಯಾಗ್‌ ಮುಂತಾದವುಗಳನ್ನು ಕಣ್ಣಿನ ಮೇಲೆ 10-15 ನಿಮಿಷ ಇರಿಸಿಕೊಳ್ಳಿ. ಅದರಲ್ಲೂ ಗ್ರೀ ಟೀ ಅಥವಾ ಕ್ಯಾಮೊಮೈಲ್‌ ಟೀ ಹೆಚ್ಚು ಉಪಯುಕ್ತ. ಇದರಿಂದ ಈ ಭಾಗದಲ್ಲಿ ಉಬ್ಬಿದಂತೆ ಕಾಣುವ ರಕ್ತನಾಳಗಳು ಸಂಕೋಚಗೊಳ್ಳುತ್ತವೆ. ಇದರಿಂದ ಕಣ್ಣಿನ ಕೆಳಗಿನ ಭಾಗ ಉಬ್ಬಿದಂತಾಗಿ ಕಪ್ಪಾಗಿದ್ದರೆ ಕಡಿಮೆಯಾಗುತ್ತದೆ.

Nutrient Rich Cucumber Benefits

ಸೌತೇಕಾಯಿ

ತಂಪಾದ ಸೌತೇಕಾಯಿಯ ಗಾಲಿಯಂಥ ತುಂಡನ್ನು ಕಣ್ಣುಗಳ ಮೇಲಿರಿಸಿ 20 ನಿಮಿಷ ಬಿಡಿ. ಇದನ್ನು ದಿನವೂ ಮಾಡಬಹುದು. ಇದರಿಂದ ಕಣ್ಣಿನ ಕೆಳಗೆ ಉಬ್ಬಿದ್ದರೆ ಕಡಿಮೆಯಾಗಿ, ಗಾಢಬಣ್ಣವೂ ತಿಳಿಯಾಗುತ್ತದೆ. ಜೊತೆಗೆ ಕಣ್ಣನ್ನು ತಂಪಾಗಿಸಿ, ದೃಷ್ಟಿಗೂ ಅನುಕೂಲ ಒದಗಿಸುತ್ತದೆ.

Nutrient-Rich Potato Benefits

ಆಲೂಗಡ್ಡೆ

ಸೌತೇಕಾಯಿಯಂತೆ, ಆಲೂಗಡ್ಡೆಗೂ ನೈಸರ್ಗಿಕವಾದ ಬ್ಲೀಚಿಂಗ್‌ ಗುಣವಿದೆ. ಹಾಗಾಗಿ ಕಪ್ಪಾದ ಚರ್ಮವನ್ನು ನಿಧಾನಕ್ಕೆ ತಿಳಿಯಾಗಿಸುತ್ತದೆ. ಫ್ರಿಜ್‌ನಲ್ಲಿಟ್ಟ ಆಲೂಗಡ್ಡೆಯನ್ನು ತುರಿದು ರಸ ತೆಗೆಯಿರಿ, ಈ ತಂಪಾದ ರಸದಲ್ಲಿ ಸ್ವಚ್ಛ ಹತ್ತಿಯ ಬಟ್ಟೆಯನ್ನು ಅದ್ದಿ ಕಣ್ಣುಗಳ ಕೆಳಗಿರಿಸಿಕೊಳ್ಳಿ. 15 ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.

Tomato juice

ಟೊಮಾಟೊ ರಸ

ಇದೂ ಸಹ ಗಾಢ ಬಣ್ಣವನ್ನು ತಿಳಿಯಾಗಿಸಬಲ್ಲ ಗುಣವನ್ನು ಹೊಂದಿದೆ. ಟೊಮಾಟೊ ರಸ ತೆಗೆದು, ಕೆಲವು ಹನಿ ನಿಂಬೆರಸ ಸೇರಿಸಿ. ಇದರಲ್ಲಿ ಸ್ವಚ್ಛ ವಸ್ತ್ರವನ್ನು ಅದ್ದಿ, ಕಣ್ಣುಗಳ ಕೆಳಗಿರಿಸಿಕೊಳ್ಳಿ. ೧೦ ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.

Almond Oil

ಬಾದಾಮಿ ಎಣ್ಣೆ

ವಿಟಮಿನ್‌ ಇ ಹೇರಳವಾಗಿದೆ ಬಾದಾಮಿ ತೈಲದಲ್ಲಿ. ರಾತ್ರಿ ಮಲಗುವ ಮುನ್ನ, ಇದರ ಕೆಲವು ಹನಿಗಳನ್ನು ಕಣ್ಣ ಕೆಳಭಾಗದಲ್ಲಿ ಲಘುವಾಗಿ ಹಚ್ಚಿ ಮಸಾಜ್‌ ಮಾಡಿ. ರಾತ್ರಿಡೀ ಇದನ್ನು ಹಾಗೆಯೇ ಬಿಡಿ. ಹಚ್ಚಿದ ಎಣ್ಣೆ ಅತಿಯಾದರೆ ಕಣ್ಣುರಿ ಬಂದೀತು. ಹಾಗಾಗಿ ಸ್ವಲ್ಪವೇ ಹಚ್ಚಿ.

ರೋಸ್‌ ವಾಟರ್‌

ಗುಲಾಬಿ ಜಲ

ಹತ್ತಿಯ ಪ್ಯಾಡ್‌ಗಳಲ್ಲಿ ತಂಪಾದ ಗುಲಾಬಿ ಜಲದಲ್ಲಿ ಅದ್ದಿ, ಮುಚ್ಚಿದ ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಸೌತೇಕಾಯಿಯಂಥದ್ದೇ ಪರಿಣಾಮಗಳನ್ನು ಗುಲಾಬಿ ಜಲವೂ ನೀಡಬಲ್ಲದು. ೧೫ ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.

Aloe Vera Home Remedies For Stretch Marks

ಲೋಳೆಸರ

ಇದರ ತಂಪಾದ ತಾಜಾ ಜೆಲ್‌ ತೆಗೆಯಿರಿ. ಅದನ್ನು ಕಣ್ಣಿನ ಕೆಳಭಾಗದಲ್ಲಿ ಇರಿಸಿಕೊಂಡು 20 ನಿಮಿಷ ಬಿಡಿ. ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಬಿಗಿಯಾಗಿಸಿ, ತೇವವನ್ನು ಹಿಡಿದಿಡುತ್ತದೆ. ಜೊತೆಗೆ ಕಣ್ಣಿನ ಕೆಳಭಾಗದ ಕಪ್ಪು ಚರ್ಮವನ್ನು ತಿಳಿಯಾಗಿಸುತ್ತದೆ. ಇವೆಲ್ಲವುಗಳ ಜೊತೆಗೆ, ದೇಹಕ್ಕೆ ಚೆನ್ನಾಗಿ ನೀರು ಬೇಕು. ಋತುಮಾನದ ಸೊಪ್ಪು-ತರಕಾರಿ-ಹಣ್ಣುಗಳು ಬೇಕು. ಕಣ್ತುಂಬಾ ನಿದ್ದೆಯಂತೂ ಕಡ್ಡಾಯ.

ಇದನ್ನೂ ಓದಿ: Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

Continue Reading

ದೇಶ

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Covaxin: ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಎಂಬುದಾಗಿ ಭಾರತ್‌ ಬಯೋಟೆಕ್‌ ಪ್ರಕಟಣೆ ಹೊರಡಿಸಿದೆ. ಕೋವಿಶೀಲ್ಡ್‌ ಅಡ್ಡಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತ್‌ ಬಯೋಟೆಕ್‌ ಕಂಪನಿಯು ಸ್ಪಷ್ಟನೆ ನೀಡಿದೆ.

VISTARANEWS.COM


on

Covaxin
Koo

ನವದೆಹಲಿ: ಬ್ರಿಟನ್‌ನಲ್ಲಿ (UK) ಅಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಕೋಲಾಹಲ ಹೆಚ್ಚುತ್ತಿರುವಂತೆಯೇ ಭಾರತದಲ್ಲಿಯೂ ಕೋವಿಶೀಲ್ಡ್‌ ಲಸಿಕೆ ಸೈಡ್‌ ಎಫೆಕ್ಟ್‌ಗಳ ಕುರಿತು ಅಧ್ಯಯನ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೊವ್ಯಾಕ್ಸಿನ್‌ (Covaxin) ಅತ್ಯಂತ ಸುರಕ್ಷಿತವಾಗಿ ತಯಾರಿಸಲಾದ ಲಸಿಕೆಯಾಗಿದೆ ಎಂಬುದಾಗಿ ಭಾರತದ ಲಸಿಕಾ ತಯಾರಿಕಾ ಕಂಪನಿಯಾದ ಭಾರತ್‌ ಬಯೋಟೆಕ್‌ (Bharat Biotech) ಪ್ರಕಟಣೆ ತಿಳಿಸಿದೆ.

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿಯು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

“ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು, ರಕ್ತ ಹೆಪ್ಪುಗಟ್ಟುವುದು, ಥ್ರಂಬೊಸಿಟೋಪೇನಿಯಾ, ಪೆರಿಕಾರ್ಡಿಟಿಸ್‌ ಹಾಗೂ ಮೈಯೋಕಾರ್ಡಿಟಿಸ್‌ ಸೇರಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಹಾಗಾಗಿ, ಕೊವ್ಯಾಕ್ಸಿನ್‌ ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ” ಎಂದು ಮಾಹಿತಿ ನೀಡಿದೆ.

ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಕೋಟ್ಯಂತರ ಮಂದಿ ಪಡೆದಿದ್ದಾರೆ. ಈಗ ಅಮೆರಿಕದಲ್ಲಿ ಅಡ್ಡಪರಿಣಾಮದ ಕುರಿತು ಕಂಪನಿಯೇ ಒಪ್ಪಿಕೊಂಡಿರುವುದರಿಂದ ಭಾರತದಲ್ಲೂ ಈ ಕುರಿತು ಅಧ್ಯಯನ ನಡೆಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

Continue Reading

ಫ್ಯಾಷನ್

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

ನಟ ಹಾಗೂ ಬಿಗ್‌ಬಾಸ್‌ ಕಂಟೆಸ್ಟಂಟ್‌ ಶೈನ್‌ ಶೆಟ್ಟಿ ಈ ಸಮ್ಮರ್‌ನಲ್ಲಿ (Summer Fashion) ಕೂಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಯಾವ ಮಟ್ಟಿಗೆ ಕೂಲಾಗಿ ಕಾಣಿಸಿಕೊಂಡಿದ್ದಾರೆ ಎಂದರೇ, ಹುಡುಗರು ಕೂಡ ಇವರ ಸ್ಟೈಲ್‌ ಸ್ಟೇಟ್‌ಮೆಂಟ್‌ ಫಾಲೋ ಮಾಡಲು ಸಿದ್ಧರಾಗಿದ್ದಾರೆ. ಅಂದ ಹಾಗೆ, ಇವರ ಲುಕ್‌ನಲ್ಲಿ ಅಂತಹದ್ದೇನಿದೆ? ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Shine Shetty Summer Fashion
ಚಿತ್ರಗಳು: ಶೈನ್‌ ಶೆಟ್ಟಿ, ನಟಿ, ಬಿಗ್‌ಬಾಸ್‌ ಕಂಟೆಸ್ಟಂಟ್‌, ಫೋಟೋಗ್ರಾಫಿ : ನಾಗರಾಜ ಸೋಮಾಯಾಜಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಹಾಗೂ ಬಿಗ್‌ಬಾಸ್‌ ಕಂಟೆಸ್ಟಂಟ್‌ ಶೈನ್‌ ಶೆಟ್ಟಿ ಈ ಸಮ್ಮರ್‌ನಲ್ಲಿ (Summer Fashion) ಸಖತ್‌ ಕೂಲ್‌ ಆಗಿ ಕಾಣಿಸಿಕೊಂಡಿದ್ದಾರೆ.ಹೌದು, ಶೈನ್‌ ಶೆಟ್ಟಿಯವರ ಈ ಸೀಸನ್‌ನ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಯಾವ ಮಟ್ಟಿಗೆ ಪುರುಷರಿಗೆ ಇಷ್ಟವಾಗಿದೆ ಎಂದರೇ, ಇವರ ಫ್ಯಾನ್‌ ಫಾಲೋವಿಂಗ್‌ ಹುಡುಗರು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಹುಡುಗರು ಕೂಡ ಇವರ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಮಾರು ಹೋಗಿದ್ದಾರೆ.

Shine Shetty Summer Fashion

ಶೈನ್‌ ಶೆಟ್ಟಿ ನ್ಯಾಚುರಲ್‌ ಲುಕ್‌

“ಶೈನ್‌ ಶೆಟ್ಟಿ ಮೊದಲಿನಿಂದಲೂ ನ್ಯಾಚುರಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರು ಮೂಲತಃ ಮಂಗಳೂರಿನವರಾಗಿರುವುದರಿಂದಲೋ ಏನೋ ಬಿಸಿಲಲ್ಲೂ ಆರಾಮಾಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ತಮ್ಮ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಇವರ ಲುಕ್‌ಗೆ ಫಿದಾ ಆಗುತ್ತಾರಂತೆ. ತೀರಾ ಫ್ಯಾಷನ್‌ ಕಾನ್ಶಿಯಸ್‌ ಕೂಡ ಅಲ್ಲದ ಇವರ ಪ್ರತಿಯೊಂದು ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳು ಕೂಡ ಇವರನ್ನು ಸದಾ ನ್ಯಾಚುರಲ್‌ ಲುಕ್‌ನಲ್ಲಿ ಬಿಂಬಿಸುತ್ತವಂತೆ. ಇನ್ನು, ಇವರ ತಿಳಿ ವರ್ಣದ ಸ್ಕಿನ್‌ ಟೋನ್‌ನಿಂದಾಗಿ ಅವರು ಧರಿಸುವ ಎಲ್ಲಾ ಬಗೆಯ ಔಟ್‌ಫಿಟ್ಸ್‌ ಕೂಡ ಇವರಿಗೆ ಮ್ಯಾಚ್‌ ಆಗುತ್ತವಂತೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರ ಯೂನಿಕ್‌ ಫ್ಯಾಷನ್‌ನಲ್ಲಿ ಸೇರಿರುವ ಸಿಂಪಲ್‌ ಸ್ಮೈಲ್‌ ಇಡೀ ಲುಕ್‌ಗೆ ಸಾಥ್‌ ನೀಡುವುದನ್ನು ಗಮನಿಸಬಹುದು” ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಅಮಿತ್‌ ಪಾಂಡ್ಯಾ ಅವರ ಪ್ರಕಾರ, ಕೆಲವು ನಟರು ತಮ್ಮ ನ್ಯಾಚುರಲ್‌ ಲುಕ್‌ನಿಂದಾಗಿಯೇ ಆಕರ್ಷಕವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ.

Shine Shetty Summer Fashion

ಶೈನ್‌ ಶೆಟ್ಟಿ ಸಮ್ಮರ್‌ ಲುಕ್‌ನಲ್ಲಿ ಏನಿದೆ?

ಮನಸ್ಸಿಗೆ ಮುದ ನೀಡುವಂತಹ ಶೇಡ್‌ನ ಔಟ್‌ಫಿಟ್‌! ವೈಟ್‌ ಪ್ಯಾಂಟ್‌ ಕಾಟನ್‌ ಪ್ರಿಂಟೆಡ್‌ ಶರ್ಟ್.‌ ಜೊತೆಗೆ ಅದಕ್ಕೆ ಹೊಂದುವ ಹೇರ್‌ಸ್ಟೈಲ್‌, ಸಿಂಪಲ್‌ ಚಪ್ಪಲಿ ಎಲ್ಲವೂ ಶೈನ್‌ ಸಮ್ಮರ್‌ ಲುಕ್‌ನಲ್ಲಿ ಸೇರಿದೆ. ಸನ್‌ ಗ್ಲಾಸ್‌ ಇವರನ್ನು ಮತ್ತಷ್ಟು ಹ್ಯಾಂಡ್‌ಸಮ್‌ ಆಗಿ ಕಾಣುವಂತೆ ಬಿಂಬಿಸಿದೆ. ಇವರ ಒಟ್ಟಾರೆ ಲುಕ್ಗೆ ಫ್ಯಾಷನ್‌ ಸ್ಟೈಲಿಸ್ಟ್‌ಗಳಾದ ತೇಜಸ್ವಿನಿ ಹಾಗೂ ಖುಷಿಯವರ ಸ್ಟೈಲಿಂಗ್‌ ಸಪೋರ್ಟ್‌ ಇದೆ.

Shine Shetty Summer Fashion

ಶೈನ್‌ ಶೆಟ್ಟಿ ಫ್ಯಾಷನ್‌ ಮಂತ್ರ

ಇನ್ನು, ಕಳೆದ ಬಾರಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್‌ ಬಗ್ಗೆ ಮಾತನಾಡಿದ್ದ ಶೈನ್‌ ಶೆಟ್ಟಿ, ನಾನಂತೂ ಇದುವೆರಗೂ ಇಂತಹದ್ದೇ ಫ್ಯಾಷನ್‌ ಹಾಗೂ ಸ್ಟೈಲ್‌ ಫಾಲೋಮಾಡಬೇಕೆಂಬ ರೂಲ್ಸ್‌ ಹಾಕಿಕೊಂಡಿಲ್ಲ! ಯಾವುದಾದರೂ ಸರಿಯೇ ನೋಡುಗರಿಗೆ ಪ್ಲೆಸೆಂಟ್‌ ಆಗಿ ಕಾಣಿಸಬೇಕು. ಧರಿಸಿದ ಮನಕ್ಕೂ ಮುದ ನೀಡಬೇಕು. ಸೀಸನ್‌ಗೆ ತಕ್ಕಂತೆ ಉಡುಪುಗಳನ್ನು ಆಯ್ಕೆ ಮಾಡಿ ಧರಿಸಬೇಕು. ಇನ್ನು ಕಲರ್‌ಗಳ ವಿಷಯಕ್ಕೆ ಬಂದಲ್ಲಿ, ನಮ್ಮ ಮುಖಕ್ಕೆ ಹಾಗೂ ಸಿನ್‌ ಟೋನ್‌ಗೆ ಹೊಂದುವಂತಹ ಬಣ್ಣದ ಉಡುಗೆಗಳನ್ನು ಸೆಲೆಕ್ಟ್‌ ಮಾಡುವುದು ಉತ್ತಮ ಎಂದಿದ್ದರು. ಇನ್ನು, ತಾರೆಯರ ಫ್ಯಾಷನ್‌ ಫಾಲೋ ಮಾಡಲು ಬಯಸುವ ಹುಡುಗರು, ಮೊದಲಿಗೆ ತಾವು ಕಾಪಿ ಮಾಡುತ್ತಿರುವ ಸ್ಟೈಲಿಂಗ್‌ ಮ್ಯಾಚ್‌ ಆಗುತ್ತವೆಯೇ! ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು, ಸುಖಸುಮ್ಮನೇ, ಕಂಡ ಕಂಡ ಫ್ಯಾಷನ್‌ ಫಾಲೋ ಮಾಡುವುದಲ್ಲ. ಇಮಿಟೇಟ್‌ ಮಾಡುವಾಗಲು ಅದು ತಮಗೆ ಹೊಂದುತ್ತದೆಯೇ ಎಂಬುದನ್ನು ಅರಿಯಬೇಕು ಎಂದು ಹುಡುಗರಿಗೆ ಸಲಹೆ ನೀಡಿದ್ದರು.

ಹುಡುಗರಿಗೆ ಫ್ಯಾಷನ್‌ ವಿಮರ್ಶಕರ ಟಿಪ್ಸ್‌

ಶೈನ್‌ ಶೆಟ್ಟಿಯಂತೆ ಸಮ್ಮರ್‌ ಫ್ಯಾಷನ್‌ ಫಾಲೋ ಮಾಡುವವರು ಕೆಲವು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

  • 1. ಲೈಟ್‌ ಶೇಡ್‌ ಆಯ್ಕೆ ಮಾಡಬೇಕು.
  • 2. ಕಾಟನ್‌ ಶರ್ಟ್‌ ಆಯ್ಕೆ ಉತ್ತಮ.
  • 3. ಗಾಳಿಯಾಡುವಂತಹ ಪಾದರಕ್ಷೆಗಳು ಕೂಲ್‌ ಆಗಿರಿಸುತ್ತವೆ.
  • 4. ಸನ್‌ಗ್ಲಾಸ್‌ ಬಿಸಿಲಿನಿಂದ ಕಣ್ಣುಗಳನ್ನು ಸಂರಕ್ಷಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Hassan Pen Drive case Prajwal Revanna case
ಪ್ರಮುಖ ಸುದ್ದಿ41 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮೈಸೂರಿನಲ್ಲೂ ಒಂದು ಕೇಸ್‌; ತಾಯಿ ಮೇಲೆ ಲೈಂಗಿಕ ಕಿರುಕುಳ, ಅಪಹರಣ ಎಂದು ದೂರು ನೀಡಿದ ಮಗ

Health Tips Kannada
ಆರೋಗ್ಯ52 mins ago

Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

Karnataka Weather Forecast
ಮಳೆ1 hour ago

Karnataka Weather : ಭಯಂಕರ ಬಿಸಿಲಿನಲ್ಲೂ ಮಳೆ ಸೂಚನೆ ಕೊಟ್ಟ ಹವಾಮಾನ ತಜ್ಞರು

Religious Freedom
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಅಮೆರಿಕದ ಬುದ್ಧಿಗೇಡಿಗಳ ವರದಿಯಲ್ಲಿ ಭಾರತದ ಬಗ್ಗೆ ಹಸಿ ಸುಳ್ಳುಗಳು

Health Tips Kannada
ಆರೋಗ್ಯ2 hours ago

Health Tips Kannada: ಕಣ್ಣಿನ ಕೆಳಗೆ ಕಪ್ಪಾಗಿದೆಯೇ? ಇಲ್ಲಿದೆ ಸರಳ ಮನೆಮದ್ದು

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Lok Sabha Election
ಪ್ರಮುಖ ಸುದ್ದಿ8 hours ago

Lok Sabha Election : ಕುರುಬರಿಗೆ ಟಿಕೆಟ್ ಕೊಡದ ಮೋದಿ ಕಂಬಳಿ ತೊಟ್ಟು ಡ್ರಾಮಾ ಆಡ್ತಾರೆ: ಸಿದ್ದರಾಮಯ್ಯ

Tsering Namgyal
ದೇಶ8 hours ago

Tsering Namgyal: ಲಡಾಕ್‌ನಲ್ಲಿ ತ್ಸೆರಿಂಗ್‌ ನಾಮ್‌ಗ್ಯಾಲ್‌ಗೆ ಟಿಕೆಟ್‌ ಕೊಟ್ಟ ಕಾಂಗ್ರೆಸ್; ಭಾರಿ ಹೈಡ್ರಾಮಾ

IPL 2024
ಪ್ರಮುಖ ಸುದ್ದಿ8 hours ago

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

Ragini Khanna
ಸಿನಿಮಾ8 hours ago

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ13 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌