Jyothi Rai: ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದ್ರೆ ಜ್ಯೋತಿ ರೈ ವಿಡಿಯೊ ಅಪ್‌ಲೋಡ್‌ ಮಾಡ್ತೀನಿ ಎಂದ ಕಿಡಿಗೇಡಿ! - Vistara News

ಕಿರುತೆರೆ

Jyothi Rai: ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದ್ರೆ ಜ್ಯೋತಿ ರೈ ವಿಡಿಯೊ ಅಪ್‌ಲೋಡ್‌ ಮಾಡ್ತೀನಿ ಎಂದ ಕಿಡಿಗೇಡಿ!

Jyothi Rai:  ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ನಟಿ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೊವನ್ನು ಶೇರ್ ಮಾಡುತ್ತ ಇರುತ್ತಾರೆ. ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೊಗಳು ಇವೆ.

VISTARANEWS.COM


on

Jyothi Rai video Leak miscreants say to subscribe to the youtube channel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ಜ್ಯೋತಿ ರೈ (Jyothi Rai) ಎಂದಾಕ್ಷಣ ಕನ್ನಡಿಗರಿಗೆ ನೆನಪಾಗೋದು ʻಜೋಗುಳʼ ಸೀರಿಯಲ್. ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಈ ಧಾರಾವಾಹಿಯಲ್ಲಿ ದೇವಕಿ ಪಾತ್ರ ಮಾಡುತ್ತಿದ್ದ ಜ್ಯೋತಿ ರೈ ಅವರನ್ನು ಅಭಿಮಾನಿಗಳು ಮರೆತಿಲ್ಲ. ಇದೀಗ ಜ್ಯೋತಿ ರೈ ಅವರದ್ದೇ ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೊ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಅಶ್ಲೀಲ ಫೋಟೊ ಮತ್ತು ವಿಡಿಯೊ ಫೇಸ್‌ಬುಕ್‌, ಎಕ್ಸ್‌ ಖಾತೆ, ಟೆಲಿಗ್ರಾಂ ಸೇರಿದಂತೆ ಹಲವು ಸೋಷಿಯಲ್‌ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶೇರ್‌ ಆಗುತ್ತಿದೆ. ಜತೆಗೆ ಕಿಡಿಗೇಡಿಯೊಬ್ಬ ಎಕ್ಸ್‌ ಖಾತೆಯಲ್ಲಿ ತನ್ನ ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದರೆ ಜ್ಯೋತಿ ರೈ ವಿಡಿಯೊ ಕಳುಹಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾನೆ.

ತನ್ನ ಖಾತೆಯಲ್ಲಿ ಇದೀಗ ಜ್ಯೋತಿ ರೈ ಎನ್ನಲಾದ ವಿಡಿಯೊ ಮತ್ತು ಫೋಟೊಗಳು ವೈರಲ್‌ ಆಗಿವೆ. 1000 ಸಬ್‌ಸ್ಕ್ರೈಬ್‌ ಆದರೆ ಮತ್ತಷ್ಟು ವಿಡಿಯೊವನ್ನು ಅಪ್‌ಲೋಡ್‌ ಮಾಡುತ್ತೇನೆ ಎಂದಿದ್ದಾನೆ ಈ ಕಿಡಿಗೇಡಿ. ಈಗಾಗಲೇ ಈ ಅಕೌಂಟ್‌ನಲ್ಲಿ 7 ವಿಡಿಯೊಗಳು ಅಪ್‌ ಆಗಿವೆ. ತನ್ನ ಸಬ್‌ಸ್ಕ್ರೈಬ್‌ ಹೆಚ್ಚಿಸಿಕೊಳ್ಳಲು ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾನೆ.

ಇದನ್ನೂ ಓದಿ: Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಹೀಗಿದೆ!

ನಟಿಯ ಸ್ಲಷ್ಟನೆ ಹೀಗಿದೆ!

ಜ್ಯೋತಿ ರೈದು ಎನ್ನಲಾದ ಮೂರು ಅಶ್ಲೀಲ ವಿಡಿಯೊ ಹಾಗೂ ಕೆಲವು ಫೋಟೊಗಳು ವೈರಲ್ ಆಗಿದ್ದವು. ಇದೀಗ ನಟಿ ಈ ಬಗ್ಗೆ ಸುದೀರ್ಘವಾಗಿ ಪತ್ರವನ್ನು ಬರೆದಿದ್ದಾರೆ. ʻʻನಾನು ಅಪರಿಚಿತ ವ್ಯಕ್ತಿಗಳಿಂದ ಕೆಲವು ಸಂದೇಶಗಳನ್ನು ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ಸರಿ ಮಾಡಲು ಸಾಧ್ಯವಾದಂತಹ ಡ್ಯಾಮೇಜ್ ಆಗಲಿದೆ. ನಿಮ್ಮ ತನಿಖೆಗೆ ಅನುಕೂಲವಾಗುವಂತೆ ಯೂಸರ್ ಐಡಿಗಳನ್ನು ಪೋಸ್ಟ್‌ ಮಾಡಿದ್ದೇನೆ.” ಎಂದು ಹೇಳಿಕೊಂಡಿದ್ದರು. ಹಾಸನದ ಎಂಪಿ ಪ್ರಜ್ವಲ್ ರೇವಣ್ಣ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜ್ಯೋತಿ ರೈ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೋಗಳ ಬಗ್ಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ನಟಿ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೊವನ್ನು ಶೇರ್ ಮಾಡುತ್ತ ಇರುತ್ತಾರೆ. ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೊಗಳು ಇವೆ.

ಬೋಲ್ಡ್‌ ಫೋಟೊ ಅಲ್ಲದೇ ವೈಯಕ್ತಿಕ ವಿಚಾರಗಳಿಗೂ ಸುದ್ದಿಯಾಗಿದ್ದರು. ನಟಿ ‘ಶುಕ್ರ’, ‘ಮಾತರಾನಿ ಮೌನಮಿದಿ’, ‘ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಜತೆ ಸಹಜೀವನ ನಡೆಸುತ್ತಿದ್ದಾರೆ.

20ನೇ ವಯಸ್ಸಿನಲ್ಲಿ ಮದುವೆ

ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು. 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .

ಜ್ಯೋತಿ ರೈ ಕೇವಲ ಕನ್ನಡ ಮಾತ್ರವಲ್ಲ ‘ಸೀತಾರಾಮ ಕಲ್ಯಾಣ’ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕನ್ಯಾದಾನಂ’ ಧಾರಾವಾಹಿ ಮೂಲಕ ಆಕೆ ತೆಲುಗು ಕಿರುತೆರೆಗೆ ಪರಿಚಿತರಾಗಿದ್ದರು. ‘ಗುಪ್ಪೆಡಂತ ಮನಸು’ ಧಾರಾವಾಹಿ ಪಾತ್ರ ಒಳ್ಳೆ ಹೆಸರು ತಂದುಕೊಂಡಿತ್ತು.

ಇದನ್ನೂ ಓದಿ: Jyothi Rai: ನಿರ್ದೇಶಕನ ಜತೆ ʻಜೋಗುಳʼ ಖ್ಯಾತಿಯ ಜ್ಯೋತಿ ರೈ‌  ಎಂಗೇಜ್‌!

ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ ಮಗ

ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಜ್ಯೋತಿ ರೈ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಮಗನಿಗೆ ಒಂದು ವರ್ಷ ತುಂಬಿದ ಬಳಿಕ ಆತ ಯಾರೊಂದಿಗೆ ಐ ಕಾಂಟ್ಯಾಕ್ಟ್‌ ಮಾಡಿ ಮಾತನಾಡಿಸುತ್ತಿರಲಿಲ್ಲ. ಇಎನ್‌ಟಿ ಡಾಕ್ಟರ್‌ ಬಳಿ ಹೋದಾಗಲೂ ಯಾವುದೇ ಸಹಾಯವಾಗಲಿಲ್ಲ. ಬಳಿಕ ಥೆರಫಿ, ಶ್ಯಾಡೋ ಟೀಚರ್‌ ಮುಖಾಂತರ ಜ್ಯೋತಿ ರೈ ಪುತ್ರ ಬೆಳವಣಿಗೆಗೆ ಸಹಾಕಾರಿ ಆಗಿದೆ ಎಂದು ನಟಿ ಹಿಂದೊಮ್ಮೆ ಹೇಳಿಕೆ ನೀಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bigg Boss Kannada : ಸ್ವರ್ಗ- ನರಕಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿಗಳು; ಬಿಗ್‌‌ ಬಾಸ್‌ ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್

Bigg Boss Kannada : ಬಿಗ್‌ಬಾಸ್‌ ಸೀಸನ್‌ 11ರ ಸ್ವರ್ಗ- ನರಕದ ಆಟದಕ್ಕೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ನಟ ದರ್ಶನ್‌ ಫಾಲೋವರ್ಸ್ ಇದ್ದು, ದರ್ಶನ್‌ ಬಗ್ಗೆ ಚರ್ಚೆಯಾಗುತ್ತಾ ಎಂಬ ಕುತೂಹಲ ಮೂಡಿದೆ.

VISTARANEWS.COM


on

By

Bigg Boss season 11 The real game starts today
Koo

ಬೆಂಗಳೂರು: ಕನ್ನಡ ಕಿರುತೆರೆಯ ಬಿಗೆಸ್ಟ್‌ ರಿಯಾಲಿಟಿ ಶೋ ಬಿಗ್‌ಬಾಸ್ 11ನೇ ಸೀಸನ್‌ಗೆ (Bigg Boss Kannada) ಕಿಕ್ ಸ್ಟಾರ್ಟ್ ಸಿಕ್ಕಿದೆ. ಕನ್ನಡ ಟೆಲಿವಿಷನ್ ಲೋಕದಲ್ಲಿ ದೊಡ್ಮನೆಯ ಕಲರವ ಮತ್ತೆ ಶುರುವಾಗಿದೆ. ಭಿನ್ನ -ವಿಭಿನ್ನ ಹದಿನೇಳು ಸ್ಪರ್ಧಿಗಳು ಈ ಬಾರಿಯ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನದಿಂದ ಒಂದು ಲೆಕ್ಕ ಈಗಿನಿಂದ ಇನ್ನೊಂದು ಲೆಕ್ಕವನ್ನು ಬಿಗ್ ಬಾಸ್ ಶುರುಮಾಡಿದ್ದು, ಸ್ವರ್ಗ- ನರಕದ ಆಟಕ್ಕೆ ಸ್ಪರ್ಧಿಗಳು ನಿನ್ನೆ ಭಾನುವಾರ ಗ್ರಾಂಡ್ ಎಂಟ್ರಿ (bigg boss kannada season 11) ಕೊಟ್ಟಿದ್ದಾರೆ.

ದೊಡ್ಮನೆಯ ರಂಗಿನಾಟಕ್ಕೆ ಬಣ್ಣದ ಲೋಕದಿಂದ ಮಾತ್ರವಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೆ ಚಾಪು ಮೂಡಿಸಿ ಫೇಮಸ್‌ ಆಗಿರುವ ಕಂಟೆಸ್ಟೆಂಟ್ಸ್ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಕಿರುತೆರೆ ನಟಿ ಭವ್ಯಾ ಗೌಡ ಎಂಟ್ರಿ ಕೊಟ್ಟರೆ, ನಂತರ ಒಬ್ಬೊಬ್ಬರಾಗೆ ಕೆಲವರು ಸ್ವರ್ಗಕ್ಕೆ, ಮತ್ತೆ ಕೆಲವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮೈ ತುಂಬಾ ಚಿನ್ನವನ್ನು ಹಾಕಿಕೊಂಡ ಗೋಲ್ಡ್ ಸುರೇಶ್, ಫೇಸ್‌ಬುಕ್ ಲಾಯರ್ ಜಗದೀಶ್, ಹಿಂದುತ್ವವಾದಿ ಚೈತ್ರಾ ಕುಂದಾಪುರ, ಹೀಗೆ ಭಿನ್ನ-ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳನ್ನು ಬಿಗ್ ಬಾಸ್ 11ನೇ ಸೀಸನ್ ಮನೆಯೊಳಗೆ (bigg boss kannada season 11 grand opening) ಕಾಲ್ಟಿಟ್ಟಿದ್ದಾರೆ.

Bigg Boss season 11 The real game starts today
Bigg Boss season 11 The real game starts today

ಸ್ವರ್ಗ- ನರಕದ ಆಟಕ್ಕೆ ರೆಡಿಯಾದ ಕಂಟೆಸ್ಟೆಂಟ್ಸ್

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಮನೆಗಳನ್ನು ಮಾಡಲಾಗಿದೆ. ಬಿಗ್‌ ಮನೆಗೆ ಗ್ರ್ಯಾಂಡ್ ವೆಲ್ಕಮ್ ಪಡೆದುಕೊಂಡ ಹದಿನೇಳು ಸ್ಪರ್ಧಿಗಳಲ್ಲಿ ಒಬ್ಬೊಬ್ಬರಾಗೆ ಸ್ವರ್ಗ- ನರಕದ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗಕ್ಕೆ ಭವ್ಯ, ಯಮುನಾ, ಧನರಾಜ್, ಗೌತಮಿ, ಧರ್ಮ ಕೀರ್ತಿ, ಲಾಯರ್ ಜಗದೀಶ್, ತ್ರಿವಿಕ್ರಮ್, ಹಂಸ, ಐಶ್ವರ್ಯ ಹಾಗೂ ಉಗ್ರಂ ಮಂಜು ಎಂಟ್ರಿ ಕೊಟ್ಟಿದ್ದಾರೆ. ಇನ್ನು ನರಕಕ್ಕೆ ಅನುಷಾ ರೈ, ಶಿಶಿರ್, ಮಾನಸ, ಗೋಲ್ಡ್ ಶಶಿ, ಚೈತ್ರ, ಮೋಕ್ಷಿತ ಹಾಗು ರಂಜಿತ್ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗ ಹಾಗೂ ನರಕದ ಆಟಕ್ಕೆ ಕಂಟೆಸ್ಟೆಂಟ್ಸ್ ತುದಿಗಾಲಲ್ಲಿ ನಿಂತಿದ್ದು, 17 ಜನ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ನಾಲ್ವರು ದರ್ಶನ್ ಆಪ್ತರಾಗಿರುವುದು (bigg boss kannada season 11 timings) ವಿಶೇಷ.

ಬಿಗ್ ಬಾಸ್ ಸೀಸನ್ 10 ಕಾಂಟ್ರವರ್ಸಿ ಮೂಲಕವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸೀಸನ್ 11 ಬಿಗ್ ಬಾಸ್ ವೀಕ್ಷಕರಿಗೆ ಬೆಟ್ಟದಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ ಅಂದರೆ ತಪ್ಪಾಗಲ್ಲ. ಹಲವು ಕಾಂಟ್ರವರ್ಸಿಗಳ ಮೂಲಕವೇ ಕಳೆದ ಸೀಸನ್ ಸ್ಪರ್ಧಿಗಳು ನೇಮ್ ಆ್ಯಂಡ್ ಫೇಮ್ ಗಿಟ್ಟಿಸಿಕೊಂಡಿದ್ದರು. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇನ್ನೆಷ್ಟು ಕಾಂಟ್ರವರ್ಸಿ ಕ್ರಿಯೇಟ್ ಆಗುತ್ತೆ ಎಂದು ಬಿಗ್ ಬಾಸ್ ವೀಕ್ಷಕರು ಕಾಯ್ತಾ ಇದ್ದಾರೆ. ಇನ್ನು ದೊಡ್ಮನೆಯಲ್ಲಿರುವ ನಟ ದರ್ಶನ್‌ ಫಾಲೋವರ್ಸ್‌ನಿಂದ ಈ ಬಾರಿಯ ಬಿಗ್ ಬಾಸ್ ಸಖತ್ ಕಿಕ್ ಕೊಡಲಿದೆ ಎಂದು ಹೇಳಲಾಗುತ್ತಿದೆ.

ದೊಡ್ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್


ಹದಿನೇಳು ಸ್ಪರ್ಧಿಗಳಲ್ಲಿ ನಾಲ್ವರು ಕಂಟೆಸ್ಟೆಂಟ್ಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದಾರೆ. ದರ್ಶನ್ ಅವರ ಹೆಸರನ್ನು ಹಗಲಿರುಳು ಜಪ ಮಾಡುವ ಈ ನಾಲ್ವರು, ಸುದೀಪ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ದೊಡ್ಮನೆಯಲ್ಲಿ ಹಿಂದೆಂದೂ ಈ ತರಹದ ಕಾಕತಾಳೀಯ ಆಗಿರಲಿಲ್ಲ. ಆದರೆ ಈ ಬಾರಿ ನಿಜವಾಗಿದೆ. ಆ ನಾಲ್ಕು ಜನ ಸ್ಪರ್ಧಿಗಳು ಪ್ರತಿನಿತ್ಯ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಜಪ ಮಾಡಿದರೂ ಕೂಡ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಕೆಲವು ದರ್ಶನ್ ಆಪ್ತರು ವೇದಿಕೆ ಮೇಲೆ ದಚ್ಚು ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ನಾಲ್ವರಿಂದ ಬಿಗ್ ಬಾಸ್ ಮನೆಯಲ್ಲೂ ದರ್ಶನ್ ಬಗ್ಗೆ ಚರ್ಚೆಯಾಗುತ್ತಾ ಅಂತ ಬಿಗ್ ಬಾಸ್ ವೀಕ್ಷಕರಿಗೆ ಕುತೂಹಲ ಕ್ರಿಯೇಟ್ ಆಗಿದೆ.

ಮುಂದಿನ ನೂರು ದಿನಗಳವರೆಗೆ ದರ್ಶನ್ ವಿಚಾರ ಒಂಟಿ ಮನೆಯಲ್ಲಿ ಕೇಳಿ ಬಂದರೆ, ದರ್ಶನ್ ವಿಚಾರವನ್ನು ಸುದೀಪ್ ಗಮನಿಸಿ ವಾರಾಂತ್ಯದಲ್ಲಿ ಯಾವ ರೀತಿ ಮಾತನಾಡುತ್ತಾರೆ ಎಂಬುದು ಸದ್ಯ ಬಿಗ್ ಬಾಸ್ ವೀಕ್ಷಕರಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

New Serial: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕಾಂಟ್ರಾಕ್ಟ್ ಮದುವೆಯನ್ನೊಳಗೊಂಡ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಶುರುವಾಗ್ತಿದೆ. ಇದೇ ಸೋಮವಾರದಿಂದ ಅಂದರೆ ಸೆ.30ರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

VISTARANEWS.COM


on

By

new serial
Koo

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಆದರೆ ಇದೀಗ ‘ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆಯನ್ನು (New Serial) ವೀಕ್ಷಕರಿಗೆ ಹೇಳಲು ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ (star suvarna) ಸಜ್ಜಾಗಿದೆ.

ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಕಥಾನಾಯಕಿ ಭೂಮಿ ಚಹಾ (ಟೀ) ಮಾರುವವಳಾಗಿದ್ದು, ಪೊಲೀಸ್ ಕಾನ್ಸ್‌ಟೇಬಲ್‌ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ.

new serial
new serial

ಇನ್ನು ಈ ಕಥೆಯ ನಾಯಕ ಅಜಿತ್‌, ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಮದುವೆ ಅಂದ್ರೇನೆ ಇಷ್ಟವಿರದ ಆದಿಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಮುಂದೆ, ಅನಿವಾರ್ಯ ಕಾರಣಗಳಿಂದಾಗಿ ಭೂಮಿ ಹಾಗು ಅಜಿತ್‌ ಇಬ್ಬರು ಪರಸ್ಪರ ಷರತ್ತುಗಳಿಗೆ ಒಪ್ಪಿಕೊಂಡು ಒಂದು ವರ್ಷದ ಕಾಂಟ್ರಾಕ್ಟ್‌ನೊಂದಿಗೆ ಮದುವೆಯಾಗ್ತಾರೆ. ಕಾಂಟ್ರಾಕ್ಟ್ ಮದುವೆಯಿಂದ ಒಂದಾದ ಈ ಜೀವಗಳ ಮನಸುಗಳು ಮುಂದೆ ಹೇಗೆ ಒಂದಾಗುತ್ತೆ ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಈ ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು ಕಥೆಯು ಅದ್ಬುತ ತಾರಾಬಳಗವನ್ನು ಹೊಂದಿದೆ. ಹೊಚ್ಚ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Suvarna Celebrity League : ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸತನದ ಸಂಚಲನವನ್ನು ಸೃಷ್ಟಿಸಲು ಸ್ಟಾರ್ ಸುವರ್ಣ ವಾಹಿನಿ ಭರ್ಜರಿಯಾಗಿ ಸಜ್ಜಾಗಿದೆ . ವೀಕೆಂಡ್‌ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಹೊಚ್ಚ ಹೊಸ ಶೋ “ಸುವರ್ಣ ಸೆಲೆಬ್ರಿಟಿ ಲೀಗ್” ಹೊತ್ತು ತರ್ತಿದೆ.

VISTARANEWS.COM


on

By

Suvarna Celebrity League a reality show launched on Star Suvarna
Koo

ಬೆಂಗಳೂರು: ಕಿರುತೆರೆಯಲ್ಲಿ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” (Suvarna Celebrity League) ಇದೇ ಭಾನುವಾರದಿಂದ (ಸೆ.15) ರಾತ್ರಿ 7 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದೊಂದು ಕಿರುತೆರೆಯ ಜನಪ್ರಿಯ ಸೆಲೆಬ್ರಿಟಿಗಳನ್ನು ಒಳಗೊಂಡ ವಿನೂತನ ರೀತಿಯ ರಿಯಾಲಿಟಿ ಶೋ ಆಗಿದೆ. ಇದರಲ್ಲಿ ಒಟ್ಟು 2 ತಂಡಗಳು ಇರಲಿದ್ದು, 10 ಜನ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಸರಿ ಸುಮಾರು 8 ವಾರಗಳ ಕಾಲ ನಡೆಯುವ ಸಮರ ಇದಾಗಿದೆ. ಈ ಜಟಾಪಟಿಯಲ್ಲಿ ಯಾವ ತಂಡ ಗೆದ್ದು “ಸುವರ್ಣ ಸೆಲೆಬ್ರಿಟಿ ಲೀಗ್” ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತದೆ ? ಎಂಬುದು ಈ ಕಾರ್ಯಕ್ರಮದ ಶೈಲಿಯಾಗಿದೆ. ಜತೆಗೆ ಮೋಜು-ಮಸ್ತಿ, ತರ್ಲೆ ತುಂಟಾಟದ ಜತೆ ಪೈಪೋಟಿಯ ಮಹಾ ಯುದ್ಧವೇ ನಡೆಯಲಿದೆ.

ನಿರೂಪಕರಾಗಿ ಮಿಂಚಲಿರುವ ಕಾರ್ತಿಕ್‌ ಮಹೇಶ್‌

ಇನ್ನು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಅದ್ಧೂರಿಯಾಗಿ ಗೆದ್ದ ನಟ ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್‌’ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಆಗಿದೆ.

‘ಸುವರ್ಣ ಸೆಲೆಬ್ರಿಟಿ ಲೀಗ್’ ಶೋ ಲಾಂಚ್‌ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋಗಳಿಂದ ವೀಕ್ಷಕರಲ್ಲಿ ಕಾತುರತೆ ಹೆಚ್ಚಾಗಿದೆ. 10 ಸ್ಪರ್ಧಿಗಳಾಗಿ ಕಿರುತೆರೆ ಕಲಾವಿದರುಗಳಾದ ವಿನಯ್ ಗೌಡ, ನಮ್ರತಾ ಗೌಡ ಹಾಗೂ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿಯ ಚಂದು ಗೌಡ, ‘ಆಸೆ’ ಧಾರಾವಾಹಿಯ ಪ್ರಿಯಾಂಕಾ ಮತ್ತು ನಿನಾದ್ ಹರಿತ್ಸ, ‘ಗೌರಿಶಂಕರ’ ಧಾರಾವಾಹಿಯ ಅಭಿಜ್ಞಾ ಭಟ್, ತನಿಷಾ ಕುಪ್ಪಂಡ, ಪ್ರಿಯಾಂಕಾ ಶಿವಣ್ಣ, ರಕ್ಷಕ್ ಬುಲೆಟ್ ಹಾಗೂ ‘ಕಾಮಿಡಿ ಗ್ಯಾಂಗ್ಸ್’ನ ಹಿತೇಶ್ ಭಾಗವಹಿಸಲಿದ್ದಾರೆ.

Suvarna Celebrity League a reality show launched on Star Suvarna
Suvarna Celebrity League a reality show launched on Star Suvarna

ಇನ್ಮುಂದೆ ವಾರಾಂತ್ಯದಲ್ಲಿ ಶುರುವಾಗಲಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ಪ್ರತೀ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Continue Reading

ಕಿರುತೆರೆ

Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ

Namratha Gowda: ಹಾಟ್‌ ಆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರು ನಮ್ರತಾ ಗೌಡ . ಇಲ್ಲಿವೆ ಫೋಟೊಗಳು!

VISTARANEWS.COM


on

Namratha Gowda
Koo
Namratha Gowda
ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿರುವ ಕಪ್ಪು ಸೀರೆಯುಟ್ಟು ಗಮನ ಸೆಳೆದಿದ್ದಾರೆ.
Namratha Gowda
ಸ್ಲೀವ್ ಲೆಸ್ ಬ್ಲೌಸ್ ಜತೆ ಬ್ಲ್ಯಾಕ್‌ ಹ್ಯಾಂಡ್‌ ಗ್ಲೌಸ್‌, ಅದರ ಮೇಲೆ ಡೈಮಂಡ್‌ ರಿಂಗ್‌ ಮತ್ತು ಸಿಂಹಿಣಿಯ ಲೋಗೋ ಇರುವ ಬೆಲ್ಟ್‌ ಇದು ಬೆಡಗಿಯ ನ್ಯೂ ಲುಕ್‌ನ ವಿಷೇಶವಾಗಿದೆ.
Namratha Gowda
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಯೂಟ್‌ ಮತ್ತು ಹಾಟ್ ಫೋಟೊಗಳನ್ನು ಪೋಸ್ಟ್‌ ಮಾಡಿರುವ ನಮ್ಮು “Some wars help us bloom” ಎಂದು ಕ್ಯಾಪ್ಶನ್ ಸಹ ಹಾಕಿಕೊಂಡಿದ್ದಾರೆ.
Namratha Gowda
ಕೆಲದಿನಗಳ ಹಿಂದೆ ಪ್ಯಾರ್ ಗೆ ಆಗ್ಬಿಟ್ಟೈತೆ ನಟಿ ಪಾರುಲ್ ಯಾದವ್ ಬ್ಲ್ಯಾಕ್ ಸೀರೆ ಧರಿಸಿ ಬೋಲ್ಡ್‌ ಆಗಿ ಫೋಟೊ ಶೂಟ್ ಮಾಡಿಸಿದ್ದು ಅದು ವೈರಲ್ ಆಗಿತ್ತು. ಇದೀಗ ಅವರನ್ನು ಮೀರಿಸುವ ಹಾಗೆ ನಟಿ ನಮ್ರತಾ ಗೌಡ ಫೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Namratha Gowda
ಸದ್ಯಕ್ಕೆ ಜಿಮ್‌ ವರ್ಕೌಟ್‌ ಮಾಡಿ ಫಿಟ್‌ ಆಗುತ್ತಿರುವ ನಮ್ರತಾ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿ ಆಗಲಿದ್ದಾರೆ.
Continue Reading
Advertisement
karnataka Weather Forecast
ಮಳೆ5 ಗಂಟೆಗಳು ago

Karnataka Weather : ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ; ನಾಳೆಗೂ ಭಾರಿ ವರ್ಷಧಾರೆ

Actor Darshan
ಬೆಂಗಳೂರು6 ಗಂಟೆಗಳು ago

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ; ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್‌

Fake journalist arrested for targeting bakeries For money
ಬೆಂಗಳೂರು7 ಗಂಟೆಗಳು ago

Fake journalist : ಜನ ಸಾಮಾನ್ಯರ ಬಳಿ ಸುಲಿಗೆ ಮಾಡುತ್ತಿದ್ದ ನಕಲಿ‌ ಪತ್ರಕರ್ತ ಅರೆಸ್ಟ್‌

Murder case
ತುಮಕೂರು9 ಗಂಟೆಗಳು ago

Murder Case : ಬುದ್ದಿವಾದ ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

Ratan Tata missed england's royal honour to take care of sick dogs
ದೇಶ11 ಗಂಟೆಗಳು ago

Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ಮಿಸ್‌ ಮಾಡಿದ್ದರು ರತನ್‌ ಟಾಟಾ!

Ratan Tata joined the company as an ordinary employee but Why is he the guru of the industry
ದೇಶ11 ಗಂಟೆಗಳು ago

Ratan Tata : ರತನ್‌ ಟಾಟಾ ಕಂಪನಿ ಸೇರಿದ್ದು ಸಾಮಾನ್ಯ ಉದ್ಯೋಗಿಯಾಗಿ! ಉದ್ಯಮ ರಂಗದ ಗುರು ಆಗಿದ್ದೇಗೆ?

Ratan Tata
ದೇಶ12 ಗಂಟೆಗಳು ago

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಇನ್ನಿಲ್ಲ; ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರ ಸಂತಾಪ

Why Ratan Tata didn't get married
ದೇಶ12 ಗಂಟೆಗಳು ago

Ratan Tata: ರತನ್ ಟಾಟಾ ಯಾಕೆ ಮದ್ವೆ ಆಗಲಿಲ್ಲ! ತಮ್ಮ ಪ್ರೀತಿಯ ಕತೆ ಬಗ್ಗೆ ಹೇಳಿದ್ದೇನು?

Dina Bhavishya
ಭವಿಷ್ಯ12 ಗಂಟೆಗಳು ago

Dina Bhavishya : ಈ ದಿನ ಹೂಡಿಕೆ ವ್ಯವಹಾರಗಳಲ್ಲಿ ಅಧಿಕ ಲಾಭ

Heavy rain forecast in Uttara Kannada
ಮಳೆ2 ದಿನಗಳು ago

Karnataka Weather : ಇಂದು ಉತ್ತರಕನ್ನಡದಲ್ಲಿ ಭಾರಿ ಮಳೆ ಮುನ್ಸೂಚನೆ; ಯೆಲ್ಲೋ ಅಲರ್ಟ್‌ ಘೋಷಣೆ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌