Beauty Care | ಬಾದಾಮಿ ತೈಲ ಅತ್ಯುತ್ತಮ ಸೌಂದರ್ಯವರ್ಧಕ - Vistara News

ಲೈಫ್‌ಸ್ಟೈಲ್

Beauty Care | ಬಾದಾಮಿ ತೈಲ ಅತ್ಯುತ್ತಮ ಸೌಂದರ್ಯವರ್ಧಕ

ಬಾದಾಮಿ ಎಣ್ಣೆ ಸೌಂದರ್ಯವರ್ಧಕ. ಇದನ್ನು ಹೇಗೆಲ್ಲ ಬಳಕೆ ಮಾಡಬಹುದು ಎಂಬುದರ ಬಗ್ಗೆ ಸೌಂದರ್ಯ ತಜ್ಞರು ಉಪಯುಕ್ತ ಮಾಹಿತಿ ನೀಡಿದ್ದಾರೆ.

VISTARANEWS.COM


on

Beauty Care
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾದಾಮಿ ಎಣ್ಣೆಯ ಬಳಕೆ ತ್ವಚೆಯ ಹಾಗೂ ಚರ್ಮದ ಸುಕೋಮಲತೆಯನ್ನು ಹೆಚ್ಚಿಸುತ್ತದೆ. ಇದರ ಬಳಕೆಯಿಂದ ಚರ್ಮದ ನಾನಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಬಗ್ಗೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್‌ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.

  1. ಮಗುವಿನ ಸುಕೋಮಲ ತ್ವಚೆಗಾಗಿ

ಮಗುವಿನ ಚರ್ಮವನ್ನು ಸುಕೋಮಲವಾಗಿಸಲು ಸ್ನಾನಕ್ಕೂ ಮುನ್ನ ಮುಖಕ್ಕೆ ಬಾದಾಮಿ ಎಣ್ಣೆ ಲೇಪಿಸಿ, ನಿಧಾನವಾಗಿ ಮಸಾಜ್‌ ಮಾಡಿ. ನಂತರ ಸಿದ್ಧಪಡಿಸಿದ ಕಡಲೆ ಹಿಟ್ಟಿನ ಪೇಸ್ಟನ್ನು ಸವರಿ, ಇಪ್ಪತ್ತು ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖ ಕಾಂತಿಯುಕ್ತವಾಗುವುದು. ಮಗುವಿನ ಚರ್ಮ ಸುಕೋಮಲವಾಗುವುದು.

Beauty Care
  1. ಸುಂದರ ಅಧರಕ್ಕಾಗಿ

ಕೆಲವರಿಗೆ ಆಗಾಗ ತುಟಿ ಬಿರುಕು ಮೂಡುತ್ತದೆ. ಈ ಸಮಸ್ಯೆ ಇರುವವರು ಬಾದಾಮಿ ಎಣ್ಣೆಯನ್ನು ಪ್ರತಿ ದಿನ ತುಟಿಗಳಿಗೆ ಲೇಪಿಸುತ್ತಾ ಬಂದಲ್ಲಿ ಮೃದುವಾದ ತುಟಿ ನಿಮ್ಮದಾಗುವುದು.

Beauty Care
  1. ಮುಖದ ಮೇಲಿನ ನೆರಿಗೆ

ವಿಟಮಿನ್‌ ಎ ಮತ್ತು ಬಿ ಇರುವ ಆಹಾರ ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ. ಬಾದಾಮಿ ಎಣ್ಣೆಯಲ್ಲಿಈ ಎರಡು ಅಂಶಗಳು ಇರುವುದರಿಂದ ಇದನ್ನು ಮುಖಕ್ಕೆ ಲೇಪಿಸಿದಲ್ಲಿ ಮುಖದಲ್ಲಿ ಅಕಾಲಿಕ ನೆರಿಗೆ ಉಂಟಾಗುವ ಸಮಸ್ಯೆಯನ್ನು ತಪ್ಪಿಸಬಹುದು.

  1. ಡಾರ್ಕ್‌ ಸರ್ಕಲ್‌

ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ. ಈ ರೀತಿ ಮಾಡುತ್ತಾ ಬಂದರೆ ಕ್ರಮೇಣ ಡಾರ್ಕ್ ಸರ್ಕಲ್‌ ಮಾಯವಾಗುವುದು.

Beauty Care
  1. ಕಾಂತಿಗಾಗಿ ತ್ವಚೆಯ ಸ್ಕ್ರಬ್‌

ನಿರ್ಜೀವ ತ್ವಚೆಯ ಚರ್ಮವನ್ನು ಹೋಗಲಾಡಿಸಲು ಸ್ಕ್ರಬ್‌ ಮಾಡಬಹುದು. ಒಂದು ಚಮಚ ಬಾದಾಮಿ ಎಣ್ಣೆಗೆ ಸ್ವಲ್ಪ ಪುಡಿ ಚಮಚ ಸಕ್ಕರೆ ಹಾಕಿ, ಮಿಶ್ರ ಮಾಡಿ. ನಂತರ ಅದರಿಂದ ಮುಖವನ್ನು ಸ್ಕ್ರಬ್‌ ಮಾಡಿದಲ್ಲಿ ಮುಖದ ಕಾಂತಿ ಹೆಚ್ಚುವುದು.

Beauty Care
  1. ಕೂದಲ ಸೌಂದರ್ಯ

ಬಾದಾಮಿ ಎಣ್ಣೆಯಿಂದ ಕೂದಲಿಗೆ ಮಸಾಜ್‌ ಮಾಡಿದರೆ ಕೂದಲಿನ ಆರೋಗ್ಯ ಹೆಚ್ಚುವುದು. ಕೂದಲಿನ ಪೋಷಣೆಗೆ ಇದು ಸಹಕಾರಿ. ತಲೆ ಹೊಟ್ಟು ನಿವಾರಣೆಯಾಗುವುದು. ಕೂದಲಿನ ಹೊಳಪು ಹೆಚ್ಚುವುದು. ಕೂದಲಿನ ಬೆಳವಣಿಗೆಗೂ ಬಾದಾಮಿ ಎಣ್ಣೆ ತುಂಬಾ ಸಹಕಾರಿ. ಬಾದಾಮಿ ಎಣ್ಣೆಯ ನಿರಂತರ ಬಳಕೆ ಮಾಡಿದಲ್ಲಿ ಕೂದಲು ಬಲು ಬೇಗ ಬೆಳೆಯುತ್ತದೆ ಎನ್ನಲಾಗಿದೆ.

Beauty Care

ಇನ್ನು ಹೊಟ್ಟಿನಿಂದ ಮುಕ್ತಿ ಪಡೆಯಲು ಮತ್ತು ಕೂದಲಿನ ಕಾಂತಿ ಹೆಚ್ಚಿಸಲು, ವಾರಕ್ಕೊಮ್ಮೆಯಾದರೂ ಕೊಂಚ ಬಾದಾಮಿ ಎಣ್ಣೆಯನ್ನು ನೆತ್ತಿಗೆ ಹಚ್ಚಿ. ಮಸಾಜ್‌ ಮಾಡಿ. ಸುಮಾರು ಇಪ್ಪತ್ತು ನಿಮಿಷದ ನಂತರ ತೊಳೆಯಿರಿ.

ಇದನ್ನೂ ಓದಿ: Beauty Care: ತ್ವಚೆಯ ಸೌಂದರ್ಯ ಹೆಚ್ಚಿಸುವ ಸ್ಟ್ರಾಬೆರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

ಐಸ್‌ಕ್ರೀಮ್‌ ಪ್ರಿಯರಿಗೆ (History Of Ice Cream) ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ (Ice Cream) ಹುಟ್ಟಿದ್ದು ಯಾವಾಗ? ಕುತೂಹಲಕರ ಹಿನ್ನೋಟ ಇಲ್ಲಿದೆ.

VISTARANEWS.COM


on

History Of Ice Cream
Koo

ಬೇಸಿಗೆಯನ್ನು ದೂರುವವರು (History Of Ice Cream) ಇರುವಂತೆಯೇ ಅದನ್ನು ಇಷ್ಟ ಪಡುವವರೂ ಇದ್ದಾರೆ. ಯಾಕೆ ಇಷ್ಟ ಬೇಸಿಗೆ ಎಂದು ಕೇಳಿದರೆ ಜ್ಯೂಸ್‌, ಎಳನೀರು ಮುಂತಾದ ತಂಪು ಪೇಯಗಳನ್ನು ಕುಡಿಯುವುದಕ್ಕೆ ಎನ್ನುವವರಿರಬಹುದು; ಆದರೆ ಐಸ್‌ಕ್ರೀಮ್‌ (Ice Cream) ಮೆಲ್ಲುವುದಕ್ಕೆ ಎನ್ನುವವರದ್ದೇ ಬಹುಮತ. ತರಹೇವಾರಿ ಬಣ್ಣ, ಆಕಾರ, ರುಚಿಗಳಲ್ಲಿ ದೊರೆಯುವ ಇವುಗಳನ್ನೇ ನಂಬಿ-ನೆಚ್ಚಿ ಬದುಕಿದವರಿದ್ದಾರೆ. ಹಾಗಾಗಿ ಉಳಿದೆಲ್ಲ ತಿನಿಸುಗಳನ್ನೂ ಮೀರಿಸಿದ್ದು ಇವುಗಳ ಜನಪ್ರಿಯತೆ. ಹಾಗೆಂದೇ ಐಸ್‌ಕ್ರೀಮ್‌ ಪ್ರಿಯರಿಗೆ ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ ಹುಟ್ಟಿದ್ದು (Ice Cream) ಯಾವಾಗ? ಶತಮಾನಗಳಿಂದ ವಿಕಾಸಕೊಳ್ಳುತ್ತಲೇ ಬಂದಿರುವ ಇದು ನಡೆದಿರುವ ಹಾದಿ ಹೇಗಿದೆ ಎಂಬ ಕುತೂಹಲದ ನೋಟವಿದು.

Ice Cream

ಹುಟ್ಟಿದ್ದು ಎಲ್ಲಿ?

ಹಳೆಯ ಮೆಸಪೊಟೇಮಿಯ ನಾಗರಿಕತೆಯಲ್ಲಿ ಯೂಫ್ರೆಟಿಸ್‌ ನದಿಯ ದಂಡೆಯಲ್ಲಿ ಐಸ್‌ ಮನೆಗಳಂತೆ ಮಾಡಿ, ಅಲ್ಲಿ ವಸ್ತುಗಳನ್ನು ತಣ್ಣಗೆ ಇರಿಸಿಕೊಳ್ಳುತ್ತಿದ್ದಂತೆ. ಇದೀಗ ಕ್ರಿ.ಪೂ. 4000 ವರ್ಷಗಳ ಹಿಂದಿನ ಕಥೆ! ಅಂದರೆ, ತಣ್ಣಗಿನ ವಸ್ತುಗಳನ್ನು ತಿನ್ನುವ ಖಯಾಲಿ ಅಷ್ಟೊಂದು ಸಾವಿರ ವರ್ಷಗಳ ಹಿಂದೆಯೇ ಮನುಷ್ಯರಿಗಿತ್ತು ಎಂದಾಯಿತು. ಹಳೆಯ ಅಥೆನ್ಸ್‌ನಲ್ಲಿ ವೈನ್‌ಗಳನ್ನು ತಣ್ಣಗಿರಿಸಲು ಐಸ್‌ ಬಳಸುತ್ತಿದ್ದ ಕಥೆಗಳಿವೆ. ಪ್ರಾಚೀನ ಚೀನಾದಲ್ಲಿ ಟಾಂಗ್‌ ರಾಜವಂಶದವರು ಹಾಲಿನಿಂದ ಮಾಡಿದ ಖಾದ್ಯಗಳನ್ನು ಹೀಗೆ ತಣ್ಣಗಾಗಿಸಿ ತಿನ್ನುತ್ತಿದ್ದ ಉಲ್ಲೇಖಗಳಿವೆ. ಭಾರತದಲ್ಲಿ ಮೊಘಲರೂ ಗಟ್ಟಿಯಾದ ಕೆನೆಭರಿತ ಹಾಲಿನಲ್ಲಿ ಕುಲ್ಫಿಯಂಥವನ್ನು ಮಾಡಿ ಸವಿಯುತ್ತಿದ್ದರಂತೆ. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಇಂದಿನ ಐಸ್‌ಕ್ರೀಮಿನ ಪೂರ್ವಸ್ಥಿತಿಗಳು ಎಂದು ಹೇಳಲಾಗುತ್ತದೆ.

ಐಸ್‌ಕ್ರೀಮ್‌ನ ಆಧುನಿಕ ರೂಪ

ಈ ತಿನಿಸಿಗಿರುವ ಇಂದಿನ ರೂಪದ ಸಮೀಪಕ್ಕೆ ಮೊದಲು ಬಂದಿದ್ದು ಇಟಲಿಯಲ್ಲಿ, ಹದಿನೇಳನೇ ಶತಮಾನದ ನಡುವಿಗೆ. ನಂತರ, ಫ್ರಾನ್ಸ್‌, ಸ್ಪೇನ್‌ ಸೇರಿದಂತೆ ಯುರೋಪ್‌ನೆಲ್ಲೆಡೆ ಮೇಜವಾನಿಗಳ ಮೋಜು ಹೆಚ್ಚಿಸುವ ನೆಚ್ಚಿನ ವಸ್ತುವಾಯಿತು ಇದು. 1671ರಲ್ಲಿ ಬ್ರಿಟನ್‌ನ ರಾಜ ಎರಡನೇ ಚಾರ್ಲ್ಸ್‌ ಮೊದಲಿಗೆ ಐಸ್‌ಕ್ರೀಮ್‌ ಸವಿದ ದಾಖಲೆಗಳಿವೆ. ಆದರೆ ಇದರಿಂದಲೇ ಆರೋಗ್ಯದ ತುರ್ತು ಪರಿಸ್ಥಿತಿ ಇಂಗ್ಲೆಂಡ್‌ನಲ್ಲಿ ಉದ್ಭವವಾಗಿತ್ತು ಮಾತ್ರ ಕುತೂಹಲಕರ ಸಂಗತಿ.

Penny Lick

ʻಪೆನ್ನಿ ಲಿಕ್‌ʼ

19ನೇ ಶತಮಾನದ ಹೊತ್ತಿಗೆ ಇಂಗ್ಲೆಂಡ್‌ನಲ್ಲಿ ಇದೆಷ್ಟು ಜನಪ್ರಿಯವಾಯಿತೆಂದರೆ, ರಾಜರ, ಶ್ರೀಮಂತರ ಊಟದ ಟೇಬಲ್‌ನ ಸೀಮೆಯನ್ನು ಮೀರಿ, ಬೀದಿಬೀದಿಗಳಲ್ಲಿ ಮಾರಾಟವಾಗತೊಡಗಿತು. ಒಂದು ʻಪೆನ್ನಿʼಗೆ (ಅಲ್ಲಿನ ಪೈಸೆ) ಪುಟ್ಟ ಕಪ್‌ನಲ್ಲಿ ಐಸ್‌ಕ್ರೀಮ್‌ ತುಂಬಿಸಿ ಕೊಡಲಾಗುತ್ತಿತ್ತು. ಇದನ್ನು ನೆಕ್ಕಿ ಸ್ವಚ್ಛ ಮಾಡಿ ಗ್ರಾಹಕರು ಮರಳಿ ನೀಡುತ್ತಿದ್ದರು. ಇದು ʻಪೆನ್ನಿ ಲಿಕ್‌ʼ ಎಂದೇ ಪ್ರಸಿದ್ಧವಾಯಿತು. ಇದೆಷ್ಟು ಜನಪ್ರಿಯವಾಯಿತೆಂದರೆ ಬರುವ ಗ್ರಾಹಕರಿಗೆ ಐಸ್‌ಕ್ರೀಮ್‌ ಕಪ್‌ಗಳನ್ನು ತೊಳೆದು ತುಂಬಿಸಿಕೊಡುವಷ್ಟು ವ್ಯವಧಾನವಿಲ್ಲದ ವ್ಯಾಪಾರಿಗಳು, ಸ್ವಚ್ಛತೆಯನ್ನು ಕಡೆಗಣಿಸಿದರು. ಇದರಿಂದ ಕಾಲರಾ, ಕ್ಷಯದಂಥ ರೋಗಗಳು ತೀವ್ರವಾಗಿ ಹರಡಲಾರಂಭಿಸಿದವು. 1879ರಲ್ಲಿ ಕಾಲರಾ ಸಾಂಕ್ರಾಮಿಕ ಹರಡಿದ್ದು ʻಪೆನ್ನಿ ಲಿಕ್‌ʼನಿಂದಾಗಿಯೇ ಎಂದು ಅಲ್ಲಿನ ಆರೋಗ್ಯ ದಾಖಲೆಗಳು ಹೇಳುತ್ತವೆ.
ಅಂತಿಮವಾಗಿ ʻಪೆನ್ನಿ ಲಿಕ್‌ʼ ಮೇಲೆ ನಿಷೇಧ ಹೇರಲಾಯಿತು. ಇದರ ಪರಿಣಾಮವೆಂದರೆ ಹೊಸ ಆವಿಷ್ಕಾರಗಳನ್ನು ವರ್ತಕರು ಮಾಡಿದ್ದು. ಐಸ್‌ಕ್ರೀಮ್‌ ಕೋನ್‌ಗಳು ರೂಪುಗೊಂಡಿದ್ದು ಹೀಗೆ. ಸ್ವಚ್ಛತೆಯ ರಗಳೆಯಿಲ್ಲದೆ, ಕಪ್‌ ತೊಳೆದಿದ್ದಾರೋ ಇಲ್ಲವೋ ಎಂಬ ಹೆದರಿಕೆಗೆ ಅವಕಾಶವಿಲ್ಲದಂತೆ ಯಾರು, ಎಲ್ಲಿ ಬೇಕಾದರೂ ಸೇವಿಸಬೇಕಾದಂತೆ ಕೋನ್‌ಗಳನ್ನು ಸಿದ್ಧಪಡಿಸಲಾಯಿತು. ಹಾಗೆಯೇ ಕಡ್ಡಿ ಚುಚ್ಚಿ ಕೊಡುವ ಇನ್ನೂ ಅಗ್ಗದ ಕ್ಯಾಂಡಿಗಳು ಸಹ ಪ್ರಚಾರಕ್ಕೆ ಬಂದವು.

ಇದನ್ನೂ ಓದಿ: Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

ಅಲ್ಲಿಂದ ಮುಂದುವರಿದು, ಹೊಸ ರುಚಿಗಳು, ಫ್ಲೇವರ್‌ಗಳು ರೂಪುಗೊಂಡವು. ಸರಳವಾದ ವೆನಿಲಾದಿಂದ ಹಿಡಿದು, ನಾನಾ ರೀತಿಯ ʻಸಂಡೇʼ ಫ್ಲೇವರ್‌ಗಳು, ಕಾಯಿ-ಬೀಜಗಳನ್ನು ಒಳಗೊಂಡ ದುಬಾರಿ ಬೆಲೆಯವು, ಎಲ್ಲೆಲ್ಲೋ ಬೆಳೆಯುವ ಹಣ್ಣುಗಳನ್ನು ಸೇರಿಸಿಕೊಂಡವು- ಹೀಗೆ ಲೆಕ್ಕವಿಲ್ಲದಷ್ಟು ನಮೂನೆಯ ಐಸ್‌ಕ್ರೀಮ್‌ಗಳು ಈಗ ಲಭ್ಯವಾಗುತ್ತವೆ. ಸುಡು ಬೇಸಿಗೆಯನ್ನು ಸಹನೀಯವಾಗಿಸಿ, ಮಕ್ಕಳಿಗೆ ಮೋಜು ನೀಡುತ್ತಿವೆ. ಆದರೆ ಅದು ಬೆಳೆದುಬಂದ ಚರಿತ್ರೆಯನ್ನು ನೋಡಿದಾಗ, ಎಷ್ಟೊಂದು ಶತಮಾನಗಳ ಹಿಂದೆ ಐಸ್‌ಕ್ರೀಮ್‌ನ ಈ ಪಯಣ ಆರಂಭವಾಯಿತು ಎಂಬುದು ತಿಳಿಯುತ್ತದೆ. ಜೊತೆಗೆ, ಸದಾಕಾಲ ವಿಕಾಸಗೊಳ್ಳುತ್ತಲೇ ಇರುವ ಮಾನವನ ಜಿಹ್ವಾ ಚಾಪಲ್ಯದ ಇತಿಹಾಸವೂ ಅನಾವರಣಗೊಳ್ಳುತ್ತದೆ.

Continue Reading

ಫ್ಯಾಷನ್

Silver Jewel Trend: ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆದ ಸಿಲ್ವರ್‌ ಜ್ಯುವೆಲರಿಗಳು!

ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆಯುವಂತಹ ಡಿಸೈನ್‌ನಲ್ಲಿ ಸಿಲ್ವರ್‌ ಜ್ಯುವೆಲರಿಗಳು (Silver Jewel Trend) ಆಗಮಿಸಿದ್ದು, ಇದೀಗ ಟ್ರೆಂಡಿಯಾಗಿವೆ. ಮಾನಿನಿಯರು ಧರಿಸುವ ಸಾಮಾನ್ಯ ಡಿಸೈನ್‌ಗಳಿಂದಿಡಿದು ಬ್ರೈಡಲ್‌ ಜ್ಯುವೆಲರಿ ವಿನ್ಯಾಸದಲ್ಲೂ ಇವು ಎಂಟ್ರಿ ನೀಡಿವೆ. ಯಾವ್ಯಾವುದು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Silver Jewel Trend
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆಯುವಂತಹ ಡಿಸೈನ್‌ನಲ್ಲಿ ಸಿಲ್ವರ್‌ ಜ್ಯುವೆಲರಿಗಳು (Silver Jewel Trend) ಇದೀಗ ಟ್ರೆಂಡಿಯಾಗಿವೆ. ಮಾನಿನಿಯರ ಸಾಮಾನ್ಯ ಡಿಸೈನ್‌ಗಳಿಂದಿಡಿದು ಬ್ರೈಡಲ್‌ ಜ್ಯುವೆಲರಿಗಳಲ್ಲೂ (Bridal Jewellery) ಎಂಟ್ರಿ ನೀಡಿವೆ. ವೆಡ್ಡಿಂಗ್‌ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಲೆಕ್ಕವಿಲ್ಲದಷ್ಟು ಬಂಗಾರದ ಇಮಿಟೇಷನ್‌ ಡಿಸೈನ್‌ಗಳಲ್ಲೂ ಬಿಡುಗಡೆಗೊಂಡಿವೆ.

Silver Jewel Trend

ಸಿಲ್ವರ್‌ ಜ್ಯುವೆಲರಿಗಳಲ್ಲಿ ಬಂತು ವೆಡ್ಡಿಂಗ್‌ ಆಭರಣಗಳು

“ಸಿಲ್ವರ್‌ ಜ್ಯುವೆಲರಿಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ವೆಡ್ಡಿಂಗ್‌ ಸೀಸನ್‌ಗೆ ಊಹೆಗೂ ಮೀರಿದ ಡಿಸೈನ್‌ನಲ್ಲಿ ಆಗಮಿಸಿವೆ. ಒಂದಕ್ಕಿಂತ ಒಂದು ಡಿಸೈನ್‌ಗಳು ಬಂಗಾರದ ಆಭರಣಗಳ ಡಿಸೈನ್‌ಗಳನ್ನು ಮೀರಿಸಿವೆ. ಹಾಗಾಗಿ ಮದುವೆಯಾಗುವ ಹೆಣ್ಣು ಮಕ್ಕಳು ಮಾತ್ರವಲ್ಲ, ಫ್ಯಾಮಿಲಿಯ ಇತರೇ ಹೆಣ್ಣು ಮಕ್ಕಳು , ಮಾನಿನಿಯರು ಕೂಡ ಇವನ್ನು ಕೊಳ್ಳತೊಡಗಿದ್ದಾರೆ. ಆ ಮಟ್ಟಿಗೆ ಇವು ಮಾನಿನಿಯರನ್ನು ಸೆಳೆದಿವೆ” ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರು.

ಟ್ರೆಂಡಿಯಾಗಿರುವ ಸಿಲ್ವರ್‌ ಜ್ಯುವೆಲರಿಗಳು

ಆಂಟಿಕ್‌ ಆಭರಣಗಳ ಸೆಟ್‌, ಪ್ರೀಶಿಯಸ್‌ ಜ್ಯುವೆಲರಿಗಳು, ಟೆಂಪಲ್‌ ಜ್ಯುವೆಲರಿ, ಕಂಟೆಂಪರರಿ ಡಿಸೈನ್ಸ್‌, ಹವಳದ ಸೆಟ್‌, ಮುತ್ತಿನ ಸೆಟ್‌, ಎಮರಾಲ್ಡ್‌ ಸೆಟ್‌, ಮೋಹನ್‌ಮಾಲ, ಬಿಗ್‌ ಚೋಕರ್ಸ್‌, ಸೊಂಟದ ಪಟ್ಟಿ, ಬಾಜುಬಂಧ್‌, ಕಡಗ, ಬಂಗಾರದ ಬಳೆಗಳ ಸೆಟ್‌, ಜಡೆನಾಗರ, ಮಾಟಿ, ಕಿವಿಯ ಬಿಗ್‌ ಮುತ್ತಿನ ಜುಮಕಿಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನ ಸಿಲ್ವರ್‌ ಆಭರಣಗಳು ಎಂಟ್ರಿ ನೀಡಿವೆ. ಅದರಲ್ಲೂ ಬಂಗಾರದ ಹಾಗೂ ವಜ್ರಾಭರಣಗಳ ಸೆಟ್‌ಗಳು ಅತಿ ಹೆಚ್ಚು ವೆಡ್ಡಿಂಗ್‌ ಬ್ರೈಡಲ್‌ ಸೆಟ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

Silver Jewel Trend

ಮೆನ್ಸ್ ಗೂ ಬಂತು ಸಿಲ್ವರ್‌ ಜ್ಯುವೆಲರಿ

ಬ್ರೇಸ್‌ಲೆಟ್ಸ್‌, ಕತ್ತಿನ ನಾನಾ ಬಗೆಯ ಚೈನ್‌ಗಳು, ಕೈ ಉಂಗುರಗಳು ಇದೀಗ ಮೆನ್ಸ್‌ ಜ್ಯುವೆಲರಿ ಕೆಟಗರಿಯಲ್ಲಿ ದೊರೆಯುತ್ತಿವೆ. ಬಂಗಾರ ಖರೀದಿಸಲು ಆಗದಿದ್ದವರಿಂದಿಡಿದು, ವೆರೈಟಿ ಡಿಸೈನ್‌ ಸೆಟ್‌ಗಳನ್ನು ಧರಿಸಲು ಬಯಸುವವರು, ಒಮ್ಮೆ ಧರಿಸಿ, ಮತ್ತೆ ರಿಪೀಟ್‌ ಮಾಡಲು ಬಯಸದವರು ಸಿಲ್ವರ್‌ ಜ್ಯುವೆಲರಿಗಳನ್ನು ಖರೀದಿಸತೊಡಗಿದ್ದಾರೆ.

ಕೈಗೆಟಕುವ ಬೆಲೆಯಲ್ಲಿ ಸಿಲ್ವರ್‌ ಜ್ಯುವೆಲರಿ

“ಮೊದಮೊದಲು ಕೇವಲ ಹೆಣ್ಣು ಮಕ್ಕಳ ಸಿಲ್ವರ್‌ ಜ್ಯುವೆಲರಿಗಳು ಹೆಚ್ಚು ಲಭ್ಯವಿದ್ದವು. ಇದೀಗ ಪುರುಷರ ಜ್ಯುವೆಲರಿಗಳು ಬಂದಿವೆ. ಕಡಿಮೆ ದರದಲ್ಲಿ ಅಂದರೇ ಸಾವಿರಾರು ರೂ.ಗಳಲ್ಲಿ ಭಾರಿ ಡಿಸೈನ್‌ನವನ್ನು ಖರೀದಿಸಬಹುದೆಂಬ ಲೆಕ್ಕಚಾರ ಹಲವರದ್ದು. ಲಕ್ಷಗಟ್ಟಲೇ ಬಂಗಾರಕ್ಕೆ ಸುರಿಯುವ ಬದಲು ಅದರ ತದ್ರೂಪದಂತಿರುವ ಸಿಲ್ವರ್‌ ಜ್ಯುವೆಲರಿಗಳನ್ನು ಖರೀದಿಸಿ, ಧರಿಸುವುದು ಇದೀಗ ಕಾಮನ್‌ ಆಗಿದೆ” ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ಸ್.‌

ಇದನ್ನೂ ಓದಿ: Fashion Trend: ಯುವತಿಯರನ್ನು ಸೆಳೆದಿರುವ 3 ಶೈಲಿಯ ವೈಟ್‌ ಪ್ಯಾಂಟ್‌ಗಳಿವು!

ಸಿಲ್ವರ್‌ ಜ್ಯುವೆಲರಿ ಪ್ರಿಯರು ಖರೀದಿಗೆ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ್ದು…

  • ಟ್ರೆಂಡಿಯಾಗಿರುವ ವಿನ್ಯಾಸದವನ್ನು ಖರೀದಿಸಿ.
  • ಹೆವ್ವಿ ಬಂಗಾರದ ರಿಪ್ಲೀಕಾ ಡಿಸೈನ್‌ನವು ಹೆಚ್ಚು ಚಾಲ್ತಿಯಲ್ಲಿವೆ.
  • ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
  • ನೀರು ಸೋಕಿಸಿದಲ್ಲಿ ಮಾಸಬಹುದು.
  • ಪಾಲಿಶ್‌ ಕಡಿಮೆಯಾದಾಗ ಮತ್ತೊಮ್ಮೆ ಹಾಕಿಸಲು ಅಂಗಡಿಯವರನ್ನು ಸಂಪರ್ಕಿಸಿ.
  • ರೀಸೇಲ್‌ ವ್ಯಾಲ್ಯೂ ಬಗ್ಗೆ ತಿಳಿದುಕೊಂಡು ಖರೀದಿಸಿ.
  • ಬ್ರಾಂಡೆಡ್‌ ಆಭರಣ ಮಾರಾಟಗಾರರ ಬಳಿ ಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ನುಣುಪಾಗಿ ನಯವಾಗಿ ಹೊಳಪಾಗಿದ್ದ ಕೂದಲು ನಿಸ್ತೇಜವಾಗಿ ಬಾಡುತ್ತದೆ. ಮಾರುಕಟ್ಟೆಯ ಜಾಹೀರಾತುಗಳನ್ನು ನೋಡಿ, ಏನಾದರೊಂದು ಹೊಸ ಶಾಂಪೂ, ಕಂಡೀಶನರ್‌ ಪ್ರಯತ್ನಿಸುವ ಮಂದಿ ನೈಸರ್ಗಿಕವಾದ ಕಂಡೀಶನರ್‌ಗಳ ಮೊರೆ ಹೋದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಪಡೆಯಬಲ್ಲರು. ಮಾರುಕಟ್ಟೆಯ ಕಂಡೀಶನರ್‌ಗೆ ಸೆಡ್ಡು ಹೊಡೆಯುವಂಥ ನೈಸರ್ಗಿಕ ಕಂಡೀಷನರ್‌ಗಳ (Hair conditioner) ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Hair Conditioner
Koo

ಕೂದಲ ಪೋಷಣೆ ಎಷ್ಟು ಮಾಡಿದರೂ ಸಾಲದು. ಬಿಡದೆ ಕಾಡುವ ಕೂದಲ ಸಮಸ್ಯೆ ಒಂದೆರಡಲ್ಲ. ಒಂದೋ ತಲೆಹೊಟ್ಟು, ಸೀಳುತುದಿಗಳು, ಒಣಕಲಾಗುದು, ಉದುರುವುದು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈಗ ಬೇಸಿಗೆಯಲ್ಲಂತೂ ತಿರುಗಾಡಿ ಮನೆಗೆ ಬಂದಾಗ ಕೂದಲು ಒಣಕಲಾಗಿ ಹಾರಾಡುತ್ತಾ, ಬಾಚಿಕೊಳ್ಳಲು ಕಷ್ಟವಾಗುತ್ತದೆ. ನುಣುಪಾಗಿ ನಯವಾಗಿ ಹೊಳಪಾಗಿದ್ದ ಕೂದಲು ನಿಸ್ತೇಜವಾಗಿ ಬಾಡುತ್ತದೆ. ಮಾರುಕಟ್ಟೆಯ ಜಾಹಿರಾತುಗಳನ್ನು ನೋಡಿ, ಏನಾದರೊಂದು ಹೊಸ ಶಾಂಪೂ, ಕಂಡೀಶನರ್‌ ಪ್ರಯತ್ನಿಸುವ ಮಂದಿ ನೈಸರ್ಗಿಕವಾದ ಕಂಡೀಶನರ್‌ಗಳ ಮೊರೆ ಹೋದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಪಡೆಯಬಲ್ಲರು. ಮಾರುಕಟ್ಟೆಯ ಕಂಡೀಶನರ್‌ಗೆ ಸೆಡ್ಡು ಹೊಡೆಯುವಂಥ ನೈಸರ್ಗಿಕ ಕಂಡೀಷನರ್‌ಗಳೇ ಇರುವಾಗ ರಾಸಾಯನಿಕ ಸಹಾಯ ಯಾಕೆ ಬೇಕು ಹೇಳಿ? ಬನ್ನಿ, ನೈಸರ್ಗಿಕ ಹೇರ್‌ ಕಂಡೀಷನರ್‌ಗಳಾಗಿ (Hair conditioner) ಯಾವುದನ್ನು ಬಳಸಬಹುದು ಎಂಬುದನ್ನು ನೋಡೋಣ.

Egg conditioner

ಮೊಟ್ಟೆಯ ಕಂಡೀಷನರ್‌

ಇದು ಕೂದಲ ಪೋಷಣೆಗೆ ಹೇಳಿ ಮಾಡಿಸಿದಂತಹ ಕಂಡೀಷನರ್‌. ಒಂದೇ ಬಳಕೆಯಲ್ಲಿ ನಿಮ್ಮ ಕೂದಲಲ್ಲಿ ಗಣನೀಯ ಬದಲಾವಣೆಯನ್ನು ನೀವು ಕಾಣುತ್ತೀರಿ. ಕೂದಲ ಮೇಳೆ ಅಡ್ಡ ಪರಿಣಾಮಗಳಾಗಬಹುದು ಎಂಬ ಭಯವೂ ಇಲ್ಲ. ಮೊಟ್ಟೆಯ ಬಿಳಿ ಲೋಳೆ, ಆಲಿವ್‌ ಎಣ್ಣೆ, ಜೇನುತುಪ್ಪ ಹಾಗೂ ವಿನೆಗರ್‌ ಇವನ್ನೆಲ್ಲ ಸೇರಿಸಿ ಚೆನ್ನಾಗಿ ಕಲಕಿಕೊಂಡು ಪೇಸ್ಟ್‌ನಂತೆ ತಲೆಗೆ ಕೂದಲ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಇದನ್ನು ಹಾಗೆಯೇ ತಲೆಯಲ್ಲಿರಲು ಬಿಟ್ಟು ನಂತರ ಮೆದುವಾದ ಶಾಂಪೂವಿನಿಂದ ತೊಳೆಯಿರಿ. ಯಾವ ಕಂಡೀಷನರ್‌ ಅಗತ್ಯವೂ ಇಲ್ಲದೆ ನಿಮ್ಮ ಕೂದಲು ಕಂಡೀಷನರ್‌ ಬಳಸಿದಂತೆ ಪಳಪಳಿಸುತ್ತದೆ.

Banana conditioner

ಬಾಳೆಹಣ್ಣಿನ ಕಂಡೀಷನರ್

ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಒಂದು ಚಮಚ ಜೇನುತುಪ್ಪ, ಆಲಿವ್‌ ಎಣ್ಣೆ ಇವಿಷ್ಟನ್ನೂ ತೆಗೆದುಕೊಂಡು ಪೇಸ್ಟ್‌ ಮಾಡಿ ತಲೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡುವುದರಿಂದ ಕೂದಲು ನಯವಾಗಿ ಹೊಳೆಯುತ್ತದೆ.‌ ಈ ಪೇಸ್ಟ್‌ ಜೊತೆಗೆ ಏಕಿದ್ದರೆ ಮೊಟ್ಟೆಯ ಬಿಳಿ ಲೋಳೆಯನ್ನೂ ಸೇರಿಸಬಹುದು.

ತೆಂಗಿನೆಣ್ಣೆ ಕಂಡೀಷನರ್

ತೆಂಗಿನ ಎಣ್ಣೆಗೆ ಒಂದು ಚಮಚ ಜೇನುತುಪ್ಪ, ನಿಂಬೆಹಣ್ಣಿನ ರಸ, ಮೊಸರು ಹಾಗೂ ರೋಸ್‌ ವಾಟರ್‌ ಸೇರಿಸಿ. ಇವನ್ನು ಚೆನ್ನಾಗಿ ಮಿಕ್ಸ್‌ ಮಾಡಿ ತಲೆಗೆ ಹಚ್ಚಿ ಮಸಾಜ್‌ ಮಾಡಿಕೊಳ್ಳಿ. ನಂತರ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಕೂದಲು ಆರೋಗ್ಯಯುತವಾಗಿ ಕಂಗೊಳಿಸುತ್ತದೆ.

ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

ಅಗಸೆಬೀಜದ ಕಂಡೀಷನರ್

ಎರಡು ಚಮಚ ಅಗಸೆ ಬೀಜವನ್ನು ನೀರಿಗೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಅದು ಕುದಿರುವ ಸಂದರ್ಭ ಜೆಲ್‌ನಂತಾಗುತ್ತದೆ. ಸ್ವಲ್ಪ ಆರಿದ ಮೇಲೆ ಅದನ್ನು ಸೋಸಿಕೊಂಡು ಅದರಿಂದ ದೊರೆತ ಜೆಲ್‌ಗೆ, ಆಲೊವೆರಾ ಜೆಲ್‌ ಹಾಗೂ ತೆಂಗಿನೆಣ್ಣೆ ಸ್ವಲ್ಪ ಸೇರಿಸಿ. ಈ ಮೂರನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, ಕೂದಲ ಬುಡದಿಂದ ತುದಿಯವರೆಗೂ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆದರೆ, ಯಾವ ಕಂಡೀಷನರ್‌ ಕೂಡಾ ಅಗತ್ಯವೇ ಇಲ್ಲ. ನಿಸ್ತೇಜವಾಗಿದ್ದ ಕೂದಲು ಒಂದೇ ಸಲಕ್ಕೆ ಪಳಪಳಿಸುವ ಹೊಳಪನ್ನು ಪಡೆಯುತ್ತದೆ.

Tips To Prevent Curd

ಮೊಸರಿನ ಕಂಡೀಷನರ್

ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು ತೆಗೆದುಕೊಂಡು ಅದಕ್ಕೆ, ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ತಲೆ ಕೂದಲಿಂದ ಬುಡದವರೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಕೂದಲು ತೊಳೆಯಿರಿ. ಯಾವ ಕಂಡೀಷನರ್‌ ಹಾಕುವ ಅಗತ್ಯವೇ ಇಲ್ಲ. ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟಿನ ಸಮಸ್ಯೆಯಿದ್ದರೂ ಮಂಗಮಾಯ. ರಾಸಾಯನಿಕಯುಕ್ತ ಕಂಡೀಷನರ್‌ ಬಳಸುವ ಬದಲು, ವಾರಕ್ಕೊಮ್ಮೆಯಾದರೂ ಇಂತಹ ನೈಸರ್ಗಿಕ ಕಂಡೀಷನಿಂಗ್‌ ಮಾಡುವುದರಿಂದ ಕೂದಲನ್ನು ಯಾವ ಸಮಸ್ಯೆಯೂ ಬಾಧಿಸುವುದಿಲ್ಲ.

Continue Reading

ಆರೋಗ್ಯ

Healthy Diet: ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ಈ ಸಂಗತಿ ತಿಳಿದುಕೊಂಡಿರಿ

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ (Healthy Diet) ಭಾಗವಾಗುವುದು ನಿಜ. ಈ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Healthy Diet
Koo

ಹಾಲು (milk), ಮೊಸರು (curd), ತುಪ್ಪ (ghee), ಬೆಣ್ಣೆ (butter) ಇಲ್ಲದೇ ಇದ್ದರೆ ಭಾರತೀಯರ ಮನೆಗಳಲ್ಲಿ ಅಡುಗೆ ಕೆಲಸ ಕಾರ್ಯಗಳು ಒಂದೂ ನಡೆಯುವುದಿಲ್ಲ. ಆರೋಗ್ಯದ ವಿಚಾರದಲ್ಲಿ (Healthy Diet) ಹಾಲು, ತುಪ್ಪ, ಮೊಸರಿನ ಬಗ್ಗೆ ಅಷ್ಟೇನು ಸಂದೇಹವಿಲ್ಲ. ಆದರೆ ಬೆಣ್ಣೆಯ ವಿಚಾರ ಬಂದಾಗ ಇದು ಆರೋಗ್ಯಕರ ಹೌದೋ ಅಲ್ಲವೋ ಎನ್ನುವ ಗೊಂದಲ ಕಾಡುತ್ತದೆ.

ಭಾರತೀಯ ಮನೆಗಳ ಪಾಕ ಶಾಲೆಯಲ್ಲಿ ಬಹುವಿಧವಾಗಿ ಬಳಸುವ ಬೆಣ್ಣೆಯು ಅದರ ಪೋಷಕಾಂಶದಿಂದಲೂ ಹೆಚ್ಚು ಮೌಲ್ಯಯುತ ಎಂದೆನಿಸಿದೆ. ಇದು ಹಲವಾರು ಪೋಷಕಾಂಶಗಳ ಕೇಂದ್ರೀಕೃತ ಮೂಲವಾಗಿದೆ. ಇದರಲ್ಲಿ ಕೊಬ್ಬು ಕರಗಬಲ್ಲ ವಿಟಮಿನ್‌ಗಳಾದ ಎ, ಇ ಮತ್ತು ಕೆ2 ವಿವಿಧ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ದೃಷ್ಟಿ, ಚರ್ಮವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ದೇಹದ ಪ್ರತಿರಕ್ಷೆಯನ್ನು ಬೆಂಬಲಿಸಲು ಇವುಗಳು ಅತ್ಯಗತ್ಯ.

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ ಭಾಗವಾಗುವುದು ನಿಜ. ಅಲ್ಲದೇ ಉತ್ತಮ ಗುಣಮಟ್ಟದ ಬೆಣ್ಣೆಯನ್ನು ಆಯ್ಕೆ ಮಾಡಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ದೇಹಕ್ಕೆ ಅಗತ್ಯವಾದ ಉತ್ತಮ ಕೊಬ್ಬಿನಾಂಶಗಳು ಬೆಣ್ಣೆ, ಆಲಿವ್ ಎಣ್ಣೆ, ಆವಕಾಡೊಗಳಿಂದಲೂ ಸಿಗುತ್ತದೆ.


ಹೆಚ್ಚುವರಿ ಬೆಣ್ಣೆಯನ್ನು ಸೇವಿಸಿದರೆ ಏನಾಗುತ್ತದೆ?

ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಇದನ್ನು ಅಧಿಕವಾಗಿ ಸೇವಿಸಿದಾಗ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಬೆಣ್ಣೆಯು ಕ್ಯಾಲೋರಿ ದಟ್ಟವಾಗಿರುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಬೆಣ್ಣೆಯನ್ನು ಮಿತವಾಗಿ ಸೇವಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.

ಹಲವಾರು ಅಧ್ಯಯನಗಳ ಪ್ರಕಾರ ಬೆಣ್ಣೆಯು ರಕ್ತದ ಲಿಪಿಡ್ ಮಟ್ಟವನ್ನು ಹಾನಿಗೊಳಿಸುತ್ತದೆ. ಹೃದಯದ ಪರಿಸ್ಥಿತಿಗಳು ಅಥವಾ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರಿಗೆ, ಮಿತವಾಗಿರುವುದು ಮುಖ್ಯವಾಗಿದೆ.

ಇದನ್ನೂ ಓದಿ: Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

ಬೆಣ್ಣೆಯು ಲ್ಯಾಕ್ಟೋಸ್ ಮತ್ತು ಡೇರಿ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಇದು ಡೇರಿ ಅಲರ್ಜಿಯಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗಬಹುದು. ಬೆಣ್ಣೆಯನ್ನು ಸೇವಿಸಿದ ಅನಂತರ ಉಬ್ಬುವುದು, ಗ್ಯಾಸ್ ಅಥವಾ ಅತಿಸಾರದಂತಹ ಜೀರ್ಣಕಾರಿ ತೊಂದರೆಗಳನ್ನು ಅವರು ಅನುಭವಿಸಬಹುದು.

ಬೆಣ್ಣೆಯನ್ನು ಮಿತವಾಗಿ ಸೇವಿಸಿದಾಗ ಆರೋಗ್ಯಕರ ಆಹಾರದ ಭಾಗವಾಗಬಹುದು. ಅದರ ಸ್ಯಾಚುರೇಟೆಡ್ ಕೊಬ್ಬಿನಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಮತ್ತು ಸಾಧ್ಯವಾದಾಗ ಉತ್ತಮ ಗುಣಮಟ್ಟದ ಆಯ್ಕೆಗಳನ್ನು ಆರಿಸುವುದು ಅತ್ಯಗತ್ಯ. ವೈವಿಧ್ಯಮಯ ಮತ್ತು ಸಮತೋಲಿತ ಆಹಾರದ ಭಾಗವಾಗಿ ಬೆಣ್ಣೆಯನ್ನು ಆನಂದಿಸುವುದು ಉತ್ತಮ.

Continue Reading
Advertisement
History Of Ice Cream
ಆಹಾರ/ಅಡುಗೆ36 seconds ago

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

IPL 2024
ಕ್ರೀಡೆ2 mins ago

IPL 2024: ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್​ ಪ್ಲೇ ಆಫ್​ ಪಂದ್ಯಕ್ಕೆ ಐಸಿಸ್‌ ಉಗ್ರರ ಕಾಟ; ಪಂದ್ಯಕ್ಕೂ ಮುನ್ನ ನಾಲ್ವರ ಬಂಧನ

Silver Jewel Trend
ಫ್ಯಾಷನ್12 mins ago

Silver Jewel Trend: ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆದ ಸಿಲ್ವರ್‌ ಜ್ಯುವೆಲರಿಗಳು!

Prajwal Revanna Case
ಪ್ರಮುಖ ಸುದ್ದಿ14 mins ago

Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

Holenarasipura sexual assault case SIT moves HC against HD Revanna bail order
ಕ್ರೈಂ19 mins ago

HD Revanna: ರೇವಣ್ಣಗೆ ಜಾಮೀನು ಸಿಕ್ಕರೂ ಸಿಗದ ರಿಲೀಫ್‌; ಎಸ್‌ಐಟಿಯಿಂದ ಹೈಕೋರ್ಟ್‌ ಮೊರೆ

Due to heavy rain in Shira water entered houses and shops
ತುಮಕೂರು26 mins ago

Heavy Rain: ಶಿರಾದಲ್ಲಿ ಭಾರೀ ಮಳೆಗೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು

Lok Sabha Election 2024 Shah Rukh Khan booth in Mumbai
ಬಾಲಿವುಡ್29 mins ago

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Trichy Tour
ಪ್ರವಾಸ34 mins ago

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

Money Guide
ಮನಿ-ಗೈಡ್38 mins ago

Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

Yamuna Bridge
ವೈರಲ್ ನ್ಯೂಸ್44 mins ago

Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌