google street view: ಬರಲಿದೆ ಭಾರತದಲ್ಲಿಯೂ ಗೂಗಲ್‌ ಸ್ಟ್ರೀಟ್‌ ವ್ಯೂ, ಬೆಂಗಳೂರಿನಲ್ಲಿಯೇ ಮೊದಲು - Vistara News

ತಂತ್ರಜ್ಞಾನ

google street view: ಬರಲಿದೆ ಭಾರತದಲ್ಲಿಯೂ ಗೂಗಲ್‌ ಸ್ಟ್ರೀಟ್‌ ವ್ಯೂ, ಬೆಂಗಳೂರಿನಲ್ಲಿಯೇ ಮೊದಲು

2011ರಲ್ಲಿ ಗೂಗಲ್‌ ಕಂಪನಿ ತನ್ನ ಮ್ಯಾಪ್ ಜತೆಗೆ ಸ್ಟ್ರೀಟ್‌ ವ್ಯೂ (google street view) ನೀಡಲು ಮುಂದಾದಾಗ ಅದನ್ನು ತಡೆಯಲಾಗಿತ್ತು. ಇದೀಗ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಫೀಚರ್‌ ಪರಿಚಯಿಸುತ್ತಿದೆ.

VISTARANEWS.COM


on

street view
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಗೂಗಲ್ ಕೊನೆಗೂ ಭಾರತದಲ್ಲಿ ʻಸ್ಟ್ರೀಟ್ ವ್ಯೂʼ ಸೌಲಭ್ಯವನ್ನು ತರುತ್ತಿದ್ದು, ಆರಂಭದಲ್ಲಿ ದೇಶದ ಹತ್ತು ನಗರಗಳಲ್ಲಿ ಅಳವಡಿಸುತ್ತಿದೆ.

ಸ್ಟ್ರೀಟ್‌ ವ್ಯೂ ಮೂಲಕ ಗ್ರಾಹಕರು ತಾವಿದ್ದಲ್ಲೇ ತಮಗೆ ಅಗತ್ಯವಾದ ನಗರದ ವಿವಿಧ ತಾಣಗಳ ರಿಯಲ್‌ ಟೈಮ್‌ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಯಾವುದೇ ಪ್ರೇಕ್ಷಣೀಯ ಸ್ಥಳ, ರೆಸ್ಟೋರೆಂಟ್‌, ಟ್ರಾಫಿಕ್‌ ಪರಿಸ್ಥಿತಿ, ಒನ್‌ವೇ ಇತ್ಯಾದಿಗಳನ್ನು ಅನ್ವೇಷಿಸಬಹುದು. ರಸ್ತೆಗಳ ವೇಗದ ಮಿತಿ, ರಸ್ತೆ ಮುಚ್ಚುಗಡೆ, ಅಡಚಣೆಗಳ ಮಾಹಿತಿ, ಟ್ರಾಫಿಕ್‌ ಜಂಕ್ಷನ್‌ಗಳ ಒತ್ತಡಗಳನ್ನು ಕೂಡ ಇದು ತೋರಿಸುತ್ತದೆ.

ಸ್ಥಳೀಯ ಕಂಪನಿಗಳಾದ ಸುಧಾರಿತ ಮ್ಯಾಪಿಂಗ್ ಸಂಸ್ಥೆ ಜೆನೆಸಿಸ್ ಇಂಟರ್‌ನ್ಯಾಶನಲ್, ಡಿಜಿಟಲ್ ಸಲಹೆ ಮತ್ತು ವ್ಯಾಪಾರ ಸೇವಾ ಸಂಸ್ಥೆ ಟೆಕ್ ಮಹೀಂದ್ರಾ ಸಹಭಾಗಿತ್ವದಲ್ಲಿ ಭಾರತದಲ್ಲಿ ಸ್ಟ್ರೀಟ್‌ ವ್ಯೂ ಪ್ರಾರಂಭಿಸುವುದಾಗಿ ಗೂಗಲ್‌ ಘೋಷಿಸಿದೆ. ಗೂಗಲ್‌ಗೆ ಸ್ವತಂತ್ರವಾಗಿ ಭಾರತದಲ್ಲಿ ಕಾರ್ಯಾಚರಿಸಲು ಅನುಮತಿ ನೀಡಲಾಗಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಜತೆ ಸಹಭಾಗಿತ್ವದಲ್ಲಿ ಇದನ್ನು ತರುತ್ತಿದೆ. ಈ ಸಂಸ್ಥೆಗಳು ನೀಡಿದ ಡೇಟಾವನ್ನು ಗೂಗಲ್‌ ಬಳಸಿಕೊಳ್ಳಲಿದೆ.

ಇಂದಿನಿಂದ ಹೊಸ ಸ್ಟ್ರೀಟ್ ವ್ಯೂ ಫೀಚರ್‌ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮಾತ್ರ Google Mapsನಲ್ಲಿ ಲಭ್ಯ. ಮುಂಬರುವ ದಿನಗಳಲ್ಲಿ ಇದನ್ನು ಹೈದರಾಬಾದ್‌, ಕೋಲ್ಕತ್ತಾದಲ್ಲಿ ಬಿಡುಗಡೆ ಮಾಡಲಾಗುವುದು. ನಂತರ ಚೆನ್ನೈ, ದೆಹಲಿ, ಮುಂಬೈ, ಪುಣೆ, ನಾಸಿಕ್, ವಡೋದರಾ, ಅಹ್ಮದ್‌ನಗರ ಮತ್ತು ಅಮೃತಸರ ಸೇರಿದಂತೆ ಭಾರತದ ಹೆಚ್ಚಿನ ನಗರಗಳಲ್ಲಿ ಸ್ಟ್ರೀಟ್‌ ವ್ಯೂ ತರಲಾಗುವುದು ಎಂದು ಗೂಗಲ್ ಇಂಡಿಯಾ ತಿಳಿಸಿದೆ.

ಒಮ್ಮೆ ಗ್ರಾಹಕ ಬಳಕೆಗ ಲಭ್ಯವಾದ ಬಳಿಕ ಈ ಫೀಚರ್‌ ಬಳಕೆ ಸುಲಭವಾಗಲಿದೆ. Google map ಅಪ್ಲಿಕೇಶನ್ ಅನ್ನು ತೆರೆದು, ಯಾವುದೇ ಉದ್ದೇಶಿತ ಸ್ಥಳವನ್ನು ಜೂಮ್‌ ಮಾಡಿ ಟ್ಯಾಪ್ ಮಾಡಬೇಕು. ಸ್ಥಳೀಯ ಕೆಫೆಗಳು, ಸಾಂಸ್ಕೃತಿಕ ಹಾಟ್‌ಸ್ಪಾಟ್‌ಗಳು, ಸ್ಥಳೀಯ ಪ್ರೇಕ್ಷಣೀಯ ತಾಣಗಳು, ಪಾರ್ಕ್‌ಗಳು, ರಸ್ತೆಗಳನ್ನು ನೀವು ನೋಡಬಹುದು. ಆದರೆ ಭದ್ರತಾ ಕಾರಣಗಳಿಗಾಗಿ ಸೂಕ್ಷ್ಮ ಹಾಗೂ ಸುರಕ್ಷಿತ ಪ್ರದೇಶಗಳು, ಸ್ಟ್ರೀಟ್‌ ವ್ಯೂ ಬಳಕೆಗೆ ಅನುಮತಿ ಒದಗಿಸದ ತಾಣಗಳು ಲಭ್ಯವಾಗುವುದಿಲ್ಲ. ಈ ಹಿಂದೆ ಎರಡು ಬಾರಿ ಭಾರತದಲ್ಲಿ ಸ್ಟ್ರೀಟ್‌ ವ್ಯೂ ತರಲು ಗೂಗಲ್‌ ಯತ್ನಿಸಿದ್ದರೂ, ಭದ್ರತಾ ಕಾರಣಗಳಿಗಾಗಿ ಸರ್ಕಾರ ನಿರಾಕರಿಸಿತ್ತು. 2011ರಲ್ಲಿ ಸ್ಟ್ರೀಟ್‌ ವ್ಯೂಗಾಗಿ ಬೆಂಗಳೂರಿನ ಬೀದಿಗಳನ್ನು ಚಿತ್ರೀಕರಿಸಲು ಮುಂದಾದಾಗ ಇಲ್ಲಿನ ಪೊಲೀಸರು ತಡೆದಿದ್ದರು.

ಇದನ್ನೂ ಓದಿ: ನನಗೂ ಮನುಷ್ಯರಂತೆ ಆನಂದ-ಬೇಸರ ಎರಡೂ ಆಗುತ್ತದೆ ಎಂದ ಗೂಗಲ್‌ AI ಚಾಟ್‌ಬೋಟ್!‌ ಎಂಜಿನಿಯರ್‌ ಸಸ್ಪೆಂಡ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Citroen C3 Aircross: ಸಿ3 ಏರ್ ಕ್ರಾಸ್ ಧೋನಿ ಆವೃತ್ತಿಯ ಹೊರಭಾಗದಲ್ಲಿ ಧೋನಿಯ ಹೆಸರು ಮತ್ತು ಅವರ ಜೆರ್ಸಿ ಸಂಖ್ಯೆ 7 ನೊಂದಿಗೆ ಹೊಸ ಡೆಕಾಲ್ ನೀಡಲಾಗಿದೆ. ಒಳಭಾಗದಲ್ಲಿ ಲಿಮಿಟೆಡ್ ರನ್​ ಮಾಡೆಲ್ ಆಗಿದ್ದು. ಹೊಸ ಬಣ್ಣ-ಸಂಯೋಜಿತ ಸೀಟ್ ಕವರ್ ಗಳು ಮತ್ತು ಕುಶನ್ ಪಿಲ್ಲೊ, ಸೀಟ್ ಬೆಲ್ಟ್ ಕುಶನ್ ಗಳು, ಹೆಚ್ಚು ಪ್ರಕಾಶಮಾನವಾಗಿರವು ಡೋರ್ ಸಿಲ್ ಪ್ಲೇಟ್ ಗಳು ಮತ್ತು ಮುಂಭಾಗದ ಡ್ಯಾಶ್ ಕ್ಯಾಮ್ ನೀಡಲಾಗಿದೆ.

VISTARANEWS.COM


on

Citroen C3 Aircross
Koo

ಬೆಂಗಳೂರು: ಸಿಟ್ರೋಯನ್​ ತನ್ನ ಮಧ್ಯಮ ಗಾತ್ರದ ಎಸ್​ಯುವಿ ಕಾರಾಗಿರುವ ಸಿ3 ಏರ್ ಕ್ರಾಸ್ (Citroen C3 Aircross) ಧೋನಿ ಎಡಿಷನ್ ಹೊಸ ವಿಶೇಷ ಆವೃತ್ತಿ ಹೊರತಂದಿದೆ. 11.82 ಲಕ್ಷ ರೂ.ಗಳ ಬೆಲೆ ಹೊಂದಿರುವ ಧೋನಿ ಎಡಿಷನ್ ಅನೇಕ ರೂಪಾಂತರಗಳು 5 ಮತ್ತು 7 ಸೀಟರ್​ ಕಾನ್ಫಿಗರೇಶನ್ ಗಳಲ್ಲಿ ಲಭ್ಯವಿದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಈ ವಿಶೇಷ ಆವೃತ್ತಿಯ ಮಾದರಿಯು 100 ಯುನಿಟ್ ಗಳಿಗೆ ಸೀಮಿತವಾಗಿದೆ ಎಂಬುದೇ ವಿಶೇಷ. ಈ ಎಡಿಷನ್​ನಲ್ಲಿ ಸಿ3 ಏರ್ ಕ್ರಾಸ್ ಗಿಂತ ಸಣ್ಣ ಪ್ರಮಾಣದ ಇಂಟೀರಿಯರ್​ ಬದಲಾವಣೆ ಮಾಡಲಾಗಿದೆ.

ಸಿ3 ಏರ್ ಕ್ರಾಸ್ ಧೋನಿ ಆವೃತ್ತಿಯ ಹೊರಭಾಗದಲ್ಲಿ ಧೋನಿಯ ಹೆಸರು ಮತ್ತು ಅವರ ಜೆರ್ಸಿ ಸಂಖ್ಯೆ 7 ನೊಂದಿಗೆ ಹೊಸ ಡೆಕಾಲ್ ನೀಡಲಾಗಿದೆ. ಒಳಭಾಗದಲ್ಲಿ ಲಿಮಿಟೆಡ್ ರನ್​ ಮಾಡೆಲ್ ಆಗಿದ್ದು. ಹೊಸ ಬಣ್ಣ-ಸಂಯೋಜಿತ ಸೀಟ್ ಕವರ್ ಗಳು ಮತ್ತು ಕುಶನ್ ಪಿಲ್ಲೊ, ಸೀಟ್ ಬೆಲ್ಟ್ ಕುಶನ್ ಗಳು, ಹೆಚ್ಚು ಪ್ರಕಾಶಮಾನವಾಗಿರವು ಡೋರ್ ಸಿಲ್ ಪ್ಲೇಟ್ ಗಳು ಮತ್ತು ಮುಂಭಾಗದ ಡ್ಯಾಶ್ ಕ್ಯಾಮ್ ನೀಡಲಾಗಿದೆ.

ಪ್ರತಿ ಧೋನಿ ಎಡಿಷನ್​ ಕಾರಿನ ಗ್ಲೋವ್ ಬಾಕ್ಸ್​ನಲ್ಲಿ ವಿಶೇಷ ‘ಧೋನಿ ಗೂಡಿ’ ಒಳಗೊಂಡಿರುತ್ತದೆ ಎಂದು ಸಿಟ್ರನ್ ಹೇಳುತ್ತಾರೆ. ಅಂದರೆ ಅದೃಷ್ಟಶಾಲಿ ವಿಜೇತರು ಸ್ವತಃ ಧೋನಿಯಿಂದ ಸಹಿ ಮಾಡಿದ ಗ್ಲವ್ಸ್​​ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ

ಉಳಿದಂತೆ ಧೋನಿ ಆವೃತ್ತಿಯು ಸ್ಟ್ಯಾಂಡರ್ಡ್ ಸಿ 3 ಏರ್ ಕ್ರಾಸ್ ನಂತೆಯೇ ಇದೆ. ಇದು 110 ಬಿಹೆಚ್ ಪಿ, 1.2-ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ.

ಸಚಿನ್​ ಹೆಸರಿನ ಫಿಯೆಟ್​ ಕಾರು ಬಂದಿತ್ತು

ಖ್ಯಾತ ಕ್ರಿಕೆಟಿಗರೊಬ್ಬರು ಕಾರು ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2002 ರಲ್ಲಿ ಫಿಯೆಟ್ ತಂಡವು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕೈಜೋಡಿಸಿ ಪಾಲಿಯೋ ಎಸ್ 10 ಅನ್ನು ಹೊರತಂದಿತ್ತು. ಈ ಸೀಮಿತ ರನ್ ಮಾದರಿಯನ್ನು (ಕೇವಲ 500 ಮಾತ್ರ ಉತ್ಪಾದಿಸಲಾಗಿತ್ತು. ಪ್ರತಿಯೊಂದೂ ಅದರ ಸರಣಿ ಸಂಖ್ಯೆಯನ್ನು ಸೂಚಿಸುವ ಅಲ್ಯೂಮಿನಿಯಂ ಫಲಕವನ್ನು ಪಡೆದುಕೊಂಡಿತ್ತು ) ಹೊರಗೆ ಹಲವಾರು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಂದಿತ್ತಯ. ವಿಶೇಷ ಬಣ್ಣ ಮತ್ತು ಸಚಿನ್ ಅವರ ಆಟೋಗ್ರಾಫ್ ನಿಂದ ಹಿಡಿದು ಹಿಂಭಾಗದ ಸ್ಪಾಯ್ಲರ್ ಮತ್ತು ಹೊಸ ಅಲಾಯ್ ಚಕ್ರಗಳವರೆಗೆ ವಿಶೇಷತೆ ಇತ್ತು.

Continue Reading

Latest

Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ

Bajaj CNG Bike: ಬೈಕ್ ಪ್ರಿಯರಿಗೊಂದು ಸಿಹಿ ಸುದ್ದಿ. ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಬಜಾಜ್ ಸಿಎನ್ ಜಿ ಬೈಕ್ ಗಳ ಆವಿಷ್ಕಾರಕ್ಕೆ ಮುಂದಾಗಿದ್ದು, ಇದೀಗ ತನ್ನ ಸಿಎನ್ ಜಿ ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮುಂದಿನ ತಿಂಗಳು ಜುಲೈ 5 ರಂದು ಬಜಾಜ್ ತನ್ನ ಸಿಎನ್ ಜಿ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ಬೈಕ್ ಅನ್ನು ಸದ್ಯಕ್ಕೆ ‘ಬಜಾಜ್ ಬ್ರೂಜರ್’ ಎಂದು ಕರೆಯಲಾಗುತ್ತದೆ. ಆದರೆ ಬಿಡುಗಡೆಯ ವೇಳೆ ಇದರ ಹೆಸರನ್ನು ಬದಲಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

VISTARANEWS.COM


on

Bajaj CNG Bike
Koo

ನವದೆಹಲಿ: ಯುವ ಜನತೆಗೆ ಬೈಕ್ ಕ್ರೇಜ್ ಸಹಜ. ಮಾರುಕಟ್ಟೆಯಲ್ಲಿ ಯಾವುದೇ ಹೊಸ ಬೈಕ್ ಬಂದರೂ ಅವರ ಕಣ್ಣು ಅದರ ಮೇಲಿರುತ್ತದೆ. ಇನ್ನು ಸಾಲ ಮಾಡಿಯಾದರೂ ಸರಿ ಒಂದು ಬೈಕ್‌ ತೆಗೆದುಕೊಳ್ಳಬೇಕು ಎಂಬ ಕ್ರೇಜ್‌ ಹುಡುಗರಿಗಿರುತ್ತದೆ. ಇಂತಹ ಬೈಕ್ ಪ್ರಿಯರಿಗೆ ಇದೀಗ ಬಜಾಜ್ (Bajaj CNG Bike) ಸಿಹಿ ಸುದ್ದಿಯೊಂದನ್ನು ನೀಡಿದೆ.

ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಬಜಾಜ್ ಸಿಎನ್‌ಜಿ ಬೈಕ್‌ಗಳ ಆವಿಷ್ಕಾರಕ್ಕೆ ಮುಂದಾಗಿದ್ದು, ಇದೀಗ ತನ್ನ ಸಿಎನ್‌ಜಿ ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮುಂದಿನ ತಿಂಗಳು ಜುಲೈ 5ರಂದು ಬಜಾಜ್ ತನ್ನ ಸಿಎನ್‌ಜಿ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ.

ಈ ಬೈಕ್ ಅನ್ನು ಸದ್ಯಕ್ಕೆ ‘ಬಜಾಜ್ ಬ್ರೂಜರ್’ ಎಂದು ಕರೆಯಲಾಗುತ್ತದೆ. ಆದರೆ ಬಿಡುಗಡೆಯ ವೇಳೆ ಇದರ ಹೆಸರನ್ನು ಬದಲಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಬಜಾಜ್ ಬ್ರೂಜರ್ ವಿಶ್ವದ ಮೊದಲ ಸಿಎನ್‌ಜಿ ಮೋಟಾರ್ ಸೈಕಲ್ ಆಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ.

ಈ ಬೈಕ್ ನ ಉದ್ದಕ್ಕೂ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಾಗೇ ಇದನ್ನು ನಿರ್ವಹಿಸುವ ವಿಶಿಷ್ಟವಾದ ಚಾಸಿಸ್ ಸೆಟಪ್ ಅನ್ನು ಬೈಕ್ ಹೊಂದಿದೆ ಎಂಬುದನ್ನು ಅದರ ಬ್ಲೂಪ್ರಿಂಟ್ ತೋರಿಸುತ್ತದೆ. ಸಿಎನ್‌ಜಿ ಬೈಕ್‌ನ ಆಯಿಲ್ ಟ್ಯಾಂಕ್ ಚಿಕ್ಕದಾಗಿದ್ದರೂ, ಬೈಕ್‌ಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಈ ಬಜಾಜ್ ಬ್ರೂಜರ್ 5 – ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾದ 125 ಸಿಸಿ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಅಲ್ಲದೇ ಈ ಬೈಕ್ ಅನ್ನು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಆರಾಮವಾಗಿ ಓಡಿಸಬಹುದು. ಈ ಬೈಕ್ ಕ್ಲಚ್ ಗಾರ್ಡ್, ಹ್ಯಾಂಡಲ್ ಬಾರ್ ಬ್ರೇಸ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿರುವುದರಿಂದ ಇದರಲ್ಲಿ ಕಳಪೆ ರಸ್ತೆಯಲ್ಲೂ ಕೂಡ ಆರಾಮವಾಗಿ ಸವಾರಿ ಮಾಡಬಹುದು.

ಇದನ್ನೂ ಓದಿ: Passport Forgery Case: ಗಡ್ಡಕ್ಕೆ ಬಣ್ಣಹಚ್ಚಿ ಮುದುಕನ ವೇಷ ಧರಿಸಿ ಪ್ರಯಾಣಿಸುತ್ತಿದ್ದ 24ರ ಯುವಕ ಅರೆಸ್ಟ್!

ಬೈಕ್‌ ದರ ಎಷ್ಟು?:

ಈ ಬೈಕ್ ಬೆಲೆ ಸುಮಾರು 90,000 ರೂ. ಆಗಿರುವ ನಿರೀಕ್ಷೆ ಇದೆ. ಇದನ್ನು ಮುಂದಿನ ತಿಂಗಳು ಜುಲೈ 5ಕ್ಕೆ ಬಿಡುಗಡೆ ಮಾಡಲಿದ್ದಾರೆ. ಬಜಾಜ್ ಬ್ರೂಸರ್ ಬೈಕ್ ಟಿವಿಎಸ್ ರೇಡಿಯನ್, ಹೋಂಡಾ ಸಿಬಿ ಶೈನ್, ಹೀರೋ ಹೆಚ್ ಎಫ್ 100, ಟಿವಿಎಸ್ ಸ್ಪೋರ್ಟ್, ಬಜಾಜ್ ಸಿಟಿ 110 ಮತ್ತು ಬಜಾಜ್ ಪ್ಲಾಟಿನಾಗಳಂತಹ ಇತರ ಮೋಟಾರ್ ಸೈಕಲ್‌ಗಳ ಎದುರು ಸ್ಪರ್ಧೆಗಿಳಿಯಲಿದೆ ಎನ್ನಲಾಗಿದೆ.

Continue Reading

ವಾಣಿಜ್ಯ

Tata Motors: ಬೆಲೆ ಏರಿಕೆಗೆ ಮುಂದಾದ ಟಾಟಾ ಮೋಟಾರ್ಸ್‌; ಜುಲೈಯಿಂದ ಕಮರ್ಷಿಯಲ್‌ ವಾಹನ ದುಬಾರಿ

Tata Motors: ಜುಲೈಯಿಂದ ಜಾರಿಗೆ ಬರುವಂತೆ ಟಾಟಾ ಮೋಟಾರ್ಸ್ ಕಮರ್ಷಿಯಲ್‌ ವಾಹನಗಳ ಬೆಲೆಯನ್ನು ಶೇ. 2ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇದು ಅನಿವಾರ್ಯ ಎಂದೂ ಕಂಪನಿ ಹೇಳಿದೆ. ಎಲ್ಲ ವಾಣಿಜ್ಯ ವಾಹನಗಳಿಗೆ ಈ ಬೆಲೆ ಏರಿಕೆ ಅನ್ವಯವಾಗಲಿದ್ದು, ನಿರ್ದಿಷ್ಟ ಮಾದರಿಯನ್ನು ಅವಲಂಬಿಸಿ ದರ ವ್ಯತ್ಯಾಸವಾಗಲಿದೆ.

VISTARANEWS.COM


on

Tata Motors
Koo

ಮುಂಬೈ: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ (Tata Motors) ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌ ನೀಡಲು ಮುಂದಾಗಿದೆ. ಜುಲೈಯಿಂದ ಜಾರಿಗೆ ಬರುವಂತೆ ಕಮರ್ಷಿಯಲ್‌ ವಾಹನ (Commercial vehicles)ಗಳ ಬೆಲೆಯನ್ನು ಶೇ. 2ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟಾರ್ಸ್ ಬುಧವಾರ ಘೋಷಿಸಿದೆ.

”ಟಾಟಾ ಮೋಟಾರ್ಸ್ ಲಿಮಿಟೆಡ್‌ ಜುಲೈ 1ರಿಂದ ಜಾರಿಗೆ ಬರುವಂತೆ ಕಮರ್ಷಿಯಲ್‌ ವಾಹನಗಳ ಬೆಲೆ ಹೆಚ್ಚಿಸಲಿದೆʼʼ ಎಂದು ಪ್ರಕಟಣೆ ತಿಳಿಸಿದೆ. ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇದು ಅನಿವಾರ್ಯ ಎಂದೂ ಕಂಪನಿ ಹೇಳಿದೆ. ಎಲ್ಲ ವಾಣಿಜ್ಯ ವಾಹನಗಳಿಗೆ ಈ ಬೆಲೆ ಏರಿಕೆ ಅನ್ವಯವಾಗಲಿದ್ದು, ನಿರ್ದಿಷ್ಟ ಮಾದರಿಯನ್ನು ಅವಲಂಬಿಸಿ ದರ ವ್ಯತ್ಯಾಸವಾಗಲಿದೆ.

ಟಾಟಾ ಮೋಟಾರ್ಸ್ ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಕಂಪನಿಯಾಗಿದ್ದು, ಇದು ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳನ್ನು ತಯಾರಿಸುತ್ತದೆ. ಕಂಪನಿಯು ದೇಶದ ಪ್ರಯಾಣಿಕ ವಾಹನಗಳ ಮಾರುಕಟ್ಟೆಯ ಅಗ್ರ ಮೂರರಲ್ಲಿ ಸ್ಥಾನ ಪಡೆದುಕೊಂಡಿದೆ. ಮೇ ತಿಂಗಳಲ್ಲಿ ಕಂಪನಿಯು ಸುಮಾರು 29,691 ಕಮರ್ಷಿಯಲ್‌ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 2ರಷ್ಟು ಹೆಚ್ಚಳ ದಾಖಲಿಸಿದೆ.

ಅದಾಗ್ಯೂ ಟ್ರಕ್ ಮಾರಾಟದ ಕುಸಿತ ಕಂಡು ಬಂದಿದೆ. ಒಟ್ಟಾರೆ ಟ್ರಕ್ ಮಾರಾಟವು 12,402 ಯೂನಿಟ್‌ಗೆ ತಲುಪಿದೆ. ಈ ವಿಭಾಗದಲ್ಲಿ ಹೆವಿ ಕಮರ್ಷಿಯಲ್ ವೆಹಿಕಲ್ಸ್ (Heavy Commercial Vehicles) ಮಾರಾಟದ ಪ್ರಮಾಣ ಸ್ವಲ್ಪ ಕುಸಿದಿದೆ. ಎಚ್‌ಸಿವಿ ಮಾರಾಟವು ಶೇ. 3ರಷ್ಟು ಕುಸಿದಿದ್ದು, 2023ರಲ್ಲಿನ 8,160 ಯೂನಿಟ್‌ನಿಂದ 2024ರ ಮೇ ವೇಳೆಗೆ 7,924 ಯುನಿಟ್‌ಗೆ ಇಳಿದಿದೆ.

ಮತ್ತೊಂದೆಡೆ ಇಂಟರ್‌ಮಿಡಿಯೆಟ್‌ ಲೈಟ್ ಮೀಡಿಯಂ ಕಮರ್ಷಿಯಲ್ ವೆಹಿಕಲ್ (Intermediate Light Medium Commercial Vehicle) ವಿಭಾಗವು ದೃಢವಾದ ಬೆಳವಣಿಗೆಯನ್ನು ತೋರಿದೆ. ಐಎಲ್ಎಂಸಿವಿಯ ಮಾರಾಟವು ಶೇ. 30ರಷ್ಟು ಏರಿಕೆಯಾಗಿದ್ದು, 2023ರ ಮೇಯಲ್ಲಿ 3,450 ಯೂನಿಟ್‌ ಮಾರಾಟವಾಗಿದ್ದರೆ 2024ರ ಮೇಯಲ್ಲಿ 4,478 ವಾಹನ ಬಿಕರಿಯಾಗಿದೆ.‌ ಮುಂದಿನ ದಿನಗಳಲ್ಲಿ ಟಾಟಾ ಮೋಟಾರ್ಸ್‌ನಂತೆ ಇತರ ವಾಹನ ತಯಾರಿಕಾ ಕಂಪನಿಗಳೂ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ

ಟಾಟಾ ಮೋಟಾರ್ಸ್ ಭಾರತದ ನಂ. 1 ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವದಂದು 7 ಲಕ್ಷ ಯೂನಿಟ್ ಮಾರಾಟದ ಸಂಭ್ರಮಾಚರಣೆ ನಡೆಸುತ್ತಿದೆ. 2017ರಲ್ಲಿ ಬಿಡುಗಡೆಯಾದ ನೆಕ್ಸಾನ್ 2021 ರಿಂದ 2023 ರವರೆಗೆ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಭಾರತದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರಲ್ಲಿ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಮೊದಲ ವಾಹನ ಎಂಬ ಖ್ಯಾತಿಯನ್ನು ನೆಕ್ಸಾನ್ ಹೊಂದಿದೆ. ಆ ಮೂಲಕ ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ಅಂದಿನಿಂದ ಇಂದಿನವರೆಗೂ ಅದರ ಗೆಲುವಿನ ಓಟ ಮುಂದುವರಿದಿದೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

ಫೆಬ್ರವರಿ 2024ರಲ್ಲಿ, ಹೊಸ ಜನರೇಷನ್‌ನ ನೆಕ್ಸಾನ್ 2022ರ ಹೆಚ್ಚಿನ ಪ್ರೋಟೋಕಾಲ್ ಪ್ರಕಾರ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ನೆಕ್ಸಾನ್.ಇವಿ ಕೂಡ ಅದೇ ದಾರಿಯಲ್ಲಿ ಸಾಗಿದ್ದು, ಇದೇ ತಿಂಗಳಲ್ಲಿ ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.

Continue Reading

ದೇಶ

Train Accident: ಸಿಬ್ಬಂದಿ ನಿರ್ಲಕ್ಷ್ಯ, ಸಿಗ್ನಲ್‌ ದೋಷ; ಬಂಗಾಳ ರೈಲು ಅಪಘಾತಕ್ಕೇನು ಕಾರಣ?

Train Accident: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ ರೈಲಿಗೆ ಗೂಡ್ಸ್​ ರೈಲು ಡಿಕ್ಕಿಯಾಗಿ ಸುಮಾರು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ರೈಲು ಅಪಘಾತಕ್ಕೆ ಕಾರಣವೇನು ಎನ್ನುವ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಸಿಗ್ನಲ್‌ನಲ್ಲಿ ಕಂಡು ಬಂದ ದೋಷವೇ ದುರಂತಕ್ಕೆ ಕಾರಣ ಎನ್ನಲಾಗಿದೆ.

VISTARANEWS.COM


on

Train Accident
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ (Kanchanjunga Express) ರೈಲಿಗೆ ಗೂಡ್ಸ್​ ರೈಲು ಡಿಕ್ಕಿಯಾಗಿ (Train Accident) ಸುಮಾರು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ರೈಲು ಅಪಘಾತಕ್ಕೆ ಕಾರಣವೇನು ಎನ್ನುವ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಸಿಗ್ನಲ್‌ನಲ್ಲಿ ಕಂಡು ಬಂದ ದೋಷವೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ದೋಷದಿಂದ ಕೂಡಿದ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಗೂಡ್ಸ್‌ ರೈಲು ವೇಗದ ಮಿತಿಯನ್ನು ಮೀರಿ ಸಂಚರಿಸಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮಂಡಳಿಯ ಆರಂಭಿಕ ವರದಿ ತಿಳಿಸಿದೆ.

ನಿಯಮ ಏನು ಹೇಳುತ್ತದೆ?

ಟಿಎ 912 (TA 912) (ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಸಿಗ್ನಲ್ ವೈಫಲ್ಯ ಸಂಭವಿಸಿದಾಗ, ಕೆಂಪು ಸಿಗ್ನಲ್‌ಗಳನ್ನು ದಾಟಲು ಸ್ಟೇಷನ್ ಮಾಸ್ಟರ್ ಚಾಲಕನಿಗೆ ಲಿಖಿತ ಪಾಸ್ ಅನ್ನು ಟಿಎ 912 ಎಂದು ಕರೆಯಲಾಗುತ್ತದೆ) ನಿಯಮದ ಪ್ರಕಾರ ಒಂದುವೇಳೆ ದೋಷಪೂರಿತ ಸಿಗ್ನಲ್‌ಗಳನ್ನು ದಾಟಲು ಅನುಮತಿ ಪಡೆದಿದ್ದರೆ, ಚಾಲಕ ಪ್ರತಿ ಸಿಗ್ನಲ್‌ನಲ್ಲಿ ಕೆಲವು ಹೊತ್ತು ನಿಂತು ಗಂಟೆಗೆ 10 ಕಿ.ಮೀ. ವೇಗದಲ್ಲಿ ಮಾತ್ರ ರೈಲು ಓಡಿಸಬೇಕು. ಮಾತ್ರವಲ್ಲ ಇನ್ನೊಂದು ರೈಲಿನಿಂದ 150 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಆದಾಗ್ಯೂ ಈ ಘಟನೆಯಲ್ಲಿ ಗೂಡ್ಸ್‌ ರೈಲು ಚಾಲಕ ಈ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಟಿಎ 912ರೊಂದಿಗೆ 9 ಸ್ವಯಂಚಾಲಿತ ಸಿಗ್ನಲ್‌ಗಳನ್ನು ದಾಟಿ ಮುಂದೆ ಸಾಗಲು ಅನುಮತಿಗಾಗಿ ಕಾಯುತ್ತಿತ್ತು ಎನ್ನಲಾಗಿದೆ.

ದೋಷಯುಕ್ತ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಯಿಂದಾಗಿ ಗೂಡ್ಸ್‌ ರೈಲು ಚಾಲಕನಿಗೆ ರಂಗಪಾಣಿ ಮತ್ತು ಚಟ್ಟರ್ ಹ್ಯಾಟ್ ರೈಲ್ವೆ ನಿಲ್ದಾಣಗಳ ನಡುವಿನ ಎಲ್ಲ ಸಿಗ್ನಲ್‌ಗಳನ್ನು ದಾಟಲು ಅನುಮತಿ ನೀಡಲಾಗಿತ್ತು. ಆದರೆ ರೈಲು ಅಂತಹ ಸಂದರ್ಭಗಳಿಗೆ ನಿಗದಿಪಡಿಸಿದ ಮಿತಿಯನ್ನು ಮೀರಿ ಸಂಚರಿಸಿದೆ. ʼʼರಾಣಿಪಾತ್ರ ರೈಲ್ವೆ ನಿಲ್ದಾಣ ಮತ್ತು ಚಟ್ಟರ್ ಹ್ಯಾಟ್ ಜಂಕ್ಷನ್ ನಡುವಿನ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ಸೋಮವಾರ ಬೆಳಿಗ್ಗೆ 5.50ರಿಂದ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಗೂಡ್ಸ್ ರೈಲು ಚಾಲಕನಿಗೆ ರಂಗಪಾಣಿಯ ಸ್ಟೇಷನ್ ಮಾಸ್ಟರ್ ಟಿಎ 912 ಅನ್ನು ನೀಡಿ, ಒಂಬತ್ತು ಸಿಗ್ನಲ್‌ ಅನ್ನು ಹಾದುಹೋಗಲು ಅನುಮತಿ ನೀಡಿದ್ದರು. ಆದರೆ ಚಾಲಕ ನಿಗದಿ ಪಡಿಸಿದ ಮಿತಿಗಿಂತ ವೇಗವಾಗಿ ಚಲಿಸಿದ್ದರಿಂದ ದುರಂತ ಸಂಭವಿಸಿದೆʼʼ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ 8:42ಕ್ಕೆ ರಂಗಪಾಣಿಯಿಂದ ಹೊರಟ ಗೂಡ್ಸ್ ರೈಲು ಬೆಳಿಗ್ಗೆ 8:55ಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಗಾರ್ಡ್ ಕೋಚ್, ಎರಡು ಪಾರ್ಸೆಲ್ ಬೋಗಿಗಳು ಮತ್ತು ಪ್ಯಾಸೆಂಜರ್ ರೈಲಿನ ಸಾಮಾನ್ಯ ಆಸನದ ಬೋಗಿ ಹಳಿ ತಪ್ಪಿದೆ. ಮೃತರಲ್ಲಿ ಗೂಡ್ಸ್ ರೈಲಿನ ಚಾಲಕ ಕೂಡ ಸೇರಿದ್ದಾರೆ. ಇತ್ತ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಚಾಲಕ ಸಿಗ್ನಲಿಂಗ್ ದೋಷದ ಸಮಯದಲ್ಲಿ ಅಗತ್ಯವಿರುವ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದ್ದಾರೆ. ಎಲ್ಲ ಕೆಂಪು ಸಿಗ್ನಲ್‌ಗಳಲ್ಲಿ ಒಂದು ನಿಮಿಷ ನಿಲ್ಲಿಸಿ 10 ಕಿ.ಮೀ. ವೇಗದಲ್ಲಿ ಸಂಚರಿಸಿದ್ದರು ಎಂದು ವರದಿ ತಿಳಿಸಿದೆ.

ಸದ್ಯ ರೈಲ್ವೆ ಸುರಕ್ಷತಾ ಆಯುಕ್ತರು (Commissioner of Railway Safety) ಅಪಘಾತದ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ‌ ಮೂಲ ಕಾರಣ ಬಹಿರಂಗ

Continue Reading
Advertisement
IRCTC Ticket Booking
Latest10 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest12 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ17 mins ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್46 mins ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ53 mins ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Pakistan Violence
ವಿದೇಶ1 hour ago

Pakistan Violence: ಕುರಾನ್‌ಗೆ ಅಪಮಾನ; ಪೊಲೀಸ್‌ ಸ್ಟೇಶನ್‌ಗೆ ಬೆಂಕಿ..ಠಾಣೆಯೊಳಗೇ ಆರೋಪಿಯ ಬರ್ಬರ ಕೊಲೆ

Actor Darshan was careful at every step to escape from Renuka case
ಸ್ಯಾಂಡಲ್ ವುಡ್2 hours ago

Actor Darshan: ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದ ದರ್ಶನ್; ಬೇಟೆಯ ಹಿಂದೆ ಭರ್ಜರಿ ಮಾಸ್ಟರ್‌ ಪ್ಲ್ಯಾನ್‌!

pm narendra modi international yoga day 2024
ಪ್ರಮುಖ ಸುದ್ದಿ2 hours ago

International Yoga Day 2024: ಯೋಗ ದಿನಚರಿಯ ಭಾಗವಾಗಲಿ: ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ

Darshan Arrested troll of pavithra darshan in SSE A
ಸ್ಯಾಂಡಲ್ ವುಡ್2 hours ago

Darshan Arrested: ಇದು ʻಸಪ್ತ ಶೆಡ್ಡಿನಾಚೆ SSE side ‘D’! ಟ್ರೋಲ್‌ ಆದ್ರು ದರ್ಶನ್‌-ಪವಿತ್ರಾ!

Pavithra Gowda is restless without proper food and sleep in Parappa Agrahara
ಕ್ರೈಂ2 hours ago

Pavithra Gowda: ಪರಪ್ಪನ ಅಗ್ರಹಾರದಲ್ಲಿ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿರುವ ಪವಿತ್ರ ಗೌಡ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌